05.10.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಏಕಾಂತದಲ್ಲಿ ಕುಳಿತು ಈಗ ಇಂತಹ ಅಭ್ಯಾಸ ಮಾಡಿ - ನಾನು ಶರೀರದಿಂದ ಭಿನ್ನ ಆತ್ಮನಾಗಿದ್ದೇನೆ ಎಂಬುದು ಅನುಭವವಾಗಲಿ, ಇದಕ್ಕೆ ಜೀವಿಸಿದ್ದಂತೆ ಸಾಯುವುದೆಂದು ಹೇಳಲಾಗುತ್ತದೆ"

ಪ್ರಶ್ನೆ:
ಏಕಾಂತದ ಅರ್ಥವೇನು? ಏಕಾಂತದಲ್ಲಿ ಕುಳಿತು ನೀವು ಯಾವ ಅನುಭವ ಮಾಡಬೇಕಾಗಿದೆ?

ಉತ್ತರ:
ಏಕಾಂತದ ಅರ್ಥವಾಗಿದೆ - ಒಬ್ಬ ತಂದೆಯ ನೆನಪಿನಲ್ಲಿ ಈ ಶರೀರದ ಅಂತ್ಯವಾಗುವುದು ಅರ್ಥಾತ್ ಏಕಾಂತದಲ್ಲಿ ಕುಳಿತು ಈ ರೀತಿಯ ಅಭ್ಯಾಸ ಮಾಡಿ - ನಾನಾತ್ಮನು ಈ ಶರೀರ (ಚರ್ಮ) ವನ್ನು ಬಿಟ್ಟು ತಂದೆಯ ಬಳಿ ಹೋಗುತ್ತೇನೆ. ಮತ್ತ್ಯಾರ ನೆನಪೂ ಇರಬಾರದು. ಕುಳಿತು-ಕುಳಿತಿದ್ದಂತೆಯೇ ಅಶರೀರಿಯಾಗಿ ಬಿಡಿ. ಹೇಗೆ ನಾವು ಈ ಶರೀರದಿಂದ ಸತ್ತು ಹೋದೆವು, ಕೇವಲ ನಾವಾತ್ಮರಾಗಿದ್ದೇವೆ. ಶಿವ ತಂದೆಯ ಮಕ್ಕಳಾಗಿದ್ದೇವೆ, ಈ ಅಭ್ಯಾಸದಿಂದ ದೇಹಭಾನವು ಕಳೆಯುತ್ತಾ ಹೋಗುವುದು.

ಓಂ ಶಾಂತಿ.
ತಂದೆಯು ಮಕ್ಕಳಿಗೆ ಮೊಟ್ಟ ಮೊದಲು ತಿಳಿಸುತ್ತಾರೆ ಮಧುರಾತಿ ಮಧುರ ಮಕ್ಕಳೇ, ಇಲ್ಲಿ ಕುಳಿತುಕೊಳ್ಳುತ್ತೀರೆಂದರೆ ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತಾ ಇರಿ. ಮತ್ತ್ಯಾವ ಕಡೆಯೂ ಬುದ್ಧಿಯು ಹೋಗಬಾರದು. ನಾವಾತ್ಮರಾಗಿದ್ದೇವೆ, ಈ ಶರೀರದ ಮೂಲಕ ನಾವಾತ್ಮರು ಪಾತ್ರವನ್ನಭಿನಯಿಸುತ್ತೇವೆಂಬುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ಆತ್ಮವು ಅವಿನಾಶಿ, ಶರೀರವು ವಿನಾಶಿಯಾಗಿದೆ ಅಂದಾಗ ನೀವು ಮಕ್ಕಳು ದೇಹೀ-ಅಭಿಮಾನಿಯಾಗಿ ತಂದೆಯ ನೆನಪಿನಲ್ಲಿರಬೇಕಾಗಿದೆ. ನಾವಾತ್ಮರಾಗಿದ್ದೇವೆ, ಭಲೆ ಈ ಕರ್ಮೇಂದ್ರಿಯಗಳಿಂದ ಕೆಲಸ ತೆಗೆದುಕೊಳ್ಳಬಹುದು ಅಥವಾ ತೆಗೆದುಕೊಳ್ಳದೇ ಇರಬಹುದು. ಆದರೆ ತನ್ನನ್ನು ಈ ಶರೀರದಿಂದ ಭಿನ್ನವೆಂದು ತಿಳಿಯಬೇಕು. ತಂದೆಯು ತಿಳಿಸುತ್ತಾರೆ - ತನ್ನನ್ನು ಆತ್ಮನೆಂದು ತಿಳಿಯಿರಿ, ದೇಹವನ್ನು ಮರೆಯುತ್ತಾ ಹೋಗಿ. ನಾವಾತ್ಮರು ಸ್ವತಂತ್ರರಾಗಿದ್ದೇವೆ, ನಮಗೆ ಒಬ್ಬ ತಂದೆಯ ವಿನಃ ಮತ್ತ್ಯಾರನ್ನೂ ನೆನಪು ಮಾಡುವಂತಿಲ್ಲ. ಜೀವಿಸಿದ್ದಂತೆಯೇ ಮೃತ್ಯುವಿನ ಸ್ಥಿತಿಯಲ್ಲಿರಬೇಕಾಗಿದೆ. ನಾವಾತ್ಮರ ಯೋಗವು ಈಗ ತಂದೆಯ ಜೊತೆಯಿರಬೇಕಾಗಿದೆ. ಬಾಕಿ ಈ ಪ್ರಪಂಚದಿಂದ, ಮನೆಯಿಂದ ಸತ್ತು ಹೋದೆವು, ತಾನು ಸತ್ತರೆ ತನ್ನ ಪಾಲಿಗೆ ಜಗತ್ತೇ ಸತ್ತಂತೆ ಎಂದು ಹೇಳುತ್ತಾರಲ್ಲವೆ. ನೀವೀಗ ಜೀವಿಸಿದ್ದಂತೆಯೇ ಸಾಯಬೇಕಾಗಿದೆ. ನಾವಾತ್ಮರು ಶಿವ ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ ಶರೀರದ ಅಭಿಮಾನವನ್ನು ಕಳೆಯುತ್ತಾ ಇರಬೇಕು. ತನ್ನನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ, ಶರೀರದ ಅಭಿಮಾನವನ್ನು ಬಿಡಿ, ಇದು ಹಳೆಯ ಶರೀರವಲ್ಲವೆ. ಹಳೆಯ ವಸ್ತುವನ್ನು ಬಿಟ್ಟು ಬಿಡುತ್ತಾರಲ್ಲವೆ. ಈಗ ತಮ್ಮನ್ನು ಅಶರೀರಿಯಂದು ತಿಳಿಯಿರಿ, ನೀವೀಗ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ತಂದೆಯ ಬಳಿ ಹೋಗಬೇಕಾಗಿದೆ. ಹೀಗೆ ಅಭ್ಯಾಸ ಮಾಡುತ್ತಾ-ಮಾಡುತ್ತಾ ನಿಮಗೆ ಹವ್ಯಾಸವಾಗಿ ಬಿಡುವುದು. ಈಗಂತೂ ನೀವು ಮನೆಗೆ ಹೋಗಬೇಕಾಗಿದೆ, ಅಂದಮೇಲೆ ಈ ಹಳೆಯ ಪ್ರಪಂಚವನ್ನು ಮತ್ತೇಕೆ ನೆನಪು ಮಾಡುವಿರಿ! ಏಕಾಂತದಲ್ಲಿ ಕುಳಿತು ಹೀಗೆ ತಮ್ಮ ಜೊತೆ ಅಭ್ಯಾಸದ ಪರಿಶ್ರಮ ಪಡಬೇಕಾಗಿದೆ. ಭಕ್ತಿಮಾರ್ಗದಲ್ಲಿಯೂ ಸಹ ಕೋಣೆಯಲ್ಲಿ ಕುಳಿತು ಮಾಲೆಯನ್ನು ಜಪಿಸುತ್ತಾರೆ, ಪೂಜೆ ಮಾಡುತ್ತಾರೆ. ನೀವೂ ಸಹ ಏಕಾಂತದಲ್ಲಿ ಕುಳಿತು ಈ ಪ್ರಯತ್ನ ಪಡಿ ಆಗ ಹವ್ಯಾಸವಾಗಿ ಬಿಡುವುದು. ನೀವು ಬಾಯಿಂದ ಏನನ್ನೂ ಮಾತನಾಡಬೇಕಾಗಿಲ್ಲ. ಇದು ಬುದ್ಧಿಯ ಮಾತಾಗಿದೆ. ಶಿವ ತಂದೆಯು ಕಲಿಸುವವರಾಗಿದ್ದಾರೆ, ಅವರು ಪುರುಷಾರ್ಥ ಮಾಡಬೇಕಾಗಿಲ್ಲ, ಈ ಬ್ರಹ್ಮಾ ತಂದೆಯೂ ಪುರುಷಾರ್ಥ ಮಾಡುತ್ತಾರೆ. ಅವರು ಮತ್ತೆ ನೀವು ಮಕ್ಕಳಿಗೂ ತಿಳಿಸಿಕೊಡುತ್ತಾರೆ. ಎಷ್ಟು ಸಾಧ್ಯವೋ ಅಷ್ಟು ಕುಳಿತು ಈ ರೀತಿ ವಿಚಾರ ಮಾಡಿ, ನಾವೀಗ ನಮ್ಮ ಮನೆಗೆ ಹೋಗಬೇಕಾಗಿದೆ. ಈ ಶರೀರವನ್ನು ಇಲ್ಲಿಯೇ ಬಿಡಬೇಕಾಗಿದೆ. ತಂದೆಯನ್ನು ನೆನಪು ಮಾಡುವುದರಿಂದಲೇ ವಿಕರ್ಮಗಳು ವಿನಾಶವಾಗುತ್ತದೆ ಮತ್ತು ಆಯಸ್ಸು ವೃದ್ಧಿಯಾಗುತ್ತದೆ. ಆಂತರ್ಯದಲ್ಲಿ ಇದೇ ಚಿಂತನೆ ನಡೆಯುತ್ತಿರಬೇಕು. ಹೊರಗೆ ಏನನ್ನೂ ಮಾತನಾಡಬೇಕಾಗಿಲ್ಲ. ಭಕ್ತಿಮಾರ್ಗದಲ್ಲಿಯೂ ಸಹ ಬ್ರಹ್ಮತತ್ವವನ್ನು ಅಥವಾ ಕೆಲವರು ಶಿವನನ್ನೂ ನೆನಪು ಮಾಡುತ್ತಾರೆ ಆದರೆ ಆ ನೆನಪು ಯಥಾರ್ಥವಲ್ಲ. ತಂದೆಯ ಪರಿಚಯವೇ ಇಲ್ಲವೆಂದಮೇಲೆ ಹೇಗೆ ನೆನಪು ಮಾಡುವುದು! ಈಗಾದರೆ ನಿಮಗೆ ತಂದೆಯ ಪರಿಚಯವು ಸಿಕ್ಕಿದೆ. ಬೆಳಗ್ಗೆ-ಬೆಳಗ್ಗೆ ಎದ್ದು ಏಕಾಂತದಲ್ಲಿ ಹೀಗೆ ತಮ್ಮೊಂದಿಗೆ ತಾವು ಮಾತನಾಡಿಕೊಳ್ಳೀ, ವಿಚಾರ ಸಾಗರ ಮಂಥನ ಮಾಡಿ, ತಂದೆಯನ್ನು ನೆನಪು ಮಾಡಿ. ಬಾಬಾ, ನಾವೀಗ ತಮ್ಮ ಸತ್ಯ ಮಡಿಲಿಗೆ ಬಂದೆವೆಂದರೆ ಬಂದೆವು! ಅದು ಆತ್ಮೀಯ ಮಡಿಲಾಗಿದೆ. ಹೀಗೆ ತಮ್ಮ ಜೊತೆ ಮಾತನಾಡಿಕೊಳ್ಳಬೇಕು. ತಂದೆಯು ಬಂದಿದ್ದಾರೆ, ತಂದೆಯು ಬಂದು ಕಲ್ಪ-ಕಲ್ಪವೂ ನಮಗೆ ರಾಜಯೋಗವನ್ನು ಕಲಿಸುತ್ತಾರೆ, ಮಕ್ಕಳೇ, ನನ್ನನ್ನು ನೆನಪು ಮಾಡಿ, ಚಕ್ರವನ್ನು ನೆನಪು ಮಾಡಿ ಎಂದು ತಿಳಿಸುತ್ತಾರೆ. ನೀವೀಗ ಸ್ವದರ್ಶನ ಚಕ್ರಧಾರಿಗಳಾಗಬೇಕಾಗಿದೆ. ತಂದೆಯಲ್ಲಿಯೇ ಚಕ್ರದ ಸಂಪೂರ್ಣ ಜ್ಞಾನವಿದೆಯಲ್ಲವೆ. ಅದನ್ನು ಮತ್ತೆ ನಿಮಗೇ ತಿಳಿಸುತ್ತಾರೆ. ನಿಮ್ಮನ್ನು ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಿದ್ದಾರೆ, ಮೂರು ಕಾಲಗಳು ಅರ್ಥಾತ್ ಆದಿ-ಮಧ್ಯ-ಅಂತ್ಯವನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ಪರಮ ಆತ್ಮನಾಗಿದ್ದಾರೆ, ಅವರಿಗಂತೂ ತಮ್ಮ ಶರೀರವಿಲ್ಲ. ಈಗ ಈ ಶರೀರದಲ್ಲಿ ಕುಳಿತು ನಿಮಗೆ ತಿಳಿಸಿಕೊಡುತ್ತಾರೆ. ಇದು ಅದ್ಭುತವಾದ ಮಾತಾಗಿದೆ! ಭಗೀರಥನಲ್ಲಿ ವಿರಾಜಮಾನವಾಗುತ್ತಾರೆಂದರೆ ಅವಶ್ಯವಾಗಿ ಇನ್ನೊಂದು ಆತ್ಮವಿದೆ. ಅನೇಕ ಜನ್ಮಗಳ ಅಂತಿಮ ಜನ್ಮವು ಇವರದಾಗಿದೆ. ನಂಬರ್ವನ್ ಪಾವನರಿದ್ದವರೇ ನಂತರ ನಂಬರ್ವನ್ ಪತಿತನಾಗುತ್ತಾರೆ. ಅವರು ತಮಗೆ ಭಗವಂತನೆಂದಾಗಲಿ, ವಿಷ್ಣುವೆಂದಾಗಲಿ ಹೇಳಿಕೊಳ್ಳುವುದಿಲ್ಲ. ಇಲ್ಲಿ ಒಂದು ಆತ್ಮವೂ ಸಹ ಪಾವನವಿಲ್ಲ, ಎಲ್ಲರೂ ಪತಿತವಾಗಿದ್ದಾರೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಹೀಗೀಗೆ ವಿಚಾರ ಸಾಗರ ಮಂಥನ ಮಾಡಿ, ಇದರಿಂದ ನಿಮಗೆ ಖುಷಿಯೂ ಇರುವುದು ಮತ್ತು ಇದರಲ್ಲಿ ಏಕಾಂತವು ಬೇಕಾಗಿದೆ. ಒಬ್ಬ ತಂದೆಯ ನೆನಪಿನಲ್ಲಿ ಶರೀರದ ಅಂತ್ಯವಾಗುತ್ತದೆ, ಅದಕ್ಕೆ ಏಕಾಂತವೆಂದು ಹೇಳಲಾಗುತ್ತದೆ. ಈ ಚರ್ಮ (ಶರೀರ) ವೂ ಸಹ ಬಿಟ್ಟು ಹೋಗುವುದು. ಸನ್ಯಾಸಿಗಳು ಬ್ರಹ್ಮತತ್ವದ ನೆನಪಿನಲ್ಲಿರುತ್ತಾರೆ. ಆ ನೆನಪಿನಲ್ಲಿ ಇರುತ್ತಾ-ಇರುತ್ತಾ ಶರೀರದ ಭಾನವು ಕಳೆಯುತ್ತದೆ. ನಾವೀಗ ಬ್ರಹ್ಮತತ್ವದಲ್ಲಿ ಲೀನವಾಗಬೇಕೆಂದು ಹಾಗೆಯೇ ಕುಳಿತು ಬಿಡುತ್ತಾರೆ. ತಪಸ್ಸಿನಲ್ಲಿ ಕುಳಿತು-ಕುಳಿತಿದ್ದಂತೆಯೇ ಶರೀರವನ್ನು ಬಿಟ್ಟು ಬಿಡುತ್ತಾರೆ. ಭಕ್ತಿಯಲ್ಲಂತೂ ಮನುಷ್ಯರು ಬಹಳ ಕಷ್ಟವನ್ನನುಭವಿಸುತ್ತಾರೆ. ಇಲ್ಲಿ ಯಾವುದೇ ಕಷ್ಟದ ಮಾತಿಲ್ಲ. ನೆನಪಿನಲ್ಲಿರಬೇಕಾಗಿದೆ, ಅಂತಿಮದಲ್ಲಿ ಯಾವ ನೆನಪೂ ಇರಬಾರದು. ಗೃಹಸ್ಥ ವ್ಯವಹಾರದಲ್ಲಂತೂ ಇರಲೇಬೇಕಾಗಿದೆ ಆದರೆ ಅದರಿಂದ ಸಮಯ ತೆಗೆಯಬೇಕಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯೆಯ ಉಮ್ಮಂಗವಿರುತ್ತದೆಯಲ್ಲವೆ. ಇದು ವಿದ್ಯೆಯಾಗಿದೆ, ತನ್ನನ್ನು ಆತ್ಮನೆಂದು ತಿಳಿಯದ ಕಾರಣ ತಂದೆ, ಶಿಕ್ಷಕ, ಗುರು ಎಲ್ಲರನ್ನೂ ಮರೆತು ಹೋಗುತ್ತಾರೆ. ಏಕಾಂತದಲ್ಲಿ ಕುಳಿತು ಹೀಗೀಗೆ ವಿಚಾರ ಮಾಡಿ. ಗೃಹಸ್ಥಿಗಳ ಮನೆಯಲ್ಲಂತೂ ವಾಯುಮಂಡಲವು ಅಷ್ಟು ಚೆನ್ನಾಗಿರುವುದಿಲ್ಲ. ಒಂದುವೇಳೆ ಪ್ರಬಂಧವಿದ್ದರೆ ಇದಕ್ಕಾಗಿ ಒಂದು ಕೋಣೆಯನ್ನಿಟ್ಟು ಅಲ್ಲಿ ಹೋಗಿ ಏಕಾಂತದಲ್ಲಿ ಕುಳಿತು ಬಿಡಿ. ಮಾತೆಯರಿಗಂತೂ ದಿನದಲ್ಲಿಯೂ ಸಮಯ ಸಿಗುತ್ತದೆ. ಮಕ್ಕಳು ಶಾಲೆಗೆ ಹೊರಟು ಹೋಗುತ್ತಾರೆ, ಸಮಯ ಸಿಕ್ಕಿದಾಗಲೆಲ್ಲಾ ಇದೇ ಪ್ರಯತ್ನ ಪಡುತ್ತಾ ಇರಿ. ನಿಮಗಾದರೆ ಒಂದು ಮನೆಯಿದೆ ಆದರೆ ತಂದೆಗೆ ನೋಡಿ, ಎಷ್ಟೊಂದು ಅಂಗಡಿ (ಸೇವಾಕೇಂದ್ರ) ಗಳಿವೆ! ಇನ್ನೂ ವೃದ್ಧಿಯಾಗುತ್ತಾ ಹೋಗುವುದು. ಮನುಷ್ಯರಿಗೆ ಉದ್ಯೋಗ-ವ್ಯವಹಾರಗಳ ಚಿಂತೆಯಿರುತ್ತದೆ ಆದ್ದರಿಂದ ನಿದ್ರೆಯು ದೂರವಾಗುತ್ತದೆ. ಇದೂ ಸಹ ವ್ಯಾಪಾರವಲ್ಲವೆ. ಇದು ಎಷ್ಟು ದೊಡ್ಡ ಅಂಗಡಿಯಾಗಿದೆ! ತಂದೆಯು ಎಷ್ಟೊಂದು ಪರಿಶ್ರಮ ಪಡುತ್ತಾರೆ. ಹಳೆಯ ಶರೀರವನ್ನು ತೆಗೆದುಕೊಂಡು ಅದನ್ನು ರಿಪೇರಿ ಮಾಡಿ ಹೊಸದನ್ನು ಕೊಡುತ್ತಾರೆ, ಎಲ್ಲರಿಗೂ ಮಾರ್ಗವನ್ನು ತಿಳಿಸುತ್ತಾರೆ. ಈ ವ್ಯಾಪಾರವು ಬಹಳ ದೊಡ್ಡದಾಗಿದೆ, ಈ ಕರ್ತವ್ಯವನ್ನು ತಂದೆಯೇ ಮಾಡಬೇಕಾಗಿದೆ. ವ್ಯಾಪಾರಿಗಳಿಗೇ ವ್ಯಾಪಾರದ ಚಿಂತೆಯೇ ಇರುತ್ತದೆ. ತಂದೆಯು ಹೀಗೀಗೆ ಅಭ್ಯಾಸ ಮಾಡುತ್ತಾರೆ ನಂತರ ನೀವೂ ಸಹ ಈ ರೀತಿ ಮಾಡಿ ಎಂದು ತಿಳಿಸುತ್ತಾರೆ. ಎಷ್ಟು ನೀವು ತಂದೆಯ ನೆನಪಿನಲ್ಲಿರುತ್ತೀರೋ ಸ್ವತಹ ನಿದ್ರೆಯೇ ದೂರವಾಗುವುದು. ಸಂಪಾದನೆಯಲ್ಲಿ ಆತ್ಮಕ್ಕೆ ಬಹಳ ಆನಂದವುಂಟಾಗುವುದು. ಸಂಪಾದನೆಗಾಗಿ ಮನುಷ್ಯರು ರಾತ್ರಿಯಲ್ಲಿಯೂ ಸಹ ಜಾಗೃತರಾಗಿರುತ್ತಾರೆ. ಸೀಜನ್ನಿನಲ್ಲಿ ಇಡೀ ರಾತ್ರಿ ಅಂಗಡಿಗಳು ತೆರೆದಿರುತ್ತವೆ. ನಿಮ್ಮ ಸಂಪಾದನೆಯೂ ಸಹ ರಾತ್ರಿ ಮತ್ತು ಮುಂಜಾನೆಯ ಸಮಯದಲ್ಲಿ ಬಹಳ ಚೆನ್ನಾಗಿ ಆಗುವುದು. ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ, ತ್ರಿಕಾಲದರ್ಶಿಗಳಾಗುತ್ತೀರಿ, 21 ಜನ್ಮಗಳಿಗಾಗಿ ಹಣ ಸಂಪಾದಿಸುತ್ತೀರಿ. ಮನುಷ್ಯರು ಸಾಹುಕಾರರಾಗಲು ಎಷ್ಟೊಂದು ಪುರುಷಾರ್ಥ ಮಾಡುತ್ತಾರೆ, ನೀವೂ ಸಹ ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿಕರ್ಮ ವಿನಾಶವಾಗುತ್ತದೆ, ಬಲ ಸಿಗುತ್ತದೆ. ನೆನಪಿನ ಯಾತ್ರೆಯಲ್ಲಿರದಿದ್ದರೆ ಬಹಳ ನಷ್ಟವಾಗುವುದು ಏಕೆಂದರೆ ತಲೆಯ ಮೇಲೆ ಬಹಳಷ್ಟು ಪಾಪಗಳ ಹೊರೆಯಿದೆ. ಈಗ ಒಬ್ಬ ತಂದೆಯನ್ನು ನೆನಪು ಮಾಡಿ ಜಮಾ ಮಾಡಿಕೊಳ್ಳಬೇಕು ಮತ್ತು ತ್ರಿಕಾಲದರ್ಶಿಗಳಾಗಬೇಕಾಗಿದೆ. ಅರ್ಧಕಲ್ಪಕ್ಕಾಗಿ ಈ ಅವಿನಾಶಿ ಧನವನ್ನು ಸಂಪಾದನೆ ಮಾಡಿಕೊಳ್ಳಬೇಕಾಗಿದೆ. ಇದು ಬಹಳ ಅಮೂಲ್ಯವಾಗಿದೆ. ವಿಚಾರ ಸಾಗರ ಮಂಥನ ಮಾಡಿ ರತ್ನಗಳನ್ನು ತೆಗೆಯಬೇಕಾಗಿದೆ. ಹೇಗೆ ಬ್ರಹ್ಮಾ ತಂದೆಯು ಸ್ವಯಂ ಮಾಡುವರೋ ಆ ಯುಕ್ತಿಯನ್ನು ಮಕ್ಕಳಿಗೂ ತಿಳಿಸಿಕೊಡುತ್ತಾರೆ. ಬಾಬಾ, ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆಯಂದು ಮಕ್ಕಳು ಹೇಳುತ್ತಾರೆ.

ತಂದೆಯು ತಿಳಿಸುತ್ತಾರೆ - ಮಕ್ಕಳೇ, ಸಾಧ್ಯವಾದಷ್ಟೂ ತಮ್ಮ ಸಂಪಾದನೆಯನ್ನು ಮಾಡಿಕೊಳ್ಳಬೇಕು, ಇದೇ ಕೆಲಸಕ್ಕೆ ಬರುವುದು. ಏಕಾಂತದಲ್ಲಿ ಕುಳಿತು ತಂದೆಯನ್ನು ನೆನಪು ಮಾಡಬೇಕಾಗಿದೆ. ಬಿಡುವು ಸಿಕ್ಕಿದರೆ ಮಂದಿರಗಳಲ್ಲಿ ಹೋಗಿ ಬಹಳಷ್ಟು ಸರ್ವೀಸ್ ಮಾಡಬಹುದು. ಬ್ಯಾಡ್ಜ್ನ್ನು ಅವಶ್ಯವಾಗಿ ಹಾಕಿಕೊಳ್ಳಿ, ಅದರಿಂದ ಇವರು ಆತ್ಮಿಕ ಸೈನಿಕರು ಎಂದು ಎಲ್ಲರೂ ತಿಳಿದುಕೊಳ್ಳುತ್ತಾರೆ. ನಾವು ಸ್ವರ್ಗದ ಸ್ಥಾಪನೆ ಮಾಡುತ್ತಿದ್ದೇವೆಂದು ನೀವು ಬರೆಯುತ್ತೀರಿ. ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಈಗ ಇಲ್ಲ ಅದನ್ನು ಪುನಃ ಸ್ಥಾಪನೆ ಮಾಡುತ್ತೇವೆ. ಈ ಲಕ್ಷ್ಮೀ-ನಾರಾಯಣರು ನಮ್ಮ ಗುರಿ-ಧ್ಯೇಯವಾಗಿರುವರಲ್ಲವೆ. ಈ ಟ್ರಾನ್ಸ್ಲೇಟ್ನ ಚಿತ್ರವನ್ನು ಬ್ಯಾಟರಿ ಸಹಿತವಾಗಿ ಪರಿಕ್ರಮಣ ಮಾಡಿ. ಎಲ್ಲರಿಗೆ ಹೇಳಿರಿ, ಈ ರಾಜ್ಯವನ್ನು ನಾವು ಸ್ಥಾಪನೆ ಮಾಡುತ್ತಿದ್ದೇವೆ, ಈ ಚಿತ್ರವು ಎಲ್ಲದಕ್ಕಿಂತ ಬಹಳ ಸುಂದರವಾಗಿದೆ. ಈ ಚಿತ್ರವು ಬಹಳ ಪ್ರಸಿದ್ಧವಾಗುವುದು. ಲಕ್ಷ್ಮೀ-ನಾರಾಯಣರು ಕೇವಲ ಒಬ್ಬರೇ ಇರಲಿಲ್ಲ, ಅವರ ರಾಜಧಾನಿಯೂ ಇತ್ತಲ್ಲವೆ. ಈ ಸ್ವರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ. ಈಗ ತಂದೆಯು ತಿಳಿಸುತ್ತಾರೆ - ಮನ್ಮನಾಭವ. ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ನಾವು ಗೀತಾ ಸಪ್ತಾಹವನ್ನಾಚರಿಸುತ್ತೇವೆ ಎಂದು ಹೇಳುತ್ತಾರೆ. ಇವೆಲ್ಲಾ ಉಪಾಯಗಳು ಕಲ್ಪದ ಹಿಂದಿನ ತರಹ ನಡೆಯುತ್ತಿವೆ. ಪರಿಕ್ರಮಣ ಮಾಡುವಾಗ ಈ ಚಿತ್ರವನ್ನಿಟ್ಟುಕೊಳ್ಳಬೇಕಾಗಿದೆ. ಇದನ್ನು ನೋಡಿ ಎಲ್ಲರೂ ಖುಷಿ ಪಡುತ್ತಾರೆ. ನೀವು ತಿಳಿಸಿ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ, ಮನ್ಮನಾಭವ. ಇದು ಗೀತೆಯ ಅಕ್ಷರವಲ್ಲವೆ. ಭಗವಂತನು ಶಿವ ತಂದೆಯಾಗಿದ್ದಾರೆ, ಅವರು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುವುದು, 84 ಜನ್ಮಗಳ ಚಕ್ರವನ್ನು ನೆನಪು ಮಾಡಿದರೆ ಈ ರೀತಿ ನೀವು ಶ್ರೇಷ್ಠರಾಗುವಿರಿ. ನೀವು ಯಾರಿಗಾದರೂ ಈ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡಿ, ಶಿವ ತಂದೆಯ ಭಂಡಾರವಂತೂ ಸದಾ ಸಂಪನ್ನವಾಗಿರುತ್ತದೆ. ಮುಂದೆ ಹೋದಂತೆ ಇನ್ನೂ ಬಹಳಷ್ಟು ಸೇವೆಯಾಗುವುದು. ಗುರಿ-ಧ್ಯೇಯವು ಎಷ್ಟು ಸ್ಪಷ್ಟವಾಗಿದೆ! ಒಂದು ರಾಜ್ಯ, ಒಂದು ಧರ್ಮವಿತ್ತು, ಬಹಳ ಸಾಹುಕಾರರಾಗಿದ್ದಿರಿ. ಒಂದು ರಾಜ್ಯ, ಒಂದು ಧರ್ಮ ಬೇಕೆಂದು ಮನುಷ್ಯರು ಬಯಸುತ್ತಾರೆ. ಮನುಷ್ಯರು ಏನನ್ನು ಬಯಸುತ್ತಾರೆಯೋ ಈಗ ಅದರ ಚಿಹ್ನೆಗಳು ಕಾಣುತ್ತವೆ ಅದರಿಂದ ಇವರು ಸತ್ಯವನ್ನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳುವರು. 100% ಪವಿತ್ರ, ಸುಖ, ಶಾಂತಿಯ ರಾಜ್ಯವನ್ನು ಪುನಃ ಸ್ಥಾಪನೆ ಮಾಡುತ್ತಿದ್ದೀರಿ. ಮತ್ತೆ ನಿಮಗೆ ಖುಷಿಯೂ ಇರುವುದು. ನೆನಪಿನಲ್ಲಿದ್ದಾಗಲೇ ಬಾಣವು ನಾಟುವುದು. ಶಾಂತಿಯಲ್ಲಿದ್ದು ಕೆಲವು ಶಬ್ಧಗಳನ್ನು ಹೇಳಿದರೂ ಸಾಕು, ಹೆಚ್ಚು ಹೇಳಬೇಕಾಗಿಲ್ಲ. ಗೀತೆ, ಕವಿತೆ ಇತ್ಯಾದಿಗಳೇನೂ ತಂದೆಗೆ ಇಷ್ಟವಾಗುವುದಿಲ್ಲ. ಹೊರಗಿನ ಮನುಷ್ಯರೊಂದಿಗೆ ಈರ್ಷ್ಯೆ ಮಾಡಬಾರದು. ನಿಮ್ಮ ಮಾತೇ ಬೇರೆಯಾಗಿದೆ. ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದರೆ ಸಾಕು. ಒಳ್ಳೊಳ್ಳೆಯ ಸ್ಲೋಗನ್ಗಳನ್ನು ಹಾಕಿರಿ ಮನುಷ್ಯರು ಅದನ್ನು ಓದಿ ಜಾಗೃತರಾಗಲಿ. ಮಕ್ಕಳು ವೃದ್ಧಿಯಾಗುತ್ತಿರುತ್ತಾರೆ, ಖಜಾನೆಯು ತುಂಬುತ್ತಾ ಇರುತ್ತದೆ. ಮಕ್ಕಳು ಕೊಟ್ಟಿರುವುದು ಮತ್ತೆ ಮಕ್ಕಳ ಕೆಲಸಕ್ಕೆ ಉಪಯೋಗವಾಗುತ್ತದೆ. ತಂದೆಯಂತೂ ಹಣವನ್ನು ತೆಗೆದುಕೊಳ್ಳುವುದಿಲ್ಲ. ನಿಮ್ಮ ವಸ್ತುಗಳನ್ನು ನಿಮ್ಮ ಕೆಲಸದಲ್ಲಿಯೇ ತೊಡಗಿಸುತ್ತಾರೆ. ನಾವು ಬಹಳ ಸುಧಾರಣೆ ಮಾಡುತ್ತಿದ್ದೇವೆಂದು ಭಾರತವಾಸಿಗಳು ತಿಳಿದುಕೊಳ್ಳುತ್ತಾರೆ. 5 ವರ್ಷಗಳಲ್ಲಿ ಇಷ್ಟು ದವಸ ಧಾನ್ಯಗಳಿರುವುದು, ಎಂದೂ ದವಸ ಧಾನ್ಯಗಳಿಗಾಗಿ ತೊಂದರೆಯಿರುವುದಿಲ್ಲ ಎಂದು ತಿಳಿದುಕೊಳ್ಳುತ್ತಾರೆ ಆದರೆ ನಿಮಗೆ ಗೊತ್ತಿದೆ. ಒಂದು ದಿನ ಇಂತಹ ಸ್ಥಿತಿ ಬರುತ್ತದೆ - ತಿನ್ನುವುದಕ್ಕೂ ಆಹಾರವು ಸಿಗುವುದಿಲ್ಲ. ದವಸ ಧಾನ್ಯಗಳೂ ಇರುವುದಿಲ್ಲ.

ನಾವು 21 ಜನ್ಮಗಳಿಗಾಗಿ ನಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೇವೆಂದು ಮಕ್ಕಳು ತಿಳಿದುಕೊಂಡಿದ್ದೀರಿ ಅಂದಮೇಲೆ ಈಗ ಅಲ್ಪಸ್ವಲ್ಪ ಕಷ್ಟವನ್ನು ಸಹನೆ ಮಾಡಲೇಬೇಕಾಗಿದೆ. ಖುಷಿಯಂತಹ ಔಷಧಿಯಿಲ್ಲವೆಂದು ಹೇಳಲಾಗುತ್ತದೆ. ಗೋಪ-ಗೋಪಿಕೆಯರ ಅತೀಂದ್ರಿಯ ಸುಖದ ಗಾಯನವಿದೆ. ಮಕ್ಕಳು ಇನ್ನೂ ವೃದ್ಧಿಯಾಗುತ್ತಾ ಹೋಗುತ್ತಾರೆ. ಯಾರೆಲ್ಲಾ ಈ ಧರ್ಮದವರಿದ್ದಾರೆಯೋ ಅವರೆಲ್ಲಾ ಬರತೊಡಗುತ್ತಾರೆ. ವೃಕ್ಷವು ಇಲ್ಲಿಯೇ ವೃದ್ಧಿಯಾಗಬೇಕಲ್ಲವೆ. ಸ್ಥಾಪನೆಯಾಗುತ್ತಿದೆ, ಅನ್ಯ ಧರ್ಮಗಳಲ್ಲಿ ಈ ರೀತಿಯಾಗುವುದಿಲ್ಲ. ಅವರಂತೂ ಮೇಲಿನಿಂದ ಬರುತ್ತಾರೆ, ಈ ವೃಕ್ಷವು ಸ್ಥಾಪನೆ ಆಗಿಯೇ ಇದೆ. ಇದರಲ್ಲಿ ಮತ್ತೆ ನಂಬರ್ವಾರ್ ಬರತೊಡಗುತ್ತಾರೆ, ವೃದ್ಧಿಯಾಗುತ್ತಾ ಹೋಗುವರು. ಇದರಲ್ಲಿ ಕಷ್ಟವೇನೂ ಇಲ್ಲ. ಅವರು ಮೇಲಿಂದ ಬಂದು ಪಾತ್ರವನ್ನಭಿನಯಿಸಲೇಬೇಕಾಗಿದೆ, ಇದರಲ್ಲಿ ಮಹಿಮೆಯ ಮಾತೇನಿದೆ? ಧರ್ಮ ಸ್ಥಾಪಕರ ಹಿಂದೆ ಅನುಯಾಯಿಗಳು ಬರತೊಡಗುತ್ತಾರೆ. ಅವರು ಸದ್ಗತಿಯ ಶಿಕ್ಷಣವನ್ನೇನು ಕೊಡುತ್ತಾರೆ? ಏನೂ ಇಲ್ಲ. ಇಲ್ಲಾದರೂ ತಂದೆಯು ಭವಿಷ್ಯ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದಾರೆ. ಸಂಗಮಯುಗದಲ್ಲಿ ಹೊಸನಾಟಿ ಮಾಡುತ್ತಾರಲ್ಲವೆ. ಮೊದಲು ಸಸಿಗಳನ್ನು ಕುಂಡದಲ್ಲಿ ಬೆಳೆಸಿ ನಂತರ ಕೆಳಗೆ ಮಣ್ಣಿನಲ್ಲಿ ನಾಟಿ ಮಾಡುತ್ತಾರೆ. ವೃದ್ಧಿಯಾಗತೊಡಗುತ್ತದೆ. ನೀವೂ ಸಹ ಈಗ ಸಸಿಯನ್ನು ನಾಟಿ ಮಾಡುತ್ತಿದ್ದೀರಿ ನಂತರ ಸತ್ಯಯುಗದಲ್ಲಿ ವೃದ್ಧಿಯನ್ನು ಹೊಂದಿ ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ನೀವು ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಿದ್ದೀರಿ. ಕಲಿಯುಗದಲ್ಲಿ ಇನ್ನೂ ಬಹಳಷ್ಟು ವರ್ಷಗಳಿವೆಯೆಂದು ಮನುಷ್ಯರು ತಿಳಿಯುತ್ತಾರೆ, ಏಕೆಂದರೆ ಶಾಸ್ತ್ರಗಳಲ್ಲಿ ಲಕ್ಷಾಂತರ ವರ್ಷಗಳೆಂದು ಬರೆದು ಬಿಟ್ಟಿದ್ದಾರೆ. ಕಲಿಯುಗದಲ್ಲಿ ಇನ್ನೂ 40 ಸಾವಿರ ವರ್ಷಗಳಿದೆ ನಂತರ ತಂದೆಯು ಬಂದು ಹೊಸ ಪ್ರಪಂಚವನ್ನು ಸ್ಥಾಪಿಸುತ್ತಾರೆಂದು ತಿಳಿಯುತ್ತಾರೆ. ಇನ್ನೂ ಕೆಲವರು ಈ ರೀತಿ ತಿಳಿದುಕೊಳ್ಳುತ್ತಾರೆ - ಇದು ಅದೇ ಮಹಾಭಾರತ ಯುದ್ಧವಾಗಿದೆ, ಗೀತೆಯ ಭಗವಂತನೂ ಅವಶ್ಯವಾಗಿ ಇರುವರು. ಆದರೆ ನೀವು ತಿಳಿಸುತ್ತೀರಿ, ಕೃಷ್ಣನಂತೂ ಇರಲಿಲ್ಲ. ತಂದೆಯು ತಿಳಿಸುತ್ತಾರೆ - ಕೃಷ್ಣನು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ, ಒಂದು ಜನ್ಮದ ಮುಖ ಲಕ್ಷಣಗಳು ಇನ್ನೊಂದು ಜನ್ಮಕ್ಕೆ ಹೋಲುವುದಿಲ್ಲ. ಅಂದಮೇಲೆ ಇಲ್ಲಿಗೆ ಕೃಷ್ಣನೆಲ್ಲಿಂದ ಬರುವನು? ಆದರೆ ಯಾರೂ ಈ ಮಾತುಗಳ ಮೇಲೆ ವಿಚಾರ ಮಾಡುವುದಿಲ್ಲ. ನೀವು ತಿಳಿದುಕೊಳ್ಳುತ್ತೀರಿ, ಕೃಷ್ಣನು ಸ್ವರ್ಗದ ರಾಜಕುಮಾರ ಅಂದಮೇಲೆ ದ್ವಾಪರದಲ್ಲಿ ಎಲ್ಲಿಂದ ಬರುವನು? ಈ ಲಕ್ಷ್ಮೀ-ನಾರಾಯಣರ ಚಿತ್ರವನ್ನು ನೋಡಿದೊಡನೆಯೇ ಅರ್ಥವಾಗುತ್ತದೆ ಶಿವ ತಂದೆಯು ಈ ಆಸ್ತಿಯನ್ನು ಕೊಡುತ್ತಿದ್ದಾರೆ. ಸತ್ಯಯುಗದ ಸ್ಥಾಪನೆ ಮಾಡುವವರು ತಂದೆಯೇ ಆಗಿದ್ದಾರೆ. ಈ ಗೋಲ, ಕಲ್ಪವೃಕ್ಷ ಮೊದಲಾದ ಚಿತ್ರಗಳು ಬಹಳ ಅಮೂಲ್ಯವಾಗಿವೆ. ಮುಂದೆ ಒಂದು ದಿನ ನಿಮ್ಮ ಬಳಿ ಇವೆಲ್ಲಾ ಟ್ರಾನ್ಸ್ಲೇಟ್ನ ಚಿತ್ರಗಳಾಗಿ ಬಿಡುತ್ತವೆ ಆಗ ನಮಗೆ ಇಂತಹ ಚಿತ್ರಗಳೇ ಬೇಕೆಂದು ಹೇಳತೊಡಗುತ್ತಾರೆ. ಈ ಚಿತ್ರಗಳಿಂದ ವಿಹಂಗ ಮಾರ್ಗದ ಸೇವೆಯಾಗುವುದು. ನಿಮ್ಮ ಬಳಿ ಇಷ್ಟೊಂದು ಮಂದಿ ಬರುತ್ತಾರೆ, ನಿಮಗೆ ಬಿಡುವೇ ಇರುವುದಿಲ್ಲ. ಅನೇಕರು ಬರತೊಡಗುತ್ತಾರೆ, ಬಹಳ ಖುಷಿಯಿರುತ್ತದೆ. ದಿನ-ಪ್ರತಿದಿನ ನಿಮ್ಮ ಪ್ರಭಾವವು ಹೆಚ್ಚುತ್ತಾ ಹೋಗುತ್ತದೆ. ಡ್ರಾಮಾನುಸಾರ ಯಾರು ಹೂಗಳಾಗುವವರಿದ್ದಾರೆಯೋ ಅವರಿಗೂ ಇದು ಪ್ರೇರಣೆಯಾಗುವುದು. ಬಾಬಾ, ನೀವು ಇವರ ಬುದ್ಧಿಗೆ ಪ್ರೇರಣೆ ಕೊಡಿ ಎಂದು ನೀವು ಮಕ್ಕಳು ಹೇಳುವ ಅವಶ್ಯಕತೆಯಿರುವುದಿಲ್ಲ. ತಂದೆಯೇನೂ ಪ್ರೇರಣೆ ಕೊಡುವುದಿಲ್ಲ, ಸಮಯದಲ್ಲಿ ತಾನಾಗಿಯೇ ಪ್ರೇರಣೆಯಾಗುವುದು. ತಂದೆಯಂತೂ ಮಾರ್ಗವನ್ನು ತಿಳಿಸುತ್ತಾರಲ್ಲವೆ. ಬಾಬಾ, ನನ್ನ ಪತಿಯ ಬುದ್ಧಿಗೆ ಪ್ರೇರಣೆ ಕೊಡಿ ಎಂದು ಕೆಲವು ಮಕ್ಕಳು ಬರೆಯುತ್ತಾರೆ. ಹೀಗೆ ಎಲ್ಲರ ಬುದ್ಧಿಗೆ ಪ್ರೇರಣೆ ನೀಡುವುದಾದರೆ ಎಲ್ಲರೂ ಸ್ವರ್ಗದಲ್ಲಿ ಬಂದು ಬಿಡುವರು. ವಿದ್ಯೆಯಲ್ಲಿ ಪರಿಶ್ರಮವಿದೆ, ನೀವು ಈಶ್ವರನ ಸಹಯೋಗಿಗಳಲ್ಲವೆ. ಏನೇನು ಮಾಡಬೇಕೆಂದು ಸತ್ಯ-ಸತ್ಯವಾದ ಮಾತನ್ನು ಮೊದಲೇ ತಿಳಿಸಿರುತ್ತಾರೆ. ಇಂತಹ ಚಿತ್ರಗಳನ್ನು ತೆಗೆದುಕೊಂಡು ಹೋಗಬೇಕಾಗಿದೆ. ಏಣಿಯ ಚಿತ್ರವನ್ನೂ ಸಹ ತೆಗೆದುಕೊಂಡು ಹೋಗಿ. ಡ್ರಾಮಾದನುಸಾರ ಸ್ಥಾಪನೆಯು ಆಗಲೇಬೇಕಾಗಿದೆ. ತಂದೆಯು ಸರ್ವೀಸಿಗಾಗಿ ಯಾವ ಸಲಹೆ ನೀಡುವರೋ ಅದರ ಮೇಲೆ ಗಮನ ಕೊಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಭಿನ್ನ-ಭಿನ್ನ ಪ್ರಕಾರದ ಲಕ್ಷಾಂತರ ಬ್ಯಾಡ್ಜ್ಗಳನ್ನು ಮಾಡಿಸಿ, ರೈಲಿನಲ್ಲಿ ಹೋಗಿ 100 ಮೈಲುಗಳವರೆಗೆ ಹೋಗಿ ಸರ್ವೀಸ್ ಮಾಡಿ ಬನ್ನಿ. ಒಂದು ಭೋಗಿಯಿಂದ ಇನ್ನೊಂದು ಭೋಗಿಗೆ, ಇನ್ನೊಂದರಿಂದ ಮತ್ತೊಂದರಲ್ಲಿ ಹೋಗಿ ಸರ್ವೀಸ್ ಮಾಡಿ. ಬಹಳ ಸಹಜವಾಗಿದೆ. ಮಕ್ಕಳಿಗೆ ಸರ್ವೀಸಿನ ಉಮ್ಮಂಗವಿರಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ವಿಚಾರ ಸಾಗರ ಮಂಥನ ಮಾಡಿ ಒಳ್ಳೊಳ್ಳೆಯ ರತ್ನಗಳನ್ನು ತೆಗೆಯಬೇಕಾಗಿದೆ. ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ. ಸತ್ಯ-ಸತ್ಯವಾದ ಈಶ್ವರೀಯ ಸೇವಾಧಾರಿಗಳಾಗಿ ಸೇವೆ ಮಾಡಬೇಕಾಗಿದೆ.

2. ವಿದ್ಯಾಭ್ಯಾಸದಲ್ಲಿ ಬಹಳ ಉಮ್ಮಂಗವಿರಬೇಕು. ಸಮಯ ಸಿಕ್ಕಿದಾಗಲೆಲ್ಲಾ ಏಕಾಂತದಲ್ಲಿ ಹೋಗಬೇಕು. ಇಂತಹ ಅಭ್ಯಾಸ ಮಾಡಿ- ನಾವು ಜೀವಿಸಿದ್ದಂತೆಯೇ ಈ ಶರೀರದಿಂದ ಸತ್ತು ಹೋಗಿದ್ದೇವೆ. ಈ ಸ್ಥಿತಿಯ ಅನುಭವವಾಗುತ್ತಿರಲಿ, ದೇಹಭಾನವೂ ಮರೆತು ಹೋಗಲಿ.

ವರದಾನ:
ಭಿನ್ನತೆಯನ್ನು ಅಳಿಸಿ ಹಾಕಿ ಏಕತೆಯನ್ನು ತರುವಂತಹ ಸತ್ಯ ಸೇವಾಧಾರಿ ಭವ.

ಬ್ರಾಹ್ಮಣ ಪರಿವಾರದ ವಿಶೇಷತೆಯಾಗಿದೆ ಅನೇಕತೆಯಲ್ಲಿದ್ದರೂ ಒಂದು. ತಮ್ಮ ಏಕತೆಯ ಮೂಲಕವೇ ಇಡೀ ವಿಶ್ವದಲ್ಲಿ ಒಂದೇ ಧರ್ಮ, ಒಂದೇ ರಾಜ್ಯದ ಸ್ಥಾಪನೆಯಾಗುವುದು ಆದ್ದರಿಂದ ವಿಶೇಷ ಗಮನ ಕೊಟ್ಟು ಭಿನ್ನತೆಯನ್ನು ಅಳಿಸಿ ಹಾಕಿ ಮತ್ತು ಏಕತೆಯನ್ನು ತನ್ನಿ ಆಗ ಹೇಳಲಾಗುವುದು ಸತ್ಯ ಸೇವಾಧಾರಿ, ಸ್ವಯಂ ಪ್ರತಿ ಅಲ್ಲ. ಆದರೆ ಸೇವೆಯ ಪ್ರತಿ ಸ್ವಾಹ ಮಾಡುತ್ತಾರೆ, ಹೇಗೆ ಸಾಕಾರ ತಂದೆ ಸೇವೆಯಲ್ಲಿ ಮೂಳೆ ಮೂಳೆ ಸ್ವಾಹ ಮಾಡಿದರು ಹಾಗೆ ತಮ್ಮ ಪ್ರತಿಯೊಂದು ಕರ್ಮೇಂದ್ರಿಯದ ಮೂಲಕ ಸೇವೆಯಾಗುತ್ತಿರುವುದು.

ಸ್ಲೋಗನ್:
ಪರಮಾತ್ಮನ ಪ್ರೀತಿಯಲ್ಲಿ ಮುಳುಗಿ ಹೋಗಿ ಆಗ ದುಃಖಗಳ ಪ್ರಪಂಚ ಮರೆತು ಹೋಗುವುದು.