06.09.20    Avyakt Bapdada     Kannada Murli     16.03.86     Om Shanti     Madhuban


ಆತ್ಮಿಕ ಡ್ರಿಲ್


ಬಾಪ್ದಾದಾರವರು ಎಲ್ಲಾ ಮಕ್ಕಳಲ್ಲಿನ ಮಧುರ ಶಾಂತಿಯ ಸ್ಥಿತಿಯನ್ನು ನೋಡುತ್ತಿದ್ದಾರೆ. ಒಂದು ಸೆಕೆಂಡಿನಲ್ಲಿ ಶಾಂತಿಯ ಸ್ಥಿತಿಯಲ್ಲಿ ಸ್ಥಿತರಾಗುವ ಅಭ್ಯಾಸವು ಎಲ್ಲಿಯವರೆಗೆ ಆಗಿದೆ? ಈ ಸ್ಥಿತಿಯಲ್ಲಿ ಯಾವಾಗ ಬೇಕು ಆಗ ಸ್ಥಿತರಾಗಬಲ್ಲಿರಾ ಅಥವಾ ಸಮಯ ಹಿಡಿಸುತ್ತದೆಯೇ? ಏಕೆಂದರೆ ಅನಾದಿ ಸ್ವರೂಪವು ಮಧುರ ಶಾಂತಿಯಾಗಿದೆ. ಆದಿ ಸ್ವರೂಪವು ಶಬ್ದದಲ್ಲಿ (ಸಾಕಾರ) ಬರುವುದಾಗಿದೆ, ಆದರೆ ಅನಾದಿ ಅವಿನಾಶಿ ಸಂಸ್ಕಾರವು ಶಾಂತಿಯದಾಗಿದೆ. ಅಂದಮೇಲೆ ತಮ್ಮ ಅನಾದಿ ಸಂಸ್ಕಾರ, ಅನಾದಿ ಸ್ವರೂಪವನ್ನು, ಅನಾದಿ ಸ್ವಭಾವವನ್ನು ತಿಳಿದುಕೊಂಡಿದ್ದರೂ, ಅದನ್ನು ಯಾವಾಗ ಬೇಕು ಆಗ ಅದೇ ಸ್ವರೂಪದಲ್ಲಿ ಸ್ಥಿತರಾಗಬಲ್ಲಿರಾ? 84 ಜನ್ಮಗಳೂ ಶಬ್ದದಲ್ಲಿ ಬರುವುದಾಗಿದೆ. ಆದ್ದರಿಂದ ಸದಾ ಅಭ್ಯಾಸವು ಶಬ್ದದಲ್ಲಿ ಬರುವುದಾಗಿದೆ. ಆದರೆ ಅನಾದಿ ಸ್ವರೂಪ ಹಾಗೂ ಈ ಸಮಯದಲ್ಲಿ ಚಕ್ರವು ಪೂರ್ಣವಾಗುವ ಕಾರಣದಿಂದ, ಪುನಃ ಹಿಂತಿರುಗಿ ಶಾಂತಿಧಾಮಕ್ಕೆ ಹೋಗಬೇಕಾಗಿದೆ. ಈಗ ಮನೆಗೆ ಹೋಗುವ ಸಮಯವೂ ಸಮೀಪವಿದೆ. ಈಗ ಆದಿ-ಮಧ್ಯ-ಅಂತ್ಯದ ಮೂರೂ ಕಾಲಗಳ ಪಾತ್ರವನ್ನು ಸಮಾಪ್ತಿಗೊಳಿಸಿ, ತಮ್ಮ ಅನಾದಿ ಸ್ವರೂಪ, ಅನಾದಿ ಸ್ಥಿತಿಯಲ್ಲಿ ಸ್ಥಿತರಾಗುವ ಸಮಯವಾಗಿದೆ. ಆದ್ದರಿಂದ ಇಂತಹ ಸಮಯದಲ್ಲಿ ಇದೇ ಅಭ್ಯಾಸದ ಅವಶ್ಯಕತೆಯೂ ಹೆಚ್ಚಿನದಾಗಿ ಇರುತ್ತದೆ. ತಾವು ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿರಿ - ಕರ್ಮೇಂದ್ರಿಯಾಜೀತನು ಆಗಿದ್ದೇನೆಯೇ? ಶಬ್ದದಲ್ಲಿ ಬರಬಾರದೆಂದು ಬಯಸುತ್ತೀರೆಂದರೆ, ಈ ಮುಖದ ಶಬ್ದವು ತನ್ನ ಕಡೆಗೆ ಸೆಳೆಯುವುದಿಲ್ಲವೆ! ಇದನ್ನೇ ಆತ್ಮಿಕ ಡ್ರಿಲ್ ಎಂದು ಹೇಳಲಾಗುತ್ತದೆ.

ವರ್ತಮಾನ ಸಮಯದಲ್ಲಿ ಶರೀರದ ಸರ್ವರೋಗಗಳ ಚಿಕಿತ್ಸೆಯಾಗಿ ವ್ಯಾಯಾಮವನ್ನು ಕಲಿಸಿಕೊಡುತ್ತಾರೆ, ಹಾಗೆಯೇ ಈ ಸಮಯದಲಿ ಆತ್ಮವನ್ನು ಶಕ್ತಿಶಾಲಿಗೊಳಿಸುವುದಕ್ಕಾಗಿ ಈ ಆತ್ಮಿಕ ವ್ಯಾಯಾಮದ ಅಭ್ಯಾಸವು ಇರಬೇಕಾಗಿದೆ. ನಾಲ್ಕೂ ಕಡೆಗಳಲ್ಲಿ ಎಂತಹ ವಾತಾವರಣವೇ ಇರಲಿ, ಏರುಪೇರುಗಳೇ ಇರಲಿ, ಆದರೆ ಶಬ್ದದಲ್ಲಿರುತ್ತಿದ್ದರೂ ಶಬ್ದದಿಂದ ದೂರವಿರುವ ಸ್ಥಿತಿಯ ಅಭ್ಯಾಸವೀಗ ಬಹಳ ಕಾಲದ್ದಿರಬೇಕು. ಶಾಂತಿಯ ವಾತಾವರಣದಲ್ಲಿ ಶಾಂತಿಯ ಸ್ಥಿತಿಯನ್ನು ಮಾಡಿಕೊಳ್ಳುವುದೇನೂ ದೊಡ್ಡ ಮಾತಲ್ಲ. ಅಶಾಂತಿಯ ಮಧ್ಯದಲ್ಲಿಯೂ ತಾವು ಶಾಂತರಾಗಿರುವ ಅಭ್ಯಾಸವಿರಬೇಕಾಗಿದೆ. ಇಂತಹ ಅಭ್ಯಾಸವನ್ನು ತಿಳಿದಿದ್ದೀರಾ? ಭಲೆ ತಮ್ಮ ಬಲಹೀನತೆಗಳ ಏರುಪೇರುಗಳಿರಲಿ, ಸಂಸ್ಕಾರಗಳ ವ್ಯರ್ಥ ಸಂಕಲ್ಪಗಳ ಏರುಪೇರಗಳಿರಲಿ, ಇಂತಹ ಏರುಪೇರಿನ ಸಮಯದಲ್ಲಿಯೂ ಸ್ವಯಂನ್ನು ಅಚಲವನ್ನಾಗಿ ಮಾಡಿಕೊಳ್ಳಬಲ್ಲಿರಾ ಅಥವಾ ಸಮಯ ಹಿಡಿಸುತ್ತದೆಯೇ? ಏಕೆಂದರೆ ಸಮಯ ಹಿಡಿಸುವುದೂ ಸಹ ಕೆಲವೊಮ್ಮೆ ಮೋಸ ಮಾಡಿಬಿಡಬಹುದು. ಸಮಾಪ್ತಿಯ ಸಮಯದಲ್ಲಿ ಹೆಚ್ಚು ಸಮಯ ಸಿಗುವುದಿಲ್ಲ. ಅಂತಿಮ ಫಲಿತಾಂಶದ ಪರೀಕ್ಷೆಯು ಕೆಲ ಕ್ಷಣಗಳು ಮತ್ತು ನಿಮಿಷಗಳಲ್ಲಿಯೇ ಆಗುವುದಾಗಿರುತ್ತದೆ. ಆದರೆ ನಾಲ್ಕೂ ಕಡೆಯ ಏರುಪೇರಿನ ವಾತಾವರಣದಲ್ಲಿ ಅಚಲರಾಗಿರುವುದಲ್ಲಿಯೇ ಅಂಕಗಳು ಸಿಗುತ್ತದೆ. ಒಂದುವೇಳೆ ಬಹಳಕಾಲದ ಏರುಪೇರಿನ ಸ್ಥಿತಿಯಿಂದ ಅಚಲರಾಗುವುದರಲ್ಲಿ ಸಮಯ ತೆಗೆದುಕೊಳ್ಳುವ ಅಭ್ಯಾಸವಿರುತ್ತದೆಯೆಂದರೆ, ಸಮಾಪ್ತಿಯ ಸಮಯದಲ್ಲಿ ಫಲಿತಾಂಶವೇನಾಗುತ್ತದೆ? ಆದ್ದರಿಂದ ಈ ಆತ್ಮಿಕ ವ್ಯಾಯಾಮದ ಅಭ್ಯಾಸವನ್ನು ಮಾಡಿರಿ. ಅದರಿಂದ ಮನಸ್ಸನ್ನು ಎಲ್ಲಿ ಮತ್ತು ಎಷ್ಟು ಸಮಯ ಸ್ಥಿತ ಮಾಡಬೇಕೆಂದು ಬಯಸುತ್ತೀರಿ, ಅಷ್ಟೂಸಮಯ ಅಲ್ಲಿಯೇ ಸ್ಥಿತ ಮಾಡಬಹುದು. ಅಂತಿಮ ಪರೀಕ್ಷೆಯು ಬಹಳ ಸುಲಭವಾಗಿಯೇ ಇರುತ್ತದೆ. ಮತ್ತು ಈ ಪರೀಕ್ಷೆಯು ಬರುವುದಿದೆ ಎಂದು ಮುಂಚಿತವಾಗಿಯೇ ತಿಳಿಸಿ ಬಿಡುತ್ತೇವೆ. ಆದರೆ ಅದರ ಅಂಕಗಳು ಬಹಳ ಸ್ವಲ್ಪ ಸಮಯದಲ್ಲಿಯೇ ಸಿಗುತ್ತದೆ. ಆಗ ಸ್ಥಿತಿಯೂ ಸಹ ಶಕ್ತಿಶಾಲಿಯಾಗಿರಲಿ.

ದೇಹ, ದೇಹದ ಸಂಬಂಧ, ದೇಹದ ಸಂಸ್ಕಾರ, ವ್ಯಕ್ತಿ ಅಥವಾ ವೈಭವ, ವೈಬ್ರೇಷನ್, ವಾಯುಮಂಡಲ, ಎಲ್ಲವೂ ಇದ್ದರೂ ಆಕರ್ಷಣೆ ಮಾಡಬಾರದು. ಇದನ್ನೇ ನಷ್ಟಮೋಹ ಸಮರ್ಥ ಸ್ವರೂಪ ಎಂದು ಹೇಳಲಾಗುತ್ತದೆ. ಹಾಗಾದರೆ ಇಂತಹ ಅಭ್ಯಾಸವಿದೆಯೇ? ಜನರು ಚೀರಾಡುತ್ತಿರಲಿ ಮತ್ತು ತಾವು ಅಚಲರಾಗಿ ಇರಿ. ಪ್ರಕೃತಿಯೂ, ಮಾಯೆಯೂ ಸಹ ಅಂತಿಮ ತಮ್ಮ ಕಡೆಗೆ ಸೆಳೆಯಲು ಎಷ್ಟೇ ಯುಕ್ತಿಯನ್ನು ಮಾಡಲಿ ಆದರೆ ತಾವಂತು ಭಿನ್ನ ಮತ್ತು ತಂದೆಯ ಪ್ರಿಯರಾಗಿರುವ ಸ್ಥಿತಿಯಲ್ಲಿ ಲವಲೀನರಾಗಿ ಇರಿ, ಇದಕ್ಕೇ ಹೇಳಲಾಗುತ್ತದೆ - ಎಲ್ಲವನ್ನೂ ನೋಡುತ್ತಿದ್ದರೂ ನೋಡದಂತಿರುವುದು, ಕೇಳುತ್ತಿದ್ದರೂ ಕೇಳದಿರುವುದು.... ಇಂತಹ ಅಭ್ಯಾಸವಿರಲಿ. ಇದಕ್ಕೇ ಮಧುರ ಶಾಂತಿ ಸ್ವರೂಪದ ಸ್ಥಿತಿಯೆಂದು ಹೇಳಲಾಗುತ್ತದೆ. ಆದರೂ ಬಾಪ್ದಾದಾರವರೂ ಸಮಯವನ್ನು ಕೊಡುತ್ತಿದ್ದಾರೆ. ಒಂದುವೇಳೆ ಏನೇ ಕೊರತೆಯಿದ್ದರೂ, ಅದನ್ನು ಈಗಲೂ ತುಂಬಿಕೊಳ್ಳಬಹುದು. ಏಕೆಂದರೆ ಬಹಳ ಕಾಲದ ಲೆಕ್ಕವನ್ನು ತಿಳಿಸಿದೆವು. ಅಂದಾಗ ಈಗ ಸ್ವಲ್ಪ ಅವಕಾಶವಿದೆ ಆದ್ದರಿಂದ ಈ ಅಭ್ಯಾಸದ ಕಡೆ ಸಂಪೂರ್ಣವಾಗಿ ಗಮನವನ್ನಿಡಿ. ಪಾಸ್-ವಿತ್-ಆನರ್ ಆಗುವುದು ಅಥವಾ ಪಾಸ್ ಆಗುವುದರ ಆಧಾರವು ಇದೇ ಅಭ್ಯಾಸದ ಮೇಲಿದೆ. ಇಂತಹ ಅಭ್ಯಾಸವಿದೆಯೇ? ಸಮಯದ ಗಂಟೆಯು ಮೊಳಗಿದಾಗ ತಯಾರಾಗುವಿರಾ ಅಥವಾ ಈಗ ತಯಾರಾಗಬೇಕೆಂದು ಯೋಚಿಸುತ್ತೀರಾ? ಇದೇ ಅಭ್ಯಾಸದ ಕಾರಣದಿಂದ ವಿಶೇಷ ಅಷ್ಟರತ್ನಗಳ ಮಾಲೆಯು ಚಿಕ್ಕದಾಯಿತು. ಇದು ಬಹಳ ಸ್ವಲ್ಪ ಸಮಯದ್ದಾಗಿದೆ. ಹೇಗೆ ತಾವುಗಳು ಸೆಕೆಂಡಿನಲ್ಲಿ ಮುಕ್ತಿ ಅಥವಾ ಜೀವನ್ಮುಕ್ತಿಯ ಆಸ್ತಿಯನ್ನು ತೆಗೆದುಕೊಳ್ಳುವ ಅಧಿಕಾರವು ಎಲ್ಲರಿಗೂ ಇದೆ ಎಂದು ಹೇಳುತ್ತೀರಲ್ಲವೆ. ಹಾಗಾದರೆ ಸಮಾಪ್ತಿಯ ಸಮಯದಲ್ಲಿಯೂ ಅಂಕಗಳು ಸ್ವಲ್ಪ ಸಮಯ ಸಿಗುವ ಮಾತಾಗಿದೆ. ಆದರೆ ಆಗ ಸ್ವಲ್ಪವೂ ಏರುಪೇರಿರಬಾರದು. ಬಿಂದು ಎಂದು ಹೇಳಲಾಯಿತು ಮತ್ತು ಬಿಂದು ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಬೇಕು ಅಷ್ಟೇ. ಬಿಂದುವು ಅಲುಗಾಡುವುದಿಲ್ಲ, ಹೀಗೂ ಅಲ್ಲ - ಆ ಸಮಯದಲ್ಲಿ ನಾನು ಆತ್ಮನಾಗಿದ್ದೇನೆ..... ನಾನು ಆತ್ಮನಾಗಿದ್ದೇನೆ..... ಈ ಅಭ್ಯಾಸ ಮಾಡುವುದನ್ನು ಪ್ರಾರಂಭಿಸಿ ಬಿಡುತ್ತೀರಿ. ಅಲ್ಲ. ಇದು ಆ ಸಮಯದಲ್ಲಿ ನಡೆಯುವುದಿಲ್ಲ ಏಕೆಂದರೆ ಆ ಸಮಯದಲ್ಲಿ ನಾಲ್ಕೂ ಕಡೆಗಳಲ್ಲಿಯೂ ಯುದ್ಧವಾಗುತ್ತಿರುತ್ತದೆ ಎಂದು ತಿಳಿಸಿದ್ದೇವೆ. ಎಲ್ಲವೂ ಅಂತಿಮ ಟ್ರಯಲ್ ಮಾಡುತ್ತಾರೆ, ಪ್ರಕೃತಿಯಲ್ಲಿಯೂ ಎಷ್ಟು ಶಕ್ತಿಯಿದೆ, ಮಾಯೆಯಲ್ಲಿಯೂ ಎಷ್ಟು ಶಕ್ತಿಯಿದೆಯೋ ಟ್ರಯಲ್ ಮಾಡುತ್ತದೆ. ಅವುಗಳ ಅಂತಿಮ ಟ್ರಯಲ್ ಮತ್ತು ತಮ್ಮ ಅಂತಿಮ ಕರ್ಮಾತೀತ, ಕರ್ಮಬಂಧ ಮುಕ್ತ ಸ್ಥಿತಿಯಾಗುತ್ತದೆ. ಎರಡೂ ಕಡೆ ಬಹಳ ಶಕ್ತಿಶಾಲಿ ದೃಶ್ಯವುಂಟಾಗುತ್ತದೆ. ಅದೂ ಸಹ ಫುಲ್ ಫೋಸ್, ಇದೂ ಸಹ ಫುಲ್ ಫೋಸ್ನಲ್ಲಿ ಇರುತ್ತದೆ. ಆದರೆ ಸೆಕೆಂಡಿನ ವಿಜಯ, ವಿಜಯದ ನಗಾರಿಯು ಮೊಳಗುತ್ತದೆ. ಅಂತಿಮ ಪರೀಕ್ಷೆ ಯಾವುದಾಗಿರುತ್ತದೆ ಎಂದು ತಿಳಿಯಿತೆ! ಎಲ್ಲರೂ ಇದೇ ಶುಭ ಸಂಕಲ್ಪವನ್ನೂ ಇಡುತ್ತೀರಿ ಮತ್ತು ಅವಶ್ಯವಾಗಿ ಇಡಬೇಕು - ಅದೇನೆಂದರೆ ನಂಬರ್ವನ್ನಲ್ಲಿ ಬರಲೇಬೇಕು. ಯಾವಾಗ ನಾಲ್ಕೂ ಕಡೆಗಳಲ್ಲಿನ ಮಾತುಗಳಲ್ಲಿ ವಿಜಯಿಯಾಗುತ್ತೀರಿ, ಆಗಲೇ ವನ್ನಲ್ಲಿ ಬರುತ್ತೀರಿ. ಒಂದುವೇಳೆ ಯಾವುದಾದರೂ ಒಂದು ಮಾತಿನಲ್ಲಿಯೂ ಸಹ ಸ್ವಲ್ಪ ವ್ಯರ್ಥ ಸಂಕಲ್ಪ, ವ್ಯರ್ಥ ಸಮಯದಲ್ಲಿ ತೊಡಗಿ ಬಿಡುತ್ತದೆಯೆಂದರೆ, ಹಿಂದಿನ ನಂಬರ್ ಆಗಿ ಬಿಡುತ್ತದೆ. ಆದ್ದರಿಂದ ಎಲ್ಲರೂ ಪರಿಶೀಲನೆ ಮಾಡಿರಿ. ನಾಲ್ಕೂ ಕಡೆಯಲ್ಲಿ ಪರಿಶೀಲನೆ ಮಾಡಿರಿ. ಡಬಲ್ ವಿದೇಶಿಗಳು ಎಲ್ಲದರಲ್ಲಿಯೂ ತೀವ್ರವಾಗಿ ಹೋಗಬೇಕೆಂದು ಬಯಸುತ್ತೀರಲ್ಲವೆ. ಆದ್ದರಿಂದ ಈಗಿನಿಂದ ಇದೇ ಅಭ್ಯಾಸದಲ್ಲಿ ತೀವ್ರ ಪುರುಷಾರ್ಥ ಅಥವಾ ಫುಲ್ ಅಟೆನ್ಶನ್ ಕೊಡುತ್ತಿರಿ. ತಿಳಿಯಿತೆ! ಪ್ರಶ್ನೆಯನ್ನೂ ತಿಳಿದುಕೊಂಡಿದ್ದೀರಿ ಮತ್ತು ಸಮಯವನ್ನೂ ತಿಳಿದುಕೊಂಡಿದ್ದೀರಿ, ಹಾಗಾದರೆ ಎಲ್ಲರೂ ಪಾಸ್ ಆಗಬೇಕು. ಒಂದುವೇಳೆ ಪ್ರಶ್ನೆಯು ಪರೀಕ್ಷೆಗೆ ಮೊದಲೇ ಗೊತ್ತಾಗಿರುತ್ತದೆಯೆಂದರೆ, ತಯಾರಿ ಮಾಡಿಕೊಂಡು ಬಿಡುತ್ತಾರೆ. ನಂತರ ಪಾಸ್ ಆಗಿ ಬಿಡುತ್ತಾರೆ. ತಾವೆಲ್ಲರೂ ಪಾಸ್ ಆಗುವವರಂತು ಆಗಿದ್ದೀರಲ್ಲವೆ! ಒಳ್ಳೆಯದು.

ಈ ಸೀಜನ್ನಲ್ಲಿ ಬಾಪ್ದಾದಾರವರು ಪ್ರತಿಯೊಬ್ಬರೊಂದಿಗೆ ಮಿಲನವಾಗುವ ತೆರೆದ ಭಂಡಾರವನ್ನು ತೆರೆದಿದ್ದಾರೆ. ಮುಂದೇನಾಗುತ್ತದೆ ಎನ್ನುವುದನ್ನು ನಂತರ ತಿಳಿಸುತ್ತೇವೆ. ಈಗ ತೆರೆದ ಭಂಡಾರದಿಂದ ಏನೆಲ್ಲಾ ತೆಗೆದುಕೊಳ್ಳುವುದಕ್ಕಾಗಿ ಬಂದಿದ್ದಾರೆ, ಅದನ್ನಂತು ಅವಶ್ಯವಾಗಿ ತೆಗೆದುಕೊಳ್ಳುವಿರಿ. ಡ್ರಾಮಾದ ದೃಶ್ಯವು ಸದಾ ಬದಲಾಗುತ್ತಲೇ ಇರುತ್ತದೆ ಆದರೆ ಈ ಸೀಜನ್ನಿನಲ್ಲಿ ಭಲೆ ಭಾರತವಾಸಿಗಳಿಗೆ, ಭಲೆ ಡಬಲ್ ವಿದೇಶಿಗಳು, ಎಲ್ಲರಿಗೂ ವಿಶೇಷ ವರದಾನವಂತು ಸಿಕ್ಕಿ ಬಿಟ್ಟಿದೆ. ಬಾಪ್ದಾದಾರವರು ಯಾವ ಪ್ರತಿಜ್ಞೆಯನ್ನು ಮಾಡಿದ್ದಾರೆ ಅದನ್ನಂತು ನಿಭಾಯಿಸುತ್ತಾರೆ. ಈ ಸೀಜನ್ನಿನ ಫಲವನ್ನನುಭವಿಸಿ. ಫಲವಾಗಿದೆ - ಮಿಲನವಾಗುವುದು, ವರದಾನ ಸಿಗುವುದು. ಎಲ್ಲರೂ ಸೀಜನ್ನಿನ ಫಲವನ್ನು ಸ್ವೀಕರಿಸಲು ಬಂದಿದ್ದೀರಲ್ಲವೆ. ಬಾಪ್ದಾದಾರವರಿಗೂ ಸಹ ಮಕ್ಕಳನ್ನು ನೋಡಿ ಖುಷಿಯಾಗುತ್ತದೆ. ಆದರೂ ಸಾಕಾರಿ ಸೃಷ್ಟಿಯಲ್ಲಂತು ಎಲ್ಲವನ್ನೂ ನೋಡಬೇಕಾಗುತ್ತದೆ. ಈಗಂತು ಮೋಜನ್ನಾಚರಿಸಿರಿ. ನಂತರ ಸೀಜನ್ನಿನ ಲಾಸ್ಟ್ನಲ್ಲಿ ತಿಳಿಸುತ್ತೇವೆ.

ಸೇವೆಯ ಸ್ಥಾನವಂತು ಭಲೆ ಬೇರೆ-ಬೇರೆಯಿರಬಹುದು ಆದರೆ ಸೇವೆಯ ಲಕ್ಷ್ಯವಂತು ಒಂದೇ ಆಗಿದೆ. ಉಮ್ಮಂಗ-ಉತ್ಸಾಹವು ಒಂದೇ ಆಗಿದೆ ಆದ್ದರಿಂದ ಬಾಪ್ದಾದಾರವರು ಎಲ್ಲಾ ಸ್ಥಾನಗಳಿಗೂ ವಿಶೇಷವಾಗಿ ಮಹತ್ವ ಕೊಡುತ್ತಾರೆ. ಒಂದು ಸ್ಥಾನವು ಮಹತ್ವವಿರುವಂತದ್ದು, ಇನ್ನೊಂದು ಕಡಿಮೆಯಾಗಿರುವುದೆಂದು ತಿಳಿಯಬಾರದು. ಮಕ್ಕಳು ಯಾವ ಧರಣಿಯಲ್ಲಿಯೇ ತಲುಪಿರಬಹುದು, ಅದರಿಂದ ಅವಶ್ಯವಾಗಿ ಏನಾದರೊಂದು ವಿಶೇಷ ಫಲಿತಾಂಶವು ಬರುತ್ತದೆ. ಅದು ನಂತರದಲ್ಲಿ ಭಲೆ ಕೆಲವರದು ಬೇಗನೆ ಕಂಡು ಬರುತ್ತದೆ, ಕೆಲವರದು ಸಮಯದಲ್ಲಿ ಕಂಡುಬರುತ್ತದೆ. ಆದರೆ ಎಲ್ಲಾ ಕಡೆಯ ವಿಶೇಷತೆಯದಾಗಿದೆ. ಎಷ್ಟೊಂದು ಒಳ್ಳೊಳ್ಳೆಯ ರತ್ನಗಳು ಬಂದರು, ಹಾಗೆಯೇ ನಾವಂತು ಸಾಧಾರಣರಾಗಿದ್ದೇವೆಂದು ತಿಳಿಯಬಾರದು. ಎಲ್ಲರೂ ವಿಶೇಷವಾಗಿದ್ದೀರಿ. ಒಂದುವೇಳೆ ಯಾರೇ ವಿಶೇಷತೆಯಿಲ್ಲದಿದ್ದರೆ ತಂದೆಯ ಬಳಿ ತಲುಪುತ್ತಿರಲಿಲ್ಲ. ವಿಶೇಷತೆಯಿದೆ ಆದರೆ ಆ ವಿಶೇಷತೆಯನ್ನು ಕೆಲವರು ಸೇವೆಯಲ್ಲಿ ಉಪಯೋಗಿಸುತ್ತಾರೆ, ಕೆಲವರು ಅದನ್ನೀಗ ಸೇವೆಯಲ್ಲಿ ಉಪಯೋಗಿಸಲು ತಯಾರಾಗುತ್ತಿದ್ದಾರೆ, ಬಾಕಿ ಎಲ್ಲರೂ ವಿಶೇಷ ಆತ್ಮರಾಗಿದ್ದಾರೆ. ಎಲ್ಲರೂ ಮಹಾರಥಿ, ಮಹಾವೀರರಾಗಿದ್ದೀರಿ. ಒಬ್ಬೊಬ್ಬರ ಮಹಿಮೆಯನ್ನು ತಿಳಿಸಲು ಆರಂಭಿಸಿದರೆ ಬಹಳ ದೊಡ್ಡ ಮಾಲೆಯಾಗಿ ಬಿಡುತ್ತದೆ. ಶಕ್ತಿಯರನ್ನು ನೋಡಿದರೆ, ಪ್ರತಿಯೊಬ್ಬರೂ ಶಕ್ತಿ ಮಹಾನ್ ಆತ್ಮರು, ವಿಶ್ವ ಕಲ್ಯಾಣಕಾರಿ ಆತ್ಮನೆಂದು ಕಾಣಿಸುತ್ತದೆ - ಹೀಗೆ ಇದ್ದೀರಲ್ಲವೆ ಅಥವಾ ಕೇವಲ ತಮ್ಮ-ತಮ್ಮ ಸ್ಥಾನದ ಕಲ್ಯಾಣಕಾರಿಯಾಗಿದ್ದೀರಾ? ಒಳ್ಳೆಯದು.

ಮುರಳಿ ಪ್ರಶ್ನೆಗಳು

ಅಮೃತವೇಳೆ ಶ್ರೇಷ್ಠ ಪ್ರಾಪ್ತಿಗಳ ವೇಳೆ

ಇಂದು ಆತ್ಮಿಕ ಹೂದೋಟದ ಮಾಲೀಕನು, ಪ್ರತಿನಿತ್ಯವೂ ತನ್ನ ಆತ್ಮಿಕ ಹೂಗಳ ಹೂದೋಟವನ್ನು ನೋಡುತ್ತಿದ್ದಾರೆ. ಆತ್ಮಿಕ ಗುಲಾಬಿಯಂತಹ ಹೂದೋಟವೀಗ ಈ ಸಂಗಮಯುಗದಲ್ಲಿಯೇ ಬಾಪ್ದಾದಾರವರ ಮೂಲಕವೇ ತಯಾರಾಗುತ್ತದೆ. ಬಾಪ್ದಾದಾರವರು ಪ್ರತಿಯೊಂದು ಆತ್ಮಿಕ ಗುಲಾಬಿ ಹೂವಿನ ಆತ್ಮೀಯತೆಯ ಸುಗಂಧ ಮತ್ತು ಆತ್ಮೀಯತೆಯಿಂದ ಅರಳಿರುವ ಪುಷ್ಪಗಳ ಶೋಭೆಯನ್ನು ನೋಡುತ್ತಿದ್ದಾರೆ. ಎಲ್ಲರೂ ಸುಗಂಧಯುಕ್ತವಾಗಿದ್ದಾರೆ ಆದರೆ ಕೆಲವರ ಸುಗಂಧವು ಸದಾಕಾಲ ಇರುವಂತದ್ದಾಗಿದೆ ಮತ್ತೆ ಕೆಲವರ ಸುಗಂಧವು ಸ್ವಲ್ಪ ಸಮಯಕ್ಕಾಗಿ ಇರುತ್ತದೆ. ಕೆಲವು ಗುಲಾಬಿಗಳು ಸದಾ ಅರಳಿರುತ್ತದೆ ಮತ್ತು ಕೆಲವು ಕೆಲವೊಮ್ಮೆ ಅರಳಿರುವುದು, ಕೆಲವೊಮ್ಮೆ ಸ್ವಲ್ಪ ಬಿಸಿಲು ಅಥವಾ ವಾತಾವರಣದನುಸಾರ ಮುದುಡಿಬಿಡುತ್ತದೆ. ಆದರೆ ಇರುವುದೂ ಸಹ ಆತ್ಮಿಕ ಹೂದೋಟದ ಮಾಲೀಕ ಹೂದೋಟದ ಆತ್ಮಿಕ ಗುಲಾಬಿಯಾಗಿದ್ದಾರೆ. ಕೆಲಕೆಲವು ಆತ್ಮಿಕ ಗುಲಾಬಿಯಲ್ಲಿ ವಿಶೇಷವಾಗಿ ಜ್ಞಾನದ ಸುಗಂಧವಿದೆ. ಕೆಲವು ಗುಲಾಬಿಗಳಲ್ಲಿ ನೆನಪಿನ ಸುಗಂಧವು ವಿಶೇಷವಾಗಿ ಇದೆ. ಕೆಲವುಗಳಲ್ಲಿ ಧಾರಣೆಯ ಸುಗಂಧ, ಕೆಲವುಗಳಲ್ಲಿ ಸೇವೆಯ ಸುಗಂಧವು ವಿಶೇಷವಾಗಿ ಇದೆ. ಕೆಲಕೆಲವು ಹೀಗೂ ಇದೆ, ಅವು ಸರ್ವ ಸುಗಂಧಗಳಿಂದ ಸಂಪನ್ನವಾಗಿದೆ. ಅಂದಮೇಲೆ ಹೂದೋಟದಲ್ಲಿ ಮೊಟ್ಟ ಮೊದಲು ಯಾರ ಮೇಲೆ ದೃಷ್ಟಿಯು ಹೋಗುತ್ತದೆ? ಯಾವುದರ ಸುಗಂಧವು ದೂರದಿಂದಲೇ ಆಕರ್ಷಿಸುತ್ತದೆ. ಅದರ ಕಡೆಯೇ ಮೊದಲು ಎಲ್ಲರ ದೃಷ್ಟಿಯು ಹೋಗುತ್ತದೆ. ಅಂದಮೇಲೆ ಆತ್ಮಿಕ ಹೂದೋಟದ ಮಾಲೀಕನು ಸದಾ ಎಲ್ಲರ ಆತ್ಮಿಕ ಗುಲಾಬಿ ಹೂಗಳನ್ನು ನೋಡುತ್ತಾರೆ. ಆದರೆ ನಂಬರ್ವಾರ್. ಎಲ್ಲರೊಂದಿಗೂ ಪ್ರೀತಿಯಿದೆ ಏಕೆಂದರೆ ಪ್ರತಿಯೊಂದು ಗುಲಾಬಿ ಹೂಗಳಲ್ಲಿ ಹೂದೋಟದ ಮಾಲೀಕನ ಪ್ರತಿ ಅತ್ಯಂತ ಪ್ರೀತಿಯಿದೆ. ಮಾಲೀಕನೊಂದಿಗೆ ಪುಷ್ಪಗಳ ಪ್ರೀತಿಯಿದೆ ಮತ್ತು ಮಾಲೀಕನಿಗೆ ಪುಷ್ಪಗಳೊಂದಿಗೆ ಪ್ರೀತಿಯಿದೆ. ಆದರೂ ಸದಾ ಶೋಕೇಸ್ನಲ್ಲಿಡುವ ಆತ್ಮಿಕ ಗುಲಾಬಿಗಳು ಅವರೇ ಆಗಿರುತ್ತಾರೆ, ಯಾರು ಸದಾ ಸರ್ವ ಸುಗಂಧಗಳಿಂದ ಸಂಪನ್ನವಾಗಿರುತ್ತಾರೆ ಮತ್ತು ಸದಾ ಅರಳಿರುವವರಾಗಿರುತ್ತಾರೆ. ಮುದುಡಿರುವುದನ್ನೆಂದಿಗೂ ಇಡುವುದಿಲ್ಲ. ಪ್ರತಿನಿತ್ಯವೂ ಬಾಪ್ದಾದಾರವರು ಅಮೃತವೇಳೆಯಲ್ಲಿ ಸ್ನೇಹ ಮತ್ತು ಶಕ್ತಿಯ ವಿಶೇಷ ಪಾಲನೆಯಿಂದ, ಎಲ್ಲಾ ಆತ್ಮಿಕ ಗುಲಾಬಿ ಹೂಗಳೊಂದಿಗೆ ಮಿಲನವನ್ನಾಚರಿಸುತ್ತಾರೆ.

ಅಮೃತವೇಳೆಯು ವಿಶೇಷವಾಗಿ ಪ್ರಭು ಪಾಲನೆಯ ವೇಳೆಯಾಗಿದೆ. ಅಮೃತವೇಳೆಯು ವಿಶೇಷವಾಗಿ ಪರಮಾತ್ಮ ಮಿಲನದ ವೇಳೆಯಾಗಿದೆ. ಆತ್ಮಿಕ ವಾರ್ತಾಲಾಪ ಮಾಡುವಂತಹ ವೇಳೆಯಾಗಿದೆ. ಅಮೃತವೇಳೆಯಲ್ಲಿ ಭೋಲಾ ಭಂಡಾರಿಯ ವರದಾನಗಳ ಖಜಾನೆಗಳಿಂದ ಸಹಜ ವರದಾನವು ಪ್ರಾಪ್ತಿಯಾಗುವ ವೇಳೆಯಾಗಿದೆ. ಮನ ಇಚ್ಛಿತ ಫಲವನ್ನು ಪ್ರಾಪ್ತಿ ಮಾಡಿಕೊಳ್ಳುವುದೆಂದು ಗಾಯನವೇನಿದೆ, ಅದು ಈ ಸಮಯದ ಅಮೃತವೇಳೆಯ ಸಮಯದ ಗಾಯನವಾಗಿದೆ. ಪರಿಶ್ರಮವಿಲ್ಲದೆ ತೆರೆದ ಖಜಾನೆಗಳನ್ನು ಪ್ರಾಪ್ತಿ ಮಾಡಿಕೊಳ್ಳುವ ವೇಳೆಯಾಗಿದೆ. ಇಂತಹ ಸೌಭಾಗ್ಯದ ಸಮಯವನ್ನು ಅನುಭವ ಮಾಡಿ ತಿಳಿದಿದ್ದೀರಲ್ಲವೆ. ಅನುಭವಿಗಳೇ ಈ ಶ್ರೇಷ್ಠ ಸುಖವನ್ನು, ಶ್ರೇಷ್ಠ ಪ್ರಾಪ್ತಿಗಳನ್ನು ತಿಳಿದುಕೊಳ್ಳುವರು. ಬಾಪ್ದಾದಾರವರು ಎಲ್ಲಾ ಆತ್ಮಿಕ ಗುಲಾಬಿಗಳನ್ನು ನೋಡಿ-ನೋಡಿ ಹರ್ಷಿತವಾಗುತ್ತಿದ್ದಾರೆ. ಬಾಪ್ದಾದಾರವರೂ ಸಹ ವಾಹ್ ನನ್ನ ಆತ್ಮಿಕ ಗುಲಾಬಿಗಳೇ! ಎಂದು ಹೇಳುತ್ತಾರೆ. ತಾವೂ ಸಹ ವಾಹ್-ವಾಹ್ನ ಗೀತೆಯನ್ನು ಹಾಡುತ್ತೀರೆಂದರೆ, ಬಾಪ್ದಾದಾರವರೂ ಸಹ ಇದೇ ಗೀತೆಯನ್ನಾಡುತ್ತಾರೆ. ತಿಳಿಯಿತೆ!

ಮುರುಳಿಗಳನ್ನಂತು ಬಹಳಷ್ಟು ಕೇಳಿದ್ದೀರಿ. ಕೇಳಿ-ಕೇಳಿ ಸಂಪನ್ನರಾಗಿ ಬಿಟ್ಟಿದ್ದೀರಿ. ಈಗ ಮಹಾದಾನಿಗಳಾಗಿ ಅದನ್ನು ಹಂಚುವಂತಹ ಯೋಜನೆಯನ್ನು ಮಾಡುತ್ತಿದ್ದೀರಿ - ಈ ಉಮ್ಮಂಗವು ಬಹಳ ಚೆನ್ನಾಗಿದೆ. ಇಂದು ಯು.ಕೆ. ಅಂದರೆ ಓ.ಕೆ.ಯಾಗಿರುವವರ ಸರದಿಯಾಗಿದೆ. ಬಾಪ್ದಾದಾರವರು ಡಬಲ್ವಿದೇಶಿಗಳ ಒಂದು ಶಬ್ದವನ್ನು ಕೇಳಿ ಸದಾ ಮುಗುಳ್ನಗುತ್ತಿರುತ್ತಾರೆ. ಅದು ಯಾವುದು? ಥ್ಯಾಂಕ್ಯೂ. ಥ್ಯಾಂಕ್ಯೂ ಎನ್ನುತ್ತಿದ್ದರೂ ತಂದೆಯನ್ನೂ ನೆನಪು ಮಾಡುತ್ತಿರುತ್ತಾರೆ. ಏಕೆಂದರೆ ಎಲ್ಲದಕ್ಕೂ ಮೊದಲು ತಂದೆಯವರಿಗೇ ವಂದನೆಗಳನ್ನು ಮಾಡುವುದಕ್ಕೆ ಮನಸ್ಸಾಗುತ್ತದೆ. ಅಂದಾಗ ಯಾವಾಗ ಯಾರಿಗೇ ಥ್ಯಾಂಕ್ಯೂ ಮಾಡುತ್ತೀರೆಂದರೆ, ಮೊದಲು ತಂದೆಯ ನೆನಪು ಬರುತ್ತದೆಯಲ್ಲವೆ! ಬ್ರಾಹ್ಮಣ ಜೀವನದಲ್ಲಿ ಮೊದಲ ವಂದನೆಗಳು ಸ್ವತಹವಾಗಿಯೇ ತಂದೆಯ ಪ್ರತಿ ಬರುತ್ತದೆ. ಏಳುತ್ತಾ-ಕುಳಿತುಕೊಳ್ಳುತ್ತಾ ಅನೇಕ ಬಾರಿ ಥ್ಯಾಂಕ್ಯೂ ಹೇಳುತ್ತೀರಿ. ಇದೂ ಸಹ ತಂದೆಯನ್ನು ನೆನಪು ಮಾಡುವ ಒಂದು ವಿಧಿಯಾಗಿದೆ. ಯು.ಕೆ. ಯವರು ಭಿನ್ನ-ಭಿನ್ನ ಪ್ರಕಾರದ ಎಲ್ಲಾ ಅಲ್ಪಕಾಲದ ಶಕ್ತಿಗಳಿರುವವರನ್ನು ಒಟ್ಟಿಗೆ ಸೇರಿಸಲು ನಿಮಿತ್ತರಾಗಿದ್ದೀರಲ್ಲವೆ. ಅನೇಕ ಪ್ರಕಾರದ ಜ್ಞಾನದ ಶಕ್ತಿಗಳಿವೆ. ಭಿನ್ನ-ಭಿನ್ನ ಶಕ್ತಿಯಿರುವವರು, ಭಿನ್ನ-ಭಿನ್ನ ವರ್ಗದವರು, ಭಿನ್ನ-ಭಿನ್ನ ಧರ್ಮದವರು, ಭಾಷೆಯವರೆಲ್ಲರನ್ನೂ ಸೇರಿಸಿ ಒಂದೇ ಬ್ರಾಹ್ಮಣ ವರ್ಗದಲ್ಲಿ ತರುವುದು, ಬ್ರಾಹ್ಮಣ ಧರ್ಮದಲ್ಲಿ ಬ್ರಾಹ್ಮಣ ಭಾಷೆಯಲ್ಲಿ ಬರುವುದಾಗಿದೆ. ಬ್ರಾಹ್ಮಣರ ಭಾಷೆಯು ತನ್ನದಾಗಿದೆ. ಇವರೇನು ಹೇಳುತ್ತಿದ್ದಾರೆ ಎನ್ನುವುದನ್ನು ಹೊಸಬರು ತಿಳಿದುಕೊಳ್ಳಲು ಸಾಧ್ಯವಿಲ್ಲ. ಅಂದಾಗ ಬ್ರಾಹ್ಮಣರ ಭಾಷೆ, ಬ್ರಾಹ್ಮಣ ಶಬ್ದಕೋಶವೇ ತನ್ನದಾಗಿದೆ. ಹಾಗಾದರೆ ಯು.ಕೆ.ಯವರು ಎಲ್ಲರನ್ನೂ ಒಂದು ಮಾಡುವುದರಲ್ಲಿ ನಿರತರಾಗಿರುತ್ತೀರಲ್ಲವೆ. ಸಂಖ್ಯೆಯೂ ಚೆನ್ನಾಗಿದೆ ಮತ್ತು ಸ್ನೇಹವೂ ಚೆನ್ನಾಗಿದೆ, ಪ್ರತಿಯೊಂದು ಸ್ಥಾನದ ತಮ್ಮ-ತಮ್ಮ ವಿಶೇಷತೆಯಂತು ಇದ್ದೇ ಇದೆ. ಆದರೆ ಇಂದು ಯು.ಕೆ. ಯವರಿಗೆ ತಿಳಿಸುತಿದ್ದೇವೆ. ಯಜ್ಞ ಸ್ನೇಹಿ, ಯಜ್ಞ ಸಹಯೋಗಿಯ ವಿಶೇಷತೆಯು ಬಹಳ ಚೆನ್ನಾಗಿ ಕಾಣಿಸುತ್ತದೆ. ಪ್ರತೀ ಹೆಜ್ಜೆಯಲ್ಲಿ ಮೊದಲು ಯಜ್ಞ ಅಂದರೆ ಮಧುಬನದ ಪಾಲು(ಸೇವೆ)ನ್ನು ತೆಗೆಯುವುದರಲ್ಲಿ ಒಳ್ಳೆಯ ನಂಬರಿನಲ್ಲಿ ಹೋಗುತ್ತಿದ್ದಾರೆ. ಡೈರೆಕ್ಟ್ ಮಧುಬನದ ನೆನಪು - ಇದೊಂದು ವಿಶೇಷ ಲಿಫ್ಟ್ ಆಗಿ ಬಿಡುತ್ತದೆ. ಮಧುಬನವು ಸ್ವತಹವಾಗಿ ತಂದೆಯ ನೆನಪನ್ನು ತರಿಸುತ್ತದೆ. ಎಲ್ಲಿಯೇ ಇದ್ದರೂ ಮಧುಬನದ ನೆನಪು ಬರುವುದು ಅರ್ಥಾತ್ ವಿಶೇಷ ಸ್ನೇಹ, ಲಿಫ್ಟ್ ಆಗಿ ಬಿಡುತ್ತದೆ. ಮೇಲತ್ತುವ ಪರಿಶ್ರಮದಿಂದಲೂ ಮುಕ್ತರಾಗಿ ಬಿಡುತ್ತಾರೆ. ಸೆಕೆಂಡಿನಲ್ಲಿ ಸ್ವಿಚ್ ಆನ್ ಮಾಡಿದಿರಿ ಮತ್ತು ತಲುಪಿದಿರಿ.

ಬಾಪ್ದಾದಾರವರಿಗೆ ಮತ್ತ್ಯಾವುದೋ ವಜ್ರ-ವೈಢೂರ್ಯಗಳು ಬೇಡ. ತಂದೆಗೆ ಸ್ನೇಹದ ಚಿಕ್ಕದಾದ ವಸ್ತುವೇ ವಜ್ರ-ವೈಢೂರ್ಯಗಳಾಗಿವೆ. ಆದ್ದರಿಂದ ಸುಧಾಮನ ಹಿಡಿ ಅವಲಕ್ಕಿಯ ಗಾಯನವಿದೆ. ಇದರ ಭಾವಾರ್ಥ ಇದೇ ಆಗಿದೆ - ಏನೆಂದರೆ, ಸ್ನೇಹದ ಕಾರಣ ಒಂದು ಚಿಕ್ಕ ಸೂಜಿಯಲ್ಲಿಯೂ ಮಧುಬನ ನೆನಪು ಬರುತ್ತದೆ. ಹಾಗಾದರೆ ಅದೂ ಸಹ ಬಹಳ ದೊಡ್ಡ ಅಮೂಲ್ಯ ರತ್ನವಾಗಿದೆ ಏಕೆಂದರೆ ಸ್ನೇಹದ ಬೆಲೆಯಿದೆ. ಬೆಲೆಯು ಸ್ನೇಹದ್ದಾಗಿದೆ, ವಸ್ತುವಿನದ್ದಲ್ಲ. ಒಂದುವೇಳೆ ಭಲೆ ಯಾರೆಷ್ಟಾದರೂ ಕೊಡಲಿ ಆದರೆ ಅದರಲ್ಲಿ ಸ್ನೇಹವಿಲ್ಲದಿದ್ದರೆ ಅದರ ಜಮಾ ಆಗುವುದಿಲ್ಲ ಮತ್ತು ಸ್ನೇಹದಿಂದ ಸ್ವಲ್ಪವೇ ಜಮಾ ಮಾಡಿದರೂ, ಅದು ಪದಮದಷ್ಟು ಜಮಾ ಆಗಿ ಬಿಡುತ್ತದೆ. ಆದ್ದರಿಂದ ತಂದೆಯವರಿಗೆ ಸ್ನೇಹವೇ ಪ್ರಿಯವಾಗಿದೆ. ಯು.ಕೆ.ಯವರ ವಿಶೇಷತೆ ಯಜ್ಞ ಸ್ನೇಹಿ, ಯಜ್ಞ ಸಹಯೋಗಿ ಆದಿಯಿಂದಲೂ ಇದ್ದಾರೆ, ಇದೆ ಸಹಜ ಯೋಗವೂ ಆಗಿದೆ. ಸಹಯೋಗ, ಸಹಜ ಯೋಗವಾಗಿದೆ. ಸಹಯೋಗದ ಸಂಕಲ್ಪವು ಬರುವುದರಿಂದಲೂ ನೆನಪಂತು ತಂದೆಯದೆ ಇರುತ್ತದೆಯಲ್ಲವೆ. ಅದರಿಂದ ಸಹಯೋಗಿ, ಸಹಜಯೋಗಿಯಾಗಿ ಸ್ವತಹವಾಗಿ ಆಗಿ ಬಿಡುತ್ತಾರೆ. ಯೋಗ ತಂದೆಯೊಂದಿಗಾಗುತ್ತದೆ, ಮಧುಬನ ಅರ್ಥಾತ್ ಬಾಪ್ದಾದಾರವರೊಂದಿಗೆ ಸಂಬಂಧವುಂಟಾಗುತ್ತದೆ. ಅಂದಾಗ ಸಹಯೋಗಿಯಾಗುವವರೂ ಸಹ ಸಹಜಯೋಗದ ವಿಷಯದಲ್ಲಿ ಒಳ್ಳೆಯ ಅಂಕಗಳನ್ನು ತೆಗೆದುಕೊಂಡು ಬಿಡುತ್ತಾರೆ. ಮನಃಪೂರ್ವಕದಿಂದ ಸಹಯೋಗ ಮಾಡುವುದು ತಂದೆಗೆ ಪ್ರಿಯವಾಗಿರುವುದಾಗಿದೆ. ಆದ್ದರಿಂದ ಇಲ್ಲಿ ನೆನಪಾರ್ಥವೂ ಸಹ ದಿಲ್ವಾಲಾ ಮಂದಿರವನ್ನು ನಿರ್ಮಾಣ ಮಾಡಿದ್ದಾರೆ. ಹಾಗಾದರೆ ದಿಲ್ವಾಲಾ ತಂದೆಗೆ ದಿಲ್(ಹೃದಯದ)ನ ಸ್ನೇಹ, ಹೃದಯದ ಸಹಯೋಗವೇ ಪ್ರಿಯವಾಗಿರುತ್ತದೆ. ಚಿಕ್ಕ ಹೃದಯದವರು ಚಿಕ್ಕ ವ್ಯಾಪಾರ ಮಾಡಿಯೇ ಖುಷಿಯಾಗಿ ಬಿಡುತ್ತಾರೆ ಮತ್ತು ವಿಶಾಲ ಹೃದಯದವರು ಬೇಹದ್ದಿನ ವ್ಯಾಪಾರ ಮಾಡುತ್ತಾರೆ. ಫೌಂಡೇಷನ್ ವಿಶಾಲ ಹೃದಯದಿಂದ ಆಗಿರುವುದರಿಂದ ವಿಸ್ತಾರವೂ ಸಹ ದೊಡ್ಡದಾಗುತ್ತಿದೆ. ಹೇಗೆ ಕೆಲವು ಸ್ಥಾನಗಳಲ್ಲಿ ವೃಕ್ಷವನ್ನು ನೋಡಿರಬಹುದು, ಆ ವೃಕ್ಷದ ಶಾಖೆಯೂ ಸಹ ಆಧಾರವಾಗಿ ಬಿಡುತ್ತದೆ. ಅಂದಾಗ ಯು.ಕೆ.ಯ ಫೌಂಡೇಷನ್ನಿಂದ ಕಾಂಡವೂ ಬಂದಿತು, ಶಾಖೆಗಳೂ ಬಂದವು. ಈಗ ಆ ಶಾಖೆ(ರೆಂಬೆ)ಗಳೂ ಸಹ ಆಧಾರವಾಗಿ ಬಿಟ್ಟಿದೆ. ಆ ಕಾಂಡದಿಂದಲೂ ಶಾಖೆಗಳು ಹೊರಬರುತ್ತಿವೆ. ಹೇಗೆ ನೋಡಿ, ಆಸ್ಟ್ರೇಲಿಯಾದವರು ಬಂದರು, ಅಮೇರಿಕಾ, ಯುರೋಪ್, ಆಫ್ರಿಕಾದವರು ಬಂದರು. ಎಲ್ಲರೂ ಆಧಾರವೇ ಆಗಿ ಬಿಟ್ಟರು. ಮತ್ತು ಪ್ರತಿಯೊಂದು ಕಾಂಡದ ಶಾಖೆಗಳೂ ಸಹ ಬಹಳ ಚೆನ್ನಾಗಿ ವೃದ್ಧಿ ಹೊಂದುತ್ತಿದೆ. ಏಕೆಂದರೆ ಫೌಂಡೇಷನ್ ಸ್ನೇಹ ಮತ್ತು ಸಹಯೋಗದ ನೀರಿನಿಂದ ಶಕ್ತಿಶಾಲಿಯಾಗಿದೆ, ಆದ್ದರಿಂದ ವಿಸ್ತಾರವೂ ಚೆನ್ನಾಗಿದೆ ಮತ್ತು ಫಲವೂ ಚೆನ್ನಾಗಿದೆ. ಒಳ್ಳೆಯದು.

ವರದಾನ:  
ದೇಹಭಾನದ ತ್ಯಾಗ ಮಾಡಿ ನಿಕ್ರೋಧಿಯಾಗುವ ನಿರ್ಮಾನ ಚಿತ್ತ ಭವ.

ಯಾವ ಮಕ್ಕಳು ದೇಹ ಭಾನದ ತ್ಯಾಗ ಮಾಡುತ್ತಾರೆಯೋ, ಅವರೆಂದಿಗೂ ಕ್ರೋಧವು ಬರಲು ಸಾಧ್ಯವಿಲ್ಲ ಏಕೆಂದರೆ ಕ್ರೋಧವು ಬರಲು ಎರಡು ಕಾರಣಗಳಿವೆ - ಒಂದು:- ಯಾವಾಗ ಯಾರೇ ಅಸತ್ಯ ಮಾತನ್ನು ಹೇಳಿದಾಗ ಮತ್ತು ಇನ್ನೊಂದು:- ಯಾವಾಗ ಯಾರೇ ಗ್ಲಾನಿ ಮಾಡಿದಾಗ. ಇವೆರೆಡೇ ಮಾತುಗಳು ಕ್ರೋಧಕ್ಕೆ ಜನ್ಮ ಕೊಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿರ್ಮಾನ ಚಿತ್ತದ ವರದಾನದ ಮೂಲಕ ಅಪಕಾರಿಗೂ ಉಪಕಾರ ಮಾಡಿರಿ, ಗ್ಲಾನಿ ಮಾಡುವವರಿಗೂ ತಮ್ಮವರೆಂದುಕೊಳ್ಳಿರಿ, ನಿಂದನೆ ಮಾಡುವವರನ್ನು ಸತ್ಯ ಮಿತ್ರನೆಂದು ಸ್ವೀಕರಿಸಿ - ಆಗ ಕಮಾಲ್ ಎಂದು ಹೇಳುತ್ತೇವೆ. ಯಾವಾಗ ಇಂತಹ ಪರಿವರ್ತನೆಯನ್ನು ತೋರಿಸುತ್ತೀರಿ, ಆಗ ವಿಶ್ವದ ಮುಂದೆ ಪ್ರಸಿದ್ಧರಾಗುವಿರಿ.

ಸ್ಲೋಗನ್:
ಸ್ಲೋಗನ್: ಮೋಜಿನ ಅನುಭವ ಮಾಡುವುದಕ್ಕಾಗಿ ಮಾಯೆಯ ಅಧೀನತೆಯನ್ನು ಬಿಟ್ಟು ಸ್ವತಂತ್ರರಾಗಿರಿ.


06-09-20 ಆತ್ಮಿಕ ಡ್ರಿಲ್

1. ಅನಾದಿ ಸ್ವರೂಪವು ಯಾವುದುದಾಗಿದೆ?

ಅ. ಮಧುರ ಶಾಂತಿ
ಆ. ಆಳವಾದ ಶಾಂತಿ
ಇ. ಪವಿತ್ರತೆ

2. ಆತ್ಮವನ್ನು ಶಕ್ತಿಶಾಲಿಗೊಳಿಸುವುದಕ್ಕಾಗಿ ಯಾವ ಆತ್ಮಿಕ ವ್ಯಾಯಾಮದ ಅಭ್ಯಾಸವು ಮಾಡಬೇಕಾಗಿದೆ?

ಅ. ಭಿನ್ನ ಮತ್ತು ಪ್ರಿಯ
ಆ. ದೇಹಿ ಅಭಿಮಾನಿ
ಇ. ಶಬ್ದದಿಂದ ದೂರ ಹೋಗುವ

3. ದೇಹ, ದೇಹದ ಸಂಬಂಧ, ದೇಹದ ಸಂಸ್ಕಾರ, ವ್ಯಕ್ತಿ ಅಥವಾ ವೈಭವ, ವೈಬ್ರೇಷನ್, ವಾಯುಮಂಡಲ, ಎಲ್ಲವೂ ಇದ್ದರೂ ಆಕರ್ಷಣೆ ಮಾಡಬಾರದು. ಇದನ್ನು ಏನೆಂದು ಹೇಳಲಾಗುತ್ತದೆ?

ಅ. ನಷ್ಟಮೋಹ ಸಮರ್ಥಸ್ವರೂಪ
ಆ. ಕರ್ಮಾತೀತ
ಇ. ಅಶರೀರಿ

4. ಯಾವುದಾದರೂ ಒಂದು ಮಾತಿನಲ್ಲಿಯೂ ಸಹ ತೊಡಗಿಬಿಡುತ್ತದೆಯೆಂದರೆ, ಹಿಂದಿನ ನಂಬರ್ ಆಗಿ ಬಿಡುತ್ತದೆ.

ಅ. ಸ್ವಲ್ಪ ವ್ಯರ್ಥ ಸಂಕಲ್ಪ, ವ್ಯರ್ಥ ಸಮಯದಲ್ಲಿ
ಆ. ಆಲಸ್ಯ ಮತ್ತು ಹುಡುಗಾಟಿಕೆ
ಇ. ದೇಹಭಾನ

5. ಇಂದು ಯಾವ ರೂಪದಲ್ಲಿ ತಂದೆಯು ಮಕ್ಕಳ ಯಾವ ರೂಪವನ್ನು ನೋಡುತ್ತಿದ್ದಾರೆ?

ಅ. ಆತ್ಮಿಕ ಹೂದೋಟದ ಮಾಲೀಕನು, ತನ್ನ ಆತ್ಮಿಕ ಹೂಗಳ ಹೂದೋಟವನ್ನು ನೋಡುತ್ತಿದ್ದಾರೆ.
ಆ. ದೀಪರಾಜ ತಂದೆಯು ತನ್ನ ದೀಪ ಮಾಲೆ ಮಕ್ಕಳನ್ನು ನೋಡುತ್ತಿದ್ದಾರೆ.
ಇ. ಸ್ನೇಹ ಸಾಗರ ತಂದೆ ಸ್ನೇಹಿ ಮಕ್ಕಳನ್ನು ನೋಡುತ್ತಿದ್ದಾರೆ.

6. ಪರಿಶ್ರಮವಿಲ್ಲದೆ ತೆರೆದ ಖಜಾನೆಗಳನ್ನು ಪ್ರಾಪ್ತಿ ಮಾಡಿಕೊಳ್ಳುವ ವೇಳೆ ಯಾವುದುದಾಗಿದೆ?

ಅ. ಅಮೃತವೇಳೆ
ಆ. ಭೋಜನದ ಸಮಯ
ಇ. ಸಂಧ್ಯ ಕಾಲ

7. ಬಾಪ್ದಾದಾರವರು ಡಬಲ್ ವಿದೇಶಿಗಳ ಒಂದು ಶಬ್ಧವನ್ನು ಕೇಳಿ ಸದಾ ಮುಗುಳ್ನಗುತ್ತಿರುತ್ತಾರೆ. ಅದು ಯಾವುದು?

ಅ. ಥ್ಯಾಂಕ್ಯೂ (ಧನ್ಯವಾದಗಳು)
ಆ. ಸಾರಿ (ಕ್ಷಮಿಸಿ)
ಇ. ವೆಲ್ ಕಮ್ (ಬರ ಮಾಡಿ)

8. ಯು.ಕೆ.ಯವರು ಯಾವುದರಲ್ಲಿ ಬ್ಯುಸಿಯಾಗಿರುತ್ತಾರೆ?

ಅ. ಶಾಂತವಾಗಿರುವುದರಲ್ಲಿ
ಆ. ಎಲ್ಲರನ್ನೂ ಒಂದುಮಾಡುವುದರಲ್ಲಿ ಮಾಡುವುದರಲ್ಲಿ
ಇ. ಸೇವೆ ಮಾಡುವುದರಲ್ಲಿ

9. ಡೈರೆಕ್ಟ್ ಮಧುಬನದ ನೆನಪು - ಇದೊಂದು ಆಗಿ ಬಿಡುತ್ತದೆ?

ಅ. ವಿಶೇಷ ಲಿಫ್ಟ್
ಆ. ವಿಶೇಷ ಗಿಫ್ಟ್
ಇ. ವಿಶೇಷ ನೆನಪಾರ್ಥ

10. ಯಾವ ವರದಾನದ ಮೂಲಕ ಅಪಕಾರಿಗೂ ಉಪಕಾರ ಮಾಡಿರಿ, ಗ್ಲಾನಿ ಮಾಡುವವರಿಗೂ ತಮ್ಮವರೆಂದುಕೊಳ್ಳಿರಿ, ನಿಂದನೆ ಮಾಡುವವರನ್ನು ಸತ್ಯ ಮಿತ್ರನೆಂದು ಸ್ವೀಕರಿಸಬೇಕು?

ಅ. ನಮ್ರಚಿತ್ತ
ಆ. ನಿರ್ಮಾನಚಿತ್ತ
ಇ. ನಿರ್ಮೋಹಿ