07.06.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಹಗಲು-ರಾತ್ರಿ ಇದೇ ಚಿಂತನೆಯಲ್ಲಿರಿ - ಎಲ್ಲರಿಗೆ ತಂದೆಯ ಪರಿಚಯವನ್ನು ಹೇಗೆ ಕೊಡುವುದು, ಮಗನ ಮುಖಾಂತರ ತಂದೆಯು ಪ್ರತ್ಯಕ್ಷವಾಗುತ್ತಾರೆ, ತಂದೆಯ ಮುಖಾಂತರ ಮಕ್ಕಳು ಪ್ರತ್ಯಕ್ಷವಾಗುತ್ತಾರೆ (ಸನ್ ಶೋಸ್ ಫಾದರ್, ಫಾದರ್ ಶೋಸ್ ಸನ್), ಇದರಲ್ಲಿಯೇ ಬುದ್ಧಿಯನ್ನು ಜೋಡಿಸಬೇಕಾಗಿದೆ

ಪ್ರಶ್ನೆ:
ಜ್ಞಾನವು ಸ್ವಲ್ಪವೂ ವ್ಯರ್ಥವಾಗದಿರಲು ಯಾವ ಮಾತಿನ ಗಮನವನ್ನಿಡಬೇಕಾಗಿದೆ?

ಉತ್ತರ:
ಜ್ಞಾನ ಧನವನ್ನು ಕೊಡುವುದಕ್ಕಾಗಿ ಮೊದಲು ಇವರು ನಮ್ಮ ಬ್ರಾಹ್ಮಣ ಕುಲದವರಾಗಿದ್ದಾರೆಯೇ - ಇದನ್ನು ನೋಡಿ. ಯಾರು ಶಿವ ತಂದೆಯ ಹಾಗೂ ದೇವತೆಗಳ ಭಕ್ತರಿದ್ದಾರೆ, ಅವರಿಗೆ ಜ್ಞಾನ ಧನವನ್ನು ಕೊಡಲು ಪ್ರಯತ್ನ ಪಡಬೇಕು. ಈ ಜ್ಞಾನವನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವುದಿಲ್ಲ. ಯಾರು ಶೂದ್ರರಿಂದ ಬ್ರಾಹ್ಮಣರಾಗುವವರಿದ್ದಾರೆ ಅವರಿಗೇ ಅರ್ಥವಾಗುತ್ತದೆ. ನೀವು ಪ್ರಯತ್ನಪಟ್ಟು ಈ ಒಂದು ಮಾತನ್ನು ಎಲ್ಲರಿಗೆ ತಿಳಿಸಿ- ಸರ್ವರ ಸದ್ಗತಿದಾತ ಒಬ್ಬ ತಂದೆಯೇ ಆಗಿದ್ದಾರೆ. ನೀವು ಅಶರೀರಿಯಾಗಿ ನನ್ನನ್ನು ನೆನಪು ಮಾಡಿದಾಗ ನಿಮ್ಮ ಜೀವನದ ದೋಣಿಯು ಪಾರಾಗುತ್ತದೆ ಎಂದು ಮಕ್ಕಳಿಗೆ ಹೇಳುತ್ತಾರೆ.

ಗೀತೆ:
ಓಂ ನಮಃ ಶಿವಾಯ.....

ಓಂ ಶಾಂತಿ.
ಇಬ್ಬರೂ ತಂದೆಯರು ಬಂದು ಬಿಟ್ಟಿದ್ದಾರೆಂದು ತಂದೆಯೇ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಬ್ರಹ್ಮಾ ತಂದೆಯಾದರೂ ತಿಳಿಸಬಹುದು, ಶಿವ ತಂದೆಯಾದರೂ ತಿಳಿಸಬಹುದು. ಅಂದಮೇಲೆ ತಂದೆಯು ತಿಳಿಸುತ್ತಾರೆ - ನೀವು ತಂದೆಯ ನೆನಪಿನಲ್ಲಿ ಶಾಂತಿಯಲ್ಲಿ ಕುಳಿತುಕೊಳ್ಳುತ್ತೀರಿ, ಇದನ್ನೇ ಸತ್ಯ ಶಾಂತಿಯೆಂದು ಹೇಳಲಾಗುತ್ತದೆ. ಇದು ಪ್ರತ್ಯಕ್ಷಫಲ ಕೊಡುವಂತಹ ಸತ್ಯ ಶಾಂತಿಯಾಗಿದೆ ಆದರೆ ಅದು ಅಸತ್ಯ ಶಾಂತಿಯಾಗಿದೆ. ಅವರಿಗೂ ತಮ್ಮ ಸ್ವಧರ್ಮದ ಬಗ್ಗೆ ತಿಳುವಳಿಕೆಯಿಲ್ಲ. ಸ್ವಯಂಗೆ ತಮ್ಮ ಪರಮಪಿತ ಪರಮಾತ್ಮನ ಪರಿಚಯವೂ ತಿಳಿದಿಲ್ಲವೆಂದಾಗ ಶಾಂತಿ, ಶಕ್ತಿಯನ್ನು ಯಾರು ಕೊಡುತ್ತಾರೆ? ಶಾಂತಿದಾತ ತಂದೆಯು ಸತ್ಯವಾದ ಶಾಂತಿಯನ್ನು ಕೊಡುತ್ತಾರೆ. ಆ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಅಶರೀರಿಯಾಗಿ ತಮ್ಮನ್ನು ಆತ್ಮನೆಂದು ತಿಳಿದು ಕುಳಿತುಕೊಳ್ಳಿ. ನೀವಂತು ಅವಿನಾಶಿ ಆಗಿದ್ದೀರಲ್ಲವೇ. ನೀವು ತಮ್ಮ ಸ್ವಧರ್ಮದಲ್ಲಿ ಕುಳಿತುಕೊಳ್ಳಿ, ಈ ರೀತಿ ಮತ್ತ್ಯಾರೂ ಕುಳಿತುಕೊಳ್ಳುವುದಿಲ್ಲ. ಅವಶ್ಯವಾಗಿ ಆತ್ಮವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಪರಮಪಿತ ಪರಮಾತ್ಮನಂತೂ ಒಬ್ಬರೇ ಆಗಿದ್ದಾರೆ, ಅವರ ಮಹಿಮೆಯೂ ಸಹ ಅಪರಮಪಾರವಾಗಿದೆ. ಅವರು ತಂದೆಯಾಗಿದ್ದಾರೆಯೇ ಹೊರತು ಸರ್ವವ್ಯಾಪಿಯಲ್ಲ. ಒಂದು ಮಾತನ್ನು ಸಿದ್ಧ ಮಾಡಿದರೆ ಸಾಕು ನಿಮ್ಮ ಜಯವಿದೆ ನಂತರ ಗೀತೆಯ ಭಗವಂತನ ಮಾತೂ ಸಹ ಸಿದ್ಧವಾಗಿ ಬಿಡುತ್ತದೆ. ನೀವು ಮಕ್ಕಳಿಗಂತೂ ಅನೇಕ ವಿಷಯಗಳು ಸಿಗುತ್ತವೆ. ಸಿಖ್ಖರೂ ಸಹ ತಂದೆಯನ್ನು ಸದ್ಗುರು ಅಕಾಲ್....... ಅವರೇ ಅಕಾಲಮೂರ್ತನಾಗಿದ್ದಾರೆ. ಮುಕ್ತಿದಾತಾ, ಸರ್ವರ ಸದ್ಗತಿದಾತನಾಗಿದ್ದಾರೆ ಎಂದು ಹೇಳುತ್ತಾರೆ ಏಕೆಂದರೆ ತಂದೆಯೇ ಬಂದು ದುಃಖದಿಂದ ಮುಕ್ತರನ್ನಾಗಿ ಮಾಡುತ್ತಾರೆ, ಅವರೇ ಪತಿತ ಪಾವನ ತಂದೆಯಾಗಿದ್ದಾರೆ. ಇಂತಿಂತಹ ವಿಷಯಗಳನ್ನು ವಿಚಾರ ಸಾಗರ ಮಂಥನ ಮಾಡಬೇಕು. ತಂದೆಯನ್ನು ಮರೆತಿರುವ ಕಾರಣವೇ ಎಲ್ಲರ ದುರ್ಗತಿಯಾಗಿದೆ. ಭಗವಂತನು ಒಬ್ಬರೇ ಆಗಿರುವುದರಿಂದ ಬೇರೆ ಯಾರನ್ನೂ ಭಗವಂತನೆಂದು ಹೇಳಲಾಗುವುದಿಲ್ಲ. ಸೂಕ್ಷ್ಮವತನವಾಸಿಯನ್ನೂ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಶ್ರೇಷ್ಠಾತಿ ಶ್ರೇಷ್ಠ ಒಬ್ಬ ಭಗವಂತನಾಗಿದ್ದಾರೆ. ಇಲ್ಲಿ ಈ ಮನುಷ್ಯ ಸೃಷ್ಟಿಯಲ್ಲಿ ಯಾರಿದ್ದಾರೆ ಅವರು ಪುನರ್ಜನ್ಮದಲ್ಲಿ ಬರುತ್ತಾರೆ. ಪರಮಪಿತ ಪರಮಾತ್ಮನಂತು ಪುನರ್ಜನ್ಮದಲ್ಲಿ ಬರುವುದಿಲ್ಲವೆಂದಾಗ ನಾಯಿ, ಬೆಕ್ಕು, ಎಲ್ಲದರಲ್ಲಿ ಪರಮಾತ್ಮ ಇದ್ದಾರೆಂದು ಹೇಗೆ ಹೇಳುತ್ತೀರಿ! ತಂದೆಯ ಪರಿಚಯವನ್ನು ಹೇಗೆ ಕೊಡಬೇಕು ಎನ್ನುವುದು ಇಡೀದಿನ ಬುದ್ಧಿಯಲ್ಲಿರಬೇಕು. ಈಗ ನೀವು ಹಗಲು-ರಾತ್ರಿ ಇದೇ ಚಿಂತನೆಯಲ್ಲಿ ಇರಬೇಕು - ಹೇಗೆ ಎಲ್ಲರಿಗೂ ಮಾರ್ಗವನ್ನು ತಿಳಿಸುವುದು? ಪತಿತರನ್ನು ಪಾವನ ಮಾಡುವವರು ಒಬ್ಬರೇ ಆಗಿದ್ದಾರೆ ಅಂದಮೇಲೆ ಗೀತೆಯ ಭಗವಂತನೂ ಸಹ ಸಿದ್ಧವಾಗುತ್ತಾರೆ. ಪರಿಶ್ರಮ ಪಟ್ಟರೆ ಮಾತ್ರ ನೀವು ಮಕ್ಕಳಿಗೇ ವಿಜಯವಾಗುವುದಿದೆ. ಮಹಾರಥಿ, ಕುದುರೆ ಸವಾರ, ಕಾಲಾಳುಗಳಂತೂ ಇರುತ್ತಾರಲ್ಲವೇ.

ನೀವು ಮಕ್ಕಳು ಅರಿತುಕೊಂಡಿದ್ದೀರಿ - ಈ ಭಾರತಕ್ಕೇ ತಂದೆಯಿಂದ ಆಸ್ತಿ ಸಿಕ್ಕಿತು. ಈಗ ಕಳೆದುಕೊಂಡಿದ್ದೀರಿ, ಈಗ ಮತ್ತೆ ತಂದೆಯು ಕೊಡುತ್ತಾರೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ. ಈಗ ಯಾವುದೆಲ್ಲಾ ಧರ್ಮಗಳಿವೆ, ಎಲ್ಲವೂ ಸಮಾಪ್ತಿಯಾಗುವುದಿದೆ ನಂತರ ಸತ್ಯಯುಗವಾಗುವುದಿದೆ. ಅಂತಿಮ ಸಮಯದಲ್ಲಿ ಹಾಹಾಕಾರದ ನಂತರ ಜಯ ಜಯಕಾರವಾಗುತ್ತದೆ. ಮನುಷ್ಯರು ದುಃಖದ ಸಮಯದಲ್ಲಿ ಹೇ ರಾಮ್ ಎಂದು ಹೇಳುತ್ತಾರಲ್ಲವೇ. ರಾಮ ನಾಮದ ದಾನ ಮಾಡಿ ಎಂದು ಹೇಳುತ್ತಾರೆ. ಇದರ ಬಗ್ಗೆ ಶ್ಲೋಕ ಮಾಡಲ್ಪಟ್ಟಿದೆ. ಸಿಖ್ಖರ ಬಹಳಷ್ಟು ಹೆಸರುಗಳಿವೆ, ಅವರು ಅಕಾಲ ಸಿಂಹಾಸನವೆಂದು ಹೇಳುತ್ತಾರೆ. ನೀವು ಮಕ್ಕಳ ಸಿಂಹಾಸನವು ಯಾವುದಾಗಿದೆ? ನೀವು ಆತ್ಮಗಳೆಲ್ಲರೂ ಅಕಾಲಮೂರ್ತಿಯಾಗಿದ್ದೀರಿ. ನಿಮ್ಮನ್ನು ಯಾವುದೇ ಕಾಲ (ಮೃತ್ಯು) ವು ಕಬಳಿಸಲು ಸಾಧ್ಯವಿಲ್ಲ. ಈ ಶರೀರವಂತೂ ಸಮಾಪ್ತಿಯಾಗುತ್ತದೆ. ಅಕಾಲ ಸಿಂಹಾಸನವು ಅಮೃತಸರದಲ್ಲಿದೆ ಎಂದು ತಿಳಿಯುತ್ತಾರೆ. ಆದರೆ ಅಕಾಲಸಿಂಹಾಸನವು ಮಹಾತತ್ವವಾಗಿದೆ. ನಾವಾತ್ಮಗಳೂ ಸಹ ಅಲ್ಲಿರುವವರಾಗಿದ್ದೇವೆ. ಗಾಯನವೂ ಇದೆ - ಬಾಬಾ ತಾವು ತಮ್ಮ ಸಿಂಹಾಸನವನ್ನು ಬಿಟ್ಟು ಬನ್ನಿ. ಅದು ಸರ್ವರಿಗಾಗಿ ಶಾಂತಿಯ ಸಿಂಹಾಸನವಾಗಿದೆ. ರಾಜ್ಯ ಸಿಂಹಾಸನವನ್ನು ಸರ್ವರಿಗೋಸ್ಕರ ಇದೆಯೆಂದು ಹೇಳಲಾಗುವುದಿಲ್ಲ. ಬಾಬಾರವರ ಸಿಂಹಾಸನವೇ ನಮ್ಮ ಸಿಂಹಾಸನವಾಗಿದೆ. ಅಲ್ಲಿಂದ ನಾವು ಪಾತ್ರವನ್ನಭಿನಯಿಸಲು ಬರುತ್ತೇವೆ, ಬಾಕಿ ಆಕಾಶವನ್ನು ಬಿಡುವಮಾತಿಲ್ಲ. ಮಕ್ಕಳು ಇದರಲ್ಲಿಯೇ ತಮ್ಮ ಬುದ್ಧಿಯನ್ನು ಜೋಡಿಸಬೇಕಾಗಿದೆ. ತಂದೆಯ ಪರಿಚಯವನ್ನು ಯಾರಿಗೆ, ಹೇಗೆ ಕೊಡಬೇಕು? ಸನ್ ಶೋಸ್ ಫಾದರ್, ಫಾದರ್ ಶೋಸ್ ಸನ್. ನಮ್ಮ ತಂದೆಯು ಯಾರಾಗಿದ್ದಾರೆ, ಅವರ ಸಂಪತ್ತು ಏನಾಗಿದೆ, ನಾವು ಯಾವುದರ ಮಾಲೀಕರಾಗುತ್ತೇವೆ. ಇದು ನಾವು ಮಕ್ಕಳು ಬುದ್ಧಿಯಲ್ಲಿದೆ. ಮುಖ್ಯವಾದದು ತಂದೆಯ ಪರಿಚಯವಾಗಿದೆ. ಎಲ್ಲದರ ಸಾರವು ಇದರಲ್ಲಿದೆ. ಒಂದೇ ತಪ್ಪಿನ ನಾಟಕವಾಗಿದೆಯಲ್ಲವೆ. ಮರೆಸುವಂತಹವನು ರಾವಣನಾಗಿದ್ದಾನೆ.

ಸತ್ಯಯುಗದಲ್ಲಿ ನೀವು ಆತ್ಮಾಭಿಮಾನಿಯಾಗಿರುತ್ತೀರಿ, ನಾವು ಆತ್ಮಗಳಾಗಿದ್ದೇವೆ ಎನ್ನುವ ಸ್ಮೃತಿಯೇ ಇರುತ್ತದೆ. ನಾವು ಪರಮಪಿತ ಪರಮಾತ್ಮನನ್ನು ಅರಿತುಕೊಂಡಿದ್ದೇವೆ ಎಂದು ಅಲ್ಲಿ ಹೇಳುವುದಿಲ್ಲ. ಅಲ್ಲಿ ಬಹಳಷ್ಟು ಸುಖವಿರುತ್ತದೆ. ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುತ್ತಾರೆ. ಭಕ್ತಿಮಾರ್ಗವು ಪೂರ್ಣವಾಯಿತು, ಜ್ಞಾನ ಮಾರ್ಗವು ಪ್ರಾರಂಭವಾಯಿತು, ಆಸ್ತಿಯು ಸಿಕ್ಕಿತೆಂದರೆ ಮತ್ತೇಕೆ ಭಗವಂತನನ್ನು ನೆನಪು ಮಾಡುತ್ತಾರೆ!! ಕಲ್ಪ-ಕಲ್ಪವೂ ಆಸ್ತಿ ಸಿಗುತ್ತದೆ. ಈ ನಾಟಕವೇ ಹೀಗೆ ಮಾಡಲ್ಪಟ್ಟಿದೆ. ತಂದೆಯನ್ನು ಯಾರೂ ಅರಿತುಕೊಂಡಿಲ್ಲ. ತಂದೆಯು ಈಗ ನೀವು ಮಕ್ಕಳಿಗೆ ಪರಿಚಯವನ್ನು ಕೊಟ್ಟಿದ್ದಾರೆ. ಹಗಲು-ರಾತ್ರಿ ಬುದ್ಧಿಯಲ್ಲಿ ಇದೇ ವಿಚಾರ ನಡೆಯುತ್ತಿರಲಿ - ಎಲ್ಲರಿಗೆ ತಂದೆಯ ಪರಿಚಯವನ್ನು ಹೇಗೆ ಕೊಡಬೇಕು. ಇದು ಬುದ್ಧಿಯ ಭೋಜನವಾಗಿದೆ. ತಂದೆಯದು ಒಂದೇ ಅವತರಣೆ ಎಂದು ಗಾಯನವಿದೆ. ಅವರು ಅವಶ್ಯವಾಗಿ ಕಲಿಯುಗದ ಅಂತ್ಯ, ಸತ್ಯಯುಗದ ಆದಿಯ ಸಂಗಮದಲ್ಲಿ ಪತಿತರನ್ನು ಪಾವನ ಮಾಡಲು ಬರುತ್ತಾರೆಂದು ತಿಳಿಯುತ್ತಾರೆ. ಗೀತೆಯು ಮುಖ್ಯವಾಗಿದೆ, ಇದರಿಂದ ವಜ್ರ ಸಮಾನವಾಗಬಹುದು. ಉಳಿದೆಲ್ಲಾ ಶಾಸ್ತ್ರಗಳು ಗೀತೆಯ ಮಕ್ಕಳಾಗಿವೆ, ಅವುಗಳಿಂದ ಯಾವುದೇ ಆಸ್ತಿ ಸಿಗಲು ಸಾಧ್ಯವಿಲ್ಲ. ಸರ್ವಶಾಸ್ತ್ರಮಯೀ ಶಿರೋಮಣಿ ಗೀತೆಯಾಗಿದೆ. ಶ್ರೀಮತವೂ ಹೆಸರುವಾಸಿಯಾಗಿದೆ, ಶ್ರೀ ಶ್ರೀ ಎಂದರೆ ಶ್ರೇಷ್ಠಾತಿ ಶ್ರೇಷ್ಠ, ಶ್ರೀ ಶ್ರೀ 108 ರುದ್ರ ಮಾಲೆ - ಇದು ಶಿವಬಾಬಾರವರ ಮಾಲೆಯಾಗಿದೆ. ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆಂದು ನೀವು ತಿಳಿದಿದ್ದೀರಿ. ಎಲ್ಲರೂ ಸಹ ಅವರನ್ನು ಬಾಬಾ ಬಾಬಾ ಎಂದು ಹೇಳುತ್ತಿರುತ್ತಾರಲ್ಲವೆ. ತಂದೆಯ ರಚನೆ ರಚಿಸಲ್ಪಟ್ಟಿದೆ, ಇದನ್ನು ಯಾರೂ ಸಹ ತಿಳಿಯಲು ಸಾಧ್ಯವಿಲ್ಲ. ತಂದೆಯು ಹೇಳುತ್ತಾರೆ - ಮಕ್ಕಳೇ, ನಿಮಗೆ ಹೆಚ್ಚಿನ ಕಷ್ಟವನ್ನು ಕೊಡುವುದಿಲ್ಲ. ಕೇವಲ ತಂದೆಯನ್ನು ಮರೆತಿರುವುದರಿಂದಲೇ ನೀವು ಕೆಳಗೆ ಬಿದ್ದಿದ್ದೀರಿ, ಅವರನ್ನು ತಿಳಿದುಕೊಳ್ಳಬೇಕಾಗಿದೆ. ನೀವೀಗ ಕಗ್ಗತ್ತಲೆಯಿಂದ ಪ್ರಕಾಶತೆಯಲ್ಲಿ ಬಂದಿದ್ದೀರಿ ಆದ್ದರಿಂದ ನೀವು ಜ್ಞಾನದ ನೃತ್ಯ ಮಾಡಬೇಕಾಗಿದೆ. ಭಕ್ತ ಮೀರಾ ಭಕ್ತಿಯ ನೃತ್ಯವನ್ನು ಮಾಡಿದರು ಆದರೆ ಅದಕ್ಕೆ ಅರ್ಥವೇನೂ ಇಲ್ಲ. ವ್ಯಾಸ ಭಗವಂತನೆಂದು ಹೇಳುತ್ತಾರೆ, ಈಗ ವ್ಯಾಸನಂತು ತಂದೆಯಾಗಿದ್ದಾರೆ ಅವರು ಗೀತೆಯನ್ನು ತಿಳಿಸುತ್ತಾರೆ. ನೀವು ಯಾರಿಗೆ ಬೇಕಾದರೂ ಸಿದ್ಧ ಮಾಡಿ ತಿಳಿಸಬಲ್ಲಿರಿ- ತಂದೆಯು ಒಬ್ಬರೇ ಆಗಿದ್ದಾರೆ, ಅವರಿಂದಲೇ ಆಸ್ತಿಯು ಸಿಗುತ್ತದೆ. ಇಲ್ಲವೆಂದರೆ ಸ್ವರ್ಗದ ಆಸ್ತಿಯನ್ನು ಮತ್ತ್ಯಾರು ಕೊಡುತ್ತಾರೆ? ಸ್ವರ್ಗದ ಸ್ಥಾಪನೆಯನ್ನು ತಂದೆಯಲ್ಲದೆ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಸರ್ವರನ್ನು ಮುಕ್ತರನ್ನಾಗಿ ಮಾಡುವುದು ಒಬ್ಬ ತಂದೆಯ ಕರ್ತವ್ಯವಾಗಿದೆ. ಒನ್ನೆಸ್(ಏಕಮತ) ಇರಲಿ ಎಂದು ಪೋಪ್ ಹೇಳುತ್ತಿದ್ದರು, ಆದರೆ ಅದು ಹೇಗಾಗುತ್ತದೆ. ನಾವಂತು ಎಲ್ಲರೂ ಒಬ್ಬ ತಂದೆಯ ಮಕ್ಕಳಾಗಿದ್ದೇವಲ್ಲವೇ, ಸಹೋದರ-ಸಹೋದರಿಯರು ಹೇಗಾಗಿದ್ದೇವೆ ಎನ್ನುವುದನ್ನು ಅರಿತುಕೊಳ್ಳಬೇಕು. ಒನ್ನೆಸ್ ಅರ್ಥಾತ್ ವಿಶ್ವ ಪಿತೃತ್ವವಾಯಿತು ಆದರೆ ಇಲ್ಲಿ ಎಲ್ಲರೂ ಸಹೋದರರಾದರಲ್ಲವೇ. ಇಡೀ ಪ್ರಪಂಚವೇ ಓ ಪರಮಪಿತ ಪರಮಾತ್ಮ ದಯೆತೋರಿಸಿ ಎಂದು ಹೇಳುತ್ತಿದೆ ಅಂದಮೇಲೆ ಇಲ್ಲಿ ಅವಶ್ಯವಾಗಿ ದಯೆ ತೋರಿಸುತ್ತಿಲ್ಲ ಎಂದರ್ಥವಾಗಿದೆ. ಆದರೆ ಈ ನಿರ್ದಯೆ ತೋರಿಸುವವರು ಯಾರಾಗಿದ್ದಾರೆ ಎನ್ನುವುದನ್ನು ಅರಿತುಕೊಂಡಿಲ್ಲ. ದಯೆ ತೋರಿಸುವವರು ಒಬ್ಬ ತಂದೆಯಾಗಿದ್ದಾರೆ. ನಿರ್ದಯಿ ರಾವಣನಾಗಿದ್ದಾನೆ, ಇವನನ್ನೇ ಸುಡುತ್ತಾ ಬರುತ್ತಾರೆ, ಆದರೆ ಸುಟ್ಟು ಹೋಗುವುದಿಲ್ಲ. ಶತ್ರು ಸತ್ತು ಹೋಗಿದ್ದಾನೆಂದರೆ ಮತ್ತೆ-ಮತ್ತೆ ಸುಡುತ್ತಾರೆಯೇ. ನಾವು ಏನು ಮಾಡುತ್ತಿದ್ದೇವೆ ಎನ್ನುವುದು ಯಾರಿಗೂ ಅರ್ಥ ಆಗುವುದಿಲ್ಲ. ಮೊದಲು ನೀವೂ ಸಹ ಘೋರಅಂಧಕಾರದಲ್ಲಿದ್ದಿರಿ, ಈಗಂತೂ ಅಂಧಕಾರದಿಂದ ಮುಕ್ತರಾಗಿದ್ದೀರಿ ಅಂದಮೇಲೆ ಮನುಷ್ಯರಿಗೆ ಹೇಗೆ ತಿಳಿಸುತ್ತೀರಿ! ಭಾರತವನ್ನು ಸುಖಧಾಮವನ್ನಾಗಿ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ ಆದ್ದರಿಂದ ತಂದೆಯ ಪರಿಚಯವನ್ನೇ ಕೊಡಬೇಕಾಗಿದೆ. ಇದೆಲ್ಲವನ್ನು ತಿಳಿಸಲಾಗುತ್ತದೆ ಆದರೆ ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಒಂದುವೇಳೆ ಯಾರು ಅರಿತುಕೊಳ್ಳುತ್ತಾರೆ ಅವರೇ ಶೂದ್ರರಿಂದ ಬ್ರಾಹ್ಮಣರಾಗುತ್ತಾರೆ. ತಂದೆಯು ತಿಳಿಸುತ್ತಾರೆ- ಯಾರು ನನ್ನ ಭಕ್ತರಿದ್ದಾರೆ ಪ್ರಯತ್ನಪಟ್ಟು ಅವರಿಗೆ ನನ್ನ ಪರಿಚಯ ಕೊಡಬೇಕಾಗಿದೆ. ಜ್ಞಾನ ಧನವನ್ನು ವ್ಯರ್ಥವಾಗಿ ಕಳೆಯಬಾರದು. ದೇವತೆಗಳ ಭಕ್ತರಂತು ಅವಶ್ಯವಾಗಿ ದೇವತಾ ಕುಲದವರಾಗಿದ್ದಾರೆ. ಶ್ರೇಷ್ಠಾತಿ ಶ್ರೇಷ್ಠ ಒಬ್ಬ ತಂದೆಯಾಗಿದ್ದಾರೆ, ಎಲ್ಲರೂ ಅವರನ್ನೇ ನೆನಪು ಮಾಡುತ್ತಾರೆ. ಅವರು ಶಿವಬಾಬಾ ಆಗಿದ್ದಾರಲ್ಲವೇ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಯಾರಾದರೂ ಒಳ್ಳೆಯ ಕಾರ್ಯ ಮಾಡಿ ಹೋಗುತ್ತಾರೆಂದರೆ ಅವರನ್ನು ಪೂಜಿಸಲಾಗುತ್ತದೆ. ಈ ಕಲಿಯುಗದಲ್ಲಿ ಯಾರಿಂದಲೂ ಒಳ್ಳೆಯ ಕಾರ್ಯವಾಗುವುದಿಲ್ಲ ಏಕೆಂದರೆ ಇಲ್ಲಿ ಇರುವುದೇ ರಾವಣನ ಮತವಾಗಿದೆ. ಸುಖವೆಲ್ಲಿದೆ? ತಂದೆಯು ಬಹಳ ಚೆನ್ನಾಗಿ ತಿಳಿಸಿಕೊಡುತ್ತಾರೆ ಆದರೆ ಯಾವಾಗ ತಂದೆಯ ಪರಿಚಯ ಕೊಡುತ್ತೀರಿ ಆಗಲೇ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಇವರು ತಂದೆಯಾಗಿದ್ದಾರೆ, ಶಿಕ್ಷಕ, ಸದ್ಗುರುವೂ ಆಗಿದ್ದಾರೆ. ಇವರಿಗೆ (ಶಿವ ತಂದೆ) ತಂದೆ, ಶಿಕ್ಷಕ ಯಾರೂ ಇಲ್ಲ. ಮೊಟ್ಟ ಮೊದಲು ಮಾತಾ-ಪಿತಾ, ನಂತರ ಶಿಕ್ಷಕ ಮತ್ತು ಸದ್ಗತಿಗಾಗಿ ಗುರುಗಳಿರುತ್ತಾರೆ ಆದರೆ ಬೇಹದ್ದಿನ ತಂದೆಯೊಬ್ಬರೇ ತಂದೆ, ಶಿಕ್ಷಕ ಹಾಗೂ ಸದ್ಗುರುವಾಗಿದ್ದಾರೆ - ಇದು ಅದ್ಭುತವಾಗಿದೆ.

ತಂದೆಯು ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ. ಅವರೇ ಭಾರತಕ್ಕೇ ಸ್ವರ್ಗದ ಆಸ್ತಿಯನ್ನು ಕೊಡುವವರಾಗಿದ್ದಾರೆ ಎನ್ನುವುದನ್ನು ನೀವೇ ಅರಿತುಕೊಂಡಿದ್ದೀರಿ. ನರಕದ ನಂತರ ಸ್ವರ್ಗವು ಬರಲೇಬೇಕಾಗಿದೆ. ನರಕದ ವಿನಾಶಕ್ಕಾಗಿ ವಿನಾಶ ಜ್ವಾಲೆಯು ಮುಂದೆ ನಿಂತಿದೆ. ಹೋಲಿಕಾದಲ್ಲಿ ಹಾಡನ್ನು ಹಾಡುತ್ತಾರೆ, ನಂತರ ಕೇಳುತ್ತಾರೆ - ಸ್ವಾಮೀಜಿ ಇವರ ಹೊಟ್ಟೆಯಿಂದ ಏನು ಹೊರಬರುತ್ತದೆ? ಅವಶ್ಯವಾಗಿ ನೋಡುತ್ತೀರಿ ಯೂರೋಪವಾಸಿ ಯಾದವರ ಬುದ್ಧಿಯಿಂದ ವಿಜ್ಞಾನದ ಅನ್ವೇಷಣೆಗಳನ್ನು ಮಾಡುತ್ತಿರುತ್ತಾರೆ. ನೀವು ಪ್ರಯತ್ನಪಟ್ಟು ಒಂದು ಮಾತಿನ ಬಗ್ಗೆ ತಿಳಿಸಿಕೊಡಬೇಕಾಗಿದೆ- ಸರ್ವರ ಸದ್ಗತಿದಾತ ಒಬ್ಬ ತಂದೆಯಾಗಿದ್ದಾರೆ. ಅವರು ಭಾರತದಲ್ಲಿಯೇ ಬರುತ್ತಾರೆಂದ ಮೇಲೆ ಇದು ಎಲ್ಲದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಯಿತು. ಭಾರತವು ಪ್ರಾಚೀನವಾಗಿತ್ತು ಎಂದು ಹೇಳುತ್ತಾರೆ ಆದರೆ ಅರಿತುಕೊಳ್ಳುವುದಿಲ್ಲ. ಈಗ ನೀವು ಅರಿತುಕೊಂಡಿದ್ದೀರಿ - ಯಾವುದು ಪ್ರಾಚೀನವಾಗಿದೆಯೋ ಅದು ಪುನಃ ಆಗುವುದು. ನೀವು ರಾಜಯೋಗವನ್ನು ಕಲಿತಿದ್ದೀರಿ, ಅದನ್ನೇ ಪುನಃ ಕಲಿಯುತ್ತೀರಿ. ತಂದೆಯು ಈ ಜ್ಞಾನವನ್ನು ಕಲ್ಪ-ಕಲ್ಪವೂ ಕೊಡುತ್ತಾರೆ ಎನ್ನುವುದು ನಿಮ್ಮ ಬುದ್ಧಿಯಲ್ಲಿದೆ. ಶಿವನಿಗೆ ಅನೇಕ ಹೆಸರುಗಳನ್ನಿಟ್ಟಿದ್ದಾರೆ. ಬಬುಲ್ನಾಥನ ಮಂದಿರವೂ ಇದೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡಿರುವ ಕಾರಣ ಬಬುಲ್ನಾಥನೆಂದು ಕರೆಯುತ್ತಾರೆ. ಹೀಗೆ ಅನೇಕ ಹೆಸರುಗಳಿವೆ, ಇದರ ಅರ್ಥವನ್ನು ನೀವು ತಿಳಿಸಬಹುದು. ಮೊಟ್ಟ ಮೊದಲು ಯಾರನ್ನು ಎಲ್ಲರೂ ಮರೆತಿದ್ದಾರೆ ಆ ತಂದೆಯ ಪರಿಚಯ ಕೊಡಬೇಕಾಗಿದೆ. ಮೊದಲು ತಂದೆಯನ್ನು ಅರಿತುಕೊಂಡಾಗ ಬುದ್ಧಿಯೋಗವೂ ಜೋಡಿಸುತ್ತಾರೆ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಮುಕ್ತಿಧಾಮದಿಂದ ಮತ್ತೆ ಜೀವನ್ಮುಕ್ತಿಧಾಮದಲ್ಲಿ ಹೋಗಬೇಕಾಗಿದೆ. ಇದು ಪತಿತ ಜೀವನ ಬಂಧನವಾಗಿದೆ. ಮಕ್ಕಳೇ, ಅಶರೀರಿಯಾಗಿ ಅಶರೀರಿ ತಂದೆಯನ್ನು ನೆನಪು ಮಾಡಿ. ಇದರಿಂದಲೇ ಜೀವನದ ದೋಣಿಯು ಪಾರಾಗುತ್ತದೆ ಎಂದು ತಂದೆಯು ಹೇಳುತ್ತಾರೆ. ಎಲ್ಲಾ ಆತ್ಮಗಳ ತಂದೆಯು ಅವರೊಬ್ಬರೇ ಆಗಿದ್ದಾರೆ. ತಂದೆಯ ಆಜ್ಞೆಯಾಗಿದೆ - ನನ್ನನ್ನು ನೆನಪು ಮಾಡುತ್ತೀರೆಂದರೆ ನೆನಪಿನಿಂದ ವಿಕರ್ಮ ವಿನಾಶವಾಗುತ್ತದೆ. ಅಂತ್ಯಮತಿ ಸೋ ಗತಿಯಾಗುವುದು. ನಾವು ಹಿಂತಿರುಗಿ ಹೋಗಬೇಕಾಗಿದೆ, ಎಷ್ಟು ಸಾಧ್ಯವೋ ಅಷ್ಟು ಬೇಗ ಹೋಗಬೇಕು. ಆದರೆ ಬೇಗ ಆಗಲು ಸಾಧ್ಯವಿಲ್ಲ. ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ತಂದೆಯನ್ನು ನೆನಪು ಮಾಡಬೇಕಾಗಿದೆ. ನಾವು ಒಬ್ಬ ತಂದೆಯ ಮಕ್ಕಳಾಗಿದ್ದೇವೆ. ಈಗ ಆ ತಂದೆಯು ಹೇಳುತ್ತಾರೆ - ಮಕ್ಕಳೇ ಮನ್ಮನಾಭವ. ಕೃಷ್ಣನು ಈ ರೀತಿ ಹೇಳುತ್ತಾನೆಯೇ! ಕೃಷ್ಣ ಎಲ್ಲಿದ್ದಾನೆ? ಪರಮಪಿತ ಪರಮಾತ್ಮ ತಂದೆಯಾಗಿದ್ದಾರೆ, ಇವರೇ ಪ್ರಜಾಪಿತ ಬ್ರಹ್ಮನ ಮುಖಾಂತರ ಸ್ಥಾಪನೆ ಮಾಡುತ್ತಾರೆಂದರೆ ಅವಶ್ಯವಾಗಿ ತಂದೆಯು ಇಲ್ಲಿಯೇ ಬರಬೇಕು. ಇದು ವ್ಯಕ್ತ ಪತಿತ ಪ್ರಪಂಚವಾಗಿದೆ. ಸತ್ಯಯುಗವು ಪಾವನ ಪ್ರಪಂಚವಾಗಿದೆ. ಪತಿತ ಪ್ರಪಂಚದಲ್ಲಿ ಯಾರೂ ಸಹ ಪಾವನರಿರಲು ಸಾಧ್ಯವಿಲ್ಲ. ವೃಕ್ಷದಲ್ಲಿ ಮೇಲೆ ನಿಂತಿದ್ದಾರೆ ಮತ್ತು ಕೆಳಗಡೆ ಬ್ರಹ್ಮಾರವರು ತಪಸ್ಸಿನಲ್ಲಿ ಕುಳಿತಿದ್ದಾರೆ, ಇವರ ಮುಖ ಲಕ್ಷಣಗಳು ಸೂಕ್ಷ್ಮವತನದಲ್ಲಿ ನೋಡುತ್ತೀರಿ. ಇವರೇ ಹೋಗಿ ಫರಿಶ್ತೆಯಾಗುತ್ತಾರೆ. ಶ್ರೀಕೃಷ್ಣನು ಈ ಸಮಯದಲ್ಲಿ ಶ್ಯಾಮನಾಗಿದ್ದಾನಲ್ಲವೇ. ಮೊದಲ ಮಾತನ್ನು ಎಲ್ಲಿಯವರೆಗೆ ತಿಳಿಸುವುದಿಲ್ಲ ಅಲ್ಲಿಯವರೆಗೆ ಏನೂ ಅರ್ಥವಾಗುವುದಿಲ್ಲ. ಇದರಲ್ಲಿಯೇ ಪರಿಶ್ರಮವಾಗುತ್ತದೆ. ಮಾಯೆಯು ತಕ್ಷಣ ತಂದೆಯ ನೆನಪನ್ನು ಮರೆಸಿ ಬಿಡುತ್ತದೆ. ನಿಶ್ಚಯದಿಂದ ಬಾಬಾ ನಾವು ಅವಶ್ಯವಾಗಿ ನಾರಾಯಣನ ಪದವಿಯನ್ನು ಪಡೆಯುತ್ತೇವೆ ಎಂದು ಬರೆಯುತ್ತಾರೆ, ಆದರೂ ಸಹ ಮರೆತು ಬಿಡುತ್ತಾರೆ. ಮಾಯೆಯು ತುಂಬಾ ಶಕ್ತಿಶಾಲಿಯಾಗಿದೆ. ಮಾಯೆಯ ಬಿರುಗಾಳಿಗಳು ಎಷ್ಟೇ ಬರಲಿ ಅಲುಗಾಡಬಾರದು. ಇದು ಅಂತ್ಯದ ಸ್ಥಿತಿಯಾಗಿದೆ. ಮಾಯೆಯು ಶಕ್ತಿಶಾಲಿಯಾಗಿ ಯುದ್ಧ ಮಾಡುತ್ತದೆ. ಕುರಿ, ಮೇಕೆಯಂತೆ ಇದ್ದರೆ ಅವರನ್ನು ತಕ್ಷಣ ಬೀಳಿಸಿ ಬಿಡುತ್ತದೆ. ಇದರಲ್ಲಿ ಭಯ ಪಡಬಾರದು. ವೈದ್ಯರೂ ಸಹ ಹೇಳುತ್ತಾರೆ - ಮೊದಲು ಒಳಗಿನ ಕಾಯಿಲೆ ಹೊರ ಬರುತ್ತದೆ. ಅದೇರೀತಿ ಮಾಯೆಯ ಬಿರುಗಾಳಿಗಳೂ ಸಹ ಬಹಳ ಬರುತ್ತವೆ. ಯಾವಾಗ ನೀವು ಪಕ್ಕಾ ಆಗಿ ಬಿಡುತ್ತೀರಿ, ಆಗ ಮಾಯೆಯ ಒತ್ತಡವು ಕಡಿಮೆಯಾಗಿ ಬಿಡುತ್ತದೆ. ನಂತರ ಇವರು ಅಲುಗಾಡುವವರಲ್ಲ ಎನ್ನುವುದನ್ನು ಮಾಯೆಯು ತಿಳಿಯುತ್ತದೆ. ತಂದೆಯೇ ಬಂದು ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರನ್ನಾಗಿ ಮಾಡುತ್ತಾರೆ, ಇದು ಅತಿ ದೊಡ್ಡ ರಮಣೀಕ ಜ್ಞಾನವಾಗಿದೆ. ಭಾರತದ ಪ್ರಾಚೀನ ರಾಜಯೋಗವೆಂದು ಗಾಯನವಿದೆ, ಇದನ್ನು ಅರಿತುಕೊಂಡಿದ್ದೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅಶರೀರಿಯಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಸ್ವಧರ್ಮದಲ್ಲಿ ಸ್ಥಿತರಾಗುವ ಅಭ್ಯಾಸ ಮಾಡಬೇಕಾಗಿದೆ. ಜ್ಞಾನದ ನೃತ್ಯವನ್ನು ಮಾಡಬೇಕು ಹಾಗೂ ಮಾಡಿಸಬೇಕಾಗಿದೆ.

2. ಮಾಯೆಯ ಬಿರುಗಾಳಿಗಳಿಂದ ಅಲುಗಾಡಬಾರದಾಗಿದೆ, ಭಯ ಪಡಬಾರದು. ಪಕ್ಕಾ ಆಗಿ ಮಾಯೆಯ ಒತ್ತಡವನ್ನು ಸಮಾಪ್ತಿ ಮಾಡಬೇಕಾಗಿದೆ.

ವರದಾನ:
ತಂದೆಯವರಿಗೆ ತಮ್ಮ ಸರ್ವ ಜವಾಬ್ದಾರಿಗಳನ್ನು ಕೊಟ್ಟು ಸೇವೆಯ ಆಟವನ್ನಾಡುವಂತಹ ಮಾಸ್ಟರ್ ಸರ್ವಶಕ್ತಿವಂತ ಭವ.

ಯಾವುದೇ ಕಾರ್ಯವನ್ನು ಮಾಡುತ್ತಿದ್ದರೂ ಸದಾ ಸ್ಮೃತಿಯಿರಲಿ - ಸರ್ವಶಕ್ತಿವಂತ ತಂದೆಯು ನಮ್ಮ ಸಂಗಾತಿಯಾಗಿದ್ದಾರೆ, ನಾವು ಮಾಸ್ಟರ್ ಸರ್ವಶಕ್ತಿವಂತರು ಆಗಿದ್ದೇವೆ, ಇದರಿಂದ ಯಾವುದೇ ಪ್ರಕಾರದಲ್ಲಿಯೂ ಹೊರೆಯಿರುವುದಿಲ್ಲ. ಯಾವಾಗ ನನ್ನ ಜವಾಬ್ದಾರಿಯೆಂದು ತಿಳಿಯುತ್ತೀರಿ, ಆಗ ತಲೆ ಬಾರವಾಗುತ್ತದೆ. ಆದ್ದರಿಂದ ಬ್ರಾಹ್ಮಣ ಜೀವನದಲ್ಲಿ ತಮ್ಮ ಸರ್ವ ಜವಾಬ್ದಾರಿಗಳನ್ನು ತಂದೆಯವರಿಗೆ ಕೊಡುತ್ತೀರೆಂದರೆ, ಸೇವೆಯೂ ಸಹ ಒಂದು ಆಟವೆನ್ನುವಂತೆ ಅನುಭವವಾಗುವುದು. ಭಲೆ ಯಾವುದೆಷ್ಟಾದರೂ ಯೋಚಿಸುವಂತಹ ದೊಡ್ಡ ಕಾರ್ಯವೇ ಆಗಿರಲಿ, ಗಮನ ಕೊಡುವ ಕಾರ್ಯವಾಗಿರಲಿ ಆದರೆ ಮಾಸ್ಟರ್ ಸರ್ವಶಕ್ತಿವಂತನ ವರದಾನದ ಸ್ಮೃತಿಯಿಂದ ಅವಿಶ್ರಾಂತರಾಗಿ ಇರುತ್ತೀರಿ.

ಸ್ಲೋಗನ್:
ಮುರುಳೀಧರನ ಮುರುಳಿಯಲ್ಲಿ ದೇಹದ ಸ್ಮೃತಿಯನ್ನೇ ಮರೆತು, ಖುಷಿಯ ಉಯ್ಯಾಲೆಯಲ್ಲಿ ತೂಗಾಡುವವರೇ ಸತ್ಯ ಗೋಪ-ಗೋಪಿಕೆಯರಾಗಿದ್ದಾರೆ.