08.01.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಪಾವನರಾಗಲು ನೆನಪಿನ ಯಾತ್ರೆಯು ಬಹಳ ಅವಶ್ಯಕವಾಗಿದೆ, ಇದೇ ಮುಖ್ಯ ಸಬ್ಜೆಕ್ಟ್ ಆಗಿದೆ, ಈ ಯೋಗ ಬಲದಿಂದ ನೀವು ಸರ್ವೀಸೇಬಲ್ ಹಾಗೂ ಗುಣವಂತರಾಗುವಿರಿ.

ಪ್ರಶ್ನೆ:
ನೀವು ಮಕ್ಕಳು ಯಾವ ಯೋಗವನ್ನು ಕಲಿಯುತ್ತೀರೋ ಇದೇ ಎಲ್ಲದಕ್ಕಿಂತ ಭಿನ್ನ ಯೋಗವಾಗಿದೆ, ಹೇಗೆ?

ಉತ್ತರ:
ಇಲ್ಲಿಯವರೆಗೆ ಮನುಷ್ಯರು ಯಾವ ಯೋಗವನ್ನು ಕಲಿಯುತ್ತಾ ಕಲಿಸುತ್ತಾ ಬಂದರೋ ಅದು ಮನುಷ್ಯರೊಂದಿಗೆ ಮನುಷ್ಯರ ಯೋಗವಾಯಿತು. ಆದರೆ ಈಗ ನಾವು ನಿರಾಕಾರನೊಂದಿಗೆ ಯೋಗವನ್ನು ಜೋಡಿಸುತ್ತೇವೆ. ನಿರಾಕಾರಿ ಆತ್ಮವು ನಿರಾಕಾರ ತಂದೆಯನ್ನು ನೆನಪು ಮಾಡುವುದೇ ಎಲ್ಲದಕ್ಕಿಂತ ಭಿನ್ನವಾದ ಮಾತಾಗಿದೆ. ಪ್ರಪಂಚದಲ್ಲಿ ಯಾರಾದರೂ ಭಗವಂತನನ್ನು ನೆನಪು ಮಾಡಿದರೂ ಸಹ ಪರಿಚಯವಿಲ್ಲದೆ ಮಾಡುವರು. ಪರಿಚಯವಿಲ್ಲದೆ ಯಾರನ್ನಾದರೂ ನೆನಪು ಮಾಡುವುದು ಭಕ್ತಿಯಾಗಿದೆ. ಜ್ಞಾನವಂತ ಮಕ್ಕಳು ಪರಿಚಯ ಸಹಿತವಾಗಿ ನೆನಪು ಮಾಡುತ್ತಾರೆ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ. ಮಕ್ಕಳಿಗೆ ಮೊಟ್ಟ ಮೊದಲು ತಂದೆಯ ಪರಿಚಯ ಸಿಕ್ಕಿದೆ. ಚಿಕ್ಕ ಮಗು ಜನ್ಮ ಪಡೆದಾಗ ಅದಕ್ಕೆ ಮೊಟ್ಟ ಮೊದಲು ತಂದೆ-ತಾಯಿಯ ಪರಿಚಯ ಸಿಗುತ್ತದೆ. ನಿಮ್ಮಲ್ಲಿಯೂ ರಚಯಿತ ತಂದೆಯ ಪರಿಚಯ ಸಿಕ್ಕಿರುವವರು ನಂಬರ್ವಾರ್ ಪುರುಷಾರ್ಥದನುಸಾರ ಇದ್ದಾರೆ. ಇದನ್ನೂ ಸಹ ಮಕ್ಕಳು ತಿಳಿದಿದ್ದೀರಿ - ಶ್ರೇಷ್ಠಾತಿ ಶ್ರೇಷ್ಠ ತಂದೆಯೇ ಆಗಿದ್ದಾರೆ, ಅವರ ಮಹಿಮೆಯನ್ನೇ ತಿಳಿಸಬೇಕಾಗಿದೆ. ಶಿವಾಯ ನಮಃ ಎಂದು ಮಹಿಮೆಯನ್ನು ಹಾಡುತ್ತಾರೆ, ಬ್ರಹ್ಮಾ ನಮಃ-ವಿಷ್ಣು ನಮಃ ಎಂಬುದು ಶೋಭಿಸುವುದಿಲ್ಲ. ಶಿವಾಯ ನಮಃ ಎಂಬುದೇ ಶೋಭಿಸುತ್ತದೆ. ಬ್ರಹ್ಮ ದೇವತಾಯ ನಮಃ, ವಿಷ್ಣು ದೇವತಾಯ ನಮಃ ಎಂಬುದು ಭಲೇ ಶೋಭಿಸುತ್ತದೆ. ಅವರಿಗೆ ದೇವತೆಗಳೆಂದು ಹೇಳಬೇಕಾಗುತ್ತದೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ, ಯಾರೇ ಬಂದರೂ ಮೊಟ್ಟ ಮೊದಲು ತಂದೆಯ ಪರಿಚಯವನ್ನು ಅವಶ್ಯವಾಗಿ ತಿಳಿಸಬೇಕು - ಅವರು ಪರಮಪಿತನಾಗಿದ್ದಾರೆ, ತಂದೆಯ ಮಹಿಮೆಯನ್ನು ಹೇಗೆ ತಿಳಿಸುವುದು ಎಂಬುದನ್ನು ಮಕ್ಕಳು ಮರೆತು ಹೋಗುತ್ತೀರಿ. ಮೊದಲು ಇದನ್ನು ತಿಳಿಸಬೇಕಾಗಿದೆ - ಅವರು ಪರಮಪಿತ, ಶಿಕ್ಷಕ, ಸದ್ಗುರುವೂ ಆಗಿದ್ದಾರೆ. ಮೂವರನ್ನೂ ನೆನಪು ಮಾಡಬೇಕಾಗಿದೆ. ವಾಸ್ತವದಲ್ಲಿ ಶಿವ ತಂದೆಯನ್ನೇ ಮೂರೂ ರೂಪಗಳಲ್ಲಿ ನೆನಪು ಮಾಡಬೇಕಾಗಿದೆ. ಇದನ್ನು ಪಕ್ಕಾ ಮಾಡಿಕೊಳ್ಳಬೇಕು. ನೀವು ತಂದೆಯ ಮಹಿಮೆಯನ್ನು ತಿಳಿದುಕೊಂಡಿದ್ದೀರಿ ಆದ್ದರಿಂದಲೇ ಮಾಡುತ್ತೀರಿ. ಮನುಷ್ಯರಂತೂ ಶ್ರೇಷ್ಠಾತಿ ಶ್ರೇಷ್ಠ ತಂದೆಯನ್ನು ಕಲ್ಲು-ಮುಳ್ಳಿನಲ್ಲಿದ್ದಾರೆಂದು ಹೇಳಿ ಬಿಟ್ಟಿದ್ದಾರೆ. ಮನುಷ್ಯರಲ್ಲಿಯೂ ಇದ್ದಾರೆಂದು ಹೇಳುತ್ತಾರೆ ಆದರೆ ಮನುಷ್ಯ ತನುವಿನಲ್ಲಿಯೂ ಸದಾ ಇರಲು ಸಾಧ್ಯವಿಲ್ಲ. ಕೇವಲ ಲೋನ್ ಆಗಿ ತೆಗೆದುಕೊಳ್ಳುತ್ತಾರೆ. ಅವರೇ ಸ್ವಯಂ ಹೇಳುತ್ತಾರೆ - ನಾನು ಈ ತನುವಿನ ಆಧಾರ ತೆಗೆದುಕೊಳ್ಳುತ್ತೇನೆ ಅಂದಮೇಲೆ ತಂದೆಯು ಸತ್ಯವಾಗಿದ್ದಾರೆ ಎಂಬುದನ್ನು ಮೊದಲು ಪಕ್ಕಾ ಮಾಡಬೇಕು. ಅವರೇ ಸತ್ಯ ನಾರಾಯಣನ ಕಥೆಯನ್ನು ತಿಳಿಸುತ್ತಾರೆ. ನರನಿಂದ ನಾರಾಯಣನನ್ನಾಗಿ ಸತ್ಯ ತಂದೆಯೇ ಮಾಡಿದ್ದಾರೆ. ಸತ್ಯಯುಗದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಅವರು ಹೇಗಾದರು, ಯಾರು ಮಾಡಿದರು. ಯಾವಾಗ ಕಥೆಯನ್ನು ತಿಳಿಸಿದರು, ಯಾವಾಗ ರಾಜಯೋಗವನ್ನು ಕಲಿಸಿದರು, ಇದೆಲ್ಲವನ್ನೂ ನೀವೀಗ ತಿಳಿದುಕೊಂಡಿದ್ದೀರಿ. ಮತ್ತೆಲ್ಲವೂ ಮನುಷ್ಯರೊಂದಿಗೆ ಮನುಷ್ಯರ ಯೋಗಗಳಾಗಿದೆ. ಮನುಷ್ಯನ ಯೋಗವು ನಿರಾಕಾರನ ಜೊತೆ ಅದು ಪರಿಚಯ ಸಹಿತವಾಗಿರುವ ಯೋಗವು ಬೇರೆಲ್ಲಿಯೂ ಇಲ್ಲ. ಇತ್ತೀಚೆಗೆ ಭಲೆ ಶಿವನೊಂದಿಗೇ ಯೋಗವನ್ನಿಡುತ್ತಾರೆ, ಪೂಜೆ ಮಾಡುತ್ತಾರೆ ಆದರೆ ಅವರನ್ನು ಯಾರೂ ತಿಳಿದುಕೊಂಡಿಲ್ಲ. ಪ್ರಜಾಪಿತ ಬ್ರಹ್ಮನು ಅವಶ್ಯವಾಗಿ ಸಾಕಾರ ಪ್ರಪಂಚದಲ್ಲಿರುವರು ಎಂಬುದನ್ನು ತಿಳಿದುಕೊಂಡಿಲ್ಲ. ಬಹಳ ತಬ್ಬಿಬ್ಬಾಗಿದ್ದಾರೆ, ಪ್ರಜಾಪಿತ ಬ್ರಹ್ಮನು ಮೊಟ್ಟ ಮೊದಲು ಸತ್ಯಯುಗದಲ್ಲಿರಬೇಕೆಂದು ತಿಳಿದುಕೊಂಡಿದ್ದಾರೆ. ಒಂದು ವೇಳೆ ಪ್ರಜಾಪಿತ ಬ್ರಹ್ಮನು ಮೊಟ್ಟ ಮೊದಲು ಸತ್ಯಯುಗದಲ್ಲಿದ್ದರೆ ಮತ್ತೆ ಸೂಕ್ಷ್ಮವತನದಲ್ಲೇಕೆ ತೋರಿಸಿದ್ದಾರೆ! ಅರ್ಥವೇ ಗೊತ್ತಿಲ್ಲ. ಇವರು ಸಾಕಾರ ಕರ್ಮಬಂಧನದಲ್ಲಿದ್ದಾರೆ, ಅವರು ಸೂಕ್ಷ್ಮ ಕರ್ಮಾತೀತನಾಗಿದ್ದಾರೆ. ಈ ಜ್ಞಾನವು ಯಾರಲ್ಲಿಯೂ ಇಲ್ಲ, ಜ್ಞಾನವನ್ನು ಕೊಡುವವರು ತಂದೆಯೊಬ್ಬರೇ ಆಗಿದ್ದಾರೆ. ಯಾವಾಗ ಅವರು ಬಂದು ಜ್ಞಾನವನ್ನು ಕೊಡುವರೋ ಆಗ ನೀವು ಅನ್ಯರಿಗೂ ತಿಳಿಸುವಿರಿ. ಅನ್ಯರಿಗೆ ಪರಿಚಯ ಕೊಡುವುದು ಬಹಳ ಸಹಜವಾಗಿದೆ, ಕೇವಲ ತಂದೆಯ ಪರಿಚಯ ಕೊಡಬೇಕಾಗಿದೆ. ಇವರು ಎಲ್ಲಾ ಆತ್ಮರ ಬೇಹದ್ದಿನ ತಂದೆಯಾಗಿದ್ದಾರೆ. ಈ ಪರಿಚಯ ಕೊಡುವುದರಲ್ಲಿ ಕಷ್ಟವಿಲ್ಲ ಆದರೆ ನಿಶ್ಚಯವಿಲ್ಲ, ಅಭ್ಯಾಸವಿಲ್ಲದ ಕಾರಣ ಅನ್ಯರಿಗೆ ತಿಳಿಸಲಾಗುವುದಿಲ್ಲ. ಅನ್ಯರಿಗೆ ಜ್ಞಾನ ಕೊಡಲಿಲ್ಲವೆಂದರೆ ಅಜ್ಞಾನಿಗಳೆಂದರ್ಥ. ಜ್ಞಾನವಿಲ್ಲವೆಂದರೆ ಭಕ್ತಿಯಲ್ಲವೆ. ದೇಹಾಭಿಮಾನವಿದೆ. ಜ್ಞಾನವಿರುವುದೇ ದೇಹೀ-ಅಭಿಮಾನಿಯಲ್ಲಿ. ನಾವು ಆತ್ಮರಾಗಿದ್ದೇವೆ, ನಮ್ಮ ತಂದೆಯು ಪರಮಪಿತ ಪರಮಾತ್ಮನೇ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ, ಪ್ರಜಾಪಿತ ಬ್ರಹ್ಮನೂ ಇದ್ದಾರಲ್ಲವೆ. ತಂದೆಯು ಪ್ರಜಾಪಿತ ಬ್ರಹ್ಮನ ಪರಿಚಯವನ್ನು ತಿಳಿಸಿದ್ದಾರೆ. ತಮ್ಮ ಪರಿಚಯವನ್ನು ತಿಳಿಸಿದ್ದಾರೆ, ಮನುಷ್ಯರಾದರೆ ಶಿವ-ಶಂಕರನನ್ನು ಸೇರಿಸಿ ಬಿಟ್ಟಿದ್ದಾರೆ. ಶಂಕರನು ಕಣ್ಣು ತೆರೆದಾಗ ವಿನಾಶವಾಯಿತೆಂದು ಹೇಳುತ್ತಾರೆ ಆದರೆ ವಿನಾಶವಂತೂ ಬಾಂಬುಗಳಿಂದ ಪ್ರಾಕೃತಿಕ ವಿಕೋಪಗಳಿಂದಾಗುತ್ತದೆ. ಶಿವ-ಶಂಕರ ಮಹಾದೇವ ಎಂದು ಹೇಳುತ್ತಾರೆ, ಈ ಚಿತ್ರವು ಯಥಾರ್ಥವಲ್ಲ. ಇವೆಲ್ಲವೂ ಭಕ್ತಿ ಮಾರ್ಗದ ಚಿತ್ರಗಳಾಗಿವೆ. ಅಲ್ಲಿ ಇಂತಹ ಯಾವುದೇ ಮಾತಿಲ್ಲ. ಪ್ರಜಾಪಿತ ಬ್ರಹ್ಮನೂ ದೇಹಧಾರಿಯಾಗಿದ್ದಾರೆ. ಬಹಳ ಮಂದಿ ಮಕ್ಕಳಿದ್ದಾರೆ, ಅಂದಮೇಲೆ ಇವೆಲ್ಲಾ ಚಿತ್ರಗಳು ಭಕ್ತಿಗೋಸ್ಕರ ಇದೆ. ತಂದೆಯು ತಿಳಿಸಿದ್ದಾರೆ - ಇವರು ವ್ಯಕ್ತ ಬ್ರಹ್ಮ, ಸೂಕ್ಷ್ಮವತನದಲ್ಲಿ ಅವ್ಯಕ್ತ ಬ್ರಹ್ಮ. ಅವ್ಯಕ್ತರಾದಾಗ ಫರಿಶ್ತೆಯಾಗಿ ಬಿಡುತ್ತಾರೆ. ಮೂಲವತನ, ಸೂಕ್ಷ್ಮವತನ ಎರಡೂ ಅವಶ್ಯವಾಗಿವೆ. ಸೂಕ್ಷ್ಮವತನದಲ್ಲಿಯೂ ಹೋಗುತ್ತಾರೆ. ತಂದೆಯೂ ತಿಳಿಸುತ್ತಾರೆ - ಪ್ರಜಾಪಿತ ಬ್ರಹ್ಮಾ ಯಾರು ಸಾಧಾರಣ ಮನುಷ್ಯರಾಗಿದ್ದಾರೆಯೋ ಅವರೇ ಫರಿಶ್ತೆಯಾಗುತ್ತಾರೆ. ಮತ್ತೆ ಚಿತ್ರದಲ್ಲಿ ರಾಜಧಾನಿಯನ್ನು ತೋರಿಸಿದ್ದಾರೆ ಅಂದರೆ ಇವರೇ ಹೋಗಿ ರಾಜ್ಯಭಾರ ಮಾಡುತ್ತಾರೆ. ಈ ಸೂಕ್ಷ್ಮವತನದ ಚಿತ್ರವು ಇಲ್ಲದಿದ್ದರೆ ತಿಳಿಸಲು ಕಷ್ಟವಾಗುತ್ತದೆ. ವಾಸ್ತವದಲ್ಲಿ ವಿಷ್ಣುವಿನ ಚತುರ್ಭುಜ ರೂಪವು ಇಲ್ಲವೇ ಇಲ್ಲ, ಇದು ಭಕ್ತಿ ಮಾರ್ಗದ ಚಿತ್ರವಾಗಿದೆ. ತಂದೆಯು ತಿಳಿಸುತ್ತಾರೆ - ಆತ್ಮವೇ ಪತಿತನಿಂದ ಪಾವನನಾಗಬೇಕಾಗಿದೆ. ಪವಿತ್ರನಾಗಿ ತನ್ನ ಧಾಮಕ್ಕೆ ಹೊರಟು ಹೋಗುವುದು. ಆತ್ಮರು ನಿರಾಕಾರಿ ಪ್ರಪಂಚದಲ್ಲಿ ಇರುತ್ತಾರೆ, ಸಾಕಾರಿ ಪ್ರಪಂಚವು ಇಲ್ಲಿದೆ. ಬಾಕಿ ಸೂಕ್ಷ್ಮವತನವನ್ನು ಕುರಿತು ಯಾವುದೇ ಮುಖ್ಯ ಕಥೆಯಿಲ್ಲ. ಸೂಕ್ಷ್ಮವತನದ ರಹಸ್ಯವನ್ನೂ ಸಹ ತಂದೆಯು ಈಗ ತಿಳಿಸುತ್ತಾರೆ. ಅಂದಾಗ ಮೂಲವತನ, ಸೂಕ್ಷ್ಮವತನ, ಹಾಗೂ ಇದು ಸ್ಥೂಲವತನ. ಆದ್ದರಿಂದ ಎಲ್ಲರಿಗೆ ಮೊದಲು ತಂದೆಯ ಪರಿಚಯ ಕೊಡಬೇಕು. ಭಕ್ತಿಮಾರ್ಗದಲ್ಲಿಯೂ ತಂದೆಯನ್ನು ಹೇ ಭಗವಂತ, ಹೇ ಪ್ರಭು ಎಂದು ಕರೆಯುತ್ತಾರೆ, ಕೇವಲ ತಿಳಿದುಕೊಂಡಿಲ್ಲ. ಯಾವಾಗಲೂ ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆಯೇ ಹೊರತು ಶಿವ ದೇವತಾಯ ನಮಃ ಎಂದು ಎಂದಿಗೂ ಹೇಳುವುದಿಲ್ಲ. ಬ್ರಹ್ಮ ದೇವತಾ ಎಂದು ಹೇಳುತ್ತಾರೆ, ಶಿವನಿಗೆ ಸದಾ ಪರಮಪಿತ ಪರಮಾತ್ಮನೆಂದೇ ಹೇಳುತ್ತಾರೆ. ಶಿವ ದೇವತೆಯೆಂದು ಎಂದೂ ಹೇಳುವುದಿಲ್ಲ, ಶಿವ ಪರಮಾತ್ಮನೆಂದೇ ಹೇಳಲಾಗುತ್ತದೆ. ಅಂದಮೇಲೆ ಅವರನ್ನು ಸರ್ವವ್ಯಾಪಿ ಎಂದು ಹೇಳಲು ಸಾಧ್ಯವೇ? ಅವರು ಪತಿತರನ್ನು ಪಾವನ ಮಾಡುವ ಕರ್ತವ್ಯ ಮಾಡಬೇಕಾಗಿದೆ ಅಂದಮೇಲೆ ಅವರು ಕಲ್ಲು-ಮುಳ್ಳಿನಲ್ಲಿದ್ದು ಮಾಡುತ್ತಾರೆಯೇ? ಇದನ್ನೇ ಘೋರ ಅಂಧಕಾರವೆಂದು ಹೇಳಲಾಗುತ್ತದೆ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ತಂದೆಯು ಬಂದು ತಿಳಿಸುತ್ತಾರೆ - ಯಧಾ ಯಧಾಹಿ ಧರ್ಮಸ್ಯ ಗ್ಲಾನಿರ್ಭವತ ಭಾರತಃ ಅಂದರೆ ಯಾವುದರ ಗ್ಲಾನಿ? ಅವರಂತೂ ಶ್ಲೋಕವನ್ನು ಹೇಳಿ ಅದರ ಅರ್ಥವನ್ನು ತಿಳಿಸುತ್ತಾರಷ್ಟೆ. ನೀವು ಮಕ್ಕಳು ಹೋಗಿ ನೋಡಬೇಕು, ನಾವು ಇದರ ಅರ್ಥವನ್ನು ತಿಳಿಸುತ್ತೇವೆಂದು ಹೇಳಬೇಕು. ನಂತರ ಕೂಡಲೇ ಕುಳಿತು ತಿಳಿಸಿಕೊಡಿ. ಇವರು ಬಿ.ಕೆ.ಎಂಬುದು ಅವರಿಗೇನು ಅರ್ಥವಾಗುವುದಿಲ್ಲ. ಭಲೆ ಶ್ವೇತ ವಸ್ತ್ರಗಳನ್ನು ಧರಿಸಿ, ಆದರೆ ನಿಮ್ಮ ಮೇಲೆ ಏನಾದರೂ ಸೀಲ್ ಹಾಕಲಾಗಿದೆಯೇ? ಆದ್ದರಿಂದ ನೀವು ಎಲ್ಲಿ ಬೇಕಾದರೂ ಹೋಗಿ ಕೇಳಿಸಿಕೊಂಡು ಅದರ ಅರ್ಥವನ್ನು ತಿಳಿಸಬಲ್ಲಿರಿ. ಮೊದಲು ಅವರೇನು ತಿಳಿಸುತ್ತಾರೆಂಬುದನ್ನು ಕೇಳಿರಿ. ಬಾಕಿ ಇವೆಲ್ಲಾ ಚಿತ್ರಗಳು ವಿವರವಾಗಿ ತಿಳಿದುಕೊಳ್ಳುವಂತಹದ್ದಾಗಿದೆ. ಅಪಾರ ಜ್ಞಾನವಿದೆ, ಸಾಗರವನ್ನೇ ಶಾಹಿಯನ್ನಾಗಿ ಮಾಡಿ ಬರೆದರೂ ಇದರ ಅಂತ್ಯವಾಗುವುದಿಲ್ಲ ಮತ್ತು ಸೆಕೆಂಡಿನ ಮಾತನ್ನು ತಿಳಿಸಲಾಯಿತು. ಕೇವಲ ನೀವು ತಂದೆಯ ಪರಿಚಯವನ್ನು ಕೊಡಿ, ಅವರೇ ಬೇಹದ್ದಿನ ತಂದೆ ಸ್ವರ್ಗದ ರಚಯಿತನಾಗಿದ್ದಾರೆ. ನಾವೆಲ್ಲಾ ಮಕ್ಕಳು ಸಹೋದರರಾಗಿದ್ದೇವೆ ಅಂದಮೇಲೆ ನಮಗೂ ಸಹ ಅವಶ್ಯವಾಗಿ ಸ್ವರ್ಗದ ರಾಜ್ಯವು ಬೇಕಲ್ಲವೆ. ಆದರೆ ಎಲ್ಲರಿಗೂ ಸಿಗಲು ಸಾಧ್ಯವಿಲ್ಲ. ತಂದೆಯು ಬರುವುದೇ ಭಾರತದಲ್ಲಿ ಮತ್ತು ಭಾರತವಾಸಿಗಳೇ ಸ್ವರ್ಗವಾಸಿಗಳಾಗುತ್ತಾರೆ. ಅನ್ಯರಂತೂ ಹಿಂದೆ ಬರುತ್ತಾರೆ. ಇದಂತೂ ಬಹಳ ಸಹಜವಾಗಿದೆ, ಆದರೆ ತಿಳಿದುಕೊಳ್ಳುವುದಿಲ್ಲ. ತಂದೆಗಂತೂ ಆಶ್ಚರ್ಯವೆನಿಸುತ್ತದೆ. ಒಂದು ದಿನ ಗಣಿಕೆಯರು ಮುಂತಾದವರೂ ಬಂದು ಕೇಳುತ್ತಾರೆ. ಅಂತ್ಯದಲ್ಲಿ ಬರುವವರು ತೀವ್ರವಾಗಿ ಹೋಗಿ ಬಿಡುತ್ತಾರೆ. ಅಲ್ಲಿಯೂ ಯಾರಾದರೂ ಹೋಗಿ ಸೇವೆ ಮಾಡಬಹುದು. ಬಹಳ ಮಂದಿಗೆ ನಾಚಿಕೆಯಾಗುತ್ತದೆ, ದೇಹಾಭಿಮಾನ ಬಹಳ ಇದೆ. ತಂದೆಯು ತಿಳಿಸುತ್ತಾರೆ - ವೇಶ್ಯೆಯರಿಗೂ ಸಹ ತಿಳಿಸಬೇಕು. ಭಾರತದ ಹೆಸರನ್ನೂ ಸಹ ಅವರೇ ಕೆಳಮಟ್ಟಕ್ಕೆ ತಂದಿದ್ದಾರೆ. ಇದರಲ್ಲಿ ಮುಖ್ಯವಾಗಿ ಯೋಗಬಲದ ಮಾತಾಗಿದೆ. ಸಂಪೂರ್ಣ ಪತಿತರಾಗಿದ್ದಾರೆ, ಪಾವನರಾಗಲು ನೆನಪಿನ ಯಾತ್ರೆ ಬೇಕು. ಈಗ ಆ ನೆನಪಿನ ಬಲ ಸ್ವಲ್ಪ ಕಡಿಮೆ ಇದೆ, ಕೇವಲ ಜ್ಞಾನವಿದೆ ಮತ್ತು ನೆನಪು ಕಡಿಮೆಯಿದೆ. ಕಷ್ಟದ ಸಬ್ಜೆಕ್ಟ್ ಆಗಿದೆ, ಇದರಲ್ಲಿ ಯಾವಾಗ ಉತ್ತೀರ್ಣರಾಗುತ್ತೀರಿ ಆಗ ಗಣಿಕೆಯರ ಉದ್ಧಾರ ಮಾಡಲು ಸಾಧ್ಯ. ಒಳ್ಳೊಳ್ಳೆಯ ಅನುಭವಿ ಮಾತೆಯರು ಹೋಗಿ ತಿಳಿಸಿಕೊಡಬೇಕು. ಕನ್ಯೆಯರಿಗಂತೂ ಅನುಭವವಿಲ್ಲ. ಮಾತೆಯರು ತಿಳಿಸಬಹುದು. ತಂದೆಯು ತಿಳಿಸುತ್ತಾರೆ - ಪವಿತ್ರರಾಗಿ ಆಗ ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಪ್ರಪಂಚವೇ ಶಿವಾಲಯವಾಗುವುದು. ಸತ್ಯಯುಗವನ್ನು ಶಿವಾಲಯವೆಂದು ಹೇಳಲಾಗುತ್ತದೆ, ಅಲ್ಲಿ ಅಪಾರ ಸುಖವಿದೆ. ಅವರಿಗೂ ಈ ರೀತಿ ತಿಳಿಸಿ - ತಂದೆಯು ಹೇಳುತ್ತಾರೆ - ಈಗ ಪವಿತ್ರರಾಗಲು ಪ್ರತಿಜ್ಞೆ ಮಾಡಿ. ಇಂತಹ ಪತಿತರನ್ನು ಪಾವನರನ್ನಾಗಿ ಮಾಡಲು ಖಡ್ಗವು ಬಹಳ ಹರಿತವಾಗಿರಬೇಕು. ಇದರಲ್ಲಿ ಬಹುಷಃ ಈಗ ನಿಧಾನವಿದೆ. ತಿಳಿಸುವುದರಲ್ಲಿಯೂ ಸಹ ನಂಬರ್ವಾರ್ ಇದ್ದೀರಿ, ಸೇವಾ ಕೇಂದ್ರದಲ್ಲಿ ಇರುತ್ತಾರೆ. ತಂದೆಗೆ ಗೊತ್ತಿದೆ, ಎಲ್ಲರೂ ಏಕರಸವಾಗಿಲ್ಲ. ಸರ್ವೀಸಿನಲ್ಲಿ ಯಾರು ಹೋಗುತ್ತಾರೆ ಅವರಲ್ಲಿ ಹಗಲು-ರಾತ್ರಿಯ ಅಂತರವಿದೆ. ಅಂದಾಗ ಮೊದಲು ಯಾರಿಗೇ ತಿಳಿಸುತ್ತೀರೆಂದರೆ ತಂದೆಯ ಪರಿಚಯವನ್ನೇ ಕೊಡಿ. ತಂದೆಯ ಮಹಿಮೆಯನ್ನೇ ಮಾಡಿ. ತಂದೆಯನ್ನು ಬಿಟ್ಟು ಇಷ್ಟು ಗುಣಗಳು ಮತ್ತ್ಯಾರದೂ ಆಗಲು ಸಾಧ್ಯವಿಲ್ಲ. ಅವರೇ ಗುಣವಂತರಾಗಿ ಮಾಡುತ್ತಾರೆ. ತಂದೆಯೇ ಸತ್ಯಯುಗದ ಸ್ಥಾಪನೆ ಮಾಡುತ್ತಾರೆ. ಈಗ ಇದು ಸಂಗಮಯುಗವಾಗಿದೆ ಯಾವಾಗ ನೀವು ಪುರುಷೋತ್ತಮರಾಗುತ್ತಿದ್ದೀರಿ. ನೀವು ಆತ್ಮರಿಗೆ ಕುಳಿತು ತಿಳಿಸುತ್ತೇವೆ. ಇದನ್ನಂತೂ ನೀವು ತಿಳಿಸುತ್ತೀರಿ - ಇದು ಆತ್ಮದ ಶರೀರವಾಗಿದೆ, ಇದನ್ನು ಯಾರೆಷ್ಟು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ಅವರ ಚಹರೆಯಿಂದಲೇ ಅರ್ಹವಾಗಿ ಬಿಡುತ್ತದೆ. ಯಾರಾದರೂ ಉದಾಸರಾಗಿದ್ದರೆ ಅವರ ಚಹರೆಯೇ ಬದಲಾಗಿ ಬಿಡುತ್ತದೆ. ಆತ್ಮನೆಂದು ತಿಳಿದು ಕುಳಿತಾಗ ಅವರ ಚಹರೆಯು ಚೆನ್ನಾಗಿರುವುದು. ಇದನ್ನು ಅಭ್ಯಾಸ ಮಾಡಬೇಕಾಗುವುದು. ಗೃಹಸ್ಥದಲ್ಲಿರುವ ಮಕ್ಕಳು ಇಷ್ಟು ಉಮ್ಮಂಗದಲ್ಲಿರುವುದಿಲ್ಲ, ಏಕೆಂದರೆ ಉದ್ಯೋಗ-ವ್ಯವಹಾರಗಳ ಜಂಜಾಟವಿರುತ್ತದೆ. ಪೂರ್ಣ ಅಭ್ಯಾಸ ಮಾಡಿದಾಗಲೇ ನಡೆಯುತ್ತಾ-ತಿರುಗಾಡುತ್ತಾ, ಏಳುತ್ತಾ-ಕುಳಿತುಕೊಳ್ಳುತ್ತಾ ಪಕ್ಕಾ ಆಗಿರುವುದು. ನೆನಪಿನಿಂದಲೇ ನೀವು ಪಾವನರಾಗುತ್ತೀರಿ. ಆತ್ಮವು ಎಷ್ಟು ಯೋಗದಲ್ಲಿರುವುದೋ ಅಷ್ಟು ಪಾವನವಾಗುವುದು. ಸತ್ಯಯುಗದಲ್ಲಿ ನೀವು ಸತೋಪ್ರಧಾನರಾಗಿದ್ದಾಗ ನೀವು ಬಹಳ ಖುಷಿಯಾಗಿದ್ದಿರಿ. ಈಗ ಸಂಗಮಯುಗದಲ್ಲಿ ನೀವು ಹಾಡುತ್ತಾ-ಕುಣಿಯುತ್ತಾ ಇರುತ್ತೀರಿ, ಬೇಹದ್ದಿನ ತಂದೆಯೇ ಸಿಕ್ಕಿದ ಮೇಲೆ ಮತ್ತೇನು ಬೇಕು. ಇಂತಹ ತಂದೆಗಂತೂ ಬಲಿಹಾರಿಯಾಗಬೇಕು ಆದರೆ ಸಾಹುಕಾರರು ಬರುವುದೇ ಕಷ್ಟ. ಬಡವರಿಗೇ ಸಿಗುತ್ತದೆ. ನಾಟಕವೇ ಹೀಗೆ ಮಾಡಲ್ಪಟ್ಟಿದೆ. ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತಾ ಇರುತ್ತದೆ. ಕೋಟಿಯಲ್ಲಿ ಕೆಲವರೇ ವಿಜಯ ಮಾಲೆಯ ಮಣಿಯಾಗುತ್ತಾರೆ. ಬಾಕಿ ಪ್ರಜೆಗಳಂತೂ ನಂಬರ್ವಾರ್ ಆಗಲೇಬೇಕಾಗಿದೆ. ಎಷ್ಟೊಂದು ಮಂದಿ ಪ್ರಜೆಗಳಾಗುತ್ತಾರೆ. ಸಾಹುಕಾರರು ಬಡವರು ಎಲ್ಲರೂ ಆಗುತ್ತಾರೆ. ಪೂರ್ಣ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಉಳಿದವರೆಲ್ಲರೂ ತಮ್ಮ-ತಮ್ಮ ವಿಭಾಗಗಳಲ್ಲಿ ಹೊರಟು ಹೋಗುವರು. ಆದ್ದರಿಂದ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಿರಿ. ನಿಮ್ಮ ಆಹಾರ-ಪಾನೀಯಗಳು ಚೆನ್ನಾಗಿರಲಿ. ನಾನು ಇಂತಹ ಪದಾರ್ಥವನ್ನು ತಿನ್ನಬೇಕೆಂದು ನಿಮಗೆಂದೂ ಆಸೆಯಿರಬಾರದು. ಈ ಆಸೆಗಳೆಲ್ಲವೂ ಇಲ್ಲಿ ಇರುತ್ತದೆ. ಬ್ರಹ್ಮ ತಂದೆಯು ದೊಡ್ಡ-ದೊಡ್ಡ ವಾನಪ್ರಸ್ಥಿಗಳ ಆಶ್ರಮಗಳನ್ನು ನೋಡಿದ್ದಾರೆ, ಅವರು ಬಹಳ ಶಾಂತಿಯಿಂದ ಇರುತ್ತಾರೆ. ಇಲ್ಲಂತೂ ಈ ಬೇಹದ್ದಿನ ಮಾತುಗಳೆಲ್ಲವನ್ನೂ ತಂದೆಯು ತಿಳಿಸುತ್ತಾರೆ. ವೇಶ್ಯೆಯರು, ಗಣಿಕೆಯರೂ ಸಹ ಮುಂದೆ ಇಂತಿಂತಹವರು ಬರುವರು, ನಿಮಗಿಂತಲೂ ತೀಕ್ಷ್ಣವಾಗಿ ಮುಂದೆ ಹೋಗುವರು. ಬಹಳ ಸುಂದರವಾದ ಗೀತೆಗಳನ್ನು ಹಾಡುವರು ಅದನ್ನು ಕೇಳುತ್ತಿದ್ದಂತೆಯೇ ಖುಷಿಯ ನಶೆಯೇರುವುದು. ಯಾವಾಗ ಈ ರೀತಿ ಬಿದ್ದಿರುವವರಿಗೆ ನೀವು ತಿಳಿಸಿ ಶ್ರೇಷ್ಠರನ್ನಾಗಿ ಮಾಡುವಿರೋ ಆಗ ನಿಮ್ಮ ಹೆಸರು ಪ್ರಖ್ಯಾತವಾಗುವುದು. ಇವರಂತೂ ವೇಶ್ಯೆಯರನ್ನೂ ಸಹ ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆಂದು ಹೇಳುತ್ತಾರೆ. ಮತ್ತು ವೇಶ್ಯೆಯರೂ ಸಹ ಹೇಳ ತೊಡಗುತ್ತಾರೆ - ನಾವು ಶೂದ್ರರಾಗಿದ್ದೆವು ಈಗ ಬ್ರಾಹ್ಮಣರಾಗಿದ್ದೇವೆ ಮತ್ತೆ ನಾವೇ ದೇವತಾ, ಕ್ಷತ್ರಿಯರಾಗುತ್ತೇವೆ. ಇವರು ಉನ್ನತಿಯನ್ನು ಪಡೆಯುತ್ತಿದ್ದಾರೆಯೇ ಇಲ್ಲವೆ ಎಂದು ತಂದೆಯು ಪ್ರತಿಯೊಬ್ಬರನ್ನೂ ಅರಿತುಕೊಳ್ಳಬಲ್ಲರು. ಕೊನೆಯಲ್ಲಿ ಬರುವವರೂ ಸಹ ಹಳಬರಿಗಿಂತಲೂ ಮುಂದೆ ಹೋಗುವರು. ಮುಂದೆ ಹೋದಂತೆ ನೀವು ಎಲ್ಲವನ್ನು ನೋಡುವಿರಿ. ಈಗಲೂ ನೋಡುತ್ತಿದ್ದೀರಿ, ಹೊಸ ಮಕ್ಕಳು ಸೇವೆಯಲ್ಲಿ ಎಷ್ಟು ಉಮ್ಮಂಗದಲ್ಲಿರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತ-ಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಗುಡ್ಮಾರ್ನಿಂಗ್. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

೧. ಪತಿತರನ್ನು ಪಾವನರನ್ನಾಗಿ ಮಾಡುವ ಸೇವೆ ಮಾಡಿರಿ, ಗಣಿಕೆಯರು-ವೇಶ್ಯೆಯರಿಗೂ ಜ್ಞಾನ ಕೊಡಿ, ಬಿದ್ದಿರುವವರನ್ನು ಮೇಲೆತ್ತಿರಿ, ಅವರ ಉದ್ಧಾರವನ್ನು ಮಾಡಿ ಆಗ ಹೆಸರು ಪ್ರಖ್ಯಾತವಾಗುವುದು.

೨. ಸ್ವಯಂನ ದೃಷ್ಟಿಯನ್ನು ಪವಿತ್ರವನ್ನಾಗಿ ಮಾಡಿಕೊಳ್ಳಲು ನಡೆಯುತ್ತಾ-ತಿರುಗಾಡುತ್ತಾ ಅಭ್ಯಾಸ ಮಾಡಿ - ನಾನಾತ್ಮನಾಗಿದ್ದೇನೆ, ಆತ್ಮನೊಂದಿಗೆ ಮಾತನಾಡುತ್ತೇನೆ. ತಂದೆಯ ನೆನಪಿನಲ್ಲಿರಿ ಆಗ ಪಾವನರಾಗಿ ಬಿಡುವಿರಿ.

ವರದಾನ:
ಒಂದು ನಿಮಿಷದ ಏಕಾಗ್ರ ಸ್ಥಿತಿಯ ಮೂಲಕ ಶಕ್ತಿಶಾಲಿ ಅನುಭವ ಮಾಡುವ ಹಾಗೂ ಮಾಡಿಸುವಂತಹ ಏಕಾಂತವಾಸಿ ಭವ.

ಏಕಾಂತವಾಸಿಗಳಾಗುವುದು ಅರ್ಥಾತ್ ಯಾವುದಾದರೂ ಒಂದು ಶಕ್ತಿಶಾಲಿ ಸ್ಥಿತಿಯಲ್ಲಿ ಸ್ಥಿತರಾಗುವುದು. ಇಲ್ಲಾ ಬೀಜರೂಪ ಸ್ಥಿತಿಯಲ್ಲಿ ಸ್ಥಿತರಾಗಿ, ಇಲ್ಲಾ ಲೈಟ್ಮೈಟ್ ಹೌಸ್ ಸ್ಥಿತಿಯಲ್ಲಿ ಸ್ಥಿತರಾಗಿ ವಿಶ್ವಕ್ಕೆ ಲೈಟ್ ಮೈಟ್ ಕೊಡಿ, ಇಲ್ಲಾ ಫರಿಶ್ಥಾತನದ ಸ್ಥಿತಿಯ ಮೂಲಕ ಬೇರೆಯವರಿಗೆ ಅವ್ಯಕ್ತ ಸ್ಥಿತಿಯ ಅನುಭವ ಮಾಡಿಸಿ. ಒಂದು ಸೆಕೆಂಡ್ ಅಥವಾ ಒಂದು ನಿಮಿಷ ಸಹಾ ಒಂದು ವೇಳೆ ಈ ಸ್ಥಿತಿಯಲ್ಲಿ ಏಕಾಗ್ರರಾಗಿ ಸ್ಥಿತರಾದಾಗ ಸ್ವಯಂ ನಿಮಗೆ ಮತ್ತು ಅನ್ಯ ಆತ್ಮರಿಗೆ ಬಹಳ ಲಾಭ ಕೊಡಲು ಸಾಧ್ಯ. ಕೇವಲ ಇದರ ಅಭ್ಯಾಸದ ಅವಶ್ಯಕತೆಯಿದೆ.

ಸ್ಲೋಗನ್:
ಬ್ರಹ್ಮಾಚಾರಿ ಅವರೇ ಆಗಿದ್ದಾರೆ ಯಾರ ಪ್ರತಿ ಸಂಕಲ್ಪ, ಪ್ರತಿ ಮಾತಿನಲ್ಲಿ ಪವಿತ್ರತೆಯ ವೈಭ್ರೇಷನ್ ಸಮಾವೇಶವಾಗಿರುವುದು.


ಬ್ರಹ್ಮಾ ತಂದೆಯ ಸಮಾನರಾಗಲು ವಿಶೇಷ ಪುರುಷಾರ್ಥ -
ಬ್ರಹ್ಮಾ ತಂದೆಯ ಸಮಾನ ಫರಿಶ್ಥಾ ಸ್ಥಿತಿಯ ಅನುಭವ ಮಾಡುವುದಕ್ಕಾಗಿ ಕರ್ಮ ಮಾಡುತ್ತಾ ಮಧ್ಯೆ-ಮಧ್ಯೆಯಲ್ಲಿ ನಿರಾಕಾರಿ ಮತ್ತು ಫರಿಶ್ಥಾ ಸ್ವರೂಪದ ಮನಸ್ಸಿನ ವ್ಯಾಯಾಮ ಮಾಡಿ. ಹೇಗೆ ಬ್ರಹ್ಮಾ ತಂದೆಯನ್ನು ಸಾಕಾರ ರೂಪದಲ್ಲಿ ನೋಡಿದಿರಿ, ಸದಾ ಡಬಲ್ ಲೈಟ್ ಆಗಿದ್ದರು, ಸೇವೆಯದೂ ಸಹಾ ಹೊರೆ ಇರಲಿಲ್ಲ. ಈ ರೀತಿ ತಂದೆಯನ್ನು ಅನುಕರಣೆ ಮಾಡಿ ಆಗ ಸಹಜವಾಗಿ ತಂದೆ ಸಮಾನ ಆಗಿ ಬಿಡುವಿರಿ.