07.02.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಪಾವನರಾಗಲು ಒಂದಾಗಿದೆ ನೆನಪಿನ ಬಲ, ಇನ್ನೊಂದು ಶಿಕ್ಷೆಯ ಬಲ, ನೀವು ನೆನಪಿನ ಬಲದಿಂದ ಪಾವನರಾಗಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ

ಪ್ರಶ್ನೆ:
ತಂದೆಯು ಆತ್ಮಿಕ ಸರ್ಜನ್ ಆಗಿದ್ದಾರೆ, ಅವರು ನಿಮಗೆ ಯಾವ ಧೈರ್ಯವನ್ನು ಕೊಡಲು ಬಂದಿದ್ದಾರೆ?

ಉತ್ತರ:
ಹೇಗೆ ಆ ಸರ್ಜನ್ ರೋಗಿಗಳಿಗೆ ಧೈರ್ಯವನ್ನು ಕೊಡುತ್ತಾರೆ - ಈಗ ಕಾಯಿಲೆಯು ನಿವಾರಣೆಯಾಗಿ ಬಿಡುತ್ತದೆ ಹಾಗೆಯೇ ಆತ್ಮಿಕ ಸರ್ಜನ್ ಸಹ ನೀವು ಮಕ್ಕಳಿಗೆ ಧೈರ್ಯ ಕೊಡುತ್ತಾರೆ - ಮಕ್ಕಳೇ, ನೀವು ಮಾಯೆಯ ಕಾಯಿಲೆಯಿಂದ ಗಾಬರಿಯಾಗಬಾರದು, ಸರ್ಜನ್ ಔಷಧಿಯನ್ನು ಕೊಡುತ್ತಾರೆಂದರೆ ಈ ಖಾಯಿಲೆಗಳೆಲ್ಲವೂ ಹೊರ ಬಂದು ಬಿಡುತ್ತವೆ, ಯಾವ ಸಂಕಲ್ಪಗಳು ಅಜ್ಞಾನ ಕಾಲದಲ್ಲಿಯೂ ಸಹ ಬಂದಿರುವುದಿಲ್ಲವೋ ಅವೂ ಸಹ ಬರುತ್ತವೆ. ಆದರೆ ತಾವು ಎಲ್ಲವನ್ನೂ ಸಹನೆ ಮಾಡಬೇಕಾಗಿದೆ. ಸ್ವಲ್ಪ ಪರಿಶ್ರಮಪಡಿ, ನಿಮ್ಮ ಸುಖದ ದಿನಗಳು ಬಂದಿತೆಂದರೆ ಬಂದಿತು.

ಓಂ ಶಾಂತಿ.
ಬೇಹದ್ದಿನ ತಂದೆಯು ಎಲ್ಲಾ ಮಕ್ಕಳಿಗೂ ತಿಳಿಸುತ್ತಿದ್ದಾರೆ - ನೀವು ಎಲ್ಲರಿಗೆ ಈಗ ತಂದೆಯು ಬಂದಿದ್ದಾರೆ, ಧೈರ್ಯವನ್ನು ಕೊಡುತ್ತಿದ್ದಾರೆಂದು ಸಂದೇಶವನ್ನು ತಲುಪಿಸಬೇಕಾಗಿದೆ. ಏಕೆಂದರೆ ಭಕ್ತಿ ಮಾರ್ಗದಲ್ಲಿ ತಂದೆಯೇ ಬನ್ನಿ, ಬಂದು ಮುಕ್ತರನ್ನಾಗಿ ಮಾಡಿ, ದುಃಖದಿಂದ ಬಿಡಿಸಿ ಎಂದು ಕರೆಯುತ್ತಾರೆ. ಆದ್ದರಿಂದ ತಂದೆಯು ಧೈರ್ಯ ಕೊಡುತ್ತಾರೆ - ಮಕ್ಕಳೇ, ಇನ್ನು ಸ್ವಲ್ಪ ದಿನಗಳಿವೆ, ಯಾರಿಗಾದರೂ ಕಾಯಿಲೆಯು ನಿವಾರಣೆಯಾಗುವ ಸಮಯದಲ್ಲಿ ಈಗ ಎಲ್ಲವೂ ಸರಿಯಾಗಿ ಬಿಡುತ್ತದೆ ಎಂದು ಹೇಳುತ್ತಾರೆ. ತಂದೆಯೂ ಮಕ್ಕಳಿಗೆ ತಿಳಿಸುತ್ತಾರೆ - ಈ ಛೀ ಛೀ ಪ್ರಪಂಚದಲ್ಲಿ ಇನ್ನು ಸ್ವಲ್ಪವೇ ದಿನಗಳಿವೆ ನಂತರ ತಾವು ಹೊಸ ಪ್ರಪಂಚದಲ್ಲಿ ಹೋಗುತ್ತೀರಿ. ಅದಕ್ಕಾಗಿ ನಾವು ಯೋಗ್ಯರಾಗಬೇಕಾಗಿದೆ ನಂತರ ಯಾವುದೇ ರೋಗ ಮುಂತಾದವು ನಿಮ್ಮನ್ನು ಸತಾಯಿಸುವುದಿಲ್ಲ. ತಂದೆಯು ಧೈರ್ಯ ಕೊಟ್ಟು ಹೇಳುತ್ತಿದ್ದಾರೆ - ಸ್ವಲ್ಪ ಪರಿಶ್ರಮ ಪಡಬೇಕು, ಈ ರೀತಿ ಧೈರ್ಯ ಕೊಡಲು ಮತ್ತ್ಯಾರೂ ಇಲ್ಲ. ನೀವು ತಮೋಪ್ರಧಾನರಾಗಿದ್ದೀರಿ ಪುನಃ ಸತೋಪ್ರಧಾನರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಈಗ ಎಲ್ಲಾ ಆತ್ಮರು ಪವಿತ್ರರಾಗಿ ಬಿಡುತ್ತಾರೆ ಅದರಲ್ಲಿ ಕೆಲವರು ಯೋಗ ಬಲದಿಂದ, ಕೆಲವರು ಶಿಕ್ಷೆಗಳ ಬಲದಿಂದ. ಶಿಕ್ಷೆಗಳದೂ ಬಲವಾಗಿದೆಯಲ್ಲವೆ ಅದರಿಂದ ಯಾರು ಪವಿತ್ರರಾಗುತ್ತಾರೆ ಅವರ ಪದವಿ ಕಡಿಮೆಯಾಗಿ ಬಿಡುವುದು. ನೀವು ಮಕ್ಕಳಿಗೆ ಶ್ರೀಮತವು ಸಿಗುತ್ತಿರುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ಆಗ ನಿಮ್ಮ ಎಲ್ಲಾ ಪಾಪಗಳು ಭಸ್ಮವಾಗಿ ಬಿಡುತ್ತವೆ. ಒಂದು ವೇಳೆ ನೆನಪು ಮಾಡದಿದ್ದರೆ ಪಾಪವು ನೂರುಪಟ್ಟು ಹೆಚ್ಚಾಗಿ ಬಿಡುವುದು ಏಕೆಂದರೆ ನೀವು ಪಾಪಾತ್ಮರಾಗಿ ನನ್ನ ನಿಂದನೆಯನ್ನು ಮಾಡಿಸುತ್ತೀರಿ. ಆದ್ದರಿಂದ ಇವರಲ್ಲಿ ಆಸುರೀ ನಡವಳಿಕೆಯೇ ಕಂಡು ಬರುತ್ತಿದೆ ಅಂದಮೇಲೆ ಇವರಿಗೆ ಈಶ್ವರನು ಇಂತಹ ಮತವನ್ನು ಕೊಡುತ್ತಾರೆಯೇ! ಎಂದು ಮನುಷ್ಯರು ಹೇಳುತ್ತಾರೆ. ಏರಿಳಿತವೂ ಆಗುತ್ತದೆಯಲ್ಲವೆ. ಒಳ್ಳೊಳ್ಳೆಯ ಮಕ್ಕಳೂ ಸೋಲನ್ನು ಅನುಭವಿಸುತ್ತಾರೆ. ಆದ್ದರಿಂದ ಪಾಪವು ಪರಿಹಾರವಾಗುವುದೇ ಇಲ್ಲ. ಅದನ್ನು ಅನುಭವಿಸಲೇಬೇಕಾಗುತ್ತದೆ. ಇದು ಬಹಳ ಛೀ ಛೀ ಪ್ರಪಂಚವಾಗಿದೆ, ಇಲ್ಲಿ ಎಲ್ಲವೂ ಆಗುತ್ತಿರುತ್ತದೆ. ತಂದೆಯೇ ಬಂದು ನಮಗೆ ಭವಿಷ್ಯದ ಹೊಸ ಪ್ರಪಂಚಕ್ಕಾಗಿ ತಿಳಿಸಿ ಎಂದೇ ಕರೆಯುತ್ತಾರೆ. ತಂದೆಗೂ ಗೊತ್ತಿದೆ, ಆ ಕಡೆ ಹಳೆಯ ಪ್ರಪಂಚವಾಗಿದೆ, ಈ ಕಡೆ ಹೊಸ ಪ್ರಪಂಚವಿದೆ. ನೀವು ಅಂಬಿಗನಾಗಿದ್ದೀರಿ, ಈಗ ನೀವು ಪುರುಷೋತ್ತಮರಾಗಲು ಹೋಗುತ್ತಿದ್ದೀರಿ, ನಿಮ್ಮದು ಹಳೆಯ ಪ್ರಪಂಚದಿಂದ ದೋಣಿಯ ಹಗ್ಗ ಬಿಚ್ಚಲ್ಪಟ್ಟಿದೆ. ಅಂದಾಗ ಎಲ್ಲಿಗೆ ಹೋಗುತ್ತಿದ್ದೀರಿ ಆ ಮನೆಯನ್ನೇ ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ನಿಮ್ಮಲ್ಲಿರುವ ತುಕ್ಕು ಬಿಟ್ಟು ಹೋಗುವುದು. ಇಲ್ಲವೆ ಯೋಗ ಬಲ, ಇಲ್ಲವೆ ಶಿಕ್ಷೆಗಳು. ಪ್ರತಿಯೊಂದು ಆತ್ಮವು ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಪವಿತ್ರರಾಗದ ಹೊರತು ಯಾರೂ ಹಿಂತಿರುಗಲು ಸಾಧ್ಯವಿಲ್ಲ. ಎಲ್ಲರಿಗೂ ತಮ್ಮ ತಮ್ಮದೇ ಆದ ಪಾತ್ರವು ಸಿಕ್ಕಿದೆ. ತಂದೆಯು ತಿಳಿಸುತ್ತಾರೆ - ಇದು ನಿಮ್ಮ ಅಂತಿಮ ಜನ್ಮವಾಗಿದೆ. ಕಲಿಯುಗವು ಇನ್ನೂ ಚಿಕ್ಕ ಮಗುವಾಗಿದೆ ಅರ್ಥಾತ್ ಪ್ರಥಮ ಪಾದವಾಗಿದೆ ಅಂದರೆ ಮನುಷ್ಯರು ಇದಕ್ಕಿಂತಲೂ ಇನ್ನೂ ಹೆಚ್ಚಿನ ದುಃಖಿಗಳಾಗುತ್ತಾರೆಂದು ಮನುಷ್ಯರು ಹೇಳುತ್ತಾರೆ. ಆದರೆ ಈ ದುಃಖಧಾಮವು ಈಗ ಸಮಾಪ್ತಿಯಾಗಲಿದೆ ಎಂದು ನೀವು ಸಂಗಮಯುಗೀ ಬ್ರಾಹ್ಮಣರು ತಿಳಿಯುತ್ತೀರಿ. ತಂದೆಯು ಧೈರ್ಯವನ್ನು ಕೊಡುತ್ತಾರೆ - ಕಲ್ಪದ ಮೊದಲೂ ಸಹ ತಿಳಿಸಿದ್ದರು, ನನ್ನೊಬ್ಬನನ್ನೇ ನೆನಪು ಮಾಡಿ ಆಗ ನಿಮ್ಮ ಪಾಪಗಳು ತುಂಡಾಗುವುದು. ನಾನು ಇದನ್ನು ಗ್ಯಾರಂಟಿ ಕೊಡುತ್ತೇನೆ. ಇದನ್ನೂ ತಿಳಿಸುತ್ತಾರೆ - ಕಲಿಯುಗದ ವಿನಾಶವು ಅವಶ್ಯವಾಗಿ ಆಗಲಿದೆ ಮತ್ತು ಸತ್ಯಯುಗವು ಅವಶ್ಯವಾಗಿ ಬರಲಿದೆ. ಮಕ್ಕಳಿಗೆ ನಿಶ್ಚಯವೂ ಇದೆ ಆದರೆ ನೆನಪು ಸ್ಥಿರವಾಗಿರುವ ಕಾರಣ ಯಾವುದಾದರೊಂದು ವಿಕರ್ಮಗಳನ್ನು ಮಾಡುತ್ತಾರೆ. ಬಾಬಾ, ಕ್ರೋಧವು ಬಂದು ಬಿಡುತ್ತದೆ ಎಂದೇ ಹೇಳುತ್ತಾರೆ ಇದನ್ನೂ ಭೂತವೆಂದು ಹೇಳಲಾಗುತ್ತದೆ. ಈ ರಾವಣ ರಾಜ್ಯ ಪಂಚ ಭೂತಗಳೂ ದುಃಖ ಕೊಡುತ್ತವೆ, ಅಂತ್ಯದ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಬೇಕಾಗಿದೆ. ಯಾರಿಗೆ ಹಿಂದೆ ಎಂದೂ ಕಾಮ ವಿಕಾರವು ಸತಾಯಿಸುತ್ತಿರಲಿಲ್ಲವೋ ಅವರಿಗೂ ಸಹ ವಿಕಾರದ ಖಾಯಿಲೆಯು ಇಮರ್ಜ್ ಆಗಿ ಬಿಡುತ್ತದೆ. ಆದ್ದರಿಂದಲೇ ಹೇಳುತ್ತಾರೆ - ಮೊದಲಂತೂ ಇಂತಹ ವಿಕಲ್ಪಗಳು ಎಂದೂ ಬಂದಿರಲಿಲ್ಲ, ಈಗ ಏಕೆ ಸತಾಯಿಸುತ್ತದೆ? ಇದು ಜ್ಞಾನವಲ್ಲವೆ. ಜ್ಞಾನವು ಎಲ್ಲಾ ಕಾಯಿಲೆಗಳನ್ನು ಹೊರ ಹಾಕುತ್ತದೆ ಆದರೆ ಭಕ್ತಿಯು ಕಾಯಿಲೆಗಳನ್ನು ಹೊರ ಹಾಕುವುದಿಲ್ಲ. ಇದು ಅಶುದ್ಧ, ವಿಕಾರಿ ಪ್ರಪಂಚವಾಗಿದೆ. 100% ಅಶುದ್ಧತೆಯಿದೆ, ಈಗ 100% ಪತಿತರಿಂದ ಮತ್ತೆ 100% ಪಾವನರಾಗಬೇಕಾಗಿದೆ, 100% ಭ್ರಷ್ಟಾಚಾರಿಯಿಂದ 100% ಶ್ರೇಷ್ಠಾಚಾರಿ ಪ್ರಪಂಚವಾಗಬೇಕಾಗಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ತಾವು ಮಕ್ಕಳನ್ನು ಶಾಂತಿಧಾಮ, ಸುಖಧಾಮಕ್ಕೆ ಕರೆದುಕೊಂಡು ಹೋಗಲು ಬಂದಿದ್ದೇನೆ. ನೀವು ನನ್ನನ್ನೂ ನೆನಪು ಮಾಡಿ ಮತ್ತು ಸೃಷ್ಟಿ ಚಕ್ರವನ್ನು ತಿರುಗಿಸುತ್ತಾ ಇರಿ, ಯಾವುದೇ ವಿಕರ್ಮಗಳನ್ನು ಮಾಡಬೇಡಿ. ಯಾವ ಗುಣಗಳು ಈ ದೇವತೆಗಳಲ್ಲಿವೆಯೋ ಅಂತಹ ಗುಣಗಳನ್ನು ಧಾರಣೆ ಮಾಡಬೇಕು. ತಂದೆಯೇನೂ ಕಷ್ಟ ಕೊಡುವುದಿಲ್ಲ. ಕೆಲ ಕೆಲವೊಂದು ಮನೆಗಳಲ್ಲಿಯೂ ಪ್ರೇತಾತ್ಮಗಳಿರುತ್ತವೆ, ಅವು ಬೆಂಕಿ ಹಚ್ಚಿ ಬಿಡುತ್ತವೆ, ನಷ್ಟಗೊಳಿಸುತ್ತದೆ. ಆದರೆ ಈ ಸಮಯದಲ್ಲಿ ಮನುಷ್ಯರೆಲ್ಲರೂ ಪ್ರೇತಾತ್ಮಗಳಾಗಿದ್ದಾರಲ್ಲವೆ. ಸ್ಥೂಲದಲ್ಲಿಯೂ ಕರ್ಮ ಭೋಗವಿರುತ್ತದೆ, ಆತ್ಮವು ಶರೀರದ ಮೂಲಕ ಒಬ್ಬರು ಇನ್ನೊಬ್ಬರಿಗೆ ದುಃಖ ಕೊಡುತ್ತಾರೆ, ಶರೀರವಿಲ್ಲದಿದ್ದರೂ ಸಹ ದುಃಖ ಕೊಡುತ್ತಾರೆ. ಮಕ್ಕಳೂ ಸಹ ನೋಡಿದ್ದೀರಿ- ಯಾವುದನ್ನು ಪ್ರೇತವೆಂದು ಹೇಳುತ್ತಾರೆಯೋ ಅದು ಶ್ವೇತ ಛಾಯೆಯ ತರಹ ಕಾಣಿಸುತ್ತದೆ. ಆದರೆ ಅದರ ಬಗ್ಗೆ ಆಲೋಚಿಸಬೇಕಾಗಿಲ್ಲ. ನೀವೆಷ್ಟು ತಂದೆಯನ್ನು ನೆನಪು ಮಾಡುತ್ತೀರೋ ಅಷ್ಟು ಅವೆಲ್ಲವೂ ಸಮಾಪ್ತಿಯಾಗಿ ಬಿಡುತ್ತವೆ. ಇದೂ ಲೆಕ್ಕಾಚಾರವಾಗಿದೆಯಲ್ಲವೆ. ಮನೆಯಲ್ಲಿ ಹೆಣ್ಣು ಮಕ್ಕಳು ಹೇಳುತ್ತಾರೆ - ನಾವು ಪವಿತ್ರರಾಗಿರಲು ಇಚ್ಛಿಸುತ್ತೇವೆ, ಇದನ್ನು ಆತ್ಮವು ಹೇಳುತ್ತದೆ ಮತ್ತು ಯಾರಲ್ಲಿ ಜ್ಞಾನವಿಲ್ಲವೋ ಅವರು ಪವಿತ್ರವಾಗಿರಬೇಡಿ ಎಂದು ಹೇಳುತ್ತಾರೆ ಮತ್ತು ಅಲ್ಲಿ ಜಗಳವೂ ಆಗುತ್ತದೆ, ಎಷ್ಟೊಂದು ಹೊಡೆದಾಟಗಳೂ ಆಗುತ್ತವೆ. ಈಗ ನೀವು ಪವಿತ್ರ ಆತ್ಮಗಳಾಗುತ್ತಿದ್ದೀರಿ. ಅವರು ಅಪವಿತ್ರ ಆತ್ಮರಾಗಿದ್ದಾರೆ ಆದ್ದರಿಂದ ದುಃಖ ಕೊಡುತ್ತಾರೆ. ಆದರೆ ಎಲ್ಲರೂ ಆತ್ಮಗಳಲ್ಲವೆ. ಅಂತಹವರಿಗೆ ಪ್ರೇತಾತ್ಮಗಳೆಂದು ಹೇಳಲಾಗುತ್ತದೆ. ಶರೀರದಿಂದಲೂ ಮತ್ತು ಶರೀರವಿಲ್ಲದೆಯೂ ದುಃಖ ಕೊಡುತ್ತಾರೆ. ಜ್ಞಾನವು ಬಹಳ ಸಹಜವಾಗಿದೆ, ಸ್ವದರ್ಶನ ಚಕ್ರಧಾರಿಗಳಾಗಬೇಕಾಗಿದೆ. ಮುಖ್ಯವಾಗಿ ಪವಿತ್ರತೆಯ ಮಾತಾಗಿದೆ ಇದಕ್ಕಾಗಿ ತಂದೆಯನ್ನು ಖುಷಿಯಿಂದ ನೆನಪು ಮಾಡಬೇಕಾಗಿದೆ. ರಾವಣನಿಗೆ ಭೂತವೆಂದು ಹೇಳಲಾಗುತ್ತದೆಯಲ್ಲವೆ. ಈ ಸಮಯದಲ್ಲಿ ಪ್ರಪಂಚವೇ ಭೂತವಾಗಿದೆ. ಒಬ್ಬರು ಇನ್ನೊಬ್ಬರಿಂದ ಅನೇಕ ಪ್ರಕಾರದ ದುಃಖವನ್ನು ಪಡೆಯುತ್ತಿರುತ್ತಾರೆ. ಪತಿತರಿಗೆ ಭೂತವೆಂದು ಹೇಳಲಾಗುತ್ತದೆ. ಪತಿತ ಆತ್ಮನಲ್ಲಿಯೂ ಸಹ ಪಂಚ ವಿಕಾರಗಳು ಅನೇಕ ಪ್ರಕಾರವಾಗಿರುತ್ತವೆ. ಕೆಲವರಲ್ಲಿ ವಿಕಾರದ ಹವ್ಯಾಸ, ಕೆಲವರಲ್ಲಿ ಕ್ರೋಧದ ಹವ್ಯಾಸ, ಇನ್ನೂ ಕೆಲವರಲ್ಲಿ ತೊಂದರೆ ಕೊಡುವ ಹವ್ಯಾಸ, ಮತ್ತೆ ಕೆಲವರಲ್ಲಿ ನಷ್ಟ ಮಾಡುವ ಹವ್ಯಾಸವಿರುತ್ತದೆ. ಯಾರಲ್ಲಿಯಾದರೂ ವಿಕಾರದ ಹವ್ಯಾಸವಿದ್ದರೆ ವಿಕಾರವು ಸಿಗದೇ ಇರುವ ಕಾರಣ ಕ್ರೋಧದಲ್ಲಿ ಬಂದು ಬಹಳ ಹೊಡೆದೂ ಹೊಡೆಯುತ್ತಾರೆ. ಈ ಪ್ರಪಂಚವು ಹೀಗಿದೆ ಆದ್ದರಿಂದ ತಂದೆಯು ಬಂದು ಧೈರ್ಯವನ್ನು ಕೊಡುತ್ತಾರೆ - ಹೇ ಆತ್ಮಗಳೇ, ಮಕ್ಕಳೇ, ಧೈರ್ಯವನ್ನು ತಾಳಿ, ನನ್ನನ್ನು ನೆನಪು ಮಾಡಿ ಮತ್ತು ದೈವೀ ಗುಣಗಳನ್ನು ಧಾರಣೆ ಮಾಡಿ. ಉದ್ಯೋಗ-ವ್ಯವಹಾರಗಳನ್ನು ಮಾಡಬೇಡಿ ಎಂದು ಹೇಳುವುದಿಲ್ಲ. ಹೇಗೆ ಸೈನಿಕರಿಗೂ ಸಹ ಯುದ್ಧದಲ್ಲಿ ಹೋಗಲೇಬೇಕಾಗುತ್ತದೆ ಅಂದಾಗ ಅವರಿಗೂ ಶಿವ ತಂದೆಯ ನೆನಪಿನಲ್ಲಿರಿ ಎಂದು ತಿಳಿಸಲಾಗುತ್ತದೆ. ಗೀತೆಯ ಶಬ್ಧಗಳನ್ನು ತೆಗೆದುಕೊಂಡು ನಾವು ಯುದ್ಧದ ಮೈದಾನದಲ್ಲಿ ಸತ್ತರೆ ನಾವು ಸ್ವರ್ಗಕ್ಕೆ ಹೋಗುತ್ತೇವೆಂದು ತಿಳಿಯುತ್ತಾರೆ. ಆದ್ದರಿಂದಲೇ ಖುಷಿಯಿಂದ ಯುದ್ಧಕ್ಕೆ ಹೋಗುತ್ತಾರೆ ಆದರೆ ಆ ಮಾತಿಲ್ಲ. ಈಗ ತಂದೆಯು ತಿಳಿಸುತ್ತಾರೆ - ನೀವು ಸ್ವರ್ಗದಲ್ಲಿ ಹೋಗುತ್ತೀರೆಂದಾಗ ಕೇವಲ ಶಿವ ತಂದೆಯನ್ನು ನೆನಪು ಮಾಡಿ. ನೆನಪಂತೂ ಒಬ್ಬ ಶಿವ ತಂದೆಯನ್ನೇ ಮಾಡಬೇಕು ಹಾಗೂ ಸ್ವರ್ಗದಲ್ಲಿ ಅವಶ್ಯವಾಗಿ ಹೋಗುವಿರಿ. ಯಾರೆಲ್ಲರೂ ಬರುತ್ತಾರೆಯೋ ಭಲೇ ಮತ್ತೆ ಹೋಗಿ ಪತಿತರಾಗುತ್ತಾರೆಂದರೂ ಸಹ ಸ್ವರ್ಗದಲ್ಲಿ ಅವಶ್ಯವಾಗಿ ಬರುತ್ತಾರೆ, ಶಿಕ್ಷೆಯನ್ನು ಅನುಭವಿಸಿ ಪಾವನರಾಗಿ ಅವಶ್ಯವಾಗಿ ಬಂದೇ ಬರುತ್ತಾರೆ. ತಂದೆಯು ದಯಾಹೃದಯಿಯಲ್ಲವೆ. ತಂದೆಯು ತಿಳಿಸುತ್ತಾರೆ - ಯಾವುದೇ ವಿಕರ್ಮ ಮಾಡಬೇಡಿ ಆಗ ವಿಕರ್ಮಾಜೀತರಾಗಿ ಬಿಡುತ್ತೀರಿ. ಈ ಲಕ್ಷ್ಮೀ-ನಾರಾಯಣರು ವಿಕರ್ಮಾಜೀತರಾಗಿದ್ದಾರೆಂದು ಈಗ ತಿಳಿಯುತ್ತೀರಿ. ವಿಕರ್ಮಾಜೀತ ಸಂವತ್ಸರದ 2500 ವರ್ಷಗಳ ನಂತರ ವಿಕರ್ಮ ಸಂವತ್ಸರವು ಪ್ರಾರಂಭವಾಗುತ್ತದೆ. ಮೋಹಜೀತ ರಾಜನ ಕಥೆಯೂ ಇದೆಯಲ್ಲವೆ. ತಂದೆಯು ತಿಳಿಸುತ್ತಾರೆ - ನಷ್ಟಮೋಹಿಗಳಾಗಿ ನನ್ನೊಬ್ಬನನ್ನೇ ನೆನಪು ಮಾಡಿ ಆಗ ಪಾಪಗಳು ತುಂಡಾಗುತ್ತವೆ. 2500 ವರ್ಷಗಳಲ್ಲಿ ಯಾವ ಪಾಪವಾಗಿದೆಯೋ ಅದನ್ನು 50-60 ವರ್ಷಗಳಲ್ಲಿ ನೀವು ತಮ್ಮನ್ನು ಸತೋಪ್ರಧಾನರನ್ನಾಗಿ ಮಾಡಿಕೊಳ್ಳಬಹುದು. ಒಂದು ವೇಳೆ ಯೋಗಬಲವಿಲ್ಲದಿದ್ದರೆ ಕೊನೆಯ ನಂಬರಿನಲ್ಲಿ ಬಂದು ಬಿಡುತ್ತೀರಿ. ಮಾಲೆಯಂತೂ ಬಹಳ ದೊಡ್ಡದಾಗಿದೆ. ಭಾರತದ ಮಾಲೆಯಂತೂ ವಿಶೇಷವಾಗಿದೆ, ಇದರ ಮೇಲೆಯೇ ಆಟವು ನಿಂತಿದೆ. ಇದರಲ್ಲಿ ಮುಖ್ಯವಾಗಿ ನೆನಪಿನ ಯಾತ್ರೆಯಾಗಿದೆ ಮತ್ತೇನೂ ಕಷ್ಟವಿಲ್ಲ. ಮತ್ತೆಲ್ಲರೂ ಅನೇಕರ ಜೊತೆ ಬುದ್ಧಿಯೋಗವನ್ನಿಡುತ್ತಾರೆ ಇದೆಲ್ಲವೂ ರಚನೆಯಾಗಿದೆ. ರಚನೆಯ ನೆನಪಿನಿಂದ ಯಾರ ಕಲ್ಯಾಣವೂ ಆಗುವುದಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ - ಯಾರನ್ನೂ ನೆನಪು ಮಾಡಬೇಡಿ. ಹೇಗೆ ಭಕ್ತಿಮಾರ್ಗದಲ್ಲಿ ಮೊದಲು ನೀವು ಕೇವಲ ಭಕ್ತಿ ಮಾಡುತ್ತಿದ್ದಿರಿ ಈಗ ಮತ್ತೆ ಅಂತ್ಯದಲ್ಲಿಯೂ ನನ್ನನ್ನು ನೆನಪು ಮಾಡಿ. ತಂದೆಯು ಎಷ್ಟು ಸ್ಪಷ್ಟ ರೀತಿಯಲ್ಲಿ ತಿಳಿಸುತ್ತಾರೆ. ಮೊದಲು ಇದೇನೂ ಗೊತ್ತಿರಲಿಲ್ಲ ಈಗ ನಿಮಗೆ ಜ್ಞಾನವು ಸಿಕ್ಕಿದೆ. ಮತ್ತೆಲ್ಲಾ ಸಂಗವನ್ನು ಬಿಟ್ಟು ನನ್ನೊಬ್ಬನ ಸಂಗವನ್ನು ಸೇರಿ. ಆ ಯೋಗಾಗ್ನಿಯಿಂದ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಬಹಳ ಪಾಪಗಳನ್ನು ಮಾಡುತ್ತಾ ಬಂದಿದ್ದೀರಿ, ಕಾಮದ ಕತ್ತಿಯನ್ನೂ ನಡೆಸುತ್ತಾ ಬಂದಿದ್ದೀರಿ. ಒಬ್ಬರು ಇನ್ನೊಬ್ಬರಿಗೆ ಆದಿಯಿಂದ ಅಂತ್ಯ ದುಃಖವನ್ನು ಕೊಡುತ್ತಾ ಬಂದಿದ್ದೀರಿ. ಮೂಲ ಮಾತು ಕಾಮದ್ದಾಗಿದೆ. ಇದೂ ಸಹ ನಾಟಕವಾಗಿದೆಯಲ್ಲವೆ. ಇಂತಹ ನಾಟಕ ಏಕೆ ಆಯಿತು? ಎಂದು ಹೇಳುವಂತಿಲ್ಲ. ಇದಂತೂ ಅನಾದಿ ಆಟವಾಗಿದೆ, ಇದರಲ್ಲಿ ನನ್ನ ಪಾತ್ರವೂ ಇದೆ. ನಾಟಕವು ಯಾವಾಗ ಪ್ರಾರಂಭವಾಯಿತು, ಯಾವಾಗ ಮುಕ್ತಾಯವಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇದಂತೂ ಆತ್ಮದಲ್ಲಿ ಪಾತ್ರವು ತುಂಬಲ್ಪಟ್ಟಿದೆ, ಆತ್ಮದಲ್ಲಿರುವ ಸಂಸ್ಕಾರವೆಂದೂ ಸವೆಯುವುದಿಲ್ಲ. ಆತ್ಮ ಅವಿನಾಶಿಯಾಗಿದೆಯೆಂದರೆ ಅದರಲ್ಲಿರುವ ಪಾತ್ರವು ಅವಿನಾಶಿಯಾಗಿದೆ, ನಾಟಕವೂ ಅವಿನಾಶಿಯಾಗಿದೆ ಎಂದು ಹೇಳಲಾಗುತ್ತದೆ. ಯಾವ ತಂದೆಯು ಪುನರ್ಜನ್ಮದಲ್ಲಿ ಬರುವುದಿಲ್ಲವೋ ಅವರೇ ಬಂದು ಎಲ್ಲಾ ರಹಸ್ಯವನ್ನು ತಿಳಿಸುತ್ತಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯ ಕರ್ತವ್ಯವನ್ನಾಗಲಿ, ಆತ್ಮವನ್ನಾಗಿ ಏನನ್ನೂ ತಿಳಿದುಕೊಂಡಿಲ್ಲ. ಈ ಸೃಷ್ಟಿ ಚಕ್ರವು ತಿರುಗುತ್ತಲೇ ಇರುತ್ತದೆ. ಈಗ ಇದು ಪುರುಷೋತ್ತಮ ಸಂಗಮಯುಗವಾಗಿದೆ. ಯಾವಾಗ ಎಲ್ಲಾ ಮನುಷ್ಯಾತ್ಮರು ಉತ್ತಮ ಪುರುಷರಾಗಿ ಬಿಡುತ್ತಾರೆ, ಶಾಂತಿಧಾಮದಲ್ಲಿಯೂ ಎಲ್ಲಾ ಆತ್ಮರು ಪವಿತ್ರ ಉತ್ತಮರಾಗಿ ಬಿಡುತ್ತಾರೆ. ಶಾಂತಿಧಾಮವು ಪಾವನವಾಗಿದೆಯಲ್ಲವೆ. ಹೊಸ ಪ್ರಪಂಚವು ಪವಿತ್ರವಾಗಿರುತ್ತದೆ, ಇದಂತೂ ನಮಗೆ ಗೊತ್ತಿದೆ - ಪ್ರತಿಯೊಬ್ಬರಿಗೂ ಪಾತ್ರವು ಸಿಕ್ಕಿದೆ, ಅದು ನಮ್ಮ ಮನೆಯಾಗಿದೆ. ಅಲ್ಲಿ ಶಾಂತಿಯಲ್ಲಿರುತ್ತೇವೆ ಆದರೆ ಇಲ್ಲಂತೂ ಪಾತ್ರವನಭಿನಯಿಸಬೇಕಾಗಿದೆ. ಈಗ ತಂದೆಯು ತಿಳಿಸುತ್ತಾರೆ - ಭಕ್ತಿ ಮಾರ್ಗದಲ್ಲಿ ನೀವು ನನ್ನ ಅವ್ಯಭಿಚಾರಿ ಪೂಜೆ ಮಾಡುತ್ತಿದ್ದಿರಿ, ದುಃಖಿಯಂತೂ ಆಗಿರಲಿಲ್ಲ. ಈಗ ವ್ಯಭಿಚಾರಿ ಭಕ್ತಿಯಲ್ಲಿ ಬಂದಿದ್ದರಿಂದ ನೀವು ದುಃಖಿಯಾಗಿ ಬಿಡುತ್ತೀರಿ. ಈಗ ದೈವೀ ಗುಣಗಳನ್ನು ಧಾರಣೆ ಮಾಡಿ ಅಂದಮೇಲೆ ಈ ಆಸುರೀ ಗುಣಗಳೇಕೆ? ಬಂದು ನಮ್ಮನ್ನು ಪಾವನ ಮಾಡಿ ಎಂದು ತಂದೆಯನ್ನು ಕರೆದಿರಿ ಅಂದಮೇಲೆ ಮತ್ತೆ ಪತಿತರೇಕೆ ಆಗುತ್ತೀರಿ? ಅದರಲ್ಲಿಯೂ ವಿಶೇಷವಾಗಿ ಅವಶ್ಯವಾಗಿ ಕಾಮವನ್ನು ಗೆಲ್ಲಬೇಕು ಆಗಲೇ ನೀವು ಜಗತ್ಜೀತರಾಗುತ್ತೀರಿ. ಮನುಷ್ಯರಂತೂ ಭಗವಂತನಿಗೆ ತಾವೇ ಪೂಜ್ಯ, ತಾವೇ ಪೂಜಾರಿಯೆಂದು ಹೇಳುತ್ತಾರೆ ಅಂದರೆ ಅವರನ್ನು ಕೆಳಗೆ ತಂದು ಬಿಡುತ್ತಾರೆ. ಹೀಗೆ ಪಾಪಗಳನ್ನು ಮಾಡುತ್ತಾ-ಮಾಡುತ್ತಾ ಮಹಾ ವಿಕಾರಿ ಪ್ರಪಂಚವಾಗುತ್ತದೆ. ಗರುಡ ಪುರಾಣದಲ್ಲಿ ರೌರವ ನರಕವಾಗಿದೆಯೆಂದು ಹೇಳುತ್ತಾರೆ, ಎಲ್ಲಿ ಹಾವು-ಚೇಳುಗಳು ಎಲ್ಲವೂ ಕಚ್ಚುತ್ತಿರುತ್ತದೆ. ಶಾಸ್ತ್ರಗಳಲ್ಲಿ ಏನೇನನ್ನು ತೋರಿಸಿದ್ದಾರೆ ಇದನ್ನೂ ಸಹ ತಂದೆಯು ತಿಳಿಸಿದ್ದಾರೆ - ಈ ಶಾಸ್ತ್ರ ಮೊದಲಾದವೆಲ್ಲವೂ ಭಕ್ತಿಮಾರ್ಗದ್ದಾಗಿದೆ, ಇದರಿಂದ ಯಾರೂ ನನ್ನೊಂದಿಗೆ ಮಿಲನ ಮಾಡಲಿಲ್ಲ. ಇನ್ನೂ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಆದ್ದರಿಂದಲೇ ಬಂದು ಪಾವನ ಮಾಡಿ ಎಂದು ಕರೆಯುತ್ತಾರೆ ಅಂದಮೇಲೆ ಪತಿತರಾದರಲ್ಲವೆ. ಮನುಷ್ಯರಂತೂ ಏನನ್ನೂ ತಿಳಿದುಕೊಂಡಿಲ್ಲ. ಯಾರಿಗೆ ನಿಶ್ಚಯ ಬುದ್ದಿಯಿದೆ ಅವರಂತೂ ವಿಜಯಿಗಳಾಗಿ ಬಿಡುತ್ತಾರೆ. ರಾವಣನ ಮೇಲೆ ವಿಜಯ ಪಡೆದು ರಾಮ ರಾಜ್ಯದಲ್ಲಿ ಬಂದು ಬಿಡುತ್ತೀರಿ. ತಂದೆಯು ತಿಳಿಸುತ್ತಾರೆ - ಕಾಮ ವಿಕಾರದ ಮೇಲೆ ವಿಜಯ ಗಳಿಸಿ, ಇದರಿಂದಲೇ ಜಗಳಗಳಾಗುತ್ತವೆ. ಅಮೃತವನ್ನು ಬಿಟ್ಟು ವಿಷವನ್ನೇಕೆ ಕುಡಿಯುತ್ತೀರೆಂದು ಹಾಡುತ್ತಾರೆ. ಅಮೃತ ಹೆಸರನ್ನು ಕೇಳಿದಾಗ ಗೋ ಮುಖದಿಂದ ಅಮೃತವು ಬರುತ್ತದೆ ಎಂದು ಹೇಳುತ್ತಾರೆ. ಆದರೆ ಗಂಗಾ ಜಲವನ್ನು ಅಮೃತವೆಂದು ಹೇಳಲಾಗುತ್ತದೆಯೇ? ಇದು ಜ್ಞಾನದ ಅಮೃತವಾಗಿದೆ. ಸ್ತ್ರೀಯು ಪತಿಯ ಪಾದವನ್ನು ತೊಳೆದು ಕುಡಿಯುತ್ತಾಳೆ. ಅದನ್ನು ಅಮೃತವೆಂದು ತಿಳಿಯುತ್ತಾರೆ. ಅದು ಅಮೃತವಾಗಿದ್ದರೆ ವಜ್ರಸಮಾನ ಆಗಬೇಕಲ್ಲವೆ. ಈಗಂತೂ ತಂದೆಯು ಜ್ಞಾನವನ್ನು ತಿಳಿಸುತ್ತಾರೆ ಇದರಿಂದಲೇ ನೀವು ವಜ್ರಸಮಾನರಾಗುತ್ತೀರಿ. ನೀರಿನ ಹೆಸರನ್ನು ಎಷ್ಟು ಪ್ರಸಿದ್ಧಗೊಳಿಸಿದ್ದಾರೆ ತಾವು ಜ್ಞಾನಾಮೃತವನ್ನು ಕುಡಿಸುತ್ತೀರಿ, ಅವರು ನೀರನ್ನು ಕುಡಿಸುತ್ತಾರೆ. ತಾವು ಬ್ರಾಹ್ಮಣರ ಬಗ್ಗೆ ಯಾರಿಗೂ ತಿಳಿದಿಲ್ಲ. ಅವರು ಕೌರವ, ಪಾಂಡವ ಎಂದು ಹೇಳುತ್ತಾರೆ. ಅವರು ಪಾಂಡವರನ್ನು ಬ್ರಾಹ್ಮಣರೆಂದು ತಿಳಿಯುತ್ತಾರೇನು! ಗೀತೆಯಲ್ಲಿ ಪಾಂಡವರನ್ನು ಬ್ರಾಹ್ಮಣರೆಂದು ತಿಳಿಯುವ ಶಬ್ಧಗಳಿಲ್ಲ. ತಂದೆಯು ಕುಳಿತು ಎಲ್ಲಾ ಶಾಸ್ತ್ರಗಳನ್ನು ತಿಳಿಸುತ್ತಾರೆ. ಮಕ್ಕಳಿಗೆ ಹೇಳುತ್ತಾರೆ - ನೀವು ಶಾಸ್ತ್ರಗಳಲ್ಲಿ ಏನೆಲ್ಲವನ್ನೂ ಓದಿದ್ದೀರೋ ಮತ್ತು ನಾನು ಏನನ್ನು ತಿಳಿಸುತ್ತೇನೆಯೋ ಅದನ್ನು ವಿಚಾರ ಮಾಡಿ. ಏಕೆಂದರೆ ನಿಮಗೆ ಗೊತ್ತಿದೆ - ನಾವು ಮೊದಲು ಏನೆಲ್ಲವನ್ನೂ ಕೇಳಿದ್ದೆವೋ ಅದು ತಪ್ಪಾಗಿತ್ತು, ಈಗ ತಂದೆಯು ಸತ್ಯವನ್ನು ತಿಳಿಸುತ್ತಾರೆ. ನೀವೆಲ್ಲರೂ ಸೀತೆಯರು ಅಥವಾ ಭಕ್ತಿನಿಯರಾಗಿದ್ದೀರೆಂದು ತಂದೆಯು ತಿಳಿಸುತ್ತಾರೆ. ಭಕ್ತಿಯ ಫಲವನ್ನು ಕೊಡುವವರು ರಾಮ ಭಗವಂತನಾಗಿದ್ದಾರೆ. ನಾನು ಫಲವನ್ನು ಕೊಡಲು ಬರುತ್ತೇನೆಂದು ತಿಳಿಸುತ್ತಾರೆ. ಏಕೆಂದರೆ ನಿಮಗೂ ಸಹ ತಿಳಿದಿದೆ - ನಾವು ಸ್ವರ್ಗದಲ್ಲಿ ಅಪಾರ ಸುಖವನ್ನು ಅನುಭವಿಸುತ್ತೇವೆ ಆ ಸಮಯದಲ್ಲಿ ಉಳಿದವರೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ. ಶಾಂತಿಯಂತೂ ಸಿಗುತ್ತದೆಯಲ್ಲವೆ. ಹೊಸ ವಿಶ್ವದಲ್ಲಿ ಸುಖ, ಶಾಂತಿ, ಪವಿತ್ರತೆ ಎಲ್ಲವೂ ಇರುತ್ತದೆ. ನೀವು ಇದನ್ನು ತಿಳಿಸುತ್ತೀರಿ - ಯಾವಾಗ ಈ ವಿಶ್ವದಲ್ಲಿ ಒಂದು ಧರ್ಮವಿತ್ತು ಆಗಲೇ ಸಂಪೂರ್ಣ ಶಾಂತಿಯಿತ್ತು ಎಂದು ತಿಳಿಸಿದರೂ ಸಹ ತಿಳಿದುಕೊಳ್ಳುವುದಿಲ್ಲ. ಕೆಲವರಷ್ಟೇ ನಿಲ್ಲುತ್ತಾರೆ ಅಂತ್ಯದಲ್ಲಿ ಅನೇಕರು ಬರುತ್ತಾರೆ. ಹೋಗುವುದಾದರೂ ಎಲ್ಲಿ! ಇದೊಂದೇ ಅಂಗಡಿಯಾಗಿದೆ. ಹೇಗೆ ವ್ಯಾಪಾರಿಯ ವಸ್ತುಗಳು ಚೆನ್ನಾಗಿದ್ದರೆ ಬೆಲೆಯು ಒಂದೇ ಇರುತ್ತದೆ. ಇದಂತೂ ಶಿವ ತಂದೆಯ ಅಂಗಡಿಯಾಗಿದೆ, ಅವರು ನಿರಾಕಾರನಾಗಿದ್ದಾರೆ ಅಂದಮೇಲೆ ಅವರಿಗೆ ಬ್ರಹ್ಮಾರವರು ಅವಶ್ಯವಾಗಿ ಬೇಕು. ನೀವು ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೀರಿ, ಶಿವಕುಮಾರಿಯರೆಂದು ಕರೆಸಿಕೊಳ್ಳುವುದಿಲ್ಲ. ಬ್ರಾಹ್ಮಣರು ಅವಶ್ಯವಾಗಿ ಬೇಕು. ಬ್ರಾಹ್ಮಣರಾಗದೇ ದೇವತೆಗಳು ಹೇಗೆ ಆಗುತ್ತೀರಿ! ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
೧. ದೇವತೆಗಳಂತಹ ಗುಣಗಳನ್ನು ಸ್ವಯಂನಲ್ಲಿ ಧಾರಣೆ ಮಾಡಿಕೊಳ್ಳಬೇಕು. ಒಳಗೆ ಯಾವುದೇ ಭೂತದ ಸಂಸ್ಕಾರವಿದ್ದರೆ, ಕ್ರೋಧ ಮುಂತಾದ ಹವ್ಯಾಸವಿದ್ದರೆ ಅದನ್ನು ಬಿಡಬೇಕಾಗಿದೆ, ವಿಕರ್ಮಾಜೀತರಾಗಬೇಕು, ಆದ್ದರಿಂದ ಈಗ ಯಾವುದೇ ವಿಕರ್ಮವಾಗಬಾರದು.

೨. ವಜ್ರ ಸಮಾನ ಶ್ರೇಷ್ಠರಾಗಲು ಜ್ಞಾನಾಮೃತವನ್ನು ಕುಡಿಯಬೇಕು ಹಾಗೂ ಕುಡಿಸಬೇಕಾಗಿದೆ. ಕಾಮ ವಿಕಾರದ ಮೇಲೆ ಸಂಪೂರ್ಣ ಜಯ ಗಳಿಸಬೇಕು. ಸ್ವಯಂನ್ನು ಸತೋಪ್ರಧಾನವನ್ನಾಗಿ ಮಾಡಿಕೊಳ್ಳಬೇಕು. ನೆನಪಿನ ಬಲದಿಂದ ಎಲ್ಲಾ ಹಳೆಯ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ.

ವರದಾನ:
ಸಹಜ ಯೋಗದ ಸಾಧನೆಯಿಂದ ಸಾಧನಗಳ ಮೇಲೆ ವಿಜಯ ಪ್ರಾಪ್ತಿ ಮಾಡಿಕೊಳ್ಳುವಂತಹ ಪ್ರಯೋಗಿ ಆತ್ಮ ಭವ.

ಸಾಧನಗಳು ಇದ್ದರೂ ಸಹಾ, ಸಾಧನಗಳನ್ನು ಪ್ರಯೋಗದಲ್ಲಿ ತರುತ್ತಾ ಯೋಗದ ಸ್ಥಿತಿ ಡಗ್-ಮಗ್ ಆಗದಿರಲಿ. ಯೋಗಿಯಾಗಿ ಪ್ರಯೋಗ ಮಾಡಬೇಕು ಇದಕ್ಕೆ ಹೇಳಲಾಗುವುದು ನ್ಯಾರಾ. ಇದ್ದರೂ ಸಹಾ ನಿಮಿತ್ತ ಮಾತ್ರ, ಅನಾಸಕ್ತ ರೂಪದಿಂದ ಪ್ರಯೋಗ ಮಾಡಿ. ಒಂದು ವೇಳೆ ಇಚ್ಛೆ ಇದ್ದಲ್ಲಿ ಆ ಇಚ್ಛೆ ನಿಮ್ಮನ್ನು ಅಚ್ಚಾ (ಒಳ್ಳೆಯವರು) ಆಗಲು ಬಿಡುವುದಿಲ್ಲ. ಪರಿಶ್ರಮ ಪಡುವುದರಲ್ಲಿಯೇ ಸಮಯ ಕಳೆದು ಹೋಗುವುದು. ಆ ಸಮಯದಲ್ಲಿ ನೀವು ಸಾಧನೆಯಲ್ಲಿ ಇರಲು ಪ್ರಯತ್ನ ಮಾಡುವಿರಿ ಮತ್ತು ಸಾಧನ ತನ್ನ ಕಡೆ ಆಕರ್ಷಣೆ ಮಾಡುವುದು. ಆದ್ದರಿಂದ ಪ್ರಯೋಗಿ ಆತ್ಮ ಆಗಿ ಸಹಜ ಯೋಗಿಯ ಸಾಧನೆಯಿಂದ ಸಾಧನಗಳ ಮೇಲೆ ಅರ್ಥಾತ್ ಪ್ರಕೃತಿಯ ಮೇಲೆ ವಿಜಯಿಗಳಾಗಿ.

ಸ್ಲೋಗನ್:
ಸ್ವಯಂ ಸಂತುಷ್ಠರಾಗಿರುತ್ತಾ, ಎಲ್ಲರನ್ನೂ ಸಂತುಷ್ಠ ಮಾಡುವುದೇ ಸಂತುಷ್ಠ ಮಣಿಗಳಾಗುವುದು.