07.09.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ ತಂದೆಯು ನೀವು ಹಳೆಯ ಭಕ್ತರಿಗೆ ಭಕ್ತಿಯ ಫಲವನ್ನು ಕೊಡಲು ಬಂದಿದ್ದಾರೆ, ಭಕ್ತಿಯ ಫಲವಾಗಿದೆ ಜ್ಞಾನ ಇದರಿಂದಲೇ ನಿಮಗೆ ಸದ್ಗತಿಯಾಗುತ್ತದೆ.

ಪ್ರಶ್ನೆ:
ಕೆಲವು ಮಕ್ಕಳು ನಡೆಯುತ್ತಾ-ನಡೆಯುತ್ತಾ ಅದೃಷ್ಟವನ್ನು ತಾವೇ ಕೆಡಿಸಿಕೊಳ್ಳುತ್ತಾರೆ - ಹೇಗೆ?

ಉತ್ತರ:
ಒಂದುವೇಳೆ ತಂದೆಯವರಾಗಿಯೂ ಸರ್ವೀಸ್ ಮಾಡುವುದಿಲ್ಲ, ತನ್ನ ಮೇಲೆ ಹಾಗೂ ಅನ್ಯರ ಮೇಲೆ ದಯೆ ತೋರಿಸುವುದಿಲ್ಲವೆಂದರೆ ಅವರು ತಮ್ಮ ಅದೃಷ್ಟವನ್ನು ಕೆಡಿಸಿಕೊಳ್ಳುತ್ತಾರೆ ಅರ್ಥಾತ್ ಪದವಿ ಭ್ರಷ್ಟರಾಗಿ ಬಿಡುತ್ತಾರೆ. ಚೆನ್ನಾಗಿ ಓದಿ ಯೋಗದಲ್ಲಿದ್ದರೆ ಪದವಿಯೂ ಒಳ್ಳೆಯದು ಸಿಗುವುದು. ಸೇವಾಧಾರಿ ಮಕ್ಕಳಿಗಂತೂ ಸೇವೆಯ ಬಹಳ ಉಮ್ಮಂಗವಿರಬೇಕು.

ಗೀತೆ:
ಇಂದು ಬೆಳಗ್ಗೆ-ಬೆಳಗ್ಗೆ ಬಂದವರು ಯಾರು..............

ಓಂ ಶಾಂತಿ.
ನಾವಾತ್ಮಗಳಾಗಿದ್ದೇವೆ ಶರೀರವಲ್ಲ ಎಂಬುದನ್ನು ಆತ್ಮಿಕ ಮಕ್ಕಳು ತಿಳಿದುಕೊಂಡಿದ್ದೀರಿ ಮತ್ತು ಈ ಜ್ಞಾನವು ಪರಮಪಿತ ಪರಮಾತ್ಮನಿಂದ ಈಗಲೇ ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಬಂದಿದ್ದೇನೆಂದರೆ ನೀವು ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ. ಆತ್ಮವೇ ಶರೀರದಲ್ಲಿ ಪ್ರವೇಶ ಮಾಡುತ್ತದೆ, ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಿರುತ್ತದೆ. ಶರೀರವು ಬದಲಾಗುತ್ತದೆ ಆತ್ಮವು ಬದಲಾಗುವುದಿಲ್ಲ. ಆತ್ಮವು ಅವಿನಾಶಿಯಾಗಿದೆ ಆದ್ದರಿಂದ ಆತ್ಮವೆಂದು ತಿಳಿಯಬೇಕಾಗಿದೆ. ಈ ಜ್ಞಾನವನ್ನು ಎಂದೂ ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯು ಮಕ್ಕಳ ಕೂಗನ್ನು ಕೇಳಿ ಬಂದಿದ್ದಾರೆ, ಆದರೆ ಇದು ಪುರುಷೋತ್ತಮ ಸಂಗಮಯುಗವಾಗಿದೆ ಎಂದು ಯಾರಿಗೂ ತಿಳಿದಿಲ್ಲ. ತಂದೆಯು ಬಂದು ತಿಳಿಸುತ್ತಾರೆ - ಕಲ್ಪದ ಪುರುಷೋತ್ತಮ ಸಂಗಮಯುಗದಲ್ಲಿ ನಾನು ಬರುತ್ತೇನೆ ಆಗ ಇಡೀ ವಿಶ್ವವೇ ಪುರುಷೋತ್ತಮವಾಗುತ್ತದೆ. ಈ ಸಮಯದಲ್ಲಿ ಇಡೀ ವಿಶ್ವವು ಕನಿಷ್ಟ, ಪತಿತವಾಗಿದೆ. ಸತ್ಯಯುಗಕ್ಕೆ ಅಮರ ಪುರಿಯೆಂದು ಕರೆಯಲಾಗುತ್ತದೆ. ಇದು ಮೃತ್ಯುಲೋಕವಾಗಿದೆ, ಈ ಮೃತ್ಯುಲೋಕದಲ್ಲಿ ಆಸುರೀ ಗುಣವಂತ ಮನುಷ್ಯರಿದ್ದಾರೆ. ಅಮರಲೋಕದಲ್ಲಿ ದೈವೀ ಗುಣವಂತ ಮನುಷ್ಯರಿರುತ್ತಾರೆ. ಆದ್ದರಿಂದ ಅವರಿಗೆ ದೇವತೆಗಳೆಂದು ಕರೆಯಲಾಗುತ್ತದೆ. ಇಲ್ಲಿಯೂ ಸಹ ಒಳ್ಳೆಯ ಸ್ವಭಾವದವರಿಗೆ ದೇವತೆಗಳಂತಹವರೆಂದು ಹೇಳುತ್ತಾರೆ. ಕೆಲವರು ದೈವೀಗುಣವಂತರಿರುತ್ತಾರೆ, ಈ ಸಮಯದಲ್ಲಿ ಎಲ್ಲರೂ ಆಸುರೀ ಗುಣಗಳಿಂದ ಕೂಡಿದ ಮನುಷ್ಯರಿದ್ದಾರೆ. ಪಂಚ ವಿಕಾರಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಆದ್ದರಿಂದಲೇ ಬಂದು ಈ ದುಃಖದಿಂದ ಮುಕ್ತಗೊಳಿಸಿ ಎಂದು ಹಾಡುತ್ತಾರೆ. ಕೇವಲ ಒಬ್ಬ ಸೀತೆಯನ್ನು ಬಿಡಿಸಿದ ಮಾತಲ್ಲ, ತಂದೆಯು ತಿಳಿಸಿದ್ದಾರೆ - ಭಕ್ತಿನಿಯರಿಗೆ ಸೀತೆಯರೆಂದು ಕರೆಯಲಾಗುತ್ತದೆ. ಭಗವಂತನು ರಾಮನಾಗಿದ್ದಾರೆ, ಇವರು ಭಕ್ತರಿಗೆ ಫಲವನ್ನು ಕೊಡಲು ಬರುತ್ತಾರೆ. ಈ ಬೇಹದ್ದಿನ ರಾವಣ ರಾಜ್ಯದಲ್ಲಿ ಇಡೀ ಪ್ರಪಂಚವೇ ಸಿಕ್ಕಿಹಾಕಿಕೊಂಡಿದೆ. ಇದರಿಂದ ಮುಕ್ತಗೊಳಿಸಿ, ತಂದೆಯು ರಾಮ ರಾಜ್ಯದಲ್ಲಿ ಕರೆದುಕೊಂಡು ಹೋಗುತ್ತಾರೆ. ರಘುಪತಿ ರಾಘವ ರಾಜಾರಾಮನ ಮಾತಿಲ್ಲ. ಆ ರಾಮನಂತೂ ತ್ರೇತಾಯುಗದ ರಾಜನಾಗಿದ್ದನು. ಅವರೂ ಸಹ ಈಗ ತಮೋಪ್ರಧಾನ, ಜಡಜಡೀಭೂತ ಸ್ಥಿತಿಯಲ್ಲಿದ್ದಾರೆ. ಏಣಿಯನ್ನಿಳಿಯುತ್ತಾ-ಇಳಿಯುತ್ತಾ ಕೆಳಗೆ ಬಂದು ಬಿಟ್ಟಿದ್ದಾರೆ. ಪೂಜ್ಯರಿಂದ ಪೂಜಾರಿಗಳಾಗುತ್ತಾರೆ. ದೇವತೆಗಳು ಯಾರಿಗೂ ಪೂಜೆ ಮಾಡುವುದಿಲ್ಲ. ಅವರು ಪೂಜ್ಯರಾಗಿದ್ದಾರೆ. ನಂತರ ಯಾವಾಗ ಅವರು ವೈಶ್ಯರು, ಶೂದ್ರರಾಗುವರೋ ಆಗ ಪೂಜೆಯು ಆರಂಭವಾಗುತ್ತದೆ. ವಾಮ ಮಾರ್ಗದಲ್ಲಿ ಬರುವ ಕಾರಣ ಪೂಜಾರಿಗಳಾಗುತ್ತಾರೆ. ಪೂಜಾರಿಗಳು ದೇವತೆಗಳ ಚಿತ್ರಗಳ ಮುಂದೆ ನಮಸ್ಕರಿಸುತ್ತಾರೆ, ಈ ಸಮಯದಲ್ಲಿ ಯಾರೊಬ್ಬರೂ ಪೂಜ್ಯರಿಲ್ಲ. ಸರ್ವಶ್ರೇಷ್ಠ ಭಗವಂತನು ಪೂಜ್ಯನಾಗಿದ್ದಾರೆ ಅವರ ನಂತರ ಸತ್ಯಯುಗೀ ದೇವತೆಗಳು ಪೂಜ್ಯರಾಗಿದ್ದಾರೆ. ಈ ಸಮಯದಲ್ಲಿ ಎಲ್ಲರೂ ಪೂಜಾರಿಗಳಾಗಿದ್ದಾರೆ, ಮೊಟ್ಟ ಮೊದಲಿಗೆ ಶಿವನ ಪೂಜೆಯು ನಡೆಯುತ್ತದೆ, ಅದು ಅವ್ಯಭಿಚಾರಿ ಪೂಜೆಯಾಗಿದೆ. ಅದೂ ಸಹ ಸತೋಪ್ರಧಾನ ಪೂಜೆಯಿಂದ ನಂತರ ಸತೋ ನಂತರ ದೇವತೆಗಳಿಗಿಂತಲೂ ಕೆಳಗಿಳಿದು, ಜಲದ ಪೂಜೆ, ಮನುಷ್ಯರ, ಪ್ರಾಣಿ-ಪಕ್ಷಿಗಳ ಪೂಜೆಯನ್ನು ಮಾಡತೊಡಗುತ್ತಾರೆ. ದಿನ-ಪ್ರತಿದಿನ ಅನೇಕರ ಪೂಜೆಯಾಗತೊಡಗುತ್ತದೆ. ಇತ್ತೀಚೆಗೆ ಸರ್ವ ಧರ್ಮ ಸಮ್ಮೇಳನಗಳು ಬಹಳಷ್ಟು ನಡೆಯುತ್ತಿರುತ್ತವೆ. ಕೆಲವೊಮ್ಮೆ ಆದಿ ಸನಾತನ ಧರ್ಮದವರದು, ಕೆಲವೊಮ್ಮೆ ಜೈನರು, ಕೆಲವೊಮ್ಮೆ ಆರ್ಯ ಸಮಾಜಿಗಳ ಸಮ್ಮೇಳನ - ಹೀಗೆ ಅನೇಕರನ್ನು ಕರೆಸುತ್ತಾರೆ ಏಕೆಂದರೆ ಪ್ರತಿಯೊಬ್ಬರೂ ತನ್ನ ಧರ್ಮವನ್ನು ಶ್ರೇಷ್ಠವೆಂದು ತಿಳಿಯುತ್ತಾರಲ್ಲವೆ. ಪ್ರತಿಯೊಂದು ಧರ್ಮದಲ್ಲಿ ಒಂದಲ್ಲ ಒಂದು ವಿಶೇಷ ಗುಣವಿರುವ ಕಾರಣ ಅವರು ತಮ್ಮನ್ನು ದೊಡ್ಡವರೆಂದು ತಿಳಿದುಕೊಳ್ಳುತ್ತಾರೆ. ಜೈನರಲ್ಲಿಯೂ ಭಿನ್ನ ಭಿನ್ನ ಪ್ರಕಾರದವರಿರುತ್ತಾರೆ, 5-7 ಪ್ರಕಾರದವರಿದ್ದಾರೆ. ಅವರಲ್ಲಿ ಕೆಲವರು ದಿಗಂಬರರೂ ಇರುತ್ತಾರೆ ಆದರೆ ದಿಗಂಬರರಾಗುವ (ಅಶರೀರಿ) ಅರ್ಥವನ್ನು ತಿಳಿದುಕೊಂಡಿಲ್ಲ. ಭಗವಾನುವಾಚವಿದೆ - ದಿಗಂಬರ ಅರ್ಥಾತ್ ಅಶರೀರಿಯಾಗಿ ಬಂದಿದ್ದಿರಿ, ಮತ್ತೆ ಅಶರೀರಿಯಾಗಿ ಹೋಗಬೇಕಾಗಿದೆ. ಇದಕ್ಕೆ ಅವರು ವಸ್ತ್ರಗಳನ್ನು ಕಳಚಿ ದಿಗಂಬರರಾಗಿ ಬಿಡುತ್ತಾರೆ. ಭಗವಾನುವಾಚದ ಅರ್ಥವನ್ನೇ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನೀವಾತ್ಮಗಳು ಎಲ್ಲಿ ಈ ಶರೀರವನ್ನು ಧಾರಣೆ ಮಾಡಿಕೊಂಡು ಪಾತ್ರವನ್ನಭಿನಯಿಸಲು ಬಂದಿದ್ದೀರಿ, ಮತ್ತೆ ಹಿಂತಿರುಗಿ ಹೋಗಬೇಕಾಗಿದೆ, ಈ ಮಾತುಗಳನ್ನು ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ. ಆತ್ಮವೇ ಪಾತ್ರವನ್ನಭಿನಯಿಸಲು ಬರುತ್ತದೆ, ವೃಕ್ಷವು ವೃದ್ಧಿಯನ್ನು ಹೊಂದುತ್ತಿರುತ್ತದೆ. ಹೊಸ -ಹೊಸ ಪ್ರಕಾರದ ಧರ್ಮಗಳು ಇಮರ್ಜ್ ಆಗುತ್ತಿರುತ್ತವೆ. ಆದ್ದರಿಂದ ಇದಕ್ಕೆ ವಿಚಿತ್ರ ನಾಟಕವೆಂದು ಕರೆಯಲಾಗುತ್ತದೆ. ವಿಭಿನ್ನ ಧರ್ಮಗಳ ವೃಕ್ಷವಾಗಿದೆ. ಇಸ್ಲಾಮಿಗಳಲ್ಲಿಯೂ ಸಹ ನೋಡಿ ಎಷ್ಟೊಂದು ಶಾಖೆಗಳಿವೆ. ಮಹಮ್ಮದಿಯರಂತೂ ಕೊನೆಯಲ್ಲಿ ಬಂದ್ದಿದಾರೆ, ಇಸ್ಲಾಮಿಗಳಂತೂ ಮೊದಲನೆಯವರಾಗಿದ್ದಾರೆ, ಮುಸಲ್ಮಾನರ ಸಂಖ್ಯೆಯಂತೂ ಬಹಳಷ್ಟಿವೆ. ಆಫ್ರಿಕಾದಲ್ಲಿ ಎಷ್ಟೊಂದು ಸಾಹುಕಾರರಿದ್ದಾರೆ, ವಜ್ರ ರತ್ನಗಳ ಗಣಿಗಳಿವೆ. ಎಲ್ಲಿ ಬಹಳ ಹಣವನ್ನು ನೋಡುವರೋ ಅದರ ಮೇಲೆ ಮುತ್ತಿಗೆ ಹಾಕಿ ಧನವಂತರಾಗುತ್ತಾರೆ. ಕ್ರಿಶ್ಚಿಯನ್ನರೂ ಸಹ ಎಷ್ಟೊಂದು ಧನವಂತರಾಗಿದ್ದಾರೆ. ಭಾರತದಲ್ಲಿಯೂ ಹಣವಂತರಿದ್ದಾರೆ ಆದರೆ ಗುಪ್ತ. ಚಿನ್ನ ಇತ್ಯಾದಿಗಳನ್ನು ಹಿಡಿಯುತ್ತಿರುತ್ತಾರೆ, ಈಗ ದಿಗಂಬರ ಜೈನರು ಸಮ್ಮೇಳನಗಳನ್ನು ಮಾಡುತ್ತಿರುತ್ತಾರೆ, ಏಕೆಂದರೆ ಪ್ರತಿಯೊಬ್ಬರೂ ತಮ್ಮನ್ನು ಹಿರಿಯರೆಂದು ತಿಳಿಯುತ್ತಾರಲ್ಲವೆ. ಇಷ್ಟೆಲ್ಲಾ ಧರ್ಮಗಳು ಹೆಚ್ಚುತ್ತಿವೆಯಂದರೆ ಎಂದಾದರೂ ವಿನಾಶವೂ ಆಗಬೇಕೆಂದು ತಿಳಿದುಕೊಳ್ಳುವುದಿಲ್ಲ. ಎಲ್ಲಾ ಧರ್ಮಗಳಲ್ಲಿ ಶ್ರೇಷ್ಠವಾದುದು ನಿಮ್ಮ ಬ್ರಾಹ್ಮಣ ಧರ್ಮವೇ ಆಗಿದೆ, ಇದು ಯಾರಿಗೂ ತಿಳಿದಿಲ್ಲ. ಕಲಿಯುಗೀ ಬ್ರಾಹ್ಮಣರು ಅನೇಕರಿದ್ದಾರೆ ಆದರೆ ಅವರು ಕುಖವಂಶಾವಳಿ ಬ್ರಾಹ್ಮಣರಾಗಿದ್ದಾರೆ. ಪ್ರಜಾಪಿತ ಬ್ರಹ್ಮನ ಮುಖವಂಶಾವಳಿ ಬ್ರಾಹ್ಮಣರೆಂದರೆ ಪರಸ್ಪರ ಸಹೋದರ-ಸಹೋದರಿಯರಾಗಬೇಕು. ಒಂದುವೇಳೆ ಅವರು ತಮ್ಮನ್ನು ಬ್ರಹ್ಮನ ಸಂತಾನರೆಂದು ಕರೆಸಿಕೊಳ್ಳುವುದಾದರೆ ಸಹೋದರ-ಸಹೋದರಿಯರೇ ಆದರು ಅಂದಮೇಲೆ ವಿವಾಹ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಅಂದಾಗ ಸಿದ್ಧವಾಗುತ್ತದೆ - ಆ ಬ್ರಾಹ್ಮಣರು ಬ್ರಹ್ಮನ ಮುಖವಂಶಾವಳಿಯಲ್ಲ, ಕೇವಲ ಹೆಸರನ್ನಿಟ್ಟುಕೊಂಡಿದ್ದಾರೆ. ವಾಸ್ತವದಲ್ಲಿ ಬ್ರಾಹ್ಮಣರು ದೇವತೆಗಳಿಗಿಂತಲೂ ಶ್ರೇಷ್ಠರೆಂದು ಹೇಳುತ್ತಾರೆ, ಶಿಖೆಗೆ ಸಮಾನರಲ್ಲವೆ. ಈ ಬ್ರಾಹ್ಮಣರೇ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ. ಓದಿಸುವವರು ಪರಮಪಿತ ಪರಮಾತ್ಮ ಸ್ವಯಂ ಜ್ಞಾನ ಸಾಗರನಾಗಿದ್ದಾರೆ ಇದು ಯಾರಿಗೂ ತಿಳಿದಿಲ್ಲ. ತಂದೆಯ ಬಳಿ ಬಂದು ಬ್ರಾಹ್ಮಣರಾಗಿ ನಾಳೆ ಮತ್ತೆ ಶೂದ್ರರಾಗಿ ಬಿಡುತ್ತಾರೆ. ಹಳೆಯ ಸಂಸ್ಕಾರಗಳು ಪರಿವರ್ತನೆಯಾಗುವುದರಲ್ಲಿಯೇ ಬಹಳ ಪರಿಶ್ರಮವಾಗುತ್ತದೆ, ತನ್ನನ್ನು ಆತ್ಮನಿಶ್ಚಯ ಮಾಡಿಕೊಂಡು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಆತ್ಮಿಕ ತಂದೆಯಿಂದ ಆತ್ಮಿಕ ಮಕ್ಕಳೇ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ, ಅಂತಹ ತಂದೆಯನ್ನು ನೆನಪು ಮಾಡುವುದರಲ್ಲಿಯೇ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ತಂದೆಯು ತಿಳಿಸುತ್ತಾರೆ ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ತಂದೆಯನ್ನು ನೆನಪು ಮಾಡಲಿ. ಇದು ಬಹಳ ಸುಲಭವಾಗಿದೆ. ಹೇಗೆ ಆ ಪ್ರಿಯತಮ-ಪ್ರಿಯತಮೆಯರು ಒಬ್ಬರು ಇನ್ನೊಬ್ಬರನ್ನು ನೋಡದೆ ಇರಲು ಸಾಧ್ಯವಿಲ್ಲ. ತಂದೆಯಂತೂ ಪ್ರಿಯತಮನಾಗಿದ್ದಾರೆ, ನೀವೆಲ್ಲರೂ ಪ್ರಿಯತಮೆಯರಾಗಿದ್ದೀರಿ, ತಂದೆಯನ್ನು ನೆನಪು ಮಾಡುತ್ತಾ ಇರುತ್ತೀರಿ. ಒಬ್ಬ ತಂದೆಯು ಮಾತ್ರವೇ ಎಂದೂ ಯಾರಿಗೂ ಪ್ರಿಯತಮೆಯಾಗುವುದಿಲ್ಲ ಏಕೆಂದರೆ ಅವರಿಗಿಂತ ಶ್ರೇಷ್ಠರು ಯಾರೂ ಇಲ್ಲ. ಹಾ! ತಂದೆ ಮಕ್ಕಳ ಮಹಿಮೆ ಮಾಡುತ್ತಾರೆ, ನೀವು ಭಕ್ತಿಮಾರ್ಗದಿಂದ ಹಿಡಿದು ನಾನು ಪ್ರಿಯತಮನಿಗೆ ಎಲ್ಲರೂ ಪ್ರಿಯತಮೆಯರಾಗಿದ್ದೀರಿ. ಬಂದು ನಮ್ಮನ್ನು ದುಃಖದಿಂದ ಬಿಡಿಸಿ, ಪಾವನರನ್ನಾಗಿ ಮಾಡಿ ಎಂದು ಕರೆಯುತ್ತೀರಿ. ನೀವೆಲ್ಲರೂ ವಧುಗಳಾಗಿದ್ದೀರಿ, ನಾನು ವರನಾಗಿದ್ದೇನೆ. ನೀವೆಲ್ಲರೂ ಆಸುರೀ ಬಂಧನದಲ್ಲಿ ಬಂಧಿತರಾಗಿದ್ದೀರಿ. ನಾನು ಬಂದು ಬಿಡಿಸುತ್ತೇನೆ, ಇಲ್ಲಿ ಬಹಳ ಪರಿಶ್ರಮವಿದೆ. ಕಣ್ಣುಗಳು ಮೋಸಗೊಳಿಸುತ್ತವೆ, ಅದನ್ನು ನಿರ್ವಿಕಾರಿಯನ್ನಾಗಿ ಮಾಡಿಕೊಳ್ಳುವುದರಲ್ಲಿ ಪರಿಶ್ರಮವಾಗುತ್ತದೆ. ದೇವತೆಗಳ ಚಲನೆ ನೋಡಿ ಎಷ್ಟು ಚೆನ್ನಾಗಿದೆ! ಈಗ ಇಂತಹ ದೇವತೆಗಳನ್ನಾಗಿ ಮಾಡುವವರು ಅವಶ್ಯವಾಗಿ ಬೇಕಲ್ಲವೆ.

ಸಮ್ಮೇಳನದಲ್ಲಿ "ಮಾನವ ಜೀವನದಲ್ಲಿ ಧರ್ಮದ ಅವಶ್ಯಕತೆ" ಎಂದು ವಿಷಯವನ್ನಿಟ್ಟಿದ್ದಾರೆ. ನಾಟಕವನ್ನು ಅರಿಯದ ಕಾರಣ ತಬ್ಬಿಬ್ಬಾಗಿದ್ದಾರೆ. ನಿಮ್ಮ ವಿನಃ ಯಾರೂ ತಿಳಿಸಲು ಸಾಧ್ಯವಿಲ್ಲ. ಕ್ರಿಶ್ಚಿಯನ್ನರು ಅಥವಾ ಬೌದ್ಧರಿಗೆ ಕ್ರೈಸ್ಟ್ ಮತ್ತು ಬುದ್ಧ ಮೊದಲಾದವರು ಮತ್ತೆ ಯಾವಾಗ ಬರುತ್ತಾರೆಂದು ತಿಳಿದಿಲ್ಲ. ನೀವು ಬಹು ಬೇಗನೆ ಲೆಕ್ಕವನ್ನು ತಿಳಿಸಬಲ್ಲಿರಿ, ಆದ್ದರಿಂದ ತಿಳಿಸಿಕೊಡಬೇಕು. ಧರ್ಮದ ಅವಶ್ಯಕತೆಯಂತೂ ಇದೆಯಲ್ಲವೆ. ಮೊಟ್ಟ ಮೊದಲಿಗೆ ಯಾವ ಧರ್ಮವಿತ್ತೋ, ನಂತರ ಯಾವ ಧರ್ಮವು ಬಂದಿತು, ತಮ್ಮ ಧರ್ಮದವರೂ ಸಹ ಪೂರ್ಣವಾಗಿ ತಿಳಿದುಕೊಂಡಿಲ್ಲ. ಯೋಗ ಮಾಡುವುದಿಲ್ಲ, ಯೋಗವಿಲ್ಲದಿದ್ದರೆ ಶಕ್ತಿ ಸಿಗುವುದಿಲ್ಲ. ಹರಿತವಿರುವುದಿಲ್ಲ. ತಂದೆಗೇ ಸರ್ವಶಕ್ತಿವಂತನೆಂದು ಕರೆಯಲಾಗುತ್ತದೆ. ನೀವು ಎಷ್ಟು ಶಕ್ತಿವಂತರಾಗುತ್ತೀರಿ, ವಿಶ್ವಕ್ಕೇ ಮಾಲೀಕರಾಗಿ ಬಿಡುತ್ತೀರಿ. ನಿಮ್ಮ ರಾಜ್ಯವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆ ಸಮಯದಲ್ಲಿ ಮತ್ತ್ಯಾವುದೇ ಖಂಡವಿರುವುದಿಲ್ಲ, ಈಗಂತೂ ಎಷ್ಟೊಂದು ಖಂಡಗಳಿವೆ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ಇದು 5000 ವರ್ಷಗಳ ಚಕ್ರವಾಗಿದೆ ಬಾಕಿ ಸೃಷ್ಟಿಯು ಎಷ್ಟೊಂದು ಉದ್ದವಾಗಿದೆ, ಇದನ್ನು ಅಳೆಯಲು ಸಾಧ್ಯವಿಲ್ಲ. ಧರಣಿಯನ್ನು ಬೇಕಾದರೆ ಮಾಪನ ಮಾಡಬಹುದು. ಸಾಗರವನ್ನಂತೂ ಮಾಡಲು ಸಾಧ್ಯವಿಲ್ಲ. ಆಕಾಶ ಮತ್ತು ಸಾಗರದ ಅಂತ್ಯವನ್ನು ಯಾರೂ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ತಿಳಿಸಬೇಕಾಗಿದೆ - ಧರ್ಮದ ಅವಶ್ಯಕತೆ ಏಕಿದೆ! ಇಡೀ ಚಕ್ರವೇ ಧರ್ಮಗಳ ಮೇಲೆ ಮಾಡಲ್ಪಟ್ಟಿದೆ, ಇದು ವಿಭಿನ್ನ ಧರ್ಮಗಳ ವೃಕ್ಷವಾಗಿದೆ. ಈ ವೃಕ್ಷವು ಕುರುಡರ ಮುಂದೆ ಕನ್ನಡಿಯಾಗಿದೆ.

ನೀವೀಗ ಹೊರಗಡೆ ಸರ್ವೀಸಿಗಾಗಿ ಹೊರಟಿದ್ದೀರಿ. ನಿಧಾನ-ನಿಧಾನವಾಗಿ ನಿಮ್ಮ ವೃದ್ಧಿಯಾಗುತ್ತಾ ಹೋಗುತ್ತದೆ. ಬಿರುಗಾಳಿ ಬಂದರೆ ಬಹಳ ಎಲೆಗಳು ಬೀಳಲೂಬಹುದಲ್ಲವೆ. ಅನ್ಯ ಧರ್ಮಗಳಲ್ಲಿ ಬಿರುಗಾಳಿ ಬರುವ ಮಾತಿಲ್ಲ. ಅವರಂತೂ ಧರ್ಮಪಿತರ ಹಿಂದೆ ಮೇಲಿನಿಂದ ಬರಲೇಬೇಕಾಗಿದೆ. ಇಲ್ಲಿ ನಿಮ್ಮ ಸ್ಥಾಪನೆಯು ಬಹಳ ಅದ್ಭುತವಾಗಿದೆ. ಮೊಟ್ಟ ಮೊದಲಿನ ಭಕ್ತರು ಯಾರಿದ್ದಾರೆಯೋ ಅವರಿಗೆ ಭಗವಂತನು ಬಂದು ತಮ್ಮ ಮನೆಗೆ ಕರೆದುಕೊಂಡು ಹೋಗುವ ಫಲವನ್ನು ಕೊಡಬೇಕಾಗಿದೆ. ನಾವಾತ್ಮಗಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ ಆದರೆ ತಂದೆಯು ಸ್ವರ್ಗದ ರಾಜ್ಯಭಾಗ್ಯವನ್ನೂ ಕೊಡುತ್ತಾರೆಂದು ಯಾರಿಗೂ ತಿಳಿದಿಲ್ಲ. ಸನ್ಯಾಸಿಗಳಂತೂ ಸುಖವನ್ನೇ ಬಯಸುವುದಿಲ್ಲ. ಮೋಕ್ಷವು ಬೇಕೆಂದು ಬಯಸುತ್ತಾರೆ. ಮೋಕ್ಷಕ್ಕೆ ಆಸ್ತಿಯಂದು ಹೇಳಲಾಗುವುದಿಲ್ಲ. ಸ್ವಯಂ ಶಿವ ತಂದೆಯೂ ಸಹ ಪಾತ್ರವನ್ನಭಿನಯಿಸಬೇಕಾಗಿದೆ ಅಂದರೆ ಮತ್ತೆ ಅನ್ಯರನ್ನೂ ಮೋಕ್ಷದಲ್ಲಿ ಕರೆದುಕೊಂಡು ಹೋಗಲು ಹೇಗೆ ಸಾಧ್ಯ! ನೀವು ಬ್ರಹ್ಮಾಕುಮಾರ-ಕುಮಾರಿಯರು ತಮ್ಮ ಧರ್ಮ ಮತ್ತು ಎಲ್ಲರ ಧರ್ಮಗಳನ್ನು ತಿಳಿದುಕೊಂಡಿದ್ದೀರಿ ಅಂದಾಗ ದಯೆ ಬರಬೇಕು, ಚಕ್ರದ ರಹಸ್ಯವನ್ನೂ ತಿಳಿಸಬೇಕಾಗಿದೆ - ನಿಮ್ಮ ಧರ್ಮ ಸ್ಥಾಪಕರು ಪುನಃ ತಮ್ಮ ಸಮಯದಲ್ಲಿ ಬರುತ್ತಾರೆ. ಹೀಗೆ ತಿಳಿಸುವವರು ಬುದ್ಧಿವಂತರಿರಬೇಕು. ನೀವು ಇದನ್ನು ತಿಳಿಸಿ - ಪ್ರತಿಯೊಬ್ಬರೂ ಸತೋಪ್ರಧಾನದಿಂದ ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ಈಗ ರಾವಣ ರಾಜ್ಯವಿದೆ. ನಿಮ್ಮದು ಸತ್ಯವಾದ ಗೀತೆಯಾಗಿದೆ ಇದನ್ನು ತಂದೆಯೇ ತಿಳಿಸುತ್ತಾರೆ. ನಿರಾಕಾರನಿಗೇ ಭಗವಂತನೆಂದು ಕರೆಯಲಾಗುತ್ತದೆ. ಆತ್ಮವು ನಿರಾಕಾರ ಪರಮಾತ್ಮನನ್ನು ಕರೆಯುತ್ತದೆ. ಅಲ್ಲಿ ನೀವಾತ್ಮಗಳೂ ಇರುತ್ತೀರಿ ಆದರೆ ನಿಮಗೆ ಪರಮಾತ್ಮನೆಂದು ಹೇಳುವುದಿಲ್ಲ. ಪರಮಾತ್ಮನು ಒಬ್ಬರೇ ಸರ್ವ ಶ್ರೇಷ್ಠ ಭಗವಂತನಾಗಿದ್ದಾರೆ. ಎಲ್ಲಾ ಆತ್ಮಗಳು ಮಕ್ಕಳಾಗಿದ್ದೀರಿ. ಸರ್ವರ ಸದ್ಗತಿದಾತ ಒಬ್ಬರೇ ಆಗಿದ್ದಾರೆ ನಂತರ ದೇವತೆಗಳು. ಅವರಲ್ಲಿಯೂ ನಂಬರ್ವನ್ ಕೃಷ್ಣನಾಗಿದ್ದಾನೆ, ಏಕೆಂದರೆ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿವೆ. ನೀವು ಸಂಗಮಯುಗಿಗಳಾಗಿದ್ದೀರಿ, ನಿಮ್ಮ ಜೀವನವು ಅಮೂಲ್ಯವಾಗಿದೆ. ಬ್ರಾಹ್ಮಣರದೇ ಅಮೂಲ್ಯ ಜೀವನವಾಗಿದೆ, ದೇವತೆಗಳದಲ್ಲ. ತಂದೆಯು ನಿಮ್ಮನ್ನು ಮಕ್ಕಳನ್ನಾಗಿ ಮಾಡಿಕೊಂಡು ನಿಮಗಾಗಿ ಎಷ್ಟೊಂದು ಪರಿಶ್ರಮ ಪಡುತ್ತಾರೆ, ದೇವತೆಗಳು ಇಷ್ಟೊಂದು ಪರಿಶ್ರಮ ಪಡುವುದಿಲ್ಲ. ಅವರಂತೂ ಓದಿಸುವುದಕ್ಕಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಬಿಡುತ್ತಾರೆ. ಇಲ್ಲಾದರೆ ತಂದೆಯೇ ಕುಳಿತು ನಿಮಗೆ ಓದಿಸುತ್ತಾರೆ. ಅವರು ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ ಅಂದಮೇಲೆ ಎಷ್ಟೊಂದು ಗೌರವವಿರಬೇಕು. ಸೇವಾಧಾರಿ ಮಕ್ಕಳಿಗೆ ಬಹಳ ಉಮ್ಮಂಗವಿರಬೇಕು. ಕೆಲವು ಮಕ್ಕಳು ಬುದ್ಧಿವಂತರಾಗಿದ್ದಾರೆ, ಸೇವೆಯಲ್ಲಿ ತೊಡಗಿದ್ದಾರೆ. ಸೇವೆಗಾಗಿ ಭುಜಗಳೂ ಬೇಕಲ್ಲವೆ. ಯುದ್ಧದ ಮೈದಾನದಲ್ಲಿ ಹೋಗಲು ಯಾರಿಗೆ ಕಲಿಸುತ್ತಾರೆಯೋ ಅವರನ್ನು ನೌಕರಿ ಇತ್ಯಾದಿಗಳಿಂದ ಬಿಡಿಸುತ್ತಾರೆ. ಅವರ ಬಳಿ ಪಟ್ಟಿಯಿರುತ್ತದೆ. ನಾವು ಮೈದಾನದಲ್ಲಿ ಹೋಗುವುದಿಲ್ಲ ಎಂದು ನಂತರ ಮಿಲಿಟರಿಯನ್ನು ಯಾರೂ ತಿರಸ್ಕಾರ ಮಾಡುವಂತಿಲ್ಲ. ವ್ಯಾಯಾಮವನ್ನು ಕಲಿಸುತ್ತಾರೆ, ಅವಶ್ಯಕತೆಯಿದ್ದಾಗ ಕರೆಸಿಕೊಳ್ಳುತ್ತೇವೆಂದು ಯಾರೂ ಅದರಿಂದ ಬಿಡುಗಡೆಯಾಗಲು ಬಯಸುವರೋ ಅವರ ಮೇಲೆ ಮೊಕದ್ದಮೆ ಹಾಕುತ್ತಾರೆ. ಇಲ್ಲಂತೂ ಆ ಮಾತಿಲ್ಲ. ಇಲ್ಲಿ ಯಾರು ಚೆನ್ನಾಗಿ ಸರ್ವೀಸ್ ಮಾಡುವುದಿಲ್ಲವೋ ಅವರ ಪದವಿಯು ಭ್ರಷ್ಟವಾಗುತ್ತದೆ. ಸರ್ವೀಸ್ ಮಾಡುವುದಿಲ್ಲವೆಂದರೆ ತಾವೇ ತಮ್ಮನ್ನು ಶೂಟ್ ಮಾಡಿಕೊಳ್ಳುತ್ತಾರೆ. ಪದವಿಯು ಭ್ರಷ್ಟವಾಗುತ್ತದೆ, ತಮ್ಮ ಅದೃಷ್ಟವನ್ನೇ ಕೆಡಿಸಿಕೊಳ್ಳುತ್ತಾರೆ. ಚೆನ್ನಾಗಿ ಓದಿ ಯೋಗದಲ್ಲಿದ್ದಾಗ ಒಳ್ಳೆಯ ಪದವಿ ಸಿಗುವುದು, ಇದಕ್ಕಾಗಿ ತಮ್ಮ ಮೇಲೆ ತಾವೇ ದಯೆ ತೋರಿಸಿಕೊಳ್ಳಬೇಕಾಗಿದೆ. ತಮ್ಮ ಮೇಲೆ ದಯೆ ತೋರಿಸಿಕೊಂಡರೆ ಅನ್ಯರ ಮೇಲೆ ತೋರಿಸುವರು. ತಂದೆಯು ಪ್ರತಿಯೊಂದು ಪ್ರಕಾರದ ತಿಳುವಳಿಕೆಯನ್ನು ಕೊಡುತ್ತಾ ಇರುತ್ತಾರೆ. ಈ ಪ್ರಪಂಚದ ನಾಟಕವು ಹೇಗೆ ನಡೆಯುತ್ತದೆ, ಅಂದಮೇಲೆ ರಾಜಧಾನಿಯೂ ಸ್ಥಾಪನೆಯಾಗುತ್ತದೆ. ಈ ಮಾತುಗಳನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ಈಗ ನಿಮಂತ್ರಣವಂತೂ ಸಿಗುತ್ತದೆ ಆದರೆ 5-10 ನಿಮಿಷಗಳ ಕಾಲಾವಧಿಯಲ್ಲಿ ಏನು ತಾನೇ ತಿಳಿಸಲು ಸಾಧ್ಯ. ಒಂದೆರಡು ಗಂಟೆಗಳ ಅವಕಾಶ ಕೊಟ್ಟರೆ ತಿಳಿಸಬಹುದು. ಮನುಷ್ಯರು ನಾಟಕದ ಬಗ್ಗೆ ತಿಳಿದುಕೊಂಡೇ ಇಲ್ಲ. ಅಲ್ಲಲ್ಲಿ ಒಳ್ಳೊಳ್ಳೆಯ ವಾಕ್ಯಗಳನ್ನು ಬರೆದಿರಬೇಕು, ಆದರೆ ಮಕ್ಕಳು ಮರೆತು ಹೋಗುತ್ತಾರೆ. ತಂದೆಯು ರಚಯಿತನೂ ಆಗಿದ್ದಾರೆ, ನೀವು ಮಕ್ಕಳನ್ನು ರಚನೆ ಮಾಡುತ್ತಾರೆ. ತನ್ನವರನ್ನಾಗಿ ಮಾಡಿಕೊಂಡಿದ್ದಾರೆ, ನಿರ್ದೇಶಕನಾಗಿ ನಿರ್ದೇಶನವನ್ನೂ ಕೊಡುತ್ತಾರೆ. ಶ್ರೀಮತ ಕೊಡುತ್ತಾರೆ, ಮತ್ತೆ ಪಾತ್ರವನ್ನು ಅಭಿನಯಿಸುತ್ತಾರೆ. ಜ್ಞಾನವನ್ನೂ ತಿಳಿಸುತ್ತಾರೆ, ಇದೂ ಸಹ ಅವರ ಶ್ರೇಷ್ಠಾತಿ ಶ್ರೇಷ್ಠ ಪಾತ್ರವಾಯಿತಲ್ಲವೆ. ಡ್ರಾಮಾದ ರಚಯಿತ, ನಿರ್ದೇಶಕ, ಮುಖ್ಯ ಪಾತ್ರಧಾರಿಯನ್ನೇ ಅರಿತುಕೊಂಡಿಲ್ಲವೆಂದರೆ ಅಂತಹವರು ಏನಾದರು? ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಅಮೂಲ್ಯ ಜೀವನದಲ್ಲಿ ಓದಿಸುವ ಶಿಕ್ಷಕರ ಪ್ರತಿ ಬಹಳ-ಬಹಳ ಗೌರವವನ್ನಿಡಬೇಕಾಗಿದೆ. ವಿದ್ಯೆಯಲ್ಲಿ ಒಳ್ಳೆಯ ಬುದ್ಧಿವಂತರಾಗಿ ಸರ್ವೀಸಿನಲ್ಲಿ ತೊಡಗಬೇಕಾಗಿದೆ. ತಮ್ಮ ಮೇಲೆ ತಾವೇ ದಯೆ ತೋರಿಸಿಕೊಳ್ಳಬೇಕಾಗಿದೆ.

2. ತಮ್ಮನ್ನು ತಾವು ಸುಧಾರಣೆ ಮಾಡಿಕೊಳ್ಳಲು ನಿರ್ವಿಕಾರಿಗಳಾಗಬೇಕಾಗಿದೆ. ತಮ್ಮ ನಡುವಳಿಕೆಯನ್ನು ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.

ವರದಾನ:
ಸಂಕಲ್ಪ ಮತ್ತು ಮಾತಿನ ವಿಸ್ತಾರವನ್ನು ಸಾರದಲ್ಲಿ ತರುವಂತಹವರೇ ಅಂತರ್ಮುಖಿ ಭವ.

ವ್ಯರ್ಥ ಸಂಕಲ್ಪಗಳ ವಿಸ್ತಾರವನ್ನು ಸಂಕುಚಿತ ಮಾಡಿ ಸಾರ ರೂಪದಲ್ಲಿ ಸ್ಥಿತರಾಗುವುದು ಹಾಗೂ ಮುಖದ ಧ್ವನಿಯ ವ್ಯರ್ಥವನ್ನು ಸಂಕುಚಿತಗೊಳಿಸಿ ಸಮರ್ಥ ಅರ್ಥಾತ್ ಸಾರ ರೂಪದಲ್ಲಿ ತರುವಂತಹುದು - ಇದೇ ಆಗಿದೆ ಅಂತರ್ಮುಖತೆ. ಈ ರೀತಿಯ ಅಂತರ್ಮುಖಿ ಮಕ್ಕಳೇ ಶಾಂತಿಯ ಶಕ್ತಿಯ ಮೂಲಕ ಅಲೆದಾಡುತ್ತಿರುವ ಆತ್ಮಗಳಿಗೆ ಸರಿಯಾದ ಸ್ಥಾನವನ್ನು ತೋರಿಸಲು ಸಾಧ್ಯ. ಈ ಶಾಂತಿಯ ಶಕ್ತಿ ಅನೇಕ ಆತ್ಮೀಯ ಬಣ್ಣಗಳನ್ನು ತೋರಿಸುವುದು. ಶಾಂತಿಯ ಶಕ್ತಿಯಿಂದ ಪ್ರತಿ ಆತ್ಮರ ಮನಸ್ಸಿನ ಧ್ವನಿ ಇಷ್ಟು ಸಮೀಪ ಕೇಳಿ ಬರುತ್ತೆ ಹೇಗೆ ಯಾರಾದರೂ ಸಮ್ಮುಖದಲ್ಲಿ ಹೇಳುತ್ತಿರುವಂತೆ.

ಸ್ಲೋಗನ್:
ಸ್ವಭಾವ, ಸಂಸ್ಕಾರ, ಸಂಬಂಧ, ಸಂಪರ್ಕದಲ್ಲಿ ಹಗುರರಾಗಿರುವುದು ಅರ್ಥಾತ್ ಫರಿಶ್ತಾ ಆಗುವುದಾಗಿದೆ.