06.03.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಜ್ಞಾನ ಸಾಗರ ತಂದೆಯು ನಿಮಗೆ ರತ್ನಗಳ ತಟ್ಟೆಗಳನ್ನು ತುಂಬಿ-ತುಂಬಿ ಕೊಡುತ್ತಾರೆ, ಎಷ್ಟು ಬೇಕೋ ಅಷ್ಟು ನಿಮ್ಮ ಜೋಳಿಗೆಯನ್ನು ತುಂಬಿಸಿಕೊಳ್ಳಿ, ಎಲ್ಲಾ ಚಿಂತೆಗಳಿಂದ ನಿಶ್ಚಿಂತರಾಗಿಬಿಡಿ.

ಪ್ರಶ್ನೆ:
ಜ್ಞಾನ ಮಾರ್ಗದ ಯಾವ ಮಾತನ್ನು ಭಕ್ತಿ ಮಾರ್ಗದಲ್ಲಿಯೂ ಇಷ್ಟ ಪಡುತ್ತಾರೆ?

ಉತ್ತರ:
ಸ್ವಚ್ಛತೆ. ಜ್ಞಾನ ಮಾರ್ಗದಲ್ಲಿ ತಾವು ಮಕ್ಕಳು ಸ್ವಚ್ಛವಾಗುತ್ತೀರಿ. ತಂದೆಯು ನಿಮ್ಮ ಮೈಲಿಗೆ ವಸ್ತ್ರಗಳನ್ನು ಸ್ವಚ್ಛ ಮಾಡಲು ಬರುತ್ತಾರೆ. ಆತ್ಮವು ಯಾವಾಗ ಸ್ವಚ್ಛ ಅರ್ಥಾತ್ ಪಾವನವಾಗಿ ಬಿಡುತ್ತದೆಯೋ ಆಗ ಮನೆಗೆ ಹೋಗುವ ಹಾರುವ ರೆಕ್ಕೆಗಳು ಬಂದು ಬಿಡುತ್ತವೆ. ಭಕ್ತಿಯಲ್ಲಿಯೂ ಸಹ ಸ್ವಚ್ಛತೆಯನ್ನು ಬಹಳ ಇಷ್ಟ ಪಡುತ್ತಾರೆ. ಸ್ವಚ್ಛವಾಗುವುದಕ್ಕಾಗಿ (ಪಾವನ) ಗಂಗೆಯಲ್ಲಿ ಹೋಗಿ ಸ್ನಾನ ಮಾಡುತ್ತಾರೆ, ಆದರೆ ನೀರಿನಿಂದ ಆತ್ಮವು ಸ್ವಚ್ಛವಾಗಲು ಸಾಧ್ಯವಿಲ್ಲ.

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳೇ, ನೀವು ನೆನಪಿನ ಯಾತ್ರೆಯನ್ನು ಮರೆಯಬಾರದು. ಮುಂಜಾನೆಯ ಸಮಯದಲ್ಲಿ ಹೇಗೆ ಶಾಂತವಾಗಿರುವ ಅಭ್ಯಾಸ ಮಾಡುತ್ತೀರಿ, ಮಾತನಾಡುವುದಿಲ್ಲ. ಏಕೆಂದರೆ ಅದು ನಿರ್ವಾಣಧಾಮದಲ್ಲಿ ಹೋಗುವ ಯುಕ್ತಿಯಾಗಿದೆ. ಪಾವನರಾಗದ ಹೊರತು ನೀವು ಮಕ್ಕಳು ಹೋಗಲು ಸಾಧ್ಯವಿಲ್ಲ, ಹಾರಲು ಸಾಧ್ಯವಿಲ್ಲ. ಇದೂ ಸಹ ನಿಮಗೆ ತಿಳಿದಿದೆ. ಯಾವಾಗ ಸತ್ಯಯುಗವಾಗುತ್ತದೆಯೋ ಆಗ ಅನೇಕ ಆತ್ಮಗಳು ಹಾರಿ ಪರಮಧಾಮಕ್ಕೆ ಹೋಗುತ್ತಾರೆ. ಈಗಂತೂ ಎಷ್ಟು ಕೋಟಿ ಆತ್ಮಗಳಿದ್ದಾರೆ ಆದರೆ ಸತ್ಯಯುಗದಲ್ಲಿ ಕೆಲವು ಲಕ್ಷಗಳಷ್ಟು ಆತ್ಮಗಳೇ ಅಲ್ಲಿ ಇರುತ್ತಾರೆ. ಉಳಿದೆಲ್ಲರೂ ಪರಮಧಾಮದಲ್ಲಿ ಇರುತ್ತಾರೆ. ಅವಶ್ಯವಾಗಿ ಯಾರೋ ಬಂದು ರೆಕ್ಕೆಗಳನ್ನು ನೀಡುತ್ತಾರಲ್ಲವೆ. ಈ ನೆನಪಿನ ಯಾತ್ರೆಯಿಂದಲೇ ಆತ್ಮವು ಪವಿತ್ರವಾಗಿ ಬಿಡುತ್ತದೆ. ಇದರ ವಿನಃ ಪಾವನರಾಗಲು ಮತ್ತ್ಯಾವುದೇ ಉಪಾಯವಿಲ್ಲ. ಪತಿತ-ಪಾವನ ಒಬ್ಬ ತಂದೆಗೆ ಹೇಳುತ್ತಾರೆ. ಮತ್ತೆ ಅವರನ್ನು ಕೆಲವರು ಈಶ್ವರನೆಂತಲೂ, ಕೆಲವರು ಪರಮಾತ್ಮನೆಂತಲೂ ಅಥವಾ ಭಗವಂತನೆಂದು ಹೇಳುತ್ತಾರೆ. ತಂದೆಯೂ ಒಬ್ಬರೇ ಆಗಿದ್ದಾರೆ, ಅನೇಕರಲ್ಲ. ಎಲ್ಲಾ ಆತ್ಮಗಳಿಗೆ ಒಬ್ಬರೇ ತಂದೆಯಾಗಿದ್ದಾರೆ. ಲೌಕಿಕ ತಂದೆ ಎಲ್ಲರಿಗೂ ಬೇರೆ-ಬೇರೆ ಆಗಿರುತ್ತಾರೆ ಆದರೆ ಪಾರಲೌಕಿಕ ತಂದೆಯು ಎಲ್ಲರಿಗೂ ಒಬ್ಬರೇ ಆಗಿದ್ದಾರೆ. ಅವರೊಬ್ಬರು ಯಾವಾಗ ಬರುತ್ತಾರೆಯೋ ಆಗ ಎಲ್ಲರಿಗೆ ಸುಖವನ್ನು ಕೊಟ್ಟು ಹೋಗುತ್ತಾರೆ, ಮತ್ತೆ ಸುಖದಲ್ಲಿ ಅವರನ್ನು ನೆನಪು ಮಾಡುವ ಅವಶ್ಯಕತೆಯಿಲ್ಲ. ಅದೂ ಸಹ ಕಳೆದು ಹೋಯಿತಲ್ಲವೆ. ಈಗ ತಂದೆಯು ಕುಳಿತು ಭೂತ-ಭವಿಷ್ಯತ್ ಮತ್ತು ವರ್ತಮಾನದ ರಹಸ್ಯವನ್ನು ತಿಳಿಸುತ್ತಾರೆ. ಈ ವೃಕ್ಷದ ಭೂತ ಭವಿಷ್ಯತ್, ವರ್ತಮಾನವು ಬಹಳ ಸಹಜವಾಗಿದೆ. ಬೀಜದಿಂದ ವೃಕ್ಷವು ಹೇಗಾಗುತ್ತದೆ ಎಂಬುದನ್ನು ನೀವೂ ಸಹ ತಿಳಿದಿದ್ದೀರಿ. ಅದು ಮತ್ತೆ ವೃದ್ಧಿಯನ್ನು ಹೊಂದುತ್ತಾ-ಹೊಂದುತ್ತಾ ಕೊನೆಗೆ ಅಂತ್ಯವು ಬಂದು ಬಿಡುತ್ತದೆ. ಇದಕ್ಕೆ ಆದಿ-ಮಧ್ಯ-ಅಂತ್ಯವೆಂದು ಹೇಳಲಾಗುತ್ತದೆ. ಇದು ವಿಭಿನ್ನ ಧರ್ಮಗಳ, ವಿಭಿನ್ನ ಲಕ್ಷಣಗಳ ವೃಕ್ಷವಾಗಿದೆ. ಎಲ್ಲರ ಗುಣ-ಲಕ್ಷಣಗಳು ಬೇರೆ-ಬೇರೆಯಾಗಿದೆ. ಹೂಗಳನ್ನು ನೋಡುತ್ತೀರಿ, ಎಂತೆಂತಹ ವೃಕ್ಷವೋ ಅಂತಂತಹ ಹೂಗಳು ಬರುತ್ತವೆ, ಹೂಗಳು ಬಿಡುತ್ತವೆ. ಅವೆಲ್ಲಾ ಹೂಗಳು ಒಂದೇ ರೀತಿ ಇರುತ್ತದೆ. ಆದರೆ ಈ ಮನುಷ್ಯ ಸೃಷ್ಟಿ ರೂಪಿ ವೃಕ್ಷದಲ್ಲಿ ವಿಭಿನ್ನತೆಯಿದೆ. ಆ ವೃಕ್ಷಗಳಲ್ಲಿ ಪ್ರತಿಯೊಂದು ವೃಕ್ಷದ ಶೋಭೆ ಬೇರೆ-ಬೇರೆಯಾಗಿರುತ್ತದೆ ಹಾಗೆಯೇ ಈ ವೃಕ್ಷಗಳಲ್ಲಿ ಅನೇಕ ಪ್ರಕಾರದ ಶೋಭೆಯಿದೆ. ತಂದೆಯು ತಿಳಿಸುತ್ತಾರೆ - ಶ್ಯಾಮ ಸುಂದರ ಇದು ದೇವಿ-ದೇವತೆಗಳಿಗಾಗಿ ಗಾಯನವಿದೆ. ಯಾವಾಗ ಅವರು ಸತೋಪ್ರಧಾನರಿಂದ ತಮೋಪ್ರಧಾನರಾಗುತ್ತಾರೋ ಆಗ ಅವರೇ ಸುಂದರರಿಂದ ಶ್ಯಾಮನಾಗುತ್ತಾರೆ. ಹೀಗೆ ಮತ್ತ್ಯಾವುದೇ ಧರ್ಮದಲ್ಲಿ ಶ್ಯಾಮ ಮತ್ತು ಸುಂದರರಾಗುವುದಿಲ್ಲ ಏಕೆಂದರೆ ಇಂತಹ ಧರ್ಮದವರೂ ಇದ್ದಾರೆ. ಪತಿತರಿಗೆ ಪತಿತರೇ ಆಗಿದ್ದಾರೆ. ಅವರ ಮುಖ ಲಕ್ಷಣಗಳನ್ನು ನೋಡಿ. ಜಪಾನಿಯರ, ಯುರೋಪಿಯನ್ನರ, ಚೀನಿಯರ ಮುಖ ಲಕ್ಷಣಗಳನ್ನು ನೋಡಿ ಮತ್ತು ಭಾರತೀಯರ ಮುಖ ಲಕ್ಷಣಗಳು ಬದಲಾಗುತ್ತಾ ಹೋಗುತ್ತದೆ. ಭಾರತಿಯರಿಗಾಗಿಯೇ ಶ್ಯಾಮ-ಸುಂದರರೆಂಬ ಗಾಯನವಿದೆ. ಮತ್ತ್ಯಾವುದೇ ಧರ್ಮದವರಿಗೆ ಇಲ್ಲ. ಇದು ಮನುಷ್ಯ ಸೃಷ್ಟಿಯ ವೃಕ್ಷವಾಗಿದೆ. ವಿಭಿನ್ನ ಧರ್ಮಗಳಿವೆ. ಅವರೆಲ್ಲರೂ ನಂಬರ್ವಾರ್ ಹೇಗೆ ಬರುತ್ತಾರೆಂಬ ಜ್ಞಾನವು ನೀವು ಮಕ್ಕಳಿಗೆ ಈಗ ಸಿಗುತ್ತದೆ. ಮತ್ಯಾರೂ ಈ ಮಾತನ್ನು ತಿಳಿಸಲು ಸಾಧ್ಯವಿಲ್ಲ. ಇದು 5000 ವರ್ಷಗಳ ಕಲ್ಪವಾಗಿದೆ. ಇದಕ್ಕೆ ವೃಕ್ಷವೆಂದಾದರೂ ಹೇಳಿ ಅಥವಾ ಪ್ರಪಂಚವೆಂದಾದರೂ ಹೇಳಿ, ಇದರ ಅರ್ಧದಲ್ಲಿ ಭಕ್ತಿ ಇದೆ. ಅದಕ್ಕೆ ರಾವಣ ರಾಜ್ಯವೆಂದು ಹೇಳಲಾಗುತ್ತದೆ. ಪಂಚ ವಿಕಾರಗಳ ರಾಜ್ಯ ನಡೆಯುತ್ತದೆ, ಕಾಮಚಿತೆಯನ್ನೇರಿ ಪತಿತ ಕಪ್ಪಾಗಿ ಬಿಡುತ್ತಾರೆ. ರಾವಣ ಸಂಪ್ರದಾಯದವರ ಚಲನೆ ಮತ್ತು ದೈವೀ ಸಂಪ್ರದಾಯದವರ ಚಲನೆಯಲ್ಲಿ ರಾತ್ರಿ -ಹಗಲಿನ ಅಂತರವಿದೆ. ಮನುಷ್ಯರು ಅವರ ಮಹಿಮೆಯನ್ನು ಹಾಡುತ್ತಾರೆ, ತಮ್ಮನ್ನು ನೀಚ-ಪಾಪಿ ಎಂದು ಹೇಳುತ್ತಾರೆ. ಅನೇಕ ಪ್ರಕಾರದ ಮನುಷ್ಯರು ಇದ್ದಾರೆ. ನೀವು ಭಕ್ತಿಯನ್ನಂತೂ ಬಹಳ ಮಾಡಿದ್ದೀರಿ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಭಕ್ತಿ ಮಾಡುತ್ತಾ ಬಂದಿದ್ದೀರಿ. ಮೊದಲು ಅವ್ಯಭಿಚಾರಿ ಭಕ್ತಿಯಿರುತ್ತದೆ. ಮೊಟ್ಟ ಮೊದಲು ಒಬ್ಬರ ಭಕ್ತಿಯನ್ನು ಪ್ರಾರಂಭಿಸುತ್ತಾರೆ. ನಂತರ ಅದು ವ್ಯಭಿಚಾರಿ ಆಗಿ ಬಿಡುತ್ತದೆ. ಅಂತ್ಯದಲ್ಲಿ ಸಂಪೂರ್ಣ ವ್ಯಭಿಚಾರಿ ಆಗಿ ಬಿಡುತ್ತಾರೆ. ಆಗ ತಂದೆಯು ಬಂದು ಅವ್ಯಭಿಚಾರಿ ಜ್ಞಾನವನ್ನು ಕೊಡುತ್ತಾರೆ. ಈ ಜ್ಞಾನದಿಂದ ಸದ್ಗತಿಯಾಗುತ್ತದೆ. ಎಲ್ಲಿಯವರೆಗೆ ಇದು ಪೂರ್ಣ ತಿಳಿಯುವುದಿಲ್ಲವೋ ಅಲ್ಲಿಯವರೆಗೂ ಭಕ್ತಿಯ ಅಭಿಮಾನದಲ್ಲಿಯೇ ಇರುತ್ತಾರೆ. ಜ್ಞಾನ ಸಾಗರ ಒಬ್ಬ ಪರಮಾತ್ಮನೆ ಆಗಿದ್ದಾರೆ ಎಂದು ಯಾರಿಗೂ ತಿಳಿದಿಲ್ಲ. ಭಕ್ತಿಯಲ್ಲಿ ಎಷ್ಟೊಂದು ವೇದ-ಶಾಸ್ತ್ರಗಳನ್ನು ತಿಳಿಸುತ್ತಾರೆ, ಇದೆಲ್ಲಾ ಭಕ್ತಿಯ ವಿಸ್ತಾರವಾಗಿದೆ. ಭಕ್ತಿಯದು ಶೋಭೆ ಇದೆ. ತಂದೆಯು ತಿಳಿಸುತ್ತಾರೆ - ಇದು ಮೃಗತೃಷ್ಣ ಸಮಾನ ಶೋಭೆಯಾಗಿದೆ. ಹೇಗೆ ಮರಳು ದೂರದಿಂದ ನೀರಿನಂತೆ ಕಾಣಿಸುತ್ತದೆ. ಜಿಂಕೆ ಬಾಯಾರಿರುವ ಕಾರಣ ಆ ಮರಳಿನಲ್ಲಿ ಓಡುತ್ತಾ-ಓಡುತ್ತಾ ಸಿಕ್ಕಿಹಾಕಿಕೊಳ್ಳುತ್ತದೆ. ಭಕ್ತಿಯು ಹೀಗೆಯೇ ಅದರಲ್ಲಿ ಎಲ್ಲರೂ ಸಿಕ್ಕಿಹಾಕಿಕೊಂಡಿದ್ದಾರೆ. ಆದ್ದರಿಂದ ಹೊರ ತೆಗೆಯುವುದರಲ್ಲಿ ಮಕ್ಕಳಿಗೆ ಶ್ರಮವಾಗುತ್ತದೆ. ಇದರಲ್ಲಿ ವಿಘ್ನಗಳು ಬರುತ್ತವೆ ಏಕೆಂದರೆ ತಂದೆಯು ಪವಿತ್ರರನ್ನಾಗಿ ಮಾಡುತ್ತಾರೆ. ದ್ರೌಪದಿಯು ಕರೆದಳು, ಇಡೀ ಪ್ರಪಂಚದಲ್ಲಿ ದ್ರೌಪದಿಯರು ಮತ್ತು ದುರ್ಯೋದನರಿದ್ದಾರೆ ಮತ್ತು ನೀವೆಲ್ಲರೂ ಪಾರ್ವತಿಯರು ಅಮರ ಕಥೆಯನ್ನು ಕೇಳುತ್ತಿದ್ದೀರಿ. ತಂದೆಯು ನಿಮಗೆ ಅಮರಲೋಕಕ್ಕಾಗಿ ಅಮರ ಕಥೆಯನ್ನು ತಿಳಿಸುತ್ತಿದ್ದಾರೆಂದು ಹೇಳಬಹುದು. ಇದು ಮೃತ್ಯು ಲೋಕವಾಗಿದೆ, ಇಲ್ಲಿ ಅಕಾಲ ಮೃತ್ಯು ಆಗುತ್ತಿರುತ್ತದೆ. ಕುಳಿತು-ಕುಳಿತಿದ್ದಂತೆಯೇ ಹೃದಯಾಘಾತ ಆಗಿ ಬಿಡುತ್ತದೆ. ನೀವು ಆಸ್ಪತ್ರೆಗೆ ಹೋಗಿ ತಿಳಿಸಬಹುದು. ಇಲ್ಲಿ ನಿಮ್ಮ ಆಯಸ್ಸು ಎಷ್ಟು ಕಡಿಮೆಯಿದೆ, ರೋಗಿಗಳಾಗಿ ಬಿಡುತ್ತೀರಿ. ಸತ್ಯಯುಗದಲ್ಲಿ ಕಾಯಿಲೆಗಳು ಇರುವುದೇ ಇಲ್ಲ. ಭಗವಾನುವಾಚ - ತಮ್ಮನ್ನು ಆತ್ಮನೆಂದು ತಿಳಿಯಿರಿ, ತಂದೆಯಾದ ನನ್ನನ್ನು ನೆನಪು ಮಾಡಿ. ಅನ್ಯರೊಂದಿಗಿನ ಮಮತ್ವವನ್ನು ಕಳೆಯಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ ಮತ್ತೆಂದೂ ರೋಗಿಗಳಾಗುವುದಿಲ್ಲ. ಕಾಲವು ಕಬಳಿಸುವುದಿಲ್ಲ. ಧೀರ್ಘಾಯಸ್ಸು ಇರುತ್ತದೆ. ಈ ದೇವತೆಗಳ ಆಯಸ್ಸು ಧೀರ್ಘವಾಯಿತಲ್ಲವೆ ಅಂದಮೇಲೆ ಅಂತಹವರು ಎಲ್ಲಿಗೆ ಹೋದರು? ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಆಯಸ್ಸು ಕಡಿಮೆಯಾಗಿ ಬಿಡುತ್ತದೆ. ಇದು ಸುಖ-ದುಃಖದ ಆಟವಾಗಿದೆ. ಇದನ್ನು ಯಾರೂ ತಿಳಿದುಕೊಂಡಿಲ್ಲ. ಎಷ್ಟೊಂದು ಮೇಳಗಳಾಗುತ್ತವೆ. ಕುಂಭ ಮೇಳದಲ್ಲಿ ಅನೇಕರು ಸ್ನಾನ ಮಾಡಲು ಹೋಗಿ ಒಂದೆಡೆ ಸೇರುತ್ತಾರೆ ಆದರೆ ಅದರಿಂದೇನೂ ಲಾಭವಿಲ್ಲ. ಪ್ರತಿನಿತ್ಯವು ನೀವು ಸ್ನಾನ ಮಾಡುತ್ತೀರಿ ಅಂದಾಗ ನೀರು ಎಲ್ಲಾ ಕಡೆ ಸಾಗರದಿಂದಲೇ ಬರುತ್ತದೆ. ಎಲ್ಲದಕ್ಕಿಂತ ಒಳ್ಳೆಯ ನೀರು ಬಾವಿಯದಾಗಿರುತ್ತದೆ. ನದಿಗಳಲ್ಲಂತೂ ಕಸ ಬೀಳುತ್ತಿರುತ್ತದೆ. ಬಾವಿಯ ನೀರು ಸ್ವಾಭಾವಿಕವಾಗಿ ಶುದ್ಧವಾಗಿರುತ್ತದೆ, ಆದ್ದರಿಂದ ಅಂತಹ ನೀರಿನ ಸ್ನಾನ ಮಾಡುವುದು ಬಹಳ ಚೆನ್ನಾಗಿರುತ್ತದೆ ಭಕ್ತಿ ಮಾರ್ಗದಲ್ಲಿಯೂ ಸ್ವಚ್ಛತೆಯನ್ನು ಇಷ್ಟ ಪಡುತ್ತಾರೆ. ಬಂದು ನಮ್ಮನ್ನು ಸ್ವಚ್ಛ ಮಾಡಿ ಎಂದು ಪರಮಾತ್ಮನನ್ನು ಕರೆಯುತ್ತಾರೆ. ಕೊಳಕಾಗಿರುವ ವಸ್ತ್ರಗಳನ್ನು ಸ್ವಚ್ಛಗೊಳಿಸಿ ಎಂದು ಗುರುನಾನಕನೂ ಸಹ ಪರಮಾತ್ಮನ ಮಹಿಮೆ ಹಾಡಿದ್ದಾರೆ ಅಂದಾಗ ತಂದೆಯೇ ಬಂದು ಕೊಳಕು ವಸ್ತ್ರಗಳನ್ನು ಸ್ವಚ್ಛ ಮಾಡುತ್ತಾರೆ. ಇಲ್ಲಿ ತಂದೆಯು ಆತ್ಮವನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ಕೆಲವರು ಆತ್ಮವು ನಿರ್ಲೇಪವೆಂದು ತಿಳಿಯುತ್ತಾರೆ. ತಂದೆಯು ತಿಳಿಸುತ್ತಾರೆ - ಇದು ರಾವಣ ರಾಜ್ಯವಾಗಿದೆ, ಸೃಷ್ಟಿಯದು ಇಳಿಯುವ ಕಲೆಯಾಗಿದೆ. ನಿನ್ನಿಂದ ಸರ್ವರ ಉದ್ಧರವಾಗುತ್ತದೆ ಎಂದು ಗಾಯನವಿದೆ. ಸರ್ವರ ಸದ್ಗತಿಯಾಗಿ ಬಿಡುತ್ತದೆ. ಹೇ ತಂದೆಯೇ, ತಮ್ಮ ಮೂಲಕ ಎಲ್ಲರ ಉದ್ಧಾರವಾಗಿ ಬಿಡುತ್ತದೆ. ಸತ್ಯಯುಗದಲ್ಲಿ ಎಲ್ಲರ ಉದ್ಧಾರವಾಗುತ್ತದೆ. ಅಲ್ಲಿ ಎಲ್ಲರೂ ಶಾಂತಿಯಲ್ಲಿರುತ್ತಾರೆ. ಒಂದೇ ರಾಜ್ಯವಿರುತ್ತದೆ ಆ ಸಮಯದಲ್ಲಿ ಮತ್ತೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ. ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗಲಿ ಎಂದು ಇಲ್ಲಿ ತಲೆ ಕೆಡಿಸಿಕೊಳ್ಳುತ್ತಾರೆ. ಅವರೊಂದಿಗೆ ಕೇಳಿ - ಮೊದಲು ಎಂದಾದರೂ ವಿಶ್ವದಲ್ಲಿ ಶಾಂತಿ ಇತ್ತೇ? ಅದನ್ನು ಮತ್ತೆ ನೀವು ಬೇಡುತ್ತಿದ್ದೀರಿ. ಕಲಿಯುಗವು ಇನ್ನೂ 40,000 ವರ್ಷಗಳಿದೆ ಎಂದು ಹೇಳಿ ಬಿಡುತ್ತಾರೆ. ಮನುಷ್ಯರು ಘೋರ ಅಂಧಕಾರದಲ್ಲಿ ಇದ್ದಾರೆ. 5000 ವರ್ಷಗಳ ಪೂರ್ಣ ಕಲ್ಪವೆಲ್ಲಿ! ಒಂದು ಕಲಿಯುಗದ್ದೇ 40,000 ವರ್ಷಗಳೆಲ್ಲಿ! ಇನ್ನೂ 40,000 ವರ್ಷಗಳಿದೆ ಎಂದು ಹೇಳಿ ಬಿಡುತ್ತಾರೆ. ಅನೇಕ ಮತಗಳಿವೆ, ತಂದೆಯೇ ಬಂದು ಸತ್ಯವನ್ನು ತಿಳಿಸುತ್ತಾರೆ ಜನ್ಮಗಳು 84 ಆಗಿವೆ. ಲಕ್ಷಾಂತರ ವರ್ಷಗಳಾಗಿದ್ದರೆ ಮನುಷ್ಯರು ಪ್ರಾಣಿ ಜನ್ಮವನ್ನು ಪಡೆಯುತ್ತಿದ್ದರು ಆದರೆ ನಿಯಮವೇ ಇಲ್ಲ. ಮನುಷ್ಯರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಅದರ ಲೆಕ್ಕವನ್ನು ತಂದೆಯು ತಿಳಿಸುತ್ತಾರೆ. ಈ ಜ್ಞಾನವನ್ನು ನೀವು ಮಕ್ಕಳೇ ಧಾರಣೆ ಮಾಡಬೇಕಾಗಿದೆ. ಋಷಿ-ಮುನಿಗಳೂ ಸಹ ನೇತಿ-ನೇತಿ ಅರ್ಥಾತ್ ನಮಗೂ ಗೊತ್ತಿಲ್ಲವೆಂದು ಹೇಳುತ್ತಾರೆಂದರೆ ಅವರು ನಾಸ್ತಿಕರಾದರು. ಅವಶ್ಯವಾಗಿ ಯಾರಾದರೂ ಆಸ್ತಿಕರಿರುತ್ತಾರೆ ಅಂದಾಗ ಆ ಆಸ್ತಿಕರು ದೇವತೆಗಳಾಗಿದ್ದಾರೆ, ನಾಸ್ತಿಕರು ರಾವಣ ರಾಜ್ಯದಲ್ಲಿ ಇದ್ದಾರೆ. ಜ್ಞಾನದಿಂದ ನೀವು ಆಸ್ತಿಕರಾಗುತ್ತೀರಿ ಮತ್ತೆ ನಿಮಗೆ 21 ಜನ್ಮಗಳ ಆಸ್ತಿಯು ಸಿಕ್ಕಿ ಬಿಡುತ್ತದೆ ನಂತರ ಜ್ಞಾನದ ಅವಶ್ಯಕತೆಯಿರುವುದಿಲ್ಲ. ಈಗ ಪುರುಷೋತ್ತಮ ಸಂಗಮಯುಗವಾಗಿದೆ. ಈ ಸಮಯದಲ್ಲಿ ನಾವು ಉತ್ತಮ ಪುರುಷರು ಸ್ವರ್ಗದ ಮಾಲೀಕರಾಗುತ್ತಿದ್ದೇವೆ. ಇದರಲ್ಲಿ ಯಾರೆಷ್ಟು ಓದುತ್ತಾರೆಯೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಓದಿದರೆ ವಿಶ್ವದ ಮಾಲೀಕರಾಗುತ್ತಾರೆ ಇಲ್ಲವೆಂದರೆ ಪದವಿ ಕಡಿಮೆಯಾಗುತ್ತದೆ ಆದರೆ ಅದು ಸುಖದ ರಾಜಧಾನಿಯಾಗಿದೆ. ಇದು ದುಃಖದ ರಾಜಧಾನಿಯಾಗಿದೆ. ಆಸ್ತಿಕರಾದರೆ ಆಗ ದುಃಖವಾಗುತ್ತದೆ. ಭಾರತವು ಯಾವಾಗ ಬಹಳ ಸಾಹುಕಾರನಾಗಿತ್ತೋ ಆಗ ಅಪಾರ ಧನವಿತ್ತು. ಸೋಮನಾಥ ಮಂದಿರವನ್ನೂ ಸಹ ಎಷ್ಟು ದೊಡ್ಡದನ್ನಾಗಿ ಮಾಡಿದ್ದಾರೆ. ಮಂದಿರವನ್ನು ನಿರ್ಮಿಸುವುದಕ್ಕಾಗಿಯೇ ಇಷ್ಟು ಹಣವನ್ನು ಇಟ್ಟಿದ್ದಾರೆಂದರೆ ಅವರ ಬಳಿ ಇನ್ನೆಷ್ಟು ಸಂಪತ್ತಿದ್ದಿರಬಹುದು! ಅಂದಮೇಲೆ ಅವರಿಗೆ ಇಷ್ಟೊಂದು ಸಂಪತ್ತು ಎಲ್ಲಿಂದ ಸಿಕ್ಕಿತು? ಶಾಸ್ತ್ರಗಳಲ್ಲಿ ಸಾಗರನು ತಟ್ಟೆಗಳನ್ನು ತುಂಬಿ-ತುಂಬಿ ಕೊಟ್ಟನೆಂದು ಬರೆದಿದ್ದಾರೆ. ಈಗ ಜ್ಞಾನ ಸಾಗರನು ನಿಮಗೆ ರತ್ನಗಳ ತಟ್ಟೆಗಳನ್ನು ತುಂಬಿ ಕೊಡುತ್ತಾರೆ. ಈಗ ನಿಮಗೆ ಜೋಳಿಗೆಯು ತುಂಬುತ್ತಿದೆ. ಅವರು ಶಂಕರನ ಮುಂದೆ ಹೋಗಿ ಜೋಳಿಗೆಯನ್ನು ತುಂಬಿಸು ಎಂದು ಕೇಳುತ್ತಾರೆ. ತಂದೆಯನ್ನು ಅರಿತುಕೊಂಡಿಲ್ಲ. ಈಗ ನಿಮಗೆ ಗೊತ್ತಿದೆ ತಂದೆಯು ತಮ್ಮ ಜೋಳಿಗೆಯನ್ನು ತುಂಬಿಸುತ್ತಿದ್ದಾರೆ. ಯಾರೆಷ್ಟು ಬೇಕೋ ತುಂಬಿಸಿಕೊಳ್ಳಬಹುದು. ಎಷ್ಟು ಚೆನ್ನಾಗಿ ಓದುತ್ತೀರೋ ಅಷ್ಟು ವಿದ್ಯಾರ್ಥಿ ವೇತನವು ಸಿಗುತ್ತದೆ. ಶ್ರೇಷ್ಠಾತಿ ಶ್ರೇಷ್ಠ ಡಬಲ್ ಕಿರೀಟಧಾರಿಗಳಾದರೂ ಆಗಿ, ಬಡ ಪ್ರಜೆಗಳಾದರೂ ಆಗಿ ಅಥವಾ ದಾಸ ದಾಸಿಯರಾದರೂ ಆಗಿ, ಎಲ್ಲವೂ ನಿಮ್ಮ ಮೇಲೆ ಆಧಾರವಾಗಿದೆ. ಅನೇಕರು ವಿಚ್ಛೇದನವನ್ನೂ ಕೊಟ್ಟು ಬಿಡುತ್ತಾರೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ನನಗೆ ಯಾವುದೇ ಚಿಂತೆಯಿಲ್ಲ, ಚಿಂತೆಯಿಂದ ಮುಕ್ತನಾಗಿದ್ದೇನೆ ಅರ್ಥಾತ್ ನಿಶ್ಚಿಂತನಾಗಿದ್ದೇನೆ. ನಿಮ್ಮನ್ನು ಹಾಗೆ ಮಾಡುತ್ತಿದ್ದೇನೆ. ಚಿಂತೆಯಿಂದ ನಿಶ್ಚಿಂತರನ್ನಾಗಿ ಮಾಡುವ ಸದ್ಗುರು...... ಸ್ವಾಮಿ ಎಂದರೆ ಯಾರು ಎಲ್ಲರ ತಂದೆಯಾಗಿದ್ದಾರೆ ಅವರಿಗೆ ಮಾಲೀಕನೆಂದು ಹೇಳುತ್ತಾರೆ. ನಾನು ನಿಮ್ಮ ಬೇಹದ್ದಿನ ಶಿಕ್ಷಕನಾಗಿದ್ದೇನೆ ಎಂದು ತಂದೆಯು ತಿಳಿಸುತ್ತಾರೆ. ಭಕ್ತಿ ಮಾರ್ಗದಲ್ಲಿ ಅನೇಕ ಶಿಕ್ಷಕರಿಂದ ಅನೇಕ ಪ್ರಕಾರದ ವಿದ್ಯೆಯನ್ನು ಓದುತ್ತೀರಿ. ತಂದೆಯು ನಿಮಗೆ ಏನನ್ನು ಓದಿಸುತ್ತಾರೆಯೋ ಇದು ಎಲ್ಲದಕ್ಕಿಂತ ಭಿನ್ನವಾಗಿರುವ ಜ್ಞಾನವಾಗಿದೆ. ಅವರು ಜ್ಞಾನ ಸಾಗರನಾಗಿದ್ದಾರೆ, ಎಲ್ಲರ ಹೃದಯವನ್ನು ಅರಿತಿರುವವರು ಎಂದು ಹೇಳಬಾರದು. ತಾವಂತೂ ತಮ್ಮ ಆಂತರ್ಯವನ್ನು ಅರಿತಿದ್ದೀರಿ ಎಂದು ಅನೇಕರು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ನಾನು ಏನನ್ನೂ ತಿಳಿದಿಲ್ಲ. ನಾನು ಕೇವಲ ನೀವು ಮಕ್ಕಳಿಗೆ ಓದಿಸಲು ಬರುತ್ತೇನೆ. ನೀವು ಆತ್ಮರು ತಮ್ಮ ಸಿಂಹಾಸನದ ಮೇಲೆ ವಿರಾಜಮಾನನಾಗಿದ್ದೀರಿ. ನಾನೂ ಸಹ ಈ ಸಿಂಹಾಸನದ ಮೇಲೆ ಕುಳಿತಿದ್ದೇನೆ. ಆತ್ಮವು ಎಷ್ಟು ಸೂಕ್ಷ್ಮ ಬಿಂದುವಾಗಿದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಆದ್ದರಿಂದಲೇ ತಂದೆಯು ತಿಳಿಸುತ್ತಾರೆ, ಮೊದಲು ಆತ್ಮವನ್ನು ತಿಳಿಯಿರಿ ನಂತರ ತಂದೆಯನ್ನು ತಿಳಿಯುತ್ತೀರಿ. ತಂದೆಯು ಮೊಟ್ಟ ಮೊದಲು ಆತ್ಮದ ಜ್ಞಾನವನ್ನೇ ತಿಳಿಸುತ್ತಾರೆ. ನಂತರ ತಂದೆಯ ಪರಿಚಯವನ್ನು ಕೊಡುತ್ತಾರೆ. ಭಕ್ತಿ ಮಾರ್ಗದಲ್ಲಿ ಸಾಲಿಗ್ರಾಮಗಳನ್ನು ತಯಾರು ಮಾಡಿ ಪೂಜೆ ಮಾಡಿ ಮತ್ತೆ ಸಮಾಪ್ತಿ ಮಾಡುತ್ತಾರೆ. ಇದೆಲ್ಲವೂ ಗೊಂಬೆಗಳ ಪೂಜೆಯಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಯಾರು ಇವೆಲ್ಲಾ ಮಾತುಗಳನ್ನು ಚೆನ್ನಾಗಿ ಅರಿತುಕೊಳ್ಳುತ್ತಾರೆಯೋ ಅವರು ಅನ್ಯರ ಕಲ್ಯಾಣವನ್ನು ಮಾಡುತ್ತಾರೆ. ತಂದೆಯು ಕಲ್ಯಾಣಕಾರಿ ಆಗಿದ್ದಾರೆ ಅಂದಮೇಲೆ ಮಕ್ಕಳೂ ಆಗಬೇಕಾಗಿದೆ. ಕೆಲವರಂತೂ ಅನ್ಯರನ್ನು ಕೆಸರಿನಿಂದ ಹೊರ ತೆಗೆಯುತ್ತಾ ತೆಗೆಯುತ್ತಾ ತಾವೇ ಸಿಕ್ಕಿಕೊಂಡು ಸಾಯುತ್ತಾರೆ, ಅಪವಿತ್ರರಾಗಿ ಬಿಡುತ್ತಾರೆ. ಮಾಡಿಕೊಂಡಿರುವ ಸಂಪಾದನೆಯನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಎಚ್ಚರಿಕೆಯಿಂದ ಇರಿ, ಕಾಮ ಚಿತೆಯ ಮೇಲೆ ಕುಳಿತುಕೊಳ್ಳುವುದರಿಂದಲೇ ನೀವು ಕಪ್ಪಾಗಿ ಬಿಟ್ಟಿದ್ದೀರಿ. ತಾವೂ ಹೇಳುತ್ತೀರಿ - ನಾವು ಸುಂದರರಾಗಿದ್ದೆವು, ನಾವೇ ಕಪ್ಪಾದೆವು. ನಾವೇ ದೇವತೆಗಳಾಗಿದ್ದೆವು ಮತ್ತೆ ನಾವೇ ಕೆಳಗೆ ಇಳಿದೆವು ಇಲ್ಲವಾದರೆ 84 ಜನ್ಮಗಳನ್ನು ಯಾರು ತೆಗೆದುಕೊಳ್ಳುತ್ತಾರೆ! ಈ ಲೆಕ್ಕವನ್ನು ತಂದೆಯು ತಿಳಿಸುತ್ತಾರೆ. ಮಕ್ಕಳು ಬಹಳ ಶ್ರಮ ಪಡಬೇಕಾಗುತ್ತದೆ. ಅರ್ಧ ಕಲ್ಪದಿಂದ ಯಾವ ವಿಷಯ ಸಾಗರದಲ್ಲಿ ಬಿದ್ದಿದ್ದಾರೆ ಅದರಿಂದ ಹೊರ ತೆಗೆಯುವುದು ಚಿಕ್ಕಮ್ಮನ ಮನೆಯಂತಲ್ಲ. ಒಂದು ವೇಳೆ ಯಾರಾದರೂ ಸ್ವಲ್ಪ ಜ್ಞಾನವನ್ನು ಪಡೆದರೂ ಸಹ ಅದರ ವಿನಾಶವಾಗುವುದಿಲ್ಲ. ಈ ಕಥೆಯೇ ಸತ್ಯ ನಾರಾಯಣನ ಕಥೆಯಾಗಿದೆ ಮತ್ತೆ ಪ್ರಜೆಗಳೂ ಆಗುತ್ತಾರೆ. ಸ್ವಲ್ಪ ತಿಳಿದುಕೊಂಡು ಹೊರಟು ಹೋಗುತ್ತಾರೆಂದರೆ ಅವರು ಮತ್ತೆ ಬಂದು ತಿಳಿದುಕೊಳ್ಳಲೂಬಹುದು. ಮುಂದೆ ಹೋದಂತೆ ಮನುಷ್ಯರಲ್ಲಿ ವೈರಾಗ್ಯವೂ ಬರುತ್ತದೆ. ಹೇಗೆ ಸ್ಮಶಾನದಲ್ಲಿ ವೈರಾಗ್ಯ ಬರುತ್ತದೆ ಮತ್ತೆ ಹೊರಗೆ ಬಂದಾಗ ಅದು ಸಮಾಪ್ತಿಯಾಗುತ್ತದೆ. ಹಾಗೆಯೇ ನೀವು ತಿಳಿಸಿದಾಗ ಚೆನ್ನಾಗಿದೆ-ಚೆನ್ನಾಗಿದೆ ಎನ್ನುತ್ತಾರೆ ಹೊರಗೆ ಹೋದ ಕೂಡಲೇ ಮಾಯೆಯು ತಲೆ ತಿರುಗಿಸಿ ಬಿಡುತ್ತದೆ. ಕೋಟಿಯಲ್ಲಿ ಕೆಲವರೇ ಬರುತ್ತಾರೆ. ರಾಜ್ಯ ಪದವಿಯನ್ನು ಪಡೆಯುವುದರಲ್ಲಿ ಪರಿಶ್ರಮವಾಗುತ್ತದೆ. ಪ್ರತಿಯೊಬ್ಬರೂ ಸಹ ತಮ್ಮೊಂದಿಗೆ ಕೇಳಿಕೊಳ್ಳಿ, ನಾವು ತಂದೆಯು ಎಷ್ಟು ನೆನಪು ಮಾಡುತ್ತೇವೆ? ತಂದೆಯ ನೆನಪು ಮರೆತು ಹೋಗುತ್ತದೆ ಎಂದು ಹೇಳುತ್ತಾರೆ. ಅರೆ! ಅಜ್ಞಾನ ಕಾಲದಲ್ಲಿ ಎಂದಾದರೂ ನಮಗೆ ತಂದೆಯೇ ಮರೆತು ಹೋಗುತ್ತಾರೆಂದು ಹೇಳುತ್ತಾರೆಯೇ! ತಂದೆಯು ತಿಳಿಸುತ್ತಾರೆ - ಭಲೇ ಎಷ್ಟೇ ಬಿರುಗಾಳಿಗಳು ಬರಲಿ ನೀವು ಅಲುಗಾಡಬಾರದು. ಬಿರುಗಾಳಿ ಬರುತ್ತದೆ. ಕೇವಲ ಕರ್ಮೇಂದ್ರಿಯಗಳಿಂದ ಅಂತಹ ಕರ್ಮ ಮಾಡಬಾರದು. ಬಾಬಾ ಮಾಯೆಯು ಮೋಡಿ ಮಾಡಿ ಬಿಟ್ಟಿದೆ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನನ್ನನ್ನು ನೆನಪು ಮಾಡಿ ಆಗ ತುಕ್ಕು ಬಿಟ್ಟು ಹೋಗುತ್ತದೆ. ಆತ್ಮದಲ್ಲಿ ಏರಿರುವ ತುಕ್ಕು ನೆನಪಿನಿಂದಲೇ ಬಿಡುತ್ತದೆ. ತಂದೆಯು ಬಿಂದುವಾಗಿದ್ದಾರೆ. ತುಕ್ಕನ್ನು ಕಳೆಯಲು ತಂದೆಯ ನೆನಪಿನ ವಿನಃ ಮತ್ತ್ಯಾವುದೇ ಉಪಾಯವಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ನಾವು ಕಲ್ಯಾಣಕಾರಿ ತಂದೆಯ ಮಕ್ಕಳಾಗಿದ್ದೇವೆ, ಆದ್ದರಿಂದ ತಮ್ಮ ಮತ್ತು ಸರ್ವರ ಕಲ್ಯಾಣ ಮಾಡಬೇಕಾಗಿದೆ. ಮಾಡಿಕೊಂಡಿರುವ ಸಂಪಾದನೆಯೇ ಸಮಾಪ್ತಿಯಾಗುವ ಯಾವುದೇ ಕರ್ಮ ಮಾಡಬಾರದು. ಇದರಲ್ಲಿ ಎಚ್ಚರಿಕೆಯಿಂದ ಇರಬೇಕು.

2. ವಿದ್ಯೆಯನ್ನು ಚೆನ್ನಾಗಿ ಓದಿ ಜ್ಞಾನ ರತ್ನಗಳಿಂದ ತಮ್ಮ ಜೋಳಿಗೆಯನ್ನು ಸಂಪನ್ನ ಮಾಡಿಕೊಳ್ಳಬೇಕಾಗಿದೆ. ವಿದ್ಯಾರ್ಥಿ ವೇತನವನ್ನು ಪಡೆಯುವ ಪುರುಷಾರ್ಥ ಮಾಡಬೇಕಾಗಿದೆ. ತಂದೆಯ ಸಮಾನ ಚಿಂತೆಗಳಿಂದ ಮುಕ್ತ ನಿಶ್ಚಿಂತರಾಗಿರಬೇಕಾಗಿದೆ.


ವರದಾನ:
ಬ್ರಾಹ್ಮಣ ಜನ್ಮದ ವಿಶೇಷತೆಯನ್ನು ಸ್ವಾಭಾವಿಕ ಸ್ವಭಾವನ್ನಾಗಿ ಮಾಡಿಕೊಂಡಿರುವಂತಹ ಸಹಜ ಪುರುಷಾರ್ಥಿ ಭವ.

ಬ್ರಾಹಣ ಜನ್ಮವು ವಿಶೇಷ, ಬ್ರಾಹ್ಮಣ ಧರ್ಮ ಮತ್ತು ಕರ್ಮವೂ ವಿಶೇಷ, ಅರ್ಥಾತ್ ಸರ್ವ ಶ್ರೇಷ್ಠವಾಗಿದೆ. ಏಕೆಂದರೆ ಬ್ರಾಹ್ಮಣ ಕರ್ಮದಲ್ಲಿ ಸಾಕಾರ ಬ್ರಹ್ಮಾ ಬಾಬಾರವರನ್ನು ಫಾಲೋ ಮಾಡುತ್ತಾರೆ. ಆದ್ದರಿಂದ ಬ್ರಾಹಣರ ಸ್ವಭಾವವೇ ವಿಶೇಷ ಸ್ವಭಾವವಾಗಿದೆ, ಸಾಧಾರಣ ಅಥವಾ ಮಾಯಾವಿ ಸ್ವಭಾವ ಬ್ರಾಹ್ಮಣರ ಸ್ವಭಾವ ಅಲ್ಲ. ಕೇವಲ ಇದೇ ಸ್ಮೃತಿ ಸ್ವರೂಪದಲ್ಲಿರಿ, ನಾನು ವಿಶೇಷ ಆತ್ಮನಾಗಿದ್ದೇನೆ, ಈ ಸ್ವಭಾವ ಯಾವಾಗ ಸ್ವಾಭಾವಿಕ ಸ್ವಭಾವವಾಗಿ ಬಿಡುವುದು ಆಗ ತಂದೆ ಸಮಾನ ಆಗುವುದು ಸಹಜವಾಗಿ ಅನುಭವ ಮಾಡುವಿರಿ. ಸ್ಮೃತಿ ಸ್ವರೂಪದಿಂದಲೇ ಸಮರ್ಥಿ ಸ್ವರೂಪ ಆಗಿ ಬಿಡುವುದು, ಇದೇ ಸಹಜ ಪುರುಷಾರ್ಥವಾಗಿದೆ.

ಸ್ಲೋಗನ್:
ಪವಿತ್ರತೆ ಮತ್ತು ಶಾಂತಿಯ ಬೆಳಕು ನಾಲ್ಕೂ ಕಡೆ ಹರಡುವವರೇ ಲೈಟ್ ಹೌಸ್ ಆಗಿದ್ದಾರೆ.