06.01.19    Avyakt Bapdada     Kannada Murli     08.04.84     Om Shanti     Madhuban


ಸಂಗಮಯುಗದಲ್ಲಿ ಪ್ರಾಪ್ತಿಯಾಗಿರುವ ಅಧಿಕಾರಗಳಿಂದ ವಿಶ್ವರಾಜ್ಯಾಧಿಕಾರಿ


ಬಾಪ್ದಾದಾರವರು ಇಂದು ಸ್ವರಾಜ್ಯ-ಅಧಿಕಾರಿ ಶ್ರೇಷ್ಠಾತ್ಮರುಗಳ ದಿವ್ಯ ಸಭೆಯನ್ನು ನೋಡುತ್ತಿದ್ದಾರೆ. ವಿಶ್ವ ರಾಜ್ಯ ಸಭೆ ಮತ್ತು ಸ್ವರಾಜ್ಯವೆರಡರ ಸಭೆಯ ಅಧಿಕಾರಿಗಳಾದ ತಾವು ಶ್ರೇಷ್ಠಾತ್ಮರೇ ಆಗುತ್ತೀರಿ. ಸ್ವರಾಜ್ಯ ಅಧಿಕಾರಿಗಳೇ ವಿಶ್ವ ರಾಜ್ಯ ಅಧಿಕಾರಿಯಾಗುವರು. ಈ ಡಬಲ್ ನಶೆಯು ಸದಾಕಾಲವೂ ಇರುತ್ತದೆಯೇ? ತಂದೆಯ ಮಗುವಾಗುವುದು ಅರ್ಥಾತ್ ಅನೇಕ ಅಧಿಕಾರಗಳನ್ನು ಪ್ರಾಪ್ತಿ ಮಾಡಿಕೊಳ್ಳುವುದು. ಎಷ್ಟೊಂದು ಪ್ರಕಾರದ ಅಧಿಕಾರಗಳನ್ನು ಪ್ರಾಪ್ತಿ ಮಾಡಿಕೊಂಡಿದ್ದೀರಿ, ಗೊತ್ತಿದೆಯೇ? ಅಧಿಕಾರಗಳ ಮಾಲೆಯನ್ನು ನೆನಪು ಮಾಡಿಕೊಳ್ಳಿರಿ. ಮೊದಲ ಅಧಿಕಾರ - ಪರಮಾತ್ಮನ ಮಗುವಾಗುವುದು ಅರ್ಥಾತ್ ಸರ್ವಶ್ರೇಷ್ಠ ಮಾನ್ಯತೆಯುಳ್ಳ ಪೂಜ್ಯನೀಯ ಆತ್ಮರಾಗುವ ಅಧಿಕಾರವನ್ನು ಪಡೆದಿರುವುದು. ತಂದೆಯ ಮಕ್ಕಳಾಗದೆಯೇ ಪೂಜ್ಯನೀಯ ಆತ್ಮನಾಗುವ ಅಧಿಕಾರವು ಪ್ರಾಪ್ತಿಯಾಗಲು ಸಾಧ್ಯವಿಲ್ಲ. ಅಂದಮೇಲೆ ಮೊದಲ ಅಧಿಕಾರ- ಪೂಜ್ಯನೀಯ ಆತ್ಮರಾಗುವುದು. ಎರಡನೆಯ ಅಧಿಕಾರ - ಜ್ಞಾನದ ಖಜಾನೆಗಳ ಮಾಲೀಕರಾದಿರಿ ಅರ್ಥಾತ್ ಅಧಿಕಾರಿಯಾದಿರಿ. ಮೂರನೆಯ ಅಧಿಕಾರ - ಸರ್ವಶಕ್ತಿಗಳ ಪ್ರಾಪ್ತಿಯ ಅಧಿಕಾರಿಯಾದಿರಿ. ನಾಲ್ಕನೆಯ ಅಧಿಕಾರ ಸರ್ವ ಕರ್ಮೇಂದ್ರಿಯಗಳ ವಿಜಯಿ, ಸ್ವರಾಜ್ಯ ಅಧಿಕಾರಿಯಾದಿರಿ. ಈ ಸರ್ವ ಅಧಿಕಾರಗಳ ಮೂಲಕ ಮಾಯಾಜೀತರಿಂದ ಜಗಜ್ಜೀತ, ವಿಶ್ವರಾಜ್ಯಾಧಿಕಾರಿಯಾಗುತ್ತೀರಿ. ಅಂದಮೇಲೆ ತಮ್ಮ ಈ ಸರ್ವಾಧಿಕಾರಗಳನ್ನು ಸದಾಕಾಲವೂ ಸ್ಮೃತಿಯಲ್ಲಿಟ್ಟುಕೊಳ್ಳುತ್ತಾ ಸಮರ್ಥ ಆತ್ಮರಾಗಿ ಬಿಡುತ್ತೀರಿ. ಹೀಗೆ ಸಮರ್ಥರಾಗಿದ್ದೀರಲ್ಲವೆ.

ಸ್ವರಾಜ್ಯ ಅಥವ ವಿಶ್ವ ರಾಜ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ವಿಶೇಷವಾಗಿ 3 ಮಾತುಗಳ ಧಾರಣೆಯ ಮೂಲಕವೇ ಸಫಲತೆಯು ಪ್ರಾಪ್ತಿಯಾಗುತ್ತದೆ. ಯಾವುದೇ ಶ್ರೇಷ್ಠ ಕಾರ್ಯದ ಸಫಲತೆಗೆ ಆಧಾರವು - ತ್ಯಾಗ, ತಪಸ್ಸು ಮತ್ತು ಸೇವೆ ಆಗಿದೆ. ಈ ಮೂರು ಮಾತುಗಳ ಆಧಾರದಿಂದ ಸಫಲತೆಯಾಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆಯೇ ಉತ್ಪನ್ನವಾಗಲು ಸಾಧ್ಯವಿಲ್ಲ. ಎಲ್ಲಿ ಮೂರು ಮಾತುಗಳ ಧಾರಣೆಯಿದೆ, ಅಲ್ಲಿ ಸೆಕೆಂಡಿನಲ್ಲಿನ ಸಫಲತೆಯು ಇದ್ದೇ ಇರುತ್ತದೆ. ಸಫಲತೆಯಾಗಿಯೇ ಇರುತ್ತದೆ. ತ್ಯಾಗವು ಯಾವ ಮಾತಿನಲ್ಲಿ? ಕೇವಲ ಒಂದು ಮಾತಿನ ತ್ಯಾಗವು ಸರ್ವ ತ್ಯಾಗಳನ್ನು ಸಹಜ ಮತ್ತು ಸ್ವತಹವಾಗಿಯೇ ಮಾಡಿಸುತ್ತದೆ. ಆ ಒಂದು ತ್ಯಾಗವಾಗಿದೆ - ದೇಹಭಾನದ ತ್ಯಾಗ, ಅದು ಅಲ್ಪಕಾಲದ ನಾನೆನ್ನುವುದರ ತ್ಯಾಗವನ್ನು ಸಹಜವಾಗಿ ಮಾಡಿಸಿ ಬಿಡುತ್ತದೆ. ಈ ಅಲ್ಪಕಾಲದ ನಾನೆನ್ನುವುದು ತಪಸ್ಸು ಮತ್ತು ಸೇವೆಯಿಂದ ವಂಚಿತರನ್ನಾಗಿ ಮಾಡಿಸಿ ಬಿಡುತ್ತದೆ. ಎಲ್ಲಿ ಅಲ್ಪಕಾಲದ ನಾನು ಎನ್ನುವುದಿದೆ, ಅಲ್ಲಿ ತ್ಯಾಗ ತಪಸ್ಸು ಮತ್ತು ಸೇವೆಯಾಗಲು ಸಾಧ್ಯವಿಲ್ಲ. ಅಲ್ಪಕಾಲದ ನಾನು, ನನ್ನದು, ಈ ಒಂದು ಮಾತಿನ ತ್ಯಾಗವಿರಬೇಕು. ನಾನು ಮತ್ತು ನನ್ನದು ಸಮಾಪ್ತಿಯಾಯಿತೆಂದರೆ ಇನ್ನೇನು ಉಳಿಯಿತು? ಬೇಹದ್ದಿನಲ್ಲಿರುವುದು. ನಾನು ಒಂದು ಶುದ್ಧಾತ್ಮನಾಗಿದ್ದೇನೆ ಮತ್ತು ನನ್ನವರಂತು ಒಬ್ಬರು ತಂದೆಯನ್ನು ಬಿಟ್ಟು ಮತ್ತ್ಯಾರೂ ಇಲ್ಲ. ಅಂದಮೇಲೆ ಎಲ್ಲಿ ಬೇಹದ್ದಿನ ಸರ್ವಶಕ್ತಿವಂತನಿದ್ದಾರೆ, ಅಲ್ಲಿ ಸಫಲತೆಯು ಸದಾ ಜೊತೆಯಿರುತ್ತದೆ. ಇದೇ ತ್ಯಾಗದ ಮೂಲಕ ತಪಸ್ಸು ಸಹ ಸಿದ್ಧವಾಗುತ್ತದೆಯಲ್ಲವೆ. ತಪಸ್ಸು ಎಂದರೆ ಏನಾಗಿದೆ? ನಾನು ಒಬ್ಬರವನಾಗಿದ್ದೇನೆ. ಒಬ್ಬರ ಶ್ರೇಷ್ಠ ಮತದಲ್ಲಿಯೇ ನಡೆಯುವವನಾಗಿದ್ದೇನೆ. ಇದರಿಂದಲೇ ಏಕರಸ ಸ್ಥಿತಿಯೂ ಸಹ ಸ್ವತಹವಾಗಿ ಆಗಿ ಬಿಡುತ್ತದೆ. ಸದಾ ಒಬ್ಬ ಪರಮಾತ್ಮನ ಸ್ಮೃತಿ - ಇದೇ ತಪಸ್ಸಾಗಿದೆ. ಏಕರಸ ಸ್ಥಿತಿಯೇ ಶ್ರೇಷ್ಠಾಸನವಾಗಿದೆ. ಕಮಲಪುಷ್ಪ ಸಮಾನ ಸ್ಥಿತಿ - ಇದೇ ತಪಸ್ಸಿನ ಆಸನವಾಗಿದೆ. ತ್ಯಾಗದಿಂದ ತಪಸ್ಸು ಸಹ ಸ್ವತಹವಾಗಿಯೇ ಸಿದ್ಧವಾಗಿ ಬಿಡುತ್ತದೆ. ಯಾವಾಗ ತ್ಯಾಗ ಮತ್ತು ತಪಸ್ವಿ ಸ್ವರೂಪದವರಾಗಿ ಬಿಡುತ್ತೀರಿ, ಆಗ ಏನು ಮಾಡುತ್ತೀರಿ? ನನ್ನದೆನ್ನುವುದರ ತ್ಯಾಗ ಅಥವಾ ನಾನು ಎನ್ನುವುದು ಸಮಾಪ್ತಿಯಾಗಿ ಬಿಟ್ಟಿತು. ಒಬ್ಬರ ಲಗನ್ನಿನಲ್ಲಿ ಮಗ್ನ ತಪಸ್ವಿಯಾಗಿ ಬಿಟ್ಟಿರೆಂದರೆ, ಸೇವೆಯಿಲ್ಲದಿರಲು ಸಾಧ್ಯವಿಲ್ಲ. ಈ ಅಲ್ಪಕಾಲದ ನಾನು ಮತ್ತು ನನ್ನದು ಸತ್ಯ ಸೇವೆಯನ್ನು ಮಾಡಲು ಬಿಡುವುದಿಲ್ಲ. ತ್ಯಾಗಿ ಮತ್ತು ತಪಸ್ವಿಮೂರ್ತಿಯು ಸತ್ಯ ಸೇವಾಧಾರಿಯಾಗಿದ್ದಾರೆ. ನಾನು ಇದನ್ನು ಮಾಡಿದೆನು, ನಾನು ಹೀಗಿದ್ದೇನೆ, ಈ ದೇಹಭಾನವು ಸ್ವಲ್ಪವೇನಾದರೂ ಬಂದಿತೆಂದರೆ ಸೇವಾಧಾರಿಗೆ ಬದಲು ಏನಾಗಿ ಬಿಡುತ್ತೀರಿ? ಕೇವಲ ಹೆಸರಿಗೆ ಸೇವಾಧಾರಿಯಾಗಿ ಬಿಡುತ್ತೀರಿ. ಸತ್ಯ ಸೇವಾಧಾರಿಯಾಗುವುದಿಲ್ಲ. ಸತ್ಯ ಸೇವೆಯ ಆಧಾರವಾಯಿತು - ತ್ಯಾಗ ಮತ್ತು ತಪಸ್ಸು. ಇಂತಹ ತ್ಯಾಗಿ-ತಪಸ್ವಿ ಸೇವಾಧಾರಿಯು ಸದಾ ಸಫಲತಾ ಸ್ವರೂಪನಾಗಿರುತ್ತಾರೆ. ವಿಜಯ, ಸಫಲತೆಯು ಅವರ ಕೊರಳಿನ ಮಾಲೆಯಾಗಿ ಬಿಡುತ್ತದೆ. ಜನ್ಮಸಿದ್ಧ ಅಧಿಕಾರಿಯಾಗಿ ಬಿಡುತ್ತಾರೆ. ಅಂದಮೇಲೆ ವಿಶ್ವದ ಸರ್ವ ಮಕ್ಕಳಿಗೆ ಬಾಪ್ದಾದಾರವರು ಇದೇ ಶ್ರೇಷ್ಠ ಶಿಕ್ಷಣವನ್ನು ಕೊಡುತ್ತಾರೆ - ತ್ಯಾಗಿಯಾಗಿರಿ, ತಪಸ್ವಿಯಾಗಿರಿ, ಸತ್ಯ ಸೇವಾಧಾರಿಯಾಗಿರಿ.

ಇಂದಿನ ಪ್ರಪಂಚವು ಮೃತ್ಯುವಿನ ಭಯದ ಪ್ರಪಂಚವಾಗಿದೆ. (ಬಿರುಗಾಳಿಯು ಬಂದಿತು) ಪ್ರಕೃತಿಯ ಏರುಪೇರಿನಲ್ಲಿ ತಾವಂತು ಅಚಲರಾಗಿದ್ದೀರಲ್ಲವೇ! ತಮೋಗುಣಿ ಪ್ರಕೃತಿಯ ಕೆಲಸವಾಗಿದೆ-ಏರುಪೇರು ಮಾಡುವುದು ಮತ್ತು ತಾವು ಅಚಲ ಆತ್ಮರ ಕಾರ್ಯವಾಗಿದೆ- ಪ್ರಕೃತಿಯನ್ನೂ ಪರಿವರ್ತನೆ ಮಾಡುವುದು. ಹೊಸದೇನಲ್ಲ. ಇದೆಲ್ಲವೂ ಆಗಲೇಬೇಕು. ಏರುಪೇರಿನಲ್ಲಿಯೇ ಅಚಲರಾಗುವಿರಿ. ಅಂದಮೇಲೆ ಸ್ವರಾಜ್ಯ ಅಧಿಕಾರಿಗಳ ಸಭೆಯ ನಿವಾಸಿಗಳಾದ ಶ್ರೇಷ್ಠಾತ್ಮರು ತಿಳಿದುಕೊಂಡಿರೇ! ಇದೂ ಸಹ ರಾಜ್ಯ ಸಭೆಯಾಗಿದೆಯಲ್ಲವೆ. ರಾಜಯೋಗಿ ಅರ್ಥಾತ್ ಸ್ವಯಂಗೆ ರಾಜ. ರಾಜಯೋಗಿ ಸಭೆ ಅರ್ಥಾತ್ ಸ್ವರಾಜ್ಯದ ಸಭೆ. ತಾವೆಲ್ಲರೂ ಸಹ ರಾಜನೇತರಾಗಿದ್ದೀರಲ್ಲವೆ. ಅವರುಗಳು ದೇಶದ ರಾಜನೇತರು ಮತ್ತು ತಾವು ಸ್ವರಾಜ್ಯ ನೇತರು. ನೇತ ಅರ್ಥಾತ್ ನೀತಿಯನುಸಾರ ನಡೆಯುವವರು. ಅಂದಮೇಲೆ ತಾವು ಧರ್ಮ ನೀತಿ, ಸ್ವರಾಜ್ಯ ನೀತಿಗಳನುಸಾರವಾಗಿ ನಡೆಯುವಂತಹ ಸ್ವರಾಜ್ಯ ನೇತರಾಗಿದ್ದೀರಿ. ಯಥಾರ್ಥ ಶ್ರೇಷ್ಠ ನೀತಿ ಅರ್ಥಾತ್ ಶ್ರೀಮತ. ಶ್ರೀಮತವೇ ಯಥಾರ್ಥವಾದ ನೀತಿಯಾಗಿದೆ. ಈ ನೀತಿಯಲ್ಲಿ ನಡೆಯುವವರು ಸಫಲನೇತರಾಗಿದ್ದಾರೆ.

ಬಾಪ್ದಾದಾರವರು ದೇಶದ ರಾಜಕೀಯ ವರ್ಗದವರಿಗೆ ಶುಭಾಷಯಗಳನ್ನು ಕೊಡುತ್ತಾರೆ. ಏಕೆಂದರೆ ಪರಿಶ್ರಮವನ್ನಂತು ಪಡುತ್ತಾರಲ್ಲವೆ. ಭಲೆ ವಿಭಿನ್ನವಾಗಿದ್ದಾರೆ. ಆದರೂ ದೇಶದ ಬಗ್ಗೆ ಲಗನ್ ಇದೆ. ನಮ್ಮ ರಾಜ್ಯವು ಅಮರವಾಗಿರಲಿ - ಈ ಲಗನ್ನಿಂದ ಪರಿಶ್ರಮವನ್ನಂತು ಪಡುತ್ತಾರಲ್ಲವೆ. ನಮ್ಮ ಭಾರತವು ಶ್ರೇಷ್ಠವಾಗಿರಲಿ ಎನ್ನುವ ಲಗನ್ ಸ್ವತಹವಾಗಿಯೇ ಪರಿಶ್ರಮ ತೆಗೆದುಕೊಳ್ಳುತ್ತದೆ. ಈಗ ಸಮಯವು ಬರುತ್ತದೆ, ಯಾವಾಗ ರಾಜ್ಯಶಕ್ತಿ ಮತ್ತು ಧರ್ಮಶಕ್ತಿಯೆರಡೂ ಜೊತೆಯಿರುತ್ತದೆ, ಆಗಲೇ ವಿಶ್ವದಲ್ಲಿ ಭಾರತದ ಜಯಜಯಕಾರವಾಗುತ್ತದೆ. ಭಾರತವೇ ಲೈಟ್ಹೌಸ್ ಆಗುತ್ತದೆ. ಭಾರತದ ಕಡೆ ಎಲ್ಲರ ದೃಷ್ಟಿಯು ಹರಿಯುತ್ತದೆ. ಭಾರತವನ್ನೇ ವಿಶ್ವ ಪ್ರೇರಣೆಯ ಪುಂಜವೆಂದು ಅನುಭವ ಮಾಡುತ್ತಾರೆ. ಭಾರತವು ಅವಿನಾಶಿ ಖಂಡವಾಗಿದೆ. ಅವಿನಾಶಿ ತಂದೆಯ ಅವತರಣಾ ಭೂಮಿಯಾಗಿದೆ. ಆದ್ದರಿಂದ ಭಾರತದ ಮಹತ್ವವು ಸದಾ ಮಹಾನ್ ಆಗಿರುತ್ತದೆ. ಒಳ್ಳೆಯದು.

ಎಲ್ಲರೂ ತಮ್ಮ ಮಧುರ ಮನೆಗೆ ತಲುಪಿದ್ದೀರಿ. ಬಾಪ್ದಾದಾರವರು ಎಲ್ಲಾ ಮಕ್ಕಳೂ ಬಂದಿರುವುದಕ್ಕಾಗಿ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಭಲೆ ಬಂದಿದ್ದೀರಿ. ತಂದೆಯ ಮನೆಯ ಶೃಂಗಾರವು ಭಲೆ ಬಂದಿದ್ದೀರಿ. ಒಳ್ಳೆಯದು.

ಎಲ್ಲಾ ಸಫಲತೆಯ ನಕ್ಷತ್ರಗಳಿಗೆ, ಸದಾ ಏಕರಸ ಸ್ಥಿತಿಯ ಆಸನದಲ್ಲಿ ಕುಳಿತಿರುವ ತಪಸ್ವಿ ಮಕ್ಕಳಿಗೆ, ಸದಾ ಒಬ್ಬ ಪರಮಾತ್ಮನ ಶ್ರೇಷ್ಠ ನೆನಪಿನಲ್ಲಿರುವ ಮಹಾನ್ ಆತ್ಮರಿಗೆ, ಶ್ರೇಷ್ಠ ಭಾವನೆ ಶ್ರೇಷ್ಠ ಕಾಮನೆಯಿರುವ ವಿಶ್ವ ಕಲ್ಯಾಣಕಾರಿ ಸೇವಾಧಾರಿ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಅವ್ಯಕ್ತ ಬಾಪ್ದಾದಾರವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯವರೊಂದಿಗೆ ವಾರ್ತಾಲಾಪ

ತಂದೆಯ ಮನೆಯಲ್ಲಿ ಅಥವಾ ತಮ್ಮ ಮನೆಯಲ್ಲಿ ಭಲೆ ಬಂದಿದ್ದೀರಿ. ತಂದೆಯವರಿಗೆ ಗೊತ್ತಿದೆ- ಸೇವೆಯಲ್ಲಿ ಲಗನ್ ಚೆನ್ನಾಗಿದೆ. ಕೋಟಿಯಲ್ಲಿ ಕೆಲವರು ಇಂತಹ ಸೇವಾಧಾರಿಯಿದ್ದಾರೆ, ಆದ್ದರಿಂದ ಸೇವೆಯ ಪರಿಶ್ರಮದಲ್ಲಿ ಆಂತರಿಕ ಖುಷಿಯ ಪ್ರತ್ಯಕ್ಷಫಲದ ರೂಪದಲ್ಲಿ ಸದಾಕಾಲವೂ ಸಿಗುತ್ತಿರುತ್ತದೆ. ಈ ಪರಿಶ್ರಮವು ಸಫಲತೆಗೆ ಆಧಾರವಾಗಿದೆ. ಒಂದುವೇಳೆ ನಿಮಿತ್ತವಾಗಿರುವ ಸೇವಾಧಾರಿಗಳೆಲ್ಲರೂ ಪರಿಶ್ರಮವನ್ನು ತೆಗೆದುಕೊಂಡರೆ, ಭಾರತದ ರಾಜ್ಯವು ಸದಾಕಾಲವೇ ಸಫಲತೆಯನ್ನು ಪಡೆಯುತ್ತಿರುತ್ತದೆ. ಸಫಲತೆಯಂತು ಸಿಗಲೇಬೇಕು. ಇದಂತು ನಿಶ್ಚಿತವಿದೆ ಆದರೆ ಯಾರು ನಿಮಿತ್ತರಾಗುತ್ತಾರೆ, ನಿಮಿತ್ತರಾಗುವವರಿಗೆ ಸೇವೆಯ ಪ್ರತ್ಯಕ್ಷಫಲ ಮತ್ತು ಭವಿಷ್ಯ ಫಲವು ಪ್ರಾಪ್ತಿಯಾಗುತ್ತದೆ. ಅಂದಮೇಲೆ ಸೇವೆಗೆ ನಿಮಿತ್ತರಾಗಿದ್ದೀರಿ. ನಿಮಿತ್ತ ಭಾವವನ್ನಿಟ್ಟುಕೊಂಡು ಸದಾ ಸೇವೆಯಲ್ಲಿ ಮುಂದುವರೆಯುತ್ತಾ ಇರಿ. ಎಲ್ಲಿ ನಿಮಿತ್ತ ಭಾವವಿದೆ, ನಾನೆನ್ನುವ ಭಾವವಿಲ್ಲ, ಅಲ್ಲಿ ಸದಾ ಉನ್ನತಿಯನ್ನು ಪಡೆಯುತ್ತಿರುತ್ತೀರಿ. ಈ ನಿಮಿತ್ತ ಭಾವ ಶುಭ ಭಾವನೆ, ಶುಭ ಕಾಮನೆಯು ಸ್ವತಹವಾಗಿ ಜಾಗೃತಗೊಳಿಸುತ್ತದೆ. ವರ್ತಮಾನದಲ್ಲಿ ಶುಭಭಾವನೆ, ಶುಭಕಾಮನೆಯಿಲ್ಲ. ಆದ್ದರಿಂದ ನಿಮಿತ್ತಭಾವಕ್ಕೆ ಬದಲಾಗಿ ನಾನೆನ್ನುವುದು ಬಂದು ಬಿಟ್ಟಿದೆ. ಒಂದುವೇಳೆ ನಾನು ನಿಮಿತ್ತನೆಂದು ತಿಳಿದುಕೊಂಡರೆ ಮಾಡಿಸುವವರು ತಂದೆಯೆಂದು ತಿಳಿದುಕೊಳ್ಳಲಿ. ಮಾಡಿಮಾಡಿಸುವ ಸ್ವಾಮಿಯು ಸದಾ ಶ್ರೇಷ್ಠವಾಗಿರುವುದನ್ನೇ ಮಾಡಿಸುತ್ತಾರೆ. ನಿಮಿತ್ತವಾಗುವ ಬದಲು ರಾಜ್ಯದ ಪ್ರವೃತ್ತಿಯ ಗೃಹಸ್ಥಿಯಾಗಿ ಬಿಟ್ಟಿದ್ದಾರೆ, ಗೃಹಸ್ಥಿಯಲ್ಲಿ ಹೊರೆಯಾಗುತ್ತದೆ ಮತ್ತು ನಿಮಿತ್ತರಾಗಿರುವುದರಲ್ಲಿ ಹಗುರತೆಯಿರುತ್ತದೆ. ಎಲ್ಲಿಯವರೆಗೆ ಹಗುರವಾಗುವುದಿಲ್ಲ, ಅದರಿಂದ ನಿರ್ಣಯ ಶಕ್ತಿಯೂ ಇಲ್ಲ. ನಿಮಿತ್ತರಾಗಿದ್ದರೆ ಹಗುರತೆಯಿರುತ್ತದೆ, ನಿರ್ಣಯ ಶಕ್ತಿಯು ಶ್ರೇಷ್ಠವಾಗಿರುತ್ತದೆ. ಆದ್ದರಿಂದ ಸದಾ ನಿಮಿತ್ತರಾಗಿದ್ದೀರಿ. ನಿಮಿತ್ತನಾಗಿದ್ದೇನೆ - ಈ ಭಾವನೆಯು ಫಲದಾಯಕವಾಗಿದೆ. ಭಾವನೆಯ ಫಲವು ಸಿಗುತ್ತದೆ. ಈ ನಿಮಿತ್ತತನದ ಭಾವನೆಯು ಸದಾ ಶ್ರೇಷ್ಠ ಫಲವನ್ನು ಕೊಡುತ್ತಿರುತ್ತದೆ. ಅಂದಮೇಲೆ ಜೊತೆಗಾರರೆಲ್ಲರಿಗೂ ಈ ಸ್ಮೃತಿಯನ್ನು ತರಿಸಿರಿ - ಏನೆಂದರೆ, ನಿಮಿತ್ತಭಾವ, ನಿಮಿತ್ತತನದ ಭಾವವನ್ನಿಡಿ. ಅದರಿಂದ ಈ ರಾಜನೀತಿಯು ವಿಶ್ವಕ್ಕಾಗಿ ಶ್ರೇಷ್ಠ ನೀತಿಯಾಗಿ ಬಿಡುತ್ತದೆ. ಇಡೀ ವಿಶ್ವವು ಈ ಭಾರತದ ರಾಜನೀತಿಯನ್ನು ಕಾಪಿ ಮಾಡುತ್ತದೆ. ಆದರೆ ಇದರ ಆಧಾರವು ನಿಮಿತ್ತತನ ಅರ್ಥಾತ್ ನಿಮಿತ್ತಭಾವ.

ಕುಮಾರರೊಂದಿಗೆ:- ಕುಮಾರ ಅರ್ಥಾತ್ ಸರ್ವ ಶಕ್ತಿಗಳನ್ನು, ಸರ್ವ ಖಜಾನೆಗಳನ್ನು ಜಮಾ ಮಾಡಿಕೊಂಡು, ಅನ್ಯರನ್ನೂ ಶಕ್ತಿಶಾಲಿಗೊಳಿಸುವ ಸೇವೆಯನ್ನು ಮಾಡುವವರು. ಸದಾ ಇದೇ ಸೇವೆಯಲ್ಲಿ ಬ್ಯುಸಿಯಾಗಿರುತ್ತೀರಲ್ಲವೆ. ಬ್ಯುಸಿಯಾಗಿರುತ್ತೀರೆಂದರೆ ಉನ್ನತಿಯಾಗುತ್ತಿರುತ್ತದೆ. ಒಂದುವೇಳೆ ಸ್ವಲ್ಪವೇನಾದರೂ ಫ್ರೀ ಆಗುತ್ತೀರೆಂದರೆ ವ್ಯರ್ಥ ವಿಚಾರ ನಡೆಯುತ್ತದೆ. ಸಮರ್ಥರಾಗಿರುವುದಕ್ಕಾಗಿ ಬ್ಯುಸಿಯಾಗಿ ಇರಬೇಕು. ತಮ್ಮ ದಿನಚರಿಯನ್ನು ತಯಾರು ಮಾಡಿಕೊಳ್ಳಿರಿ. ಹೇಗೆ ಶರೀರದ ದಿನಚರಿಯನ್ನು ಮಾಡುತ್ತೀರಿ ಹಾಗೆಯೇ ಬುದ್ಧಿಗಾಗಿಯೂ ದಿನಚರಿಯನ್ನು ಮಾಡಿರಿ. ಬುದ್ಧಿಯಿಂದ ಬ್ಯುಸಿಯಾಗಿರುವ ಯೋಜನೆಯನ್ನು ಮಾಡಿಕೊಳ್ಳಿರಿ. ಬ್ಯುಸಿಯಾಗಿರುವುದರಿಂದ ಸದಾ ಉನ್ನತಿಯನ್ನು ಪಡೆಯುತ್ತಿರುತ್ತೀರಿ. ವರ್ತಮಾನ ಸಮಯದನುಸಾರವಾಗಿ ಕುಮಾರ ಜೀವನದಲ್ಲಿ ಶ್ರೇಷ್ಠರಾಗುವುದು, ಬಹಳ ಶ್ರೇಷ್ಠ ಭಾಗ್ಯವಾಗಿದೆ. ನಾವು ಶ್ರೇಷ್ಠ ಭಾಗ್ಯಶಾಲಿ ಆತ್ಮರಾಗಿದ್ದೇವೆ - ಇದನ್ನೇ ಸದಾ ಯೋಚಿಸಿರಿ. ನೆನಪು ಮತ್ತು ಸೇವೆಯ ಯೋಜನೆಯೇ ಸದಾ ನಡೆಯುತ್ತಿರಲಿ. ಬ್ಯಾಲೆನ್ಸ್ ಇಡುವವರಿಗೆ ಸದಾ ಬ್ಲೆಸ್ಸಿಂಗ್ ಸಿಗುತ್ತಿರುತ್ತದೆ. ಒಳ್ಳೆಯದು.

ಆಯ್ಕೆ ಮಾಡಿಕೊಂಡಿರುವ ವಿಶೇಷ ಅವ್ಯಕ್ತ ಮಹಾವಾಕ್ಯಗಳು :

ಪರಮಾತ್ಮಪ್ರೀತಿಯಲ್ಲಿ ಸದಾ ಲವಲೀನರಾಗಿರಿ

ಪರಮಾತ್ಮ ಪ್ರೀತಿಯು ಆನಂದಮಯವಾದ ಉಯ್ಯಾಲೆಯಾಗಿದೆ, ಈ ಸುಖದಾಯಿ ಉಯ್ಯಾಲೆಯಲ್ಲಿ ತೂಗುತ್ತಾ ಸದಾ ಪರಮಾತ್ಮ ಪ್ರೀತಿಯಲ್ಲಿ ಲವಲೀನರಾಗಿ ಇರುತ್ತೀರೆಂದರೆ, ಎಂದಿಗೂ ಯಾವುದೇ ಪರಿಸ್ಥಿತಿ ಅಥವಾ ಮಾಯೆಯ ಏರುಪೇರಿನಲ್ಲಿ ಬರಲು ಸಾಧ್ಯವಿಲ್ಲ. ಪರಮಾತ್ಮ-ಪ್ರೀತಿಯು ಅಕೂಟವಾಗಿದೆ, ಅಟಲವಾಗಿದೆ, ಇಷ್ಟೊಂದಿದೆ ಅದು ಸರ್ವರಿಗೂ ಪ್ರಾಪ್ತಿಯಾಗಲು ಸಾಧ್ಯವಾಗುತ್ತದೆ. ಆದರೆ ಪರಮಾತ್ಮ ಪ್ರೀತಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ವಿಧಿಯಾಗಿದೆ - ಭಿನ್ನರಾಗಿ ಇರುವುದು. ಯಾರೆಷ್ಟು ಭಿನ್ನವಾಗಿರುತ್ತಾರೆಯೋ ಅವರಷ್ಟೇ ಪರಮಾತ್ಮ ಪ್ರೀತಿಯ ಅಧಿಕಾರಿಯಾಗಿದ್ದಾರೆ. ಪರಮಾತ್ಮ ಪ್ರೀತಿಯಲ್ಲಿ ಸಮಾವೇಶವಾಗಿರುವ ಆತ್ಮರೆಂದಿಗೂ ಸಹ ಅಲ್ಪಕಾಲದ ಪ್ರಭಾವಗಳಲ್ಲಿ ಪ್ರಭಾವಿತರಾಗಲು ಸಾಧ್ಯವಿಲ್ಲ, ಸದಾ ಬೇಹದ್ದಿನ ಪ್ರಾಪ್ತಿಗಳಲ್ಲಿ ಮಗ್ನರಾಗಿರುತ್ತಾರೆ. ಅವರಿಂದ ಸದಾಕಾಲವೂ ಆತ್ಮೀಯತೆಯ ಸುಗಂಧವೇ ಬರುತ್ತದೆ. ಪ್ರೀತಿಯ ಸಂಕೇತವಾಗಿದೆ - ಯಾರೊಂದಿಗೆ ಪ್ರೀತಿಯಿರುತ್ತದೆ, ಅದರ ಮೇಲೆ ಅರ್ಪಣೆ ಮಾಡಿ ಬಿಡುತ್ತಾರೆ. ತಂದೆಗೆ ಮಕ್ಕಳೊಂದಿಗೆ ಇಷ್ಟೂ ಪ್ರೀತಿಯಿದೆ, ಅದರಿಂದ ಪ್ರತಿನಿತ್ಯವೂ ಪ್ರೀತಿಯ ಪ್ರತ್ಯುತ್ತರವನ್ನು ಕೊಡುವುದಕ್ಕಾಗಿ ಇಷ್ಟೊಂದು ದೊಡ್ಡ ಪತ್ರವನ್ನು ಬರೆಯುತ್ತಾರೆ. ನೆನಪು-ಪ್ರೀತಿಯನ್ನು ಕೊಡುತ್ತಾರೆ ಮತ್ತು ಜೊತೆಗಾರನಾಗಿ ಸದಾ ಜೊತೆಯನ್ನು ನಿಭಾಯಿಸುತ್ತಾರೆ. ಅಂದಮೇಲೆ ಈ ಪ್ರೀತಿಯಲ್ಲಿ ತಮ್ಮೆಲ್ಲಾ ಬಲಹೀನತೆಗಳನ್ನು ಅರ್ಪಣೆ ಮಾಡಿಬಿಡಿ. ಮಕ್ಕಳೊಂದಿಗೆ ತಂದೆಗೆ ಪ್ರೀತಿಯಿದೆ, ಆದ್ದರಿಂದ ಸದಾ ಹೇಳುತ್ತಾರೆ - ಮಕ್ಕಳು ಯಾರಾಗಿದ್ದೀರಿ, ಹೇಗಿದ್ದೀರಿ ಆದರೆ ನನ್ನ ಮಕ್ಕಳು. ಹಾಗೆಯೇ ತಾವೂ ಸಹ ಸದಾ ಪ್ರೀತಿಯಲ್ಲಿ ಲವಲೀನರಾಗಿರಿ, ಹೃದಯದಿಂದ ಹೇಳಿ - ಬಾಬಾ ತಾವೇ ಎಲ್ಲವೂ ಆಗಿದ್ದೀರಿ. ಎಂದಿಗೂ ಅಸತ್ಯ ರಾಜ್ಯದ ಪ್ರಭಾವದಲ್ಲಿ ಬರದಿರಿ. ಯಾರು ಪ್ರಿಯವಾಗಿರುವವರಿರುತ್ತಾರೆ, ಅವರನ್ನು ನೆನಪು ಮಾಡಲಾಗುವುದಿಲ್ಲ, ಸ್ವತಹವಾಗಿಯೇ ನೆನಪು ಬರುತ್ತಿರುತ್ತದೆ. ಕೇವಲ ಪ್ರೀತಿಯು ಹೃದಯದಿಂದ ಇರಲಿ, ಸತ್ಯ ಮತ್ತು ನಿಸ್ವಾರ್ಥವಾಗಿರುವುದಾಗಿರಲಿ. ಯಾವಾಗ ನನ್ನ ಬಾಬಾ, ಪ್ರಿಯವಾದ ಬಾಬಾ ಎಂದು ಹೇಳುತ್ತೀರೆಂದರೆ, ಪ್ರಿಯರನ್ನೆಂದಿಗೂ ಮರೆಯಲು ಸಾಧ್ಯವಿಲ್ಲ. ಮತ್ತು ನಿಸ್ವಾರ್ಥ ಪ್ರೀತಿಯಿಲ್ಲದೆ ತಂದೆಯು ಯಾವುದೇ ಆತ್ಮನೊಂದಿಗೆ ಮಿಲನವಾಗಲು ಸಾಧ್ಯವಿಲ್ಲ. ಆದ್ದರಿಂದ ಎಂದಿಗೂ ತೋರ್ಪಡಿಕೆಯ ನೆನಪು ಮಾಡಬೇಡಿ, ನಿಸ್ವಾರ್ಥ ಪ್ರೀತಿಯಲ್ಲಿ ಲವಲೀನರಾಗಿ ಇರಿ. ಪರಮಾತ್ಮ ಪ್ರೀತಿಯ ಅನುಭವಿ ಆಗುತ್ತೀರೆಂದರೆ, ಇದೇ ಅನುಭವದಿಂದ ಸಹಜಯೋಗಿಯಾಗಿ ಹಾರುತ್ತಿರುತ್ತೀರಿ. ಪರಮಾತ್ಮ ಪ್ರೀತಿಯು ಹಾರಿಸಲು ಸಾಧನವಾಗಿದೆ. ಹಾರುವವರೆಂದಿಗೂ ಸಹ ಧರಣಿಯ ಆಕರ್ಷಣೆಯಲ್ಲಿ ಬರಲು ಸಾಧ್ಯವಿಲ್ಲ. ಮಾಯೆಯೆಷ್ಟೇ ಆಕರ್ಷಿತ ರೂಪದಲ್ಲಿರಲಿ. ಆದರೆ ಆ ಆಕರ್ಷಣೆಯು ಹಾರುವವರ ಬಳಿ ತಲುಪಲು ಸಾಧ್ಯವಿಲ್ಲ. ಪರಮಾತ್ಮ ಪ್ರೀತಿಯ ಈ ಸಂಬಂಧವು ದೂರ ದೂರದಿಂದ ಸೆಳೆದು ಕರೆದುಕೊಂಡು ಬರುತ್ತದೆ. ಇದು ಇಂತಹ ಸುಖ ಕೊಡುವ ಪ್ರೀತಿಯಾಗಿದೆ, ಯಾರು ಈ ಪ್ರೀತಿಯಲ್ಲಿ ಒಂದು ಸೆಕೆಂಡಿಗಾದರೂ ಮುಳುಗಿ ಬಿಡುತ್ತಾರೆ, ಅವರು ಅನೇಕ ದುಃಖಗಳನ್ನು ಮರೆತು ಬಿಡುತ್ತಾರೆ ಮತ್ತು ಸದಾಕಾಲಕ್ಕಾಗಿ ಸುಖದ ಉಯ್ಯಾಲೆಯಲ್ಲಿ ತೂಗುತ್ತಾರೆ. ಜೀವನದಲ್ಲಿ ಏನು ಬೇಕು, ಒಂದುವೇಳೆ ಅವರೇನಾದರೂ ಕೊಡುತ್ತಾರೆಂದರೆ ಪ್ರೀತಿಯ ಸಂಕೇತವೂ ಇದೇ ಆಗಿರುತ್ತದೆ. ಅಂದಮೇಲೆ ತಂದೆಗೆ ತಾವು ಮಕ್ಕಳೊಂದಿಗೆ ಇಷ್ಟೂ ಪ್ರೀತಿಯಿದೆ, ಅವರು ಜೀವನದ ಸುಖ-ಶಾಂತಿಯ ಎಲ್ಲಾ ಕಾಮನೆಗಳನ್ನು ಪೂರ್ಣಗೊಳಿಸಿ ಬಿಡುತ್ತಾರೆ. ತಂದೆಯು ಸುಖವನ್ನಷ್ಟೇ ಕೊಡುವುದಿಲ್ಲ ಆದರೆ ಸುಖದ ಭಂಡಾರದ ಮಾಲೀಕರನ್ನಾಗಿ ಮಾಡಿ ಬಿಡುತ್ತಾರೆ. ಜೊತೆ ಜೊತೆಗೆ ಶ್ರೇಷ್ಠ ಭಾಗ್ಯದ ರೇಖೆಯನ್ನೆಳೆದುಕೊಳ್ಳುವ ಲೇಖನಿಯನ್ನೂ ಕೊಡುತ್ತಾರೆ, ಯಾರಿಗೆಷ್ಟು ಬೇಕು ಅಷ್ಟೂ ಭಾಗ್ಯವನ್ನು ರೂಪಿಸಿಕೊಳ್ಳಬಹುದು - ಇದೇ ಪರಮಾತ್ಮನ ಪ್ರೀತಿಯಾಗಿದೆ. ಯಾವ ಮಕ್ಕಳು ಪರಮಾತ್ಮ ಪ್ರೀತಿಯಲ್ಲಿ ಸದಾ ಲವಲೀನ, ಅದರಲ್ಲಿಯೇ ಮುಳುಗಿ ಬಿಟ್ಟಿರುತ್ತಾರೆ. ಅವರ ಹೊಳಪು ಮತ್ತು ನಶೆ, ಅನುಭೂತಿಯ ಕಿರಣಗಳು ಬಹಳ ಶಕ್ತಿಶಾಲಿ ಆಗಿರುತ್ತದೆ, ಅದು ಯಾವುದೇ ಸಮಸ್ಯೆಯನ್ನು ಸಮೀಪ ಬರುವುದಂತು ದೂರದ ಮಾತು ಆದರೆ ನೋಡುವುದಕ್ಕೂ ಬಿಡಲು ಸಾಧ್ಯವಿಲ್ಲ. ಅವರಿಗೆ ಎಂದೂ ಯಾವುದೇ ಪ್ರಕಾರದ ಪರಿಶ್ರಮವಾಗಲು ಸಾಧ್ಯವಿಲ್ಲ.

ತಂದೆಗೆ ಮಕ್ಕಳೊಂದಿಗೆ ಇಷ್ಟೂ ಪ್ರೀತಿಯಿದೆ, ಅವರು ಅಮೃತವೇಳೆಯಿಂದಲೇ ಮಕ್ಕಳ ಪಾಲನೆಯನ್ನು ಮಾಡುತ್ತಾರೆ. ದಿನದ ಆರಂಭವಾಗುತ್ತಿದ್ದಂತೆ ಎಷ್ಟು ಶ್ರೇಷ್ಠವಾಗುತ್ತದೆ! ಸ್ವಯಂ ಭಗವಂತನ ಮಿಲನವಾಗುವುದಕ್ಕಾಗಿ ಕರೆಯುತ್ತಾರೆ, ಆತ್ಮಿಕ ವಾರ್ತಾಲಾಪ ಮಾಡುತ್ತಾರೆ, ಶಕ್ತಿಗಳನ್ನು ತುಂಬುತ್ತಾರೆ! ತಂದೆಯ ಪ್ರಿಯವಾದ ಗೀತೆಯು ತಮ್ಮನ್ನೇಳಿಸುತ್ತದೆ. ಎಷ್ಟೊಂದು ಸ್ನೇಹದಿಂದ ಕರೆಯುತ್ತಾರೆ, ಏಳಿಸುತ್ತಾರೆ ಮಧುರ ಮಕ್ಕಳೇ, ಪ್ರಿಯವಾದ ಮಕ್ಕಳೇ, ಬನ್ನಿರಿ..... ಅಂದಮೇಲೆ ಈ ಇದು ಪ್ರೀತಿಯ ಪಾಲನೆಯ ಪ್ರತ್ಯಕ್ಷ ಸ್ವರೂಪವಾಗಿದೆ - ಸಹಜಯೋಗಿ ಜೀವನದ ಪ್ರತ್ಯಕ್ಷ ಸ್ವರೂಪ. ಯಾರೊಂದಿಗೆ ಪ್ರೀತಿಯಿರುತ್ತದೆ, ಅವರಿಗೇನು ಇಷ್ಟವಾಗುತ್ತದೆ ಅದನ್ನೇ ಮಾಡುತ್ತಾರೆ. ಅಂದಾಗ ತಂದೆಯವರಿಗೆ ಮಕ್ಕಳಲ್ಲಿ ಅಪ್ಸೆಟ್ ಆಗುವುದು ಇಷ್ಟವಾಗುವುದಿಲ್ಲ. ಆದ್ದರಿಂದ ಎಂದಿಗೂ ಸಹ ಹೀಗೆಳಬೇಡಿ - ಏನು ಮಾಡಲಿ, ಮಾತೇ ಹಾಗಿತ್ತು ಆದ್ದರಿಂದ ಅಪ್ಸೆಟ್ ಆಗಿ ಬಿಟ್ಟೆನು..... ಒಂದುವೇಳೆ ಮಾತು ಅಪ್ಸೆಟ್ ಆಗುವಂತಹದ್ದು ಬರಲೂಬಹುದು, ಆಗ ತಾವು ಅಪ್ಸೆಟ್ನ ಸ್ಥಿತಿಯಲ್ಲಿ ಬರಬೇಡಿ.

ಬಾಪ್ದಾದಾರವರಿಗೆ ಮಕ್ಕಳೊಂದಿಗೆ ಇಷ್ಟೂ ಪ್ರೀತಿಯಿದೆ, ಅವರು ತಿಳಿಯುತ್ತಾರೆ- ಪ್ರತಿಯೊಂದು ಮಗುವೂ ನನಗಿಂತಲೂ ಮುಂದಿರಲಿ. ಪ್ರಪಂಚದಲ್ಲಿಯೂ ಯಾರೊಂದಿಗೇ ಹೆಚ್ಚಿನ ಪ್ರೀತಿಯಾಗುತ್ತದೆ, ಅವರನ್ನು ತನಗಿಂತಲೂ ಮುಂದುವರೆಸುತ್ತಾರೆ. ಇದೇ ಪ್ರೀತಿಯ ಚಿಹ್ನೆಯಾಗಿದೆ. ಅಂದಮೇಲೆ ಬಾಪ್ದಾದಾರವರೂ ಸಹ ಹೇಳುತ್ತಾರೆ ನನ್ನ ಮಕ್ಕಳಲ್ಲಿ ಈಗ ಯಾವುದೇ ಕೊರತೆಯಿರಬಾರದು, ಎಲ್ಲರೂ ಸಂಪೂರ್ಣ, ಸಂಪನ್ನ ಮತ್ತು ಸಮಾನರಾಗಿ ಬಿಡಲಿ. ಆದಿಕಾಲ, ಅಮೃತವೇಳೆಯಲ್ಲಿ ತಮ್ಮ ಹೃದಯದಲ್ಲಿ ಪರಮಾತ್ಮ ಪ್ರೀತಿಯನ್ನು ಸಂಪೂರ್ಣವಾಗಿ ಧಾರಣೆ ಮಾಡಿಕೊಳ್ಳಿರಿ. ಒಂದುವೇಳೆ ಹೃದಯದಿಂದ ಪರಮಾತ್ಮ ಪ್ರೀತಿ, ಪರಮಾತ್ಮನ ಶಕ್ತಿಗಳು, ಪರಮಾತ್ಮನ ಜ್ಞಾನವು ಫುಲ್ ಆಗಿರುತ್ತದೆಯೆಂದರೆ ಎಂದೂ ಯಾವುದೇ ಕಡೆಯಲ್ಲಿ ಸೆಳೆತ ಅಥವಾ ಸ್ನೇಹವಾಗಲು ಸಾಧ್ಯವಿಲ್ಲ.

ಈ ಪರಮಾತ್ಮನ ಪ್ರೀತಿಯು ಈ ಒಂದು ಜನ್ಮದಲ್ಲಿಯೇ ಪ್ರಾಪ್ತಿಯಾಗುತ್ತದೆ. 83 ಜನ್ಮಗಳಲ್ಲಿ ದೇವಾತ್ಮ ಹಾಗೂ ಸಾಧಾರಣ ಆತ್ಮರ ಮೂಲಕ ಪ್ರೀತಿ ಸಿಕ್ಕಿದೆ, ಈಗಷ್ಟೇ ಪರಮಾತ್ಮನ ಪ್ರೀತಿಯು ಸಿಗುತ್ತದೆ. ಆ ಆತ್ಮನ ಪ್ರೀತಿಯು ರಾಜ್ಯಭಾಗ್ಯವನ್ನು ಕಳೆಯುತ್ತದೆ ಮತ್ತು ಪರಮಾತ್ಮನ ಪ್ರೀತಿಯು ರಾಜ್ಯಭಾಗ್ಯವನ್ನು ಕೊಡಿಸುತ್ತದೆ. ಅಂದಮೇಲೆ ಈ ಪ್ರೀತಿಯ ಅನುಭೂತಿಗಳಲ್ಲಿ ಸಮಾವೇಶವಾಗಿರಿ. ತಂದೆಯೊಂದಿಗೆ ಸತ್ಯ ಪ್ರೀತಿಯಿದೆಯೆಂದರೆ ಪ್ರೀತಿಯ ಚಿಹ್ನೆಯಾಗಿದೆ - ಸಮಾನ, ಕರ್ಮಾತೀತರಾಗಿರಿ. `ಮಾಡುವವನು' ಆಗಿದ್ದು ಕರ್ಮವನ್ನು ಮಾಡಿರಿ, ಮಾಡಿಸಿರಿ. ಕರ್ಮೇಂದ್ರಿಯಗಳು ತಮ್ಮಿಂದ ಮಾಡಿಸದಿರಲಿ ಆದರೆ ತಾವು ಕರ್ಮೇಂದ್ರಿಯಗಳಿಂದ ಮಾಡಿಸಿರಿ. ಎಂದಿಗೂ ಸಹ ಮನಸ್ಸು-ಬುದ್ಧಿ ಹಾಗೂ ಸಂಸ್ಕಾರಗಳಿಗೆ ವಶರಾಗಿ ಯಾವುದೇ ಕರ್ಮವನ್ನು ಮಾಡಬಾರದು.

 
ವರದಾನ:
ನಿರ್ಬಲನಿಂದ ಬಲಶಾಲಿಯಾಗಿ ಅಸಂಭವವನ್ನು ಸಂಭವ ಮಾಡುವಂತಹ ಸಾಹಸವಂತ ಆತ್ಮ ಭವ.

"ಸಾಹಸ ಮಕ್ಕಳದು, ಸಹಯೋಗ ತಂದೆಯದು" ಈ ವರದಾನದ ಆಧಾರದ ಮೇಲೆ ಸಾಹಸದ ಮೊದಲ ಧೃಡ ಸಂಕಲ್ಪವನ್ನು ಮಾಡಿದಿರಿ - ನಾವು ಪವಿತ್ರರಾಗಲೇಬೇಕು ಮತ್ತು ತಂದೆಯು ಪದಮದಷ್ಟು ಸಹಯೋಗವನ್ನು ಕೊಟ್ಟರು - ತಾವು ಆತ್ಮರು ಅನಾದಿ-ಆದಿ ಪವಿತ್ರರಿದ್ದಿರಿ, ಅನೇಕ ಬಾರಿ ಪವಿತ್ರರಾಗಿದ್ದೀರಿ ಮತ್ತು ಆಗುತ್ತಿರುತ್ತೀರಿ. ಅನೇಕ ಬಾರಿಯ ಸ್ಮೃತಿಯಿಂದ ಸಮರ್ಥರಾಗಿ ಬಿಟ್ಟಿರಿ. ನಿರ್ಬಲನಿಂದ ಇಷ್ಟೂ ಶಕ್ತಿಶಾಲಿ ಆಗಿ ಬಿಟ್ಟಿರಿ, ಅದರಿಂದ ಚಾಲೆಂಜ್ ಮಾಡುತ್ತೀರಿ - ವಿಶ್ವವನ್ನೂ ಪಾವನಗೊಳಿಸಿ ತೋರಿಸುತ್ತೇವೆ, ಯಾವುದಕ್ಕಾಗಿ ಋಷಿ-ಮುನಿ ಮಹಾತ್ಮರು ತಿಳಿಯುತ್ತಿದ್ದರು - ಪ್ರವೃತ್ತಿಯಲ್ಲಿರುತ್ತಾ ಪವಿತ್ರರಾಗಿರುವುದು ಕಷ್ಟವಿದೆ, ಅದನ್ನು ತಾವು ಅತಿ ಸಹಜವಿದೆಯೆಂದು ಹೇಳುತ್ತೀರಿ.

ಸ್ಲೋಗನ್:
ಯಾರು ಸರ್ವರಿಗೆ ಗೌರವ ಕೊಡುವರು ಅವರ ರಿರ್ಕಾಡ್ ಸ್ವತಃ ಸರಿಯಾಗುತ್ತಾ ಹೋಗುವುದು.


ಬ್ರಹ್ಮ ತಂದೆಯ ಸಮಾನರಾಗಲು ವಿಶೇಷ ಪುರುಷಾರ್ಥ
ಹೇಗೆ ಬ್ರಹ್ಮ ತಂದೆಯು ಸಾಧಾರಣ ರೂಪದಲ್ಲಿದ್ದರೂ ಅಸಾಧಾರಣ ಅಥವಾ ಅಲೌಕಿಕ ಸ್ಥಿತಿಯಲ್ಲಿದ್ದರು. ಇದೇ ರೀತಿ ಫಾಲೋ ಫಾದರ್. ಹೇಗೆ ನಕ್ಷತ್ರಗಳ ಸಂಘಟನೆಯಲ್ಲಿ ವಿಶೇಷವಾದ ನಕ್ಷತ್ರವೇನಿರುತ್ತದೆ, ಅದರ ಹೊಳಪು, ಪ್ರಕಾಶತೆಯು ದೂರದಿಂದಲೇ ಭಿನ್ನ ಹಾಗೂ ಪ್ರಿಯವೆನಿಸುತ್ತದೆ. ಅದೇರೀತಿ ತಾವು ನಕ್ಷತ್ರಗಳೂ ಸಹ ಸಾಧಾರಣ ಆತ್ಮರ ಮಧ್ಯದಲ್ಲಿದ್ದು ವಿಶೇಷ ಆತ್ಮರೆಂದು ಕಂಡುಬರಲಿ.