08.02.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನಾನು ಸದಾ ವಾಣಿಯಿಂದ ದೂರವಿದ್ದೇನೆ, ನಾನು ತಾವು ಮಕ್ಕಳನ್ನು ಉಪರಾಂ(ಭಿನ್ನ)ರನ್ನಾಗಿ ಮಾಡಲು ಬಂದಿದ್ದೇನೆ, ಈಗ ನಿಮ್ಮೆಲ್ಲರದು ವಾನಪ್ರಸ್ಥ ಸ್ಥಿತಿಯಾಗಿದೆ, ಈಗ ವಾಣಿಯಿಂದ ದೂರವಿರುವ ಮನೆಗೆ ಹೋಗಬೇಕಾಗಿದೆ

ಪ್ರಶ್ನೆ:
ಒಳ್ಳೆಯ ಪುರುಷಾರ್ಥಿ ವಿದ್ಯಾರ್ಥಿಗಳೆಂದು ಯಾರಿಗೆ ಹೇಳಲಾಗುತ್ತದೆ? ಅವರ ಮುಖ್ಯ ಲಕ್ಷಣಗಳನ್ನು ತಿಳಿಸಿ.

ಉತ್ತರ:
ಯಾರು ತಮ್ಮೊಂದಿಗೆ ತಾವೇ ಮಾತನಾಡಿಕೊಳ್ಳುವುದನ್ನು ತಿಳಿದಿರುತ್ತಾರೆಯೋ, ಸೂಕ್ಷ್ಮ ವಿದ್ಯಾಭ್ಯಾಸವನ್ನು ಮಾಡುತ್ತಾರೆಯೋ ಅವರೇ ಒಳ್ಳೆಯ ಪುರುಷಾರ್ಥಿ ವಿದ್ಯಾರ್ಥಿಗಳಾಗಿದ್ದಾರೆ. ಪುರುಷಾರ್ಥಿ ವಿದ್ಯಾರ್ಥಿಯು ಸದಾ ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳುತ್ತಿರುತ್ತಾರೆ. ನನ್ನಲ್ಲಿ ಯಾವುದೇ ಆಸುರೀ ಸ್ವಭಾವವು ಇಲ್ಲವೇ? ದೈವೀ ಗುಣಗಳನ್ನು ಎಲ್ಲಿಯವರೆಗೆ ಧಾರಣೆ ಮಾಡಿದ್ದೇನೆ? ಅವರು ತಮ್ಮ ರಿಜಿಸ್ಟರನ್ನೂ ಸಹ ಇಡುತ್ತಾರೆ. ಸದಾ ಸಹೋದರ-ಸಹೋದರನೆಂಬ ದೃಷ್ಟಿಯಿದೆಯೇ? ಕೆಟ್ಟ ವಿಚಾರಗಳಂತೂ ನಡೆಯುವುದಿಲ್ಲವೇ?

ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ, ಯಾರೆಲ್ಲರೂ ವಾಣಿಯಿಂದ ದೂರ ಹೋಗುವ, ಅಂದರೆ ಮನೆಗೆ ಹೋಗುವ ಪುರುಷಾರ್ಥ ಮಾಡುತ್ತಿದ್ದೀರೋ ಅವರ ಪ್ರತಿ ನಿರ್ವಾಣಧಾಮವು ಎಲ್ಲಾ ಆತ್ಮಗಳ ಮನೆಯಾಗಿದೆ. ತಾವು ತಿಳಿಯುತ್ತೀರಿ - ಈಗ ನಾವು ಈ ಶರೀರವನ್ನು ಬಿಟ್ಟು ಮನೆಗೆ ಹೋಗಬೇಕಾಗಿದೆ. ನಾನೀಗ ನಿಮ್ಮನ್ನು ಮನೆಗೆ ಕರೆದುಕೊಂಡು ಹೋಗುವ ಸಲುವಾಗಿ ಬಂದಿದ್ದೇನೆಂದು ತಂದೆಯು ತಿಳಿಸುತ್ತಾರೆ. ಆದ್ದರಿಂದ ಈ ದೇಹ ಮತ್ತು ದೇಹದ ಸಂಬಂಧಗಳಿಂದ ಉಪರಾಂ ಆಗಬೇಕಾಗಿದೆ. ಇದಂತೂ ಕೊಳಕು ಪ್ರಪಂಚವಾಗಿದೆ. ಇದೂ ಸಹ ಆತ್ಮಕ್ಕೆ ಗೊತ್ತಿದೆ - ನಾವೀಗ ಮನೆಗೆ ಹೋಗಬೇಕು, ಪಾವನರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ ಅಂದಮೇಲೆ ನಾವು ಪುನಃ ಪಾವನ ಪ್ರಪಂಚಕ್ಕೆ ಹೋಗಬೇಕಾಗಿದೆ. ಇದು ಒಳಗೆ ವಿಚಾರಸಾಗರ ಮಂಥನ ನಡೆಯಬೇಕು. ಮತ್ತ್ಯಾರಿಗೂ ಇಂತಹ ವಿಚಾರಗಳು ಬರುವುದಿಲ್ಲ. ತಾವೂ ಸಹ ಇದನ್ನು ತಿಳಿಯುತ್ತೀರಿ - ನಾವು ತಮ್ಮ ಹೃದಯ ಪೂರ್ವಕವಾಗಿ ಈ ಶರೀರವನ್ನು ಬಿಟ್ಟು ನಮ್ಮ ಮನೆಗೆ ಹೋಗಿ ಮತ್ತೆ ಹೊಸ, ಪವಿತ್ರ ಸಂಬಂಧದಲ್ಲಿ ಹೊಸ ಪ್ರಪಂಚದಲ್ಲಿ ಬರುತ್ತೇವೆ ಎಂಬ ಸ್ಮೃತಿಯೂ ಸಹ ಕೆಲವರಿಗಿರುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಚಿಕ್ಕವರು, ದೊಡ್ಡವರು, ವೃದ್ಧರು ಮೊದಲಾದವರೆಲ್ಲರೂ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಮತ್ತೆ ಹೊಸ ಪ್ರಪಂಚದ ಪಾವನ ಸಂಬಂಧದಲ್ಲಿ ಬರಬೇಕಾಗಿದೆ. ಘಳಿಗೆ-ಘಳಿಗೆಯೂ ನಾವೀಗ ಮನೆಗೆ ಹೋಗಲು ತಯಾರಿ ಮಾಡಿಕೊಳ್ಳುತ್ತಿದ್ದೇವೆಂದು ಬುದ್ಧಿಯಲ್ಲಿ ಬರಬೇಕು. ಯಾರು ತಯಾರಿ ಮಾಡಿಕೊಳ್ಳುತ್ತಾರೆಯೋ ಅವರೇ ಜೊತೆಯಲ್ಲಿ ಮನೆಗೆ ಬರುತ್ತಾರೆ. ಯಾರು ಈಗ ಈಶ್ವರಾರ್ಥವಾಗಿ ಮಾಡುತ್ತಾರೆಯೋ ಅವರು ಹೊಸ ಪ್ರಪಂಚದಲ್ಲಿ ಹೋಗಿ ಪದಮಾಪತಿಗಳಾಗುತ್ತಾರೆ. ಮನುಷ್ಯರು ಈ ಹಳೆಯ ಪ್ರಪಂಚದಲ್ಲಿ ಪರೋಕ್ಷವಾಗಿ ಮಾಡುತ್ತಾರೆ, ಈಶ್ವರ ಇದರ ಫಲವನ್ನು ಕೊಡುವವರೆಂದು ತಿಳಿಯುತ್ತಾರೆ. ಅದನ್ನು ಈಗ ತಂದೆಯು ತಿಳಿಸುತ್ತಾರೆ - ಪರೋಕ್ಷವಾಗಿ ಮಾಡುವುದರಿಂದ ಅಲ್ಪಕಾಲದ ಕ್ಷಣ ಭಂಗುರ ಪ್ರಾಪ್ತಿ ಸಿಗುವುದು. ಈಗ ನಾನು ಬಂದು ನಿಮಗೆ ಸಲಹೆ ನೀಡುತ್ತೇನೆ - ಈಗ ಯಾರು ನನ್ನ ಅರ್ಥವಾಗಿ ಮಾಡುತ್ತೀರೋ ಅದರಿಂದ ನಿಮಗೆ 21 ಜನ್ಮಗಳಿಗೆ ಒಂದಕ್ಕೆ ಪದಮದಷ್ಟು ಸಿಗುತ್ತದೆ. ದೊಡ್ಡ ಮನೆಯಲ್ಲಿ ಹೋಗಿ ಜನ್ಮ ತೆಗೆದುಕೊಳ್ಳುತ್ತೀರಿ, ಲಕ್ಷ್ಮೀ ಅಥವಾ ನಾರಾಯಣರಾಗುತ್ತೀರಿ ಅಂದಮೇಲೆ ಇಷ್ಟು ಪರಿಶ್ರಮ ಪಡಬೇಕಲ್ಲವೆ. ನಾವು ಈ ಹಳೆಯ ಛೀ ಛೀ ಪ್ರಪಂಚದಿಂದ ಹೋಗಲು ತಯಾರು ಮಾಡಿಕೊಳ್ಳುತ್ತಿದ್ದೇವೆ, ಈ ಹಳೆಯ ಪ್ರಪಂಚ ಮತ್ತು ಈ ಹಳೆಯ ಶರೀರವನ್ನು ಬಿಡಬೇಕಾಗಿದೆ ಆದ್ದರಿಂದ ಈಗ ಈ ರೀತಿ ತಯಾರಾಗಿರಬೇಕು - ಅಂತ್ಯದ ಸಮಯದಲ್ಲಿ ಯಾರೂ ನೆನಪಿಗೆ ಬರಬಾರದು. ಒಂದು ವೇಳೆ ಇದೇ ಹಳೆಯ ಪ್ರಪಂಚ, ಮಿತ್ರ-ಸಂಬಂಧಿ ಮೊದಲಾದವರು ನೆನಪಿಗೆ ಬಂದರೆ ಗತಿಯೇನಾಗುವುದು? ಅಂತ್ಯಕಾಲದಲ್ಲಿ ಯಾರು ಸ್ತ್ರೀಯನ್ನು ನೆನಪು ಮಾಡುತ್ತಾರೆಯೋ ಅವರು ಅವರನ್ನೇ ಸೇರುತ್ತಾರೆ..... ಎಂದು ನೀವು ಹೇಳುತ್ತೀರಲ್ಲವೆ. ಆದ್ದರಿಂದ ಈಗ ತಂದೆಯನ್ನು ಸ್ಮರಿಸಬೇಕು. ಆದರೆ ಈ ಬ್ರಹ್ಮಾ ತಂದೆಯು ವೃದ್ಧನಾಗಿದ್ದಾರೆ. ಆದ್ದರಿಂದ ಈ ಶರೀರವನ್ನು ಬಿಡಲೇಬೇಕೆಂದು ಹೇಳುತ್ತಾರೆ ಎಂದಲ್ಲ. ಹಾಗೆ ನೋಡಿದರೆ ತಾವೆಲ್ಲರೂ ವೃದ್ಧರಾಗಿದ್ದೀರಿ, ಎಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ, ಈಗ ಎಲ್ಲರೂ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಈ ಹಳೆಯ ಪ್ರಪಂಚದಿಂದ ಬುದ್ಧಿಯೋಗವನ್ನು ತೆಗೆಯಿರಿ, ಈಗಂತೂ ತಮ್ಮ ಮನೆಗೆ ಹೋಗಬೇಕಾಗಿದೆ. ಅಲ್ಲಿ ಎಷ್ಟು ಸಮಯ ನಿಲ್ಲಬೇಕೋ ಅಷ್ಟು ಸಮಯ ಇರುತ್ತೀರಿ. ಎಷ್ಟು ಅಂತ್ಯದಲ್ಲಿ ಪಾತ್ರವಿರುವುದೋ ಅಷ್ಟು ಕೊನೆಯಲ್ಲಿ ಶರೀರವನ್ನು ಧಾರಣೆ ಮಾಡಿ ಪಾತ್ರವನ್ನಭಿನಯಿಸುತ್ತೀರಿ. ಕೆಲವರಂತೂ 5000 ವರ್ಷಗಳಿಗೆ 100 ವರ್ಷಗಳು ಕಡಿಮೆ ಅಷ್ಟು ಸಮಯವೂ ಶಾಂತಿಧಾಮದಲ್ಲಿರುತ್ತಾರೆ, ಕೊನೆಯಲ್ಲಿ ಬರುತ್ತಾರೆ. ಹೇಗೆ ಕಾಶಿಗೆ ಹೋಗಿ ಅಲ್ಲಿ ಬಲಿಯಾಗುತ್ತಾರೆ, ಎಲ್ಲಾ ಪಾಪಗಳೂ ಬೇಗನೆ ಸಮಾಪ್ತಿಯಾಗುತ್ತವೆ. ಅಂತ್ಯದಲ್ಲಿ ಬರುವವರದು ಯಾವ ಪಾಪವಾಗುತ್ತದೆ! ಬಂದರು ಹೋದರು. ಬಾಕಿ ಯಾರಿಗೂ ಮೋಕ್ಷ ಸಿಗಲು ಸಾಧ್ಯವಿಲ್ಲ. ಅಲ್ಲಿ ಇದ್ದು ಏನು ಮಾಡುತ್ತಾರೆ! ಪಾತ್ರವನ್ನಂತೂ ಅಭಿನಯಿಸಲೇಬೇಕಲ್ಲವೆ. ನಿಮ್ಮ ಪಾತ್ರವು ಪ್ರಾರಂಭದಲ್ಲಿ ಬರುವುದಾಗಿದೆ. ಆದ್ದರಿಂದ ತಂದೆಯು ಹೇಳುತ್ತಾರೆ - ಈ ಹಳೆಯ ಪ್ರಪಂಚವನ್ನು ಮರೆಯುತ್ತಾ ಹೋಗಿ. 84 ಜನ್ಮಗಳ ಪಾತ್ರವು ಮುಕ್ತಾಯವಾಯಿತು, ಈಗಂತೂ ಮನೆಗೆ ಹೋಗಬೇಕಾಗಿದೆ ಆದರೆ ತಾವೀಗ ಪತಿತರಾಗಿ ಬಿಟ್ಟಿದ್ದೀರಿ. ಮತ್ತೆ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ, ದೈವೀ ಗುಣಗಳನ್ನು ಧಾರಣೆ ಮಾಡಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಮ್ಮನ್ನು ಪರಿಶೀಲನೆ ಮಾಡಿಕೊಳ್ಳುತ್ತಾ ಇರಿ, ನನ್ನಲ್ಲಿ ಯಾವುದೇ ಆಸುರೀ ಸ್ವಭಾವಗಳಿಲ್ಲವೇ? ನಿಮ್ಮದು ದೈವೀ ಸ್ವಭಾವವಾಗಿರಬೇಕು. ಅದಕ್ಕಾಗಿ ಚಾರ್ಟ್ ಇಡಿ ಆಗ ಪರಿಪಕ್ವವಾಗುತ್ತಾ ಹೋಗುತ್ತೀರಿ ಆದರೆ ಮಾಯೆಯು ಹೀಗಿದೆ ಅದು ಚಾರ್ಟನ್ನು ಇಡಲು ಬಿಡುವುದೇ ಇಲ್ಲ. 2-4 ದಿನ ಇಟ್ಟು ನಂತರ ಬಿಟ್ಟು ಬಿಡುತ್ತಾರೆ ಏಕೆಂದರೆ ಅದೃಷ್ಟದಲ್ಲಿಲ್ಲ. ಅದೃಷ್ಟದಲ್ಲಿದ್ದರೆ ಬಹಳ ಒಳ್ಳೆಯ ರಿಜಿಸ್ಟರನ್ನು ಇಡುತ್ತಾರೆ. ಶಾಲೆಯಲ್ಲಿ ಅವಶ್ಯವಾಗಿ ರಿಜಿಸ್ಟರ್ ಇಡುತ್ತಾರೆ, ಇಲ್ಲಿಯೂ ಸಹ ಎಲ್ಲಾ ಸೇವಾ ಕೇಂದ್ರಗಳಲ್ಲಿ ಎಲ್ಲರ ಚಾರ್ಟ್ ಮತ್ತು ರಿಜಿಸ್ಟರ್ ಇಡಬೇಕು ಮತ್ತು ನೋಡಿಕೊಳ್ಳಬೇಕು - ನಾವು ಪ್ರತಿನಿತ್ಯವೂ ಬರುತ್ತೇವೆಯೇ? ದೈವೀ ಗುಣಗಳನ್ನು ಧಾರಣೆ ಮಾಡುತ್ತೇವೆಯೇ? ಸಹೋದರ-ಸಹೋದರಿಯ ಸಂಬಂಧದಿಂದಲೂ ಮೇಲೆ ಹೋಗಬೇಕು ಅಂದರೆ ಕೇವಲ ಸಹೋದರ-ಸಹೋದರನೆಂಬ ಆತ್ಮಿಕ ದೃಷ್ಟಿಯಿರಬೇಕು. ನಾವು ಆತ್ಮರಾಗಿದ್ದೇವೆ, ಯಾರ ಕುದೃಷ್ಟಿಯೂ ಇಲ್ಲ ಸಹೋದರ-ಸಹೋದರನ ಸಂಬಂಧವೂ ಇದಕ್ಕಾಗಿಯೇ ಇದೆ. ಏಕೆಂದರೆ ನೀವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ, ಒಬ್ಬ ತಂದೆಯ ಮಕ್ಕಳಾಗಿದ್ದೀರಿ. ಈ ಸಂಗಮಯುಗದಲ್ಲಿಯೇ ಸಹೋದರ-ಸಹೋದರಿಯರ ಸಂಬಂಧದಲ್ಲಿರುತ್ತೀರಿ ಆದ್ದರಿಂದ ವಿಕಾರದ ದೃಷ್ಟಿಯು ಸಮಾಪ್ತಿಯಾಗುತ್ತದೆ. ಒಬ್ಬ ತಂದೆಯನ್ನೇ ನೆನಪು ಮಾಡಬೇಕು, ವಾಣಿಯಿಂದಲೂ ದೂರ ಹೋಗಬೇಕು. ಹೀಗೆ ತಮ್ಮೊಂದಿಗೆ ತಾವು ಮಾತನಾಡಿಕೊಳ್ಳುವುದೇ ಸೂಕ್ಷ್ಮ ಅಭ್ಯಾಸವಾಗಿದೆ. ಇದರಲ್ಲಿ ಶಬ್ಧ ಮಾಡುವ ಅವಶ್ಯಕತೆಯಿಲ್ಲ. ಕೇವಲ ಮಕ್ಕಳಿಗೆ ತಿಳಿಸುವುದಕ್ಕಾಗಿ ಶಬ್ಧದಲ್ಲಿ ಬರಬೇಕಾಗುತ್ತದೆ, ಈಗ ವಾಣಿಯಿಂದ ದೂರ ಹೋಗಲು ತಿಳಿಸಬೇಕಾಗುತ್ತದೆ. ಈಗ ಹಿಂತಿರುಗಿ ಹೋಗಬೇಕಾಗಿದೆ - ಓ ತಂದೆಯೇ ಬಂದು ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗು, ನಾವು ಪತಿತರಾಗಿದ್ದೇವೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಪತಿತ ಪ್ರಪಂಚದಲ್ಲಿ ಪಾವನರನ್ನಾಗಿ ಯಾರು ಮಾಡುವುದು! ಸಾಧು-ಸಂತ ಮುಂತಾದವರು ಮಾಡಿಸಲು ಸಾಧ್ಯವಿಲ್ಲ. ತಾವೇ ಪಾವನರಾಗುವುದಕ್ಕಾಗಿ ಗಂಗಾ ಸ್ನಾನ ಮಾಡುತ್ತಾರೆ, ತಂದೆಯನ್ನೇ ತಿಳಿದಿಲ್ಲ. ಯಾರು ಕಲ್ಪದ ಹಿಂದೆ ತಿಳಿದಿದ್ದಿರೋ ಅವರೇ ಈಗ ಪುರುಷಾರ್ಥ ಮಾಡುತ್ತಿದ್ದಾರೆ. ಈ ಪುರುಷಾರ್ಥವನ್ನೂ ಸಹ ತಂದೆಯ ವಿನಃ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ತಂದೆಯೇ ಎಲ್ಲರಿಗಿಂತ ಶ್ರೇಷ್ಠರಾಗಿದ್ದಾರೆ, ಇಂತಹ ತಂದೆಯನ್ನು ಕಲ್ಲು-ಮಣ್ಣಿನಲ್ಲಿ ಇದ್ದಾರೆಂದು ಹೇಳಿದರಿಂದ ಮನುಷ್ಯರ ಸ್ಥಿತಿಯೇನಾಗಿದೆ! ಏಣಿಯನ್ನು ಇಳಿಯುತ್ತಲೇ ಬಂದಿದ್ದಾರೆ. ಆ ಸಂಪೂರ್ಣ ನಿರ್ವಿಕಾರಿಗಳೆಲ್ಲಿ, ಸಂಪೂರ್ಣ ವಿಕಾರಿಗಳೆಲ್ಲಿ! ಈ ಮಾತುಗಳನ್ನು ಯಾರು ಕಲ್ಪದ ಹಿಂದೆ ಒಪ್ಪಿದ್ದರೋ ಅವರೇ ಒಪ್ಪುತ್ತಾರೆ. ಯಾರೇ ಬರಲಿ ಅವರಿಗೆ ತಂದೆಯ ಆದೇಶವನ್ನು ತಿಳಿಸುವುದು ನಿಮ್ಮ ಕರ್ತವ್ಯವಾಗಿದೆ. ಈಗ ಎಲ್ಲರಿಗೆ ತಿಳಿಸಿ - ಎಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ, ಎಲ್ಲರೂ ಶಾಂತಿಧಾಮ-ಸುಖಧಾಮದಲ್ಲಿ ಹೋಗುತ್ತಾರೆ. ಯಾರು ಆತ್ಮವನ್ನು ಬುದ್ಧಿಯೋಗ ಬಲದಿಂದ ಸಂಪೂರ್ಣ ಪವಿತ್ರ ಮಾಡಿಕೊಳ್ಳುತ್ತಾರೆಯೋ ಅವರೇ ಸುಖಧಾಮದಲ್ಲಿ ಹೋಗುತ್ತಾರೆ. ಭಾರತದ ಪ್ರಾಚೀನ ಯೋಗವೂ ಗಾಯನವಿದೆ. ಆತ್ಮಕ್ಕೆ ಈಗ ಅವಶ್ಯವಾಗಿ ನಾವು ಮೊಟ್ಟ ಮೊದಲು ಬಂದಿದ್ದೇವೆ, ನಾವು ಹಿಂತಿರುಗಿ ಹೋಗಬೇಕಾಗಿದೆ ಎಂದು ಸ್ಮೃತಿಯು ಬರುತ್ತದೆ. ನಿಮಗೆ ತಮ್ಮ ಪಾತ್ರವು ನೆನಪಿಗೆ ಬರುತ್ತದೆ. ಯಾರು ಈ ಕುಲದಲ್ಲಿ ಬರುವವರಲ್ಲವೋ ಅವರಿಗೆ ನಾವು ಪವಿತ್ರರಾಗಬೇಕೆಂಬ ನೆನಪೂ ಸಹ ಬರುವುದಿಲ್ಲ. ಪವಿತ್ರರಾಗುವುದರಲ್ಲಿಯೇ ಪರಿಶ್ರಮ ಪಡಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ ಅದರಿಂದ ವಿಕರ್ಮಾಜೀತರಾಗುತ್ತೀರಿ ಮತ್ತು ಸಹೋದರ-ಸಹೋದರ ಎಂದು ತಿಳಿಯಿರಿ ಆಗ ದೃಷ್ಟಿಯು ಬದಲಾವಣೆಯಾಗುವುದು. ಸತ್ಯಯುಗದಲ್ಲಿ ಕೆಟ್ಟ ದೃಷ್ಟಿಯಿರುವುದಿಲ್ಲ. ತಂದೆಯು ಯಾವಾಗಲೂ ತಿಳಿಸುತ್ತಿರುತ್ತಾರೆ - ಮಕ್ಕಳೇ, ತಮ್ಮೊಂದಿಗೆ ಕೇಳಿಕೊಳ್ಳಿ - ನಾನು ಸತ್ಯಯುಗೀ ದೇವತೆಯಾಗಿದ್ದೇನೆಯೇ? ನೀವು ಮಕ್ಕಳು ಬಹಳ ಒಳ್ಳೊಳ್ಳೆಯ ಚಿತ್ರ, ಸ್ಲೋಗನ್ ಮುಂತಾದವುಗಳನ್ನು ರಚಿಸಬೇಕು. ಒಬ್ಬರು ಕೇಳಲಿ - ಸತ್ಯಯುಗಿಯಾಗಿದ್ದೀರಾ ಅಥವಾ ಕಲಿಯುಗಿಯೋ? ಅದಕ್ಕೆ ಇನ್ನೊಬ್ಬರು ಇನ್ನೊಂದು ಪ್ರಶ್ನೆಯನ್ನು ಕೇಳಲಿ, ಹೀಗೆ ಘರ್ಜನೆ ಮಾಡಿ ತಂದೆಯ ಸಂದೇಶವನ್ನು ಕೊಡಬೇಕು. ತಂದೆಯಂತೂ ಪತಿತರನ್ನು ಪಾವನ ಮಾಡುವ ಶ್ರೀಮತ ಕೊಡುತ್ತಾರೆ. ಉಳಿದ ವ್ಯಾಪಾರ-ವ್ಯವಹಾರಗಳಿಂದ ನಮಗೇನು ತಿಳಿಯುತ್ತದೆ? ತಂದೆಯು ಬಂದು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಮಾರ್ಗವನ್ನು ತಿಳಿಸಿ ಎಂದೇ ಕರೆಯುತ್ತಾರೆ. ಆದ್ದರಿಂದ ನಾನು ಬಂದು ಆ ಮಾರ್ಗವನ್ನು ತಿಳಿಸುತ್ತೇನೆ. ಇದೆಷ್ಟು ಸಹಜ ಮಾತಾಗಿದೆ. ಈ ಸೂಚನೆಯೇ ಬಹಳ ಸಹಜವಾಗಿದೆ - ಮನ್ಮನಾಭವ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಅರ್ಥವನ್ನು ತಿಳಿಯದೇ ಇರುವ ಕಾರಣ ಗಂಗೆಯನ್ನೇ ಪತಿತ-ಪಾವನಿ ಎಂದು ತಿಳಿಯುತ್ತಾರೆ. ಪತಿತ-ಪಾವನ ತಂದೆಯಾಗಿದ್ದಾರೆ. ಎಲ್ಲರದೂ ಅಂತಿಮ ಸಮಯವಾಗಿದೆ, ಲೆಕ್ಕಾಚಾರವನ್ನು ಸಮಾಪ್ತಿ ಮಾಡಿಸಿ ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ತಂದೆಯು ತಿಳಿಸಿದಾಗ ತಿಳಿದುಕೊಳ್ಳುತ್ತಾರೆ ಆದರೆ ಅದೃಷ್ಟದಲ್ಲಿಲ್ಲವೆಂದರೆ ಮತ್ತೆ ಬೀಳುತ್ತಾರೆ ಆದ್ದರಿಂದ ತಂದೆಯು ಹೇಳುತ್ತಾರೆ - ಮಕ್ಕಳೇ, ಸಹೋದರ-ಸಹೋದರಿಯೆಂದು ತಿಳಿಯಿರಿ. ಎಂದೂ ಕುದೃಷ್ಟಿಯು ಹೋಗದಿರಲಿ. ಕೆಲವರಿಗೆ ಕಾಮದ ಭೂತ, ಲೋಭದ ಭೂತವೂ ಬಂದು ಬಿಡುತ್ತದೆ. ಒಳ್ಳೆಯ ಭೋಜನವನ್ನು ಮಾಡಿದರೆ ಆಸಕ್ತಿಯು ಬಂದು ಬಿಡುತ್ತದೆ. ಒಳ್ಳೆಯ ಪದಾರ್ಥಗಳನ್ನು (ಕಡಲೆಯ ಪದಾರ್ಥ) ನೋಡಿದರೆ ತಿನ್ನಲು ಮನಸ್ಸಾಗುತ್ತದೆ. ತಿಂದು ಬಿಟ್ಟರೆ ಅವರು ಕಚ್ಚಾ ಆಗಿರುವ ಕಾರಣ ಬೇಗನೆ ಅದರ ಪ್ರಭಾವ ಬೀರುತ್ತದೆ, ಬುದ್ಧಿಯು ಭ್ರಷ್ಟವಾಗಿ ಬಿಡುತ್ತದೆ. ತಂದೆ-ತಾಯಿ, ಅನನ್ಯ ಮಕ್ಕಳು ಯಾರಿಗೆ ಸರ್ಟಿಫಿಕೇಟನ್ನು ಕೊಡುತ್ತಾರೆಯೋ ಅವರನ್ನು ಅನುಸರಿಸಬೇಕು. ಯಜ್ಞದಿಂದ ಏನು ಸಿಗುತ್ತದೆಯೋ ಅದನ್ನೇ ಒಳ್ಳೆಯದೆಂದು ತಿಳಿದು ಸೇವಿಸಬೇಕು. ನಾಲಿಗೆಯ ಲೋಭಕ್ಕೆ ಒಳಗಾಗಬಾರದು, ಇದಕ್ಕಾಗಿ ಯೋಗವು ಬೇಕು. ಯೋಗವಿಲ್ಲದಿದ್ದರೆ ಇಂತಹ ಪದಾರ್ಥವನ್ನು ತಿನ್ನಬೇಕೆಂದು ಹೇಳುತ್ತಾರೆ ಇಲ್ಲದಿದ್ದರೆ ರೋಗಿಗಳಾಗಿ ಬಿಡುತ್ತಾರೆ ಅಂದಾಗ ಇದು ಬುದ್ಧಿಯಲ್ಲಿರಬೇಕು - ನಾವು ದೇವತೆಗಳಾಗಲು ಬಂದಿದ್ದೇವೆ. ಈಗ ನಾವು ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಇಲ್ಲವೆಂದರೆ ಮಗುವಾಗಿ ತಾಯಿಯ ಮಡಿಲಲ್ಲಿ ಬರುತ್ತೀರಿ. ತಾಯಿಯ ಆಹಾರ ಪದಾರ್ಥಗಳ ಪೋಷಣೆಯಿಂದ ಅವರ ಪ್ರಭಾವ ಮಕ್ಕಳ ಮೇಲೂ ಬೀಳುತ್ತದೆ ಆದರೆ ಸತ್ಯಯುಗದಲ್ಲಿ ಈ ಮಾತುಗಳೇನೂ ಇರುವುದಿಲ್ಲ. ಅಲ್ಲಿ ಎಲ್ಲವೂ ಬಹಳ ಚೆನ್ನಾಗಿರುತ್ತದೆ. ನಮಗಾಗಿ ಅಲ್ಲಿ ತಾಯಿಯು ಯಾವ ಆಹಾರ ಪದಾರ್ಥಗಳನ್ನೇ ಸೇವಿಸುತ್ತಾರೆ ಅದೇ ನಮ್ಮ ಹೊಟ್ಟೆಯಲ್ಲಿ ಬರುತ್ತದೆ. ಸತ್ಯಯುಗದಲ್ಲಂತೂ ಎಲ್ಲವೂ ಪರಿಶುದ್ಧವಾಗಿರುತ್ತದೆ, ಜನ್ಮ ಪಡೆದಾಗಿನಿಂದಲೂ ಆಹಾರ ಪದಾರ್ಥಗಳೆಲ್ಲವೂ ಶುದ್ಧವಾಗಿರುತ್ತದೆ ಅಂದಮೇಲೆ ಇಂತಹ ಸ್ವರ್ಗದಲ್ಲಿ ಹೋಗಲು ತಯಾರಿ ಮಾಡಿಕೊಳ್ಳಬೇಕು, ತಂದೆಯನ್ನು ನೆನಪು ಮಾಡಬೇಕು. ತಂದೆಯು ಬಂದು ಪುನಃ ಯವೌನ ತುಂಬುತ್ತಿದ್ದಾರೆ. ಮನುಷ್ಯರು ಕೋತಿಯ ಅಂಗಾಂಗಗಳನ್ನು ಹಾಕುತ್ತಾರೆ ಅದರಿಂದ ನಾವು ಯುವಕರಾಗಿ ಬಿಡುತ್ತೇವೆಂದು ತಿಳಿಯುತ್ತಾರೆ. ಹೇಗೆ ಕೆಲವರಿಗೆ ಹೊಸ ಹೃದಯವನ್ನು ಹಾಕುತ್ತಾರೆ ಆದರೆ ತಂದೆಯು ಯಾವುದೇ ಹೃದಯವನ್ನು ಜೋಡಿಸುವುದಿಲ್ಲ ಆದರೆ ಬಂದು ಪರಿವರ್ತನೆ ಮಾಡುತ್ತಾರೆ ಬಾಕಿ ಇದೆಲ್ಲವೂ ವಿಜ್ಞಾನವಾಗಿದೆ. ಅಣು ಬಾಂಬು ಮುಂತಾದವನ್ನು ತಯಾರು ಮಾಡುತ್ತಾರೆ. ಇವೆಲ್ಲವೂ ಪ್ರಪಂಚವನ್ನೇ ಸಮಾಪ್ತಿ ಮಾಡುವ ವಸ್ತುಗಳಾಗಿವೆ, ಇವೆಲ್ಲವೂ ತಮೋಪ್ರಧಾನ ಬುದ್ಧಿಯಾಗಿದೆಯಲ್ಲವೆ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ನಾಟಕದ ಪೂರ್ವ ನಿಶ್ಚಿತವೆಂದು ತಿಳಿದು ಅವರು ಖುಷಿಯಾಗುತ್ತಾರೆ. ಈ ಅಣುಬಾಂಬುಗಳು ತಯಾರಾಗಲೇಬೇಕು. ಶಾಸ್ತ್ರಗಳಲ್ಲಿ ಹೊಟ್ಟೆಯಿಂದ ಒನಕೆ ಬಂದಿತೆಂದು ಬರೆದಿದ್ದಾರೆ, ಇವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ ಎಂದು ತಂದೆಯು ತಿಳಿಸುತ್ತಾರೆ. ರಾಜಯೋಗವನ್ನು ನಾನೇ ಕಲಿಸಿದ್ದೆನು ಅದೆಲ್ಲವೂ ಒಂದು ಕಥೆಯಾಗಿ ಬಿಟ್ಟಿದೆ ಅದನ್ನು ಕೇಳುತ್ತಾ-ಕೇಳುತ್ತಾ ಮನುಷ್ಯರ ಸ್ಥಿತಿಯು ಹೀಗಾಗಿದೆ. ಈಗ ತಂದೆಯು ಸತ್ಯ ನಾರಾಯಣನ ಕಥೆ, ಮೂರನೆಯ ನೇತ್ರದ ಕಥೆ, ಅಮರನಾಥನ ಕಥೆಯನ್ನು ತಿಳಿಸುತ್ತಿದ್ದಾರೆ. ಈ ವಿದ್ಯೆಯಿಂದ ನೀವು ಅಂತಹ ಪದವಿಯನ್ನು ಪಡೆಯುತ್ತೀರಿ ಬಾಕಿ ಸ್ವದರ್ಶನ ಚಕ್ರದಿಂದ ಎಲ್ಲರನ್ನೂ ಸಾಯಿಸಲು ಕೃಷ್ಣ ಮೊದಲಾದವರ ಮಾತಿಲ್ಲ. ನಾನಂತೂ ಕೇವಲ ರಾಜಯೋಗವನ್ನು ಕಲಿಸಿ ಪಾವನರನ್ನಾಗಿ ಮಾಡುತ್ತೇನೆ. ನಾನು ನಿಮ್ಮನ್ನು ಸ್ವದರ್ಶನ ಚಕ್ರಧಾರಿಯನ್ನಾಗಿ ಮಾಡುತ್ತೇನೆ. ಇದನ್ನು ಅವರು ಕೃಷ್ಣನಿಗೆ ಚಕ್ರ ಮೊದಲಾದವುಗಳನ್ನು ತೋರಿಸಿದ್ದಾರೆ. ಸ್ವದರ್ಶನ ಚಕ್ರವನ್ನು ತಿರುಗಿಸುವುದಾದರೂ ಹೇಗೆ? ಇದು ಚಮತ್ಕಾರದ ಮಾತೇನು! ಇದೆಲ್ಲವೂ ನಿಂದನೆಯಾಗಿದೆ ಅದು ಅರ್ಧಕಲ್ಪ ನಡೆಯುತ್ತದೆ. ಇದೆಂತಹ ವಿಚಿತ್ರ ನಾಟಕವಾಗಿದೆ. ಈಗ ಚಿಕ್ಕವರು, ದೊಡ್ಡವರದು ಎಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ. ಈಗ ಹಿಂತಿರುಗಿ ಹೋಗಬೇಕು ಅಂದಾಗ ಏನೂ ನೆನಪಿಗೆ ಬರಬಾರದು ಆದ್ದರಿಂದ ತಂದೆಯನ್ನು ನೆನಪು ಮಾಡಬೇಕು ಮತ್ತೇನೂ ನೆನಪಿಗೆ ಬರಬಾರದು. ಸ್ಥಿತಿಯು ಈ ರೀತಿಯಿರಬೇಕು ಆಗ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯ. ಈಗ ತಮ್ಮ ಹೃದಯವನ್ನು ಕೇಳಿಕೊಳ್ಳಿ- ನಿಮ್ಮ ರಿಜಿಸ್ಟರ್ ಎಲ್ಲಿಯವರೆಗೆ ಸರಿಯಾಗಿದೆ? ರಿಜಿಸ್ಟರ್ ನಿಂದ ನಾವು ನಿಯಮಿತವಾಗಿ ಓದುತ್ತೇವೆಯೇ ಅಥವಾ ಇಲ್ಲವೆ ಎಂದು ತಮ್ಮ ನಡುವಳಿಕೆಯ ಬಗ್ಗೆ ತಿಳಿಯುತ್ತದೆ. ಕೆಲವರಂತೂ ಸುಳ್ಳನ್ನೂ ಹೇಳಿ ಬಿಡುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಸತ್ಯವನ್ನು ತಿಳಿಸಿ, ತಿಳಿಸದಿದ್ದರೆ ನಿಮ್ಮ ರಿಜಿಸ್ಟರ್ ಹಾಳಾಗುವುದು. ಭಗವಂತನೊಂದಿಗೆ ಪವಿತ್ರರಾಗುವ ಪ್ರತಿಜ್ಞೆ ಮಾಡಿ ಮತ್ತೆ ಅದನ್ನು ಮುರಿಯುತ್ತೀರೆಂದರೆ ನಿಮ್ಮ ಗತಿಯೇನಾಗುವುದು! ವಿಕಾರದಲ್ಲಿ ಬಿದ್ದರೆ ಆಟವೇ ಸಮಾಪ್ತಿಯಾದಂತೆ. ಮೊದಲ ನಂಬರಿನ ಶತ್ರು ದೇಹಾಭಿಮಾನವಾಗಿದೆ, ನಂತರ ಕಾಮ-ಕ್ರೋಧ. ದೇಹಾಭಿಮಾನದಲ್ಲಿ ಬರುವುದರಿಂದಲೇ ವೃತ್ತಿಯು ಕೆಟ್ಟು ಹೋಗುತ್ತದೆ ಅಂದರೆ ಹಾಳಾಗುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಆತ್ಮಾಭಿಮಾನಿಭವ. ಅರ್ಜುನನೂ ಸಹ ಇವರಾಗಿದ್ದಾರಲ್ಲವೆ (ಬ್ರಹ್ಮಾ), ಕೃಷ್ಣನದೇ ಆತ್ಮವಾಗಿತ್ತು. ಆದರೆ ಅರ್ಜುನ ಎನ್ನುವ ಹೆಸರಿಲ್ಲ. ಹೆಸರು ಬದಲಾಗುತ್ತದೆ. ಇವರಲ್ಲಿಯೇ ತಂದೆಯು ಪ್ರವೇಶ ಮಾಡುತ್ತಾರೆ. ಈ ಕಲ್ಪ ವೃಕ್ಷ ಮೊದಲಾದವುಗಳೆಲ್ಲವೂ ಕಲ್ಪನೆಯೆಂದು ಮನುಷ್ಯರು ಹೇಳಿ ಬಿಡುತ್ತಾರೆ. ಮನುಷ್ಯರು ಏನನ್ನು ಕಲ್ಪಸಿಕೊಳ್ಳುತ್ತಾರೆಯೋ ಅದು ಕಾಣಿಸುತ್ತದೆ. ಈಗ ನಾವು ಹೋಗಿ ಸ್ವರ್ಗದಲ್ಲಿ ಚಿಕ್ಕ ಮಗುವಾಗುತ್ತೇವೆ ಎಂದು ತಾವು ಮಕ್ಕಳಿಗೆ ಬಹಳ ಖುಷಿಯಿರಬೇಕು. ಏಕೆಂದರೆ ಮತ್ತೆ ನಾಮ, ರೂಪ, ದೇಶ, ಕಾಲ ಎಲ್ಲವೂ ಹೊಸದಾಗುವುದು. ಇದು ಬೇಹದ್ದಿನ ನಾಟಕವಾಗಿದೆ. ಮಾಡಿ-ಮಾಡಲ್ಪಟ್ಟ ನಾಟಕವೇ ನಡೆಯುತ್ತಿದೆ. ಇದೆಲ್ಲವೂ ಆಗಲೇಬೇಕೆಂದಾಗ ತಾವು ಚಿಂತೆಯನ್ನೇಕೆ ಮಾಡಬೇಕು? ಡ್ರಾಮಾದ ರಹಸ್ಯವೂ ಸಹ ಈಗ ತಾವು ಮಕ್ಕಳ ಬುದ್ಧಿಯಲ್ಲಿದೆ. ಇದನ್ನು ತಾವು ಬ್ರಾಹ್ಮಣರ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ಪ್ರಪಂಚದಲ್ಲಿ ಈಗ ಈ ಸಮಯದಲ್ಲಿ ಎಲ್ಲರೂ ಪೂಜಾರಿಗಳಾಗಿದ್ದಾರೆ. ಎಲ್ಲಿ ಪೂಜಾರಿಗಳಿರುತ್ತಾರೆಯೋ ಅಲ್ಲಿ ಒಬ್ಬರೂ ಪೂಜ್ಯರಿರಲು ಸಾಧ್ಯವಿಲ್ಲ. ಪೂಜ್ಯರಿರುವುದೇ ಸತ್ಯ-ತ್ರೇತಾಯುಗದಲ್ಲಿ, ಕಲಿಯುಗದಲ್ಲಿ ಪೂಜಾರಿಗಳಿದ್ದಾರೆ ಅಂದಮೇಲೆ ನೀವು ತಮ್ಮನ್ನು ಪೂಜ್ಯರೆಂದು ಹೇಗೆ ಕರೆಸಿಕೊಳ್ಳುತ್ತೀರಿ? ಪೂಜ್ಯರು ದೇವಿ-ದೇವತೆಗಳೇ ಆಗಿದ್ದಾರೆ, ಮನುಷ್ಯರು ಪೂಜಾರಿಗಳಾಗಿದ್ದಾರೆ. ಮೂಲ ಮಾತನ್ನು ತಂದೆಯು ತಿಳಿಸುತ್ತಾರೆ - ಮಕ್ಕಳೇ, ಪಾವನರಾಗಬೇಕೆಂದರೆ ನನ್ನೊಬ್ಬನನ್ನೇ ನೆನಪು ಮಾಡಿ. ನಾಟಕದನುಸಾರ ಯಾರೆಷ್ಟು ಪುರುಷಾರ್ಥ ಮಾಡಿರುತ್ತಾರೆಯೋ ಅಷ್ಟನ್ನೇ ಮಾಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
೧. ತಮ್ಮ ವಿದ್ಯಾಭ್ಯಾಸದ ರಿಜಿಸ್ಟರನ್ನು ಇಡಬೇಕು. ತಮ್ಮ ಚಾರ್ಟನ್ನು ನೋಡಿಕೊಳ್ಳಬೇಕು - ನಮಗೆ ಸಹೋದರ-ಸಹೋದರನ ದೃಷ್ಟಿಯು ಎಲ್ಲಿಯವರೆಗೆ ಇದೆ. ನಮ್ಮದು ದೈವೀ ಸ್ವಭಾವವಾಗಿದೆಯೇ?

೨. ತಮ್ಮ ನಾಲಿಗೆಯ ಮೇಲೆ ಬಹಳ ನಿಯಂತ್ರಣವನ್ನಿಟ್ಟುಕೊಳ್ಳಬೇಕು. ಬುದ್ಧಿಯಲ್ಲಿರಲಿ - ನಾವು ದೇವತೆಗಳಾಗುತ್ತಿದ್ದೇವೆ. ಆದ್ದರಿಂದ ಆಹಾರ-ಪದಾರ್ಥಗಳ ಮೇಲೆ ಬಹಳ ಗಮನವಿಡಬೇಕು. ನಾಲಿಗೆಯು ಲೋಭಕ್ಕೆ ವಶವಾಗಬಾರದು. ತಂದೆ-ತಾಯಿಯನ್ನು ಅನುಸರಿಸಬೇಕಾಗಿದೆ.

ವರದಾನ:
ಪ್ರತಿ ಘಳಿಗೆಯನ್ನು ಅಂತಿಮ ಘಳಿಗೆ ಎಂದು ತಿಳಿದು ಸದಾ ಎವರೆಡಿಯಾಗಿರುವಂತಹ ತೀವ್ರ ಪುರುಷಾರ್ಥಿ ಭವ.

ನಿಮ್ಮ ಅಂತಿಮ ಘಳಿಗೆಯ ಮೇಲೆ ಯಾವುದೇ ಭರವಸೆ ಇಲ್ಲ, ಆದ್ದರಿಂದ ಪ್ರತೀ ಘಳಿಗೆಯನ್ನು ಅಂತಿಮ ಘಳಿಗೆ ಎಂದು ತಿಳಿಯುತ್ತಾ ಎವರೆಡಿಯಾಗಿರಿ. ಎವರೆಡಿ ಅರ್ಥಾತ್ ತೀವ್ರ ಪುರುಷಾರ್ಥಿ. ಹೀಗೆ ಯೋಚಿಸಬೇಡಿ ಇನ್ನೂ ವಿನಾಶ ಆಗುವಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳುವುದು ಆ ನಂತರ ತಯಾರಾಗಿ ಬಿಡೋಣ. ಇಲ್ಲಾ, ಪ್ರತಿ ಘಳಿಗೆ ಅಂತಿಮ ಘಳಿಗೆಯಾಗಿದೆ. ಆದ್ದರಿಂದ ಸದಾ ನಿರ್ಮೋಹಿ, ನಿರ್ವಿಕಲ್ಪ, ನಿರ್-ವ್ಯರ್ಥ.... ವ್ಯರ್ಥ ಸಹಾ ಇಲ್ಲಾ, ಆಗ ಹೇಳಲಾಗುವುದು ಎವರೆಡಿ. ಯಾವುದಾದರೂ ಕಾರ್ಯ ಬಿಟ್ಟು ಹೋಗಿರಲಿ ಆದರೆ ನಿಮ್ಮ ಸ್ಥಿತಿ ಸದಾ ಉಪರಾಮವಾಗಿರಲಿ, ಏನಾಗುವುದು ಅದು ಒಳ್ಳಯದೇ ಆಗುವುದು.

ಸ್ಲೋಗನ್:
ನಿಮ್ಮ ಕೈಯಲ್ಲಿ ಕಾನೂನನ್ನು ತೆಗೆದುಕೊಳ್ಳುವುದೂ ಸಹಾ ಕ್ರೋಧದ ಅಂಶವಾಗಿದೆ.