06.02.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಈಗ ಅಶರೀರಿಗಳಾಗಿ ಮನೆಗೆ ಹೋಗಬೇಕಾಗಿದೆ, ಆದ್ದರಿಂದ ಯಾರೊಂದಿಗೇ ಮಾತನಾಡುತ್ತೀರೆಂದರೆ ಆತ್ಮವು ಸಹೋದರ-ಸಹೋದರನೆಂದು ತಿಳಿದು ಮಾತನಾಡಿ, ಆತ್ಮಾಭಿಮಾನಿಯಾಗಿರುವ ಅಭ್ಯಾಸ ಮಾಡಿ

ಪ್ರಶ್ನೆ:
ಭವಿಷ್ಯದ ರಾಜ್ಯ ತಿಲಕವನ್ನು ಪ್ರಾಪ್ತಿ ಮಾಡಿಕೊಳ್ಳುವ ಆಧಾರವೇನು?

ಉತ್ತರ:
ವಿದ್ಯೆ. ಪ್ರತಿಯೊಬ್ಬರೂ ಓದಿ ರಾಜ್ಯ ತಿಲಕವನ್ನು ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ. ಓದಿಸುವ ಕರ್ತವ್ಯವು ತಂದೆಯದಾಗಿದೆ ಇದರಲ್ಲಿ ಆಶೀರ್ವಾದದ ಮಾತಿಲ್ಲ. ಪೂರ್ಣ ನಿಶ್ಚಯವಿದ್ದರೆ ಶ್ರೀಮತದಂತೆ ನಡೆಯಬೇಕು. ಇದರಲ್ಲಿ ಹುಡುಗಾಟಿಕೆ ಮಾಡಬಾರದು. ಒಂದು ವೇಳೆ ಮತ-ಭೇದದಲ್ಲಿ ಬಂದು ವಿದ್ಯೆಯನ್ನು ಬಿಟ್ಟರೆ ಅನುತ್ತೀರ್ಣರಾಗಿ ಬಿಡುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ತಮ್ಮ ಮೇಲೆ ದಯೆ ತೋರಿಸಿಕೊಳ್ಳಿ. ಆಶೀರ್ವಾದವನ್ನು ಕೇಳಬಾರದು, ವಿದ್ಯೆಯ ಮೇಲೆ ಗಮನ ಕೊಡಬೇಕಾಗಿದೆ.

ಓಂ ಶಾಂತಿ.
ಪರಮ ಶಿಕ್ಷಕ ಮಕ್ಕಳಿಗೆ ಓದಿಸುತ್ತಾರೆ. ಮಕ್ಕಳಿಗೂ ಗೊತ್ತಿದೆ - ಪರಮಪಿತ ಪರಮಾತ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ನಿಮಗೆ ಈ ರೀತಿ ಓದಿಸುತ್ತಾರೆ ಹಾಗೆ ಮತ್ತ್ಯಾರೂ ಓದಿಸಲು ಸಾಧ್ಯವಿಲ್ಲ. ಶಿವತಂದೆಯು ನಮಗೆ ಓದಿಸುತ್ತಾರೆಂದು ಮಕ್ಕಳೂ ಸಹ ಹೇಳುತ್ತೀರಿ. ಈಗ ಕೇವಲ ಓದಿಸಲು ಸಾಧ್ಯವಿಲ್ಲ. ಶಿವತಂದೆಯು ನಮಗೆ ಓದಿಸುತ್ತಾರೆಂದು ಮಕ್ಕಳೂ ಸಹ ಹೇಳುತ್ತೀರಿ. ಈಗ ಕೇವಲ ಒಬ್ಬರಿಗಷ್ಟೇ ತಂದೆಯಲ್ಲ. ಮನ್ಮನಾಭವ, ಮಧ್ಯಾಜೀಭವ - ಇದರ ಅರ್ಥ ನನ್ನನ್ನು ನೆನಪು ಮಾಡಿ ಎಂದು ತಿಳಿಸುತ್ತಾರೆ. ಮಕ್ಕಳಂತೂ ಈಗ ಬುದ್ಧಿವಂತರಾಗುತ್ತೀರಿ. ನಿಮ್ಮ ಆಸ್ತಿಯಂತೂ ಇದ್ದೇ ಇದೆ, ಇದನ್ನೆಂದೂ ಮರೆಯಬಾರದು ಎಂದು ಬೇಹದ್ದಿನ ತಂದೆಯು ತಿಳಿಸುತ್ತಾರೆ. ತಂದೆಯು ಆತ್ಮಗಳೊಂದಿಗೇ ಮಾತನಾಡುತ್ತಾರೆ. ಈಗ ನೀವು ಜೀವಾತ್ಮಗಳಾಗಿದ್ದೀರಲ್ಲವೆ. ಬೇಹದ್ದಿನ ತಂದೆಯು ನಿರಾಕಾರನಾಗಿದ್ದಾರೆ. ಈ ಶರೀರದ ಮೂಲಕ ನಮಗೆ ಓದಿಸುತ್ತಿದ್ದಾರೆ ಎಂದು ನೀವೂ ಸಹ ತಿಳಿಯುತ್ತೀರಿ ಮತ್ತ್ಯಾರೂ ಈ ರೀತಿ ತಿಳಿಯುವುದಿಲ್ಲ. ಹೇಗೆ ಶಾಲೆಯಲ್ಲಿ ಶಿಕ್ಷಕರು ಓದಿಸುತ್ತಿದ್ದಾರೆ. ಲೌಕಿಕ ಶಿಕ್ಷಕರು ಲೌಕಿಕ ಮಕ್ಕಳಿಗೆ ಓದಿಸುತ್ತಾರೆಂದು ಹೇಳುತ್ತಾರೆ. ಹಾಗೆಯೇ ಈ ಪಾರಲೌಕಿಕ ಪರಮ ಶಿಕ್ಷಕ ಪಾರಲೌಕಿಕ ಮಕ್ಕಳಿಗೆ ಓದಿಸುತ್ತಾರೆ. ಮಕ್ಕಳೂ ಸಹ ಪರಲೋಕ, ಮೂಲವತನದ ನಿವಾಸಿಯಾಗಿದ್ದಾರೆ. ತಂದೆಯು ಪರಲೋಕದಲ್ಲಿರುತ್ತಾರೆ, ನಾನು ಶಾಂತಿಧಾಮದ ನಿವಾಸಿ ಮತ್ತು ತಾವೂ ಸಹ ಅಲ್ಲಿನ ನಿವಾಸಿಗಳು, ನಾವಿಬ್ಬರೂ ಒಂದು ಧಾಮದ ನಿವಾಸಿಗಳಾಗಿದ್ದೇವೆ ಎಂದು ತಂದೆಯು ತಿಳಿಸುತ್ತಾರೆ ಹಾಗೂ ತಮ್ಮನ್ನು ತಾವು ಆತ್ಮನೆಂದು ತಿಳಿಯಿರಿ. ನಾನು ಪರಮಾತ್ಮನಾಗಿದ್ದೇನೆ, ಇಲ್ಲಿ ನೀವು ಪಾತ್ರವನ್ನಭಿನಯಿಸುತ್ತಿದ್ದೀರಿ. ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ನೀವೀಗ ಪತಿತರಾಗಿ ಬಿಟ್ಟಿದ್ದೀರಿ ಎಂಬುದನ್ನೂ ತಿಳಿಸುತ್ತಾರೆ. ಇದೆಲ್ಲವೂ ಬೇಹದ್ದಿನ ಮೈದಾನವಾಗಿದೆ, ಇಲ್ಲಿ ಆಟವು ನಡೆಯುತ್ತದೆ. ಇಡೀ ಸೃಷ್ಟಿಯು ಕರ್ಮ ಕ್ಷೇತ್ರವಾಗಿದೆ, ಇದರಲ್ಲಿ ಆಟವು ನಡೆಯುತ್ತಾ ಇದೆ. ಇದು ಬೇಹದ್ದಿನ ಆಟ, ಇದರಲ್ಲಿ ದಿನ ಮತ್ತು ರಾತ್ರಿಯೂ ಇರುತ್ತದೆ ಎಂಬುದನ್ನು ಕೇವಲ ತಾವು ಮಕ್ಕಳೇ ಅರಿತಿದ್ದೀರಿ. ಸೂರ್ಯ-ಚಂದ್ರರು ಎಷ್ಟೊಂದು ಬೇಹದ್ದಿನ ಬೆಳಕನ್ನು ಕೊಡುತ್ತಾರೆ, ಇದು ಬೇಹದ್ದಿನ ಮಾತಾಗಿದೆ. ಈಗ ನಿಮಗೆ ಜ್ಞಾನವೂ ಇದೆ, ರಚಯಿತನೇ ಬಂದು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಪರಿಚಯವನ್ನು ಕೊಡುತ್ತಾರೆ. ನಿಮಗೆ ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಲು ಬಂದಿದ್ದೇನೆಂದು ತಂದೆಯು ತಿಳಿಸುತ್ತಾರೆ. ಇದು ಪಾಠ ಶಾಲೆಯಾಗಿದೆ, ಓದಿಸುವವರು ಅಭೋಕ್ತನಾಗಿದ್ದಾರೆ. ನಾನು ಅಭೋಕ್ತನಾಗಿದ್ದೇನೆಂದು ಬೇರೆ ಯಾರೂ ಹೇಳಲು ಸಾಧ್ಯವಿಲ್ಲ. ಅಹಮದಾಬಾದ್ನಲ್ಲಿ ಒಬ್ಬ ಸಾಧು ಈ ರೀತಿ ಹೇಳುತ್ತಿದ್ದರು ಆದರೆ ಅವರ ಮೋಸವನ್ನು ಗುರುತಿಸಲಾಯಿತು. ಈ ಸಮಯದಲ್ಲಿ ಬಹಳ ಮೋಸವೂ ನಡೆಯುತ್ತಿದೆ, ವೇಷಧಾರಿಗಳು ವಿಮುಖರಾಗಿದ್ದಾರೆ. ಶಿವತಂದೆಗೆ ಯಾವುದೇ ವೇಷವಿಲ್ಲ. ಕೃಷ್ಣನು ಗೀತೆಯನ್ನು ತಿಳಿಸಿದನೆಂದು ಮನುಷ್ಯರು ತಿಳಿಯುತ್ತಾರೆ ಅಂದರೆ ಇತ್ತೀಚಿನ ದಿನಗಳಲ್ಲಿ ಎಷ್ಟೊಂದು ಜನ ಕೃಷ್ಣರಾಗಿದ್ದಾರೆ. ವಾಸ್ತವದಲ್ಲಿ ಕೃಷ್ಣರಂತೂ ಇರಲು ಸಾಧ್ಯವಿಲ್ಲ, ಇಲ್ಲಂತೂ ನಿಮಗೆ ಶಿವ ತಂದೆಯು ಆತ್ಮರಿಗೆ ಓದಿಸುತ್ತಾರೆ. ನಿಮಗೆ ಪದೇ-ಪದೇ ತಿಳಿಸಲಾಗಿದೆ - ತಮ್ಮನ್ನು ಆತ್ಮನೆಂದು ತಿಳಿದು ಸಹೋದರ-ಸಹೋದರನಿಗೆ ತಿಳಿಸಿ - ತಂದೆಯ ಜ್ಞಾನವನ್ನು ನನ್ನ ಸಹೋದರರಿಗೆ ತಿಳಿಸುತ್ತೇನೆ. ಸ್ತ್ರೀ ಅಥವಾ ಪುರುಷ ಇಬ್ಬರೂ ಸಹೋದರ-ಸಹೋದರರಾಗಿದ್ದಾರೆ, ಆದ ಕಾರಣವೇ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವೆಲ್ಲರೂ ನನ್ನ ಆಸ್ತಿಗೆ ಹಕ್ಕುದಾರರಾಗಿದ್ದೀರಿ. ಹಾಗೆ ನೋಡಿದರೆ ಲೌಕಿಕದಲ್ಲಿ ಸ್ತ್ರೀ ಗೆ ಆಸ್ತಿಯು ಸಿಗುವುದಿಲ್ಲ. ಏಕೆಂದರೆ ಆಕೆಯು ಮಾವನ ಮನೆಗೆ ಹೋಗಬೇಕಾಗಿದೆ ಆದರೆ ಇಲ್ಲಂತೂ ಎಲ್ಲರೂ ಆತ್ಮಗಳೇ ಅಶರೀರಿಯಾಗಿ ಮನೆಗೆ ಹೋಗಬೇಕಾಗಿದೆ. ಈಗ ನಿಮಗೆ ಯಾವ ಜ್ಞಾನ ರತ್ನಗಳು ಸಿಗುತ್ತವೆ ಇವೇ ಅವಿನಾಶಿ ರತ್ನಗಳಾಗಿ ಬಿಡುತ್ತವೆ. ಆತ್ಮವೇ ಜ್ಞಾನದ ಸಾಗರನಾಗುತ್ತದೆಯಲ್ಲವೆ. ಆತ್ಮವೇ ಎಲ್ಲವನ್ನೂ ಮಾಡುತ್ತದೆ ಆದರೆ ಮನುಷ್ಯರಿಗೆ ದೇಹಾಭಿಮಾನ ಇರುವ ಕಾರಣ, ದೇಹೀ-ಅಭಿಮಾನಿಯಾಗುವುದೇ ಇಲ್ಲ. ಈಗ ನೀವು ದೇಹೀ-ಅಭಿಮಾನಿಯಾಗಿ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಸ್ವಲ್ಪ ಶ್ರಮವಂತೂ ಪಡಬೇಕಲ್ಲವೆ. ಲೌಕಿಕ ಗುರುವನ್ನು ಎಷ್ಟೊಂದು ನೆನಪು ಮಾಡುತ್ತಾರೆ, ಅವರ ಮೂರ್ತಿಯನ್ನು ಇಟ್ಟುಕೊಳ್ಳುತ್ತಾರೆ. ಈಗ ಶಿವನ ಚಿತ್ರವೆಲ್ಲಿ, ಮನುಷ್ಯರ ಚಿತ್ರವೆಲ್ಲಿ! ರಾತ್ರಿ-ಹಗಲಿನ ಅಂತರವಿದೆ. ಅವರು ಗುರುವಿನ ಭಾವ ಚಿತ್ರವನ್ನು ಇಟ್ಟುಕೊಳ್ಳುತ್ತಾರೆ. ಅವರು ಅನ್ಯರ ಭಾವ ಚಿತ್ರವನ್ನು ಇಟ್ಟುಕೊಳ್ಳುವುದು ಪತಿ ಮೊದಲಾದವರಿಗೆ ಇಷ್ಟವಾಗುವುದಿಲ್ಲ. ಹಾ! ಶಿವನ ಚಿತ್ರವನ್ನಿಟ್ಟುಕೊಂಡರೆ ಅದು ಎಲ್ಲರಿಗೂ ಪ್ರಿಯವೆನಿಸುತ್ತದೆ, ಏಕೆಂದರೆ ಅವರು ಪರಮಪಿತನಾಗಿದ್ದಾರಲ್ಲವೆ. ಅವರ ಚಿತ್ರವಂತೂ ಇರಬೇಕು. ಅವರು ತನ್ನ ಕೊರಳಿನ ಹಾರವನ್ನಾಗಿ ಮಾಡಿಕೊಳ್ಳುವವರಾಗಿದ್ದಾರೆ ತಾವು ರುದ್ರ ಮಾಲೆಯ ಮುತ್ತುಗಳಾಗುತ್ತೀರಿ. ಹಾಗೆ ನೋಡಿದರೆ ಇಡೀ ಪ್ರಪಂಚವೇ ರುದ್ರ ಮಾಲೆಯಾಗಿದೆ, ಪ್ರಜಾಪಿತ ಬ್ರಹ್ಮಾರವರ ಮಾಲೆಯೂ ಆಗಿದೆ. ಮೇಲೆ ವಂಶಾವಳಿಯಿದೆ, ಅದು ಹದ್ದಿನ ವಂಶಾವಳಿಯಾಗಿದೆ ಇದು ಬೇಹದ್ದಿನದಾಗಿದೆ. ಯಾರೆಲ್ಲಾ ಮನುಷ್ಯರಿದ್ದಾರೆ ಅವರೆಲ್ಲರದೂ ಇದೆ. ಆತ್ಮವು ಎಷ್ಟು ಸೂಕ್ಷ್ಮಕ್ಕಿಂತಲೂ ಸೂಕ್ಷ್ಮ ಬಿಂದುವಾಗಿದೆ, ಸಂಪೂರ್ಣ ಚಿಕ್ಕ ಬಿಂದುವಾಗಿದೆ. ಹೀಗೆ ಬಿಂದುವನ್ನಿಡುತ್ತಾ ಹೋದರೆ ಲೆಕ್ಕವಿಲ್ಲದಷ್ಟಾಯಿತು. ಎಣಿಕೆ ಮಾಡುತ್ತಾ-ಮಾಡುತ್ತಾ ಸುಸ್ತಾಗಿ ಬಿಡುತ್ತೀರಿ ಆದರೆ ನೋಡಿ ಆತ್ಮಗಳ ವೃಕ್ಷವು (ಪರಮಧಾಮದಲ್ಲಿ) ಎಷ್ಟು ಚಿಕ್ಕದಾಗಿದೆ. ಬ್ರಹ್ಮ ತತ್ವದಲ್ಲಿ ಬಹಳ ಕಡಿಮೆ ಸ್ಥಾನವಿರುತ್ತದೆ. ಆತ್ಮಗಳು ಇಲ್ಲಿ ಪಾತ್ರವನ್ನಭಿನಯಿಸಲು ಬರುತ್ತಾರೆ ಅಂದಾಗ ಇಲ್ಲಿ ಎಷ್ಟೊಂದು ಉದ್ದಗಲದ ಪ್ರಪಂಚವು ಬೇಕಾಗುತ್ತದೆ. ಕೆಲವೊಂದೆಡೆ ವಿಮಾನಗಳಲ್ಲಿ ಹೋಗುತ್ತಾರೆ ಅಲ್ಲಿ ವಿಮಾನ ಮೊದಲಾದುವುಗಳ ಅವಶ್ಯಕತೆ (ಪರಮಧಾಮ) ಇಲ್ಲ. ಆತ್ಮಗಳದು ಅತೀ ಚಿಕ್ಕ ವೃಕ್ಷವಾಗಿದೆ. ಇಲ್ಲಿ ಮನುಷ್ಯರದು ಎಷ್ಟು ದೊಡ್ಡ ವೃಕ್ಷವಾಗಿದೆ. ಇವರೆಲ್ಲರೂ ಪ್ರಜಾಪಿತ ಬ್ರಹ್ಮಾನ ಸಂತಾನರಾಗಿದ್ದಾರೆ. ಯಾರನ್ನು ಕೆಲವರು ಆಡಂ ಎಂತಲೂ, ಇನ್ನೂ ಕೆಲವರು ಆದಿ ದೇವನೆಂತಲೂ ಕರೆಯುತ್ತಾರೆ. ಸ್ತ್ರೀ-ಪುರುಷರಂತೂ ಅವಶ್ಯವಾಗಿದ್ದಾರೆ, ನಿಮ್ಮದು ಪ್ರವೃತ್ತಿ ಮಾರ್ಗವಾಗಿದೆ, ನಿವೃತ್ತಿ ಮಾರ್ಗದ ಆಟವು ನಡೆಯುವುದಿಲ್ಲ. ಒಂದು ಕೈಯಿಂದ ಏನಾಗುತ್ತದೆ, ಎರಡೂ ಚಕ್ರಗಳು ಬೇಕಲ್ಲವೆ. ಇಬ್ಬರಿದ್ದಾರೆ ಪರಸ್ಪರ ರೇಸ್ ಮಾಡುತ್ತಾರೆ. ಇನ್ನೊಂದು ಚಕ್ರವು ಜೊತೆ ಕೊಡಲಿಲ್ಲವೆಂದರೆ ಹಿಂದುಳಿಯುತ್ತಾರೆ ಆದರೆ ಒಬ್ಬರ ಕಾರಣ ಇನ್ನೊಬ್ಬರೂ ಸಹ ನಿಂತು ಬಿಡಬಾರದು. ಮೊಟ್ಟ ಮೊದಲು ಪ್ರವೃತ್ತಿ ಮಾರ್ಗವಾಗಿತ್ತು ನಂತರ ಅಪವಿತ್ರರಾಗುತ್ತಾರೆ ಅಂದರೆ ಬೀಳುತ್ತಲೇ ಹೋಗುತ್ತಾರೆ. ನಿಮ್ಮ ಬುದ್ಧಿಯಲ್ಲಿ ಪೂರ್ಣ ಜ್ಞಾನವಿದೆ, ಈ ವೃಕ್ಷವು ಹೇಗೆ ವೃದ್ಧಿಯಾಗುತ್ತದೆ, ಹೇಗೆ ಸೇರ್ಪಡೆಯಾಗುತ್ತಾ ಹೋಗುತ್ತದೆ. ಈ ರೀತಿ ಇಂತಹ ವೃಕ್ಷದ ಬಗ್ಗೆ ಯಾರೂ ತಿಳಿಸಲು ಸಾಧ್ಯವಿಲ್ಲ. ಯಾರ ಬುದ್ಧಿಯಲ್ಲೂ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವೇ ಇರುವುದಿಲ್ಲ ಆದ್ದರಿಂದ ತಂದೆಯು ತಿಳಿಸಿದ್ದರು - ನಾವು ರಚಯಿತನ ಮೂಲಕ ರಚಯಿತ ಮತ್ತು ರಚನೆಯ ಜ್ಞಾನದ ಅಂತ್ಯವನ್ನು ತಿಳಿದಿದ್ದೇವೆಂದು ಬರೆಯಿರಿ. ಏಕೆಂದರೆ ಮನುಷ್ಯರು ರಚಯಿತನನ್ನಾಗಲಿ, ರಚನೆಯನ್ನಾಗಲಿ ಅರಿತಿಲ್ಲ. ಬ್ರಹ್ಮಾಕುಮಾರ-ಕುಮಾರಿಯರ ವಿನಃ ಯಾರೂ ತಿಳಿಸಲು ಸಾಧ್ಯವಿಲ್ಲ. ನಾವು ಬ್ರಾಹ್ಮಣರಿಗೆ ಪರಮಪಿತ ಪರಮಾತ್ಮನೇ ಓದಿಸುತ್ತಾರೆ, ನಾವು ಬ್ರಾಹ್ಮಣರದೇ ಸರ್ವ ಶ್ರೇಷ್ಠವಾಗಿದೆ ಎಂದು ಮಕ್ಕಳಿಗೆ ತಿಳಿದಿದೆ ಅಂದಾಗ ಚಿತ್ರವನ್ನೂ ಸಹ ಅವಶ್ಯವಾಗಿ ತೋರಿಸಲಾಗುತ್ತದೆ. ಚಿತ್ರದ ವಿನಃ ಬುದ್ಧಿಯಲ್ಲಿ ಏನೂ ಕುಳಿತುಕೊಳ್ಳುವುದಿಲ್ಲ. ಚಿತ್ರವು ಬಹಳ ದೊಡ್ಡದಾಗಿರಬೇಕು. ವಿಭಿನ್ನ ಧರ್ಮಗಳ ವೃಕ್ಷವು ಹೇಗೆ ವೃದ್ಧಿಯಾಗುತ್ತದೆ ಎಂಬುದನ್ನೂ ಸಹ ಹೇಳಬೇಕು. ಮೊದಲು ಆತ್ಮನೇ ಪರಮಾತ್ಮ, ಪರಮಾತ್ಮನೇ ಆತ್ಮನೆಂದು ಹೇಳುತ್ತಿದ್ದರು. ಈಗ ತಂದೆಯು ಇದರ ಅರ್ಥವನ್ನು ತಿಳಿಸಿದ್ದಾರೆ. ಈ ಸಮಯದಲ್ಲಿ ನಾವೇ ಬ್ರಾಹ್ಮಣರು ನಂತರ ನಾವೇ ಹೊಸ ಜಗತ್ತಿನಲ್ಲಿ ದೇವತೆಗಳಾಗುತ್ತೇವೆ. ಈಗ ನಾವು ಪುರುಷೋತ್ತಮ ಸಂಗಮಯುಗದಲ್ಲಿದ್ದೇವೆ ಅಂದರೆ ಇದು ಪುರುಷೋತ್ತಮರಾಗುವ ಯುಗವಾಗಿದೆ. ರಚಯಿತ ಹಾಗೂ ರಚನೆ ಅರ್ಥಾತ್ ನಾವೇ ಅವರಾಗಿದ್ದೇವೆ ಎಂಬುದರ ಅರ್ಥವನ್ನು ತಾವು ತಿಳಿಸಬಹುದು. ಓಂ ಅಂದರೆ ಮೊದಲು ಆತ್ಮ ನಂತರ ಈ ಶರೀರ. ಆತ್ಮ ಅವಿನಾಶಿ ಮತ್ತು ಈ ಶರೀರವು ವಿನಾಶಿಯಾಗಿದೆ. ನಾವು ಈ ಶರೀರವನ್ನು ಧಾರಣೆ ಮಾಡಿ ಪಾತ್ರವನ್ನಭಿನಯಿಸುತ್ತೇವೆ - ಇದಕ್ಕೆ ಆತ್ಮಾಭಿಮಾನಿ ಎನ್ನಲಾಗುತ್ತದೆ. ನಾನಾತ್ಮ ಇಂತಹ ಪಾತ್ರವನ್ನು ಅಭಿನಯಿಸುತ್ತೇನೆ, ನಾನಾತ್ಮ ಇಂತಹದ್ದನ್ನು ಮಾಡುತ್ತೇನೆ, ನಾನಾತ್ಮ ಪರಮಾತ್ಮನ ಮಗುವಾಗಿದ್ದೇನೆ, ಎಷ್ಟು ವಿಚಿತ್ರವಾದ ಜ್ಞಾನವಾಗಿದೆ. ಈ ಜ್ಞಾನವು ತಂದೆಯಲ್ಲಿಯೇ ಇದೆ ಆದ್ದರಿಂದ ತಂದೆಯನ್ನೇ ಕರೆಯುತ್ತಾರೆ. ತಂದೆಯು ಜ್ಞಾನಸಾಗರ, ಅವರ ಹೋಲಿಕೆಯಲ್ಲಿ ಬೇರೆಯವರು ಅಜ್ಞಾನ ಸಾಗರ, ಅರ್ಧಕಲ್ಪ ಜ್ಞಾನ, ಅರ್ಧಕಲ್ಪ ಅಜ್ಞಾನ. ಜ್ಞಾನವು ಯಾರಿಗೂ ಗೊತ್ತಿಲ್ಲ. ರಚಯಿತನ ಮೂಲಕ ರಚನೆಯನ್ನು ತಿಳಿದುಕೊಳ್ಳುವುದಕ್ಕೆ ಜ್ಞಾನವೆನ್ನಲಾಗುತ್ತದೆ ಅಂದಮೇಲೆ ಖಂಡಿತ ರಚಯಿತನಲ್ಲಿಯೇ ಜ್ಞಾನವಿದೆಯಲ್ಲವೆ. ಆದ್ದರಿಂದ ಅವರಿಗೆ ರಚಯಿತ ಎನ್ನಲಾಗುತ್ತದೆ. ರಚಯಿತನು ಈ ರಚನೆಯನ್ನು ರಚಿಸುತ್ತಾರೆಂದು ಮನುಷ್ಯರು ತಿಳಿದುಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ - ಇದು ಅನಾದಿ, ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ರಚಯಿತನೆಂದು ಹೇಗೆ ಹೇಳುತ್ತಾರೆ. ಪ್ರಳಯವಾದ ನಂತರ ರಚಿಸಿದರೆ ರಚಯಿತ ಎನ್ನಬಹುದು. ತಂದೆಯು ಪತಿತ ಜಗತ್ತನ್ನು ಪಾವನ ಮಾಡುತ್ತಾರೆ, ಈ ಪೂರ್ಣ ವಿಶ್ವದ ಯಾವ ವೃಕ್ಷವಿದೆಯೋ ಅದರ ಆದಿ-ಮಧ್ಯ-ಅಂತ್ಯವನ್ನು ಮಧುರ ಮಕ್ಕಳೇ ತಿಳಿದುಕೊಂಡಿದ್ದಾರೆ. ಹೇಗೆ ಮಾಲಿಯು ಪ್ರತಿಯೊಂದು ಬೀಜ ಮತ್ತು ವೃಕ್ಷವನ್ನು ತಿಳಿದುಕೊಂಡಿರುತ್ತಾರಲ್ಲವೆ. ಬೀಜವನ್ನು ನೋಡಿದರೆ ಪೂರ್ಣ ವೃಕ್ಷವೇ ಬುದ್ಧಿಯಲ್ಲಿ ಬರುತ್ತದೆ. ಇವರು ಮನುಷ್ಯ ಸೃಷ್ಟಿಯ ಬೀಜವಾಗಿದ್ದಾರೆ, ಆದರೆ ಯಾರೂ ತಿಳಿದುಕೊಂಡಿಲ್ಲ. ಪರಮಪಿತ ಪರಮಾತ್ಮ ಸೃಷ್ಟಿಯ ಬೀಜರೂಪನಾಗಿದ್ದಾರೆ ಎಂದು ಗಾಯನ ಮಾಡುತ್ತಾರೆ. ಸತ್ಯ, ಚೈತನ್ಯ, ಆನಂದ ಸ್ವರೂಪನಾಗಿದ್ದಾರೆ, ಸುಖ-ಶಾಂತಿ ಪವಿತ್ರತೆಯ ಸಾಗರನಾಗಿದ್ದಾರೆ. ತಮಗೆ ಗೊತ್ತಿದೆ - ಈ ಪೂರ್ಣ ಜ್ಞಾನವು ಪರಮಪಿತ ಪರಮಾತ್ಮನೇ ಈ ಶರೀರದ ಮೂಲಕ ಕೊಡುತ್ತಿದ್ದಾರೆ ಅಂದಮೇಲೆ ಖಂಡಿತ ಇಲ್ಲಿಯೇ ಬರುತ್ತಾರಲ್ಲವೆ. ಪತಿತರನ್ನು ಪ್ರೇರಣೆಯಿಂದ ಹೇಗೆ ಪಾವನ ಮಾಡುವುದು? ತಂದೆಯು ಬಂದು ಎಲ್ಲರನ್ನೂ ಪಾವನ ಮಾಡಿ ಕರೆದೊಯ್ಯುತ್ತಾರೆ. ಆ ತಂದೆಯೇ ತಮಗೆ ವಿದ್ಯೆಯನ್ನು ಓದಿಸುತ್ತಿದ್ದಾರೆ. ಇದು ಪುರುಷೋತ್ತಮ ಸಂಗಮಯುಗವಾಗಿದೆ, ಇದರ ಬಗ್ಗೆ ಹೇಗೆ ಪುರುಷ ತಮೋಪ್ರಧಾನರಿಂದ ಶ್ರೇಷ್ಠ ಸತೋಪ್ರಧಾನರು ಆಗುತ್ತಾರೆಂದು ನೀವು ಭಾಷಣದಲ್ಲಿ ತಿಳಿಸಬಹುದು. ನಿಮ್ಮ ಬಳಿ ಬಹಳಷ್ಟು ವಿಷಯಗಳಿವೆ, ಈ ಪತಿತ-ತಮೋಪ್ರಧಾನ ಜಗತ್ತು ಸತೋಪ್ರಧಾನ ಹೇಗಾಗುತ್ತದೆ, ಇದೂ ಸಹ ತಿಳಿದುಕೊಳ್ಳಲು ಯೋಗ್ಯವಾಗಿದೆ. ಮುಂದೆ ಹೋದಂತೆ ನಿಮ್ಮ ಈ ಜ್ಞಾನವನ್ನು ಕೇಳುತ್ತಾರೆ. ಭಲೇ ಬಿಟ್ಟು ಬಿಡುತ್ತಾರೆ ಮತ್ತೆ ಬರುತ್ತಾರೆ ಏಕೆಂದರೆ ಗತಿ-ಸದ್ಗತಿಯ ಹಟ್ಟಿ ಇದೊಂದೇ ಆಗಿದೆ. ಸರ್ವರ ಸದ್ಗತಿದಾತ ಒಬ್ಬರೇ ಸರ್ವ ಶ್ರೇಷ್ಠನಾಗಿದ್ದಾರೆ, ಅವರು ನಮ್ಮನ್ನು ಶ್ರೇಷ್ಠರನ್ನಾಗಿ ಮಾಡುತ್ತಾರೆ. ಸತ್ಯಯುಗವು ಶ್ರೇಷ್ಠವಾಗಿದೆ, ಕಲಿಯುಗವು ಭ್ರಷ್ಟವಾಗಿದೆ. ಭ್ರಷ್ಠಾಚಾರಿ ಎಂದು ಹೇಳುತ್ತಾರೆ ಆದರೆ ತಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಪತಿತ ಜಗತ್ತಿನಲ್ಲಿ ಒಬ್ಬರೂ ಸಹ ಶ್ರೇಷ್ಠರಿಲ್ಲ. ಶ್ರೀ ಶ್ರೀ ಯಾವಾಗ ಬರುತ್ತಾರೆಯೋ ಆಗ ಬಂದು ಶ್ರೀ (ಶ್ರೇಷ್ಠ) ಯನ್ನಾಗಿ ಮಾಡುತ್ತಾರೆ. ಶ್ರೀ ಎಂಬ ಬಿರುದು ಸತ್ಯಯುಗದ ದೇವತೆಗಳಿಗಿತ್ತು, ಇಲ್ಲಿ ಎಲ್ಲರಿಗೂ ಶ್ರೀ ಶ್ರೀ ಎನ್ನುತ್ತಿರುತ್ತಾರೆ. ವಾಸ್ತವದಲ್ಲಿ ಶ್ರೀ ಎಂಬುದು ಪವಿತ್ರತೆಯ ಅಕ್ಷರವಾಗಿದೆ. ಬೇರೆ ಧರ್ಮದವರು ಯಾರೂ ಸಹ ತಮ್ಮನ್ನು ಶ್ರೀ ಎಂದು ಹೇಳಿಕೊಳ್ಳುವುದಿಲ್ಲ. ಶ್ರೀ ಪೋಪ್ ಎನ್ನುತ್ತಾರೇನು? ಇಲ್ಲಿ ಎಲ್ಲರಿಗೂ ಹೇಳುತ್ತಿರುತ್ತಾರೆ. ಮುತ್ತುಗಳನ್ನು ಆರಿಸಿಕೊಳ್ಳುವ ಹಂಸವೆಲ್ಲಿ! ಕೊಳಕನ್ನು ತಿನ್ನುವ ಕೊಕ್ಕರೆಯಲ್ಲಿ! ವ್ಯತ್ಯಾಸವಿದೆಯಲ್ಲವೆ. ಈ ದೇವತೆಗಳು ಹೂಗಳಾಗಿದ್ದಾರೆ, ಅದು ಭಗವಂತನ ಹೂದೋಟವಾಗಿದೆ. ತಂದೆಯು ತಮ್ಮನ್ನು ಹೂಗಳನ್ನಾಗಿ ಮಾಡುತ್ತಿದ್ದಾರೆ ಬಾಕಿ ಹೂಗಳಲ್ಲಿ ವೆರೈಟಿ ಇದೆ. ಎಲ್ಲದಕ್ಕಿಂತ ಒಳ್ಳೆಯ ಹೂವೆಂದರೆ ಹೂಗಳ ರಾಜ. ಈ ಲಕ್ಷ್ಮೀ-ನಾರಾಯಣರಿಗೆ ಹೊಸ ಜಗತ್ತಿನ ಹೂಗಳ ರಾಜ-ರಾಣಿ ಎನ್ನಬಹುದು. ತಾವು ಮಕ್ಕಳಿಗೆ ಆಂತರಿಕ ಖುಷಿಯಿರಬೇಕು. ಇದರಲ್ಲಿ ಬಾಹ್ಯವಾಗಿ ಏನೂ ಮಾಡಲಾಗುವುದಿಲ್ಲ. ಈ ದೀಪ ಮುಂತಾದವುಗಳನ್ನು ಬೆಳಗಿಸುವುದರ ಅರ್ಥವೂ ಬೇಕು. ಈ ಶಿವ ಜಯಂತಿಯಲ್ಲಿ ಬೆಳಗಬೇಕೋ ಅಥವಾ ದೀಪಾವಳಿಯಲ್ಲಿಯೋ? ದೀಪಾವಳಿಯಲ್ಲಿ ಲಕ್ಷ್ಮೀಯನ್ನು ಆಹ್ವಾನ ಮಾಡುತ್ತಾರೆ, ಅವರಿಂದ ಸಂಪತ್ತನ್ನು ಬೇಡುತ್ತಾರೆ, ಭಂಡಾರವನ್ನು ತುಂಬುವವರು ಭೋಲಾಭಂಡಾರಿಯಾಗಿದ್ದಾರೆ. ತಮಗೆ ಗೊತ್ತಿದೆ- ಶಿವ ತಂದೆಯ ಮೂಲಕ ನಮ್ಮದು ಅಪಾರ ಖಜಾನೆಯಿಂದ ತುಂಬುತ್ತದೆ. ಇದು ಜ್ಞಾನ ರತ್ನ ಧನವಾಗಿದೆ. ಅಲ್ಲಿಯೂ ಸಹ ತಮ್ಮ ಬಳಿ ಅಪಾರ ಸಂಪತ್ತಿರುತ್ತದೆ. ಹೊಸ ಜಗತ್ತಿನಲ್ಲಿ ತಾವು ಐಶ್ವರ್ಯವಂತರಾಗುತ್ತೀರಿ. ಸತ್ಯಯುಗದಲ್ಲಿ ಅಪಾರವಾದ ವಜ್ರ-ವೈಡೂರ್ಯಗಳಿತ್ತು ಮತ್ತೆ ಅದೇ ಇರುತ್ತದೆ. ಮನುಷ್ಯರು ತಬ್ಬಿಬ್ಬಾಗುತ್ತಾರೆ, ಇದೆಲ್ಲವೂ ಸಮಾಪ್ತಿಯಾಗುತ್ತದೆ ಮತ್ತೆ ಎಲ್ಲಿಂದ ಬರುತ್ತದೆ? ಗಣಿಗಳು ಅಗೆದದ್ದಾಯಿತು, ಬೆಟ್ಟಗಳು ಬಿದ್ದು ಹೋಗುತ್ತವೆ ಮತ್ತೆ ಹೇಗೆ ಇರುತ್ತವೆ? ಹೇಳಿ- ಇತಿಹಾಸವು ಪುನರಾವರ್ತನೆಯಾಗುತ್ತದೆಯಲ್ಲವೆ. ಏನೆಲ್ಲಾ ಇತ್ತು ಅದೆಲ್ಲವೂ ಪುನರಾವರ್ತನೆಯಾಗುತ್ತದೆ. ಸ್ವರ್ಗದ ಮಾಲೀಕರಾಗುವ ಪುರುಷಾರ್ಥವನ್ನು ತಾವು ಮಕ್ಕಳು ಮಾಡುತಿದ್ದೀರಿ. ಸ್ವರ್ಗದ ಇತಿಹಾಸ-ಭೂಗೋಳವು ಮತ್ತೆ ಪುನರಾವರ್ತನೆಯಾಗುತ್ತದೆ. ಗೀತೆಯಲ್ಲಿ ಇದೆಯಲ್ಲವೆ- ತಾವು ಪೂರ್ಣ ಸೃಷ್ಟಿ, ಪೂರ್ಣ ಸಮುದ್ರ, ಪೂರ್ಣ ಪೃಥ್ವಿ ಯಾವುದನ್ನು ನಮಗೆ ನೀವು ಕೊಟ್ಟಿದ್ದೀರೋ ಅದನ್ನು ನಮ್ಮಿಂದ ಯಾರೂ ಸಹ ಕಸಿದುಕೊಳ್ಳಲು ಸಾಧ್ಯವಿಲ್ಲ. ಅದರ ಹೋಲಿಕೆಯಲ್ಲಿ ಇದೆಲ್ಲಾ ಏನು! ಜಮೀನಿಗಾಗಿ, ನೀರಿಗಾಗಿ, ಭಾಷೆಗಾಗಿ ಜಗಳವಾಡುತ್ತಾರೆ. ಸ್ವರ್ಗದ ರಚಯಿತ ತಂದೆಯ ಜನ್ಮ ದಿನವನ್ನು ಆಚರಿಸಲಾಗುತ್ತದೆ ಖಂಡಿತ ಅವರು ಸ್ವರ್ಗದ ಒಡೆತನವನ್ನು ಕೊಟ್ಟಿದ್ದಾರೆ, ಈಗ ನಿಮಗೆ ಓದಿಸುತ್ತಿದ್ದಾರೆ. ತಾವು ಈ ಶರೀರದ ನಾಮ-ರೂಪದಿಂದ ಭಿನ್ನರಾಗಿ ತಮ್ಮನ್ನು ಆತ್ಮನೆಂದು ತಿಳಿಯಬೇಕು. ಯೋಗ ಬಲದಿಂದ ಅಥವಾ ಶಿಕ್ಷೆಯನ್ನು ಅನುಭವಿಸಿಯಾದರೂ ಪವಿತ್ರರಾಗಬೇಕು ನಂತರ ಪದವಿಯು ಕಡಿಮೆಯಾಗುತ್ತದೆ. ನಾವೆಷ್ಟು ಪದವಿಯನ್ನು ಪಡೆಯುತ್ತೇವೆ ಎಂಬುದು ವಿದ್ಯಾರ್ಥಿಯ ಬುದ್ಧಿಯಲ್ಲಿ ಬರುತ್ತದೆಯಲ್ಲವೆ. ಶಿಕ್ಷಕರು ಇಷ್ಟು ಓದಿಸಿದ್ದಾರೆ ಅಂದಾಗ ಶಿಕ್ಷಕರಿಗೂ ಸಹ ಬಹುಮಾನವನ್ನು ಕೊಡುತ್ತಾರೆ. ತಂದೆಯು ತಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಮತ್ತೆ ಭಕ್ತಿ ಮಾರ್ಗದಲ್ಲಿ ಅವರನ್ನು ನೆನಪು ಮಾಡುತ್ತಿರುತ್ತೀರಿ ಬಾಕಿ ತಂದೆಗೆ ತಾವು ಏನು ಉಡುಗೊರೆಯನ್ನು ಕೊಡುತ್ತೀರಿ? ಇಲ್ಲಂತೂ ಏನು ನೋಡುತ್ತೀರೋ ಅದಂತೂ ಇರುವುದೇ ಇಲ್ಲ. ಇದು ಹಳೆಯ ಕೊಳಕಾದ ಜಗತ್ತಾಗಿದೆ ಅದಕ್ಕಾಗಿ ನನ್ನನ್ನು ಕರೆಯುತ್ತಾರೆ. ತಂದೆಯು ತಮ್ಮನ್ನು ಪತಿತರಿಂದ ಪಾವನ ಮಾಡುತ್ತಾರೆ. ಈ ಆಟವನ್ನು ನೆನಪು ಮಾಡಬೇಕು. ನನ್ನಲ್ಲಿ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆಯೋ ಅದನ್ನು ನಾನು ನಿಮಗೆ ಹೇಳುತ್ತೇನೆ. ತಾವು ಈಗ ಕೇಳುತ್ತೀರಿ ಮತ್ತೆ ಮರೆತು ಹೋಗುತ್ತೀರಿ. 5000 ವರ್ಷಗಳ ನಂತರ ಮತ್ತೆ ಚಕ್ರವು ಪೂರ್ಣವಾಗುತ್ತದೆ. ತಮ್ಮ ಪಾತ್ರವು ಎಷ್ಟು ಪ್ರಿಯವಾಗಿದೆ, ತಾವು ಸತೋಪ್ರಧಾನ ಹಾಗೂ ಪ್ರಿಯರಾಗುತ್ತೀರಿ ಮತ್ತೆ ತಾವೇ ತಮೋಪ್ರಧಾನರೂ ಆಗುತ್ತೀರಿ. ಬಾಬಾ ಬನ್ನಿ ಎಂದು ತಾವೇ ಕರೆಯುತ್ತೀರಿ. ಈಗ ನಾನು ಬಂದಿದ್ದೇನೆ ಒಂದು ವೇಳೆ ನಿಶ್ಚಯವಿದ್ದರೆ ಶ್ರೀಮತದಂತೆ ನಡೆಯಬೇಕು, ತಪ್ಪು ಮಾಡಬಾರದು. ಕೆಲವು ಮಕ್ಕಳು ಮತ-ಭೇದದಲ್ಲಿ ಬಂದು ವಿದ್ಯೆಯನ್ನು ಬಿಡುತ್ತಾರೆ. ಶ್ರೀಮತದಂತೆ ನಡೆಯುವುದಿಲ್ಲ, ಓದುವುದಿಲ್ಲವೆಂದರೆ ನೀವೇ ಫೇಲ್ ಆಗುತ್ತೀರಿ. ತಮ್ಮ ಮೇಲೆ ದಯೆ ತೋರಿಸಿಕೊಳ್ಳಿ ಎಂದು ತಂದೆಯು ಹೇಳುತ್ತಾರೆ. ಪ್ರತಿಯೊಬ್ಬರೂ ಓದಿ ತಮಗೆ ರಾಜ ತಿಲಕವನ್ನು ಕೊಟ್ಟುಕೊಳ್ಳಬೇಕು. ತಂದೆಗಂತೂ ಓದಿಸುವ ಕೆಲಸವಾಗಿದೆ, ಇದರಲ್ಲಿ ಆಶೀರ್ವಾದದ ಮಾತಿಲ್ಲ ನಂತರ ಎಲ್ಲರ ಮೇಲೂ ಆಶೀರ್ವಾದ ಮಾಡಲಾಗುತ್ತದೆ. ಈ ಕೃಪೆ ಮುಂತಾದವನ್ನು ಭಕ್ತಿ ಮಾರ್ಗದಲ್ಲಿ ಬೇಡುತ್ತಾರೆ. ಇಲ್ಲಿ ಆ ಮಾತಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
೧. ಪ್ರವೃತ್ತಿಯಲ್ಲಿರುತ್ತಾ ಪರಸ್ಪರದಲ್ಲಿ ಸ್ಪರ್ಧೆ ಮಾಡಬೇಕು ಆದರೆ ಒಂದು ವೇಳೆ ಯಾವುದೇ ಕಾರಣದಿಂದ ಒಂದು ಚಕ್ರ ನಿಧಾನವಾದರೆ ಅದರ ಹಿಂದೆ ನಿಂತುಕೊಳ್ಳಬಾರದು, ಸ್ವಯಂನ್ನು ರಾಜ್ಯ ತಿಲಕಕ್ಕೆ ಯೋಗ್ಯ ಮಾಡಬೇಕು.

೨. ಶಿವಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಬೇಕು ಏಕೆಂದರೆ ಶಿವಬಾಬಾ ಯಾವ ಜ್ಞಾನ ರತ್ನಗಳನ್ನು ಕೊಡುತ್ತಾರೆಯೋ ಅದರ ಮೇಲೆ ನೀವು ಹೊಸ ಜಗತ್ತಿನಲ್ಲಿ ಶ್ರೀಮಂತರಾಗುತ್ತೀರಿ. ನಿಮ್ಮ ಎಲ್ಲಾ ಭಂಡಾರವು ಸಂಪನ್ನವಾಗುತ್ತದೆ.

ವರದಾನ:
ಸರ್ವ ಪದಾರ್ಥಗಳ ಆಸಕ್ತಿಗಳಿಂದ ನ್ಯಾರಾ ಅನಾಸಕ್ತ, ಪ್ರಕೃತಿಜೀತ್ ಭವ.

ಒಂದು ವೇಳೆ ಯಾವುದಾದರೂ ಪದಾರ್ಥ ಕರ್ಮೇಂದ್ರಿಯವನ್ನು ವಿಚಲಿತ ಮಾಡುತ್ತಿದೆ ಎಂದರೆ ಆಸಕ್ತಿಯ ಭಾವ ಉತ್ಪನ್ನವಾಗುವುದು ಆದರೂ ಸಹಾ ನ್ಯಾರಾ ಆಗಲು ಸಾಧ್ಯವಿಲ್ಲ. ಇಚ್ಛೆಗಳೇ ಆಸಕ್ತಿಯ ರೂಪವಾಗಿದೆ. ಕೆಲವರು ಹೇಳುತ್ತಾರೆ ಇಚ್ಛೆ ಇಲ್ಲ ಅದರೆ ಚೆನ್ನಾಗಿದೆ ಎನ್ನಿಸುತ್ತದೆ. ಹಾಗೆ ಇದೂ ಸಹಾ ಸೂಕ್ಷ್ಮ ಆಸಕ್ತಿಯಾಗಿದೆ-ಸೂಕ್ಷ್ಮ ರೀತಿಯಿಂದ ಇದರ ಚೆಕಿಂಗ್ ಮಾಡಿಕೊಳ್ಳಿ. ಈ ಪದಾರ್ಥ ಯಾವುದು ಅಲ್ಪಕಾಲದ ಸುಖ ಕೊಡುವ ಸಾಧನವಾಗಿದೆ ಇದು ಆಕರ್ಷಣೆ ಮಾಡುತ್ತಿಲ್ಲ ತಾನೆ? ಈ ಪದಾರ್ಥ ಪ್ರಕೃತಿಯ ಸಾಧನವಾಗಿದೆ, ಯಾವಾಗ ಇದರಿಂದ ಅನಾಸಕ್ತ ಅರ್ಥಾತ್ ನ್ಯಾರಾ ಆಗುವಿರಿ ಆಗ ಪ್ರಕೃತಿಜೀತ್ ಆಗುವಿರಿ.

ಸ್ಲೋಗನ್:
ನನ್ನದು-ನನ್ನದು ಎನ್ನುವ ಗೊಂದಲವನ್ನು ಬಿಟ್ಟು ಬೇಹದ್ಧಿನಲ್ಲಿರಿ ಆಗ ಹೇಳಲಾಗುವುದು ವಿಶ್ವಕಲ್ಯಾಣಕಾರಿ.