07.11.23         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ – ಎಚ್ಚರವಹಿಸಿ ವಿದ್ಯೆಯ ಮೇಲೆ ಪೂರ್ಣ ಗಮನ ಕೊಡಿ, ನಮಗೆ ನೇರವಾಗಿ ಶಿವತಂದೆಯೊಂದಿಗೆ ಸಂಬಂಧವಿದೆ ಎಂದು ಹೇಳುವಂತಿಲ್ಲ, ಈ ರೀತಿ ಹೇಳುವುದೂ ಸಹ ದೇಹಾಭಿಮಾನವಾಗಿದೆ”

ಪ್ರಶ್ನೆ:
ಭಾರತವು ಅವಿನಾಶಿ ತೀರ್ಥಸ್ಥಾನವಾಗಿದೆ ಹೇಗೆ?

ಉತ್ತರ:
ಭಾರತವು ತಂದೆಯ ಜನ್ಮ ಸ್ಥಳವಾಗಿರುವ ಕಾರಣ ಅವಿನಾಶಿ ಖಂಡವಾಗಿದೆ, ಈ ಅವಿನಾಶಿ ಖಂಡದಲ್ಲಿ ಸತ್ಯಯುಗ ಮತ್ತು ತ್ರೇತಾಯುಗದಲ್ಲಿ ಚೈತನ್ಯ ದೇವಿ-ದೇವತೆಗಳು ರಾಜ್ಯ ಮಾಡುತ್ತಾರೆ ಆ ಸಮಯದ ಭಾರತವನ್ನು ಶಿವಾಲಯವೆಂದು ಕರೆಯಲಾಗುತ್ತದೆ. ಮತ್ತೆ ಭಕ್ತಿಮಾರ್ಗದಲ್ಲಿ ಜಡ ಪ್ರತಿಮೆಗಳನ್ನು ಮಾಡಿ ಪೂಜೆ ಮಾಡುತ್ತಾರೆ. ಅನೇಕ ಶಿವಾಲಯಗಳನ್ನು ನಿರ್ಮಿಸುತ್ತಾರೆ ಆದ್ದರಿಂದ ಆ ಸಮಯದಲ್ಲಿಯೂ ತೀರ್ಥಸ್ಥಾನಗಳಾಗುತ್ತವೆ ಆದ್ದರಿಂದ ಭಾರತವನ್ನು ಅವಿನಾಶಿ ತೀರ್ಥಸ್ಥಾನವೆಂದು ಹೇಳಬಹುದು.

ಗೀತೆ:
ರಾತ್ರಿಯ ಪ್ರಯಾಣಿಕನೇ ಸುಸ್ತಾಗಬೇಡ....

ಓಂ ಶಾಂತಿ.
ಓ ರಾತ್ರಿಯ ಪ್ರಯಾಣಿಕನೇ ಸುಸ್ತಾಗಬೇಡ ಎಂದು ಯಾರು ಎಚ್ಚರಿಕೆ ನೀಡುತ್ತಿದ್ದಾರೆ? ಇದನ್ನು ಶಿವಬಾಬಾ ತಿಳಿಸುತ್ತಿದ್ದಾರೆ ಆದರೆ ಕೆಲವು ಮಕ್ಕಳು ಹೀಗೂ ಇದ್ದಾರೆ ಮತ್ತು ತಿಳಿಯುತ್ತಾರೆ - ನಮ್ಮವರಂತೂ ಶಿವಬಾಬಾ ಆಗಿದ್ದಾರೆ, ಅವರೊಂದಿಗೆ ನಮ್ಮ ನೇರ ಸಂಬಂಧವಿದೆ ಎಂದು. ಆದರೆ ಶಿವಬಾಬಾ ತಿಳಿಸಬೇಕೆಂದರೂ ಸಹ ಅವಶ್ಯವಾಗಿ ಬ್ರಹ್ಮಾರವರ ಮುಖದ ಮೂಲಕವೇ ಅಲ್ಲವೆ. ಶಿವಬಾಬಾ ನಮಗೆ ನೇರವಾಗಿ ಪ್ರೇರಣೆ ನೀಡುತ್ತಾರೆಂದು ಕೆಲವರು ತಿಳಿಯುತ್ತಾರೆ ಆದರೆ ಹೀಗೆ ತಿಳಿಯುವುದೂ ಸಹ ತಪ್ಪಾಗಿದೆ. ಶಿವಬಾಬಾ ಅವಶ್ಯವಾಗಿ ಬ್ರಹ್ಮಾರವರ ಮೂಲಕವೇ ಶಿಕ್ಷಣ ನೀಡುತ್ತಾರೆ, ನಿಮಗೆ ತಿಳಿಸುತ್ತಿದ್ದಾರೆ ಮಕ್ಕಳೇ ಸುಸ್ತಾಗಬೇಡಿ. ಭಲೆ ನಿಮಗೆ ಶಿವಬಾಬಾ ಅವರೊಂದಿಗೆ ಸಂಬಂಧವಿದೆ. ಶಿವಬಾಬಾ ಸಹ ಮನ್ಮನಾಭವ ಎಂದು ಹೇಳುತ್ತಾರೆ ಮತ್ತು ಬ್ರಹ್ಮಾರವರೂ ಹೇಳುತ್ತಾರೆ ಮನ್ಮನಾಭವ. ಹಾಗೇ ಬ್ರಹ್ಮಾಕುಮಾರ-ಕುಮಾರಿಯರೂ ಸಹ ಮನ್ಮನಾಭವ ಎಂದು ಹೇಳುತ್ತಾರೆ ಆದರೆ ಎಚ್ಚರಿಕೆ ನೀಡಲು ಮುಖವಂತೂ ಬೇಕಲ್ಲವೆ! ನಮಗೆ ತಂದೆಯೊಂದಿಗೆ ಸಂಬಂಧವಿದೆ ಎಂದು ಕೆಲವು ಮಕ್ಕಳು ತಿಳಿಯುತ್ತಾರೆ ಆದರೆ ಬ್ರಹ್ಮಾರವರ ಮೂಲಕವೇ ಆದೇಶ ನೀಡುತ್ತಾರಲ್ಲವೆ. ಒಂದುವೇಳೆ ಆದೇಶವು ನೇರವಾಗಿ ಸಿಗುತ್ತಿದ್ದರೆ ಅವರು ಇಲ್ಲಿಗೆ ಬರುವ ಅವಶ್ಯಕತೆಯಾದರೂ ಏನು? ಕೆಲವರು ಇಂತಹ ಮಕ್ಕಳೂ ಇದ್ದಾರೆ, ಅವರಿಗೆ ಶಿವಬಾಬಾ ಬ್ರಹ್ಮಾರವರ ಮೂಲಕ ಹೇಳುತ್ತಾರೆಂದಮೇಲೆ ನಮ್ಮ ಮೂಲಕವೂ ಹೇಳಬಹುದೆಂಬ ವಿಚಾರಗಳು ನಡೆಯುತ್ತವೆ ಆದರೆ ಬ್ರಹ್ಮಾರವರಿಲ್ಲದೆ ಸಂಬಂಧ ಜೋಡಿಸಲು ಸಾಧ್ಯವಿಲ್ಲ. ಕೆಲವರು ಬ್ರಹ್ಮಾ ಹಾಗೂ ಬ್ರಹ್ಮಾಕುಮಾರ-ಕುಮಾರಿಯರೊಂದಿಗೆ ಮುನಿಸಿಕೊಳ್ಳುತ್ತಾರೆಂದರೆ ಈ ರೀತಿ ಹೇಳಲು ತೊಡಗುತ್ತಾರೆ. ಯೋಗವಂತೂ ಶಿವತಂದೆಯೊಂದಿಗೇ ಇಡಬೇಕು. ತಂದೆಯು ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೋಸ್ಕರ ಹೇಳಲೂಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ - ನೀವು ಸಮಯಕ್ಕೆ ಸರಿಯಾಗಿ ತರಗತಿಗೆ ಬರುವುದಿಲ್ಲವೆಂದು ಯಾರು ಹೇಳಿದರು? ಶಿವಬಾಬಾ ಮತ್ತು ಬ್ರಹ್ಮಾ ದಾದಾ ಇಬ್ಬರೂ ಹೇಳಿದರು, ಇಬ್ಬರಿಗೂ ಶರೀರವು ಒಂದೇ ಆಗಿದೆ. ಆದ್ದರಿಂದ ತಿಳಿಸುತ್ತಾರೆ - ಮಕ್ಕಳೇ, ಎಚ್ಚರವಹಿಸಿ ವಿದ್ಯೆಯ ಮೇಲೆ ಪೂರ್ಣ ಗಮನ ಕೊಡಿ. ಶ್ರೇಷ್ಠಾತಿ ಶ್ರೇಷ್ಠ ತಂದೆಯು ಓದಿಸುತ್ತಾರೆ, ಮೊಟ್ಟಮೊದಲು ಶಿವಬಾಬಾನ ಮಹಿಮೆಯನ್ನೇ ಮಾಡಬೇಕಾಗಿದೆ. ಅವರ ಮಹಿಮೆಯು ಅಪರಮಪಾರವಾಗಿದೆ. ಅಂತ್ಯವಿಲ್ಲದ ಮಹಿಮೆಯಾಗಿದೆ. ಅವರ ಮಹಿಮೆಯ ಬಹಳ ಒಳ್ಳೊಳ್ಳೆಯ ಅಕ್ಷರಗಳಿವೆ ಆದರೆ ಮಕ್ಕಳು ಒಮ್ಮೊಮ್ಮೆ ಮರೆತುಹೋಗುತ್ತಾರೆ. ವಿಚಾರಸಾಗರ ಮಂಥನ ಮಾಡಿ, ಶಿವಬಾಬಾನ ಪೂರ್ಣ ಮಹಿಮೆಯನ್ನು ಬರೆಯಬೇಕು.

ನವಮಾನವನೆಂದು ಯಾರಿಗೆ ಹೇಳುವುದು? ಹಾಗೆ ನೋಡಿದರೆ ಸ್ವರ್ಗದ ನವಮಾನವ ಕೃಷ್ಣನಾಗಿದ್ದಾನೆ ಆದರೆ ಈ ಸಮಯದಲ್ಲಿ ಬ್ರಾಹ್ಮಣರ ಶಿಖೆಯ ಗಾಯನವಿದೆ. ಮಕ್ಕಳನ್ನು ರಚಿಸಲಾಗುತ್ತದೆಯೆಂದರೆ ಅವರಿಗೆ ಶಿಕ್ಷಣವನ್ನೂ ನೀಡಲಾಗುತ್ತದೆ. ಒಂದುವೇಳೆ ಲಕ್ಷ್ಮಿ-ನಾರಾಯಣರಿಗೆ ನವಮಾನವರೆಂದು ಹೇಳಿದರೆ ಅವರಿಗೆ ಶಿಕ್ಷಣ ಕೊಡುವ ಅವಶ್ಯಕತೆಯಿರುವುದಿಲ್ಲ ಅಂದಾಗ ಈಗ ನವಮಾನವರು ಯಾರು? ಇವು ಬಹಳ ತಿಳಿದುಕೊಳ್ಳುವ ಮತ್ತು ತಿಳಿಸಿಕೊಡುವ ಮಾತುಗಳಾಗಿವೆ. ತಂದೆಯು ಸರ್ವಶಕ್ತಿವಂತನಾಗಿದ್ದಾರೆ, ವಿಶ್ವದ ಸರ್ವಶಕ್ತಿವಂತನೆಂದು ಅಕ್ಷರವನ್ನು ತಂದೆಯ ಮಹಿಮೆಯಲ್ಲಿ ಬರೆಯುವುದನ್ನು ಮರೆತುಹೋಗುತ್ತಾರೆ. ಭಾರತದ ಮಹಿಮೆಯನ್ನೂ ಸಹ ಭಾರತವು ಅವಿನಾಶಿ ತೀರ್ಥಸ್ಥಾನವೆಂದು ಹೇಳಲಾಗುತ್ತದೆ. ಅಂದಾಗ ಅದು ಹೇಗೆ? ಭಕ್ತಿಮಾರ್ಗದಲ್ಲಿ ತೀರ್ಥಸ್ಥಾನಗಳಾಗುತ್ತವೆ ಅಂದಾಗ ಇದನ್ನು ಅವಿನಾಶಿ ತೀರ್ಥಸ್ಥಾನವೆಂದು ಹೇಗೆ ಹೇಳಬಹುದು? ಇದು ಅವಿನಾಶಿ ತೀರ್ಥಸ್ಥಾನವು ಹೇಗೆ? ಸತ್ಯಯುಗದಲ್ಲಿ ನಾವು ಇದಕ್ಕೆ ತೀರ್ಥಸ್ಥಾನವೆಂದು ಹೇಳುತ್ತೇವೆಯೇ? ಒಂದುವೇಳೆ ನಾವು ಇದಕ್ಕೆ ಅವಿನಾಶಿ ತೀರ್ಥಸ್ಥಾನವೆಂದು ಬರೆಯುತ್ತೇವೆಂದರೆ ಅದು ಹೇಗೆ? ಸ್ಪಷ್ಟ ಮಾಡಿ ತಿಳಿಸಬೇಕೆಂದರೆ, ಇದು ಸತ್ಯ, ತ್ರೇತಾದಲ್ಲಿಯೂ ಸಹ ತೀರ್ಥಸ್ಥಾನವಾಗಿರುತ್ತದೆ, ದ್ವಾಪರ-ಕಲಿಯುಗದಲ್ಲಿಯೂ ತೀರ್ಥಸ್ಥಾನವಾಗಿದೆ. ನಾಲ್ಕೂ ಯುಗಗಳಲ್ಲಿ ಇದನ್ನು ಅವಿನಾಶಿ ಎಂದು ಹೇಗೆ ಹೇಳಬಹುದೆಂದು ಸಿದ್ಧ ಮಾಡಿ ತಿಳಿಸಬೇಕು. ತೀರ್ಥಸ್ಥಾನಗಳು ದ್ವಾಪರದಿಂದ ನಿರ್ಮಿಸಲ್ಪಡುತ್ತವೆ ಅಂದಮೇಲೆ ಭಾರತವು ಅವಿನಾಶಿ ತೀರ್ಥಸ್ಥಾನವೆ ಆಗಿದೆ ಎಂದು ಬರೆಯಬಹುದು. ಸತ್ಯಯುಗ, ತ್ರೇತಾಯುಗದಲ್ಲಿಯೂ ಸಹ ತೀರ್ಥಸ್ಥಾನವಾಗಿರುತ್ತದೆ, ಇಲ್ಲಿ ಜಡತೀರ್ಥಸ್ಥಾನವಾಗಿದೆ. ಯಾವಾಗ ಶಿವಾಲಯವಾಗಿರುತ್ತದೆಯೋ ಆಗ ಚೈತನ್ಯ ಸತ್ಯ-ಸತ್ಯ ತೀರ್ಥಸ್ಥಾನವಾಗಿರುತ್ತದೆ. ಈ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ಭಾರತವು ಅವಿನಾಶಿ ಖಂಡವಾಗಿದೆ ಉಳಿದೆಲ್ಲವೂ ವಿನಾಶವಾಗಿಬಿಡುತ್ತವೆ. ಈ ಮಾತುಗಳನ್ನು ಯಾವ ಮನುಷ್ಯರೂ ತಿಳಿದುಕೊಂಡಿಲ್ಲ. ಪತಿತ-ಪಾವನ ತಂದೆಯು ಇಲ್ಲಿಯೇ ಬರುತ್ತಾರೆ, ಯಾರನ್ನು ದೇವಿ-ದೇವತೆಗಳನ್ನಾಗಿ ಮಾಡುತ್ತಾರೆಯೋ ಅವರೇ ನಂತರ ಈ ಶಿವಾಲಯದಲ್ಲಿರುತ್ತಾರೆ. ಈಗ ಇಲ್ಲಿ ಬದರೀನಾಥ, ಅಮರನಾಥಕ್ಕೆ ಹೋಗಬೇಕಾಗುತ್ತದೆ ಆದರೆ ಸತ್ಯಯುಗದಲ್ಲಿ ಭಾರತವೇ ತೀರ್ಥಸ್ಥಾನವಾಗಿರುತ್ತದೆ. ಅಲ್ಲಿ ಶಿವಬಾಬಾ ಇರುವುದಿಲ್ಲ. ಶಿವಬಾಬಾ ಅವರು ಈಗಷ್ಟೆ ಇರುತ್ತಾರೆ. ಎಲ್ಲವೂ ಈಗಿನದೇ ಮಹಿಮೆಯಾಗಿದೆ. ಇದು ಶಿವಬಾಬಾನ ಜನ್ಮಸ್ಥಳವಾಗಿದೆ ಅಂದಮೇಲೆ ಬ್ರಹ್ಮನ ಜನ್ಮಸ್ಥಳವೂ ಆಯಿತು ಆದರೆ ಶಂಕರನ ಜನ್ಮಸ್ಥಳವೆಂದು ಹೇಳುವುದಿಲ್ಲ. ಶಂಕರನಿಗೆ ಇಲ್ಲಿಗೆ ಬರುವ ಅವಶ್ಯಕತೆಯೇ ಇರುವುದಿಲ್ಲ. ಅವರನ್ನು ಕೇವಲ ವಿನಾಶಾರ್ಥಾವಾಗಿ ನಿಮಿತ್ತ ಮಾಡಲಾಗಿದೆ. ವಿಷ್ಣು ಬರುತ್ತಾರೆ, ಆಗ ಎರಡೂ ರೂಪದಿಂದ (ಲಕ್ಷ್ಮಿ-ನಾರಾಯಣ) ರಾಜ್ಯ ಮಾಡುತ್ತಾರೆ, ಪಾಲನೆ ಮಾಡುತ್ತಾರೆ. ವಿಷ್ಣುವಿನ ಎರಡು ರೂಪಗಳನ್ನು ದಂಪತಿಗಳಾಗಿ ತೋರಿಸಿದ್ದಾರೆ. ಆ ಲಕ್ಷ್ಮಿ-ನಾರಾಯಣರದು ಈ (ವಿಷ್ಣು) ಪ್ರತಿಮೆಯಾಗಿದೆ. ಅವರಂತೂ ಸತ್ಯಯುಗದಲ್ಲಿ ಬರುತ್ತಾರೆ ಅಂದಾಗ ನಾವು ಒಬ್ಬ ತಂದೆಯ ಮಹಿಮೆಯನ್ನೇ ಮಾಡಬೇಕಾಗುತ್ತದೆ. ಅವರು ರಕ್ಷಿಸುವವರು (ಪಾರು ಮಾಡುವವರು) ಆಗಿದ್ದಾರೆ. ಆದರೆ ಮನುಷ್ಯರು ಧರ್ಮಸ್ಥಾಪಕರನ್ನೂ ಸಹ ರಕ್ಷಕರೆಂದು ಹೇಳಿಬಿಡುತ್ತಾರೆ. ಕ್ರೈಸ್ಟ್, ಬುದ್ಧ ಮುಂತಾದವರಿಗೂ ಸಹ ರಕ್ಷಕರೆಂದು ಹೇಳಿಬಿಡುತ್ತಾರೆ. ಅವರು ಶಾಂತಿಸ್ಥಾಪನೆ ಮಾಡಲು ಬಂದರೆಂದು ತಿಳಿಯುತ್ತಾರೆ ಆದರೆ ಅವರೇನು ಶಾಂತಿ ಸ್ಥಾಪನೆ ಮಾಡುವುದಿಲ್ಲ, ಯಾರನ್ನೂ ದುಃಖದಿಂದ ಬಿಡಿಸುವುದಿಲ್ಲ. ಅವರಂತೂ ಕೇವಲ ಧರ್ಮದ ಸ್ಥಾಪನೆ ಮಾಡಬೇಕು. ಅವರ ಹಿಂದೆ ಅವರ ಧರ್ಮದವರು ಬರುತ್ತಾ ಹೋಗುತ್ತಾರೆ. ಈ ರಕ್ಷಕ (ಸೇವಿಯರ್) ಅಕ್ಷರ ಚೆನ್ನಾಗಿದೆ, ಇದನ್ನೂ ಸಹ ಅವಶ್ಯವಾಗಿ ಹಾಕಬೇಕು. ಈ ಚಿತ್ರಗಳು ಯಾವಾಗ ವಿದೇಶಗಳಲ್ಲಿ ಪ್ರತ್ಯಕ್ಷವಾಗುತ್ತವೆ ಆಗ ಎಲ್ಲಾ ಭಾಷೆಗಳಲ್ಲಿ ಹೊರಬರುತ್ತವೆ. ಅವರು ಪೋಪ್ ಮುಂತಾದವರ ಎಷ್ಟೊಂದು ಮಹಿಮೆ ಮಾಡುತ್ತಾರೆ. ರಾಷ್ಟ್ರಪತಿ ಮುಂತಾದವರು ಶರೀರ ಬಿಟ್ಟರೆ ಎಷ್ಟೊಂದು ಮಹಿಮೆ ಮಾಡುತ್ತಾರೆ. ಯಾರು ಎಷ್ಟು ದೊಡ್ಡ ವ್ಯಕ್ತಿಯಾಗಿರುವವರೋ ಅವರದು ಅಷ್ಟೇ ಹೆಚ್ಚು ಮಹಿಮೆಯಾಗುತ್ತದೆ ಆದರೆ ಈ ಸಮಯದಲ್ಲಿ ಎಲ್ಲರೂ ಒಂದೇ ಸಮನಾಗಿಬಿಟ್ಟಿದ್ದಾರೆ. ಭಗವಂತನನ್ನು ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ. ನಾವೆಲ್ಲರೂ ಸಹ ಭಗವಂತನಾಗಿದ್ದೇವೆ ಎಂದು ಎಲ್ಲಾ ಆತ್ಮಗಳು ತಮ್ಮ ತಂದೆಗೆ ನಿಂದನೆ ಮಾಡಿದ ಹಾಗೆ. ಹಾಗೆ ನೋಡಿದರೆ ನಾವೇ ತಂದೆಯೆಂದು ಲೌಕಿಕ ಮಕ್ಕಳೂ ಸಹ ಹೇಳಲು ಸಾಧ್ಯವಿಲ್ಲ. ಹಾ! ಯಾವಾಗ ತಮ್ಮ ರಚನೆಯನ್ನು ರಚಿಸುವರೋ ಅವರಿಗೆ ತಂದೆಯಾಗುತ್ತಾರೆ. ಆಗ ಈ ಮಾತನ್ನು ಒಪ್ಪಲೂಬಹುದು ಆದರೆ ಇಲ್ಲಂತೂ ನಾವೆಲ್ಲಾ ಆತ್ಮಗಳ ತಂದೆಯು ಒಬ್ಬರೇ ಆಗಿದ್ದಾರೆ. ನಾವು ಅವರ ತಂದೆಯಾಗಲು ಸಾಧ್ಯವಿಲ್ಲ. ಅವರನ್ನು ಮಗುವೆಂದು ಹೇಳಲು ಸಾಧ್ಯವಿಲ್ಲ. ಹಾ! ಭಲೆ ಈ ಜ್ಞಾನದ ಆಳದಲ್ಲಿ ಹೋದಂತೆ ನಾವು ಶಿವಬಾಲಕನನ್ನು ವಾರಸುಧಾರನನ್ನಾಗಿ ಮಾಡಿಕೊಳ್ಳುತ್ತೇವೆಂದು ಹೇಳಲೂಬಹುದು. ಈ ಮಾತುಗಳನ್ನಂತೂ ಕೆಲವರೇ ವಿರಳವಾಗಿ ತಿಳಿದುಕೊಳ್ಳುತ್ತಾರೆ. ಕೆಲವರಷ್ಟೇ ಶಿವಬಾಲಕನನ್ನು ವಾರಸುಧಾರನನ್ನಾಗಿ ಮಾಡಿಕೊಂಡು ಅವರಿಗೆ ಬಲಿಹಾರಿಯಾಗುತ್ತಾರೆ. ಶಿವಬಾಬಾನ ಮೇಲೆ ಮಕ್ಕಳು ಬಲಿಹಾರಿಯಾಗುತ್ತಾರೆ. ಇದು ಅದಲು-ಬದಲಾಗುತ್ತದೆ. ಆಸ್ತಿಯನ್ನು ಕೊಡುವುದರ ಎಷ್ಟೊಂದು ಮಹತ್ವಿಕೆ ಇದೆ. ಈಗ ತಂದೆಯು ತಿಳಿಸುತ್ತಾರೆ - ದೇಹಸಹಿತವಾಗಿ ಏನೆಲ್ಲವೂ ಇದೆಯೋ ಅದೆಲ್ಲದಕ್ಕೆ ನನ್ನನ್ನು ವಾರಸುಧಾರನನ್ನಾಗಿ ಮಾಡಿಕೊಳ್ಳಿ. ಆದರೆ ದೇಹಾಭಿಮಾನವನ್ನು ಬಿಡುವುದು ಕಷ್ಟವಿದೆ. ಯಾವಾಗ ತಮ್ಮನ್ನು ಆತ್ಮನೆಂದು ನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡುತ್ತೀರೋ ಆಗಲೇ ದೇಹಾಭಿಮಾನವು ತುಂಡಾಗುತ್ತದೆ. ಆತ್ಮಾಭಿಮಾನಿಗಳಾಗುವುದು ಬಹಳ ಪರಿಶ್ರಮವಿದೆ. ನಾವಾತ್ಮಗಳು ಅವಿನಾಶಿ ಆಗಿದ್ದೇವೆ. ನಾವು ನಮ್ಮನ್ನು ಶರೀರವೆಂದು ತಿಳಿದಿದ್ದೇವೆ ಈಗ ಪುನಃ ತಮ್ಮನ್ನು ಆತ್ಮವೆಂದು ತಿಳಿಯುವುದರಲ್ಲಿ ಬಹಳ ಪರಿಶ್ರಮವಿದೆ. ದೊಡ್ಡದಕ್ಕಿಂತ ದೊಡ್ಡ ಖಾಯಿಲೆಯು ದೇಹಾಭಿಮಾನದ್ದಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ಪರಮಪಿತ ಪರಮಾತ್ಮನನ್ನು ನೆನಪು ಮಾಡುವುದಿಲ್ಲವೆಂದರೆ ವಿಕರ್ಮಗಳು ಕತ್ತರಿಸಲ್ಪಡುವುದಿಲ್ಲ.

ತಂದೆಯು ತಿಳಿಸುತ್ತಾರೆ - ಮಕ್ಕಳೇ ಚೆನ್ನಾಗಿ ಓದುತ್ತೀರಿ, ಬರೆಯುತ್ತೀರೆಂದರೆ ನವಾಬರಾಗುತ್ತೀರಿ. ಶ್ರೀಮತದಂತೆ ನಡೆಯಬೇಕು ಇಲ್ಲವೆಂದರೆ ಶ್ರೇಷ್ಠಾತಿ ಶ್ರೇಷ್ಠ ತಂದೆಯ ಹೃದಯವನ್ನೇರುವುದು ಅಸಂಭವವಾಗುವುದು ಯಾವಾಗ ಹೃದಯದಲ್ಲಿ ಏರುವಿರಿ ಆಗ ಸಿಂಹಾಸನವನ್ನೂ ಏರುವಿರಿ. ಅಂದಾಗ ಬಹಳ ದಯಾಹೃದಯಿಗಳಾಗಬೇಕು. ಮನುಷ್ಯರಂತೂ ಬಹಳ ದುಃಖಿಯಾಗಿದ್ದಾರೆ. ನೋಡುವುದಕ್ಕಂತೂ ಬಹಳ ಶ್ರೀಮಂತರಂತೆ ಕಾಣುತ್ತಾರೆ. ಪೋಪ್ರನ್ನು ನೋಡಿ ಎಷ್ಟೊಂದು ಮಾನ್ಯತೆಯಿದೆ. ತಂದೆಯು ತಿಳಿಸುತ್ತಾರೆ - ನಾನು ಇಷ್ಟೊಂದು ನಿರಹಂಕಾರಿಯಾಗಿದ್ದೇನೆ, ಅ ಮನುಷ್ಯರಂತೂ ನನ್ನ ಸ್ವಾಗತಕ್ಕೆ ಅಷ್ಟೊಂದು ಖರ್ಚು ಮಾಡಬೇಡಿ ಎಂದು ಹೇಳುವುದಿಲ್ಲ. ಆದರೆ ಬಾಬಾ ನೋಡಿ ಎಲ್ಲಿಯೇ ಹೋಗುತ್ತಾರೆಂದರೆ ಮೊದಲೇ ಬರೆದುಬಿಡುತ್ತಾರೆ - ಯಾರು ಹೆಚ್ಚಿನ ಆಡಂಬರ ಮಾಡಬಾರದು, ನಿಲ್ದಾಣದ ಬಳಿ ಎಲ್ಲರೂ ಬರಬಾರದು ಏಕೆಂದರೆ ನಾವು ಗುಪ್ತವಾಗಿದ್ದೇವೆ. ನಾವು ಯಾರೆಂಬುದನ್ನು ಯಾರೂ ಅರಿತುಕೊಂಡಿಲ್ಲ. ಅಂದಮೇಲೆ ಇವೆಲ್ಲವನ್ನೂ ಮಾಡುವ ಅವಶ್ಯಕತೆಯಿಲ್ಲ. ಮನುಷ್ಯರು ಮತ್ತೆಲ್ಲರನ್ನೂ ತಿಳಿದುಕೊಂಡಿದ್ದಾರೆ ಆದರೆ ಶಿವಬಾಬಾ ರವರನ್ನು ಸ್ವಲ್ಪವೂ ತಿಳಿದುಕೊಂಡಿಲ್ಲ ಅಂದಮೇಲೆ ಗುಪ್ತವಾಗಿರುವುದು ಒಳ್ಳೆಯದೆ. ಎಷ್ಟು ನಿರಹಂಕಾರಿಗಳೋ ಅಷ್ಟು ಒಳ್ಳೆಯದು. ನಿಮ್ಮ ಜ್ಞಾನವೇ ಮೌನವಾಗಿರುವಂತಹದ್ದಾಗಿರುತ್ತದೆ. ಕುಳಿತು ತಂದೆಯ ಮಹಿಮೆ ಮಾಡಬೇಕಾಗಿದೆ. ಅದರಿಂದಲೇ ತಂದೆಯು ಪತಿತ-ಪಾವನ, ಸರ್ವಶಕ್ತಿವಂತನಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಾರೆ ಅವರಿಂದಲೇ ಆಸ್ತಿಯು ಸಿಗುತ್ತದೆ. ತಂದೆಯಿಂದಲೇ ಆಸ್ತಿಯು ಸಿಗುತ್ತದೆ ಎಂಬುದನ್ನು ಮಕ್ಕಳ ವಿನಃ ಮತ್ತಾರೂ ಹೇಳಲು ಸಾಧ್ಯವಿಲ್ಲ. ಶಿವಬಾಬಾರವರಿಂದ ನಮಗೆ ಹೊಸಪ್ರಪಂಚದ ಆಸ್ತಿಯು ಸಿಗುತ್ತಿದೆ ಎಂದು ಹೇಳುತ್ತೀರಿ. ಚಿತ್ರಗಳೂ ಇವೆ. ಈ ದೇವತೆಗಳಂತೆ ನಾವಾಗುತ್ತೇವೆ. ಶಿವಬಾಬಾ ನಮಗೆ ಬ್ರಹ್ಮಾರವರ ಮೂಲಕ ಆಸ್ತಿ ನೀಡುತ್ತಿದ್ದಾರೆ ಆದ್ದರಿಂದ ನಾವು ಶಿವಬಾಬಾನ ಮಹಿಮೆ ಮಾಡುತ್ತೇವೆ. ಗುರಿ-ಉದ್ದೇಶವು ಎಷ್ಟು ಸ್ಪಷ್ಟವಾಗಿದೆ ಕೊಡುವವರು ಅವರಾಗಿದ್ದಾರೆ. ಬ್ರಹ್ಮಾರವರ ಮೂಲಕ ಕಲಿಸುತ್ತಾರೆ ಚಿತ್ರಗಳಲ್ಲಿ ತಿಳಿಸಬೇಕು ಶಿವನ ಚಿತ್ರಗಳನ್ನೂ ಸಹ ಎಷ್ಟೊಂದು ಮಾಡಿಸಿದ್ದೇವೆ. ತಂದೆಯು ಬಂದು ಪತಿತರಿಂದ ಪಾವನರನ್ನಾಗಿ ಎಲ್ಲರನ್ನೂ ಮುಕ್ತಿ-ಜೀವನ್ಮುಕ್ತಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಚಿತ್ರಗಳಲ್ಲಿಯೂ ಸಹ ಸ್ಪಷ್ಟವಾಗಿದೆ ಆದ್ದರಿಂದಲೇ ತಂದೆಯು ಒತ್ತುಕೊಟ್ಟು ಹೇಳುತ್ತಾರೆ, ಈ ಚಿತ್ರಗಳನ್ನು ಎಲ್ಲರಿಗೂ ಕೊಟ್ಟಿದ್ದೇ ಆದರೆ ಅವರು ಅದನ್ನು ತೆಗೆದುಕೊಂದು ಹೋಗಿ ಓದುತ್ತಾರೆ. ಇಲ್ಲಿಂದ ವಸ್ತುಗಳನ್ನು ತೆಗೆದುಕೊಂಡುಹೋಗಿ ಅಲ್ಲಿ ಓದಿ ಅಲಂಕಾರ ಮಾಡಬಹುದಾಗಿದೆ. ಬಟ್ಟೆಯ ಪರದೆಯ ಮೇಲೂ ಚಿತ್ರಗಳನ್ನು ಬರದಿದ್ದೇ ಆದರೆ ಬಹಳ ಕೆಲಸಕ್ಕೆ ಬರುತ್ತದೆ. ಈ ಚಿತ್ರಗಳನ್ನೂ ಸಹ ತಿದ್ದುಪಡಿ ಮಾಡಲಾಗುತ್ತದೆ. ರಕ್ಷಕ ಎನ್ನುವ ಅಕ್ಷರವರು ಬಹಳ ಚೆನ್ನಾಗಿದೆ. ತಂದೆಯನ್ನು ಬಿಟ್ಟರೆ ಬೇರೆ ಯಾರೂ ರಕ್ಷಕನಾಗಲಿ ಅಥವಾ ಪತಿತ-ಪಾವನನಾಗಲಿ ಆಗಲು ಸಾಧ್ಯವಿಲ್ಲ. ಭಲೆ ಪಾವನ ಆತ್ಮರು ಬರುತ್ತಾರೆ ಅವರು ಎಲ್ಲರನ್ನು ಪಾವನ ಮಾಡುತ್ತಾರೇನು! ಅವರ ಧರ್ಮದವರಂತೂ ಕೆಳಗೆ ಪಾತ್ರವನ್ನಭಿನಯಿಸಲು ಬರಬೇಕಾಗುತ್ತದೆ. ಈ ಎಲ್ಲಾ ಜ್ಞಾನಬಿಂದುಗಳನ್ನು ತೀಕ್ಷ್ಣಬುದ್ಧಿಯುಳ್ಳ ಮಕ್ಕಳೇ ಧಾರಣೆ ಮಾಡುತ್ತಾರೆ.

ಶ್ರೀಮತದಂತೆ ಪೂರ್ಣ ನಡೆಯುವುದಿಲ್ಲವೆಂದರೆ ಓದುವುದಿಲ್ಲ ನಂತರ ಅಂತಹವರು ಉತ್ತೀರ್ಣರಾಗಿಬಿಡುತ್ತಾರೆ. ಹೇಗೆ ಶಾಲೆಯಲ್ಲಿಯೂ ಸಹ ಇವರ ನಡುವಳಿಕೆಯು ಹೇಗಿದೆ ಎಂದು ನಡವಳಿಕೆಯನ್ನು ನೋಡಲಾಗುತ್ತದೆ. ದೇಹದ ಅಭಿಮಾನದಿಂದ ಎಲ್ಲಾ ವಿಕಾರಗಳು ಬಂದುಬಿಡುತ್ತವೆ ನಂತರ ಸ್ವಲ್ಪವೂ ಸಹ ಧಾರಣೆಯಾಗುವುದಿಲ್ಲ. ಆಜ್ಞಾಕಾರಿ ಮಕ್ಕಳನ್ನೇ ತಂದೆಯೂ ಸಹ ಪ್ರೀತಿ ಮಾಡುತ್ತಾರೆ. ಬಹಳ ಪುರುಷಾರ್ಥ ಮಾಡಬೇಕಾಗಿದೆ. ಯಾರಿಗೇ ತಿಳಿಸಬೇಕೆಂದರೆ ಮೊಟ್ಟಮೊದಲು ತಂದೆಯ ಮಹಿಮೆ ಮಾಡಬೇಕು. ತಂದೆಯಿಂದ ಆಸ್ತಿಯು ಹೇಗೆ ಸಿಗುತ್ತದೆ ಎಂದು ತಂದೆಯ ಪೂರ್ಣ ಮಹಿಮೆಯನ್ನು ಬರೆಯಬೇಕಾಗಿದೆ. ಚಿತ್ರಗಳನ್ನು ಬದಲು ಮಾಡಲು ಸಾಧ್ಯವಿಲ್ಲ ಬಾಕಿ ಶಿಕ್ಷಣವನ್ನಂತೂ ಪೂರ್ಣ ಬರೆಯಬೇಕಾಗುತ್ತದೆ. ತಂದೆಯ ಮಹಿಮೆಯೇ ಬೇರೆಯಾಗಿದೆ. ತಂದೆಯಿಂದ ಕೃಷ್ಣನಿಗೆ ಆಸ್ತಿಯು ಸಿಕ್ಕಿತು, ಅಂದಾಗ ಅವರ ಮಹಿಮೆಯೂ ಬೇರೆಯಾಗಿದೆ. ತಂದೆಯನ್ನು ಅರಿತುಕೊಳ್ಳದೆ ಇರುವ ಕಾರಣ ಭಾರತವು ದೊಡ್ಡ ತೀರ್ಥಸ್ಥಾನವಾಗಿದೆ ಎಂದು ಅರಿತುಕೊಳ್ಳುವುದಿಲ್ಲ. ಭಾರತವು ಅವಿನಾಶಿ ತೀರ್ಥಸ್ಥಾನವೆಂಬುದನ್ನು ಸಿದ್ಧ ಮಾಡಿ ತಿಳಿಸಬೇಕು. ನೀವು ಮಕ್ಕಳು ಹೀಗೆ ತಿಳಿಸುತ್ತೀರೆಂದರೆ ಮನುಷ್ಯರು ಕೇಳಿ ಆಶ್ಚರ್ಯಚಕಿತರಾಗುತ್ತಾರೆ. ಭಾರತವು ವಜ್ರಸಮಾನವಾಗಿತ್ತು ಅಂದಮೇಲೆ ಭಾರತವನ್ನು ಕವಡೆಯ ಸಮಾನ ಯಾರು ಮಾಡಿದರು? ಇದರಲ್ಲಿ ತಿಳಿಸುವ, ವಿಚಾರಸಾಗರ ಮಂಥನ ಮಾಡುವ ಬಹಳ ಅವಶ್ಯಕತೆಯಿದೆ. ಈ ಬಾಬಾರವರಂತೂ ತಕ್ಷಣ ತಿಳಿಸುತ್ತಾರೆ. ಬಾಬಾರವರು ಇದರಲ್ಲಿ ಮಕ್ಕಳ ತಪ್ಪನ್ನು ತಿದ್ದಬೇಕಾಗುತ್ತದೆ ಆದರೆ ಮಕ್ಕಳು ತಿಳಿಸುವುದೇ ಇಲ್ಲ. ಬಾಬಾರವರು ತಿದ್ದುಪಡಿ ಮಾಡಲು ಬಯಸುತ್ತಾರೆ. ಒಬ್ಬರು ಇಂಜಿನಿಯರ್ ಇದ್ದರು, ಅವರಿಗೆ ಯಂತ್ರದ ಲೋಪದೋಷವನ್ನು ತಿಳಿದುಕೊಳ್ಳಲು ಆಗಲಿಲ್ಲ, ಆಗ ಇನ್ನೊಬ್ಬ ಉಪಇಂಜಿನಿಯರನ್ನು ಕರೆಸಿ ಅವರಿಗೆ ತಿಳಿಸಿದಾಗ ಇದರಲ್ಲಿ ಹೀಗೆ ಮಾಡಿದರೆ ಸರಿಯಾಗುವುದೆಂದು ಹೇಳಿದರು. ಅದರಂತೆ ಆ ಯಂತ್ರವು ಸರಿಹೋಯಿತು. ಆಗ ಅವರಿಗೆ ಬಹಳ ಖುಷಿಯಾಯಿತು. ಇವರಿಗೆ ಬಹುಮಾನವನ್ನು ಕೊಡಬೇಕೆಂದು ಹೇಳಿದರು ಅಂದಾಗ ಅವರ ಸಂಬಳವನ್ನು ಹೆಚ್ಚಿಸಿದರು ಹಾಗೆಯೆ ತಂದೆಯೂ ಸಹ ಹೇಳುತ್ತಾರೆ - ನೀವು ಸರಿಪಡಿಸುತ್ತಾ ಹೋಗಿ ಆಗ ನಾನು ವಾಹ್! ವಾಹ್! ಎನ್ನುತ್ತೇನೆ. ಹೇಗೆ ಈ ಜಗದೀಶ್ ಸಂಜಯ್ ಇದ್ದಾರೆ, ಕೆಲವೊಮ್ಮೆ ಒಳ್ಳೊಳ್ಳೆಯ ವಿಚಾರಗಳನ್ನು ಹೊರತೆಗೆಯುತ್ತಾರೆಂದರೆ ತಂದೆಯು ನೋಡಿ ಖುಷಿಪಡುತ್ತಾರೆ. ಮಕ್ಕಳಿಗೆ ಸರ್ವೀಸಿನ ಆಸಕ್ತಿಯಿರಬೇಕು. ಈ ಪ್ರದರ್ಶನಿ, ಮೇಳಗಳೆಲ್ಲವೂ ಆಗುತ್ತಿರುತ್ತವೆ. ಎಲ್ಲಿಯಾದರೂ ಪ್ರದರ್ಶನಿಗಳನ್ನು ಏರ್ಪಡಿಸಿದರೆ ಅಲ್ಲಿ ಇವರೂ ಸಹ ಹೋಗಿ ತಿಳಿಸಬಲ್ಲರು. ಇಲ್ಲಂತೂ ಬುದ್ಧಿಯನ್ನು ತೀಕ್ಷ್ಣ ಮಾಡಿಕೊಳ್ಳಬೇಕು, ಎಲ್ಲರಿಗೆ ಸುಖ ಕೊಡಬೇಕು. ಶಾಲೆಯಲ್ಲಿ ನಂಬರ್ವಾರ್ ಓದುವವರಂತೂ ಇದ್ದೇ ಇರುತ್ತಾರೆ. ಯಾರು ಓದುವುದಿಲ್ಲವೋ ಅವರ ನಡುವಳಿಕೆಯೂ ಸರಿಯಿರುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯಾರೊಂದಿಗೂ ಮುನಿಸಿಕೊಂಡು ವಿದ್ಯೆಯನ್ನು ಬಿಡಬಾರದು. ದೇಹಾಭಿಮಾನವನ್ನು ಬಿಟ್ಟು ತಮ್ಮ ಮೇಲೆ ದಯೆ ತೋರಿಸಿಕೊಳ್ಳಬೇಕಾಗಿದೆ. ತಂದೆಯ ಸಮಾನ ನಿರಹಂಕಾರಿಗಳಾಗಬೇಕಾಗಿದೆ.

2. ಒಳ್ಳೆಯ ನಡವಳಿಕೆಯನ್ನು ಧಾರಣೆ ಮಾಡಬೇಕು, ಎಲ್ಲರಿಗೆ ಸುಖ ಕೊಡಬೇಕಾಗಿದೆ. ಆಜ್ಞಾಕಾರಿಗಳಾಗಿರಬೇಕಾಗಿದೆ.

ವರದಾನ:
ಸಂಕ್ಷಿಪ್ತಗೊಳಿಸುವ ಶಕ್ತಿಯ ಮೂಲಕ ಸೆಕೆಂಡಿನಲ್ಲಿ ಪೂರ್ಣ ವಿರಾಮವನ್ನಿಡುವಂತಹ ನಷ್ಟ ಮೋಹ ಸ್ಮೃತಿ ಸ್ವರೂಪ ಭವ.

ಅಂತ್ಯದಲ್ಲಿ ಅಂತಿಮ ಪರೀಕ್ಷೆಯ ಪ್ರಶ್ನೆಯಿರುತ್ತದೆ - ಸೆಕೆಂಡಿನಲ್ಲಿ ಪೂರ್ಣ ವಿರಾಮವನ್ನಿಡುವುದು. ಮತ್ತೇನೂ ನೆನಪಿಗೆ ಬರಬಾರದು. ತಂದೆ ಮತ್ತು ನಾನು ಅಷ್ಟೇ, ಮೂರನೆಯೇ ಮಾತೇ ಇಲ್ಲ.... ಸೆಕೆಂಡಿನಲ್ಲಿ ನನ್ನ ಬಾಬಾನ ಹೊರತು ಮತ್ತ್ಯಾರೂ ಇಲ್ಲ..... ಇದನ್ನು ಯೋಚಿಸುವುದರಲ್ಲಿಯೂ ಸಮಯವು ಹಿಡಿಸುತ್ತದೆ. ಆದರೆ ಟಿಕ್ ಆಯಿತು, ಅಲುಗಾಡಬಾರದು. ಏಕೆ, ಏನು..... ಇದ್ಯಾವುದೇ ಪ್ರಶ್ನೆಯೂ ಉತ್ಪನ್ನವಾಗಬಾರದು. ಆಗಲೇ ನಷ್ಟ ಮೋಹ ಸ್ಮೃತಿ ಸ್ವರೂಪರಾಗುವಿರಿ. ಆದ್ದರಿಂದ ಅಭ್ಯಾಸ ಮಾಡಿರಿ - ಯಾವಾಗ ಬೇಕು ವಿಸ್ತಾರದಲ್ಲಿ ಬನ್ನಿರಿ ಮತ್ತು ಯಾವಾಗ ಬೇಕು ಆಗ ಸಂಕ್ಷಿಪ್ತವಾಗಿ ಬಿಡಿ. ಬ್ರೇಕ್ ಶಕ್ತಿಶಾಲಿಯಾಗಿರಲಿ.

ಸ್ಲೋಗನ್:
ಯಾರಲ್ಲಿ ಸ್ವಮಾನ ಅಭಿಮಾನವಿಲ್ಲ, ಅವರೇ ಸದಾ ನಿರ್ಮಾಣರಾಗಿದ್ದಾರೆ.