08.03.20    Avyakt Bapdada     Kannada Murli     04.12.85     Om Shanti     Madhuban


ಸಂಕಲ್ಪದ ಭಾಷೆ - ಸರ್ವಶ್ರೇಷ್ಠ ಭಾಷೆ


ಇಂದು ಬಾಪ್ದಾದಾರವರ ಮುಂದೆ ಡಬಲ್ ರೂಪದಲ್ಲಿ ಡಬಲ್ ಸಭೆಯಾಗಿದೆ. ಎರಡೂ ಸ್ನೇಹಿ ಮಕ್ಕಳ ಸಭೆಯಾಗಿದೆ. ಒಂದಿದೆ - ಸಾಕಾರ ರೂಪವಿರುವ ಮಕ್ಕಳ ಸಭೆ. ಇನ್ನೊಂದಿದೆ - ಆಕಾರಿ ಸ್ನೇಹಿ ಸ್ವರೂಪ ಮಕ್ಕಳ ಸಭೆ. ಸ್ನೇಹ ಸಾಗರ ತಂದೆಯೊಂದಿಗೆ ಮಿಲನವನ್ನಾಚರಿಸುವುದಕ್ಕಾಗಿ ನಾಲ್ಕೂ ಕಡೆಯ ಆಕಾರ ರೂಪವುಳ್ಳ ಮಕ್ಕಳು, ತನ್ನ ಸ್ನೇಹವನ್ನು ಬಾಪ್ದಾದಾರವರ ಮುಂದೆ ಪ್ರತ್ಯಕ್ಷಗೊಳಿಸುತ್ತಿದ್ದಾರೆ. ಬಾಪ್ದಾದಾರವರು ಎಲ್ಲಾ ಮಕ್ಕಳ ಸ್ನೇಹದ ಸಂಕಲ್ಪ, ಹೃದಯದ ಭಿನ್ನ-ಭಿನ್ನ ಉಮ್ಮಂಗ-ಉತ್ಸಾಹದ ಸಂಕಲ್ಪ, ಹೃದಯದ ಭಿನ್ನ-ಭಿನ್ನ ಭಾವನೆಗಳ ಜೊತೆ ಜೊತೆಗೆ ಸ್ನೇಹದ ಸಂಬಂಧದ ಅಧಿಕಾರದಿಂದ ಅಧಿಕಾರ ರೂಪದ ಮಧುರಾತಿ ಮಧುರ ಮಾತುಗಳನ್ನು ಕೇಳುತ್ತಿದ್ದಾರೆ. ಪ್ರತಿಯೊಂದು ಮಗುವು ತನ್ನ ಹೃದಯದ ಕ್ಷೇಮ ಸಮಾಚಾರ, ತಮ್ಮ ಭಿನ್ನ-ಭಿನ್ನ ಪ್ರವೃತ್ತಿಗಳ ಪರಿಸ್ಥಿತಿಗಳ ಕ್ಷೇಮ ಸಮಾಚಾರ, ಸೇವೆಯ ಸಮಾಚಾರಗಳ ಕ್ಷೇಮ ಸಮಾಚಾರ, ನಯನಗಳ ಭಾಷೆಯಿಂದ, ಶ್ರೇಷ್ಠ ಸ್ನೇಹದ ಸಂಕಲ್ಪಗಳ ಭಾಷೆಯಿಂದ ತಂದೆಯ ಮುಂದೆ ಸ್ಪಷ್ಟ ಮಾಡುತ್ತಿದ್ದಾರೆ. ಬಾಪ್ದಾದಾರವರು ಎಲ್ಲಾ ಮಕ್ಕಳ ಆತ್ಮಿಕ ವಾರ್ತಾಲಾಪವನ್ನು ಮೂರು ರೂಪಗಳಿಂದ ಕೇಳಿಸಿಕೊಳ್ಳುತ್ತಿದ್ದಾರೆ. ಒಂದು ನಯನಗಳ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ, 2. ಭಾವನೆಯ ಭಾಷೆಯಲ್ಲಿ, 3. ಸಂಕಲ್ಪದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಮುಖದ ಭಾಷೆಯಂತು ಸಾಮಾನ್ಯವಾದ ಭಾಷೆಯಾಗಿದೆ. ಆದರೆ ಈ ಮೂರು ಪ್ರಕಾರದ ಭಾಷೆಯು ಆತ್ಮಿಕ ಯೋಗಿ ಜೀವನದ ಭಾಷೆಯಾಗಿದೆ. ಅದನ್ನು ಆತ್ಮಿಕ ಮಕ್ಕಳು ಮತ್ತು ಆತ್ಮಿಕ ತಂದೆಯಷ್ಟೇ ತಿಳಿದಿದ್ದಾರೆ ಮತ್ತು ಅನುಭವ ಮಾಡುತ್ತಾರೆ. ಎಷ್ಟೆಷ್ಟು ಅಂತರ್ಮುಖಿಯಾಗಿದ್ದು ಮಧುರ ಶಾಂತಿಯ ಸ್ವರೂಪದಲ್ಲಿ ಸ್ಥಿತರಾಗುತ್ತಾ ಹೋಗುತ್ತಾರೆ, ಅಷ್ಟು ಈ ಮೂರೂ ಭಾಷೆಗಳ ಮೂಲಕ ಸರ್ವ ಆತ್ಮರಿಗೆ ಅನುಭವವನ್ನು ಮಾಡಿಸುತ್ತಾರೆ. ಈ ಅಲೌಕಿಕ ಭಾಷೆಗಳು ಎಷ್ಟೊಂದು ಶಕ್ತಿಶಾಲಿಯಾಗಿದೆ. ಮುಖದ ಭಾಷೆಯನ್ನು ಕೇಳಿ ಮತ್ತು ಹೇಳುತ್ತಾ ಮೆಜಾರಿಟಿಯಲ್ಲಿ ಸುಸ್ತಾಗಿ ಬಿಟ್ಟಿದ್ದಾರೆ. ಮುಖದ ಭಾಷೆಯಲ್ಲಿ ಯಾವುದೇ ಮಾತನ್ನು ಸ್ಪಷ್ಟ ಮಾಡುವುದರಲ್ಲಿಯೂ ಸಮಯ ಹಿಡಿಸುತ್ತದೆ. ಆದರೆ ನಯನಗಳ ಭಾಷೆಯು ಸೂಚನೆ ಕೊಡುವ ಭಾಷೆಯಾಗಿದೆ. ಮನಸ್ಸಿನ ಭಾವನೆಯ ಭಾಷೆಯು ಚಹರೆಯ ಮೂಲಕ ಭಾವ ರೂಪದಲ್ಲಿ ಪ್ರಸಿದ್ಧವಾಗುತ್ತದೆ. ಚಹರೆಯ ಭಾವವು ಮನಸ್ಸಿನ ಭಾವನೆಯನ್ನು ಸಿದ್ಧಗೊಳಿಸುತ್ತದೆ. ಹೇಗೆ ಯಾರೇ ಯಾರ ಮುಂದೆಯೇ ಹೋಗುತ್ತಾರೆ, ಸ್ನೇಹದಿಂದ ಹೋಗುತ್ತಾರೆಯೋ ಅಥವಾ ಶತ್ರುತ್ವದಿಂದ ಹೋಗುತ್ತಾರೆಯೋ ಅಥವಾ ಯಾವುದೇ ಸ್ವಾರ್ಥದಿಂದ ಹೋಗುತ್ತಾರೆಂದರೂ, ಅವರ ಮನಸ್ಸಿನ ಭಾವಗಳು ಚಹರೆಯಿಂದ ಕಂಡುಬರುತ್ತದೆ. ಯಾರೇ ಯಾವುದೇ ಭಾವನೆಯಿಂದ ಬರುತ್ತಾರೆ, ಅವರ ಚಲನೆ-ವಲನೆಯು ಮಾತನಾಡುತ್ತದೆ. ಅಂದಮೇಲೆ ಭಾವನೆಯ ಭಾಷೆಯು ಚಹರೆಯ ಭಾವದಿಂದ ತಿಳಿದುಕೊಳ್ಳಬಹುದು, ಮಾತನಾಡಲೂಬಹುದು. ಅದೇರೀತಿ ಸಂಕಲ್ಪದ ಭಾಷೆ - ಇದೂ ಸಹ ಬಹಳ ಶ್ರೇಷ್ಠವಾದ ಭಾಷೆಯಾಗಿದೆ. ಯಾರೆಷ್ಟೇ ದೂರವಿರಬಹುದು, ಯಾವುದೇ ಸಾಧನಗಳಿಲ್ಲದಿರಬಹುದು ಆದರೆ ಸಂಕಲ್ಪದ ಭಾಷೆಯ ಮೂಲಕ ಯಾರಿಗಾದರೂ ಸಂದೇಶವನ್ನು ಕೊಡಬಹುದು. ಅಂತ್ಯದಲ್ಲಿ ಇದೇ ಸಂಕಲ್ಪದ ಭಾಷೆಯು ಕೆಲಸಕ್ಕೆ ಬರುತ್ತದೆ. ವಿಜ್ಞಾನದ ಸಾಧನಗಳು ಯಾವಾಗ ಫೇಲ್ ಆಗಿ ಬಿಡುತ್ತದೆಯೋ ಆಗ ಈ ಶಾಂತಿಯ ಸಾಧನವು ಕೆಲಸಕ್ಕೆ ಬರುತ್ತದೆ. ಆದರೆ ಯಾವುದೇ ಸಂಬಂಧವನ್ನು ಜೋಡಿಸುವುದಕ್ಕಾಗಿ ಸದಾ ಲೈನ್ ಕ್ಲಿಯರ್ ಆಗಿರಬೇಕು. ಎಷ್ಟೆಷ್ಟು ಒಬ್ಬ ತಂದೆ ಮತ್ತು ಅವರ ಮೂಲಕವೇ ತಿಳಿಸಿರುವ ಜ್ಞಾನದಲ್ಲಿ ಅಥವಾ ಅದೇ ಜ್ಞಾನದ ಮೂಲಕ ಸೇವೆಯಲ್ಲಿ ಸದಾ ವ್ಯಸ್ತರಾಗಿರುವ ಅಭ್ಯಾಸಿಯಾಗಿರುತ್ತೀರಿ, ಅಷ್ಟೇ ಶ್ರೇಷ್ಠ ಸಂಕಲ್ಪವಿರುವ ಕಾರಣದಿಂದ ಲೈನ್ ಕ್ಲಿಯರ್ ಆಗಿರುತ್ತದೆ. ವ್ಯರ್ಥ ಸಂಕಲ್ಪದೇ ತೊಂದರೆಯಿದೆ. ಎಷ್ಟು ವ್ಯರ್ಥವು ಸಮಾಪ್ತಿಯಾಗಿ ಸಮರ್ಥ ಸಂಕಲ್ಪವು ನಡೆಯುತ್ತದೆ, ಅಷ್ಟು ಸಂಕಲ್ಪದ ಶ್ರೇಷ್ಠ ಭಾಷೆಯೂ ಸಹ ಅಷ್ಟೇ ಸ್ಪಷ್ಟವಾಗಿ ಅನುಭವ ಮಾಡುತ್ತೀರಿ. ಹೇಗೆ ಮುಖದ ಭಾಷೆಯಿಂದ ಅನುಭವ ಮಾಡುತ್ತೀರಿ. ಸಂಕಲ್ಪದ ಭಾಷೆಯಿಂದ ಯಾರಿಗಾದರೂ ಸೆಕೆಂಡಿನಲ್ಲಿ ಮುಖದ ಭಾಷೆಗಿಂತಲೂ ಬಹುಬೇಗನೆ ಅನುಭವ ಮಾಡಿಸಬಹುದು. ಮೂರು ನಿಮಿಷಗಳ ಭಾಷಣದ ಸಾರವನ್ನು ಸೆಕೆಂಡಿನಲ್ಲಿ ಸಂಕಲ್ಪದ ಭಾಷೆಯಿಂದ ಅನುಭವ ಮಾಡಿಸಬಹುದು. ಸೆಕೆಂಡಿನಲ್ಲಿ ಜೀವನ್ಮುಕ್ತಿಯ ಗಾಯನವೇನಿದೆಯೋ, ಅದನ್ನು ಅನುಭವ ಮಾಡಿಸಬಹುದು.

ಅಂತರ್ಮುಖಿ ಆತ್ಮರ ಭಾಷೆ - ಇದೇ ಅಲೌಕಿಕ ಭಾಷೆಯಾಗಿದೆ. ಈಗ ಸಮಯ ಪ್ರಮಾಣ ಈ ಮೂರು ಭಾಷೆಗಳ ಮೂಲಕ ಸಹಜ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳಬಲ್ಲಿರಿ. ಪರಿಶ್ರಮವೂ ಕಡಿಮೆ, ಸಮಯವೂ ಕಡಿಮೆ ಹಿಡಿಸುತ್ತದೆ. ಆದರೆ ಸಫಲತೆಯು ಸಹಜವಿದೆ. ಆದ್ದರಿಂದ ಈಗ ಈ ಆತ್ಮಿಕ ಭಾಷೆಯ ಅಭ್ಯಾಸಿಯಾಗಿರಿ. ಆದ್ದರಿಂದ ಇಂದು ಬಾಪ್ದಾದಾರವರೂ ಸಹ ಮಕ್ಕಳ ಈ ಮೂರೂ ರೀತಿಯ ಭಾಷೆಯನ್ನು ಕೇಳಿಸಿಕೊಳ್ಳುತ್ತಿದ್ದಾರೆ ಮತ್ತು ಎಲ್ಲಾ ಮಕ್ಕಳಿಗೂ ಪ್ರತ್ಯುತ್ತರವನ್ನು ಕೊಡುತ್ತಿದ್ದಾರೆ. ಬಾಪ್ದಾದಾರವರು ಎಲ್ಲರ ಅತಿ ಸ್ನೇಹದ ಸ್ವರೂಪವನ್ನು ನೋಡುತ್ತಾ ಸ್ನೇಹವನ್ನು, ಸ್ನೇಹದ ಸಾಗರನಲ್ಲಿ ಸಮಾವೇಶ ಮಾಡಿಕೊಳ್ಳುತ್ತಿದ್ದಾರೆ. ಎಲ್ಲರ ನೆನಪುಗಳನ್ನು ಸದಾಕಾಲಕ್ಕಾಗಿ ನೆನಪಾರ್ಥದ ರೂಪವಾಗುವ ಶ್ರೇಷ್ಠ ವರದಾನವನ್ನು ಕೊಡುತ್ತಿದ್ದಾರೆ. ಎಲ್ಲರ ಮನಸ್ಸಿನ ಭಿನ್ನ-ಭಿನ್ನ ಭಾವಗಳನ್ನು ತಿಳಿದು, ಎಲ್ಲಾ ಮಕ್ಕಳ ಬಗ್ಗೆ ಸರ್ವ ಭಾವಗಳ ಪ್ರತ್ಯುತ್ತರವನ್ನು ಸದಾ ನಿರ್ವಿಘ್ನ ಭವ, ಸಮರ್ಥ ಭವ, ಸರ್ವ ಶಕ್ತಿ ಸಂಪನ್ನ ಭವದ ಶುಭ ಭಾವನೆಯನ್ನು ಈ ರೂಪದಲ್ಲಿ ಕೊಡುತ್ತಿದ್ದಾರೆ. ತಂದೆಯ ಈ ಶುಭ ಭಾವನೆಯು ಯಾರೆಲ್ಲಾ ಮಕ್ಕಳ ಶುಭ ಕಾಮನೆಯಿದೆ, ಪರಿಸ್ಥಿತಿಯನುಸಾರ ಸಹಯೋಗದ ಭಾವನೆ ಅಥವಾ ಶುಭ ಕಾಮನೆಯಿದೆ, ಆ ಎಲ್ಲಾ ಶುಭ ಕಾಮನೆಗಳು ಬಾಪ್ದಾದಾರವರ ಶ್ರೇಷ್ಠ ಭಾವನೆಯಿಂದ ಸಂಪನ್ನವಾಗುತ್ತಲೇ ಇರುತ್ತದೆ. ಮುಂದೆ ನಡೆದಂತೆ ಕೆಲಕೆಲವೊಮ್ಮೆ ಕೆಲವು ಮಕ್ಕಳ ಮುಂದೆ ಹಳೆಯ ಲೆಕ್ಕಾಚಾರಗಳು ಪರೀಕ್ಷೆಯ ರೂಪದಲ್ಲಿ ಬರುತ್ತವೆ. ಭಲೆ ಅದು ತನುವಿನ ರೋಗದ ರೂಪದಲ್ಲಿರಬಹುದು ಅಥವಾ ಮನಸ್ಸಿನ ವ್ಯರ್ಥ ಬಿರುಗಾಳಿಗಳ ರೂಪದಲ್ಲಿರಬಹುದು, ಭಲೆ ಸಂಬಂಧ-ಸಂಪರ್ಕದ ರೂಪದಲ್ಲಿ ಬರಬಹುದು. ಯಾರು ಬಹಳ ಸಮೀಪ ಸಹಯೋಗಿಯಾಗಿರುತ್ತಾರೆ, ಅವರಿಂದಲೂ ಸಹಯೋಗಕ್ಕೆ ಬದಲಾಗಿ ಹಗುರ ರೂಪದಲ್ಲಿಯೂ ಘರ್ಷಣೆಯಾಗಿ ಬಿಡುತ್ತದೆ. ಆದರೆ ಈ ಎಲ್ಲಾ ಹಳೆಯ ಖಾತೆ, ಹಳೆಯ ಸಾಲವು ಸಮಾಪ್ತಿಯಾಗುತ್ತಿದೆ. ಆದ್ದರಿಂದ ಈ ಏರುಪೇರುಗಳಲ್ಲಿ ಹೋಗದೆ, ಬುದ್ಧಿಯನ್ನು ಶಕ್ತಿಶಾಲಿ ಮಾಡಿಕೊಳ್ಳುತ್ತೀರೆಂದರೆ ಬುದ್ಧಿಬಲದ ಮೂಲಕ ಈ ಹಳೆಯ ಸಾಲವು ಸಾಲಕ್ಕೆ ಬದಲಾಗಿ ಸದಾ ಪಾಸ್ ಆಗುವ ಜವಾಬ್ದಾರಿಯ ಅನುಭವ ಮಾಡುತ್ತೀರಿ. ಆಗುವುದೇನು ಬುದ್ಧಿ ಬಲವಿಲ್ಲದ ಕಾರಣದಿಂದ ಸಾಲವು ಒಂದು ಹೊರೆಯ ರೂಪದಲ್ಲಿ ಅನುಭವ ಮಾಡುತ್ತಾರೆ ಮತ್ತು ಹೊರೆಯಾಗುವ ಕಾರಣದಿಂದ ಬುದ್ಧಿಯ ಮೂಲಕ, ಯಾವ ಯಥಾರ್ಥ ನಿರ್ಣಯವಾಗಬೇಕು ಅದಾಗಲು ಸಾಧ್ಯವಾಗುವುದಿಲ್ಲ ಮತ್ತು ಯಥಾರ್ಥ ನಿರ್ಣಯವಿಲ್ಲದ ಕಾರಣ ಹೊರೆಯು ಇನ್ನೂ ಕೆಳಗೆ ತೆಗೆದುಕೊಂಡು ಬರುತ್ತದೆ. ಸಫಲತೆಯ ಶ್ರೇಷ್ಠತೆಯ ಕಡೆಗೆ ಹೋಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಮಾಪ್ತಿ ಮಾಡುವ ಬದಲು ಕೆಲಕೆಲವು ಕಡೆ ಇನ್ನೂ ಹೆಚ್ಚಾಗುತ್ತದೆ. ಆದ್ದರಿಂದ ಹಳೆಯ ಸಾಲವನ್ನು ಸಮಾಪ್ತಿಗೊಳಿಸುವ ಸಾಧನವಾಗಿದೆ - ಸದಾ ತಮ್ಮ ಬುದ್ಧಿಯನ್ನು ಸ್ವಚ್ಛವಾಗಿಟ್ಟುಕೊಳ್ಳಿರಿ. ಬುದ್ಧಿಯಲ್ಲಿ ಹೊರೆಯಿನ್ನಿಡಬಾರದು. ಬುದ್ಧಿಯನ್ನೆಷ್ಟು ಹಗುರವಾಗಿಡುತ್ತೀರಿ, ಅಷ್ಟು ಬುದ್ಧಿಬಲವು ಸಫಲತೆಯನ್ನು ಪ್ರಾಪ್ತಿ ಮಾಡಿಸುತ್ತದೆ ಆದ್ದರಿಂದ ಗಾಬರಿಯಾಗಬಾರದು. ವ್ಯರ್ಥ ಸಂಕಲ್ಪಗಳು - ಏಕೆ ಆಯಿತು, ಏನಾಯಿತು, ಬಹುಷಃ ಹೀಗಿದೆಯೇನೋ, ಇಂತಹ ಹೊರೆಯಾಗುವ ಸಂಕಲ್ಪವನ್ನು ಸಮಾಪ್ತಿಗೊಳಿಸಿ ಬುದ್ಧಿಯ ಲೈನ್ ಕ್ಲಿಯರ್ ಆಗಿಟ್ಟುಕೊಳ್ಳಿರಿ. ಹಗುರವಾಗಿಡುತ್ತೀರೆಂದರೆ ಸಾಹಸ ತಮ್ಮದು, ಸಹಯೋಗ ತಂದೆಯದು, ಸಫಲತೆಯ ಅನುಭವವಾಗುತ್ತಿರುತ್ತದೆ. ತಿಳಿಯಿತೆ!

ಡಬಲ್ಲೈಟ್ ಆಗುವ ಬದಲು ಡಬಲ್ಹೊರೆಯನ್ನು ತೆಗೆದುಕೊಂಡು ಬಿಡುತ್ತೀರಿ. ಒಂದು ಹಿಂದಿನ ಲೆಕ್ಕಾಚಾರ ಇನ್ನೊಂದು ವ್ಯರ್ಥ ಸಂಕಲ್ಪಗಳ ಹೊರೆಯಿದೆಯೆಂದರೆ, ಡಬಲ್ ಹೊರೆಯು ಮೇಲೆ ತೆಗೆದುಕೊಂಡು ಹೋಗುತ್ತದೆಯೋ ಅಥವಾ ಕೆಳಗೆ ಕರೆ ತರುತ್ತದೆಯೋ, ಆದ್ದರಿಂದ ಬಾಪ್ದಾದಾರವರು ಎಲ್ಲಾ ಮಕ್ಕಳಿಗೂ ವಿಶೇಷವಾಗಿ ಗಮನ ತರಿಸುತ್ತಿದ್ದಾರೆ - ಸದಾ ಬುದ್ಧಿಯ ಹೊರೆಯನ್ನು ಸಮಾಪ್ತಿ ಮಾಡಿರಿ. ಯಾವುದೇ ಪ್ರಕಾರದ ಹೊರೆಯು ಬುದ್ಧಿಯೋಗಕ್ಕೆ ಬದಲಾಗಿ ಲೆಕ್ಕಾಚಾರವು ಭೋಗಿಸುವುದರಲ್ಲಿ ಬದಲಾಗಿ ಬಿಡುತ್ತದೆ. ಆದ್ದರಿಂದ ಸದಾ ತಮ್ಮ ಬುದ್ಧಿಯನ್ನು ಹಗುರವಾಗಿಟ್ಟುಕೊಳ್ಳಿರಿ. ಆಗ ಯೋಗಬಲ, ಬುದ್ಧಿಬಲವು ಭೋಗಿಸುವುದನ್ನು ಸಮಾಪ್ತಿ ಮಾಡಿ ಬಿಡುತ್ತದೆ.

ಎಲ್ಲರ ಸೇವೆಯ ಭಿನ್ನ-ಭಿನ್ನ ಉಮ್ಮಂಗವೂ ಸಹ ತಲುಪಿದೆ. ಯಾರೆಷ್ಟು ಸತ್ಯ ಹೃದಯದಿಂದ, ನಿಸ್ವಾರ್ಥ ಭಾವದಿಂದ ಸೇವೆಯನ್ನು ಮಾಡುತ್ತಿದ್ದಾರೆ, ಅಂತಹ ಸತ್ಯ ಹೃದಯವಿರುವ ಮಕ್ಕಳ ಮೇಲೆ ಸದಾ ಪ್ರಭು ಪ್ರಸನ್ನವಾಗುವರು. ಮತ್ತು ಅದೇ ಪ್ರಸನ್ನವಾಗಿರುವ ಚಿಹ್ನೆಯು - ಹೃದಯದ ಸಂತುಷ್ಟತೆ ಮತ್ತು ಸೇವೆಯ ಸಫಲತೆಯಾಗಿದೆ. ಈಗಿನವರೆಗೂ ಏನೆಲ್ಲಾ ಮಾಡಿದಿರಿ ಮತ್ತು ಮಾಡುತ್ತಿದ್ದೀರಿ, ಅದೆಲ್ಲವೂ ಚೆನ್ನಾಗಿದೆ. ಮುಂದುವರೆದಂತೆ ಇನ್ನೂ ಚೆನ್ನಾಗಿ ಆಗಲೇಬೇಕು ಆದ್ದರಿಂದ ನಾಲ್ಕೂ ಕಡೆಯ ಮಕ್ಕಳಿಗೆ ಬಾಪ್ದಾದಾರವರು ಸದಾ ಉನ್ನತಿ ಪಡೆಯುತ್ತಿರಿ, ವಿಧಿಯನುಸಾರವಾಗಿ ವೃದ್ಧಿಯನ್ನು ಪಡೆಯುತ್ತಿರಿ, ಈ ವರದಾನದ ಜೊತೆ ಜೊತೆಗೆ ಬಾಪ್ದಾದಾರವರು ಪದಮದಷ್ಟು ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ. ಕೈನ ಪತ್ರ ಹಾಗೂ ಮನಸ್ಸಿನ ಪತ್ರಗಳೆರಡರ ಪ್ರತ್ಯುತ್ತರವನ್ನು, ಬಾಪ್ದಾದಾರವರು ಎಲ್ಲಾ ಮಕ್ಕಳಿಗೂ ಶುಭಾಷಯಗಳ ಜೊತೆಗೆ ಕೊಡುತ್ತಿದ್ದಾರೆ. ಶ್ರೇಷ್ಠ ಪುರುಷಾರ್ಥ, ಶ್ರೇಷ್ಠ ಜೀವನದಲ್ಲಿ ಸದಾ ಜೀವಿಸಿರಿ. ಇಂತಹ ಶ್ರೇಷ್ಠ ಭಾವನೆಗಳ ಸಹಿತವಾಗಿ ಸರ್ವರಿಗೂ ನೆನಪು-ಪ್ರೀತಿ ಹಾಗೂ ನಮಸ್ತೆ.

ಬಾಲಕನಿಂದ ಮಾಲೀಕ

ಇಂದು ಬಾಪ್ದಾದಾರವರು ತನ್ನ ಶಕ್ತಿ ಸೇನೆಯನ್ನು ನೋಡುತ್ತಿದ್ದಾರೆ - ಈ ಆತ್ಮಿಕ ಶಕ್ತಿಯ ಸೇನೆಯು ಮನಜೀತ್ ಜಗತ್ಜೀತ್ ಆಗಿದೆಯೇ? ಮನಜೀತ್ ಅಂದರೆ ಮನಸ್ಸಿನ ವ್ಯರ್ಥ ಸಂಕಲ್ಪ, ವಿಕಲ್ಪಗಳ ವಿಜಯಿಯಾಗಿರುವುದು. ಹೀಗೆ ಬದುಕಿರುವ ಮಕ್ಕಳು ವಿಶ್ವದ ರಾಜ್ಯಾಧಿಕಾರಿ ಆಗುತ್ತಾರೆ. ಆದ್ದರಿಂದ ಮನಜೀತೆ ಜಗತ್ಜೀತ್ ಎಂದು ಗಾಯನಗೊಂಡಿದೆ. ಈ ಸಮಯ-ಸಂಕಲ್ಪ ಶಕ್ತಿಯನ್ನು ಅರ್ಥಾತ್ ಮನಸ್ಸನ್ನೆಷ್ಟು ಸ್ವ-ಅಧಿಕಾರದಲ್ಲಿ ಇಟ್ಟುಕೊಂಡಿರುತ್ತೀರಿ, ಅಷ್ಟೇ ವಿಶ್ವದ ರಾಜ್ಯಾಧಿಕಾರಿ ಆಗುತ್ತೀರಿ. ಈಗ ಈ ಸಮಯದಲ್ಲಿ ಈಶ್ವರನ ಬಾಲಕರಾಗಿದ್ದೀರಿ ಮತ್ತು ಈಗಿನ ಬಾಲಕರೇ ವಿಶ್ವದ ಮಾಲೀಕರಾಗುತ್ತಾರೆ. ಬಾಲಕರಾಗದೇ ಮಾಲೀಕರಾಗಲು ಸಾಧ್ಯವಿಲ್ಲ. ಏನೆಲ್ಲಾ ಅಲ್ಪಕಾಲದ ಮಾಲೀಕತ್ವದ ಅಲ್ಪಕಾಲದ ನಶೆಯಿದೆ, ಅದನ್ನು ಸಮಾಪ್ತಿ ಮಾಡಿ ಅಲ್ಪಕಾಲದ ಮಾಲೀಕತ್ವದಿಂದ ಬಾಲಕನಾಗುವುದರಲ್ಲಿ ಬರಬೇಕು, ಆಗಲೇ ಬಾಲಕರಿಂದ ಮಾಲೀಕರಾಗುತ್ತೀರಿ. ಆದ್ದರಿಂದ ಭಕ್ತಿಮಾರ್ಗದಲ್ಲಿ ಯಾರೆಷ್ಟೇ ದೇಶದ ಗಣ್ಯರಾಗಿರಬಹುದು, ಧನದ ಮಾಲೀಕರಾಗಿರಬಹುದು, ಪರಿವಾರದ ಮಾಲೀಕರಾಗಿರಬಹುದು. ಆದರೆ ತಂದೆಯ ಮುಂದೆ ಎಲ್ಲರೂ "ನಿನ್ನ ಬಾಲಕರು" ಎಂದು ಹೇಳುತ್ತಾ ಪ್ರಾರ್ಥನೆ ಮಾಡುತ್ತಾರೆ. ನಾನು ಇಂತಹ ಮಾಲೀಕನಾಗಿದ್ದೇನೆ - ಹೀಗೆ ಎಂದಿಗೂ ಹೇಳುವುದಿಲ್ಲ. ನೀವು ಬ್ರಾಹ್ಮಣ ಮಕ್ಕಳೂ ಸಹ ಬಾಲಕರಾಗುತ್ತೀರಿ, ಆಗಲೇ ಈಗಲೂ ನಿಶ್ಚಿಂತ ಚಕ್ರವರ್ತಿಯಾಗುತ್ತೀರಿ ಮತ್ತು ಭವಿಷ್ಯದಲ್ಲಿಯೂ ವಿಶ್ವದ ಮಾಲೀಕರು ಅಥವಾ ಚಕ್ರವರ್ತಿ ಆಗುತ್ತೀರಿ. "ಬಾಲಕನಿಂದ ಮಾಲೀಕನಾಗಿದ್ದೇನೆ"- ಈ ಸ್ಮೃತಿಯು ಸದಾ ನಿರಹಂಕಾರಿ, ನಿರಾಕಾರಿ ಸ್ಥಿತಿಯ ಅನುಭವವನ್ನು ಮಾಡಿಸುತ್ತದೆ. ಬಾಲಕನಾಗುವುದು ಅರ್ಥಾತ್ ಅಲ್ಪಕಾಲದ ಜೀವನದ ಪರಿವರ್ತನೆಯಾಗುವುದು. ಯಾವಾಗ ಬ್ರಾಹ್ಮಣರಾದಿರಿ, ಆಗ ಬ್ರಾಹ್ಮಣತ್ವದ ಜೀವನದ ಮೊದಲ ಅತಿ ಸಹಜ ಪಾಠವಾಗಿ ಏನನ್ನು ಓದಿದಿರಿ? ಮಕ್ಕಳು ಬಾಬಾ ಎಂದು ಹೇಳಿದರು ಮತ್ತು ಬಾಬಾರವರು ಮಗು ಎಂದು ಹೇಳಿದರು ಅರ್ಥಾತ್ ಬಾಲಕರು. ಈ ಒಂದು ಶಬ್ಧದ ಪಾಠವು ಜ್ಞಾನಪೂರ್ಣರನ್ನಾಗಿ ಮಾಡಿ ಬಿಡುತ್ತದೆ. ಬಾಲಕ ಅಥವಾ ಮಗು ಎನ್ನುವ ಒಂದೇ ಶಬ್ಧವನ್ನು ಓದಿಬಿಟ್ಟಿರೆಂದರೆ, ಇಡೀ ವಿಶ್ವದ ಜ್ಞಾನವೇನು, ಮೂರೂ ಲೋಕಗಳ ಜ್ಞಾನವನ್ನೇ ಓದಿ ಬಿಟ್ಟಿರಿ. ಇಂದಿನ ಪ್ರಪಂಚದಲ್ಲಿ ಎಷ್ಟೇ ಶ್ರೇಷ್ಠ ಜ್ಞಾನಪೂರ್ಣರು ಇರಬಹುದು. ಆದರೆ ಮೂರು ಲೋಕಗಳ ಜ್ಞಾನವನ್ನಂತು ಓದಲು ಸಾಧ್ಯವಿಲ್ಲ. ಈ ಮಾತಿನಲ್ಲಿ ತಾವು ಒಂದು ಶಬ್ಧವನ್ನು ಓದಿರುವವರ ಮುಂದೆ, ಎಷ್ಟೇ ಶ್ರೇಷ್ಠ ಜ್ಞಾನವಂತರೂ ಸಹ ಅಜ್ಞಾನಿಯೇ ಆದರು. ಹೀಗೆ ಮಾಸ್ಟರ್ ಜ್ಞಾನಪೂರ್ಣರು ಎಷ್ಟು ಸಹಜವಾಗಿ ಆಗಿದ್ದೀರಿ? ಬಾಬಾ ಮತ್ತು ಮಕ್ಕಳು, ಈ ಒಂದು ಶಬ್ಧದಲ್ಲಿ ಎಲ್ಲವೂ ಸಮಾವೇಶವಾಗಿದೆ. ಹೇಗೆ ಬೀಜದಲ್ಲಿ ಇಡೀ ವೃಕ್ಷವು ಸಮಾವೇಶವಾಗಿದೆ, ಅಂದಮೇಲೆ ಬಾಲಕ ಅಥವಾ ಮಗುವಾಗುವುದು ಅರ್ಥಾತ್ ಸದಾಕಾಲಕ್ಕಾಗಿ ಮಾಯೆಯಿಂದ ಪಾರಾಗುವುದು. ಮಾಯೆಯಿಂದ ಪಾರಾಗಿರಿ ಅರ್ಥಾತ್ ನಾವು ಮಕ್ಕಳಾಗಿದ್ದೇವೆ ಎನ್ನುವುದು ಸದಾ ಸ್ಮೃತಿಯಲ್ಲಿರಲಿ. ಸದಾ ಇದೇ ಸ್ಮೃತಿಯಿಡಿ - "ಮಗುವಾಗಿದ್ದೇವೆ" ಅರ್ಥಾತ್ ಪಾರಾಗಿ ಬಿಟ್ಟೆವು. ಈ ಪಾಠವು ಕಷ್ಟವೇ? ಸಹಜವಲ್ಲವೆ. ಮತ್ತೇಕೆ ಮರೆಯುತ್ತೀರಿ? ಕೆಲವು ಮಕ್ಕಳು ಹೀಗೆ ಯೋಚಿಸುತ್ತಾರೆ - ಮರೆಯಲು ಇಷ್ಟ ಪಡುವುದಿಲ್ಲ. ಆದರೆ ಮರೆತು ಹೋಗುತ್ತದೆ. ಏಕೆ ಮರೆತು ಹೋಗುತ್ತದೆ? ಆಗ ಹೇಳುತ್ತಾರೆ - ಬಹಳ ಸಮಯದ ಸಂಸ್ಕಾರವಾಗಿದೆ ಅಥವಾ ಹಳೆಯ ಸಂಸ್ಕಾರವಿದೆ. ಆದರೆ ಯಾವಾಗ ಮರುಜೀವಿಯಾಗಿದ್ದೀರಿ, ಸಾಯುವ ಸಮಯದಲ್ಲಿ ಏನು ಮಾಡುತ್ತಾರೆ? ಅಗ್ನಿ ಸಂಸ್ಕಾರ ಮಾಡುತ್ತೀರಲ್ಲವೆ. ಅಂದಮೇಲೆ ಹಳೆಯದರ ಸಂಸ್ಕಾರ ಮಾಡಿದಾಗಲೇ ಹೊಸ ಜನ್ಮವಾಯಿತು. ಯಾವಾಗ ಸಂಸ್ಕಾರ ಮಾಡಿ ಬಿಟ್ಟಿರಿ, ಮತ್ತೆ ಹಳೆಯ ಸಂಸ್ಕಾರವೆಲ್ಲಿಂದ ಬಂದಿತು! ಹೇಗೆ ಶರೀರದ ಸಂಸ್ಕಾರ (ಸುಡುವುದು) ಮಾಡುತ್ತೀರೆಂದರೆ ನಾಮ-ರೂಪವು ಸಮಾಪ್ತಿಯಾಗಿ ಬಿಡುತ್ತದೆ. ಒಂದುವೇಳೆ ಹೆಸರನ್ನೂ ತೆಗೆದುಕೊಂಡರೆ ಅವರು ಇದ್ದರು ಎಂದು ಹೇಳುತ್ತೀರಿ. ಇದ್ದಾರೆ ಎಂದು ಹೇಳುವುದಿಲ್ಲ ಅಂದಮೇಲೆ ಶರೀರದ ಸಂಸ್ಕಾರವಾದ ನಂತರ ಶರೀರದ ಸಮಾಪ್ತಿಯಾಗಿ ಬಿಟ್ಟಿತು. ಬ್ರಾಹ್ಮಣ ಜೀವನದಲ್ಲಿ ಯಾವುದರ ಸಂಸ್ಕಾರ ಮಾಡುತ್ತೀರಿ? ಶರೀರವಂತು ಅದೇ ಇದೆ. ಆದರೆ ಹಳೆಯ ಸಂಸ್ಕಾರಗಳು, ಹಳೆಯ ಸ್ಮೃತಿಗಳ, ಸ್ವಭಾವದ ಸಂಸ್ಕಾರವನ್ನು ಮಾಡುತ್ತೀರಿ, ಆಗಲೇ ಮರುಜೀವಿ ಎಂದು ಹೇಳಿಕೊಳ್ಳುತ್ತೀರಿ. ಯಾವಾಗ ಸಂಸ್ಕಾರ ಮಾಡಿಬಿಟ್ಟಿರೆಂದರೆ ಹಳೆಯ ಸಂಸ್ಕಾರವೆನ್ನುವುದು ಎಲ್ಲಿಂದ ಬಂದಿತು! ಹಳೆಯದ ಸಂಸ್ಕಾರವಾಗಿರುವುದೇನಾದರೂ ಜಾಗೃತವಾಗಿ ಬಿಟ್ಟಿತೆಂದರೆ ಏನು ಹೇಳುವರು? ಇದೂ ಸಹ ಮಾಯೆಯ ಭೂತವೆಂದು ಹೇಳುತ್ತೀರಲ್ಲವೆ. ಭೂತಗಳನ್ನು ಓಡಿಸಲಾಗುತ್ತದೆಯಲ್ಲವೆ. ಅದರ ವರ್ಣನೆಯನ್ನೂ ಮಾಡುವುದಿಲ್ಲ. ಇದನ್ನು ಹಳೆಯ ಸಂಸ್ಕಾರವೆಂದು ಹೇಳುತ್ತಾ ತಮ್ಮನ್ನು ಮೋಸ ಮಾಡಿಕೊಳ್ಳುತ್ತೀರಿ. ಒಂದುವೇಳೆ ತಮಗೆ ಹಳೆಯ ಮಾತುಗಳು ಇಷ್ಟವಾಗುತ್ತದೆಯೆಂದರೆ ವಾಸ್ತವದಲ್ಲಿ ಹಳೆಯದಕ್ಕಿಂತ ಹಳೆಯ, ಆದಿಕಾಲದ ಸಂಸ್ಕಾರಗಳನ್ನು ನೆನಪು ಮಾಡಿರಿ. ಇದಂತು ಮಧ್ಯಕಾಲದ ಸಂಸ್ಕಾರವಾಗಿತ್ತು. ಇದು ಹಳೆಯದಕ್ಕಿಂತ ಹಳೆಯದಲ್ಲ. ಮಧ್ಯದಲ್ಲಿರುವುದನ್ನು ಮಧ್ಯ ಎಂದು ಹೇಳುತ್ತಾರೆ, ಅಂದಮೇಲೆ ಮಧ್ಯಕಾಲ ಅರ್ಥಾತ್ ಮಧ್ಯವನ್ನು ನೆನಪು ಮಾದುವುದು ಅರ್ಥಾತ್ ಭವ ಸಾಗರದಲ್ಲಿ ಸಿಲುಕಿಕೊಳ್ಳುವುದಾಗಿದೆ. ಆದ್ದರಿಂದ ಎಂದಿಗೂ ಸಹ ಇಂತಹ ಬಲಹೀನವಾದ ಮಾತುಗಳನ್ನು ಯೋಚಿಸದಿರಿ. ಸದಾ ಇದೇ ಎರಡು ಶಬ್ಧಗಳನ್ನು ನೆನಪಿಟ್ಟುಕೊಳ್ಳಿರಿ - "ಬಾಲಕನಿಂದ ಮಾಲೀಕ". ಬಾಲಕತನವೇ ಮಾಲೀಕತ್ವದ ಸ್ಮೃತಿಯನ್ನು ಸ್ವತಹವಾಗಿ ತರಿಸುತ್ತದೆ. ಬಾಲಕನಾಗುವುದು ಬರುವುದಿಲ್ಲವೇ?

ಬಾಲಕರಾಗಿರಿ ಅರ್ಥಾತ್ ಎಲ್ಲಾ ಹೊರೆಗಳಿಂದ ಹಗುರವಾಗಿರಿ. ಕೆಲವೊಮ್ಮೆ ನಿನ್ನದು, ಕೆಲವೊಮ್ಮೆ ನನ್ನದು, ಇದೇ ಬಹಳಕಷ್ಟವನ್ನಾಗಿ ಮಾಡಿ ಬಿಡುತ್ತದೆ. ಯಾವಾಗ ಕಷ್ಟವೆಂದು ಅನುಭವ ಮಾಡುತ್ತೀರಿ, ಆಗ ನಿನ್ನ ಕಾರ್ಯವು ನಿನಗೇ ಗೊತ್ತಿದೆ ಎಂದು ಹೇಳುತ್ತೀರಿ. ಮತ್ತು ಯಾವಾಗ ಸಹಜವಾಗುತ್ತದೆ ಆಗ ನನ್ನದು ಎಂದು ಹೇಳುತ್ತೀರಿ. ನನ್ನದೆನ್ನುವುದು ಸಮಾಪ್ತಿಯಾಗುವುದು ಅರ್ಥಾತ್ ಬಾಲಕನಿಂದ ಮಾಲೀಕರಾಗುವುದು. ತಂದೆಯಂತು ಹೇಳುತ್ತಾರೆ - ಬೆಗ್ಗರ್ ಆಗಿರಿ ಎಂದು. ಈ ಶರೀರವೆಂಬ ಮನೆಯೂ ಸಹ ನಿನ್ನದಲ್ಲ. ಇದು ಲೋನ್ನಲ್ಲಿ ಸಿಕ್ಕಿರುವುದಾಗಿದೆ. ಕೇವಲ ಇದು ಈಶ್ವರನ ಸೇವಾರ್ಥವಾಗಿ ಬಾಬಾರವರು ಲೋನ್ ಕೊಟ್ಟು ನಿಮಿತ್ತರನ್ನಾಗಿ ಮಾಡಿದ್ದಾರೆ. ಇದು ಈಶ್ವರನ ಉಡುಗೊರೆಯಾಗಿದೆ. ತಾವಂತು ಎಲ್ಲವೂ ನಿನ್ನದೆಂದು ಹೇಳಿ ತಂದೆಗೆ ಕೊಟ್ಟಿದ್ದೀರಿ. ಈ ಪ್ರತಿಜ್ಞೆಯನ್ನು ಮಾಡಿದ್ದೀರಲ್ಲವೆ ಅಥವಾ ಮರೆತು ಬಿಟ್ಟಿದ್ದೀರಾ? ಪ್ರತಿಜ್ಞೆ ಮಾಡಿದ್ದೀರಾ ಅಥವಾ ಅರ್ಧ ನಿನ್ನದು ಅರ್ಧ ನನ್ನದು ಎಂದು ಹೇಳುತ್ತೀರಾ! ಒಂದುವೇಳೆ ನಿನ್ನದು ಎಂದು ಹೇಳಿ, ನನ್ನದೆಂದು ತಿಳಿದು ಕಾರ್ಯದಲ್ಲಿ ಉಪಯೋಗಿಸುತ್ತೀರೆಂದರೆ ಏನಾಗುತ್ತದೆ? ಅದರಿಂದ ಸುಖ ಸಿಗುತ್ತದೆಯೇ? ಸಫಲತೆಯು ಸಿಗುತ್ತದೆಯೇ? ಆದ್ದರಿಂದ ಉಡುಗೊರೆಯೆಂದು ತಿಳಿದು ನಿನ್ನದೆಂದು ತಿಳಿದುಕೊಂಡು ನಡೆಯುತ್ತೀರೆಂದರೆ ಬಾಲಕನಿಂದ ಮಾಲೀಕತ್ವದ ಖುಷಿಯಲ್ಲಿ, ನಶೆಯಲ್ಲಿ ಸ್ವತಹವಾಗಿಯೇ ಇರುತ್ತೀರಿ. ತಿಳಿಯಿತೆ? ಅಂದಾಗ ಈ ಪಾಠವನ್ನು ಸದಾ ಪರಿಪಕ್ವವಾಗಿಟ್ಟುಕೊಳ್ಳಿರಿ. ಪಾಠವನ್ನು ಪರಿಪಕ್ವ ಮಾಡಿಕೊಂಡಿದ್ದೀರಲ್ಲವೆ ಅಥವಾ ತಮ್ಮ-ತಮ್ಮ ಸ್ಥಾನಗಳಲ್ಲಿ ಹೋದ ನಂತರ ಮರೆತು ಬಿಡುತ್ತೀರಾ. ಸ್ಮೃತಿ ಸ್ವರೂಪರಾಗಿರಿ. ಒಳ್ಳೆಯದು!

ಸದಾ ಆತ್ಮಿಕ ನಶೆಯಲ್ಲಿರುವ ಬಾಲಕನಿಂದ ಮಾಲೀಕ ಮಕ್ಕಳಿಗೆ, ಸದಾ ಬಾಲಕತ್ವ ಅರ್ಥಾತ್ ನಿಶ್ಚಿಂತ ಚಕ್ರವರ್ತಿಯ ಸ್ಮೃತಿಯಲ್ಲಿರುವಂತಹ, ಸದಾ ಸಿಕ್ಕಿರುವಂತಹ ಉಡುಗೊರೆಯನ್ನು ನಿಮಿತ್ತವಾಗಿ ಸೇವೆಯಲ್ಲಿ ಉಪಯೋಗಿಸುವ ಮಕ್ಕಳಿಗೆ, ಸದಾ ಹೊಸ ಉಮ್ಮಂಗ, ಹೊಸ ಉತ್ಸಾಹದಲ್ಲಿರುವ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ವರದಾನ:  
"ವಿಶೇಷ" ಶಬ್ಧದ ಸ್ಮೃತಿಯ ಮೂಲಕ ಸಂಪೂರ್ಣತೆಯ ಗುರಿಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಸ್ವ-ಪರಿವರ್ತಕ ಭವ.

ಸದಾ ಇದೇ ಸ್ಮೃತಿಯಲ್ಲಿರಿ - ನಾವು ವಿಶೇಷ ಆತ್ಮರಾಗಿದ್ದೇವೆ, ವಿಶೇಷ ಕಾರ್ಯಕ್ಕೆ ನಿಮಿತ್ತರಾಗಿದ್ದೇವೆ ಮತ್ತು ವಿಶೇಷತೆಯನ್ನು ತೋರಿಸುವವರಾಗಿದ್ದೇವೆ. ಈ ವಿಶೇಷ ಎಂಬ ಶಬ್ಧವನ್ನು ವಿಶೇಷವಾಗಿ ನೆನಪಿಟ್ಟುಕೊಳ್ಳಿರಿ- ಮಾತನಾಡುವುದೂ ವಿಶೇಷ, ನೋಡುವುದೂ ವಿಶೇಷವನ್ನೇ, ಮಾಡುವುದೂ ಸಹ ವಿಶೇಷವಾದುದನ್ನು, ಯೋಚಿಸುವುದೂ ಸಹ ವಿಶೇಷವಾಗಿ..... ಪ್ರತೀ ಮಾತಿನಲ್ಲಿ ಈ ವಿಶೇಷ ಶಬ್ಧವನ್ನು ತರುವುದರಿಂದ ಸಹಜವಾಗಿ ಸ್ವಪರಿವರ್ತಕರಿಂದ ವಿಶ್ವ ಪರಿವರ್ತಕರಾಗಿ ಬಿಡುತ್ತೀರಿ ಮತ್ತು ಯಾರಲ್ಲಿ ಸಂಪೂರ್ಣತೆಯನ್ನು ಪ್ರಾಪ್ತಿ ಮಾಡಿಕೊಳ್ಳುವ ಲಕ್ಷ್ಯವಿದೆ, ಆ ಗುರಿಯನ್ನೂ ಸಹ ಸಹಜವಾಗಿಯೇ ಪ್ರಾಪ್ತಿ ಮಾಡಿಕೊಂಡು ಬಿಡುತ್ತೀರಿ.

ಸ್ಲೋಗನ್:
ವಿಘ್ನಗಳಿಂದ ಗಾಬರಿಯಾಗುವುದಕ್ಕೆ ಬದಲು ಪರೀಕ್ಷೆಯೆಂದು ತಿಳಿದು ಅದನ್ನು ಪಾರು ಮಾಡಿರಿ.


ಸ್ವ-ಪರಿವರ್ತನೆ, ಸ್ವ-ಉನ್ನತಿಗಾಗಿ ಸ್ವಯಂನ್ನು ಪರಿಶೀಲನೆ ಮಾಡಿಕೊಳ್ಳಲು ಅವ್ಯಕ್ತ ವಾಣಿಯಿಂದ ಪ್ರಶ್ನೆಗಳು:
1. ಬಾಪದಾದಾರವರು ಯಾವ ರೂಪದ ಮಕ್ಕಳಲ್ಲಿ ಡಬಲ್ ಸಭೆಯನ್ನು ನೋಡುತ್ತಿದ್ದರು?
2. ಮಕ್ಕಳು ಯಾವ ಯೋಗಕ್ಷೇಮವನ್ನು ಯಾವ ಭಾಷೆಯಲ್ಲಿ ಬಾಪದಾದಾರವರಿಗೆ ತಿಳಿಸುತ್ತಿದ್ದರು?
3. ಆತ್ಮಿಕ ಯೊಗಿ ಜೀವನದ ಭಾಷೆ ಯಾವುದಾಗಿದೆ?
4. ಎಲ್ಲದಕ್ಕಿಂತ ಶ್ರೇಷ್ಠ ಭಾಷೆ ಯಾವುದಾಗಿದೆ?
5. ಬಾಪದಾದಾರವರು ಮಕ್ಕಳ ನೆನಪನ್ನು ನೆನಪಾರ್ಥವನ್ನಾಗಿ ಮಾಡಲು ಯಾವ ವರದಾನವನ್ನು ಕೊಟ್ಟರು?
6. ಹಳೆಯ ಲೆಕ್ಕಚಾರವು ಯಾವ ರೂಪದಲ್ಲಿ ಬರುವುದು?
7. ಸಾಲವು ಹೊರೆಯ ಅನುಭವ ಯಾವಾಗಾಗುವುದು? ಅದರ ಪರಿಣಾಮವೇನು?
8. ಮನಜೀತ್ ಎಂದರೇನು?
9. ವಿಶ್ವದ ರಾಜ್ಯಾಧಿಕಾರಿ ಯಾವಾಗ ಆಗಲು ಸಾಧ್ಯ?
10. ನಾನು ಬಾಲಕ ಸೊ ಮಾಲೀಕನಾಗಿದ್ದೇನೆ - ಈ ಸ್ಮೃತಿಯು ಯಾವ ಅನುಭವವನ್ನು ಮಾಡಿಸುತ್ತದೆ?
11. ಬಾಲಕರಾಗುವುದು ಎಂದರ್ಥ?
12. ಯಾವ ಒಂದು ಶಬ್ದವನ್ನು ಓದುವುದರಿಂದ ಮೂರು ಲೋಕದ ವಿದ್ಯೆಯನ್ನು ಓದಬಹುದು?
13. ಹಳೆಯ ಮಾತುಗಳು ಇಷ್ಟವಾಗುವುದೆಂದರೆ ಯಾವ ಮಾತನ್ನು ನೆನಪಿಡಬೇಕು?
14. ವಿಶೇಷ ಶಬ್ದವನ್ನು ನೆನಪಿಡುವುದರಿಂದ ಏನಾಗಬಹುದು?