06.01.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ಯಾವುದೇ ಕರ್ಮ ಮಾಡುತ್ತೀರೆಂದರೆ ಅದರ ಫಲವು ಅವಶ್ಯವಾಗಿ ಸಿಗುತ್ತದೆ, ನಿಷ್ಕಾಮ ಸೇವೆಯಂತೂ ಕೇವಲ ಒಬ್ಬ ತಂದೆಯೇ ಮಾಡುತ್ತಾರೆ

ಪ್ರಶ್ನೆ:
ಈ ತರಗತಿಯು ಬಹಳ ಅದ್ಬುತವಾಗಿದೆ - ಹೇಗೆ? ಇಲ್ಲಿ ಯಾವ ಮುಖ್ಯ ಪರಿಶ್ರಮ ಪಡಬೇಕಾಗಿದೆ?

ಉತ್ತರ:
ಇದೊಂದೇ ತರಗತಿಯಾಗಿದೆ - ಎಲ್ಲಿ ಚಿಕ್ಕ ಮಕ್ಕಳು ಕುಳಿತಿದ್ದಾರೆ, ವೃದ್ಧರೂ ಕುಳಿತಿದ್ದಾರೆ, ಈ ತರಗತಿಯು ಇಂತಹ ಅದ್ಭುತವಾಗಿದೆ. ಯಾವುದರಲ್ಲಿ ಅಹಲ್ಯೆಯರು, ಕುಬ್ಜೆಯರು, ಸಾಧುಗಳೂ ಸಹ ಒಂದು ದಿನ ಇಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಇಲ್ಲಿ ನೆನಪಿನದೇ ಮುಖ್ಯ ಪರಿಶ್ರಮವಾಗಿದೆ. ನೆನಪಿನಿಂದಲೇ ಆತ್ಮ ಮತ್ತು ಶರೀರದ ಪ್ರಾಕೃತಿಕ ಚಿಕಿತ್ಸೆಯಾಗುತ್ತದೆ ಆದರೆ ನೆನಪಿಗಾಗಿಯೂ ಜ್ಞಾನ ಬೇಕಾಗಿದೆ.

ಗೀತೆ:
ರಾತ್ರಿಯ ಪ್ರಯಾಣಿಕನೇ ಸುಸ್ತಾಗಬೇಡ..........

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಆತ್ಮಿಕ ತಂದೆಯು ಮಕ್ಕಳಿಗೆ ಇದರ ಅರ್ಥವನ್ನೂ ಸಹ ತಿಳಿಸುತ್ತಾರೆ. ಆಶ್ಚರ್ಯವೇನೆಂದರೆ ಗೀತೆ ಅಥವಾ ಶಾಸ್ತ್ರ ಮೊದಲಾದುವುಗಳನ್ನು ರಚಿಸುವವರು ಇದರ ಅರ್ಥವನ್ನು ತಿಳಿದುಕೊಂಡಿಲ್ಲ. ಪ್ರತಿಯೊಂದು ಮಾತಿಗೆ ಅನರ್ಥವನ್ನೇ ತೆಗೆದುಕೊಳ್ಳುತ್ತಾರೆ. ಆತ್ಮಿಕ ತಂದೆ ಯಾರು ಜ್ಞಾನ ಸಾಗರ, ಪತಿತ-ಪಾವನನಾಗಿದ್ದಾರೆ ಅವರೇ ಕುಳಿತು ಇದರ ಅರ್ಥವನ್ನು ತಿಳಿಸುತ್ತಾರೆ. ರಾಜಯೋಗವನ್ನೂ ಸಹ ತಂದೆಯೇ ಕಲಿಸುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈಗ ಪುನಃ ನಾವು ರಾಜರಿಗೂ ರಾಜರಾಗುತ್ತಿದ್ದೇವೆ. ಮತ್ತ್ಯಾವುದೇ ಶಾಲೆಗಳಲ್ಲಿ ನಾವು ಪುನಃ ಬ್ಯಾರಿಸ್ಟರ್ ಆಗುತ್ತೇವೆಂದು ಹೇಳುವುದಿಲ್ಲ. ಈ ಪುನಃ ಎಂಬ ಶಬ್ಧವನ್ನು ಯಾರೂ ಹೇಳುವುದಿಲ್ಲ. ನೀವು ಹೇಳುತ್ತೀರಿ - ನಾವು 5000 ವರ್ಷಗಳ ಮೊದಲಿನಂತೆ ಪುನಃ ಬೇಹದ್ದಿನ ತಂದೆಯಿಂದ ಓದುತ್ತೇವೆ. ಈ ವಿನಾಶವೂ ಸಹ ಪುನಃ ಆಗುವುದು. ಎಷ್ಟು ದೊಡ್ಡ-ದೊಡ್ಡ ಬಾಂಬುಗಳನ್ನು ತಯಾರಿಸುತ್ತಿರುತ್ತಾರೆ. ಬಹಳ ಶಕ್ತಿಶಾಲಿ ಅಸ್ತ್ರಗಳನ್ನು ತಯಾರಿಸುತ್ತಾರೆ ಅಂದಮೇಲೆ ಇದನ್ನು ಕೇವಲ ಹಾಗೆಯೇ ಇಟ್ಟುಕೊಳ್ಳುವುದಕ್ಕಾಗಿ ಮಾಡುವುದಿಲ್ಲ ಅಲ್ಲವೆ. ಈ ವಿನಾಶವೂ ಸಹ ಶುಭ ಕಾರ್ಯಕ್ಕಾಗಿಯೇ ಇದೆ. ಆದ್ದರಿಂದ ನೀವು ಮಕ್ಕಳು ಹೆದರುವ ಅವಶ್ಯಕತೆಯಿಲ್ಲ. ಈ ಯುದ್ಧವೂ ಸಹ ಕಲ್ಯಾಣಕಾರಿಯಾಗಿದೆ, ತಂದೆಯು ಕಲ್ಯಾಣಕ್ಕಾಗಿಯೇ ಬರುತ್ತಾರೆ. ತಂದೆಯು ಬಂದು ಬ್ರಹ್ಮಾರವರ ಮೂಲಕ ಸ್ಥಾಪನೆ, ಶಂಕರನ ಮೂಲಕ ವಿನಾಶದ ಕರ್ತವ್ಯವನ್ನು ಮಾಡಿಸುತ್ತಾರೆಂದು ಹೇಳುತ್ತಾರೆ ಅಂದಮೇಲೆ ಈ ಬಾಂಬು ಮೊದಲಾದುವುಗಳೂ ಸಹ ವಿನಾಶಕ್ಕಾಗಿಯೇ ಇವೆ. ಇದಕ್ಕಿಂತ ಬಲಶಾಲಿಯಾದುದು ಮತ್ತ್ಯಾವುದೇ ವಸ್ತುವಿಲ್ಲ. ಜೊತೆ ಜೊತೆಗೆ ಪ್ರಾಕೃತಿಕ ವಿಕೋಪಗಳೂ ಆಗುತ್ತವೆ. ಅದಕ್ಕೆ ಯಾರೂ ಈಶ್ವರೀಯ ವಿಕೋಪಗಳೆಂದು ಹೇಳುವುದಿಲ್ಲ. ಈ ಪ್ರಾಕೃತಿಕ ಆಪತ್ತುಗಳು ಡ್ರಾಮಾದಲ್ಲಿ ನಿಗಧಿಯಾಗಿದೆ. ಇದೇನೂ ಹೊಸ ಮಾತಲ್ಲ. ಎಷ್ಟು ದೊಡ್ಡ-ದೊಡ್ಡ ಬಾಂಬುಗಳನ್ನು ತಯಾರಿಸುತ್ತಿರುತ್ತಾರೆ! ನಾವು ಇಡೀ ನಗರವನ್ನೇ ಸಮಾಪ್ತಿ ಮಾಡಿ ಬಿಡುತ್ತೇವೆ ಎಂದು ಹೇಳುತ್ತಾರೆ. ಜಪಾನಿನ ಯುದ್ಧದಲ್ಲಿ ಯಾವ ಬಾಂಬುಗಳನ್ನು ಹಾಕಿದರೋ ಅವು ಬಹಳ ಚಿಕ್ಕದಾಗಿದ್ದವು. ಈಗಂತೂ ದೊಡ್ಡ-ದೊಡ್ಡ ಬಾಂಬುಗಳನ್ನು ತಯಾರಿಸಿದ್ದಾರೆ. ಯಾವಾಗ ಹೆಚ್ಚು ಕಷ್ಟದಲ್ಲಿ ಸಿಲುಕುವರೋ, ಸಹನೆ ಮಾಡಲು ಆಗುವುದಿಲ್ಲವೋ ಆಗ ಬಾಂಬುಗಳನ್ನು ಹಾಕಲು ಆರಂಭಿಸಿ ಬಿಡುತ್ತಾರೆ. ಎಷ್ಟೊಂದು ನಷ್ಟವಾಗುವುದು! ಈಗಿನ್ನೂ ಪ್ರಯೋಗ ಮಾಡಿ ನೋಡುತ್ತಿದ್ದಾರೆ. ಲೆಕ್ಕವಿಲ್ಲದಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಇವುಗಳನ್ನು ತಯಾರಿಸುವವರ ಸಂಬಳವೂ ಸಹ ಹೆಚ್ಚಾಗಿರುತ್ತದೆ ಅಂದಾಗ ನೀವು ಮಕ್ಕಳಿಗೆ ಖುಷಿಯಿರಬೇಕು. ಹಳೆಯ ಪ್ರಪಂಚದ ವಿನಾಶವಾಗಲಿದೆ, ನೀವು ಮಕ್ಕಳು ಹೊಸ ಪ್ರಪಂಚಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೀರಿ. ವಿವೇಕವೂ ಹೇಳುತ್ತದೆ - ಹಳೆಯ ಪ್ರಪಂಚವು ಖಂಡಿತ ಸಮಾಪ್ತಿಯಾಗುವುದು. ಮಕ್ಕಳು ತಿಳಿದುಕೊಂಡಿದ್ದೀರಿ - ಕಲಿಯುಗದಲ್ಲಿ ಏನಿದೆ, ಸತ್ಯಯುಗದಲ್ಲಿ ಏನಿರುವುದು? ನೀವೀಗ ಸಂಗಮದಲ್ಲಿ ನಿಂತಿದ್ದೀರಿ. ನಿಮಗೆ ತಿಳಿದಿದೆ - ಸತ್ಯಯುಗದಲ್ಲಿ ಇಷ್ಟೊಂದು ಜನಸಂಖ್ಯೆಯಿರುವುದಿಲ್ಲ ಅಂದಮೇಲೆ ಇವರೆಲ್ಲರ ವಿನಾಶವಾಗುವುದು. ಈ ಪ್ರಾಕೃತಿಕ ಆಪತ್ತುಗಳು ಕಲ್ಪದ ಮೊದಲೂ ಆಗಿತ್ತು. ಹಳೆಯ ಪ್ರಪಂಚವು ಸಮಾಪ್ತಿಯಾಗಲೇಬೇಕಾಗಿದೆ. ವಿಕೋಪಗಳಂತೂ ಹೀಗೆ ಬಹಳಷ್ಟು ಆಗುತ್ತಾ ಬಂದಿದೆ ಆದರೆ ಅದು ಚಿಕ್ಕ ಅಂದಾಜಿನಲ್ಲಿ ಆಗಿತ್ತು. ಈಗ ಈ ಇಡೀ ಹಳೆಯ ಪ್ರಪಂಚವೇ ಸಮಾಪ್ತಿಯಾಗುವುದಿದೆ. ಆದ್ದರಿಂದ ನೀವು ಮಕ್ಕಳಿಗೆ ಬಹಳ ಖುಷಿಯಾಗಬೇಕು. ನಾವು ಆತ್ಮಿಕ ಮಕ್ಕಳಿಗೆ ಪರಮಪಿತ ಪರಮಾತ್ಮ ತಂದೆಯು ಕುಳಿತು ತಿಳಿಸಿ ಕೊಡುತ್ತಾರೆ. ಈ ವಿನಾಶವು ನಿಮಗಾಗಿಯೇ ಆಗುತ್ತಿದೆ. ರುದ್ರ ಜ್ಞಾನ ಯಜ್ಞದಿಂದ ವಿನಾಶ ಜ್ವಾಲೆಯು ಪ್ರಜ್ವಲಿತವಾಯಿತೆಂದು ಗಾಯನವಿದೆ. ಕೆಲವು ಮಾತುಗಳು ಗೀತೆಯಲ್ಲಿಯೂ ಇವೆ, ಇದರ ಅರ್ಥವು ಬಹಳ ಚೆನ್ನಾಗಿದೆ. ಆದರೆ ಯಾರೂ ತಿಳಿದುಕೊಳ್ಳುವುದಿಲ್ಲ. ಅವರು ಶಾಂತಿಯನ್ನು ಬೇಡುತ್ತಿರುತ್ತಾರೆ. ನೀವು ಹೇಳುತ್ತೀರಿ - ಇದು ಬೇಗ ವಿನಾಶವಾಗಿ ಬಿಟ್ಟರೆ ನಾವು ಹೋಗಿ ಸುಖಿಯಾಗಿರುತ್ತೇವೆ ಎಂದು ತಂದೆಯು ತಿಳಿಸುತ್ತಾರೆ. ಯಾವಾಗ ನೀವು ಸತೋಪ್ರಧಾನರಾಗಿ ಬಿಡುವರೋ ಆಗ ಸುಖಿಯಾಗಿ ಬಿಡುವಿರಿ. ತಂದೆಯು ಅನೇಕ ಪ್ರಕಾರದ ವಿಚಾರಗಳನ್ನು ತಿಳಿಸುತ್ತಾರೆ ಮತ್ತೆ ಇವು ಕೆಲವರ ಬುದ್ಧಿಯಲ್ಲಿ ಚೆನ್ನಾಗಿ ಕುಳಿತುಕೊಳ್ಳುತ್ತದೆ. ಇನ್ನೂ ಕೆಲವರ ಬುದ್ಧಿಯಲ್ಲಿ ಕಡಿಮೆ. ವೃದ್ಧರು ತಿಳಿದುಕೊಳ್ಳುತ್ತಾರೆ ಶಿವ ತಂದೆಯನ್ನು ನೆನಪು ಮಾಡಿದರೆ ಸಾಕು. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದರೂ ಸಹ ಆಸ್ತಿಯನ್ನು ಪಡೆದುಕೊಳ್ಳುತ್ತೀರಿ. ಪ್ರದರ್ಶನಿಯಲ್ಲಿ ಎಲ್ಲರೂ ಬರುತ್ತಾರೆ. ಅಜಾಮೀಳರಂತಹ ಪಾಪಾತ್ಮರು, ಗಣಿಕೆಯರು ಮೊದಲಾದವರೆಲ್ಲರ ಉದ್ಧಾರವಾಗಬೇಕಾಗಿದೆ. ಕೂಲಿಕಾರರೂ ಸಹ ಒಳ್ಳೆಯ ವಸ್ತ್ರವನ್ನು ಧರಿಸಿ ಬಂದು ಬಿಡುತ್ತಾರೆ. ಮಹಾತ್ಮ ಗಾಂಧೀಜಿಯು ಅಸೃಶ್ಯರನ್ನೂ ಸಹ ಮುಕ್ತಗೊಳಿಸಿದರು. ಜೊತೆಯಲ್ಲಿಯೇ ತಿನ್ನುತ್ತಾರೆ, ಈ ತಂದೆಯಂತೂ ಯಾವುದಕ್ಕೂ ನಿರಾಕರಿಸುವುದಿಲ್ಲ. ಇವರ ಉದ್ಧಾರವನ್ನೂ ಸಹ ಮಾಡಲೇಬೇಕಾಗಿದೆ, ಅವರ ಕೆಲಸದ ಜೊತೆ ನಮಗೆ ಯಾವುದೇ ಸಂಬಂಧವಿಲ್ಲ. ಇದರಲ್ಲಿ ಎಲ್ಲವೂ ತಂದೆಯ ಜೊತೆ ಬುದ್ಧಿಯೋಗವನ್ನು ಜೋಡಿಸುವುದರ ಮೇಲೆ ಆಧಾರಿತವಾಗಿದೆ. ತಂದೆಯನ್ನು ನೆನಪು ಮಾಡಬೇಕಾಗಿದೆ. ನಾನು ಅಚ್ಯುತ (ಅಸ್ಪೃಶ್ಯ) ನಾಗಿದ್ದೇನೆಂದು ಆತ್ಮವು ಹೇಳುತ್ತದೆ. ನೀವೀಗ ತಿಳಿದುಕೊಳ್ಳುತ್ತೀರಿ - ನಾವೇ ಸತೋಪ್ರಧಾನ ದೇವಿ-ದೇವತೆಗಳಾಗಿದ್ದೆವು, ಮತ್ತೆ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಅಂತ್ಯದಲ್ಲಿ ಬಂದು ಪತಿತರಾಗಿದ್ದೇವೆ. ಈಗ ಪುನಃ ನಾನಾತ್ಮ ಪಾವನನಾಗಬೇಕಾಗಿದೆ. ತಂದೆಯು ತಿಳಿಸುತ್ತಾರೆ, ನಿಮಗೂ ಗೊತ್ತಿದೆ - ಸಿಂಧ್ನಲ್ಲಿ ಒಬ್ಬ ಬಿಲ್ಲಿನಿಯು ಬರುತ್ತಿದ್ದಳು, ಧ್ಯಾನದಲ್ಲಿ ಹೋಗುತ್ತಿದ್ದರು. ಓಡಿ ಬಂದು ಮಿಲನ ಮಾಡುತ್ತಿದ್ದಳು. ಆಗ ತಿಳಿಸಲಾಗುತ್ತಿತ್ತು - ಇವರಲ್ಲಿಯೂ ಆತ್ಮವಿದೆಯಲ್ಲವೆ ಅಂದಾಗ ತನ್ನ ತಂದೆಯಿಂದ ಆಸ್ತಿಯನ್ನು ಪಡೆಯಲು ಆತ್ಮಕ್ಕೆ ಹಕ್ಕಿದೆ. ಆಗ ಅವರ ಮನೆಯವರಿಗೂ ಸಹ ಇವರಿಗೆ ಜ್ಞಾನವನ್ನು ತೆಗೆದುಕೊಳ್ಳಲು ಬಿಡಿ ಎಂದು ಹೇಳಲಾಯಿತು. ಅದಕ್ಕೆ ನಮ್ಮ ವಂಶದಲ್ಲಿ ಬಹಳ ಏರುಪೇರಾಗುವುದು ಎಂದು ಹೇಳಿದರು. ಅದಕ್ಕೆ ಹೆದರಿ ಅವರನ್ನು ಕರೆದುಕೊಂಡು ಹೋದರು ಅಂದಾಗ ನಿಮ್ಮ ಬಳಿಯೂ ಬರುತ್ತಾರೆ. ನೀವು ಯಾರನ್ನೂ ನಿರಾಕರಿಸಲು ಸಾಧ್ಯವಿಲ್ಲ. ಅಬಲೆಯರು, ಗಣಿಕೆಯರು, ಬಿಲ್ಲಿನಿಯರು, ಸಾಧು ಮೊದಲಾದವರೆಲ್ಲರ ಉದ್ಧಾರ ಮಾಡುವರೆಂದು ಗಾಯನವಿದೆ. ಸಾಧುಗಳಿಂದ ಹಿಡಿದು ಬಿಲ್ಲಿನಿಯವರೆಗೆ ಎಲ್ಲರ ಉದ್ಧಾರ ಮಾಡಬೇಕಾಗಿದೆ.

ನೀವು ಮಕ್ಕಳು ಈಗ ಯಜ್ಞ ಸೇವೆ ಮಾಡುತ್ತೀರಿ ಅಂದಾಗ ಈ ಸೇವೆಯಿಂದ ಬಹಳ ಪ್ರಾಪ್ತಿಯಾಗುತ್ತದೆ, ಅನೇಕರ ಕಲ್ಯಾಣವಾಗುತ್ತದೆ. ದಿನ-ಪ್ರತಿದಿನ ಪ್ರದರ್ಶನಿಯ ಸರ್ವೀಸಿನ ಬಹಳ ವೃದ್ಧಿಯಾಗುವುದು. ತಂದೆಯು ಬ್ಯಾಡ್ಜ್ಗಳನ್ನೂ ಸಹ ತಯಾರು ಮಾಡಿಸುತ್ತಾ ಇರುತ್ತಾರೆ. ನೀವು ಎಲ್ಲಿಯೇ ಹೋದರೂ ಇದರ ಮೇಲೆ ತಿಳಿಸಬೇಕಾಗಿದೆ. ಇವರು ತಂದೆ, ಇವರು ದಾದಾ, ಇದು ತಂದೆಯ ಆಸ್ತಿಯಾಗಿದೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನೀವು ಪಾವನರಾಗಿ ಬಿಡುತ್ತೀರಿ. ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಗೀತೆಯಲ್ಲಿಯೂ ಇದೆ. ಕೇವಲ ಅದರಲ್ಲಿ ನನ್ನ ಹೆಸರನ್ನು ಹಾರಿಸಿ ಮಗನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಭಾರತವಾಸಿಗಳಿಗೂ ಸಹ ಈ ರಾಧೆ-ಕೃಷ್ಣರ ನಡುವೆ ಪರಸ್ಪರ ಸಂಬಂಧವೇನೆಂದು ತಿಳಿದಿಲ್ಲ. ಅವರ ವಿವಾಹ ಮುಂತಾದುವುದರ ಚರಿತ್ರೆಯನ್ನು ಹೇಳುವುದಿಲ್ಲ. ಇವರಿಬ್ಬರೂ ಬೇರೆ-ಬೇರೆ ರಾಜಧಾನಿಯವರಾಗಿರುತ್ತಾರೆ, ಈ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ಒಂದುವೇಳೆ ಇದು ದೊಡ್ಡ-ದೊಡ್ಡವರಿಗೆ ಅರ್ಥವಾದರೆ ಮತ್ತು ಶಿವ ಭಗವಾನುವಾಚ ಎಂದು ಹೇಳಿ ಬಿಟ್ಟರೆ ಎಲ್ಲರೂ ಅವರನ್ನು ಓಡಿಸಿ ಬಿಡುವರು. ನೀವು ಇದನ್ನು ಎಲ್ಲಿಂದ ಕಲಿತಿದ್ದೀರಿ, ಅವರು ಯಾವ ಗುರುಗಳು ಎಂದು ಕೇಳುವರು. ಒಂದುವೇಳೆ ನಮಗೆ ಬ್ರಹ್ಮಾಕುಮಾರ-ಕುಮಾರಿಯರು ತಿಳಿಸಿದರೆಂದು ಹೇಳಿದ್ದೇ ಆದರೆ ಅವರಿಗೆ ಕೋಪ ಬಂದು ಬಿಡುವುದು. ಈ ಗುರುಗಳ ಸಿಂಹಾಸನವೇ ಕಳೆದು ಹೋಗುವುದು. ಇಂತಹವರು ಅನೇಕರು ಬರುತ್ತಾರೆ, ಅಭಿಪ್ರಾಯವನ್ನು ಬರೆದು ಕೊಡುತ್ತಾರೆ ಮತ್ತು ಮಾಯವಾಗಿ ಬಿಡುತ್ತಾರೆ.

ತಂದೆಯು ಮಕ್ಕಳಿಗೆ ಯಾವುದೇ ಕಷ್ಟ ಕೊಡುವುದಿಲ್ಲ. ಬಹಳ ಸಹಜ ಯುಕ್ತಿಯನ್ನು ತಿಳಿಸುತ್ತಾರೆ. ಯಾರಿಗಾದರೂ ಮಕ್ಕಳಾಗದಿದ್ದರೆ ಸಂತಾನವನ್ನು ಕರುಣಿಸಿ ಎಂದು ಭಗವಂತನಿಗೆ ಹೇಳುತ್ತಾರೆ ಮತ್ತೆ ಮಕ್ಕಳಾದ ಮೇಲೆ ಅವರನ್ನು ಬಹಳ ಚೆನ್ನಾಗಿ ಪಾಲನೆ ಮಾಡುತ್ತಾರೆ, ಓದಿಸುತ್ತಾರೆ ನಂತರ ದೊಡ್ಡವರಾದ ಮೇಲೆ ಈಗ ತಮ್ಮ ಉದ್ಯೋಗವನ್ನು ನೋಡಿಕೊಳ್ಳಿ ಎಂದು ಹೇಳುತ್ತಾರೆ. ತಂದೆಯು ಮಕ್ಕಳನ್ನು ಪಾಲನೆ ಮಾಡಿ ಅವರನ್ನು ಯೋಗ್ಯರನ್ನಾಗಿ ಮಾಡುತ್ತಾರೆ ಅಂದಮೇಲೆ ತಂದೆಯು ಮಕ್ಕಳ ಸೇವಕನಾದರಲ್ಲವೆ. ಈ ತಂದೆಯೂ ಸಹ ಮಕ್ಕಳ ಸೇವೆ ಮಾಡಿ ಜೊತೆ ಕರೆದುಕೊಂಡು ಹೋಗುತ್ತಾರೆ. ಮಕ್ಕಳು ದೊಡ್ಡವರಾಗಿ ಉದ್ಯೋಗ-ವ್ಯವಹಾರಗಳಲ್ಲಿ ತೊಡಗಿದರೆ ನಾವು ವೃದ್ಧರಾದ ಮೇಲೆ ನಮ್ಮ ಸೇವೆ ಮಾಡುವರೆಂದು ಲೌಕಿಕ ತಂದೆಯು ತಿಳಿದುಕೊಳ್ಳುತ್ತಾರೆ. ಆದರೆ ಈ ತಂದೆಯಂತೂ ಫಲವನ್ನು ಅಪೇಕ್ಷಿಸುವುದಿಲ್ಲ. ಇವರು ನಿಷ್ಕಾಮ ಸೇವಾಧಾರಿಯಾಗಿದ್ದಾರೆ. ಎಲ್ಲಿಯವರೆಗೆ ಜೀವಿಸಿರುತ್ತೇನೆಯೋ ಅಲ್ಲಿಯವರೆಗೆ ನಮ್ಮನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವಾಗಿದೆ ಎಂದು ಲೌಕಿಕ ತಂದೆಯು ತಿಳಿದುಕೊಳ್ಳುತ್ತಾರೆ, ಈ ಕಾಮನೆಯನ್ನಿಟ್ಟುಕೊಳ್ಳುತ್ತಾರೆ. ಆದರೆ ಈ ಬೇಹದ್ದಿನ ತಂದೆಯು ಹೇಳುತ್ತಾರೆ - ನಾನು ನಿಷ್ಕಾಮ ಸೇವೆ ಮಾಡುತ್ತೇನೆ. ನಾನು ರಾಜ್ಯಭಾರ ಮಾಡುವುದಿಲ್ಲ, ನಾನು ಎಷ್ಟೊಂದು ನಿಷ್ಕಾಮಿಯಾಗಿದ್ದೇನೆ. ಅನ್ಯ ಯಾರೆಲ್ಲಾ ಸೇವೆ ಮಾಡುವರೋ ಅವರಿಗೆ ಅದರ ಫಲವು ಖಂಡಿತ ಸಿಗುತ್ತದೆ ಆದರೆ ಇವರಂತೂ ಎಲ್ಲರ ತಂದೆಯಾಗಿದ್ದಾರೆ. ತಿಳಿಸುತ್ತಾರೆ - ನಾನು ನೀವು ಮಕ್ಕಳಿಗೆ ಸ್ವರ್ಗದ ರಾಜ್ಯಭಾಗ್ಯ ಕೊಡುತ್ತೇನೆ. ನೀವು ಎಷ್ಟು ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ನಾನಂತೂ ಕೇವಲ ಬ್ರಹ್ಮಾಂಡದ ಮಾಲೀಕನಾಗಿದ್ದೇನೆ. ನೀವೂ ಸಹ ಆಗಿದ್ದಿರಿ ಆದರೆ ನೀವು ರಾಜ್ಯಭಾಗ್ಯವನ್ನು ಪಡೆದುಕೊಳ್ಳುತ್ತೀರಿ ಮತ್ತೆ ಕಳೆದುಕೊಳ್ಳುತ್ತೀರಿ. ನಾನು ರಾಜ್ಯವನ್ನು ತೆಗೆದುಕೊಳ್ಳುವುದೂ ಇಲ್ಲ, ಡ್ರಾಮಾದಲ್ಲಿ ನನ್ನದು ಈ ಪಾತ್ರವಿದೆ. ನೀವು ಮಕ್ಕಳು ಸುಖದ ಆಸ್ತಿಯನ್ನು ಪಡೆಯುವ ಪುರುಷಾರ್ಥ ಮಾಡುತ್ತೀರಿ. ಉಳಿದೆಲ್ಲರೂ ಕೇವಲ ಶಾಂತಿಯನ್ನು ಬೇಡುತ್ತಾರೆ. ಆ ಗುರುಗಳೂ ಸಹ ಸುಖವು ಕಾಗವಿಷ್ಟ ಸಮಾನ ಎಂದು ಹೇಳುತ್ತಾರೆ. ಆದ್ದರಿಂದ ಅವರು ಶಾಂತಿಯನ್ನೇ ಬಯಸುತ್ತಾರೆ. ಅವರು ಜ್ಞಾನವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಸುಖದ ಬಗ್ಗೆ ತಿಳಿದೇ ಇಲ್ಲ. ತಂದೆಯು ತಿಳಿಸುತ್ತಾರೆ - ಶಾಂತಿ ಮತ್ತು ಸುಖದ ಆಸ್ತಿಯನ್ನು ಕೊಡುವವನು ನಾನೊಬ್ಬನೇ ಆಗಿದ್ದೇನೆ. ಸತ್ಯ-ತ್ರೇತಾಯುಗದಲ್ಲಿ ಗುರುಗಳಿರುವುದಿಲ್ಲ, ಅಲ್ಲಿ ರಾವಣನೇ ಇರುವುದಿಲ್ಲ. ಅದು ಈಶ್ವರೀಯ ರಾಜ್ಯವಾಗಿದೆ. ಈ ನಾಟಕವು ಮಾಡಲ್ಪಟ್ಟಿದೆ. ಈ ಮಾತುಗಳು ಮತ್ತ್ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಆದ್ದರಿಂದ ಮಕ್ಕಳು ಚೆನ್ನಾಗಿ ಧಾರಣೆ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ನೀವೀಗ ಸಂಗಮದಲ್ಲಿದ್ದೀರಿ, ನಿಮಗೆ ತಿಳಿದಿದೆ ಹೊಸ ಪ್ರಪಂಚದ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಅಂದಾಗ ನೀವಿರುವುದೇ ಸಂಗಮದಲ್ಲಿ ಉಳಿದೆಲ್ಲರೂ ಕಲಿಯುಗದಲ್ಲಿದ್ದಾರೆ. ಅವರು ಕಲ್ಪದ ಆಯಸ್ಸನ್ನೇ ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ. ಘೋರ ಅಂಧಕಾರದಲ್ಲಿದ್ದಾರೆ. ಕುಂಭಕರ್ಣನ ನಿದ್ರೆಯಲ್ಲಿ ಮಲಗಿ ಬಿಟ್ಟಿದ್ದಾರೆಂದು ಗಾಯನವಿದೆ. ಪಾಂಡವರ ವಿಜಯದ ಗಾಯನವೂ ಇದೆ.

ನೀವು ಬ್ರಾಹ್ಮಣರಾಗಿದ್ದೀರಿ, ಯಜ್ಞವನ್ನು ಬ್ರಾಹ್ಮಣರೇ ರಚಿಸುತ್ತಾರೆ. ಇದು ಎಲ್ಲದಕ್ಕಿಂತ ದೊಡ್ಡ ಬೇಹದ್ದಿನ ಈಶ್ವರೀಯ ರುದ್ರ ಜ್ಞಾನ ಯಜ್ಞ ಆಗಿದೆ. ಆ ಹದ್ದಿನ ಯಜ್ಞಗಳು ಅನೇಕ ಪ್ರಕಾರವಾಗಿರುತ್ತವೆ. ಈ ರುದ್ರ ಯಜ್ಞವು ಒಂದೇ ಭಾರಿಯಾಗುತ್ತದೆ. ಸತ್ಯ-ತ್ರೇತಾಯುಗದಲ್ಲಿ ಮತ್ತ್ಯಾವುದೇ ಯಜ್ಞವಿರುವುದಿಲ್ಲ. ಏಕೆಂದರೆ ಅಲ್ಲಿ ಯಾವುದೇ ಆಪತ್ತಿನ ಮಾತಿಲ್ಲ. ಅವೆಲ್ಲವೂ ಹದ್ದಿನ ಯಜ್ಞಗಳಾಗಿವೆ, ಇದು ಬೇಹದ್ದಿನದಾಗಿದೆ. ಇದು ಬೇಹದ್ದಿನ ತಂದೆಯಿಂದ ರಚನೆಯಾಗಿರುವ ಯಜ್ಞವಾಗಿದೆ. ಇದರಲ್ಲಿ ಬೇಹದ್ದಿನ ಆಹುತಿಯಾಗಬೇಕಾಗಿದೆ. ಇನ್ನರ್ಧ ಕಲ್ಪ ಯಾವುದೇ ಯಜ್ಞವಿರುವುದಿಲ್ಲ. ಅಲ್ಲಿ. ರಾವಣ ರಾಜ್ಯವೇ ಇರುವುದಿಲ್ಲ. ರಾವಣ ರಾಜ್ಯ ಆರಂಭವಾದಾಗ ಮತ್ತೆ ಇವೆಲ್ಲವೂ ಆರಂಭವಾಗುತ್ತದೆ. ಬೇಹದ್ದಿನ ಯಜ್ಞವು ಒಂದೇ ಬಾರಿ ಆಗುತ್ತದೆ, ಇದರಲ್ಲಿ ಇಡೀ ಹಳೆಯ ಸೃಷ್ಟಿಯೇ ಸ್ವಾಹಾ ಆಗಿ ಬಿಡುತ್ತದೆ. ಇದು ಬೇಹದ್ದಿನ ರುದ್ರ ಜ್ಞಾನ ಯಜ್ಞ ಆಗಿದೆ, ಇದರಲ್ಲಿ ಮುಖ್ಯವಾದುದು ಜ್ಞಾನ ಮತ್ತು ಯೋಗದ ಮಾತಾಗಿದೆ. ಯೋಗ ಅರ್ಥಾತ್ ನೆನಪು. ನೆನಪು ಶಬ್ಧವು ಬಹಳ ಮಧುರವಾಗಿದೆ, ಯೋಗ ಶಬ್ಧವು ಸಾಮಾನ್ಯವಾಗಿ ಬಿಟ್ಟಿದೆ. ಯೋಗದ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ನೀವು ತಿಳಿಸಬಹುದು - ಯೋಗ ಅರ್ಥಾತ್ ತಂದೆಯನ್ನು ನೆನಪು ಮಾಡಬೇಕಾಗಿದೆ. ಬಾಬಾ, ತಾವಂತೂ ನಮಗೆ ಬೇಹದ್ದಿನ ಆಸ್ತಿಯನ್ನು ಕೊಡುತ್ತೀರಿ. ಆತ್ಮವು ಮಾತನಾಡುತ್ತದೆ - ಬಾಬಾ, ತಾವು ಪುನಃ ಬಂದಿದ್ದೀರಿ, ನಾವಂತೂ ತಮ್ಮನ್ನು ಮರೆತು ಹೋಗಿದ್ದೆವು. ತಾವು ನಮಗೆ ರಾಜ್ಯಭಾಗ್ಯವನ್ನು ಕೊಟ್ಟಿದ್ದಿರಿ, ಈಗ ಪುನಃ ಬಂದು ಮಿಲನ ಮಾಡುತ್ತೀರಿ. ನಾವು ತಮ್ಮ ಶ್ರೀಮತದಂತೆ ಖಂಡಿತ ನಡೆಯುತ್ತೇವೆ. ಹೀಗೆ ತನ್ನ ಜೊತೆ ತಾನು ಮಾತನಾಡಿಕೊಳ್ಳಬೇಕಾಗಿದೆ. ಬಾಬಾ, ತಾವಂತೂ ನಮಗೆ ಬಹಳ ಒಳ್ಳೆಯ ಮಾರ್ಗವನ್ನು ತಿಳಿಸುತ್ತೀರಿ, ನಾವು ಕಲ್ಪ-ಕಲ್ಪವೂ ಮರೆತು ಹೋಗುತ್ತೇವೆ. ಈಗ ತಂದೆಯು ಮತ್ತೆ ನಮ್ಮನ್ನು ಸ್ಮೃತಿ ಸ್ವರೂಪರನ್ನಾಗಿ ಮಾಡುತ್ತಾರೆ. ಆದ್ದರಿಂದ ಈಗ ತಂದೆಯನ್ನೇ ನೆನಪು ಮಾಡಬೇಕಾಗಿದೆ. ನೆನಪಿನಿಂದಲೇ ಆಸ್ತಿಯು ಸಿಗುವುದು. ನಾನು ಯಾವಾಗ ಸನ್ಮುಖದಲ್ಲಿ ಬರುತ್ತೇನೆ ಆಗ ನಾನು ತಿಳಿಸುತ್ತೇನೆ. ಅಲ್ಲಿಯವರೆಗೂ ನೀವು ದುಃಖಹರ್ತ-ಸುಖಕರ್ತನಾಗಿದ್ದೀರೆಂದು ಹಾಡುತ್ತಿರುತ್ತೀರಿ. ಮಹಿಮೆ ಮಾಡುತ್ತಾರೆ ಆದರೆ ಆತ್ಮನನ್ನಾಗಲಿ, ಪರಮಾತ್ಮನನ್ನಾಗಲಿ ಅರಿತುಕೊಂಡಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ಇಷ್ಟು ಚಿಕ್ಕ ಬಿಂದುವಿನಲ್ಲಿ ಅವಿನಾಶಿ ಪಾತ್ರವು ನಿಗಧಿಯಾಗಿದೆ. ಇದನ್ನೂ ಸಹ ತಂದೆಯು ತಿಳಿಸುತ್ತಾರೆ. ಅವರಿಗೆ ಪರಮಪಿತ ಪರಮಾತ್ಮ ಅರ್ಥಾತ್ ಪರಮ ಆತ್ಮನೆಂದು ಹೇಳಲಾಗುತ್ತದೆ. ಆದರೆ ಅವರು ಕೋಟಿ ಸೂರ್ಯನಷ್ಟು ತೇಜೋಮಯನಾಗಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಶಿಕ್ಷಕನ ತರಹ ನಿಮಗೆ ಓದಿಸುತ್ತಾ ಇರುತ್ತೇನೆ. ಎಷ್ಟೊಂದು ಮಂದಿ ಮಕ್ಕಳಿದ್ದಾರೆ! ಈ ತರಗತಿಯನ್ನು ನೋಡಿ, ಎಷ್ಟು ಅದ್ಭುತವಾಗಿದೆ. ಇದರಲ್ಲಿ ಯಾರ್ಯಾರು ಓದುತ್ತಾರೆ? ಅಬಲೆಯರು, ಕುಬ್ಜೆಯರು, ಸಾಧುಗಳೂ ಸಹ ಒಂದುದಿನ ಬಂದು ಕುಳಿತುಕೊಳ್ಳುತ್ತಾರೆ. ಚಿಕ್ಕ ಮಕ್ಕಳು, ವೃದ್ಧರು ಎಲ್ಲರೂ ಕುಳಿತಿದ್ದಾರೆ. ಇಂತಹ ಶಾಲೆಯನ್ನು ಎಂದಾದರೂ ನೋಡಿದ್ದೀರಾ? ಇಲ್ಲಿ ನೆನಪಿನ ಪರಿಶ್ರಮವಿದೆ. ಈ ನೆನಪು ಸಮಯ ತೆಗೆದುಕೊಳ್ಳುತ್ತದೆ. ನೆನಪಿನ ಪುರುಷಾರ್ಥ ಮಾಡುವುದೂ ಸಹ ಜ್ಞಾನವಲ್ಲವೆ. ನೆನಪಿಗಾಗಿಯೂ ಜ್ಞಾನ ಬೇಕಾಗಿದೆ. ಚಕ್ರದ ಬಗ್ಗೆ ತಿಳಿಸುವುದಕ್ಕೂ ಜ್ಞಾನವು ಬೇಕಾಗಿದೆ. ಇದಕ್ಕೆ ಸತ್ಯ-ಸತ್ಯವಾದ ಪ್ರಾಕೃತಿಕ ಚಿಕಿತ್ಸೆಯೆಂದು ಹೇಳಲಾಗುತ್ತದೆ. ನಿಮ್ಮ ಆತ್ಮವು ಸಂಪೂರ್ಣ ಪವಿತ್ರವಾಗಿ ಬಿಡುತ್ತದೆ. ಅಲ್ಲಿ ಶರೀರದ ಚಿಕಿತ್ಸೆಯಾಗುತ್ತದೆ. ಇದು ಆತ್ಮಿಕ ಚಿಕಿತ್ಸೆಯಾಗಿದೆ. ಆತ್ಮದಲ್ಲಿಯೇ ತುಕ್ಕು ಬೀಳುತ್ತದೆ. ಸತ್ಯ ಚಿನ್ನವಾಗಿದ್ದರೆ ಅಪ್ಪಟ ಆಭರಣಗಳೇ ತಯಾರಾಗುತ್ತವೆ. ಈಗ ಇಲ್ಲಿ ಮಕ್ಕಳಿಗೆ ತಿಳಿದಿದೆ ಶಿವ ತಂದೆಯು ಸನ್ಮುಖದಲ್ಲಿ ಬಂದಿದ್ದಾರೆ. ಮಕ್ಕಳು ತಂದೆಯನ್ನು ಖಂಡಿತ ನೆನಪು ಮಾಡಬೇಕಾಗಿದೆ. ನಾವೀಗ ಹಿಂತಿರುಗಿ ಹೋಗಬೇಕಾಗಿದೆ. ಈ ದಡದಿಂದ ಆ ದಡವನ್ನು ಸೇರಬೇಕಾಗಿದೆ. ತಂದೆ, ಆಸ್ತಿ ಮತ್ತು ಮನೆಯನ್ನೂ ನೆನಪು ಮಾಡಿ. ಅದು ಮಧುರ ಶಾಂತಿಯಧಾಮವಾಗಿದೆ. ಅಶಾಂತಿಯಿಂದ ದುಃಖವಾಗುತ್ತದೆ, ಶಾಂತಿಯಿಂದ ಸುಖ ಸಿಗುತ್ತದೆ. ಸತ್ಯಯುಗದಲ್ಲಿ ಸುಖ, ಶಾಂತಿ, ಸಂಪತ್ತು ಎಲ್ಲವೂ ಇರುತ್ತದೆ. ಅಲ್ಲಿ ಜಗಳ-ಕಲಹದ ಮಾತೇ ಇರುವುದಿಲ್ಲ. ಮಕ್ಕಳಿಗೆ ಇದೇ ಚಿಂತೆಯಿರಲಿ - ನಾವು ಸತೋಪ್ರಧಾನ, ಸತ್ಯ ಚಿನ್ನವಾಗಬೇಕಾಗಿದೆ. ಆಗಲೇ ಶ್ರೇಷ್ಠ ಪದವಿಯನ್ನು ಪಡೆಯುವಿರಿ. ಈ ಆತ್ಮಿಕ ಭೋಜನವು ನಿಮಗೆ ಸಿಗುತ್ತಿದೆ. ಅದನ್ನು ಮತ್ತೆ ಮೆಲುಕು ಹಾಕಬೇಕು. ಇಂದು ಯಾವ-ಯಾವ ಮುಖ್ಯ ಮಾತುಗಳನ್ನು ಕೇಳಿದೆನು! ಎಂದು ಇದನ್ನೂ ಸಹ ತಿಳಿಸಿದೆವು - ಎರಡು ಯಾತ್ರೆಗಳಿವೆ. ಒಂದು ಆತ್ಮಿಕ ಇನ್ನೊಂದು ಶಾರೀರಿಕ. ಈ ಆತ್ಮಿಕ ಯಾತ್ರೆಯು ಕೆಲಸಕ್ಕೆ ಬರುವುದು. ಭಗವಾನುವಾಚ - ಮನ್ಮನಾಭವ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ವಿನಾಶವೂ ಸಹ ಶುಭ ಕಾರ್ಯಕ್ಕಾಗಿ ಆಗಲಿದೆ, ಆದ್ದರಿಂದ ಹೆದರಬಾರದು. ಕಲ್ಯಾಣಕಾರಿ ತಂದೆಯು ಸದಾ ಕಲ್ಯಾಣದ ಕಾರ್ಯವನ್ನೇ ಮಾಡಿಸುತ್ತಾರೆ, ಈ ಸ್ಮೃತಿಯಿಂದ ಸದಾ ಖುಷಿಯಲ್ಲಿರಬೇಕಾಗಿದೆ.

2. ಸದಾ ಒಂದೇ ಚಿಂತೆಯಿರಲಿ - ಸತೋಪ್ರಧಾನ ಸತ್ಯ ಚಿನ್ನವಾಗಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ಯಾವ ಆತ್ಮಿಕ ಭೋಜನ ಸಿಗುತ್ತಿದೆಯೋ ಅದನ್ನು ಮೆಲುಕು ಹಾಗಬೇಕಾಗಿದೆ.

ವರದಾನ:
ಸತ್ಸಂಗದ ಮುಖಾಂತರ ಆತ್ಮೀಯ ಬಣ್ಣವನ್ನು ಹಾಕಿಕೊಳ್ಳುವಂತಹವರು ಸದಾ ಹರ್ಷಿತ ಮತ್ತು ಡಬ್ಬಲ್ ಲೈಟ್ ಭವ.

ಯಾವ ಮಕ್ಕಳು ತಂದೆಯನ್ನು ಹೃದಯದಿಂದ ಸತ್ಯವಾದ ಜೊತೆಗಾರನನ್ನಾಗಿ ಮಾಡಿಕೊಳ್ಳುತ್ತಾರೆ. ಅವರಿಗೆ ಸಂಗದ ಆತ್ಮೀಯ ರಂಗು ಸದಾ ಹಾಕಲ್ಪಟ್ಟಿರುತ್ತದೆ. ಬುದ್ಧಿಯ ಮುಖಾಂತರ ಸತ್ಯ ತಂದೆ, ಸತ್ಯ ಶಿಕ್ಷಕ ಮತ್ತು ಸದ್ಗುರುವಿನ ಸಂಗ ಮಾಡುವುದು - ಇದೇ ಸತ್ಸಂಗವಾಗಿದೆ. ಯಾರು ಈ ಸತ್ಸಂಗದಲ್ಲಿರುತ್ತಾರೆ ಅವರು ಸದಾ ಹರ್ಷಿತ ಮತ್ತು ಡಬ್ಬಲ್ ಲೈಟ್ ಆಗಿರುತ್ತಾರೆ. ಅವರಿಗೆ ಯಾವುದೇ ಪ್ರಕಾರದ ಹೊರೆಯ ಅನುಭವವಾಗುವುದಿಲ್ಲ. ಅವರು ತುಂಬಿರುವ ಹಾಗೆ, ಖುಷಿಯ ಖಜಾನೆ ನನ್ನ ಜೊತೆಯಿದೆ, ತಂದೆಯ ಬಳಿ ಏನೆಲ್ಲಾ ಇದೆ ಅದು ನನ್ನದಾಗಿದೆ ಎಂದು ಅನುಭವ ಮಾಡುತ್ತಾರೆ.

ಸ್ಲೋಗನ್:
ತಮ್ಮ ಮಧುರ ಮಾತು ಮತ್ತು ಉತ್ಸುಕತೆ-ಉತ್ಸಾಹದ ಸಹಯೋಗದಿಂದ ಭರವಸೆ ಕಳೆದುಕೊಂಡಿರುವವರನ್ನು ಶಕ್ತಿಶಾಲಿಗಳನ್ನಾಗಿ ಮಾಡಿ.


ಬ್ರಹ್ಮಾ ತಂದೆಯ ಸಮಾನ ಸಂಪನ್ನ ಸ್ಥಿತಿಯ ಅನುಭವ ಮಾಡಿರಿ:-
ಆಂತರಿಕ ಖುಷಿ ಮತ್ತು ನಶೆಯ ಸಂಕಲ್ಪದ ಸ್ವಿಚ್ನ್ನು ಆನ್ ಮಾಡಿದ್ದು ವತನದ ಪರಿಕ್ರಮಣ ಹಾಕಿರಿ. ಅಲ್ಲಿ ಜ್ಞಾನ ಸೂರ್ಯನ ಕಿರಣಗಳನ್ನು ತೆಗೆದುಕೊಳ್ಳಿರಿ, ಚಂದ್ರಮನ ಬೆಳಕನ್ನು ತೆಗೆದುಕೊಳ್ಳಿರಿ. ಬುದ್ಧಿಯೆಂಬ ವಿಮಾನದಲ್ಲಿ ಆತ್ಮಿಕ ನಶೆ ಮತ್ತು ಖುಷಿಯ ಡಬ್ಬಲ್ ರಿಫೈನ್ ಪೆಟ್ರೋಲ್ನ ಮೂಲಕ ಮೂರೂ ಲೋಕಗಳ ಪರಿಕ್ರಮಣ ಮಾಡಿರಿ.