05.09.21    Avyakt Bapdada     Kannada Murli    15.03.88     Om Shanti     Madhuban


ಹೊಸ ಪ್ರಪಂಚದ ಚಿತ್ರದ ಆಧಾರ ವರ್ತಮಾನ ಶ್ರೇಷ್ಠ ಬ್ರಾಹ್ಮಣ ಜೀವನ


ಇಂದು ವಿಶ್ವ ರಚಯಿತ, ವಿಶ್ವದ ಶ್ರೇಷ್ಠ ಅದೃಷ್ಟವನ್ನು ರೂಪಿಸುವಂತಹ ಬಾಪ್ದಾದಾ ತನ್ನ ಶ್ರೇಷ್ಠ ಅದೃಷ್ಟದ ಚಿತ್ರ-ಸ್ವರೂಪ ಮಕ್ಕಳನ್ನು ನೋಡುತ್ತಿದ್ದಾರೆ. ತಾವೆಲ್ಲಾ ಬ್ರಾಹ್ಮಣ ಆತ್ಮರು ವಿಶ್ವದ ಶ್ರೇಷ್ಠ ಅದೃಷ್ಠದ ಚಿತ್ರ (ರೂಪ ರೇಖೆ) ವಾಗಿದ್ದೀರಿ. ಬ್ರಾಹ್ಮಣ ಜೀವನದ ಚಿತ್ರದಿಂದ ಭವಿಷ್ಯದ ಶ್ರೇಷ್ಠ ಅದೃಷ್ಠ ಸ್ಪಷ್ಟವಾಗಿ ಕಂಡು ಬರುತ್ತದೆ. ಬ್ರಾಹ್ಮಣ ಜೀವನದ ಪ್ರತೀ ಶ್ರೇಷ್ಠ ಕರ್ಮವು ಭವಿಷ್ಯ ಶ್ರೇಷ್ಠ ಫಲದ ಅನುಭವ ಮಾಡಿಸುತ್ತದೆ. ಬ್ರಾಹ್ಮಣ ಜೀವನದ ಶ್ರೇಷ್ಠ ಸಂಕಲ್ಪವು ಭವಿಷ್ಯದ ಶ್ರೇಷ್ಠ ಸಂಸ್ಕಾರವನ್ನು ಸ್ಪಷ್ಟ ಮಾಡುತ್ತದೆ ಅಂದಾಗ ವರ್ತಮಾನ ಬ್ರಾಹ್ಮಣ ಜೀವನವು ಭವಿಷ್ಯ ಅದೃಷ್ಠವಂತ ಚಿತ್ರವಾಗಿದೆ. ಬಾಪ್ದಾದಾ ಇಂತಹ ಭವಿಷ್ಯದ ಚಿತ್ರವಾದ ಮಕ್ಕಳನ್ನು ನೋಡಿ ಹರ್ಷಿತರಾಗುತ್ತೇವೆ. ಚಿತ್ರವು ತಾವಾಗಿದ್ದೀರಿ, ಭವಿಷ್ಯ ಅದೃಷ್ಠದ ಆಧಾರಮೂರ್ತಿಗಳು ತಾವೇ ಆಗಿದ್ದೀರಿ. ತಾವು ಶ್ರೇಷ್ಠರಾದಾಗಲೇ ಪ್ರಪಂಚವೂ ಶ್ರೇಷ್ಠವಾಗುತ್ತದೆ. ತಮ್ಮ ಹಾರುವ ಕಲೆಯ ಸ್ಥಿತಿಯು ವಿಶ್ವಕ್ಕೂ ಹಾರುವ ಕಲೆಯಾಗಿದೆ. ತಾವು ಬ್ರಾಹ್ಮಣ ಆತ್ಮರು ಸಮಯ-ಪ್ರತಿಸಮಯ ಎಂತಹ ಸ್ಥಿತಿಯಿಂದ ಕಳೆಯುತ್ತೀರೋ ಅದೇರೀತಿ ವಿಶ್ವದ ಸ್ಥಿತಿಯು ಪರಿವರ್ತನೆ ಆಗುತ್ತಿರುತ್ತದೆ. ತಮ್ಮದು ಸತೋಪ್ರಧಾನ ಸ್ಥಿತಿಯಿದ್ದಾಗ ವಿಶ್ವವು ಸತೋಪ್ರಧಾನವಾಗಿರುತ್ತದೆ, ಸ್ವರ್ಣೀಮ ಯುಗವಾಗಿರುತ್ತದೆ. ತಾವು ಬದಲಾದರೆ ಪ್ರಪಂಚವು ಬದಲಾಗುತ್ತದೆ. ಇಷ್ಟು ಆಧಾರ ಮೂರ್ತಿಗಳಾಗಿದ್ದೀರಿ!

ವರ್ತಮಾನ ಸಮಯದಲ್ಲಿ ತಂದೆಯ ಜೊತೆ ಎಷ್ಟೊಂದು ಶ್ರೇಷ್ಠ ಪಾತ್ರವನ್ನು ಅಭಿನಯಿಸುತ್ತಿದ್ದೀರಿ. ಇಡೀ ಕಲ್ಪದಲ್ಲಿ ಎಲ್ಲರಿಗಿಂತ ಅತಿ ದೊಡ್ಡ ವಿಶೇಷ ಪಾತ್ರವನ್ನು ಈ ಸಮಯದಲ್ಲಿ ಅಭಿನಯಿಸುತ್ತಿದ್ದೀರಿ. ತಂದೆಯ ಜೊತೆ ಜೊತೆಗೆ ಸಹಯೋಗಿಗಳಾಗಿ. ವಿಶ್ವದ ಪ್ರತಿಯೊಂದು ಆತ್ಮನ ಅನೇಕ ಜನ್ಮಗಳ ಆಸೆಗಳನ್ನು ಪೂರ್ಣ ಮಾಡುತ್ತಿದ್ದೀರಿ. ತಂದೆಯ ಮೂಲಕ ಪ್ರತಿಯೊಂದು ಆತ್ಮನಿಗೆ ಮುಕ್ತಿ-ಜೀವನ್ಮುಕ್ತಿಯ ಅಧಿಕಾರವನ್ನು ಪ್ರಾಪ್ತಿ ಮಾಡಿಸಲು ನಿಮಿತ್ತರಾಗಿದ್ದೀರಿ. ಸರ್ವರ ಇಚ್ಛೆಗಳನ್ನು ಪೂರ್ಣ ಮಾಡುವಂತಹ ತಂದೆಯ ಸಮಾನ `ಕಾಮಧೇನು' ವಾಗಿದ್ದೀರಿ. ಕಾಮನೆಗಳನ್ನು ಈಡೇರಿಸುವವರಾಗಿದ್ದೀರಿ. ಪ್ರತಿಯೊಂದು ಆತ್ಮನಿಗೆ ಈ ರೀತಿ ಇಚ್ಛಾ ಮಾತ್ರಂ ಅವಿದ್ಯಾ ಸ್ಥಿತಿಯ ಅನುಭವ ಮಾಡಿಸುತ್ತೀರಿ ಯಾವುದರಿಂದ ಅರ್ಧಕಲ್ಪದವರೆಗೆ ಅನೇಕ ಜನ್ಮಗಳ ಕಾಲ ಭಕ್ತಾತ್ಮರೇ ಇರಲಿ, ಜೀವನ್ಮುಕ್ತ ಸ್ಥಿತಿಯ ಆತ್ಮರಿಗಾಗಲಿ ಯಾವುದೇ ಇಚ್ಛೆಯಿರುವುದಿಲ್ಲ. ಕೇವಲ ಒಂದು ಜನ್ಮದ ಇಚ್ಛೆಗಳನ್ನು ಪೂರ್ಣ ಮಾಡುವವರಲ್ಲ ಆದರೆ ಅನೇಕ ಜನ್ಮಗಳಿಗಾಗಿ ಇಚ್ಛಾ ಮಾತ್ರಂ ಅವಿದ್ಯೆಯ ಅನುಭೂತಿ ಮಾಡಿಸುವವರಾಗಿದ್ದೀರಿ. ಹೇಗೆ ತಂದೆಯ ಸರ್ವ ಭಂಡಾರಗಳು, ಸರ್ವ ಖಜಾನೆಗಳು ಸದಾ ಸಂಪನ್ನವಾಗಿದೆ. ಅಪ್ರಾಪ್ತಿಯ ಹೆಸರು, ಗುರುತೂ ಇಲ್ಲ. ಅದೇರೀತಿ ತಂದೆಯ ಸಮಾನ ಸದಾ ಮತ್ತು ಸರ್ವ ಖಜಾನೆಗಳಿಂದ ಸಂಪನ್ನರಾಗಿದ್ದೀರಿ.

ಬ್ರಾಹ್ಮಣ ಆತ್ಮ ಅರ್ಥಾತ್ ಪ್ರಾಪ್ತಿ ಸ್ವರೂಪ ಆತ್ಮ, ಸಂಪನ್ನ ಆತ್ಮ. ಹೇಗೆ ತಂದೆಯು ಸದಾ ಲೈಟ್ಹೌಸ್ ಮೈಟ್ಹೌಸ್ ಆಗಿದ್ದಾರೆ, ಅದೇರೀತಿ ಬ್ರಾಹ್ಮಣ ಆತ್ಮರೂ ಸಹ ತಂದೆಯ ಸಮಾನರಾಗಿದ್ದೀರಿ. ಲೈಟ್ಹೌಸ್ ಆಗಿದ್ದೀರಿ ಆದ್ದರಿಂದ ಪ್ರತಿಯೊಂದು ಆತ್ಮನಿಗೆ ತನ್ನ ಗುರಿಯನ್ನು ತಲುಪಿಸಲು ನಿಮಿತ್ತರಾಗಿದ್ದೀರಿ. ಹೇಗೆ ತಂದೆಯು ಪ್ರತೀ ಸಂಕಲ್ಪ, ಪ್ರತೀ ಮಾತು, ಪ್ರತೀ ಕರ್ಮದಿಂದ, ಪ್ರತೀ ಸಮಯ ದಾತನಾಗಿದ್ದಾರೆ, ವರದಾತನಾಗಿದ್ದಾರೆ ಅದೇರೀತಿ ತಾವು ಬ್ರಾಹ್ಮಣ ಆತ್ಮರೂ ಸಹ ದಾತನಾಗಿದ್ದೀರಿ, ಮಾ|| ವರದಾತನಾಗಿದ್ದೀರಿ. ಬ್ರಾಹ್ಮಣ ಜೀವನದ ಇಂತಹ ಚಿತ್ರವಾಗಿದ್ದೀರಾ? ಯಾವುದೇ ಚಿತ್ರವನ್ನು ಮಾಡುತ್ತೀರೆಂದರೆ ಅದರಲ್ಲಿ ಎಲ್ಲಾ ವಿಶೇಷತೆಗಳನ್ನು ತೋರಿಸುತ್ತೀರಲ್ಲವೆ. ಅದೇರೀತಿ ವರ್ತಮಾನ ಸಮಯದ ಬ್ರಾಹ್ಮಣ ಜೀವನದ ಚಿತ್ರದ ವಿಶೇಷತೆಗಳನ್ನು ತಮ್ಮಲ್ಲಿ ತುಂಬಿಸಿಕೊಂಡಿದ್ದೀರಾ? ಅತಿ ದೊಡ್ಡ ಚಿತ್ರಕಾರರು ತಾವಾಗಿದ್ದೀರಿ, ತಮ್ಮ ರೂಪವನ್ನು ರೂಪಿಸಿಕೊಳ್ಳುತ್ತಿದ್ದೀರಿ. ತಮ್ಮ ಚಿತ್ರವು ರೂಪುಗೊಳ್ಳುತ್ತಿದ್ದಂತೆಯೇ ವಿಶ್ವದ ಚಿತ್ರವೂ ಸಹ ರೂಪಿಸಲ್ಪಡುತ್ತಾ ಹೋಗುತ್ತಿದೆ. ಈ ರೀತಿ ಅನುಭವ ಮಾಡುತ್ತೀರಲ್ಲವೆ.

ಹೊಸ ಪ್ರಪಂಚದಲ್ಲಿ ಏನಿರುವುದೋ ಎಂದು ಕೆಲವರು ಕೇಳುತ್ತಾರಲ್ಲವೆ. ಹೊಸ ಪ್ರಪಂಚದ ಚಿತ್ರವೇ ತಾವಾಗಿದ್ದೀರಿ. ತಮ್ಮ ಜೀವನದಿಂದ ಭವಿಷ್ಯವು ಸ್ಪಷ್ಟವಾಗುತ್ತದೆ. ಈ ಸಮಯದಲ್ಲಿಯೂ ತಮ್ಮ ಚಿತ್ರದಲ್ಲಿ ನೋಡಿಕೊಳ್ಳಿ - ಸದಾ ಈ ರೀತಿಯ ಚಿತ್ರವು ತಯಾರಾಗಿದೆಯೇ ಯಾವುದನ್ನು ಯಾರೇ ನೋಡಿದರೂ ಸಹ ಸದಾಕಾಲಕ್ಕಾಗಿ ಪ್ರಸನ್ನಚಿತ್ತರಾಗಿ ಬಿಡಬೇಕು. ಯಾರಾದರೂ ಸ್ವಲ್ಪ ಅಶಾಂತಿಯ ಅಲೆಯಿಂದ ಕೂಡಿದ್ದರೂ ಸಹ ಅವರು ತಮ್ಮ ಚಿತ್ರವನ್ನು ನೋಡಿ ಅಶಾಂತಿಯನ್ನೇ ಮರೆತು ಹೋಗಲಿ. ಶಾಂತಿಯ ಅಲೆಗಳಲ್ಲಿ ತೇಲಾಡಲಿ. ಅಪ್ರಾಪ್ತಿ ಸ್ವರೂಪರು ಪ್ರಾಪ್ತಿಯ ಅನುಭೂತಿಯನ್ನು ಸ್ವತಹ ಅನುಭವ ಮಾಡಲಿ. ಭಿಕಾರಿಗಳಾಗಿ ಬಂದು ಬರ್ಪೂರ್ (ಸಂಪನ್ನ) ಆಗಿ ಹೋಗಲಿ. ತಮ್ಮ ಮುಗುಳ್ನಗುತ್ತಿರುವ ಮೂರ್ತಿಯನ್ನು ನೋಡಿ ಮನಸ್ಸಿನ ಹಾಗೂ ಕಣ್ಣುಗಳ ದುಃಖ ಮರೆತು ಹೋಗಲಿ, ಮುಗುಳ್ನಗುವುದನ್ನು ಕಲಿಯಲಿ. ತಾವೂ ಸಹ ತಂದೆಗೆ ಬಾಬಾ ತಾವು ಮುಗುಳ್ನಗುವುದನ್ನು ಕಲಿಸಿದಿರಿ.... ಎಂದು ಹೇಳುತ್ತೀರಲ್ಲವೆ! ಅಂದಾಗ ತಮ್ಮ ಕರ್ತವ್ಯವೇ ಆಗಿದೆ - ಅಳುವುದರಿಂದ ಮುಕ್ತ ಮಾಡುವುದು ಮತ್ತು ಮುಗುಳ್ನಗುವುದನ್ನು ಕಲಿಸುವುದು. ಇಂತಹ ಶ್ರೇಷ್ಠ ಚಿತ್ರವು ಬ್ರಾಹ್ಮಣ ಜೀವನವಾಗಿದೆ. ಸದಾ ಇದು ಸ್ಮೃತಿಯಿರಲಿ - ನಾವು ಇಂತಹ ಆಧಾರಮೂರ್ತಿಗಳಾಗಿದ್ದೇವೆ, ತಳಹದಿಯಾಗಿದ್ದೇವೆ. ವೃಕ್ಷದ ಚಿತ್ರದಲ್ಲಿ ನೋಡಿದ್ದೀರಿ - ಬ್ರಾಹ್ಮಣರು ಎಲ್ಲಿ ಕುಳಿತಿದ್ದಾರೆ? ಬುನಾದಿಯಲ್ಲಿ ಕುಳಿತಿದ್ದೀರಲ್ಲವೆ. ಬ್ರಾಹ್ಮಣ ಬುನಾದಿಯು ಶಕ್ತಿಶಾಲಿಯಾಗಿದೆ ಆದ್ದರಿಂದಲೇ ಅರ್ಧ ಕಲ್ಪ ಅಚಲ, ಅಡೋಲರಾಗಿರುತ್ತೀರಿ. ತಾವು ಸಾಧಾರಣ ಆತ್ಮರಲ್ಲ, ಆಧಾರ ಮೂರ್ತಿಗಳಾಗಿದ್ದೀರಿ, ತಳಹದಿಯಾಗಿದ್ದೀರಿ.

ಈ ಸಮಯದ ತಮ್ಮ ಸಂಪೂರ್ಣ ಸ್ಥಿತಿಯು ಸತ್ಯಯುಗದ 16 ಕಲಾ ಸಂಪೂರ್ಣ ಸ್ಥಿತಿಗೆ ಆಧಾರವಾಗಿದೆ. ಈಗಿನ ಏಕಮತವು ಅಲ್ಲಿನ ಒಂದು ರಾಜ್ಯಕ್ಕೆ ಆಧಾರಮೂರ್ತಿಯಾಗಿದೆ. ಇಲ್ಲಿನ ಸರ್ವ ಖಜಾನೆಗಳ ಸಂಪನ್ನತೆ - ಜ್ಞಾನ, ಗುಣ, ಶಕ್ತಿ ಸರ್ವ ಖಜಾನೆಗಳು ಅಲ್ಲಿನ ಸಂಪನ್ನತೆಗೆ ಆಧಾರವಾಗಿದೆ. ಇಲ್ಲಿನ ದೇಹದ ಆಕರ್ಷಣೆಯಿಂದ ಭಿನ್ನತೆಯು ಅಲ್ಲಿನ ತನುವಿನ ಆರೋಗ್ಯದ ಪ್ರಾಪ್ತಿಗೆ ಆಧಾರವಾಗಿದೆ. ಅಶರೀರಿತನದ ಸ್ಥಿತಿಯು ನಿರೋಗಿ ಕಾಯ ಮತ್ತು ಧೀರ್ಘಾಯಸ್ಸಿಗೆ ಆಧಾರ ಸ್ವರೂಪವಾಗಿದೆ. ಇಲ್ಲಿನ ನಿಶ್ಚಿಂತ ಚಕ್ರವರ್ತಿಯ ಜೀವನವು ಅಲ್ಲಿನ ಪ್ರತೀ ಘಳಿಗೆಯ ಮನಸ್ಸಿನ ಮೋಜಿನ ಜೀವನ - ಇದೇ ಸ್ಥಿತಿಯ ಪ್ರಾಪ್ತಿಗೆ ಆಧಾರವಾಗುತ್ತದೆ. ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ - ಇಲ್ಲಿನ ಈ ಅಖಂಡ, ಅಟಲ ಸಾಧನೆಯು ಅಲ್ಲಿ ಅಖಂಡ, ಅಟಲ, ಅಕೂಟ ನಿರ್ವಿಘ್ನ ಸಾಧನಗಳ ಪ್ರಾಪ್ತಿಗೆ ಆಧಾರವಾಗುತ್ತದೆ. ಇಲ್ಲಿನ ಬಾಪ್ದಾದಾ ಹಾಗೂ ಮಾತಾಪಿತ ಮತ್ತು ಸಹೋದರ-ಸಹೋದರಿ - ಈ ಚಿಕ್ಕ ಸಂಸಾರವು ಅಲ್ಲಿನ ಚಿಕ್ಕ ಸಂಸಾರಕ್ಕೆ ಆಧಾರವಾಗುತ್ತದೆ. ಇಲ್ಲಿನ ಒಬ್ಬ ಮಾತಾಪಿತರ ಸಂಬಂಧದ ಸಂಸ್ಕಾರವು ಅಲ್ಲಿಯೂ ಸಹ ಒಂದೇ ವಿಶ್ವ ಮಹಾರಾಜ ಮತ್ತು ವಿಶ್ವ ಮಹಾರಾಣಿಯನ್ನು ಮಾತಾಪಿತರ ರೂಪದಲ್ಲಿ ಅನುಭವ ಮಾಡುತ್ತಾರೆ. ಇಲ್ಲಿನ ಸ್ನೇಹ ಸಂಪನ್ನ ಪರಿವಾರದ ಸಂಬಂಧವು ಅಲ್ಲಿಯೂ ಸಹ ರಾಜರಾಗಲಿ, ಪ್ರಜೆಗಳಾಗಲಿ ಆದರೆ ಪ್ರಜೆಗಳೂ ಸಹ ತಮ್ಮನ್ನು ಪರಿವಾರವೆಂದು ತಿಳಿದುಕೊಳ್ಳುತ್ತಾರೆ. ಸ್ನೇಹದ ಸಮೀಪತೆ ಒಂದೇ ಪರಿವಾರದಂತೆ ಇರುತ್ತದೆ. ಭಲೆ ಪದವಿಗಳಲ್ಲಿ ಅಂತರವಿರಬಹುದು ಆದರೆ ಸ್ನೇಹದ ಪದವಿಗಳಾಗಿವೆ, ಸಂಕೋಚ ಮತ್ತು ಭಯದ್ದಲ್ಲ ಅಂದಾಗ ಭವಿಷ್ಯದ ಚಿತ್ರವು ತಾವಾಗಿದ್ದೀರಲ್ಲವೆ. ಇವೆಲ್ಲಾ ಮಾತುಗಳನ್ನು ತಮ್ಮ ಚಿತ್ರದಲ್ಲಿ ಪರಿಶೀಲನೆ ಮಾಡಿಕೊಳ್ಳಿ - ಎಲ್ಲಿಯವರೆಗೆ ಶ್ರೇಷ್ಠ ಚಿತ್ರವಾಗಿ ತಯಾರಾಗಿದ್ದೀರಿ ಅಥವಾ ಇಲ್ಲಿಯವರೆಗೂ ರೇಖೆಗಳನ್ನು ಎಳೆಯುತ್ತಿದ್ದೀರಾ? ಬುದ್ಧಿವಂತ ಕಲಾಕಾರರಾಗಿದ್ದೀರಲ್ಲವೆ.

ಬಾಪ್ದಾದಾ ಇದನ್ನೇ ನೋಡುತ್ತಾ ಇರುತ್ತೇವೆ - ಪ್ರತಿಯೊಬ್ಬರೂ ಎಲ್ಲಿಯವರೆಗೆ ತಮ್ಮ ಚಿತ್ರವನ್ನು ತಯಾರು ಮಾಡಿಕೊಂಡಿದ್ದಾರೆ? ಇವರು ಇದನ್ನು ಸರಿಯಾಗಿ ಮಾಡಲಿಲ್ಲ ಆದ್ದರಿಂದಲೇ ಈ ರೀತಿಯಾಯಿತು ಎಂದು ಅನ್ಯರ ಮೇಲೆ ದೂರು ಹೊರಿಸಲು ಸಾಧ್ಯವಿಲ್ಲ ಏಕೆಂದರೆ ಇಲ್ಲಿ ತಮ್ಮ ಚಿತ್ರವನ್ನು ತಾವೇ ಚಿತ್ರಿಸಿಕೊಳ್ಳಬೇಕಾಗಿದೆ. ಮತ್ತೆಲ್ಲಾ ವಸ್ತುಗಳು ಬಾಪ್ದಾದಾರವರಿಂದ ಸಿಗುತ್ತಿದೆ, ಅದರಲ್ಲಂತೂ ಯಾವುದೇ ಕೊರತೆಯಿಲ್ಲ ಅಲ್ಲವೆ! ಇಲ್ಲಿಯೂ ಸಹ ಆಟವನ್ನು ಕಲಿಸುತ್ತೀರಲ್ಲವೆ. ಅದರಲ್ಲಿ ವಸ್ತುಗಳನ್ನು ಖರೀದಿಸಿ ನಂತರ ತಯಾರಿಸುತ್ತೀರಿ. ತಯಾರಿಸುವವರ ಮೇಲೆ ಅವಲಂಭಿಸಿರುತ್ತದೆ. ಎಷ್ಟು ಬೇಕೋ ಅಷ್ಟು ತೆಗೆದುಕೊಳ್ಳಿ. ಕೇವಲ ತೆಗೆದುಕೊಳ್ಳುವವರು ತೆಗೆದುಕೊಳ್ಳಬೇಕಷ್ಟೆ. ಬಾಕಿ ಇದು ತೆರೆದ ಮಾರುಕಟ್ಟೆಯಾಗಿದೆ. ಎರಡನ್ನು ತೆಗೆದುಕೊಳ್ಳಿ ಅಥವಾ ನಾಲ್ಕು ತೆಗೆದುಕೊಳ್ಳಬೇಕು ಎಂದು ಬಾಪ್ದಾದಾ ಇಲ್ಲಿ ಲೆಕ್ಕವನ್ನು ಇಡುವುದಿಲ್ಲ. ಎಲ್ಲರಿಗಿಂತ ಸುಂದರ ಚಿತ್ರವನ್ನು ರೂಪಿಸಿಕೊಂಡಿದ್ದೀರಲ್ಲವೆ. ಸದಾ ತಮ್ಮನ್ನು ಈ ರೀತಿ ತಿಳಿದುಕೊಳ್ಳಿ - ನಾವೇ ಭವಿಷ್ಯದ ಅದೃಷ್ಟದ ಚಿತ್ರಗಳಾಗಿದ್ದೇವೆ. ಈ ರೀತಿ ತಿಳಿದುಕೊಂಡು ಪ್ರತೀ ಹೆಜ್ಜೆಯನ್ನು ಇಡಿ. ಸ್ನೇಹಿಗಳಾಗಿರುವ ಕಾರಣ ಸಹಯೋಗಿಗಳೂ ಆಗಿದ್ದೀರಿ ಮತ್ತು ಸಹಯೋಗಿಗಳಾಗಿರುವ ಕಾರಣ ಪ್ರತಿಯೊಂದು ಆತ್ಮನಿಗೆ ತಂದೆಯ ಸಹಯೋಗವಿದೆ. ಕೆಲವು ಆತ್ಮಗಳಿಗೆ ಹೆಚ್ಚು ಸಹಯೋಗವಿದೆ, ಕೆಲವರಿಗೆ ಕಡಿಮೆ ಎಂದಲ್ಲ. ಪ್ರತಿಯೊಂದು ಆತ್ಮನ ಪ್ರತಿ ತಂದೆಯ ಸಹಯೋಗವು ಒಂದಕ್ಕೆ ಪದುಮದಷ್ಟು ಇದ್ದೇ ಇದೆ. ಯಾರೆಲ್ಲಾ ಸಹಯೋಗಿ ಆತ್ಮರಿದ್ದೀರೋ ಅವರೆಲ್ಲರಿಗೆ ತಂದೆಯ ಸಹಯೋಗವು ಸದಾ ಪ್ರಾಪ್ತಿಯಾಗುತ್ತದೆ ಮತ್ತು ಎಲ್ಲಿಯವರೆಗೆ ಇರುತ್ತೀರೋ ಅಲ್ಲಿಯವರೆಗೆ ಇದ್ದೇ ಇದೆ. ತಂದೆಯ ಸಹಯೋಗವಿದೆ ಅಂದಮೇಲೆ ಪ್ರತೀ ಕಾರ್ಯವು ಆಗಿಯೇ ಬಿಟ್ಟಿದೆ. ಈ ರೀತಿ ಅನುಭವವನ್ನೂ ಮಾಡುತ್ತೀರಿ ಮತ್ತು ಮಾಡುತ್ತಾ ಹೋಗಿರಿ. ಯಾವುದೇ ಕಷ್ಟವಿಲ್ಲ ಏಕೆಂದರೆ ಭಾಗ್ಯವಿದಾತನ ಮೂಲಕ ಭಾಗ್ಯದ ಪ್ರಾಪ್ತಿಯ ಆಧಾರವಿದೆ. ಎಲ್ಲಿ ಪ್ರಾಪ್ತಿಯಿರುವುದೋ, ವರದಾನವಿರುವುದೋ ಅಲ್ಲಿ ಕಷ್ಟವೇ ಇರುವುದಿಲ್ಲ.

ಯಾರ ಚಿತ್ರವು ಬಹಳ ಸುಂದರವಾಗಿರುವುದೋ ಅವರು ಅವಶ್ಯವಾಗಿ ಮೊದಲ ನಂಬರಿನಲ್ಲಿ ಬರುವರು ಅಂದಾಗ ಎಲ್ಲರೂ ಮೊದಲ ಡಿವಿಜನ್ನಲ್ಲಿ ಬರುವವರಾಗಿದ್ದೀರಲ್ಲವೆ. ಮೊಟ್ಟ ಮೊದಲನೆಯದಾಗಿ ಒಬ್ಬರೇ ಬರುವರು ಆದರೆ ಮೊದಲ ಡಿವಿಜನ್ನಲ್ಲಿ ಅನೇಕರು ಇರುತ್ತಾರಲ್ಲವೆ ಅಂದಮೇಲೆ ಯಾವುದರಲ್ಲಿ ಬರಬೇಕು? ಫಸ್ಟ್ ಡಿವಿಜನ್ ಎಲ್ಲರಿಗಾಗಿ ಇದೆ ಅಂದಮೇಲೆ ಅದನ್ನು ಪ್ರಾಪ್ತಿ ಮಾಡಿಕೊಳ್ಳುವುದು ಒಳ್ಳೆಯದಾಗಿದೆ. ಬಾಪ್ದಾದಾ ಎಲ್ಲರಿಗೆ ಭಾರತವಾಸಿಗಳಿರಲಿ, ಡಬಲ್ ವಿದೇಶಿಯರಿರಲಿ ಎಲ್ಲರಿಗೂ ಅವಕಾಶವನ್ನು ಕೊಡುತ್ತಿದ್ದೇವೆ ಏಕೆಂದರೆ ಈಗಿನ್ನೂ ಫಲಿತಾಂಶವು ಹೊರ ಬಂದಿಲ್ಲ. ಕೆಲವೊಮ್ಮೆ ಒಳ್ಳೊಳ್ಳೆಯ ಮಕ್ಕಳೂ ಸಹ ಫಲಿತಾಂಶವು ಔಟ್ ಆಗುವುದಕ್ಕೆ ಮೊದಲು ತಾವೇ ಔಟ್ ಆಗಿ ಬಿಡುತ್ತಾರೆ ಅಂದಾಗ ಈ ಸ್ಥಾನವು ಸಿಕ್ಕಿ ಬಿಡುವುದಲ್ಲವೆ. ಆದ್ದರಿಂದ ಏನೆಲ್ಲವನ್ನೂ ಪಡೆದುಕೊಳ್ಳಬೇಕು ಅದಕ್ಕೆ ಈಗ ಅವಕಾಶವಿದೆ ನಂತರ ಇನ್ನು ಸ್ಥಳವಿಲ್ಲವೆಂದು ಬೋರ್ಡ್ ಹಾಕಿ ಬಿಡುತ್ತಾರಲ್ಲವೆ. ಈ ಆಸನಗಳು ತುಂಬಿ ಬಿಡುತ್ತವೆ ಆದ್ದರಿಂದ ಈಗ ಹೆಚ್ಚು ಹೆಚ್ಚು ಹಾರುತ್ತಾ ಹೋಗಿರಿ, ಓಡಬೇಡಿರಿ, ಹಾರಿ. ಓಡುವವರು ಕೆಳಗೆ ಉಳಿದು ಬಿಡುತ್ತಾರೆ, ಹಾರುವವರು ಹಾರಿ ಹೋಗುತ್ತಾರೆ ಆದ್ದರಿಂದ ಹಾರುತ್ತಾ ನಡೆಯಿರಿ ಮತ್ತು ಹಾರಿಸುತ್ತಾ ನಡೆಯಿರಿ. ಒಳ್ಳೆಯದು.

ನಾಲ್ಕಾರೂ ಕಡೆಯ ಎಲ್ಲಾ ಶ್ರೇಷ್ಠ ಅದೃಷ್ಠದ ಶ್ರೇಷ್ಠ ಚಿತ್ರ ಸ್ವರೂಪ ಮಹಾನ್ ಆತ್ಮರಿಗೆ, ಸದಾ ಸ್ವಯಂನ್ನು ವಿಶ್ವದ ಆಧಾರ ಮೂರ್ತಿಯೆಂದು ಅನುಭವ ಮಾಡುವಂತಹ ಆತ್ಮರಿಗೆ, ಸದಾ ತಮ್ಮನ್ನು ಪ್ರಾಪ್ತಿ ಸ್ವರೂಪ ಅನುಭೂತಿಗಳ ಮೂಲಕ ಅನ್ಯರಿಗೂ ಪ್ರಾಪ್ತಿ ಸ್ವರೂಪ ಅನುಭವ ಮಾಡಿಸುವಂತಹ ಶ್ರೇಷ್ಠ ಆತ್ಮರಿಗೆ ಸದಾ ತಂದೆಯ ಸ್ನೇಹ ಮತ್ತು ಸಹಯೋಗದ ಪದುಮದಷ್ಟು ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಪೂಜ್ಯ ಬ್ರಾಹ್ಮಣರಿಂದ ದೇವಾತ್ಮರಾಗುವವರಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ವ್ಯಕ್ತಿಗತ ವಾರ್ತಾಲಾಪ:

ತಂದೆಯ ಕೈ ಸದಾ ಮಸ್ತಕದಲ್ಲಿ ಇದ್ದೇ ಇದೆ - ಇಂತಹ ಅನುಭವ ಮಾಡುತ್ತೀರಾ? ಶ್ರೇಷ್ಠ ಮತವೇ ಶ್ರೇಷ್ಠ ಕೈ ಆಗಿದೆ. ಎಲ್ಲಿ ಪ್ರತೀ ಹೆಜ್ಜೆಯಲ್ಲಿ ತಂದೆಯ ಕೈ ಅರ್ಥಾತ್ ಶ್ರೇಷ್ಠ ಮತವಿದೆಯೋ ಅಲ್ಲಿ ಶ್ರೇಷ್ಠ ಕಾರ್ಯವೂ ಸ್ವತಹವಾಗಿಯೇ ಆಗುತ್ತದೆ. ಸದಾ ಕೈ (ಶ್ರೀಮತ)ನ ಸ್ಮೃತಿಯಿಂದ ಸಮರ್ಥರಾಗಿ ಮುಂದುವರೆಯುತ್ತಾ ನಡೆಯಿರಿ. ತಂದೆಯ ಕೈ ಸದಾಕಾಲವೂ ಸಹಜವಾಗಿ ಮುಂದುವರೆಸುವ ಅನುಭವವನ್ನು ಮಾಡಿಸುತ್ತದೆ. ಆದ್ದರಿಂದ ಈ ಶ್ರೇಷ್ಠ ಭಾಗ್ಯವನ್ನು ಪ್ರತಿಯೊಂದು ಕಾರ್ಯದಲ್ಲಿಯೂ ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತಾ ಮುಂದುವರೆಯುತ್ತಿರಿ. ಸದಾ ಕೈ ಇದೆ, ಸದಾ ವಿಜಯವಿದೆ.

ಪ್ರಶ್ನೆ: ಸದಾ ಸಹಜಯೋಗಿ ಆಗಿರಲು ಸಹಜ ವಿಧಿಯೇನಾಗಿದೆ?

ಉತ್ತರ: ತಂದೆಯೇ ನನ್ನ ಪ್ರಪಂಚವಾಗಿದ್ದಾರೆ - ಈ ಸ್ಮೃತಿಯಲ್ಲಿದ್ದರೆ ಸಹಜಯೋಗಿ ಆಗಿ ಬಿಡುವಿರಿ. ಏಕೆಂದರೆ ಇಡೀ ದಿನದಲ್ಲಿ ಬುದ್ಧಿಯು ಪ್ರಪಂಚದ ಕಡೆಗೇ ಹೋಗುತ್ತದೆ. ಯಾವಾಗ ತಂದೆಯೇ ಪ್ರಪಂಚವಾಗಿದ್ದಾರೆಂದರೆ, ಬುದ್ಧಿಯು ಮತ್ತೆಲ್ಲಿಗೆ ಹೋಗುವುದು? ಪ್ರಪಂಚದಲ್ಲಿಯೇ ಹೋಗುವುದಲ್ಲವೆ, ಕಾಡಿಗಂತು ಹೋಗುವುದಿಲ್ಲ! ಅಂದಮೇಲೆ ಯಾವಾಗ ತಂದೆಯ ಸಂಸಾರ (ಪ್ರಪಂಚ) ಆಗಿ ಬಿಟ್ಟರು, ಅಂದಮೇಲೆ ಸಹಜಯೋಗಿಯೂ ಆಗಲಾಯಿತು. ಇಲ್ಲದಿದ್ದರೆ ಬುದ್ಧಿಯನ್ನು ಇಲ್ಲಿಂದ ದೂರಗೊಳಿಸಬೇಕು, ಅಲ್ಲಿಗೆ ಜೋಡಿಸಬೇಕು ಎಂದು ಪರಿಶ್ರಮ ಪಡಬೇಕಾಗುತ್ತದೆ. ಸದಾ ತಂದೆಯ ಸ್ನೇಹದಲ್ಲಿ ಸಮಾವೇಶವಾಗಿ ಇರುತ್ತೀರೆಂದರೆ, ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಒಳ್ಳೆಯದು!

ಡಬಲ್ ವಿದೇಶಿ ಸಹೋದರ ಸಹೋದರಿಯರೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ:

ಡಬಲ್ ವಿದೇಶಿಯರಲ್ಲಿ ಸೇವೆಯ ಉಲ್ಲಾಸವು ಚೆನ್ನಾಗಿದೆ. ಆದ್ದರಿಂದ ವೃದ್ಧಿಯನ್ನೂ ಚೆನ್ನಾಗಿ ಮಾಡುತ್ತಿದ್ದೀರಿ. ವಿದೇಶ ಸೇವೆಯಲ್ಲಿ 14 ವರ್ಷಗಳಲ್ಲಿ ಚೆನ್ನಾಗಿ ವೃದ್ಧಿ ಮಾಡುತ್ತೀರಿ. ಲೌಕಿಕ ಮತ್ತು ಅಲೌಕಿಕ ಡಬಲ್ ಕಾರ್ಯವನ್ನು ಮಾಡುತ್ತಾ ಮುಂದುವರೆಯುತ್ತಿದ್ದೀರಿ. ಡಬಲ್ ಕಾರ್ಯದಲ್ಲಿ ಸಮಯವನ್ನೂ ತೊಡಗಿಸುತ್ತೀರಿ ಮತ್ತು ಬುದ್ಧಿಯ, ಶರೀರದ ಶಕ್ತಿಯನ್ನೂ ತೊಡಗಿಸುತ್ತೀರಿ, ಇದೂ ಸಹ ಬುದ್ಧಿಯ ಚಮತ್ಕಾರವಾಗಿದೆ. ಲೌಕಿಕ ಕಾರ್ಯವನ್ನು ಮಾಡುತ್ತಾ ಸೇವೆಯಲ್ಲಿ ಮುಂದುವರೆಯುವುದೂ ಸಹ ಸಾಹಸದ ಮಾತಾಗಿದೆ. ಇಂತಹ ಸಾಹಸವಂತ ಮಕ್ಕಳ ಪ್ರತೀ ಕಾರ್ಯದಲ್ಲಿ ಬಾಪ್ದಾದಾ ಸದಾ ಸಹಯೋಗಿಯಾಗಿದ್ದೇವೆ. ಎಷ್ಟು ಸಾಹಸವೋ ಅಷ್ಟು ಪದುಮದಷ್ಟು ತಂದೆಯು ಸಹಯೋಗಿಯಾಗಿದ್ದಾರೆ. ಆದರೆ ಎರಡೂ ಪಾತ್ರವನ್ನು ಅಭಿನಯಿಸುತ್ತಾ ಉನ್ನತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೀರಿ - ಇದನ್ನು ನೋಡಿ ಬಾಪ್ದಾದಾ ಸದಾ ಮಕ್ಕಳ ಪ್ರತಿ ಹರ್ಷಿತರಾಗುತ್ತೇವೆ. ಮಾಯೆಯಿಂದಂತೂ ಮುಕ್ತರಾಗಿದ್ದೀರಲ್ಲವೆ. ಯಾವಾಗ ಯೋಗಯುಕ್ತರಾಗಿದ್ದೀರೋ ಆಗ ಸ್ವತಹವಾಗಿಯೇ ಮಾಯೆಯಿಂದ ಮುಕ್ತರಾಗಿರುತ್ತೀರಿ. ಯೋಗಯುಕ್ತರಾಗಿರದಿದ್ದರೆ ಮಾಯೆಯಿಂದ ಮುಕ್ತರೂ ಆಗುವುದಿಲ್ಲ, ಮಾಯೆಗೂ ಸಹ ಬ್ರಾಹ್ಮಣ ಆತ್ಮರು ಬಹಳ ಪ್ರಿಯವೆನಿಸುತ್ತಾರೆ. ಯಾರು ಶಕ್ತಿಶಾಲಿಗಳಾಗಿರುವರೋ ಆ ಶಕ್ತಿಶಾಲಿಯೊಂದಿಗೇ ಮಾಯೆಗೆ ಮಜಾ ಬರುತ್ತದೆ. ಮಾಯೆಯೂ ಶಕ್ತಿಶಾಲಿಯಾಗಿದೆ, ತಾವೂ ಸರ್ವಶಕ್ತಿವಂತರಾಗಿದ್ದೀರಿ ಆದ್ದರಿಂದ ಮಾಯೆಗೆ ಸರ್ವಶಕ್ತಿವಂತರ ಜೊತೆ ಆಟವಾಡುವುದು ಇಷ್ಟವಾಗುತ್ತದೆ. ಈಗಂತೂ ಮಾಯೆಯನ್ನು ಚೆನ್ನಾಗಿ ಅರಿತುಕೊಂಡಿದ್ದೀರಲ್ಲವೆ, ಅಥವಾ ಕೆಲಕೆಲವೊಮ್ಮೆ ಹೊಸ ರೂಪದಿಂದ ಬಂದುಬಿಡುತ್ತದೆಯೆ! ಜ್ಞಾನಪೂರ್ಣರ ಅರ್ಥವೇ ಆಗಿದೆ - ತಂದೆಯನ್ನೂ ಅರಿತುಕೊಳ್ಳುವುದು, ರಚನೆ ಮತ್ತು ಮಾಯೆಯನ್ನೂ ಅರಿತುಕೊಳ್ಳುವುದು. ಒಂದುವೇಳೆ ರಚಯಿತ ಮತ್ತು ರಚನೆಯನ್ನು ಅರಿತುಕೊಂಡಿರಿ ಮತ್ತು ಮಾಯೆಯನ್ನು ಅರಿತುಕೊಳ್ಳದಿದ್ದರೆ ಅವರು ಜ್ಞಾನಪೂರ್ಣರಾಗಲಿಲ್ಲ.

ಎಂದಾದರೂ ಯಾವುದೇ ಮಾತಿನಲ್ಲಿ ತನುವಿನ ಬಲಹೀನತೆಯಿರಲಿ ಅಥವಾ ಕಾರ್ಯದ ಹೆಚ್ಚು ಹೊರೆಯಿರಲಿ ಆದರೆ ಮನಸ್ಸಿನಿಂದ ಎಂದೂ ಸುಸ್ತಾಗಬಾರದು. ಮನಸ್ಸಿನ ಖುಷಿಯಿಂದ ತನುವಿನ ಸುಸ್ತು ಸಮಾಪ್ತಿ ಆಗುತ್ತದೆ ಆದರೆ ಮನಸ್ಸಿನ ಸುಸ್ತು ಶರೀರದ ಸುಸ್ತನ್ನೂ ಸಹ ಹೆಚ್ಚಿಸಿ ಬಿಡುತ್ತದೆ ಆದ್ದರಿಂದ ಎಂದೂ ಸುಸ್ತಾಗಬಾರದು. ಸುಸ್ತಾದಾಗ ಸೆಕೆಂಡಿನಲ್ಲಿ ತಂದೆಯ ವತನಕ್ಕೆ ಬಂದು ಬಿಡಿ. ಒಂದುವೇಳೆ ಮನಸ್ಸನ್ನು ಸುಸ್ತು ಮಾಡುತ್ತಿದ್ದರೆ ಬ್ರಾಹ್ಮಣ ಜೀವನ ಉಲ್ಲಾಸ-ಉತ್ಸಾಹದ ಯಾವ ಅನುಭವವಾಗಬೇಕೋ ಅದು ಆಗುವುದಿಲ್ಲ. ನಡೆಯುವುದಂತೂ ನಡೆಯುತ್ತಿದ್ದೀರಿ, ಆದರೆ ನಡೆಸುವವರು ನಡೆಸುತ್ತಿದ್ದಾರೆ ಎಂಬ ಅನುಭವವಾಗುವುದಿಲ್ಲ. ಪರಿಶ್ರಮದಿಂದ ನಡೆಯುತ್ತಿದ್ದೀರಿ ಎಂದರೆ ಯಾವಾಗ ಪರಿಶ್ರಮದ ಅನುಭವವಾಗುವುದೋ ಆಗ ಸುಸ್ತಾಗುವುದು ಆದ್ದರಿಂದ ಸದಾ ತಿಳಿದುಕೊಳ್ಳಿ - `ಮಾಡಿಸುವವರು ಮಾಡಿಸುತ್ತಿದ್ದಾರೆ, ನಡೆಸುವವರು ನಡೆಸುತ್ತಿದ್ದಾರೆ'.

ಸಮಯ, ಶಕ್ತಿ - ಎರಡರ ಪ್ರಮಾಣ ಸೇವೆ ಮಾಡುತ್ತಾ ಹೋಗಿ. ಸೇವೆಯೆಂದೂ ನಿಲ್ಲಲು ಸಾಧ್ಯವಿಲ್ಲ, ಇಂದಲ್ಲದಿದ್ದರೆ ನಾಳೆ ಆಗಲೇಬೇಕಾಗಿದೆ. ಒಂದುವೇಳೆ ಸತ್ಯ ಹೃದಯದಿಂದ, ಹೃದಯದ ಸ್ನೇಹದಿಂದ ಎಷ್ಟು ಸೇವೆ ಮಾಡಲು ಸಾಧ್ಯವಿದೆಯೋ ಅಷ್ಟೇ ಮಾಡುತ್ತೀರೆಂದರೆ ಬಾಪ್ದಾದಾ ಎಂದೂ ಇಷ್ಟು ಕೆಲಸ ಮಾಡಿದಿರಿ, ಇಷ್ಟು ಮಾಡಲಿಲ್ಲವೆಂದು ದೂರುವುದಿಲ್ಲ. ಶಭಾಷ್ ಎನ್ನುವರು. ಸಮಯ ಪ್ರಮಾಣ, ಶಕ್ತಿ ಪ್ರಮಾಣ, ಸತ್ಯ ಹೃದಯದಿಂದ ಸೇವೆ ಮಾಡಿದರೆ ಸತ್ಯ ಹೃದಯದವರ ಮೇಲೆ ತಂದೆಯು ರಾಜಿಯಾಗುವರು. ಒಂದುವೇಳೆ ತಮ್ಮ ಕಾರ್ಯವು ಉಳಿದು ಬಿಟ್ಟರೂ ಸಹ ತಂದೆಯು ಎಲ್ಲಾದರೂ ಒಂದು ಕಡೆ ಪೂರ್ಣ ಮಾಡಿಸಿ ಬಿಡುವರು. ಯಾವ ಸೇವೆಯು ಯಾವ ಸಮಯದಲ್ಲಿ ಆಗಬೇಕಾಗಿದೆಯೋ ಅದು ಆಗಿಯೇ ಬಿಡುವುದು, ನಿಲ್ಲಲು ಸಾಧ್ಯವಿಲ್ಲ. ಯಾವುದಾದರೊಂದು ಆತ್ಮನಿಗೆ ಪ್ರೇರಣೆ ನೀಡಿ ಬಾಪ್ದಾದಾ ತನ್ನ ಮಕ್ಕಳನ್ನು ಸಹಯೋಗಿಯನ್ನಾಗಿ ಮಾಡುತ್ತಾರೆ. ಯೋಗಿ ಮಕ್ಕಳಿಗೆ ಎಲ್ಲಾ ಪ್ರಕಾರದ ಸೇವೆಯು ಸಮಯದಲ್ಲಿ ಖಂಡಿತ ಸಿಗುತ್ತದೆ ಆದರೆ ಯಾರಿಗೆ ಸಿಗುವುದು? ಸತ್ಯ ಹೃದಯವುಳ್ಳ ಸತ್ಯ ಸೇವಾಧಾರಿಗಳಿಗೆ. ಅಂದಾಗ ಎಲ್ಲರೂ ಸತ್ಯ ಸೇವಾಧಾರಿ ಮಕ್ಕಳಾಗಿದ್ದೀರಾ? ತಂದೆಯು ನಮ್ಮ ಮೇಲೆ ರಾಜಿಯಾಗಿದ್ದಾರೆ - ಈ ರೀತಿ ಅನುಭವ ಮಾಡುತ್ತೀರಲ್ಲವೆ.

ವರದಾನ:
ಒಬ್ಬ ತಂದೆಯ ಪ್ರೀತಿಯಲ್ಲಿ ಲವಲೀನ(ತಲ್ಲೀನ)ರಾಗಿದ್ದು ಸದಾ ಏರುವ ಕಲೆಯ ಅನುಭವ ಮಾಡುವಂತಹ ಸಫಲತಾ ಮೂರ್ತಿ ಭವ.

ಸೇವೆಯಲ್ಲಿ ಅಥವಾ ಸ್ವಯಂನ ಏರುವ ಕಲೆಯಲ್ಲಿ ಸಫಲತೆಗೆ ಮುಖ್ಯಾಧಾರ ಆಗಿದೆ - ಒಬ್ಬ ತಂದೆಯೊಂದಿಗೆ ಅಟೂಟ ಪ್ರೀತಿ. ತಂದೆಯ ಹೊರತು ಮತ್ತ್ಯಾರೂ ಕಾಣಿಸಬಾರದು. ಸಂಕಲ್ಪದಲ್ಲಿಯೂ, ಮಾತಿನಲ್ಲಿಯೂ, ಕರ್ಮದಲ್ಲಿಯೂ ಬಾಬಾರವರ ಜೊತೆ ಇರಬೇಕು.ಇಂತಹ ಲವಲೀನ ಆತ್ಮನು ಒಂದು ಶಬ್ಧವನ್ನು ಮಾತನಾಡಿದರೂ, ಅವರ ಸ್ನೇಹದ ಮಾತು ಅನ್ಯ ಆತ್ಮರನ್ನೂ ಸ್ನೇಹದಲ್ಲಿ ಬಂಧಿಸುತ್ತದೆ. ಇಂತಹ ಲವಲೀನ ಆತ್ಮದ ಒಂದು ಶಬ್ಧವೇ ಜಾದುವಿನ ಕಾರ್ಯವನ್ನು ಮಾಡುವುದು. ಅವರು ಆತ್ಮಿಕ ಜಾದುಗಾರನಾಗಿ ಬಿಡುತ್ತಾರೆ.

ಸ್ಲೋಗನ್:
ಯಾರು ಅಂತರ್ಮುಖಿ ಆಗಿದ್ದು ಲೈಟ್ ಮೈಟ್ ರೂಪದಲ್ಲಿ ಸ್ಥಿತರಾಗಿರುತ್ತಾರೆಯೋ ಅವರೇ ಯೋಗಿ ಆತ್ಮರಾಗಿದ್ದಾರೆ.