07.09.21         Morning Kannada Murli       Om Shanti           BapDada Madhuban


``ಮಧುರ ಮಕ್ಕಳೇ - ನೀವು ಈಶ್ವರೀಯ ವಿದ್ಯಾರ್ಥಿಗಳಾಗಿದ್ದೀರಿ, ನೀವು ಸತ್ಯ-ಸತ್ಯ ರೂಪಭಸಂತರಾಗಿ ತಮ್ಮ ಮುಖದಿಂದ ಸದಾ ಜ್ಞಾನ ರತ್ನಗಳೇ ಹೊರಬರಬೇಕಾಗಿದೆ''

ಪ್ರಶ್ನೆ:
ನೀವು ಮಕ್ಕಳು ಶಿವ ತಂದೆಯ ಸತ್ಯ-ಸತ್ಯವಾದ ಮುದ್ದು ಮಕ್ಕಳಾಗಿದ್ದೀರಿ, ನೀವು ಯಾವ ಶ್ರೀಮತವನ್ನು ಅವಶ್ಯವಾಗಿ ಪಾಲನೆ ಮಾಡಬೇಕು?

ಉತ್ತರ:
ಹೇ ನನ್ನ ಮುದ್ದು ಮಕ್ಕಳೇ- ನೀವು ದಯಾಹೃದಯಿಗಳಾಗಿರಿ, ಎಂದೂ ಮನಮತದಂತೆ ನಡೆಯಬಾರದು. ಅಲ್ಲಿ ಇಲ್ಲಿನ ಮಾತುಗಳನ್ನು ತಿಳಿಸಿ ದೂತಿಯ ಕೆಲಸ ಮಾಡಬಾರದು. ಯಾರಲ್ಲಿ ಇಂತಹ ಹವ್ಯಾಸವಿದೆಯೋ ಅವರು ತನ್ನ ಹಾಗೂ ಅನ್ಯರ ನಷ್ಟವನ್ನುಂಟು ಮಾಡುತ್ತಾರೆ. ಇಂತಹ ಉಲ್ಟಾ ಸುಲ್ಟಾ ಮಾತುಗಳನ್ನು ತಿಳಿಸುವವರಿಂದ ನೀವು ಸದಾ ಎಚ್ಚರಿಕೆಯಿಂದಿರಿ.

ಓಂ ಶಾಂತಿ.
ಇದು ಕಾಲೇಜು ಆಗಿದೆಯಲ್ಲವೆ. ಹೇಗೆ ಶಾಲೆಯಲ್ಲಿ ವಿದ್ಯಾರ್ಥಿಗಳು ಕುಳಿತುಕೊಂಡಾಗ ನಾವು ಶಿಕ್ಷಕರ ಮುಂದೆ ಕುಳಿತಿದ್ದೇವೆಂದು ತಿಳಿದುಕೊಳ್ಳುತ್ತಾರೆ. ಯಾವ ಪರೀಕ್ಷೆಯನ್ನು ತೇರ್ಗಡೆ ಮಾಡಿ ಕುಳಿತಿದ್ದೇವೆ ಎಂಬುದೂ ಸಹ ಬುದ್ಧಿಯಲ್ಲಿರುತ್ತದೆ. ಸತ್ಸಂಗಗಳಲ್ಲಿ ಎಲ್ಲಿ ವೇದಶಾಸ್ತ್ರಗಳನ್ನು ತಿಳಿಸುತ್ತಾರೆಯೋ ಅಲ್ಲಿ ಯಾವುದೇ ಗುರಿ-ಧ್ಯೇಯವು ಇರುವುದಿಲ್ಲ. ಆ ಶಾಸ್ತ್ರ ಇತ್ಯಾದಿಗಳು ನಿಮ್ಮ ಬುದ್ಧಿಯಿಂದ ಹೊರಟು ಹೋಗಿದೆ. ನೀವು ತಿಳಿದುಕೊಂಡಿದ್ದೀರಿ - ನಾವು ಭವಿಷ್ಯ 21 ಜನ್ಮಗಳಿಗಾಗಿ ಮನುಷ್ಯರಿಂದ ದೇವತೆಗಳು ಆಗುತ್ತಿದ್ದೇವೆ. ವಿದ್ಯಾರ್ಥಿಯು ಮನೆಯಲ್ಲಿಯೇ ಕುಳಿತಿರಲಿ ಅಥವಾ ಎಲ್ಲಿಯೇ ಹೋದರೂ ಸಹ ನಾನು ಇಂತಹ ಪರೀಕ್ಷೆಯನ್ನು ತೇರ್ಗಡೆ ಮಾಡುತ್ತೇನೆಂದು ಬುದ್ಧಿಯಲ್ಲಿರುತ್ತದೆ. ನೀವು ಮಕ್ಕಳೂ ಸಹ ತರಗತಿಯಲ್ಲಿ ಕುಳಿತುಕೊಂಡಿದ್ದರೂ ಇದನ್ನು ತಿಳಿದುಕೊಳ್ಳುತ್ತೀರಿ- ನಾವು ದೇವತೆಗಳಾಗುತ್ತಿದ್ದೇವೆ, ನೀವೂ ಸಹ ತಮ್ಮನ್ನು ವಿದ್ಯಾರ್ಥಿಯೆಂದು ತಿಳಿದುಕೊಳ್ಳುತ್ತೀರಲ್ಲವೆ. ನಾವು ಆತ್ಮರಾಗಿದ್ದೇವೆ, ಈ ಶರೀರದ ಮುಖಾಂತರ ನಾವು ಓದುತ್ತಿದ್ದೇವೆ. ಆತ್ಮಕ್ಕೆ ತಿಳಿದಿದೆ - ಈ ಶರೀರವನ್ನು ಬಿಟ್ಟು ಭವಿಷ್ಯದಲ್ಲಿ ನಾವು ಹೊಸ ಶರೀರವನ್ನು ತೆಗೆದುಕೊಳ್ಳುತ್ತೇವೆ. ಅವರಿಗೆ ದೇವತೆಗಳೆಂದು ಹೇಳಲಾಗುತ್ತದೆ. ಇದಂತೂ ಭಿಕಾರಿ ಪತಿತ ಶರೀರವಾಗಿದೆ. ನಮಗೆ ಮತ್ತೆ ಹೊಸ ಶರೀರ ಸಿಗುವುದು. ಈ ತಿಳುವಳಿಕೆಯು ಈಗ ಸಿಕ್ಕಿದೆ. ನಾನಾತ್ಮನು ಓದುತ್ತಿದ್ದೇನೆ, ಜ್ಞಾನ ಸಾಗರನು ಓದಿಸುತ್ತಿದ್ದಾರೆ. ಇಲ್ಲಿ ನಿಮಗೆ ಗೃಹಸ್ಥ ವ್ಯವಹಾರದ ಚಿಂತೆಯಿಲ್ಲ. ಬುದ್ಧಿಯಲ್ಲಿ ಇದೇ ಇರುತ್ತದೆ - ನಾವು ಭವಿಷ್ಯಕ್ಕಾಗಿ ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆ. ದೇವತೆಗಳು ಸ್ವರ್ಗದಲ್ಲಿರುತ್ತಾರೆ. ಇದನ್ನು ಪದೇ-ಪದೇ ಚಿಂತನೆ ಮಾಡುವುದರಿಂದ ಮಕ್ಕಳಿಗೆ ಖುಷಿಯಿರುವುದು, ಪುರುಷಾರ್ಥವನ್ನೂ ಮಾಡುತ್ತೀರಿ. ಮನಸ್ಸಾ-ವಾಚಾ-ಕರ್ಮಣಾ ಪವಿತ್ರರಾಗಿರುತ್ತೀರಿ, ಎಲ್ಲರಿಗೆ ಖುಷಿಯ ಸಂದೇಶವನ್ನು ತಿಳಿಸುತ್ತಾ ಇರುತ್ತೀರಿ. ಬ್ರಹ್ಮಾಕುಮಾರರೂ ಸಹ ಅನೇಕರಿದ್ದಾರಲ್ಲವೆ. ಎಲ್ಲರೂ ವಿದ್ಯಾರ್ಥಿ ಜೀವನದಲ್ಲಿದ್ದಾರೆ, ಉದ್ಯೋಗ - ವ್ಯವಹಾರಗಳಲ್ಲಿ ಹೋದಾಗ ವಿದ್ಯಾರ್ಥಿ ಜೀವನ ಮರೆತುಹೋಗುತ್ತದೆ ಎಂದಲ್ಲ. ಹೇಗೆ ಈ ಸಿಹಿ ತಿಂಡಿಗಳನ್ನು ಮಾರುವವರಿದ್ದಾರೆ, ಇವರೂ ಸಹ ನಾನು ವಿದ್ಯಾರ್ಥಿಯಾಗಿದ್ದೇನೆಂದು ತಿಳಿದುಕೊಳ್ಳುತ್ತಾರಲ್ಲವೆ. ಹಾಗೆ ನೋಡಿದರೆ ವಿದ್ಯಾರ್ಥಿಗಳು ಎಂದೂ ಸಿಹಿ ತಿಂಡಿಗಳನ್ನು ತಯಾರು ಮಾಡುವುದಿಲ್ಲ. ಇಲ್ಲಂತೂ ನಿಮ್ಮ ಮಾತೇ ಭಿನ್ನವಾಗಿದೆ. ಶರೀರ ನಿರ್ವಹಣೆಗಾಗಿ ಉದ್ಯೋಗ-ವ್ಯವಹಾರಗಳನ್ನೂ ಮಾಡಬೇಕಾಗಿದೆ, ಜೊತೆ ಜೊತೆಗೆ ಬುದ್ಧಿಯಲ್ಲಿ ಇದು ನೆನಪಿರಲಿ - ನಾವು ಪರಮಪಿತ ಪರಮಾತ್ಮನ ಮೂಲಕ ಓದುತ್ತಿದ್ದೇವೆ. ನಿಮ್ಮ ಬುದ್ಧಿಯಲ್ಲಿರುತ್ತದೆ - ಈ ಸಮಯದಲ್ಲಿ ಇಡೀ ಪ್ರಪಂಚವೇ ನರಕವಾಸಿಯಾಗಿದೆ ಆದರೆ ನಾವು ಭಾರತವಾಸಿಗಳು ನರಕವಾಸಿಗಳಾಗಿದ್ದೇವೆ. ನಾವು ಭಾರತವಾಸಿಗಳೇ ಸ್ವರ್ಗವಾಸಿಗಳಾಗಿದ್ದೆವು ಎಂಬುದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ನೀವು ಮಕ್ಕಳಿಗೂ ಸಹ ಇಡೀ ದಿನ ಈ ನಶೆಯಿರುವುದಿಲ್ಲ. ಪದೇ-ಪದೇ ಮರೆತು ಹೋಗುತ್ತದೆ. ಭಲೆ ನೀವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ, ಟೀಚರ್ಸ್ ಆಗಿದ್ದೀರಿ, ಶಿಕ್ಷಣವನ್ನು ಕೊಡುತ್ತೀರಿ. ಮನುಷ್ಯರು ದೇವತೆ, ನರಕವಾಸಿಗಳನ್ನು ಸ್ವರ್ಗವಾಸಿಯನ್ನಾಗಿ ಮಾಡುತ್ತಿದ್ದೀರಿ ಆದರೂ ಸಹ ಇದು ಮರೆತು ಹೋಗುತ್ತದೆ. ನಿಮಗೆ ತಿಳಿದಿದೆ - ಈ ಸಮಯದಲ್ಲಿ ಇಡೀ ಪ್ರಪಂಚವೇ ಆಸುರೀ ಸಂಪ್ರದಾಯವಾಗಿದೆ. ಆತ್ಮವು ಪತಿತವಾಗಿರುವುದರಿಂದ ಪತಿತ ಶರೀರವು ಸಿಗುತ್ತದೆ. ಈಗ ನೀವು ಮಕ್ಕಳಿಗೆ ಈ ವಿಕಾರಗಳಿಂದ ನಿಂದನೆ ಬರುತ್ತದೆ. ಕಾಮ, ಕ್ರೋಧ, ಇತ್ಯಾದಿಗಳೆಲ್ಲವೂ ಗ್ಲಾನಿಯ ಮಾರ್ಗಗಳಾಗಿವೆ. ಎಲ್ಲದಕ್ಕಿಂತ ಗ್ಲಾನಿಯ ಮಾತಾಗಿದೆ - ವಿಕಾರ. ಸನ್ಯಾಸಿಗಳಲ್ಲಿಯೂ ಸ್ವಲ್ಪ ಕ್ರೋಧವಿರುತ್ತದೆ ಏಕೆಂದರೆ ಅನ್ನದಂತೆ ಮನ, ಗೃಹಸ್ಥಿಗಳ ಕೈಯಿಂದ ತಿನ್ನುತ್ತಾರಲ್ಲವೆ. ಭಲೆ ದವಸ-ಧಾನ್ಯಗಳನ್ನು ತಿನ್ನುವುದಿಲ್ಲ ಆದರೆ ಹಣವನ್ನಾದರೂ ತೆಗೆದುಕೊಳ್ಳುತ್ತಾರಲ್ಲವೆ. ಅದರಲ್ಲಿ ಪತಿತರ ಪ್ರಭಾವ ಇರುತ್ತದೆ. ಪತಿತರ ಅನ್ನವು ಪತಿತರನ್ನಾಗಿಯೇ ಮಾಡುವುದು. ಪವಿತ್ರತೆಯ ಮೇಲೆ ನೀವು ಕ್ರಾಂತಿ ಮಾಡುತ್ತೀರಿ, ಇದು ಹೆಚ್ಚುತ್ತಾ ಹೋಗುವುದು. ನಾವು ಪವಿತ್ರರಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಈ ಮಾತು ಹೃದಯಕ್ಕೆ ನಾಟುತ್ತದೆ. ಪವಿತ್ರರಾಗದೇ ಯಾರೂ ಸ್ವರ್ಗದ ಮಾಲೀಕರಾಗಲು ಸಾಧ್ಯವಿಲ್ಲ. ನಿಧಾನ-ನಿಧಾನವಾಗಿ ಎಲ್ಲರ ಬುದ್ಧಿಯಲ್ಲಿ ಬರುತ್ತಾ ಹೋಗುವುದು. ಯಾರು ಸ್ವರ್ಗವಾಸಿಗಳಾಗಬೇಕಾಗಿದೆಯೋ ಅವರೇ ಆಗುವರು. ನಾವಂತೂ ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗುತ್ತೇವೆಂದು ಹೇಳುತ್ತಾರೆ. ಇದು ಕಲ್ಯಾಣಕಾರಿ ಸಂಗಮಯುಗವಾಗಿದೆ. ಈಗ ಪತಿತ ಪ್ರಪಂಚವು ಪಾವನವಾಗುತ್ತದೆ ಆದ್ದರಿಂದ ಇದಕ್ಕೆ ಪುರುಷೋತ್ತಮ ಯುಗವೆಂದು ಹೇಳಲಾಗುತ್ತದೆ. ಇದು ಕಲ್ಯಾಣಕಾರಿಯಾಗಿದೆ, ಮನುಷ್ಯ ಸೃಷ್ಟಿಯ ಕಲ್ಯಾಣವಾಗುತ್ತದೆ. ತಂದೆಯೂ ಕಲ್ಯಾಣಕಾರಿಯಾಗಿದ್ದಾರೆ ಅಂದಮೇಲೆ ಮಕ್ಕಳನ್ನೂ ಮಾಡುತ್ತಾರೆ. ಬಂದು ಯೋಗವನ್ನು ಕಲಿಸಿ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ.

ನೀವು ತಿಳಿದುಕೊಂಡಿದ್ದೀರಿ, ಇದು ನಮ್ಮ ಮುಖ್ಯ ಶಾಲೆಯಾಗಿದೆ. ಇಲ್ಲಿ ಯಾರಿಗೂ ಯಾವುದೇ ಜಂಜಾಟವಿಲ್ಲ. ಹೊರಗಡೆ ಹೋದಾಗ ಉದ್ಯೋಗ ವ್ಯವಹಾರಗಳಲ್ಲಿ ತೊಡಗುತ್ತಾರೆಂದರೆ ನಾವು ವಿದ್ಯಾರ್ಥಿಗಳಾಗಿದ್ದೇವೆ, ನಾವು ನರಕವಾಸಿಗಳಿಂದ ಸ್ವರ್ಗವಾಸಿಗಳಾಗುತ್ತಿದ್ದೇವೆ ಎಂಬುದೇ ನೆನಪಿರುವುದಿಲ್ಲ. ಯಾವಾಗ ಸಮಯ ಸಿಗುವುದೋ ಆಗಲೇ ಬುದ್ಧಿಯಲ್ಲಿ ಈ ವಿಚಾರಗಳು ನಡೆಯುತ್ತವೆ. ಪ್ರಯತ್ನ ಪಟ್ಟು ಸಮಯವನ್ನು ತೆಗೆಯಬೇಕು. ಬುದ್ಧಿಯಲ್ಲಿ ನೆನಪಿರಲಿ - ನಾವು ತಮೋಪ್ರಧಾನರಿಂದ ಸತೋಪ್ರಧಾನರು ಆಗುತ್ತಿದ್ದೇವೆ. ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ವ್ಯಾಪಾರದಲ್ಲಿಯೂ ಸಮಯ ಸಿಗುತ್ತದೆ ಅಂದಾಗ ಬುದ್ಧಿಯಲ್ಲಿ ಪ್ರಯತ್ನ ಪಟ್ಟು ಈ ನೆನಪು ತಂದುಕೊಳ್ಳಬೇಕು, ನಾವು ಈಶ್ವರೀಯ ವಿದ್ಯಾರ್ಥಿಗಳಾಗಿದ್ದೇವೆ, ಜೀವನೋಪಾಯಕ್ಕಾಗಿ ಈ ಉದ್ಯೋಗ ವ್ಯವಹಾರ ಮಾಡುತ್ತೇವೆ. ಅದು ಮಾಯಾವೀ ಸಂಪಾದನೆಯಾಗಿದೆ. ಇದೂ ಸಹ ನಿಮ್ಮ ಜೀವನೋಪಾಯ ಆಗಿದೆ. ಭವಿಷ್ಯಕ್ಕಾಗಿ ಸತ್ಯ ಸಂಪಾದನೆಯಂತೂ ಇದಾಗಿದೆ. ಇದರಲ್ಲಿ ಬಹಳ ಒಳ್ಳೆಯ ಬುದ್ಧಿ ಬೇಕು. ತನ್ನನ್ನು ಆತ್ಮನೆಂದು ತಿಳಿದು ಪರಮಪಿತ ಪರಮಾತ್ಮನನ್ನು ನೆನಪು ಮಾಡಬೇಕಾಗಿದೆ. ತಿಳಿಸಬೇಕು, ಈಗ ನಾವಾತ್ಮರು ಮನೆಗೆ ಹೋಗಬೇಕಾಗಿದೆ. ತಂದೆಯು ನಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ಇಡೀ ದಿನ ನಿಮ್ಮ ಬುದ್ಧಿಯಲ್ಲಿ ವಿಚಾರ ಸಾಗರ ಮಂಥನ ನಡೆಯಬೇಕು. ಹೇಗೆ ಹಸು ಹುಲ್ಲನ್ನು ತಿಂದು ಮೆಲುಕು ಹಾಕುತ್ತಾ ಇರುತ್ತದೆಯೋ ಅದೇರೀತಿ ಜ್ಞಾನದ ಚಿಂತನೆ ನಡೆಯುತ್ತಾ ಇರಬೇಕಾಗಿದೆ. ಮಕ್ಕಳಿಗೆ ಅವಿನಾಶಿ ಖಜಾನೆ ಸಿಗುತ್ತದೆ, ಇದು ಆತ್ಮರಿಗಾಗಿ ಭೋಜನವಾಗಿದೆ. ಇದು ನೆನ್ಪಪಿಗೆ ಬರಬೇಕಾಗಿದೆ - ನಾವು ಪರಮಪಿತ ಪರಮಾತ್ಮನ ಮೂಲಕ ದೇವತೆಗಳಾಗಲು ಅಥವಾ ರಾಜ್ಯ ಪದವಿಯನ್ನು ಪಡೆಯಲು ಓದುತ್ತಿದ್ದೇವೆ. ಇದನ್ನು ನೆನಪು ಮಾಡಿಕೊಳ್ಳಬೇಕಾಗಿದೆ, ಪದೇ-ಪದೇ ಮರೆತು ಹೋಗುವ ಕಾರಣ ಖುಷಿಯ ಬದಲು ಸ್ಥಿತಿಯು ಬಾಡಿ ಹೋಗಿರುತ್ತದೆ. ಇದು ಸಂಜೀವಿನಿ ಮೂಲಿಕೆಯಾಗಿದೆ ಯಾವುದನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು ಮತ್ತು ಅನ್ಯರನ್ನೂ ಜಾಗೃತಗೊಳಿಸುವುದಕ್ಕಾಗಿ ಅನ್ಯರಿಗೂ ಕೊಡಬೇಕಾಗಿದೆ. ಶಾಸ್ತ್ರಗಳಲ್ಲಿ ಬಹಳ ಉದ್ದಗಲವಾದ ಕಥೆಗಳನ್ನು ಬರೆದು ಬಿಟ್ಟಿದ್ದಾರೆ. ತಂದೆಯು ಇವೆಲ್ಲದರ ರಹಸ್ಯವನ್ನು ತಿಳಿಸುತ್ತಾರೆ. ಮನ್ಮನಾಭವ ಅರ್ಥಾತ್ ತಂದೆಯನ್ನು ನೆನಪು ಮಾಡಿದರೆ ನೀವು ಸ್ವರ್ಗದ ಮಾಲೀಕರಾಗಿ ಬಿಡುತ್ತೀರಿ. ನಿಮ್ಮ ಹೃದಯದಿಂದ ಕೇಳಿಕೊಳ್ಳುತ್ತಾ ಇರಿ, ಪರಿಶೀಲನೆ ಮಾಡಿಕೊಳ್ಳುತ್ತಾ ಇರಿ. ಒಬ್ಬರು ಇನ್ನೊಬ್ಬರಿಗೆ ಸಾವಧಾನ ನೀಡುತ್ತಾ ಇರಿ. ಯಾವುದೇ ಕಿರಿ ಕಿರಿಯಾಗುತ್ತದೆ ಎಂದರೆ ಬುದ್ಧಿಯು ಅದರಲ್ಲಿ ತೊಡಗಿ ಬಿಡುವ ಕಾರಣ ಯಾರ ಮಾತೂ ಇಷ್ಟವಾಗುವುದಿಲ್ಲ. ಬುದ್ಧಿಯು ಮಾಯೆಯ ಕಡೆ ಹೋಗುವ ಕಾರಣ ಮತ್ತೆ ಅದೇ ಚಿಂತೆಯಿರುವುದು. ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕಾಗಿದೆ, ತಂದೆಯನ್ನು ನೆನಪು ಮಾಡಿರಿ ಆದರೆ ತಮ್ಮದೇ ಗೊಂದಲದಲ್ಲಿದ್ದರೆ ಆ ಔಷಧಿಯು ಇರುವುದಿಲ್ಲ, ಗುಟಕರಿಸುತ್ತಾ ಇರುತ್ತಾರೆ ಆದರೆ ಈ ರೀತಿ ಮಾಡಬಾರದು. ವಿದ್ಯಾರ್ಥಿಗಳು ವಿದ್ಯೆಯನ್ನು ಬಿಟ್ಟು ಬಿಡುತ್ತಾರೆಯೇ! ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಭವಿಷ್ಯಕ್ಕಾಗಿ ಈ ನಮ್ಮ ವಿದ್ಯೆಯಿದೆ, ಇದರಲ್ಲಿ ನಮ್ಮ ಕಲ್ಯಾಣವಿದೆ. ಉದ್ಯೋಗ ವ್ಯವಹಾರಗಳನ್ನು ಮಾಡುತ್ತಲೂ ಕೋರ್ಸ್ ತೆಗೆದುಕೊಳ್ಳಬೇಕಾಗಿದೆ. ಈ ಸೃಷ್ಠಿ ಚಕ್ರವು ಹೇಗೆ ಸುತ್ತುತ್ತದೆ ಎಂಬ ಜ್ಞಾನವನ್ನೂ ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ನೆನಪು ಸಂಜೀವಿನಿ ಮೂಲಿಕೆಯಾಗಿದೆ. ಒಬ್ಬರು ಇನ್ನೊಬ್ಬರಿಗೆ ನೆನಪು ತರಿಸಬೇಕು, ಸ್ತ್ರೀ ಪುರುಷರು ಒಬ್ಬರು ಇನ್ನೊಬ್ಬರಿಗೆ ನೆನಪು ತರಿಸುತ್ತಾ ಇರಿ. ಶಿವ ತಂದೆಯು ಬ್ರಹ್ಮಾರವರ ಮೂಲಕ ಇದನ್ನು ಓದಿಸುತ್ತಿದ್ದಾರೆ. ಶಿವ ತಂದೆಯ ರಥದ ಶೃಂಗಾರ ಮಾಡುತ್ತಿದ್ದೀರಿ ಅಂದಮೇಲೆ ಶಿವ ತಂದೆಯ ನೆನಪಿರಬೇಕು. ಇಡೀ ದಿನ ನೆನಪಿರುವುದಂತೂ ಪರಿಶ್ರಮವಾಗಿದೆ. ಆ ಸ್ಥಿತಿಯು ಅಂತ್ಯದಲ್ಲಿಯೇ ಬರುವುದು. ಕರ್ಮಾತೀತ ಸ್ಥಿತಿಯನ್ನೂ ಪಡೆಯುವವರೆಗೂ ಶಕ್ತಿಶಾಲಿಗಳೊಂದಿಗೆ ಮಾಯೆಯು ಹೋರಾಡುತ್ತಾ ಇರುವುದು. ಗಾಯನವಿದೆ, ಒಬ್ಬರು ಇನ್ನೊಬ್ಬರಿಗೆ ಸಾವಧಾನ ನೀಡುತ್ತಾ ಉನ್ನತಿಯನ್ನು ಪಡೆಯಿರಿ. ಅಧಿಕಾರಿಗಳು ನೌಕರರಿಗೂ ಸಹ ನನಗೆ ಈ ಮಾತುಗಳನ್ನು ನೆನಪು ಮಾಡಿಸಿ ಎಂದು ಹೇಳುತ್ತಾರೆ, ಹಾಗೆಯೇ ನೀವೂ ಸಹ ಒಬ್ಬರು ಇನ್ನೊಬ್ಬರಿಗೆ ನೆನಪು ತರಿಸಿ. ಬಹಳ ಉನ್ನತ ಗುರಿಯಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ಪಾವನರಾಗುತ್ತೀರಿ. ತಂದೆಯು ಯಾವುದೇ ಹೊಸ ಮಾತನ್ನು ತಿಳಿಸುತ್ತಿಲ್ಲ. ನೀವು ಲಕ್ಷಾಂತರ, ಕೋಟ್ಯಾಂತರ ಬಾರಿ ಈ ಜ್ಞಾನವನ್ನು ಕೇಳಿದ್ದೀರಿ, ಪುನಃ ಇದನ್ನು ಕೇಳುತ್ತೀರಿ. ಈ ರೀತಿ ಯಾವುದೇ ಸತ್ಸಂಗವನ್ನು ಹೇಳುವವರು ಇರುವುದಿಲ್ಲ. ನಾವು ಕಲ್ಪ-ಕಲ್ಪವೂ ಇದನ್ನು ಕೇಳಿದ್ದೇವೆ, ಈಗಲೂ ಕೇಳುತ್ತಿದ್ದೇವೆ, ಪುನಃ ಕೇಳುತ್ತೇವೆ, ಕಲ್ಪ-ಕಲ್ಪವೂ ಕೇಳುತ್ತಾ ಬಂದಿದ್ದೇವೆ ಎಂದು ಯಾರೂ ಹೇಳುವುದಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಅರ್ಧಕಲ್ಪ ಭಕ್ತಿ ಮಾಡಿದ್ದೀರಿ, ಈಗ ಪುನಃ ನಿಮಗೆ ಜ್ಞಾನ ಸಿಕ್ಕಿದೆ, ಇದರಿಂದ ಸದ್ಗತಿಯಾಗುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ ಪಾಪವು ಕಳೆಯುವುದು, ಇದು ತಿಳಿದುಕೊಳ್ಳುವ ಮಾತಲ್ಲವೆ. ಪುರುಷಾರ್ಥ ಮಾಡಬೇಕಾಗಿದೆ. ಜಡ್ಜ್ ಅಥವಾ ಯಾವುದೇ ಹಿರಿಯ ವ್ಯಕ್ತಿಗಳ ಮಕ್ಕಳು ಯಾವುದೇ ಉಲ್ಟಾ ಕರ್ಮ ಮಾಡಿದರೆ ಹೆಸರು ಕೆಡುತ್ತದೆ. ಇಲ್ಲಿ ನೀವೂ ಸಹ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಇಂತಹ ಯಾವುದೇ ಕರ್ಮ ಮಾಡಬಾರದು. ಇಲ್ಲವಾದರೆ ತಂದೆಯ ನಿಂದನೆ ಮಾಡಿಸುತ್ತೀರಿ. ಸದ್ಗುರುವಿನ ನಿಂಧಕರಿಗೆ ನೆಲೆಯಿಲ್ಲ ಅರ್ಥಾತ್ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಈಶ್ವರನ ಸಂತಾನರಾದ ಮೇಲೆ ಆಸುರೀ ಕರ್ಮಕ್ಕೆ ಹೆದರಬೇಕಾಗಿದೆ. ಶ್ರೀಮತದಂತೆ ನಡೆಯಬೇಕಾಗಿದೆ. ತನ್ನ ಮತದಂತೆ ನಡೆಯದೇ ಮೋಸ ಹೋಗುತ್ತೀರಿ, ಪದವಿ ಭ್ರಷ್ಟವಾಗುವುದು. ನಾವು ತಮ್ಮ ಮತದಂತೆ ಸರಿಯಾಗಿ ನಡೆಯುತ್ತಿದ್ದೇವೆಯೇ ಎಂದು ನೀವು ಕೇಳಬಹುದಾಗಿದೆ. ತಂದೆಯ ಮೊಟ್ಟ ಮೊದಲ ಮತವಾಗಿದೆ - ನನ್ನನ್ನು ನೆನಪು ಮಾಡಿರಿ, ಯಾವುದೇ ವಿಕರ್ಮ ಮಾಡಬೇಡಿ. ಬಾಬಾ, ನಾನು ಯಾವ ವಿಕರ್ಮ ಮಾಡುತ್ತೇನೆ, ತಮಗೆ ಗೊತ್ತಿದ್ದರೆ ತಿಳಿಸಿ ಎಂದು ಕೇಳಿದಾಗ ತಂದೆಯು ತಿಳಿಸುತ್ತಾರೆ, ನಿಮ್ಮಿಂದ ಇಂತಿಂತಹ ತಪ್ಪುಗಳಾಗುತ್ತವೆ. ಅದಕ್ಕೆ ವಿಕರ್ಮವೆಂದು ಹೇಳಲಾಗುತ್ತದೆ. ಕಾಮ ವಿಕಾರವು ಎಲ್ಲದಕ್ಕಿಂತ ದೊಡ್ಡ ವಿಕರ್ಮವಾಗಿದೆ, ಹೆಚ್ಚು ಕಲಹಗಳು ಇದರಿಂದಲೇ ನಡೆಯುತ್ತದೆ, ಮಕ್ಕಳಿಗೆ ಸಾಹಸ ಬರಬೇಕು ವಿಚಾರ ಮಾಡಬೇಕಾಗಿದೆ. ಕುಮಾರಿಯರ ಗುಂಪು ತಯಾರಾಗಬೇಕು. ಇದನ್ನು ಧೈರ್ಯದಿಂದ ಹೇಳಬೇಕು - ನಾವು ವಿವಾಹ ಆಗುವುದೇ ಇಲ್ಲ. ಈಗ ಕಲ್ಪದ ಸಂಗಮಯುಗವಾಗಿದೆ, ಇದರಲ್ಲಿ ಪುರುಷೋತ್ತಮರು ಆಗಬೇಕಾಗಿದೆ. ಈ ಲಕ್ಷ್ಮೀ-ನಾರಾಯಣರಿಗೆ ಪುರುಷೋತ್ತಮರೆಂದು ಹೇಳಲಾಗುತ್ತದೆ. ವಿಕಾರಿಗಳಿಗೆ ಪುರುಷೋತ್ತಮರೆಂದು ಹೇಳುವರೇ! ನೀವೀಗ ಪುರುಷೋತ್ತಮ ಆಗುತ್ತಿದ್ದೀರಿ. ಆಗುವ ಹಕ್ಕು ಎಲ್ಲರಿಗೂ ಇದೆ. ಪುರುಷೋತ್ತಮ ಮಾಸದಲ್ಲಿ ನೀವು ಬಹಳಷ್ಟು ಸರ್ವೀಸ್ ಮಾಡಬಹುದು. ಬಹಳ ಹೆಚ್ಚಾಗಿ ಸರ್ವೀಸ್ ಮಾಡಬೇಕು. ಈ ಪುರುಷೋತ್ತಮ ಯುಗವೇ ಉತ್ತಮ ಯುಗವಾಗಿದೆ, ಯಾವಾಗ ಮನುಷ್ಯರು ನರಕವಾಸಿಗಳಿಂದ ಸ್ವರ್ಗವಾಸಿಗಳಾಗುತ್ತಾರೆ. ಇದು ಸಾಮಾನ್ಯ ಮಾತಾಗಿದೆ. ನೀವು ಮಕ್ಕಳು ಬಹಳ ಚೆನ್ನಾಗಿ ತಿಳಿಸಬೇಕಾಗಿದೆ. ಸತ್ಯಯುಗದಲ್ಲಿ ಪುರುಷೋತ್ತಮರಿರುತ್ತಾರೆ, ಕಲಿಯುಗದಲ್ಲಿ ಯಾರೂ ಉತ್ತಮ ಪುರುಷರಿರುವುದೇ ಇಲ್ಲ. ಇದು ಪತಿತ ಪ್ರಪಂಚವಾಗಿದೆ. ಸತ್ಯಯುಗದಲ್ಲಿ ಪವಿತ್ರರೇ ಇರುತ್ತಾರೆ. ಇವೆಲ್ಲಾ ಮಾತುಗಳನ್ನು ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ. ನೀವು ಅನ್ಯರಿಗೆ ತಿಳಿಸಬೇಕಾಗಿದೆ. ಅವಕಾಶವನ್ನು ನೋಡಿ ಬೇರೆಯವರಿಗೆ ತಿಳಿಸಿಕೊಡಬೇಕು. ನೀವಿಲ್ಲಿ ಕುಳಿತಿದ್ದೀರಿ, ತಿಳಿದುಕೊಂಡಿದ್ದೀರಿ - ನಮಗೆ ನಿರಾಕಾರ ತಂದೆಯು ಪರಮಪಿತ ಪರಮಾತ್ಮನು ರಾಜಯೋಗವನ್ನು ಕಲಿಸುತ್ತಿದ್ದಾರೆ, ನಾವು ವಿದ್ಯಾರ್ಥಿಗಳಾಗಿದ್ದೇವೆ. ಈ ವಿದ್ಯೆಯಿಂದ ಸ್ವರ್ಗದ ದೇವಿ-ದೇವತೆಗಳಾಗುತ್ತಿದ್ದೇವೆ, ಎಲ್ಲಾ ಪರೀಕ್ಷೆಗಳಿಗಿಂತಲೂ ದೊಡ್ಡ ಪರೀಕ್ಷೆಯಾಗಿದೆ. ಇದು ರಾಜ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವ ಪರೀಕ್ಷೆಯಾಗಿದೆ. ಇದನ್ನು ಪರಮಾತ್ಮನ ವಿನಃ ಮತ್ತ್ಯಾರೂ ಓದಿಸಲು ಸಾಧ್ಯವಿಲ್ಲ. ತಂದೆಯು ಪರೋಪಕಾರಿಯಾಗಿದ್ದಾರೆ, ಸ್ವಯಂ ಸ್ವರ್ಗದ ಮಾಲೀಕನಾಗುವುದಿಲ್ಲ. ಶ್ರೀಕೃಷ್ಣನು ಸ್ವರ್ಗದ ರಾಜಕುಮಾರನಾಗುತ್ತಾನೆ. ತಂದೆಯು ನಿಷ್ಕಾಮ ಸೇವೆ ಮಾಡುತ್ತಾರೆ. ತಿಳಿಸುತ್ತಾರೆ, ಮಕ್ಕಳೇ ನಾನು ರಾಜನಾಗುವುದಿಲ್ಲ. ನಿಮ್ಮನ್ನು ರಾಜಾಧಿ ರಾಜರನ್ನಾಗಿ ಮಾಡುತ್ತೇನೆ, ಈ ಮಾತುಗಳು ಯಾರ ಬುದ್ಧಿಯಲ್ಲಿಯೂ ಇಲ್ಲ. ಇಂತಹವರು ಅನೇಕರಿದ್ದಾರೆ, ಭಲೆ ಇಲ್ಲಿ ಸಾಹುಕಾರರಾಗಿದ್ದಾರೆ ಆದರೆ ಅಲ್ಲಿ ಬಡವರಾಗಿ ಬಿಡುತ್ತಾರೆ ಮತ್ತು ಯಾರು ಈಗ ಬಡವರಾಗಿದ್ದಾರೆಯೋ ಅವರು ಅಲ್ಲಿ ಬಹಳ ಸಾಹುಕಾರರಾಗುತ್ತಾರೆ. ವಿಶ್ವದ ಮಾಲೀಕರಾಗುವುದು ಬೇಹದ್ದಿನ ಮಾತಾಗಿದೆಯಲ್ಲವೆ. ಗಾಯನವಿದೆ, ನಾನು ನಿಮ್ಮನ್ನು ರಾಜಾಧಿ ರಾಜರನ್ನಾಗಿ ಮಾಡುತ್ತೇನೆ. ಸ್ವರ್ಗದ ಮಾಲೀಕರನ್ನಾಗಿಯೇ ಮಾಡುವರು. ನಾವು ಸ್ವರ್ಗದ ಮಾಲೀಕರಾಗುತ್ತಿದ್ದೇವೆ ಎಂದು ನಿಮಗೆ ತಿಳಿದಿದೆ ಅಂದಮೇಲೆ ಎಷ್ಟೊಂದು ನಶೆಯಿರಬೇಕು, ನಮಗೆ ಓದಿಸುವವರು ಪರಮಪಿತ ಪರಮಾತ್ಮನಾಗಿದ್ದಾರೆ. ನಾವೆಲ್ಲರೂ ನರಕವಾಸಿಗಳಿಂದ ಸ್ವರ್ಗವಾಸಿ ದೇವತೆಗಳಾಗುತ್ತೇವೆ, ಇದು ನೆನಪಿನಲ್ಲಿದ್ದರೂ ಸಹ ಖುಷಿಯ ನಶೆಯೇರುವುದು. ವಿದ್ಯಾರ್ಥಿ ಜೀವನವು ಅತ್ಯುತ್ತಮ ಜೀವನವಾಗಿದೆ. ಪುರುಷಾರ್ಥ ಮಾಡಿ ರಾಜ-ರಾಣಿಯೇ ಆಗಬೇಕಾಗಿದೆ. ನಾವು ರಾಜರಾಗಿ ನಂತರ ಗುಲಾಮರಾಗುತ್ತೇವೆ ಎಂದು ತಿಳಿಸಬಾರದು. ಇದಕ್ಕೆ ಬದಲಾಗಿ ಕೇಳಬೇಕು - ತಾವು ಏನಾಗಲು ಬಯಸುತ್ತೀರಿ? ನಾವು ವಿಶ್ವದ ಮಾಲೀಕರಾಗುತ್ತೇವೆ ಎಂದು ಎಲ್ಲರೂ ಹೇಳುತ್ತಾರೆ. ಅಂದಮೇಲೆ ಭಗವಂತ ತಂದೆಯೇ ಆ ರೀತಿ ಮಾಡಬಲ್ಲರು. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ. ಎಷ್ಟು ಸಹಜ ಮಾತಾಗಿದೆ. ಯಾರು ಬೇಕಾದರೂ ಆಗಬಹುದಾಗಿದೆ. ಭಲೆ ಎಷ್ಟಾದರೂ ಬಡವರಾಗಿರಲಿ ಆದರೆ ಇದರಲ್ಲಿ ಹಣದ ಮಾತಿಲ್ಲ, ಆದ್ದರಿಂದ ತಂದೆಗೆ ಬಡವರ ಬಂಧು ಎಂದು ಹೇಳುತ್ತಾರೆ.

ತಂದೆಯನ್ನು ನೆನಪು ಮಾಡಿ ಪಾಪದ ಗಡಿಗೆಯನ್ನು ಖಾಲಿ ಮಾಡಿಕೊಳ್ಳಬೇಕಾಗಿದೆ. ಯಾರೆಷ್ಟು ಪರಿಶ್ರಮ ಪಡುವರೋ ಅವರು ಅಷ್ಟೇ ಪಡೆಯುತ್ತಾರೆ. ಏಣಿಯ ಚಿತ್ರವನ್ನು ನೋಡುತ್ತೀರಿ, ಅದರಲ್ಲಿ ಎಷ್ಟು ಮೇಲೇರುತ್ತಾರೆ. ಏರಿದರೆ ರಾಜರಾಗುವರು, ಬಿದ್ದರೆ ಪುಡಿ ಪುಡಿ.... ವಿಕಾರದಲ್ಲಿ ಬಿದ್ದು ವಿಚ್ಛೇದನ ಕೊಟ್ಟರೆ ತಂದೆಯು ಹೇಳುತ್ತಾರೆ - ಅಂತಹವರು ಕೆಳಗೆ ಬೀಳುವರು. ಸುಪುತ್ರರು ಪುರುಷಾರ್ಥ ಮಾಡಿ ತಮ್ಮ ಜನ್ಮವನ್ನು ವಜ್ರ ಸಮಾನ ಮಾಡಿಕೊಳ್ಳುತ್ತಾರೆ. ಮಕ್ಕಳು ಬಹಳ ಪುರುಷಾರ್ಥ ಮಾಡಬೇಕಾಗಿದೆ, ಯಾರು ಮಾಡುವರೋ ಅವರು ಪಡೆಯುತ್ತಾರೆ... ಮಾತಾಪಿತರನ್ನೇ ಫಾಲೋ ಮಾಡಿ ತಮ್ಮ ಸಮಾನ ಮಾಡಿಕೊಳ್ಳಿ ಎಂದು ಎಲ್ಲರಿಗೂ ಹೇಳುತ್ತಾರೆ. ಎಷ್ಟೆಷ್ಟು ದಯಾಹೃದಯಿಗಳಾಗುತ್ತೀರೋ ಅಷ್ಟು ನಿಮಗೇ ಲಾಭವಿದೆ. ಸಮಯವನ್ನು ವ್ಯರ್ಥ ಮಾಡಬಾರದು. ಅನ್ಯರಿಗೆ ಯುಕ್ತಿಯಿಂದ ತಿಳಿಸುತ್ತಾ ಇರಬೇಕಾಗಿದೆ, ಇಲ್ಲದಿದ್ದರೆ ಇಷ್ಟು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಅಂತಿಮದಲ್ಲಿ ನಿಮಗೆ ಬಹಳ ಸಾಕ್ಷಾತ್ಕಾರವಾಗುತ್ತದೆ ಆದರೆ ಆ ಸಮಯದಲ್ಲಿ ನೀವು ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಅಲ್ಲಿಗೆ ಮುಗಿದು ಹೋಯಿತು ಆದ್ದರಿಂದ ಅಂತಿಮದಲ್ಲಿ ಪಶ್ಚಾತ್ತಾಪ ಪಡುವಂತಾಗಬಾರದು. ಪುನಃ ಪುರುಷಾರ್ಥ ಮಾಡಲು ಸಾಧ್ಯವಿಲ್ಲ ಆದ್ದರಿಂದ ಎಷ್ಟು ತಮ್ಮ ಹಾಗೂ ಅನ್ಯರ ಕಲ್ಯಾಣ ಮಾಡಬೇಕಾಗಿದೆಯೋ ಅಷ್ಟೂ ಮಾಡಿಕೊಳ್ಳಿ. ಅಂಧರಿಗೆ ಊರುಗೋಲಾಗಿರಿ. ಕಲ್ಪ-ಕಲ್ಪಾಂತರ ಸ್ವರ್ಗದ ಸ್ಥಾಪನೆಯು ಮಾಡಿದ್ದೀರಿ, ಅವಶ್ಯವಾಗಿ ಮಾಡುತ್ತೀರಿ. ಡ್ರಾಮಾದಲ್ಲಿ ನಿಗಧಿಯಾಗಿದೆ, ಈಗ ಯಾರು ಮಾಡುವರೋ ಅವರು ಪಡೆಯುವರು. ತಂದೆಯ ಮುದ್ದು ಮಕ್ಕಳು ಗುಪ್ತವಾಗಿರಲು ಸಾಧ್ಯವಿಲ್ಲ. ರೂಪ ಭಸಂತರ ತರಹ ಬಾಯಿಂದ ರತ್ನಗಳೇ ಹೊರ ಬರುತ್ತಿರಲಿ, ದೂತಿಯಾಗಬಾರದು. ಅನ್ಯರಿಗೆ ನಷ್ಟವನ್ನುಂಟು ಮಾಡಬಾರದು. ನಿಮಗೆ ಯಾರಾದರೂ ಉಲ್ಟಾ ಸುಲ್ಟಾ ಮಾತುಗಳನ್ನು ತಿಳಿಸಿದರೆ ತಿಳಿದುಕೊಳ್ಳಿ - ಅವರು ದೂತಿಯಾಗಿದ್ದಾರೆ. ಅವರೊಂದಿಗೆ ಬಹಳ ಎಚ್ಚರವಾಗಿರಿ, ತಂದೆಯಿಂದ ತಮ್ಮ ಬೇಹದ್ದಿನ ಆಸ್ತಿಯನ್ನು ಪಡೆಯುವುದರಲ್ಲಿ ಪೂರ್ಣ ತತ್ಫರರಾಗಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯಾವುದೇ ಮಾತಿನ ಗೊಂದಲದಲ್ಲಿ ಬರಬಾರದು. ಒಬ್ಬರು ಇನ್ನೊಬ್ಬರಿಗೆ ಸಾವಧಾನ ನೀಡುತ್ತಾ ಉನ್ನತಿಯನ್ನು ಹೊಂದಬೇಕಾಗಿದೆ. ಪುರುಷಾರ್ಥ ಮಾಡಿ ತಮ್ಮ ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳಬೇಕಾಗಿದೆ.

2. ತಮ್ಮ ಮನ ಮತದಂತೆ ನಡೆಯದೇ ಶ್ರೀಮತದಂತೆ ನಡೆಯಬೇಕಾಗಿದೆ. ಯಾರು ಉಲ್ಟಾ ಸುಲ್ಟಾ ಮಾತುಗಳನ್ನು ತಿಳಿಸುವರೋ ಅವರಿಂದ ಸಾವಧಾನವಾಗಿರಬೇಕಾಗಿದೆ. ಆಸುರೀ ಕರ್ಮ ಮಾಡಲು ಹೆದರಬೇಕಾಗಿದೆ.

ವರದಾನ:
ಶಕ್ತಿಶಾಲಿ ದರ್ಪಣದ ಮೂಲಕ ಸರ್ವರಿಗೂ ಸ್ವಯಂನ ಸಾಕ್ಷಾತ್ಕಾರ ಮಾಡಿಸುವಂತಹ ಸಾಕ್ಷಾತ್ಕಾರ ಮೂರ್ತಿ ಭವ.

ಹೇಗೆ ದರ್ಪಣದ ಮುಂದೆ ಯಾರೇ ಹೋಗುತ್ತಾರೆ, ಅವರಿಗೆ ಸ್ವಯಂನ ಸ್ಪಷ್ಟ ಸಾಕ್ಷಾತ್ಕಾರವು ಆಗಿ ಬಿಡುತ್ತದೆ. ಆದರೆ ದರ್ಪಣವೇನಾದರೂ ಶಕ್ತಿಶಾಲಿ ಆಗಿಲ್ಲದಿದ್ದರೆ ಸತ್ಯ ರೂಪಕ್ಕೆ ಬದಲಾಗಿ ಅನ್ಯ ರೂಪವು ಕಂಡು ಬರುತ್ತದೆ. ಸಣ್ಣಗಿದ್ದರೆ ದಪ್ಪಗಿರುವಂತೆ ಕಾಣಿಸುತ್ತದೆ ಆದ್ದರಿಂದ ತಾವು ಇಂತಹ ಶಕ್ತಿಶಾಲಿ ದರ್ಪಣವಾಗಿ ಬಿಡಿ, ಅದರಿಂದ ಸರ್ವರಿಗೂ ತನ್ನ ಸಾಕ್ಷಾತ್ಕಾರವನ್ನು ಮಾಡಿಸಲು ಸಾಧ್ಯವಾಗಲಿ ಅರ್ಥಾತ್ ತಮ್ಮಮುಂದೆ ಬರುತ್ತಿದ್ದಂತೆಯೇ ದೇಹವನ್ನು ಮರೆತು ತನ್ನ ದೇಹಿ ರೂಪದಲ್ಲಿ ಸ್ಥಿತರಾಗಿ ಬಿಡಲಿ - ವಾಸ್ತವದಲ್ಲಿ ಇದೇ ಸೇವೆಯಾಗಿದೆ, ಇದರಿಂದಲೇ ಜಯ-ಜಯಕಾರವಾಗುವುದು.

ಸ್ಲೋಗನ್:
ಶಿಕ್ಷಣಗಳನ್ನು ಸ್ವರೂಪದಲ್ಲಿ ಧಾರಣೆ ಮಾಡಿಕೊಳ್ಳುವವರೇ ಜ್ಞಾನ ಸ್ವರೂಪ, ಪ್ರೇಮ ಸ್ವರೂಪ ಆತ್ಮನಾಗಿದ್ದಾರೆ.