06.11.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಎಷ್ಟು ಸಮಯ ತಂದೆಯ ಸ್ಮೃತಿಯಿರುತ್ತದೆಯೆಂದು ತಮ್ಮ ಪರಿಶೀಲನೆ ಮಾಡಿಕೊಳ್ಳಿ, ಏಕೆಂದರೆ ಸ್ಮೃತಿಯಲ್ಲಿಯೇ ಲಾಭವಿದೆ, ವಿಸ್ಮೃತಿಯಲ್ಲಿ ನಷ್ಟವಿದೆ

ಪ್ರಶ್ನೆ:
ಈ ಪಾಪಾತ್ಮರ ಪ್ರಪಂಚದಲ್ಲಿ ಯಾವ ಮಾತು ಸಂಪೂರ್ಣ ಅಸಂಭವ ಮತ್ತು ಏಕೆ?

ಉತ್ತರ:
ಇಲ್ಲಿ ನಾವು ಪುಣ್ಯಾತ್ಮರಾಗಿದ್ದೇವೆ ಎಂದು ಯಾರಾದರೂ ಹೇಳುವುದಾದರೆ ಅದು ಸಂಪೂರ್ಣ ಅಸಂಭವವಾಗಿದೆ ಏಕೆಂದರೆ ಪ್ರಪಂಚವೇ ಕಲಿಯುಗೀ ತಮೋಪ್ರಧಾನವಾಗಿದೆ. ಮನುಷ್ಯರು ಯಾವುದನ್ನು ಪುಣ್ಯದ ಕೆಲಸವೆಂದು ತಿಳಿಯುತ್ತಾರೆಯೋ ಅದೂ ಸಹ ಪಾಪವಾಗಿ ಬಿಡುತ್ತದೆ, ಏಕೆಂದರೆ ಪ್ರತಿಯೊಂದು ಕರ್ಮವನ್ನು ವಿಕಾರಗಳಿಗೆ ವಶರಾಗಿ ಮಾಡುತ್ತಾರೆ.

ಓಂ ಶಾಂತಿ.
ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ - ನಾವೀಗ ಬ್ರಹ್ಮನ ಮಕ್ಕಳು ಬ್ರಹ್ಮಾಕುಮಾರ -ಕುಮಾರಿಯರಾಗಿದ್ದೇವೆ, ಇದರ ನಂತರ ದೇವಿ-ದೇವತೆಗಳಾಗುತ್ತೇವೆ - ಇದನ್ನು ನೀವೇ ತಿಳಿದುಕೊಂಡಿದ್ದೀರಿ, ಬೇರೆ ಯಾರೂ ತಿಳಿದುಕೊಂಡಿಲ್ಲ. ನಾವು ಬ್ರಹ್ಮಾಕುಮಾರ-ಕುಮಾರಿಯರು ಬೇಹದ್ದಿನ ವಿದ್ಯೆಯನ್ನು ಓದುತ್ತಿದ್ದೇವೆ. 84 ಜನ್ಮಗಳ ವಿದ್ಯೆಯನ್ನೂ ಓದುತ್ತೇವೆ. ಸೃಷ್ಟಿಚಕ್ರದ ವಿದ್ಯೆಯನ್ನೂ ಓದುತ್ತೇವೆ ಎಂಬುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ ಮತ್ತೆ ನಿಮಗೆ ಪವಿತ್ರರಾಗಬೇಕೆಂಬ ಶಿಕ್ಷಣವೂ ಸಹ ಸಿಗುತ್ತದೆ, ಇಲ್ಲಿ ಕುಳಿತಿದ್ದಂತೆಯೇ ನೀವು ಮಕ್ಕಳು ಪಾವನರಾಗುವುದಕ್ಕಾಗಿ ತಂದೆಯನ್ನು ಅವಶ್ಯವಾಗಿ ನೆನಪು ಮಾಡುತ್ತೀರಿ ಅಂದಾಗ ತಮ್ಮ ಹೃದಯವನ್ನು ಕೇಳಿಕೊಳ್ಳಿ - ಸತ್ಯವಾಗಿಯೂ ನಾವು ತಂದೆಯ ನೆನಪಿನಲ್ಲಿ ಕುಳಿತಿದ್ದೇವೆಯೇ ಅಥವಾ ಮಾಯಾ ರಾವಣನು ಬುದ್ಧಿಯನ್ನು ಬೇರೆ ಕಡೆ ತೆಗೆದುಕೊಂಡು ಹೋದನೇ? ತಂದೆಯು ತಿಳಿಸಿದ್ದಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ಆಗ ಪಾಪಗಳು ಭಸ್ಮವಾಗುತ್ತವೆ ಅಂದಮೇಲೆ ಈಗ ತಮ್ಮೊಂದಿಗೆ ಕೇಳಿಕೊಳ್ಳಬೇಕು - ನಾವು ತಂದೆಯ ನೆನಪಿನಲ್ಲಿದ್ದೇವೆಯೇ ಅಥವಾ ಬುದ್ಧಿಯು ಎಲ್ಲಿಯಾದರೂ ಹೋಯಿತೇ? ಎಷ್ಟು ಸಮಯ ನಾವು ತಂದೆಯ ನೆನಪಿನಲ್ಲಿದ್ದೆವು? ಎಷ್ಟು ಸಮಯ ನಮ್ಮ ಬುದ್ಧಿಯು ಎಲ್ಲೆಲ್ಲಿಗೆ ಹೋಯಿತು ಎಂಬುದು ಸ್ಮೃತಿಯಿರಬೇಕು ಮತ್ತು ತಮ್ಮ ಸ್ಥಿತಿಯನ್ನು ನೋಡಿಕೊಳ್ಳಿ - ಎಷ್ಟು ಸಮಯ ತಂದೆಯನ್ನು ನೆನಪು ಮಾಡುತ್ತೀರೋ ಅದರಿಂದಲೇ ಪಾವನರಾಗುತ್ತೀರಿ. ಜಮಾ ಮತ್ತು ವ್ಯರ್ಥದ ಲೆಕ್ಕವನ್ನು ಇಡಬೇಕು. ಅಭ್ಯಾಸವಾದರೆ ನೆನಪೂ ಸಹ ಉಳಿಯುತ್ತದೆ. ಬರೆಯುತ್ತಾ ಇರುತ್ತೀರಿ, ದಿನಚರಿಯ ಪುಸ್ತಕವಂತೂ ಎಲ್ಲರ ಜೇಬಿನಲ್ಲಿ ಇದ್ದೇ ಇರುತ್ತದೆ. ವ್ಯಾಪಾರಿಗಳದು ಹದ್ದಿನ ದಿನಚರಿಯಾಗಿದೆ, ನಿಮ್ಮದು ಬೇಹದ್ದಿನ ದಿನಚರಿಯಾಗಿದೆ. ಅಂದಾಗ ನೀವು ನಿಮ್ಮ ಚಾರ್ಟನ್ನು ಬರೆದಿಟ್ಟುಕೊಳ್ಳಬೇಕಾಗಿದೆ. ತಂದೆಯ ಆಜ್ಞೆಯಾಗಿದೆ ಉದ್ಯೋಗ-ವ್ಯವಹಾರ ಎಲ್ಲವನ್ನೂ ಮಾಡಿ ಆದರೆ ಸಮಯವನ್ನು ತೆಗೆದು ನನ್ನನ್ನು ನೆನಪು ಮಾಡಿ. ತಮ್ಮ ಲೆಕ್ಕವನ್ನು ನೋಡಿಕೊಳ್ಳುತ್ತಾ, ಲಾಭವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಿ, ನಷ್ಟವನ್ನು ಮಾಡಿಕೊಳ್ಳಬೇಡಿ. ನಿಮ್ಮ ಯುದ್ಧವಂತೂ ಇದೆಯಲ್ಲವೆ. ಸೆಕೆಂಡಿನಲ್ಲಿ ಲಾಭ, ಸೆಕೆಂಡಿನಲ್ಲಿ ನಷ್ಟ. ನಾವು ಲಾಭ ಮಾಡಿಕೊಂಡೆವೋ ಅಥವಾ ನಷ್ಟವೋ ಎಂಬುದು ಬಹು ಬೇಗನೆ ತಿಳಿಯುತ್ತದೆ. ನೀವು ವ್ಯಾಪಾರಿಗಳಾಗಿದ್ದೀರಲ್ಲವೆ! ಕೆಲವರೇ ವಿರಳ ಈ ವ್ಯಾಪಾರವನ್ನು ಮಾಡುತ್ತಾರೆ. ಸ್ಮೃತಿಯಿಂದ ಲಾಭವಿದೆ, ವಿಸ್ಮೃತಿಯಲ್ಲಿ ನಷ್ಟವಿದೆ ಅಂದಮೇಲೆ ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕು - ಯಾರಿಗೆ ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳಬೇಕೆಂಬ ಲಕ್ಷ್ಯವಿದೆಯೋ ಅವರಿಗೆ ನಾವು ಎಷ್ಟು ಸಮಯ ವಿಸ್ಮೃತಿಯಲ್ಲಿದ್ದೆವು ಎಂದು ನೋಡಿಕೊಳ್ಳಬೇಕೆಂಬ ಚಿಂತೆಯಿರುತ್ತದೆ. ಇದಂತೂ ನೀವು ಮಕ್ಕಳಿಗೆ ತಿಳಿದಿದೆ - ನಾವೆಲ್ಲಾ ಆತ್ಮಗಳ ತಂದೆಯು ಪತಿತ-ಪಾವನನಾಗಿದ್ದಾರೆ. ನಾವು ಮೂಲತಃ ಆತ್ಮಗಳಾಗಿದ್ದೇವೆ, ನಮ್ಮ ಮನೆಯಿಂದ ಇಲ್ಲಿಗೆ ಬಂದಿದ್ದೇವೆ, ಈ ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತಿದ್ದೇವೆ. ಶರೀರವು ವಿನಾಶಿ, ಆತ್ಮವು ಅವಿನಾಶಿಯಾಗಿದೆ. ಸಂಸ್ಕಾರವೂ ಸಹ ಆತ್ಮದಲ್ಲಿಯೇ ಇರುತ್ತದೆ. ತಂದೆಯು ಪ್ರಶ್ನಿಸುತ್ತಾರೆ - ಹೇ ಆತ್ಮ, ಸ್ಮೃತಿಯಲ್ಲಿ ತಂದುಕೊ, ಈ ಜನ್ಮದ ಬಾಲ್ಯದಲ್ಲಿ ಯಾವುದೇ ವಿರುದ್ಧವಾದ ಕೆಲಸವಂತೂ ಮಾಡಿಲ್ಲವೆ? 3-4 ವರ್ಷಗಳಿಂದ ಹಿಡಿದು ನೆನಪಂತೂ ಇರುತ್ತದೆ, ನಾವು ಬಾಲ್ಯವನ್ನು ಹೇಗೆ ಕಳೆದೆವು, ಏನೇನು ಮಾಡಿದೆವು? ಯಾವುದೇ ಮಾತು ಹೃದಯದಲ್ಲಿ ತಿನ್ನುತ್ತಿಲ್ಲವೆ? ಸತ್ಯಯುಗದಲ್ಲಿ ಪಾಪ ಕರ್ಮಗಳು ಆಗುವುದೇ ಇಲ್ಲ. ಆದ್ದರಿಂದ ಕೇಳುವ ಮಾತೂ ಸಹ ಇರುವುದಿಲ್ಲ. ಇಲ್ಲಂತೂ ಪಾಪಗಳು ಅವಶ್ಯವಾಗಿ ಆಗುತ್ತವೆ. ಮನುಷ್ಯರು ಯಾವುದನ್ನು ಪುಣ್ಯದ ಕೆಲಸವೆಂದು ತಿಳಿಯುವರೋ ಅದೂ ಸಹ ಪಾಪವಾಗಿದೆ, ಇದು ಪಾಪಾತ್ಮರ ಪ್ರಪಂಚವಾಗಿದೆ. ನಿಮ್ಮ ವ್ಯವಹಾರವೆಲ್ಲವೂ ಪಾಪಾತ್ಮರೊಂದಿಗಿದೆ, ಇಲ್ಲಿ ಪುಣ್ಯಾತ್ಮರು ಇಲ್ಲವೇ ಇಲ್ಲ. ಪುಣ್ಯಾತ್ಮರ ಪ್ರಪಂಚದಲ್ಲಿ ಒಬ್ಬರೂ ಪಾಪಾತ್ಮರಿರುವುದಿಲ್ಲ, ಪಾಪಾತ್ಮರ ಪ್ರಪಂಚದಲ್ಲಿ ಒಬ್ಬರೂ ಪುಣ್ಯಾತ್ಮರಿರಲು ಸಾಧ್ಯವಿಲ್ಲ. ಯಾವ ಗುರುಗಳ ಚರಣಗಳಲ್ಲಿ ಬೀಳುವರೋ ಅವರೂ ಸಹ ಪುಣ್ಯಾತ್ಮರಲ್ಲ. ಈ ಕಲಿಯುಗವೇ ತಮೋಪ್ರಧಾನವಾಗಿದೆ ಅಂದಮೇಲೆ ಇದರಲ್ಲಿ ಪುಣ್ಯಾತ್ಮರಾಗುವುದೇ ಅಸಂಭವವಾಗಿದೆ. ಪುಣ್ಯಾತ್ಮರಾಗುವುದಕ್ಕಾಗಿಯೇ ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಆತ್ಮಗಳನ್ನಾಗಿ ಮಾಡಿ ಎಂದು ಕರೆಯುತ್ತಾರೆ. ಯಾರಾದರೂ ಬಹಳಷ್ಟು ದಾನ-ಪುಣ್ಯ ಮಾಡುತ್ತಾರೆ, ಧರ್ಮ ಶಾಲೆಗಳನ್ನು ಕಟ್ಟಿಸುತ್ತಾರೆಂದರೆ ಅವರು ಪುಣ್ಯಾತ್ಮರೆಂದಲ್ಲ. ವಿವಾಹಕ್ಕಾಗಿ ಮಂಟಪಗಳನ್ನು ಕಟ್ಟಿಸಿದರೆ ಅವರೂ ಪುಣ್ಯಾತ್ಮರಾಗಲಿಲ್ಲ, ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಇದು ಪಾಪಾತ್ಮರ ರಾಜ್ಯ, ಅಸುರೀ ಆತ್ಮಗಳ ಪ್ರಪಂಚವಾಗಿದೆ. ಈ ಮಾತುಗಳು ನಿಮ್ಮ ವಿನಃ ಮತ್ತ್ಯಾರಿಗೂ ಗೊತ್ತಿಲ್ಲ. ಭಲೆ ರಾವಣನಿದ್ದಾನೆ ಆದರೆ ರಾವಣನನ್ನು ಯಾರೂ ಸಹ ಅರಿತುಕೊಂಡಿಲ್ಲ. ಶಿವನ ಚಿತ್ರವೂ ಇದೆ ಆದರೆ ಶಿವನ ಬಗ್ಗೆ ಅರಿತುಕೊಂಡಿಲ್ಲ. ದೊಡ್ಡ-ದೊಡ್ಡ ಶಿವ ಲಿಂಗಗಳನ್ನು ಮಾಡುತ್ತಾರೆ, ಆದರೂ ಸಹ ಅವರು ನಾಮ-ರೂಪದಿಂದ ಭಿನ್ನರಾಗಿದ್ದಾರೆ, ಸರ್ವವ್ಯಾಪಿಯಾಗಿದ್ದಾರೆಂದು ಹೇಳುತ್ತಾರೆ. ಆದ್ದರಿಂದಲೇ ತಂದೆಯು ಹೇಳಿದ್ದಾರೆ - ಯಧಾ ಯಧಾಹಿ ಧರ್ಮಸ್ಯ, ಗ್ಲಾನಿರ್ಭವತಿ ಭಾರತಃ....... ಭಾರತದಲ್ಲಿಯೇ ಶಿವ ತಂದೆಯ ನಿಂದನೆಯಾಗುತ್ತದೆ. ಯಾವ ತಂದೆಯು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರಿಗೆ ನೀವು ಮನುಷ್ಯ ಮತದಂತೆ ನಡೆದು ಎಷ್ಟೊಂದು ನಿಂದನೆ ಮಾಡುತ್ತೀರಿ ಮನುಷ್ಯ ಮತ ಮತ್ತು ಈಶ್ವರೀಯ ಮತದ ಪುಸ್ತಕವೂ ಇದೆಯಲ್ಲವೆ. ಇದು ನಿಮಗೇ ತಿಳಿದಿದೆ ಮತ್ತು ನಾವು ಶ್ರೀಮತದನುಸಾರ ದೇವತೆಗಳಾಗುತ್ತೇವೆ ಎಂದು ನೀವೇ ತಿಳಿಸುತ್ತೀರಿ. ರಾವಣನ ಮತದಂತೆ ಆಸುರೀ ಮನುಷ್ಯರಾಗಿ ಬಿಡುತ್ತಾರೆ. ಮನುಷ್ಯ ಮತಕ್ಕೆ ಆಸುರೀ ಮತವೆಂದು ಕರೆಯುತ್ತಾರೆ, ಏಕೆಂದರೆ ಆಸುರೀ ಕರ್ತವ್ಯವನ್ನು ಮಾಡುತ್ತಿರುತ್ತಾರೆ. ಮೂಲ ಮಾತೇನೆಂದರೆ ಈಶ್ವರನಿಗೆ ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ. ಮೀನು-ಮೊಸಳೆ ಅವತಾರ ಎಂದು ಹೇಳುತ್ತಾರೆ ಅಂದಮೇಲೆ ನೋಡಿ, ಎಷ್ಟೊಂದು ಆಸುರೀ ಮತದವರಾಗಿ ಬಿಟ್ಟಿದ್ದಾರೆ. ನೀವು ಆತ್ಮಗಳು ಮೀನು-ಮೊಸಳೆಯ ಅವತಾರವನ್ನು ತೆಗೆದುಕೊಳ್ಳುವುದಿಲ್ಲ. ಮನುಷ್ಯನ ತನುವಿನಲ್ಲಿಯೇ ಬರುತ್ತೀರಿ, ಈಗ ನೀವು ತಿಳಿದುಕೊಳ್ಳುತ್ತೀರಿ - ನಾವು ಯಾವುದೇ ಮೀನು-ಮೊಸಳೆಯಾಗುವುದಿಲ್ಲ. 84 ಲಕ್ಷ ಯೋನಿಗಳಲ್ಲಿ ಬರುವುದಿಲ್ಲ. ಈಗ ನಿಮಗೆ ತಂದೆಯ ಶ್ರೀಮತವು ಸಿಗುತ್ತದೆ - ಮಕ್ಕಳೇ, ನೀವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. 84 ಜನ್ಮ ಮತ್ತು 84 ಲಕ್ಷ ಜನ್ಮಗಳ ಪರ್ಸೆಂಟೇಜ್ ಏನು ಹೇಳುತ್ತೀರಿ! ಅಸತ್ಯವೆಂದರೆ ಪೂರ್ಣ ಅಸತ್ಯವಿದೆ, ಸತ್ಯದ ಅಂಶವೂ ಸಹ ಇಲ್ಲ. ಇದರ ಅರ್ಥವನ್ನೂ ತಿಳಿದುಕೊಳ್ಳಬೇಕು - ಭಾರತದ ಸ್ಥಿತಿ ನೋಡಿ, ಏನಾಗಿದೆ! ಭಾರತವು ಸತ್ಯ ಖಂಡವಾಗಿತ್ತು, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತಿತ್ತು, ಅರ್ಧಕಲ್ಪ ರಾಮ ರಾಜ್ಯ, ಇನ್ನರ್ಧ ಕಲ್ಪ ರಾವಣ ರಾಜ್ಯ. ರಾವಣ ರಾಜ್ಯಕ್ಕೆ ಅಸುರೀ ಸಂಪ್ರದಾಯವೆಂದು ಹೇಳುತ್ತಾರೆ. ಎಷ್ಟೊಂದು ಕಠಿಣ ಅಕ್ಷರವಾಗಿದೆ. ಅರ್ಧಕಲ್ಪ ದೇವತೆಗಳ ರಾಜ್ಯವು ನಡೆಯುತ್ತದೆ. ತಂದೆಯು ತಿಳಿಸುತ್ತಾರೆ - ಲಕ್ಷ್ಮಿ-ನಾರಾಯಣ ದಿ ಫಸ್ಟ್, ಸೆಕೆಂಡ್, ಥರ್ಡ್..... ನಡೆಯುತ್ತದೆ. ಹೇಗೆ ಎಡ್ವರ್ಡ್ ದಿ ಫಸ್ಟ್, ಸೆಕೆಂಡ್, ಇರುತ್ತದೆಯಲ್ಲವೆ! ಮೊದಲ ಪೀಳಿಗೆ ಮತ್ತೆ ಎರಡನೆ ಪೀಳಿಗೆ ಹೀಗೆ ನಡೆಯುತ್ತದೆ. ಹಾಗೆಯೇ ನಿಮ್ಮದೂ ಸಹ ಮೊದಲು ಸೂರ್ಯವಂಶಿ ರಾಜ್ಯ ನಂತರ ಚಂದ್ರವಂಶಿ ಇರುತ್ತದೆ. ತಂದೆಯು ಬಂದು ನಾಟಕದ ರಹಸ್ಯವನ್ನು ಚೆನ್ನಾಗಿ ತಿಳಿಸುತ್ತಾರೆ. ನಿಮ್ಮ ಶಾಸ್ತ್ರಗಳಲ್ಲಿ ಈ ಮಾತುಗಳಿರಲಿಲ್ಲ. ಕೆಲ ಕೆಲವು ಶಾಸ್ತ್ರಗಳಲ್ಲಿ ಕೆಲವೊಂದು ಸತ್ಯಾಂಶಗಳಿವೆ, ಆದರೆ ಆ ಸಮಯದಲ್ಲಿ ಯಾರು ಗ್ರಂಥಗಳನ್ನು ರಚಿಸಿದರೋ ಅವರು ಏನನ್ನೂ ತಿಳಿದುಕೊಳ್ಳಲಿಲ್ಲ.

ತಂದೆ (ಬ್ರಹ್ಮ) ಯೂ ಸಹ ಕಾಶಿಗೆ ಹೋಗಿದ್ದರು, ಆ ಸಮಯದಲ್ಲಿ ಈ ಪ್ರಪಂಚವು ಇಷ್ಟವಾಗುತ್ತಿರಲಿಲ್ಲ. ಅಲ್ಲಿ ಗೋಡೆಗಳ ಮೇಲೆ ಚಿತ್ರಗಳನ್ನು ಚಿತ್ರಿಸುತ್ತಿದ್ದರು, ಇದೆಲ್ಲವನ್ನೂ ಶಿವ ತಂದೆಯು ಮಾಡಿಸುತ್ತಿದ್ದರು. ಆದರೆ ನಾವಂತೂ ಆ ಸಮಯದಲ್ಲಿ ಮಕ್ಕಳಾಗಿದ್ದೆವು. ಪೂರ್ಣ ತಿಳುವಳಿಕೆ ಬಂದಿದೆ. ನಮ್ಮಿಂದ ಯಾರೋ ಮಾಡಿಸುತ್ತಿದ್ದಾರೆ ಎಂಬುದಷ್ಟೇ ತಿಳಿಯುತ್ತದೆ. ವಿನಾಶವನ್ನು ನೋಡಿದ್ದರಿಂದ ಆಂತರಿಕವಾಗಿ ಖುಷಿಯೂ ಇತ್ತು, ರಾತ್ರಿಯಲ್ಲಿ ಮಲಗಿದ್ದಾಗಲೂ ಸಹ ಹೇಗೆ ಮೇಲೆ ಹಾರುತ್ತಿದ್ದೆವು ಆದರೆ ಏನೂ ಅರ್ಥವಾಗುತ್ತಿರಲಿಲ್ಲ. ಸುಮ್ಮನೇ ಹೀಗೇಕೆ ಗೆರೆಗಳನ್ನು ಎಳೆಯುತ್ತಾ ಇದ್ದೆನು, ಯಾವುದೋ ಶಕ್ತಿಯ ಪ್ರವೇಶತೆಯಾಗಿದೆ ಎಂದು ಹೇಳಿ ನಾನು ಆಶ್ಚರ್ಯ ಪಡುತ್ತಿದ್ದೆನು. ಮೊದಲಂತೂ ವ್ಯಾಪಾರ ಮೊದಲಾದುದನ್ನು ಮಾಡುತ್ತಿದ್ದೆನು, ನಂತರ ಏನಾಯಿತೋ, ಯಾರನ್ನೇ ನೋಡಿದರೂ ತಕ್ಷಣ ಧ್ಯಾನದಲ್ಲಿ ಹೊರಟು ಹೋಗುತ್ತಿದ್ದರು. ಏನಾಗುತ್ತದೆ, ಯಾರನ್ನೇ ನೋಡಿದರೂ ಅವರ ಕಣ್ಣುಗಳು ಮುಚ್ಚಿ ಹೋಗುತ್ತವೆ ಎಂದು ಹೇಳುತ್ತಿದ್ದೆನು. ಏನು ನೋಡಿದಿರಿ ಎಂದು ಅವರನ್ನು ಕೇಳಿದರೆ ವೈಕುಂಠ ನೋಡಿದೆವು, ಕೃಷ್ಣನನ್ನು ನೋಡಿದೆವು ಎಂದು ಹೇಳುತ್ತಿದ್ದರು. ಇವೆಲ್ಲವೂ ಸಹ ತಿಳಿದುಕೊಳ್ಳುವ ಮಾತುಗಳಾಯಿತಲ್ಲವೆ, ಆದ್ದರಿಂದ ಎಲ್ಲವನ್ನೂ ಬಿಟ್ಟು ಇದನ್ನು ಯಥಾರ್ಥವಾಗಿ ಅರಿತುಕೊಳ್ಳಲು ಕಾಶಿಗೆ ಹೊರಟು ಹೋದೆನು. ಇಡೀ ದಿನ ಕುಳಿತುಕೊಂಡಿರುತ್ತಿದ್ದೆನು, ಪೆನ್ಸಿಲ್ ಮತ್ತು ಗೋಡೆಯನ್ನು ಬಿಟ್ಟರೆ ಮತ್ತ್ಯಾವುದೇ ವ್ಯವಹಾರವನ್ನು ಮಾಡುತ್ತಿರಲಿಲ್ಲ. ಆಗ ಇನ್ನೂ ಜ್ಞಾನದಲ್ಲಿ ಮಗುವಾಗಿದ್ದೆನಲ್ಲವೆ! ಯಾವಾಗ ಇದೆಲ್ಲವನ್ನೂ ನೋಡಿದೆನೋ ಆಗ ಈ ಉದ್ಯೋಗ-ವ್ಯವಹಾರಗಳನ್ನು ಮಾಡಬಾರದು, ವ್ಯವಹಾರಗಳನ್ನೇನು ಮಾಡುವುದು! ಕೊನೆಗೆ ಇದೆಲ್ಲವನ್ನೂ ಬಿಡಲೇಬೇಕಾಗುತ್ತದೆಯೆಂದು ತಿಳಿಯಿತು ಮತ್ತು ಇನ್ನೊಂದು ಕಡೆ ಇಲ್ಲಿ ಏನೇ ಇದ್ದರೂ ಇದೆಲ್ಲವೂ ಗುಲಾಮಿತನವಾಗಿದೆ. ಇದನ್ನು ಬಿಡಬೇಕಾಗಿದೆ ಎಂಬ ಖುಷಿಯಿತ್ತು ಏಕೆಂದರೆ ರಾವಣ ರಾಜ್ಯವಲ್ಲವೆ. ರಾವಣನಿಗೆ ಕತ್ತೆಯ ತಲೆಯನ್ನು ತೋರಿಸುತ್ತಾರೆ ಅಂದಮೇಲೆ ಇದು ರಾಜ್ಯ ಭಾಗ್ಯವಲ್ಲ, ಗುಲಾಮಿತನವೆಂಬುದು ವಿಚಾರ ಬಂದಿತು. ಹೇಗೆ ಕತ್ತೆಯು ಪದೇ-ಪದೇ ಮಣ್ಣಿನಲ್ಲಿ ಹೊರಳಾಡಿ ಅಗಸನ ಬಟ್ಟೆಗಳೆಲ್ಲವನ್ನೂ ಹಾಳು ಮಾಡಿ ಬಿಡುತ್ತದೆ. ತಂದೆಯೂ ಸಹ ಹೇಳುತ್ತಾರೆ - ನೀವು ಏನಾಗಿದ್ದಿರಿ, ಈಗ ನಿಮ್ಮ ಸ್ಥಿತಿಯು ಏನಾಗಿ ಬಿಟ್ಟಿದೆ, ಇದನ್ನೂ ತಂದೆಯೂ ತಿಳಿಸುತ್ತಾರೆ ಮತ್ತು ದಾದಾರವರೂ ತಿಳಿಸುತ್ತಾರೆ. ಇಬ್ಬರ ವಾರ್ತಾಲಾಪವೂ ನಡೆಯುತ್ತಿರುತ್ತದೆ. ಜ್ಞಾನದಲ್ಲಿ ಯಾರು ಬಹಳ ಚೆನ್ನಾಗಿ ತಿಳಿಸಿಕೊಡುತ್ತಾರೆಯೋ ಅವರನ್ನು ತೀಕ್ಷ್ಣ ಬುದ್ಧಿಯವರೆಂದು ಹೇಳುತ್ತಾರೆ. ನಂಬರ್ವಾರಂತೂ ಇದ್ದಾರಲ್ಲವೆ. ನೀವು ಮಕ್ಕಳೂ ಸಹ ಜ್ಞಾನವನ್ನು ತಿಳಿಸಿಕೊಡುತ್ತೀರಿ. ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಅವಶ್ಯವಾಗಿ ನಂಬರ್ವಾರ್ ಪದವಿಯನ್ನು ಪಡೆಯುತ್ತಾರೆ. ಆತ್ಮವೇ ಕಲ್ಪ-ಕಲ್ಪವೂ ತನ್ನ ಪಾತ್ರವನ್ನಭಿನಯಿಸುತ್ತದೆ. ಎಲ್ಲರೂ ಒಂದೇ ಸಮನಾಗಿ ಜ್ಞಾನವನ್ನು ತಿಳಿದುಕೊಳ್ಳುವುದಿಲ್ಲ. ಈ ಸ್ಥಾಪನೆಯು ವಿಚಿತ್ರವಾಗಿದೆ. ಬೇರೆ ಯಾರೂ ಈ ಸ್ಥಾಪನೆಯ ಜ್ಞಾನವನ್ನು ಕೊಡುವುದಿಲ್ಲ. ತಿಳಿಯಿರಿ, ಸಿಖ್ಖ್ ಧರ್ಮದ ಸ್ಥಾಪನೆಯಾಯಿತು, ಶುದ್ಧ ಆತ್ಮವು ಪ್ರವೇಶ ಮಾಡಿತು, ಸ್ವಲ್ಪ ಸಮಯದ ನಂತರ ಸಿಖ್ಖ್ ಧರ್ಮದ ಸ್ಥಾಪನೆಯಾಯಿತು, ಅವರ ಮುಖ್ಯಸ್ಥರು ಯಾರು? ಗುರುನಾನಕರು. ಅವರು ಬಂದು ಜಪ ಸಾಹೇಬ್ ಎಂಬ ಗ್ರಂಥವನ್ನು ರಚಿಸಿದರು. ಮೊದಲಂತೂ ಹೊಸ ಆತ್ಮಗಳೇ ಇರುತ್ತಾರೆ ಏಕೆಂದರೆ ಪವಿತ್ರ ಆತ್ಮಗಳಾಗಿರುತ್ತಾರೆ. ಪವಿತ್ರರಿಗೆ ಮಹಾನ್ ಆತ್ಮಗಳೆಂದು ಹೇಳುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ಎಂದು ಒಬ್ಬ ತಂದೆಗೇ ಹೇಳಲಾಗುತ್ತದೆ. ಅವರೂ ಸಹ ಧರ್ಮ ಸ್ಥಾಪನೆ ಮಾಡುತ್ತಾರೆಂದರೆ ಅವರಿಗೆ ಮಹಾನ್ ಎಂದು ಹೇಳುತ್ತಾರೆ ಆದರೆ ನಂಬರ್ವಾರ್ ಆಗಿ ಒಬ್ಬರ ಹಿಂದೆ ಇನ್ನೊಬ್ಬರು ಬರುತ್ತಾರೆ. 500 ವರ್ಷಗಳಿಗೆ ಮೊದಲು ಒಂದು ಆತ್ಮವು ಬಂದು ಸಿಖ್ಖ್ ಧರ್ಮದ ಸ್ಥಾಪನೆ ಮಾಡಿದರು, ಆ ಸಮಯದಲ್ಲಿ ಗ್ರಂಥವೆಲ್ಲಿಂದ ಬಂದಿತು! ಅವಶ್ಯವಾಗಿ ಜಪ ಸಾಹೇಬ್ ಮೊದಲಾದ ಗ್ರಂಥಗಳನ್ನು ನಂತರದಲ್ಲಿಯೇ ರಚಿಸಿರುತ್ತಾರಲ್ಲವೆ! ಅವರು ಏನು ಶಿಕ್ಷಣವನ್ನು ಕೊಡುತ್ತಾರೆ? ಅವರಿಗೆ ಉಮ್ಮಂಗವು ಬರುತ್ತದೆ, ಆಗ ಕುಳಿತು ತಂದೆಯ ಮಹಿಮೆ ಮಾಡುತ್ತಾರೆ, ನಂತರ ಈ ಪುಸ್ತಕ ಮೊದಲಾದುವುಗಳು ರಚಿಸಲ್ಪಡುತ್ತವೆ. ಏಕೆಂದರೆ ರಚನೆಯಾದ ಪುಸ್ತಕಗಳನ್ನು ಓದುವವರು ಇರಬೇಕಲ್ಲವೆ. ಎಲ್ಲರ ಶಾಸ್ತ್ರಗಳು ಕೊನೆಯಲ್ಲಿಯೇ ರಚಿಸಲ್ಪಡುತ್ತದೆ. ಯಾವಾಗ ಭಕ್ತಿಮಾರ್ಗವು ಪ್ರಾರಂಭವಾಗುವುದೋ ಆಗ ಶಾಸ್ತ್ರಗಳನ್ನು ಓದುವರು. ಜ್ಞಾನವೂ ಬೇಕಲ್ಲವೆ! ಮೊದಲು ಸತೋಪ್ರಧಾನರಾಗಿರುತ್ತಾರೆ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ಯಾವಾಗ ಜನಸಂಖ್ಯೆಯು ಬಹಳ ವೃದ್ಧಿಯಾಗುವುದೋ ಆಗಲೇ ಮಹಿಮೆಯಾಗುತ್ತದೆ ಮತ್ತು ಶಾಸ್ತ್ರಗಳು ರಚಿಸಲ್ಪಡುತ್ತದೆ ಇಲ್ಲವೆಂದರೆ ಯಾರು ವೃದ್ಧಿ ಮಾಡುವುದು! ಅನುಯಾಯಿಗಳಾಗಬೇಕಲ್ಲವೆ. ಸಿಖ್ಖ್ ಧರ್ಮದ ಆತ್ಮಗಳು ಬಂದು ಅವರ ನಿಯಮಗಳನ್ನು ಪಾಲಿಸುತ್ತಾರೆ, ಅದರಲ್ಲಿ ಬಹಳ ಸಮಯವು ಬೇಕು.

ಹೊಸ ಆತ್ಮಗಳು ಬರುತ್ತವೆಯೆಂದರೆ ಅವರಿಗೆ ದುಃಖವಂತೂ ಸಿಗಲು ಸಾಧ್ಯವಿಲ್ಲ. ಇದು ನಿಯಮವೇ ಇಲ್ಲ. ಆತ್ಮವು ಸತೋಪ್ರಧಾನದಿಂದ ಸತೋ, ರಜೋ, ತಮೋದಲ್ಲಿ ಬಂದಾಗಲೇ ಅದಕ್ಕೆ ದುಃಖವುಂಟಾಗುತ್ತದೆ. ಈ ಖಾಯಿದೆಯೂ ಇದೆಯಲ್ಲವೆ! ಇಲ್ಲಿ ಬೆರಕೆಯಾಗಿ ಬಿಟ್ಟಿದೆ, ರಾವಣ ಸಂಪ್ರದಾಯವೂ ಇದೆ ಮತ್ತು ರಾಮನ ಸಂಪ್ರದಾಯವೂ ಇದೆ. ಇನ್ನೂ ಸಂಪೂರ್ಣರಾಗಿಲ್ಲ. ಸಂಪೂರ್ಣರಾದರೆ ಮತ್ತೆ ಶರೀರವನ್ನು ಬಿಟ್ಟು ಬಿಡುತ್ತೀರಿ. ಕರ್ಮಾತೀತ ಸ್ಥಿತಿಯನ್ನು ತಲುಪಿದವರಿಗೆ ಯಾವುದೇ ದುಃಖವಾಗಲು ಸಾಧ್ಯವಿಲ್ಲ ಮತ್ತು ಅವರು ಈ ಪತಿತ ಪ್ರಪಂಚದಲ್ಲಿ ಇರಲು ಸಾಧ್ಯವಿಲ್ಲ. ಅವರು ಹೊರಟು ಹೋಗುತ್ತಾರೆ ಬಾಕಿ ಯಾರು ಉಳಿದುಕೊಳ್ಳುವರೋ ಅವರು ಇನ್ನೂ ಕರ್ಮಾತೀತರಾಗಿಲ್ಲವೆಂದರ್ಥ. ಎಲ್ಲರೂ ಒಮ್ಮೆಲೆ ಕರ್ಮಾತೀತರಾಗಿ ಬಿಡುವುದಿಲ್ಲ. ಭಲೆ ವಿನಾಶವಾಗುತ್ತದೆ ಆದರೂ ಸಹ ಇನ್ನೂ ಕೆಲವರು ಉಳಿದಿರುತ್ತಾರೆ, ಪ್ರಳಯವಾಗುವುದಿಲ್ಲ. ರಾಮನೂ ಹೋದ, ರಾವಣನೂ ಹೋದ ಎಂದು ಗಾಯನವಿದೆ. ರಾವಣನ ಪರಿವಾರವು ಬಹಳಷ್ಟಿತ್ತು, ನಮ್ಮ ಪರಿವಾರವು ಬಹಳ ಚಿಕ್ಕದಾಗಿದೆ. ಅವರದು ಎಷ್ಟೊಂದು ಧರ್ಮಗಳಿವೆ. ವಾಸ್ತವದಲ್ಲಿ ನಮ್ಮದು ಎಲ್ಲರಿಗಿಂತ ದೊಡ್ಡ ಪರಿವಾರವಿರಬೇಕು, ಏಕೆಂದರೆ ದೇವಿ-ದೇವತಾ ಧರ್ಮವೇ ಎಲ್ಲದಕ್ಕಿಂತ ಮೊದಲಿನ ಮೂಲ ಧರ್ಮವಾಗಿದೆ. ಈಗಂತೂ ಎಲ್ಲರೂ ಬೆರಕೆಯಾಗಿಬಿಟ್ಟಿರುವುದರಿಂದ ಕ್ರಿಶ್ಚಿಯನ್ನರ ಜನಸಂಖ್ಯೆಯು ಹೆಚ್ಚಾಗಿಬಿಟ್ಟಿದೆ. ಮನುಷ್ಯರು ಎಲ್ಲಿ ಸುಖ ನೋಡುತ್ತಾರೆ, ಅಧಿಕಾರವನ್ನು ನೋಡುತ್ತಾರೆ ಹೋಗಿ ಆ ಧರ್ಮದವರಾಗಿಬಿಡುತ್ತಾರೆ. ಪ್ರತೀ ಕಲ್ಪದಲ್ಲಿಯೂ ಪೋಪ್ ಬಂದಾಗ ಅನೇಕರು ಕ್ರಿಶ್ಚಿಯನ್ನರಾಗುತ್ತಾರೆ ಮತ್ತೆ ಬಹಳ ವೃದ್ಧಿಯೂ ಆಗುತ್ತದೆ. ಸತ್ಯಯುಗದಲ್ಲಿ ಒಬ್ಬ ಮಗ, ಒಬ್ಬ ಮಗಳಷ್ಟೆ ಇರುತ್ತಾರೆ ಮತ್ತ್ಯಾವುದೇ ಧರ್ಮಗಳು ಈ ರೀತಿ ವೃದ್ಧಿಯಾಗುವುದಿಲ್ಲ. ಈಗಂತೂ ನೋಡಿ ಕ್ರಿಶ್ಚಿಯನ್ನರು ಎಲ್ಲರಿಗಿಂತಲೂ ಮುಂದಿದ್ದಾರೆ. ಯಾರು ಬಹಳ ಮಕ್ಕಳಿಗೆ ಜನ್ಮ ನೀಡುವರೋ ಅವರಿಗೆ ಬಹುಮಾನವು ಸಿಗುತ್ತದೆ. ಏಕೆಂದರೆ ಅವರಿಗೆ ಮನುಷ್ಯರ ಸಂಖ್ಯೆಯು ಹೆಚ್ಚಾಗಬೇಕಲ್ಲವೆ. ಅವರು ಸೈನಿಕ ದಳದಲ್ಲಿ ಕೆಲಸಕ್ಕೆ ಬರುವರು. ಹಾಗೆ ನೋಡಿದರೆ ಎಲ್ಲರೂ ಕ್ರಿಶ್ಚಿಯನ್ನರೇ. ರಷ್ಯಾ, ಅಮೇರಿಕಾ ಎಲ್ಲರೂ ಒಂದೇ ಕುಲದವರಾಗಿದ್ದಾರೆ. ಒಂದು ಕಥೆಯೂ ಇದೆಯಲ್ಲವೆ - ಎರಡು ಬೆಕ್ಕುಗಳು ಕಚ್ಚಾಡಿದವು, ನಡುವೆ ಬೆಣ್ಣೆಯನ್ನು ಕೋತಿಯು ತಿಂದು ಹೋಯಿತು.... ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ಮೊದಲಂತೂ ಹಿಂದೂ-ಮುಸಲ್ಮಾನರು ಒಟ್ಟಿಗೆ ಇರುತ್ತಿದ್ದರು. ಯಾವಾಗ ಬೇರೆಯಾದರೋ ಆಗ ಪಾಕಿಸ್ತಾನದ ಹೊಸ ರಾಜ್ಯಾಡಳಿತವು ಎದ್ದು ನಿಂತಿತು. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ಯಾವಾಗ ಇಬ್ಬರು ಹೊಡೆದಾಡುವರೋ ಆಗಲೇ ನಡುವೆ ಅವರ ಅಣ್ವಸ್ತ್ರಗಳು ಕೆಲಸಕ್ಕೆ ಬರುತ್ತವೆ. ಅವರ ವ್ಯಾಪಾರವೇ ಇದಾಗಿದೆ. ಆದರೆ ನಾಟಕದಲ್ಲಿ ವಿಜಯವು ನಿಮ್ಮದಾಗಿದೆ, ಇದು 100% ನಿಶ್ಚಿತವಾಗಿದೆ. ಯಾರೂ ನಿಮ್ಮನ್ನು ಜಯಿಸಲು ಸಾಧ್ಯವಿಲ್ಲ, ಉಳಿದವರೆಲ್ಲರೂ ಸಮಾಪ್ತಿಯಾಗುತ್ತಾರೆ. ಹೊಸ ಪ್ರಪಂಚದಲ್ಲಿ ನಮ್ಮ ರಾಜ್ಯವಿರುವುದೆಂದು ನಿಮಗೆ ತಿಳಿದಿದೆ ಅದಕ್ಕಾಗಿಯೇ ನೀವು ಓದುತ್ತೀರಿ, ಯೋಗ್ಯರಾಗುತ್ತೀರಿ. ನೀವು ಯೋಗ್ಯರಾಗಿದ್ದಿರಿ ಈಗ ಅಯೋಗ್ಯರಾಗಿ ಬಿಟ್ಟಿದ್ದೀರಿ, ಈಗ ಮತ್ತೆ ಯೋಗ್ಯರಾಗಬೇಕಾಗಿದೆ. ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಇದೆಲ್ಲವೂ ಕಾಡಾಗಿದೆ, ಈಗ ತಂದೆಯು ಬಂದು ಮುಳ್ಳಿನ ಕಾಡನ್ನು ಹೂದೋಟವನ್ನಾಗಿ ಮಾಡುತ್ತಾರೆ, ಅದು ದೈವೀ ಪ್ರಪಂಚವಾಗಿದೆ. ಇದು ದೆವ್ವದ ಪ್ರಪಂಚವಾಗಿದೆ. ಇಡೀ ಮನುಷ್ಯ ಸೃಷ್ಟಿಯ ರಹಸ್ಯವನ್ನು ತಿಳಿಸಲಾಗಿದೆ. ನಾವು ನಮ್ಮ ಧರ್ಮವನ್ನು ಮರೆತು ಧರ್ಮ ಭ್ರಷ್ಟರಾಗಿ ಬಿಟ್ಟಿದ್ದೇವೆ ಎಂಬುದನ್ನು ನೀವು ಈಗ ತಿಳಿದುಕೊಂಡಿದ್ದೀರಿ. ಇಲ್ಲಿ ಎಲ್ಲರ ಕರ್ಮವು ವಿಕರ್ಮವೇ ಆಗಿರುತ್ತದೆ, ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು ತಂದೆಯು ನಿಮಗೆ ತಿಳಿಸಿಕೊಟ್ಟು ಹೋಗಿದ್ದರು. ನಾವು ನೆನ್ನೆ ಅಂತಹವರಾಗಿದ್ದೆವು, ಮತ್ತೆ ಈಗ ಅಂತಹವರಾಗುತ್ತಾ ಇದ್ದೇವೆ ಅಂದಾಗ ಇದು ಸಮೀಪದಲ್ಲಿದೆಯಲ್ಲವೆ! ನೆನ್ನೆ ನಿಮ್ಮನ್ನು ದೇವತೆಗಳನ್ನಾಗಿ ಮಾಡಿದೆನು ಎಂದು ತಂದೆಯು ತಿಳಿಸುತ್ತಾರೆ, ರಾಜ್ಯಭಾಗ್ಯವನ್ನು ಕೊಟ್ಟಿದ್ದೆನು ಮತ್ತೆ ಅದೆಲ್ಲವೂ ಏನು ಮಾಡಿದಿರಿ, ಎಲ್ಲಿಗೆ ಹೋಯಿತು? ನಾವು ಭಕ್ತಿಮಾರ್ಗದಲ್ಲಿ ಎಷ್ಟೊಂದು ಹಣವನ್ನು ಹಾಳು ಮಾಡಿದೆವು ಎಂಬುದು ತಮ್ಮ ಸ್ಮೃತಿಗೆ ಬಂದಿದೆ. ನೆನ್ನೆಯ ಮಾತಲ್ಲವೆ. ತಂದೆಯು ಬಂದು ಅಂಗೈಯಲ್ಲಿ ಸ್ವರ್ಗವನ್ನು ನೀಡುತ್ತಿದ್ದಾರೆ, ಈ ಜ್ಞಾನವು ಬುದ್ಧಿಯಲ್ಲಿರಬೇಕಾಗಿದೆ. ಈ ಕಣ್ಣುಗಳು ಎಷ್ಟು ಮೋಸ ಮಾಡುತ್ತವೆ ಎಂಬುದನ್ನೂ ಸಹ ತಂದೆಯು ತಿಳಿಸಿದ್ದಾರೆ. ವಿಕಾರೀ ದೃಷ್ಟಿಯನ್ನು ಜ್ಞಾನದಿಂದ ನಿರ್ವಿಕಾರಿಯನ್ನಾಗಿ ಮಾಡಿಕೊಳ್ಳಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನಾನು ನೆನಪಿನಲ್ಲಿದ್ದು ಎಷ್ಟು ಲಾಭವನ್ನು ಹೆಚ್ಚಿಸಿಕೊಂಡೆನು? ಎಂದು ತಮ್ಮ ಬೇಹದ್ದಿನ ಡೈರಿಯಲ್ಲಿ ಚಾರ್ಟನ್ನು ನೋಡಿಕೊಳ್ಳಬೇಕು. ನಷ್ಟವಾಗಲಿಲ್ಲವೇನು? ನೆನಪಿನ ಸಮಯದಲ್ಲಿ ಬುದ್ಧಿಯು ಎಲ್ಲೆಲ್ಲಿಗೆ ಹೋಯಿತು?

2. ಈ ಜನ್ಮದಲ್ಲಿ ಬಾಲ್ಯತನದಿಂದಲೂ ನಮ್ಮಿಂದ ಯಾವ-ಯಾವ ಉಲ್ಟಾ ಕರ್ಮ ಅಥವಾ ಪಾಪಕರ್ಮವಾಗಿದೆಯೋ ಅದನ್ನು ನೋಟ್ ಮಾಡಿಕೊಳ್ಳಬೇಕು. ಯಾವ ಮಾತಿನಲ್ಲಿ ಮನಸ್ಸು ತಿನ್ನುತ್ತಾ ಇದೆ ಅದನ್ನು ತಂದೆಗೆ ತಿಳಿಸಿ ಹಗುರರಾಗಬೇಕು. ಈಗ ಯಾವುದೇ ಪಾಪ ಕರ್ಮವನ್ನು ಮಾಡಬಾರದು.

ವರದಾನ:
ಒಳ್ಳೆಯದರ ಮೇಲೆ ಫ್ರಭಾವಿತರಾಗುವ ಬದಲು ಅದನ್ನು ಸ್ವಯಂನಲ್ಲಿ ಧಾರಣೆ ಮಾಡುವಂತಹ ಪರಮಾತ್ಮ ಸ್ನೇಹಿ ಭವ.

ಒಂದುವೇಳೆ ಪರಮಾತ್ಮನ ಸ್ನೇಹಿಗಳಾಗಬೇಕಾದರೆ ದೇಹಾಭಿಮಾನದ ಅಡೆ-ತಡೆಗಳನ್ನು ಚೆಕ್ ಮಾಡಿ. ಎಷ್ಟೋ ಮಕ್ಕಳು ಹೇಳುತ್ತಾರೆ ಇವರು ಬಹಳ ಒಳ್ಳೆಯವರು ಆದ್ದರಿಂದ ಸ್ವಲ್ಪ ದಯೆ ಬರುವುದು.... ಕೆಲವರದು ಕೆಲವರ ಶರೀರದ ಮೇಲೆ ಸೆಳೆತವಿರುತ್ತೆ ಕೆಲವರಿಗೆ ಕೆಲವರ ಗುಣಗಳ ಅಥವಾ ವಿಶೇಷತೆಗಳೊಂದಿಗೆ ಸೆಳೆತ. ಆದರೆ ಆ ವಿಶೇಷತೆ ಅಥವಾ ಗುಣ ಕೊಟ್ಟವರು ಯಾರು? ಕೆಲವರು ಒಳ್ಳೆಯವರಾಗಿದ್ದರೆ ಅವರ ಒಳ್ಳೆಯತನವನ್ನು ಭಲೇ ಧಾರಣೆ ಮಾಡಿ. ಆದರೆ ಅವರ ಒಳ್ಳೆಯದರ ಮೇಲೆ ಫ್ರಭಾವಿತರಾಗಬೇಡಿ. ನ್ಯಾರೆ ಮತ್ತು ತಂದೆಗೆ ಪ್ಯಾರೆ ಆಗಿ. ಈ ರೀತಿ ಪ್ಯಾರೆ ಅರ್ಥಾತ್ ಪರಮಾತ್ಮ ಸ್ನೇಹಿ ಮಕ್ಕಳು ಸದಾ ಸುರಕ್ಷಿತರಾಗಿರುತ್ತಾರೆ.

ಸ್ಲೋಗನ್:
ಸೈಲೆನ್ಸ್ ನ ಶಕ್ತಿ ಇಮರ್ಜ್ ಮಾಡಿಕೊಳ್ಳಿ ಆಗ ಸೇವೆಯ ವೇಗ ತೀವ್ರವಾಗಿ ಬಿಡುವುದು.