08.02.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ ಈ ಆತ್ಮೀಯ ಆಸ್ಪತ್ರೆ ನಿಮಗೆ ಅರ್ಧಕಲ್ಪಕ್ಕಾಗಿ ಸದಾ ಆರೋಗ್ಯ ಕೊಡುವಂತಹದಾಗಿದೆ, ಇಲ್ಲಿ ನೀವು ದೇಹೀ-ಅಭಿಮಾನಿಯಾಗಿ ಕುಳಿತುಕೊಳ್ಳಿ

ಪ್ರಶ್ನೆ:
ವ್ಯಾಪಾರ-ವ್ಯವಹಾರ ಮಾಡುತ್ತಿದ್ದರೂ ಸಹ ಯಾವ ಆದೇಶವನ್ನು ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳಬೇಕು?

ಉತ್ತರ:
ತಂದೆಯ ಆದೇಶವಾಗಿದೆ ನೀವು ಯಾವುದೇ ಸಾಕಾರ ಅಥವಾ ಆಕಾರವನ್ನು ನೆನಪು ಮಾಡಬೇಡಿ, ಒಬ್ಬ ತಂದೆಯ ನೆನಪು ಇದ್ದಾಗ ವಿಕರ್ಮ ವಿನಾಶವಾಗುವುದು. ಇದರಲ್ಲಿ ಯಾರೂ ಹೀಗೆ ಹೇಳುವಂತಿಲ್ಲ ನನಗೆ ಬಿಡುವಿಲ್ಲ ಎಂದು. ಎಲ್ಲವನ್ನೂ ಮಾಡುತ್ತಿದ್ದರೂ ಸಹಾ ನೆನಪಿನಲ್ಲಿರಬಹುದು.

ಓಂ ಶಾಂತಿ.
ಮಧುರಾತಿ ಮಧುರ ಆತ್ಮೀಯ ಮಕ್ಕಳ ಪ್ರತಿ ತಂದೆ ಗುಡ್ಮಾರ್ನಿಂಗ್. ಗುಡ್ಮಾರ್ನಿಂಗ್ ನಂತರ ಮಕ್ಕಳಿಗೆ ಹೇಳಲಾಗುವುದು ತಂದೆಯನ್ನು ನೆನಪು ಮಾಡಿ. ಪತಿತ ಪಾವನ ಬಂದು ಪಾವನ ಮಾಡಿ ಎಂದು ಕರೆಯುವಿರಿ, ಆಗ ತಂದೆ ಮೊದಲು-ಮೊದಲು ಹೇಳುತ್ತಾರೆ - ಆತ್ಮೀಯ ತಂದೆಯನ್ನು ನೆನಪು ಮಾಡಿ. ಆತ್ಮೀಯ ತಂದೆ ಎಲ್ಲರಿಗೂ ಒಬ್ಬರೇ ಆಗಿದ್ದಾರೆ. ತಂದೆಯನ್ನು ಎಂದೂ ಸರ್ವವ್ಯಾಪಿ ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ಆದ್ದರಿಂದ ಎಷ್ಟು ಸಾಧ್ಯವೊ ಅಷ್ಟು ಮಕ್ಕಳು ಮೊದಲು-ಮೊದಲು ತಂದೆಯನ್ನು ನೆನಪು ಮಾಡಿ, ಒಬ್ಬ ತಂದೆಯನ್ನಲ್ಲದೆ, ಯಾವುದೇ ಸಾಕಾರ ಹಾಗೂ ಆಕಾರನನ್ನು ನೆನಪು ಮಾಡಬೇಡಿ, ಇದಂತೂ ಪೂರ್ತಿ ಸಹಜ ಅಲ್ಲವೇ. ಮನುಷ್ಯರು ಹೇಳುತ್ತಾರೆ ನಾವು ಬಿಝಿಯಾಗಿರುತ್ತೇವೆ, ಬಿಡುವಿಲ್ಲ ಎಂದು. ಆದರೆ ಇದರಲ್ಲಂತೂ ಸದಾ ಬಿಡುವಿರುತ್ತೆ. ತಂದೆ ಯುಕ್ತಿ ತಿಳಿಸುತ್ತಾರೆ ಇದನ್ನೂ ತಿಳಿದಿರುವಿರಿ ತಂದೆಯನ್ನು ನೆನಪು ಮಾಡುವುದರಿಂದಲೇ ನಮ್ಮ ಪಾಪ ಭಸ್ಮ ಆಗುವುದು. ಮುಖ್ಯ ಮಾತು ಇರುವುದು ಇಲ್ಲೇ, ವ್ಯಾಪಾರ-ವ್ಯವಹಾರ ಮಾಡಲು ಯಾವುದೇ ಅಭ್ಯಂತರವಿಲ್ಲ. ಅದನ್ನೆಲ್ಲಾ ಮಾಡುತ್ತಾ ಕೇವಲ ತಂದೆಯನ್ನು ನೆನಪು ಮಾಡಿದ್ದೇ ಆದರೆ ವಿಕರ್ಮ ವಿನಾಶವಾಗುವುದು. ಇವರು ತಿಳಿಯುತ್ತಾರೆ ನಾವು ಪತಿತರಾಗಿದ್ದೇವೆ, ಸಾಧು-ಸಂತ-ಋಷಿ-ಮುನಿ ಇತ್ಯಾದಿ ಎಲ್ಲರೂ ಸಾಧನೆ ಮಾಡುತ್ತಾರೆ. ಸಾಧನೆ ಮಾಡಲಾಗುತ್ತೆ ಭಗವಂತನನ್ನು ಮಿಲನಮಾಡಲು. ಅವರನ್ನು ಎಲ್ಲಿಯವರೆಗೆ ಅವರ ಪರಿಚಯವಿರಲ್ಲ ಅಲ್ಲಿಯವರೆಗೆ ಅವರನ್ನು ಮಿಲನ ಮಾಡಲು ಸಾಧ್ಯವಿಲ್ಲ. ನೀವು ಅರಿತಿರುವಿರಿ ತಂದೆಯ ಪರಿಚಯ ಈ ಪ್ರಪಂಚದಲ್ಲಿ ಯಾರಿಗೂ ಇಲ್ಲ. ದೇಹದ ಪರಿಚಯವಂತೂ ಎಲ್ಲರಿಗೂ ಇದೆ. ದೊಡ್ಡ ವಸ್ತುವಿನ ಪರಿಚಯ ತಕ್ಷಣ ಆಗಿಬಿಡುತ್ತೆ. ಆತ್ಮದ ಪರಿಚಯವಂತೂ ಯಾವಾಗ ತಂದೆ ಬರುತ್ತಾರೆ ಆಗ ತಿಳಿಸುತ್ತಾರೆ. ಆತ್ಮ ಮತ್ತು ಶರೀರ ಎರಡು ಬೇರೆ ಬೇರೆ ವಸ್ತುವಾಗಿದೆ. ಆತ್ಮ ಒಂದು ನಕ್ಷತ್ರವಾಗಿದೆ ಮತ್ತು ಬಹಳ ಸೂಕ್ಷ್ಮವಾಗಿದೆ. ಅದನ್ನು ಯಾರೂ ನೋಡಲು ಸಾಧ್ಯವಿಲ್ಲ. ಆದ್ದರಿಂದ ಯಾವಾಗ ಇಲ್ಲಿ ಬಂದು ಕುಳಿತುಕೊಳ್ಳುವಿರಿ ಆಗ ದೇಹೀ-ಅಭಿಮಾನಿಯಾಗಿ ಕುಳಿತುಕೊಳ್ಳಬೇಕು. ಇದೂ ಸಹ ಒಂದು ಆಸ್ಪತ್ರೆಯಾಗಿದೆಯಲ್ಲವೆ - ಅರ್ಧಕಲ್ಪಕ್ಕಾಗಿ ಸದಾ ಆರೋಗ್ಯಶಾಲಿಗಳಾಗಲು. ಆತ್ಮವಂತೂ ಅವಿನಾಶಿಯಾಗಿದೆ, ಎಂದೂ ವಿನಾಶವಾಗುವುದಿಲ್ಲ. ಇಡೀ ಪಾತ್ರ ಆತ್ಮದ್ದೇ ಆಗಿದೆ. ಆತ್ಮ ಹೇಳುತ್ತೆ ನಾನು ಎಂದೂ ವಿನಾಶ ಹೊಂದುವುದಿಲ್ಲ, ಇಷ್ಟೆಲ್ಲಾ ಆತ್ಮಗಳು ಅವಿನಾಶಿಯಾಗಿದೆ. ಶರೀರ ವಿನಾಶಿಯಾಗಿದೆ. ಈಗ ನಿಮ್ಮ ಬುದ್ಧಿಯಲ್ಲಿ ನಾನು ಆತ್ಮ ಅವಿನಾಶಿಯಾಗಿದ್ದೇನೆ ಎನ್ನುವುದು ಕುಳಿತಿದೆ. ನಾವು 84 ಜನ್ಮ ಪಡೆಯುತ್ತೇವೆ, ಇದು ಡ್ರಾಮ ಆಗಿದೆ. ಇದರಲ್ಲಿ ಧರ್ಮ ಸ್ಥಾಪಕರು ಯಾರು-ಯಾರು, ಯಾವಾಗ ಬರುತ್ತಾರೆ, ಎಷ್ಟು ಜನ್ಮ ಪಡೆಯುತ್ತಾರೆ ಎಂದು ಇದನ್ನು ತಿಳಿದಿರುವಿರಿ. 84 ಜನ್ಮಗಳು ಎಂದು ಏನು ಗಾಯನವಿದೆ ಖಂಡಿತವಾಗಿಯೂ ಯಾವುದೋ ಒಂದು ಧರ್ಮದ್ದಾಗಿರಬೇಕು. ಎಲ್ಲರದೂ ಆಗಲು ಸಾಧ್ಯವಿಲ್ಲ. ಎಲ್ಲಾ ಧರ್ಮವೂ ಒಟ್ಟಿಗೆ ಬರುವುದಿಲ್ಲ. ನಾವು ಬೇರೆಯವರ ಲೆಕ್ಕ ಏಕೆ ಕುಳೀತು ಮಾಡಬೇಕು? ಇಂತಿಂತಹ ಸಮಯದಲ್ಲಿ ಇಂತಹವರು ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ ಎಂದು ತಿಳಿದಿರುವಿರಿ. ನಂತರ ಅವರದ್ದು ವೃದ್ಧಿಯಾಗುವುದು. ಎಲ್ಲವೂ ಸತೋ ಪ್ರಧಾನದಿಂದ ತಮೋಪ್ರಧಾನದವರೆಗೆ ಆಗಲೇ ಬೇಕು ಜಗತ್ತು ಯಾವಾಗ ತಮೋಪ್ರಧಾನವಾಗುವುದು ಆಗ ಮತ್ತೆ ತಂದೆ ಬಂದು ಸತೋಪ್ರಧಾನ ಸತ್ಯಯುಗ ಮಾಡುತ್ತಾರೆ. ಈಗ ನೀವು ಮಕ್ಕಳು ತಿಳಿದಿರುವಿರಿ ನಾವು ಭಾರತವಾಸಿಗಳೇ ಪುನಃ ಹೊಸ ಪ್ರಪಂಚಕ್ಕೆ ಬಂದು ರಾಜ್ಯ ಮಾಡುವರು, ಬೇರೆ ಯಾವ ಧರ್ಮವೂ ಇರುವುದಿಲ್ಲ. ನೀವು ಮಕ್ಕಳಲ್ಲಿಯೂ ಸಹಾ ಯಾರು ಶ್ರೇಷ್ಠ ಪದವಿ ಪಡೆಯಬೇಕಾದರೆ ಅವರು ಹೆಚ್ಚು ನೆನಪಿನಲ್ಲಿರುವ ಪುರುಷಾರ್ಥ ಮಾಡುತ್ತಾರೆ ಮತ್ತು ಸಮಾಚಾರವನ್ನೂ ಸಹ ಬರೆಯುತ್ತಾರೆ ಬಾಬಾ ನಾನು ಇಷ್ಟು ಸಮಯ ನೆನಪಿನಲ್ಲಿರುವೆ. ಕೆಲವರಂತೂ ಮಾನಕ್ಕೆ ಅಂಜಿ ಪೂರ್ತಿ ಸಮಾಚಾರವನ್ನೇ ಕೊಡುವುದಿಲ್ಲ. ಬಾಬಾ ಏನು ಹೇಳುತ್ತಾರೆ ಎಂದು ತಿಳಿಯುತ್ತಾರೆ ಆದರೂ ಗೊತ್ತಾಗುವುದಲ್ಲವೇ. ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಹೇಳುತ್ತಾರಲ್ಲವೇ ನೀವು ಓದದೇ ಇದ್ದರೆ ಫೇಲ್ ಆಗಿ ಬಿಡುವಿರಿ. ಲೌಕಿಕ ತಂದೆ-ತಾಯಿ ಸಹಾ ಮಕ್ಕಳ ವಿಧ್ಯಾಭ್ಯಾಸದಿಂದ ತಿಳಿದು ಬರುತ್ತೆ, ಇದಂತೂ ಬಹಳ ದೊಡ್ಡ ಶಾಲೆಯಾಗಿದೆ. ಇಲ್ಲಂತೂ ನಂಬರ್ವಾರ್ ಕೂರಿಸಲಾಗುವುದಿಲ್ಲ. ಬುದ್ಧಿಯಿಂದ ತಿಳಿಯಲಾಗುತ್ತೆ, ನಂಬರ್ವಾರ್ ಅಂತೂ ಇದ್ದೇ ಇರುತ್ತಾರಲ್ಲವೇ. ಈಗ ಬಾಬಾ ಒಳ್ಳೆ-ಒಳ್ಳೆಯ ಮಕ್ಕಳನ್ನು ಬೇರೆ ಎಲ್ಲಾದರೂ ಕಳುಹಿಸಿಬಿಡುತ್ತಾರೆ, ಅವರು ಹೋದಮೇಲೆ ನಂತರ ಬೇರೆಯವರು ಬರೆಯುತ್ತಾರೆ ನಮಗೆ ಮಹಾರಥಿಬೇಕು, ಆಗ ಖಂಡಿತ ತಿಳಿಯುತ್ತಾರೆ ಅವರು ನಮಗಿಂತಲೂ ಬುದ್ಧಿವಂತರು ಹೆಸರುವಾಸಿಯಾಗಿದ್ದಾರೆ. ನಂಬರ್ವಾರ್ ಅಂತೂ ಇರುತ್ತಾರಲ್ಲವೆ. ಪ್ರರ್ದಶನಿಯಲ್ಲಿಯೂ ಸಹಾ ಅನೇಕ ಪ್ರಕಾರದವರು ಬರುತ್ತಾರೆ ಆದ್ದರಿಂದ ಗೈಡ್ಸ್ಗಳು ಸಹಾ ಅಲ್ಲೇ ನಿಂತಿರಬೇಕಿದೆ ತನಿಖೆ ಮಾಡುವುದಕ್ಕಾಗಿ. ಎಸೀವ್ ಮಾಡುವವರಿಗಂತೂ ಗೊತ್ತಿರುತ್ತದೆ ಇವರು ಎಂತಹ ಪ್ರಕಾರದ ವ್ಯಕ್ತಿ ಎಂದು. ನಂತರ ಅವರಿಗೆ ಸೂಚನೆ ಕೊಡಬೇಕಾಗುತ್ತದೆ ಇವರಿಗೆ ನೀವು ತಿಳಿಸಿ ಎಂದು. ನೀವೂ ತಿಳಿದುಕೊಂಡಿರುವಿರಿ ಫಸ್ಟ್ ಗ್ರೇಡ್, ಸೆಕೆಂಡ್ ಗ್ರೆಡ್, ಥರ್ಡ್ ಗ್ರೇಡ್ ಎಲ್ಲರೂ ಇದ್ದಾರೆ. ಅಲ್ಲಂತೂ ಎಲ್ಲರ ಸೇವೆ ಮಾಡಲೇ ಬೇಕಾಗುತ್ತದೆ. ಯಾರಾದರೂ ದೊಡ್ಡ ಮನುಷ್ಯರಿದ್ದಾಗ ಖಂಡಿತವಾಗಿಯೂ ದೊಡ್ಡ ಮನುಷ್ಯರಿಗೆ ಹೆಚ್ಚು ಖಾಳಜಿಯನ್ನು ಎಲ್ಲರೂ ಮಾಡುತ್ತಾರೆ. ಇದು ಖಾಯಿದೆಯಾಗಿದೆ. ತಂದೆ ಅಥವಾ ಟೀಚರ್ ಮಕ್ಕಳ ಮಹಿಮೆಯನ್ನು ಕ್ಲಾಸ್ನಲ್ಲಿ ಮಾಡುತ್ತಾರೆ, ಇದೂ ಸಹ ಎಲ್ಲಕ್ಕಿಂತಲು ದೊಡ್ಡ ಖಾಳಜಿಯಾಗಿದೆ. ಹೆಸರನ್ನು ಪಡೆಯುವ ಮಕ್ಕಳ ಮಹಿಮೆ ಅಥವಾ ಖಾಳಜಿ ಮಾಡಲಾಗುವುದು. ಇವರು ಹಣವಂತರು, ಇವರು ಧಾರ್ಮಿಕ ವೃತ್ತಿಯುಳ್ಳವರು, ಇದೂ ಸಹಾ ಖಾಳಜಿಯಾಗಿದೆಯಲ್ಲವೆ. ಈಗ ನೀವು ಇದನ್ನು ತಿಳಿದಿರುವಿರಿ ಶ್ರೇಷ್ಠಾತಿ ಶ್ರೇಷ್ಠರು ಭಗವಂತ ಆಗಿದ್ದಾರೆ. ಇದೂ ಸಹಾ ಹೇಳುವಿರಿ ಖಂಡಿತ ಶ್ರೇಷ್ಠಾತಿ ಶ್ರೇಷ್ಠ ಆಗಿದ್ದಾರೆ, ಆದರೆ ನಂತರ ಕೇಳಿ ಅವರ ಭಯೋಗ್ರಫಿ ಹೇಳಿ ಎಂದು ಕೇಳಿದಾಗ ಹೇಳುವರು ಸರ್ವವ್ಯಾಪಿಯಾಗಿದ್ದಾರೆ. ಅಷ್ಟೆ ಪೂರ್ತಿ ಕೆಳಗೆ ಇಳಿದು ಬಿಡುತ್ತಾರೆ. ಈಗ ನೀವು ತಿಳಿಸಿಕೊಡಿರಿ.

ಎಲ್ಲರಿಗಿಂತಲೂ ಶ್ರೇಷ್ಠಾತಿ ಶ್ರೇಷ್ಠರು ಭಗವಂತ, ಅವರಾಗಿದ್ದಾರೆ ಮೂಲವತನವಾಸಿ. ಸೂಕ್ಷ್ಮವತನದಲ್ಲಿ ದೇವತೆಗಳಿರುತ್ತಾರೆ. ಇಲ್ಲಿ ಮನುಷ್ಯರಿರುತ್ತಾರೆ. ಆದ್ದರಿಂದ ಶ್ರೇಷ್ಠಾತಿ ಶ್ರೇಷ್ಠ ಭಗವಂತ ನಿರಾಕಾರ ಆಗಿದ್ದಾರೆ. ಈಗ ನೀವು ತಿಳಿದಿರುವಿರಿ ನಾವು ಏನು ವಜ್ರ ಸಮಾನ ಇದ್ದೆವು ಈಗ ಕವಡೆಯತರಹ ಆಗಿಬಿಟ್ಟಿದ್ದೇವೆ ಮತ್ತು ಭಗವಂತನನ್ನು ತಮಗಿಂತಲೂ ಹೆಚ್ಚು ಕೆಳಗೆ ತೆಗೆದುಕೊಂಡು ಹೋಗಿಬಿಟ್ಟೆವು. ಗುರುತಿಸುವುದೇ ಇಲ್ಲ. ನೀವು ಭಾರತವಾಸಿಗಳಿಗೆ ಪರಿಚಯ ಸಿಗುವುದು ನಂತರ ಪರಿಚಯ ಕಡಿಮೆಯಾಗಿ ಬಿಡುತ್ತದೆ. ಈಗ ನೀವು ತಂದೆಯ ಪರಿಚಯವನ್ನು ಎಲ್ಲರಿಗೂ ತಿಳಿಸುವಿರಿ. ಅನೇಕರಿಗೆ ತಂದೆಯ ಪರಿಚಯ ಸಿಗುವುದು. ನಿಮ್ಮ ಮುಖ್ಯ ಚಿತ್ರವೇ ಆಗಿದೆ ತ್ರಿಮೂರ್ತಿ, ಚಕ್ರ, ವೃಕ್ಷ. ಇದರಲ್ಲಿ ಎಷ್ಟು ಜ್ಞಾನದ ಬೆಳಕಿದೆ. ಇದನ್ನಂತೂ ಯಾರು ಬೇಕಾದರೂ ಹೇಳುತ್ತಾರೆ ಇವರು ಲಕ್ಷ್ಮಿ-ನಾರಾಯಣ ಸತ್ಯಯುಗದ ಮಾಲೀಕರಾಗಿದ್ದರು. ಒಳ್ಳೆಯದು, ಸತ್ಯಯುಗಕ್ಕೆ ಮೊದಲು ಏನಿತ್ತು ?ಇದನ್ನೂ ಸಹಾ ಈಗ ನೀವು ತಿಳಿದುಕೊಂಡಿರುವಿರಿ. ಈಗ ಇದು ಕಲಿಯುಗದ ಅಂತಿಮ ಸಮಯವಾಗಿದೆ ಮತ್ತು ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಾಗಿದೆ. ಈಗಂತೂ ರಾಜರುಗಳ ಮನೆತನವಿಲ್ಲ, ಎಷ್ಟು ವ್ಯತ್ಯಾಸವಿದೆ. ಸತ್ಯಯುಗದ ಆದಿಯಲ್ಲಿ ರಾಜರುಗಳಿದ್ದರು ಈಗ ಕಲಿಯುಗದಲ್ಲಿಯೂ ರಾಜರುಗಳಿದ್ದಾರೆ. ಭಲೆ ಯಾರೂ ಅಲ್ಲಿ ಪಾವನರಿಲ್ಲ. ಆದರೆ ಕೆಲವರು ಹಣ ಕೊಟ್ಟಾದರೂ ಬಿರುದುಗಳನ್ನು ಪಡೆಯುತ್ತಾರೆ. ಮಹಾರಾಜರು ಯಾರೂ ಇಲ್ಲ, ಬಿರುದುಗಳನ್ನು ಖರೀದಿ ಮಾಡಿಬಿಡುತ್ತಾರೆ. ಹೇಗೆ ಪಟಿಯಾಲದ ಮಹಾರಾಜ, ಜೋಧಪುರ್, ಬಿಕಾನೇರ್ ನ ಮಹಾರಾಜ......... ಹೆಸರಂತೂ ತೆಗೆದುಕೊಳ್ಳುವರಲ್ಲವೆ. ಈ ಹೆಸರು ಅವಿನಾಶಿಯಾಗಿ ನಡೆದು ಬಂದಿದೆ. ಮೊದಲು ಪವಿತ್ರ ಮಹಾರಾಜರುಗಳಿದ್ದರು, ಈಗ ಅಪವಿತ್ರ ಮಹಾರಾಜರುಗಳು. ಅಕ್ಷರ ನಡೆದು ಬರುತ್ತೆ. ಈ ಲಕ್ಷ್ಮಿ-ನಾರಾಯಣರಿಗೆ ಹೇಳುತ್ತಾರೆ ಇವರು ಸತ್ಯಯುಗದ ಮಾಲೀಕರಾಗಿದ್ದರು, ಯಾರು ರಾಜ್ಯ ಪಡೆದರು? ಈಗ ನೀವು ತಿಳಿದುಕೊಂಡಿರುವಿರಿ ರಾಜ್ಯಭಾಗ್ಯದ ಸ್ಥಾಪನೆ ಹೇಗೆ ಆಗುತ್ತದೆ ಎಂದು. ತಂದೆ ಹೇಳುತ್ತಾರೆ, ನಾನು ಈಗ ನಿಮಗೆ ಓದಿಸುತ್ತೇನೆ - 21ಜನ್ಮಕ್ಕಾಗಿ. ಅಲ್ಲಿ ಅವರಂತೂ ಓದಿ ಇದೇ ಜನ್ಮದಲ್ಲಿಯೇ ಬ್ಯಾರಿಸ್ಟರ್ ಇತ್ಯಾದಿ ಆಗುತ್ತಾರೆ. ನೀವು ಈಗ ಓದಿ ಭವಿಷ್ಯದಲ್ಲಿ ಮಹಾರಾಜ-ಮಹಾರಾಣಿ ಆಗುವಿರಿ. ಡ್ರಾಮಾ ಪ್ಲಾನ್ ಅನುಸಾರ ಹೊಸ ಪ್ರಪಂಚದ ಸ್ಥಾಪನೆಯಾಗುತ್ತಿದೆ. ಈಗ ಹಳೆಯ ಪ್ರಪಂಚವಿದೆ. ಭಲೇ ಎಷ್ಟೆ ದೊಡ್ಡ-ದೊಡ್ಡ ಮಹಲುಗಳಿವೆ ಆದರೆ ವಜ್ರ-ವೈಡೂರ್ಯಗಳ ಮಹಲುಗಳನ್ನು ಮಾಡಲು ಯಾರಿಗೂ ತಾಕತ್ತು ಇಲ್ಲ. ಸತ್ಯಯುಗದಲ್ಲಿ ಈ ಎಲ್ಲಾ ವಜ್ರ-ವೈಡೂರ್ಯಗಳ ಮಹಲುಗಳನ್ನು ಮಾಡುವಿರಲ್ಲವೆ. ಮಾಡುವುದರಲ್ಲಿ ಏನೂ ಸಮಯ ತೆಗೆದುಕೊಳ್ಳುವುದಿಲ್ಲ. ಇಲ್ಲೂ ಸಹಾ ಭೂಕಂಪ ಏನೇ ಆದರೂ ಸಹಾ ಬಹಳ ಚತುರರಾದ ಕಾರ್ಮಿಕರಿಂದ ಕಾರ್ಯ ಮಾಡಿ ಒಂದೆರಡು ವರ್ಷದಲ್ಲಿ ಇಡೀ ನಗರವನ್ನೇ ತಯಾರು ಮಾಡಿ ನಿಲ್ಲಿಸಿ ಬಿಡುತ್ತಾರೆ. ಹೊಸ ದೆಹಲಿ ಮಾಡುವಲ್ಲಿ 8-10 ವರ್ಷವೇ ಹಿಡಿಸಿತು ಆದರೆ ಇಲ್ಲಿನ ಕಾರ್ಮಿಕರು ಮತ್ತು ಅಲ್ಲಿನ ಕಾರ್ಮಿಕರಲ್ಲಿ ವ್ಯತ್ಯಾಸವಂತೂ ಇರುವುದಲ್ಲವೆ. ಇತ್ತೀಚೆಗಂತೂ ಹೊಸ-ಹೊಸ ಆವಿಶ್ಕಾರಗಳನ್ನೂ ಸಹಾ ಹೊರ ತರುತ್ತಿರುತ್ತಾರೆ. ಮನೆ ಮಾಡುವ ವಿಜ್ಞಾನವೂ ಸಹಾ ಜೋರಾಗಿದೆ, ಎಲ್ಲವೂ ಸಹಾ ರೆಡಿಯಾಗಿ ಸಿಗುತ್ತದೆ, ತಕ್ಷಣ ಪ್ಲಾಂಟ್ ತಯಾರಾಗಿ ಬಿಡುತ್ತದೆ. ಬಹಳ ಬೇಗ-ಬೇಗನೆ ತಯಾರಾಗುತ್ತದೆ ಆದ್ದರಿಂದ ಇದೆಲ್ಲವೂ ಅಲ್ಲಿ ಕೆಲಸಕ್ಕೆ ಬರುವುದಲ್ಲವೇ. ಇದೆಲ್ಲವೂ ಜೊತೆಯಲ್ಲಿ ಬರಬೇಕಿದೆ. ಸಂಸ್ಕಾರವಂತೂ ಇರುವುದಲ್ಲವೆ. ಈ ವಿಜ್ಞಾನದ ಸಂಸ್ಕಾರ ಸಹಾ ನಡೆಯುತ್ತೆ. ಆದ್ದರಿಂದ ಈಗ ತಂದೆ ಮಕ್ಕಳಿಗೆ ತಿಳಿಸುತ್ತಲಿರುತ್ತಾರೆ, ಪಾವನರಾಗಬೇಕಾದರೆ ತಂದೆಯನ್ನು ನೆನಪು ಮಾಡಿ. ತಂದೆಯೂ ಸಹಾ ಗುಡ್ ಮಾರ್ನಿಂಗ್ ಎಂದು ಹೇಳಿ ಶಿಕ್ಷಣವನ್ನು ನೀಡುತ್ತಾರೆ. ಮಕ್ಕಳು ತಂದೆಯ ನೆನಪಿನಲ್ಲಿ ಕುಳಿತಿರುವಿರಾ? ನಡೆದಾಡುತ್ತಾ ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿ ಏಕೆಂದರೆ ಜನ್ಮ-ಜನ್ಮಾಂತರದ ಹೊರೆ ತಲೆಯ ಮೇಲಿದೆ. ಮೆಟ್ಟಿಲನ್ನು ಇಳಿಯುತ್ತಾ-ಇಳಿಯುತ್ತಾ 84 ಜನ್ಮ ಪಡೆಯುವಿರಿ. ಈಗ ಮತ್ತೆ ಒಂದು ಜನ್ಮದಲ್ಲಿ ಏರುವ ಕಲೆಯಾಗುತ್ತದೆ. ಎಷ್ಟು ತಂದೆಯನ್ನು ನೆನಪು ಮಾಡುತ್ತಿರುವಿರಿ ಅಷ್ಟು ಖುಶಿಯೂ ಆಗುವುದು, ತಾಕತ್ತು ಸಿಗುತ್ತದೆ. ಬಹಳ ಮಕ್ಕಳಿದ್ದಾರೆ ಯಾರನ್ನು ಮೊದಲ ನಂಬರ್ ನಲ್ಲಿ ಇಡಲಾಗುತ್ತೆ ಆದರೆ ನೆನಪಿನಲ್ಲಂತೂ ಇರುವುದೇ ಇಲ್ಲ, ಭಲೇ ಜ್ಞಾನದಲ್ಲಿ ಬಹಳ ತೀಕ್ಷ್ಣವಾಗಿರುತ್ತಾರೆ. ಆದರೆ ನೆನಪಿನಯಾತ್ರೆಯಲ್ಲಿ ಇರುವುದಿಲ್ಲ. ತಂದೆಯಂತು ಮಕ್ಕಳ ಮಹಿಮೆ ಮಾಡುತ್ತಾರೆ. ಇವರೂ ಸಹಾ ನಂಬರ್ ಒನ್ ನಲ್ಲಿದ್ದಾರೆ ಅಂದಮೇಲೆ ಖಂಡಿತ ಪರಿಶ್ರಮ ಸಹಾ ಮಾಡಿರಬೇಕಲ್ಲವೆ. ನೀವು ಸದಾ ತಿಳಿಯಿರಿ ಶಿವಬಾಬಾ ತಿಳಿಸುತ್ತಿದ್ದಾರೆ ಆಗ ಬುದ್ಧಿಯೋಗ ಅಲ್ಲಿ ನೆಲೆಸಿರುತ್ತದೆ. ಇವರೂ ಸಹಾ ಕಲಿಯುತ್ತಿರಬೇಕಲ್ಲವೆ. ಆದರೂ ಸಹಾ ಹೇಳುತ್ತಾರೆ ಬಾಬಾರವರನ್ನು ನೆನಪು ಮಾಡಿ ಎಂದು. ಯಾರಿಗಾದರೂ ತಿಳಿಸಿಕೊಡಲು ಚಿತ್ರಗಳಿವೆ. ಭಗವಂತ ಎಂದು ನಿರಾಕಾರನಿಗೆ ಹೇಳಲಾಗುವುದು. ಅವರು ಬಂದು ಶರೀರವನ್ನು ಧಾರಣೆ ಮಾಡುತ್ತಾರೆ. ಒಬ್ಬ ಭಗವಂತನ ಮಕ್ಕಳು ಎಲ್ಲಾ ಆತ್ಮರೂ ಸಹೋದರ-ಸಹೋದರರಾಗಿರುವಿರಿ. ಈಗ ಈ ಶರೀರದಲ್ಲಿ ವಿರಾಜಮಾನವಾಗಿದೆ. ಎಲ್ಲರೂ ಅಕಾಲಮೂರ್ತಿಗಳಾಗಿರುವಿರಿ ಈ ಅಕಾಲಮೂರ್ತ(ಆತ್ಮ)ನ ಸಿಂಹಾಸನವಾಗಿದೆ. ಅಕಾಲ ಸಿಂಹಾಸನ ವಿಶೇಷವಾಗಿ ಬೇರೆ ಯಾವುದೇ ವಸ್ತು ಇಲ್ಲ. ಈ ಸಿಂಹಾಸನವಾಗಿದೆ ಅಕಾಲಮೂರ್ತಿಯದು. ಭೃಕುಟಿಯ ಮಧ್ಯೆ ಆತ್ಮ ವಿರಾಜಮಾನವಾಗಿರುತ್ತೆ. ಇದಕ್ಕೆ ಹೇಳಲಾಗುವುದು ಅಕಾಲ ಸಿಂಹಾಸನ. ಅಕಾಲ ಸಿಂಹಾಸನ, ಅಕಾಲಮೂರ್ತಿಯದು. ಆತ್ಮಗಳೆಲ್ಲ ಅಕಲವಾಗಿದೆ, ಎಷ್ಟು ಅತೀ ಸೂಕ್ಷ್ಮವಾಗಿದೆ. ತಂದೆಯಂತೂ ನಿರಾಕಾರರಾಗಿದ್ದಾರೆ. ಅವರು ತಮ್ಮ ಸಿಂಹಾಸನವನ್ನು ಎಲ್ಲಿಂದ ತರುತ್ತಾರೆ. ತಂದೆ ಹೇಳುತ್ತಾರೆ ಇದು ನನ್ನ ಸಿಂಹಾಸನವೂ ಆಗಿದೆ ನಾನು ಬಂದು ಈ ಸಿಂಹಾಸನವನ್ನು ಲೋನ್ನಲ್ಲಿ ತೆಗೆದುಕೊಳ್ಳುತ್ತೇನೆ. ಬ್ರಹ್ಮಾರವರ ಸಾಧಾರಣ ವೃದ್ಧ ಶರೀರದಲ್ಲಿ ಅಕಾಲ ಸಿಂಹಾಸನದ ಮೇಲೆ ಬಂದು ಕುಳಿತುಕೊಳ್ಳುತ್ತೇನೆ. ಈಗ ನೀವು ತಿಳಿದಿರುವಿರಿ ಎಲ್ಲಾ ಆತ್ಮಗಳ ಸಿಂಹಾಸನ ಇದಾಗಿದೆ. ಮನುಷ್ಯರ ಬಗ್ಗೆಯೇ ಮಾತನಾಡಲಾಗುವುದು, ಪ್ರಾಣಿಗಳ ಮಾತಂತೂ ಇಲ್ಲ. ಮೊದಲು ಮನುಷ್ಯ ಪ್ರಾಣಿಗಳಿಗಿಂತಲೂ ಕೀಳಾಗಿ ಬಿಟ್ಟಿದ್ದಾರೆ, ಮೊದಲು ಅವರು ಸುಧಾರಣೆಯಾಗಲಿ. ಯಾರಾದರೂ ಪ್ರಾಣಿಗಳ ಬಗ್ಗೆ ಕೇಳಿದರೆ, ಹೇಳಿ ಮೊದಲು ನಿಮ್ಮ ಸುಧಾರಣೆ ಮಾಡಿಕೊಳ್ಳಿ. ಸತ್ಯಯುಗದಲ್ಲಂತೂ ಪ್ರಾಣಿಗಳು ಸಹಾ ಬಹಳ ಚೆನ್ನಾಗಿ ಫಸ್ಟ್ಕ್ಲಾಸ್ ಆಗಿರುವುದು. ಕೊಳಕು ಇತ್ಯಾದಿ ಯಾವುದೂ ಇರುವುದಿಲ್ಲ ರಾಜನ ಅರಮನೆಯಲ್ಲಿ ಪಾರಿವಾಳಗಳು ಇತ್ಯಾದಿಯ ಕೊಳಕು ಏನಾದರೂ ಕಂಡಲ್ಲಿ ದಂಡ ಹಾಕಲಾಗುವುದು. ಸ್ವಲ್ಪವೂ ಕೊಳಕು ಇರಲ್ಲ. ಅಲ್ಲಿ ಬಹಳ ಎಚ್ಚರಿಕೆ ಇರುವುದು. ರೌಂಡ್ ನಲ್ಲಿರುತ್ತಾರೆ, ಎಂದೂ ಯಾವುದೇ ಪ್ರಾಣಿಗಳು ಇತ್ಯಾದಿ ಒಳಗೆ ನುಸುಳಿ ಬರಲು ಸಾಧ್ಯವಿಲ್ಲ. ಬಹಳ ಸ್ವಚ್ಛತೆ ಇರುತ್ತದೆ. ಲಕ್ಷ್ಮಿ-ನಾರಾಯಣರ ಮಂದಿರದಲ್ಲಿಯೂ ಸಹಾ ಎಷ್ಟು ಸ್ವಚ್ಛತೆ ಇರುತ್ತದೆ. ಶಂಕರ-ಪಾರ್ವತಿಯ ಮಂದಿರದಲ್ಲಿ ಪರಿವಾಳವನ್ನೂ ಸಹಾ ತೋರಿಸುತ್ತಾರೆ. ಅಂದಮೇಲೆ ಖಂಡಿತ ಮಂದಿರವನ್ನೂ ಸಹಾ ಕೆಡಿಸುತ್ತಿರಬಹುದು. ಶಾಸ್ತ್ರದಲ್ಲಂತೂ ಬಹಳಷ್ಟು ದಂತ ಕಥೆಗಳನ್ನು ಬರೆದು ಬಿಟ್ಟಿದ್ದಾರೆ.

ಈಗ ತಂದೆ ಮಕ್ಕಳಿಗೆ ತಿಳಿಸುತ್ತಾರೆ, ಅದರಲ್ಲಿಯೂ ಸ್ವಲ್ಪ ಇದೆ ಯಾವುದನ್ನು ಧಾರಣೆ ಮಾಡಲು ಸಾದ್ಯವಿದೆ. ಬಾಕಿಯಂತೂ ಏನೂ ತಿಳಿದುಕೊಳ್ಳುವುದಿಲ್ಲ. ತಂದೆ ಮಕ್ಕಳನ್ನು ಎಷ್ಟು ಪ್ರೀತಿಯಿಂದ ತಿಳಿಸಿಕೊಡುತ್ತಾರೆ - ಮಕ್ಕಳೇ, ಬಹಳ-ಬಹಳ ಮಧುರರಾಗಿ. ಮುಖದಿಂದ ಸದಾ ರತ್ನಗಳೇ ಹೊರಬರಬೇಕು. ನೀವಾಗಿರುವಿರಿ ರೂಪ-ಬಸಂತ್. ನಿಮ್ಮ ಮುಖದಿಂದ ಎಂದೂ ಕಲ್ಲುಗಳು ಹೊರ ಬರಬಾರದು. ಆತ್ಮದ್ದೇ ಮಹಿಮೆ ಆಗುವುದು. ಆತ್ಮ ಹೇಳುತ್ತದೆ-ನಾನು ಪ್ರೆಸಿಡೆಂಟ್ ಆಗಿದ್ದೇನೆ , ನಾನು ಇಂತಹವನು, ನಾನು ಇಂತಹವನು....... ನನ್ನ ಶರೀರದ ಹೆಸರು ಇದಾಗಿದೆ. ಒಳ್ಳೆಯದು, ಆತ್ಮಗಳು ಯಾರ ಮಕ್ಕಳಾಗಿದ್ದಾರೆ? ಒಬ್ಬ ಪರಮಾತ್ಮನ ಮಕ್ಕಳು. ಅಂದಮೇಲೆ ಖಂಡಿತ ಅವರಿಂದ ಆಸ್ತಿ ಸಿಕ್ಕಬಹುದು. ಅವರು ಸರ್ವವ್ಯಾಪಿ ಹೇಗೆ ಆಗಲು ಸಾಧ್ಯ! ನೀವು ತಿಳೀದಿರುವಿರಿ ನಮಗೂ ಸಹಾ ಮೊದಲು ಏನೂ ತಿಳಿದಿರಲಿಲ್ಲ. ಈಗ ಬುದ್ಧಿ ಎಷ್ಟು ತೆರೆದುಕೊಂಡಿದೆ. ನೀವು ಯಾವುದೇ ಮಂದಿರಕ್ಕೆ ಹೋದರೂ, ತಿಳಿಯುವಿರಿ ಇದೆಲ್ಲಾ ಸುಳ್ಳು ಚಿತ್ರಗಳಾಗಿವೆ. 10 ಭುಜಗಳಿರುವವರು, ಆನೆಯ ಸೊಂಡಿಲುಳ್ಳವರು ಯಾವುದಾದರೂ ಚಿತ್ರ ಇರುವುದೇನು! ಇದೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ವಾಸ್ತವದಲ್ಲಿ ಭಕ್ತಿ ಒಬ್ಬ ಶಿವಬಾಬಾನಲ್ಲಿರಬೇಕು, ಯಾರು ಸರ್ವರ ಸದ್ಗತಿದಾತ. ನಿಮ್ಮ ಬುದ್ಧಿಯಲ್ಲಿದೆ - ಈ ಲಕ್ಷ್ಮಿ-ನಾರಾಯಣರೂ ಸಹಾ 84 ಜನ್ಮ ತೆಗೆದುಕೊಳ್ಳುತ್ತಾರೆ. ನಂತರ ಶ್ರೇಷ್ಠಾತಿ ಶ್ರೇಷ್ಠ ತಂದೆಯೇ ಬಂದು ಎಲ್ಲರಿಗೂ ಸದ್ಗತಿಯನ್ನು ಕೊಡುತ್ತಾರೆ. ಅವರಿಗಿಂತಲೂ ದೊಡ್ಡವರು ಬೇರೆ ಯಾರೂ ಇಲ್ಲ. ಈ ಜ್ಞಾನದ ಮಾತುಗಳು ನಿಮ್ಮಲ್ಲಿಯೂ ಸಹ ನಂಬರ್ವಾರ್ ಧಾರಣೆ ಮಾಡಲು ಸಾಧ್ಯ. ಧಾರಣೆ ಮಾಡಲು ಸಾಧ್ಯವಿಲ್ಲದಿದ್ದರೆ ಬೇರೆ ಯಾವ ಕೆಲಸಕ್ಕೂ ಇಲ್ಲ. ಕೆಲವರಂತೂ ಕುರುಡರಿಗೆ ಊರುಗೋಲಾಗುವ ಬದಲು ತಾವೇ ಸ್ವಯಂ ಅಂಧರಾಗಿ ಬಿಡುತ್ತಾರೆ. ಹಸು ಹಾಲು ಕೊಡದಿದ್ದರೆ ಅದನ್ನು ಕೊಟ್ಟಿಗೆಯಲ್ಲಿ ಇಡುತ್ತಾರೆ. ಇಲ್ಲೂ ಸಹಾ ಜ್ಞಾನದ ಹಾಲು ಕೊಡದೇ ಇರುವವರು ಬಹಳ ಜನ ಇದ್ದಾರೆ, ಯಾರು ಸ್ವಲ್ಪವೂ ಪುರುಷಾರ್ಥ ಮಾಡುವುದಿಲ್ಲ. ತಿಳಿಯುವುದೇ ಇಲ್ಲ, ನಾವು ಸ್ವಲ್ಪವಾದರೂ ಯಾರದಾದರೂ ಕಲ್ಯಾಣ ಮಾಡೋಣ. ತಮ್ಮ ಅದೃಷ್ಠದ ಚಿಂತೆಯೇ ಇರುವುದಿಲ್ಲ. ಏನು ಅಲ್ಪ-ಸ್ವಲ್ಪ ಸಿಕ್ಕಿದರೂ ಅಷ್ಟೇ ಒಳ್ಳೆಯದು. ಅದಕ್ಕೆ ತಂದೆ ಹೇಳುತ್ತಾರೆ - ಇವರ ಅದೃಷ್ಠದಲ್ಲಿ ಇಲ್ಲ. ತಮ್ಮ ಸದ್ಗತಿಯನ್ನು ಮಾಡಿಕೊಳ್ಳುವ ಪುರುಷಾರ್ತವನ್ನಂತೂ ಮಾಡಲೇಬೇಕು. ದೇಹೀ-ಅಭಿಮಾನಿಗಳಾಗಬೇಕು. ತಂದೆ ಎಷ್ಟು ಶ್ರೇಷ್ಠಾತಿ ಶ್ರೇಷ್ಠರಾಗಿದ್ದಾರೆ ಮತ್ತು ಬರುವುದೂ ಸಹ ನೋಡಿ ಎಂತಹ ಪತಿತ ಪ್ರಪಂಚದಲ್ಲಿ, ಪತಿತ ಶರೀರದಲ್ಲಿ. ಯಾರು ಒಳ್ಳೆಯ ಪುರುಷಾರ್ಥ ಮಾಡುತ್ತಾರೆ ಅವರು ರಾಜಾ-ರಾಣಿಯರಾಗಿ ಬಿಡುತ್ತಾರೆ, ಯಾರು ಪುರುಷಾರ್ಥ ಮಾಡುವುದಿಲ್ಲ ಅವರು ಬಡವರಾಗಿ ಬಿಡುತ್ತಾರೆ. ಅದೃಷ್ಠದಲ್ಲಿ ಇಲ್ಲ ಎಂದರೆ ಪುರುಷಾರ್ಥ ಮಾಡಲು ಸಾದ್ಯವಿಲ್ಲ. ಕೆಲವರಂತೂ ಬಹಳ ಒಳ್ಲೆಯ ಅದೃಷ್ಠವನ್ನು ರೂಪಿಸಿಕೊಳ್ಳುತ್ತಾರೆ. ಪ್ರತಿಯೊಬ್ಬರೂ ತಮ್ಮನ್ನು ನೋಡಿಕೊಳ್ಳಬಹುದು ನಾವು ಏನು ಸೇವೆ ಮಾಡುತ್ತಿದ್ದೇವೆ ಎಂದು. ಒಳ್ಳೆಯದು !

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ರೂಪ-ಬಸಂತರಾಗಿ ಮುಖದಿಂದ ಸದಾ ರತ್ನಗಳೇ ಹೊರಬರಬೇಕು, ಬಹಳ-ಬಹಳ ಮಧುರರಾಗಬೇಕು. ಎಂದೂ ಸಹ ಕಲ್ಲು (ಕಠು ವಚನ) ಹೊರಬರಬಾರದು.

2. ಜ್ಞಾನ ಮತ್ತು ಯೋಗದಲ್ಲಿ ತೀಕ್ಷ್ಣರಾಗಿ ತಮ್ಮ ಮತ್ತು ಅನ್ಯರ ಕಲ್ಯಾಣ ಮಾಡಬೇಕು. ತಮ್ಮ ಶ್ರೇಷ್ಠ ಅದೃಷ್ಠ ಮಾಡಿಕೊಳ್ಳುವ ಪುರುಷಾರ್ಥ ಮಾಡಬೇಕು. ಕುರುಡರಿಗೆ ಊರುಗೋಲಾಗಬೇಕು.

ವರದಾನ:
ಪ್ರವೃತ್ತಿಯ ವಿಸ್ತಾರದಲ್ಲಿರುತ್ತಾ ಫರಿಶ್ಥಾತನದ ಸಾಕ್ಷಾತ್ಕಾರ ಮಾಡಿಸುವಂತಹ ಸಾಕ್ಷಾತ್ಕಾರಮೂರ್ತಿ ಭವ.

ಪ್ರವೃತ್ತಿಯ ವಿಸ್ತಾರವಿದ್ದರೂ ಸಹ ವಿಸ್ತಾರವನ್ನು ಸಂಕೀರ್ಣಗೊಳಿಸಿ ಉಪರಾಮವಾಗಿರುವಂತಹ ಅಭ್ಯಾಸ ಮಾಡಿ. ಈಗೀಗ ಸ್ಥೂಲ ಕಾರ್ಯ ಮಾಡುತ್ತಿರುವಿರಿ, ಈಗೀಗ ಅಶರೀರಿಯಾದಿರಿ - ಈ ಅಭ್ಯಾಸ ಫರಿಶ್ಥೆತನದ ಸಾಕ್ಷಾತ್ಕಾರ ಮಾಡಿಸುತ್ತದೆ. ಉನ್ನತ ಸ್ಥಿತಿಯಲ್ಲಿರುವುದರಿಂದ ಸಣ್ಣ-ಪುಟ್ಟ ಮಾತುಗಳು ವ್ಯಕ್ತಭಾವದ ಅನುಭವವಾಗುವುದು. ಹಿರಿಯ ಸ್ಥಾನಕ್ಕೆ ಹೋಗುವುದರಿಂದ ಕೀಳುತನ ತಾನಾಗಿಯೇ ಬಿಟ್ಟು ಹೋಗಿ ಬಿಡುವುದು. ಪರಿಶ್ರಮದಿಂದ ಬಿಡಿಸಿಕೊಂಡು ಬಿಡುವರು. ಸಮಯ ಸಹ ಉಳಿತಾಯವಾಗುವುದು, ಸೇವೆಯು ಸಹ ವೇಗವಾಗಿ ಆಗುವುದು. ಬುದ್ಧಿ ಇಷ್ಟು ವಿಶಾಲವಾಗಿ ಬಿಡುವುದು ಒಂದೇ ಸಮಯದಲ್ಲಿ ಬಹಳಷ್ಟು ಕಾರ್ಯ ಮಾಡಲು ಸಾಧ್ಯವಾಗುವುದು.

ಸ್ಲೋಗನ್:
ಖುಷಿಯನ್ನು ಖಾಯಂ ಆಗಿಟ್ಟು ಕೊಳ್ಳಲು ಆತ್ಮರೂಪಿ ದೀಪಕ್ಕೆ ಜ್ಞಾನರೂಪಿ ತುಪ್ಪವನ್ನು ಪ್ರತಿದಿನ ಹಾಕುತ್ತಿರಿ.