ಪ್ರಾತಃಮುರುಳಿ ಓಂ ಶಾಂತಿ "ಬಾಪ್‌ದಾದಾ" ಮಧುಬನ


“ಮಧುರ ಮಕ್ಕಳೇ - ನೀವು ಮಕ್ಕಳಿಗಾಗಿ ಹೊಸ ರಾಜ್ಯವನ್ನು ಸ್ಥಾಪನೆ ಮಾಡಲು ತಂದೆಯು ದೂರದೇಶದಿಂದ ಬಂದಿದ್ದಾರೆ, ನೀವೀಗ ಸ್ವರ್ಗಕ್ಕೆ ಯೋಗ್ಯರಾಗುತ್ತಿದ್ದೀರಿ"

ಪ್ರಶ್ನೆ :

ಯಾವ ಮಕ್ಕಳಿಗೆ ತಂದೆಯಲ್ಲಿ ಅಟೂಟ ನಿಶ್ಚಯವಿದೆಯೋ ಅವರ ಚಿಹ್ನೆಗಳೇನು?

ಉತ್ತರ:

ತಂದೆಯಿಂದ ಯಾವುದೇ ಆಜ್ಞೆ ಸಿಗಲಿ ಅವರು ಕಣ್ಣು ಮುಚ್ಚಿಕೊಂಡು ತಂದೆಯ ಶ್ರೀಮತದಂತೆ ನಡೆಯುತ್ತಿರುತ್ತಾರೆ. ಇದರಲ್ಲಿ ನಷ್ಟವಾಗುವುದೇನೋ ಎಂಬ ಸಂಕಲ್ಪವೂ ಸಹ ಬರುವುದಿಲ್ಲ ಏಕೆಂದರೆ ಇಂತಹ ನಿಶ್ಚಯಬುದ್ಧಿ ಮಕ್ಕಳಿಗೆ ಸ್ವಯಂ ತಂದೆಯೇ ಜವಾಬ್ದಾರನಾಗಿದ್ದಾರೆ. ಅವರಿಗೆ ನಿಶ್ಚಯದ ಬಲ ಸಿಗುತ್ತದೆ, ಸ್ಥಿತಿಯು ಅಡೋಲ ಮತ್ತು ಅಚಲವಾಗಿಬಿಡುತ್ತದೆ.

ಗೀತ :

ನೀವೇ ಮಾತಾ ಪಿತಾ ಆಗಿದ್ದೀರಿ...........

ಓಂಶಾಂತಿ

ಈಗ ಯಾರ ಮಹಿಮೆಯನ್ನು ಕೇಳಿದಿರಿ? ಯಾರನ್ನು ನೀವು ಮಕ್ಕಳ ವಿನಃ ಪ್ರಪಂಚದಲ್ಲಿ ಮತ್ತ್ಯಾರೂ ತಿಳಿದುಕೊಂಡಿಲ್ಲ. ಇದು ಶ್ರೇಷ್ಠಾತಿಶ್ರೇಷ್ಠ ತಂದೆಯ ಮಹಿಮೆಯಾಗಿದೆ. ಉಳಿದಂತೆ ಮತ್ತ್ಯಾರದೇ ಮಹಿಮೆ ಮಾಡಿದರೂ ಸಹ ಅದು ವ್ಯರ್ಥವಾಗಿ ಬಿಡುತ್ತದೆ. ಶ್ರೇಷ್ಠಾತಿಶ್ರೇಷ್ಠನು ಒಬ್ಬರೇ ತಂದೆಯಾಗಿದ್ದಾರೆ ಆದರೆ ತಂದೆಯ ಪರಿಚಯವನ್ನು ಯಾರು ಕೊಡುವರು? ಸ್ವಯಂ ತಂದೆಯೇ ಬಂದು ತನ್ನ ಮತ್ತು ಆತ್ಮದ ಪರಿಚಯವನ್ನು ಕೊಡುತ್ತಾರೆ. ಯಾವುದೇ ಮನುಷ್ಯರಿಗೆ ಆತ್ಮನ ಪರಿಚಯವೂ ಇಲ್ಲ. ಭಲೆ ಮಹಾನ್ ಆತ್ಮ, ಜೀವಾತ್ಮನೆಂದು ಹೇಳುತ್ತಾರೆ. ಶರೀರವನ್ನು ಬಿಡುವಾಗ ಆತ್ಮ ಹೊರಟು ಹೋಗುತ್ತದೆ ಎಂದು ಹೇಳುತ್ತಾರೆ. ಶರೀರವು ಜಡವಾಗಿಬಿಡುತ್ತದೆ, ಆತ್ಮವು ಅವಿನಾಶಿಯಾಗಿದೆ, ಅದೆಂದೂ ಸಮಾಪ್ತಿ ಆಗುವುದಿಲ್ಲ. ಆತ್ಮವು ಯಾವುದು ನಕ್ಷತ್ರ ಮಾದರಿಯಾಗಿದೆಯೊ ಅದು ಅತಿಸೂಕ್ಷ್ಮವಾಗಿದೆ. ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಎಲ್ಲಾ ಕರ್ತವ್ಯಗಳನ್ನು ಆತ್ಮವೇ ಮಾಡುತ್ತದೆ ಆದರೆ ಪದೇ-ಪದೇ ದೇಹಾಭಿಮಾನದಲ್ಲಿ ಬರುವಕಾರಣ ನಾನು ಇಂತಹವನಾಗಿದ್ದೇನೆ, ನಾನು ಇದನ್ನು ಮಾಡುತ್ತೇನೆಂದು ಹೇಳುತ್ತಾರೆ. ವಾಸ್ತವದಲ್ಲಿ ಮಾಡುವುದೆಲ್ಲವೂ ಆತ್ಮವೇ ಆಗಿದೆ. ಶರೀರವಂತೂ ಇದಕ್ಕೆ ಇಂದ್ರಿಯವಾಗಿದೆ. ಇದನ್ನು ಸಾಧು-ಸಂತರೂ ಸಹ ತಿಳಿದುಕೊಂಡಿದ್ದಾರೆ - ಆತ್ಮವು ಬಹಳ ಸೂಕ್ಷ್ಮವಾಗಿದೆ, ಅದು ಭೃಕುಟಿಯ ಮಧ್ಯದಲ್ಲಿರುತ್ತದೆ ಆದರೆ ಅವರಿಗೆ ಆತ್ಮದಲ್ಲಿ ಈ ಪಾತ್ರವನ್ನು ಅಭಿನಯಿಸುವ ಸಂಸ್ಕಾರ ಇದೆಯೆಂಬ ಜ್ಞಾನವಿಲ್ಲ. ಆತ್ಮದಲ್ಲಿ ಸಂಸ್ಕಾರವಿರುವುದಿಲ್ಲ, ಆತ್ಮವು ನಿರ್ಲೇಪವಾಗಿದೆಯೆಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಸಂಸ್ಕಾರಗಳ ಅನುಸಾರ ಜನ್ಮ ಸಿಗುತ್ತದೆ ಎಂದು ಹೇಳುತ್ತಾರೆ. ಬಹಳಷ್ಟು ಮತ-ಭೇದವಿದೆ. ಯಾವ ಆತ್ಮರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ, ನಿಮಗೆ ತಿಳಿದಿದೆ - ಸೂರ್ಯವಂಶಿಯರೇ 84 ಜನ್ಮಗಳ ಚಕ್ರವನ್ನು ಸುತ್ತಬೇಕಾಗುತ್ತದೆ. ಆತ್ಮವೇ 84 ಜನ್ಮಗಳ ಚಕ್ರವನ್ನು ಸುತ್ತಿ ಪತಿತನಾಗುತ್ತದೆ ಅದನ್ನು ಈಗ ಪಾವನವನ್ನಾಗಿ ಯಾರು ಮಾಡುವರು? ಪತಿತ-ಪಾವನ, ಶ್ರೇಷ್ಠಾತಿಶ್ರೇಷ್ಠ ತಂದೆಯು ಒಬ್ಬರೇ ಆಗಿದ್ದಾರೆ, ಅವರ ಮಹಿಮೆಯು ಎಲ್ಲರಿಗಿಂತ ಶ್ರೇಷ್ಠವಾಗಿದೆ. ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಕೊನೆಯಲ್ಲಿ ಬರುವವರು 84 ಜನ್ಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಿಗೆ ಬರುವುದಿಲ್ಲ. ಯಾರು ಮೊಟ್ಟಮೊದಲು ಸತ್ಯಯುಗದಲ್ಲಿ ಬರುವರೋ, ಸೂರ್ಯವಂಶಿ ರಾಜರು ಮತ್ತು ಪ್ರಜೆಗಳು - ಇವರದೇ 84 ಜನ್ಮಗಳಿರುತ್ತವೆ ನಂತರ ಮನುಷ್ಯರದು ಬಹಳ ವೃದ್ಧಿಯಾಗುತ್ತದೆಯಲ್ಲವೆ. ಕೆಲವರದು 83, ಕೆಲವರದು 80 ಜನ್ಮಗಳಿರುತ್ತವೆ. ಸತ್ಯಯುಗದಲ್ಲಿ ಪೂರ್ಣ 150 ವರ್ಷ ಆಯಸ್ಸಿರುತ್ತದೆ. ಯಾರೂ ಬೇಗನೆ ಮರಣಹೊಂದುವುದಿಲ್ಲ, ಈ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ಈಗ ಯಾರೂ ಪರಮಪಿತ ಪರಮಾತ್ಮನನ್ನು ಅರಿತುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಹೇಗೆ ನೀವಾತ್ಮರಿದ್ದಾರೋ ಹಾಗೆಯೇ ನಾನು ಇದ್ದೇನೆ, ಕೇವಲ ನೀವು ಜನನ-ಮರಣದಲ್ಲಿ ಬರುತ್ತೀರಿ, ನಾನು ಬರುವುದಿಲ್ಲ. ಯಾವಾಗ ಪತಿತರಾಗುವರೋ ಆಗ ನನ್ನನ್ನು ಕರೆಯುತ್ತಾರೆ. ಯಾವಾಗ ಬಹಳ ದುಃಖಿಯಾಗಿಬಿಡುವರೋ ಆಗ ಕರೆಯುತ್ತಾರೆ. ಈ ಸಮಯದಲ್ಲಿ ನೀವು ಮಕ್ಕಳಿಗೆ ಶಿವತಂದೆಯು ಓದಿಸುತ್ತಿದ್ದಾರೆ.

ಪರಮಾತ್ಮನು ಬರುತ್ತಾರೆಂಬುದನ್ನು ಹೇಗೆ ಒಪ್ಪುವುದೆಂದು ಕೆಲವರು ಕೇಳುತ್ತಾರೆ. ಆಗ ಅವರಿಗೆ ತಿಳಿಸಿ - ಹೇ ಪತಿತ-ಪಾವನ ಬನ್ನಿ ಎಂದು ಎಲ್ಲರೂ ಕರೆಯುತ್ತಾರೆ. ಅವರು ನಿರಾಕಾರನಾಗಿದ್ದಾರೆ. ಅವರಿಗೆ ತಮ್ಮದೇ ಆದ ಶರೀರವಿಲ್ಲ ಅಂದಮೇಲೆ ಪತಿತ ಪ್ರಪಂಚದಲ್ಲಿಯೇ ಬರಬೇಕಾಗಿದೆ. ಪಾವನ ಪ್ರಪಂಚದಲ್ಲಂತೂ ಬರುವುದಿಲ್ಲ. ಇದನ್ನೂ ಸಹ ತಿಳಿಸಬೇಕಾಗಿದೆ-ಪರಮಾತ್ಮನು ಹೇಗೆ ಆತ್ಮದಂತೆ ಇಷ್ಟು ಚಿಕ್ಕಬಿಂದುವಾಗಿದ್ದಾರೆ ಆದರೆ ಅವರು ಮನುಷ್ಯ ಸೃಷ್ಟಿಯ ಬೀಜರೂಪ, ಜ್ಞಾನಪೂರ್ಣನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನೀವು ನನ್ನನ್ನು ಪರಮಪಿತ ಪರಮಾತ್ಮನೆಂದು ಹೇಳುತ್ತೀರಿ. ಕರೆಯುತ್ತೀರೆಂದರೆ ಅವಶ್ಯವಾಗಿ ಬರಬೇಕಲ್ಲವೆ. ದೂರದೇಶದಲ್ಲಿ ಇರುವವರು ಪರದೇಶದಲ್ಲಿ ಬಂದರೆಂದು ಗಾಯನವೂ ಇದೆ. ಈಗ ನಾವು ಪರದೇಶ ಅರ್ಥಾತ್ ರಾವಣನ ದೇಶದಲ್ಲಿ ಬಂದಿದ್ದೇವೆಂದು ತಂದೆಯ ಮೂಲಕ ಈಗ ಅರ್ಥವಾಗಿದೆ. ಸತ್ಯ-ತ್ರೇತಾಯುಗದಲ್ಲಿ ನಾವು ಈಶ್ವರೀಯ ದೇಶ ಅರ್ಥಾತ್ ನಮ್ಮ ದೇಶದಲ್ಲಿದ್ದೆವು ನಂತರ ದ್ವಾಪರದಿಂದ ಹಿಡಿದು ನಾವು ಪರದೇಶ, ಪರರಾಜ್ಯದಲ್ಲಿ ಬಂದುಬಿಡುತ್ತೇವೆ, ವಾಮಮಾರ್ಗದಲ್ಲಿ ಬರುತ್ತೇವೆ ನಂತರ ಭಕ್ತಿ ಆರಂಭವಾಗುತ್ತದೆ. ಮೊಟ್ಟಮೊದಲು ಶಿವತಂದೆಯ ಭಕ್ತಿ ಮಾಡತೊಡಗುತ್ತಾರೆ, ಅವರು ಶಿವನ ಇಷ್ಟು ದೊಡ್ಡಲಿಂಗವನ್ನು ಮಾಡಿಸುತ್ತಾರೆ ಆದರೆ ತಂದೆಯು ಇಷ್ಟು ದೊಡ್ಡಗಾತ್ರದಲ್ಲಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ಆತ್ಮ ಪರಮಾತ್ಮನಲ್ಲಿ ಏನು ಅಂತರವಿದೆ? ಅವರು ಜ್ಞಾನಪೂರ್ಣ, ಸದಾ ಪಾವನ, ಸುಖದ ಸಾಗರ, ಆನಂದ ಸಾಗರನಾಗಿದ್ದಾರೆ, ಇದು ಪರಮಾತ್ಮನ ಮಹಿಮೆಯಲ್ಲವೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಆ ಪರಮಪಿತನು ಕಲ್ಪ-ಕಲ್ಪವೂ ಬರುತ್ತಾರೆ. ದೂರದೇಶದ ಯಾತ್ರಿಕನನ್ನು ಕರೆಯುತ್ತಾರೆ, ಅವರ ಮಹಿಮೆ ಹಾಡುತ್ತಾರೆ. ಬ್ರಹ್ಮಾ-ಸರಸ್ವತಿ ಯನ್ನಂತೂ ಕರೆಯುವುದಿಲ್ಲ, ನಿರಾಕಾರ ಪರಮಾತ್ಮನನ್ನೇ ಕರೆಯುತ್ತಾರೆ - ದೂರದೇಶದಲ್ಲಿ ಇರುವ ತಂದೆಯೇ ಪರದೇಶದಲ್ಲಿ ಬನ್ನಿ ಏಕೆಂದರೆ ನಾವೆಲ್ಲರೂ ಪತಿತರಾಗಿಬಿಟ್ಟಿದ್ದೇವೆಂದು ಆತ್ಮವು ಕರೆಯುತ್ತದೆ. ಯಾವಾಗ ರಾವಣರಾಜ್ಯವು ಸಮಾಪ್ತಿ ಆಗಬೇಕಾಗಿದೆಯೋ ಆಗಲೇ ನಾನು ಬರುತ್ತೇನೆ. ನಾನು ಸಂಗಮಯುಗದಲ್ಲಿ ಬರುತ್ತೇನೆ, ಇದು ಯಾರಿಗೂ ತಿಳಿದಿಲ್ಲ. ಅವರು ಪರಮ ಆತ್ಮ, ಬಿಂದುವಾಗಿದ್ದಾರೆಂದು ಹೇಳುತ್ತಾರೆ. ಇತ್ತೀಚೆಗೆ ಮನುಷ್ಯರು ಆತ್ಮವೇ ಪರಮಾತ್ಮ, ಪರಮಾತ್ಮನೇ ಆತ್ಮವೆಂದು ಹೇಳಿಬಿಡುತ್ತಾರೆ ಆದರೆ ಆತ್ಮವೇ ಪರಮಾತ್ಮನಾಗಲು ಸಾಧ್ಯವಿಲ್ಲ. ಆತ್ಮ-ಪರಮಾತ್ಮ ಇಬ್ಬರೂ ಬೇರೆ-ಬೇರೆಯಾಗಿದ್ದಾರೆ. ಇಬ್ಬರ ರೂಪವೂ ಒಂದೇ ಆಗಿದೆ ಆದರೆ ಆತ್ಮವು ಪತಿತನಾಗುತ್ತದೆ, 84 ಜನ್ಮಗಳ ಪಾತ್ರವನ್ನು ಅಭಿನಯಿಸಬೇಕಾಗುತ್ತದೆ. ಪರಮಾತ್ಮನು ಜನನ-ಮರಣ ರಹಿತನಾಗಿದ್ದಾರೆ. ಒಂದುವೇಳೆ ಆತ್ಮವೇ ಪರಮಾತ್ಮನೆಂದು ಹೇಳುವುದಾದರೆ ಸತೋಪ್ರಧಾನ ಪರಮಾತ್ಮನು ತಮೋಪ್ರಧಾನತೆಯಲ್ಲಿ ಬರುವರೇ! ಇದು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಸರ್ವಆತ್ಮರ ಸೇವೆ ಮಾಡಲು ಬರುತ್ತೇನೆ, ನನ್ನ ಜನ್ಮವೆಂದೂ ಹೇಳಲು ಆಗುವುದಿಲ್ಲ. ನಾನು ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುವುದಕ್ಕಾಗಿಯೇ ಬರುತ್ತೇನೆ. ಪರದೇಶದಲ್ಲಿ ತಮ್ಮ ಸ್ವರ್ಗಸ್ಥಾಪನೆ ಮಾಡಲು ತಂದೆಯು ಬಂದಿದ್ದಾರೆ. ತಂದೆಯೇ ಬಂದು ನಮ್ಮನ್ನು ಸ್ವರ್ಗಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ. ತಂದೆಯು ಇದನ್ನೂ ತಿಳಿಸಿದ್ದಾರೆ- ಎಲ್ಲ ಆತ್ಮರ ಪಾತ್ರವು ಬೇರೆ-ಬೇರೆಯಾಗಿದೆ, ಪರಮಾತ್ಮನು ಜನನ-ಮರಣ ರಹಿತನಾಗಿದ್ದಾರೆ, ಅವರು ಅವಶ್ಯವಾಗಿ ಬರುತ್ತಾರೆ ಆದ್ದರಿಂದಲೇ ಶಿವರಾತ್ರಿಯನ್ನು ಆಚರಿಸುತ್ತಾರೆ ಆದರೆ ಅವರು ಯಾವಾಗ ಬಂದರು ಎಂಬುದನ್ನು ತಿಳಿದುಕೊಂಡಿಲ್ಲ. ಹಾಗೆಯೇ ಶಿವಜಯಂತಿಯನ್ನು ಆಚರಿಸುತ್ತಾ ಬಂದಿದ್ದಾರೆ. ಅವಶ್ಯವಾಗಿ ಸ್ವರ್ಗಸ್ಥಾಪನೆ ಮಾಡಲು ಸಂಗಮಯುಗದಲ್ಲಿಯೇ ಬಂದಿರಬೇಕು. ಪತಿತರನ್ನು ಪಾವನ ಮಾಡಲು ಅವಶ್ಯವಾಗಿ ಸಂಗಮಯುಗದಲ್ಲಿಯೇ ಬರುತ್ತಾರಲ್ಲವೆ. ಪಾವನ ಸೃಷ್ಟಿಯು ಸ್ವರ್ಗವಾಗಿದೆ, ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಅವಶ್ಯವಾಗಿ ಪತಿತಪ್ರಪಂಚದ ವಿನಾಶದ ಸಮಯವಾಗಿರಬೇಕು ಆಗಲೇ ಪಾವನ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ಯುಗ-ಯುಗಗಳಲ್ಲಿ ಬರುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಸಂಗಮದಲ್ಲಿಯೇ ಬಂದು ಪತಿತ ಪ್ರಪಂಚವನ್ನು ಪಾವನ ಮಾಡಬೇಕಾಗಿದೆ. ಇದು ಪರದೇಶ, ರಾವಣನ ರಾಜ್ಯವಾಗಿದೆ ಆದರೆ ಈಗ ರಾವಣರಾಜ್ಯವು ನಡೆಯುತ್ತಿದೆ ಎಂಬುದನ್ನು ಯಾವುದೇ ಮನುಷ್ಯರು ತಿಳಿದುಕೊಂಡಿಲ್ಲ. ಯಾವಾಗಿನಿಂದ ಈ ರಾವಣರಾಜ್ಯವು ಆರಂಭವಾಯಿತು ಎಂಬುದನ್ನೂ ತಿಳಿದುಕೊಂಡಿಲ್ಲ. ಮೊಟ್ಟಮೊದಲು ಮುಖ್ಯಮಾತೇನೆಂದರೆ ಆತ್ಮ ಮತ್ತು ಪರಮಾತ್ಮನ ರಹಸ್ಯವನ್ನು ತಿಳಿಸಬೇಕಾಗಿದೆ ನಂತರ ಅವರು ಕಲ್ಪದ ಸಂಗಮಯುಗದಲ್ಲಿ ಪಾವನ ಮಾಡಲು ಬರುತ್ತಾರೆ ಎಂಬುದನ್ನು ತಿಳಿಸಬೇಕಾಗಿದೆ. ಈ ಕೆಲಸವು ಅವರದೇ ಆಗಿದೆ, ಶ್ರೀಕೃಷ್ಣನದಲ್ಲ. ಶ್ರೀಕೃಷ್ಣನಂತೂ ಸ್ವಯಂ 84 ಜನ್ಮಗಳನ್ನು ತೆಗೆದುಕೊಂಡು ಕೆಳಗಿಳಿಯುತ್ತಾನೆ. ಸೂರ್ಯವಂಶಿಯರೆಲ್ಲರೂ ಕೆಳಗಿಳಿಯುತ್ತಾರೆ, ವೃಕ್ಷವು ಅರ್ಧ ತಾಜಾ, ಅರ್ಧ ಹಳೆಯದಿರುವುದಿಲ್ಲ. ಎಲ್ಲದರ ಜಡಜಡೀಭೂತ ಸ್ಥಿತಿಯಾಗುತ್ತದೆ. ಮನುಷ್ಯರಿಗೆ ಕಲ್ಪದ ಆಯಸ್ಸಿನ ಬಗ್ಗೆಯೂ ತಿಳಿದಿಲ್ಲ. ಶಾಸ್ತ್ರಗಳಲ್ಲಿ ಆಯಸ್ಸನ್ನು ಬಹಳ ಉದ್ದಗಲವಾಗಿ ಬರೆದುಬಿಟ್ಟಿದ್ದಾರೆ, ಇದನ್ನು ತಂದೆಯೇ ಕುಳಿತು ತಿಳಿಸುತ್ತಾರೆ. ಇದರಲ್ಲಿ ಮತ್ತ್ಯಾವುದೇ ಪ್ರಶ್ನೆ ಬರಲು ಸಾಧ್ಯವಿಲ್ಲ. ರಚಯಿತ ತಂದೆಯು ಸತ್ಯವನ್ನು ತಿಳಿಸುತ್ತಾರೆ. ನಾವು ಇಷ್ಟೊಂದುಮಂದಿ ಬಿ.ಕೆ.ಗಳಿದ್ದೇವೆ. ಎಲ್ಲರೂ ಒಪ್ಪುತ್ತಾರೆ ಅಂದಮೇಲೆ ಅವಶ್ಯವಾಗಿ ಇದ್ದೀರಿ ಅಂದಮೇಲೆ ಒಪ್ಪುತ್ತಾರೆ. ಮುಂದೆಹೋದಂತೆ ಯಾವಾಗ ನಿಶ್ಚಯವಾಗುವುದೋ ಆಗ ಅರ್ಥವೂ ಆಗುತ್ತದೆ. ಮೊಟ್ಟಮೊದಲು ಮನುಷ್ಯರಿಗೆ ಇದನ್ನು ತಿಳಿಸಬೇಕಾಗಿದೆ - ಪರಮಪಿತ ಪರಮಾತ್ಮನು ನಿರಾಕಾರನು ದೂರದೇಶದಿಂದ ಬಂದಿದ್ದಾರೆ ಆದರೆ ಯಾರ ಶರೀರದಲ್ಲಿ ಬರುವರು? ಸೂಕ್ಷ್ಮ ವತನದಲ್ಲಿ ಬಂದು ಏನು ಮಾಡುವರು? ಅವಶ್ಯವಾಗಿ ಇಲ್ಲಿಯೇ ಬರಬೇಕಾಗುವುದು. ಪ್ರಜಾಪಿತ ಬ್ರಹ್ಮನೂ ಇಲ್ಲಿಯೇ ಬೇಕು. ಬ್ರಹ್ಮನು ಯಾರೆಂಬುದನ್ನೂ ಸಹ ತಂದೆಯು ತಿಳಿಸುತ್ತಾರೆ. ಯಾರಲ್ಲಿ ನಾನು ಪ್ರವೇಶ ಮಾಡಿದ್ದೇನೆಯೋ ಅವರೂ ಸಹ ತಮ್ಮ ಜನ್ಮಗಳನ್ನು ತಿಳಿದುಕೊಂಡಿರಲಿಲ್ಲ ಆದ್ದರಿಂದ ಮಕ್ಕಳು ತಿಳಿದುಕೊಂಡಿದ್ದೀರಿ - ಯಾವಾಗ ನಾನು ದತ್ತು ಮಾಡಿಕೊಳ್ಳುತ್ತೇನೆಯೋ ಆಗ ಮಕ್ಕಳಾಗುತ್ತೀರಿ. ನಾನು ಈ ಸಾಕಾರತಂದೆಯ ಸಹಿತವಾಗಿ ಮಕ್ಕಳಿಗೆ ತಿಳಿಸುತ್ತೇನೆ - ನೀವು ತಮ್ಮ ಜನ್ಮಗಳನ್ನೇ ಮರೆತುಬಿಟ್ಟಿದ್ದೀರಿ! ಈಗ ಸೃಷ್ಟಿಚಕ್ರವು ಮುಕ್ತಾಯವಾಗುತ್ತದೆ. ಪುನಃ ಪುನರಾವರ್ತನೆಯಾಗುತ್ತದೆ. ನಾನು ರಾಜಯೋಗವನ್ನು ಕಲಿಸಲು, ಪಾವನರನ್ನಾಗಿ ಮಾಡಲು ಬಂದಿದ್ದೇನೆ. ಪಾವನರಾಗಲು ಮತ್ತ್ಯಾವುದೇ ಮಾರ್ಗವಿಲ್ಲ. ಒಂದುವೇಳೆ ಮನುಷ್ಯರು ಈ ರಹಸ್ಯವನ್ನು ತಿಳಿದುಕೊಂಡಿದ್ದರೆ ಗಂಗೆ, ಮೇಳ ಇತ್ಯಾದಿಗಳಲ್ಲಿ ಸ್ನಾನ ಮಾಡಲು ಹೋಗುತ್ತಿರಲಿಲ್ಲ, ಈ ನೀರಿನ ನದಿಗಳಲ್ಲಿ ಸದಾ ಸ್ನಾನ ಮಾಡುತ್ತಲೇ ಇರುತ್ತಾರೆ. ದ್ವಾಪರದಿಂದ ಹಿಡಿದು ಮಾಡುತ್ತಲೇ ಬಂದಿದ್ದಾರೆ. ಗಂಗೆಯಲ್ಲಿ ಮುಳುಗುವುದರಿಂದ ಪಾಪನಾಶವಾಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ ಆದರೆ ಯಾರದೂ ಪಾಪನಾಶವಾಗುವುದಿಲ್ಲ. ಮೊಟ್ಟಮೊದಲು ಆತ್ಮ ಮತ್ತು ಪರಮಾತ್ಮನ ರಹಸ್ಯವನ್ನು ತಿಳಿಸಿ, ಆತ್ಮರೇ ಪರಮಾತ್ಮ ತಂದೆಯನ್ನು ಕರೆಯುತ್ತಾರೆ, ಅವರು ನಿರಾಕಾರನಾಗಿದ್ದಾರೆ. ಆತ್ಮವೂ ನಿರಾಕಾರಿಯಾಗಿದೆ, ಈ ಕರ್ಮೇಂದ್ರಿಯಗಳ ಮೂಲಕ ಆತ್ಮವು ಕರೆಯುತ್ತದೆ. ಭಕ್ತಿಯ ನಂತರ ಭಗವಂತನು ಬರಬೇಕಾಗಿದೆ, ಇದೂ ಸಹ ಡ್ರಾಮಾದಲ್ಲಿ ಪಾತ್ರವಿದೆ.

ತಂದೆಯು ತಿಳಿಸುತ್ತಾರೆ - ನಾನು ಹೊಸಪ್ರಪಂಚದ ಸ್ಥಾಪನೆ ಮಾಡಲು ಬರಬೇಕಾಗುತ್ತದೆ. ಶಾಸ್ತ್ರಗಳಲ್ಲಿಯೂ ಇದೆ, ಭಗವಂತನಿಗೆ ಸಂಕಲ್ಪ ಬಂದಿತು ಎಂದು. ಅಂದಮೇಲೆ ಅವಶ್ಯವಾಗಿ ಡ್ರಾಮಾ ಪ್ಲಾನನುಸಾರ ಸಂಕಲ್ಪ ಬಂದಿರಬೇಕು. ಮೊದಲು ಈ ಮಾತುಗಳನ್ನು ತಿಳಿದುಕೊಳ್ಳುತ್ತಿರಲ್ಲಿಲ್ಲ. ದಿನ-ಪ್ರತಿದಿನ ತಿಳಿದುಕೊಳ್ಳುತ್ತಾ ಹೋಗುತ್ತೀರಿ. ನಾನು ನಿಮಗೆ ಹೊಸ-ಹೊಸ ಗುಹ್ಯ ಮಾತುಗಳನ್ನು ತಿಳಿಸುತ್ತೇನೆ. ಕೇಳುತ್ತಾ – ಕೇಳುತ್ತಾ ತಿಳಿದುಕೊಳ್ಳುತ್ತಾ ಹೋಗುತ್ತೀರಿ. ಶಿವತಂದೆಯು ಓದಿಸುತ್ತಾರೆಂದು ಮೊದಲು ಹೇಳುತ್ತಿರಲಿಲ್ಲ. ಈಗಂತೂ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ, ಇನ್ನೂ ತಿಳಿದುಕೊಳ್ಳುವುದು ಬಹಳಷ್ಟಿದೆ. ಯಾರಿಗೆ ಹೇಗೆ ತಿಳಿಸಬೇಕೆಂಬುದನ್ನು ತಂದೆ ನಿತ್ಯವೂ ತಿಳಿಸುತ್ತಿರುತ್ತಾರೆ. ಮೊದಲು ಬೇಹದ್ದಿನ ತಂದೆಯು ತಿಳಿಸುತ್ತಾರೆಂದರೆ ಅವರು ಅವಶ್ಯವಾಗಿ ಸತ್ಯವನ್ನೇ ತಿಳಿಸುತ್ತಾರೆಂದು ನಿಶ್ಚಯವಿರಲಿ, ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ. ಕೆಲವು ಮಕ್ಕಳು ಪಕ್ಕಾ ಇದ್ದಾರೆ, ಕೆಲವರು ಕಚ್ಚಾ ಇದ್ದಾರೆ. ಕಚ್ಚಾ ಆಗಿದ್ದರೆ ಅವರು ಯಾರಿಗೂ ತಿಳಿಸಲು ಸಾಧ್ಯವಿಲ್ಲ. ಶಾಲೆಯಲ್ಲಿಯೂ ನಂಬರ್‌ವಾರ್‌ ಇರುತ್ತಾರೆ, ಇಲ್ಲಿ ಅನೇಕರಿಗೆ ಈ ಸಂಶಯ ಬರುತ್ತದೆ - ಪರಮಪಿತ ಪರಮಾತ್ಮನೇ ಬಂದು ಓದಿಸುತ್ತಾರೆಂದು ನಾವು ಹೇಗೆ ತಿಳಿದುಕೊಳ್ಳುವುದು! ಏಕೆಂದರೆ ಶ್ರೀಕೃಷ್ಣನು ಜ್ಞಾನವನ್ನು ತಿಳಿಸಿದನೆಂದು ಅವರ ಬುದ್ದಿಯಲ್ಲಿದೆ ಆದರೆ ಪತಿತ ಪ್ರಪಂಚದಲ್ಲಂತೂ ಕೃಷ್ಣನು ಬರಲು ಸಾಧ್ಯವಿಲ್ಲ ಆದ್ದರಿಂದ ಅವರಿಗೆ ಇದನ್ನು ಸಿದ್ಧಮಾಡಿ ತಿಳಿಸಿ - ಪತಿತಪ್ರಪಂಚ ಮತ್ತು ಪತಿತ ಶರೀರದಲ್ಲಿಯೇ ಪರಮಾತ್ಮನು ಬರಬೇಕಾಗುತ್ತದೆ. ತಂದೆಯು ಇದನ್ನು ತಿಳಿದುಕೊಳ್ಳುತ್ತಾರೆ - ಪ್ರತಿಯೊಬ್ಬರ ಬುದ್ದಿಯೂ ತಮ್ಮತಮ್ಮದೇ ಆಗಿದೆ. ಕೆಲವರಂತೂ ಬಹುಬೇಗನೆ ತಿಳಿದುಕೊಳ್ಳುತ್ತಾರೆ, ಎಷ್ಟು ಸಾಧ್ಯವೋ ಅಷ್ಟು ತಿಳಿಸಿಕೊಡಬೇಕಾಗಿದೆ. ಬ್ರಾಹ್ಮಣರೆಲ್ಲರೂ ಒಂದೇರೀತಿ ಇರುವುದಿಲ್ಲ ಆದರೆ ಮಕ್ಕಳಲ್ಲಿ ಬಹಳ ದೇಹಾಭಿಮಾನವಿದೆ. ತಂದೆಯೂ ಸಹ ತಿಳಿದುಕೊಂಡಿದ್ದಾರೆ - ಮಕ್ಕಳಲ್ಲಿ ನಂಬರ್‌ವಾರ್ ಇದ್ದಾರೆ. ತಂದೆಯ ಆದೇಶದಂತೆ ಮಕ್ಕಳು ನಡೆಯಬೇಕಾಗಿದೆ. ದೊಡ್ಡತಂದೆಯು ಏನು ಹೇಳುವರೋ ಅದನ್ನು ಪಾಲಿಸಬೇಕಲ್ಲವೆ. ಗುರುಗಳ ಮತವನ್ನಂತೂ ಪಾಲಿಸುತ್ತಾ ಬಂದಿದ್ದೀರಿ, ಈಗ ಯಾವ ತಂದೆಯು ಸ್ವರ್ಗದಲ್ಲಿ ಕರೆದುಕೊಂಡು ಹೋಗುವವರಿದ್ದಾರೆ ಅವರ ಮಾತನ್ನಂತೂ ಕಣ್ಣುಮುಚ್ಚಿ ಒಪ್ಪಿಕೊಳ್ಳಬೇಕಲ್ಲವೆ ಆದರೆ ಇಷ್ಟು ನಿಶ್ಚಯಬುದ್ಧಿಯವರಿಲ್ಲ. ಭಲೆ ಅದರಲ್ಲಿ ಲಾಭವಾಗಲಿ, ನಷ್ಟವಾಗಲಿ ಆದರೆ ಒಪ್ಪಿಕೊಳ್ಳಬೇಕು. ತಿಳಿದುಕೊಳ್ಳಿ, ಭಲೆ ಅದರಲ್ಲಿ ನಷ್ಟವಾಗಲೂಬಹುದು ಆದರೂ ಸಹ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಮಗೆ ಶಿವತಂದೆಯು ಹೇಳುತ್ತಾರೆಂದು ತಿಳಿದುಕೊಳ್ಳಿ, ಬ್ರಹ್ಮನೆಂದು ತಿಳಿಯಬೇಡಿ. ಶಿವತಂದೆಯೇ ಜವಾಬ್ದಾರನಾಗುವರು. ಶಿವತಂದೆಗೆ ಇದು ರಥವಾಗಿದೆ ಅಂದಮೇಲೆ ಅವರು ಸರಿಪಡಿಸುತ್ತಾರೆ. ಮಕ್ಕಳೇ, ನಾನು ಕುಳಿತಿದ್ದೇನೆ ಆದ್ದರಿಂದ ಸದಾ ಶಿವತಂದೆಯೇ ತಿಳಿಸುತ್ತಾರೆ, ಇವರಿಗೇನೂ ಗೊತ್ತಿಲ್ಲವೆಂದೇ ತಿಳಿದುಕೊಳ್ಳಿ. ಒಂದುಕಡೆ ನಿಶ್ಚಯವನ್ನಿಡಬೇಕು, ನನ್ನ ಮಾತನ್ನು ನೀವು ಪಾಲಿಸುತ್ತಾ ಇದ್ದರೆ ನಿಮ್ಮ ಕಲ್ಯಾಣವಾಗುತ್ತಾ ಇರುವುದು. ಒಂದುವೇಳೆ ಈ ಬ್ರಹ್ಮಾರವರು ಏನಾದರೂ ತಿಳಸಿದರೂ ಸಹ ಅದಕ್ಕೆ ನಾನು ಜವಾಬ್ದಾರನಾಗಿದ್ದೇನೆ, ನೀವು ಮಕ್ಕಳು ಚಿಂತೆ ಮಾಡಬೇಡಿ. ಶಿವತಂದೆಯನ್ನು ನೆನಪು ಮಾಡುವುದರಿಂದ ಸ್ಥಿತಿಯು ಇನ್ನೂ ಪಕ್ಕಾ ಆಗಿಬಿಡುವುದು. ನಿಶ್ಚಯದಲ್ಲಿ ವಿಕರ್ಮಗಳು ವಿನಾಶವಾಗುತ್ತದೆ, ಬಲವೂ ಸಿಗುತ್ತದೆ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಲ್ಲಿ ಅಷ್ಟು ಹೆಚ್ಚು ಬಲ ಸಿಗುವುದು. ಯಾರು ಶ್ರೀಮತದಂತೆ ನಡೆದು ಸರ್ವಿಸ್ ಮಾಡುವರೋ ಅವರೆ ಶ್ರೇಷ್ಠಪದವಿಯನ್ನು ಪಡೆಯುವರು. ಅನೇಕರಲ್ಲಿ ಬಹಳ ದೇಹಾಭಿಮಾನವಿರುತ್ತದೆ, ತಂದೆಯನ್ನು ನೋಡಿ ಎಲ್ಲಾ ಮಕ್ಕಳೊಂದಿಗೆ ಎಷ್ಟು ಪ್ರೀತಿಯಿಂದ ನಡೆಯುತ್ತಾರೆ, ಎಲ್ಲರೊಂದಿಗೆ ಮಾತನಾಡುತ್ತಿರುತ್ತಾರೆ. ಮಕ್ಕಳೊಂದಿಗೆ ಕೇಳುತ್ತಾರೆ - ಆರಾಮವಾಗಿ ಕುಳಿತಿದ್ದೀರಾ! ಯಾವುದೇ ತೊಂದರೆಯಿಲ್ಲವೆ! ಮಕ್ಕಳಮೇಲೆ ಪ್ರೀತಿಯಿರುತ್ತದೆ. ಬೇಹದ್ದಿನ ತಂದೆಗೆ ಮಕ್ಕಳ ಪ್ರತಿ ಬಹಳ- ಬಹಳ ಪ್ರೀತಿಯಿರುತ್ತದೆ. ಯಾರೆಷ್ಟು ಶ್ರೀಮತದಂತೆ ಸರ್ವಿಸ್ ಮಾಡುವರೋ ಅವರಲ್ಲಿ ಪ್ರೀತಿಯಿರುತ್ತದೆ, ಸೇವೆಯಲ್ಲಿಯೇ ಲಾಭವಿದೆ. ಸೇವೆಗಾಗಿ ತಮ್ಮ ಮೂಳೆ-ಮೂಳೆಗಳನ್ನು ಉಪಯೋಗಿಸಬೇಕಾಗಿದೆ. ಯಾವುದೇ ಸೇವೆಯನ್ನು ಮಾಡುತ್ತಾ ಇದ್ದರೆ ಇವರು ಬಹಳ ಒಳ್ಳೆಯ ಮಗುವೆಂದು, ಅಂತಹವರು ತಂದೆಯ ಹೃದಯದಲ್ಲಿಯೂ ಇರುತ್ತಾರೆ ಆದರೆ ನಡೆಯುತ್ತಾ-ನಡೆಯುತ್ತಾ ಕೆಲವರ ಮೇಲೆ ಗ್ರಹಚಾರ ಕುಳಿತುಕೊಳ್ಳುತ್ತದೆ. ಮಾಯೆಯ ಹೋರಾಟ ನಡೆಯುತ್ತಲೇ ಇರುವುದು. ಗ್ರಹಚಾರದ ಕಾರಣ ಮತ್ತೆ ಜ್ಞಾನವನ್ನು ತೆಗೆದುಕೊಳ್ಳುವುದಿಲ್ಲ. ಕೆಲವರಂತೂ ಕರ್ಮಣಾಸೇವೆಯನ್ನು ಅವಿಶ್ರಾಂತರಾಗಿ ಮಾಡುತ್ತಾರೆ.


ಎಲ್ಲರನ್ನೂ ಸುಖಧಾಮದ ಮಾಲೀಕರನ್ನಾಗಿ ಮಾಡುವುದು ನಿಮ್ಮ ಕರ್ತವ್ಯವಾಗಿದೆ, ಯಾರಿಗೂ ದುಃಖವನ್ನು ಕೊಡಬಾರದು. ಜ್ಞಾನವಿಲ್ಲದಿದ್ದರೆ ಬಹಳ ದುಃಖ ಕೊಡುತ್ತಾರೆ ನಂತರ ಎಷ್ಟಾದರೂ ತಿಳಿಸಿ ಅವರು ತಿಳಿದುಕೊಳ್ಳುವುದಿಲ್ಲ. ಮೊಟ್ಟಮೊದಲು ಆತ್ಮ ಮತ್ತು ಪರಮಾತ್ಮನ ತಿಳುವಳಿಕೆ ನೀಡಬೇಕಾಗಿದೆ. ಹೇಗೆ ಆತ್ಮದಲ್ಲಿ 84 ಜನ್ಮಗಳ ಪಾತ್ರವು ತುಂಬಲ್ಪಟ್ಟಿದೆ ಅದು ಅವಿನಾಶಿ ಪಾತ್ರವಾಗಿದೆ, ಅದೆಂದೂ ಬದಲಾಗುವುದಿಲ್ಲ, ಡ್ರಾಮಾದಲ್ಲಿ ನಿಗಧಿಯಾಗಿದೆ. ಈ ನಿಶ್ಚಯವಿರುವವರು ಎಂದೂ ಅಲುಗಾಡುವುದಿಲ್ಲ. ಅನೇಕ ಮಕ್ಕಳು ಅಲುಗಾಡುತ್ತಾರೆ, ಅಂತಿಮದಲ್ಲಿ ಯಾವಾಗ ಬಿದಿರಿನ ಕಾಡಿಗೆ ಬೆಂಕಿ ಬೀಳುವುದೋ ಆಗ ಅಚಲರಾಗಿಬಿಡುತ್ತಾರೆ. ಈಗಂತೂ ಬಹಳ ಯುಕ್ತಿಯಿಂದ ತಿಳಿಸಬೇಕಾಗಿದೆ. ಒಳ್ಳೊಳೆಯ ಮಕ್ಕಳು ಸೇವೆಯಲ್ಲಿ ತತ್ಪರರಾಗಿರುತ್ತಾರೆ, ತಂದೆಯ ಹೃದಯದಲ್ಲಿರುತ್ತಾರೆ, ಬಹಳ ತೀಕ್ಷ್ಣವಾಗಿ ಮುಂದೆ ಹೋಗುತ್ತಿರುತ್ತಾರೆ, ಬಹಳ ಪರಿಶ್ರಮಪಡುತ್ತಾರೆ. ಅವರಿಗೆ ಸರ್ವಿಸಿನ ಬಹಳ ಉಮ್ಮಂಗವಿರುತ್ತದೆ. ಯಾರಲ್ಲಿ ಯಾವ ಗುಣವಿದೆಯೋ ಅದನ್ನು ತಂದೆಯು ವರ್ಣನೆ ಮಾಡುತ್ತಾರೆ. ಒಳ್ಳೆಯದು-

ಮಧುರಾತಿ ಮಧುರ ಅಗಲಿಹೋಗಿ ಮರಳಿಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್‌ದಾದಾ ರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಸೇವೆಯಲ್ಲಿ ಮೂಳೆ-ಮೂಳೆಗಳನ್ನು ಉಪಯೋಗಿಸಬೇಕಾಗಿದೆ. ಯಾವುದೇ ಮಾತಿನಲ್ಲಿ ಸಂಶಯ ಬರಬಾರದು. ಎಲ್ಲರಿಗೆ ಸೇವೆಯಿಂದ ಸುಖವನ್ನೇ ಕೊಡಬೇಕಾಗಿದೆ, ದುಃಖವನ್ನಲ್ಲ.

2. ನಿಶ್ಚಯದ ಬಲದಿಂದ ತಮ್ಮ ಸ್ಥಿತಿಯನ್ನು ಅಡೋಲ ಮಾಡಿಕೊಳ್ಳಬೇಕಾಗಿದೆ, ಯಾವ ಶ್ರೀಮತ ಸಿಗುತ್ತದೆಯೋ ಅದರಲ್ಲಿ ಕಲ್ಯಾಣವು ಸಮಾವೇಶವಾಗಿದೆ ಏಕೆಂದರೆ ತಂದೆಯು ಜವಾಬ್ದಾರನಾಗಿದ್ದಾರೆ ಆದುದರಿಂದ ಯಾವುದೇ ಮಾತಿನಲ್ಲಿ ಚಿಂತೆ ಮಾಡಬಾರದು.

ವರದಾನ:

'ಸಹಜಯೋಗವನ್ನು ಸ್ವಭಾವ ಮತ್ತು ಸ್ವಾಭಾವಿಕವಾಗಿ ಮಾಡಿಕೊಳ್ಳುವಂತಹ ಪ್ರತಿಯೊಂದು ವಿಷಯದಲ್ಲಿ ಸಂಪೂರ್ಣ ಭವ'

ಹೇಗೆ ತಂದೆಯ ಮಕ್ಕಳಾಗುವುದರಲ್ಲಿ ಯಾವುದೇ ಪರ್ಸೆಂಟೇಜ್ (ಶೇಕಡವಾರು) ಇಲ್ಲವೋ, ಹಾಗೆಯೇ ಈಗ ನಿರಂತರ ಸಹಜಯೋಗಿ ಅಥವ ಯೋಗಿಯಾಗುವ ಸ್ಥಿತಿಯಲ್ಲಿಯೂ ಪರ್ಸಂಟೇಜ್‌ ಸಮಾಪ್ತಿ ಆಗಬೇಕಾಗಿದೆ. ಸ್ವಾಭಾವಿಕ ಹಾಗೂ ಸ್ವಭಾವ ಆಗಿಬಿಡಬೇಕು. ಹೇಗೆ ಕೆಲವರಲ್ಲಿ ವಿಶೇಷ ಸ್ವಭಾವವಿರುತ್ತದೆ, ಅವರು ಸ್ವಭಾವಕ್ಕೆ ವಶರಾಗಲು ಬಯಸದಿದ್ದರೂ ಅದರಲ್ಲಿಯೇ ನಡೆಯುತ್ತಾ ಇರುತ್ತಾರೆ. ಹಾಗೆಯೇ ಇದೂ ಸಹ ಸ್ವಭಾವ ಆಗಿಬಿಡಲಿ. ನಾನು ಏನು ಮಾಡಲಿ, ಹೇಗೆ ಯೋಗವನ್ನಿಡಲಿ ಎಂಬ ಮಾತುಗಳು ಸಮಾಪ್ತಿ ಆಗಿಬಿಡುತ್ತದೆ ಎಂದರೆ ಪ್ರತಿಯೊಂದು ವಿಷಯದಲ್ಲಿ ಸಂಪೂರ್ಣರು ಆಗಿಬಿಡುತ್ತೀರಿ. ಸಂಪೂರ್ಣರು ಎಂದರೆ ಪ್ರಭಾವ ಹಾಗೂ ಲೋಪದೋಷಗಳಿಂದಪ್ರಶಸ್ತಿ ದೂರವಿರುವುದು.

ಸ್ಲೋಗನ್ :

ಸಹನೆ ಮಾಡಬೇಕೆಂದರೆ ಖುಷಿಯಿಂದ ಮಾಡಿ, ವಿವಶತೆಯಿಂದ ಮಾಡುವುದಲ್ಲ.