06.02.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ಮಹಾವೀರರಾಗಿದ್ದೀರಿ, ಮಾಯೆಯ ಬಿರುಗಾಳಿಗಳಿಗೆ ನೀವು ಹೆದರಬಾರದು, ಒಬ್ಬ ತಂದೆಯ ವಿನಃ ಮತ್ತ್ಯಾವುದೇ ಚಿಂತೆ ಮಾಡದೆ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ.

ಪ್ರಶ್ನೆ:
ಮಕ್ಕಳಲ್ಲಿ ಯಾವ ಧೈರ್ಯವು ಸದಾ ಇದ್ದಾಗ ನೀವು ಶ್ರೇಷ್ಠ ಪದವಿಯನ್ನು ಪಡೆಯುವಿರಿ?

ಉತ್ತರ:
ಶ್ರೀಮತದಂತೆ ನಡೆದು ಪವಿತ್ರರಾಗುವ ಧೈರ್ಯವಿರಬೇಕು, ಭಲೆ ಎಷ್ಟೇ ಏರುಪೇರಿರಲಿ, ದುಃಖವನ್ನು ಸಹನೆ ಮಾಡಬೇಕಾಗಲಿ ಆದರೆ ತಂದೆಯು ಪವಿತ್ರರಾಗುವ ಯಾವ ಶ್ರೇಷ್ಠ ಮತವನ್ನು ಕೊಟ್ಟಿದ್ದಾರೆಯೋ ಅದರನುಸಾರ ನಡೆಯುತ್ತಿದ್ದಾಗ ಬಹಳ ಶ್ರೇಷ್ಠ ಪದವಿಯನ್ನು ಪಡೆಯುವಿರಿ. ಯಾವುದೇ ಮಾತಿನಲ್ಲಿ ಹೆದರಬಾರದು. ಏನೇ ಆದರೂ ನತಿಂಗ್ನ್ಯೂ (ಹೊಸದೇನಲ್ಲ).

ಗೀತೆ:
ಭೋಲಾನಾಥನಿಗಿಂತ ಭಿನ್ನ...

ಓಂ ಶಾಂತಿ.
ಇದು ಭಕ್ತಿಮಾರ್ಗದವರ ಗೀತೆಯಾಗಿದೆ. ಜ್ಞಾನಮಾರ್ಗದಲ್ಲಿ ಗೀತೆ ಇತ್ಯಾದಿಗಳ ಅವಶ್ಯಕತೆಯಿಲ್ಲ ಏಕೆಂದರೆ ನಮಗೆ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗಬೇಕಾಗಿದೆ. ಭಕ್ತಿಮಾರ್ಗದ ರೀತಿ-ನೀತಿಗಳು ಇಲ್ಲಿ ಬರಲು ಸಾಧ್ಯವಿಲ್ಲ. ನೀವು ಮಕ್ಕಳು ಯಾವುದೇ ಕವಿತೆ ಇತ್ಯಾದಿಗಳನ್ನು ರಚಿಸುತ್ತೀರೆಂದರೆ ಅವು ಅನ್ಯರಿಗೆ ತಿಳಿಸುವುದಕ್ಕಾಗಿ. ಅದರ ಅರ್ಥವನ್ನು ಎಲ್ಲಿಯವರೆಗೆ ನೀವು ತಿಳಿಸುವುದಿಲ್ಲವೋ ಅಲ್ಲಿಯವರೆಗೆ ಅವು ಅರ್ಥವಾಗುವುದಿಲ್ಲ. ಈಗ ನಿಮಗೆ ತಂದೆಯು ಸಿಕ್ಕಿದ್ದಾರೆ ಅಂದಮೇಲೆ ಖುಷಿಯ ನಶೆಯೇರಬೇಕು. ತಂದೆಯು 84 ಜನ್ಮಗಳ ಜ್ಞಾನವನ್ನೂ ತಿಳಿಸಿದ್ದಾರೆ. ಖುಷಿಯಿರಲಿ - ನಾವೀಗ ಸ್ವದರ್ಶನ ಚಕ್ರಧಾರಿಗಳಾಗಿದ್ದೇವೆ, ತಂದೆಯಿಂದ ವಿಷ್ಣು ಪುರಿಯ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ನಿಶ್ಚಯ ಬುದ್ಧಿ ವಿಜಯಂತಿ. ಯಾರಿಗೆ ನಿಶ್ಚಯವಿರುವುದೋ ಅವರು ಸತ್ಯಯುಗದಲ್ಲಿ ಖಂಡಿತ ಹೋಗುವರು ಅಂದಮೇಲೆ ಮಕ್ಕಳಿಗೆ ಸದಾ ಖುಷಿಯಿರಬೇಕು ಫಾಲೋ ಫಾದರ್. ಮಕ್ಕಳಿಗೆ ತಿಳಿದಿದೆ - ನಿರಾಕಾರ ಶಿವ ತಂದೆಯು ಯಾವಾಗ ಇವರಲ್ಲಿ ಪ್ರವೇಶ ಮಾಡಿದರೋ ಆಗಿನಿಂದ ಬಹಳ ಏರುಪೇರುಗಳಾಯಿತು. ಪವಿತ್ರತೆಗಾಗಿ ಬಹಳ ಜಗಳ ನಡೆಯಿತು. ಮಕ್ಕಳು ದೊಡ್ಡವರಾಗುತ್ತಾರೆಂದರೆ ಅವರಿಗೆ ಬೇಗನೆ ವಿವಾಹ ಮಾಡಿಕೊಳ್ಳಿ ವಿವಾಹವಿಲ್ಲದೆ ಕೆಲಸ ಹೇಗೆ ನಡೆಯುತ್ತದೆ ಎಂದು ಹೇಳುತ್ತಾರೆ. ಭಲೆ ಮನುಷ್ಯರು ಗೀತೆಯನ್ನು ಓದುತ್ತಾರೆ ಆದರೆ ಅದರಿಂದ ಏನನ್ನೂ ತಿಳಿದುಕೊಳ್ಳುವುದಿಲ್ಲ. ಎಲ್ಲರಿಗಿಂತ ಹೆಚ್ಚಿನದಾಗಿ ಈ ಬ್ರಹ್ಮಾ ತಂದೆಗೆ ಅಭ್ಯಾಸವಿತ್ತು. ಗೀತೆ ಓದುವುದನ್ನು ಒಂದು ದಿನವೂ ತಪ್ಪಿಸುತ್ತಿರಲಿಲ್ಲ. ಯಾವಾಗ ಗೀತೆಯ ಭಗವಂತ ಶಿವನೆಂದು ಅರ್ಥವಾಯಿತು ಆಗ ನಾನು ವಿಶ್ವದ ಮಾಲೀಕನಾಗುತ್ತೇನೆಂದು ನಶೆಯೇರಿ ಬಿಟ್ಟಿತು. ಇದು ಶಿವ ಭಗವಾನುವಾಚ ಆಗಿದೆ ಅಂದಾಗ ಪವಿತ್ರತೆಗಾಗಿ ಎಷ್ಟೊಂದು ಹೊಡೆದಾಟಗಳಾಯಿತು, ಇದರಲ್ಲಿ ಧೈರ್ಯ ಬೇಕಲ್ಲವೆ. ನೀವು ಮಹಾವೀರ-ಮಹಾವೀರಿಣಿಯರಾಗಿದ್ದೀರಿ. ಒಬ್ಬ ತಂದೆಯ ಚಿಂತೆಯನ್ನು ಬಿಟ್ಟು ಮತ್ತ್ಯಾವುದರ ಚಿಂತೆ ಮಾಡಬಾರದು. ಪುರುಷನು ರಚಯಿತನಾಗಿದ್ದಾನೆ, ರಚಯಿತನು ಪಾವನರಾಗುತ್ತಾರೆಂದರೆ ರಚನೆಯನ್ನೂ ಪಾವನ ಮಾಡುತ್ತಾರೆ. ಈ ಮಾತಿನ ಮೇಲೂ ಬಹಳ ಜಗಳ ನಡೆಯಿತು, ದೊಡ್ಡ-ದೊಡ್ಡ ಮನೆಗಳಿಂದ ಹೊರಟು ಬಂದರು, ಯಾರದೇ ಚಿಂತೆ ಮಾಡಲಿಲ್ಲ. ಯಾರ ಅದೃಷ್ಟದಲ್ಲಿಲ್ಲವೋ ಅವರು ಹೇಗೆ ತಿಳಿದುಕೊಳ್ಳುವರು! ಪವಿತ್ರರಾಗಿರಬೇಕೆಂದರೆ ಇರಿ, ಇಲ್ಲವೆಂದರೆ ಹೋಗಿ, ತಮ್ಮ ಪ್ರಬಂಧ ಮಾಡಿಕೊಳ್ಳಿ. ಇಷ್ಟು ಧೈರ್ಯ ಬೇಕಲ್ಲವೆ. ತಂದೆಯ ಮುಂದೆ ಎಷ್ಟೊಂದು ಜಗಳವು ನಡೆಯಿತು! ಆದರೆ ತಂದೆಯು ಎಂದಾದರೂ ಬೇಸರವಾಗಿರುವುದನ್ನು ನೋಡಿದಿರಾ? ಅಮೇರಿಕಾದವರೆಗೆ ಪತ್ರಗಳಲ್ಲಿ ಸುದ್ಧಿಯು ಹೊರಟಿತು. ಇದೂ ಹೊಸದೇನಲ್ಲ. ಇದು ಕಲ್ಪದ ಹಿಂದಿನ ತರಹ ಆಗುತ್ತಿದೆ, ಇದರಲ್ಲಿ ಹೆದರುವ ಮಾತಿಲ್ಲ. ನಾವಂತೂ ನಮ್ಮ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ತಮ್ಮ ರಚನೆಯನ್ನು ರಕ್ಷಣೆ ಮಾಡಬೇಕಾಗಿದೆ. ತಂದೆಗೆ ಗೊತ್ತಿದೆ, ಇಡೀ ರಚನೆಯು ಈ ಸಮಯದಲ್ಲಿ ಪತಿತವಾಗಿದೆ, ನಾನೇ ಎಲ್ಲರನ್ನೂ ಪಾವನ ಮಾಡಬೇಕಾಗಿದೆ. ಹೇ ಪತಿತ-ಪಾವನ, ಮುಕ್ತಿದಾತ ಬನ್ನಿ ಎಂದು ಎಲ್ಲರೂ ತಂದೆಗೆ ಹೇಳುತ್ತಾರೆ ಅಂದಮೇಲೆ ಅವರಿಗೆ ದಯೆ ಬರುತ್ತದೆ, ದಯಾಹೃದಯಿಯಲ್ಲವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಯಾವುದೇ ಮಾತಿನಲ್ಲಿ ಹೆದರಬೇಡಿ, ಹೆದರುವುದರಿಂದ ಇಷ್ಟು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಮಾತೆಯರ ಮೇಲೇ ಅತ್ಯಾಚಾರಗಳು ನಡೆಯುತ್ತವೆ. ದ್ರೌಪದಿಯನ್ನು ವಿವಸ್ತ್ರ ಮಾಡುತ್ತಿದ್ದರೆಂಬ ಮಾತೂ ಇದೆ. ತಂದೆಯು 21 ಜನ್ಮಗಳಿಗಾಗಿ ಅಪವಿತ್ರರಾಗುವುದರಿಂದ ರಕ್ಷಿಸುತ್ತಾರೆ. ಪ್ರಪಂಚದವರಿಗೆ ಈ ಮಾತುಗಳು ತಿಳಿದಿಲ್ಲ. ಪತಿತ, ತಮೋಪ್ರಧಾನ ಹಳೆಯ ಸೃಷ್ಟಿಯು ಆಗಲೇಬೇಕಾಗಿದೆ. ಪ್ರತಿಯೊಂದು ವಸ್ತು ಹೊಸದರಿಂದ ಮತ್ತೆ ಹಳೆಯದು ಖಂಡಿತ ಆಗಬೇಕಾಗಿದೆ. ಹಳೆಯ ಮನೆಯನ್ನು ಬಿಡಲೇಬೇಕಾಗುತ್ತದೆ. ಹೊಸ ಪ್ರಪಂಚ ಸತ್ಯಯುಗ, ಹಳೆಯ ಪ್ರಪಂಚ ಕಲಿಯುಗ.... ಸದಾ ಇರಲು ಸಾಧ್ಯವಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇದು ಸೃಷ್ಟಿಚಕ್ರವಾಗಿದೆ, ದೇವಿ-ದೇವತೆಗಳ ರಾಜ್ಯವು ಪುನಃ ಸ್ಥಾಪನೆಯಾಗುತ್ತಿದೆ. ತಂದೆಯೂ ತಿಳಿಸುತ್ತಾರೆ - ನಾನು ನಿಮಗೆ ಪುನಃ ಗೀತಾ ಜ್ಞಾನವನ್ನು ತಿಳಿಸುತ್ತೇನೆ. ಇಲ್ಲಿ ರಾವಣ ರಾಜ್ಯದಲ್ಲಿ ದುಃಖವಿದೆ, ಯಾವುದಕ್ಕೆ ರಾಮ ರಾಜ್ಯವೆಂದು ಹೇಳಲಾಗುತ್ತದೆ ಎಂಬುದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಸ್ವರ್ಗ ಅಥವಾ ರಾಮ ರಾಜ್ಯದ ಸ್ಥಾಪನೆ ಮಾಡಲು ಬಂದಿದ್ದೇನೆ. ನೀವು ಮಕ್ಕಳು ಅನೇಕ ಬಾರಿ ರಾಜ್ಯವನ್ನು ತೆಗೆದುಕೊಂಡಿರಿ ಮತ್ತೆ ಕಳೆದುಕೊಂಡಿದ್ದೀರಿ. ಇದು ಎಲ್ಲರ ಬುದ್ಧಿಯಲ್ಲಿದೆ, 21 ಜನ್ಮಗಳು ನಾವು ಸತ್ಯಯುಗದಲ್ಲಿರುತ್ತೇವೆ, ಅದಕ್ಕೆ 21 ಪೀಳಿಗೆಯೆಂದು ಹೇಳಲಾಗುತ್ತದೆ ಅರ್ಥಾತ್ ಯಾವಾಗ ವೃದ್ಧಾವಸ್ಥೆಯಾಗುವುದೋ ಆಗ ಶರೀರ ಬಿಡುತ್ತಾರೆ. ಎಂದೂ ಅಕಾಲಮೃತ್ಯುವಾಗುವುದಿಲ್ಲ. ನೀವೀಗ ತ್ರಿಕಾಲದರ್ಶಿಗಳಾಗಿ ಬಿಟ್ಟಿದ್ದೀರಿ. ಶಿವ ತಂದೆಯು ಯಾರೆಂಬುದು ನಿಮಗೆ ತಿಳಿದಿದೆ. ಶಿವನ ಮಂದಿರಗಳನ್ನೂ ಬಹಳಷ್ಟು ಮಾಡಿದ್ದಾರೆ. ಮೂರ್ತಿಯನ್ನಂತೂ ಮನೆಯಲ್ಲಿ ಬೇಕಾದರೂ ಇಟ್ಟುಕೊಳ್ಳಬಹುದಲ್ಲವೆ. ಆದರೆ ಭಕ್ತಿಮಾರ್ಗವು ಡ್ರಾಮಾದಲ್ಲಿ ನಿಗಧಿಯಾಗಿದೆ. ಕೃಷ್ಣ ಅಥವಾ ಶಿವನ ಮೂರ್ತಿಯನ್ನು ಮನೆಯಲ್ಲಿ ಬೇಕಾದರೂ ಇಟ್ಟುಕೊಳ್ಳಬಹುದು ಏಕೆಂದರೆ ಚಿತ್ರವು ಒಂದೇ ಆಗಿದೆ ಅಂದಮೇಲೆ ಅಷ್ಟು ದೂರ-ದೂರದವರೆಗೆ ಏಕೆ ಹೋಗುತ್ತಾರೆ? ಅವರ ಬಳಿ ಹೋಗುವುದರಿಂದ ಕೃಷ್ಣ ಪುರಿಯ ಆಸ್ತಿಯು ಸಿಗುವುದೇ! ನೀವೀಗ ತಿಳಿದುಕೊಂಡಿದ್ದೀರಿ - ಜನ್ಮ-ಜನ್ಮಾಂತರದಿಂದ ನಾವು ಭಕ್ತಿ ಮಾಡುತ್ತಾ ಬಂದಿದ್ದೇವೆ. ರಾವಣ ರಾಜ್ಯದ ಆಡಂಬರ ನೋಡಿ ಎಷ್ಟಿದೆ! ಇದು ಅಂತಿಮ ಆಡಂಬರವಾಗಿದೆ. ರಾಮ ರಾಜ್ಯವಂತೂ ಸತ್ಯಯುಗದಲ್ಲಿತ್ತು, ಅಲ್ಲಿ ಈ ವಿಮಾನ ಇತ್ಯಾದಿಗಳೆಲ್ಲವೂ ಇತ್ತು ನಂತರ ಇವೆಲ್ಲವೂ ಮಾಯವಾದವು ಮತ್ತೆ ಈ ಸಮಯದಲ್ಲಿ ಇವೆಲ್ಲವನ್ನೂ ತಯಾರು ಮಾಡಿದ್ದಾರೆ. ಇವೆಲ್ಲವನ್ನೂ ಈಗ ಕಲಿಯುತ್ತಿದ್ದಾರೆ. ಯಾರು ಕಲಿಯುವವರಿದ್ದಾರೆಯೋ ಅವರು ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆ ಮತ್ತೆ ಸತ್ಯಯುಗದಲ್ಲಿ ಬಂದು ವಿಮಾನವನ್ನು ತಯಾರು ಮಾಡುತ್ತಾರೆ. ಇವು ಭವಿಷ್ಯದಲ್ಲಿ ನಿಮಗೆ ಸುಖ ಕೊಡುವಂತಹ ವಸ್ತುಗಳಾಗಿವೆ. ಈ ವಿಜ್ಞಾನವು ನಿಮಗೆ ಅಲ್ಲಿ ಕೆಲಸಕ್ಕೆ ಬರುವುದು. ಇಲ್ಲಿ ಈ ವಿಜ್ಞಾನವು ದುಃಖಕ್ಕಾಗಿ ಇದೆ ಆದರೆ ಅಲ್ಲಿ ಸುಖಕ್ಕಾಗಿಯೇ ಇರುವುದು. ಈಗ ಸ್ಥಾಪನೆಯಾಗುತ್ತಿದೆ. ತಂದೆಯು ಹೊಸ ಪ್ರಪಂಚಕ್ಕಾಗಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ ಅಂದಾಗ ನೀವು ಮಕ್ಕಳು ಮಹಾವೀರರಾಗಬೇಕಾಗಿದೆ. ಭಗವಂತನು ಬಂದಿದ್ದಾರೆಂಬುದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ.

ತಂದೆಯು ತಿಳಿಸುತ್ತಾರೆ ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನರಾಗಿರಿ, ಇದರಲ್ಲಿ ಹೆದರುವ ಮಾತಿಲ್ಲ. ಭಲೆ ಅವಹೇಳನ ಮಾಡುವರು, ಅವಹೇಳನವಂತೂ ಇವರಿಗೂ (ಬ್ರಹ್ಮಾ) ಬಹಳ ಆಯಿತು. ಕೃಷ್ಣನೂ ಸಹ ಅವಹೇಳನವನ್ನು ಅನುಭವಿಸಿದನು ಎಂದು ತೋರಿಸುತ್ತಾರೆ, ಆದರೆ ಕೃಷ್ಣನಿಗೆ ಅವಹೇಳನವಾಗಲು ಸಾಧ್ಯವಿಲ್ಲ. ಇದೆಲ್ಲವೂ ಕಲಿಯುಗದಲ್ಲಿಯೇ ಆಗುತ್ತದೆ. ನಿಮ್ಮದು ಈಗ ಯಾವ ರೂಪವಿದೆಯೋ ಅದು ಮತ್ತೆ ಕಲ್ಪದ ನಂತರ ಇದೇ ಸಮಯದಲ್ಲಿ ಇರುವುದು, ಮಧ್ಯದಲ್ಲಿ ಮತ್ತೆಂದೂ ಇರಲು ಸಾಧ್ಯವಿಲ್ಲ. ಪ್ರತೀ ಜನ್ಮದಲ್ಲಿ ರೂಪವು ಬದಲಾಗುತ್ತಾ ಹೋಗುತ್ತದೆ. ಈ ನಾಟಕವು ಮಾಡಲ್ಪಟ್ಟಿದೆ 84 ಜನ್ಮಗಳಲ್ಲಿ ಯಾವ ರೂಪದಿಂದ ಜನ್ಮ ತೆಗೆದುಕೊಂಡಿರುತ್ತಾರೆಯೋ ಅದೇ ರೂಪ ತೆಗೆದುಕೊಳ್ಳುವರು. ಈಗ ನಿಮಗೆ ತಿಳಿದಿದೆ, ಇದೇ ರೂಪವು ಬದಲಾಗಿ ಇನ್ನೊಂದು ಜನ್ಮದಲ್ಲಿ ಈ ಲಕ್ಷ್ಮಿ-ನಾರಾಯಣರ ತರಹ ರೂಪವಾಗುತ್ತದೆ. ಈಗ ನಿಮ್ಮ ಬುದ್ಧಿಯ ಬೀಗ ತೆರೆದಿದೆ, ಇದು ಹೊಸ ಮಾತಾಗಿದೆ. ಹೊಸ ತಂದೆ, ಮಾತುಗಳೂ ಹೊಸದು. ಈ ಮಾತುಗಳು ಯಾರಿಗೂ ಬೇಗನೆ ಅರ್ಥವಾಗುವುದಿಲ್ಲ. ಅದೃಷ್ಟದಲ್ಲಿದ್ದಾಗಲೇ ಅವರು ತಿಳಿದುಕೊಳ್ಳುವರು ಬಾಕಿ ಯಾರು ಎಷ್ಟೇ ಬಿರುಗಾಳಿ ಬಂದರೂ ಅಲುಗಾಡುವುದಿಲ್ಲವೋ ಅವರಿಗೆ ಮಹಾವೀರರೆಂದು ಹೇಳಲಾಗುತ್ತದೆ, ಈಗ ಆ ಸ್ಥಿತಿಯು ಬರಲು ಸಾಧ್ಯವಿಲ್ಲ. ಖಂಡಿತ ಬರುವುದು, ಮಹಾವೀರರು ಯಾವುದೇ ಬಿರುಗಾಳಿಗೆ ಹೆದರುವುದಿಲ್ಲ. ಆ ಸ್ಥಿತಿಯು ಅಂತಿಮದಲ್ಲಾಗುವುದು ಆದ್ದರಿಂದ ಅತೀಂದ್ರಿಯ ಸುಖವನ್ನು ಗೋಪ-ಗೋಪಿಕೆಯರಿಂದ ಕೇಳಿ ಎಂಬ ಗಾಯನವಿದೆ. ತಂದೆಯು ನೀವು ಮಕ್ಕಳನ್ನು ಸ್ವರ್ಗಕ್ಕೆ ಯೋಗ್ಯರನ್ನಾಗಿ ಮಾಡಲು ಬಂದಿದ್ದಾರೆ. ಕಲ್ಪದ ಹಿಂದಿನ ತರಹ ನರಕದ ವಿನಾಶವಂತೂ ಆಗಿಯೇ ಆಗುವುದು. ಸತ್ಯಯುಗದಲ್ಲಂತೂ ಒಂದೇ ಧರ್ಮವಿರುವುದು. ಏಕತೆ ಬೇಕು, ಒಂದು ಧರ್ಮವಿರಬೇಕೆಂದು ಬಯಸುತ್ತಾರೆ ಆದರೆ ರಾಮ ರಾಜ್ಯವೇ ಬೇರೆ, ರಾವಣ ರಾಜ್ಯವೇ ಬೇರೆ ಎಂಬುದು ಯಾರಿಗೂ ತಿಳಿದಿಲ್ಲ. ಈಗ ತಂದೆಗೆ ಪೂರ್ಣ ನಿಶ್ಚಯವಿದೆ ಅಂದಮೇಲೆ ಶ್ರೀಮತದಂತೆ ನಡೆಯಬೇಕಾಗಿದೆ. ಪ್ರತಿಯೊಬ್ಬರ ನಾಡಿಯನ್ನು ನೋಡಲಾಗುತ್ತದೆ. ಅದರನುಸಾರ ಸಲಹೆ ಕೊಡಲಾಗುತ್ತದೆ. ತಂದೆಯೂ ಸಹ ತಮ್ಮ ಮಗನಿಗೆ ಹೇಳಿದರು - ಒಂದುವೇಳೆ ವಿವಾಹ ಮಾಡಿಕೊಳ್ಳುವಂತಿದ್ದರೆ ಹೋಗಿ ಮಾಡಿಕೊಳ್ಳಿ. ಬಹಳ ಮಿತ್ರ ಸಂಬಂಧಿ ಮೊದಲಾದವರು ಕುಳಿತಿದ್ದಾರೆ, ಅವರು ವಿವಾಹ ಮಾಡಿಸುವರು ಎಂದರು, ನಂತರ ಯಾರೋ ಒಬ್ಬರು ಮುಂದೆ ಬಂದರು. ಅಂದಾಗ ಪ್ರತಿಯೊಬ್ಬರ ನಾಡಿಯನ್ನು ನೋಡಿ ತಿಳಿಸಲಾಗುತ್ತದೆ. ಕೇಳುತ್ತಾರೆ - ಬಾಬಾ, ನಮಗೆ ಇಂತಹ ಪರಿಸ್ಥಿತಿಯಿದೆ, ನಾವು ಪವಿತ್ರರಾಗಿರಲು ಬಯಸುತ್ತೇವೆ, ನಮ್ಮ ಸಂಬಂಧಿಗಳು ನಮ್ಮನ್ನು ಮನೆಯಿಂದ ಹೊರ ಹಾಕುತ್ತಾರೆ, ಈಗ ಏನು ಮಾಡಬೇಕು? ಅರೆ! ಇದನ್ನೂ ಕೇಳುತ್ತೀರಿ, ಪವಿತ್ರರಾಗಿರಬೇಕು, ಒಂದುವೇಳೆ ಇರಲು ಸಾಧ್ಯವಾಗದಿದ್ದರೆ ಹೋಗಿ ವಿವಾಹ ಮಾಡಿಕೊಳ್ಳಿ. ಯಾರ ಜೊತೆಯಾದರೂ ನಿಶ್ಚಿತಾರ್ಥವಾಗಿದೆ ಅಂದರೆ ಅವರನ್ನು ಖುಷಿ ಪಡಿಸಬೇಕೆಂದು ತಿಳಿಯುವುದಾದರೆ ಹೋಗಿ ವಿವಾಹ ಮಾಡಿಕೊಳ್ಳಿ. ಆದರೆ ಮಾಂಗಲ್ಯವನ್ನು ಕಟ್ಟಿಸುವ ಸಮಯದಲ್ಲಿ ಈ ನಿಮ್ಮ ಪತಿಯೇ ನಿಮಗೆ ಗುರುವಾಗಿದ್ದಾರೆ ಎಂದು ಹೇಳುತ್ತಾರೆ, ನೀವು ಅವರಿಂದ ಬರೆಸಿಕೊಳ್ಳಿ - ನಾನು ನಿಮ್ಮ ಗುರು, ಈಶ್ವರನಾಗಿದ್ದೇನೆ ಎಂಬುದನ್ನೇ ನೀವು ಒಪ್ಪುತ್ತೀರಾ, ಹಾಗಾದರೆ ಈಗ ನಾನು ಪವಿತ್ರವಾಗಿರಬೇಕೆಂದು ಆದೇಶ ನೀಡುತ್ತೇನೆ ಎಂದು ಹೇಳಬೇಕು, ಇದರಲ್ಲಿ ಸಾಹಸಬೇಕಲ್ಲವೆ. ಗುರಿಯು ಬಹಳ ಉನ್ನತವಾಗಿದೆ, ಪ್ರಾಪ್ತಿಯು ಬಹಳ ಬಲವಾಗಿದೆ. ಯಾವಾಗ ಪ್ರಾಪ್ತಿಯ ಬಗ್ಗೆ ಅರಿವು ಇರುವುದಿಲ್ಲವೋ ಆಗ ಕಾಮದ ಬೆಂಕಿ ಬೀಳುತ್ತದೆ. ತಂದೆಯು ತಿಳಿಸುತ್ತಾರೆ - ಇಷ್ಟು ದೊಡ್ಡ ಪ್ರಾಪ್ತಿಯಾಗುತ್ತದೆ ಅಂದಮೇಲೆ ಒಂದು ಜನ್ಮ ಪವಿತ್ರವಾಗಿದ್ದರೆ ಏನು ದೊಡ್ಡ ಮಾತು! ನಾನು ನಿಮ್ಮ ಪತಿ ಈಶ್ವರನಾಗಿದ್ದೇನೆ, ನನ್ನ ಆಜ್ಞೆಯಂತೆ ನೀವು ಪವಿತ್ರರಾಗಿರಬೇಕು. ಹೀಗೆ ತಂದೆಯು ಯುಕ್ತಿಗಳನ್ನು ತಿಳಿಸುತ್ತಾರೆ. ಭಾರತದಲ್ಲಿ ಈ ನಿಯಮವಿದೆ - ಸ್ತ್ರೀಗೆ ನಿಮ್ಮ ಪತಿಯೇ ಈಶ್ವರನಾಗಿದ್ದಾರೆ, ಅವರ ಆಜ್ಞೆಯಲ್ಲಿರಬೇಕು. ಪತಿಯ ಕಾಲನ್ನು ಒತ್ತಬೇಕೆಂದು ಹೇಳುತ್ತಾರೆ ಏಕೆಂದರೆ ಲಕ್ಷ್ಮಿಯೂ ಸಹ ನಾರಾಯಣನ ಕಾಲನ್ನು ಒತ್ತುತ್ತಿದ್ದಳು ಎಂದು ಹೇಳುತ್ತಾರಲ್ಲವೆ ಆದರೆ ಈ ಹವ್ಯಾಸ ಎಲ್ಲಿಂದ ಬಂದಿತು? ಭಕ್ತಿಮಾರ್ಗದ ಚಿತ್ರಗಳಿಂದ. ಸತ್ಯಯುಗದಲ್ಲಿ ಇಂತಹ ಮಾತಿಲ್ಲ ಏಕೆಂದರೆ ಲಕ್ಷ್ಮಿಯು ಕಾಲನ್ನು ಒತ್ತಲು ನಾರಾಯಣನು ಎಂದಾದರೂ ಸುಸ್ತಾಗುವನೇ? ಅಲ್ಲಿ ದಣಿವಿನ ಮಾತೇ ಇರುವುದಿಲ್ಲ. ಇದಂತೂ ದುಃಖದ ಮಾತಾಗಿ ಬಿಡುತ್ತದೆ. ಅಲ್ಲಿ ದುಃಖ, ನೋವು ಎಲ್ಲಿಂದ ಬಂತು! ಆದ್ದರಿಂದಲೇ ಬ್ರಹ್ಮಾ ತಂದೆಯು ಲಕ್ಷ್ಮಿಯ ಕಾಲನ್ನು ಒತ್ತುತ್ತಿರುವ ಚಿತ್ರವನ್ನು ಅದರಿಂದ ತೆಗೆಸಿ ಬಿಟ್ಟರು. ಬಾಲ್ಯದಿಂದಲೇ ವೈರಾಗ್ಯವಿತ್ತು ಆದ್ದರಿಂದ ಬಹಳ ಭಕ್ತಿ ಮಾಡುತ್ತಿದ್ದರು. ಅಂದಾಗ ತಂದೆಯು ಬಹಳ ಯುಕ್ತಿಗಳನ್ನು ತಿಳಿಸುತ್ತಾರೆ. ನಾವು ಒಬ್ಬ ತಂದೆಯ ಮಕ್ಕಳಾಗಿದ್ದೇವೆಂದು ನಿಮಗೆ ತಿಳಿದಿದೆ ಅಂದಮೇಲೆ ಪರಸ್ಪರ ಸಹೋದರ-ಸಹೋದರಿಯರಾದಿರಿ, ತಾತನಿಂದ ಆಸ್ತಿಯು ಸಿಗುತ್ತದೆ. ತಂದೆಯನ್ನು ಪತಿತ ಪ್ರಪಂಚದಲ್ಲಿಯೇ ಕರೆಯುತ್ತಾರೆ, ಹೇ ಪತಿತ-ಪಾವನ ಎಲ್ಲಾ ಸೀತೆಯರ ರಾಮನೇ ಎಂದು ಹೇಳುತ್ತಾರೆ. ತಂದೆಗೆ ಸತ್ಯ ಅರ್ಥಾತ್ ಸತ್ಯ ಖಂಡವನ್ನು ಸ್ಥಾಪನೆ ಮಾಡುವವರೆಂದು ಹೇಳುತ್ತಾರೆ. ಅವರೇ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಸತ್ಯ ಜ್ಞಾನವನ್ನು ತಿಳಿಸುತ್ತಾರೆ. ಈಗ ನೀವಾತ್ಮರು ಜ್ಞಾನ ಸಾಗರರಾಗುತ್ತಿದ್ದೀರಿ.

ಮಧುರ ಮಕ್ಕಳು ಸಾಹಸವನ್ನಿಡಬೇಕು - ನಾವು ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ. ಬೇಹದ್ದಿನ ತಂದೆಯು ಬೇಹದ್ದಿನ ರಚನೆಯನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಆದ್ದರಿಂದ ಪುರುಷಾರ್ಥ ಮಾಡಿ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಬಲಿಹಾರಿಯಾಗಬೇಕಾಗಿದೆ. ನೀವು ಅವರನ್ನು ತನ್ನ ವಾರಸುಧಾರನನ್ನಾಗಿ ಮಾಡಿಕೊಳ್ಳುತ್ತೀರೆಂದರೆ ಅವರು ನಿಮಗೆ 21 ಜನ್ಮಗಳಿಗಾಗಿ ಆಸ್ತಿಯನ್ನು ಕೊಡುವರು. ತಂದೆಯು ಮಕ್ಕಳ ಮೇಲೆ ಬಲಿಹಾರಿಯಾಗುತ್ತಾರೆ. ಮಕ್ಕಳೂ ಹೇಳುತ್ತಾರೆ - ಬಾಬಾ, ಈ ತನು-ಮನ-ಧನ ಎಲ್ಲವೂ ನಿಮ್ಮದಾಗಿದೆ. ನೀವು ತಂದೆಯೂ ಆಗಿದ್ದೀರಿ, ನಮ್ಮ ಮಗನೂ ಆಗಿದ್ದೀರಿ. ತ್ವಮೇವ ಮಾತಾಶ್ಚ ಪಿತಾ... ಎಂದು ಹಾಡುತ್ತಾರೆ. ಒಬ್ಬರ ಮಹಿಮೆಯು ಎಷ್ಟು ದೊಡ್ಡದಾಗಿದೆ, ಅವರಿಗೇ ಸರ್ವರ ದುಃಖಹರ್ತ-ಸುಖಕರ್ತನೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಪಂಚ ತತ್ವಗಳೂ ಸಹ ಸುಖ ಕೊಡುವಂತದ್ದಾಗಿರುತ್ತವೆ. ಕಲಿಯುಗದಲ್ಲಿ ಪಂಚ ತತ್ವಗಳೂ ತಮೋಪ್ರಧಾನವಾಗಿರುವ ಕಾರಣ ದುಃಖ ಕೊಡುತ್ತದೆ, ಅಲ್ಲಿ ಸುಖವೇ ಸುಖವಿರುತ್ತದೆ. ಈ ಡ್ರಾಮಾ ಮಾಡಲ್ಪಟ್ಟಿದೆ. ನೀವು ತಿಳಿದುಕೊಂಡಿದ್ದೀರಿ- ಇದು ಅದೇ 5000 ವರ್ಷಗಳ ಹಿಂದಿನ ಯುದ್ಧವಾಗಿದೆ. ಈಗ ಸ್ವರ್ಗದ ಸ್ಥಾಪನೆಯಾಗುತ್ತಿದೆ ಅಂದಮೇಲೆ ಮಕ್ಕಳು ಸದಾ ಖುಷಿಯಲ್ಲಿರಬೇಕಾಗಿದೆ. ಭಗವಂತನು ನಿಮ್ಮನ್ನು ದತ್ತು ಮಾಡಿಕೊಂಡಿದ್ದಾರೆ ಆದ್ದರಿಂದ ನೀವು ಮಕ್ಕಳಿಗೆ ತಂದೆಯು ಶೃಂಗಾರವನ್ನೂ ಮಾಡುತ್ತಾರೆ ಮತ್ತು ಓದಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸದಾ ತಂದೆಯ ಸಮಾನರಾಗುವ ಸಾಹಸವನ್ನಿಡಬೇಕಾಗಿದೆ. ತಂದೆಗೆ ಪೂರ್ಣ ಬಲಿಹಾರಿಯಾಗಬೇಕಾಗಿದೆ.

2. ಯಾವುದೇ ಮಾತಿನಲ್ಲಿ ಹೆದರಬಾರದು. ಅವಶ್ಯವಾಗಿ ಪವಿತ್ರರಾಗಬೇಕಾಗಿದೆ.

ವರದಾನ:
ಸದಾ ದಯೆ ಮತ್ತು ಕಲ್ಯಾಣದ ದೃಷ್ಠಿಯಿಂದ ವಿಶ್ವದ ಸೇವೆ ಮಾಡುವಂತಹ ವಿಶ್ವ ಪರಿವರ್ತಕ ಭವ.

ವಿಶ್ವ ಪರಿವರ್ತಕ ಅಥವಾ ವಿಶ್ವ ಸೇವಾಧಾರಿ ಆತ್ಮಗಳ ಮುಖ್ಯ ಲಕ್ಷಣ ಆಗಿದೆ - ತಮ್ಮ ದಯಾ ಮತ್ತು ಕಲ್ಯಾಣದ ದೃಷ್ಟಿಯ ಮುಖಾಂತರ ವಿಶ್ವವನ್ನು ಸಂಪನ್ನ ಹಾಗೂ ಖುಶಿಯಾಗಿ ಮಾಡುವುದು. ಯಾವುದು ಅಪ್ರಾಪ್ತ ವಸ್ತು ಆಗಿದೆ, ಈಶ್ವರೀಯ ಸುಖ, ಶಾಂತಿ ಮತ್ತು ಜ್ಞಾನದ ಧನದಿಂದ, ಸರ್ವ ಶಕ್ತಿಗಳಿಂದ ಸರ್ವ ಆತ್ಮಗಳನ್ನು ಭಿಕಾರಿಯಿಂದ ಅಧಿಕಾರಿಗಳನ್ನಾಗಿ ಮಾಡುವುದು. ಇಂತಹ ಸೇವಾಧಾರಿಗಳು ತಮ್ಮ ಪ್ರತಿ ಸೆಕೆಂಡ್, ಮಾತು ಮತ್ತು ಕರ್ಮ, ಸಂಬಂಧ, ಸಂಪರ್ಕ ಸೇವೆಯಲ್ಲಿಯೇ ತೊಡಗಿಸುತ್ತಾರೆ. ಅವರ ನೋಟ, ನಡೆ, ಊಟ ಎಲ್ಲದರಲ್ಲಿಯೂ ಸೇವೆ ಸಮಾವೇಶವಾಗಿರುವುದು.

ಸ್ಲೋಗನ್:
ಮಾನ್ಯತೆ, ಪ್ರತಿಷ್ಠೆಯ ತ್ಯಾಗ ಮಾಡಿ ತಮ್ಮ ಸಮಯವನ್ನು ಬೇಹದ್ದಿನ ಸೇವೆಯಲ್ಲಿ ಸಫಲ ಮಾಡುವುದೇ ಪರೋಪಕಾರಿಗಾಗುವುದು.


ಮಾತೇಶ್ವರಿಜೀಯವರ ಅಮೂಲ್ಯ ಮಹಾವಾಕ್ಯ

ಪರಮಾರ್ಥದಿಂದ ವ್ಯವಹಾರ ಸ್ವತಃವಾಗಿ ಸಿದ್ಧವಾಗುವುದು

ಭಗವಾನ ಉವಾಚ ನೀವು ನನ್ನ ಮುಖಾಂತರ ಪರಮ ಅರ್ಥವನ್ನು ತಿಳಿದು ನನ್ನ ಪರಮ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುವಿರಿ ಅರ್ಥಾತ್ ಪರಮಾರ್ಥವನ್ನು ತಿಳಿಯುವುದರಿಂದ ವ್ಯವಹಾರ ಸಿದ್ಧವಾಗುತ್ತದೆ. ನೋಡಿ , ದೇವತೆಗಳ ಮುಂದೆ ಪ್ರಕೃತಿಯಂತೂ ಚರಣಗಳ ದಾಸಿಯಾಗಿರುತ್ತದೆ, ಈ ಐದು ತತ್ವ ಸುಖ-ಸ್ವರೂಪರಾಗಿ ಮನ ಇಚ್ಛಿತ ಸೇವೆ ಮಾಡುತ್ತದೆ. ಈ ಸಮಯದಲ್ಲಿ ನೋಡಿ ಮನ ಇಚ್ಛಿತ ಸುಖ ಕೊಡದ ಕಾರಣ ಮನುಷ್ಯರಿಗೆ ದುಃಖ ಅಶಾಂತಿ ಪ್ರಾಪ್ತಿಯಾಗುತ್ತಿರುತ್ತದೆ. ಸತ್ಯಯುಗದಲ್ಲಿಯಂತೂ ಈ ಪ್ರಕೃತಿ ಬಹಳ ವಿಧೇಯವಾಗಿರುತ್ತದೆ. ನೋಡಿ, ದೇವತೆಗಳ ಜಡ ಚಿತ್ರಗಳ ಮೇಲೂ ಸಹ ಎಷ್ಟು ವಜ್ರ-ವೈಢೂರ್ಯದ ಆಭರಣಗಳನ್ನು ತೊಡಿಸಿರುತ್ತಾರೆ, ಅಂದಾಗ ಚೈತನ್ಯದಲ್ಲಿ ಪ್ರತ್ಯಕ್ಷವಾಗಿದ್ದಾಗ ಎಷ್ಟು ವೈಭವದಿಂದ ಇದ್ದಿರಬಹುದು? ಈ ಸಮಯದಲ್ಲಿ ಮನುಷ್ಯರು ಹಸಿವಿನಿಂದ ಸಾಯುತ್ತಿರುತ್ತಾರೆ ಮತ್ತು ಜಡ ಚಿತ್ರಗಳ ಮೇಲೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಅಂದಾಗ ಇದರಲ್ಲಿ ಏನು ವ್ಯತ್ಯಾಸ ಇದೆ! ಖಂಡಿತ ಅವರು ಇಂತಹ ಶೇಷ್ಠ ಕರ್ಮ ಮಾಡಿದ್ದಾರೆ ಅದಕ್ಕಾಗಿಯೆ ಅವರ ನೆನಪಾರ್ಥ ಮಾಡಲಾಗಿದೆ. ಅವರ ಪೂಜೆಯೂ ಸಹ ಎಷ್ಟು ಆಗುತ್ತದೆ. ಅವರು ನಿರ್ವಿಕಾರಿ ಪ್ರವೃತ್ತಿಯಲ್ಲಿದ್ದರೂ ಸಹ ಕಮಲ ಪುಷ್ಪದ ಸಮಾನವಾದ ಅವಸ್ಥೆಯಲ್ಲಿದ್ದರು, ಆದರೆ ಈಗ ಆ ನಿರ್ವಿಕಾರಿ ಪ್ರವೃತ್ತಿಗೆ ಬದಲಾಗಿ ವಿಕಾರಿ ಪ್ರವೃತ್ತಿಯಲ್ಲಿ ಹೋಗಿದ್ದಾರೆ, ಆ ಕಾರಣ ಎಲ್ಲರೂ ಪರಮಾರ್ಥವನ್ನು ಮರೆತು ವ್ಯವಹಾರದ ಕಡೆ ತೊಡಗಿ ಬಿಟ್ಟಿದ್ದಾರೆ, ಆದ್ದರಿಂದ ಫಲಿತಾಂಶ ವಿರುದ್ಧವಾಗಿ ಹೋಗುತ್ತದೆ. ಈಗ ನಿಮಗೆ ಸ್ವಯಂ ಪರಮಾತ್ಮ ಬಂದು ವಿಕಾರಿ ಪ್ರವೃತ್ತಿಯನ್ನು ತೆಗೆದು ನಿರ್ವಿಕಾರಿ ಪ್ರವೃತ್ತಿಯನ್ನು ಕಲಿಸುತ್ತಾರೆ, ಯಾವುದರಿಂದ ನಮ್ಮ ಜೀವನ ಸದಾಕಾಲಕ್ಕಾಗಿ ಸುಖಿಯಾಗುತ್ತದೆ. ಆದ್ದರಿಂದ ಮೊದಲು ಬೇಕು ಪರಮಾರ್ಥ ನಂತರ ವ್ಯವಹಾರ. ಪರಮಾರ್ಥದಲ್ಲಿರುವುದರಿಂದ ವ್ಯವಹಾರ ತಾನೇ ತಾನಾಗಿ ಸಿದ್ದವಾಗಿ ಬಿಡುವುದು. ಓಂ ಶಾಂತಿ.