07.04.19    Avyakt Bapdada     Kannada Murli     29.04.84     Om Shanti     Madhuban


" ಜ್ಞಾನ ಸೂರ್ಯನ ಆತ್ಮಿಕ ನಕ್ಷತ್ರಗಳ ಭಿನ್ನ-ಭಿನ್ನ ವಿಶೇಷತೆಗಳು "


ಇಂದು ಜ್ಞಾನ ಸೂರ್ಯ, ಜ್ಞಾನ ಚಂದ್ರಮನು ತನ್ನ ವಿಭಿನ್ನವಾದ ನಕ್ಷತ್ರಗಳನ್ನು ನೋಡುತ್ತಿದ್ದಾರೆ. ಕೆಲವು ಸ್ನೇಹಿ ನಕ್ಷತ್ರಗಳಾಗಿವೆ, ಕೆಲವು ವಿಶೇಷ ಸಹಯೋಗಿ ನಕ್ಷತ್ರಗಳಿವೆ, ಕೆಲವು ಸಹಜಯೋಗಿ ನಕ್ಷತ್ರಗಳಿವೆ, ಕೆಲವು ಶ್ರೇಷ್ಠ ಜ್ಞಾನಿ ನಕ್ಷತ್ರಗಳಿವೆ, ಕೆಲವು ವಿಶೇಷವಾಗಿ ಸೇವೆಯ ಉಮ್ಮಂಗವಿರುವ ನಕ್ಷತ್ರಗಳಿವೆ. ಕೆಲವು ಪರಿಶ್ರಮದ ಫಲವನ್ನು ಅನುಭವಿಸುವ ನಕ್ಷತ್ರಗಳಿವೆ, ಕೆಲವು ಸಹಜ ಸಫಲತೆಯ ನಕ್ಷತ್ರಗಳಿವೆ. ಹೀಗೆ ಭಿನ್ನ-ಭಿನ್ನ ವಿಶೇಷತೆಗಳುಳ್ಳ ಎಲ್ಲಾ ನಕ್ಷತ್ರಗಳಿವೆ. ಜ್ಞಾನ ಸೂರ್ಯನ ಮೂಲಕ ಸರ್ವ ನಕ್ಷತ್ರಗಳಿಗೂ ಆತ್ಮಿಕ ಪ್ರಕಾಶತೆಯು ಸಿಗುವ ಕಾರಣದಿಂದ ಹೊಳೆಯುವಂತಹ ನಕ್ಷತ್ರಗಳಂತು ಆಗಿ ಬಿಟ್ಟಿವೆ. ಆದರೆ ಪ್ರತಿಯೊಂದು ಪ್ರಕಾರದ ನಕ್ಷತ್ರಗಳ ವಿಶೇಷತೆಯ ಹೊಳಪು ಭಿನ್ನ ಭಿನ್ನವಾಗಿದೆ. ಹೇಗೆ ಸ್ಥೂಲ ನಕ್ಷತ್ರಗಳು ಭಿನ್ನ ಭಿನ್ನ ಗ್ರಹದ ರೂಪದಲ್ಲಿ ಭಿನ್ನ ಭಿನ್ನ ಫಲವಾಗಿ ಅಲ್ಪಕಾಲದ ಪ್ರಾಪ್ತಿಯನ್ನು ಮಾಡಿಸುತ್ತದೆ. ಹೀಗೆ ಜ್ಞಾನಸೂರ್ಯನ ನಕ್ಷತ್ರಗಳೂ ಸಹ ಸರ್ವ ಆತ್ಮರಿಗೆ ಅವಿನಾಶಿ ಪ್ರಾಪ್ತಿಯ ಸಂಬಂಧವಿದೆ. ಹೇಗೆ ಸ್ವಯಂ ಯಾವ ವಿಶೇಷತೆಯಿಂದ ಸಂಪನ್ನವಾಗಿರುವ ನಕ್ಷತ್ರಗಳಾಗಿದೆಯೋ, ಹಾಗೆಯೇ ಅನ್ಯರನ್ನೂ ಅದರನುಸಾರವಾಗಿ ಫಲದ ಪ್ರಾಪ್ತಿಯನ್ನು ಮಾಡಿಸಲು ನಿಮಿತ್ತವಾಗುತ್ತದೆ. ಸ್ವಯಂ ಎಷ್ಟು ಜ್ಞಾನ ಚಂದ್ರಮ ಅಥವಾ ಸೂರ್ಯನ ಸಮೀಪವಿರುತ್ತದೆಯೋ, ಅಷ್ಟು ಅನ್ಯರನ್ನೂ ಸಮೀಪ ಸಂಬಂಧದಲ್ಲಿ ತರುತ್ತಾರೆ ಅರ್ಥಾತ್ ಜ್ಞಾನ ಸೂರ್ಯನ ಮೂಲಕ ಸಿಕ್ಕಿರುವಂತಹ ವಿಶೇಷತೆಗಳ ಆಧಾರದ ಮೇಲೆ ಅನ್ಯರಿಗೂ ಡೈರೆಕ್ಟ್ ವಿಶೇಷತೆಗಳ ಶಕ್ತಿಯ ಆಧಾರದ ಮೇಲೆ, ಇಷ್ಟೇ ಸಮೀಪಕ್ಕೆ ತಂದಿದ್ದಾರೆ. ಅದರಿಂದ ಅವರಿಗೆ ಡೈರೆಕ್ಟ್ ಜ್ಞಾನಸೂರ್ಯ, ಜ್ಞಾನ ಚಂದ್ರಮನೊಂದಿಗೆ ಸಂಬಂಧವಾಗಿ ಬಿಡುತ್ತದೆ, ಇಷ್ಟೂ ಶಕ್ತಿಶಾಲಿಯಾಗಿರುವ ನಕ್ಷತ್ರಗಳಲ್ಲವೆ. ಒಂದು ವೇಳೆ ಸ್ವಯಂ ತಾವು ಶಕ್ತಿಶಾಲಿಯಲ್ಲ, ಸಮೀಪವಿಲ್ಲವೆಂದರೆ ಡೈರೆಕ್ಟ್ ಸಂಬಂಧವನ್ನು ಜೋಡಿಸಲು ಸಾಧ್ಯವಿಲ್ಲ. ದೂರವಿರುವ ಕಾರಣದಿಂದ, ಆ ನಕ್ಷತ್ರಗಳ ವಿಶೇಷತೆಯನುಸಾರವಾಗಿ, ಅವರ ಮೂಲಕ ಎಷ್ಟು ಶಕ್ತಿ, ಸಂಬಂಧ-ಸಂಪರ್ಕವನ್ನು ಪ್ರಾಪ್ತಿ ಮಾಡಿಸಲು ಸಾಧ್ಯವಾಗುವುದೋ ಅಷ್ಟೇ ಯಥಾಶಕ್ತಿ ಪ್ರಾಪ್ತಿಯನ್ನು ಮಾಡುತ್ತಿರುತ್ತಾರೆ. ಡೈರೆಕ್ಟ್ ಶಕ್ತಿಯನ್ನು ತೆಗೆದುಕೊಳ್ಳುವ ಶಕ್ತಿಯಿರುವುದಿಲ್ಲ ಆದ್ದರಿಂದ ಹೇಗೆ ಜ್ಞಾನ ಸೂರ್ಯನು ಸರ್ವಶ್ರೇಷ್ಠನಾಗಿದ್ದಾರೆ, ವಿಶೇಷ ನಕ್ಷತ್ರವು ಶ್ರೇಷ್ಠವಾಗಿರುತ್ತದೆಯೋ ಅದೇ ರೀತಿ ಶ್ರೇಷ್ಠ ಸ್ಥಿತಿಯ ಅನುಭವ ಮಾಡಲು ಸಾಧ್ಯವಿಲ್ಲ. ಯಥಾ ಶಕ್ತಿ, ಯಥಾ ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಹೇಗೆ ಶಕ್ತಿಶಾಲಿ ಸ್ಥಿತಿಯಿರಬೇಕು ಹಾಗೆ ಅನುಭವ ಮಾಡುವುದಿಲ್ಲ. ಇಂತಹ ಆತ್ಮರ ಮನಸ್ಸಿನಿಂದ ಅಥವಾ ಮುಖದಿಂದ ಸದಾ ಇದೇ ಮಾತು ಹೊರ ಬರುತ್ತದೆ - ಇದಾಗಬೇಕು ಆದರೆ ಹಾಗಿಲ್ಲ. ಆಗಬೇಕು ಆದರೆ ಆಗಿಲ್ಲ. ಮಾಡುವುದು ಇದು ಮಾಡಬೇಕು ಆದರೆ ಮಾಡಲು ಸಾಧ್ಯವಿಲ್ಲ. ಇವರಿಗೆ ಹೇಳಲಾಗುತ್ತದೆ - ಯಥಾ ಶಕ್ತಿಯ ಆತ್ಮರು. ಸರ್ವಶಕ್ತಿವಂತಹ ಆತ್ಮರಲ್ಲ. ಇಂತಹ ಆತ್ಮರು ಸ್ವಯಂನ ಹಾಗೂ ಅನ್ಯರ ವಿಘ್ನ ವಿನಾಶಕರಾಗಲು ಸಾಧ್ಯವಿಲ್ಲ. ಸ್ವಲ್ಪ ಮುಂದುವರೆದರು ಮತ್ತು ವಿಘ್ನವು ಬಂದಿತು. ಒಂದು ವಿಘ್ನವನ್ನು ದೂರಗೊಳಿಸಿದರು, ಸಾಹಸದಲ್ಲಿ ಬಂದರು, ಖುಷಿಯಲ್ಲಿ ಬಂದರು ನಂತರ ಇನ್ನೊಂದು ವಿಘ್ನವು ಬರುತ್ತದೆ. ಜೀವನದ ಅರ್ಥಾತ್ ಪುರುಷಾರ್ಥದ ಲೈನ್ ಸದಾ ಕ್ಲಿಯರ್ ಆಗಿರುವುದಿಲ್ಲ. ನಿಲ್ಲುವುದು, ಮುಂದುವರೆಯುವುದು- ಈ ವಿಧಿಯಿಂದ ಮುಂದುವರೆಯುತ್ತಿರುತ್ತಾರೆ ಮತ್ತು ಅನ್ಯರನ್ನೂ ಮುಂದುವರೆಸುತ್ತಿರುತ್ತಾರೆ ಆದ್ದರಿಂದ ನಿಲ್ಲುವ ಮತ್ತು ಮುಂದುವರೆಯುವ ಕಾರಣದಿಂದ, ತೀವ್ರಗತಿಯ ಅನುಭವವಾಗುವುದಿಲ್ಲ. ಕೆಲವೊಮ್ಮೆ ನಡೆಯುವ ಕಲೆ, ಕೆಲವೊಮ್ಮೆ ಏರುವ ಕಲೆ, ಕೆಲವೊಮ್ಮೆ ಹಾರುವ ಕಲೆ. ಏಕರಸ ಶಕ್ತಿಶಾಲಿ ಅನುಭೂತಿಯಾಗುವುದಿಲ್ಲ. ಕೆಲವೊಮ್ಮೆ ಸಮಸ್ಯೆ, ಕೆಲವೊಮ್ಮೆ ಸಮಾಧಾನ ಸ್ವರೂಪ ಏಕೆಂದರೆ ಯಥಾ ಶಕ್ತಿಯಿದೆ. ಜ್ಞಾನ ಸೂರ್ಯನಿಂದ ಸರ್ವ ಶಕ್ತಿಗಳನ್ನು ಗ್ರಹಿಸುವ ಶಕ್ತಿಯಿಲ್ಲ. ಮಧ್ಯದಲ್ಲಿ ಯಾರದಾದರೂ ಅವಶ್ಯವಾಗಿ ಆಶ್ರಯವಿರಬೇಕು. ಇವರಿಗೆ ಯಥಾ ಶಕ್ತಿಯಿರುವ ಆತ್ಮರೆಂದು ಹೇಳಲಾಗುತ್ತದೆ. ಹೇಗೆ ಇಲ್ಲಿ ಎತ್ತರವಾಗಿರುವ ಬೆಟ್ಟವನ್ನೇರುತ್ತೀರಿ. ಯಾವುದೇ ವಾಹನದಲ್ಲಿ ಬರುತ್ತೀರಿ, ಅದು ಬಸ್ ಆಗಿರಬಹುದು, ಕಾರ್ ಆಗಿರಬಹುದು, ಅದರಲ್ಲಿ ಇಂಜಿನ್ ಶಕ್ತಿಶಾಲಿಯಾಗಿರುತ್ತದೆಯೆಂದರೆ ತೀವ್ರ ಗತಿಯಿಂದ, ಯಾವುದೇ ಗಾಳಿ, ನೀರಿನ ಆಶ್ರಯವಿಲ್ಲದೆ ನೇರವಾಗಿ ತಲುಪಿ ಬಿಡುತ್ತೀರಿ. ಮತ್ತು ಇಂಜಿನ್ ಬಲಹೀನವಾಗಿದ್ದರೆ ನಿಂತುಕೊಳ್ಳುತ್ತಾ ನೀರು ಅಥವಾ ಗಾಳಿಯ ಆಶ್ರಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾನ್ಸ್ಟಾಪ್ ಇರುವುದಿಲ್ಲ, ಸ್ಟಾಪ್ ಮಾಡಬೇಕಾಗುತ್ತದೆ. ಹೀಗೆಯೇ ಯಥಾ ಶಕ್ತಿಯಿರುವ ಆತ್ಮರು, ಒಬ್ಬರಲ್ಲ ಒಬ್ಬರು ಆತ್ಮರ, ಪರಿಹಾರದ, ಸಾಧನಗಳ ಆಧಾರವನ್ನು ತೆಗೆದುಕೊಳ್ಳದೆಯೇ ತೀವ್ರಗತಿಯಿಂದ ಹಾರುವ ಕಲೆಯ ಗುರಿಯಲ್ಲಿ ತಲುಪುವುದಿಲ್ಲ. ಕೆಲವೊಮ್ಮೆ ಹೇಳುವರು- ಇಂದು ಖುಷಿಯು ಕಡಿಮೆಯಾಯಿತು, ಇಂದು ಯೋಗವು ಅಷ್ಟು ಶಕ್ತಿಶಾಲಿ ಆಗಿರಲಿಲ್ಲ, ಇಂದು ಈ ಧಾರಣೆ ಮಾಡಿಕೊಳ್ಳುವುದರಲ್ಲಿ ತಿಳಿದಿದ್ದರೂ ಬಲಹೀನನಾಗಿರುವೆನು. ಇಂದು ಸೇವೆಯ ಉಮ್ಮಂಗವು ಬರುತ್ತಿಲ್ಲ. ಕೆಲವೊಮ್ಮೆ ನೀರು ಬೇಕು, ಕೆಲವೊಮ್ಮೆ ಗಾಳಿ ಬೇಕು, ಕೆಲವೊಮ್ಮೆ ಉಮ್ಮಂಗ ಬೇಕು. ಇವರಿಗೆ ಶಕ್ತಿಶಾಲಿ ಎಂದು ಹೇಳುವುದೇ? ಇರುವುದಂತು ಅಧಿಕಾರಿ, ತೆಗೆದುಕೊಳ್ಳುವುದರಲ್ಲಿ ನಂಬರವನ್ ಅಧಿಕಾರಿಯಾಗಿದ್ದೇನೆ. ಯಾರಿಗಿಂತಲೂ ಕಡಿಮೆಯಿಲ್ಲ. ಮತ್ತು ಮಾಡುವುದರಲ್ಲಿ ಏನು ಹೇಳುತ್ತಾರೆ? ನಾವಂತು ಚಿಕ್ಕವರಿದ್ದೇವೆ. ಈಗ ಹೊಸಬರಿದ್ದೇವೆ, ಹಳಬರಲ್ಲ. ಸಂಪೂರ್ಣರಾಗಿದ್ದೇವೆಯೇ! ಈಗ ಸಮಯವಿನ್ನೂ ಇದೆ. ದೊಡ್ಡವರ ದೋಷವಿದೆ, ನಮ್ಮದಲ್ಲ. ಕಲಿಯುತ್ತಿದ್ದೇವೆ, ಕಲಿತು ಬಿಡುತ್ತೇವೆ. ಬಾಪ್ದಾದಾರವರಂತು ಸದಾಕಾಲ ಹೇಳುತ್ತಾರೆ- ಎಲ್ಲರಿಗೂ ಅವಕಾಶವನ್ನು ಕೊಡಬೇಕು. ನಮಗೂ ಈ ಅವಕಾಶವು ಸಿಗಬೇಕಾಗಿದೆ. ನಮ್ಮ ಮಾತನ್ನು ಕೇಳಬೇಕು. ತೆಗೆದುಕೊಳ್ಳುವುದರಲ್ಲಿ ನಾವು ಎನ್ನುವುದು ಮತ್ತು ಮಾಡುವುದರಲ್ಲಿ ದೊಡ್ಡವರು ಮಾಡಿದಂತೆ ಮಾಡುವುದು. ಅಧಿಕಾರವನ್ನು ತೆಗೆದುಕೊಳ್ಳುವುದರಲ್ಲಿ ಈಗ ಮತ್ತು ಮಾಡುವುದರಲ್ಲಿ ಯಾವಾಗಲೋ ಮಾಡಿ ಬಿಡುತ್ತೇವೆ. ತೆಗೆದುಕೊಳ್ಳುವುದರಲ್ಲಿ ದೊಡ್ಡವರಾಗಿ ಬಿಡುವುದು ಮತ್ತು ಮಾಡುವುದರಲ್ಲಿ ಚಿಕ್ಕವರಾಗಿ ಬಿಡುವುದು. ಇವರಿಗೆ ಹೇಳಲಾಗುತ್ತದೆ- ಯಥಾ ಶಕ್ತಿ ಆತ್ಮರು. ಬಾಪ್ದಾದಾರವರು ಈ ರಮಣೀಕವಾದ ಆಟವನ್ನು ನೋಡುತ್ತಾ-ನೋಡುತ್ತಾ ಮುಗುಳ್ನಗುತ್ತಿರುತ್ತಾರೆ. ತಂದೆಯಂತು ಚತುರನಾಗಿದ್ದಾರೆ ಆದರೆ ಮಾಸ್ಟರ್ ಚತುರರೂ ಸಹ ಕಡಿಮೆಯೇನೂ ಇಲ್ಲ ಆದ್ದರಿಂದ ಯಥಾಶಕ್ತಿ ಆತ್ಮನಿಂದ ಈಗ ಮಾಸ್ಟರ್ ಸರ್ವಶಕ್ತಿವಂತರಾಗಿರಿ. ಮಾಡುವವರಾಗಿರಿ. ಶಕ್ತಿಶಾಲಿ ಕರ್ಮದ ಫಲವು ಸ್ವತಹವಾಗಿ ಶುಭಭಾವನೆ, ಶ್ರೇಷ್ಠ ಕಾಮನೆಯ ಫಲವು ಪ್ರಾಪ್ತಿಯಾಗುತ್ತದೆ. ಸರ್ವ ಪ್ರಾಪ್ತಿಗಳು ಸ್ವಯಂ ತಾನೇ ತಮ್ಮ ನೆರಳಿನಂತೆ ಅವಶ್ಯವಾಗಿ ಬರುತ್ತದೆ. ಕೇವಲ ಜ್ಞಾನ ಸೂರ್ಯನಿಂದ ಪ್ರಾಪ್ತಿಯಾಗಿರುವ ಶಕ್ತಿಗಳ ಪ್ರಕಾಶತೆಯಲ್ಲಿ ನಡೆಯುತ್ತೀರೆಂದರೆ, ಸರ್ವ ಪ್ರಾಪ್ತಿಗಳೆಂಬ ನೆರಳು ತಾನಾಗಿಯೇ ತಮ್ಮ ಹಿಂದಿಂದೆ ಬರುತ್ತದೆ. ತಿಳಿಯಿತೆ- ಇಂದು ಯಥಾಶಕ್ತಿ ಮತ್ತು ಶಕ್ತಿಶಾಲಿ ನಕ್ಷತ್ರಗಳ ಶೋಭೆಯನ್ನು ನೋಡುತ್ತಿದ್ದೆವು. ಒಳ್ಳೆಯದು- ಎಲ್ಲರೂ ತೀವ್ರಗತಿಯಿಂದ ಓಡೋಡಿಕೊಂಡು ಬಂದು ತಲುಪಿ ಬಿಟ್ಟಿದ್ದೀರಿ. ತಂದೆಯ ಮನೆಯಲ್ಲಿ ತಲುಪಿದ್ದೇರೆಂದರೆ ಮಕ್ಕಳಿಗೆ ಹೇಳುತ್ತೇವೆ- ಭಲೇ ಬಂದಿದ್ದೀರಿ. ಹೇಗೆ ಎಷ್ಟೆಲ್ಲಾ ಸ್ಥಾನವಿದೆ ಅದು ತಮ್ಮದೇ ಮನೆಯಾಗಿದೆ. ಮನೆಯಂತು ಒಂದು ದಿನದಲ್ಲಿ ದೊಡ್ಡದಾಗುವುದಿಲ್ಲ ಆದರೆ ಸಂಖ್ಯೆಯಂತು ವೃದ್ಧಿಯಾಗುತ್ತದೆಯಲ್ಲವೆ. ಆಗ ಸಮಾವೇಶ ಮಾಡಿಕೊಳ್ಳಬೇಕಾಗುತ್ತದೆ. ಸ್ಥಾನ ಮತ್ತು ಸಮಯವನ್ನು ಸಂಖ್ಯೆಯನುಸಾರವಾಗಿಯೇ ನಡೆಸಬೇಕಾಗುತ್ತದೆ. ಎಲ್ಲರೂ ಸಮಾವೇಶವಾಗಿದ್ದೀರಲ್ಲವೆ! ಕ್ಯೂ ಮಾತ್ರ ಎಲ್ಲಾ ಮಾತುಗಳಲ್ಲಿಯೂ ಆಗಿಯೇ ಆಗುತ್ತದೆ. ಆದರೂ ಸಹ ಈಗಲೂ ಬಹಳ-ಬಹಳ ಅದೃಷ್ಟವಂತರಾಗಿದ್ದೀರಿ ಏಕೆಂದರೆ ಪಾಂಡವ ಭವನ ಅಥವಾ ಯಾವ ಸ್ಥಾನಗಳಿವೆಯೋ, ಅದರೊಳಗೆಯೇ ಸಮಾವೇಶವಾಗಿ ಬಿಟ್ಟಿರಿ. ಹೊರಗಿನವರೆಗೂ ಕ್ಯೂ ಹೋಗಿಲ್ಲ ಅಲ್ಲವೆ! ವೃದ್ಧಿಯಾಗುತ್ತದೆ, ಕ್ಯೂ ಸಹ ನಿಲ್ಲುತ್ತದೆ. ಸದಾ ಪ್ರತೀ ಮಾತಿನಲ್ಲಿಯೂ ಖುಷಿ ಮೋಜಿನಲ್ಲಿರಿ. ಆದರೂ ತಂದೆಯ ಮನೆಯಲ್ಲಿ, ಹೃದಯದ ಆರಾಮವು ಮತ್ತೆಲ್ಲಿ ಸಿಗುತ್ತದೆ! ಆದ್ದರಿಂದ ಸದಾ ಪ್ರತೀ ಸಂದರ್ಭದಲ್ಲಿಯೂ ಸಂತುಷ್ಟವಾಗಿರಿ, ಸಂಗಮಯುಗದ ವರದಾನಿ ಭೂಮಿಯ ಮೂರು ಹೆಜ್ಜೆಯ ಪೃಥ್ವಿಯು ಸಂಗಮಯುಗದ ಮಹಲುಗಳಿಗಿಂತಲೂ ಶ್ರೇಷ್ಠವಾಗಿದೆ. ಕುಳಿತುಕೊಳ್ಳುವುದಕ್ಕಾಗಿ ಇಷ್ಟಂತು ಜಾಗ ಸಿಕ್ಕಿದೆ, ಇದೂ ಸಹ ಬಹಳ ಶ್ರೇಷ್ಠವಿದೆ. ಈ ದಿನವೂ ಸಹ ಮತ್ತೆ ನೆನಪು ಬರುತ್ತದೆ. ಈಗಾದರೂ ದೃಷ್ಟಿ ಮತ್ತು ಟೋಲಿಯಂತು ಸಿಗುತ್ತದೆ. ನಂತರದಲ್ಲಿ ದೃಷ್ಟಿ ಮತ್ತು ಟೋಲಿಯನ್ನು ಕೊಡಿಸಬೇಕಾಗುತ್ತದೆ ವೃದ್ಧಿಯಾಗುತ್ತಿದೆ, ಇದೂ ಸಹ ಖುಷಿಯ ಮಾತಲ್ಲವೆ. ಏನು ಸಿಗುತ್ತದೆ, ಹೇಗೆ ಸಿಗುತ್ತದೆಯೋ ಅದರಲ್ಲಿ ಖುಷಿ ಮತ್ತು ವೃದ್ಧಿ ಅರ್ಥಾತ್ ಕಲ್ಯಾಣವಿದೆ. ಒಳ್ಳೆಯದು - ಕರ್ನಾಟಕವು ವಿಶೇಷವಾಗಿ ಅಗಲಿ ಮರಳಿ ಸಿಕ್ಕಿರುವವರಾಗಿ ಬಿಟ್ಟರು. ಮಹಾರಾಷ್ಟ್ರವೂ ಸಹ ಸದಾ ಸಂಖ್ಯೆಯಲ್ಲಿ ಮಹಾನ್ ಆಗುತ್ತಿದೆ. ದೆಹಲಿಯೂ ರೇಸ್ ಮಾಡಿದೆ. ಭಲೇ ವೃದ್ಧಿಯನ್ನು ಪಡೆಯುತ್ತಿರಿ. ಯು.ಪಿ., ಸಹ ಯಾವುದರಲ್ಲಿಯೂ ಕಡಿಮೆಯಿಲ್ಲ. ಪ್ರತಿಯೊಂದು ಸ್ಥಾನದ ವಿಶೇಷತೆಯು ತನ್ನ-ತನ್ನದಾಗಿದೆ. ಅದನ್ನು ಮತ್ತೆ ತಿಳಿಸುತ್ತೇವೆ. ಬಾಪ್ದಾದಾರವರಿಗೂ ಸಾಕಾರ ಶರೀರದ ಆಧಾರವನ್ನು ತೆಗೆದುಕೊಂಡಿರುವ ಕಾರಣದಿಂದ ಸಮಯದ ಮಿತಿಯನ್ನಡಬೇಕಾಗುತ್ತದೆ. ಆದರೂ ಲೋನ್ ತೆಗೆದುಕೊಂಡಿರುವ ಶರೀರವಾಗಿದೆ ಅಲ್ಲವೆ. ನಮ್ಮದಂತು ಅಲ್ಲ. ಶರೀರದ ಜವಾಬ್ದಾರಿಯೂ ಸಹ ಬಾಪ್ದಾದಾರವರದಾಗಿ ಬಿಡುತ್ತದೆ. ಆದ್ದರಿಂದ ಬೇಹದ್ದಿನ ಮಾಲೀಕನೂ ಸಹ ಹದ್ದಿನಲ್ಲಿ ಬಂಧಿಸಲ್ಪಡುತ್ತಾರೆ. ಅವ್ಯಕ್ತ ವತನದಲ್ಲಿ ಬೇಹದ್ದ್ ಇದೆ. ಇಲ್ಲಂತು ಸಂಯಮ, ಸಮಯ ಮತ್ತು ಶರೀರದ ಶಕ್ತಿಯೆಲ್ಲವನ್ನೂ ನೋಡಬೇಕಾಗುತ್ತದೆ. ಬೇಹದ್ದಿನಲ್ಲಿ ಬನ್ನಿರಿ, ಮಿಲನವನ್ನಾಚರಿಸಿರಿ. ಅಲ್ಲಿ (ಶಾಂತಿಧಾಮ) ಯಾರೂ ಹೀಗೆ ಹೇಳುವುದಿಲ್ಲ- ಈಗ ಬನ್ನಿರಿ, ಈಗ ಬನ್ನಿರಿ, ಅಥವಾ ನಂಬರವಾರ್ ಬನ್ನಿರಿ. ತೆರೆದ ನಿಮಂತ್ರಣವಿದೆ ಅಥವಾ ಅಧಿಕಾರವಿದೆ. ಭಲೇ ಎರಡು ಗಂಟೆಗೇ ಬನ್ನಿರಿ, ಭಲೇ ನಾಲ್ಕು ಗಂಟೆಗಾದರೂ ಬನ್ನಿರಿ. ಒಳ್ಳೆಯದು.

ಸದಾ ಸರ್ವಶಕ್ತಿಶಾಲಿ ಶ್ರೇಷ್ಠಾತ್ಮರಿಗೆ, ಸದಾ ಜ್ಞಾನ ಸೂರ್ಯನ ಸಮೀಪ ಮತ್ತು ಸಮಾನ ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಿರುವ ವಿಶೇಷ ಆತ್ಮರಿಗೆ, ಸದಾ ಪ್ರತೀ ಕರ್ಮವನ್ನು ಮಾಡುವುದರಲ್ಲಿ "ಮೊದಲು ನಾನು" ಎನ್ನುವ ಉಮ್ಮಂಗ-ಉತ್ಸಾಹವನ್ನಿಟ್ಟುಕೊಳ್ಳುವ ಸಾಹಸವಂತ ಆತ್ಮರಿಗೆ, ಸದಾ ಸರ್ವಶಕ್ತಿಶಾಲಿ ಆತ್ಮರನ್ನಾಗಿ ಮಾಡುವಂತಹ ಸರ್ವ ಸಮೀಪ ಮಕ್ಕಳಿಗೆ ಜ್ಞಾನ ಸೂರ್ಯ, ಜ್ಞಾನ ಚಂದ್ರಮನ ನೆನಪು-ಪ್ರೀತಿ ಹಾಗೂ ನಮಸ್ತೆ.

ದಾದಿಯರೊಂದಿಗೆ:- ಬಾಪ್ದಾದಾರವರಿಗೆ ತಾವು ಮಕ್ಕಳ ಬಗ್ಗೆ ಹೆಮ್ಮೆಯಿದೆ, ಯಾವ ಮಾತಿನ ಹೆಮ್ಮೆಯಿದೆ? ಸದಾ ತಂದೆಯವರಿಗೆ ತನ್ನ ಸಮಾನವಿರುವ ಮಕ್ಕಳನ್ನು ನೋಡುತ್ತಾ ಹೆಮ್ಮೆಯಾಗುತ್ತದೆ. ಯಾವಾಗ ಮಕ್ಕಳು ತಂದೆಯವರಿಗಿಂತಲೂ ವಿಶೇಷವಾದ ಕಾರ್ಯವನ್ನು ಮಾಡಿ ತೋರಿಸುತ್ತಾರೆ, ಆಗ ತಂದೆಯವರಿಗೆ ಎಷ್ಟೊಂದು ಹೆಮ್ಮೆಯಾಗುತ್ತದೆ! ಹಗಲು-ರಾತ್ರಿ ತಂದೆಯ ನೆನಪು ಮತ್ತು ಸೇವೆಯ ಲಗನ್ನಿನಲ್ಲಿಯೇ ತೊಡಗಿದ್ದಾರೆ. ಆದರೆ ಮಹಾವೀರ ಮಕ್ಕಳ ವಿಶೇಷತೆಯು ಇದೇ ಆಗಿದೆ- ಮೊದಲ ಸ್ಥಾನವನ್ನು ನೆನಪಿಗೆ ಇಡುತ್ತಾರೆ, ನಂತರ ಸೇವೆಗೆ ಇಡುತ್ತಾರೆ. ಕುದುರೆ ಸವಾರ ಮತ್ತು ಕಾಲಾಳು- ಮೊದಲು ಸೇವೆ ನಂತರ ನೆನಪು ಇಟ್ಟುಕೊಳ್ಳುತ್ತಾರೆ. ಆದ್ದರಿಂದ ಅಂತರವಾಗಿ ಬಿಡುತ್ತದೆ. ಮೊದಲು ನೆನಪು ನಂತರ ಸೇವೆಯನ್ನು ಮಾಡುತ್ತೀರೆಂದರೆ ಸಫಲತೆಯಾಗುತ್ತದೆ. ಮೊದಲು ಸೇವೆಯನ್ನಿಡುವುದರಿಂದ, ಸೇವೆಯಲ್ಲಿ ಏನೆಲ್ಲಾ ಒಳ್ಳೆಯದು-ಕೆಟ್ಟದ್ದಾಗುತ್ತದೆ, ಅದರ ರೂಪದಲ್ಲಿ ಬಂದು ಬಿಡುತ್ತಾರೆ ಮೊದಲು ನೆನಪನ್ನಿಡುವುದರಿಂದ ಸಹಜವಾಗಿಯೇ ಭಿನ್ನವಾಗಿರಲು ಸಾಧ್ಯವಾಗುವುದು. ಆದ್ದರಿಂದ ಇಂತಹ ಸಮಾನ ಮಕ್ಕಳ ಬಗ್ಗೆ ತಂದೆಯವರಿಗೂ ಹೆಮ್ಮೆಯಿದೆ! ಇಡೀ ವಿಶ್ವದಲ್ಲಿ ಇಂತಹ ಸಮಾನ ಮಕ್ಕಳು ಯಾರಿಗಿರುತ್ತಾರೆ? ಒಂದೊಂದು ಮಗುವಿನ ವಿಶೇಷತೆಯನ್ನು ವರ್ಣನೆ ಮಾಡುತ್ತಿದ್ದರೆ ಭಾಗವತವಾಗಿ ಬಿಡುತ್ತದೆ. ಮಧುಬನದಲ್ಲಿ ಯಾವಾಗ ಜ್ಞಾನ ಸೂರ್ಯ ಮತ್ತು ನಕ್ಷತ್ರಗಳು ಸಂಘಟಿತವಾಗಿ ಹೊಳೆಯುತ್ತಿರುತ್ತದೆಯೆಂದರೆ, ಮಧುಬನದ ಆಕಾಶದ ಶೋಭೆಯು ಎಷ್ಟೊಂದು ಶ್ರೇಷ್ಠವಾಗಿ ಬಿಡುತ್ತದೆ! ಜ್ಞಾನ ಸೂರ್ಯನ ಜೊತೆಗೆ ನಕ್ಷತ್ರಗಳೂ ಸಹ ಖಂಡಿತವಾಗಿ ಇರಬೇಕು.

ಯುಗಲ್ ಗ್ರೂಪ್ನೊಂದಿಗೆ ಬಾಪ್ದಾದಾರವರ ವಾರ್ತಾಲಾಪ:-

1. ಒಂದು ಮತದ ಪಟ್ಟೆಯಲ್ಲಿ ನಡೆಯುವವರಂತು ತೀವ್ರ ಗತಿಯಲ್ಲಿರುವವರಾಗಿರುತ್ತಾರೆ ಅಲ್ಲವೆ! ಇಬ್ಬರ ಮತವು ಒಂದು, ಈ ಒಂದು ಮತವೇ ಚಕ್ರಗಳಾಗಿದೆ. ಒಂದು ಮತದ ಚಕ್ರದ ಆಧಾರದ ಮೇಲೆ ನಡೆಯುವವರು ಸದಾ ತೀವ್ರಗತಿಯಿಂದ ನಡೆಯುತ್ತಾರೆ. ಎರಡೂ ಚಕ್ರಗಳು ಶ್ರೇಷ್ಠವಾಗಿರಬೇಕು. ಒಂದು ಸಡಿಲ, ಒಂದು ತೀವ್ರವುಳ್ಳದ್ದಂತು ಇರುವುದಿಲ್ಲ ಅಲ್ಲವೇ? ಎರಡೂ ಚಕ್ರಗಳು ಏಕರಸ. ತೀವ್ರ ಪುರುಷಾರ್ಥದಲ್ಲಿ ಪಾಂಡವರು ನಂಬರವನ್ ಇದ್ದಾರೆಯೋ ಅಥವಾ ಶಕ್ತಿಯರೇ? ಒಬ್ಬರಿಗೊಬ್ಬರು ಮುಂದುವರೆಸುವುದು ಅರ್ಥಾತ್ ಸ್ವಯಂ ಮುಂದುವರೆಯುವುದಾಗಿದೆ. ಹೀಗಾಗಬಾರದು- ಮುಂದುವರೆಸುತ್ತಾ ಸ್ವಯಂ ಹಿಂದೆ ಹೋದಿರಿ. ಮುಂದುವರೆಸುವುದೇ ಸ್ವಯಂ ಮುಂದುವರೆಯುವುದು. ಎಲ್ಲರೂ ಭಾಗ್ಯಶಾಲಿ ಆತ್ಮರಾಗಿದ್ದೀರಲ್ಲವೇ? ದೆಹಲಿ ಮತ್ತು ಬಾಂಬೆ ನಿವಾಸಿಗಳು ವಿಶೇಷ ಅದೃಷ್ಟವಂತರಾಗಿದ್ದಾರೆ, ಏಕೆಂದರೆ ಮಾರ್ಗದಲ್ಲಿ ನಡೆಯುತ್ತಿದ್ದರೂ ಬಹಳಷ್ಟು ಖಜಾನೆಗಳು ಸಿಗುತ್ತದೆ. ವಿಶೇಷ ಆತ್ಮರ ಸಂಗ, ಸಹಯೋಗ, ಶಿಕ್ಷಣ ಎಲ್ಲವೂ ಪ್ರಾಪ್ತವಾಗುತ್ತದೆ. ಇದೂ ಸಹ ವರದಾನವಿದೆ, ಅದೇನೆಂದರೆ ನಿಮಂತ್ರಣವಿಲ್ಲದೆಯೂ ಸಿಗುತ್ತಿರುತ್ತದೆ. ಅನ್ಯರು ಎಷ್ಟೊಂದು ಪರಿಶ್ರಮ ಪಡುತ್ತಾರೆ. ಇಡೀ ಬ್ರಾಹ್ಮಣ ಜೀವನದಲ್ಲಿ ಅಥವಾ ಸೇವೆಯ ಜೀವನದಲ್ಲಿ ಇಂತಹ ಶ್ರೇಷ್ಠಾತ್ಮರು ಎರಡು-ಮೂರು ಬಾರಿ ಕಷ್ಟ ಪಟ್ಟು ಎಲ್ಲಿಯೇ ತಲುಪುತ್ತಾರೆ ಆದರೆ ತಾವು ಕರೆಯಿರಿ ಅಥವಾ ಕರೆಯಿದಿರಿ, ತಮ್ಮ ಬಳಿ ಸಹಜವಾಗಿಯೇ ತಲುಪಿ ಬಿಡುತ್ತಾರೆ. ಅಂದಮೇಲೆ ಸಂಗದ ರಂಗೇನು ಪ್ರಸಿದ್ಧವಾಗಿದೆ, ವಿಶೇಷ ಆತ್ಮರ ಸಂಗವೂ ಸಹ ಉಮ್ಮಂಗವನ್ನು ಕೊಡುತ್ತದೆ. ಎಷ್ಟು ಸಹಜವಾಗಿ ಭಾಗ್ಯದ ಪ್ರಾಪ್ತಿ ಮಾಡಿಕೊಳ್ಳುವ ಭಾಗ್ಯಶಾಲಿ ಆತ್ಮರಾಗಿದ್ದೀರಿ. ಸದಾ ಹಾಡನ್ನಾಡುತ್ತಾ ಇರಿ `ವಾಹ್ ನನ್ನ ಶ್ರೇಷ್ಠ ಭಾಗ್ಯವೇ'. ಪ್ರಾಪ್ತಿಯೇನಾಗುತ್ತದೆಯೋ ಅದರ ರಿಟರ್ನ್ ಆಗಿದೆ- ಸದಾ ಹಾರುವ ಕಲೆ. ನಿಲ್ಲುವ ಮತ್ತು ನಡೆಯುವವರಲ್ಲ, ಸದಾ ಹಾರುವವರು.

2. ಸದಾ ತಮ್ಮನ್ನು ತಂದೆಯ ಛತ್ರಛಾಯೆಯಲ್ಲಿರುವಂತೆ ಅನುಭವ ಮಾಡುತ್ತೀರಾ? ತಂದೆಯ ನೆನಪೇ `ಛತ್ರಛಾಯೆಯಾಗಿದೆ'. ಯಾರು ಛತ್ರಛಾಯೆಯಲ್ಲಿರುತ್ತಾರೆ, ಅವರು ಸದಾ ಸುರಕ್ಷಿತವಾಗಿರುತ್ತಾರೆ. ಕೆಲವೊಮ್ಮೆ ಮಳೆ ಅಥವಾ ಬಿರುಗಾಳಿ ಬಂದಿತೆಂದರೆ ಛತ್ರಛಾಯೆಯೊಳಗೆ ಹೊರಟು ಹೋಗುತ್ತಾರೆ. ತಂದೆಯ ನೆನಪು ಇಂತಹ `ಛತ್ರಛಾಯೆ' ಆಗಿದೆ. ಛತ್ರಛಾಯೆಯಲ್ಲಿರುವವರು ಸಹಜವಾಗಿಯೇ ಮಾಯಾಜೀತರಿದ್ದಾರೆ. ನೆನಪನ್ನು ಮರೆತಿರಿ ಅರ್ಥಾತ್ ಛತ್ರಛಾಯೆಯಿಂದ ಹೊರಬಂದಿರಿ. ತಂದೆಯ ನೆನಪು ಸದಾ ಜೊತೆಯಿರಲಿ. ಯಾರು ಇಂತಹ ಛತ್ರಛಾಯೆಯಲ್ಲಿರುವವರಾಗಿದ್ದಾರೆ, ಅವರಿಗೆ ತಂದೆಯ ಸಹಯೋಗವು ಸದಾ ಸಿಗುತ್ತಿರುತ್ತದೆ. ಪ್ರತಿಯೊಂದು ಶಕ್ತಿಯ ಪ್ರಾಪ್ತಿಯ ಸಹಯೋಗವು ಸದಾ ಸಿಗುತ್ತಿರುತ್ತದೆ. ಕೆಲವೊಮ್ಮೆಯೂ ಸಹ ಬಲಹೀನರಾಗಿ ಮಾಯೆಯಿಂದ ಸೋಲನ್ನನುಭವಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಮಾಯೆಯು ನೆನಪನ್ನು ಮರೆಸಿ ಬಿಡುವುದಿಲ್ಲವೇ? 63 ಜನ್ಮಗಳಲ್ಲಿ ಮರೆಯುತ್ತಿದ್ದಿರಿ, ಸಂಗಮಯುಗವಾಗಿದೆ- ನೆನಪಿನಲ್ಲಿರುವ ಯುಗ. ಈ ಸಮಯವನ್ನು ಮರೆಯಬಾರದು. ಮರೆಯುವುದರಿಂದ ಪೆಟ್ಟು ತಿಂದಿರಿ, ದುಃಖವು ಸಿಕ್ಕಿತು. ಈಗ ಮತ್ತೆ ಹೇಗೆ ಮರೆಯುತ್ತೀರಿ! ಈಗ ಸದಾ ನೆನಪಿನಲ್ಲಿರುವವರು. ವಿದಾಯಿಯ ಸಮಯದಲ್ಲಿ - ಸಂಗಮಯುಗವಿರುವುದೇ ಮಿಲನದ ಯುಗ. ಎಷ್ಟು ಮಿಲನವಾಗುತ್ತೀರಿ ಅಷ್ಟು ಇನ್ನೂ ಮಿಲನವಾಗುವ ಆಶೆ ಹೆಚ್ಚುತ್ತಿರುತ್ತದೆ. ಇನ್ನೂ ಮಿಲನವಾಗುವ ಶುಭ ಆಶೆಯಿರಬೇಕು, ಏಕೆಂದರೆ ಈ ಮಿಲನದ ಶುಭ ಆಶೆಯೇ ಮಾಯಾಜೀತರನ್ನಾಗಿ ಮಾಡಿ ಬಿಡುತ್ತದೆ. ಈ ಮಿಲನದ ಶುಭ ಸಂಕಲ್ಪವು ಸದಾ ತಂದೆಯ ನೆನಪನ್ನು ಸ್ವತಹವಾಗಿಯೇ ತರಿಸುತ್ತದೆ. ಇದಂತು ಆಗಲೇಬೇಕು. ಇದು ಸಂಪೂರ್ಣವಾಗಿ ಬಿಡುತ್ತದೆಯೆಂದರೆ ಸಂಗಮವೂ ಪೂರ್ಣವಾಗಿ ಬಿಡುತ್ತದೆ. ಮತ್ತೆಲ್ಲಾ ಇಚ್ಛೆಗಳು ಪೂರ್ಣವಾದವು ಆದರೆ ನೆನಪಿನಲ್ಲಿ ಸದಾ ಸಮಾವೇಶವಾಗಿರಬೇಕು- ಈ ಶುಭ ಇಚ್ಛೆಯು ಮುಂದುವರೆಸುತ್ತದೆ, ಹೀಗಿದ್ದೀರಲ್ಲವೆ! ಅಂದಮೇಲೆ ಸದಾ ಮಿಲನದ ಮೇಳವಾಗುತ್ತಲೇ ಇರುತ್ತದೆ. ಭಲೇ ವ್ಯಕ್ತದ ಮೂಲಕ, ಭಲೆ ಅವ್ಯಕ್ತನ ಮೂಲಕ ಆಗುತ್ತದೆ. ಸದಾ ಜೊತೆಯೇ ಇರುತ್ತೀರಿ, ಅಂದಾಗ ಮತ್ತೆ ಮಿಲನವಾಗುವ ಅವಶ್ಯಕತೆಯೇನಿದೆ! ಪ್ರತೀ ಮಿಲನದ್ದೂ ತನ್ನ-ತನ್ನ ಸ್ವರೂಪ ಮತ್ತು ಪ್ರಾಪ್ತಿಯಿದೆ. ಅವ್ಯಕ್ತ ಮಿಲನದ ಸ್ವರೂಪ ಮತ್ತು ಪ್ರಾಪ್ತಿಯು ತನ್ನದೇ ಆಗಿದೆ, ಸಾಕಾರ ಮಿಲನದ್ದು ತನ್ನದು. ಮಿಲನವಂತು ಚೆನ್ನಾಗಿಯೇ ಇದೆ. ಒಳ್ಳೆಯದು! ಸದಾ ಶುಭ ಮತ್ತು ಶ್ರೇಷ್ಠ ಪ್ರಭಾತವಿರುತ್ತದೆ. ಅವರಂತು ಕೇವಲ ಗುಡ್ಮಾರ್ನಿಂಗ್ ಮಾಡುತ್ತಾರೆ ಆದರೆ ಇಲ್ಲಿ ಶುಭವೇ ಇದೆ ಮತ್ತು ಶ್ರೇಷ್ಠವೇ ಇದೆ. ಪ್ರತೀ ಸೆಕೆಂಡ್ ಶುಭ ಮತ್ತು ಶ್ರೇಷ್ಠವಿದೆ ಆದ್ದರಿಂದ ಸೆಕೆಂಡ್-ಸೆಕೆಂಡಿನ ಶುಭಾಶಯಗಳಿದೆ. ಒಳ್ಳೆಯದು! ಓಂ ಶಾಂತಿ.

ವರದಾನ:
ತಂದೆಯ ಜೊತೆಯ ಮೂಲಕ ಪವಿತ್ರತೆಯೆಂಬ ಸ್ವಧರ್ಮವನ್ನು ಸಹಜವಾಗಿ ಪಾಲನೆ ಮಾಡುವಂತಹ ಮಾಸ್ಟರ್ ಸರ್ವಶಕ್ತಿವಂತ ಭವ.
ಆತ್ಮದ ಸ್ವಧರ್ಮವು ಪವಿತ್ರತೆಯಾಗಿದೆ, ಅಪವಿತ್ರತೆಯು ಪರಧರ್ಮವಾಗಿದೆ. ಯಾವಾಗ ಸ್ವಧರ್ಮದ ನಿಶ್ಚಯವಾಯಿತೆಂದರೆ ಪರಧರ್ಮವು ಅಲುಗಾಡಿಸಲು ಸಾಧ್ಯವಾಗುವುದಿಲ್ಲ. ತಂದೆಯು ಯಾರಾಗಿದ್ದಾರೆ, ಹೇಗಿದ್ದಾರೆ, ಅವರನ್ನು ಒಂದು ವೇಳೆ ಯಥಾರ್ಥವಾಗಿ ಗುರುತಿಸುತ್ತಾ, ಜೊತೆಯಿಟ್ಟುಕೊಳ್ಳುತ್ತೀರೆಂದರೆ ಪವಿತ್ರತೆಯೆಂಬ ಸ್ವಧರ್ಮವನ್ನು ಧಾರಣೆ ಮಾಡಿಕೊಳ್ಳುವುದು ಬಹಳ ಸಹಜವಾಗುತ್ತದೆ, ಏಕೆಂದರೆ ಜೊತೆಗಾರನು ಸರ್ವ ಶಕ್ತಿವಂತನಿದ್ದಾರೆ. ಸರ್ವ ಶಕ್ತಿವಂತನ ಮಕ್ಕಳು ಮಾಸ್ಟರ್ ಸರ್ವಶಕ್ತಿವಂತನ ಮುಂದೆ ಅಪವಿತ್ರತೆಯು ಬರಲು ಸಾಧ್ಯವಿಲ್ಲ. ಒಂದು ವೇಳೆ ಸಂಕಲ್ಪದಲ್ಲಿ ಮಾಯೆಯು ಬರುತ್ತದೆಯೆಂದರೆ, ಖಂಡಿತವಾಗಿಯೂ ಯಾವುದಾದರೂ ಗೇಟ್ ತೆರೆದಿದೆ ಅಥವಾ ನಿಶ್ಚಯದಲ್ಲಿ ಕೊರತೆಯಿದೆ.

ಸ್ಲೋಗನ್:
ತ್ರಿಕಾಲದರ್ಶಿಯು ಯಾವುದೇ ಮಾತನ್ನು ಒಂದು ಕಾಲದ ದೃಷ್ಟಿಯಿಂದ ನೋಡುವುದಿಲ್ಲ, ಪ್ರತೀ ಮಾತಿನಲ್ಲಿ ಕಲ್ಯಾಣವೆಂದು ತಿಳಿಯುತ್ತಾರೆ.