07.02.21    Avyakt Bapdada     Kannada Murli    29.10.87     Om Shanti     Madhuban


ತನು, ಮನ, ಧನ ಮತ್ತು ಸಂಬಂಧದ ಶಕ್ತಿ


ಇಂದು ಸರ್ವಶಕ್ತಿವಂತ ತಂದೆಯು ತನ್ನ ಶಕ್ತಿಶಾಲಿ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಬ್ರಾಹ್ಮಣ ಆತ್ಮನು ಶಕ್ತಿಶಾಲಿ ಆಗಿದ್ದಾರೆ ಆದರೆ ನಂಬರ್ವಾರ್ ಇದ್ದಾರೆ. ತಂದೆಯವರ ಸರ್ವ ಶಕ್ತಿಗಳ ಆಸ್ತಿ ಮತ್ತು ವರದಾತನ ವರದಾನವಿದೆ. ತಂದೆ ಮತ್ತು ವರದಾತಾ - ಪ್ರತಿಯೊಬ್ಬ ಮಗುವಿನ ಜನ್ಮವಾಗುತ್ತಿದ್ದಂತೆಯೇ ಈ ಡಬಲ್ ಸಂಬಂಧದ ಶ್ರೇಷ್ಠ ಪ್ರಾಪ್ತಿಯಾಗಿದೆ. ಜನ್ಮವಾಗುತ್ತಿದ್ದಂತೆಯೇ ತಂದೆಯು ಸರ್ವ ಶಕ್ತಿಗಳ ಅರ್ಥಾತ್ ಜನ್ಮ-ಸಿದ್ಧ ಅಧಿಕಾರದ ಅಧಿಕಾರಿಯನ್ನಾಗಿ ಮಾಡಿ ಬಿಡುತ್ತಾರೆ, ಜೊತೆ-ಜೊತೆಗೆ ವರದಾತನ ಸಂಬಂಧದಿಂದ ಮಾಸ್ಟರ್ ಸರ್ವ ಶಕ್ತಿವಂತರನ್ನಾಗಿ ಮಾಡುತ್ತಾ `ಸರ್ವ ಶಕ್ತಿ ಭವ'ದ ವರದಾನವನ್ನು ಕೊಡುತ್ತಾರೆ. ಒಬ್ಬರ ಮೂಲಕ ಎಲಾ ಮಕ್ಕಳಿಗೆ ಒಂದೇ ರೀತಿಯ ಡಬಲ್ ಅಧಿಕಾರವು ಸಿಗುತ್ತದೆ ಆದರೆ ಧಾರಣೆ ಮಾಡಿಕೊಳ್ಳುವ ಶಕ್ತಿಯು ನಂಬರ್ವಾರ್ ಮಾಡಿ ಬಿಡುತ್ತಾರೆ. ತಂದೆಯು ಎಲ್ಲರಿಗೂ ಸದಾ ಹಾಗೂ ಸರ್ವ ಶಕ್ತಿಶಾಲಿಯನ್ನಾಗಿ ಮಾಡುತ್ತಾರೆ, ಆದರೆ ಮಕ್ಕಳು ಯಥಾ-ಶಕ್ತಿ ಆಗಿ ಬಿಡುತ್ತಾರೆ. ಅದೇ ರೀತಿ ಲೌಕಿಕ ಜೀವನದಲ್ಲಿ ಅಥವಾ ಅಲೌಕಿಕ ಜೀವನದಲ್ಲಿಯೂ ಸಫಲತೆಯ ಆಧಾರವು ಶಕ್ತಿಗಳೇ ಆಗಿರುತ್ತದೆ. ತಮ್ಮಲ್ಲಿ ಎಷ್ಟು ಶಕ್ತಿಗಳಿರುತ್ತವೆಯೋ ಅಷ್ಟು ಸಫಲತೆಯು ಸಿಗುತ್ತದೆ. ಮುಖ್ಯವಾದ ಶಕ್ತಿಗಳೆಂದರೆ- ತನುವಿನ, ಮನಸ್ಸಿನ, ಧನದ ಮತ್ತು ಸಂಬಂಧದ ಶಕ್ತಿಗಳಾಗಿವೆ, ಈ ನಾಲ್ಕೂ ಶಕ್ತಿಗಳು ಅವಶ್ಯಕವಿದೆ. ಈ ನಾಲ್ಕರಲ್ಲಿ ಯಾವುದಾದರೊಂದು ಶಕ್ತಿಯ ಕೊರತೆ ಆಗುತ್ತದೆ ಎಂದರೆ, ಜೀವನದಲ್ಲಿ ಸದಾ ಅಥವಾ ಸರ್ವ ಸಫಲತೆಯಾಗಲು ಆಗುವುದಿಲ್ಲ. ಅಲೌಕಿಕ ಜೀವನದಲ್ಲಿಯೂ ಸಹ ನಾಲ್ಕೂ ಶಕ್ತಿಗಳ ಅವಶ್ಯಕವಿದೆ.

ಈ ಅಲೌಕಿಕ ಜೀವನದಲ್ಲಿ ಆತ್ಮ ಮತ್ತು ಪ್ರಕೃತಿ - ಎರಡೂ ಆರೋಗ್ಯವಾಗಿರುವುದು ಅವಶ್ಯಕವಿದೆ. ಆತ್ಮವು ಆರೋಗ್ಯವಂತ ಆಗಿದ್ದರೆ ತನುವಿನ ಲೆಕ್ಕಾಚಾರ ಅಥವಾ ತನುವಿನ ರೋಗವು ಶೂಲದಿಂದ ಮುಳ್ಳಿನ ಸಮಾನ ಆಗುವ ಕಾರಣದಿಂದ, ಸ್ವ-ಸ್ಥಿತಿಯ ಕಾರಣದಿಂದ ಆರೋಗ್ಯವು ಚೆನ್ನಾಗಿದೆ ಎಂಬ ಅನುಭವ ಮಾಡುತ್ತದೆ. ಅಂತಹವರ ಮುಖದಲ್ಲಿ, ಚಹರೆಯಲ್ಲಿ ರೋಗದ ಕಷ್ಟದ ಚಹ್ನೆಯಿರುವುದಿಲ್ಲ. ಬಾಯಿಂದ ಎಂದಿಗೂ ಸಹ ರೋಗದ ವರ್ಣನೆ ಆಗುವುದಿಲ್ಲ, ಕರ್ಮ ಭೋಗದ ವರ್ಣನೆಗೆ ಬದಲು ಕರ್ಮ ಯೋಗದ ಸ್ಥಿತಿಯ ವರ್ಣನೆಯನ್ನು ಮಾಡುವರು. ಏಕೆಂದರೆ ರೋಗದ ವರ್ಣನೆಯೂ ಸಹ ರೋಗವನ್ನು ವೃದ್ಧಿ ಮಾಡಲು ಕಾರಣವಾಗುತ್ತದೆ. ಅವರೆಂದಿಗೂ ರೋಗದ ಕಷ್ಟದ ಅನುಭವ ಮಾಡುವುದಿಲ್ಲ, ಅನ್ಯರಿಗೂ ಆ ಕಷ್ಟವನ್ನು ತಿಳಿಸುವುದರ ಮೂಲಕ ಹರಡಿಸುವುದಿಲ್ಲ. ಅದನ್ನಿನ್ನೂ ಪರಿವರ್ತನೆಯ ಶಕ್ತಿಯಿಂದ ಕಷ್ಟವನ್ನು ಸಂತುಷ್ಟತೆಯಲ್ಲಿ ಪರಿವರ್ತನೆ ಮಾಡುತ್ತಾ ಸಂತುಷ್ಟವಾಗಿದ್ದು, ಅನ್ಯರಲ್ಲಿಯೂ ಸಂತುಷ್ಟತೆಯ ಪ್ರಕಂಪನಗಳನ್ನು ಹರಡಿಸುತ್ತಾರೆ ಅರ್ಥಾತ್ ಮಾಸ್ಟರ್ ಸರ್ವ ಶಕ್ತಿವಂತನಾಗಿದ್ದು, ಶಕ್ತಿಗಳ ಸರ್ವ ವರದಾನಗಳಿಂದ ಸಮಯದ ಅನುಸಾರವಾಗಿ ಸಹನಾ ಶಕ್ತಿ, ಸಮಾವೇಶದ ಶಕ್ತಿಯನ್ನು ಪ್ರಯೋಗದಲ್ಲಿ ತರುತ್ತಾರೆ ಮತ್ತು ಸಮಯದಲ್ಲಿ ಶಕ್ತಿಗಳ ವರದಾನ ಅಥವಾ ಆಸ್ತಿಯನ್ನು ಕಾರ್ಯದಲ್ಲಿ ಉಪಯೋಗಿಸುವುದು - ಅವರಿಗಾಗಿ ಇದೇ ವರದಾನವಾಗಿದೆ ಅರ್ಥಾತ್ ಆಶೀರ್ವಾದವು ಔಷಧಿಯ ಕಾರ್ಯವನ್ನು ಮಾಡುತ್ತದೆ ಏಕೆಂದರೆ ಸರ್ವ ಶಕ್ತಿವಂತ ತಂದೆಯ ಮೂಲಕ ಯಾವ ಸರ್ವಶಕ್ತಿಗಳು ಪ್ರಾಪ್ತಿ ಆಗಿದೆಯೋ, ಅದನ್ನು ಪರಿಸ್ಥಿತಿಯ ಅನುಸಾರ, ಸಮಯದ ಅನುಸಾರ ಮತ್ತು ಅದನ್ನು ಯಾವ ವಿಧಿಯಿಂದ ಕಾರ್ಯದಲ್ಲಿ ಉಪಯೋಗಿಸಲು ಬಯಸುತ್ತೀರಿ, ಈ ಶಕ್ತಿಗಳು ಅದೇ ರೀತಿಯಲ್ಲಿ ತಮಗೆ ಸಹಯೋಗಿ ಆಗಲು ಸಾಧ್ಯವಿದೆ. ಈ ಶಕ್ತಿಗಳನ್ನು ಅಥವಾ ಪ್ರಭುವಿನ ವರದಾನವನ್ನು ಯಾವ ರೂಪದಲ್ಲಿ ಬೇಕೋ, ಆ ರೂಪದಲ್ಲಿ ಧಾರಣೆ ಮಾಡಿಕೊಳ್ಳಲು ಸಾಧ್ಯವಾಗುವುದು. ಈಗೀಗ ಶೀತಲತೆಯ ರೂಪದಲ್ಲಿ, ಈಗೀಗ ಜ್ವಾಲಾ ರೂಪದಲ್ಲಿ, ನೀರಿನ ಶೀತಲತೆಯನ್ನೂ ಅನುಭವ ಮಾಡಿಸಬಹುದು, ಬೆಂಕಿಯ ಜ್ವಾಲಾ ರೂಪವನ್ನೂ ಅನುಭವ ಮಾಡಿಸಬಹುದು. ಔಷಧಿಯ ಕಾರ್ಯವನ್ನು ಮಾಡಿಸಬಹುದು ಮತ್ತು ಶಕ್ತಿಶಾಲಿಯನ್ನಾಗಿ ಮಾಡುವ ಲೇಹ್ಯದ ಕಾರ್ಯವನ್ನೂ ಮಾಡಿಸಬಹುದು. ಅದನ್ನು ಕೇವಲ ಸಮಯದಲ್ಲಿ ಕಾರ್ಯದಲ್ಲಿ ಉಪಯೋಗಿಸುವ ಅಧಿಕಾರಿಯಾಗಬೇಕು ಅಷ್ಟೇ. ಈ ಸರ್ವಶಕ್ತಿಗಳು ತಾವು ಮಾಸ್ಟರ್ ಸರ್ವ ಶಕ್ತಿವಂತನ ಸೇವಾಧಾರಿ ಆಗಿದೆ. ಯಾವುದಕ್ಕೆ ಯಾವಾಗ ಆದೇಶ ಮಾಡುತ್ತೀರಿ, ಅದು `ಅಪ್ಪಣೆ ಪ್ರಭು' ಎನ್ನುತ್ತಾ ಸಹಯೋಗಿ ಆಗುತ್ತದೆ ಆದರೆ ಸೇವೆಯನ್ನು ತೆಗೆದುಕೊಳ್ಳುವವರೂ ಸಹ ಅಷ್ಟೇ ಚತುರರು ಆಗಿರಬೇಕು. ಅಂದಮೇಲೆ ತನುವಿನ ಶಕ್ತಿಯು ಸದಾ ಆತ್ಮಿಕ ಶಕ್ತಿಯ ಆಧಾರದಿಂದ ಅನುಭವ ಮಾಡಬಹುದು ಅರ್ಥಾತ್ ಸದಾ ಆರೋಗ್ಯವಂತ ಆಗಿರುವ ಅನುಭವ ಮಾಡಬಹುದು.

ಈ ಅಲೌಕಿಕ ಬ್ರಾಹ್ಮಣ ಜೀವನವಂತು ಸದಾ ಆರೋಗ್ಯವಂತ ಜೀವನ ಆಗಿದೆ. ವರದಾತನಿಂದ `ಸದಾ ಆರೋಗ್ಯವಂತ ಭವ'ದ ವರದಾನವು ಸಿಕ್ಕಿರುತ್ತದೆ. ಬಾಪ್ದಾದಾರವರು ನೋಡುತ್ತಾರೆ - ಕೆಲವು ಮಕ್ಕಳು ಸಮಯದಲ್ಲಿ ಪ್ರಾಪ್ತಿಯಾಗಿರುವ ಈ ವರದಾನಗಳನ್ನು ಕಾರ್ಯದಲ್ಲಿ ಉಪಯೋಗಿಸುತ್ತಾ ಲಾಭವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಅಥವಾ ಇದನ್ನಾದರೂ ಹೇಳಬಹುದು - ಶಕ್ತಿಗಳು ಅಂದರೆ ಸೇವಾಧಾರಿಗಳಿಂದ ತನ್ನ ವಿಶಾಲತೆ ಮತ್ತು ವಿಶಾಲ ಬುದ್ಧಿಯ ಮೂಲಕ ಸೇವೆಯನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. `ಮಾಸ್ಟರ್ ಸರ್ವಶಕ್ತಿವಂತ' - ಈ ಸ್ಥಿತಿಯೇನೂ ಕಡಿಮೆಯಲ್ಲ. ಇದು ಶ್ರೇಷ್ಠ ಸ್ಥಿತಿಯೂ ಆಗಿದೆ, ಜೊತೆ-ಜೊತೆಗೆ ಡೈರೆಕ್ಟ್ ಪರಮಾತ್ಮನ ಮೂಲಕ `ಪರಮ ಟೈಟಲ್' ಸಹ ಆಗಿದೆ. ಬಿರುದಿನ ನಶೆಯು ಎಷ್ಟೊಂದು ಇಡುತ್ತಾರೆ! ಆ ಬಿರುದುಗಳು ಎಷ್ಟೊಂದು ಕಾರ್ಯವನ್ನು ಸಫಲಗೊಳಿಸುತ್ತದೆ! ಅಂದಮೇಲೆ ಇದು ಪರಮಾತ್ಮನ ಬಿರುದಾಗಿದೆ, ಇದರಲ್ಲಿ ಎಷ್ಟೊಂದು ಖುಷಿ ಮತ್ತು ಶಕ್ತಿ ಅಡಗಿದೆ! ಒಂದುವೇಳೆ ಇದೇ ಒಂದು ಬಿರುದಿನ ಸ್ಥಿತಿಯೆಂಬ ಸಿಂಹಾಸನದ ಮೇಲೆ ಕುಳಿತಿರುತ್ತೀರಿ ಎಂದರೆ, ಈ ಸರ್ವ ಶಕ್ತಿಗಳು ಸದಾ ಸೇವೆ ಮಾಡುವುದಕ್ಕಾಗಿ ಹಾಜಿರ್ ಆಗಿದೆಯೆಂಬ ಅನುಭವ ಆಗುತ್ತದೆ, ಆದರೆ ತಮ್ಮ ಆದೇಶದ ನಿರೀಕ್ಷಣೆಯಲ್ಲಿ ಇರುತ್ತದೆ. ಹಾಗಾದರೆ ವರದಾನವನ್ನು ಅಥವಾ ಆಸ್ತಿಯನ್ನು ಕಾರ್ಯದಲ್ಲಿ ಉಪಯೋಗಿಸಿರಿ. ತಾವೇನಾದರೂ ಮಾಸ್ಟರ್ ಸರ್ವ ಶಕ್ತಿವಂತನ ಸ್ವಮಾನದಲ್ಲಿ ಸ್ಥಿತರಾಗುವುದಿಲ್ಲ ಎಂದರೆ, ಶಕ್ತಿಗಳನ್ನು ಆದೇಶದಂತೆ ನಡೆಸುವುದಕ್ಕೆ ಬದಲಾಗಿ ಪದೇ-ಪದೆ ತಂದೆಯವರಿಗೆ ಅರ್ಜಿಯನ್ನು ಹಾಕುತ್ತಾ ಇರುತ್ತೀರಿ - ಬಾಬಾ, ಈ ಶಕ್ತಿಯನ್ನು ಕೊಡಿ, ಬಾಬಾ ನಮ್ಮ ಈ ಕಾರ್ಯವನ್ನು ಮಾಡಿಸಿರಿ, ಇದಾಗಿ ಬಿಡಲಿ, ಹೀಗಾಗಲಿ... ಈ ರೀತಿ ಅರ್ಜಿಯನ್ನು ಹಾಕುವವರು ಎಂದಿಗೂ ಸಹ ಖುಷಿಯಾಗಿ ಇರಲು ಸಾಧ್ಯವಿಲ್ಲ. ಏಕೆಂದರೆ ಒಂದು ಮಾತು ಪೂರ್ಣವಾಯಿತೆಂದರೆ ಇನ್ನೊಂದು ಆರಂಭವಾಗುತ್ತದೆ. ಆದ್ದರಿಂದ ತಾವು ಮಾಲೀಕರಾಗಿ, ಯೋಗಯುಕ್ತರಾಗಿದ್ದು ಸೇವಾಧಾರಿಗಳಿಂದ ಯುಕ್ತಿ ಯುಕ್ತವಾಗಿ ಸೇವೆಯನ್ನು ತೆಗೆದುಕೊಳ್ಳಿರಿ, ಇದರಿಂದ ಸದಾ ಹಾಗೂ ಸ್ವತಹವಾಗಿಯೇ ಆರೋಗ್ಯವಾಗಿ ಇದ್ದೇನೆಂಬ ಅನುಭವ ಮಾಡುವಿರಿ - ಇದಕ್ಕೆ ತನುವಿನ ಶಕ್ತಿಯ ಪ್ರಾಪ್ತಿ ಎಂದು ಹೇಳಲಾಗುತ್ತದೆ.

ಅದೇ ರೀತಿಯಲ್ಲಿ ಮನಸ್ಸಿನ ಶಕ್ತಿ ಅರ್ಥಾತ್ ಶ್ರೇಷ್ಠ ಸಂಕಲ್ಪದ ಶಕ್ತಿ. ಮಾಸ್ಟರ್ ಸರ್ವ ಶಕ್ತಿವಂತನ ಪ್ರತೀ ಸಂಕಲ್ಪದಲ್ಲಿಯೂ ಶಕ್ತಿಯಿಷ್ಟಿದೆ, ಯಾವುದನ್ನು ಯಾವ ಸಮಯದಲ್ಲಿ, ಹೇಗೆ ಬೇಕಾದರೂ ಉಪಯೋಗಿಸಬಹುದು ಮತ್ತು ಅನ್ಯರಿಗೂ ಅನುಭವ ಮಾಡಿಸಬಹುದು. ಏಕೆಂದರೆ ಅವರ ಸಂಕಲ್ಪವು ಸದಾ ಶುಭ, ಶ್ರೇಷ್ಠ ಹಾಗೂ ಕಲ್ಯಾಣಕಾರಿ ಆಗಿರುತ್ತದೆ. ಅಂದಮೇಲೆ ಎಲ್ಲಿ ಶ್ರೇಷ್ಠ ಕಲ್ಯಾಣದ ಸಂಕಲ್ಪವು ಇರುತ್ತದೆಯೋ, ಅಲ್ಲಿ ಅವಶ್ಯವಾಗಿ ಸಿದ್ಧಿಯಾಗುತ್ತದೆ ಮತ್ತು ಮಾಸ್ಟರ್ ಸರ್ವಶಕ್ತಿವಂತನು ಆಗಿರುವ ಕಾರಣದಿಂದ ಮನಸ್ಸೆಂದಿಗೂ ಸಹ ಮಾಲೀಕನನ್ನು ಮೋಸ ಮಾಡಲು ಸಾಧ್ಯವಿಲ್ಲ ಹಾಗೂ ದುಃಖದ ಅನುಭವ ಮಾಡಿಸಲು ಸಾಧ್ಯವಿಲ್ಲ. ಮನಸ್ಸು ಏಕಾಗ್ರ ಅರ್ಥಾತ್ ಒಂದು ಸ್ಥಿತಿಯಲ್ಲಿ ಸ್ಥಿತವಾಗಿರುತ್ತದೆ, ಅಲೆದಾಡುವುದಿಲ್ಲ. ಮನಸ್ಸನ್ನು ಎಲ್ಲಿ ಬೇಕೋ, ಯಾವಾಗ ಬೇಕು ಆಗ ಅಲ್ಲಿಯೇ ಸ್ಥಿತಗೊಳಿಸಲು ಸಾಧ್ಯವಾಗುವುದು. ಮನಸ್ಸು ಎಂದಿಗೂ ಸಹ ಉದಾಸನಾಗಲು ಸಾಧ್ಯವಿಲ್ಲ ಏಕೆಂದರೆ ಅವರ ಸೇವಾಧಾರಿಗಳು ದಾಸನಾಗುತ್ತದೆ - ಅಲೌಕಿಕ ಜೀವನದಲ್ಲಿನ ಆಸ್ತಿ ಅಥವಾ ವರದಾನದಲ್ಲಿ ಈ ಮನಸ್ಸಿನ ಶಕ್ತಿಯ ಪ್ರಾಪ್ತಿಯಾಗುತ್ತದೆ.

ಇದೇ ರೀತಿಯಾಗಿ ಮೂರನೆಯದು - ಧನದ ಶಕ್ತಿಯಾಗಿದೆ ಅರ್ಥಾತ್ ಜ್ಞಾನದ ಧನದ ಶಕ್ತಿ. ಜ್ಞಾನ ಧನವು ಸ್ವತಹವಾಗಿಯೇ ಸ್ಥೂಲ ಧನದ ಪ್ರಾಪ್ತಿ ಮಾಡಿಸುತ್ತದೆ. ಜ್ಞಾನ ಧನವು ಎಲ್ಲಿರುತ್ತದೆಯೋ ಅಲ್ಲಿ ಪ್ರಕೃತಿಯೂ ಸಹ ಸ್ವತಹವಾಗಿಯೇ ದಾಸಿ ಆಗಿ ಬಿಡುತ್ತದೆ. ಈ ಸ್ಥೂಲ ಧನವು ಪ್ರಕೃತಿಯ ಸಾಧನಗಳಿಗಾಗಿ ಇದೆ, ಜ್ಞಾನ ಧನದಿಂದ ಪ್ರಕೃತಿಯ ಸರ್ವ ಸಾಧನಗಳು ಸ್ವತಹವಾಗಿಯೇ ಪ್ರಾಪ್ತಿಯಾಗುತ್ತವೆ. ಆದ್ದರಿಂದ ಜ್ಞಾನ-ಧನವು ಎಲ್ಲಾ ಧನಗಳ ರಾಜನಾಗಿದೆ. ಎಲ್ಲಿ ರಾಜನು ಇರುತ್ತಾನೆಯೋ ಅಲ್ಲಿ ಸರ್ವ ಪದಾರ್ಥಗಳು ಸ್ವತವಾಗಿಯೇ ಪ್ರಾಪ್ತಿಯಾಗುತ್ತವೆ, ಅದಕ್ಕಾಗಿ ಪರಿಶ್ರಮ ಪಡಬೇಕಾಗಿಲ್ಲ. ಒಂದು ವೇಳೆ ಯಾವುದಾದರೂ ಲೌಕಿಕ ಪದಾರ್ಥಗಳ ಪ್ರಾಪ್ತಿಯಲ್ಲಿ ಪರಿಶ್ರಮ ಪಡಬೇಕಾಗುತ್ತದೆ. ಅದಕ್ಕೆ ಕಾರಣ - ಜ್ಞಾನ ಧನದ ಕೊರತೆ ಇರುವುದು. ವಾಸ್ತವದಲ್ಲಿ, ಜ್ಞಾನ ಧನವು ಪದಮಾ ಪದಮ ಪತಿಯನ್ನಾಗಿ ಮಾಡುವಂತದ್ದಾಗಿದೆ. ಪರಮಾರ್ಥವು ವ್ಯವಹಾರವನ್ನು ಸ್ವತಹವಾಗಿ ಸಿದ್ಧ ಮಾಡುತ್ತದೆ. ಅಂದಮೇಲೆ ಪರಮಾತ್ಮ-ಧನ ಇರುವವರು ಪರಮಾರ್ಥಿ ಆಗಿ ಬಿಡುತ್ತಾರೆ. ಅವರು ಸಂಕಲ್ಪ ಮಾಡುವ ಅವಶ್ಯಕತೆಯೂ ಇಲ್ಲ, ಸ್ವತಹವಾಗಿಯೇ ಸರ್ವ ಅವಶ್ಯಕತೆಗಳೂ ಪೂರ್ಣವಾಗುತ್ತಾ ಇರುತ್ತವೆ. ಜ್ಞಾನ ಧನ ಶಕ್ತಿಯಿಷ್ಟಿದೆ, ಅದು ಅನೇಕ ಜನ್ಮಗಳಲ್ಲಿ ರಾಜರುಗಳಿಗೂ ರಾಜರನ್ನಾಗಿ ಮಾಡಿ ಬಿಡುತ್ತದೆ. ಅಂದಮೇಲೆ ಸಹಜವಾಗಿಯೇ ಧನದ ಶಕ್ತಿಯ ಪ್ರಾಪ್ತಿಯಾಗುತ್ತದೆ.

ಇದೇ ರೀತಿಯಲ್ಲಿ - ಸಂಬಂಧದ ಶಕ್ತಿ. ಸಂಬಂಧದ ಶಕ್ತಿಯ ಪ್ರಾಪ್ತಿಯ ಶುಭ ಇಚ್ಛೆಗೆ ಕಾರಣವು ಏನೆಂದರೆ- ಸಂಬಂಧದಲ್ಲಿ ಸ್ನೇಹ ಮತ್ತು ಸಹಯೋಗದ ಪ್ರಾಪ್ತಿ ಆಗುತ್ತದೆ. ಈ ಅಲೌಕಿಕ ಜೀವನದಲ್ಲಿ ಸಂಬಂಧದ ಶಕ್ತಿಯು ಡಬಲ್ ರೂಪದಲ್ಲಿ ಪ್ರಾಪ್ತಿಯಾಗುತ್ತದೆ. ಡಬಲ್ ಸಂಬಂಧದ ಶಕ್ತಿಯು ಹೇಗೆ ಪ್ರಾಪ್ತಿಯಾಗುತ್ತದೆ ಎಂದು ಗೊತ್ತಿದೆಯೇ? ಒಂದು - ತಂದೆಯ ಮೂಲಕ ಸರ್ವ ಸಂಬಂಧ, ಇನ್ನೊಂದು - ದೈವೀ ಪರಿವಾರದ ಮೂಲಕ ಸಂಬಂಧ. ಅಂದಮೇಲೆ ತಂದೆಯಿಂದ ಹಾಗೂ ಪರಸ್ಪರದಲ್ಲಿಯೂ ಡಬಲ್ ಸಂಬಂಧ ಆಯಿತಲ್ಲವೆ! ಹಾಗಾದರೆ ಸಂಬಂಧದ ಮೂಲಕ ಸದಾ ನಿಸ್ವಾರ್ಥ ಸ್ನೇಹ, ಅವಿನಾಶಿ ಸ್ನೇಹ ಮತ್ತು ಅವಿನಾಶಿ ಸಹಯೋಗದ ಪ್ರಾಪ್ತಿ ಆಗುತ್ತಿರುತ್ತದೆ. ಅಂದಾಗ ಸಂಬಂಧವೂ ಸಹ ಶಕ್ತಿಯಾಗಿದೆ ಅಲ್ಲವೆ. ಹಾಗೆ ನೋಡಿದಾಗ ತಂದೆಯು, ಮಕ್ಕಳನ್ನೇಕೆ ಬಯಸುತ್ತಾರೆ ಅಥವಾ ಮಕ್ಕಳು ತಂದೆಯನ್ನು ಏಕೆ ಬಯಸುತ್ತಾರೆ? ಸಹಯೋಗಕ್ಕಾಗಿ, ಸಮಯದಲ್ಲಿ ಸಹಯೋಗ ಸಿಗಲಿ ಎಂದು. ಅಂದಮೇಲೆ ಈ ಅಲೌಕಿಕ ಜೀವನದಲ್ಲಿಯೂ ಸಹ ನಾಲ್ಕೂ ಶಕ್ತಿಗಳ ಪ್ರಾಪ್ತಿಗಳು ವರದಾನದ ರೂಪದಲ್ಲಿ, ಆಸ್ತಿಯ ರೂಪದಲ್ಲಿ ಪ್ರಾಪ್ತಿಯಾಗಿದೆ. ಯಾರಿಗೆ ಈ ನಾಲ್ಕೂ ಪ್ರಕಾರದ ಶಕ್ತಿಗಳೆಲ್ಲಿ ಪ್ರಾಪ್ತಿ ಆಗಿರುತ್ತದೆಯೋ, ಅವರ ಪ್ರತೀ ಸಮಯದ ಸ್ಥಿತಿಯು ಹೇಗಿರುತ್ತದೆ? ಸದಾ ಮಾಸ್ಟರ್ ಸರ್ವ ಶಕ್ತಿವಂತ. ಸದಾ ಈ ಸ್ಥಿತಿಯ ಸಿಂಹಾಸನದಲ್ಲಿಯೇ ಸ್ಥಿತರಾಗಿರುತ್ತೀರಾ? ಇದನ್ನೇ ಇನ್ನೊಂದು ಶಬ್ಧಗಳಲ್ಲಿ ಸ್ವಯಂನ ರಾಜಾ ಅಥವಾ ರಾಜಯೋಗಿ ಎಂದು ಹೇಳಲಾಗುತ್ತದೆ. ರಾಜರುಗಳ ಭಂಡಾರವು ಸದಾ ತುಂಬಿರುತ್ತದೆ. ಅಂದಮೇಲೆ ರಾಜಯೋಗಿ ಅರ್ಥಾತ್ ಸದಾ ಶಕ್ತಿಗಳ ಭಂಡಾರವು ತುಂಬಿರುತ್ತದೆ, ತಿಳಿಯಿತೆ? ಇದಕ್ಕೆ ಶ್ರೇಷ್ಠ ಬ್ರಾಹ್ಮಣ ಅಲೌಕಿಕ ಜೀವನ ಎಂದು ಹೇಳಲಾಗುತ್ತದೆ. ತಾವು ಸದಾ ಮಾಲೀಕನಾಗಿದ್ದು ಸರ್ವ ಶಕ್ತಿಗಳನ್ನು ಕಾರ್ಯದಲ್ಲಿ ಉಪಯೋಗಿಸಿರಿ. ಯಥಾ ಶಕ್ತಿಗೆ ಬದಲಾಗಿ ಸದಾ ಶಕ್ತಿಶಾಲಿ ಆಗಿರಿ. ತಂದೆಗೆ ಅರ್ಜಿ ಹಾಕುವವರಲ್ಲ, ಸದಾ ಖುಷಿಯಾಗಿರುವವರು ಆಗಿರಿ. ಒಳ್ಳೆಯದು.

ಎಲ್ಲರಿಗೂ ಮಧುಬನಕ್ಕೆ ಬರುವ ಅವಕಾಶವಂತು ಸಿಗುತ್ತದೆ ಅಲ್ಲವೆ. ಪ್ರಾಪ್ತಿಯಾಗಿರುವ ಈ ಭಾಗ್ಯವನ್ನು ಸದಾ ಜೊತೆ ಇಟ್ಟುಕೊಳ್ಳಿರಿ. ಭಾಗ್ಯವಿದಾತನನ್ನು ಜೊತೆ ಇಟ್ಟುಕೊಳ್ಳುವುದು ಅಂದರೆ ಭಾಗ್ಯವನ್ನೇ ಜೊತೆ ಇಟ್ಟುಕೊಳ್ಳುವುದು ಆಗಿದೆ. ಮೂರು ಜೋನಿನವರು ಬಂದಿದ್ದಾರೆ. ವಿಭಿನ್ನ ಸ್ಥಾನಗಳ ಮೂರು ನದಿಗಳು ಬಂದು ಒಟ್ಟಿಗೆ ಸೇರಿದೆ - ಇದಕ್ಕೆ ತ್ರಿವೇಣಿ ಸಂಗಮ ಎಂದು ಹೇಳುತ್ತೇವೆ. ಬಾಪ್ದಾದಾರವರು ಎಲ್ಲರಿಗೂ ವರದಾತನಾಗಿ ವರದಾನವನ್ನು ಕೊಡುತ್ತಾರೆ. ವರದಾನಗಳನ್ನು ಕಾರ್ಯದಲ್ಲಿ ಉಪಯೋಗಿಸುವುದಂತು ಪ್ರತಿಯೊಬ್ಬರ ಮೇಲೆ ಆಧಾರಿತವಾಗಿದೆ. ಒಳ್ಳೆಯದು.

ನಾಲ್ಕೂ ಕಡೆಯಲ್ಲಿರುವ ಸರ್ವ ಆಸ್ತಿ ಮತ್ತು ವರದಾನಗಳ ಅಧಿಕಾರಿ ಶ್ರೇಷ್ಠ ಆತ್ಮರಿಗೆ, ಸರ್ವ ಮಾಸ್ಟರ್ ಶಕ್ತಿವಂತರು ಶ್ರೇಷ್ಠ ಆತ್ಮರಿಗೆ, ಸದಾ ಸಂತುಷ್ಟತೆಯ ಪ್ರಕಂಪನಗಳನ್ನು ಹರಡಿಸುವಂತಹ ಸಂತುಷ್ಟ ಆತ್ಮರಿಗೆ, ಸದಾ ಪರಮಾರ್ಥದ ಮೂಲಕ ವ್ಯವಹಾರದಲ್ಲಿ ಸಿದ್ಧಿಯ ಪ್ರಾಪ್ತಿ ಮಾಡಿಕೊಳ್ಳುವಂತಹ ಮಹಾನ್ ಆತ್ಮರಿಗೆ ಬಾಪ್ದಾದಾರವರ ಸ್ನೇಹ ಮತ್ತು ಶಕ್ತಿಸಂಪನ್ನ ನೆನಪು-ಪ್ರೀತಿ ಹಾಗೂ ನಮಸ್ತೆ.

ಸರ್ವರ ಸಹಯೋಗದಿಂದ ಸುಖಮಯ ಜಗತ್ತು ಕಾರ್ಯಕ್ರಮದ ಬಗ್ಗೆ ಅವ್ಯಕ್ತ-ಬಾಪ್ದಾದಾರವರ ಪ್ರೇರಣೆಗಳು

ಈ ವಿಷಯವೇ ಹೀಗಿದೆ, ಅದಕ್ಕಾಗಿ ಎಲ್ಲರೂ ಸ್ವತಹವಾಗಿಯೇ ಸಹಯೋಗ ಕೊಡುವ ಅವಕಾಶ ಮಾಡಿಕೊಡುತ್ತಾರೆ. ಸಹಯೋಗದ ನಂತರ ಸಂಬಂಧದಲ್ಲಿಯೂ ಬರುತ್ತಾರೆ ಆದ್ದರಿಂದ ಸ್ವತಹವಾಗಿಯೇ ಅವಕಾಶ ಸಿಗುತ್ತದೆ. ಇದಕ್ಕಾಗಿ ಕೇವಲ ಸೇವಾಧಾರಿಗಳಲ್ಲಿ ಶುಭ ಭಾವನೆ, ಶುಭ ಕಾಮನೆಯಿಂದ ಸಂಪನ್ನರಾಗಿದ್ದು ಸೇವೆಯಲ್ಲಿ ಮುಂದೆ ಸಾಗಿರಿ. ಶುಭ ಭಾವನೆಯ ಫಲವು ಪ್ರಾಪ್ತಿಯಾಗಲಿಲ್ಲ - ಹೀಗಾಗಲು ಸಾಧ್ಯವೇ ಇಲ್ಲ. ಸೇವಾಧಾರಿಗಳ ಶುಭ ಭಾವನೆ, ಶುಭ ಕಾಮನೆಯ ಧರಣಿಯು ಸಹಜವಾಗಿಯೇ ಫಲ ಕೊಡಲು ನಿಮಿತ್ತವಾಗುತ್ತದೆ. ಫಲವು ತಯಾರಿದೆ ಆದರೆ ಕೇವಲ ಧರಣಿಯು ತಯಾರಾಗುವುದರಲ್ಲಿ ಸ್ವಲ್ಪ ನಿಧಾನವಿದೆ ಅಷ್ಟೇ. ಫಲವಂತು ಕೂಡಲೇ ಸಿಗುತ್ತದೆ ಆದರೆ ಅದಕ್ಕಾಗಿ ಯೋಗ್ಯ ಧರಣಿಯು ತಯಾರಾಗಿರಬೇಕು. ಆ ಧರಣಿಯು ಈಗ ತಯಾರಾಗುತ್ತಿದೆ.

ಸೇವೆಯನ್ನಂತು ಎಲ್ಲರ ಪ್ರತಿ ಮಾಡುವುದು ಅವಶ್ಯಕವಿದೆ ಆದರೆ ವಿಶೇಷವಾಗಿ ಯಾವ ಅಧಿಕಾರವಿರುವ ಶಕ್ತಿಗಳಿವೆಯೋ, ಅವು ಸಮೀಪದಲ್ಲಿ ಬಂದಿಲ್ಲ. ಭಲೆ ರಾಜ್ಯಾಧಿಕಾರದ ಶಕ್ತಿಯವರ ಸೇವೆಯೇ ಆಗಿರಬಹುದು ಅಥವಾ ಧರ್ಮದ ಶಕ್ತಿಯಿರುವ ಸೇವೆಯೇ ಆಗಿರಬಹುದು ಆದರೆ ಅವರು ಸಹಯೋಗುತ್ತಾ ಸನ್ಮುಖದಲ್ಲಿ ಬರಲಿ, ಸಮಯದಲ್ಲಿ ಸಹಯೋಗಿ ಆಗುವಂತಹ ಅವಶ್ಯಕತೆಯಿದೆ. ಅದಕ್ಕಾಗಿ ಶಕ್ತಿಶಾಲಿ ಬಾಣವನ್ನು ಹೊಡೆಯ ಬೇಕಾಗುತ್ತದೆ. ಶಕ್ತಿಶಾಲಿ ಬಾಣವೆಂದರೆ - ಯಾರಲ್ಲಿ ಸರ್ವ ಆತ್ಮರುಗಳ ಸಹಯೋಗದ ಭಾವನೆಯಿರುತ್ತದೆ, ಖುಷಿಯ ಭಾವನೆ ಇರುತ್ತದೆ, ಸದ್ಭಾವನೆ ಇರುತ್ತದೆ. ಇವರಿಂದ ಪ್ರತಿಯೊಂದು ಕಾರ್ಯಗಳೂ ಸಹಜ ಸಫಲವಾಗುತ್ತದೆ. ಈಗ ಯಾವ ಸೇವೆಯನ್ನು ಮಾಡುತ್ತೀರಿ, ಅದನ್ನು ತಮ್ಮ-ತಮ್ಮ ರೀತಿಯಾಗಿ ಮಾಡುತ್ತೀರಿ ಆದರೆ ಹಿಂದಿನ ಜಮಾನದಲ್ಲಿ ಯಾವುದೇ ಕಾರ್ಯವನ್ನು ಮಾಡುವುದಕ್ಕಾಗಿ ಹೊರಡುತ್ತಿದ್ದರು, ಆ ಸಮಯದಲ್ಲಿ ಇಡೀ ಪರಿವಾರದ ಆಶೀರ್ವಾದಗಳನ್ನು ತೆಗೆದುಕೊಂಡು ಹೊರಡುತ್ತಿದ್ದರು. ಆ ಆಶೀರ್ವಾದವೇ ಸಹಜವಾಗಿ ಮಾಡಿ ಬಿಡುತ್ತದೆ. ಹಾಗಾದರೆ ಈಗ ವರ್ತಮಾನದ ಸೇವೆಯಲ್ಲಿ ಇದರ ಸೇರ್ಪಡೆ ಆಗಬೇಕು. ಯಾವುದೇ ಕಾರ್ಯವನ್ನು ಪ್ರಾರಂಭಿಸುವುದಕ್ಕೆ ಮೊದಲು ಎಲ್ಲರ ಶುಭ ಭಾವನೆ, ಶುಭ ಕಾಮನೆಗಳನ್ನು ಪಡೆದುಕೊಳ್ಳಿರಿ, ಸರ್ವರ ಸಂತುಷ್ಟತೆಯ ಶಕ್ತಿಯನ್ನು ತುಂಬಿಕೊಳ್ಳಿರಿ, ಇದರಿಂದ ಶಕ್ತಿಶಾಲಿ ಫಲ ಸಿಗುತ್ತದೆ. ಈಗ ಇಷ್ಟು ಪರಿಶ್ರಮ ಪಡುವ ಅವಶ್ಯಕತೆಯೂ ಇಲ್ಲ, ಏಕೆಂದರೆ ಎಲ್ಲವೂ ಸುಟ್ಟು ಇದ್ದಿಲಾಗಿ ಬಿಟ್ಟಿದೆ(ಶಕ್ತಿಯಿಲ್ಲ). ಕೇವಲ ಉಫ್ ಎಂದರೆ ಹಾರಿಕೊಂಡು ಬಂದು ಇಲ್ಲಿಗೆ ತಲುಪುತ್ತದೆ, ಇಂತಹ ಬೂದಿಯಾಗಿರುವ ಇದ್ದಿಲಾಗಿದೆ. ಮತ್ತು ವರ್ತಮಾನದಲ್ಲಿ ಎಲ್ಲರೂ ಇದನ್ನೇ ತಿಳಿಯುತ್ತಿದ್ದಾರೆ - ಯಾವುದಾದರೂ ಅಂತಹ ಶಕ್ತಿಯಿರಬೇಕು, ಅದರಿಂದ ಈ ರಾಜ್ಯವನ್ನಾಗಲಿ ಅಥವಾ ಧರ್ಮವನ್ನಾಗಲಿ ನಿಯಂತ್ರಣ ಮಾಡಲು ಸಾಧ್ಯವಾಗಬೇಕು. ಇದನ್ನು ಒಳಗಡೆಯಿಂದ ಹುಡುಕುತ್ತಿದ್ದಾರೆ, ಈ ಸೇವೆಗಾಗಿ ಕೇವಲ ಬ್ರಾಹ್ಮಣ ಆತ್ಮರ ಸೇವೆಯ ವಿಧಿಯಲ್ಲಿ ಸ್ವಲ್ಪ ಬದಲಾವಣೆ ಆಗಬೇಕು, ಆ ಬದಲಾವಣೆಯೇ ಮಂತ್ರವಾಗಿ ಬಿಡುತ್ತದೆ. 50 ವರ್ಷಗಳು ಪರಿಶ್ರಮ ಪಟ್ಟಿದ್ದೀರಿ, ಈಗಂತು ಮಂತ್ರ ಹಾಕಿರಿ ಮತ್ತು ಸಿದ್ಧಿಯಾಗಲಿ. ಇಲ್ಲಿಯವರೆಗೆ ಏನಾಯಿತು ಇವೆಲ್ಲವೂ ಆಗಲೇಬೇಕಿತ್ತು, ಅನುಭವಿ ಆಗಿ ಬಿಟ್ಟಿರಿ. ಈಗ ಪ್ರತಿಯೊಂದು ಕಾರ್ಯದಲ್ಲಿ ಇದೇ ಲಕ್ಷ್ಯವನ್ನಿಡಿ- `ಸರ್ವರ ಸಹಯೋಗದಿಂದ ಸಫಲತೆ'- ಇದು ಬ್ರಾಹ್ಮಣರಿಗಾಗಿಯೇ ಟಾಪಿಕ್ ಆಗಿದೆ. ಬಾಕಿ ಪ್ರಪಂಚದವರಿಗಾಗಿ `ಸರ್ವರ ಸಹಯೋಗದಿಂದ ಸುಖಮಯ ಜಗತ್ತು' - ಈ ಟಾಪಿಕ್ ಇದೆ.

ಒಳ್ಳೆಯದು. ಈಗಂತು ತಮ್ಮೆಲ್ಲರ ಸಿದ್ಧಿಯು ಪ್ರತ್ಯಕ್ಷ ರೂಪದಲ್ಲಿ ಕಾಣಿಸುತ್ತದೆ. ಹಾಳಾಗಿರುವ ಯಾವುದೇ ಕಾರ್ಯವೂ ಸಹ ತಮ್ಮ ದೃಷ್ಟಿಯಿಂದ, ತಮ್ಮ ಸಹಯೋಗದಿಂದ ಸಹಜವಾಗಿಯೇ ಪರಿಹಾರವಾಗುತ್ತದೆ. ಅದರ ಕಾರಣದಿಂದ ಭಕ್ತಿಯಲ್ಲಿ ನಾವು ಧನ್ಯ-ಧನ್ಯವಾದ ಎಂದು ಕರೆಯುತ್ತಾರೆ. ಇವೆಲ್ಲಾ ಸಿದ್ಧಿಗಳೂ ಸಹ ತಮ್ಮ ಮುಂದೆ ಪ್ರತ್ಯಕ್ಷ ರೂಪದಲ್ಲಿ ಬರುತ್ತವೆ. ತಾವುಗಳು ಯಾವುದೇ ಸಿದ್ಧಿಯ ರೀತಿಯಿಂದ ಹಾ, ಆಗಿ ಬಿಡುತ್ತದೆ ಎಂದು ಹೇಳುವುದಿಲ್ಲ ಆದರೆ ತಮ್ಮ ನಿರ್ದೇಶನವು ಸ್ವತಹವಾಗಿಯೇ ಸಿದ್ಧಿಯ ಪ್ರಾಪ್ತಿ ಮಾಡಿಸುತ್ತಿರುತ್ತದೆ. ಆದ್ದರಿಂದ ಬಹಳ ಬೇಗನೆ ಪ್ರಜೆಗಳಾಗುವರು, ಎಲ್ಲಾ ಕಡೆಗಳಿಂದ ಹೊರಟು ತಮ್ಮ ಕಡೆಗೆ ಬರುವರು - ಈಗ ಈ ಸಿದ್ಧಿಯ ಪಾತ್ರವು ನಡೆಯಲಿದೆ. ಆದರೆ ತಾವು ಮೊದಲು ಇಷ್ಟೂ ಶಕ್ತಿಶಾಲಿಯಾಗಿರಿ, ತಾವು ಸಿದ್ಧಿಯನ್ನೇ ಸ್ವೀಕಾರ ಮಾಡದಿರುವಷ್ಟು ಶಕ್ತಿಶಾಲಿಯಾಗಿರಿ, ಆಗಲೇ ಈ ಪ್ರತ್ಯಕ್ಷತೆಯಾಗುವುದು. ಇಲ್ಲದಿದ್ದರೆ ಸಿದ್ಧಿ ಕೊಡುವವರೇ ಸಿದ್ಧಿಯಲ್ಲಿ ಸಿಲುಕಿದರೆ, ಮತ್ತೇನು ಮಾಡುವಿರಿ? ಇವೆಲ್ಲಾ ಮಾತುಗಳು ಇಲ್ಲಿಂದಲೇ ಆರಂಭವಾಗುವುದು. ತಂದೆಯ ಗಾಯನವು ಏನಿದೆ, ಅವರು ಸರ್ಜನ್ ಸಹ ಆಗಿದ್ದಾರೆ, ಇಂಜಿನಿಯರ್ ಸಹ, ವಕೀಲನೂ ಆಗಿದ್ದಾರೆ, ನ್ಯಾಯಾಧೀಶನೂ ಆಗಿದ್ದಾರೆ, ಇವೆಲ್ಲವೂ ಪ್ರತ್ಯಕ್ಷದಲ್ಲಿ ಅನುಭವ ಮಾಡುವಿರಿ, ಈ ಅನುಭವದಿಂದ ಎಲ್ಲಾ ಕಡೆಗಳಿಂದ ಬುದ್ಧಿಯನ್ನು ತೆಗೆದು ಒಂದು ಕಡೆ ಹೋಗುತ್ತದೆ. ಈಗಂತು ತಮ್ಮ ಹಿಂದೆ ಜನಸಂದಣಿಯೇ ಸೇರುವುದಿದೆ. ಬಾಪ್ದಾದಾರವರು ಈ ದೃಶ್ಯವನ್ನು ನೋಡುತ್ತಾರೆ ಮತ್ತು ಕೆಲವೊಮ್ಮೆ ವರ್ತಮಾನದ ದೃಶ್ಯವನ್ನು ನೋಡುತ್ತಾರೆ - ಎರಡರಲ್ಲಿ ಬಹಳ ಅಂತರವಿದೆ ಎನಿಸುತ್ತದೆ. ತಾವು ಯಾರು ಎಂಬುದನ್ನು ತಂದೆಯವರು ತಿಳಿದಿದ್ದಾರೆ! ಬಹಳ-ಬಹಳ ಅದ್ಭುತವಾದ ಪಾತ್ರವಾಗುವುದಿದೆ, ಅದನ್ನು ಯೋಚನೆ-ಸ್ವಪ್ನದಲ್ಲಿಯೂ ಇರುವುದಿಲ್ಲ. ಕೇವಲ ಸ್ವಲ್ಪ ಮಧ್ಯದಲ್ಲಿ ನಿಂತಿದೆ ಅಷ್ಟೇ. ಹೇಗೆಂದರೆ ಕೆಲವೊಮ್ಮೆ ಪರದೆಯು ಸಿಕ್ಕಿಕೊಳ್ಳುತ್ತದೆ ಅಲ್ಲವೆ. ಧ್ವಜಾರೋಹಣ ಮಾಡುವಾಗಲೂ ಸ್ವಲ್ಪ ಸಿಕ್ಕಿಕೊಳ್ಳುತ್ತದೆ, ಅದೇ ರೀತಿ ಈಗ ಸ್ವಲ್ಪ-ಸ್ವಲ್ಪ ಸಿಲುಕುತ್ತಿದೆ. ತಾವು ಯಾರು, ಹೇಗಿದ್ದೀರಿ, ಬಹಳ ಮಹಾನರಿದ್ದೀರಿ. ತಮ್ಮ ವಿಶೇಷತೆಯು ಯಾವಾಗ ಪ್ರತ್ಯಕ್ಷವಾಗುವುದೋ ಆಗ ಇಷ್ಟ ದೇವ ಆಗುತ್ತೀರಿ. ಕೊನೆಗಂತು ಭಕ್ತ ಮಾಲೆಯೂ ಪ್ರತ್ಯಕ್ಷವಾಗುತ್ತದೆ ಅಲ್ಲವೆ, ಆದರೆ ಮೊದಲು ಮಹಾರಾಜರುಗಳು ಶೃಂಗಾರಿತರಾಗಿ ತಯಾರಾಗುವರು, ನಂತರವೇ ಭಕ್ತರು ಬರುವರಲ್ಲವೆ. ಒಳ್ಳೆಯದು.

ವರದಾನ:  
ಸ್ವಯಂನ ವಿಶ್ರಾಂತಿಯನ್ನೂ ತ್ಯಾಗ ಮಾಡಿ ಸೇವೆ ಮಾಡುವಂತಹ ಸದಾ ಸಂತುಷ್ಟ, ಸದಾ ಹರ್ಷಿತ ಭವ.

ಸೇವಾಧಾರಿಗಳು ಸ್ವಯಂನ ರಾತ್ರಿ-ಹಗಲಿನ ವಿಶ್ರಾಂತಿಯನ್ನೂ ತ್ಯಾಗ ಮಾಡಿ, ಸೇವೆಯಲ್ಲಿಯೇ ವಿಶ್ರಾಂತಿಯ ಅನುಭವ ಮಾಡುತ್ತಾರೆ. ಅವರ ಸಂಪರ್ಕದಲ್ಲಿ ಇರುವವರು ಅಥವಾ ಸಂಬಂಧದಲ್ಲಿ ಬರುವವರು ಸಮೀಪತೆಯ ಅನುಭವವನ್ನು ಈ ರೀತಿ ಮಾಡುತ್ತಾರೆ, ಹೇಗೆಂದರೆ ಶೀತಲತೆ ಅಥವಾ ಶಕ್ತಿ, ಶಾಂತಿಯ ಜಲಪಾತದ ಕೆಳಗೆ ಕುಳಿತಿದ್ದೇವೆ. ಶ್ರೇಷ್ಠ ಚಾರಿತ್ರ್ಯವಂತ ಸೇವಾಧಾರಿಯು ಕಾಮಧೇನುವಾಗಿ, ಸದಾಕಾಲಕ್ಕಾಗಿ ಸರ್ವರ ಮನೋಕಾಮನೆಗಳನ್ನು ಪೂರ್ಣಗೊಳಿಸುತ್ತಾರೆ. ಇಂತಹ ಸೇವಾಧಾರಿಗಳಿಗೆ ಸ್ವತಹವಾಗಿಯೇ ಸದಾ ಹರ್ಷಿತ ಮತ್ತು ಸದಾ ಸಂತುಷ್ಟವಾಗಿರುವ ವರದಾನವು ಪ್ರಾಪ್ತಿಯಾಗುತ್ತದೆ.

ಸ್ಲೋಗನ್:
ಜ್ಞಾನ ಸ್ವರೂಪರು ಆಗಬೇಕೆಂದರೆ, ಪ್ರತೀ ಸಮಯದಲ್ಲಿ ಅಧ್ಯಯನದ ಬಗ್ಗೆ ಗಮನವಿಡಿ, ತಂದೆ ಹಾಗೂ ವಿದ್ಯೆಯಲ್ಲಿ ಸಮಾನ ಪ್ರೀತಿಯಿರಲಿ.


07-01-21 ತನು, ಮನ, ಧನ ಮತ್ತು ಸಂಬಂಧದ ಶಕ್ತಿ ರಿವೈಜ್: 29/10/87

1. ಪ್ರತಿಯೊಬ್ಬ ಮಗುವಿನ ಜನ್ಮವಾಗುತ್ತಿದ್ದಂತೆಯೇ ಯಾವ ಡಬಲ್ ಸಂಬಂಧದ ಶ್ರೇಷ್ಠ ಪ್ರಾಪ್ತಿಯಾಗುತ್ತದೆ?

ಅ. ತಂದೆ-ತಾಯಿ

ಆ. ತಂದೆ-ಶಿಕ್ಷಕ

ಇ. ತಂದೆ-ಸದ್ಗುರು

ಈ. ತಂದೆ - ವರದಾತಾ

2. ಲೌಕಿಕ ಜೀವನದಲ್ಲಿ ಅಥವಾ ಅಲೌಕಿಕ ಜೀವನದಲ್ಲಿ ಸಫಲತೆಯ ಆಧಾರ ಏನಾಗಿದೆ?

ಅ. ಶಕ್ತಿಗಳು

ಆ. ಸಂಪತ್ತು

ಇ. ಗುಣಗಳು

ಈ. ಬುದ್ಧಿವಂತಿಕೆ

3. ಸಫಲತೆಗೆ ಯಾವ ಮುಖ್ಯ ಶಕ್ತಿಗಳ ಅವಶ್ಯಕತೆಯಿದೆ?

ಅ. ಹೆಸರು, ಸ್ಥಾನ, ಪ್ರತಿಷ್ಠೆ

ಆ. ತನು, ಮನ, ಧನ ಮತ್ತು ಸಂಬಂಧ

ಇ. ನಿರ್ಣಯ, ಅಳವಡಿಸಿಕೊಳ್ಳುವ, ಸಹನೆ

ಈ. ಎದುರಿಸುವ, ಸಹಯೋಗ, ಪರಿಶೀಲಿಸುವ

4. ಈ ಅಲೌಕಿಕ ಜೀವನದಲ್ಲಿ ಯಾವ ಎರಡರ ಆರೋಗ್ಯವು ಅವಶ್ಯಕತೆಯಿದೆ?

ಅ. ಆತ್ಮ ಮತ್ತು ಪ್ರಕೃತಿ

ಆ. ಮನಸ್ಸು-ಬುದ್ಧಿ

ಇ. ಚಿತ್ತ-ವೃತ್ತಿ

ಈ. ಸ್ವಭಾವ ಸಂಸ್ಕಾರ

5. _______________ ಸಹ ರೋಗವನ್ನು ವೃದ್ಧಿ ಮಾಡಲು ಕಾರಣವಾಗುತ್ತದೆ.

ಅ. ಬಲಹೀನತೆಗಳು

ಆ. ಅಶುದ್ಧ ಸಂಕಲ್ಪ

ಇ. ರೋಗದ ವರ್ಣನೆಯೂ

ಈ. ವಿಕಾರಗಳು

6. ಈ ಅಲೌಕಿಕ ಬ್ರಾಹ್ಮಣ ಜೀವನವು ಸದಾ __________ ಜೀವನ ಆಗಿದೆ.

ಅ. ಪವಿತ್ರ

ಆ. ಶ್ರೇಷ್ಠ

ಇ. ಖುಷಿಯ

ಈ. ಆರೋಗ್ಯವಂತ

7. ಮಾಸ್ಟರ್ ಸರ್ವ ಶಕ್ತಿವಂತರ ಪ್ರತಿ ಸಂಕಲ್ಪವು ಸದಾ ಹೇಗಿರಬೇಕು?

ಅ. ಶುಭ, ಶ್ರೆಷ್ಠ ಮತ್ತು ಕಲ್ಯಾಣಕಾರಿ

ಆ. ಸಮರ್ಥ, ಶ್ರೇಷ್ಠ ಮತ್ತು ಶುದ್ಧ

ಇ. ತೀವ್ರ ಪುರುಷಾರ್ಥದ, ಮುಂದುವರೆಯುವಂತಹ

ಈ. ಹಾರುವ ಕಲೆಯ ಹಾಗು ಕಲ್ಯಾಣಕಾರಿಯ

8. ಸಂಬಂಧಗಳಲ್ಲಿ ಏನು ಪ್ರಾಪ್ತಿಯಾಗುತ್ತದೆ?

ಅ. ಪ್ರೇಮ, ಸುಖ

ಆ. ಆನಂದ, ಸಂತುಷ್ಟತೆ

ಇ. ಸ್ನೇಹ, ಸಹಯೋಗ

ಈ. ಶಕ್ತಿ, ಸಾಹಸ

9. ಡಬಲ್ ಸಂಬಂಧದ ಶಕ್ತಿಯು ಹೇಗೆ ಪ್ರಾಪ್ತಿಯಾಗುತ್ತದೆ

ಅ. ತಂದೆ ಮತ್ತು ದೈವೀ ಪರಿವಾರ

ಆ. ಬ್ರಹ್ಮಾ ತಂದೆ ಮತ್ತು ಶಿವ ತಂದೆ

ಇ. ಮಮ್ಮಾ ಮತ್ತು ಬಾಬಾ

ಇ. ಅಲೌಕಿಕ ಮತ್ತು ಪಾರಲೌಕಿಕ ಸಂಬಂಧ

10. ರಾಜಯೋಗಿ ಅರ್ಥಾತ್ ಸದಾ ಯಾವ ಭಂಡಾರವು ತುಂಬಿರುತ್ತದೆ?

ಅ. ಸರ್ವ ಖಜಾನೆಗಳು

ಆ. ಸರ್ವ ಗುಣಗಳು

ಇ. ಸರ್ವ ಶಕ್ತಿಗಳು

ಈ. ಸರ್ವ ಪ್ರಾಪ್ತಿಗಳು