06.11.23 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಆತ್ಮಾಭಿಮಾನಿಗಳಾಗುವುದರಲ್ಲಿಯೇ ನಿಮ್ಮ ರಕ್ಷಣೆಯಿದೆ, ನೀವು ಶ್ರೀಮತದಂತೆ ಆತ್ಮಿಕ ಸೇವೆಯಲ್ಲಿ
ತೊಡಗಿ, ಆಗ ದೇಹಾಭಿಮಾನ ರೂಪಿ ಶತ್ರುವು ಯುದ್ಧ ಮಾಡಲು ಸಾಧ್ಯವಿಲ್ಲ”
ಪ್ರಶ್ನೆ:
ವಿಕರ್ಮಗಳ
ಹೊರೆಯು ತಲೆಯ ಮೇಲಿದೆ ಎನ್ನುವುದರ ಚಿಹ್ನೆಗಳೇನಾಗಿರುವುದು? ಅದನ್ನು ಹಗುರ ಮಾಡಿಕೊಳ್ಳುವ
ವಿಧಿಯನ್ನು ತಿಳಿಸಿ?
ಉತ್ತರ:
ಎಲ್ಲಿಯವರೆಗೆ
ವಿಕರ್ಮಗಳ ಹೊರೆ ಇರುತ್ತದೆಯೋ ಅಲ್ಲಿಯವರೆಗೆ ಜ್ಞಾನದ ಧಾರಣೆಯಾಗಲು ಸಾಧ್ಯವಿಲ್ಲ. ಇಂತಹ
ಕರ್ಮಗಳನ್ನು ಮಾಡಿರುತ್ತಾರೆ ಅವು ಪದೇ ಪದೇ ವಿಘ್ನಗಳನ್ನು ಹಾಕುತ್ತಿರುತ್ತದೆ. ಮುಂದೆ ಹೋಗಲು
ಬಿಡುವುದಿಲ್ಲ. ಈ ಹೊರೆಯಿಂದ ಹಗುರರಾಗಲು ನಿದ್ರೆಯನ್ನು ಜಯಿಸುವ ನಿದ್ರಾಜೀತರಾಗಿ, ರಾತ್ರಿ ಎದ್ದು
ತಂದೆಯನ್ನು ನೆನಪು ಮಾಡಿ ಆಗ ಹೊರೆಯು ಹಗುರವಾಗಿಬಿಡುವುದು.
ಗೀತೆ:
ಮಾತಾ ಓ ಮಾತಾ...
ಓಂ ಶಾಂತಿ.
ಇದು ಜಗದಂಬನ ಮಹಿಮೆಯಾಯಿತು ಏಕೆಂದರೆ ಇದು ಹೊಸ ರಚನೆಯಾಗಿದೆ. ಸಂಪೂರ್ಣವಾಗಿ ಹೊಸ ರಚನೆಯಂತೂ
ಆಗುವುದಿಲ್ಲ. ಹಳೆಯದರಿಂದ ಹೊಸದಾಗುತ್ತದೆ. ಮೃತ್ಯುಲೋಕದಿಂದ ಅಮರಲೋಕಕ್ಕೆ ಹೋಗಬೇಕಾಗಿದೆ. ಇದು
ಬದುಕುವ ಮತ್ತು ಸಾಯುವ ಪ್ರಶ್ನೆಯಾಗಿದೆ ಇಲ್ಲವೆ ಮೃತ್ಯುಲೋಕದಲ್ಲಿ ಸತ್ತು ಸಮಾಪ್ತಿಯಾಗಬೇಕಾಗಿದೆ.
ಇಲ್ಲವೆ ಜೀವಿಸಿದ್ದಂತೆಯೇ ಸತ್ತು ಅಮರಲೋಕಕ್ಕೆ ಹೋಗಬೇಕಾಗಿದೆ. ಜಗತ್ತಿನ ತಾಯಿಯೆಂದರೆ ಜಗತ್ತನ್ನು
ರಚಿಸುವವರಾಗಿದ್ದಾರೆ. ಇವರು ಅವಶ್ಯವಾಗಿ ಸ್ವರ್ಗದ ರಚಯಿತ ತಂದೆಯಾಗಿದ್ದಾರೆ. ಬ್ರಹ್ಮಾರವರ ಮೂಲಕ
ರಚನೆಯನ್ನು ರಚಿಸುತ್ತಾರೆ ಮತ್ತು ತಿಳಿಸುತ್ತಾರೆ - ನಾನು ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯನ್ನು
ಸ್ಥಾಪನೆ ಮಾಡುತ್ತೇನೆ. ಸಂಗಮದಲ್ಲಿಯೇ ಬರಬೇಕಾಗಿದೆ, ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆಂದು
ಹೇಳುತ್ತಾರೆ ಅಂದರೆ ನಾನು ಕಲ್ಪ-ಕಲ್ಪದ ಪ್ರತೀ ಸಂಗಮಯುಗದಲ್ಲಿ ಬರುತ್ತೇನೆ. ಇದನ್ನು ಸ್ಪಷ್ಟವಾಗಿ
ತಿಳಿಸಬೇಕು. ಮನುಷ್ಯರು ಮರೆತು ಕೇವಲ ಹೆಸರನ್ನು ಬದಲಾಯಿಸಿಬಿಟ್ಟಿದ್ದಾರೆ. ಸರ್ವವ್ಯಾಪಿಯ ಯಾವ
ಜ್ಞಾನವನ್ನು ತಿಳಿಸುತ್ತಾರೆಯೋ ಅದರಲ್ಲಿಯೇ ತಾವು ಕೇಳಬೇಕು - ಇದನ್ನು ಯಾರು ಹೇಳಿದರು? ಯಾವಾಗ
ಹೇಳಿದರು? ಈ ರೀತಿ ಎಲ್ಲಾದರೂ ಬರೆಯಲ್ಪಟ್ಟಿದೆಯೇ? ಗೀತೆಯ ಭಗವಂತ ಯಾರು?, ಯಾರು ಈ ರೀತಿ
ಹೇಳುತ್ತಾರೆ? ಏಕೆಂದರೆ ಶ್ರೀಕೃಷ್ಣನಂತೂ ದೇಹಧಾರಿಯಾಗಿದ್ದಾರೆ, ಅವರು ಸರ್ವವ್ಯಾಪಿಯಾಗಿರಲು
ಸಾಧ್ಯವಿಲ್ಲ. ಶ್ರೀಕೃಷ್ಣನ ಹೆಸರನ್ನು ಬದಲಾಯಿಸಿದರೆ ಈ ಮಾತು ತಂದೆಗೆ ಬಂದುಬಿಡುತ್ತದೆ. ತಂದೆಯಂತೂ
ಆಸ್ತಿಯನ್ನು ಕೊಡಬೇಕು. ನಾನು ಸೂರ್ಯವಂಶಿ, ಚಂದ್ರವಂಶಿಯ ಆಸ್ತಿಯನ್ನು ನೀಡಲು ರಾಜಯೋಗವನ್ನು
ಕಲಿಸುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಇಲ್ಲವೆಂದರೆ 21 ಜನ್ಮಗಳ ಆಸ್ತಿಯನ್ನು ಅವರಿಗೆ ಯಾರು
ಕೊಟ್ಟರು? ಬ್ರಹ್ಮಾನ ಮುಖಕಮಲದಿಂದ ಬ್ರಾಹ್ಮಣರನ್ನು ರಚಿಸಿದರೆಂದು ಬರೆಯಲಾಗಿದೆ ನಂತರ
ಬ್ರಾಹ್ಮಣರಿಗೆ ಕುಳಿತು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ ಅಂದಾಗ ಯಾರು
ಜ್ಞಾನವನ್ನು ಕೊಡುವವರಾಗಿದ್ದಾರೆಯೋ ಅವರು ಅವಶ್ಯವಾಗಿ ತಿಳಿಸುವುದಕ್ಕೋಸ್ಕರ ಚಿತ್ರಗಳನ್ನು
ಮಾಡಿಸುತ್ತಾರೆ. ವಾಸ್ತವದಲ್ಲಿ ಇದರಲ್ಲಿ ಯಾವುದೇ ಓದುವ, ಬರೆಯುವ ಮಾತಿಲ್ಲ. ಆದರೆ ಇದನ್ನು ಸಹಜ
ಮಾಡಿ ತಿಳಿಸುವುದಕ್ಕೋಸ್ಕರ ಚಿತ್ರಗಳನ್ನು ಮಾಡಿಸಿದ್ದಾರೆ. ಇದರಿಂದ ಬಹಳ ಕೆಲಸವು ನಡೆಯುತ್ತದೆ
ಅಂದರೆ ಬಹಳ ಸೇವೆಯಾಗುತ್ತದೆ. ಜಗದಂಬನ ಮಹಿಮೆಯೂ ಇದೆ, ಇವರನ್ನು ಶಿವಶಕ್ತಿಯೆಂದು ಹೇಳಲಾಗುತ್ತದೆ.
ಅಂದಾಗ ಇವರಿಗೆ ಯಾರಿಂದ ಶಕ್ತಿಯು ಸಿಗುತ್ತದೆ? ಸರ್ವಶಕ್ತಿವಂತ ತಂದೆಯಿಂದ. ‘ವಿಶ್ವದ
ಸರ್ವಶಕ್ತಿವಂತ’ ಎನ್ನುವ ಶಬ್ಧವನ್ನು ಮಹಿಮೆಯಲ್ಲಿ ಕೊಡಬೇಕಾಗುತ್ತದೆ. ಅಧಿಕಾರ ಎಂದರೆ ಯಾವುದೆಲ್ಲಾ
ಶಾಸ್ತ್ರ ಮುಂತಾದುವುಗಳ ಜ್ಞಾನವಿದೆಯೋ ಅದೆಲ್ಲವೂ ತಂದೆಗೆ ಗೊತ್ತಿದೆ. ಅವರಿಗೆ ತಿಳಿಸುವ
ಅಧಿಕಾರವಿದೆ. ಬ್ರಹ್ಮನ ಕೈಯಲ್ಲಿ ಶಾಸ್ತ್ರವನ್ನು ತೋರಿಸುತ್ತಾರೆ ಮತ್ತು ಬ್ರಹ್ಮಾನ ಮುಖಕಮಲದ
ಮೂಲಕ ಎಲ್ಲಾ ವೇದಶಾಸ್ತ್ರಗಳ ರಹಸ್ಯವನ್ನು ತಿಳಿಸುತ್ತಾರೆಂದು ಹೇಳುತ್ತಾರೆ ಅಂದಮೇಲೆ ಇದು
ಅಧಿಕಾರವಾಯಿತಲ್ಲವೆ. ನೀವು ಮಕ್ಕಳಿಗೆ ಎಲ್ಲಾ ವೇದಶಾಸ್ತ್ರಗಳ ರಹಸ್ಯವನ್ನು ತಿಳಿಸುತ್ತಾರೆ.
ಧರ್ಮಶಾಸ್ತ್ರವೆಂದು ಯಾವುದಕ್ಕೆ ಹೇಳಲಾಗುತ್ತದೆಯೆಂದು ಪ್ರಪಂಚದವರಿಗೆ ಗೊತ್ತಿಲ್ಲ. ನಾಲ್ಕು
ಧರ್ಮಗಳೆಂದು ಹೇಳುತ್ತಾರೆ ಅದರಲ್ಲಿಯೂ ಒಂದು ಧರ್ಮವು ಮುಖ್ಯವಾಗಿದೆ, ಅದೇ ಬುನಾದಿಯಾಗಿದೆ. ಇದಕ್ಕೆ
ಆಲದಮರದ ಉದಾಹರಣೆಯನ್ನು ಕೊಡಲಾಗುತ್ತದೆ. ಈಗ ಇದರ ಬುನಾದಿಯು ಜೀರ್ಣವಾಗಿದೆ. ಕೇವಲ
ರೆಂಬೆ-ಕೊಂಬೆಗಳಷ್ಟೆ ನಿಂತಿದೆ ಇದು ಉದಾಹರಣೆಯಾಗಿದೆ ಪ್ರಪಂಚದಲ್ಲಿ ವೃಕ್ಷಗಳಂತೂ ಅನೇಕ ಇವೆ.
ಸತ್ಯಯುಗದಲ್ಲಿಯೂ ವೃಕ್ಷಗಳಿರುತ್ತವೆಯಲ್ಲವೆ. ಅಲ್ಲಿ ಕಾಡುಗಳಲ್ಲ, ಹೂದೋಟಗಳಿರುತ್ತವೆ. ಕೆಲಸದ
ಸಾಧನಗಳಿಗೆ ಕಟ್ಟಿಗೆ ಮುಂತಾದುವುಗಳಂತೂ ಬೇಕಲ್ಲವೆ. ಅರಣ್ಯದಲ್ಲಿಯೂ ಪಶು-ಪಕ್ಷಿಗಳು ಅನೇಕ
ಇರುತ್ತವೆ ಆದರೆ ಅಲ್ಲಿ ಎಲ್ಲಾ ವಸ್ತುಗಳು ಒಳ್ಳೆಯ ಫಲದಾಯಕವಾಗಿರುತ್ತವೆ. ಅಲ್ಲಿ ವಿವಿಧ
ಪಶುಪಕ್ಷಿಗಳು ಶೋಭಾಯಮಾನವಾಗಿರುತ್ತವೆ ಆದರೆ ಅಲ್ಲಿ ಕೊಳಕು ಮಾಡುವಂತಹವು ಇರುವುದಿಲ್ಲ. ಈ
ಪಶುಪಕ್ಷಿಗಳ ಸೌಂದರ್ಯವಂತೂ ಬೇಕಲ್ಲವೆ. ಸೃಷ್ಟಿಯು ಸತೋಪ್ರಧಾನವಾಗಿರುತ್ತದೆ ಅಂದಮೇಲೆ ಅಲ್ಲಿನ
ಎಲ್ಲಾ ವಸ್ತುಗಳು ಸತೋಪ್ರಧಾನವಾಗಿರುತ್ತವೆ. ಸ್ವರ್ಗವೆಂದರೆ ಮತ್ತೇನು! ಮೊಟ್ಟಮೊದಲ ಮುಖ್ಯಮಾತು
ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಚಿತ್ರಗಳಂತೂ ರಚನೆಯಾಗುತ್ತಿರುತ್ತವೆ, ಅದರಲ್ಲಿಯೂ
ಬರೆಯಬೇಕು - ಬ್ರಹ್ಮಾನ ಮೂಲಕ ಸ್ಥಾಪನೆ, ವಿಷ್ಣುವಿನ ಮೂಲಕ ಪಾಲನೆ.... ಈ ಮಾತುಗಳನ್ನು ಮನುಷ್ಯರು
ತಿಳಿದುಕೊಂಡಿಲ್ಲ. ಆದ್ದರಿಂದ ವಿಷ್ಣುವಿನ ಎರಡು ರೂಪ ಲಕ್ಷ್ಮಿ-ನಾರಾಯಣ ಪಾಲನೆ ಮಾಡುವವರಾಗಿದ್ದಾರೆ
ಎಂಬುದನ್ನಂತೂ ತಿಳಿಯುತ್ತಾರೆ. ಇದನ್ನು ಕೋಟಿಯಲ್ಲಿ ಕೆಲವರೇ ಅರಿಯುತ್ತಾರೆ. ನಂತರ ಇದು
ಬರೆಯಲಾಗಿದೆ - ಆಶ್ಚರ್ಯವಾಗಿ ಕೇಳುತ್ತಾರೆ, ತಿಳಿಸುತ್ತಾರೆ, ಓಡಿಹೋಗುತ್ತಾರೆ..... ನಂಬರ್ವಾರ್
ಪುರುಷಾರ್ಥದನುಸಾರ ತಮ್ಮ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಕೆಲವೊಂದೆಡೆ ಈ ಮಾತುಗಳನ್ನು
ಬರೆಯಲಾಗಿದೆ. ಭಗವಾನುವಾಚ ಎಂಬ ಅಕ್ಷರವೂ ಸರಿಯಾಗಿದೆ. ಭಗವಂತನ ಇತಿಹಾಸವೇ ಒಂದುವೇಳೆ
ಏರುಪೇರಾಗಿಬಿಟ್ಟರೆ ಎಲ್ಲಾ ಶಾಸ್ತ್ರಗಳು ಖಂಡನೆಯಾಗಿಬಿಡುತ್ತವೆ. ದಿನ-ಪ್ರತಿದಿನ ತಂದೆಯು
ಒಳ್ಳೊಳ್ಳೆಯ ವಿಚಾರಗಳನ್ನು ತಿಳಿಸುತ್ತಿರುತ್ತಾರೆ. ಮೊಟ್ಟಮೊದಲಂತೂ ಈ ನಿಶ್ಚಯ ಮಾಡಿಸಬೇಕು -
ಭಗವಂತ ಜ್ಞಾನದ ಸಾಗರನಾಗಿದ್ದಾರೆ, ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದಾರೆ. ಚೈತನ್ಯ ಬೀಜದಲ್ಲಿ
ಯಾವುದರ ಜ್ಞಾನವಿರುವುದು? ಅವಶ್ಯವಾಗಿ ವೃಕ್ಷದ ಜ್ಞಾನವಿರುವುದು ಅಂದಾಗ ತಂದೆಯು ಬಂದು
ಬ್ರಹ್ಮಾರವರ ಮೂಲಕ ಜ್ಞಾನವನ್ನು ತಿಳಿಸುತ್ತಾರೆ. ಬ್ರಹ್ಮಾಕುಮಾರ-ಕುಮಾರಿಯರು ಎಂಬ ಹೆಸರು
ಚೆನ್ನಾಗಿದೆ. ಪ್ರಜಾಪಿತ ಬ್ರಹ್ಮಾನ ಕುಮಾರ-ಕುಮಾರಿಯರಂತೂ ಅನೇಕರಿದ್ದಾರೆ ಇದರಲ್ಲಿ ಯಾವುದೇ
ಅಂಧಶ್ರದ್ಧೆಯ ಮಾತಿಲ್ಲ. ಇದಂತೂ ರಚನೆಯಾಗಿದೆ. ಮಮ್ಮಾ-ಬಾಬಾ ಅಥವಾ ನೀವೇ ಮಾತಾಪಿತ ಎಂದು ಎಲ್ಲರೂ
ಹೇಳುತ್ತಾರೆ. ಜಗದಂಬಾ ಸರಸ್ವತಿಯು ಬ್ರಹ್ಮಾರವರ ಮಗಳಾಗಿದ್ದಾರೆ. ಇವರು ಪ್ರತ್ಯಕ್ಷದಲ್ಲಿ ಬಿ.ಕೆ
ಆಗಿದ್ದಾರೆ. ಕಲ್ಪದ ಹಿಂದೆಯೂ ಸಹ ಬ್ರಹ್ಮಾರವರ ಮೂಲಕ ಹೊಸ ಸೃಷ್ಟಿಯನ್ನು ರಚಿಸಿದ್ದರು, ಈಗಲೂ
ಮತ್ತೆ ಅವಶ್ಯವಾಗಿ ಬ್ರಹ್ಮಾರವರ ಮೂಲಕವೇ ರಚನೆಯಾಗುವುದು. ಸೃಷ್ಟಿಯ ಆದಿ-ಮಧ್ಯ-ಅಂತ್ಯದ
ರಹಸ್ಯವನ್ನು ತಂದೆಯೇ ತಿಳಿಸುತ್ತಾರೆ ಆದ್ದರಿಂದ ಅವರನ್ನು ಜ್ಞಾನಸಾಗರನೆಂದು ಹೇಳಲಾಗುತ್ತದೆ.
ಬೀಜದಲ್ಲಿ ಅವಶ್ಯವಾಗಿ ಸೃಷ್ಟಿಚಕ್ರದ ಜ್ಞಾನವಿರುವುದು. ಅವರ ರಚನೆ ಚೈತನ್ಯ ಮನುಷ್ಯ ಸೃಷ್ಟಿಯಾಗಿದೆ.
ತಂದೆಯು ರಾಜಯೋಗವನ್ನು ಕಲಿಸುತ್ತಾರೆ. ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಬ್ರಾಹ್ಮಣರಿಗೆ
ಕಲಿಸುತ್ತಾರೆ, ಆ ಬ್ರಾಹ್ಮಣರೆ ಮತ್ತೆ ದೇವತೆಗಳಾಗುತ್ತಾರೆ. ಕೇಳುವ ಸಮಯದಲ್ಲಂತೂ ಎಲ್ಲರಿಗೂ ಬಹಳ
ಖುಷಿಯಾಗುತ್ತದೆ ಆದರೆ ದೇಹಾಭಿಮಾನದ ಕಾರಣ ಧಾರಣೆಯಾಗುವುದಿಲ್ಲ. ಇಲ್ಲಿಂದ ಹೊರಗಡೆ ಹೋದರೆಂದರೆ
ಖುಷಿಯು ಸಮಾಪ್ತಿಯಾಗುತ್ತದೆ. ಅನೇಕ ಪ್ರಕಾರದ ದೇಹಾಭಿಮಾನವಿದೆ, ಇದರಲ್ಲಿ ಬಹಳ ಪರಿಶ್ರಮಬೇಕು.
ತಂದೆಯು ತಿಳಿಸುತ್ತಾರೆ
- ಮಕ್ಕಳೇ, ನಿದ್ರೆಯನ್ನು ಜಯಿಸುವವರಾಗಿ. ದೇಹದ ಅಭಿಮಾನವನ್ನು ಬಿಡಿ, ದೇಹೀ ಅಭಿಮಾನಿಗಳಾಗಿ.
ರಾತ್ರಿ ಜಾಗೃತರಾಗಿದ್ದು ತಂದೆಯನ್ನು ನೆನಪು ಮಾಡಬೇಕು ಏಕೆಂದರೆ ನಿಮ್ಮ ತಲೆಯ ಮೇಲೆ
ಜನ್ಮ-ಜನ್ಮಾಂತರದ ವಿಕರ್ಮಗಳ ಹೊರೆಯು ಬಹಳ ಇದೆ, ಅದು ನಿಮಗೆ ಧಾರಣೆ ಮಾಡಲು ಬಿಡುವುದಿಲ್ಲ. ಇಂತಹ
ಕರ್ಮಗಳನ್ನು ಮಾಡಿರುತ್ತೀರಿ ಆ ಕಾರಣವೇ ಆತ್ಮಾಭಿಮಾನಿಗಳಾಗಲು ಆಗುವುದಿಲ್ಲ. ಅನೇಕ ಸುಳ್ಳುಗಳನ್ನು
ಹೇಳುತ್ತಿರುತ್ತಾರೆ. ಸುಳ್ಳಿನ ಚಾರ್ಟನ್ನು ಬರೆದು ಕಳುಹಿಸುತ್ತಾರೆ - ಬಾಬಾ, ನಾವು 75%
ನೆನಪಿನಲ್ಲಿರುತ್ತೇವೆ ಆದರೆ ಇದು ಅಸಾಧ್ಯವೆಂದು ತಂದೆಯು ತಿಳಿಸುತ್ತಾರೆ. ಎಲ್ಲರಿಗಿಂತ ಮುಂದೆ
ಹೋಗುವವರೇ (ಬ್ರಹ್ಮಾ) ಈ ರೀತಿ ಹೇಳುತ್ತಾರೆ - ನಾನು ಎಷ್ಟೇ ನೆನಪು ಮಾಡಲು ಪ್ರಯತ್ನ ಪಡುತ್ತೇನೆ
ಆದರೆ ಮಾಯೆಯು ಮರೆಸಿಬಿಡುತ್ತದೆ ಎಂದು. ಸತ್ಯವಾದ ಚಾರ್ಟನ್ನು ಬರೆಯಬೇಕು. ಬಾಬಾರವರು
ತಿಳಿಸುತ್ತಾರೆಂದರೆ ಮಕ್ಕಳೂ ಸಹ ಅದನ್ನು ಅನುಸರಿಸಬೇಕು. ಅನುಸರಿಸುವುದಿಲ್ಲ ಆದ್ದರಿಂದಲೇ
ಚಾರ್ಟನ್ನು ಕಳುಹಿಸುವುದಿಲ್ಲ. ಪುರುಷಾರ್ಥಕ್ಕಾಗಿ ಸಮಯವು ಸಿಕ್ಕಿದೆ. ಈ ಧಾರಣೆಯು ಯಾವುದೇ
ಚಿಕ್ಕಮ್ಮನ ಮನೆಯಂತಲ್ಲ. ಇದರಲ್ಲಿ ಸುಸ್ತಾಗುವುದಲ್ಲ. ಯಾರಾದರೂ ಅರಿತುಕೊಳ್ಳುವುದರಲ್ಲಿ ಸಮಯ
ತೆಗೆದುಕೊಳ್ಳುತ್ತಾರೆಂದರೆ ಇಂದಲ್ಲ ನಾಳೆ ಅರಿತುಕೊಳ್ಳುತ್ತಾರೆ. ತಂದೆಯೂ ಸಹ ತಿಳಿಸಿದರು - ಯಾರು
ದೇವಿ-ದೇವತಾ ಧರ್ಮದವರಿರುವರೋ ಅನ್ಯಧರ್ಮಗಳಲ್ಲಿ ಸೇರಿಹೋಗಿರುವರೋ ಅವರು ಪುನಃ ಬಂದುಬಿಡುವರು. ಒಂದು
ದಿನ ಆಫ್ರಿಕನ್ನರು ಮುಂತಾದವರ ಸಮ್ಮೇಳನವೂ ಆಗುವುದು. ಭಾರತಖಂಡಕ್ಕೆ ಬರುತ್ತಿರುತ್ತಾರೆ, ಮೊದಲಂತೂ
ಎಂದೂ ಬರುತ್ತಿರಲಿಲ್ಲ ಆದರೆ ಈಗಂತೂ ಎಲ್ಲಾ ದೊಡ್ಡ-ದೊಡ್ಡವರು ಬರುತ್ತಾರೆ. ಜರ್ಮನಿಯ ರಾಜಕುಮಾರ
ಮುಂತಾದವರು ಎಂದೂ ಹೊರಗೆ ಬರುತ್ತಿರಲೇ ಇಲ್ಲ. ನೇಪಾಳದ ರಾಜನೂ ಸಹ ಎಂದೂ ರೈಲನ್ನು ನೋಡಿರಲೇ ಇಲ್ಲ.
ತಮ್ಮ ಹದ್ದಿನಿಂದ (ರಾಜ್ಯದಿಂದ) ಹೊರಗಡೆ ಎಲ್ಲಿಯೂ ಹೋಗುವ ಆಜ್ಞೆಯಿರಲಿಲ್ಲ ಹಾಗೆಯೇ ಪೋಪ್ ಸಹ ಎಂದೂ
ಸಹ ಹೊರಗಡೆ ಹೋಗಿರಲಿಲ್ಲ, ಆದರೆ ಈಗ ಬಂದರು. ಎಲ್ಲರೂ ಬಂದೇ ಬರುತ್ತಾರೆ ಏಕೆಂದರೆ ಈ ಭಾರತವು ಎಲ್ಲಾ
ಧರ್ಮದವರಿಗೆ ದೊಡ್ಡದಕ್ಕಿಂತ ದೊಡ್ಡ ತೀರ್ಥಸ್ಥಾನವಾಗಿದೆ. ಆದ್ದರಿಂದ ಈ ಜಾಹೀರಾತು ಅತೀ ಹೆಚ್ಚಾಗಿ
ಹೊರಬರುವುದು. ತಾವಂತೂ ಎಲ್ಲಾ ಧರ್ಮದವರಿಗೂ ತಿಳಿಸಬೇಕು, ನಿಮಂತ್ರಣ ನೀಡಬೇಕಾಗಿದೆ ಆದರೆ ಯಾರು
ದೇವಿ-ದೇವತಾ ಧರ್ಮದವರು ಬೇರೆ ಕಡೆಗೆ ಸೇರಿಹೋಗಿದ್ದಾರೆಯೋ ಅವರೇ ಜ್ಞಾನವನ್ನು ಪಡೆಯುತ್ತಾರೆ.
ಇದರಲ್ಲಿ ತಿಳುವಳಿಕೆ ಬೇಕು. ಒಂದುವೇಳೆ ತಿಳಿದುಕೊಂಡರೆ ಅವಶ್ಯವಾಗಿ ಶಂಖಧ್ವನಿ ಮಾಡುತ್ತೀರಿ. ನಾವು
ಬ್ರಾಹ್ಮಣರಾಗಿದ್ದೇವೆ ಅಲ್ಲವೆ ಅಂದಾಗ ನಾವು ಗೀತೆಯನ್ನೇ ತಿಳಿಸಬೇಕು. ಬಹಳ ಸಹಜವೂ ಆಗಿದೆ.
ಬೇಹದ್ದಿನ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ. ಅವರಿಂದ ಆಸ್ತಿಯನ್ನು ಪಡೆಯುವುದು ನಮ್ಮ
ಅಧಿಕಾರವಾಗಿದೆ, ಎಲ್ಲರಿಗೂ ತಮ್ಮ ತಂದೆಯ ಮನೆ (ಮುಕ್ತಿಧಾಮ) ಗೆ ಹೋಗುವ ಅಧಿಕಾರವಿದೆ.
ಮುಕ್ತಿ-ಜೀವನ್ಮುಕ್ತಿಯ ಅಧಿಕಾರವಿದೆ. ಜೀವನ್ಮುಕ್ತಿಯು ಎಲ್ಲರಿಗೂ ಸಿಗಬೇಕು ಅಂದರೆ ಜೀವನ
ಬಂಧನದಿಂದ ಮುಕ್ತರಾಗಿ ಶಾಂತಿಯಲ್ಲಿ ಹೋಗುತ್ತಾರೆ ನಂತರ ಯಾವಾಗ ಬರುತ್ತಾರೆಯೋ ಆಗ
ಜೀವನ್ಮುಕ್ತರಾಗಿರುತ್ತಾರೆ ಆದರೆ ಎಲ್ಲರಿಗೂ ಸತ್ಯಯುಗದಲ್ಲಿ ಜೀವನ್ಮುಕ್ತಿಯು ಸಿಗುವುದಿಲ್ಲ.
ಸತ್ಯಯುಗದಲ್ಲಿ ದೇವಿ-ದೇವತೆಗಳು ಜೀವನ್ಮುಕ್ತಿಯಲ್ಲಿದ್ದಿರಿ ನಂತರ ಯಾರು ಬರುತ್ತಾರೆಯೋ ಅವರು
ಕಡಿಮೆ ಸುಖ, ಕಡಿಮೆ ದುಃಖವನ್ನು ಪಡೆಯುತ್ತಾರೆ. ಇದೂ ಸಹ ಲೆಕ್ಕವಾಗಿದೆ. ಭಾರತವು ಯಾವುದು
ಎಲ್ಲರಿಗಿಂತ ಶ್ರೇಷ್ಠವಾಗಿತ್ತು ಅದೇ ಈಗ ಎಲ್ಲರಿಗಿಂತ ಕಂಗಾಲಾಗಿದೆ. ತಂದೆಯೂ ಸಹ ತಿಳಿಸುತ್ತಾರೆ
- ಈ ದೇವಿ-ದೇವತಾ ಧರ್ಮವು ಬಹಳ ಸುಖವನ್ನು ಕೊಡುವಂತಹದ್ದಾಗಿದೆ. ಇದು ಮಾಡಿ-ಮಾಡಲ್ಪಟ್ಟಿದೆ.
ಎಲ್ಲರೂ ತಮ್ಮ ಸಮಯದಲ್ಲಿ ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸುತ್ತಾರೆ. ಸ್ವರ್ಗದ ರಚೈತ ಸ್ವರ್ಗದ
ಸ್ಥಾಪನೆ ಮಾಡುತ್ತಾರೆ, ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಕ್ರಿಸ್ತನಿಗಿಂತ 3000 ವರ್ಷಗಳ ಹಿಂದೆ
ಸ್ವರ್ಗವಿತ್ತು, ಹೊಸ ಪ್ರಪಂಚವಿತ್ತು ಎಂದು ಹೇಳುತ್ತಾರೆ ಅಂದಮೇಲೆ ಕ್ರಿಸ್ತನು ಅಲ್ಲಿ ಬರಲು
ಸಾಧ್ಯವೆ! ಅವರು ತಮ್ಮ ಸಮಯದಲ್ಲಿಯೇ ಬರುತ್ತಾರೆ, ಮತ್ತೆ ಅವರು ತಮ್ಮ ಪಾತ್ರವನ್ನು ಪುನರಾವರ್ತನೆ
ಮಾಡಬೇಕಾಗಿದೆ. ಇದೆಲ್ಲವೂ ಬುದ್ಧಿಯಲ್ಲಿ ತಿಳಿದುಕೊಂಡರೆ ಶ್ರೀಮತದಂತೆ ಅವಶ್ಯವಾಗಿ ನಡೆಯುತ್ತಾರೆ.
ಎಲ್ಲರ ಬುದ್ಧಿಯು ಒಂದೇ ರೀತಿಯಿರುವುದಿಲ್ಲ. ಶ್ರೀಮತದಂತೆ ನಡೆಯುವ ಧೈರ್ಯ ಬೇಕು. ಶಿವಬಾಬಾ, ತಾವು
ಬ್ರಹ್ಮಾ ಮತ್ತು ಜಗದಂಬರ ಮೂಲಕ ಏನನ್ನು ತಿನ್ನಿಸುವಿರೋ, ಏನನ್ನು ತೊಡಿಸುವಿರೋ..... ಅದನ್ನೆ
ಮಾಡುತ್ತೇವೆ. ಬ್ರಹ್ಮಾರವರ ಮೂಲಕವೇ ಎಲ್ಲವನ್ನೂ ಮಾಡುತ್ತಾರಲ್ಲವೆ ಅಂದಾಗ ಇಬ್ಬರೂ ಕಂಬೈಂಡ್
ಆಗಿದ್ದಾರೆ. ಬ್ರಹ್ಮಾರವರ ಮೂಲಕವೇ ಕರ್ತವ್ಯ ಮಾಡುತ್ತಾರೆ. ಶರೀರವಂತೂ ಒಟ್ಟಿಗೆ ಎರಡೂ ಇಲ್ಲ. ಕೆಲ
ಕೆಲವರ ಕಂಬೈಂಡ್ ಶರೀರಗಳನ್ನು ಬಾಬಾರವರು ನೋಡಿದ್ದಾರೆ. ಆತ್ಮವಂತೂ ಇಬ್ಬರದು ಬೇರೆ-ಬೇರೆಯಾಯಿತು.
ಇವರಲ್ಲಿ ತಂದೆಯು ಪ್ರವೇಶ ಮಾಡುತ್ತಾರೆ. ಅವರು ಜ್ಞಾನಸಾಗರನಾಗಿದ್ದಾರೆ, ಅಂದಮೇಲೆ ಜ್ಞಾನವನ್ನು
ಯಾರ ಮೂಲಕ ಕೊಡುವರು? ಕೃಷ್ಣನ ಚಿತ್ರವಂತೂ ಬೇರೆಯಾಗಿದೆ. ಇಲ್ಲಂತೂ ಬ್ರಹ್ಮಾರವರು ಬೇಕು.
ಪ್ರತ್ಯಕ್ಷ ರೂಪದಲ್ಲಿ ಅನೇಕ ಬ್ರಹ್ಮಾಕುಮಾರ-ಕುಮಾರಿಯರಿದ್ದಾರೆ, ಇದ್ಯಾವುದೇ ಅಂಧಶ್ರದ್ಧೆಯಂತೂ
ಅಲ್ಲ. ದತ್ತು ಮಕ್ಕಳಿಗೆ ಭಗವಂತನು ಓದಿಸುತ್ತಾರೆ. ಯಾರು ಕಲ್ಪದ ಹಿಂದೆ ಯಾರು ದತ್ತು
ಮಕ್ಕಳಾಗಿದ್ದರು ಅವರೇ ಈಗ ಆಗುತ್ತಾರೆ. ಹೊರಗಡೆ ಕಛೇರಿಗಳಲ್ಲಂತೂ ನಾವು ಬಿ.ಕೆ ಆಗಿದ್ದೇವೆಂದು
ಯಾರೂ ಹೇಳುವುದಿಲ್ಲ. ಇದು ಗುಪ್ತವಾಯಿತು. ಶಿವತಂದೆಯ ಸಂತಾನರಂತೂ ಆಗಿಯೇ ಇದ್ದೇವೆ, ಬಾಕಿ ರಚನೆಯು
ಹೊಸಸೃಷ್ಟಿಯನ್ನು ರಚಿಸಬೇಕಾಗುತ್ತದೆ. ಹಳೆಯದರಿಂದ ಹೊಸದನ್ನಾಗಿ ಮಾಡುತ್ತಾರೆ. ಆತ್ಮದಲ್ಲಿ ತುಕ್ಕು
ಬೀಳುವುದರಿಂದ ಅಥವಾ ಹಳೆಯದಾಗಿಬಿಡುತ್ತದೆ. ಚಿನ್ನದಲ್ಲಿಯೇ ತುಕ್ಕು ಬಿದ್ದರೆ ಅದು ನಕಲಿ
ಚಿನ್ನವಾಗುತ್ತದೆ. ಅಂದಾಗ ಆತ್ಮವು ಕಲ್ಮಷವಾದಾಗ ಶರೀರವು ನಕಲಿಯಾಗಿಬಿಡುತ್ತದೆ. ಮತ್ತೆ ಅದು ಹೇಗೆ
ಶುದ್ಧವಾಗುವುದು? ಯಾವುದೇ ವಸ್ತುವನ್ನು ಶುದ್ಧ ಮಾಡಲು ಪವಿತ್ರವನ್ನಾಗಿ ಮಾಡುವುದಕ್ಕೋಸ್ಕರ
ಬೆಂಕಿಯಲ್ಲಿ ಹಾಕುತ್ತಾರೆ ಅಂದಾಗ ಎಷ್ಟು ದೊಡ್ಡ ವಿನಾಶವಾಗುತ್ತದೆ. ಈ ಹಬ್ಬ, ಮುಂತಾದುವುಗಳೆಲ್ಲವೂ
ಭಾರತದ್ದಾಗಿದೆ. ಇವು ಯಾರನ್ನು ಕುರಿತು ಮತ್ತು ಯಾವಾಗಿನಿಂದ ಬಂದವು ಎಂಬುದನ್ನು ಯಾರೂ
ತಿಳಿದುಕೊಂಡಿಲ್ಲ. ಜ್ಞಾನವನ್ನು ಬಹಳ ಕೆಲವರೇ ಪಡೆಯುತ್ತಾರೆ. ಅಂತ್ಯದಲ್ಲಿ ಭಲೆ ರಾಜ್ಯಭಾಗ್ಯ
ಸಿಕ್ಕಿದರೂ ಏನು ಭಾಗ್ಯ. ಬಹಳ ಕಡಿಮೆ ಸುಖವಾಯಿತಲ್ಲವೆ. ಬಹಳ ನಿಧಾನ-ನಿಧಾನವಾಗಿ ದುಃಖವಂತೂ
ಪ್ರಾರಂಭವಾಗಿಬಿಡುತ್ತದೆ ಆದ್ದರಿಂದ ಚೆನ್ನಾಗಿ ಪುರುಷಾರ್ಥ ಮಾಡಬೇಕು. ಎಷ್ಟೊಂದು ಹೊಸಮಕ್ಕಳು
ತೀಕ್ಷ್ಣವಾಗಿ ಮುಂದೆ ಹೋಗಿದ್ದಾರೆ. ಹಳಬರು ಗಮನ ಕೊಡುವುದಿಲ್ಲ, ದೇಹಾಭಿಮಾನವು ಬಹಳ ಇದೆ. ಯಾರು
ಸೇವೆ ಮಾಡುವರೋ ಅವರೆ ತಂದೆಯ ಹೃದಯವನ್ನೇರುವರು. ಒಳಗೊಂದು ಹೊರಗೊಂದು ಎಂದು ಹೇಳಲಾಗುತ್ತದೆಯಲ್ಲವೆ.
ಬಾಬಾ ಒಳ್ಳೊಳ್ಳೆಯ ಮಕ್ಕಳನ್ನು ಆಂತರ್ಯದಿಂದ ಪ್ರೀತಿ ಮಾಡುತ್ತಾರೆ. ಕೆಲವರು ಹೊರಗಡೆಯಿಂದ
ಒಳ್ಳೆಯವರು, ಒಳಗಡೆ ಕೆಟ್ಟವರಾಗಿರುತ್ತಾರೆ. ಏನೂ ಸೇವೆಯೇ ಮಾಡುವುದಿಲ್ಲ, ಅಂಧರಿಗೆ
ಊರುಗೋಲಾಗುವುದಿಲ್ಲ. ಈಗ ಸಾವು-ಬದುಕಿನ ಪ್ರಶ್ನೆಯಾಗಿದೆ. ಅಮರಪುರಿಯಲ್ಲಿ ಶ್ರೇಷ್ಠ ಪದವಿಯನ್ನು
ಪಡೆಯಬೇಕಾಗಿದೆ. ಯಾರ್ಯಾರು ಕಲ್ಪದ ಹಿಂದೆ ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು
ಪಡೆದಿದ್ದಾರೆಂದು ಗೊತ್ತಾಗುತ್ತದೆ. ಎಷ್ಟೆಷ್ಟು ಆತ್ಮಾಭಿಮಾನಿಗಳಾಗುತ್ತಾರೆಯೋ ಅಷ್ಟೆ
ಸುರಕ್ಷಿತೆಯಿಂದ ನಡೆಯುತ್ತಾರೆ. ದೇಹಾಭಿಮಾನವು ಸೋಲಿಸಿಬಿಡುತ್ತದೆ. ತಂದೆಯು ತಿಳಿಸುತ್ತಾರೆ
ಶ್ರೀಮತದಂತೆ ಯಾರೆಷ್ಟು ಆತ್ಮಿಕ ಸೇವೆಯಲ್ಲಿ ನಡೆಯುತ್ತೀರೋ ಅಷ್ಟೂ ಒಳ್ಳೆಯದೆಂದು. ಬಾಬಾ ಎಲ್ಲರಿಗೂ
ತಿಳಿಸುತ್ತಾರೆ - ಚಿತ್ರಗಳ ಬಗ್ಗೆ ತಿಳಿಸುವುದು ಬಹಳ ಸಹಜವಾಗಿದೆ. ಬ್ರಹ್ಮಾಕುಮಾರ-ಕುಮಾರಿಯರಂತೂ
ಎಲ್ಲರೂ ಆಗಿದ್ದಾರೆ, ಶಿವಬಾಬಾ ಹಿರಿಯ ಬಾಬಾ ಆಗಿದ್ದಾರೆ. ಹೊಸ ಸೃಷ್ಟಿಯನ್ನು ರಚಿಸುತ್ತಾರೆ.
ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರೆಂದು ಹಾಡುತ್ತಾರೆ, ಸಿಖ್ಖ್ ಧರ್ಮದವರೂ ಸಹ ಭಗವಂತನ ಮಹಿಮೆ
ಮಾಡುತ್ತಾರೆ. ಗುರುನಾನಕನ ಅಕ್ಷರಗಳು ಬಹಳ ಚೆನ್ನಾಗಿವೆ. ಸಾಹೇಬನನ್ನು ಜಪಮಾಡಿ ಆಗ ಸುಖ ಸಿಗುವುದು
ಎಂದು ಹೇಳುತ್ತಾರೆ. ಇದು ಸಾರವಾಗಿದೆ. ಸತ್ಯ ಸಾಹೇಬನನ್ನು ನೆನಪು ಮಾಡಿದರೆ ಸುಖವನ್ನು
ಪಡೆಯುತ್ತೀರಿ ಅರ್ಥಾತ್ ಆಸ್ತಿಯು ಸಿಗುತ್ತದೆ. ಏಕ್ ಓಂಕಾರ್ ಎಂದು ಒಪ್ಪುತ್ತಾರೆ. ಆತ್ಮವನ್ನು
ಯಾವುದೇ ಮೃತ್ಯುವು ಕಬಳಿಸಲು ಸಾಧ್ಯವಿಲ್ಲ. ಆತ್ಮವು ಮೈಲಿಗೆ ಆಗುತ್ತದೆಯೇ ಹೊರತು ವಿನಾಶವಂತೂ
ಆಗುವುದಿಲ್ಲ. ಆದ್ದರಿಂದ ಅಕಾಲಮೂರ್ತಿ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು
ಅಕಾಲಮೂರ್ತಿಯಾಗಿದ್ದೇನೆ ಅಂದಾಗ ಆತ್ಮಗಳೂ ಅವಿನಾಶಿಯಾಗಿದ್ದಾರೆ ಆದರೆ ಆತ್ಮಗಳು ಪುನರ್ಜನ್ಮದಲ್ಲಿ
ಬರುತ್ತಾರೆ. ನಾನು ಏಕರಸವಾಗಿದ್ದೇನೆ. ಜ್ಞಾನಸಾಗರನಾಗಿದ್ದೇನೆ, ರೂಪಬಸಂತನೂ ಆಗಿದ್ದೇನೆಂದು
ತಂದೆಯು ಸ್ಪಷ್ಟವಾಗಿ ತಿಳಿಸುತ್ತಾರೆ ಅಂದಮೇಲೆ ಈ ಮಾತುಗಳನ್ನು ತಿಳಿದುಕೊಂಡು ತಿಳಿಸಬೇಕಾಗಿದೆ.
ಅಂಧರಿಗೆ ಊರುಗೋಲಾಗಬೇಕಾಗಿದೆ, ಜೀವದಾನ ನೀಡಬೇಕಾಗಿದೆ. ನಂತರ ಎಂದೂ ಅಕಾಲ ಮೃತ್ಯುವಾಗಲು
ಸಾಧ್ಯವಿಲ್ಲ. ನೀವು ಕಾಲನ (ಮೃತ್ಯು) ಮೇಲೆ ವಿಜಯವನ್ನು ಪಡೆಯುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ
ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಶ್ರೀಮತದಂತೆ
ಆತ್ಮಿಕ ಸೇವೆ ಮಾಡಬೇಕಾಗಿದೆ, ಅಂಧರಿಗೆ ಊರುಗೋಲಾಗಬೇಕಾಗಿದೆ. ಶಂಖುಧ್ವನಿಯನ್ನು ಅವಶ್ಯವಾಗಿ
ಮಾಡಬೇಕಾಗಿದೆ.
2.
ಆತ್ಮಾಭಿಮಾನಿಗಳಾಗುವುದಕ್ಕೋಸ್ಕರ ನೆನಪಿನ ಚಾರ್ಟನ್ನು ಇಡಬೇಕು, ರಾತ್ರಿಯಲ್ಲಿ ಎದ್ದು ವಿಶೇಷವಾಗಿ
ನೆನಪು ಮಾಡಬೇಕಾಗಿದೆ. ನೆನಪಿನಲ್ಲಿ ಸುಸ್ತಾಗಬಾರದು.
ವರದಾನ:
ಸದಾ ತಮ್ಮ
ಶ್ರೇಷ್ಠ ಘನತೆಯಲ್ಲಿರುತ್ತಾ ತೊಂದರೆಗಳನ್ನು ದೂರ ಮಾಡುವಂತಹ ಮಾಸ್ಟರ್ ಸರ್ವಶಕ್ತಿವಾನ್ ಭವ
ಸದಾ ಈ ವರದಾನ
ಸ್ಮೃತಿಯಲ್ಲಿರಲಿ ನಾವು ನಮ್ಮ ಶ್ರೇಷ್ಠ ಘನತೆಯಲ್ಲಿರುವವರು ಬೇರೆಯವರ ತೊಂದರೆಗಳನ್ನೂ ಸಹ ದೂರ
ಮಾಡುವಂತಹ ಮಾಸ್ಟರ್ ಸರ್ವ ಶಕ್ತಿವಾನ್ ಆಗಿದ್ದೇನೆ. ಬಲಹೀನ ಅಲ್ಲ. ಶ್ರೇಷ್ಠ ಘನತೆಯ ಸಿಂಹಾಸನಾಧಾರಿ
ಆಗಿದ್ದೇನೆ. ಯಾರು ಅಕಾಲಸಿಂಹಾಸನಾಧಾರಿ, ತಂದೆಯ ಹೃದಯ ಸಿಂಹಾಸನಾಧಾರಿ ಶ್ರೇಷ್ಠ ಘನತೆಯಲ್ಲಿ
ಇರುವವರಾಗಿದ್ದೇವೆ, ಅವರಿಗೆ ಸ್ವಪ್ನದಲ್ಲಿಯೂ ಸಹ ಎಂದೂ ಯಾವ ತೊಂದರೆ ಆಗಲು ಸಾಧ್ಯವಿಲ್ಲ. ಯಾರು
ಎಷ್ಟೇ ತೊಂದರೆ ಮಾಡಲಿ ಆದರೆ ತಮ್ಮ ಶ್ರೇಷ್ಠ ಘನತೆಯಲ್ಲಿಯೇ ಇರುತ್ತಾರೆ.
ಸ್ಲೋಗನ್:
ಸದಾ ತಮ್ಮ
ಸ್ವಮಾನದಲ್ಲಿರಿ ಆಗ ಸರ್ವರ ಮಾನ್ಯತೆ ಸಿಗುತ್ತಾ ಇರುವುದು.