07.01.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ -
ಮನುಷ್ಯರು ಶರೀರದ ಉನ್ನತಿಯ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾರೆ, ಆತ್ಮದ ಉನ್ನತಿ ಹಾಗೂ ಏರುವ ಸಾಧನವನ್ನು ತಂದೆಯೇ ಹೇಳುತ್ತಾರೆ - ಇದು ತಂದೆಯದೇ ಜವಾಬ್ಧಾರಿಯಾಗಿದ

ಪ್ರಶ್ನೆ:
ಸದಾ ಮಕ್ಕಳ ಉನ್ನತಿಯಾಗಲು ತಂದೆಯು ಯಾವ-ಯಾವ ಶ್ರೀಮತವನ್ನು ಕೊಡುತ್ತಾರೆ?

ಉತ್ತರ:
ಮಕ್ಕಳೇ, ತಮ್ಮ ಉನ್ನತಿಗಾಗಿ 1. ಸದಾ ನೆನಪಿನ ಯಾತ್ರೆಯನ್ನು ಮಾಡಿ ನೆನಪಿನಿಂದಲೇ ಆತ್ಮದ ತುಕ್ಕು ದೂರವಾಗುತ್ತದೆ 2. ಎಂದೂ ಸಹ ಕಳೆದು ಹೋದದನ್ನು ನೆನಪು ಮಾಡಬೇಡಿ ಹಾಗೂ ಮುಂದೆ ಯಾವುದೇ ಆಸೆಯನ್ನು ಇಟ್ಟುಕೊಳ್ಳಬೇಡಿ. 3. ಶರೀರ ನಿರ್ವಹಣೆಗಾಗಿ ಭಲೇ ಕರ್ಮ ಮಾಡಿ ಆದರೆ ಸಿಕ್ಕಿದ ಸಮಯವನ್ನು ವ್ಯರ್ಥವಾಗಿ ಕಳೆಯಬೇಡಿ, ತಂದೆಯ ನೆನಪಿನಲ್ಲಿ ಸಮಯವನ್ನು ಸಫಲ ಮಾಡಬೇಕು. 4. ಕೊನೆ ಪಕ್ಷ 8 ಗಂಟೆಗಳಾದರೂ ಈಶ್ವರೀಯ ಸೇವೆ ಮಾಡಿದಾಗ ತಮ್ಮ ಉನ್ನತಿಯಾಗುತ್ತದೆ.

ಓಂ ಶಾಂತಿ.
ಆತ್ಮೀಯ ತಂದೆಯು ಕುಳಿತು ಆತ್ಮೀಯ ಮಕ್ಕಳಿಗೆ ಅಥವಾ ಆತ್ಮಗಳಿಗೆ ತಿಳಿಸುತ್ತಾರೆ, ಆತ್ಮದ ಜವಾಬ್ದಾರಿಯು ಪರಮಾತ್ಮನ ಮೇಲಿದೆಯೆಂದು ಮನುಷ್ಯರು ಹೇಳುತ್ತಾರೆ. ಅವರೇ ಸರ್ವ ಆತ್ಮಗಳ ಉನ್ನತಿ ಹಾಗೂ ಮನಸ್ಸಿಗೆ ಶಾಂತಿಯ ಮಾರ್ಗವನ್ನು ತಿಳಿಸಲು ಸಾಧ್ಯ. ಆತ್ಮವು ಭೃಕುಟಿಯಲ್ಲಿ ಎಲ್ಲದಕ್ಕಿಂತ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಶರೀರಕ್ಕೆ ರೋಗ ಬರುತ್ತದೆ, ಭೃಕುಟಿಯಲ್ಲಿ ಬರುವುದಿಲ್ಲ. ಭಲೇ ತಲೆ ನೋವು ಬರುತ್ತದೆ ಆದರೆ ಯಾವ ಆತ್ಮದ ಸಿಂಹಾಸನವಿದೆ ಅಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ಏಕೆಂದರೆ ಆ ಸಿಂಹಾಸನದಲ್ಲಿ ಆತ್ಮವು ವಿರಾಜಮಾನವಾಗಿರುತ್ತದೆ. ಈಗ ಆತ್ಮದ ಉನ್ನತಿ ಅಥವಾ ಶಾಂತಿಯನ್ನು ಕೊಡುವಂತಹ ಸರ್ಜನ್ ಒಬ್ಬ ಪರಮಾತ್ಮನಾಗಿದ್ದಾರೆ. ಯಾವಾಗ ಆತ್ಮದ ಉನ್ನತಿಯಾಗುತ್ತದೆಯೋ ಆಗ ಆತ್ಮಕ್ಕೆ ಆರೋಗ್ಯ-ಐಶ್ವರ್ಯ ಸಿಗುತ್ತದೆ. ಶರೀರಕ್ಕೆ ಎಷ್ಟೇ ಮಾಡಿದರೂ ಅದರಿಂದ ಯಾವುದೇ ಉನ್ನತಿಯಾಗುವುದಿಲ್ಲ. ಶರೀರಕ್ಕೆ ಏನಾದರೂ ತೊಂದರೆಯಂತೂ ಇದ್ದೇ ಇರುತ್ತದೆ. ಆತ್ಮದ ಉನ್ನತಿಯನ್ನು ತಂದೆಯ ವಿನಃ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಬೇರೆ ಎಲ್ಲರೂ ಪ್ರಪಂಚದಲ್ಲಿ ಶರೀರದ ಉನ್ನತಿಯ ಪ್ರಬಂಧವನ್ನು ರಚಿಸುತ್ತಾರೆ. ಬಾಕಿ ಆತ್ಮದ ಏರುವ ಕಲೆಯ ಅಥವಾ ಉನ್ನತಿಯಾಗುವುದಿಲ್ಲ. ಅದನ್ನು ತಂದೆಯೇ ಕಲಿಸುತ್ತಾರೆ. ಎಲ್ಲದರ ಆಧಾರವು ಆತ್ಮದ ಮೇಲೆಯೇ ಇದೆ. ಆತ್ಮವೇ 16 ಕಲೆಯಾಗುತ್ತದೆ ನಂತರ ಆತ್ಮವೇ ಸಂಪೂರ್ಣ ಕಲಾರಹಿತವಾಗುತ್ತದೆ. 16 ಕಲೆಯಾಗುವುದು, ಮತ್ತೆ ಹೇಗೆ ಕಲೆ ಕಡಿಮೆಯಾಗುತ್ತದೆ ಎಂದು ತಂದೆಯೇ ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ - ತಮಗೆ ಸತ್ಯಯುಗದಲ್ಲಿ ಬಹಳ ಸುಖವಿತ್ತು. ಆತ್ಮವು ಏರುವ ಕಲೆಯಲ್ಲಿದ್ದು ಬೇರೆ ಸತ್ಸಂಗದಲ್ಲಿ ಆತ್ಮದ ಉನ್ನತಿ ಹೇಗಾಗುತ್ತದೆ ಎಂಬುದನ್ನು ತಿಳಿಸುವುದಿಲ್ಲ. ಅವರು ಶಾರೀರಿಕ ನಶೆಯಲ್ಲಿರುತ್ತಾರೆ. ದೇಹಾಭಿಮಾನವಿದೆ, ತಂದೆಯು ತಮ್ಮನ್ನು ಆತ್ಮಾಭಿಮಾನಿಯನ್ನಾಗಿ ಮಾಡುತ್ತಾರೆ. ಆತ್ಮವು ತಮೋಪ್ರಧಾನವಾಗಿದೆ ಅದನ್ನು ಸತೋಪ್ರಧಾನ ಮಾಡಬೇಕು. ಇಲ್ಲಿ ಎಲ್ಲವೂ ಆತ್ಮೀಯ ವಿಚಾರಗಳಾಗಿವೆ, ಅಲ್ಲಿ ಶಾರೀರಿಕ ವಿಚಾರಗಳಾಗಿವೆ. ವೈದ್ಯರು ಒಂದು ಹೃದಯವನ್ನು ತೆಗೆದು ಇನ್ನೊಂದನ್ನು ಹಾಕುತ್ತಾರೆ. ಆತ್ಮದ ಜೊತೆ ಅದಕ್ಕೆ ಯಾವುದೇ ಸಂಬಂಧವಿಲ್ಲ. ಆತ್ಮವು ಭೃಕುಟಿಯಲ್ಲಿರುತ್ತದೆ, ಅದಕ್ಕೆ ಆಪರೇಷನ್ ಮಾಡಲು ಸಾಧ್ಯವಿಲ್ಲ. ಒಳ್ಳೆಯದು - ತಂದೆಯು ತಿಳಿಸುತ್ತಾರೆ, ಆತ್ಮದ ಉನ್ನತಿಯಂತೂ ಒಮ್ಮೆ ಮಾತ್ರ ಆಗುತ್ತದೆ. ಆತ್ಮವು ಯಾವಾಗ ತಮೋಪ್ರಧಾನವಾಗುತ್ತದೆಯೋ ಆಗ ಆತ್ಮದ ಉನ್ನತಿಯನ್ನು ಮಾಡುವ ತಂದೆಯು ಬರುತ್ತಾರೆ. ಅವರ ವಿನಃ ಯಾವುದೇ ಆತ್ಮದ ಏರುವ ಕಲೆಯಾಗಲು ಸಾಧ್ಯವಿಲ್ಲ. ತಂದೆಯು ಹೇಳುತ್ತಾರೆ - ಈ ಛೀ ಛೀ ತಮೋಪ್ರಧಾನ ಆತ್ಮರು ನನ್ನ ಬಳಿ ಬರಲು ಸಾಧ್ಯವಿಲ್ಲ. ತಮ್ಮ ಬಳಿ ಯಾರೇ ಬಂದರೂ ಹೇಳುತ್ತಾರೆ - ಶಾಂತಿ ಹೇಗೆ ಸಿಗುತ್ತದೆ ಅಥವಾ ಉನ್ನತಿ ಹೇಗಾಗುತ್ತದೆ? ಆದರೆ ಈ ವಿಚಾರವು ತಿಳಿದಿಲ್ಲ, ಉನ್ನತಿಯ ನಂತರ ನಾವು ಎಲ್ಲಿಗೆ ಹೋಗುತ್ತೇವೆ, ಏನಾಗುತ್ತೇವೆ? ಪತಿತರಿಂದ ಪಾವನರನ್ನಾಗಿ ಮಾಡಿ ಜೀವನ್ಮುಕ್ತಿಯಲ್ಲಿ ಕರೆದೊಯ್ಯಿರಿ ಎಂದು ಕರೆಯುತ್ತಾರೆ. ಅಂದಮೇಲೆ ಆತ್ಮಗಳನ್ನೇ ಕರೆದೊಯ್ಯುತ್ತಾರಲ್ಲವೆ. ಶರೀರವಂತೂ ಇಲ್ಲಿಯೇ ಸಮಾಪ್ತಿಯಾಗುತ್ತದೆ. ಆದರೆ ಈ ಮಾತುಗಳು ಯಾರದೇ ಬುದ್ಧಿಯಲ್ಲಿಲ್ಲ. ಇದು ಈಶ್ವರೀಯ ಮತವಾಗಿದೆ ಬಾಕಿ ಎಲ್ಲವೂ ಮಾನವ ಮತವಾಗಿದೆ. ಈಶ್ವರೀಯ ಮತದಿಂದ ಒಂದೇ ಸಲ ಆಕಾಶಕ್ಕೆ ಏರುತ್ತೀರಿ - ಶಾಂತಿಧಾಮ, ಸುಖಧಾಮಕ್ಕೆ. ಮತ್ತೆ ನಾಟಕದನುಸಾರವಾಗಿ ಕೆಳಗಿಳಿಯಲೇಬೇಕು. ಆತ್ಮದ ಉನ್ನತಿಗಾಗಿ ತಂದೆಯ ವಿನಃ ಬೇರೆ ಯಾವುದೇ ಸರ್ಜನ್ ಇಲ್ಲ. ಸರ್ಜನ್ ನಿಮ್ಮನ್ನು ತಮ್ಮ ಸಮಾನ ಮಾಡಿಕೊಳ್ಳುತ್ತಾರೆ. ಕೆಲವರಂತೂ ಬಹಳ ಚೆನ್ನಾಗಿ ಅನೇಕರ ಉನ್ನತಿ ಮಾಡುತ್ತಾರೆ, ಕೆಲವರು ಮೀಡಿಯಂ, ಕೆಲವರು ಇನ್ನೂ ಕಡಿಮೆ. ಆತ್ಮಗಳ ಉನ್ನತಿಯ ಜವಾಬ್ದಾರಿಯು ಒಬ್ಬ ತಂದೆಯದೇ ಆಗಿದೆ, ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ. ತಂದೆಯು ಹೇಳುತ್ತಾರೆ - ಈ ಸಾಧು -ಸಂತರ ಉದ್ಧಾರವನ್ನೂ ಮಾಡಲು ನಾನು ಬರುತ್ತೇನೆ. ಮೊದಲು ಆತ್ಮ ಬರುವಾಗ ಪವಿತ್ರವಾಗಿಯೇ ಬರುತ್ತದೆ, ಈಗ ತಂದೆಯು ಸರ್ವರ ಉನ್ನತಿ ಮಾಡಲು ಬಂದಿದ್ದಾರೆ. ನಂಬರ್ವಾರ್ ಪುರುಷಾರ್ಥದನುಸಾರ ನಿಮ್ಮ ಉನ್ನತಿಯ ಎಷ್ಟೊಂದು ಆಗುತ್ತದೆ. ಅಲ್ಲಿ ನಿಮಗೆ ಶರೀರವೂ ಸಹ ಚೆನ್ನಾಗಿರುವುದೇ ಸಿಗುವುದು. ತಂದೆಯು ಅವಿನಾಶಿ ಸರ್ಜನ್ ಆಗಿದ್ದಾರೆ, ಅವರೇ ಬಂದು ಎಲ್ಲರ ಉನ್ನತಿ ಮಾಡುತ್ತಾರೆ ಅಂದಮೇಲೆ ತಾವು ಸರ್ವ ಶ್ರೇಷ್ಠವಾದ ತಮ್ಮ ಮಧುರ ಮನೆಗೆ ಹೊರಟು ಹೋಗುತ್ತೀರಿ. ಅವರು ಚಂದ್ರನ ಮೇಲೆ ಹೋಗುತ್ತಾರೆ. ಅವಿನಾಶಿ ಸರ್ಜನ್ ತಮಗೆ ಉನ್ನತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಹೇಳುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ತಂದೆ ವಿಶ್ವದ ಮಕ್ಕಳನ್ನು ಬಿಡುಗಡೆ ಮಾಡುತ್ತಾರೆ ಯಾವಾಗ ತಾವು ಸ್ವರ್ಗಕ್ಕೆ ಹೋಗುವಿರೋ ಆಗ ಎಲ್ಲರೂ ಶಾಂತಿಧಾಮಕ್ಕೆ ಹೋಗುವರು. ತಂದೆಯು ಎಷ್ಟೊಂದು ಅದ್ಭುತವಾದ ಕಾರ್ಯವನ್ನು ಮಾಡುತ್ತಾರೆ. ತಂದೆಯದು ಚಮತ್ಕಾರವಾಗಿದೆ. ಅದಕ್ಕಾಗಿ ನಿಮ್ಮ ಗತಿ-ಮತಿಯು ನಿಮಗೇ ಗೊತ್ತು ಎಂದು ಹೇಳುತ್ತಾರೆ. ಆತ್ಮದಲ್ಲಿಯೇ ಮತವಿದೆ. ಆತ್ಮವು ಬೇರೆಯಾದರೆ ಮತ ಸಿಗಲು ಸಾಧ್ಯವಿಲ್ಲ. ಈಶ್ವರೀಯ ಮತದಿಂದ ಏರುವ ಕಲೆ, ಮಾನವ ಮತದಿಂದ ಇಳಿಯುವ ಕಲೆ - ಇದೂ ಸಹ ಡ್ರಾಮಾದಲ್ಲಿ ನಿಶ್ಚಿತವಾಗಿದೆ. ಈಗಲೇ ಸ್ವರ್ಗವಾಗಿ ಬಿಟ್ಟಿದೆ ಎಂದು ಮನುಷ್ಯರು ತಿಳಿದುಕೊಂಡಿದ್ದಾರೆ. ಇದು ನರಕವೆ ಅಥವಾ ಸ್ವರ್ಗವೆ ಎಂದು ಮುಂದೆ ಹೋದಂತೆ ತಿಳಿಯುತ್ತದೆ. ಭಾಷೆಯ ವಿಚಾರದಲ್ಲಿ ಎಷ್ಟೊಂದು ಗಲಾಟೆಗಳನ್ನು ಮಾಡುತ್ತಾರೆ. ದುಃಖಿಗಳಲ್ಲವೆ. ಸ್ವರ್ಗದಲ್ಲಿ ದುಃಖವಿರುವುದಿಲ್ಲ, ಭೂಕಂಪವೂ ಆಗುವುದಿಲ್ಲ. ಈಗ ಹಳೆಯ ಜಗತ್ತಿನ ವಿನಾಶವಾಗುವುದು. ನಂತರ ಸ್ವರ್ಗವಾಗಿ ಬಿಡುತ್ತದೆ. ಅರ್ಧಕಲ್ಪದ ನಂತರ ಅದೂ ಸಹ ಮರೆಯಾಗಿ ಬಿಡುತ್ತದೆ. ದ್ವಾರಕೆ ಸಮುದ್ರದ ಕೆಳಗಡೆ ಹೊರಟು ಹೋಯಿತು ಎಂದು ಹೇಳುತ್ತಾರೆ. ಚಿನ್ನದ ವಸ್ತುಗಳೆಲ್ಲವೂ ಕೆಳಗಡೆ ಅಡಗಿದೆ ಅಂದಮೇಲೆ ಭೂಕಂಪದಿಂದ ಖಂಡಿತ ಕೆಳಗೆ ಹೋಗುತ್ತದೆ. ಸಮುದ್ರವನ್ನು ಅಗೆದು ತೆಗೆಯುತ್ತಾರೇನು. ಭೂಮಿಯನ್ನು ಅಗೆಯುತ್ತಾರೆ, ಅಲ್ಲಿಂದ ಸಂಪತ್ತೆಲ್ಲವನ್ನೂ ತೆಗೆಯುತ್ತಾರೆ. ತಂದೆಯು ಹೇಳುತ್ತಾರೆ - ನಾನು ಎಲ್ಲರಿಗೂ ಉಪಕಾರ ಮಾಡುತ್ತೇನೆ. ನಂತರ ನನಗೆ ಎಲ್ಲರೂ ಅಪಕಾರ ಮಾಡುತ್ತಾರೆ, ನಿಂದಿಸುತ್ತಾರೆ. ನಾನಂತೂ ಅಪಕಾರಿಗಳಿಗೂ ಉಪಕಾರ ಮಾಡುತ್ತೇನೆ. ಅಂದಮೇಲೆ ಖಂಡಿತ ನನ್ನ ಮಹಿಮೆಯಾಗಲೇಬೇಕು. ಭಕ್ತಿ ಮಾರ್ಗದಲ್ಲಿ ನೋಡಿ ಎಷ್ಟೊಂದು ಮಾನ್ಯತೆಯಿದೆ. ತಾವು ಮಕ್ಕಳೂ ಸಹ ಎಷ್ಟೊಂದು ತಂದೆಯ ಮಹಿಮೆ ಮಾಡುತ್ತೀರಿ. ಚಿತ್ರದಲ್ಲಿ 32 ಗುಣಗಳನ್ನು ತೋರಿಸಿದ್ದಾರೆ, ತಾವೂ ಸಹ ತಂದೆಯ ಸಮಾನ ಗುಣವಂತರಾಗುತ್ತಿದ್ದೀರಿ ಅಂದಮೇಲೆ ಎಷ್ಟೊಂದು ಪುರುಷಾರ್ಥ ಮಾಡಬೇಕು. ಸಮಯವನ್ನು ವ್ಯರ್ಥ ಮಾಡಬಾರದು. ಬಹಳ ಶ್ರೇಷ್ಥ ತಂದೆಯು ಓದಿಸುತ್ತಿದ್ದಾರೆಂದ ಮೇಲೆ ಪ್ರತಿನಿತ್ಯ ವಿದ್ಯೆಯನ್ನು ಓದಬೇಕಾಗಿದೆ. ಇವರು ಅವಿನಾಶಿ ತಂದೆಯಾಗಿದ್ದಾರೆ, ಶಿಕ್ಷಕರೂ ಆಗಿದ್ದಾರೆ, ಕೊನೆಯಲ್ಲಿ ಬರುವವರು ಹಳಬರಿಗಿಂತಲೂ ತೀಕ್ಷ್ಣವಾಗಿ ಹೋಗುತ್ತಿದ್ದಾರೆ. ಈಗ ತಂದೆಯ ಮೂಲಕ ಪೂರ್ಣ ಜಗತ್ತಿನ ಉನ್ನತಿಯಾಗುತ್ತಿದೆ. ಶ್ರೀ ಕೃಷ್ಣನನ್ನು ಗುಣವಂತನನ್ನಾಗಿ ಮಾಡುವವರು, ಎಲ್ಲರಿಗೂ ಕೊಡುವಂತಹವರೂ ತಂದೆಯೇ ಆಗಿದ್ದಾರೆ. ಇನ್ನುಳಿದವರೆಲ್ಲರೂ ಪಡೆಯುವವರಾಗಿದ್ದಾರೆ. ನಂಬರ್ವಾರ್ ಪುರುಷಾರ್ಥದನುಸಾರವಾಗಿ ಮನೆತನವೂ ಆಗುತ್ತಿದೆ. ಬೇಹದ್ದಿನ ತಂದೆಯನ್ನು ನೋಡಿ ಎಷ್ಟೊಂದು ಮಧುರ ಹಾಗೂ ಪ್ರಿಯರಾಗಿದ್ದಾರೆ. ಸರ್ವ ಶ್ರೇಷ್ಠ ತಂದೆಯ ಮುಖಾಂತರ ಈಗ ಎಲ್ಲರ ಉನ್ನತಿಯಾಗುತ್ತಿದೆ. ಇನ್ನುಳಿದವರೆಲ್ಲರೂ ಕೆಳಗಿಳಿಯಲೇಬೇಕು. ತಂದೆಯದು ಚಮತ್ಕಾರವಾಗಿದೆ. ಭಲೇ ತಿನ್ನಿರಿ, ಕುಡಿಯಿರಿ, ಆದರೆ ಕೇವಲ ತಂದೆಯ ಗುಣಗಾನ ಮಾಡಿರಿ. ತಂದೆಯ ನೆನಪಿನಲ್ಲಿರುವುದರಿಂದ ಊಟ ಮಾಡಲು ಆಗುವುದಿಲ್ಲ ಎಂದಲ್ಲ. ರಾತ್ರಿ ಬಹಳ ಸಮಯ ಸಿಗುತ್ತದೆ. 8 ಗಂಟೆಯಂತೂ ಸಮಯವಿದೆ. ತಂದೆಯು ಹೇಳುತ್ತಾರೆ - ಕೊನೆಪಕ್ಷ 8 ಗಂಟೆ ಈ ಸರ್ಕಾರದ ಸೇವೆ ಮಾಡಿ. ಯಾರೇ ಬಂದರೂ ಅವರಿಗೆ ಆತ್ಮದ ಉನ್ನತಿಯ ಮಾರ್ಗವನ್ನು ಹೇಳಿ. ಜೀವನ್ಮುಕ್ತಿಯೆಂದರೆ ವಿಶ್ವದ ಮಾಲೀಕ ಹಾಗೂ ಮುಕ್ತಿಯೆಂದರೆ ಬ್ರಹ್ಮಾಂಡದ ಮಾಲೀಕ. ತಿಳಿಸುವುದಂತೂ ಬಹಳ ಸಹಜವಲ್ಲವೆ ಆದರೆ ಅದೃಷ್ಟದಲ್ಲಿಲ್ಲವೆಂದರೆ ಪುರುಷಾರ್ಥ ಏನು ಮಾಡಲು ಸಾಧ್ಯವಿಲ್ಲ. ತಂದೆಯ ನೆನಪಿನ ವಿನಃ ಆತ್ಮದ ತುಕ್ಕು ಹೊರಬರಲು ಸಾಧ್ಯವಿಲ್ಲವೆಂದು ತಂದೆಯು ಹೇಳುತ್ತಾರೆ. ಭಲೇ ಇಡೀ ದಿನ ಜ್ಞಾನವನ್ನು ಹೇಳಿ ಆದರೆ ಆತ್ಮದ ಉನ್ನತಿಗೆ ಉಪಾಯ ನೆನಪಿನ ವಿನಃ ಬೇರೇನೂ ಇಲ್ಲ. ತಂದೆಯು ಮಕ್ಕಳಿಗೆ ಬಹಳ ಪ್ರೀತಿಯಿಂದ ಪ್ರತಿನಿತ್ಯ ತಿಳಿಸುತ್ತಾರೆ ಆದರೆ ತಮ್ಮ ಉನ್ನತಿಯನ್ನು ಮಾಡಿಕೊಳ್ಳುತ್ತಾರೆಯೋ ಅಥವಾ ಇಲ್ಲವೋ ಎಂದು ಅವರೇ ತಿಳಿದುಕೊಳ್ಳಬೇಕು. ಶಿವತಂದೆಯ ಮುರುಳಿಯನ್ನು ನಾವು ಕೇಳುತ್ತೇವೆಂದು ಮಕ್ಕಳು ತಿಳಿದುಕೊಂಡಿದ್ದಾರೆ. ತಮ್ಮ ಮೂಲಕ ಕೇಳುವುದರಿಂದ ಪರೋಕ್ಷವಾಗುತ್ತದೆ. ಇಲ್ಲಿಗೆ ಬರುವುದು ಪ್ರತ್ಯಕ್ಷವಾಗಿ ಕೇಳಲು ನಂತರ ಬ್ರಹ್ಮಾ ತಂದೆಯ ಮುಖದ ಮೂಲಕ ಹೇಳುತ್ತಾರೆ ಅಥವಾ ಮುಖದ ಮೂಲಕ ಜ್ಞಾನಾಮೃತವನ್ನು ನೀಡುತ್ತಾರೆ. ಈ ಸಮಯದಲ್ಲಿ ಜಗತ್ತು ತಮೋಪ್ರಧಾನವಾಗಿದೆ. ಅದರ ಮೇಲೆ ಜ್ಞಾನದ ಸುರಿಮಳೆಯಾಗಬೇಕು. ಆ ನೀರಿನ ಮಳೆಯಂತೂ ಬಹಳ ಆಗುತ್ತಿರುತ್ತದೆ, ಆ ನೀರಿನಿಂದಂತೂ ಯಾರೂ ಪಾವನರಾಗಲು ಸಾಧ್ಯವಿಲ್ಲ. ಇದು ಪೂರ್ಣವಾಗಿ ಜ್ಞಾನದ ವಿಚಾರವಾಗಿದೆ. ತಂದೆಯು ಹೇಳುತ್ತಾರೆ - ಈಗ ಏಳಿ, ನಾನು ನಿಮ್ಮನ್ನು ಶಾಂತಿಧಾಮಕ್ಕೆ ಕರೆದೊಯ್ಯುತ್ತೇನೆ, ಆತ್ಮದ ಉನ್ನತಿಯೂ ಸಹ ಇದರಲ್ಲಿದೆ, ಬಾಕಿ ಎಲ್ಲವೂ ಶಾರೀರಿಕ ವಿಚಾರಗಳಾಗಿವೆ. ಆತ್ಮೀಯ ವಿಚಾರಗಳನ್ನು ಕೇವಲ ತಾವು ಮಾತ್ರ ಕೇಳುತ್ತೀರಿ. ಪದಮಾಪತಿ, ಭಾಗ್ಯಶಾಲಿಗಳು ಕೇವಲ ತಾವು ಮಾತ್ರ ಆಗುತ್ತೀರಿ. ತಂದೆಯು ಬಡವರ ಬಂಧುವಾಗಿದ್ದಾರೆ. ಬಡವರೇ ಕೇಳುತ್ತಾರೆ, ಅದಕ್ಕಾಗಿ ತಂದೆಯು ಅಹಲ್ಯೆಯರು, ವೇಶ್ಯೆಯರು, ಅಬಲೆಯರು, ಎಲ್ಲರಿಗೂ ತಿಳಿಸಿ ಎಂದು ಹೇಳುತ್ತಾರೆ. ಸತ್ಯಯುಗದಲ್ಲಿ ಇಂತಹ ಮಾತುಗಳಿರುವುದಿಲ್ಲ. ಅದು ಬೇಹದ್ದಿನ ಶಿವಾಲಯವಾಗಿದೆ. ಈಗ ಬೇಹದ್ದಿನ ವೇಶ್ಯಾಲಯವಾಗಿದೆ, ಸಂಪೂರ್ಣ ತಮೋಪ್ರಧಾನವಾಗಿದೆ. ಇದಕ್ಕಿಂತಲೂ ಹೆಚ್ಚಿನ ಮಾರ್ಜಿನ್ ಇಲ್ಲ. ಈಗ ಈ ಪತಿತ ಪ್ರಪಂಚವು ಪರಿವರ್ತನೆಯಾಗಲೇಬೇಕು. ಭಾರತದಲ್ಲಿ ರಾಮರಾಜ್ಯ ಹಾಗೂ ರಾವಣ ರಾಜ್ಯವಾಗುತ್ತದೆ. ಯಾವಾಗ ಅನೇಕ ಧರ್ಮಗಳಾಗುತ್ತವೆಯೋ ಆಗ ಅಶಾಂತಿಯಾಗುತ್ತದೆ. ಯುದ್ಧಗಳಂತೂ ಆಗುತ್ತಲೇ ಇರುತ್ತದೆ. ಈಗಂತೂ ಬಹಳ ಜೋರಾಗಿ ಯುದ್ಧವಾಗುತ್ತದೆ. ಕಠಿಣ ಯುದ್ಧವಾಗಿ ನಂತರ ನಿಂತು ಹೋಗುತ್ತದೆ ಏಕೆಂದರೆ ನಂತರ ರಾಜ್ಯವು ಸ್ಥಾಪನೆಯಾಗಬೇಕು, ಕರ್ಮಾತೀತ ಸ್ಥಿತಿಯೂ ಆಗಬೇಕು. ಈಗಂತೂ ಯಾರೂ ಸಹ ಹೇಳಲು ಸಾಧ್ಯವಿಲ್ಲ. ಆ ಸ್ಥಿತಿಯು ಬಂದು ಬಿಟ್ಟರೆ ವಿದ್ಯೆಯು ಪೂರ್ಣವಾಗುತ್ತದೆ ನಂತರ ತಮ್ಮ ಪುರುಷಾರ್ಥದನುಸಾರವಾಗಿ ವರ್ಗಾವಣೆಯಾಗುತ್ತದೆ. ಈ ಬಿದುರಿನ ಕಾಡಿಗೆ ಬೆಂಕಿಯಂತೂ ಬೀಳಲೇಬೇಕು. ಬಹಳ ಬೇಗನೆ ವಿನಾಶವಾಗುತ್ತದೆ, ಅದಕ್ಕೆ ರಕ್ತದ ಕೋಡಿಯ ಆಟವೆಂದು ಹೇಳುತ್ತಾರೆ. ಸುಮ್ಮನೆ ಎಲ್ಲರೂ ಸಾಯುತ್ತಾರೆ, ರಕ್ತದ ನದಿಗಳು ಹರಿಯುತ್ತವೆ. ನಂತರ ಹಾಲು-ತುಪ್ಪದ ನದಿಗಳು ಹರಿಯುತ್ತವೆ. ಹಾಹಾಕಾರದಿಂದ ಜಯಜಯಕಾರವಾಗುತ್ತದೆ. ಇನ್ನುಳಿದವರೆಲ್ಲರೂ ಅಜ್ಞಾನ ನಿದ್ರೆಯಲ್ಲಿ ಮಲಗಿದ್ದಂತೆಯೇ ಸಮಾಪ್ತಿಯಾಗಿ ಬಿಡುತ್ತಾರೆ. ಬಹಳ ಯುಕ್ತಿಯಿಂದ ಸ್ಥಾಪನೆಯಾಗುತ್ತದೆ. ವಿಘ್ನವೂ ಬರುತ್ತದೆ, ಅತ್ಯಾಚಾರವೂ ಆಗುತ್ತದೆ, ಈಗ ಮಾತೆಯರ ಮೂಲಕ ಸ್ವರ್ಗದ ಬಾಗಿಲು ತೆರೆಯುತ್ತದೆ. ಬಹಳ ಪುರುಷರೂ ಇದ್ದಾರೆ ಆದರೆ ಮಾತೆಯೇ ಜನ್ಮ ಕೊಡುತ್ತಾಳೆ ಅಂದಾಗ ಅವರಿಗೆ ಪುರುಷರಿಗಿಂತ ಹೆಚ್ಚು ಫಲವು ಸಿಗುವುದು. ಸ್ವರ್ಗದಲ್ಲಂತೂ ನಂಬರ್ವಾರ್ ಎಲ್ಲರೂ ಬರುತ್ತಾರೆ, ಎರಡು ಜನ್ಮ ಪುರುಷನದು ಸಿಗಬಹುದು, ಲೆಕ್ಕಾಚಾರವು ಯಾವುದು ಡ್ರಾಮಾದಲ್ಲಿ ನಿಶ್ಚಿತವಾಗಿದೆಯೋ ಅದೇ ಆಗುತ್ತದೆ. ಆತ್ಮದ ಉನ್ನತಿಯಾಗುವುದರಿಂದ ಎಷ್ಟೊಂದು ವ್ಯತ್ಯಾಸವಾಗಿ ಬಿಡುತ್ತದೆ. ಕೆಲವರಂತೂ ಒಂದೇ ಸಲ ಶ್ರೇಷ್ಠರಾಗಿ ಬಿಡುತ್ತಾರೆ, ಕೆಲವರಂತೂ ಸಂಪೂರ್ಣ ಕನಿಷ್ಟ. ಎಲ್ಲಿ ರಾಜ! ಎಲ್ಲಿ ಪ್ರಜೆ! ಮಧುರಾತಿ ಮಧುರ ಮಕ್ಕಳಿಗೆ ಈಗ ಪುರುಷಾರ್ಥ ಮಾಡಿ ಎಂದು ತಂದೆ ತಿಳಿಸುತ್ತಾರೆ. ಯೋಗದಿಂದ ಪವಿತ್ರರಾಗಿ ಆಗ ಧಾರಣೆಯಾಗುತ್ತದೆ. ಗುರಿಯು ಬಹಳ ಶ್ರೇಷ್ಠವಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕು. ಆತ್ಮಕ್ಕೆ ಪರಮಾತ್ಮನೊಂದಿಗೆ ಪ್ರೀತಿಯಿದೆಯಲ್ಲವೆ. ಇದು ಆತ್ಮಿಕ ಪ್ರೀತಿ ಹಾಗೂ ಇದರಿಂದ ಆತ್ಮದ ಉನ್ನತಿಯಾಗುತ್ತದೆ. ಶಾರೀರಿಕ ಪ್ರೀತಿಯಿಂದ ಬಿದ್ದು ಹೋಗುತ್ತಾರೆ. ಅದೃಷ್ಟದಲ್ಲಿಲ್ಲವೆಂದರೆ ಓಡಿ ಹೋಗುತ್ತಾರೆ. ಯಜ್ಞವನ್ನು ಬಹಳ ಸಂಭಾಲನೆ ಮಾಡಬೇಕು. ಮಾತೆಯರ ಒಂದೊಂದು ಪೈಸೆಯಿಂದ ಯಜ್ಞದ ಸರ್ವೀಸ್ ಆಗುತ್ತಿದೆ. ಇಲ್ಲಿ ಬಡವರೇ ಶ್ರೀಮಂತರಾಗುತ್ತಾರೆ. ಎಲ್ಲದಕ್ಕೆ ಆಧಾರವು ವಿದ್ಯೆಯಾಗಿದೆ. ಈಗ ತಾವು ಸದಾ ಸುಮಂಗಲಿಯಾಗುತ್ತೀರಿ - ಇದು ಎಲ್ಲರಿಗೂ ಅನುಭವವಾಗುತ್ತದೆ. ಮಾಲೆಯ ಮಣಿಯಾಗುವವರಿಗೆ ಎಷ್ಟೊಂದು ಚೆನ್ನಾಗಿ ಅನುಭವವಾಗಬೇಕು. ಶಿವ ತಂದೆಯನ್ನು ನೆನಪು ಮಾಡುತ್ತಾ ಸರ್ವೀಸ್ ಮಾಡುತ್ತಿರಿ ಆಗ ಬಹಳ ಉನ್ನತಿಯಾಗುತ್ತದೆ. ಶಿವತಂದೆಯ ಸರ್ವೀಸಿನಲ್ಲಿ ಶರೀರವೂ ಅರ್ಪಣೆಯಾಗಬೇಕು. ಇಡೀ ದಿನ ನಶೆಯಿರಬೇಕು - ಇದು ಚಿಕ್ಕಮ್ಮನ ಮನೆಯಂತಲ್ಲ. ನಾವು ನಮ್ಮ ಉನ್ನತಿಯನ್ನು ಎಷ್ಟು ಮಾಡಿಕೊಂಡಿದ್ದೇವೆಂದು ನೋಡಿಕೊಳ್ಳಬೇಕು. ತಂದೆಯು ಹೇಳುತ್ತಾರೆ - ಕಳೆದು ಹೋದದ್ದನ್ನು ನೆನಪು ಮಾಡಬೇಡಿ. ಮುಂದೆ ಯಾವುದೇ ಆಸೆಯನ್ನು ಇಟ್ಟುಕೊಳ್ಳಬಾರದು. ಶರೀರ ನಿರ್ವಹಣೆಗಾಗಿ ಕರ್ಮವನ್ನಂತೂ ಮಾಡಲೇಬೇಕು. ಸಮಯ ಸಿಕ್ಕಿದಾಗ ತಂದೆಯನ್ನು ನೆನಪು ಮಾಡಿ ಆಗ ವಿಕರ್ಮ ವಿನಾಶವಾಗುತ್ತದೆ. ತಂದೆಯು ಬಂಧನದ ಮಾತೆಯರಿಗೂ ಹೇಳುತ್ತಾರೆ - ತಾವು ಪತಿಗೂ ಬಹಳ ನಮ್ರತೆ ಹಾಗೂ ಪ್ರೀತಿಯಿಂದ ತಿಳಿಸಬೇಕು - ಯಾರೇ ಹೊಡೆದರೂ ಅವರ ಮೇಲೆ ಹೂ ಮಳೆಯನ್ನು ಸುರಿಸಿ. ತಮ್ಮನ್ನು ರಕ್ಷಿಸಿಕೊಳ್ಳಲು ಬಹಳ ಯುಕ್ತಿ ಬೇಕು. ಕಣ್ಣುಗಳು ಬಹಳ ಶೀತಲವಾಗಿರಬೇಕು, ಎಂದೂ ಅಲುಗಾಡಬಾರದು. ಇದರ ಮೇಲೆ ಅಂಗಧನ ಉದಾಹರಣೆಯಿದೆ. ಸಂಪೂರ್ಣವಾಗಿ ಅಡೋಲವಾಗಿದ್ದರು. ತಾವೆಲ್ಲರೂ ಮಹಾವೀರರಾಗಿದ್ದೀರಿ, ಯಾವುದು ಕಳೆದು ಹೋಯಿತೋ ಅದನ್ನು ನೆನಪು ಮಾಡಿಕೊಳ್ಳಬಾರದು. ಸದಾ ಹರ್ಷಿತರಾಗಿರಬೇಕು. ಡ್ರಾಮಾದ ಮೇಲೆ ಅಟಲವಾಗಿರಬೇಕು. ನಾನೂ ಸಹ ಡ್ರಾಮಾದ ಬಂಧನದಲ್ಲಿ ಬಂಧಿತನಾಗಿದ್ದೇನೆಂದು ತಂದೆಯು ಸ್ವಯಂ ತಿಳಿಸುತ್ತಾರೆ. ಬಾಕಿ ಬೇರೆ ಯಾವುದೇ ಮಾತಿಲ್ಲ. ಸ್ವದರ್ಶನ ಚಕ್ರದಿಂದ ಸಾಯಿಸುತ್ತಿದ್ದನು ಎಂದು ಕೃಷ್ಣನ ಬಗ್ಗೆ ಬರೆಯಲಾಗಿದೆ ಅಂದಾಗ ಅದೆಲ್ಲವೂ ಕಥೆಯಾಗಿದೆ. ತಂದೆಯಂತೂ ಹಿಂಸೆ ಮಾಡಲು ಸಾಧ್ಯವಿಲ್ಲ. ಇವರು ತಂದೆ, ಶಿಕ್ಷಕರಾಗಿದ್ದಾರೆ, ಹೊಡೆಯುವ ಮಾತೇ ಇಲ್ಲ. ಈ ಮಾತುಗಳೆಲ್ಲವೂ ಈ ಸಮಯದ್ದಾಗಿದೆ. ಒಂದು ಕಡೆ ಬಹಳ ಮನುಷ್ಯರಿದ್ದಾರೆ, ಇನ್ನೊಂದು ಕಡೆ ನೀವು, ಯಾರು ಬರಬೇಕಾಗಿದೆಯೋ ಅವರು ಬರುತ್ತಿರುತ್ತಾರೆ. ಕಲ್ಪದ ಮೊದಲಿನಂತೆಯೇ ಪದವಿಯನ್ನು ಪಡೆಯುತ್ತಿರುತ್ತಾರೆ. ಇದರಲ್ಲಿ ಚಮತ್ಕಾರದ ಮಾತಿಲ್ಲ. ತಂದೆಯು ದಯಾಹೃದಯಿಯಾಗಿದ್ದಾರೆ. ದುಃಖಹರ್ತ-ಸುಖಕರ್ತನಾಗಿದ್ದಾರೆ ಮತ್ತೆ ದುಃಖವನ್ನು ಹೇಗೆ ಕೊಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

೧. ಕೊನೆಪಕ್ಷ 8 ಗಂಟೆಗಳು ಈಶ್ವರೀಯ ಸರ್ಕಾರದ ಸೇವೆ ಮಾಡಿ ತಮ್ಮ ಸಮಯವನ್ನು ಸಫಲ ಮಾಡಬೇಕು. ತಂದೆಯ ರೀತಿ ಗುಣವಂತರಾಗಬೇಕಾಗಿದೆ.

೨. ಯಾವುದು ಕಳೆದು ಹೋಗಿದೆಯೋ ಅದನ್ನು ನೆನಪು ಮಾಡಬಾರದು. ಕಳೆದದ್ದನ್ನು ಮರೆತು ಸದಾ ಹರ್ಷಿತರಾಗಿರಬೇಕಾಗಿದೆ. ಡ್ರಾಮಾದ ಮೇಲೆ ಅಡೋಲರಾಗಿರಬೇಕು.


ವರದಾನ:
ನಿಶ್ಚಿತವಾಗಿ ವಿಜಯದ ನಶೆಯಲ್ಲಿರುತ್ತಾ ತಂದೆಯಿಂದ ಪದಮಾಗುಣ ಸಹಾಯ ಪ್ರಾಪ್ತಿ ಮಾಡಿಕೊಳ್ಳುವಂತಹ ಮಾಯಾಜೀತ್ ಭವ.

ತಂದೆಯ ಪದಮಾಗುಣ ಸಹಾಯಕ್ಕೆ ಪಾತ್ರರಾಗಿರುವ ಮಕ್ಕಳು ಮಾಯೆಯ ಯುದ್ಧಕ್ಕೆ ಸವಾಲನ್ನು ಹಾಕುತ್ತಾರೆ. ನಿಮ್ಮ ಕೆಲಸ ಆಗಿದೆ ಬರುವುದು, ನಮ್ಮ ಕೆಲಸವಾಗಿದೆ ವಿಜಯ ಪ್ರಾಪ್ತಿ ಮಾಡಿಕೊಳ್ಳುವುದು. ಅವರು ಮಾಯೆಯ ಹುಲಿಯ ರೂಪವನ್ನು ಚಿಕ್ಕದೆಂದು ತಿಳಿಯುವರು ಏಕೆಂದರೆ ಇದು ಮಾಯೆಯ ರಾಜ್ಯ ಈಗ ಸಮಾಪ್ತಿಯಾಗುವುದಿದೆ ಎಂದು ತಿಳಿದಿದ್ದಾರೆ, ನಾವು ಅನೇಕ ಬಾರಿ ವಿಜಯಿ ಆತ್ಮಗಳ ವಿಜಯ 100% ನಿಶ್ಚಿತವಾಗಿದೆ. ಈ ನಿಶ್ಚಿತತೆಯ ನಶೆ ತಂದೆಯ ಪದುಮಾಗುಣ ಸಹಾಯದ ಅಧಿಕಾರ ಪ್ರಾಪ್ತಿ ಮಾಡಿಸುವುದು. ಈ ನಶೆಯಿಂದ ಸಹಜವಾಗಿ ಮಾಯಾಜೀತ್ ಆಗಿ ಬಿಡುವಿರಿ.

ಸ್ಲೋಗನ್:
ಸಂಕಲ್ಪ ಶಕ್ತಿಯನ್ನು ಜಮಾ ಮಾಡಿಕೊಂಡು ಸ್ವಯಂನ ಪ್ರತಿ ಹಾಗೂ ವಿಶ್ವದ ಪ್ರತಿ ಇದರ ಪ್ರಯೋಗ ಮಾಡಿ.


ಬ್ರಹ್ಮಾ ತಂದೆಯ ಸಮಾನರಾಗಲು ವಿಶೇಷ ಪುರುಷಾರ್ಥ -
ಬ್ರಹ್ಮಾ ತಂದೆಯ ಸಮಾನ ನಿಮ್ಮ ಈ ನಯನ ಆತ್ಮೀಯತೆಯನ್ನು ಅನುಭವ ಮಾಡಿಸಲಿ, ಚಲನೆ ತಂದೆಯ ಚರಿತ್ರೆಯ ಸಾಕ್ಷಾತ್ಕಾರ ಮಾಡಿಸಲಿ. ಮಸ್ತಕ, ಮಸ್ತಕ ಮಣಿಯ ಸಾಕ್ಷಾತ್ಕಾರ ಮಾಡಿಸಲಿ, ಈ ಅವ್ಯಕ್ತ ಮುಖ ಲಕ್ಷಣ ದಿವ್ಯ ಅಲೌಕಿಕ ಸ್ಥಿತಿಯ ಪ್ರತ್ಯಕ್ಷ ರೂಪ ಕಂಡುಬರಲಿ. ಅದಕ್ಕಾಗಿ ನಿಮ್ಮ ಅಂತರ್ಮುಖಿ ಅಥವಾ ಆತ್ಮೀಯ ಸ್ಥಿತಿಯಲ್ಲಿ ಸದಾಕಾಲ ಇರುವಂತಹ ಅಭ್ಯಾಸ ಮಾಡಿ.