08.02.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಈಗ ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚದ ಮೇಲೆ ಬೃಹಸ್ಪತಿಯ ದೆಶೆಯು ಕುಳಿತುಕೊಳ್ಳಲಿದೆ, ತಂದೆಯು ನೀವು ಮಕ್ಕಳ ಮೂಲಕ ಭಾರತವನ್ನು ಸುಖಧಾಮವನ್ನಾಗಿ ಮಾಡುತ್ತಿದ್ದಾರೆ.

ಪ್ರಶ್ನೆ:
16 ಕಲಾ ಸಂಪೂರ್ಣರಾಗಲು ನೀವು ಮಕ್ಕಳು ಯಾವ ಪುರುಷಾರ್ಥ ಮಾಡುತ್ತಿದ್ದೀರಿ?

ಉತ್ತರ:
1. ಯೋಗ ಬಲವನ್ನು ಜಮಾ ಮಾಡಿಕೊಳ್ಳುವ ಪುರುಷಾರ್ಥ ಮಾಡುತ್ತೀರಿ. ಯೋಗ ಬಲದಿಂದ ನೀವು 16 ಕಲಾ ಸಂಪೂರ್ಣರಾಗುತ್ತಿದ್ದೀರಿ. ಇದಕ್ಕಾಗಿ ತಂದೆಯು ಹೇಳುತ್ತಾರೆ - ದಾನ ಕೊಟ್ಟರೆ ಗ್ರಹಣವು ಬಿಡುವುದು. ಕಾಮ ವಿಕಾರವು ಬೀಳಿಸುವಂತದ್ದಾಗಿದೆ, ಇದರ ದಾನ ಮಾಡಿ ಬಿಡಿ. ಆಗ ನೀವು 16 ಕಲಾ ಸಂಪೂರ್ಣರಾಗಿ ಬಿಡುತ್ತೀರಿ. 2. ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿ, ಶರೀರದ ಪರಿವೆಯನ್ನು ಬಿಟ್ಟು ಬಿಡಿ.

ಗೀತೆ:
ನೀವು ಮಾತಾಪಿತಾ...........

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ತಮ್ಮ ಆತ್ಮಿಕ ತಂದೆಯ ಮಹಿಮೆಯನ್ನು ಕೇಳಿದಿರಿ, ಅವರು ಕೇವಲ ಹಾಡುತ್ತಾ ಇರುತ್ತಾರೆ, ನೀವಿಲ್ಲಿ ಸಮ್ಮುಖದಲ್ಲಿ ಆ ತಂದೆಯ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ನಿಮಗೆ ತಿಳಿದಿದೆ- ತಂದೆಯು ನಮ್ಮ ಮುಖಾಂತರವೇ ಭಾರತವನ್ನು ಸುಖಧಾಮವನ್ನಾಗಿ ಮಾಡುತ್ತಿದ್ದಾರೆ. ಯಾರ ಮುಖಾಂತರ ಮಾಡುತ್ತಿದ್ದಾರೆಯೋ ಅವಶ್ಯವಾಗಿ ಅವರೇ ಸುಖಧಾಮದ ಮಾಲೀಕರಾಗುತ್ತಾರೆ. ಮಕ್ಕಳಿಗಂತೂ ಬಹಳ ಖುಷಿಯಿರಬೇಕು, ತಂದೆಯ ಮಹಿಮೆಯು ಅಪರಮಪಾರವಾಗಿದೆ. ಅವರಿಂದ ನಾವು ಆಸ್ತಿಯನ್ನು ಪಡೆಯುತ್ತಿದ್ದೇವೆ. ಈಗ ನೀವು ಮಕ್ಕಳ ಮೇಲೆ ಮತ್ತು ಇಡೀ ಪ್ರಪಂಚದ ಮೇಲೆ ಈಗ ಬೃಹಸ್ಪತಿಯ ಅವಿನಾಶಿ ದೆಶೆಯಿದೆ. ಈಗ ನೀವು ಬ್ರಾಹ್ಮಣರೇ ತಿಳಿದುಕೊಂಡಿದ್ದೀರಿ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚದ ಎಲ್ಲರ ಮೇಲೆ ಈಗ ಬೃಹಸ್ಪತಿ ದೆಶೆಯು ಕುಳಿತುಕೊಳ್ಳಲಿದೆ. ಏಕೆಂದರೆ ನೀವೀಗ 16 ಕಲಾ ಸಂಪೂರ್ಣರಾಗುತ್ತೀರಿ. ಈ ಸಮಯದಲ್ಲಂತೂ ಯಾವುದೇ ಕಲೆಯಿಲ್ಲ. ಮಕ್ಕಳಿಗೆ ಬಹಳ ಖುಷಿಯಿರಬೇಕು. ಇಲ್ಲಿ ಖುಷಿಯಿದ್ದು ಹೊರಗಡೆ ಹೋಗುತ್ತಿದ್ದಂತೆಯೇ ಅದು ಮಾಯವಾಗಿ ಬಿಡಬಾರದು. ಯಾರ ಮಹಿಮೆಯನ್ನು ಹಾಡುತ್ತಾರೆಯೋ ಅವರು ಈಗ ನಿಮ್ಮ ಬಳಿ ಪ್ರತ್ಯಕ್ಷವಾಗಿದ್ದಾರೆ. ತಂದೆಯು ತಿಳಿಸುತ್ತಾರೆ - 5000 ವರ್ಷಗಳ ಮೊದಲೂ ಸಹ ನಿಮಗೆ ರಾಜ್ಯಭಾಗ್ಯವನ್ನು ಕೊಟ್ಟು ಹೋಗಿದ್ದೆನು, ನೀವೀಗ ನೋಡುತ್ತೀರಿ - ಕ್ರಮೇಣವಾಗಿ ಎಲ್ಲರೂ ಕೂಗುತ್ತಿರುತ್ತಾರೆ. ನಿಮ್ಮ ಘೋಷಣಾ ವಾಕ್ಯಗಳು ಪ್ರಸಿದ್ಧವಾಗುತ್ತವೆ. ಹೇಗೆ ಇಂಧಿರಾ ಗಾಂಧಿಯು ಹೇಳುತ್ತಿದ್ದರು ಒಂದು ಧರ್ಮ, ಒಂದು ಭಾಷೆ, ಒಂದು ರಾಜ್ಯವಿರಲಿ ಎಂದು, ಅವರಲ್ಲಿಯೂ ಆತ್ಮವೇ ಹೇಳುತ್ತದೆಯಲ್ಲವೆ. ಆತ್ಮಕ್ಕೆ ಗೊತಿದೆ - ಅವಶ್ಯವಾಗಿ ಭಾರತದಲ್ಲಿ ಒಂದು ರಾಜಧಾನಿಯಿತ್ತು, ಅದು ಈಗ ಸಮ್ಮುಖದಲ್ಲಿ ನಿಂತಿದೆ. ಇದು ಎಂದಾದರೂ ಸಮಾಪ್ತಿಯಾಗಬಹುದೆಂದು ತಿಳಿಯುತ್ತಾರೆ. ಇದೇನೂ ಹೊಸ ಮಾತಲ್ಲ. ಭಾರತವು ಪುನಃ 16 ಕಲಾ ಸಂಪೂರ್ಣ ಆಗಬೇಕಾಗಿದೆ. ನಿಮಗೆ ಗೊತ್ತಿದೆ, ನಾವು ಈ ಯೋಗ ಬಲದಿಂದ 16 ಕಲಾ ಸಂಪೂರ್ಣರಾಗುತ್ತಿದ್ದೇವೆ. ದಾನ ಕೊಟ್ಟರೆ ಗ್ರಹಣವು ಬಿಡುವುದೆಂದು ಹೇಳುತ್ತಾರಲ್ಲವೆ. ತಂದೆಯೂ ಹೇಳುತ್ತಾರೆ - ವಿಕಾರೀ ಅವಗುಣಗಳ ದಾನ ಕೊಡಿ, ಇದು ರಾವಣ ರಾಜ್ಯವಾಗಿದೆ. ತಂದೆಯು ಬಂದು ಇದರಿಂದ ಬಿಡಿಸುತ್ತಾರೆ. ಇದರಲ್ಲಿಯೂ ಕಾಮ ವಿಕಾರವು ಬಹಳ ದೊಡ್ಡ ಅವಗುಣವಾಗಿದೆ. ನೀವು ದೇಹಾಭಿಮಾನಿಯಾಗಿ ಬಿಟ್ಟಿದ್ದೀರಿ, ಈಗ ದೇಹೀ-ಅಭಿಮಾನಿಯಾಗಬೇಕಾಗಿದೆ, ಶರೀರದ ಭಾನವನ್ನೂ ಬಿಡಬೇಕಾಗುತ್ತದೆ. ಈ ಮಾತುಗಳನ್ನು ನೀವು ಮಕ್ಕಳೇ ತಿಳಿದುಕೊಳ್ಳುತ್ತೀರಿ, ಪ್ರಪಂಚದವರಿಗೆ ಗೊತ್ತಿಲ್ಲ. ಯಾವ ಭಾರತವು 16 ಕಲಾ ಸಂಪೂರ್ಣನಾಗಿತ್ತೋ, ಸಂಪೂರ್ಣ ದೇವತೆಗಳ ರಾಜ್ಯವಿತ್ತೋ ಅದಕ್ಕೆ ಈಗ ಗ್ರಹಣವು ಹಿಡಿದಿದೆ. ಈ ಲಕ್ಷ್ಮೀ-ನಾರಾಯಣರ ರಾಜಧಾನಿಯಿತ್ತಲ್ಲವೆ. ಭಾರತವು ಸ್ವರ್ಗವಾಗಿತ್ತು, ಈಗ ವಿಕಾರಗಳ ಗ್ರಹಣ ಹಿಡಿದಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ದಾನವನ್ನು ಕೊಟ್ಟು ಬಿಡಿ ಆಗ ಗ್ರಹಣವು ಬಿಟ್ಟು ಹೋಗುತ್ತದೆ. ಈ ಕಾಮ ವಿಕಾರವೇ ಬೀಳಿಸುವಂತದ್ದಾಗಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಈ ದಾನವನ್ನು ಕೊಟ್ಟಿದ್ದೇ ಆದರೆ ನೀವು 16 ಕಲಾ ಸಂಪೂರ್ಣರಾಗಿ ಬಿಡುತ್ತೀರಿ ಇಲ್ಲದಿದ್ದರೆ ಆಗುವುದಿಲ್ಲ. ಆತ್ಮಗಳಿಗೆ ತಮ್ಮ-ತಮ್ಮ ಪಾತ್ರವು ಸಿಕ್ಕಿದೆಯಲ್ಲವೆ. ಇದೂ ಸಹ ನಿಮ್ಮ ಬುದ್ಧಿಯಲ್ಲಿದೆ. ನಿಮ್ಮ ಆತ್ಮದಲ್ಲಿ ಎಷ್ಟೊಂದು ಪಾತ್ರವಿದೆ! ನೀವು ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ. ಇದು ಬೇಹದ್ದಿನ ನಾಟಕವಾಗಿದೆ. ಲೆಕ್ಕವಿಲ್ಲದಷ್ಟು ಪಾತ್ರಧಾರಿಗಳಿದ್ದಾರೆ, ಇದರಲ್ಲಿ ಫಸ್ಟ್ಕ್ಲಾಸ್ ಪಾತ್ರಧಾರಿಗಳು ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ. ಇವರದು ನಂಬರ್ವನ್ ಪಾತ್ರವಾಗಿದೆ. ವಿಷ್ಣುವಿನಿಂದ ಬ್ರಹ್ಮಾ-ಸರಸ್ವತಿ ಮತ್ತೆ ಬ್ರಹ್ಮಾ-ಸರಸ್ವತಿಯಿಂದ ವಿಷ್ಣುವಾಗುತ್ತಾರೆ. ಇವರು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಇಡೀ ಚಕ್ರವು ಬುದ್ಧಿಯಲ್ಲಿ ಬಂದು ಬಿಡುತ್ತದೆ. ಶಾಸ್ತ್ರಗಳನ್ನು ಓದುವುದರಿಂದ ಯಾರೂ ತಿಳಿದುಕೊಳ್ಳುವುದೇ ಇಲ್ಲ. ಅವರಂತೂ ಕಲ್ಪದ ಆಯಸ್ಸನ್ನೇ ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ ಆಗ ಸ್ವಸ್ತಿಕ ಚಿತ್ರವು ಆಗಲು ಸಾಧ್ಯವಿಲ್ಲ. ವ್ಯಾಪಾರಿಗಳು ಲೆಕ್ಕವನ್ನು ಬರೆಯುವಾಗ ಅದರ ಮೇಲೆ ಸ್ವಸ್ತಿಕ ಚಿತ್ರವನ್ನು ಬಿಡಿಸುತ್ತಾರೆ, ಗಣೇಶನ ಪೂಜೆ ಮಾಡುತ್ತಾರೆ. ಇದಂತೂ ಬೇಹದ್ದಿನ ಲೆಕ್ಕವಾಗಿದೆ. ಸ್ವಸ್ತಿಕದಲ್ಲಿ ನಾಲ್ಕು ಭಾಗಗಳಿರುತ್ತವೆ. ಹೇಗೆ ಜಗನ್ನಾಥ ಪುರಿಯಲ್ಲಿ ಅನ್ನವನ್ನು ತಯಾರಿಸುತ್ತಾರೆ ಅದು ಬೆಂದ ನಂತರ ನಾಲ್ಕು ಭಾಗಗಳಾಗುತ್ತವೆ. ಅಲ್ಲಿ ಅನ್ನದ ನೈವೇದ್ಯವನ್ನೇ ಇಡುತ್ತಾರೆ ಏಕೆಂದರೆ ಅಲ್ಲಿ ಹೆಚ್ಚಿನದಾಗಿ ಅನ್ನವನ್ನೇ ತಿನ್ನುತ್ತಾರೆ. ಶ್ರೀನಾಥ ದ್ವಾರದಲ್ಲಿ ಅನ್ನವನ್ನು ತಯಾರಿಸುವುದಿಲ್ಲ, ಅಲ್ಲಂತೂ ಎಲ್ಲವೂ ಶುದ್ಧ ತುಪ್ಪದಿಂದ ಪಧಾರ್ಥಗಳನ್ನು ತಯಾರಿಸಲಾಗುತ್ತದೆ. ಭೋಜನವನ್ನು ತಯಾರಿಸುವಾಗಲೂ ಬಹಳ ಶುದ್ಧತೆಯಿಂದ ಬಾಯಿಗೆ ಬಟ್ಟೆ ಕಟ್ಟಿಕೊಂಡು ತಯಾರಿಸುತ್ತಾರೆ. ಪ್ರಸಾದವನ್ನು ಬಹಳ ನಿಷ್ಠೆಯಿಂದ ತೆಗೆದುಕೊಂಡು ಹೋಗುತ್ತಾರೆ. ಭೋಗವನ್ನಿಟ್ಟ ನಂತರ ಅದೆಲ್ಲವೂ ಅಲ್ಲಿನ ಮಾರ್ಗದರ್ಶಕರಿಗೆ ಸಿಗುತ್ತದೆ. ಅದನ್ನು ಅಂಗಡಿಯಲ್ಲಿ ಮಾರಾಟಕ್ಕಾಗಿ ಇಡುತ್ತಾರೆ. ಅಲ್ಲಿ ಬಹಳ ಬೇಡಿಕೆಯಿರುತ್ತದೆ. ಇದನ್ನು ಬ್ರಹ್ಮಾ ತಂದೆಯು ನೋಡಿದ್ದಾರೆ. ಈಗ ನೀವು ಮಕ್ಕಳಿಗೆ ಯಾರು ಓದಿಸುತ್ತಿದ್ದಾರೆ? ಅತೀ ಪ್ರಿಯ ತಂದೆಯು ಬಂದು ನಿಮ್ಮ ಸೇವಕನಾಗಿದ್ದಾರೆ, ನಿಮ್ಮ ಸೇವೆ ಮಾಡುತ್ತಿದ್ದಾರೆ. ಇಷ್ಟು ನಶೆಯೇರುತ್ತದೆಯೇ? ನಾವಾತ್ಮರಿಗೆ ತಂದೆಯು ಓದಿಸುತ್ತಾರೆ, ಆತ್ಮವೇ ಎಲ್ಲವನ್ನೂ ಮಾಡುತ್ತದೆಯಲ್ಲವೆ. ಮನುಷ್ಯರು ಆತ್ಮವು ನಿರ್ಲೇಪವೆಂದು ಹೇಳಿ ಬಿಡುತ್ತಾರೆ ಆದರೆ ನಿಮಗೆ ತಿಳಿದಿದೆ - ಆತ್ಮದಲ್ಲಿ 84 ಜನ್ಮಗಳ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ, ಅದಕ್ಕೆ ನಿರ್ಲೇಪವೆಂದು ಹೇಳುವುದು ರಾತ್ರಿ-ಹಗಲಿನಷ್ಟು ಅಂತರವಾಗಿ ಬಿಡುತ್ತದೆ. ಯಾರಾದರೂ ಚೆನ್ನಾಗಿ ಒಂದು-ಒಂದುವರೆ ತಿಂಗಳು ಇದನ್ನು ತಿಳಿದುಕೊಂಡಾಗ ಈ ಮಾತುಗಳು ಬುದ್ಧಿಯಲ್ಲಿ ಕುಳಿತುಕೊಳ್ಳುತ್ತವೆ. ದಿನ-ಪ್ರತಿದಿನ ಬಹಳಷ್ಟು ಅಂಶಗಳನ್ನು ತಿಳಿಸಲಾಗುತ್ತದೆ. ಇದು ಕಸ್ತೂರಿ ತರಹವಿದೆ. ಮಕ್ಕಳಿಗೆ ಯಾವಾಗ ಪೂರ್ಣ ನಿಶ್ಚಯ ಕುಳಿತುಕೊಳ್ಳುವುದೋ ಆಗ ತಿಳಿದುಕೊಳ್ಳುತ್ತಾರೆ - ಅವಶ್ಯವಾಗಿ ಪರಮಪಿತ ಪರಮಾತ್ಮನೇ ಬಂದು ದುರ್ಗತಿಯಿಂದ ಸದ್ಗತಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಈಗ ನಿಮ್ಮ ಮೇಲೆ ಬೃಹಸ್ಪತಿ ದೆಶೆಯಿದೆ. ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿದೆನು, ಈಗ ಮತ್ತೆ ರಾವಣನು ರಾಹುವಿನ ದೆಶೆಯನ್ನು ಕೂರಿಸಿದ್ದಾನೆ. ಈಗ ಮತ್ತೆ ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ ಅಂದಮೇಲೆ ತಮಗೆ ನಷ್ಟ ಮಾಡಿಕೊಳ್ಳಬಾರದು. ವ್ಯಾಪಾರಿಗಳು ತಮ್ಮ ಖಾತೆಯನ್ನು ಸದಾ ಸರಿಯಾಗಿಟ್ಟುಕೊಳ್ಳುತ್ತಾರೆ, ನಷ್ಟ ಮಾಡಿಕೊಳ್ಳುವವರಿಗೆ ಅನಾಡಿಗಳೆಂದು ಹೇಳಲಾಗುತ್ತದೆ. ಇದಂತೂ ಎಲ್ಲದಕ್ಕಿಂತ ದೊಡ್ಡ ವ್ಯಾಪಾರವಾಗಿದೆ. ಕೆಲವರೇ ವಿರಳ ವ್ಯಾಪಾರಿಗಳು ಈ ವ್ಯಾಪಾರ ಮಾಡುವರು. ಇದೇ ಅವಿನಾಶಿ ವ್ಯಾಪಾರವಾಗಿದೆ. ಮತ್ತೆಲ್ಲಾ ವ್ಯಾಪಾರಗಳು ಮಣ್ಣು ಪಾಲಾಗುತ್ತವೆ. ಈಗ ನಿಮ್ಮದು ಸತ್ಯ ವ್ಯಾಪಾರವಾಗುತ್ತಿದೆ. ತಂದೆಯು ಜ್ಞಾನ ಸಾಗರ, ಸೌಧಾಗರ, ರತ್ನಾಗರನಾಗಿದ್ದಾರೆ. ಪ್ರದರ್ಶನಿಯಲ್ಲಿ ಎಷ್ಟೊಂದು ಮಂದಿ ಬರುತ್ತಾರೆ! ಸೇವಾಕೇಂದ್ರಕ್ಕೆ ಕೆಲವರೇ ಬರುತ್ತಾರೆ. ಭಾರತವಂತೂ ಬಹಳ ವಿಸ್ತಾರವಾಗಿದೆಯಲ್ಲವೆ. ಎಲ್ಲಾ ಸ್ಥಾನಗಳಿಗೆ ನೀವು ಹೋಗಬೇಕಾಗಿದೆ. ನೀರಿನ ಗಂಗೆಯು ಇಡೀ ಭಾರತದಲ್ಲಿದೆಯಲ್ಲವೆ. ಇದನ್ನೂ ನೀವು ತಿಳಿಸಬೇಕಾಗಿದೆ. ಪತಿತ-ಪಾವನನು ಯಾವುದೇ ನೀರಿನ ಗಂಗೆಯಲ್ಲ, ನೀವು ಜ್ಞಾನ ಗಂಗೆಯರೇ ಹೋಗಬೇಕಾಗಿದೆ. ನಾಲ್ಕಾರು ಕಡೆ ಮೇಳ, ಪ್ರದರ್ಶನಿಗಳು ಆಗುತ್ತಿರುತ್ತವೆ. ದಿನ-ಪ್ರತಿದಿನ ಚಿತ್ರಗಳೂ ತಯಾರಾಗುತ್ತಿರುತ್ತವೆ. ನೋಡುತ್ತಿದ್ದಂತೆಯೇ ಅವರಿಗೆ ಆನಂದವಾಗುವಷ್ಟು ಶೋಭಾಯಮಾನವಾದ ಚಿತ್ರಗಳಿರಬೇಕು. ಇವರು ಸರಿಯಾಗಿ ತಿಳಿಸುತ್ತಾರೆ, ಈಗ ಲಕ್ಷ್ಮೀ-ನಾರಾಯಣರ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಎಂಬುದು ಅವರಿಗೆ ಅರ್ಥವಾಗಬೇಕು. ಏಣಿ ಚಿತ್ರವು ಬಹಳ ಸುಂದರವಾಗಿದೆ. ಈಗ ಬ್ರಾಹ್ಮಣ ಧರ್ಮದ ಸ್ಥಾಪನೆಯಾಗುತ್ತಿದೆ, ಈ ಬ್ರಾಹ್ಮಣರೇ ಮತ್ತೆ ದೇವತೆಗಳಾಗುತ್ತಾರೆ. ನೀವೀಗ ಪುರುಷಾರ್ಥ ಮಾಡುತ್ತಿದ್ದೀರಿ ಅಂದಾಗ ಹೃದಯದಲ್ಲಿ ತಮ್ಮೊಂದಿಗೆ ಕೇಳಿಕೊಳ್ಳುತ್ತಾ ಇರಿ - ನನ್ನಲ್ಲಿ ಯಾವುದೇ ಚಿಕ್ಕ ಪುಟ್ಟ ಮುಳ್ಳಂತೂ ಇಲ್ಲವೆ? ಕಾಮದ ಮುಳ್ಳಂತೂ ಇಲ್ಲವೇ? ಕ್ರೋಧದ ಚಿಕ್ಕ ಮುಳ್ಳು ಸಹ ಬಹಳ ಕೆಟ್ಟದ್ದಾಗಿದೆ? ದೇವತೆಗಳು ಎಂದೂ ಕ್ರೋಧಿಗಳಾಗುವುದಿಲ್ಲ. ಶಂಕರನು ಕಣ್ಣು ತೆರೆದ ಕೂಡಲೇ ವಿನಾಶವಾಗುತ್ತದೆಯೆಂದು ತೋರಿಸುತ್ತಾರೆ. ಇದು ಶಂಕರನ ಮೇಲೆ ಒಂದು ಕಳಂಕವನ್ನು ಹೊರಿಸಿದ್ದಾರೆ. ವಿನಾಶವಂತೂ ಆಗಲೇಬೇಕಾಗಿದೆ. ಸೂಕ್ಷ್ಮವತನದಲ್ಲಿ ಶಂಕರನಿಗೆ ಯಾವುದೇ ಸರ್ಪ ಇತ್ಯಾದಿಗಳು ಇರುವುದಿಲ್ಲ. ಸೂಕ್ಷ್ಮವತನ ಹಾಗೂ ಮೂಲವತನದಲ್ಲಿ ಯಾವುದೇ ತೋಟ, ಉದ್ಯಾನವನ, ಸರ್ಪ ಇತ್ಯಾದಿಗಳೇನೂ ಇರುವುದಿಲ್ಲ. ಇವೆಲ್ಲವೂ ಇಲ್ಲಿರುತ್ತವೆ. ಸ್ವರ್ಗವು ಇಲ್ಲಿಯೇ ಆಗುತ್ತದೆ. ಈ ಸಮಯದಲ್ಲಿ ಮನುಷ್ಯರು ಮುಳ್ಳುಗಳಂತಿದ್ದಾರೆ ಆದ್ದರಿಂದ ಇದಕ್ಕೆ ಮುಳ್ಳಿನ ಕಾಡೆಂದು ಹೇಳಲಾಗುತ್ತದೆ. ಸತ್ಯಯುಗವು ಹೂದೋಟವಾಗಿದೆ. ನೀವು ನೋಡುತ್ತೀರಿ, ತಂದೆಯು ಎಂತಹ ಹೂದೋಟವನ್ನಾಗಿ ಮಾಡುತ್ತಾರೆ. ಬಹಳ ಸುಂದರವಾಗಿ ತಯಾರು ಮಾಡುತ್ತಾರೆ. ಎಲ್ಲರನ್ನೂ ಸುಂದರ (ಪಾವನ) ರನ್ನಾಗಿ ಮಾಡುತ್ತಾರೆ. ತಾವಂತು ಸದಾ ಪಾವನನಾಗಿದ್ದಾರೆ. ಎಲ್ಲಾ ಪ್ರಿಯತಮೆಯರನ್ನು ಅಥವಾ ಮಕ್ಕಳನ್ನು ಸುಂದರ ಅರ್ಥಾತ್ ಪಾವನರನ್ನಾಗಿ ಮಾಡುತ್ತಾರೆ. ರಾವಣನು ಕಪ್ಪಾಗಿ ಮಾಡಿ ಬಿಟ್ಟಿದ್ದಾನೆ. ಈಗ ನೀವು ಮಕ್ಕಳಿಗೆ ಖುಷಿಯಾಗಬೇಕು - ನಮ್ಮ ಮೇಲೆ ಬೃಹಸ್ಪತಿ ದೆಶೆ ಕುಳಿತಿದೆ. ಅರ್ಧ ಸಮಯ ಸುಖ, ಅರ್ಧ ಸಮಯ ದುಃಖವಿದ್ದರೆ ಅದರಿಂದ ಲಾಭವಾದರೂ ಏನು? ಆದ್ದರಿಂದ ನಿಮಗೆ 3/4 ಭಾಗ ಸುಖ, 1/4 ದುಃಖವಿದೆ, ಇದು ನಾಟಕದಲ್ಲಿ ಮಾಡಲ್ಪಟ್ಟಿದೆ. ನಾಟಕವನ್ನು ಹೀಗೇಕೆ ಮಾಡಿದ್ದಾರೆಂದು ಅನೇಕರು ಕೇಳುತ್ತಾರೆ. ಅರೆ! ಇದು ಅನಾದಿಯಲ್ಲವೆ, ಏಕಾಯಿತು ಎಂಬ ಪ್ರಶ್ನೆ ಬರುವಂತಿಲ್ಲ. ಈ ಅನಾದಿ-ಅವಿನಾಶಿ ನಾಟಕವು ಮಾಡಲ್ಪಟ್ಟಿದೆ. ಏನು ಮಾಡಲ್ಪಟ್ಟಿದೆಯೋ ಅದೇ ನಡೆಯುತ್ತಿದೆ. ಯಾರಿಗೂ ಮೋಕ್ಷ ಸಿಗಲು ಸಾಧ್ಯವಿಲ್ಲ. ಈ ಅನಾದಿ ಸೃಷ್ಟಿಯು ನಡೆದುಬರುತ್ತಿದೆ, ನಡೆಯುತ್ತಲೇ ಇರುತ್ತದೆ. ಪ್ರಳಯವಾಗುವುದಿಲ್ಲ.

ತಂದೆಯು ಹೊಸ ಪ್ರಪಂಚವನ್ನಾಗಿ ಮಾಡುತ್ತಾರೆ ಆದರೆ ಇದರಲ್ಲಿ ಎಷ್ಟೊಂದು ಪರಿಶ್ರಮವಿದೆ! ಯಾವಾಗ ಮನುಷ್ಯರು ಪತಿತ, ದುಃಖಿಯಾಗುವರೋ ಆಗ ಕರೆಯುತ್ತಾರೆ. ತಂದೆಯು ಬಂದು ಎಲ್ಲರ ಕಾಯವನ್ನು ಕಲ್ಪತರುವನ್ನಾಗಿ ಮಾಡುತ್ತಾರೆ ಅದರಿಂದ ಅರ್ಧಕಲ್ಪ ನಿಮಗೆಂದೂ ಅಕಾಲ ಮೃತ್ಯುವಾಗುವುದಿಲ್ಲ. ನೀವು ಕಾಲದ ಮೇಲೆ ಜಯ ಗಳಿಸುತ್ತೀರಿ ಅಂದಾಗ ಮಕ್ಕಳು ಬಹಳ ಪುರುಷಾರ್ಥ ಮಾಡಬೇಕು. ಎಷ್ಟು ಶ್ರೇಷ್ಠ ಪದವಿಯನ್ನು ಪಡೆಯುವಿರೋ ಅಷ್ಟು ಒಳ್ಳೆಯದು. ಪುರುಷಾರ್ಥವನ್ನಂತೂ ಪ್ರತಿಯೊಬ್ಬರೂ ಸಂಪಾದನೆಗಾಗಿ ಮಾಡುತ್ತಾರೆ. ಸೌಧೆ ಮಾರುವವರೂ ಸಹ ನಾವು ಹೆಚ್ಚು ಸಂಪಾದನೆ ಮಾಡಬೇಕೆಂದು ಹೇಳುತ್ತಾರೆ, ಕೆಲವರು ಮೋಸದಿಂದಲೂ ಸಂಪಾದಿಸುತ್ತಾರೆ. ಹಣದ ಮೇಲೇ ಆಪತ್ತಿದೆ. ಸತ್ಯಯುಗದಲ್ಲಂತೂ ನಿಮ್ಮ ಹಣವನ್ನು ಯಾರೂ ಲೂಟಿ ಮಾಡಲು ಸಾಧ್ಯವಿಲ್ಲ. ನೋಡಿ, ಈ ಪ್ರಪಂಚದಲ್ಲಿ ಏನೇನಾಗುತ್ತಿದೆ, ಅಲ್ಲಿ ಇಂತಹ ಯಾವುದೇ ದುಃಖದ ಮಾತಿರುವುದಿಲ್ಲ. ಈಗ ನೀವು ತಂದೆಯಿಂದ ಇಷ್ಟೊಂದು ಆಸ್ತಿಯನ್ನು ಪಡೆಯುತ್ತೀರಿ ಅಂದಮೇಲೆ ತಮ್ಮ ಪರಿಶೀಲನೆ ಮಾಡಿಕೊಳ್ಳಿ - ನಾವು ಸ್ವರ್ಗದಲ್ಲಿ ಹೋಗಲು ಯೋಗ್ಯರಿದ್ದೇವೆಯೇ? (ನಾರದನ ಉದಾಹರಣೆಯಂತೆ) ಮನುಷ್ಯರು ಅನೇಕ ತೀರ್ಥ ಯಾತ್ರೆಯನ್ನು ಮಾಡುತ್ತಿರುತ್ತಾರೆ, ಸಿಗುವುದೇನೂ ಇಲ್ಲ. ನಾಲ್ಕು ಧಾಮಗಳನ್ನು ಸುತ್ತಿದೆವು ಆದರೂ ಭಗವಂತನಿಂದ ದೂರವೇ ಉಳಿದೆವು ಎಂದು ಗೀತೆಯೂ ಇದೆಯಲ್ಲವೆ. ಈಗ ತಂದೆಯು ನಿಮಗೆ ಇಷ್ಟು ಒಳ್ಳೆಯ ಯಾತ್ರೆಯನ್ನು ಕಲಿಸುತ್ತಾರೆ. ಇದರಲ್ಲಿ ಯಾವುದೇ ಕಷ್ಟವಿಲ್ಲ. ಕೇವಲ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಬಹಳ ಒಳ್ಳೆಯ ಯುಕ್ತಿಯನ್ನು ತಿಳಿಸುತ್ತೇನೆ, ಮಕ್ಕಳು ಕೇಳಿಸಿಕೊಳ್ಳುತ್ತೀರಿ. ಇದು ನಾನು ಲೋನ್ ಆಗಿ ತೆಗೆದುಕೊಂಡಿರುವ ಶರೀರವಾಗಿದೆ. ಈ ತಂದೆಗೆ ಎಷ್ಟೊಂದು ಖುಷಿಯಿದೆ ನನ್ನ ಶರೀರವನ್ನು ತಂದೆಗೆ ಲೋನ್ ಆಗಿ ಕೊಟ್ಟಿದ್ದೇನೆ, ತಂದೆಯು ನನ್ನನ್ನು ವಿಶ್ವದ ಮಾಲೀಕನನ್ನಾಗಿ ಮಾಡುತ್ತಾರೆ. ಭಾಗ್ಯಶಾಲಿ ರಥವೆಂದು ಹೆಸರೂ ಇದೆ. ಈಗ ನೀವು ಮಕ್ಕಳು ರಾಮಪುರಿಯಲ್ಲಿ ಹೋಗುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೀರಿ ಅಂದಮೇಲೆ ಪೂರ್ಣ ಪುರುಷಾರ್ಥದಲ್ಲಿ ತೊಡಗಬೇಕು. ಮುಳ್ಳಾಗುವುದೇಕೆ? ನೀವು ಬ್ರಾಹ್ಮಣ-ಬ್ರಾಹ್ಮಿಣಿಯರಾಗಿದ್ದೀರಿ, ಎಲ್ಲರ ಆಧಾರವು ಮುರುಳಿಯ ಮೇಲಿದೆ. ನಿಮಗೆ ಮುರುಳಿ ಸಿಗಲಿಲ್ಲವೆಂದರೆ ನೀವು ಶ್ರೀಮತವನ್ನು ಎಲ್ಲಿಂದ ತರುತ್ತೀರಿ! ಕೇವಲ ಬ್ರಾಹ್ಮಿಣಿಯೇ ಮುರುಳಿಯನ್ನು ತಿಳಿಸಬೇಕೆಂದಲ್ಲ, ಯಾರು ಬೇಕಾದರೂ ಮುರುಳಿಯನ್ನು ತಿಳಿಸಬಹುದು ಆದ್ದರಿಂದ ಇಂದು ನೀವು ತಿಳಿಸಿ ಎಂದು ಹೇಳಬೇಕು. ಈಗ ತಿಳಿಸುವುದಕ್ಕಾಗಿಯೂ ಪ್ರದರ್ಶನಿಯ ಚಿತ್ರಗಳೂ ಬಹಳ ಚೆನ್ನಾಗಿವೆ. ಈ ಮುಖ್ಯ ಚಿತ್ರಗಳನ್ನು ತಮ್ಮ ಅಂಗಡಿಯಲ್ಲಿಡಿ, ಇದರಿಂದ ಅನೇಕರ ಕಲ್ಯಾಣವಾಗುವುದು. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ನೀವು ಬಂದರೆ ನಾವು ತಿಳಿಸುತ್ತೇವೆಂದು ಹೇಳಿರಿ. ಯಾರದೇ ಕಲ್ಯಾಣ ಮಾಡುವುದರಲ್ಲಿ ಸ್ವಲ್ಪ ಸಮಯ ಕಳೆದರೂ ಪರವಾಗಿಲ್ಲ, ಆ ವ್ಯಾಪಾರದ ಜೊತೆ ಈ ವ್ಯಾಪಾರವನ್ನು ಮಾಡಿಸಿ. ಇದು ತಂದೆಯ ಅವಿನಾಶಿ ಜ್ಞಾನ ರತ್ನಗಳ ಅಂಗಡಿಯಾಗಿದೆ. ಏಣಿ ಚಿತ್ರ ಮತ್ತು ಗೀತೆಯ ಭಗವಂತ ಶಿವನ ಚಿತ್ರವು ನಂಬರ್ವನ್ ಆಗಿದೆ. ಭಾರತದಲ್ಲಿ ಶಿವ ಭಗವಂತನು ಬಂದಿದ್ದರು, ಅವರದೇ ಜಯಂತಿಯನ್ನಾಚರಿಸುತ್ತಾರೆ. ಈಗ ಪುನಃ ಆ ತಂದೆಯು ಬಂದಿದ್ದಾರೆ, ಯಜ್ಞವನ್ನೂ ರಚಿಸಿದ್ದಾರೆ. ನೀವು ಮಕ್ಕಳಿಗೆ ರಾಜಯೋಗದ ಜ್ಞಾನವನ್ನು ತಿಳಿಸುತ್ತಿದ್ದಾರೆ. ತಂದೆಯೇ ಬಂದು ರಾಜರಿಗೂ ರಾಜರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಸೂರ್ಯವಂಶಿ ರಾಜ-ರಾಣಿಯನ್ನಾಗಿ ಮಾಡುತ್ತೇನೆ, ಅವರಿಗೆ ವಿಕಾರಿ ರಾಜರೂ ಸಹ ನಮಸ್ಕಾರ ಮಾಡುತ್ತಾರೆ. ಆದ್ದರಿಂದ ಸ್ವರ್ಗದ ಮಹಾರಾಜ-ಮಹಾರಾಣಿಯಾಗುವ ಪೂರ್ಣ ಪುರುಷಾರ್ಥ ಮಾಡಬೇಕು. ತಂದೆಯು ಯಾವುದೇ ಮನೆ ಇತ್ಯಾದಿ ಕಟ್ಟುವುದನ್ನು ನಿರಾಕರಿಸುವುದಿಲ್ಲ. ಭಲೆ ಕಟ್ಟಿಸಿ, ಹಣವಂತೂ ಮಣ್ಣು ಪಾಲಾಗುತ್ತದೆ ಅಂದಮೇಲೆ ಇದರಿಂದ ಮನೆಯನ್ನು ಕಟ್ಟಿಸಿ ಆರಾಮವಾಗಿರಿ. ಹಣವನ್ನು ಕೆಲಸದಲ್ಲಿ ತೊಡಗಿಸಬೇಕು, ಮನೆಗಳನ್ನೂ ಕಟ್ಟಿಸಿ, ತಿನ್ನುವುದಕ್ಕಾಗಿಯೂ ಇಟ್ಟುಕೊಳ್ಳಿ. ಮನುಷ್ಯರು ದಾನ-ಪುಣ್ಯವನ್ನು ಮಾಡುತ್ತಾರೆ. ಹೇಗೆ ಕಾಶ್ಮೀರದ ರಾಜನು ತನ್ನ ಸಂಪತ್ತನ್ನೆಲ್ಲಾ ಆರ್ಯ ಸಮಾಜಿಗಳಿಗೆ ದಾನ ಕೊಟ್ಟು ಬಿಟ್ಟರು. ಎಲ್ಲರೂ ತಮ್ಮ ಧರ್ಮ, ಜಾತಿಗಾಗಿ ಮಾಡುತ್ತಾರಲ್ಲವೆ. ಇಲ್ಲಂತೂ ಆ ಮಾತಿಲ್ಲ. ಎಲ್ಲರೂ ಮಕ್ಕಳಾಗಿದ್ದೀರಿ, ಜಾತಿ ಮೊದಲಾದುವುಗಳ ಮಾತಿಲ್ಲ. ಅದೆಲ್ಲವೂ ದೇಹದ ಜಾತಿಗಳಾಗಿವೆ. ನಾನಂತೂ ನೀವಾತ್ಮರಿಗೆ ಪವಿತ್ರರನ್ನಾಗಿ ಮಾಡಿ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತೇನೆ. ಡ್ರಾಮಾನುಸಾರ ಭಾರತವಾಸಿಗಳೇ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ. ಈಗ ನೀವು ಮಕ್ಕಳಿಗೆ ತಿಳಿದಿದೆ ನಮ್ಮ ಮೇಲೆ ಬೃಹಸ್ಪತಿ ದೆಶೆಯು ಕುಳಿತಿದೆ. ಶ್ರೀಮತವು ಹೇಳುತ್ತದೆ - ನನ್ನೊಬ್ಬನನ್ನೇ ನೆನಪು ಮಾಡಿ. ಮತ್ತ್ಯಾವುದೇ ಮಾತಿಲ್ಲ. ಭಕ್ತಿಮಾರ್ಗದಲ್ಲಿ ವ್ಯಾಪಾರಿಗಳು ಅಲ್ಪಸ್ವಲ್ಪ ದಾನ ಧರ್ಮಕ್ಕಾಗಿ ತೆಗೆಯುತ್ತಾರೆ. ಅದರ ಫಲವು ಮುಂದಿನ ಜನ್ಮದಲ್ಲಿ ಅಲ್ಪಕಾಲಕ್ಕಾಗಿ ಸಿಗುತ್ತದೆ. ಈಗಂತೂ ನಾನು ಡೈರೆಕ್ಟ್ ಬಂದಿದ್ದೇನೆ ಅಂದಮೇಲೆ ನೀವು ಈ ಕಾರ್ಯದಲ್ಲಿ ತೊಡಗಿಸಿ, ನನಗಂತೂ ಏನೂ ಬೇಕಿಲ್ಲ. ಶಿವ ತಂದೆಯು ತಮಗಾಗಿ ಯಾವುದೇ ಮನೆ ಇತ್ಯಾದಿಗಳನ್ನು ಕಟ್ಟಿಸಬೇಕಾಗಿಲ್ಲ, ಇದೆಲ್ಲವೂ ನೀವು ಬ್ರಾಹ್ಮಣರದಾಗಿದೆ. ಬಡವರು ಸಾಹುಕಾರರು ಎಲ್ಲರೂ ಒಟ್ಟಿಗೆ ಇರುತ್ತೀರಿ. ಭಗವಂತನ ಬಳಿಯೂ ಸಮ ದೃಷ್ಟಿಯಿಲ್ಲ. ಕೆಲವರನ್ನು ಮಹಲಿನಲ್ಲಿ, ಕೆಲವರನ್ನು ಗುಡಿಸಿಲಿನಲ್ಲಿ ಇಡುತ್ತಾರೆಂದು ಕೆಲವರು ಮುನಿಸಿಕೊಳ್ಳುತ್ತಾರೆ. ಶಿವ ತಂದೆಯನ್ನೇ ಮರೆತು ಹೋಗುತ್ತಾರೆ. ಶಿವ ತಂದೆಯ ನೆನಪಿನಲ್ಲಿದ್ದಾಗ ಈ ರೀತಿ ಎಂದೂ ಮಾತನಾಡುವುದಿಲ್ಲ. ಕೇಳಬೇಕು - ಇವರ ಮನೆಯಲ್ಲಿ ಬಹಳ ಆರಾಮದಿಂದ ಇರುವ ಅಭ್ಯಾಸವಿದೆಯೆಂದರೆ ಅಂತಹವರನ್ನು ನೋಡಿ ಪ್ರಬಂಧ ಮಾಡಬೇಕಾಗಿದೆ. ಆದ್ದರಿಂದ ಹೇಳಲಾಗುತ್ತದೆ, ಎಲ್ಲರಿಗೆ ಉಪಚಾರ ಮಾಡಿ. ಯಾವುದೇ ವಸ್ತುವಿಲ್ಲವೆಂದರೆ ಇಲ್ಲಿ ಸಿಗುತ್ತದೆ, ತಂದೆಗಂತೂ ಮಕ್ಕಳಮೇಲೆ ಪ್ರೀತಿಯಿರುತ್ತದೆ. ಇಷ್ಟು ಪ್ರೀತಿಯು ಮತ್ತ್ಯಾರಿಗೂ ಇರಲು ಸಾಧ್ಯವಿಲ್ಲ. ಪುರುಷಾರ್ಥ ಮಾಡಿ ಅನ್ಯರಿಗಾಗಿಯೂ ಯುಕ್ತಿ ರಚಿಸಿ ಎಂದು ಮಕ್ಕಳಿಗೆ ಎಷ್ಟೊಂದು ತಿಳಿಸುತ್ತಾರೆ. ಇದರಲ್ಲಿ ಮೂರು ಹೆಜ್ಜೆಗಳಷ್ಟು ಭೂಮಿಯು ಬೇಕು. ಅದರಲ್ಲಿ ಕನ್ಯೆಯರು ಜ್ಞಾನವನ್ನು ತಿಳಿಸುತ್ತಿರಲಿ. ಯಾವುದೇ ದೊಡ್ಡ ವ್ಯಕ್ತಿಯ ಹಾಲ್ ಇದ್ದರೆ ನಾವು ಕೇವಲ ಚಿತ್ರಗಳನ್ನಿಟ್ಟುಕೊಳ್ಳುತ್ತೇವೆ. ಬೆಳಗ್ಗೆ-ಸಂಜೆ ಒಂದೆರಡು ಗಂಟೆಗಳ ಕಾಲ ತರಗತಿಯನ್ನು ನಡೆಸಿ ಹೊರಟು ಹೋಗುತ್ತೇವೆ. ಖರ್ಚೆಲ್ಲವೂ ನಮ್ಮದು, ಹೆಸರು ನಿಮ್ಮದಾಗುವುದು. ಅನೇಕರು ಬಂದು ಕವಡೆಯಿಂದ ವಜ್ರ ಸಮಾನರಾಗುತ್ತಾರೆ ಎಂದು ತಿಳಿಸಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಒಳಗೆ ಏನೆಲ್ಲವೂ ಮುಳ್ಳುಗಳಿವೆಯೋ ಅದನ್ನು ಪರಿಶೀಲನೆ ಮಾಡಿ ತೆಗೆಯಬೇಕಾಗಿದೆ. ರಾಮ ಪುರಿಯಲ್ಲಿ ಹೋಗುವ ಪುರುಷಾರ್ಥ ಮಾಡಬೇಕಾಗಿದೆ.

2. ಅವಿನಾಶಿ ಜ್ಞಾನ ರತ್ನಗಳ ವ್ಯಾಪಾರ ಮಾಡಿ ಅನ್ಯರ ಕಲ್ಯಾಣ ಮಾಡುವುದರಲ್ಲಿ ಸಮಯ ಕೊಡಬೇಕಾಗಿದೆ. ಪಾವನರಾಗಬೇಕು ಮತ್ತು ಮಾಡಬೇಕಾಗಿದೆ.

ವರದಾನ:
ಫುಲ್ಸ್ಟಾಪ್ ಮುಖಾಂತರ ಶ್ರೇಷ್ಠ ಸ್ಥಿತಿರೂಪಿ ಮೆಡಲ್ ಪ್ರಾಪ್ತಿ ಮಾಡಿಕೊಳ್ಳುವಂತಹ ಮಹಾವೀರ ಭವ.

ಈ ಅನಾದಿ ಡ್ರಾಮದಲ್ಲಿ ಆತ್ಮೀಯ ಸೇನೆಯ ಸೇನಾನಿಗಳಿಗೆ ಯಾವುದೇ ಮೆಡಲ್ ಕೊಡುವುದಿಲ್ಲ. ಆದರೆ ಡ್ರಾಮಾನುಸಾರ ಅವರಿಗೆ ಶ್ರೇಷ್ಠ ಸ್ಥಿತಿರೂಪಿ ಮೆಡಲ್ ಸ್ವತಃ ಪ್ರಾಪ್ತಿಯಾಗಿ ಬಿಡುವುದು. ಈ ಮೆಡಲ್ ಅವರಿಗೇ ಪ್ರಾಪ್ತಿಯಾಗುತ್ತೆ, ಯಾರು ಪ್ರತಿ ಆತ್ಮಗಳ ಪಾತ್ರವನ್ನು ಸಾಕ್ಷಿಯಾಗಿ ನೋಡುತ್ತಾ ಫುಲ್ಸ್ಟಾಪ್ ನ ಬಿಂದುವನ್ನು ಸಹಜವಾಗಿ ಹಾಕುತ್ತಾರೆ. ಅಂತಹ ಆತ್ಮಗಳ ಬುನಾದಿ ಅನುಭವದ ಆಧಾರದ ಮೇಲೆ ಆಗುತ್ತದೆ. ಆದ್ದರಿಂದ ಯಾವುದೇ ಸಮಸ್ಯಾರೂಪಿ ಗೋಡೆ ಅವರನ್ನು ತಡೆಯಲು ಸಾಧ್ಯವಿಲ್ಲ.

ಸ್ಲೋಗನ್:
ಎಲ್ಲಾ ಪರಿಸ್ಥಿತಿರೂಪಿ ಬೆಟ್ಟವನ್ನು ಪಾರು ಮಾಡಿ ತನ್ನ ಗುರಿಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಹಾರುವ ಪಕ್ಷಿಯಾಗಿ.