ಪ್ರಾತಃ ಮುರಳಿ ಓಂ ಶಾಂತಿ "ಬಾಪ್‌ದಾದಾ" ಮಧುಬನ


“ಮಧುರ ಮಕ್ಕಳೇ -- ಈಗ ಮರಳಿ ಮನೆಗೆ ಹೋಗಬೇಕಾಗಿದೆ. ಆದ್ದರಿಂದ ದೇಹಭಾನವನ್ನು ಮರೆತು ತನ್ನನ್ನು ಅಶರೀರಿ ಆತ್ಮನೆಂದು ತಿಳಿಯಿರಿ, ಎಲ್ಲದರಿಂದ ಮಮತ್ವವನ್ನು ಕಳೆಯಿರಿ"

*ಪ್ರಶ್ನೆ* :

ಸಂಗಮಯುಗದಲ್ಲಿ ನೀವು ಮಕ್ಕಳು ತಂದೆಯಿಂದ ಯಾವ ಬುದ್ಧಿವಂತಿಕೆಯನ್ನು ಕಲಿಯುತ್ತೀರಿ?

*ಉತ್ತರ* :

ತಮೋಪ್ರಧಾನರಿಂದ ಸತೋಪ್ರಧಾನರಾಗುವುದು ಹೇಗೆ, ತಮ್ಮ ಅದೃಷ್ಟವನ್ನು ಶ್ರೇಷ್ಠ ಮಾಡಿಕೊಳ್ಳುವುದು ಹೇಗೆ ಎಂಬ ಬುದ್ದಿವಂತಿಕೆಯನ್ನು ಈಗಲೇ ನೀವು ಕಲಿಯುತ್ತೀರಿ. ಯಾರೆಷ್ಟು ಯೋಗಯುಕ್ತ ಮತ್ತು ಜ್ಞಾನಯುಕ್ತರಾಗಿದ್ದಾರೆಯೋ ಅವರದು ಅಷ್ಟೇ ಉನ್ನತಿಯಾಗುತ್ತಿರುತ್ತದೆ. ಉನ್ನತಿ ಮಾಡಿಕೊಳ್ಳುವ ಮಕ್ಕಳನ್ನು ಎಂದು ಮುಚ್ಚಿಡಲು ಸಾಧ್ಯವಿಲ್ಲ, ತಂದೆಯು ಪ್ರತಿಯೊಬ್ಬ ಮಗುವಿನ ಚಲನೆಯಿಂದಲೇ ಯಾವ ಮಗು ತನ್ನ ಶ್ರೇಷ್ಠ ಅದೃಷ್ಟವನ್ನು ರೂಪಿಸಿಕೊಳ್ಳುತ್ತಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ.

*ಗೀತೆ* :

ಸತ್ತರೂ ನಿನ್ನ ಮಡಿಲಿನಲ್ಲಿಯೇ, ಬದುಕಿದರೂ..........

*ಓಂಶಾಂತಿ*

ಎಲ್ಲಾ ಮಕ್ಕಳು ಈ ಗೀತೆಯನ್ನು ಕೇಳಿದಿರಿ. ಮಕ್ಕಳೇ ಎಂದು ಹೇಳಿದಾಗ ಎಲ್ಲಾ ಸೇವಾಕೇಂದ್ರಗಳ ಮಕ್ಕಳು ತಿಳಿದುಕೊಳ್ಳುತ್ತಾರೆ - ತಂದೆಯು ಮಕ್ಕಳೇ, ಈ ಗೀತೆಯನ್ನು ಕೇಳಿದಿರಾ ಎಂದು ನಾವು ಬ್ರಾಹ್ಮಣರಿಗಾಗಿ ಹೇಳುತ್ತಾರೆ. ಗೀತೆಯಾಗಿದೆ - ಜೀವಿಸಿದ್ದಂತೆಯೇ ಕೊರಳಿನ ಹಾರವಾಗುವುದಕ್ಕಾಗಿ ಅರ್ಥಾತ್ ಮೂಲವತನದಲ್ಲಿ ತಂದೆಯ ಬಳಿ ಮನೆಯಲ್ಲಿ ಇರುವುದಕ್ಕಾಗಿ..... ಇದು ಶಿವತಂದೆಯ ಮನೆಯಲ್ಲವೆ. ಅಲ್ಲಿ ಎಲ್ಲಾ ಸಾಲಿಗ್ರಾಮಗಳಿರುತ್ತಾರೆ, ಮಕ್ಕಳು ಬ್ರಾಹ್ಮಣ ಕುಲಭೂಷಣರು, ಸ್ವದರ್ಶನ ಚಕ್ರಧಾರಿಗಳು ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಅದೇ ತಂದೆಯು ಬಂದಿದ್ದಾರೆ. ತಿಳಿಸುತ್ತಾರೆ - ಮಕ್ಕಳೇ, ನೀವೀಗ ಅಶರೀರಿಯಾಗಬೇಕು ಅರ್ಥಾತ್ ದೇಹಭಾನವನ್ನು ಮರೆಯಬೇಕಾಗಿದೆ. ಈ ಹಳೆಯ ಪ್ರಪಂಚವಂತೂ ಸಮಾಪ್ತಿಯಾಗುವುದು. ಈ ಶರೀರವನ್ನಂತು ಬಿಡಬೇಕಾಗಿದೆ ಅರ್ಥಾತ್ ಎಲ್ಲವನ್ನೂ ಬಿಡಬೇಕಾಗಿದೆ ಏಕೆಂದರೆ ಈ ಪ್ರಪಂಚವೇ ಸಮಾಪ್ತಿಯಾಗುವುದಿದೆ ಆದ್ದರಿಂದ ಈಗ ಮರಳಿ ಮನೆಗೆ ಹೋಗಬೇಕಾಗಿದೆ. ಎಲ್ಲಾ ಮಕ್ಕಳಿಗೆ ಈಗ ಖುಷಿಯಾಗುತ್ತದೆ ಏಕೆಂದರೆ ಅರ್ಧಕಲ್ಪ ಮನೆಗೆ ಹೋಗುವುದಕ್ಕಾಗಿಯೇ ಬಹಳ ಅಲೆದಾಡಿದ್ದೀರಿ ಆದರೆ ಮಾರ್ಗವು ಸಿಗಲೇ ಇಲ್ಲ! ಇನ್ನೂ ಭಕ್ತಿಮಾರ್ಗದ ಆಡಂಬರವನ್ನು ನೋಡಿ ಮನುಷ್ಯರು ಅದರಲ್ಲಿ ಸಿಲುಕುತ್ತಾರೆ. ಇದು ಭಕ್ತಿಮಾರ್ಗದ ಕೆಸರಾಗಿದೆ ಯಾವುದರಲ್ಲಿ ಮನುಷ್ಯ ಮಾತ್ರರು ಕೊರಳಿನವರೆಗೆ ಮುಳುಗಿಬಿಟ್ಟಿದ್ದಾರೆ. ಈಗ ಮಕ್ಕಳು ಹೇಳುತ್ತಾರೆ - ಬಾಬಾ, ನಾವು ಹಳೆಯ ಪ್ರಪಂಚ, ಹಳೆಯ ಶರೀರವನ್ನು ಮರೆಯುತ್ತೇವೆ. ಈಗ ತಮ್ಮ ಜೊತೆ ಅಶರೀರಿಯಾಗಿ ಮನೆಗೆ ಬರುತ್ತೇವೆ. ಪರಮಪಿತ ಪರಮಾತ್ಮನು ನಮ್ಮನ್ನು ಕರೆದುಕೊಂಡು ಹೋಗುವುದಕ್ಕಾಗಿ ಪರಮಧಾಮದಿಂದ ಬಂದಿದ್ದಾರೆಂದು ಎಲ್ಲರ ಬುದ್ಧಿಯಲ್ಲಿದೆ. ತಂದೆಯು ಕೇವಲ ಇದನ್ನೇ ಹೇಳುತ್ತಾರೆ, ನೀವು ಪವಿತ್ರರಾಗಿ ನನ್ನನ್ನು ನೆನಪು ಮಾಡಿರಿ. ಜೀವಿಸಿದ್ದಂತೆಯೇ ಸಾಯಬೇಕಾಗಿದೆ. ನಿಮಗೆ ತಿಳಿದಿದೆ - ಅಲ್ಲಿ ಪರಮಧಾಮದಲ್ಲಿ ಆತ್ಮರಿರುತ್ತಾರೆ. ಆತ್ಮವಂತೂ ಬಿಂದುವಾಗಿದೆ. ನಿರಾಕಾರಿ ಪ್ರಪಂಚಕ್ಕೆ ಎಲ್ಲಾ ಆತ್ಮರು ಹೊರಟು ಹೋಗುವರು. ಎಷ್ಟು ಮಂದಿ ಮನುಷ್ಯರಿದ್ದಾರೆಯೋ ಅಷ್ಟು ಆತ್ಮರು ಅಲ್ಲಿರುತ್ತಾರೆ. ಆತ್ಮರು ಆ ಮಹಾತತ್ವದಲ್ಲಿ ಎಷ್ಟು ಸ್ಥಳವನ್ನು ತೆಗೆದುಕೊಳ್ಳಬಹುದು ! ಶರೀರವಂತೂ ಇಷ್ಟು ದೊಡ್ಡದಾಗಿದೆ, ಎಷ್ಟೊಂದು ಸ್ಥಳ ಆಕ್ರಮಿಸುತ್ತದೆ! ಆದರೆ ಆತ್ಮಕ್ಕೆ ಎಷ್ಟು ಸ್ಥಳ ಬೇಕು! ನಾವಾತ್ಮರು ಇಷ್ಟು ಚಿಕ್ಕಸ್ಥಳವನ್ನು ಆಕ್ರಮಿಸುತ್ತೇವೆ? ಬಹಳ ಕಡಿಮೆ. ಮಕ್ಕಳಿಗೆ ಇವೆಲ್ಲಾ ಮಾತುಗಳನ್ನು ತಂದೆಯ ಮೂಲಕ ಕೇಳುವ ಸೌಭಾಗ್ಯವು ಈಗ ಸಿಗುತ್ತದೆ. ತಂದೆಯೇ ತಿಳಿಸುತ್ತಾರೆ ನೀವು ಅಶರೀರಿಯಾಗಿ ಬಂದಿದ್ದಿರಿ ನಂತರ ಶರೀರಧಾರಣೆ ಮಾಡಿ ಪಾತ್ರವನ್ನು ಅಭಿನಯಿಸಿದಿರಿ. ಈಗ ಪುನಃ ಜೀವಿಸಿದ್ದಂತೆಯೇ ಸಾಯಬೇಕಾಗಿದೆ, ಎಲ್ಲವನ್ನೂ ಮರೆಯಬೇಕಾಗಿದೆ. ತಂದೆಯು ಬಂದು ಸಾಯುವುದನ್ನು ಕಲಿಸುತ್ತಾರೆ ಮತ್ತು ತಮ್ಮ ತಂದೆಯನ್ನೂ, ಮನೆಯನ್ನೂ ನೆನಪು ಮಾಡಿ. ಹೆಚ್ಚಿನ ಪುರುಷಾರ್ಥ ಮಾಡಿ ಎಂದು ಹೇಳುತ್ತಾರೆ. ಯೋಗದಲ್ಲಿ ಇರುವುದರಿಂದ ಪಾಪಗಳು ನಾಶವಾಗುತ್ತದೆ ನಂತರ ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾಗಿಬಿಡುತ್ತದೆ ಆದ್ದರಿಂದ ತಂದೆಯು ಸಲಹೆ ನೀಡುತ್ತಾರೆ. ಕಲ್ಪದ ಮೊದಲೂ ಸಹ ತಿಳಿಸಿದ್ದೆನು, ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿ. ಎಲ್ಲರ ತಂದೆಯು ಅವರೊಬ್ಬರೇ ಅಲ್ಲವೆ. ನೀವು ಪ್ರಜಾಪಿತ ಬ್ರಹ್ಮನ ಮುಖವಂಶಾವಳಿ ಮಕ್ಕಳಾಗಿದ್ದೀರಿ, ಜ್ಞಾನವನ್ನು ಪಡೆಯುತ್ತಾ ಇರುತ್ತೀರಿ. ಶಿವನ ಸಂತಾನರಂತೂ ಆಗಿಯೇ ಇದ್ದೀರಿ. ಇದಂತೂ ಎಲ್ಲರಿಗೆ ನಿಶ್ಚಯವಿದೆ - ನಾವು ಭಗವಂತನ ಮಕ್ಕಳಾಗಿದ್ದೇವೆ ಆದರೆ ಅವರ ನಾಮ-ರೂಪ, ದೇಶ-ಕಾಲವನ್ನು ಮರೆಯುವ ಕಾರಣ ಭಗವಂತನ ಪ್ರತಿ ಯಾರಿಗೂ ಅಷ್ಟೊಂದು ಪ್ರೀತಿಯಿರುವುದಿಲ್ಲ. ಆದರೂ ಸಹ ಯಾರಿಗೂ ದೋಷ ಹೊರಿಸುವಂತಿಲ್ಲ ಏಕೆಂದರೆ ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ.

ತಂದೆಯು ತಿಳಿಸುತ್ತಾರೆ - ನೀವಾತ್ಮರು ಎಷ್ಟು ಚಿಕ್ಕಬಿಂದುವಾಗಿದ್ದೀರಿ, ಅದರಲ್ಲಿ 84 ಜನ್ಮಗಳ ಪಾತ್ರವು ನೊಂದಾವಣೆಯಾಗಿದೆ. ಇದು ಎಷ್ಟು ಅದ್ಭುತವಾಗಿದೆ. ಆತ್ಮವು ಹೇಗೆ ಶರೀರವನ್ನು ತೆಗೆದುಕೊಂಡು ಪಾತ್ರವನ್ನು ಅಭಿನಯಿಸುತ್ತದೆ. ಈಗ ನಿಮಗೆ ಬೇಹದ್ದಿನ ಪಾತ್ರದ ಬಗ್ಗೆ ತಿಳಿದಿದೆ. ಈ ಜ್ಞಾನವು ಮತ್ತ್ಯಾರಿಗೂ ಇಲ್ಲ, ನೀವೂ ಸಹ ದೇಹಾಭಿಮಾನಿಗಳಾಗಿದ್ದಿರಿ, ಈಗ ಎಷ್ಟೊಂದು ಪರಿವರ್ತನೆಯಾಗಿದ್ದೀರಿ, ಅದೂ ಸಹ ಪ್ರತಿಯೊಬ್ಬರ ಅದೃಷ್ಟದ ಮೇಲಿದೆ. ಕಲ್ಪದ ಹಿಂದಿನ ಅದೃಷ್ಟದ ಸಾಕ್ಷಾತ್ಕಾರವು ಈಗ ಆಗುತ್ತಿದೆ. ಪ್ರಪಂಚದಲ್ಲಿ ಎಷ್ಟೊಂದು ಮಂದಿ ಮನುಷ್ಯರಿದ್ದಾರೆ. ಪ್ರತಿಯೊಬ್ಬರದೂ ತನ್ನದೇ ಆದ ಅದೃಷ್ಟವಿದೆ. ಯಾರು ಎಂತೆಂತಹ ಕರ್ಮ ಮಾಡಿದ್ದಾರೆಯೋ ಅದರನುಸಾರ ದುಃಖಿ-ಸುಖಿ, ಬಡವ-ಸಾಹುಕಾರರಾಗುತ್ತಾರೆ. ಆತ್ಮವೇ ಆಗುತ್ತದೆ. ಆತ್ಮವು ಹೇಗೆ ಸುಖದಲ್ಲಿ ಬರುತ್ತದೆ ನಂತರ ದುಃಖದಲ್ಲಿ ಬರುತ್ತದೆ ಎಂಬುದನ್ನು ತಂದೆಯು ತಿಳಿಸುತ್ತಾರೆ. ತಮೋಪ್ರಧಾನರಿಂದ ಸತೊಪ್ರಧಾನರಾಗುವ ಬುದ್ಧಿವಂತಿಕೆಯನ್ನು ಕಲ್ಪದ ಹಿಂದಿನ ತರಹ ತಂದೆಯೇ ಕಲಿಸುತ್ತಾರೆ. ಯಾರೆಷ್ಟು ಬುದ್ಧಿವಂತಿಕೆಯನ್ನು ಹೊಂದಿದ್ದಾರೆಯೋ ಅಷ್ಟೇ ಈಗ ಪಡೆದುಕೊಳ್ಳುತ್ತಿದ್ದಾರೆ. ಅಂತಿಮದಲ್ಲಿ ಪ್ರತಿಯೊಬ್ಬರ ಅದೃಷ್ಟವು ತಿಳಿದುಬರುತ್ತದೆ ನಂತರ ಕಲ್ಪ-ಕಲ್ಪವೂ ಇದೇ ರೀತಿ ಪ್ರತಿಯೊಬ್ಬರ ಅದೃಷ್ಟವಿರುವುದು ಎಂದು ಹೇಳುತ್ತಾರೆ. ಯಾರು ಒಳ್ಳೆಯ ಯೋಗಯುಕ್ತ, ಜ್ಞಾನಯುಕ್ತವಾಗಿರುವರೋ ಅವರು ಸರ್ವೀಸನ್ನೂ ಮಾಡುತ್ತಾ ಇರುವರು. ವಿದ್ಯೆಯಲ್ಲಿ ಸದಾ ಉನ್ನತಿಯಾಗುತ್ತಾ ಇರುತ್ತದೆ. ಕೆಲವು ಮಕ್ಕಳು ಬಹುಬೇಗನೆ ಉನ್ನತಿಯನ್ನು ಪಡೆದುಕೊಳ್ಳುತ್ತಾರೆ, ಇನ್ನೂ ಕೆಲವರು ಬಹಳ ತಲೆಕೆಡಿಸಿಕೊಳ್ಳುತ್ತಾರೆ. ಇಲ್ಲಿಯೂ ಹಾಗೆಯೇ. ಕಲ್ವದ ಹಿಂದಿನ ತರಹ ಯಾರುಯಾರು ಉನ್ನತಿ ಮಾಡಿಕೊಳ್ಳುವರೋ ಅವರು ಮುಚ್ಚಿಡಲ್ಪಡಲು ಸಾಧ್ಯವಿಲ್ಲ. ತಂದೆಗಂತೂ ಗೊತ್ತಿದೆಯಲ್ಲವೆ – ಎಲ್ಲರ ಸಂಬಂಧವು ಶಿವತಂದೆಯೊಂದಿಗೆ ಇದೆ. ಇವರೂ ಸಹ ಮಕ್ಕಳ ಚಲನೆಯನ್ನು ನೋಡುತ್ತಾ ತಿಳಿದುಕೊಳ್ಳುತ್ತಾರೆ, ಮತ್ತು ಶಿವತಂದೆಯೂ ಸಹ ನೋಡುತ್ತಾರೆ. ಭಲೆ ಇವರಿಂದ (ಬ್ರಹ್ಮಾ) ಯಾರಾದರೂ ಮುಚ್ಚಿಡಬಹುದು ಆದರೆ ಶಿವತಂದೆಯಿಂದ ಮುಚ್ಚಿಡಲು ಸಾಧ್ಯವಿಲ್ಲ. ಭಕ್ತಿಮಾರ್ಗದಲ್ಲೇ ಪರಮಾತ್ಮನಿಂದ ಮುಚ್ಚಿಡಲಾಗುವುದಿಲ್ಲ ಅಂದಮೇಲೆ ಜ್ಞಾನಮಾರ್ಗದಲ್ಲಿ ಇದು ಹೇಗೆ ಸಾಧ್ಯ! ತಂದೆಯು ತಿಳಿಸುತ್ತಾ ಇರುತ್ತಾರೆ, ವಿದ್ಯೆಯು ಬಹಳ ಸಹಜವಾಗಿದೆ. ಕರ್ಮವನ್ನೂ ಮಾಡಬೇಕಾಗಿದೆ, ಮಿತ್ರ-ಸಂಬಂಧಿಗಳ ಬಳಿ ಹಳೆಯ ಪ್ರಪಂಚದಲ್ಲಿಯೇ ಇರಬೇಕಾಗಿದೆ. ಅಲ್ಲಿದ್ದು ಪರಿಶ್ರಮ ಪಡಬೇಕಾಗಿದೆ. ಇಲ್ಲಿ ಇದ್ದುಕೊಂಡು ಪುರುಷಾರ್ಥ ಮಾಡುವವರಿಗಿಂತಲೂ ಮನೆಯಲ್ಲಿದ್ದು ಪುರುಷಾರ್ಥ ಮಾಡುವವರೇ ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ ಅಂತಹ ಲಗನ್ ಇದ್ದಾಗ ಮಾತ್ರ. ಶಾಸ್ತ್ರಗಳಲ್ಲಿ ಅರ್ಜುನ ಮತ್ತು ಏಕಲವ್ಯ ದೃಷ್ಟಾಂತವಿದೆಯಲ್ಲವೆ. ಭಲೆ ಏಕಲವ್ಯನು ಹೊರಗಡೆ ಇರುವವನಾಗಿದ್ದನು ಆದರೆ ಅಭ್ಯಾಸದಿಂದ ಅವನು ಅರ್ಜುನನಿಗಿಂತಲೂ ಬಾಣ ಹೊಡೆಯುವುದರಲ್ಲಿ ಬುದ್ದಿವಂತನಾಗಿಬಿಟ್ಟನು. ಹಾಗೆ ಗೃಹಸ್ಥ ವ್ಯವಹಾರದಲ್ಲಿದ್ದು ಕಮಲಪುಷ ಸಮಾನ ಇರಬೇಕಾಗಿದೆ. ಇದನ್ನೂ ಸಹ ನೀವು ದೃಷ್ಟಾಂತವನ್ನು ನೋಡುತ್ತೀರಿ. ಗೃಹಸ್ಥ ವ್ಯವಹಾರದಲ್ಲಿದ್ದು ಬಹಳ ಒಳ್ಳೆಯ ಸೇವೆ ಮಾಡುತ್ತಾರೆ, ಅವರು ಹೆಚ್ಚು ವೃದ್ಧಿಯನ್ನು ಹೊಂದುತ್ತಾ ಇರುತ್ತಾರೆ. ಇಲ್ಲಿರುವವರನ್ನೂ ಸಹ ಮಾಯೆಯ ಬಿಡುವುದಿಲ್ಲ. ತಂದೆಯ ಬಳಿ ಬಂದುಬಿಟ್ಟರೆ ಎಲ್ಲದರಿಂದ ಮುಕ್ತರಾಗಿ ಬಿಡುತ್ತಾರೆ ಎಂದು ಪ್ರತಿಯೊಬ್ಬರದೂ ತಮ್ಮತಮ್ಮದೇ ಆದ ಪುರುಷಾರ್ಥವಾಗಿದೆ. ಇಲ್ಲಿರುವವರಿಗಿಂತಲೂ ಗೃಹಸ್ಥ ವ್ಯವಹಾರದಲ್ಲಿರುವವರು ಚೆನ್ನಾಗಿ ಪುರುಷಾರ್ಥ ಮಾಡುವರು. ಬಹಳ ಒಳ್ಳೆಯ ಸಾಹಸವನ್ನು ತೋರಿಸಬಹುದು. ಅಂತಹವರಿಗೇ ಮಹಾವೀರರೆಂದು ಹೇಳಲಾಗುತ್ತದೆ. ಯಾರು ಬೇಕಾದರೂ ಗೃಹಸ್ಥ ವ್ಯವಹಾರದಲ್ಲಿದ್ದು ಕಮಲಪುಷ ಸಮಾನ ಇದ್ದು ತೋರಿಸಿ. ಬಾಬಾ ತಾವಂತು ಬಿಟ್ಟಿದ್ದೀರಿ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ನಾನೆಲ್ಲಿ ಬಿಟ್ಟಿದ್ದೇನೆ, ನನ್ನನ್ನೇ ಬಿಟ್ಟು ಹೋಗಿದ್ದಾರೆ. ತಂದೆಯಂತೂ ಯಾರನ್ನೂ ಬಿಟ್ಟುಬರಲಿಲ್ಲ. ಮನೆಗೆ ಇನ್ನೂ ಹೆಚ್ಚು ಮಕ್ಕಳು ಬಂದುಬಿಟ್ಟರು ಬಾಕಿ ಕನ್ಯೆಯರಿಗಾಗಿ ತಂದೆಯು ತಿಳಿಸುತ್ತಾರೆ- ನೀವು ಈ ಈಶ್ವರೀಯ ಸೇವೆ ಮಾಡಿ. ಇವರ ತಂದೆ, ಅವರೂ ತಂದೆಯಾಗಿದ್ದಾರೆ. ಕುಮಾರರೂ ಸಹ ಆದಿಯಲ್ಲಿ ಅನೇಕರು ಬಂದರು ಆದರೆ ನಡೆಯಲಾಗಲಿಲ್ಲ. ಕನ್ಯೆಯರು ಬಹಳ ಚೆನ್ನಾಗಿ ನಿಲ್ಲುತ್ತಾರೆ. ಕನ್ಯೆ 100ಮಂದಿ ಬ್ರಾಹ್ಮಣರಿಗಿಂತಲೂ ಉತ್ತಮಳೆಂದು ಹೇಳಲಾಗುತ್ತದೆ ಅಂದಾಗ ಯಾರು 21 ಕುಲದ ಉದ್ಧಾರ ಮಾಡುವರೋ, ಜ್ಞಾನದ ಬಾಣ ಹೊಡೆಯುವರೋ ಅವರೇ ಕನ್ಯೆಯರು. ಬಾಕಿ ಯಾರು ಗೃಹಸ್ಯದಲ್ಲಿರುವರೋ ಅವರೂ ಸಹ ಚಿ.ಕೆ. ಆದರು. ಮುಂದೆ ಹೋದಂತೆ ಅವರ ಬಂಧನವೂ ಸಮಾಪ್ತಿಯಾಗುವುದು. ಸೇವೆಯಂತೂ ಮಾಡಬೇಕಲ್ಲವೆ. ಕೆಲವರು ಸರ್ವಿಸ್ ಮಾಡುವ ಮಕ್ಕಳು ಬಾಪ್‌ದಾದಾರವರ ಹೃದಯವನ್ನೇರಿದ್ದಾರೆ. ಅವರು ಸಾವಿರಾರು ಮಂದಿಯ ಕಲ್ಯಾಣ ಮಾಡುತ್ತಿದ್ದಾರೆ. ಅಂದಾಗ ಇಂತಹ ಸೇವಾಧಾರಿ ಮಕ್ಕಳ ಆಶೀರ್ವಾದವೂ ಸಿಗುತ್ತಿರುವುದು. ಅವರು ತಂದೆಯ ಹೃದಯದಲ್ಲಿರುತ್ತಾರೆ. ಯಾರು ಹೃದಯದಲ್ಲಿರುವರೋ ಅವರೇ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು. ತಂದೆಯು ತಿಳಿಸುತ್ತಾರೆ- ಪರಸ್ಪರ ಸೇರಿ ಎಲ್ಲರಿಗೆ ಮಾರ್ಗವನ್ನು ತೋರಿಸುವ ಯುಕ್ತಿಯನ್ನು ರಚಿಸುತ್ತಾ ಇರಿ. ಚಿತ್ರಗಳೂ ಸಹ ತಯಾರಾಗುತ್ತಾ ಇರುತ್ತವೆ. ಇವೆಲ್ಲವೂ ಪ್ರಾಕ್ಟಿಕಲ್ ಮಾತುಗಳಾಗಿವೆ.

ಈಗ ನೀವು ತಿಳಿಸುತ್ತೀರಿ - ಪರಮಪಿತ ಪರಮಾತ್ಮನು ನಿರಾಕಾರನಾಗಿದ್ದಾರೆ, ಅವರೂ ಸಹ ಬಿಂದುವಾಗಿದ್ದಾರೆ ಆದರೆ ಅವರು ಜ್ಞಾನಪೂರ್ಣ, ಪತಿತ - ಪಾವನನಾಗಿದ್ದಾರೆ. ಆತ್ಮವೂ ಸಹ ಬಿಂದುವಾಗಿದೆ. ಮಕ್ಕಳಾದರೂ ಚಿಕ್ಕವರಿರುತ್ತಾರೆ, ತಂದೆ ಮತ್ತು ಮಕ್ಕಳಲ್ಲಿ ಅಂತರವಂತೂ ಇರುತ್ತದೆ ಅಲ್ಲವೆ. ಇತ್ತೀಚೆಗೆ 15-16 ವರ್ಷದವರೂ ಸಹ ತಂದೆಯಾಗಿಬಿಡುತ್ತಾರೆ ಅಂದಾಗ ಅವರ ಮಕ್ಕಳು ಅವರಿಗಿಂತಲೂ ಚಿಕ್ಕವರೇ ಅದರಲ್ಲವೆ. ಆದರೆ ಇಲ್ಲಿ ಆಶ್ಚರ್ಯವನ್ನು ನೋಡಿ - ತಂದೆಯೂ ಆತ್ಮ, ಮಕ್ಕಳೂ ಆತ್ಮ, ತಂದೆಯು ಪರಮ ಆತ್ಮ, ಜ್ಞಾನಪೂರ್ಣನಾಗಿದ್ದಾರೆ. ಉಳಿದೆಲ್ಲರೂ ವಿದ್ಯೆಯನುಸಾರ ಕನಿಷ್ಠ ಮತ್ತು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ. ಒಳ್ಳೆಯ ಕರ್ಮ ಮಾಡುವುದರಿಂದ ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ಈಗ ನೀವು ಮಕ್ಕಳಿಗೆ ಸೃಷ್ಟಿಯ ಆದಿ- ಮಧ್ಯ- ಅಂತ್ಯದ ಜ್ಞಾನವಿದೆ. ಸ್ವರ್ಗದಲ್ಲಿ ಕೇವಲ ಭಾರತವೇ ಇತ್ತು ಮತ್ತ್ಯಾವುದೇ ಖಂಡವಿರಲಿಲ್ಲ ಆದ್ದರಿಂದ ಚಿಕ್ಕದಾದ ನವಭಾರತದಲ್ಲಿ ತಮ್ಮ ಸ್ವರ್ಗವನ್ನು ತೋರಿಸಿ, ಹೇಗೆ ದ್ವಾರಿಕಾ ಹೆಸರಲ್ಲ, ಲಕ್ಷ್ಮೀ-ನಾರಾಯಣರ ವಂಶಾವಳಿಯ ರಾಜ್ಯವೆಂದು ಬರೆಯ ಬೇಕು. ಬುದ್ದಿಯೂ ಹೇಳುತ್ತದೆ - ಸತ್ಯಯುಗದಲ್ಲಿ ಮೊದಲು ದೈವೀಪರಿವಾರದ ರಾಜ್ಯವಿರುವುದು
ಅವರ ಗ್ರಾಮಗಳಿರುತ್ತವೆ ಚಿಕ್ಕ-ಚಿಕ್ಕ ಶಾಖೆಗಳೂ ಇರುತ್ತವೆ. ಇದನ್ನು ವಿಚಾರಸಾಗರ ಮಂಥನ ಮಾಡಬೇಕು. ಜೊತೆಜೊತೆಗೆ ಶಿವತಂದೆಯೊಂದಿಗೆ ಬುದ್ದಿಯೋಗವನ್ನಿಡಬೇಕಾಗಿದೆ. ನಾವು ನೆನಪಿನಿಂದಲೇ ರಾಜ್ಯ ಭಾಗ್ಯವನ್ನು ತೆಗೆದುಕೊಳ್ಳುತ್ತೇವೆ. ನೆನಪಿನಿಂದಲೇ ತುಕ್ಕು ಕಳೆಯುವುದು. ಇದರಲ್ಲಿಯೇ ಎಲ್ಲಾ ಪರಿಶ್ರಮವಿದೆ. ಕೆಲವರ ಬುದ್ಧಿಯು ಹೊರಗೆ ಅಲೆದಾಡುತ್ತಿರುತ್ತದೆ. ಇಲ್ಲಿ ಕುಳಿತಿದ್ದರೂ ಸಹ ಇಡೀ ಸಮಯ ನೆನಪಿನಲ್ಲಿರುವುದಿಲ್ಲ, ಬುದ್ಧಿಯು ಬೇರೆಕಡೆ ಹೋಗುತ್ತಿರುವುದು. ಭಕ್ತಿಮಾರ್ಗದಲ್ಲಿಯೂ ಇದೇ ರೀತಿಯಾಗುತ್ತದೆ. ಶ್ರೀಕೃಷ್ಣನ ಭಕ್ತಿ ಮಾಡುತ್ತಾ - ಮಾಡುತ್ತಾ ಬುದ್ಧಿಯು ಇನ್ನೊಂದು ಕಡೆ ಹೊರಟುಹೋಗುತ್ತದೆ. ನೌಧಾಭಕ್ತಿ ಮಾಡುವವರು ಸಾಕ್ಷಾತ್ಕಾರಕ್ಕಾಗಿ ಬಹಳ ಪರಿಶ್ರಮಪಡುತ್ತಾರೆ. ಕೃಷ್ಣನ ವಿನಃ ಮತ್ತ್ಯಾರೂ ನೆನಪಿಗೆ ಬರಬಾರದೆಂದು ಎಷ್ಟು ಗಂಟೆಗಳವರೆಗೆ ಕುಳಿತುಕೊಳ್ಳುತ್ತಾರೆ, ಬಹಳ ಪರಿಶ್ರಮವಿದೆ. ಇದರಲ್ಲ 8ರ ಮಾಲೆ ಮತ್ತು 16,108ರ ಮಾಲೆಯಾಗುತ್ತದೆ. ಅವರಂತೂ ಲಕ್ಷಾಂತರ ಮಣಿಗಳ ಮಾಲೆಯನ್ನು ತೋರಿಸುತ್ತಾರೆ ಆದರೆ ಜ್ಞಾನಮಾರ್ಗದ ಮಾಲೆಯು ಬಹಳ ಅಮೂಲ್ಯವಾಗಿದೆ. ಭಕ್ತಿಮಾರ್ಗದ್ದು ಸಸ್ತಾ ಆಗಿದೆ ಏಕೆಂದರೆ ಇಲ್ಲಿ ಆತ್ಮಿಕ ಪರಿಶ್ರಮವಿದೆ. ಅವರಂತೂ ಕೃಷ್ಣನನ್ನು ನೋಡಿ ಖುಷಿಯಾಗಿ ನರ್ತನ ಮಾಡುತ್ತಾರೆ. ಭಕ್ತಿ ಮತ್ತು ಜ್ಞಾನದಲ್ಲಿ ರಾತ್ರಿ-ಹಗಲಿನ ಅಂತರವಿದೆ, ಅದರಲ್ಲಿ ಕೃಷ್ಣನನ್ನು ನೆನಪು ಮಾಡಿದರೆ ತುಕ್ಕು ಕಳೆಯುವುದು ಎಂದು ಹೇಳುವುದಿಲ್ಲ. ಇಲ್ಲಂತೂ ತಿಳಸಲಾಗುತ್ತದೆ - ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪಾಪ ನಾಶವಾಗುತ್ತದೆ.

ನೀವು ಮಕ್ಕಳು ಈಗ ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೀರಿ. ಇದು ಯಾರಿಗೂ ಸ್ವಪ್ನದಲ್ಲಿಯೂ ವಿಚಾರವಿರುವುದಿಲ್ಲ. ಲಕ್ಷ್ಮಿ - ನಾರಾಯಣರು ಯುದ್ಧ ಇತ್ಯಾದಿಗಳನ್ನು ಮಾಡಲಿಲ್ಲ ಅಂದಮೇಲೆ ವಿಶ್ವದ ಮಾಲೀಕರು ಹೇಗಾದರು? ಇದನ್ನು ನೀವು ಮಕ್ಕಳೆ ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ - ಯೋಗಬಲದಿಂದ ನಿಮಗೆ ರಾಜ್ಯಭಾಗ್ಯ ಸಿಗುವುದು ಆದರೆ ಅದೃಷ್ಟದಲ್ಲಿಲ್ಲದಿದ್ದರೆ ಪುರುಷಾರ್ಥವನ್ನೇ ಮಾಡುವುದಿಲ್ಲ, ಸೇವಾಧಾರಿಗಳಾಗುವುದಿಲ್ಲ. ಹೀಗೀಗೆ ಪ್ರದರ್ಶನಿ ಮಾಡಿ ಎಂದು ತಂದೆಯು ಸಲಹೆಯನ್ನು ನೀಡುತ್ತಿರುತ್ತಾರೆ. ಕೊನೆಪಕ್ಷ 150-200 ಪ್ರದರ್ಶನಿಗಳನ್ನು ಒಂದೇ ದಿನದಲ್ಲಿ ಇಡಬೇಕು. ಹಳ್ಳಿ-ಹಳ್ಳಿಗಳಲ್ಲಿ ಸುತ್ತಾಡಿದಿರಿ. ಎಷ್ಟು ಸೇವಾಕೇಂದ್ರಗಳೋ ಅಷ್ಟು ಪ್ರದರ್ಶನಿಗಳು. ಒಂದೊಂದು ಸೇವಾ ಕೇಂದ್ರದಲ್ಲಿಯೂ ಪ್ರದರ್ಶನಿಯನ್ನಿಟ್ಟಾಗ ತಿಳಿಸಲು ಸಹಜವಾಗುವುದು. ದಿನ-ಪ್ರತಿದಿನ ಸೇವಾಕೇಂದ್ರಗಳು ದೊಡ್ಡದಾಗುತ್ತಾ ಹೋಗುತ್ತವೆ. ಅದರಲ್ಲಿ ಚಿತ್ರ ಇತ್ಯಾದಿಗಳನ್ನು ಹಾಕಬಹುದು. ಚಿತ್ರಗಳ ಅನ್ವೇಷಣೆಯೂ ನಡೆಯುತ್ತಿರುತ್ತದೆ. ವೈಕುಂಠದ ಚಿತ್ರವನ್ನು ಬಹಳ ಸುಂದರ ಮಹಲುಗಳಿಂದ ಕೂಡಿರುವ ಭಾರತದ ದೃಶ್ಯವನ್ನು ಮಾಡಿಸಬೇಕು. ಮುಂದೆಹೋದಂತೆ ತಿಳಿಸುವುದಕ್ಕಾಗಿ ಬಹಳ ಒಳ್ಳೊಳೆಯ ಚಿತ್ರಗಳು ತಯಾರಾಗುತ್ತಾ ಹೋಗುತ್ತವೆ. ವಾನಪ್ರಸ್ಥ ಸ್ಥಿತಿಯವರು ನಡೆದಾಡುತ್ತಾ, ತಿರುಗಾಡುತ್ತಲೂ ಸೇವೆ ಮಾಡುತ್ತಿರಿ. ಯಾರ ಭಾಗ್ಯವು ಉದಯವಾಗುವುದೋ ಅವರು ಬಂದೇ ಬರುತ್ತಾರೆ. ಕೆಲವು ಮಕ್ಕಳು ಕುಕರ್ಮ ಮಾಡಿ ತಮ್ಮ ಮರ್ಯಾದೆಯನ್ನು ಕಳೆದುಕೊಳ್ಳುತ್ತಾರೆ ಅಂದಾಗ ಅವರು ಯಜ್ಞದ ಮರ್ಯಾದೆಯನ್ನು ಕಳೆಯುತ್ತಾರೆಂದರ್ಥ. ಎಂತಹ ಚಲನೆಯೋ ಅಂತಹ ಪದವಿ. ಯಾರು ಅನೇಕರಿಗೆ ಸುಖ ಕೊಡುವರೋ ಅವರ ಹೆಸರನ್ನು ಗಾಯನ ಮಾಡಲಾಗುತ್ತದೆಯಲ್ಲವೆ. ಈಗ ಸರ್ವಗುಣಗಳಲ್ಲಿ ಸಂಪನ್ನರಂತೂ ಆಗಿಲ್ಲ ಅಲ್ಲವೆ. ಕೆಲಕೆಲವರು ಬಹಳ ಚೆನ್ನಾಗಿ ಸರ್ವಿಸ್ ಮಾಡುತ್ತಿದ್ದಾರೆ, ಅಂತಹವರ ಹೆಸರನ್ನು ಕೇಳಿ ತಂದೆಯು ಬಹಳ ಖುಷಿಪಡುತ್ತಾರೆ. ಸೇವಾಧಾರಿ ಮಕ್ಕಳನ್ನು ನೋಡಿ ತಂದೆಯು ಖುಷಿಪಡುವರಲ್ಲವೆ. ಸರ್ವಿಸಿನಲ್ಲಿ ಒಳ್ಳೆಯ ಪರಿಶ್ರಮಪಡುತ್ತಿರುತ್ತಾರೆ. ಸೇವಾಕೇಂದ್ರಗಳನ್ನೂ ತೆರೆಯುತ್ತಿರುತ್ತಾರೆ, ಇದರಿಂದ ಸಾವಿರಾರು ಮಂದಿಯ ಕಲ್ಯಾಣವಾಗುವುದು. ಅವರ ಮೂಲಕ ಮತ್ತೆ ಅನೇಕರು ವೃದ್ಧಿಯಾಗುತ್ತಾ ಹೋಗುವರು.
ಸಂಪೂರ್ಣರಂತೂ ಯಾರೂ ಆಗಿಲ್ಲ, ಒಂದಲ್ಲ ಒಂದು ತಪ್ಪುಗಳು ಆಗುತ್ತಿರುತ್ತವೆ. ಮಾಯೆಯು ಬಿಡುವುದಿಲ್ಲ. ಎಷ್ಟು ಸರ್ವಿಸ್ ಮಾಡಿ ತಮ್ಮ ಉನ್ನತಿ ಮಾಡಿಕೊಳ್ಳುವಿರೋ ಅಷ್ಟೇ ಹೃದಯವನ್ನೇರುತ್ತೀರಿ, ಅಷ್ಟೇ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಮತ್ತೆ ಕಲ್ಪ-ಕಲ್ಪವೂ ಇಂತಹ ಪದವಿಯೇ ಆಗುವುದು. ಶಿವತಂದೆಯಿಂದ ಯಾರೂ ಮುಚ್ಚಿಡಲು ಸಾಧ್ಯವಿಲ್ಲ. ಅಂತಿಮದಲ್ಲಿ ಪ್ರತಿಯೊಬ್ಬರಿಗೆ ತಮ್ಮ ಕರ್ಮಗಳ ಸಾಕ್ಷಾತ್ಕಾರವಾಗುತ್ತದೆ ಆದರೆ ಏನು ಮಾಡಲು ಸಾಧ್ಯ? ಬಿಕ್ಕಿ ಬಿಕ್ಕಿ ಅಳಬೇಕಾಗುವುದು ಆದ್ದರಿಂದ ತಂದೆಯು ತಿಳಿಸುತ್ತಿರುತ್ತಾರೆ - ಮಕ್ಕಳೇ, ಅಂತ್ಯದಲ್ಲಿ ಶಿಕ್ಷೆಗೆ ಭಾಗಿಯಾಗುವ, ಪಶ್ಚಾತ್ತಾಪ ಪಡುವಂತಹ ಯಾವುದೇ ಕರ್ಮವನ್ನು ಈಗ ಮಾಡಬೇಡಿ ಆದರೆ ಎಷ್ಟಾದರೂ ತಿಳಿಸಿ, ಅದೃಷ್ಟದಲ್ಲಿ ಇಲ್ಲದಿದ್ದರೆ ಅಂತಹವರು ಪುರುಷಾರ್ಥ ಮಾಡುವುದೇ ಇಲ್ಲ. ಈಗಿನ ಮನುಷ್ಯರಂತೂ ತಂದೆಯನ್ನು ಅರಿತುಕೊಂಡಿಲ್ಲ. ಭಗವಂತನನ್ನು ನೆನಪು ಮಾಡುತ್ತಾರೆ ಆದರೆ ತಿಳಿದುಕೊಂಡಿಲ್ಲ. ಅವರ ಮಾತನ್ನು ಪಾಲಿಸುವುದಿಲ್ಲ. ಈಗ ಆ ಬೇಹದ್ದಿನ ತಂದೆಯಿಂದ ನಿಮಗೆ ಸೆಕೆಂಡಿನಲ್ಲಿ ಸತ್ಯಯುಗೀ ಸ್ವರಾಜ್ಯದ ಆಸ್ತಿಯು ಸಿಗುತ್ತದೆ. ಶಿವತಂದೆಯ ಹೆಸರನ್ನು ಎಲ್ಲರೂ ಇಷ್ಟಪಡುತ್ತಾರಲ್ಲವೆ. ಮಕ್ಕಳಿಗೆ ತಿಳಿದಿದೆ - ಆ ಬೇಹದ್ದಿನ ತಂದೆಯಿಂದ ಸ್ವರ್ಗದ ಆಸ್ತಿಯು ಸಿಗುತ್ತಿದೆ. ಒಳ್ಳೆಯದು-

ಮಧುರಾತಿ ಮಧುರ ಅಗಲಿಹೋಗಿ ಮರಳಿಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ :

1. ತನ್ನ ಚಲನೆಯಿಂದ ತಂದೆ ಹಾಗೂ ಯಜ್ಞದ ಹೆಸರನ್ನು ಪ್ರಖ್ಯಾತಗೊಳಿಸಬೇಕಾಗಿದೆ. ತಂದೆಯ ಗೌರವ ಕಳೆಯುವಂತಹ ಯಾವುದೇ ಕರ್ಮ ಮಾಡಬಾರದು. ಸರ್ವಿಸಿನಿಂದ ತಮ್ಮ ಭಾಗ್ಯವನ್ನು ತಾವೇ ರೂಪಿಸಿಕೊಳ್ಳಬೇಕಾಗಿದೆ.

2. ತಂದೆಯ ಸಮಾನ ಕಲ್ಯಾಣಕಾರಿಗಳಾಗಿ ಸರ್ವರ ಆಶೀರ್ವಾದಗಳನ್ನು ಪಡೆದುಕೊಂಡು ಮುಂದೆಹೋಗಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿದ್ದು ಕಮಲಪುಷ್ಪ ಸಮಾನರಾಗಿರುವ ಒಳ್ಳೆಯ ಸಾಹಸ (ಶೌರ್ಯ) ವನ್ನು ತೋರಿಸಬೇಕಾಗಿದೆ.

ವರದಾನ :

ಸಹಯೋಗದ ಮೂಲಕ ಸ್ವಯಂನ್ನು ಸಹಜಯೋಗಿಯನ್ನಾಗಿ ಮಾಡಿಕೊಳ್ಳುವಂತಹ ನಿರಂತರ ಯೋಗಿ ಭವ

ಸಂಗಮಯುಗದಲ್ಲಿ ತಂದೆಯವರ ಸಹಯೋಗಿ ಆಗುವುದೇ ಸಹಜಯೋಗಿ ಆಗುವ ವಿಧಿಯಾಗಿದೆ. ಯಾರ ಪ್ರತೀ ಸಂಕಲ್ಪ, ಶಬ್ಧ ಹಾಗೂ ಕರ್ಮವು ತಂದೆಯ ಅಥವ ತಮ್ಮ ರಾಜ್ಯದ ಸ್ಥಾಪನೆಯ ಕರ್ತವ್ಯದಲ್ಲಿ ಸಹಯೋಗಿ ಆಗಿರುವುದು, ಅವರಿಗೆ ಜ್ಞಾನಿ, ಯೋಗಿ ಆತ್ಮರು ಹಾಗೂ ಸತ್ಯ ಸೇವಾಧಾರಿ ಎಂದು ಹೇಳಲಾಗುತ್ತದೆ. ಮನಸ್ಸಿನಿಂದ ಆಗದಿದ್ದರೆ ತನುವಿನಿಂದ, ತನುವಿನಿಂದ ಆಗದಿದ್ದರೆ ಧನದಿಂದ, ಧನದಿಂದಲೂ ಆಗದಿದ್ದರೆ ಯಾವುದರಲ್ಲಿ ಸಹಯೋಗಿ ಆಗಬಹುದೋ. ಅದರಲ್ಲಿಯೇ ಸಹಯೋಗಿ ಆಗಿರಿ - ಇದೂ ಸಹ ಯೋಗ ಆಗಿದೆ. ಯಾವಾಗ ತಾವು ತಂದೆಯ ಮಕ್ಕಳೇ ಆಗಿದ್ದೀರಿ ಅಂದಮೇಲೆ ತಂದೆ ಹಾಗೂ ತಾವು, ಮೂರನೆಯವರೇ ಇಲ್ಲ. ಇದರಿಂದ ನಿರಂತರ ಯೋಗಿ ಆಗಿಬಿಡುವಿರಿ.

ಸ್ಲೋಗನ್:

ಸಂಗಮದಲ್ಲಿ ಸಹನೆ ಮಾಡುವುದು ಅರ್ಥಾತ್ ಸಾಯುವುದೇ ಸ್ವರ್ಗದ ರಾಜ್ಯವನ್ನು ತೆಗೆದುಕೊಳ್ಳುವುದು.