06.05.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ಬ್ರಾಹ್ಮಣರಿಗೆ ಈಶ್ವರನ ಮಡಿಲು ಸಿಕ್ಕಿದೆ, ಈಗ ನಿಮಗೆ ಈ ನಶೆ ಇರಬೇಕು - ತಂದೆಯು ಈ ಶರೀರದ ಮುಖಾಂತರ ನಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿದ್ದಾರೆ

ಪ್ರಶ್ನೆ:
ತಂದೆಯು ಯಾವ ದಿವ್ಯ ಕರ್ತವ್ಯವನ್ನು ಮಾಡಿದ್ದಾರೆ? ಯಾವ ಕಾರಣ ಅವರಿಗೆ ಇಷ್ಟೊಂದು ಮಹಿಮೆಯನ್ನು ಗಾಯನ ಮಾಡಲಾಗಿದೆ?

ಉತ್ತರ:
ಪತಿತರನ್ನು ಪಾವನ ಮಾಡುವುದು ಹಾಗೂ ಎಲ್ಲಾ ಮನುಷ್ಯರನ್ನು ಮಾಯಾ ರಾವಣನ ಬಂಧನದಿಂದ ಬಿಡಿಸುವುದು - ಈ ದಿವ್ಯ ಕರ್ತವ್ಯವನ್ನು ಒಬ್ಬ ತಂದೆಯೇ ಮಾಡುತ್ತಾರೆ. ಬೇಹದ್ದಿನ ತಂದೆಯಿಂದಲೇ ಬೇಹದ್ದಿನ ಸುಖದ ಆಸ್ತಿ ಸಿಗುತ್ತದೆ. ಅದು ಮತ್ತೆ ಅರ್ಧ ಕಲ್ಪದ ತನಕ ನಡೆಯುತ್ತದೆ. ಸತ್ಯಯುಗದಲ್ಲಿ ಗೋಲ್ಡೆನ್ ಜೂಬಿಲಿ, ತ್ರೇತಾದಲ್ಲಿ ಸಿಲ್ವರ್ ಜೂಬಿಲಿ ಇರುತ್ತದೆ. ಸತ್ಯಯುಗವು ಸತೋಪ್ರಧಾನ, ತ್ರೇತಾಯುಗವು ಸತೋ, ಎರಡನ್ನೂ ಸುಖಧಾಮ ಎಂದು ಹೇಳಲಾಗುತ್ತದೆ. ಇಂತಹ ಸುಖಧಾಮದ ಸ್ಥಾಪನೆಯನ್ನು ತಂದೆಯೇ ಮಾಡಿರುವ ಕಾರಣ ಅವರಿಗೆ ಇಷ್ಟೊಂದು ಮಹಿಮೆಯನ್ನು ಗಾಯನ ಮಾಡಲಾಗಿದೆ.

ಗೀತೆ:
ನ್ಯಾಯದ ಮಂದಿರವಿದು.....

ಓಂ ಶಾಂತಿ.
ತಂದೆ ಮತ್ತು ದಾದಾ ಇಬ್ಬರೂ ಸೇರಿ ಮಕ್ಕಳಿಗೆ ತಿಳಿಸಿ ಕೊಡುತ್ತಾರೆ. ಕೆಲವೊಮ್ಮೆ ತಂದೆಯೇ ತಿಳಿಸುತ್ತಾರೆ, ಕೆಲವೊಮ್ಮೆ ದಾದಾ ತಿಳಿಸುತ್ತಾರೆ ಏಕೆಂದರೆ ಈ ಶರೀರವು ದಾದಾರವರಿಗೂ ಮನೆಯಾಗಿದೆ. ಪರಮಪಿತ ಪರಮಾತ್ಮನಂತೂ ಪರಮಧಾಮದಲ್ಲಿ ಇರುತ್ತಾರೆ. ಸ್ವಲ್ಪ ಸಮಯದಲ್ಲಿ ಅವರಿಗೆ ಈ ಭಾರತವೇ ಮನೆಯಾಗುತ್ತದೆ, ಆ ಕಾರಣವೇ ಶಿವರಾತ್ರಿಯನ್ನು ಆಚರಣೆ ಮಾಡಲಾಗುತ್ತದೆ. ಶಿವನ ಮಂದಿರಗಳು ಬಹಳವಿದೆ. ಅವರು ಭಾರತ ಖಂಡದಲ್ಲಿಯೇ ಬರಬೇಕಾಗುತ್ತದೆ ಎಂಬುದು ಇದರಿಂದ ಸಿದ್ಧವಾಗುತ್ತದೆ, ಪತಿತರನ್ನು ಪಾವನ ಮಾಡಿ ಎಲ್ಲಾ ಮನುಷ್ಯರನ್ನು ಮಾಯಾ ರಾವಣನ ಬಂಧನದಿಂದ ಬಿಡಿಸಲು ಬರುತ್ತಾರೆ ಏಕೆಂದರೆ ಈಗ ರಾವಣನ ರಾಜ್ಯವಿದೆ. ರಾವಣನನ್ನು ಭಾರತದಲ್ಲಿಯೇ ಸುಡುತ್ತಾರೆ ಮತ್ತು ಶಿವರಾತ್ರಿ ಹಾಗೂ ಕೃಷ್ಣ ಜಯಂತಿಯನ್ನೂ ಭಾರತದಲ್ಲಿಯೇ ಆಚರಿಸುತ್ತಾರೆ, ರಾವಣ ರಾಜ್ಯವು ಅರ್ಧಕಲ್ಪ ನಡೆಯುತ್ತದೆ, ನಂತರ ಪತಿತರನ್ನು ಪಾವನ ಮಾಡಲು ತಂದೆಯು ಬರುತ್ತಾರೆ. ಒಂದೇ ಸಲ ಬಂದು ಪಾವನರನ್ನಾಗಿ ಮಾಡುತ್ತಾರೆ, ನಂತರ ಬರುವುದೇ ಇಲ್ಲ. ತಂದೆಯ ಹೆಸರು ಭಾರತದಲ್ಲಿಯೇ ಪ್ರಸಿದ್ಧವಾಗಿದೆ ಎಂದಾಗ ಅವಶ್ಯವಾಗಿ ಯಾವುದೋ ದಿವ್ಯ ಕರ್ತವ್ಯವನ್ನು ಮಾಡಿದ ಕಾರಣ ಅವರ ಹೆಸರಿದೆ. ಮನುಷ್ಯ, ಮನುಷ್ಯರನ್ನು ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ತಂದೆ ಒಬ್ಬರಿಗೇ ಪತಿತ ಪಾವನ ಎಂದು ಹೇಳಲಾಗುತ್ತದೆ. ಸ್ವರ್ಗ, ನರಕ ಈ ಹೆಸರುಗಳೂ ಸಹ ಭಾರತದಲ್ಲಿಯೇ ಇದೆ. ಈ ಭಾರತವು 5000 ವರ್ಷಗಳ ಹಿಂದೆ ಸ್ವರ್ಗವಾಗಿತ್ತು, ಅದನ್ನು ಫರಿಸ್ತಾನ್ ಎಂದು ಹೇಳಲಾಗುತ್ತದೆಯೆಂದಾಗ ಈ ಆಸ್ತಿಯು ಅವಶ್ಯವಾಗಿ ತಂದೆಯಿಂದಲೇ ಸಿಕ್ಕಿದೆ. ತಂದೆ ಎನ್ನುವ ಅಕ್ಷರವು ತುಂಬಾ ಪ್ರಿಯವಾಗಿದೆ. ಅವರಿಂದಲೇ ಬೇಹದ್ದಿನ ಸುಖದ ಆಸ್ತಿ ಸಿಗುತ್ತದೆ, ಆ ಸುಖವು ಅರ್ಧಕಲ್ಪದವರೆಗೆ ನಡೆಯುತ್ತದೆ. ಇದರದ್ದೆ ಗೋಲ್ಡೆನ್ ಜೂಬಿಲಿ, ಸಿಲ್ವರ್ ಜೂಬಿಲಿಯನ್ನು ಆಚರಿಸುತ್ತಾರೆ. ಸತ್ಯಯುಗವನ್ನು ಗೋಲ್ಡೆನ್ ಜೂಬಿಲಿ, ತ್ರೇತಾಯುಗವನ್ನು ಸಿಲ್ವರ್ ಜೂಬಿಲಿ ಎಂದು ಹೇಳುತ್ತಾರೆ. ಸತ್ಯಯುಗವು ಸತೋಪ್ರಧಾನ, ತ್ರೇತಾಯುಗವು ಸತೋ, ಇವೆರಡನ್ನು ಸೇರಿಸಿ ಸುಖಧಾಮ ಎಂದು ಹೇಳಲಾಗುತ್ತದೆ. ಇದರಲ್ಲಿ ನಂಬರ್ವನ್ ಸೂರ್ಯವಂಶಿ, ಸೆಕೆಂಡ್ನಂಬರ್ ಚಂದ್ರವಂಶಿಯಾಗಿದೆ. ತಂದೆಯು ಯಾವಾಗ ಈ ಭಾರತ ಖಂಡದಲ್ಲಿ ಬರುತ್ತಾರೆ, ಆಗ ಭಾರತವನ್ನು ಪಾವನವನ್ನಾಗಿ ಮಾಡುತ್ತಾರೆ, ನಂತರ ಭಕ್ತಿ ಶುರುವಾದಾಗ ಕಲೆಗಳು ಕಡಿಮೆ ಆಗುತ್ತಾ ಹೋಗುತ್ತದೆ. ಕಲ್ಪವೃಕ್ಷ ಜಡಜಡೀಭೂತ ತಮೋಪ್ರಧಾನವಾಗಿ ಬಿಡುತ್ತದೆ, ಎಲ್ಲರೂ ಭಕ್ತರಾಗಿ ಬಿಡುತ್ತಾರೆ. ಸಾಧುಗಳೂ ಸಹ ತಂದೆಯನ್ನು ಪಡೆಯಲು ಅರ್ಥಾತ್ ಮುಕ್ತಿ-ಜೀವನ್ಮುಕ್ತಿಧಾಮದಲ್ಲಿ ಹೋಗಲು ಸಾಧನೆ ಮಾಡುತ್ತಾರೆ. ಅರ್ಧಕಲ್ಪ ತಂದೆಯನ್ನು ಪಡೆಯಲು ಭಕ್ತಿ ಮಾಡುತ್ತಾರೆ. ಯಾವಾಗ ಆ ಭಕ್ತಿಯ ಸಮಯ ಪೂರ್ಣವಾಗುತ್ತದೆ, ಆಗ ಭಕ್ತರನ್ನು ಸುಖಿಗಳನ್ನಾಗಿ ಮಾಡಲು ತಂದೆಯು ಬರುತ್ತಾರೆ. ಸತ್ಯಯುಗದಲ್ಲಂತು ಸುಖ-ಶಾಂತಿ, ಸಂಪತ್ತು ಎಲ್ಲವೂ ಇರುತ್ತದೆ. ಅಲ್ಲಿ ಎಂದೂ ಅಕಾಲಮೃತ್ಯುವು ಇರುವುದಿಲ್ಲ. ಎಂದೂ ಅಳುವುದಾಗಲಿ, ದುಃಖ ಅನುಭವಿಸುವುದಾಗಲಿ ಇರುವುದಿಲ್ಲ. ಇದೆಲ್ಲವನ್ನು ಯಾರು ತಿಳಿಸುತ್ತಾರೆ? ಬೇಹದ್ದಿನ ತಂದೆ ಎಂದರೆ ಅವರಿಗೆ ಹೆಸರು ಇರಬೇಕಲ್ಲವೇ. ಕಲಿಯುಗದಲ್ಲಂತು ಅಂಧಕಾರವೇ ಇದೆ. ಭಕ್ತಿಮಾರ್ಗದಲ್ಲಿ ಎಷ್ಟು ಪರಿಶ್ರಮ ಪಡುತ್ತಿರುತ್ತಾರೆ. ಆದರೆ ಸ್ವರ್ಗದಲ್ಲಂತೂ ದುಃಖದ ಮಾತೇ ಇರುವುದಿಲ್ಲ. ಎಲ್ಲರು ಸುಖಿಯಾಗಿರುತ್ತಾರೆ. ಆದ್ದರಿಂದಲೇ ಅಲ್ಲಿ ಭಗವಂತನನ್ನು ಕರೆಯುವುದಿಲ್ಲ. ಸತ್ಯಯುಗವನ್ನು ಸುಖಧಾಮ, ಕಲಿಯುಗವನ್ನು ದುಃಖಧಾಮವೆಂದು ಹೇಳಲಾಗುತ್ತದೆ. ವಲ್ಲಭಾಚಾರಿ ವೈಷ್ಣವರೇ ಇದನ್ನು ತಿಳಿದುಕೊಳ್ಳುತ್ತಾರೆ-ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಯಥಾ ರಾಜಾ-ರಾಣಿ ತಥಾ ಪ್ರಜಾ ಎಲ್ಲರೂ ಸಮಾನ ಸುಖಿಯಾಗಿದ್ದರು, ಅದಕ್ಕೇ ಚಿನ್ನದ ಯುಗವೆಂದು ಹೇಳಲಾಗುತ್ತದೆ. ಯಾರು ಸತ್ಯಯುಗದಿಂದ ಹಿಡಿದು ಚಕ್ರದಲ್ಲಿ ಬರುತ್ತಾರೆ ಅವರದೇ 84 ಜನ್ಮಗಳು ಇರುತ್ತದೆ. ತಂದೆಯು ಮಕ್ಕಳಿಗೆ ತಿಳಿಸಿಕೊಡುತ್ತಾರೆ - ಮಕ್ಕಳೇ ಇದು ವೃಕ್ಷವಾಗಿದೆ, ಎಲ್ಲಾ ಎಲೆಗಳು ಜೊತೆಯಲ್ಲಿ ಬರುವುದಿಲ್ಲ. ಸತ್ಯಯುಗದಲ್ಲಿ ಒಂದೇ ಆದಿ ಸನಾತನ ದೇವೀ-ದೇವತಾ ಧರ್ಮವಿತ್ತು. ಅವರನ್ನು ಹಿಂದೂಗಳು ಎಂದು ಹೇಳುವುದಿಲ್ಲ ಏಕೆಂದರೆ ಹಿಂದು ಎನ್ನುವುದು ಯಾವುದೇ ಧರ್ಮವಲ್ಲ. ದೇವೀ-ದೇವತೆಗಳಿಗೆ ಸರ್ವಗುಣ ಸಂಪನ್ನರು, ಹದಿನಾರು ಕಲಾ ಸಂಪೂರ್ಣರೆಂದು ಗಾಯನ ಮಾಡಲಾಗುತ್ತದೆ............ ಅವರ ಪೂಜಾರಿಗಳೆಂದಾಗ ಅವಶ್ಯವಾಗಿ ಅವರ ಧರ್ಮದವರೇ ಆಗಿರಬೇಕು. ಹೇಗೆ ಕ್ರಿಶ್ಚಿಯನ್ನರು ಕ್ರೈಸ್ಟನನ್ನು ನೆನಪು ಮಾಡುತ್ತಾರೆಂದರೆ ಆ ಧರ್ಮದವರಾದರಲ್ಲವೇ. ಮತ್ತೆ ಭಾರತವಾಸಿಗಳು ತಮ್ಮ ದೇವೀ-ದೇವತಾ ಧರ್ಮದ ಹೆಸರನ್ನು ಏಕೆ ಮರೆತು ಹೋಗಿದ್ದಾರೆ. ನೀವು ತಿಳಿದುಕೊಂಡಿದ್ದೀರಿ ನಾವೇ ದೇವತೆಗಳಾಗಿದ್ದವು. ನಾವೇ ಜನನ-ಮರಣ ಚಕ್ರದಲ್ಲಿ ಬರುತ್ತೇವೆ. ನಾವೇ ದೇವತಾ, ಕ್ಷತ್ರಿಯರಾಗುತ್ತೇವೆ. 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಅಂತ್ಯದಲ್ಲಿ ಬಂದು ಶೂದ್ರರಾಗುತ್ತೇವೆ. ಶೂದ್ರರಿಂದ ಪುನಃ ಬ್ರಾಹ್ಮಣರಾಗಲೇಬೇಕು. ಬ್ರಹ್ಮನ ಮಕ್ಕಳೇ ಬ್ರಾಹ್ಮಣರಾಗುತ್ತಾರೆ. ವಾಸ್ತವದಲ್ಲಿ ಎಲ್ಲಾ ಆತ್ಮರು ಶಿವನ ಮಕ್ಕಳಾಗಿದ್ದಾರೆ. ಏಕೆಂದರೆ ಅವರು ಬೇಹದ್ದಿನ ತಂದೆಯಾಗಿದ್ದಾರೆ. ಅವರನ್ನು ಪರಮಪಿತ ಪರಮಾತ್ಮ, ಓ ಗಾಡ್ಫಾದರ್ ಅಥವಾ ಸ್ವರ್ಗದಾತ ತಂದೆ ಎಂದು ಹೇಳಲಾಗುತ್ತದೆ. ಅವರು ಸ್ವರ್ಗದ ರಚಯಿತನಾಗಿದ್ದಾರೆ. ಈಗ ಮಕ್ಕಳೊಂದಿಗೆ ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ. ಯಾವಾಗ ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಾರೆಂದಾಗ ನಾವು ಹೊಸ ಪ್ರಪಂಚದ ವಾರಸುದಾರರು ಏಕೆ ಆಗಬಾರದು! ಈಗ ಆ ಹೊಸ ಪ್ರಪಂಚವೇ ಹಳೆಯದಾಗಿದೆ. ನಂತರ ಇದು ಹೊಸ ಪ್ರಪಂಚ ಹೇಗೆ ಆಗುವುದು? ಮಹಾತ್ಮ ಗಾಂಧಿಯೂ ಹೇಳುತಿದ್ದರು - ಹೊಸ ರಾಮ ರಾಜ್ಯ, ನವ ಭಾರತವಾಗಲೆಂದು. ನಾವೀಗ ತಿಳಿದುಕೊಂಡಿದ್ದೇವೆ - ಈಗ ಅಂತಹ ಪ್ರಪಂಚವು ಸ್ಥಾಪನೆ ಆಗುತ್ತಾ ಇದೆ. ಈಗ ನೀವು ಬ್ರಾಹ್ಮಣರಿಗೆ ಈಶ್ವರನ ಮಡಿಲು ಸಿಕ್ಕಿದೆ. ಬೇಹದ್ದಿನ ತಂದೆಯನ್ನು ಪ್ರಾಕ್ಟಿಕಲ್ನಲ್ಲಿ ತಮ್ಮವರನ್ನಾಗಿ ಮಾಡಿಕೊಂಡಿದ್ದೀರಿ. ಎಲ್ಲರು ಓ ತಂದೆಯೇ ದಯೆ ತೋರಿಸು ಎಂದು ಹೇಳುತ್ತಾರೆ ಆದರೆ ಆ ತಂದೆಯು ಈ ಸಮಯದಲ್ಲಿ ಈ ಶರೀರದಲ್ಲಿ ಬಂದು ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿದ್ದಾರೆ. ಆ ಕಲಿಯುಗೀ ಬ್ರಾಹ್ಮಣರು ಕುಖವಂಶಾವಳಿ, ನಾವು ಬ್ರಹ್ಮಮುಖವಂಶಾವಳಿ ಆಗಿದ್ದೇವೆ. ಪ್ರಜಾಪಿತ ಬ್ರಹ್ಮಾ ಆದಾಗಲೇ ಇಷ್ಟೊಂದು ಮಕ್ಕಳಿಗೆ ಜನ್ಮ ಕೊಡುತ್ತಾರಲ್ಲವೇ! ಅಂದಾಗ ನೀವು ಮುಖವಂಶಾವಳಿ ಆಗಿದ್ದೀರಿ. ಬ್ರಹ್ಮನ ಮುಖಾಂತರ ಪರಮಪಿತ ಪರಮಾತ್ಮ ದತ್ತು ತೆಗೆದುಕೊಂಡಿರುವುದರಿಂದ ಬ್ರಹ್ಮ ತಾಯಿಯು ಆದರಲ್ಲವೇ. ನೀವೇ ಮಾತಾ-ಪಿತಾ..... ಓ ಬಾಬಾ ನೀವು ನಮ್ಮನ್ನು ಬ್ರಹ್ಮನ ಮುಖಾಂತರ ತಮ್ಮವರನ್ನಾಗಿ ಮಾಡಿಕೊಂಡಿದ್ದೀರಿ. ಇದು ತಿಳಿದುಕೊಳ್ಳುವಂತಹ ಮಾತುಗಳಾಗಿವೆ. ಜ್ಞಾನಸಾಗರ ತಂದೆ ಒಬ್ಬರೇ ಆಗಿದ್ದಾರೆ. ಜ್ಞಾನದಿಂದಲೇ ಸದ್ಗತಿ ಅರ್ಥಾತ್ ದಿನವಾಗುತ್ತದೆ. ಅಜ್ಞಾನದಿಂದ ರಾತ್ರಿಯಾಗುತ್ತದೆ. ಕಲಿಯುಗವಂತು ರಾತ್ರಿಯಾಗಿದೆಯಲ್ಲವೇ. ಇದನ್ನೇ ಭಕ್ತಿಮಾರ್ಗವೆಂದು ಹೇಳಲಾಗುತ್ತದೆ. ಶಾಸ್ತ್ರಗಳಲೆಲ್ಲವು ಭಕ್ತಿಮಾರ್ಗದ್ದಾಗಿದೆ. ಅವುಗಳಿಂದ ತಂದೆಯ ಹತ್ತಿರ ತಲುಪಲು ಯಾವುದೇ ಮಾರ್ಗವು ಸಿಗುವುದಿಲ್ಲ. ತಂದೆಯು ಕಲ್ಪ-ಕಲ್ಪದಲ್ಲಿ ಬರುತ್ತಾರೆ. ಶಿವರಾತ್ರಿಯನ್ನು ಆಚರಿಸುತ್ತಾರೆಂದಾಗ ಅವಶ್ಯವಾಗಿ ತಂದೆಯು ಬರುತ್ತಾರೆಂದು ಅರ್ಥ. ಅವರಿಗೆ ತಮ್ಮದೆ ಆದಂತಹ ಶರೀರವಿಲ್ಲ. ಬ್ರಹ್ಮ, ವಿಷ್ಣು, ಶಂಕರರಿಗೆ ದೇವತೆಗಳೆಂದು ಹೇಳಲಾಗುತ್ತದೆ. ಬ್ರಹ್ಮ ದೇವತಾಯ ನಮಃ, ವಿಷ್ಣು ದೇವತಾಯ ನಮಃ ನಂತರ ಶಿವ ಪರಮಾತ್ಮಾಯ ನಮಃ. ಈ ಸಾಕಾರಿ ವೃಕ್ಷದ ಮುಖ್ಯ ಪಾತ್ರಧಾರಿಯು ಬ್ರಹ್ಮಾ ಆಗಿದ್ದಾರೆ. ಅವರೀಗ ಪ್ರತ್ಯಕ್ಷವಾಗಿದ್ದಾರೆ. ತಂದೆಯು ಸಂಗಮಯುಗದಲ್ಲಿಯೇ ಬರುತ್ತಾರೆ ಮತ್ತು ಈಗ ಯಾದವರು ಇದ್ದಾರೆ, ಕೌರವರು ಇದ್ದಾರೆ ಮತ್ತು ಯೋಗಬಲವುಳ್ಳ ಶಕ್ತಿಸೇನಾ ಪಾಂಡವರು ಇದ್ದಾರೆ ಎಂದಾಗ ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಶಿವ ತಂದೆಯು ಸಾಕಾರದಲ್ಲಿ ಬ್ರಹ್ಮನ ತನುವಿನಲ್ಲಿ ಬಂದಿದ್ದಾರೆ. ಆ ನಿರಾಕಾರ ಶಿವನ ಮಂದಿರವು ಇದೆ. ಶಿವರಾತ್ರಿಯನ್ನು ಆಚರಣೆ ಮಾಡಲಾಗುತ್ತದೆ. ಸರ್ಕಾರವು ಶಿವ ಜಯಂತಿಯ ರಜೆಯನ್ನು ಸಹ ಕೊಟ್ಟಿದೆ. ಎಲ್ಲರು ಜಯಂತಿಯನ್ನು ಆಚರಿಸುತ್ತಾರೆ. ಧರ್ಮದ ತಾಕತ್ತು ಇಲ್ಲವಾಗಿದೆ. ಆದ್ದರಿಂದ ಎಲ್ಲರೂ ಅಸತ್ಯ, ಅನ್ಯಾಯ ಪೂರ್ಣ ಮತ್ತು ವಿಕಾರಿಗಳಾಗಿ ಬಿಟ್ಟಿದ್ದಾರೆ. ಪವಿತ್ರತೆಯೂ ಇಲ್ಲ, ಸುಖವೂ ಇಲ್ಲ, ಶಾಂತಿಯು ಇಲ್ಲ. ಇದೇ ಭಾರತದಲ್ಲಿ 5000 ವರ್ಷಗಳ ಹಿಂದೆ ಯಾವಾಗ ಗೋಲ್ಡೆನ್ ಜೂಬಿಲಿ ಇತ್ತು. ಆಗ ಸುಖ, ಶಾಂತಿ, ಪವಿತ್ರತೆ ಇತ್ತು. ಅಲ್ಲಿ ಎಂದೂ ಅಕಾಲಮೃತ್ಯು ಆಗುತ್ತಿರಲಿಲ್ಲ. ಭಾರತದಂತಹ ಶ್ರೇಷ್ಠ ಸಂಪತ್ತಿವಂತ ಮತ್ತೆ ಯಾವುದೇ ದೇಶವು ಇರಲು ಸಾಧ್ಯವಿಲ್ಲ. ಭಾರತ ಖಂಡವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ. ಇದರ ಇತಿಹಾಸವೂ ಮಾಡಲ್ಪಟ್ಟಿದೆ. ಈ ಭಾರತವೇ ಪತಿತ ಹಾಗೂ ಇದೇ ಪಾವನವು ಆಗುತ್ತದೆ. ಆದಿ ಸನಾತನ ದೇವೀ-ದೇವತಾ ಧರ್ಮದವರೇ ಈ ಚಕ್ರವನ್ನು ಸುತ್ತಿ ಶೂದ್ರ ವರ್ಣದಲ್ಲಿ ಬಂದರು. ಮತ್ತೆ ಶೂದ್ರ ವರ್ಣದಿಂದ ಈಗ ಬ್ರಾಹ್ಮಣ ವರ್ಣದಲ್ಲಿ ಬಂದಿದ್ದೀರಿ. ದೇವತೆಗಳಿಗಂತಲೂ ಸಹ ಬ್ರಾಹ್ಮಣ ವರ್ಣವು ಅತಿ ಶ್ರೇಷ್ಠ, ಶಿಕೆಗೆ (ಜುಟ್ಟು) ಸಮಾನವಾಗಿದೆ. ಸತ್ಯಯುಗೀ ದೇವತೆಗಳಿಗೆ ಯಾವ ಮಹಿಮೆ ಇದೆ ಅದು ತಂದೆ ಮಹಿಮೆಗಿಂತ ಬೇರೆಯಾಗಿದೆ. ತಂದೆಗೆ ಜ್ಞಾನ ಸಾಗರ, ಆನಂದ ಸಾಗರ ಎಂದು ಹೇಳುತ್ತಾರೆ, ಮತ್ತೆ ದೇವತೆಗಳಿಗೆ ಸರ್ವಗುಣ ಸಂಪನ್ನರೆಂದು ಹೇಳುತ್ತಾರೆ...... ಅಲ್ಲಿ ವಿಕಾರದ ಮಾತೇ ಇಲ್ಲ. ಆದರೆ ಶಾಸ್ತ್ರಗಳಲ್ಲಿ ಕೃಷ್ಣ ಪುರಿಯಲ್ಲಿ ಕಂಸ, ರಾವಣ, ಮುಂತಾದವರಿದ್ದರೆಂದು ತುಂಬಾ ಸುಳ್ಳಿನ ಮಾತುಗಳನ್ನು ಹೇಳಿದ್ದಾರೆ. ವಾಸ್ತವದಲ್ಲಿ ಈ ಸಮಯದಲ್ಲಿ ಕಂಸಪುರಿಯಾಗಿದೆ. ಮತ್ತೆ ಸತ್ಯಯುಗದಲ್ಲಿ ಕೃಷ್ಣಪುರಿ ಇರುವುದು. ಇದು ಸಂಗಮವಾಗಿದೆ. ಆದ್ದರಿಂದಲೇ ಅವರು ಕಂಸ, ಜರಾಸಂದ, ರಾವಣ ಮುಂತಾದವರನ್ನು ಸತ್ಯಯುಗೀ ದೇವತೆಗಳೊಂದಿಗೆ ಸೇರಿಸಿ ಬಿಟ್ಟಿದ್ದಾರೆ. ಇದು ಆಸುರೀ ರಾವಣ ಸಂಪ್ರದಾಯವೇ ಆಗಿದೆ ಆದರೆ ನೀವೀಗ ಈಶ್ವರೀಯ ಸಂಪ್ರದಾಯದವರಾಗಿದ್ದೀರಿ. ಈಶ್ವರನ ಮಡಿಲಿನಲ್ಲಿ ಬಂದು ಪವಿತ್ರರಾಗಿ ನಂತರ 21 ಜನ್ಮಗಳಿಗೋಸ್ಕರ ಈ ದೈವೀ ಮಡಿಲಿನಲ್ಲಿ ಹೋಗುತ್ತೀರಿ. 8 ಜನ್ಮಗಳು ದೈವೀ ಮಡಿಲು ಮತ್ತು 12 ಕ್ಷತ್ರಿಯ ಮಡಿಲಿನಲ್ಲಿ ಇರುತ್ತೀರಿ. ಭಾರತದಲ್ಲಿಯೇ ಈ ಗಾಯನವಿದೆ - ಕನ್ಯೆಯರು 21 ಕುಲದ ಉದ್ಧಾರ ಮಾಡುವವರೆಂದು ಅಂದಾಗ ನೀವೇ ಕುಮಾರಿಯರಾಗಿದ್ದೀರಿ. ಈಗ ನೀವು ಈಶ್ವರೀಯ ಕುಲದವರಾಗಿದ್ದೀರಿ. ಶಿವಬಾಬಾ ದಾದಾ (ತಾತ) ಆಗಿದ್ದಾರೆ, ಬ್ರಹ್ಮಾ ಬಾಬಾ ತಂದೆ ಆಗಿದ್ದಾರೆ. ನೀವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ಆಸ್ತಿಯು ಆ ಬೇಹದ್ದಿನ ತಂದೆಯಿಂದಲೇ ಸಿಗುತ್ತದೆ. ಕೊಡುವವರು ಅವರೇ ಆಗಿದ್ದಾರೆ. ಅವರೇ ನಿರಾಕಾರ ಆಗಿದ್ದಾರೆಯೆಂದಾಗ ಈಗ ಅವರು ರಾಜಯೋಗವನ್ನು ಹೇಗೆ ಕಲಿಸುವುದು! ನರನಿಂದ ನಾರಾಯಣರನ್ನಾಗಿ ಮಾಡುವುದಕ್ಕೋಸ್ಕರ ಅವಶ್ಯವಾಗಿ ಸಾಕಾರ ಶರೀರವು ಬೇಕು ಆದ್ದರಿಂದ ಯಾರು 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ, ಅಂತಹ ಪತಿತ ಶರೀರದಲ್ಲಿ ತಂದೆಯು ಬರುತ್ತಾರೆ. ಈ ವಿಶ್ವ ವಿದ್ಯಾಲಯವು ಅತಿ ದೊಡ್ಡದಕ್ಕಿಂತ ದೊಡ್ಡ ವಿಶ್ವ ವಿದ್ಯಾಲಯವಾಗಿದೆ. ಇದರಲ್ಲಿ ರಾಜರಿಗಿಂತಲೂ ರಾಜರನ್ನಾಗಿ ಮಾಡುವ ಸಲುವಾಗಿ ಸ್ವಯಂ ಪರಮಾತ್ಮನೇ ಕುಳಿತು ರಾಜಯೋಗವನ್ನು ಕಲಿಸುತ್ತಾರೆ. ಗೀತೆಯ ರಚಯಿತ ಕೃಷ್ಣನಲ್ಲ. ಗೀತಾ ಮಾತೆಯು (ಭಗವದ್ಗೀತೆ) ಕೃಷ್ಣನಿಗೆ ಜನ್ಮವನ್ನು ಕೊಟ್ಟಿರುವಂತದ್ದು. ಯಾರು ದೇವತೆಗಳಾಗುತ್ತಾರೆ, ಅವರಿಗೆ ಶಿವ ತಂದೆಯಿಂದಲೇ ಜನ್ಮ ಸಿಗುತ್ತದೆ. ಕ್ರಿಶ್ಚಯನ್ನರಿಗೆ ಕ್ರೈಸ್ಟ್ನ ಮುಖಾಂತರ ಬೈಬಲ್ನಿಂದ ಜನ್ಮ ಸಿಕ್ಕಿದೆ. ನಿಮ್ಮನ್ನೂ ಸಹ ಬ್ರಾಹ್ಮಣರಿಂದ ದೇವತೆಗಳನ್ನಾಗಿ ಯಾರು ಮಾಡಿದರು? ಶಿವಬಾಬಾ ಬ್ರಹ್ಮನ ಮುಖಾಂತರ ನಮ್ಮನ್ನು ಬ್ರಾಹ್ಮಣರನ್ನಾಗಿ ಮಾಡಿದ್ದಾರೆ. ನಿಮ್ಮದು ಬೇಹದ್ದಿನ ಸನ್ಯಾಸವಾಗಿದೆ ಆದರೆ ಮನುಷ್ಯರು ಹದ್ದಿನ ರಜೋಗುಣಿ ಸನ್ಯಾಸ ಹಾಗೂ ನಿವೃತ್ತಿ ಮಾರ್ಗದ ಸನ್ಯಾಸವಾಗಿದೆ. ಈಗ ನಿಮಗೆ ಈ ಪತಿತ ಹಳೆಯ ಪ್ರಪಂಚದೊಂದಿಗೆ ವೈರಾಗ್ಯ ಬಂದಿದೆ ಏಕೆಂದರೆ ಈಗ ಇದೆಲ್ಲವು ಸಮಾಪ್ತಿಯಾಗುತ್ತದೆ ಎಂದು ನೀವು ಅರಿತುಕೊಂಡಿದ್ದೀರಿ ಆದ್ದರಿಂದ ನಾವು ಸ್ವರ್ಗ ರಚಯಿತ ತಂದೆಯನ್ನು ಏಕೆ ನೆನಪು ಮಾಡಬಾರದು!! ತಂದೆಯು ಹೇಳುತ್ತಾರೆ - ಮುದ್ದು ಮಕ್ಕಳೇ ನೀವು ಬಹಳ ಜನ್ಮಗಳ ನಂತರ ಬಂದು ನನ್ನೊಂದಿಗೆ ಸೇರಿದ್ದೀರಿ. ನೀವು 84 ಜನ್ಮಗಳನ್ನು ಪೂರ್ಣವಾಗಿ ತೆಗೆದುಕೊಂಡಿದ್ದೀರಿ. ಈಗ ನೀವು ದೇವತಾ ವರ್ಣದಲ್ಲಿ ಹೋಗಬೇಕಾಗಿದೆ ಆದ್ದರಿಂದ ಇದರಲ್ಲಿ ತುಂಬಾ ವ್ರತವಿದೆ, ಅಶುದ್ದ ಪದಾರ್ಥಗಳನ್ನು ತಿನ್ನಬಾರದಾಗಿದೆ. ತಂದೆಯು ಹೇಳುತ್ತಾರೆ - ನಾನು ಈ ಸಂಗಮಯುಗದಲ್ಲಿಯೇ ನಿಮ್ಮ ಕೊಳಕು ವಸ್ತ್ರಗಳನ್ನು ಪಾವನವನ್ನಾಗಿ ಮಾಡಲು ಬರುತ್ತೇನೆ. ಈಗ ಮೃತ್ಯುವಂತು ಸಮೀಪದಲ್ಲಿಯೇ ನಿಂತಿದೆ. ಯಾದವರು, ಕೌರವರು ಮತ್ತು ಪಾಂಡವರು ಇದ್ದಾರೆಂದಾಗ ಅವಶ್ಯವಾಗಿ ಪಾಂಡವಪತಿಯೂ ಇರುವರು. ಪಾಂಡವಪತಿ ಎಂದು ತಂದೆ ಪರಮಾತ್ಮನಿಗೆ ಹೇಳುತ್ತಾರೆ. ನೀವು ಮಾರ್ಗದರ್ಶಕರಾಗಿದ್ದೀರಿ. ಅನ್ಯರಿಗೆ ಸುಖಧಾಮ ಮತ್ತು ಶಾಂತಿಧಾಮದ ಮಾರ್ಗವನ್ನು ತಿಳಿಸುತ್ತೀರಿ ಆದ್ದರಿಂದ ನಿಮಗೆ ಪಾಂಡವ ಶಿವಶಕ್ತಿ ಸೇನೆ ಎಂದು ಹೇಳಲಾಗುತ್ತದೆ. ಯಾದವ ಯೂರೋಪ್ವಾಸಿಗಳಂತು ತಮ್ಮ ಕುಲದ ನಾಶ ತಾವೇ ಮಾಡಿಕೊಳ್ಳುತ್ತಾರೆ. ಭಾರತದಲ್ಲಿ ಪಾಂಡವ ಮತ್ತು ಕೌರವರಿದ್ದಾರೆ - ಇವರಿಗೋಸ್ಕರವೇ ಅಸುರ ಮತ್ತು ದೇವತೆಗಳ ನಡುವೆ ಯುದ್ಧ ನಡೆಯಿತೆಂದು ಹೇಳುತ್ತಾರೆ. ಈಗ ನೀವು ದೇವತೆಗಳಾಗಿಲ್ಲ, ಆಗಬೇಕಾಗಿದೆ. ಶ್ರೀಮತದಿಂದ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಉಳಿದ ಎಲ್ಲರದ್ದು ರಾವಣನ ಆಸುರಿಮತವಾಗಿದೆ. ಅರ್ಧಕಲ್ಪದವರೆಗೆ ರಾವಣನ ಮತವು ನಡೆಯುತ್ತದೆ. ಈಗಂತು ಇಡೀ ಪ್ರಪಂಚವೇ ತಮೋಪ್ರಧಾನವಾಗಿದೆ. ಈಗ ಇದು ರುದ್ರ ಜ್ಞಾನ ಯಜ್ಞವಾಗಿದೆ, ಇಲ್ಲಿ ಸ್ವಯಂ ತಂದೆಯೇ ಕುಳಿತು ರಾಜಯೋಗವನ್ನು ಕಲಿಸುತ್ತಾರೆ. ಯಾವಾಗ ರಾಜಾಯಿಯು ಸ್ಥಾಪನೆ ಆಗುತ್ತದೆ, ಆಗ ವಿನಾಶದ ಜ್ವಾಲೆಯು ಪ್ರಜ್ವಲಿತವಾಗುತ್ತದೆ, ಈ ಜ್ಞಾನವು ಪ್ರಾಯಃಲೋಪವಾಗುತ್ತದೆ. ಮತ್ತೆ ಡ್ರಾಮಾನುಸಾರ ಯಾವುದೆಲ್ಲ ಭಕ್ತಿಮಾರ್ಗದ ಶಾಸ್ತ್ರಗಳಿವೆ, ಅವೇ ಮತ್ತೆ ಹೊರ ಬರುತ್ತವೆ. ಸನ್ಯಾಸಿಗಳ ಅನುಯಾಯಿಗಳು ತುಂಬಾ ಆಗುತ್ತಾರೆ, ಆದರೆ ಸನ್ಯಾಸಿಗಲೂ ಸಹ ಪಾಪ ಪರಿಹಾರ ಮಾಡಿಕೊಳ್ಳಲು, ಗಂಗೆಯಲ್ಲಿ ಹೋಗುತ್ತಾರೆ. ಈಗ ಗಂಗಾ ನದಿಯು ಯಾರನ್ನೂ ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ಆ ನದಿಯು ನೀರಿನ ಸಾಗರದಿಂದ ಹೊರಟಿರುವುದಾಗಿದೆ. ವಾಸ್ತವದಲ್ಲಿ ಜ್ಞಾನ ಗಂಗೆಯರು ನೀವಾಗಿದ್ದೀರಿ. ಏಕೆಂದರೆ ಜ್ಞಾನ ಸಾಗರನಿಂದ ಹೊರಟಿರುವ ಜ್ಞಾನ ಗಂಗೆಯರಾಗಿದ್ದೀರಿ. ಬಾಕಿ ಗಂಗೆಯು ಯಾವುದೇ ಪತಿತ ಪಾವನಿ ಆಗುವುದಿಲ್ಲ. ಪತಿತ ಪಾವನ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನಾನು ಭಕ್ತಿಯ ಫಲ ಬೇಹದ್ದಿನ ಸುಖದ ಆಸ್ತಿಯನ್ನು ಕೊಡಲು ಬಂದಿದ್ದೇನೆ. ಯಾರು ಈಗ ಬಂದು ತಂದೆಯೊಂದಿಗೆ ಓದುತ್ತಾರೆ, ಅವರೇ ಸ್ವರ್ಗದಲ್ಲಿ ಬರುತ್ತಾರೆ. ಉಳಿದ ಎಲ್ಲರೂ ತಮ್ಮ-ತಮ್ಮ ಸೆಕ್ಷನ್ನಲ್ಲಿ ಹೋಗುತ್ತಾರೆ. ಈಗ ಈ ಡ್ರಾಮಾದ ಚಕ್ರವನ್ನೂ ತಿಳಿದುಕೊಳ್ಳಬೇಕಾಗಿದೆ. ಚಕ್ರವನ್ನು ತಿಳಿಯುವುದರಿಂದ ನೀವು ಚಕ್ರವರ್ತಿರಾಜರಾಗುತ್ತೀರಿ. ಸರ್ಕಾರವು ಚಕ್ರವನ್ನು ಹೊರಡಿಸಿದೆ. ಆ ಚಕ್ರದಲ್ಲಿ ಮೂರು ಭಾಗಗಳನ್ನು ತೋರಿಸಿ ಮತ್ತೆ ಕೆಳಗೆ ಸತ್ಯ ಮೇವ ಜಯತೇ ಎಂದು ಬರೆದಿದ್ದಾರೆ. ಈಗ ಶಿವಬಾಬಾ ಬಂದು ನೀವೆಲ್ಲಾ ಪಾರ್ವತಿಯರನ್ನು ಅಮರಪುರಿಯ ಮಾಲೀಕರನ್ನಾಗಿ ಮಾಡಲು ಅಮರ ಕಥೆಯನ್ನು ತಿಳಿಸುತ್ತಿದ್ದಾರೆ. ಇದಕ್ಕೆ ಸತ್ಯ ನಾರಾಯಣನ ಕಥೆ ಅಥವಾ ಅಮರ ಕಥೆ ಎಂದು ಹೇಳಲಾಗಿದೆ. ಈ ಕಥೆಯನ್ನು ಒಂದೇ ಬಾರಿ ಕೇಳಿ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಉಳಿದ ಎಲ್ಲವೂ ದಂತ ಕಥೆಗಳಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ತಂದೆಯ ಆತ್ಮೀಯ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ದೇವತಾ ವರ್ಣದಲ್ಲಿ ಹೋಗಲು ಭೋಜನದ ತುಂಬಾ ವ್ರತವನ್ನು ಇಡಬೇಕಾಗಿದೆ. ಯಾವುದೇ ಅಶುದ್ಧ ಪದಾರ್ಥವನ್ನು ಸೇವಿಸಬಾರದಾಗಿದೆ.

2. ಈ ಹಳೆಯ ಪತಿತ ಪ್ರಪಂಚವೇನಿದೆ, ಇದು ಈಗ ಸಮಾಪ್ತಿ ಆಗುವುದಿದೆ. ಇದರೊಂದಿಗೆ ಬೇಹದ್ದಿನ ವೈರಾಗ್ಯವನ್ನಿಟ್ಟು ಸ್ವರ್ಗದ ರಚಯಿತ ತಂದೆಯನ್ನು ನೆನಪು ಮಾಡಬೇಕಾಗಿದೆ.

ವರದಾನ:
ತಮ್ಮ ಶಕ್ತಿಗಳು ಅಥವಾ ಗುಣಗಳ ಮೂಲಕ ನಿರ್ಬಲರನ್ನು ಶಕ್ತಿಶಾಲಿಗೊಳಿಸುವಂತಹ ಶ್ರೇಷ್ಠ ದಾನಿ ಅಥವಾ ಸಹಯೋಗಿ ಭವ.

ಶ್ರೇಷ್ಠ ಸ್ಥಿತಿಯಿರುವ ಸುಪುತ್ರ ಮಕ್ಕಳಿಗಾಗಿ ಸರ್ವಶಕ್ತಿಗಳು ಹಾಗೂ ಸರ್ವ ಗುಣಗಳು ಸಮಯದನುಸಾರ ಸದಾ ಸಹಯೋಗಿ ಆಗಿರುತ್ತವೆ. ಅವರ ಸೇವೆಯ ವಿಶೇಷ ಸ್ವರೂಪವಾಗಿದೆ - ತಂದೆಯವರ ಮೂಲಕ ಪ್ರಾಪ್ತಿಯಾಗಿರುವ ಗುಣಗಳು ಹಾಗೂ ಶಕ್ತಿಗಳನ್ನು ಅಜ್ಞಾನಿ ಆತ್ಮರಿಗೆ ದಾನ ಹಾಗೂ ಬ್ರಾಹ್ಮಣ ಆತ್ಮರಿಗೆ ಸಹಯೋಗ ಕೊಡುವುದಾಗಿದೆ. ನಿರ್ಬಲರನ್ನು ಶಕ್ತಿಶಾಲಿಗೊಳಿಸುವುದೇ ಶ್ರೇಷ್ಠ ದಾನ ಅಥವಾ ಸಹಯೋಗವಾಗಿದೆ. ಹೇಗೆ ವಾಣಿಯ ಮೂಲಕ ಅಥವಾ ಮನಸ್ಸಾ ಮೂಲಕ ಸೇವೆಯನ್ನು ಮಾಡುತ್ತೀರಿ, ಅದೇ ರೀತಿಯಲ್ಲಿ ತಮಗೆ ಪ್ರಾಪ್ತಿಯಾಗಿರುವ ಗುಣ ಹಾಗೂ ಶಕ್ತಿಗಳನ್ನು ಅನ್ಯ ಆತ್ಮರಿಗೆ ಕೊಡುವ ಸಹಯೋಗ ಮಾಡಿರಿ, ಪ್ರಾಪ್ತಿ ಮಾಡಿಸಿರಿ.

ಸ್ಲೋಗನ್:
ಯಾರು ಧೃಡ ನಿಶ್ಚಯದಿಂದ ಭಾಗ್ಯವನ್ನು ನಿಶ್ಚಿತಗೊಳಿಸುತ್ತಾರೆಯೋ ಅವರೇ ಸದಾ ನಿಶ್ಚಿಂತವಾಗಿರುತ್ತಾರೆ.