06.11.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವೀಗ ಈಶ್ವರೀಯ ಸೇವೆಯಲ್ಲಿದ್ದೀರಿ, ನೀವು ಎಲ್ಲರಿಗೂ ಸುಖದ ಮಾರ್ಗವನ್ನು ತಿಳಿಸಬೇಕಾಗಿದೆ, ಸ್ಕಾಲರ್ಶಿಪ್ ತೆಗೆದುಕೊಳ್ಳುವ ಪುರುಷಾರ್ಥ ಮಾಡಬೇಕಾಗಿದೆ

ಪ್ರಶ್ನೆ:
ನೀವು ಮಕ್ಕಳ ಬುದ್ಧಿಯಲ್ಲಿ ಯಾವಾಗ ಚೆನ್ನಾಗಿ ಜ್ಞಾನದ ಧಾರಣೆಯಾಗಿ ಬಿಡುವುದೋ ಆಗ ಯಾವ ಭಯವು ಬಿಟ್ಟು ಹೋಗುವುದು?

ಉತ್ತರ:
ಭಕ್ತಿಯಲ್ಲಿ ಗುರುಗಳು ನಮಗೆ ಶಾಪ ಕೊಡುವರೆಂಬ ಭಯವಿರುತ್ತದೆ. ಜ್ಞಾನದಲ್ಲಿ ಬರುವುದರಿಂದ, ಜ್ಞಾನ ಧಾರಣೆ ಮಾಡಿಕೊಳ್ಳುವುದರಿಂದ ಈ ಭಯವು ಬಿಟ್ಟು ಹೋಗುತ್ತದೆ. ಏಕೆಂದರೆ ಜ್ಞಾನ ಮಾರ್ಗದಲ್ಲಿ ಯಾರೂ ಶಾಪ ಕೊಡಲು ಸಾಧ್ಯವಿಲ್ಲ. ರಾವಣನು ಶಾಪ ಕೊಡುತ್ತಾನೆ, ತಂದೆಯು ಆಸ್ತಿ ಕೊಡುತ್ತಾರೆ. ರಿದ್ಧಿ-ಸಿದ್ಧಿ ಕಲಿಯುವವರು ಹೀಗೆ ತೊಂದರೆ ಕೊಡುವ, ದುಃಖ ಕೊಡುವ ಕೆಲಸವನ್ನು ಮಾಡುತ್ತಾರೆ. ಜ್ಞಾನದಲ್ಲಂತೂ ನೀವು ಮಕ್ಕಳು ಎಲ್ಲರಿಗೂ ಸುಖ ಕೊಡುತ್ತೀರಿ.

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಾರೆ. ನೀವೆಲ್ಲರೂ ಮೂಲತಃ ಆತ್ಮಗಳಾಗಿದ್ದೀರಿ. ಇದು ಪಕ್ಕಾ ನಿಶ್ಚಯವಿರಬೇಕಾಗಿದೆ. ಮಕ್ಕಳಿಗೆ ಗೊತ್ತಿದೆ, ನಾವಾತ್ಮಗಳು ಇಲ್ಲಿ ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸಲು ಪರಮಧಾಮದಿಂದ ಬರುತ್ತೇವೆ. ಆತ್ಮವೇ ಪಾತ್ರವನ್ನಭಿನಯಿಸುತ್ತದೆ. ಮನುಷ್ಯರು ಶರೀರವೇ ಪಾತ್ರವನ್ನಭಿನಯಿಸುತ್ತದೆಯಂದು ತಿಳಿದುಕೊಳ್ಳುತ್ತಾರೆ. ಇದು ಅತಿ ದೊಡ್ಡ ತಪ್ಪಾಗಿದೆ ಯಾವ ಕಾರಣದಿಂದ ಯಾರೂ ಆತ್ಮನನ್ನೇ ಅರಿತುಕೊಂಡಿಲ್ಲ. ನಾವಾತ್ಮಗಳು ಈ ಜನನ-ಮರಣ ಚಕ್ರದಲ್ಲಿ ಬಂದು ಹೋಗುತ್ತೇವೆ ಎಂಬ ಮಾತನ್ನೇ ಮರೆತು ಹೋಗುತ್ತಾರೆ ಆದ್ದರಿಂದ ತಂದೆಯೇ ಬಂದು ಆತ್ಮಾಭಿಮಾನಿಗಳನ್ನಾಗಿ ಮಾಡಬೇಕಾಗುತ್ತದೆ. ಆತ್ಮಗಳು ಹೇಗೆ ಪಾತ್ರವನ್ನಭಿನಯಿಸುತ್ತೀರೆಂದು ತಂದೆಯೇ ತಿಳಿಸಿಕೊಡುತ್ತಾರೆ. ಮನುಷ್ಯರು ಗರಿಷ್ಟ 84 ಜನ್ಮಗಳಿಂದ ಹಿಡಿದು ಕನಿಷ್ಟ ಒಂದೆರಡು ಜನ್ಮಗಳನ್ನು ತೆಗೆದುಕೊಳ್ಳಬಹುದು. ಆತ್ಮವು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಇರಬೇಕಾಗಿದೆ. ಇದರಿಂದಲೇ ಸಿದ್ಧವಾಗುತ್ತದೆ - ಬಹಳ ಜನ್ಮಗಳನ್ನು ಪಡೆಯುವವರು ಬಹಳ ಪುನರ್ಜನ್ಮಗಳಲ್ಲಿ ಬರುತ್ತಾರೆ. ಕಡಿಮೆ ಜನ್ಮಗಳನ್ನು ಪಡೆಯುವವರು ಕಡಿಮೆ ಪುನರ್ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಹೇಗೆ ನಾಟಕದಲ್ಲಿ ಕೆಲವರದು ಮೊದಲಿನಿಂದ ಕೊನೆಯವರೆಗೂ ಪಾತ್ರವಿರುತ್ತದೆ. ಇನ್ನೂ ಕೆಲವರದು ಸ್ವಲ್ಪವೇ ಪಾತ್ರವಿರುತ್ತದೆ. ಇದನ್ನು ಯಾವುದೇ ಮನುಷ್ಯರು ತಿಳಿದುಕೊಂಡಿಲ್ಲ, ಆತ್ಮವು ತನ್ನನ್ನೇ ತಿಳಿದುಕೊಂಡಿಲ್ಲವೆಂದರೆ ತನ್ನ ತಂದೆಯನ್ನು ಹೇಗೆ ತಿಳಿದುಕೊಳ್ಳುತ್ತದೆ! ಇದು ಆತ್ಮದ ಮಾತಲ್ಲವೆ. ಇವರು ಆತ್ಮಗಳ ತಂದೆಯಾಗಿದ್ದಾರೆ, ಕೃಷ್ಣನು ಆತ್ಮಗಳ ತಂದೆಯಲ್ಲ, ಕೃಷ್ಣನಿಗೆ ನಿರಾಕಾರನೆಂದು ಹೇಳುವುದಿಲ್ಲ, ಸಾಕಾರದಲ್ಲಿಯೇ ಅವರನ್ನು ಅರಿತುಕೊಳ್ಳಲಾಗುತ್ತದೆ. ಪ್ರತಿಯೊಂದು ಆತ್ಮನಲ್ಲಿ ಪಾತ್ರವು ನಿಗಧಿಯಾಗಿದೆ, ಈ ಮಾತುಗಳನ್ನು ನಿಮ್ಮಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರವೇ ತಿಳಿಸಿಕೊಡಲಾಗುತ್ತದೆ. ನಾವಾತ್ಮಗಳು ಹೇಗೆ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಆತ್ಮನೆ ಪರಮಾತ್ಮನೆಂದಲ್ಲ, ತಂದೆಯು ತಿಳಿಸಿದ್ದಾರೆ - ನಾವಾತ್ಮಗಳೇ ಮೊದಲು ದೇವತೆಗಳಾಗುತ್ತೇವೆ, ಈಗ ಪತಿತ-ತಮೋಪ್ರಧಾನರಾಗಿದ್ದೇವೆ ಪುನಃ ಸತೋಪ್ರಧಾನ, ಪಾವನರಾಗಬೇಕಾಗಿದೆ. ಯಾವಾಗ ಸೃಷ್ಟಿಯು ಹಳೆಯದಾಗುವುದೋ ಆಗ ತಂದೆಯು ಬರುತ್ತಾರೆ. ತಂದೆಯು ಬಂದು ಹಳೆಯದನ್ನು ಹೊಸದನ್ನಾಗಿ ಮಾಡುತ್ತಾರೆ, ಹೊಸ ಸೃಷ್ಟಿಯನ್ನು ಸ್ಥಾಪನೆ ಮಾಡುತ್ತಾರೆ. ಹೊಸ ಪ್ರಪಂಚದಲ್ಲಿ ಆದಿ ಸನಾತನ ದೇವಿ-ದೇವತಾ ಧರ್ಮವಿರುತ್ತದೆ, ಅವರೇ ಮೊದಲು ಕಲಿಯುಗೀ, ಶೂದ್ರ ಧರ್ಮದವರಾಗಿದ್ದರೆಂದು ಹೇಳುತ್ತಾರೆ, ಈಗ ಪ್ರಜಾಪಿತ ಬ್ರಹ್ಮನ ಮುಖವಂಶಾವಳಿಯಾಗಿ ಬ್ರಾಹ್ಮಣರಾಗಿದ್ದೀರಿ. ಬ್ರಾಹ್ಮಣ ಕುಲದಲ್ಲಿ ಬರುತ್ತೀರಿ. ಬ್ರಾಹ್ಮಣ ಕುಲದ ರಾಜಧಾನಿಯಿರುವುದಿಲ್ಲ, ಬ್ರಾಹ್ಮಣ ಕುಲದವರು ರಾಜ್ಯಭಾರ ಮಾಡುವುದಿಲ್ಲ. ಈ ಸಮಯದಲ್ಲಿ ಭಾರತದಲ್ಲಿ ಬ್ರಾಹ್ಮಣ ಕುಲದವರಾಗಲಿ, ಶೂದ್ರರಾಗಲಿ ರಾಜ್ಯಭಾರ ಮಾಡುವುದಿಲ್ಲ, ಇಬ್ಬರಿಗೂ ರಾಜ್ಯವಿಲ್ಲ. ಆದರೂ ಸಹ ಅವರ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯ ನಡೆಯುತ್ತದೆ, ನೀವು ಬ್ರಾಹ್ಮಣರಿಗೆ ಯಾವುದೇ ರಾಜ್ಯವಿಲ್ಲ. ನೀವು ವಿದ್ಯಾರ್ಥಿಗಳಾಗಿ ಓದುತ್ತೀರಿ. ಈ 84 ಜನ್ಮಗಳ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ತಂದೆಯು ನಿಮಗೇ ತಿಳಿಸಿಕೊಡುತ್ತಾರೆ. ಸತ್ಯಯುಗ, ತ್ರೇತಾ..... ನಂತರ ಈ ಸಂಗಮಯುಗವಾಗುತ್ತದೆ. ಈ ಸಂಗಮಯುಗಕ್ಕೆ ಇರುವ ಮಹಿಮೆಯು ಮತ್ತ್ಯಾವುದೇ ಯುಗಕ್ಕೆ ಇರುವುದಿಲ್ಲ. ಇದು ಪುರುಷೋತ್ತಮ ಸಂಗಮಯುಗವಾಗಿರುವುದು. ಸತ್ಯಯುಗದಿಂದ ತ್ರೇತಾದಲ್ಲಿ ಬಂದಾಗ 2 ಕಲೆಗಳು ಕಡಿಮೆಯಾಗುತ್ತದೆ ಮತ್ತೆ ಅವರಿಗೇನು ಮಹಿಮೆ ಮಾಡುತ್ತೀರಿ! ಕನಿಷ್ಟರಾಗುವ ಮಹಿಮೆ ಮಾಡುವುದಿಲ್ಲ. ಕಲಿಯುಗಕ್ಕೆ ಹಳೆಯ ಪ್ರಪಂಚವೆಂದು ಕರೆಯಲಾಗುತ್ತದೆ. ಈಗ ಹೊಸ ಪ್ರಪಂಚವು ಸ್ಥಾಪನೆಯಾಗಲಿದೆ, ಅಲ್ಲಿ ದೇವಿ-ದೇವತೆಗಳ ರಾಜ್ಯವಿರುತ್ತದೆ. ಅವರು ಪುರುಷೋತ್ತಮರಾಗಿದ್ದರು ನಂತರ ಕಲೆಗಳು ಕಡಿಮೆಯಾಗುತ್ತಾ-ಆಗುತ್ತಾ ಕನಿಷ್ಟ, ಶೂದ್ರ ಬುದ್ಧಿಯವರಾಗಿ ಬಿಡುತ್ತಾರೆ, ಅವರಿಗೆ ಕಲ್ಲು ಬುದ್ಧಿಯವರೆಂದೂ ಹೇಳಲಾಗುತ್ತದೆ. ಇಷ್ಟು ಕಲ್ಲು ಬುದ್ದಿಯವರಾಗಿ ಬಿಡುತ್ತಾರೆ ಯಾವ ಪೂಜೆ ಮಾಡುವರೋ ಅವರ ಜೀವನ ಚರಿತ್ರೆಯನ್ನೂ ತಿಳಿದುಕೊಳ್ಳುವುದಿಲ್ಲ, ಮಕ್ಕಳು ತಂದೆಯ ಜೀವನ ಚರಿತ್ರೆಯನ್ನೇ ತಿಳಿದುಕೊಂಡಿಲ್ಲವೆಂದರೆ ಮತ್ತೆ ಆಸ್ತಿಯು ಹೇಗೆ ಸಿಗುವುದು! ನೀವು ಮಕ್ಕಳು ಈಗ ತಂದೆಯ ಜೀವನವನ್ನು ತಿಳಿದುಕೊಂಡಿದ್ದೀರಿ, ಅವರಿಂದ ನಿಮಗೆ ಆಸ್ತಿಯು ಸಿಗುತ್ತಿದೆ. ಬೇಹದ್ದಿನ ತಂದೆಯನ್ನು ನೆನಪು ಮಾಡುತ್ತೀರಿ. ನೀವು ಮಾತಾಪಿತಾ.... ಎಂದು ಹೇಳುತ್ತೀರಿ. ಅಂದಮೇಲೆ ಅವಶ್ಯವಾಗಿ ತಂದೆಯು ಬಂದಿರಬೇಕು ಆಗಲೆ ಅಪಾರ ಸುಖವನ್ನು ಕೊಟ್ಟಿರಬೇಕಲ್ಲವೆ. ತಂದೆಯು ಹೇಳುತ್ತಾರೆ - ನಾನು ನೀವು ಮಕ್ಕಳಿಗೆ ಅಪಾರ ಸುಖವನ್ನು ಕೊಡಲು ಬಂದಿದ್ದೇನೆ. ಮಕ್ಕಳ ಬುದ್ಧಿಯಲ್ಲಿ ಈ ಜ್ಞಾನವು ಚೆನ್ನಾಗಿರಬೇಕು ಆದ್ದರಿಂದ ನೀವು ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ, ಈಗ ನಿಮಗೆ ಜ್ಞಾನದ ಮೂರನೆಯ ನೇತ್ರವು ಸಿಕ್ಕಿದೆ. ನಾವೇ ದೇವತೆಗಳಾಗುತ್ತೇವೆ. ಈಗ ಶೂದ್ರರಿಂದ ಬ್ರಾಹ್ಮಣರಾಗಿದ್ದೇವೆ ಎಂಬುದನ್ನು ತಿಳಿದುಕೊಂಡಿದ್ದೀರಿ. ಕಲಿಯುಗೀ ಬ್ರಾಹ್ಮಣರೂ ಇದ್ದಾರಲ್ಲವೆ. ಆದರೆ ನಮ್ಮ ಧರ್ಮ ಅಥವಾ ಕುಲವು ಯಾವಾಗ ಸ್ಥಾಪನೆಯಾಯಿತೆಂದು ಆ ಬ್ರಾಹ್ಮಣರು ತಿಳಿದುಕೊಂಡಿಲ್ಲ. ಅವರು ಕಲಿಯುಗೀ ಬ್ರಾಹ್ಮಣರಾಗಿದ್ದಾರೆ, ನೀವೀಗ ಡೈರೆಕ್ಟ್ ಪ್ರಜಾಪಿತ ಬ್ರಹ್ಮನ ಸಂತಾನರಾಗಿದ್ದೀರಿ ಮತ್ತು ಎಲ್ಲರಿಗಿಂತ ಶ್ರೇಷ್ಠರಾಗಿದ್ದೀರಿ. ತಂದೆಯು ಕುಳಿತು ನಿಮಗೆ ವಿದ್ಯೆಯನ್ನು ಓದಿಸುವ, ಸಂಭಾಲನೆ ಮಾಡುವ ಮತ್ತು ಶೃಂಗಾರ ಮಾಡುವ ಸೇವೆ ಮಾಡುತ್ತಾರೆ. ನೀವೂ ಸಹ ಈಶ್ವರೀಯ ಸೇವೆಯಲ್ಲಿದ್ದೀರಿ. ನಾನು ಎಲ್ಲಾ ಮಕ್ಕಳ ಸೇವೆಯಲ್ಲಿ ಉಪಸ್ಥಿತನಿದ್ದೇನೆಂದು ಪರಮಪಿತ ಪರಮಾತ್ಮನೇ ಹೇಳುತ್ತಾರೆ. ಮಕ್ಕಳಿಗೆ ಸುಖದ ಮಾರ್ಗವನ್ನು ತಿಳಿಸಬೇಕಾಗಿದೆ. ಈಗ ಮನೆಗೆ ನಡೆಯಿರಿ ಎಂದು ತಂದೆಯು ಹೇಳುತ್ತಾರೆ. ಮನುಷ್ಯರು ಮುಕ್ತಿಗಾಗಿಯೇ ಭಕ್ತಿ ಮಾಡುತ್ತಾರೆ. ಅವಶ್ಯವಾಗಿ ಜೀವನದಲ್ಲಿ ಬಂಧನವಿದೆ, ತಂದೆಯು ಬಂದು ಈ ದುಃಖಗಳಿಂದ ಬಿಡಿಸುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಕೊನೆಯಲ್ಲಿ ಎಲ್ಲರೂ ತ್ರಾಹಿ-ತ್ರಾಹಿ ಎನ್ನುತ್ತಾರೆ. ಆಹಾಕಾರದ ನಂತರ ಜಯಜಯಕಾರವಾಗುವುದು. ಎಷ್ಟು ಹಾಯ್, ಹಾಯ್ ಎನ್ನುತ್ತಾರೆ, ಪ್ರಾಕೃತಿಕ ವಿಕೋಪಗಳಾಗುತ್ತವೆ ಎಂಬುದೆಲ್ಲವೂ ನಿಮ್ಮ ಬುದ್ಧಿಯಲ್ಲಿದೆ. ಯುರೋಪವಾಸಿ ಯಾದವರೂ ಇದ್ದಾರೆ, ಯುರೋಪಿಯನ್ನರಿಗೆ ಯಾದವರೆಂದು ಹೇಳಲಾಗುತ್ತದೆ. ಅವರ ಹೊಟ್ಟೆಯಿಂದ ಒನಕೆ ಬಂದಿತು ನಂತರ ಶಾಪ ಸಿಕ್ಕಿತೆಂದು ತೋರಿಸುತ್ತಾರೆ. ಈಗ ಶಾಪದ ಮಾತೇ ಇಲ್ಲ, ಇದಂತೂ ನಾಟಕವಾಗಿದೆ. ತಂದೆಯು ಆಸ್ತಿಯನ್ನು ಕೊಡುತ್ತಾರೆ, ರಾವಣನು ಶಾಪ ಕೊಡುತ್ತಾನೆ. ಇದೊಂದು ಆಟವು ಮಾಡಲ್ಪಟ್ಟಿದೆ. ಬಾಕಿ ಶಾಪ ಕೊಡುವವರು ಬೇರೆ ಮನುಷ್ಯರಿರುತ್ತಾರೆ. ಆ ಶಾಪವನ್ನು ವಿಮೋಚನೆ ಮಾಡುವವರೂ ಇರುತ್ತಾರೆ. ಶಾಪ ಕೊಟ್ಟು ಬಿಡುವರೇನೋ ಎಂದು ಗುರು ಗೋಸಾಯಿಗಳಿಗೆ ಮನುಷ್ಯರು ಹೆದರುತ್ತಾರೆ. ವಾಸ್ತವದಲ್ಲಿ ಜ್ಞಾನ ಮಾರ್ಗದಲ್ಲಿ ಶಾಪ ಕೊಡುವವರು ಯಾರೂ ಇರಲು ಸಾಧ್ಯವಿಲ್ಲ. ಜ್ಞಾನಮಾರ್ಗ ಮತ್ತು ಭಕ್ತಿಮಾರ್ಗದಲ್ಲಿ ಶಾಪದ ಯಾವುದೇ ಮಾತಿಲ್ಲ. ಯಾರು ರಿದ್ಧಿ-ಸಿದ್ಧಿಯನ್ನು ಕಲಿಯುವರೋ ಅವರು ಶಾಪ ಕೊಡುತ್ತಾರೆ. ಮನುಷ್ಯರನ್ನು ಬಹಳ ದುಃಖಿಯನ್ನಾಗಿ ಮಾಡುತ್ತಾರೆ, ಹಣ ಸಂಪಾದಿಸುತ್ತಾರೆ, ಭಕ್ತರು ಈ ಕೆಲಸ ಮಾಡುವುದಿಲ್ಲ.

ತಂದೆಯು ಇದನ್ನೂ ತಿಳಿಸಿದ್ದಾರೆ - ಸಂಗಮಯುಗದ ಜೊತೆ ಪುರುಷೋತ್ತಮ ಎಂಬುದನ್ನೂ ಅವಶ್ಯವಾಗಿ ಬರೆಯಬೇಕಾಗಿದೆ. ತ್ರಿಮೂರ್ತಿ ಶಬ್ಧವನ್ನೂ ಬರೆಯಬೇಕು ಮತ್ತು ಪ್ರಜಾಪಿತ ಎಂಬ ಶಬ್ಧವು ಅವಶ್ಯವಾಗಿದೆ ಏಕೆಂದರೆ ಅನೇಕರ ಹೆಸರು ಬ್ರಹ್ಮಾ ಎಂದು ಇರುತ್ತದೆ. ಪ್ರಜಾಪಿತ ಶಬ್ಧವನ್ನು ಬರೆಯುವುದರಿಂದ ಸಾಕಾರದಲ್ಲಿ ಪ್ರಜಾಪಿತನಾದರೆಂದು ತಿಳಿದುಕೊಳ್ಳುವರು. ಕೇವಲ ಬ್ರಹ್ಮನೆಂದು ಬರೆದರೆ ಸೂಕ್ಷ್ಮದಲ್ಲಿ ಅವರು ತೋರಿಸಿರುವ ಬ್ರಹ್ಮನೆಂದು ತಿಳಿದುಕೊಳ್ಳುವರು. ಬ್ರಹ್ಮಾ, ವಿಷ್ಣು, ಶಂಕರನಿಗೆ ಭಗವಂತನೆಂದು ಹೇಳುತ್ತಾರೆ. ಪ್ರಜಾಪಿತ ಬ್ರಹ್ಮನೆಂದು ಹೇಳಿದಾಗ ನೀವು ತಿಳಿಸಬಹುದು - ಪ್ರಜಾಪಿತನು ಇಲ್ಲಿಯೇ ಇದ್ದಾರೆ, ಸೂಕ್ಷ್ಮವತನದಲ್ಲಿರಲು ಹೇಗೆ ಸಾಧ್ಯ! ಇವರೇ ಕರ್ಮಾತೀತರಾಗಿ ನಂತರ ಸೂಕ್ಷ್ಮವತನವಾಸಿಯಾಗುವರು. ಬ್ರಹ್ಮನ ನಾಭಿಯಿಂದ ವಿಷ್ಣು ಬಂದರೆಂದು ತೋರಿಸುತ್ತಾರೆ. ನೀವು ಮಕ್ಕಳಿಗೆ ಜ್ಞಾನ ಸಿಕ್ಕಿದೆ, ಯಾರೂ ನಾಭಿಯಿಂದ ಬರಲು ಸಾಧ್ಯವಿಲ್ಲ. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ ಹೇಗಾಗುತ್ತಾರೆ ಎಂಬ ಇಡೀ ಚಕ್ರದ ಜ್ಞಾನವನ್ನು ನೀವು ಈ ಚಿತ್ರಗಳಿಂದ ತಿಳಿಸಬಹುದು. ಚಿತ್ರಗಳಿಲ್ಲದೆ ತಿಳಿಸಲು ಪರಿಶ್ರಮವಾಗುತ್ತದೆ. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮನಾಗುತ್ತಾರೆ. ಲಕ್ಷ್ಮೀ-ನಾರಾಯಣರು 84 ಜನ್ಮಗಳ ಚಕ್ರವನ್ನು ಸುತ್ತಿ ಬ್ರಹ್ಮಾ-ಸರಸ್ವತಿಯಾಗುತ್ತಾರೆ. ತಂದೆಯು ಮೊದಲೇ ಹೆಸರುಗಳನ್ನಿಟ್ಟಿದ್ದಾರೆ ಯಾವಾಗ ಆದಿಯಲ್ಲಿ ಭಟ್ಟಿಯಾಯಿತೋ ಆಗ ಹೆಸರುಗಳನ್ನಿಟ್ಟರು. ಆದ್ದರಿಂದ ತಂದೆಯು ಹೇಳಿದ್ದಾರೆ - ಬ್ರಾಹ್ಮಣರ ಮಾಲೆಯು ಆಗುವುದಿಲ್ಲ. ಏಕೆಂದರೆ ಬ್ರಾಹ್ಮಣರು ಪುರುಷಾರ್ಥಿಗಳಾಗಿದ್ದೀರಿ. ಕೆಲವೊಮ್ಮೆ ಮೇಲೆ, ಕೆಲವೊಮ್ಮೆ ಕೆಳಗೆ - ಹೀಗೆ ಏರಿಳಿತಳಾಗುತ್ತಿರುತ್ತವೆ, ಗ್ರಹಚಾರಗಳು ಕುಳಿತುಕೊಳ್ಳುತ್ತದೆ. ತಂದೆಯಂತೂ ವಜ್ರ ವ್ಯಾಪಾರಿಯಾಗಿದ್ದರು, ಮುತ್ತು ರತ್ನಗಳ ಮಾಲೆಯು ಹೇಗೆ ತಯಾರಾಗುತ್ತದೆ ಎಂಬುದರಲ್ಲಿ ಅನುಭವಿಯಾಗಿದ್ದಾರೆ. ಬ್ರಾಹ್ಮಣರ ಮಾಲೆಯು ಕೊನೆಯಲ್ಲಿಯೇ ಆಗುವುದು, ನಾವು ಬ್ರಾಹ್ಮಣರೇ ದೈವೀ ಗುಣಗಳನ್ನು ಧಾರಣೆ ಮಾಡಿ ದೇವತೆಗಳಾಗುತ್ತೇವೆ ನಂತರ ಏಣಿಯನ್ನಿಳಿಯಬೇಕಾಗುತ್ತದೆ ಇಲ್ಲವಾದರೆ 84 ಜನ್ಮಗಳನ್ನು ಹೇಗೆ ತೆಗೆದುಕೊಳ್ಳುತ್ತೇವೆ! 84 ಜನ್ಮಗಳ ಲೆಕ್ಕದಿಂದ ಇವನ್ನು ತೆಗೆಯಬಹುದು - ನಿಮ್ಮ ಅರ್ಧ ಸಮಯವು ಮುಗಿದ ಮೇಲೆ ಅನ್ಯ ಧರ್ಮದವರು ಬಂದು ಸೇರ್ಪಡೆಯಾಗುತ್ತಾರೆ. ಮಾಲೆ ಮಾಡುವುದರಲ್ಲಿ ಬಹಳ ಪರಿಶ್ರಮವಾಗುತ್ತದೆ. ಬಹಳ ಜೋಪಾನವಾಗಿ ಮುತ್ತುಗಳನ್ನು ಮೇಜಿನ ಮೇಲಿಡಲಾಗುತ್ತದೆ. ಎಲ್ಲಿಯೂ ಅವು ಬೀಳುವಂತಿರಬಾರದು ನಂತರ ಸೂಜಿಯಿಂದ ಪೋಣಿಸಲಾಗುತ್ತದೆ. ಅದು ಹೊಂದಾಣಿಕೆಯಾಗದಿದ್ದರೆ ಮತ್ತೆ ಮಾಲೆಯನ್ನು ಬಿಚ್ಚಬೇಕಾಗುತ್ತದೆ. ಇಲ್ಲಂತೂ ಇದು ಬಹಳ ದೊಡ್ಡ ಮಾಲೆಯಾಗಿದೆ. ನಾವು ಹೊಸ ಪ್ರಪಂಚಕ್ಕಾಗಿ ಓದುತ್ತೇವೆ ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸಿದ್ದಾರೆ - ನಾವು ಹೇಗೆ ಶೂದ್ರರಿಂದ ಬ್ರಾಹ್ಮಣರು, ಬ್ರಾಹ್ಮಣರಿಂದ ದೇವತೆಗಳಾಗುತ್ತೇವೆಂದು ಬಂದು ತಿಳಿದುಕೊಳ್ಳಿ, ಈ ಚಕ್ರವನ್ನು ತಿಳಿದುಕೊಳ್ಳುವುದರಿಂದ ನೀವು ಚಕ್ರವರ್ತಿ ರಾಜರಾಗುವಿರಿ, ಸ್ವರ್ಗದ ಮಾಲೀಕರಾಗಿಬಿಡುವಿರಿ, ಹೀಗೆ ಸ್ಲೋಗನ್ಗಳನ್ನು ಮಾಡಿಸಿ ಮಕ್ಕಳು ಕಲಿಸಿಕೊಡಬೇಕು. ತಂದೆಯು ಬಹಳಷ್ಟು ಯುಕ್ತಿಗಳನ್ನು ತಿಳಿಸಿಕೊಡುತ್ತಾರೆ. ವಾಸ್ತವದಲ್ಲಿ ನಿಮಗೆ ಬಹಳಷ್ಟು ಬೆಲೆಯಿದೆ, ನಿಮಗೆ ನಾಯಕ-ನಾಯಕಿಯ ಪಾತ್ರವು ಸಿಗುತ್ತದೆ. ನೀವೇ ವಜ್ರ ಸಮಾನರಾಗುತ್ತೀರಿ, 84 ಜನ್ಮಗಳ ನಂತರ ಚಕ್ರವನ್ನು ಸುತ್ತಿ ಕವಡೆಯ ತರಹ ಆಗುತ್ತೀರಿ. ಈಗ ನಿಮಗೆ ವಜ್ರ ಸಮಾನ ಜನ್ಮವು ಸಿಗುತ್ತದೆಯೆಂದ ಮೇಲೆ ಕವಡೆಗಳ ಹಿಂದೆ ಏಕೆ ಬೀಳುತ್ತೀರಿ! ಅಂದರೆ ಮನೆ-ಮಠವನ್ನು ಬಿಡಬೇಕು ಎಂದಲ್ಲ. ತಂದೆಯು ತಿಳಿಸುತ್ತಾರೆ ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಪ ಸಮಾನ ಪವಿತ್ರರಾಗಿರಿ ಮತ್ತು ಸೃಷ್ಟಿಚಕ್ರದ ಜ್ಞಾನವನ್ನು ತಿಳಿದುಕೊಂಡು ದೈವೀ ಗುಣಗಳನ್ನು ಧಾರಣೆ ಮಾಡಿ ಆಗ ನೀವು ವಜ್ರ ಸಮಾನರಾಗುತ್ತೀರಿ. ಅವಶ್ಯವಾಗಿ 5000 ವರ್ಷಗಳ ಮೊದಲು ಭಾರತವು ವಜ್ರ ಸಮಾನವಾಗಿತ್ತು, ಈ ಲಕ್ಷ್ಮೀ-ನಾರಾಯಣರ ಚಿತ್ರವು ನಿಮ್ಮ ಗುರಿ-ಧ್ಯೇಯವಾಗಿದೆ, ಈ ಚಿತ್ರಕ್ಕೆ ಬಹಳ ಮಹತ್ವಿಕೆ ಕೊಡಬೇಕಾಗಿದೆ. ನೀವು ಮಕ್ಕಳು ಪ್ರದರ್ಶನಿ, ಮ್ಯೂಸಿಯಂಗಳಲ್ಲಿ ಬಹಳ ಸೇವೆ ಮಾಡಬೇಕು. ವಿಹಂಗ ಮಾರ್ಗದ ಸೇವೆ ಮಾಡದೇ ನೀವು ಹೇಗೆ ಪ್ರಜೆಗಳನ್ನು ಮಾಡಿಕೊಳ್ಳುತ್ತೀರಿ? ಭಲೆ ಈ ಜ್ಞಾನವನ್ನು ಕೇಳುತ್ತಾರೆ ಆದರೆ ಶ್ರೇಷ್ಠ ಪದವಿಯನ್ನು ಕೆಲವರೇ ವಿರಳ ಪಡೆಯುತ್ತಾರೆ. ಆದ್ದರಿಂದಲೇ ಕೋಟಿಯಲ್ಲಿ ಕೆಲವರು ಕೆಲವರಲ್ಲಿ ಕೆಲವರೆಂದು ಹೇಳುತ್ತಾರೆ. ಕೆಲವರೇ ಸ್ಕಾಲರ್ಶಿಪ್ ಪಡೆಯುತ್ತಾರಲ್ಲವೆ. ಶಾಲೆಯಲ್ಲಿ 40-50 ಮಂದಿ ಮಕ್ಕಳಿರುತ್ತಾರೆ ಅವರಲ್ಲಿ ಕೆಲವರೇ ಸ್ಕಾಲರ್ಶಿಪ್ ತೆಗೆದುಕೊಳ್ಳುತ್ತಾರೆ. ಯಾರಾದರೂ ಸ್ವಲ್ಪ ತೀಕ್ಷ್ಣವಾಗಿದ್ದರೂ ಸಹ ಅವರಿಗೂ ಸಹ ಕೊಡುತ್ತಾರೆ. ಇಲ್ಲಿಯೂ ಹಾಗೆಯೇ 8 ಮಣಿಗಳಿವೆ ಆದರೂ ನಂಬರ್ವಾರ್ ಇದ್ದಾರಲ್ಲವೆ. ಅವರೇ ಮೊಟ್ಟ ಮೊದಲು ರಾಜ್ಯ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾರೆ ನಂತರ ಕಲೆಗಳ ಕಡಿಮೆಯಾಗುತ್ತಾ ಹೋಗುವುದು. ಲಕ್ಷ್ಮೀ-ನಾರಾಯಣರ ಚಿತ್ರವು ನಂಬರ್ವನ್ ಆಗಿದೆ. ಅವರದೂ ರಾಜಧಾನಿಯು ನಡೆಯುತ್ತದೆ ಆದರೆ ಲಕ್ಷ್ಮೀ-ನಾರಾಯಣರ ಚಿತ್ರವನ್ನೇ ತೋರಿಸಲಾಗಿದೆ. ಇಲ್ಲಿ ನೀವು ತಿಳಿದುಕೊಂಡಿದ್ದೀರಿ ಆದರೆ ಚಿತ್ರಗಳಂತು ಬದಲಾಗುತ್ತಾ ಹೋಗುತ್ತದೆ. ಚಿತ್ರಗಳನ್ನು ಕೊಡುವುದರಿಂದೇನು ಲಾಭ. ನಾಮ, ರೂಪ, ದೇಶ, ಕಾಲ ಎಲ್ಲವೂ ಬದಲಾಗಿ ಬಿಡುತ್ತವೆ.

ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ತಂದೆಯು ತಿಳಿಸಿಕೊಡುತ್ತಾರೆ. ಕಲ್ಪದ ಹಿಂದೆಯೂ ತಂದೆಯು ತಿಳಿಸಿದ್ದರು. ಕೃಷ್ಣನು ಗೋಪ-ಗೋಪಿಕೆಯರಿಗೆ ತಿಳಿಸಿದನೆಂದಲ್ಲ. ಕೃಷ್ಣನಿಗೆ ಗೋಪ-ಗೋಪಿಯರೂ ಇರುವುದಿಲ್ಲ. ಅವರಿಗೆ ಜ್ಞಾನವನ್ನೂ ಕಲಿಸಿಕೊಡಲಾಗುವುದಿಲ್ಲ. ಅವನು ಸತ್ಯಯುಗದ ರಾಜಕುಮಾರನಾಗಿದ್ದಾನೆ ಅಂದಮೇಲೆ ಅಲ್ಲಿ ರಾಜಯೋಗವನ್ನು ಹೇಗೆ ಕಲಿಸುತ್ತಾರೆ ಮತ್ತು ಪತಿತರನ್ನು ಪಾವನರನ್ನಾಗಿ ಮಾಡುವ ಅವಶ್ಯಕತೆಯಾದರೂ ಏನಿದೆ? ನೀವೀಗ ತಂದೆಯನ್ನು ನೆನಪು ಮಾಡಿ. ತಂದೆಯೇ ಮತ್ತೆ ಶಿಕ್ಷಕನೂ ಆಗಿದ್ದಾರೆ, ಶಿಕ್ಷಕರನ್ನು ವಿದ್ಯಾರ್ಥಿಗಳೆಂದೂ ಮರೆಯಲು ಸಾಧ್ಯವಿಲ್ಲ. ತಂದೆಯನ್ನು ಮತ್ತು ಗುರುಗಳನ್ನು ಮಕ್ಕಳು ಮರೆತು ಹೋಗಲು ಸಾಧ್ಯವಿಲ್ಲ. ತಂದೆಯಂತು ಜನ್ಮದಿಂದಲೂ ಇರುತ್ತಾರೆ, ಶಿಕ್ಷಕರು 5 ವರ್ಷಗಳ ನಂತರ ಸಿಗುತ್ತಾರೆ, ಮತ್ತೆ ವಾನಪ್ರಸ್ಥದಲ್ಲಿ ಗುರುಗಳು ಸಿಗುತ್ತಾರೆ. ಜನ್ಮದಿಂದಲೇ ಗುರುಗಳನ್ನು ಮಾಡಿಕೊಳ್ಳುವುದರಿಂದ ಯಾವುದೇ ಲಾಭವಿಲ್ಲ. ಗುರುವಿನ ಮಡಿಲನ್ನು ತೆಗೆದುಕೊಂಡೂ ಸಹ ನಂತರ ಮರಣ ಹೊಂದುತ್ತಾರೆ ಅಂದಮೇಲೆ ಗುರುಗಳು ಏನು ಮಾಡಿದಂತಾಯಿತು! ಸದ್ಗುರುವಿಲ್ಲದೇ ಗತಿ (ಮುಕ್ತಿ) ಯಿಲ್ಲವೆಂದು ಹಾಡುತ್ತಾರೆ. ಈ ಮಾತನ್ನು ಸದ್ಗುರುವಿಗೆ ಬಿಟ್ಟು ಆ ಗುರುಗಳಿಗೆ ಹೇಳಿಬಿಡುತ್ತಾರೆ. ಗುರುಗಳು ಅನೇಕರಿದ್ದಾರೆ, ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಯಾವುದೇ ದೇಹಧಾರಿ ಗುರು ಮೊದಲಾದವರನ್ನು ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ನೀವು ಯಾರಿಂದಲೂ ಏನನ್ನೂ ಬೇಡುವಂತಿಲ್ಲ. ಬೇಡುವುದಕ್ಕಿಂತ ಸಾಯುವುದು ಲೇಸು ಎಂದು ಗಾದೆ ಮಾತಿದೆ. ನಾವು ಹೇಗೆ ನಮ್ಮ ಹಣವನ್ನು ಸಫಲ ಮಾಡಿಕೊಳ್ಳುವುದು ಎಂದು ಎಲ್ಲರಿಗೆ ಚಿಂತೆಯಿರುತ್ತದೆ. ಅವರು ಈಶ್ವರಾರ್ಥವಾಗಿ ದಾನ-ಪುಣ್ಯ ಮಾಡುವುದರಿಂದ ಅದರ ಫಲವಾಗಿ ಇದೇ ಹಳೆಯ ಸೃಷ್ಟಿಯಲ್ಲಿ ಅವರ ನಂತರದ ಜನ್ಮದಲ್ಲಿ ಅಲ್ಪಕಾಲಕ್ಕಾಗಿ ಸುಖ ಸಿಗುತ್ತದೆ, ಆದರೆ ಇಲ್ಲಿ ನಿಮ್ಮದು ಹೊಸ ಪ್ರಪಂಚದಲ್ಲಿ 21 ಜನ್ಮಗಳಿಗಾಗಿ ಸಫಲವಾಗುತ್ತದೆ. ತನು, ಮನ, ಧನವನ್ನು ಪ್ರಭುವಿನ ಮುಂದೆ ಅರ್ಪಣೆ ಮಾಡಬೇಕಾಗಿದೆ. ಯಾವಾಗ ಅವರು ಸನ್ಮುಖದಲ್ಲಿ ಬರುವರೋ ಆಗಲೇ ಅರ್ಪಣೆ ಮಾಡುವರಲ್ಲವೆ. ಪ್ರಭುವನ್ನು ಯಾರೂ ಅರಿತುಕೊಂಡೇ ಇಲ್ಲವಾದ್ದರಿಂದ ಗುರುಗಳನ್ನು ಹಿಡಿದುಕೊಳ್ಳುತ್ತಾರೆ. ಧನವನ್ನು ಗುರುಗಳ ಮುಂದೆ ಅರ್ಪಣೆ ಮಾಡುತ್ತಾರೆ. ತನಗೆ ವಾರಸುಧಾರರಿಲ್ಲವೆಂದರೆ ಎಲ್ಲವನ್ನೂ ಗುರುಗಳಿಗೇ ಕೊಡುತ್ತಾರೆ. ಇತ್ತೀಚೆಗೆ ನಿಯಮಾನುಸಾರ ಈಶ್ವರಾರ್ಥವಾಗಿಯೂ ಸಹ ಯಾರೂ ಕೊಡುವುದಿಲ್ಲ, ತಂದೆಯು ತಿಳಿಸುತ್ತಾರೆ - ನಾನು ಬಡವರ ಬಂಧುವಾಗಿದ್ದೇನೆ, ಆದ್ದರಿಂದ ನಾನು ಭಾರತದಲ್ಲಿಯೇ ಬರುತ್ತೇನೆ, ಬಂದು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ. ಡೈರೆಕ್ಟ್ ಮತ್ತು ಇನ್ಡೈರೆಕ್ಟ್ ಕೊಡುವುದರಲ್ಲಿ ಎಷ್ಟು ಅಂತರವಿದೆ! ಅದು ಅವರಿಗೆ ತಿಳಿದಿಲ್ಲ, ಕೇವಲ ನಾವು ಈಶ್ವರಾರ್ಪಣೆ ಮಾಡುತ್ತೇವೆಂದು ಹೇಳಿ ಬಿಡುತ್ತಾರೆ. ಇದೆಲ್ಲವೂ ತಿಳುವಳಿಕೆಹೀನ ಕಾರ್ಯವಾಗಿದೆ. ಈಗ ನೀವು ಮಕ್ಕಳಿಗೆ ತಿಳುವಳಿಕೆ ಸಿಗುತ್ತದೆ ಆದ್ದರಿಂದ ನೀವು ಬುದ್ಧಿಹೀನರಿಂದ ಬುದ್ಧಿವಂತರಾಗಿದ್ದೀರಿ. ಬುದ್ಧಿಯಲ್ಲಿ ಜ್ಞಾನವಿದೆ - ತಂದೆಯು ಕಮಾಲ್ ಮಾಡುತ್ತಾರೆ. ಅವಶ್ಯವಾಗಿ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯೇ ಸಿಗಬೇಕು, ನೀವು ದಾದಾರವರ ಮೂಲಕ ತಂದೆಯ ಆಸ್ತಿಯನ್ನು ಪಡೆಯುತ್ತೀರಿ. ಈ ದಾದಾರವರೂ ಸಹ ತಂದೆಯಿಂದಲೇ ಆಸ್ತಿಯನ್ನು ಪಡೆಯುತ್ತಿದ್ದಾರೆ. ಆಸ್ತಿ ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ, ಅವರನ್ನೇ ಎಲ್ಲರು ನೆನಪು ಮಾಡಬೇಕಾಗಿದೆ. ತಂದೆಯು ಹೇಳುತ್ತಾರೆ - ನಾನು ಇವರ (ಬ್ರಹ್ಮಾ) ಬಹಳ ಜನ್ಮಗಳ ಅಂತಿಮದಲ್ಲಿ ಬರುತ್ತೇನೆ. ಇವರಲ್ಲಿ ಪ್ರವೇಶ ಮಾಡಿ ಇವರನ್ನೂ ಸಹ ಪಾವನರನ್ನಾಗಿ ಮಾಡುತ್ತೇನೆ. ಇವರೇ ನಂತರ ಫರಿಶ್ತೆಯಾಗುತ್ತಾರೆ. ನೀವು ಈ ಬ್ಯಾಡ್ಜ್ನಿಂದ ಬಹಳಷ್ಟು ಸರ್ವೀಸ್ ಮಾಡಬಹುದು. ಈ ನಿಮ್ಮ ಬ್ಯಾಡ್ಜ್ಗಳೆಲ್ಲವೂ ಅರ್ಥ ಸಹಿತವಾಗಿದೆ. ಈ ಲಕ್ಷ್ಮೀ-ನಾರಾಯಣರ ಚಿತ್ರವು ಜೀವ ದಾನ ಕೊಡುವಂತದ್ದಾಗಿದೆ. ಇದರ ಬೆಲೆಯು ಯಾರಿಗೂ ತಿಳಿದಿಲ್ಲ ಮತ್ತು ತಂದೆಗೆ ಯಾವಾಗಲೂ ದೊಡ್ಡ ವಸ್ತುಗಳು ಇಷ್ಟವಾಗುತ್ತವೆ ಏಕೆಂದರೆ ದೂರದಿಂದಲೇ ಯಾರು ಬೇಕಾದರೂ ಓದಬಹುದಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯಲು ಡೈರೆಕ್ಟ್ ತಮ್ಮ ತನು-ಮನ-ಧನವನ್ನು ಈಶ್ವರನ ಮುಂದೆ ಅರ್ಪಣೆ ಮಾಡುವುದರಲ್ಲಿ ಬುದ್ಧಿವಂತರಾಗಬೇಕಾಗಿದೆ. ತಮ್ಮ ಸರ್ವಸ್ವವನ್ನು 21 ಜನ್ಮಗಳಿಗಾಗಿ ಸಫಲ ಮಾಡಿಕೊಳ್ಳಬೇಕಾಗಿದೆ.

2. ಹೇಗೆ ತಂದೆಯು ಓದಿಸುವ, ಸಂಭಾಲನೆ ಮಾಡುವ ಮತ್ತು ಶೃಂಗರಿಸುವ ಸೇವೆ ಮಾಡುತ್ತಾರೆ ಹಾಗೆಯೇ ತಂದೆಯ ಸಮಾನ ಸರ್ವೀಸ್ ಮಾಡಬೇಕಾಗಿದೆ. ಜೀವನ ಬಂಧನದಿಂದ ಹೊರ ಬಂದು ಎಲ್ಲರನ್ನೂ ಜೀವನ್ಮುಕ್ತಿಯಲ್ಲಿ ಕರೆದುಕೊಂಡು ಹೋಗಬೇಕಾಗಿದೆ.

ವರದಾನ:
ಸರ್ವ ಖಜಾನೆಗಳ ಎಕಾನಮಿಯ ಉಳಿತಾಯ ಯೋಜನೆ ಮಾಡುವಂತಹ ಸೂಕ್ಷ್ಮ ಪುರುಷಾರ್ಥಿ ಭವ.

ಹೇಗೆ ಲೌಕಿಕ ರೀತಿಯಲ್ಲಿ ಒಂದುವೇಳೆ ಎಕಾನಮಿಯಿಂದ ನಡೆಸುವ ಮನೆಯಲ್ಲದಿದ್ದರೆ ಸರಿಯಾದ ರೀತಿಯಲ್ಲಿ ನಡೆಯಲು ಸಾಧ್ಯವಿಲ್ಲ. ಹಾಗೆಯೇ ಒಂದುವೇಳೆ ನಿಮಿತ್ತರಾಗಿರುವಂತಹ ಮಕ್ಕಳು ಎಕಾನಮಿಯುಳ್ಳವರು ಇರದೇ ಹೋದರೆ ಸೆಂಟರ್ ಸರಿಯಾದ ರೀತಿಯಲ್ಲಿ ನಡೆಯುವುದಿಲ್ಲ. ಅದಾಗಿದೆ ಮಿತವಾದ ಪ್ರವೃತ್ತಿ, ಇದಾಗಿದೆ ಅಪರಿಮಿತವಾದ ಪ್ರವೃತ್ತಿ. ಆದ್ದರಿಂದ ಚೆಕ್ ಮಾಡಿಕೊಳ್ಳಬೇಕು ಸಂಕಲ್ಪ, ಮಾತು ಮತ್ತು ಶಕ್ತಿಗಳಲ್ಲಿ ಏನೇನು ಎಕ್ಸ್ಟ್ರಾ ಖರ್ಚು ಮಾಡಿದೆ? ಯಾವುದು ಸರ್ವ ಖಜಾನೆಗಳ ಎಕಾನಮಿಯ ಉಳಿತಾಯ ಮಾಡಿ ಅದರನುಸಾರ ನಡೆಯುತ್ತಾರೆ ಅವರನ್ನೇ ಸೂಕ್ಷ್ಮ ಪುರುಷಾರ್ಥಿ ಎಂದು ಹೇಳಲಾಗುತ್ತದೆ. ಅವರ ಸಂಕಲ್ಪ, ಮಾತು, ಹಾಗೂ ಜ್ಞಾನದ ಶಕ್ತಿಗಳು ಯಾವುದೂ ವ್ಯರ್ಥವಾಗಿ ಹೋಗಲು ಸಾಧ್ಯವಿಲ್ಲ.

ಸ್ಲೋಗನ್:
ಸ್ನೇಹದ ಖಜಾನೆಯಿಂದ ಮಾಲಾಮಾಲ್ ಆಗಿ ಎಲ್ಲರಿಗೆ ಸ್ನೇಹ ಕೊಡಿ ಮತ್ತು ಸ್ನೇಹ ತೆಗೆದುಕೊಳ್ಳಿ.