06.06.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಜ್ಞಾನದ ತಳಪಾಯವು ನಿಶ್ಚಯವಾಗಿದೆ, ನಿಶ್ಚಯಬುದ್ಧಿಯವರಾಗಿ ಪುರುಷಾರ್ಥ ಮಾಡಿ ಆಗ ಗುರಿಯವರೆಗೆ ತಲುಪುತ್ತೀರಿ.

ಪ್ರಶ್ನೆ:
ಯಾವ ಒಂದು ಮಾತು ತುಂಬಾ ತಿಳಿದುಕೊಳ್ಳುವ ಹಾಗೂ ನಿಶ್ಚಯ ಮಾಡಿಕೊಳ್ಳುವ ಮಾತಾಗಿದೆ?

ಉತ್ತರ:
ಈಗ ಎಲ್ಲಾ ಆತ್ಮಗಳ ಲೆಕ್ಕಾಚಾರವು ಸಮಾಪ್ತಿಯಾಗುವುದಿದೆ. ಎಲ್ಲರೂ ಸಹ ಸೊಳ್ಳೆಗಳ ರೀತಿ ತಮ್ಮ ಮಧುರ ಮನೆಗೆ ಹೋಗುತ್ತಾರೆ, ನಂತರ ಹೊಸ ಪ್ರಪಂಚದಲ್ಲಿ ಕೆಲವು ಆತ್ಮರಷ್ಟೇ ಬರುತ್ತಾರೆ. ಈ ಮಾತು ತುಂಬಾ ತಿಳಿದುಕೊಳ್ಳುವ ಹಾಗೂ ನಿಶ್ಚಯ ಮಾಡಿಕೊಳ್ಳುವ ಮಾತಾಗಿದೆ.

ಪ್ರಶ್ನೆ:
ತಂದೆಯು ಎಂತಹ ಮಕ್ಕಳನ್ನು ನೋಡಿ ಖುಷಿ ಪಡುತ್ತಾರೆ?

ಉತ್ತರ:
ಯಾವ ಮಕ್ಕಳು ತಂದೆಯ ಮೇಲೆ ಪೂರ್ಣ ಬಲಿಹಾರಿಯಾಗುತ್ತಾರೆ, ಯಾರು ಮಾಯೆಯಿಂದ ಅಲುಗಾಡುವುದಿಲ್ಲ ಅರ್ಥಾತ್ ಹನುಮಂತನ ತರಹ ಅಚಲ-ಅಡೋಲರಾಗಿರುತ್ತಾರೆ, ಇಂತಹ ಮಕ್ಕಳನ್ನು ನೋಡಿ ತಂದೆಯು ಖುಷಿ ಪಡುತ್ತಾರೆ.

ಗೀತೆ:
ಧೈರ್ಯ ತಾಳು ಮಾನವನೇ......

ಓಂ ಶಾಂತಿ.
ಮಕ್ಕಳು ಏನನ್ನು ಕೇಳಿದಿರಿ? ಇದನ್ನು ತಂದೆಯೇ ತಿಳಿಸುತ್ತಾರಲ್ಲವೇ. ಯಾವುದೇ ಸಾಧು-ಸಂತರು ಹೇಳಲು ಸಾಧ್ಯವಿಲ್ಲ. ಪಾರಲೌಕಿಕ ಬೇಹದ್ದಿನ ತಂದೆಯೇ ಮಕ್ಕಳಿಗೆ ತಿಳಿಸುತ್ತಾರೆ ಏಕೆಂದರೆ ಆತ್ಮದಲ್ಲಿಯೇ ಮನಸ್ಸು ಬುದ್ಧಿಯಿದೆ ಆದ್ದರಿಂದ ಈಗ ಧೈರ್ಯದಿಂದ ಇರಬೇಕೆಂದು ಆತ್ಮರಿಗೆ ಹೇಳುತ್ತಾರೆ. ಈ ಬೇಹದ್ದಿನ ತಂದೆಯೇ ಇಡೀ ಪ್ರಪಂಚಕ್ಕೆ ಧೈರ್ಯದಿಂದಿರಿ ಎಂದು ಹೇಳುತ್ತಾರೆ ಎನ್ನುವುದನ್ನು ಮಕ್ಕಳೇ ಅರಿತುಕೊಂಡಿದ್ದೀರಿ. ಈಗ ನಿಮ್ಮ ಸುಖ-ಶಾಂತಿಯ ದಿನಗಳು ಬರಲಿವೆ. ಇದಂತೂ ದುಃಖಧಾಮವಾಗಿದೆ, ಇದರ ನಂತರ ಸುಖಧಾಮವು ಬರಬೇಕಾಗಿದೆ ಅಂದಮೇಲೆ ತಂದೆಯೇ ಸುಖಧಾಮದ ಸ್ಥಾಪನೆ ಮಾಡುತ್ತಾರಲ್ಲವೆ! ಮಕ್ಕಳಿಗೆ ತಂದೆಯೇ ಧೈರ್ಯ ಕೊಡುತ್ತಾರೆ. ಮಕ್ಕಳಿಗೆ ಮೊದಲು ನಿಶ್ಚಯವಾಗಬೇಕಾಗಿದೆ. ಯಾರು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಿರುತ್ತಾರೆ ಅವರಿಗೇ ನಿಶ್ಚಯವಾಗುತ್ತದೆ. ಇಲ್ಲವೆಂದರೆ ಇಷ್ಟೊಂದು ಬ್ರಾಹ್ಮಣರೆಲ್ಲಿಂದ ಬರುವರು? ಬಿ.ಕೆ. ಎಂದರೆ ಪುತ್ರ ಹಾಗೂ ಪುತ್ರಿಯರೆಂದು ಅರ್ಥ. ಇಷ್ಟೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತಾರೆಂದರೆ ಅವಶ್ಯವಾಗಿ ಪ್ರಜಾಪಿತ ಬ್ರಹ್ಮನೂ ಇರಬೇಕಲ್ಲವೆ! ಇವರೆಲ್ಲರಿಗೂ ಸಹ ಒಬ್ಬರೆ ತಂದೆ-ತಾಯಿಯಿದ್ದಾರೆ. ಉಳಿದೆಲ್ಲರಿಗೂ ಬೇರೆ-ಬೇರೆ ತಂದೆ-ತಾಯಿಯರಿರುತ್ತಾರೆ. ಇಲ್ಲಿ ನಿಮ್ಮೆಲ್ಲರಿಗೂ ಸಹ ಒಬ್ಬರೇ ಮಾತಾ-ಪಿತಾ ಆಗಿದ್ದಾರೆ. ಹೊಸ ಮಾತಾಗಿದೆಯಲ್ಲವೆ. ಮೊದಲು ನೀವೂ ಸಹ ಬ್ರಾಹ್ಮಣರಾಗಿರಲಿಲ್ಲ, ಈಗ ಬ್ರಾಹ್ಮಣರಾಗಿದ್ದೀರಿ. ಅವರೆಲ್ಲರೂ ಕುಖವಂಶಾವಳಿ ಬ್ರಾಹ್ಮಣರಾಗಿದ್ದಾರೆ, ನೀವು ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ. ಪ್ರತಿಯೊಂದು ಮಾತಿನಲ್ಲಿ ಮೊದಲು ನಮಗೆ ಯಾರು ತಿಳಿಸುತ್ತಿದ್ದಾರೆ ಎನ್ನುವ ನಿಶ್ಚಯವಿರಬೇಕು. ಭಗವಂತನೇ ತಿಳಿಸುತ್ತಾರೆ - ಈಗ ಕಲಿಯುಗದ ಅಂತ್ಯವಾಗಿದೆ, ಯುದ್ಧವು ಸಮ್ಮುಖದಲ್ಲಿ ನಿಂತಿದೆ. ಯೂರೋಪ್ವಾಸಿ ಯಾದವರೂ ಸಹ ಇದ್ದಾರೆ, ಇವರೇ ಬಾಂಬ್ಸ್ ಮುಂತಾದ ಅನ್ವೇಷಣೆಯನ್ನು ಮಾಡಿದ್ದಾರೆ ಆದ್ದರಿಂದಲೇ ಯಾದವರ ಹೊಟ್ಟೆಯಿಂದ ಒನಕೆ ಬಂದಿತು ಅದರಿಂದ ಅವರು ತಮ್ಮದೇ ಕುಲದ ನಾಶ ಮಾಡಿದರೆಂದು ಗಾಯನವಿದೆ. ಅವಶ್ಯವಾಗಿ ಕುಲದ ನಾಶವನ್ನು ಮಾಡುತ್ತಾರೆ. ಒಂದೇ ಕುಲದವರಾಗಿದ್ದರೂ ಸಹ ಒಬ್ಬರಿನ್ನೊಬ್ಬರಿಗೆ ನಾವು ವಿನಾಶ ಮಾಡುತ್ತೇವೆಂದು ಹೇಳುತ್ತಿರುತ್ತಾರೆ. ಅವಶ್ಯವಾಗಿ ಇದೂ ಸಹ ಬರೆಯಲ್ಪಟ್ಟಿದೆ. ಈಗ ಮಕ್ಕಳೇ ಧೈರ್ಯವಹಿಸಿ ಎಂದು ತಂದೆಯು ತಿಳಿಸುತ್ತಾರೆ. ಈಗ ಈ ಹಳೆಯ ಪ್ರಪಂಚವು ಸಮಾಪ್ತಿಯಾಗುವುದಿದೆ. ಕಲಿಯುಗವು ಸಮಾಪ್ತಿಯಾದಾಗಲೇ ಸತ್ಯಯುಗವು ಬರುತ್ತದೆಯಲ್ಲವೆ. ಅವಶ್ಯವಾಗಿ ಸಮಾಪ್ತಿಯಾಗುವ ಮೊದಲು ಸ್ಥಾಪನೆಯಾಗಬೇಕು. ಬ್ರಹ್ಮನ ಮುಖಾಂತರ ಸ್ಥಾಪನೆ, ಶಂಕರನ ಮುಖಾಂತರ ವಿನಾಶವೆಂದು ಹೇಳಲಾಗಿದೆ. ಮೊದಲು ಸ್ಥಾಪನೆ ಮಾಡುತ್ತಾರೆ. ಯಾವಾಗ ಸ್ಥಾಪನೆಯು ಪೂರ್ಣವಾಗಿ ಬಿಡುತ್ತದೆ ಆಗ ವಿನಾಶವಾಗುತ್ತದೆ ಅದಕ್ಕಾಗಿ ಈಗ ಸ್ಥಾಪನೆಯಾಗುತ್ತಿದೆ. ಇದು ಭಿನ್ನವಾದ ಮಾರ್ಗವಾಗಿದೆ, ಇದನ್ನು ಯಾರೂ ಅರಿತುಕೊಂಡಿಲ್ಲ. ಇದನ್ನು ಯಾರೂ ಸಹ ಕೇಳಿಲ್ಲವಾದ್ದರಿಂದ ಹೇಗೆ ಮತ್ತೆಲ್ಲ ಮಠ-ಪಂಥಗಳಿರುತ್ತವೆ ಹಾಗೆಯೇ ಈ ಬ್ರಹ್ಮಾಕುಮಾರ ಕುಮಾರಿಯರದಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಪಾಪ! ಅವರದೇನು ದೋಷವಿಲ್ಲ. ಅವರು ಕಲ್ಪದ ಮೊದಲೂ ಸಹ ಹೀಗೆಯೇ ವಿಘ್ನ ಹಾಕುತ್ತಿದ್ದರು. ಇದು ರುದ್ರ ಜ್ಞಾನ ಯಜ್ಞವಾಗಿದೆ, ಶಿವನಿಗೆ ರುದ್ರನೆಂದು ಹೇಳಲಾಗುತ್ತದೆ. ಅವರು ಯಾವ ರಾಜಯೋಗವನ್ನು ಕಲಿಸುತ್ತಾರೆ ಅದನ್ನೇ ಸಹಜ ರಾಜಯೋಗವೆಂದು ಹೇಳಲಾಗುತ್ತದೆ. ಪ್ರಾಚೀನ ಎನ್ನುವುದರ ಅರ್ಥವನ್ನೇ ತಿಳಿದುಕೊಂಡಿಲ್ಲ. ಇದು ಸಂಗಮಯುಗದ ಮಾತಾಗಿದೆ. ಪತಿತ ಮತ್ತು ಪಾವನದ ಸಂಗಮವಾಯಿತಲ್ಲವೆ. ಸತ್ಯಯುಗದ ಆದಿಯಲ್ಲಿ ಒಂದೇ ಧರ್ಮವಿರುತ್ತದೆ. ಮನುಷ್ಯರು ಅಸುರೀ ಸಂಪ್ರದಾಯದವರಾಗಿದ್ದಾರೆ ಆದರೆ ನೀವು ದೈವೀ ಸಂಪ್ರದಾಯದವರಾಗಿದ್ದೀರಿ. ಯುದ್ಧ ಮುಂತಾದವುಗಳ ಮಾತಿಲ್ಲ. ಇದೂ ಸಹ ಸುಳ್ಳಾಗಿದೆ. ನೀವು ಸಹೋದರ-ಸಹೋದರವಾಗಿದ್ದೀರಿ ಅಂದಮೇಲೆ ಹೇಗೆ ಜಗಳವಾಡುತ್ತಾರೆ!

ತಂದೆಯು ಬ್ರಹ್ಮಾರವರ ಮುಖಾಂತರ ಎಲ್ಲಾ ವೇದ ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ವಾಸ್ತವದಲ್ಲಿ ಮುಖ್ಯ ನಾಲ್ಕು ಧರ್ಮಗಳಿವೆ. ಅವುಗಳ ನಾಲ್ಕು ಧರ್ಮ ಶಾಸ್ತ್ರಗಳಿವೆ. ಅದರಲ್ಲಿ ಮೊದಲನೆಯದು ಆದಿ ಸನಾತನ ದೇವೀ ದೇವತಾ ಧರ್ಮವಾಗಿದೆ. ಇದರ ಶಾಸ್ತ್ರವು ಸರ್ವ ಶಾಸ್ತ್ರಮಯಿ ಶಿರೋಮಣಿ ಗೀತೆಯಾಗಿದೆ, ಇದೇ ಭಾರತದ ಮೊದಲ ಮುಖ್ಯ ಶಾಸ್ತ್ರವಾಗಿದೆ, ಇದರಿಂದಲೇ ಆದಿ ಸನಾತನ ದೇವೀ-ದೇವತಾ ಧರ್ಮ ಅಥವಾ ಸೂರ್ಯವಂಶೀ ಮತ್ತು ಚಂದ್ರವಂಶೀ ಧರ್ಮದ ಸ್ಥಾಪನೆಯಾಯಿತು ಅಂದಾಗ ಅವಶ್ಯವಾಗಿ ಸಂಗಮದಲ್ಲಿಯೇ ಆಗಿರಬಹುದು. ಇದನ್ನು ಕುಂಭ ಎಂತಲೂ ಹೇಳಲಾಗುತ್ತದೆ. ನಿಮಗೆ ತಿಳಿದಿದೆ ಇದು ಆತ್ಮ ಮತ್ತು ಪರಮಾತ್ಮನ ಮೇಳ ಕುಂಭ ಮೇಳವಾಗಿದೆ, ಇದು ಕಲ್ಯಾಣಕಾರಿಯಾಗಿದೆ. ಕಲಿಯುಗವು ಬದಲಾಗಿ ಸತ್ಯಯುಗವು ಆಗಲೇ ಬೇಕಾಗಿದೆ ಆದ್ದರಿಂದಲೇ ಈ ಸಮಯವನ್ನು ಕಲ್ಯಾಣಕಾರಿ ಸಮಯವೆಂದು ಹೇಳಲಾಗಿದೆ. ಸತ್ಯಯುಗದಿಂದ ತ್ರೇತಾಯುಗವಾಗುತ್ತದೆ, ಮತ್ತೆ ತ್ರೇತಾಯುಗದಿಂದ ದ್ವಾಪರವಾಗುತ್ತದೆ... ಹೀಗೆ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಅಕಲ್ಯಾಣವೇ ಆಗುತ್ತಾ ಹೋಗುವುದು. ಮತ್ತೆ ಅವಶ್ಯವಾಗಿ ಕಲ್ಯಾಣ ಮಾಡುವವರು ಬೇಕಾಗಿದೆ. ಯಾವಾಗ ಪೂರ್ಣ ಅಕಲ್ಯಾಣವಾಗುತ್ತದೆ ಆಗ ಎಲ್ಲರ ಕಲ್ಯಾಣ ಮಾಡಲು ತಂದೆಯು ಬರುತ್ತಾರೆ. ಇದನ್ನು ತಿಳಿಯಲು ಬುದ್ಧಿಯಿಂದ ಕೆಲಸ ತೆಗೆದು ಕೊಳ್ಳಬೇಕಾಗುತ್ತದೆ. ಅವಶ್ಯವಾಗಿ ಸಂಗಮದಲ್ಲಿ ತಂದೆಯು ಕಲ್ಯಾಣಾರ್ಥವಾಗಿ ಬರುತ್ತಾರೆ. ಅವರೇ ಸರ್ವರ ಸದ್ಗತಿದಾತ ತಂದೆಯಾಗಿದ್ದಾರೆ. ಸರ್ವರೂ ಸಹ ದ್ವಾಪರದಲ್ಲಿರುವುದಿಲ್ಲ. ಸತ್ಯಯುಗ-ತ್ರೇತಾದಲ್ಲಿಯೂ ಸಹ ಎಲ್ಲರೂ ಇರುವುದಿಲ್ಲ. ಯಾವಾಗ ಎಲ್ಲಾ ಆತ್ಮಗಳು ಕೆಳಗೆ ಬರುತ್ತಾರೆ ಆಗಲೇ ತಂದೆಯು ಬರುತ್ತಾರೆ. ಅಂದಮೇಲೆ ತಂದೆಯೇ ಬಂದು ಧೈರ್ಯ ನೀಡುತ್ತಾರೆ. ಬಾಬಾ ಈ ಹಳೆಯ ಪ್ರಪಂಚದಲ್ಲಿ ಬಹಳ ದುಃಖವಿದೆ, ಬೇಗ ಬಂದು ಕರೆದುಕೊಂಡು ಹೋಗಿ ಎಂದು ಮಕ್ಕಳು ಹೇಳುತ್ತಾರೆ. ಅದಕ್ಕೆ ತಂದೆಯು ಹೇಳುತ್ತಾರೆ - ಇಲ್ಲ ಮಕ್ಕಳೇ, ಈ ನಾಟಕವು ಮಾಡಲ್ಪಟ್ಟಿದೆ, ತಕ್ಷಣ ಭ್ರಷ್ಟಾಚಾರಿಗಳಿಂದ ಶ್ರೇಷ್ಟಾಚಾರಿಗಳಾಗುವುದಿಲ್ಲ. ನಿಶ್ಚಯ ಬುದ್ಧಿಯವರಾಗಿ ಪುರುಷಾರ್ಥ ಮಾಡಬೇಕಾಗಿದೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ ಎನ್ನುವುದಂತೂ ಸರಿಯಾಗಿದೆ. ತಂದೆಗೆ ಮಕ್ಕಳಾಗುವುದೆಂದರೆ ಆಸ್ತಿಗೆ ಹಕ್ಕುದಾರರಾಗುವುದು ಆದರೆ ಅಲ್ಲಿಯೂ ಸಹ ನಂಬರ್ವಾರ್ ಪದವಿಗಳಿರುತ್ತವೆಯಲ್ಲವೆ. ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕೋಸ್ಕರ ವಿದ್ಯೆಯಲ್ಲಿ ಪುರುಷಾರ್ಥ ಮಾಡಬೇಕಾಗುತ್ತದೆ. ಕೂಡಲೆ ಕರ್ಮಾತೀತ ಸ್ಥಿತಿಯಾಗುತ್ತದೆ, ಶರೀರವನ್ನು ಬಿಡಬೇಕಾಗುತ್ತದೆ ಎಂದಲ್ಲ. ಈ ರೀತಿಯ ನಿಯಮವಿಲ್ಲ. ಮಾಯೆಯೊಂದಿಗೆ ಬಹಳ ಚೆನ್ನಾಗಿ ಯುದ್ಧ ಮಾಡಬೇಕಾಗಿದೆ. ಯುದ್ಧವು 8-10-15 ವರ್ಷಗಳ ಕಾಲವೂ ನಡೆಯುತ್ತಿರುತ್ತದೆ ಎನ್ನುವುದು ನಿಮಗೆ ತಿಳಿದಿದೆ. ನಿಮ್ಮ ಯುದ್ಧವು ಮಾಯೆಯೊಂದಿಗಿದೆ. ಎಲ್ಲಿಯ ತನಕ ತಂದೆಯಿರುತ್ತಾರೆ ಅಲ್ಲಿಯ ತನಕ ನಿಮ್ಮ ಯುದ್ಧವು ನಡೆಯುತ್ತಲೇ ಇರುತ್ತದೆ. ಅಂತ್ಯದಲ್ಲಿ ಯಾರು ಎಷ್ಟು ಮಾಯೆಯನ್ನು ಜಯಿಸಿದಿರಿ! ಎಲ್ಲಿಯವರೆಗೆ ಕರ್ಮಾತೀತ ಸ್ಥಿತಿಯಲ್ಲಿ ತಲುಪಿದಿರಿ ಎನ್ನುವ ಫಲಿತಾಂಶವು ಬರುತ್ತದೆ! ತಂದೆಯು ತಿಳಿಸುತ್ತಾರೆ - ಮಕ್ಕಳೇ ಎಷ್ಟಾದರೂ ಸಾಧ್ಯವಾಗುತ್ತದೆ ತಮ್ಮ ಮನೆಯನ್ನು ನೆನಪು ಮಾಡಿ. ಅದು ಶಾಂತಿಧಾಮವಾಗಿದೆ. ಶಬ್ಧದಿಂದ ದೂರವಿರುವ ಸ್ಥಾನವಾಗಿದೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿ ಖುಷಿಯಿದೆ ಏಕೆಂದರೆ ಈ ನಾಟಕವು ಹೇಗೆ ಮಾಡಲ್ಪಟ್ಟಿದೆ ಮತ್ತು ಮೂರು ಲೋಕಗಳನ್ನೂ ಸಹ ನೀವು ಅರಿತುಕೊಂಡಿದ್ದೀರಿ, ಇದು ಮತ್ತ್ಯಾರ ಬುದ್ಧಿಯಲ್ಲಿಯೂ ಇಲ್ಲ. ಬ್ರಹ್ಮಾ ತಂದೆಯೂ ಸಹ ಬಹಳಷ್ಟು ಅನೇಕ ಶಾಸ್ತ್ರಗಳನ್ನು ಓದಿದ್ದರು ಆದರೆ ಈ ಮಾತುಗಳು ಅವರ ಬುದ್ಧಿಯಲ್ಲಿರಲಿಲ್ಲ. ಭಲೆ ಗೀತೆ ಮುಂತಾದವುಗಳನ್ನು ಓದುತ್ತಿದ್ದರು ಆದರೆ ನಾವು ದೂರದೇಶ ಪರಮಧಾಮದಲ್ಲಿ ಇರುವವರಾಗಿದ್ದೇವೆ ಎನ್ನುವುದು ಅವರ ಬುದ್ಧಿಯಲ್ಲಿರಲಿಲ್ಲ. ಈಗ ನಮ್ಮ ಬಾಬಾ ಯಾರನ್ನು ಪರಮಪಿತ ಪರಮಾತ್ಮನೆಂದು ಹೇಳುತ್ತಾರೆ, ಅವರು ಪರಮಧಾಮದಲ್ಲಿರುತ್ತಾರೆ ಎಂಬುದು ಅರ್ಥವಾಗಿದೆ. ಇವರನ್ನೇ ಪತಿತ-ಪಾವನ ಬನ್ನಿ ಎಂದು ಎಲ್ಲರೂ ನೆನಪು ಮಾಡುತ್ತಾರೆ. ಹಿಂತಿರುಗಿ ಯಾರೂ ಹೋಗಲು ಸಾಧ್ಯವಿಲ್ಲ. ಇದು ಮರೆತು-ಮರೆಯಿಸುವಂತಹ ಆಟವಾಗಿದೆಯಲ್ಲವೆ, ಅದರಲ್ಲಿ ಎಲ್ಲಿ ಹೋದರೂ ಬಾಗಿಲು ಮುಂದೆ ಬರುತ್ತದೆ, ಗುರಿಯತ್ತ ಹೋಗಲಾಗುವುದಿಲ್ಲ. ಸುಸ್ತಾದಾಗ ಯಾರಾದರೂ ಮಾರ್ಗ ತೋರಿಸಿ ಎಂದು ಘಂಟೆ ಹೊಡೆಯುತ್ತಾರೆ. ಇಲ್ಲಿಯೂ ಸಹ ಎಷ್ಠಾದರೂ ವೇದ-ಶಾಸ್ತ್ರಗಳನ್ನು ಓದಬಹುದು ತೀರ್ಥ ಯಾತ್ರೆಗಳಲ್ಲಿ ಹೋಗಬಹುದು, ನಾವು ಎಲ್ಲಿಗೆ ಹೋಗಬೇಕಾಗಿದೆ ಎನ್ನುವುದು ತಿಳಿಯುವುದಿಲ್ಲ. ಕೇವಲ ಜ್ಯೋತಿಯಲ್ಲಿ ಜ್ಯೋತಿಯು ಸಮಾವೇಶವಾಯಿತೆಂದು ಹೇಳಿ ಬಿಡುತ್ತಾರೆ. ತಂದೆಯು ಹೇಳುತ್ತಾರೆ - ಯಾರೂ ಸಹ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ನಾಟಕವು ಯಾವಾಗ ಪೂರ್ಣವಾಗುತ್ತದೆಯೊ ಆಗ ಎಲ್ಲಾ ಪಾತ್ರಧಾರಿಗಳು ಡ್ರಾಮಾ ಸ್ಟೇಜಿನ ಮೇಲೆ ಬಂದು ಬಿಡುತ್ತಾರೆ. ಇದು ನಿಯಮವಾಗಿದೆ. ಎಲ್ಲರೂ ಅದೇ ವಸ್ತ್ರದಲ್ಲಿ ನಿಂತು ಬಿಡುತ್ತಾರೆ. ಎಲ್ಲರಿಗೂ ಮುಖವನ್ನು ತೋರಿಸಿ ನಂತರ ವಸ್ತ್ರ, ಮುಂತಾದವುಗಳನ್ನು ಬದಲಾಯಿಸಿ ಮನೆಗೆ ಹೋಗುತ್ತಾರೆ. ಮತ್ತೆ ಅದೇ ಪಾತ್ರವನ್ನು ಪುನರಾವರ್ತನೆ ಮಾಡುತ್ತಾರೆ. ಅದೇರೀತಿ ಇದು ಬೇಹದ್ದಿನ ನಾಟಕವಾಗಿದೆ. ಈಗ ನೀವು ಆತ್ಮಾಭಿಮಾನಿಗಳಾಗುತ್ತೀರಿ, ನಾವು ಆತ್ಮ ಈ ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇವೆ ಎನ್ನುವುದನ್ನು ತಿಳಿಯುತ್ತೀರಿ. ಪುನರ್ಜನ್ಮವಂತೂ ಇರುತ್ತದೆಯಲ್ಲವೆ. 84 ಜನ್ಮಗಳಲ್ಲಿ 84 ಹೆಸರುಗಳನ್ನು ನಾವು ಧಾರಣೆ ಮಾಡಿದ್ದೇವೆ. ಈಗ ನಾಟಕವು ಪೂರ್ಣವಾಗಿದೆ, ಎಲ್ಲರದೂ ಜಡಜಡೀಭೂತ ಸ್ಥಿತಿಯಾಗಿದೆ. ಈಗ ಇದು ಪುನಃ ಪುನರಾವರ್ತನೆಯಾಗುತ್ತದೆ. ಪ್ರಪಂಚದ ಇತಿಹಾಸ-ಭೂಗೋಳವು ಮತ್ತೆ ಪುನರಾವರ್ತನೆಯಾಗುತ್ತದೆ. ಈಗ ನಮ್ಮ ಪಾತ್ರವು ಪೂರ್ಣವಾಗುತ್ತದೆ, ನಾವು ಪುನಃ ಹಿಂತಿರುಗಿ ಹೋಗುತ್ತೇವೆ ಎನ್ನುವುದನ್ನು ನೀವು ಅರಿತುಕೊಂಡಿದ್ದೀರಿ. ತಂದೆಯ ಆಜ್ಞೆಯೇನೂ ಕಡಿಮೆಯಿಲ್ಲ. ಪತಿತ-ಪಾವನ ತಂದೆಯು ಕುಳಿತು ತಿಳಿಸುತ್ತಾರೆ - ಮಕ್ಕಳೇ, ನಿಮಗೆ ತುಂಬಾ ಸಹಜವಾದ ಉಪಾಯವನ್ನು ತಿಳಿಸುತ್ತೇವೆ. ಏಳುತ್ತಾ, ಕುಳಿತುಕೊಳ್ಳುತ್ತಾ, ನಡೆಯುತ್ತಾ ನಾವು ಪಾತ್ರಧಾರಿ ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. 84 ಜನ್ಮಗಳು ಈಗ ಪೂರ್ಣವಾಗಿದೆ. ಈಗ ಹೂವುಗಳನ್ನಾಗಿ ಮಾಡಲು, ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ನಾವು ಪತಿತರನ್ನು ಪಾವನರನ್ನಾಗಿ ಮಾಡುತ್ತಿದ್ದಾರೆ. ನಾವು ಅನೇಕ ಬಾರಿ ಪತಿತರಿಂದ ಪಾವನರಾಗಿದ್ದೇವೆ ಮತ್ತು ಆಗುತ್ತೇವೆ. ಇತಿಹಾಸ-ಭೂಗೋಳ ಪುನರಾವರ್ತನೆಯಾಗುತ್ತದೆ. ಮೊಟ್ಟ ಮೊದಲು ದೇವೀ-ದೇವತಾ ಧರ್ಮದವರೇ ಬರುತ್ತಾರೆ. ಈಗ ಸಸಿಯನ್ನು ನೆಡಲಾಗುತ್ತಿದೆ. ನಾವು ಗುಪ್ತವಾಗಿದ್ದೇವೆ. ನಾವು ಸಮ್ಮೇಳನ, ಮುಂತಾದವುಗಳನ್ನೇನು ಮಾಡುತ್ತೇವೆ. ನಮ್ಮೊಳಗೆ ಜ್ಞಾನವಿದೆ ಆದ್ದರಿಂದ ಖುಷಿಯಾಗುತ್ತದೆ. ನಮ್ಮ ದೇವೀ-ದೇವತಾ ಧರ್ಮದ ಅಥವಾ ವೃಕ್ಷದ ಎಲೆಗಳೇನಿದೆ ಅವೆಲ್ಲವು ಧರ್ಮ ಭ್ರಷ್ಟ, ಕರ್ಮ ಭ್ರಷ್ಟವಾಗಿ ಬಿಟ್ಟಿದೆ. ಇದೇ ಭಾರತವಾಸಿಗಳು ಧರ್ಮ ಶ್ರೇಷ್ಟ, ಕರ್ಮ ಶ್ರೇಷ್ಟವಾಗಿದ್ದರು. ಅಲ್ಲಿ ಮಾಯೆಯು ಎಂದೂ ಪಾಪವನ್ನು ಮಾಡಿಸುತ್ತಿರಲಿಲ್ಲ. ಪುಣ್ಯಾತ್ಮರ ಪ್ರಪಂಚವಿತ್ತು. ಅಲ್ಲಿ ರಾವಣನಿರುವುದೇ ಇರುವುದಿಲ್ಲ ಆದ್ದರಿಂದ ಅಲ್ಲಿ ಕರ್ಮವು ಅಕರ್ಮವಾಗುತ್ತದೆ. ನಂತರ ರಾವಣ ರಾಜ್ಯದಲ್ಲಿ ಕರ್ಮವು ವಿಕರ್ಮವಾಗಲು ಪ್ರಾರಂಭವಾಗುತ್ತದೆ ಆದರೆ ಅಲ್ಲಿ ವಿಕರ್ಮವಾಗಲು ಸಾಧ್ಯವಿಲ್ಲ. ಭ್ರಷ್ಟಾಚಾರಿಗಳು ಯಾರೂ ಇರುವುದಿಲ್ಲ. ನೀವು ಮಕ್ಕಳು ಶ್ರೀಮತದನುಸಾರ ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೀರಿ. ಬಾಹುಬಲದಿಂದಂತೂ ಯಾರೂ ಸಹ ವಿಶ್ವದ ಮಾಲೀಕರಾಗಲು ಸಾಧ್ಯವಿಲ್ಲ. ನಿಮಗೆ ಗೊತ್ತಿದೆ ಇವರು ಒಂದುವೇಳೆ ಪರಸ್ಪರ ಸೇರಿದರೆ ವಿಶ್ವದ ಮಾಲೀಕರಾಗಬಲ್ಲರು ಆದರೆ ನಾಟಕದಲ್ಲಿ ಪಾತ್ರವೇ ಇಲ್ಲ. ಒಂದು ಉದಾಹರಣೆ ಇದೆ - ಎರಡು ಬೆಕ್ಕುಗಳು ಪರಸ್ಪರದಲ್ಲಿ ಜಗಳವಾಡುತ್ತಿದ್ದವು, ಅವೆರಡರ ಮಧ್ಯದಲ್ಲಿ ಬೆಣ್ಣೆಯನ್ನು ಕಪಿಯು ತಿಂದು ಹಾಕಿತು. ಕೃಷ್ಣನ ಬಾಯಿಯಲ್ಲಿ ಬೆಣ್ಣೆಯ ಸಾಕ್ಷಾತ್ಕಾರವನ್ನು ಮಾಡುತ್ತಾರೆ. ಇದು ಸೃಷ್ಟಿಯ ರಾಜ್ಯವೆಂಬ ಬೆಣ್ಣೆಯು ಸಿಗುತ್ತದೆ ಎಂದರ್ಥ. ಉಳಿದಂತೆ ಯುದ್ಧವು ಯಾದವರು ಮತ್ತು ಕೌರವರದಾಗಿದೆ. ಅದನ್ನು ನೋಡುತ್ತಿದ್ದೀರಿ, ಆ ಯುದ್ಧವು ಈಗ ನಡೆಯುತ್ತಿದೆ. ಇಂತಹ ಜಾಗದಲ್ಲಿ ಇಷ್ಟು ದೊಡ್ಡ ಹಿಂಸೆ ಆಯಿತು ಎನ್ನುವುದನ್ನು ವಾರ್ತಾ ಪತ್ರಿಕೆಯಲ್ಲಿ ಓದಿದರೆಂದರೆ ಯಾರನ್ನಾದರೂ ಸಾಯಿಸಿ ಬಿಡುತ್ತಾರೆ. ಭಾರತದಲ್ಲಿ ಮೊದಲು ಒಂದೇ ಧರ್ಮವಿತ್ತು ನಂತರ ಅನ್ಯ ಧರ್ಮಗಳ ರಾಜ್ಯವು ಎಲ್ಲಿಂದ ಬಂದಿತು? ಕ್ರಿಶ್ಚಯನ್ನರು ಶಕ್ತಿಶಾಲಿಯಾಗಿದ್ದರು ಆಗ ಅವರೇ ರಾಜ್ಯ ಮಾಡಿದರು. ಈಗ ವಾಸ್ತವದಲ್ಲಿ ಇಡೀ ಪ್ರಪಂಚದಲ್ಲಿ ರಾವಣನು ಅಧಿಕಾರ ಮಾಡುತ್ತಿದ್ದಾನೆ. ಇದು ಗುಪ್ತ ಮಾತಾಗಿದೆ. ಶಾಸ್ತ್ರಗಳಲ್ಲಿ ಈ ಮಾತಿಲ್ಲ. ತಂದೆಯು ತಿಳಿಸುತ್ತಾರೆ- ಈ ರಾವಣನು ನಿಮ್ಮ ಅರ್ಧಕಲ್ಪದ ಶತ್ರು ಆಗಿದ್ದಾನೆ, ಇವನ ಮುಖಾಂತರ ನೀವು ಆದಿ-ಮಧ್ಯ-ಅಂತ್ಯ ದುಃಖವನ್ನು ಪಡೆಯುತ್ತೀರಿ ಆದ್ದರಿಂದ ಸನ್ಯಾಸಿಗಳೂ ಸಹ ಹೇಳುತ್ತಾರೆ ಇದು ಕಾಗವಿಷ್ಟ ಸಮಾನ ಸುಖವಾಗಿದೆ. ಅವರಿಗೆ ಸ್ವರ್ಗದಲ್ಲಿ ಸದಾ ಸುಖವೇ ಸುಖವಿರುತ್ತದೆ ಎನ್ನುವುದೇನಾದರೂ ಗೊತ್ತಿದೆಯೇ! ಭಾರತವಾಸಿಗಳಿಗಂತೂ ತಿಳಿದಿದೆ ಆದ್ದರಿಂದ ಯಾರು ಶರೀರ ಬಿಡುತ್ತಾರೆ ಅವರನ್ನು ಸ್ವರ್ಗಕ್ಕೆ ಹೋದರೆಂದು ಹೇಳುತ್ತಾರೆ. ಸ್ವರ್ಗದ ಮಹಿವೆ ಬಹಳಷ್ಟಿದೆಯೆಂದರೆ ಅವಶ್ಯವಾಗಿ ಇದು ಆಟವಾಗಿದೆ ಆದರೆ ನೀವು ನರಕವಾಸಿಗಳಾಗಿದ್ದೀರಿ ಎಂದು ಹೇಳಿದರೆ ಬೇಸರವಾಗುತ್ತಾರೆ. ಇದು ವಿಚಿತ್ರ ಮಾತಾಗಿದೆ. ಸ್ವರ್ಗವಾಸಿಯಾದರೆಂದು ಬಾಯಿಂದ ಹೇಳುತ್ತಾರೆಂದರೆ ಅವಶ್ಯವಾಗಿ ನರಕದಿಂದ ಹೋದರು ಎಂದರ್ಥವಾಯಿತಲ್ಲವೇ. ನಂತರ ನೀವು ಅವರನ್ನು ಕರೆಸಿ ನರಕದ ಪದಾರ್ಥಗಳನ್ನೇಕೆ ತಿನ್ನಿಸುತ್ತೀರಿ? ಸ್ವರ್ಗದಲ್ಲಂತೂ ಅವರಿಗೆ ಬಹಳ ಒಳ್ಳೆಯ ವೈಭವ ಸಿಕ್ಕಿರಬಹುದಲ್ಲವೇ! ಇದರರ್ಥ ನಿಮಗೆ ನಿಶ್ಚಯವಿಲ್ಲವೆಂದಾಗಿದೆ. ಅಲ್ಲಿ ಏನೇನಿದೆ ಅದೆಲ್ಲವನ್ನು ಮಕ್ಕಳು ನೋಡಿದ್ದೀರಿ. ನರಕದಲ್ಲಿ ನೋಡಿ! ಏನೇನು ಮಾಡುತ್ತಿರುತ್ತಾರೆ, ಮಕ್ಕಳು ತಂದೆಯನ್ನು ಸಾಯಿಸುವುದರಲ್ಲಿಯೂ ಸಹ ನಿಧಾನಿಸುವುದಿಲ್ಲ. ಸ್ತ್ರೀಗೆ ಯಾರ ಜೊತೆಯಾದರೂ ಮನಸ್ಸಾಯಿತೆಂದರೆ ಪತಿಯನ್ನೂ ಸಹ ಸಾಯಿಸಿ ಬಿಡುತ್ತಾರೆ. ಭಾರತದಲ್ಲಿ ಒಂದು ಗೀತೆಯೂ ಸಹ ಮಾಡಲ್ಪಟ್ಟಿದೆ - ಒಂದು ಕಡೆ ಹೇಳುತ್ತಾರೆ ಏನಾಯಿತು ಇಂದಿನ ಮಾನವನಿಗೆ... ಮತ್ತೆ ಹೇಳುತ್ತಾರೆ ನಮ್ಮ ಭಾರತವು ಎಲ್ಲದಕ್ಕಿಂತ ಒಳ್ಳೆಯ ಚಿನ್ನದ ಸಮಾನ ದೇಶವಾಗಿದೆ. ಅರೇ! ಭಾರತವು ಎಲ್ಲದಕ್ಕಿಂತ ಚೆನ್ನಾಗಿತ್ತು, ಈಗ ಆ ರೀತಿ ಎಲ್ಲಿದೆ? ಈಗಂತೂ ಕಂಗಾಲಾಗಿದೆ, ಯಾವುದೇ ರಕ್ಷಣೆಯಿಲ್ಲ. ನಾವೂ ಸಹ ಆಸುರೀ ಸಂಪ್ರದಾಯದವರಾಗಿದ್ದೆವು. ಈಗ ತಂದೆಯು ನಮ್ಮನ್ನು ಈಶ್ವರೀಯ ಸಂಪ್ರದಾಯದವರನ್ನಾಗಿ ಮಾಡುವಂತಹ ಪುರುಷಾರ್ಥವನ್ನು ಮಾಡಿಸುತ್ತಿದ್ದಾರೆ. ಇದೇನೂ ಹೊಸ ಮಾತಲ್ಲ. ಕಲ್ಪ-ಕಲ್ಪ, ಕಲ್ಪದ ಸಂಗಮದಲ್ಲಿ ನಾವು ನಮ್ಮ ಆಸ್ತಿಯನ್ನು ಪುನಃ ತೆಗೆದುಕೊಳ್ಳುತ್ತೇವೆ. ತಂದೆಯು ಆಸ್ತಿಯನ್ನು ಕೊಡಲು ಬರುತ್ತಾರೆ ಆದರೆ ಮಾಯೆಯು ಸಮರ್ಥವಾಗಿರುವ ಕಾರಣ ತನ್ನ ಶಾಪದ ಆಸ್ತಿಯನ್ನು ಕೊಡುತ್ತದೆ. ತಂದೆಯು ಮಾಯೆಗೆ ಹೇಳುತ್ತಾರೆ - ನೀನು ಎಷ್ಟು ಶಕ್ತಿಶಾಲಿ ಆಗಿದ್ದೀಯಾ, ಒಳ್ಳೊಳ್ಳೆಯವರನ್ನೂ ಸಹ ಬೀಳಿಸಿ ಬಿಡುತ್ತೀಯಾ! ಆ ಸೇನೆಯಲ್ಲಿ ಸಾಯುವ, ಸಾಯಿಸುವ ವಿಚಾರವಿರುವುದಿಲ್ಲ, ಪೆಟ್ಟು ತಿಂದು ಮತ್ತೆ ಮೈದಾನದಲ್ಲಿ ಬಂದು ಬಿಡುತ್ತಾರೆ, ಅವರ ವ್ಯಾಪಾರವೇ ಅದಾಗಿರುತ್ತದೆ, ಕರ್ತವ್ಯವಾಗಿರುತ್ತದೆ. ಮತ್ತೆ ಅವರಿಗೆ ಬಹುಮಾನವೂ ಸಿಗುತ್ತದೆ. ನೀವು ತಂದೆಯಿಂದ ಶಕ್ತಿಯನ್ನು ಪಡೆದು ಮಾಯೆಯ ಮೇಲೆ ವಿಜಯ ಪಡೆಯುತ್ತೀರಿ. ತಂದೆಯು ಬ್ಯಾರಿಸ್ಟರ್ ಆಗಿದ್ದಾರೆ. ಅವರು ಮಾಯೆಯಿಂದ ನಿಮ್ಮನ್ನು ಮುಕ್ತಗೊಳಿಸುತ್ತಾರೆ. ನೀವು ಮತ್ತೆ ಶಿವಶಕ್ತಿ ಸೈನಿಕರಾಗಿದ್ದೀರಿ, ವಂದೇ ಮಾತರಂ ಎಂದು ಹೇಳಿ ಮಾತೆಯರನ್ನು ಉತ್ತಮ ಸ್ಥಾನದಲ್ಲಿ ಇಟ್ಟಿದ್ದಾರೆ. ವಂದೇ ಮಾತರಂ ಎಂದು ಯಾರು ಹೇಳಿದರು? ತಂದೆಯು ಹೇಳಿದರು ಏಕೆಂದರೆ ನೀವು ತಂದೆಯ ಮೇಲೆ ಬಲಿಹಾರಿಯಾಗುತ್ತೀರಿ. ತಂದೆಯು ಖುಷಿ ಪಡುತ್ತಾರೆ. ಹನುಮಂತನ ಉದಾಹರಣೆಯಿದೆಯಲ್ಲವೇ. ಅವರನ್ನು ರಾವಣನು ಅಲುಗಾಡಿಸಲು ಸಾಧ್ಯವಿಲ್ಲ. ಇದು ಅಂತಿಮ ಸಮಯದ ಮಾತಾಗಿದೆ. ಅಂತ್ಯದಲ್ಲಿ ಈ ಸ್ಥಿತಿಯಾಗಬೇಕಾಗಿದೆ. ಯಾವಾಗ ವಿನಾಶವಾಗುತ್ತಿರುತ್ತದೆಯೋ ಆ ಸಮಯದಲ್ಲಿ ನಿಮಗೆ ಬಹಳ ಖುಷಿಯಿರುತ್ತದೆ. ಈ ಧರಣಿಯು ಪವಿತ್ರವಾಗದೆ ದೇವತೆಗಳು ಇಲ್ಲಿ ಬರಲು ಸಾಧ್ಯವಿಲ್ಲ. ಈ ಬಿದುರಿನ ಕಾಡಿಗೆ ಬೆಂಕಿ ಬೀಳಲಿದೆ. ಎಲ್ಲಾ ಆತ್ಮಗಳು ತಮ್ಮ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿ, ಸೊಳ್ಳೆಗಳ ತರಹ ಮಧುರ ಮನೆಗೆ ಹಿಂತಿರುಗಿ ಹೋಗಬೇಕಾಗಿದೆ. ಎಷ್ಟು ಕೋಟ್ಯಾಂತರ ಸೊಳ್ಳೆಗಳು ಸಾಯುತ್ತವೆ ಆದ್ದರಿಂದಲೇ ಗಾಯನ ಮಾಡಲಾಗುತ್ತದೆ ರಾಮನೂ ಹೋದ, ರಾವಣನೂ ಹೋದ...... ಹಿಂತಿರುಗಿ ಹೋಗಲೇಬೇಕಲ್ಲವೇ ನಂತರ ಹೊಸ ಪ್ರಪಂಚದಲ್ಲಿ ಬರುತ್ತೀರಿ. ಅಲ್ಲಿ ಕೆಲವರಷ್ಟೇ ಇರುತ್ತೀರಿ. ಇದು ತಿಳಿಯುವ ಹಾಗೂ ನಿಶ್ಚಯ ಮಾಡಿಕೊಳ್ಳುವಂತಹ ಮಾತಾಗಿದೆ. ಈ ಜ್ಞಾನವನ್ನು ತಂದೆಯೇ ಕೊಡಲು ಸಾಧ್ಯ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನಡೆಯುತ್ತಾ, ಏಳುತ್ತಾ-ಕುಳಿತುಕೊಳ್ಳುತ್ತಾ ತಮ್ಮನ್ನು ಪಾತ್ರಧಾರಿ ಎಂದು ತಿಳಿಯಬೇಕಾಗಿದೆ, ನಾವು 84 ಜನ್ಮಗಳ ಪಾತ್ರವನ್ನು ಪೂರ್ಣ ಮಾಡಿದೆವು, ಈಗ ಮನೆಗೆ ಹೋಗಬೇಕಾಗಿದೆ ಎನ್ನುವುದು ಮನಸ್ಸಿನಲ್ಲಿರಬೇಕು. ಆತ್ಮಾಭಿಮಾನಿಯಾಗಿ ಇರಬೇಕಾಗಿದೆ.

2. ನಿಶ್ಚಯ ಬುದ್ಧಿಯವರಾಗಿ ಮುಳ್ಳುಗಳಿಂದ ಹೂವಾಗುವಂತಹ ಪುರುಷಾರ್ಥ ಮಾಡಬೇಕಾಗಿದೆ. ಮಾಯೆಯೊಂದಿಗೆ ಯುದ್ಧ ಮಾಡಿ ವಿಜಯಿಯಾಗಿ ಕರ್ಮಾತೀತರಾಗಬೇಕಾಗಿದೆ. ಎಷ್ಟು ಸಾಧ್ಯವಿದೆ ತಮ್ಮ ಮನೆಯನ್ನು ನೆನಪು ಮಾಡಬೇಕಾಗಿದೆ.

ವರದಾನ:
ತಮ್ಮ ಹಗುರತೆಯ ಸ್ಥಿತಿಯ ಮೂಲಕ ಪ್ರತಿಯೊಂದು ಕಾರ್ಯವನ್ನು ಸಹಜಗೊಳಿಸುವಂತಹ ತಂದೆಯ ಸಮಾನ ಭಿನ್ನ-ಪ್ರಿಯ ಭವ.

ಮನಸ್ಸು-ಬುದ್ಧಿ ಹಾಗೂ ಸಂಸ್ಕಾರವು ಆತ್ಮದ ಸೂಕ್ಷ್ಮ ಶಕ್ತಿಗಳೇನಿವೆಯೋ, ಆ ಮೂರರಲ್ಲಿಯೂ ಸಹಜತೆ/ಹಗುರತೆಯ ಅನುಭವ ಮಾಡುವುದೇ ತಂದೆಯ ಸಮಾನ ಭಿನ್ನ-ಪ್ರಿಯರಾಗುವುದು ಆಗಿದೆ ಏಕೆಂದರೆ ಸಮಯದನುಸಾರ ಬಾಹ್ಯ ಪ್ರಪಂಚದ ತಮೋಪ್ರಧಾನ ವಾತಾವರಣ, ಮನುಷ್ಯಾತ್ಮರ ವೃತ್ತಿಗಳಲ್ಲಿ ಹೊರೆಯ ಅನುಭವವಾಗುತ್ತಿದೆ, ಬಾಹ್ಯ ವಾತಾವರಣದಲ್ಲೆಷ್ಟು ಹೊರೆಯಾಗುತ್ತಿದೆಯೋ ಅಷ್ಟು ತಾವು ಮಕ್ಕಳ ಸಂಕಲ್ಪ, ಕರ್ಮ, ಸಂಬಂಧದಲ್ಲಿ ಹಗುರರಾಗುತ್ತಾ ಸಾಗುತ್ತೀರಿ ಹಾಗೂ ಹಗುರತೆಯ ಕಾರಣದಿಂದ ಸರ್ವ ಕಾರ್ಯಗಳು ಸಹಜವಾಗಿ ನಡೆಯುತ್ತಿರುತ್ತದೆ. ವ್ಯವಹಾರದ ಪ್ರಭಾವವು ತಮ್ಮ ಮೇಲೆ ಬೀರುವುದಿಲ್ಲ - ಇದೇ ಸ್ಥಿತಿಯು ತಂದೆಯ ಸಮಾನ ಸ್ಥಿತಿಯಾಗಿದೆ.

ಸ್ಲೋಗನ್:
ವಾಹ್ ನಾನಾತ್ಮವೇ ಇದೇ ಅಲೌಕಿಕ ನಶೆಯಲ್ಲಿ ಇರುತ್ತೀರೆಂದರೆ ಮನಸ್ಸು ಹಾಗೂ ತನುವಿನಿಂದ ಸ್ವಾಭಾವಿಕ ನೃತ್ಯವಾಗುತ್ತಾ ಇರುವುದು.