05.11.23    Avyakt Bapdada     Kannada Murli    10.03.96     Om Shanti     Madhuban


“ಕರನ್ ಹಾರ್ (ಕರ್ತಾ) ಹಾಗೂ ಕರಾವನ್ ಹಾರ (ಕರ್ತವ್ಯ ಮಾಡಿಸುವವರ) ಸ್ಮೃತಿಯಿಂದ ಕರ್ಮಾತೀತ ಸ್ಥಿತಿ”


ಇಂದು ಕಲ್ಯಾಣಕಾರೀ, ತಂದೆಯು ನನ್ನ ಸಾಥಿಯಾಗಿರುವ ಕಲ್ಯಾಣಕಾರೀ, ಮಕ್ಕಳನ್ನು ನೋಡುತ್ತಾ ಇದ್ದಾರೆ, ಎಲ್ಲಾ ಮಕ್ಕಳೂ ತುಂಬಾ ಅಕ್ಕರೆಯಿಂದ, ಪ್ರೀತಿಯಿಂದ ವಿಶ್ವ ಕಲ್ಯಾಣದ ಕಾರ್ಯ ಮಾಡುವುದರಲ್ಲಿ ತತ್ಪರರಾಗಿದ್ದಾರೆ. ಇಂತಹ ಸಾಥಿಗಳನ್ನು ನೋಡಿ ಬಾಪ್ದಾದಾರವರು ಭೇಷ ಸಾಥೀ ಮಕ್ಕಳೇ, ಭೇಷ ಎನ್ನುವ ಗೀತೆಯನ್ನು ಹಾಡುತ್ತಾ ಇರುತ್ತಾರೆ. ನೀವೆಲ್ಲರೂ ಸಹ ವಾಹ್-ವಾಹ್ನ ಗೀತೆಯನ್ನು ಹಾಡುತ್ತೀರಲ್ಲವೇ? ಈ ಬಾಪ್ದಾದಾರವರು ನಾಲ್ಕೂ ಕಡೆಯ ಗತಿಯನ್ನು (ವೇಗವನ್ನು) ನೋಡಿದರು. ಜೊತೆಯಲ್ಲಿ ಸ್ವಪುರುಷಾರ್ಥದ ಗತಿಯನ್ನೂ ನೋಡಿದರು. ಹೀಗೆ ಸೇವೆ ಹಾಗೂ ಸ್ವಪುರುಷಾರ್ಥದ ಗತಿ ಇವೆರಡರಲ್ಲಿ ಏನು ನೋಡಿರಬಹುದು? ನೀವು ತಿಳಿದುಕೊಂಡಿದ್ದೀರಾ? ಸೇವೆಯ ಗತಿಯು ತೀವ್ರವಾಗಿದೆಯೋ ಅಥವಾ ಸ್ವಪುರುಷಾರ್ಥದ ಗತಿಯು ತೀವ್ರವಾಗಿದೆಯೋ? ಏನು ಪರಿಸ್ಥಿತಿಯಿದೆ? ಎರಡರ ಸಮತೋಲನವಿದೆಯೇ? ಇಲ್ಲವೇ? ಹಾಗಾದರೆ ವಿಶ್ವಪರಿವರ್ತನೆ ಮಾಡುವ ಆತ್ಮರಿಗೆ ಅಥವಾ ಪ್ರಕೃತಿಗೆ ಆಶೀರ್ವಾದವು ಯಾವಾಗ ದೊರೆಯುವುದು? ಏಕೆಂದರೆ, ಬ್ಯಾಲೆನ್ಸ್ (ಸಮತೋಲನ)ನಿಂದ ನಿಮಗೆ ಏನು ಆಶೀರ್ವಾದವು. ದೊರೆತಿದೆಯೋ ಅದು ಅನ್ಯರಿಗೆ ದೊರೆಯುವುದು. ಆದರೆ, ಸ್ವಪುರುಷಾರ್ಥ ಹಾಗೂ ಸೇವೆಯ ಗತಿಯಲ್ಲಿ ಅಂತರವು ಏಕೆ ಇದೆ? ನೀವು ಏನಾಗಿದ್ದೀರೆಂದು ಹೇಳಿಕೊಳ್ಳುತ್ತೀರಿ? ಕರ್ಮಯೋಗಿಯೆಂದೋ ಅಥವಾ ಕೇವಲ ಯೋಗಿಯೆಂದೋ? ಏನಾಗಿದ್ದೀರಿ? ಕರ್ಮಯೋಗಿಯಾಗಿದ್ದೀರಲ್ಲವೇ. ಪಕ್ಕಾ ಆಗಿದ್ದೀರಲ್ಲವೇ? ಹಾಗಾದರೆ ಸೇವೆಯೂ ಸಹ ಏನಾಗಿದೆ? ಕರ್ಮವಾಗಿದೆಯಲ್ಲವೇ. ಕರ್ಮದಲ್ಲಿ ಬರುತ್ತೀರಿ. ಮಾತನಾಡುತ್ತೀರಿ ಅಥವಾ ದೃಷ್ಟಿಯನ್ನು ಕೊಡುತ್ತೀರಿ, ಕೋರ್ಸ್ ಮಾಡಿಸುತ್ತೀರಿ, ಮ್ಯೂಜಿಯಂನಲ್ಲಿ ತಿಳಿವಳಿಕೆ ನೀಡುತ್ತೀರಿ ಏನಾಗಿದೆ? ಶ್ರೇಷ್ಠ ಕರ್ಮ ಅರ್ಥಾತ್ ಸೇವೆ ಹೀಗೆ ಕರ್ಮಯೋಗಿ ಅರ್ಥಾತ್ ಇದೆಲ್ಲವೂ ಕರ್ಮದ ಸಮಯದಲ್ಲಿಯೂ ಯೋಗದ ಸಮತೋಲನವಿರುವುದು, ಆದರೆ ಬ್ಯಾಲೆನ್ಸ್ ಕಡಿಮೆಯಾಗಿ ಬಿಡುತ್ತದೆಯೆಂದು ಸ್ವಯಂ ನೀವೇ ಹೇಳುತ್ತೀರಿ. ಇದರ ಕಾರಣವು ಏನಾಗಿದೆ? ಇದೇನೂ ಹೊಸ ಸಂಗತಿಯಲ್ಲ. ಚಿನ್ನಾಗಿ ತಿಳಿದುಕೊಂಡಿದ್ದೀರಿ. ತುಂಬಾ ಹಳೆಯ ಸಂಗತಿಯಾಗಿದೆ. ಬಾಪ್ದಾದರವರು ಏನು ನೋಡಿದರೆಂದರೆ ಸೇವೆ ಅಥವಾ ಕರ್ಮ ಹಾಗೂ ಸ್ವಪುರುಷಾರ್ಥ ಅರ್ಥಾತ್ ಯೋಗ ಇವೆರಡರ ಬ್ಯಾಲೆನ್ಸ್ ಇಟ್ಟುಕೊಳ್ಳುವ ವಿಶೇಷವಾಗಿ ಒಂದೇ ಶಬ್ದವನ್ನು ನೆನಪಿಟ್ಟುಕೊಳ್ಳಿರಿ. ಯಾವುದಾಗಿದೆ? ತಂದೆಯು ಕರಾವನ್ಹಾರ್ (ಕರ್ತವ್ಯ ಮಾಡಿಸುವವರು) ಆಗಿದ್ದಾರೆ. ಹಾಗೂ ನಾನು ಆತ್ಮನು (ಇಂತಹವನಲ್ಲ) ಕರನ್ಹಾರ್ (ಕರ್ಮಚಾರಿ) ಆಗಿದ್ದೇನೆ. ಹೀಗೆ ಕರನ್ ಕರಾವನ್ ಹಾರ್ ಎನ್ನುವ ಒಂದು ಶಬ್ದವು ನಿಮ್ಮ ಬ್ಯಾಲೆನ್ಸನ್ನು ತುಂಬಾ ಸಹಜವಾಗಿ ಸರಿ ಮಾಡಿಬಿಡುವುದು. ಸ್ವಪುರುಷಾರ್ಥದ ವೇಗ ಅಥವಾ ಗತಿಯು ಯಾವಾಗಲಾದರೂ ಕಡಿಮೆಯಾದರೆ ಅದರ ಕಾರಣವು ಏನಾಗಿದೆ? ಕರನ್ಹಾರ್ (ಕರ್ಮಚಾರಿ)ಗೆ ಬದಲಾಗಿ ನಾನೇ ಮಾಡುವವನಾ(ಳಾ)ಗಿದ್ದೇನೆ ಎಂದು ತಿಳಿದುಕೊಳ್ಳುತ್ತೀರಿ. ಕರ್ಮಚಾರಿಗೆ ಬದಲಾಗಿ ನಿಮ್ಮನ್ನು ಕರಾವನ್ ಹಾರ್ (ಕಮೆರ್ಂದ್ರಿಯಗಳಿಂದ ಕರ್ಮ ಮಾಡಿಸುವ ಮಾಲಿಕ ಆತ್ಮ) ಆಗಿದ್ದೇನೆ ಎಂದು ತಿಳಿದುಕೊಳ್ಳಬೇಕು. ಏನೇನು ಯಾವ ಯಾವ ಪ್ರಕಾರದ ಮಾಯೆಯು ಬರುತ್ತದೆಯೋ ಅದು ಪ್ರದೇಶ ಮಾಡುವ ಗೇಟ್ (ಹೆಬ್ಬಾಗಿಲು) ಯಾವುದಾಗಿದೆ? ಮಾಯೆಯು ಬರುವ ಎಲ್ಲಕ್ಕಿಂತಲೂ ಸಹಜವಾದ ಗೇಟ್ ಯಾವುದೆಂದು ತಿಳಿದುಕೊಂಡೇ ಇದ್ದೀರಿ, ಅದು “ನಾನು” ಎನ್ನುವುದೇ ಆಗಿದೆಯಲ್ಲದೇ, ನೀವು ಆ ಗೇಟನ್ನು ಇನ್ನೂ ಪೂರ್ತಿ ಮುಚ್ಚಿಬಿಟ್ಟಿಲ್ಲ. ನೀವು ಹೇಗೆ ಮುಚ್ಚುತ್ತೀರೆಂದರೆ ಮಾಯೆಯು ಸಹಜವಾಗಿಯೇ ತೆರೆದುಕೊಂಡು ಒಳಗೆ ಬಂದು ಬಿಡುತ್ತದೆ. ಒಂದುವೇಳೆ ಕರನ್ಹಾರ್ (ಕರ್ಮಚಾರಿ) ಆಗಿದ್ದರೆ ಕರಾವನ್ಹಾರ್ (ಕಾರ್ಯವನ್ನು ಮಾಡಿಸುವವರಾದ) ತಂದೆಯು ಅವಶ್ಯವಾಗಿ ನೆನಪಿಗೆ ಬರುವರು. ಮಾಡುತ್ತಾ ಇದ್ದೇನೆ. ಆದರೆ ಮಾಡಿಸುವವರು ತಂದೆಯಾಗಿದ್ದಾರೆ. ಕರಾವನ್ಹಾರ್ (ಕಾರ್ಯ ಮಾಡಿಸುವ) ತಂದೆಯು ಜೊತೆಯಲ್ಲಿ ಇಲ್ಲದಿದ್ದರೆ ನಾನು ಕರನ್ಹಾರ್ (ಕರ್ಮಚಾರಿ) ಆಗಲು ಸಾಧ್ಯವಾಗುವುದಿಲ್ಲ. ಹೀಗೆ ಡಬ್ಬಲ್ ರೂಪದಿಂದ ಕರಾವನ್ಹಾರ್ನ (ಕರ್ತವ್ಯ ಮಾಡಿಸುವವರ) ಸ್ಮೃತಿಯು ಇರಬೇಕು. ಒಬ್ಬರಂತೂ ತಂದೆಯು ಕರಾವನ್ಹಾರ್ ಆಗಿದ್ದಾರೆ ಹಾಗೂ ಎರಡನೆಯವರು ನಾನು ಆತನೂ ಸಹ ಈ ಕರ್ಮೇಂದ್ರಿಯಯಗಳ ಮಾಲಿಕ ಕರ್ಮ ಮಾಡಿಸುವ ಮಾಲಿಕನಾಗಿದ್ದೇನೆ. ಈ ಸ್ಮೃತಿಯಿಂದ ಏನಾಗುವುದೆಂದರೆ ಕರ್ಮವನ್ನು ಮಾಡುತ್ತಿದ್ದರೂ ಕರ್ಮದ ಒಳ್ಳೆಯ ಅಥವಾ ಕಟ್ಟ ಪ್ರಭಾವದಲ್ಲಿ ಬರುವುದಿಲ್ಲ. ಇದನ್ನು ಕರ್ಮಾತೀತ ಅವಸ್ಥೆಯೆಂದು ಕರೆಯಲಾಗುತ್ತದೆ.

ನಿಮ್ಮೆಲ್ಲರ ಲಕ್ಷ್ಯವು ಏನಾಗಿದೆ? ಕರ್ಮಾತೀತ ಆಗುವ ಲಕ್ಷ್ಯವಿದೆಯಲ್ಲವೇ, ಅಥವಾ ಇಲ್ಲವೋ? ಸ್ವಲ್ಪ ಸ್ವಲ್ಪ ಕರ್ಮಬಂಧನ ಅಡ್ಡಿಯಿಲ್ಲವೆಂದು ತಿಳಿದಿದ್ದೀರಾ, ಕರ್ಮ ಬಂಧನವು, ಅಲ್ಪಸ್ವಲ್ಪ ಇರಬೇಕೋ, ಇರಬಾರದೋ? ಕರ್ಮಾತೀತ ಆಗಬೇಕೆಂದಿದ್ದೀರಾ? ತಂದೆಯೊಂದಿಗೆ ಪ್ರೀತಿಯಿರುವುದರ ಚಿಹ್ನೆಯು ಕರ್ಮಾತೀತ ಆಗುವುದಾಗಿದೆ. ಆದ್ದರಿಂದ ಕರಾವನ್ಹಾರ್ (ಕರ್ತವ್ಯ ಮಾಡಿಸುವ ಮಾಲಿಕ) ಆಗಿ ಕರ್ಮ ಮಾಡಿರಿ, ಮಾಡಿಸಿರಿ. ಕರ್ಮೇಂದ್ರಿಯಯಗಳು ನಿಮ್ಮಿಂದ ಕರ್ಮ ಮಾಡಿಸಬಾರದು. ಆದರೆ ನೀವು ಕರ್ಮೇಂದ್ರಿಯಯಗಳಿಂದ ಮಾಡಿಸಿರಿ. ನಿಮ್ಮನ್ನು ಸಂಪೂರ್ಣ ಕರ್ಮೇಂದ್ರಿಯಯಗಳಿಂದ ಭಿನ್ನವಾದ ಅಶರೀರೀ ಆತ್ಮನೆಂದು ತಿಳಿದು ಕರ್ಮ ಮಾಡಿಸಿರಿ. ಈ ಕಾನ್ಷಿಯಸ್ನೆಸ್ (ಸ್ಮೃತಿಯು) ಪ್ರಕಟ (ಎಮರ್ಜ್) ರೂಪದಲ್ಲಿ ಇರಲಿ, ಮರ್ಜ್ ರೂಪದಲ್ಲಿ ಅಲ್ಲ. ಮರ್ಜ್ ರೂಪದಲ್ಲಿ ಒಮ್ಮೊಮ್ಮೆ ಕರಾವನ್ ಹಾರ್ನಿಗೆ (ಕರ್ತವ್ಯ ಮಾಡಿಸುವ ಮಾಲಿಕನಿಗೆ) ಬದಲಾಗಿ ಕರ್ಮೇಂದ್ರಿಯಗಳ ಅರ್ಥಾತ್ ಮನಸ್ಸಿನ ಬುದ್ಧಿಯ, ಸಂಸ್ಕಾರದ ವಶರಾಗಿ ಬಿಡುತ್ತೀರಿ. ಕಾರಣವೇನು? ಕರಾವನ್ಹಾರ್ (ಕರ್ತವ್ಯ ಮಾಡಿಸುವ) ಆತ್ಮನಾಗಿದ್ದೇನೆ, ಮಾಲಿಕನಾಗಿದ್ದೇನೆ, ವಿಶೇಷ ಆತ್ಮ, ಮಾಸ್ಟರ್ ಸರ್ವಶಕ್ತಿವಂತ ಆತ್ಮನಾಗಿದ್ದೇನೆ ಎನ್ನುವ ಸ್ಮೃತಿಯು ಮಾಲಿಕತನದ ಸ್ಮೃತಿಯನ್ನು ತಂದುಕೊಡುತ್ತದೆ. ಇಲ್ಲದಿದ್ದರೆ ಒಮ್ಮೊಮ್ಮೆ ಮನಸ್ಸು ನಿಮ್ಮನ್ನು ನಡೆಸುತ್ತದೆ ಹಾಗೂ ಒಮ್ಮೊಮ್ಮೆ ನೀವು ಮನಸ್ಸನ್ನು ನಡೆಸುತ್ತೀರಿ. ಆದ್ದರಿಂದ ಸದಾ ಸ್ವಾಭಾವಿಕವಾಗಿ ಮನ್ಮನಾಭವದ ಸ್ಥಿತಿಯು ಇರುವುದಿಲ್ಲ. ನಾನು ಸಂಪೂರ್ಣ ಭಿನ್ನ ಆಗಿದ್ದೇನೆ ಹಾಗೂ ಕೇವಲ ಭಿನ್ನವಷ್ಟೇ ಅಲ್ಲ ಆದರೆ ಮಾಲಿಕನಾಗಿದ್ದೇನೆ. ತಂದೆಯನ್ನು ನೆನಪು ಮಾಡುವಾಗ ಬಾಲಕನಾಗಿದ್ದೇನೆ ಹಾಗೂ ನಾನು ಆತ್ಮನು ಕರ್ಮೇಂದ್ರಿಯಯಗಳಿಂದ ಕರ್ಮ ಮಾಡಿಸುವವನು ಆಗಿರುವುದರಿಂದ ಮಾಲಿಕನಾಗಿದ್ದೇನೆ. ಇನ್ನೂ ಈ ಅಭ್ಯಾಸದ ಬಗ್ಗೆ ಗಮನ ಕಡಿಮೆ ಇದೆ. ಸೇವೆಯಲ್ಲಿ ತುಂಬಾ ಚೆನ್ನಾಗಿ ತತ್ಪರರಾಗಿದ್ದೀರಿ, ಆದರೆ ಲಕ್ಷ್ಯವು ಏನಾಗಿದೆ? ಸೇವಾಧಾರಿ ಆಗಬೇಕೆನ್ನುವ ಲಕ್ಷ್ಯವಿದೆಯೋ ಅಥವಾ ಕರ್ಮಾತೀತ ಆಗಬೇಕೆನ್ನುವ ಲಕ್ಷ್ಯವಿದೆಯೋ? ಅಥವಾ ಎರಡೂ ಜೊತೆ ಅಥವಾ ಜೊತೆಯಲ್ಲಿ ಆಗುವಿರೋ? ಈ ಅಭ್ಯಾಸ ಪಕ್ಕಾ ಆಗಿದೆಯೇ? ಇದೀಗಲೇ ಈ ಅಭ್ಯಾಸವನ್ನು ಸ್ವಲ್ಪ ಸಮಯದವರೆಗೆ ಮಾಡಬಲ್ಲಿರಾ? ಕಮೇಂದ್ರಿಯಗಳಿಂದ ಅಶರೀರೀ ಆಗಬಲ್ಲಿರಾ? ಅಥವಾ ಶರೀರದಿಂದ ಭಿನ್ನ, (ಡಿಟೇಚ್) ಆಗುವುದರಲ್ಲಿ ಸಮಯವನ್ನು ತೆಗೆದುಕೊಳ್ಳುವಷ್ಟು ಶರೀರದೊಂದಿಗೆ ಅಟೇಚ್ (ಮೋಹ ಮಮತೆಯುಳ್ಳವರು) ಆಗಿದ್ದೀರೋ? ಶರೀರದಿಂದ ಭಿನ್ನವಾಗಲು ನಿಮಗೆ ಸಾಧ್ಯವಾಗುತ್ತದೆಯೇ? ಎಷ್ಟು ಸಮಯದಲ್ಲಿ ಆಗಬಲ್ಲಿರಿ? ಐದು ನಿಮಿಷಗಳು ಬೇಕೇ? ಅಥವಾ ಒಂದು ನಿಮಿಷ ಬೇಕೋ ಅಥವಾ ಒಂದು ಸೆಕೆಂಡ್ ಬೇಕೋ? ಒಂದು ಸೇಕೆಂಡ್ನಲ್ಲಿ ಅಶರೀರಿ ಆಗಬಲ್ಲಿರಾ? ಹಿಂದೆ ಕುಳಿತುಕೊಂಡಿರುವವರು ಆಗಬಲ್ಲಿರಾ?

ಪಾಂಡವರು ಒಂದು ಸೆಕೆಂಡಿನಲ್ಲಿ ಸಂಪೂರ್ಣ ಭಿನ್ನ (ಅಶರೀರಿ) ಆಗಬಲ್ಲಿರಾ? ಆತ್ಮವು ಶರೀರದಿಂದ ಭಿನ್ನವಾದ ಮಾಲಿಕ ಹಾಗೂ ಕರ್ಮೇಂದ್ರಿಯಯಗಳು ಕರ್ಮಚಾರಿಗಳು ಆಗಿವೆ ಎನ್ನುವ ಅಭ್ಯಾಸವು ಯಾವಾಗ ಬೇಕಾದರೂ ಆಗ ಇರಬೇಕು. ಒಳ್ಳೆಯದು. ಈಗಲೇ ಒಂದು ಸೆಕೆಂಡಿನಲ್ಲಿ ಅಶರೀರಿ ಹಾಗೂ ತಂದೆಗೆ ಪ್ರಿಯರು ಆಗಿಬಿಡಿ. ಶಕ್ತಿಪೂರ್ಣವಾದ ಅಭ್ಯಾಸ ಮಾಡಿರಿ. ನಾನು ಶರೀರದಿಂದ ಭಿನ್ನವಾದ ಆತ್ಮ ಆಗಿಯೇ ಇದ್ದೇನೆ. ಈ ಕರ್ಮೇಂದ್ರಿಯಯಗಳು ನನ್ನ ಸಾಥಿಯಾಗಿವೆ; ಕರ್ಮದ ಸಾಥಿಯಾಗಿವೆ. ಆದರೆ ನಾನು ಅಶರೀರೀ ಆತ್ಮ ಆಗಿದ್ದೇನೆ ಹಾಗೂ ತಂದೆಗೆ ಪ್ರಿಯನಾಗಿದ್ದೇನೆ. ಈಗಲೇ ಒಂದು ಸೆಕೆಂಡಿನಲ್ಲಿ ಅಭ್ಯಾಸವನ್ನು ಪುನಃ ಮಾಡಿರಿ. ಡ್ರಿಲ್ ಮಾಡುವುದು ಸಹಜವೆನಿಸುತ್ತದೆಯೇ ಅಥವಾ ಕಷ್ಟವಾಗಿದೆಯೋ? ಸಹಜವಾಗಿದ್ದರೆ ಇಡೀ ದಿನದಲ್ಲಿ ಕರ್ಮ ಮಾಡುವ ಸಮಯದಲ್ಲಿ ಈ ಸ್ಮೃತಿಯನ್ನು ಪ್ರಕಟಗೊಳಿಸಿದರೆ ಕರ್ಮಾತೀತ ಸ್ಥಿತಿಯನ್ನು ಸಹಜವಾಗಿ ಅನುಭವ ಮಾಡುವಿರಿ. ಸೇವೆ ಅಥವಾ ಕರ್ಮವನ್ನು ಬಿಡಬಲ್ಲಿರಾ? ಬಿಡುವಿರೇನು? ಮಾಡಲೇಬೇಕು. ತಪಸ್ಸಿನಲ್ಲಿ ಕುಳಿತುಕೊಳ್ಳುವುದೂ ಸಹ ಕರ್ಮವಾಗಿದೆ. ಕರ್ಮವನ್ನು ಮಾಡದೆ ಅಥವಾ ಸೇವೆಯನ್ನು ಮಾಡದೆ ಇರಲು ಸಾಧ್ಯವಾಗುವುದಿಲ್ಲ ಹಾಗೂ ಇರಲೂಬಾರದು. ಏಕೆಂದರೆ ಸಮಯವು ಕಡಿಮೆ ಇದೆ. ಹಾಗೂ ಸೇವೆಯು ಇನ್ನೂ ತುಂಬಾ ಇದೆ. ಸೇವೆಯ ರೂಪರೇಖೆಯು ಬದಲಾಗಿದೆ. ಆದರೆ ಈಗಲೂ ಸಹ ಅನೇಕ ಆತ್ಮರ ಆಕ್ಷೇಪಣೆಯು ಉಳಿದುಬಿಟ್ಟಿದೆ. ಆದ್ದರಿಂದ ಸೇವೆ ಹಾಗೂ ಸ್ವಪುರುಷಾರ್ಥದ ಬ್ಯಾಲೆನ್ಸ್ (ಸಮತೋಲನ) ಇಟ್ಟುಕೊಳ್ಳಿರಿ. ಸೇವೆಯಲ್ಲಿ ನಾನು ತುಂಬಾ ವ್ಯಸ್ತವಾಗಿ (ಬಿಜಿಯಾಗಿ) ಬಿಟ್ಟಿದ್ದೇನಲ್ಲವೇ. ಆದ್ದರಿಂದ ಸ್ವಪುರುಷಾರ್ಥವು ಕಡಿಮೆಯಾಗಿ ಬಿಟ್ಟಿತು ಎಂದು ಹೇಳುವುದು ಸರಿಯಲ್ಲ. ಸೇವೆಯಲ್ಲಿ ಸ್ವಪುರುಷಾರ್ಥದ ಬಗ್ಗೆ ಗಮನವು ಇನ್ನೂ ಅಧಿಕವಾಗಿರಬೇಕು. ಏಕೆಂದರೆ ಸೇವೆಯಲ್ಲಿ ಮಾಯೆಗೆ ಬರುವ ಅವಕಾಶವು ಅನೇಕ ಪ್ರಕಾರದಿಂದ ಇರುತ್ತದೆ. ಹೆಸರು ಸೇವೆಯೆಂದು ಇದ್ದರೂ ಸ್ವಾರ್ಥವಿರುತ್ತದೆ. ನಿಮ್ಮ ಉನ್ನತಿ ಮಾಡಿಕೊಳ್ಳಿರಿ. ಆದರೆ ಉನ್ನತಿ ಮಾಡಿಕೊಳ್ಳುತ್ತಾ ಬ್ಯಾಲೆನ್ಸನ್ನು (ಸಮತೋಲನವನ್ನು) ಮರೆಯಬೇಡಿರಿ. ಏಕೆಂದರೆ ಸೇವೆಯಲ್ಲಿಯೇ ಸ್ವಭಾವ ಸಂಬಂಧದ ವಿಸ್ತಾರವಾಗುತ್ತದೆ ಹಾಗೂ ಮಾಯೆಯು ಅವಕಾಶವನ್ನೂ ತೆಗೆದುಕೊಳ್ಳುತ್ತದೆ. ಬ್ಯಾಲೆನ್ಸ್ (ಸಮತೋಲನವು) ಸ್ವಲ್ಪವೂ ಕಡಿಮೆಯಾದರೂ ಮಾಯೆಯು ಹೊಸ ಹೊಸ ರೂಪವನ್ನು ಧಾರಣೆ ಮಾಡಿಬಿಡುತ್ತದೆ. ಹಳೆಯ ರೂಪದಲ್ಲಿ ಬರುವುದಿಲ್ಲ. ಹೊಸ ಹೊಸ ರೂಪದಲ್ಲಿ, ಹೊಸ ಹೊಸ ಪರಿಸ್ಥಿತಿಯ ರೂಪದಲ್ಲಿ, ಸಂಪರ್ಕದ ರೂಪದಲ್ಲಿ ಬರುತ್ತದೆ. ಸೇವೆಯನ್ನು ಬಿಟ್ಟುಕೊಟ್ಟರೆ ನಿಮ್ಮನ್ನು ಬಾಪ್ದಾದಾರವರು ಸ್ವಪುರುಷಾರ್ಥದಲ್ಲಿ ಪ್ರತ್ಯೇಕವಾಗಿ ಒಂದು ಮಾಸದವರೆಗೆ ಕೂಡಿಸಿದರೆ, 15 ದಿನಗಳವರೆಗೆ ಕೂಡಿಸಿದರೆ, ಕರ್ಮಾತೀತ ಆಗಿಬಿಡುವಿರಾ? ಏನೂ ಮಾಡಬೇಡಿರಿ, ಕುಳಿತುಕೊಂಡಿರಿ, ತಪಸ್ಸು ಮಾಡಿರಿ, ಅಡಿಗೆಯನ್ನೂ ಒಂದುಸಲ ಮಾಡಿದರೆ ಸಾಕು ಒಂದು ತಿಂಗಳು ಸೇವೆಯಿಂದ ಬಿಡುವು ಕೊಡೊಣವೇ? ಹೀಗೆ ಮಾಡಿದರೆ ಕರ್ಮಾತೀತ ಆಗಿಬಿಡುವಿರಾ? ಆಗುವುದಿಲ್ಲವೇ?

ಒಂದುವೇಳೆ ಬ್ಯಾಲೆನ್ಸ್ನ ಅಭ್ಯಾಸವಿಲ್ಲದಿದ್ದರೆ, ಒಂದು ತಿಂಗಳಷ್ಟೇ ಅಲ್ಲ ಎರಡು ತಿಂಗಳುಗಳವರೆಗೆ ತಪಸ್ಸಿನಲ್ಲಿ ಕುಳಿತು ಬಿಟ್ಟರೂ ಮನಸ್ಸು ತಪಸ್ಸಿನಲ್ಲಿ ಸ್ಥಿತವಾಗುವುದಿಲ್ಲ. ತನುವು ಕುಳಿತುಕೊಂಡಿರುತ್ತದೆ ಆದರೆ ಸ್ಥಿತ ಮಾಡಬೇಕಾಗಿರುವುದು ಕೇವಲ ತನುವನ್ನೋ ಅಥವಾ ಮನಸ್ಸನ್ನೋ? ತನುವಿನ ಜೊತೆಯಲ್ಲಿ ಮನಸ್ಸನ್ನೂ ಸಹ ಸ್ಥಿತ ಮಾಡಿರಿ. ತಂದೆ ಹಾಗೂ ನಾನು ಇಬ್ಬರೇ ಇದ್ದೇವೆ, ಅನ್ಯರು ಯಾರೂ ಇಲ್ಲ ಎನ್ನುವ ಸ್ಥಿತಿಯಲ್ಲಿ ಮನಸ್ಸು ಸ್ಥಿತವಾಗಿ ಬಿಡಲಿ. ಹೀಗೆ ಒಂದು ತಿಂಗಳು ಇಂತಹ ತಪಸ್ಸನ್ನು ಮಾಡಬಲ್ಲಿರಾ? ಆಥವಾ ಸೇವೆಯು ನೆನಪಿಗೆ ಬರುವುದೋ? ಬಾಪ್ದಾದಾರವರು ಅಥವಾ ನಾಟಕವು ಹೇಗೆ ದಿನಪ್ರತಿ ದಿನವೂ ಸೇವೆಯು ವೃದ್ಧಿಯಾಗಲಿದೆ ಎಂದು ತೋರಿಸುತ್ತಿರುತ್ತೇವೋ ಅಥವಾ ಕಡಿಮೆಯಾಗಲಿದೆ ಎಂದು ತೋರಿಸುತ್ತೇವೋ? ವೃದ್ಧಿಯಾಗಲಿದೆಯಲ್ಲವೇ. ಆದ್ದರಿಂದ ಹೇಗೆ ಕುಳಿತು ಬಿಡುವಿರಿ? ಒಂದು ವರ್ಷದ ಹಿಂದೆ ನಿಮ್ಮ ಸೇವೆಯು ಏನಿತ್ತೋ ಹಾಗೂ ಈ ವರ್ಷದಲ್ಲಿ ಏನು ಸೇವೆ ಮಾಡಿದಿರೋ ಅದು ವೃದ್ಧಿಯಾಗಿದೆಯೋ ಅಥವಾ ಕಡಿಮೆಯಾಗಿದೆಯೋ? ವೃದ್ಧಿಯಾಗಿದೆಯಲ್ಲವೇ. ಬಯಸದಿದ್ದರೂ ಸೇವೆಯ ಬಂಧನದಲ್ಲಿ ಬಂಧಿತರಾಗಿದ್ದೀರಿ. ಆದರೆ ಸೇವೆಯ ಬಂಧನವು ಬ್ಯಾಲೆನ್ಸ್ನ ಬಂಧನಕ್ಕೆ ಬದಲಾಗಿ ಸೇವೆಯ ಸಂಬಂಧವಿರುವುದು, ಬಂಧನವಲ್ಲ. ಹೇಗೆ ಲೌಕಿಕ ಸಂಬಂಧದಲ್ಲಿ ಒಂದನೆಯದಾಗಿ ಸಂಬಂಧವಿರುತ್ತದೆ. ಇನ್ನೊಂದು ಕರ್ಮಬಂಧನವಿರುತ್ತದೆ. ಹಾಗೂ ಮತ್ತೊಂದು ಸೇವೆಯ ಸಂಬಂಧ ಇಲ್ಲಿ ಬಂಧನದ ಅನುಭವವಾಗುವುದಿಲ್ಲ. ಸೇವೆಯ ಮಧುರವಾದ ಸಂಬಂಧವಿದೆ. ಆದ್ದರಿಂದ ಏನು ಗಮನ ನೀಡುವಿರಿ? ಸೇವೆ ಹಾಗೂ ಸ್ವಪುರುಷಾರ್ಥದ ಬ್ಯಾಲೆನ್ಸ್ ಇಟ್ಟುಕೊಳ್ಳಬೇಕೆಂದು. ಸೇವೆಯ ಅತಿಯಲ್ಲಿ ಹೋಗಬೇಡಿರಿ. ನಾನೇ ಮಾಡಬೇಕಾಗುತ್ತದೆ, ನಾನೇ ಮಾಡಬಲ್ಲೆನು ಎಂದು ತಿಳಿಯುವುದು ಸರಿಯಲ್ಲ. ಮಾಡಿಸುವವರು ಮಾಡಿಸುತ್ತಾ ಇದ್ದಾರೆ. ನಾನು ನಿಮಿತ್ತ ಕರನ್ಹಾರ್ (ಕರ್ಮಚಾರಿ) ಆಗಿದ್ದೇನೆ ಎಂಬ ಸ್ಮೃತಿಯಿರಬೇಕು. ಆಗ ಜವಾಬ್ದಾರಿಯೂ ಕಡಿಮೆ, ದಣಿವೂ ಕಡಿಮೆಯಾಗುತ್ತದೆ. ಅನೇಕ ಮಕ್ಕಳು ಏನು ಹೇಳುತ್ತಾರೆಂದರೆ, ತುಂಬಾ ಸೇವೆ ಮಾಡಿದೇನಲ್ಲವೇ ಆದ್ದರಿಂದ ದಣಿದಿದ್ದೇನೆ ಎಂದು. ತಲೆಯು ಭಾರವಾಗಿ ಬಿಟ್ಟಿದೆ ಎಂದು ಹೇಳುತ್ತಾರೆ. ಆದರೆ ಯಥಾರ್ಥವಾದ ಸ್ಮೃತಿಯಿಂದ ತಲೆಯು ಭಾರವಾಗುವುದಿಲ್ಲ. ಅದಕ್ಕೆ ಬದಲಾಗಿ ಕರಾವನ್ಹಾರ್ ಆಗಿರುವ ತಂದೆಯು ತುಂಬಾ ಚೆನ್ನಾಗಿ ಮಸಾಜ್ ಮಾಡುವರು ಹಾಗೂ ಬುದ್ಧಿಯ ಇನ್ನೂ ಫ್ರೆಷ್ ಆಗಿಬಿಡುವುದು (ಹಗುರ ಹಾಗೂ ತಾಜಾ) ದಣಿವಾಗುವುದಿಲ್ಲ. ವಿಶೇಷ ಶಕ್ತಿಯು ಬರುವುದು, ಹೇಗೆ ವೈಜ್ಞಾನಿಕ ಔಷಧಿಗಳಿಂದ ಶರೀರದಲ್ಲಿ ಶಕ್ತಿಯು ಬರಲು ಸಾಧ್ಯವಿದೆಯೋ ಹಾಗೆ ತಂದೆಯ ನೆನಪಿನಿಂದ ಆತ್ಮದಲ್ಲಿ ಶಕ್ತಿಯು ಬರಲು ಸಾಧ್ಯವಿಲ್ಲವೇ? ಹಾಗೂ ಆತ್ಮದಲ್ಲಿ ಶಕ್ತಿಯು ಬಂದರೆ, ಶರೀರದ ಮೇಲೆ ಆಟೋಮಾಟಿಕಲಿ (ಸ್ವತಃವಾಗಿ) ಪ್ರಭಾವವಾಗುತ್ತದೆ. ಅನುಭವಿಯೂ ಆಗಿದ್ದೀರಿ. ಒಮ್ಮೊಮ್ಮೆಯಾದರೂ ಅನುಭವವಾಗುತ್ತದೆ. ಆಮೇಲೆ ನಡೆಯುತ್ತಾ ನಡೆಯುತ್ತಾ ಕಂಬಿಯು ಬದಲಾವಣೆಯಾಗಿ ಬಿಡುತ್ತದೆ. ಹಾಗೂ ಗೊತ್ತೆ ಆಗುವುದಿಲ್ಲ. ಯಾವಾಗ ಏನಾದರೂ ಬೇಸರ, ಬಳಲಿಕೆ ಅಥವಾ ತಲೆಯ ಭಾರವಾಗುತ್ತದೆಯೋ ಆಗ ಪ್ರಜ್ಞೆಯು ಬರುತ್ತವೆ. ಇದೇನಾಯಿತು? ಏಕೆ ಅಯಿತು? ಆದರೆ ಕೇವಲ ಒಂದು ಶಬ್ದವನ್ನು ಕರನ್ಹಾರ್ ಹಾಗೂ ಕರಾವನ್ಹಾರ್ ಎಂಬುದನ್ನು ನೆನಪು ಮಾಡಿರಿ, ಕಷ್ಟವಾಗುತ್ತದೆಯೇನು? ಅಥವಾ ಸಹಜವಾಗಿದೆಯೋ? ಸಹಜವಾಗಿದೆಯೆಂದು ಹೇಳಿರಿ. ಹಿಂದೆ ಕುಳಿತವರು ಹೇಳಿದಿರಾ? (ಎಲ್ಲರೂ ಸಹಜವಾಗಿದೆಯೆಂದು ಜೋರಾಗಿ ಹೇಳಿದರು)

ಈಗ 9 ಲಕ್ಷ ಪ್ರಜೆಗಳನ್ನು ತಯಾರು ಮಾಡಿದ್ದೀರಾ? ವಿದೇಶದಲ್ಲಿ ಎಷ್ಟು ತಯಾರಾಗಿದ್ದಾರೆಯೇ? 9 ಲಕ್ಷ ತಯಾರಾಗಿದ್ದಾರೆಯೇ? ಹಾಗೂ ಭಾರತದಲ್ಲಿ ತಯಾರಾಗಿದ್ದಾರೆಯೇ? ತಯಾರಾಗಿಲ್ಲ. ನೀವೇ ಸಮಾಪ್ತಿಯ ಮುಳ್ಳು ಮುಂದೆ ಹೋಗಲು ಬಿಡುವುದಿಲ್ಲ. ಬ್ಯಾಲೆನ್ಸ್ ಇಟ್ಟುಕೊಳ್ಳಿರಿ. ಡೈಮಂಡ್ ಜ್ಯೂಬಿಲಿಯಾಗಿರುವುದರಿಂದ ಚೆನ್ನಾಗಿ ಸೇವೆ ಮಾಡಿರಿ. ಆದರೆ ಬ್ಯಾಲೆನ್ಸ್ ಇಟ್ಟುಕೊಂಡು ಸೇವೆ ಮಾಡಿದರೆ ಪ್ರಜೆಗಳು ಬೇಗ ತಯಾರಾಗುವರು. ಸಮಯ ಹಿಡಿಯುವುದಿಲ್ಲ. ಪ್ರಕೃತಿಯೂ ತುಂಬಾ ಬಳಲಿ ಹೋಗಿದೆ. ಆತ್ಮರೂ ಸಹ ನಿರಾಶರಾಗಿ ಬಿಟ್ಟಿದ್ದಾರೆ. ಹೀಗೆ ನಿರಾಶರಾದಾಗ ಯಾರನ್ನು ನೆನಪು ಮಾಡುತ್ತಾರೆ? ಭಗವಂತ ತಂದೆಯನ್ನು ನೆನಪು ಮಾಡುತ್ತಾರೆ. ಆದರೆ ಅವರ ಪೂರ್ತಿ ಪರಿಚಯವಿಲ್ಲದಿರುವ ಕಾರಣ ನಿಮ್ಮನ್ನು ದೇವೀ ದೇವತೆಗಳನ್ನು ಹೆಚ್ಚು ನೆನಪು ಮಾಡುತ್ತಾರೆ. ಇಂತಹ ನಿರಾಶರಾಗಿರುವ ಆತ್ಮರ ಮೊರೆಯು ನಿಮಗೆ ಕೇಳಿಬರುವುದಿಲ್ಲವೇ? ಕೇಳಿಬರುತ್ತದೆಯೋ ಹವ್ಯಾಸದಲ್ಲಿಯೇ ಮಗ್ನರಾಗಿದ್ದೀರೋ? ದಯಾ ಪೂರ್ಣರಾಗಿದ್ದೀರಲ್ಲವೇ ತಂದೆಯನ್ನು ಏನೆಂದು ಕರೆಯುತ್ತೀರಿ? ದಯಾಪೂರ್ಣ, ದಯಾಸಾಗರನೆಂದು ಹಾಗೂ ಸರ್ವ ಧರ್ಮದವರೂ ದಯೆಯನ್ನು ಅವಶ್ಯವಾಗಿ ಬೇಡುತ್ತಾರೆ. ಯಾವುದೇ ಧರ್ಮದವರಾಗಿದ್ದರೂ ಸುಖವನ್ನು ಬೇಡುವುದಿಲ್ಲ. ಆದರೆ ಎಲ್ಲರಿಗೂ ದಯೆಯ ಅಗತ್ಯವಿದೆ. ಹಾಗಾದರೆ ಕೊಡುವವರು ಯಾರಾಗಿದ್ದಾರೆ? ನೀವು ಕೊಡುವವರಾಗಿದ್ದೀರಲ್ಲವೇ? ಅಥವಾ ತೆಗೆದುಕೊಳ್ಳುವವರಾಗಿದ್ದೀರೋ? ತೆಗೆದುಕೊಂಡು ಕೊಡುವವರಾಗಿದ್ದೀರಿ. ದಾತಾನ ಮಕ್ಕಳಾಗಿದ್ದೀರಲ್ಲವೇ. ಆದ್ದರಿಂದ ನಿಮ್ಮ ಸಹೋದರ ಸಹೋದರಿಯರೆ ಮೇಲೆ ದಯಾ ಹೃದಯರಾಗಿರಿ, ಹಾಗೂ ದಯಾಹೃದಯರಾಗಿ ಸೇವೆ ಮಾಡಿದರೆ ಆದರಲ್ಲಿ ನಿಮಿತ್ತ ಭಾವವು ಸ್ವತಃವಾಗಿಯೇ ಇರುವುದು. ಯಾರಾದರೂ ಎಷ್ಟೇ ಕೆಟ್ಟವರಾಗಿದ್ದರೂ ಒಂದುವೇಳೆ ನಿಮಗೆ ಆ ಆತನ ಬಗ್ಗೆ ದಯೆಯಿದ್ದರೆ, ನಿಮಗೆ ಅವರ ಬಗ್ಗೆ ಎಂದೂ ತಿರಸ್ಕಾರ ಅಥವಾ ಅಸತ್ಯ ಕ್ರೋಧದ ಭಾವನೆಯು ಬರುವುದಿಲ್ಲ. ದಯೆಯ ಭಾವನೆಯು ಸಹಜವಾಗಿ ನಿಮಿತ್ತ ಭಾವವನ್ನು ಪ್ರಕಟಗೊಳಿಸಿ ಬಿಡುತ್ತದೆ. ಸ್ವಾರ್ಥಪರವಾದ ದಯೆಯಲ್ಲಿ ಸತ್ಯವಾದ ದಯೆಯಿರಬೇಕು. ಸ್ವಾರ್ಥವಿರುವ ದಯೆಯೂ ಇರುತ್ತದೆ. ಆಂತರ್ಯದಲ್ಲಿ ಯಾರಾದರೂ ಆತ್ಮನ ಬಗ್ಗೆ ಆಸಕ್ತಿ ಅಥವಾ ಆಕರ್ಷಣೆಯಿರುತ್ತದೆ. ಆದರೆ ದಯೆಯು ಉತ್ಪನ್ನವಾಗುತ್ತಿದೆ ಎಂದು ತಿಳಿದುಕೊಳ್ಳುತ್ತಾರೆ. ಅದು ಸ್ವಾರ್ಥವಿರುವ ದಯೆಯಾಯಿತು. ಸತ್ಯವಾದ ದಯೆಯಲ್ಲಿ ಯಾವ ಆಕರ್ಷಣೆಯೂ ಇರುವುದಿಲ್ಲ. ಯಾವ ದೇಹ ಅಭಿಮಾನವೂ ಇರುವುದಿಲ್ಲ. ಆತ್ಮನು ಆತ್ಮನ ಮೇಲೆ ದಯೆ ಮಾಡುತ್ತಿದ್ದಾರೆ. ದೇಹ ಅಭಿಮಾನ ಅಥವಾ ದೇಹದ ಯಾವುದೇ ಆಕರ್ಷಣೆಯ ಹೆಸರು ಕುರುಹೂ ಇರುವುದಿಲ್ಲ. ಒಬ್ಬೊಬ್ಬರಿಗೆ ಆಕರ್ಷಣೆಯು ದೇಹದೊಂದಿಗೆ ಇರುತ್ತದೆ ಹಾಗೂ ಒಬ್ಬೊಬ್ಬರಿಗೆ ಗುಣಗಳೊಂದಿಗೆ ಆಕರ್ಷಣೆ ಆಗುತ್ತದೆ. ವಿಶೇಷತೆಯೊಂದಿಗೂ ಆಕರ್ಷಣೆ ಆಗುತ್ತದೆ. ಅದರ ವಿಶೇಷತೆ ಅಥವಾ ಗುಣಗಳನ್ನು ಪ್ರದಾನ ಮಾಡುವವರು ಯಾರಾಗಿದ್ದಾರೆ? ಆತ್ಮವಂತೂ ಎಷ್ಟೇ ಶ್ರೇಷ್ಠವಾಗಿದ್ದರೂ ತ0ದೆಯಿ0ದ ಲೇವತಾ ಅಥವಾ ತೆಗೆದುಕೊಳ್ಳುವವರಾಗಿದ್ದಾರೆ. ತಂದೆಯಿಂದ ತೆಗೆದುಕೊಂಡಿದ್ದಾರೆ. ಆ ವಿಶೇಷತೆಯು ತಮ್ಮ ಸ್ವಂತದ್ದಲ್ಲ. ತಂದೆಯು ಕೊಟ್ಟಿರುವುದಾಗಿದೆ. ಆದ್ದರಿಂದ ನೇರವಾಗಿ (ಡೈರೆಕ್ಟ್) ದಾತನಿಂದ ಏಕೆ ತೆಗೆದುಕೊಳ್ಳಬಾರದು. ಆದ್ದರಿಂದ ಸ್ವಾರ್ಥದ ದಯೆಯಿರಬಾರದು ಎಂದು ನಿಮಗೆ ತಿಳಿಸಲಾಯಿತು. ಅನೇಕ ಮಕ್ಕಳ ಅಂತಹ ಬಿಂಕ-ತುಂಟಾಟ ತೋರಿಸುತ್ತಾರೆ. ಆಂತರ್ಯದಲ್ಲಿ ಸ್ವಾರ್ಥವಿರುತ್ತದೆ. ಆದರೆ ನನಗೆ ದಯೆಯು ಉತ್ಪನ್ನವಾಗುತ್ತದೆಯೆಂದು ಹೇಳುತ್ತಾರೆ. ಬೇರೆ ಏನೂ ಇಲ್ಲ, ಕೇವಲ ದಯಾಭಾವವಿದೆಯೆಂದು ಹೇಳುತ್ತಾರೆ. ಆದರೆ ನಿಸ್ವಾರ್ಥವಾದ ದಯೆಯಿದೆಯೇ ಎಂದು ಪರಿಶೀಲನೆ ಮಾಡಿರಿ. ಆಕರ್ಷಣಾರಹಿತವಾದ ದಯೆಯಿದೆಯೇ? ಯಾವುದಾದರೂ ಅಲ್ಪಕಾಲದ ಪ್ರಾಪ್ತಿಯ ಕಾರಣದಿಂದ ದಯೆ ತೋರಿಸುವುದಿಲ್ಲ ತಾನೇ? ಇದನ್ನು ಪರಿಶೀಲನೆ ಮಾಡಿಕೊಳ್ಳಿರಿ. ಆಮೇಲೆ ಏನು ಹೇಳುತ್ತಾರೆಂದರೆ, ತುಂಬಾ ಉತ್ತಮರಾಗಿದ್ದಾರಲ್ಲವೇ. ಆದ್ದರಿಂದ ಸ್ವಲ್ಪ... ಆದರೆ ಸ್ವಲ್ಪ ಆಕರ್ಷಣೆ ಮಮತೆಗೂ ಅನುಮತಿಯಿಲ್ಲ. ಒಂದುವೇಳೆ ಕರ್ಮಾತೀತ ಆಗಬೇಕೆಂದಿದ್ದರೆ, ಈ ಎಲ್ಲಾ ಅಡ್ಡಿಗಳನ್ನೂ ನಿವಾರಣೆ ಮಾಡಿಕೊಳ್ಳಿರಿ. ಇವು ದೇಹ ಅಭಿಮಾನದಲ್ಲಿ ಕರೆತರುತ್ತವೆ. ಉತ್ತಮರಾಗಿದ್ದಾರೆ. ಆದರೆ ಉತ್ತಮರನ್ನಾಗಿ ಮಾಡುವವರು ಯಾರಾಗಿದ್ದಾರೆ? ಒಳ್ಳೆಯದನ್ನು ವಿಶೇಷತೆಯನ್ನು ಧಾರಣೆ ಮಾಡಲು ಅಡ್ಡಿಯಿಲ್ಲ. ಆದರೆ ಆ ವಿಶೇಷತೆಯಲ್ಲಿ ಪ್ರಭಾವಿತರಾಗಬೇಡಿರಿ. ಅನಾಸಕ್ತರಾಗಿ ಇರಿ ಹಾಗೂ ತಂದೆಗೆ ಪ್ರಿಯರಾಗಿರಿ. ಯಾರು ತಂದೆಯಲ್ಲಿ ಪ್ರೀತಿಯುಳ್ಳವರಾಗಿದ್ದಾರೋ ಹಾಗೂ ತಂದೆಗೆ ಪ್ರಿಯರಾಗಿದ್ದಾರೋ ಅವರು ಸದಾ ಸುರಕ್ಷಿತರಾಗಿರುತ್ತಾರೆ. ತಿಳಿಯಿತೇ?

ಒಂದುವೇಳೆ ಸೇವೆಯನ್ನು ವೃದ್ಧಿ ಮಾಡುವುದಾದರೆ, (ವಾಸ್ತವವಾಗಿ ವೃದ್ಧಿ ಮಾಡಲೇಬೇಕು) ಸ್ಥಾಪನೆಯನ್ನೂ ಸಮೀಪಕ್ಕೆ ತರಬೇಕೋ ಇಲ್ಲವೊ. ಯಾರು ಸಮೀಪಕ್ಕೆ ತರುತ್ತಾರೆ? ತಂದೆಯು ತರುತ್ತಾರೇನು. ಎಲ್ಲರೂ ತರುವೆವು. ಸಾಥಿಗಳಿದ್ದಾರಲ್ಲವೇ. ಸಾಥಿಯಾಗಿರುವ ನೀವು ಮಕ್ಕಳಿಲ್ಲದೆ ಏಕಾಂಗಿಯಾಗಿ ತಂದೆಯೂ ಸಹ ಏನು ಮಾಡಲು ಸಾಧ್ಯವಾಗುವುದಿಲ್ಲ. ನೋಡಿರಿ ತಂದೆಯು ಒಂದುವೇಳೆ ಜ್ಞಾನವನ್ನು ತಿಳಿಸಿಕೊಡಬೇಕಾದರೂ ಸಹ ಶರೀರದ ಜೊತೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಶರೀರದ ಜೊತೆಯಿಲ್ಲದಿದ್ದರೆ ಮಾತನಾಡಲು ಸಾಧ್ಯವಿದೆಯೇ? ಅದು ಹಳೆಯ ಗಾಡಿಯೇ ಆಗಿರಬಹುದು ಅಥವಾ ಚೆನ್ನಾಗಿಯೇ ಇರಬಹುದು ಆದರೆ ಆಧಾರವನ್ನಂತೂ ತೆಗೆದುಕೊಳ್ಳಲೇಬೇಕಾಗುತ್ತದೆ. ಆಧಾರವಿಲ್ಲದೆ ಕಾರ್ಯವನ್ನು ಮಾಡಲು ಸಾಧ್ಯವಾಗುವುದಿಲ್ಲ. ಬ್ರಹ್ಮಾಬಾಬಾರವರ ಜೊತೆಯನ್ನು ತೆಗೆದುಕೊಂಡೆನಲ್ಲವೇ. ಆಗತಾನೇ ನೀವು ಬ್ರಾಹ್ಮಣರಾದಿರಿ, ಬ್ರಹ್ಮಾಕುಮಾರಿ ಎಂದು ಹೇಳಿಕೊಳ್ಳುತ್ತೀರಿ; ಶಿವಕುಮಾರಿ ಎಂದು ಹೇಳುವುದಿಲ್ಲ. ಏಕೆಂದರೆ ನಿರಾಕಾರ ತಂದೆಯೂ ಸಾಕಾರ ಬ್ರಹ್ಮಾರವರ ಆಧಾರ ತೆಗೆದುಕೊಳ್ಳಲೇಬೇಕಾಗುತ್ತದೆ. ಹೇಗೆ ಸಾಕಾರ ಬ್ರಹ್ಮಾರವರ ಆಧಾರ ತೆಗೆದುಕೊಂಡೆನೋ ಹಾಗೆಯೇ ಈಗಲೂ ಸಹ ಬ್ರಹ್ಮಾರವರ ಅವ್ಯಕ್ತ ಸೂಕ್ಷ್ಮದೇವತೆಯ ರೂಪದ ಆಧಾರವನ್ನು ತೆಗೆದುಕೊಳ್ಳದೆ ನಿಮ್ಮ ಪಾಲನೆಯನ್ನು ಮಾಡಲು ಸಾಧ್ಯವಾಗುತ್ತದೆಯೇ? ಸಾಕಾರದಲ್ಲಿ ತೆಗೆದುಕೊಂಡೆನು ಅಥವಾ ಆಕಾರದ ರೂಪದಲ್ಲಿ ತೆಗೆದುಕೊಂಡೆನು, ಆದರೆ ಆತ್ಮದ ಆಧಾರ ಜೊತೆಯನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ವಾಸ್ತವವಾಗಿ ಸರ್ವಶಕ್ತಿವಂತ ಈಶ್ವರನಾಗಿದ್ದೇನೆ (ಆಲ್ಮೈಟೀ ಅಥಾರಿಟಿ). ಮಾಂತ್ರಿಕನು ವಿನಾಶೀ ಯಕ್ಷಣಿಯನ್ನು ಒಂದು ಸೆಕೆಂಡಿನಲ್ಲಿ ಮಾಡಿ ತೋರಿಸಬಲ್ಲನು. ಆದ್ದರಿಂದ ಸರ್ವಶಕ್ತಿವಂತ ಈಶ್ವರನು ಏನು ಬೇಕಾದರೆ ಅದನ್ನು ಮಾಡಲು ಸಾಧ್ಯವಿಲ್ಲವೇನು? ಮಾಡಲು ಸಾಧ್ಯವಿದೆಯೇ? ಈಗಲೇ ವಿನಾಶವನ್ನು ಮಾಡಲು ಸಾಧ್ಯವಿದೆಯೇ? ಏಕಾಕಿಯಾಗಿ ಮಾಡಲು ಮಾಡಲು ಸಾಧ್ಯವಿದೆಯೇ, ಒಂಟಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಸರ್ವಶಕ್ತಿವಂತ ಈಶ್ವರನಾಗಿದ್ದರೂ ಸಹ ಸಾಥಿಗಳಾದ ನಿಮ್ಮ ಸಂಬಂಧದಲ್ಲಿ ಬಂಧಿಸಲ್ಪಟ್ಟಿದ್ದೇನೆ. ಆದ್ದರಿಂದ ನಿಮ್ಮೊಂದಿಗೆ ತಂದೆಯ ಪ್ರೀತಿಯು ಎಷ್ಟೊಂದು ಇದೆ. ಬೇಕಾದರೆ ಮಾಡಬಹುದು. ಆದರೆ ಮಾಡಬಾರದು, ಮಂತ್ರಗಾರಿಕೆಯ ದಂಡವನ್ನು ತಿರುಗಿಸಲು ಸಾಧ್ಯವಿಲ್ಲವೇನು? ಆದರೆ ರಾಜ್ಯಾಧಿಕಾರಿ ಯಾರು ಆಗುತ್ತಾರೆ? ತಂದೆಯ ಆಗುವೆನೇನು? ನೀವು ಆಗುವಿರಿ. ಸ್ಥಾಪನೆಯನ್ನೂ ಮಾಡಿಬಿಡಬಹುದು, ವಿನಾಶವನ್ನೂ ಮಾಡಿಬಿಡಬಹುದು ಆದರೆ ರಾಜ್ಯಭಾರವನ್ನು ಯಾರು ಮಾಡುವರು? ನೀವು ಇಲ್ಲದಿದ್ದರೆ ಕಾರ್ಯವು ನಡೆಯುವುದೇನು? ಆದ್ದರಿಂದ ತಂದೆಯು ನಿಮ್ಮೆಲ್ಲರನ್ನೂ ಕರ್ಮಾತೀತ ಮಾಡಲೇಬೇಕಾಗಿದೆ. ನೀವು ಕರ್ಮಾತೀತ ಆಗಲೇಬೇಕಲ್ಲವೇ. ಅಥವಾ ತಂದೆಯು ಬಲಾತ್ಕಾರದಿಂದ ಮಾಡಿಸಬೇಕೋ? ತಂದೆಯು ಮಾಡಿಸಬೇಕಾಗಿದೆ ಹಾಗೂ ನೀವೆಲ್ಲರೂ ಆಗಲೇಬೇಕಾಗಿದೆ. ಇದು ಮಧುರವಾದ ನಾಟಕವಾಗಿದೆ. ವಿಶ್ವನಾಟಕವು ಸೊಗಸಾಗಿದೆ ಎನಿಸುತ್ತದೆಯಲ್ಲವೇ? ಅಥವಾ ಒಮ್ಮೊಮ್ಮೆ ಇದೇನು ರಚನೆಯಾಗಿದೆಯೆಂದು ಬೇಸರಗೊಳ್ಳುತ್ತೀರೋ? ಇದು ಬದಲಾವಣೆಯರಾಗಬೇಕೆಂದು ಯೋಚಿಸುತ್ತೀರಾ? ಇದು ರಚನೆಯಾಗಿ ರಚಿಸಲ್ಪಟ್ಟಿರುವ ನಾಟಕವಾಗಿದೆ ಎಂದು ತಂದೆಯು ಹೇಳುತ್ತೇನೆ. ಇದು ಬದಲಾವಣೆಯಾಗುವುದು ಸಾಧ್ಯವಿಲ್ಲ. ಈ ವಿಶ್ವನಾಟಕದಲ್ಲಿ ನಿಮ್ಮ ಈ ಅಂತಿಮ ಜನ್ಮಕ್ಕೆ ಶಕ್ತಿಗಳಿವೆ. ನಾಟಕದಲ್ಲಿ ಈ ಶ್ರೇಷ್ಠ ಬ್ರಾಹ್ಮಣ ಜನ್ಮದಲ್ಲಿ ಅನೇಕ ಶಕ್ತಿಗಳು ದೊರೆತಿವೆ. ತಂದೆಯು ಎಲ್ (ಉಯಿಲು) ಮಾಡಿರುವುದರಿಂದ ವಿಲ್ಪವರ್ (ಮನೋಬಲ) ಇದೆ. ಹಾಗಾದರೆ ಏನು ನೆನಪಿಟ್ಟುಕೊಳ್ಳುವಿರಿ? ಯಾವ ಶಬ್ಬವನ್ನು ನೆನಪಿಟ್ಟುಕೊಳ್ಳುವಿರಿ. ಕರನ್ಕರಾವನ್ಹಾರ್ ಎಂಬುದನ್ನು ಪಕ್ಕಾ ನೆನಪಿಟ್ಟುಕೊಳ್ಳುವಿರೋ ಅಥವಾ ವಿಮಾನದಲ್ಲಿ ಹೋಗುತ್ತಾ ಹೋಗುತ್ತಾ ಮರೆತು ಬಿಡುತ್ತೀರೋ? ಮರೆಯಬೇಡಿರಿ.

ನಾಲ್ಕೂ ಕಡೆಯ ಸದಾ ಸೇವೆಯ ಅಕ್ಕರೆ ಉತ್ಸಾಹದಲ್ಲಿ ಇರುವ ಸೇವಾಧಾರೀ ಆತ್ಮರು, ಸದಾ ಸ್ವಪುರುಷಾರ್ಥ ಹಾಗೂ ಸೇವೆ ಎರಡರ ಬ್ಯಾಲೆನ್ಸ್ (ಸಮತೋಲನ) ಇಟ್ಟುಕೊಳ್ಳುವ ಆನಂದಪೂರ್ಣ ಆತ್ಮರು, ಸದಾ ವಿಸ್ವಾರ್ಥ ದಯಾಹೃದಯರಾಗಿ ಸರ್ವ ಆತ್ಮರ ಬಗ್ಗೆ ಸತ್ಯವಾದ ದಯೆಯನ್ನು ಮಾಡುವ ವಿಶೇಷ ಆತ್ಮರ, ಸದಾ ಒಂದು ಸೆಕೆಂಡಿನಲ್ಲಿ ತಮ್ಮನ್ನು ಕರ್ಮಬಂಧನ ಅಥವಾ ಅನೇಕ ರಾಯಲ್ ಬಂಧನಗಳಿಂದ ಮುಕ್ತರನ್ನಾಗಿ ಮಾಡಿಕೊಳ್ಳುವ ತೀವ್ರಪುರುಷಾರ್ಥಿ ಆತ್ಮರಿಗೆ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ.

ವರದಾನ:
ಆಜ್ಞಾಕಾರಿಯಾಗಿ ತಂದೆಯ ಸಹಾಯ ಅಥವಾ ಆಶೀರ್ವಾದದ ಅನುಭವ ಮಾಡುವಂತಹ ಸಫಲತಾಮೂರ್ತಿ ಭವ

ತಂದೆಯ ಆಜ್ಞೆಯಾಗಿದೆ “ನನ್ನೊಬ್ಬನನ್ನೇ ನೆನಪು ಮಾಡಿ”. ಒಬ್ಬ ತಂದೆಯೆ ಸಂಸಾರ ಆಗಿದ್ದಾರೆ ಆದ್ದರಿಂದ ಹೃದಯದಲ್ಲಿ ತಂದೆಯ ವಿನಹ ಬೇರೆ ಏನೂ ಸಮಾವೇಶವಾಗಿರಬಾರದು. ಒಂದೇ ಮತ, ಒಂದೇ ಬಲ, ಒಂದೇ ಭರವಸೆ...... ಎಲ್ಲಿ ಒಂದಿದೆ ಅಲ್ಲಿ ಎಲ್ಲಾ ಕಾರ್ಯದಲ್ಲಿ ಸಫಲತೆಯಿದೆ. ಅವರಿಗೆ ಯಾವುದೇ ಕಾರ್ಯ ಸಹ ಪರಿಸ್ಥಿತಿಯನ್ನು ಪಾರು ಮಾಡುವುದು ಸಹಜವಾಗಿದೆ. ಆಜ್ಞೆ ಪಾಲನೆ ಮಾಡುವಂತಹ ಮಕ್ಕಳಿಗೆ ತಂದೆಯ ಆಶೀರ್ವಾದ ಸಿಗುವುದು ಅದರಿಂದ ಕಷ್ಟವೂ ಸಹ ಸಹಜವಾಗಿಬಿಡುವುದು.

ಸ್ಲೋಗನ್:
ಹೊಸ ಬ್ರಾಹ್ಮಣ ಜೀವನದ ಸ್ಮೃತಿಯಲ್ಲಿದ್ದಾಗ ಯಾವುದೇ ಹಳೆಯ ಸಂಸ್ಕಾರ ಹೊರಬರಲು ಸಾಧ್ಯವಿಲ್ಲ.