05.11.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಈ ಕಣ್ಣುಗಳಿಂದ ಏನೆಲ್ಲವೂ ಕಾಣಿಸುವುದೋ ಇದೆಲ್ಲವನ್ನೂ ನೋಡಿಯೂ ನೋಡದಂತಿರಿ, ಇದರಿಂದ ಮಮತ್ವವನ್ನು ತೆಗೆಯಿರಿ, ಏಕೆಂದರೆ ಇದಕ್ಕೆ ಬೆಂಕಿ ಬೀಳಲಿದೆ

ಪ್ರಶ್ನೆ:
ಈಶ್ವರೀಯ ಸರ್ಕಾರದ ಗುಪ್ತ ಕರ್ತವ್ಯ ಯಾವುದಾಗಿದೆ, ಅದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ?

ಉತ್ತರ:
ಈಶ್ವರೀಯ ಸರ್ಕಾರವು ಆತ್ಮಗಳನ್ನು ಪಾವನ ಮಾಡಿ ದೇವತೆಗಳನ್ನಾಗಿ ಮಾಡುತ್ತದೆ - ಇದು ಬಹಳ ಗುಪ್ತ ಕರ್ತವ್ಯವಾಗಿದೆ, ಇದನ್ನು ಮನುಷ್ಯರು ಅರಿತುಕೊಳ್ಳಲು ಸಾಧ್ಯವಿಲ್ಲ, ಯಾವಾಗ ಮನುಷ್ಯರು ದೇವತೆಗಳಾಗುವರೋ ಆಗಲೇ ನರಕವಾಸಿಗಳಿಂದ ಸ್ವರ್ಗವಾಸಿಗಳಾಗಲು ಸಾಧ್ಯ. ಮನುಷ್ಯನ ಎಲ್ಲಾ ಚಾರಿತ್ರ್ಯವನ್ನೇ ವಿಕಾರಗಳು ಕೆಡಿಸಿವೆ. ಈಗ ನೀವು ಎಲ್ಲರನ್ನೂ ಶ್ರೇಷ್ಠ ಚಾರಿತ್ರ್ಯವಂತರನ್ನಾಗಿ ಮಾಡುವ ಸೇವೆ ಮಾಡುತ್ತೀರಿ. ಇದೇ ನಿಮ್ಮ ಮುಖ್ಯ ಕರ್ತವ್ಯವಾಗಿದೆ.

ಓಂ ಶಾಂತಿ.
ಓಂ ಶಾಂತಿ ಎಂದು ಹೇಳಿದಾಗ ತಮ್ಮ ಸ್ವಧರ್ಮ ಮತ್ತು ಮನೆಯ ನೆನಪು ಬರುತ್ತದೆ ಅಂದರೆ ಮನೆಯಲ್ಲಿ ಹೋಗಿ ಕುಳಿತು ಬಿಡುವಂತಿಲ್ಲ, ತಂದೆಗೆ ಮಕ್ಕಳಾಗಿದ್ದೀರೆಂದರೆ ಅವಶ್ಯವಾಗಿ ಸ್ವರ್ಗದ ಆಸ್ತಿಯೂ ನೆನಪಿಗೆ ಬರುತ್ತದೆ. ಓಂ ಶಾಂತಿ ಎಂದು ಹೇಳುವುದರಿಂದಲೂ ಪೂರ್ಣ ಜ್ಞಾನವು ಬುದ್ಧಿಯಲ್ಲಿ ಬಂದು ಬಿಡುತ್ತದೆ. ನಾನಾತ್ಮ ಶಾಂತ ಸ್ವರೂಪನಾಗಿದ್ದೇನೆ, ಶಾಂತಿಯ ಸಾಗರ ತಂದೆಯ ಮಗುವಾಗಿದ್ದೇನೆ. ಯಾವ ತಂದೆಯು ಸ್ವರ್ಗದ ಸ್ಥಾಪನೆಯನ್ನು ಮಾಡುತ್ತಾರೆಯೋ ಆ ತಂದೆಯೇ ನಮ್ಮನ್ನು ಪವಿತ್ರರು, ಶಾಂತ ಸ್ವರೂಪರನ್ನಾಗಿ ಮಾಡುತ್ತಾರೆ. ಮುಖ್ಯ ಮಾತು ಪವಿತ್ರತೆಯದಾಗಿದೆ. ಒಂದು ಪವಿತ್ರ ಪ್ರಪಂಚ, ಇನ್ನೊಂದು ಅಪವಿತ್ರ ಪ್ರಪಂಚವಾಗಿದೆ. ಪವಿತ್ರ ಪ್ರಪಂಚದಲ್ಲಿ ಒಂದೂ ವಿಕಾರವಿರುವುದಿಲ್ಲ, ಅಪವಿತ್ರ ಪ್ರಪಂಚದಲ್ಲಿ ಪಂಚ ವಿಕಾರಗಳಿವೆ, ಆದ್ದರಿಂದ ವಿಕಾರೀ ಪ್ರಪಂಚವೆಂದು ಹೇಳಲಾಗುತ್ತದೆ. ಅದು ನಿರ್ವಿಕಾರಿ ಪ್ರಪಂಚವಾಗಿದೆ, ನಿರ್ವಿಕಾರಿ ಪ್ರಪಂಚದಿಂದ ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ ಮತ್ತೆ ವಿಕಾರೀ ಪ್ರಪಂಚದಲ್ಲಿ ಬರುತ್ತೀರಿ. ಅದು ಪಾವನ ಪ್ರಪಂಚ, ಇದು ಪತಿತ ಪ್ರಪಂಚವಾಗಿದೆ. ರಾಮ ರಾಜ್ಯ ಮತ್ತು ರಾವಣ ರಾಜ್ಯವಿದೆಯಲ್ಲವೆ! ಸಮಯದನುಸಾರ ದಿನ ಮತ್ತು ರಾತ್ರಿ ಎಂದು ಗಾಯನವಿದೆ. ಬ್ರಹ್ಮನ ದಿನ ಮತ್ತು ಬ್ರಹ್ಮನ ರಾತ್ರಿ. ದಿನದಲ್ಲಿ ಸುಖ, ರಾತ್ರಿಯೆಂದರೆ ದುಃಖ. ರಾತ್ರಿಯು ಅಲೆಯುವಂತಹದ್ದಾಗಿರುತ್ತದೆ, ಹಾಗೆ ನೋಡಿದರೆ ರಾತ್ರಿಯಲ್ಲಿ ಯಾರೂ ಅಲೆದಾಡುವುದಿಲ್ಲ ಆದರೆ ಭಕ್ತಿಗೆ ಅಲೆದಾಟವೆಂದು ಹೇಳಲಾಗುತ್ತದೆ. ಸದ್ಗತಿಯನ್ನು ಪಡೆಯಲು ತಾವು ಮಕ್ಕಳು ಇಲ್ಲಿಗೆ ಬಂದಿದ್ದೀರಿ. ನೀವಾತ್ಮಗಳಲ್ಲಿ ಪಂಚ ವಿಕಾರಗಳ ಕಾರಣ ಪಾಪವಿತ್ತು, ಅದರಲ್ಲಿಯೂ ಮುಖ್ಯವಾದುದು ಕಾಮ ವಿಕಾರವಾಗಿದೆ. ಇದರಿಂದಲೇ ಮನುಷ್ಯರು ಪಾಪಾತ್ಮರಾಗುತ್ತಾರೆ. ಇದಂತೂ ಪ್ರತಿಯೊಬ್ಬರೂ ತಿಳಿದುಕೊಂಡಿದ್ದಾರೆ - ನಾವು ಪತಿತರಾಗಿದ್ದೇವೆ, ಭ್ರಷ್ಟಾಚಾರದಿಂದ ಜನ್ಮ ತೆಗೆದುಕೊಂಡಿದ್ದೇವೆ. ಒಂದು ಕಾಮ ವಿಕಾರದ ಕಾರಣವೇ ಎಲ್ಲಾ ವಿದ್ಯಾರ್ಹತೆಯು ಹಾಳಾಗಿ ಬಿಡುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಕಾಮ ವಿಕಾರವನ್ನು ಜಯಿಸಿದ್ದೇ ಆದರೆ ಜಗತ್ಜೀತರು, ಹೊಸ ಪ್ರಪಂಚದ ಮಾಲೀಕರಾಗುವಿರಿ ಅಂದಮೇಲೆ ಆಂತರಿಕವಾಗಿ ಇಷ್ಟೊಂದು ಖುಷಿಯಿರಬೇಕು, ಮನುಷ್ಯರು ಪತಿತರಾಗುವುದರಿಂದ ಏನನ್ನೂ ಅರಿತುಕೊಳ್ಳುವುದಿಲ್ಲ. ಈ ಕಾಮ ವಿಕಾರದಿಂದಲೇ ಎಷ್ಟೊಂದು ಹೊಡೆದಾಟಗಳಾಗುತ್ತವೆ, ಎಷ್ಟೊಂದು ಅಶಾಂತಿ, ಹಾಹಾಕಾರವಾಗಿ ಬಿಡುತ್ತದೆ. ಈ ಸಮಯದಲ್ಲಿ ಪ್ರಪಂಚದಲ್ಲಿ ಹಾಹಾಕಾರವು ಏಕೆ ಇದೆ? ಏಕೆಂದರೆ ಎಲ್ಲರೂ ಪಾಪಾತ್ಮರಾಗಿದ್ದಾರೆ, ವಿಕಾರಗಳ ಕಾರಣವೇ ಅಸುರರೆಂದು ಕರೆಯಲಾಗುತ್ತದೆ. ನಾವು ಸಂಪೂರ್ಣ ಕವಡೆಯ ಸಮಾನ ಬೆಲೆಯಿಲ್ಲದವರಾಗಿದ್ದೆವು ಎಂಬುದನ್ನು ಈಗ ತಂದೆಯ ಮೂಲಕ ಅರಿತುಕೊಂಡಿದ್ದೀರಿ. ಬೆಂಕಿಯಲ್ಲಿ ಸುಡಲು ಇದು ಕೆಲಸಕ್ಕೆ ಬರುವಂತಹ ವಸ್ತುವಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ - ಪ್ರಪಂಚದಲ್ಲಿ ಕೆಲಸಕ್ಕೆ ಬರುವ ವಸ್ತು ಯಾವುದೂ ಇಲ್ಲ. ಎಲ್ಲಾ ಮನುಷ್ಯ ಮಾತ್ರರಿಗೆ ಬೆಂಕಿ ಬೀಳಲಿದೆ, ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಎಲ್ಲದಕ್ಕೂ ಬೆಂಕಿ ಬೀಳಲಿದೆ. ಆತ್ಮಕ್ಕೆ ಬೆಂಕಿ ಬೀಳುವುದಿಲ್ಲ. ಆತ್ಮವಂತೂ ಹೇಗೆ ಇನ್ಶೂರ್ ಆಗಿದೆ. ಆತ್ಮಕ್ಕೆ ಎಂದಾದರೂ ಇನ್ಶೂರ್ (ವಿಮೆ) ಮಾಡಿಸುತ್ತಾರೆಯೇ? ಶರೀರಕ್ಕೆ ವಿಮೆ ಮಾಡಿಸುತ್ತಾರೆ, ಮಕ್ಕಳಿಗೆ ತಿಳಿಸಿದ್ದಾರೆ - ಇದು ಆಟವಾಗಿದೆ, ಆತ್ಮವಂತೂ ಪಂಚ ತತ್ವಗಳಿಗಿಂತಲೂ ಮೇಲೆ ಇರುತ್ತದೆ. ಪಂಚ ತತ್ವಗಳಿಂದಲೇ ಇಡೀ ಪ್ರಪಂಚದ ಸಾಮಗ್ರಿಯಾಗುತ್ತದೆ. ಆತ್ಮವಂತೂ ಈ ಪಂಚ ತತ್ವಗಳಿಂದ ರಚನೆಯಾಗುವುದಿಲ್ಲ. ಆತ್ಮವು ಸದಾ ಇದ್ದೇ ಇರುತ್ತದೆ, ಕೇವಲ ಕರ್ಮಗಳನುಸಾರ ಪುಣ್ಯಾತ್ಮ, ಪಾಪಾತ್ಮನಾಗುತ್ತದೆ. ಆತ್ಮವು ಪಂಚ ವಿಕಾರಗಳಿಂದ ಎಷ್ಟೊಂದು ಕೊಳಕಾಗಿ ಬಿಡುತ್ತದೆ. ಈಗ ತಂದೆಯು ಪಾಪಗಳಿಂದ ಬಿಡಿಸಲು ಬಂದಿದ್ದಾರೆ. ವಿಕಾರಗಳಿಂದಲೇ ಚಾರಿತ್ರ್ಯ (ನಡವಳಿಕೆ) ವು ಹಾಳಾಗುತ್ತದೆ. ಯಾವುದಕ್ಕೆ ಚಾರಿತ್ರ್ಯವೆಂದು ಹೇಳಲಾಗುತ್ತದೆ ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ಪಾಂಡವರ ರಾಜ್ಯ, ಕೌರವರ ರಾಜ್ಯವೆಂದು ಗಾಯನವಿದೆ. ಪಾಂಡವರು ಯಾರೆಂಬುದೂ ಸಹ ಯಾರಿಗೂ ತಿಳಿದಿಲ್ಲ. ಈಗ ನೀವು ತಿಳಿದುಕೊಳ್ಳುತ್ತೀರಿ - ನಾವು ಈಶ್ವರೀಯ ಸರ್ಕಾರದವರಾಗಿದ್ದೇವೆ. ರಾಮ ರಾಜ್ಯವನ್ನು ಸ್ಥಾಪನೆ ಮಾಡಲು ತಂದೆಯು ಬಂದಿದ್ದಾರೆ. ಈ ಸಮಯದಲ್ಲಿ ಈಶ್ವರೀಯ ಸರ್ಕಾರವು ಏನು ಮಾಡುತ್ತದೆ. ಆತ್ಮಗಳನ್ನು ಪಾವನ ಮಾಡಿ ದೇವತೆಗಳನ್ನಾಗಿ ಮಾಡುತ್ತದೆ ಇಲ್ಲದಿದ್ದರೆ ದೇವತೆಗಳು ಎಲ್ಲಿಂದ ಬಂದರು ಎಂಬುದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಆದ್ದರಿಂದ ಇದಕ್ಕೆ ಗುಪ್ತ ಸರ್ಕಾರವೆಂದು ಹೇಳಲಾಗುತ್ತದೆ. ಇಲ್ಲಿರುವುದೂ ಮನುಷ್ಯರೇ ಆದರೆ ಹೇಗೆ ದೇವತೆಗಳಾದರು, ಯಾರು ಮಾಡಿದರು? ದೇವಿ-ದೇವತೆಗಳು ಸ್ವರ್ಗದಲ್ಲಿಯೇ ಇರುತ್ತಾರೆ ಅಂದಮೇಲೆ ಅವರನ್ನು ಸ್ವರ್ಗವಾಸಿಗಳನ್ನಾಗಿ ಯಾರು ಮಾಡಿದರು? ಸ್ವರ್ಗವಾಸಿಗಳಿಂದ ಮತ್ತೆ ನರಕವಾಸಿಗಳಾಗುತ್ತಾರೆ, ನರಕವಾಸಿಗಳಿಂದ ಪುನಃ ಸ್ವರ್ಗವಾಸಿಗಳಾಗುತ್ತಾರೆ. ಇದನ್ನು ನೀವೂ ಸಹ ತಿಳಿದುಕೊಂಡಿರಲಿಲ್ಲ ಅಂದಮೇಲೆ ಅನ್ಯರು ಹೇಗೆ ಅರಿತುಕೊಳ್ಳುತ್ತಾರೆ! ಸತ್ಯಯುಗಕ್ಕೆ ಸ್ವರ್ಗವೆಂದು ಕಲಿಯುಗಕ್ಕೆ ನರಕವೆಂದು ಹೇಳಲಾಗುತ್ತದೆ. ಇದನ್ನೂ ಸಹ ನೀವು ಈಗಲೇ ತಿಳಿದುಕೊಂಡಿದ್ದೀರಿ. ಈ ನಾಟಕವು ಮಾಡಲ್ಪಟ್ಟಿದೆ. ಇದು ಪತಿತರಿಂದ ಪಾವನರಾಗುವ ವಿದ್ಯೆಯಾಗಿದೆ, ಆತ್ಮವೇ ಪತಿತವಾಗುತ್ತದೆ. ಪತಿತರಿಂದ ಪಾವನರನ್ನಾಗಿ ಮಾಡುವ ಕರ್ತವ್ಯವನ್ನು ತಂದೆಯು ನಿಮಗೆ ಕಲಿಸಿದ್ದಾರೆ. ಪಾವನರಾದರೆ ಪಾವನ ಪ್ರಪಂಚಕ್ಕೆ ಹೋಗುವಿರಿ, ಆತ್ಮವೇ ಪಾವನವಾಗಬೇಕು ಆಗಲೇ ಸ್ವರ್ಗಕ್ಕೆ ಯೋಗ್ಯವಾಗುವುದು. ಈ ಜ್ಞಾನವು ನಿಮಗೆ ಈ ಸಂಗಮಯುಗದಲ್ಲಿಯೇ ಸಿಗುತ್ತದೆ, ಪವಿತ್ರರಾಗುವ ಆಯುಧವು ಸಿಗುತ್ತದೆ. ತಂದೆಯೊಬ್ಬರಿಗೇ ಪತಿತ-ಪಾವನನೆಂದು ಕರೆಯಲಾಗುತ್ತದೆ. ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ಈ ಲಕ್ಷ್ಮಿ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದರು ನಂತರ 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿದ್ದಾರೆ. ಇವರಿಗೆ ಶ್ಯಾಮ ಮತ್ತು ಸುಂದರನೆಂದು ಹೆಸರಿಡಲಾಗಿದೆ ಆದರೆ ಮನುಷ್ಯರು ಅರ್ಥವನ್ನು ತಿಳಿದುಕೊಂಡಿದ್ದಾರೆಯೇ! ಈಗ ಕೃಷ್ಣನ ಬಗ್ಗೆ ಸ್ಪಷ್ಟ ಜ್ಞಾನವು ಸಿಗುತ್ತದೆ. ಇದರಲ್ಲಿ ಎರಡು ಪ್ರಪಂಚಗಳನ್ನು ಮಾಡಿ ಬಿಟ್ಟಿದ್ದಾರೆ, ವಾಸ್ತವದಲ್ಲಿ ಒಂದೇ ಪ್ರಪಂಚವಾಗಿದೆ, ಕೇವಲ ಅದು ಹೊಸದು ಮತ್ತು ಹಳೆಯದಾಗುತ್ತದೆ. ಹೇಗೆ ಮೊದಲು ಚಿಕ್ಕ ಮಕ್ಕಳೇ ನಂತರ ದೊಡ್ಡವರಾಗಿ ವೃದ್ಧರಾಗುತ್ತಾರೆ ಹಾಗೆಯೇ ಪ್ರಪಂಚವೂ ಸಹ ಹೊಸದರಿಂದ ಹಳೆಯದಾಗುತ್ತದೆ. ತಿಳಿಸುವುದಕ್ಕಾಗಿ ನೀವು ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿದ್ದೀರಿ, ತಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಲ್ಲವೆ! ಇವರೂ ಸಹ ಅರಿತುಕೊಂಡಿದ್ದಾರಲ್ಲವೆ. ಅರಿತಿರುವುದರಿಂದಲೇ ಎಷ್ಟೊಂದು ಮಧುರರಾಗಿದ್ದಾರೆ. ಇವರಿಗೆ ಯಾರು ತಿಳಿಸಿದರು? ಭಗವಂತ. ಇಲ್ಲಿ ಯುದ್ಧದ ಮಾತಿಲ್ಲ. ಭಗವಂತನು ಎಷ್ಟು ಬುದ್ಧಿವಂತ ಮತ್ತು ಜ್ಞಾನಪೂರ್ಣರನ್ನಾಗಿ ಮಾಡುತ್ತಾರೆ. ಶಿವನ ಮಂದಿರದಲ್ಲಿ ಹೋಗಿ ನಮಸ್ಕಾರ ಮಾಡುತ್ತಾರೆ. ಆದರೆ ಅವರು ಯಾರು, ಏನು, ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಶಿವ ಕಾಶಿ, ವಿಶ್ವನಾಥ ಗಂಗಾ..... ಎಂದು ಹೇಳುತ್ತಲೇ ಇರುತ್ತಾರೆ. ಅರ್ಥವನ್ನೇ ತಿಳಿದುಕೊಂಡಿಲ್ಲ, ನೀವು ತಿಳಿಸಿದರೂ ಸಹ ನೀವು ನಮಗೇನು ತಿಳಿಸುತ್ತೀರಿ, ನಾವಂತೂ ಎಲ್ಲಾ ವೇದಶಾಸ್ತ್ರಗಳನ್ನು ಓದಿದ್ದೇವೆ ಎಂದು ಹೇಳುತ್ತಾರೆ. ನೀವು ಮಕ್ಕಳಲ್ಲಿಯೂ ಧಾರಣೆ ಮಾಡುವವರಲ್ಲಿ ನಂಬರ್ವಾರ್ ಇದ್ದಾರೆ. ಕೆಲವರಂತೂ ಮರೆತು ಹೋಗುತ್ತಾರೆ. ಏಕೆಂದರೆ ಸಂಪೂರ್ಣ ಕಲ್ಲು ಬುದ್ಧಿಯವರಾಗಿದ್ದಾರೆ, ಅಂದಮೇಲೆ ಈಗ ಪಾರಸಬುದ್ಧಿಯವರ ಕೆಲಸವೇನೆಂದರೆ ಅನ್ಯರನ್ನೂ ಪಾರಸಬುದ್ಧಿಯವರನ್ನಾಗಿ ಮಾಡಬೇಕಾಗಿದೆ. ಕಲ್ಲು ಬುದ್ಧಿಯವರ ಚಲನವಲನೆಯೇ ಈ ರೀತಿಯಿರುತ್ತದೆ. ಏಕೆಂದರೆ ಹಂಸ-ಕೊಕ್ಕರೆಗಳಾದರಲ್ಲವೆ! ಹಂಸಗಳು ಯಾರಿಗೂ ದುಃಖವನ್ನು ಕೊಡುವುದಿಲ್ಲ, ಕೊಕ್ಕರೆಗಳು ದುಃಖವನ್ನು ಕೊಡುತ್ತಾರೆ, ಅವರಿಗೆ ಅಸುರರೆಂದು ಹೇಳಲಾಗುತ್ತದೆ, ಸ್ವಲ್ಪವೂ ತಿಳುವಳಿಕೆಯಿರುವುದಿಲ್ಲ. ಬಹಳ ಸೇವಾಕೇಂದ್ರಗಳಲ್ಲಿಯೂ ಸಹ ಇಂತಹವರು ಬಂದು ಬಿಡುತ್ತಾರೆ. ನಾವು ಪವಿತ್ರರಾಗಿರುತ್ತೇವೆಂದು ಒಪ್ಪುವಂತೆ ಹೇಳುತ್ತಾರೆ ಆದರೆ ಎಲ್ಲವೂ ಸುಳ್ಳು. ಸುಳ್ಳು ಮಾಯೆ, ಸುಳ್ಳು ಕಾಯವೆಂದು ಹೇಳಲಾಗುತ್ತದೆ. ಈಗ ಸಂಗಮಯುಗವಾಗಿದೆ, ಎಷ್ಟೊಂದು ಅಂತರವಿರುತ್ತದೆ! ಯಾರು ಸುಳ್ಳು ಹೇಳುತ್ತಾರೆ, ಸುಳ್ಳು ಕೆಲಸಗಳನ್ನು ಮಾಡುತ್ತಾರೆಯೋ ಅವರೇ ಕೆಳದರ್ಜೆಯವರಾಗುತ್ತಾರೆ. ಪ್ರಥಮ, ಮಧ್ಯಮ, ಕನಿಷ್ಠ ದರ್ಜೆಗಳಿರುತ್ತದೆಯಲ್ಲವೆ. ಇವರು ಕನಿಷ್ಠ ದರ್ಜೆಯವರೆಂಬುದನ್ನು ತಂದೆಯೂ ತಿಳಿಸಬಲ್ಲರು.

ತಂದೆಯು ತಿಳಿಸುತ್ತಾರೆ - ಪವಿತ್ರತೆಯ ಪ್ರತ್ಯಕ್ಷ ಪ್ರಮಾಣವನ್ನು ತೋರಿಸಬೇಕು. ಇಬ್ಬರೂ ಒಟ್ಟಿಗೆ ಇರುತ್ತಾ ಪವಿತ್ರರಾಗಿರುತ್ತೀರಿ ಎಂಬುದು ಅಸಂಭವ ಎಂದು ಕೆಲವರು ಹೇಳುತ್ತಾರೆ. ಆದರೆ ಮಕ್ಕಳಲ್ಲಿ ಯೋಗಬಲವಿರದ ಕಾರಣ ಇಷ್ಟು ಸಹಜವಾದ ಮಾತನ್ನೂ ಸಹ ಪೂರ್ಣ ರೀತಿಯಿಂದ ತಿಳಿಸಿಕೊಡಲು ಆಗುವುದಿಲ್ಲ. ಇಲ್ಲಿ ನಮಗೆ ಭಗವಂತನೇ ಓದಿಸುತ್ತಾರೆ ಮತ್ತು ಪವಿತ್ರರಾಗುವುದರಿಂದ ನೀವು 21 ಜನ್ಮಗಳ ಸ್ವರ್ಗದ ಮಾಲೀಕರಾಗುತ್ತೀರಿ, ಇದು ಜರ್ಬದಸ್ತ್ ಲಾಟರಿಯಾಗಿದೆ ಎಂಬ ಮಾತನ್ನು ಯಾರೂ ಅವರಿಗೆ ತಿಳಿಸುವುದೇ ಇಲ್ಲ. ನಮಗಂತೂ ಇನ್ನೂ ಖುಷಿಯಾಗುತ್ತದೆ. ಕೆಲವು ಮಕ್ಕಳು ಗಂಧರ್ವ ವಿವಾಹವನ್ನು ಮಾಡಿಕೊಂಡು ಪವಿತ್ರರಾಗಿದ್ದು ತೋರಿಸುತ್ತಾರೆ. ದೇವಿ-ದೇವತೆಗಳು ಪವಿತ್ರರಾಗಿದ್ದರಲ್ಲವೆ! ಒಬ್ಬ ತಂದೆಯೇ ಅಪವಿತ್ರರಿಂದ ಪವಿತ್ರರನ್ನಾಗಿ ಮಾಡುತ್ತಾರೆ. ಇದನ್ನೂ ತಿಳಿಸಿದ್ದಾರೆ - ಜ್ಞಾನ, ಭಕ್ತಿ, ವೈರಾಗ್ಯ. ಜ್ಞಾನ ಮತ್ತು ಭಕ್ತಿ ಅರ್ಧ-ಅರ್ಧವಾಗಿದೆ. ಮತ್ತೆ ಭಕ್ತಿಯ ನಂತರ ವೈರಾಗ್ಯವು ಬರುತ್ತದೆ. ಈಗ ಈ ಪತಿತ ಪ್ರಪಂಚದಲ್ಲಿ ಇರುವಂತಿಲ್ಲ. ಈ ಶರೀರವೆಂಬ ವಸ್ತ್ರಗಳನ್ನು ಕಳಚಿ ಈಗ ಮನೆಗೆ ಹೋಗಬೇಕಾಗಿದೆ. 84 ಜನ್ಮಗಳ ಚಕ್ರವು ಈಗ ಪೂರ್ಣವಾಯಿತು. ಈಗ ನಾವು ಶಾಂತಿಧಾಮಕ್ಕೆ ಹೋಗುತ್ತೇವೆ. ಮೊಟ್ಟ ಮೊದಲಿಗೆ ತಂದೆಯ ಪರಿಚಯ ಕೊಡುವುದನ್ನು ಮರೆಯಬಾರದು. ಇದನ್ನೂ ಸಹ ಮಕ್ಕಳು ತಿಳಿದುಕೊಳ್ಳುತ್ತೀರಿ - ಈ ಹಳೆಯ ಪ್ರಪಂಚವು ಈಗ ಖಂಡಿತ ಸಮಾಪ್ತಿಯಾಗಲಿದೆ. ತಂದೆಯು ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಾರೆ. ತಂದೆಯು ಅನೇಕ ಬಾರಿ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಲು ಬಂದಿದ್ದಾರೆ ಮತ್ತು ನರಕದ ವಿನಾಶವಾಗಿ ಬಿಡುತ್ತದೆ. ನರಕವು ಎಷ್ಟು ದೊಡ್ಡದಾಗಿದೆ ಮತ್ತು ಸ್ವರ್ಗವು ಎಷ್ಟೊಂದು ಚಿಕ್ಕದಾಗಿದೆ. ಹೊಸ ಪ್ರಪಂಚದಲ್ಲಿ ಒಂದು ಧರ್ಮವಿರುತ್ತದೆ, ಇಲ್ಲಿ ಅನೇಕ ಧರ್ಮಗಳಿವೆ. ಶಂಕರನ ಮೂಲಕ ವಿನಾಶ ಎಂಬುದನ್ನು ಬರೆಯಲಾಗಿದೆ. ಅನೇಕ ಧರ್ಮಗಳ ವಿನಾಶವಾಗುತ್ತದೆ ಮತ್ತೆ ಬ್ರಹ್ಮಾರವರ ಮೂಲಕ ಒಂದು ಧರ್ಮದ ಸ್ಥಾಪನೆಯಾಗುತ್ತದೆ. ಈ ಧರ್ಮವನ್ನು ಯಾರು ಸ್ಥಾಪನೆ ಮಾಡಿದರು? ಬ್ರಹ್ಮಾರವರಂತೂ ಮಾಡಲಿಲ್ಲ! ಬ್ರಹ್ಮಾರವರೇ ಪತಿತರಿಂದ ಮತ್ತೆ ಪಾವನನಾಗುತ್ತಾರೆ. ಪತಿತರಿಂದ ಪಾವನರು ಎಂದು ನನಗಾಗಿ ಹೇಳುವುದಿಲ್ಲ. ಪಾವನರಾಗಿದ್ದಾಗ ಲಕ್ಷ್ಮಿ-ನಾರಾಯಣರ ಹೆಸರಿದೆ, ಪತಿತರಾದಾಗ ಬ್ರಹ್ಮನೆಂದು ಹೆಸರಿರುತ್ತದೆ. ಬ್ರಹ್ಮನ ಹಗಲು ಮತ್ತು ಬ್ರಹ್ಮನ ರಾತ್ರಿಯೆಂದು ಹೇಳಲಾಗುತ್ತದೆ. ಶಿವ ತಂದೆಗೆ ಅನಾದಿ ರಚಯಿತನೆಂದು ಹೇಳಲಾಗುತ್ತದೆ. ಆತ್ಮಗಳಂತೂ ಇದ್ದೇ ಇರುತ್ತಾರೆ ಅಂದಾಗ ತಂದೆಗೆ ಆತ್ಮಗಳ ರಚಯಿತನೆಂದು ಹೇಳುವುದಿಲ್ಲ, ಆದ್ದರಿಂದ ಅನಾದಿಯೆಂದು ಹೇಳಲಾಗುತ್ತದೆ. ತಂದೆಯು ಅನಾದಿಯಾಗಿದ್ದಾರೆ ಅಂದಮೇಲೆ ಆತ್ಮಗಳು ಅನಾದಿಯಾಗಿದ್ದೀರಿ, ಆಟವೂ ಅನಾದಿಯಾಗಿದೆ. ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಸ್ವ ಆತ್ಮನಿಗೆ ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಕಾಲಾವಧಿಯ ಜ್ಞಾನವು ಸಿಗುತ್ತದೆ. ಇದನ್ನು ಯಾರು ಕೊಟ್ಟರು? ತಂದೆ. ನೀವು 21 ಜನ್ಮಗಳಿಗಾಗಿ ಧನಿಕರಾಗಿ ಬಿಡುತ್ತೀರಿ ನಂತರ ರಾವಣ ರಾಜ್ಯದಲ್ಲಿ ಅನಾಥರಾಗಿ ಬಿಡುತ್ತೀರಿ. ಆಗ ಚಾರಿತ್ರ್ಯವು ಹಾಳಾಗತೊಡಗುತ್ತದೆ. ವಿಕಾರಗಳಿದೆಯಲ್ಲವೆ! ನರಕ-ಸ್ವರ್ಗ ಎರಡೂ ಒಟ್ಟಿಗೆ ನಡೆಯುತ್ತದೆಯೆಂದು ಮನುಷ್ಯರು ತಿಳಿಯುತ್ತಾರೆ. ಈಗ ನೀವು ಮಕ್ಕಳಿಗೆ ಎಷ್ಟು ಸ್ಪಷ್ಟವಾಗಿ ತಿಳಿಸಲಾಗುತ್ತದೆ. ಈಗ ನೀವು ಗುಪ್ತವಾಗಿದ್ದೀರಿ. ಶಾಸ್ತ್ರಗಳಲ್ಲಿ ಏನೇನನ್ನೋ ಬರೆದು ಬಿಟ್ಟಿದ್ದಾರೆ. ಇಡೀ ಸೂತ್ರವೇ ಗಂಟುಬಿದ್ದಿದೆ. ನಾವೇನೂ ಪ್ರಯೋಜನಕ್ಕಿಲ್ಲ, ಬಂದು ನಮ್ಮನ್ನು ಪಾವನರನ್ನಾಗಿ ಮಾಡಿ. ಬಂದು ನಮ್ಮ ಚಲನೆಯನ್ನು ಸುಧಾರಣೆ ಮಾಡಿ ಎಂದು ತಂದೆಯನ್ನು ಕರೆಯುತ್ತಾರೆ. ನಿಮ್ಮ ಚಾರಿತ್ರ್ಯವು ಸುಧಾರಣೆಯಾಗುತ್ತದೆ. ಕೆಲವರಂತೂ ಸುಧಾರಣೆಯಾಗುವ ಬದಲು ಇನ್ನೂ ಹಾಳಾಗುತ್ತಾರೆ. ಚಲನೆಯಿಂದಲೇ ಎಲ್ಲವೂ ತಿಳಿಯುತ್ತದೆ. ಇಂದು ಹಂಸಗಳೆಂದು ಕರೆಸಿಕೊಳ್ಳುತ್ತಾರೆ ಅವರೇ ನಾಳೆ ಕೊಕ್ಕರೆಗಳಾಗಿ ಬಿಡುತ್ತಾರೆ. ತಡವಾಗುವುದೇ ಇಲ್ಲ. ಮಾಯೆಯೂ ಸಹ ಬಹಳ ಗುಪ್ತವಾಗಿದೆ. ಇಲ್ಲಿ ಏನೂ ಕಂಡು ಬರುವುದಿಲ್ಲ ಆದರೆ ಹೊರಗೆ ಹೋದಾಗ ಚಾರಿತ್ರ್ಯದ ಬಗ್ಗೆ ಕಂಡು ಬರುತ್ತದೆ ಮತ್ತೆ ಆಶ್ಚರ್ಯವಾಗಿ ಕೇಳಿ ಅದರಂತೆ ನಡೆಯುತ್ತಿದ್ದವರು ಓಡಿ ಹೋಗುತ್ತಾರೆ. ಇಷ್ಟು ಜೋರಾಗಿ ಬೀಳುತ್ತಾರೆ, ಮೂಳೆಗಳೇ ಪುಡಿ-ಪುಡಿಯಾಗಿ ಬಿಡುತ್ತವೆ. ಇದು ಇಂದ್ರಪ್ರಸ್ಥದ ಮಾತಾಗಿದೆ. ಕೊನೆಗೆ ಎಲ್ಲವೂ ತಿಳಿಯುತ್ತದೆ, ಅಂತಹವರು ಮತ್ತೆ ಸಭೆಯಲ್ಲಿ ಬರಬಾರದು. ಅಲ್ಪ ಸ್ವಲ್ಪ ಜ್ಞಾನ ಕೇಳಿದರೂ ಸಹ ಸ್ವರ್ಗದಲ್ಲಿ ಬಂದೇ ಬರುತ್ತಾರೆ, ಜ್ಞಾನದ ವಿನಾಶವಾಗುವುದಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಿರಿ. ಒಂದುವೇಳೆ ವಿಕಾರದಲ್ಲಿ ಬಿದ್ದರೆ ಪದವಿ ಭ್ರಷ್ಟವಾಗಿ ಬಿಡುತ್ತದೆ. ಈ ಚಕ್ರವು ಹೇಗೆ ತಿರುಗುತ್ತದೆ ಎಂಬುದನ್ನು ಈಗ ನೀವು ತಿಳಿದುಕೊಂಡಿದ್ದೀರಿ.

ಈಗ ನೀವು ಮಕ್ಕಳ ಬುದ್ಧಿಯು ಎಷ್ಟೊಂದು ಪರಿವರ್ತನೆಯಾಗುತ್ತದೆ. ಆದಮೇಲೂ ಸಹ ಮಾಯೆಯು ಮೋಸಗೊಳಿಸುತ್ತದೆ. ಇಚ್ಛಾ ಮಾತ್ರಂ ಅವಿದ್ಯಾ, ಯಾವುದೇ ಇಚ್ಛೆಯನ್ನಿಟ್ಟುಕೊಂಡರೆ ಅವರು ಹೋದರೆಂದರ್ಥ, ಸ್ವಲ್ಪವೂ ಇಲ್ಲದಂತಾಗಿ ಬಿಡುತ್ತಾರೆ. ಒಳ್ಳೊಳ್ಳೆಯ ಮಕ್ಕಳನ್ನೂ ಸಹ ಮಾಯೆಯು ಯಾವುದಾದರೊಂದು ಪ್ರಕಾರದಿಂದ ಮೋಸ ಮಾಡಿ ಬಿಡುತ್ತದೆ ಮತ್ತೆ ಅಂತಹವರು ತಂದೆಯ ಹೃದಯವನ್ನೇರಲು ಸಾಧ್ಯವಿಲ್ಲ. ಕೆಲವು ಮಕ್ಕಳು ತಂದೆಯನ್ನು ಮುಗಿಸುವುದರಲ್ಲಿಯೂ ತಡ ಮಾಡುವುದಿಲ್ಲ, ಪರಿವಾರವನ್ನು ಸಮಾಪ್ತಿ ಮಾಡಿ ಬಿಡುತ್ತಾರೆ, ಇಂತಹ ಮಕ್ಕಳೂ ಇರುತ್ತಾರೆ. ಮಹಾನ್ ಪಾಪಾತ್ಮರಾಗಿದ್ದಾರೆ, ರಾವಣನು ಏನೇನನ್ನು ಮಾಡಿಸಿ ಬಿಡುತ್ತಾನೆ, ಇದರಲ್ಲಿ ಎಷ್ಟೊಂದು ತಿರಸ್ಕಾರವು ಬರುತ್ತದೆ ಇದು ಎಷ್ಟೊಂದು ಕೊಳಕು ಪ್ರಪಂಚವಾಗಿದೆ. ಇದರೊಂದಿಗೆ ಎಂದೂ ಮನಸ್ಸನ್ನಿಡಬಾರದು. ಪವಿತ್ರರಾಗಲು ಬಹಳ ಸಾಹಸವಿಡಬೇಕು. ವಿಶ್ವದ ರಾಜ್ಯಭಾಗ್ಯದ ಬಹುಮಾನವನ್ನು ತೆಗೆದುಕೊಳ್ಳಲು ಮುಖ್ಯವಾದುದು ಪವಿತ್ರತೆಯಾಗಿದೆ. ಪವಿತ್ರತೆಗಾಗಿ ಎಷ್ಟೊಂದು ಹೊಡೆದಾಟಗಳು ನಡೆಯುತ್ತವೆ. ಹೇ ಪತಿತ-ಪಾವನ ಬನ್ನಿ ಎಂದು ಗಾಂಧೀಜಿಯು ಹೇಳುತ್ತಿದ್ದರು, ಈಗ ತಂದೆಯು ಹೇಳುತ್ತಾರೆ - ವಿಶ್ವದ ಚರಿತ್ರೆ-ಭೂಗೋಳವು ಪುನಃ ಪುನರಾವರ್ತನೆಯಾಗುತ್ತದೆ. ಎಲ್ಲರೂ ಹಿಂತಿರುಗಿ ಬರಲೇಬೇಕಾಗಿದೆ ಆಗಲೇ ಒಟ್ಟಿಗೆ ಹೋಗುತ್ತೇವೆ. ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರಲ್ಲವೆ. ತಂದೆಯು ಬರದ ವಿನಃ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಮಾಯೆಯ ಮೋಸದಿಂದ ಪಾರಾಗಲು ಒಂದೇ ಪ್ರಕಾರದ ಇಚ್ಛೆಯನ್ನಿಟ್ಟುಕೊಳ್ಳಬಾರದು. ಇಚ್ಛಾ ಮಾತ್ರಂ ಅವಿದ್ಯಾ ಆಗಬೇಕಾಗಿದೆ.

2. ವಿಶ್ವದ ರಾಜ್ಯಭಾಗ್ಯದ ಬಹುಮಾನವನ್ನು ಪಡೆಯಲು ಮುಖ್ಯವಾದುದು ಪವಿತ್ರತೆಯಾಗಿದೆ. ಆದ್ದರಿಂದ ಪವಿತ್ರರಾಗುವ ಸಾಹಸವನ್ನಿಡಬೇಕಾಗಿದೆ. ತಮ್ಮ ನಡುವಳಿಕೆ (ಚಾರಿತ್ರ್ಯ) ಯನ್ನು ಸುಧಾರಣೆ ಮಾಡಿಕೊಳ್ಳಬೇಕಾಗಿದೆ.

ವರದಾನ:
ದಯಾ ಭಾವನೆಯ ಮೂಲಕ ನಿಮಿತ್ತ ಭಾವದಿಂದ ಸೇವೆ ಮಾಡುವಂತಹ ಎಲ್ಲಾ ಸೆಳೆತಗಳಿಂದ ಮುಕ್ತ ಭವ.

ವರ್ತಮಾನ ಸಮಯ ಎಲ್ಲಾ ಅತ್ಮಗಳು ಸುಸ್ತಾಗಿ ನಿರಾಶೆಯಿಂದ ದಯೆಯನ್ನು ಕೋರುತ್ತಾರೆ. ಆಗ ನೀವು ದಾತಾನ ಮಕ್ಕಳು ತಮ್ಮ ಸಹೋದರ ಸಹೋದರಿಯರ ಮೇಲೆ ದಯಾಹೃದಯಿಗಳಾಗಿ. ಯಾರು ಎಷ್ಟೇ ಕೆಟ್ಟವರಾಗಿರಲಿ, ಅವರ ಪ್ರತಿಯೂ ಸಹ ದಯೆಯ ಭಾವನೆ ಇದ್ದಾಗ ಎಂದೂ ತಿರಸ್ಕಾರ ಈಷ್ರ್ಯೆ ಅಥವಾ ಕ್ರೋಧದ ಭಾವನೆ ಬರುವುದಿಲ್ಲ. ದಯಾ ಭಾವನೆ ಸಹಜವಾಗಿ ನಿಮಿತ್ತ ಭಾವ ಇಮರ್ಜ್ ಮಾಡುವುದು, ಸೆಳೆತದಿಂದ ದಯೆ ಅಲ್ಲ ಆದರೆ ಸತ್ಯ ದಯೆ ಸೆಳೆತದಿಂದ ಮುಕ್ತ ಮಾಡಿ ಬಿಡುವುದು, ಏಕೆಂದರೆ ಅದರಲ್ಲಿ ದೇಹಭಾನ ಇರುವುದಿಲ್ಲ.

ಸ್ಲೋಗನ್:
ಬೇರೆಯವರಿಗೆ ಸಹಯೋಗ ಕೊಡುವುದೇ ಸ್ವಯಂನ ಖಾತೆಯನ್ನು ಜಮಾ ಮಾಡುವುದಾಗಿದೆ.