08.04.19         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಈ ಸಂಗಮಯುಗವು ಉತ್ತಮರಿಗಿಂತ ಉತ್ತಮರಾಗುವ ಯುಗವಾಗಿದೆ, ಇದರಲ್ಲಿಯೇ ನೀವು ಪತಿತರಿಂದ ಪಾವನರಾಗಿ ಪಾವನ ಪ್ರಪಂಚವನ್ನಾಗಿ ಮಾಡಬೇಕಾಗಿದೆ"

ಪ್ರಶ್ನೆ:
ಅಂತಿಮ ಭಯಾನಕ ದೃಶ್ಯವನ್ನು ನೋಡಲು ಶಕ್ತಿಯು ಯಾವ ಆಧಾರದ ಮೇಲೆ ಬರುತ್ತದೆ?

ಉತ್ತರ:
ಶರೀರದ ಪರಿವೆಯನ್ನು ತೆಗೆಯುತ್ತಾ ಹೋಗಿ ಅಂತಿಮ ದೃಶ್ಯವು ಬಹಳ ಕಠಿಣವಾಗಿದೆ, ತಂದೆಯು ಮಕ್ಕಳನ್ನು ಬಹಳ ಶಕ್ತಿಶಾಲಿಯನ್ನಾಗಿ ಮಾಡಲು ಅಶರೀರಿ ಆಗುವ ಸೂಚನೆ ನೀಡುತ್ತಾರೆ. ಹೇಗೆ ತಂದೆಯು ಈ ಶರೀರದಿಂದ ಬೇರೆ ಆಗಿ ನಿಮಗೆ ಕಲಿಸುತ್ತಾರೆಯೋ ಹಾಗೆಯೇ ನೀವು ಮಕ್ಕಳೂ ಸಹ ತಮ್ಮನ್ನು ಶರೀರದಿಂದ ಭಿನ್ನ ಎಂದು ತಿಳಿಯಿರಿ, ಅಶರೀರಿ ಆಗುವ ಅಭ್ಯಾಸ ಮಾಡಿ. ಈಗ ಮನೆಗೆ ಹೋಗಬೇಕಾಗಿದೆ ಎಂದು ಬುದ್ಧಿಯಲ್ಲಿ ಇರಲಿ.

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಶರೀರದ ಜೊತೆ ಇದ್ದೀರಿ. ಈಗ ತಂದೆಯೂ ಸಹ ಈ ಶರೀರದ ಜೊತೆ ಇದ್ದಾರೆ ಎಂದರೆ ಈ ಕುದುರೆ ಅಥವಾ ರಥದ ಮೇಲೆ ಸವಾರಿ ಆಗಿದ್ದಾರೆ ಮತ್ತು ಮಕ್ಕಳಿಗೆ ಏನನ್ನು ಕಲಿಸುತ್ತಾರೆ? ಜೀವಿಸಿದ್ದಂತೆಯೇ ಸಾಯುವುದು ಹೇಗೆ ಎಂಬುದನ್ನು ಒಬ್ಬ ತಂದೆಯ ವಿನಃ ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ತಂದೆಯ ಪರಿಚಯವು ಎಲ್ಲಾ ಮಕ್ಕಳಿಗೆ ಸಿಕ್ಕಿದೆ, ಅವರು ಜ್ಞಾನಸಾಗರ, ಪತಿತ ಪಾವನನಾಗಿದ್ದಾರೆ. ಜ್ಞಾನದಿಂದಲೇ ನೀವು ಪತಿತರಿಂದ ಪಾವನರಾಗುತ್ತೀರಿ ಮತ್ತು ಪಾವನ ಪ್ರಪಂಚವನ್ನೂ ಮಾಡಬೇಕಾಗಿದೆ. ಈ ಪತಿತ ಪ್ರಪಂಚವು ನಾಟಕದನುಸಾರ ವಿನಾಶ ಆಗಲಿದೆ. ಕೇವಲ ಯಾರು ತಂದೆಯನ್ನು ಅರಿತುಕೊಳ್ಳುತ್ತಾರೆ ಮತ್ತು ಬ್ರಾಹ್ಮಣಾರಾಗುತ್ತಾರೆಯೋ ಅವರೇ ಮತ್ತೆ ಪಾವನ ಪ್ರಪಂಚದಲ್ಲಿ ಬಂದು ರಾಜ್ಯ ಮಾಡುತ್ತಾರೆ. ಪವಿತ್ರರಾಗಲು ಅವಶ್ಯವಾಗಿ ಬ್ರಾಹ್ಮಣರಾಗಬೇಕಾಗಿದೆ. ಈ ಸಂಗಮಯುಗವು ಪುರುಷೋತ್ತಮ ಅರ್ಥಾತ್ ಉತ್ತಮರಿಗಿಂತಲೂ ಉತ್ತಮರಾಗುವ ಯುಗವಾಗಿದೆ. ಅನೇಕ ಸಾಧು-ಸಂತ, ಮಹಾತ್ಮರೂ, ಮಂತ್ರಿಗಳು, ರಾಜರು ಅಧ್ಯಕ್ಷರು ಉತ್ತಮರಾಗಿದ್ದಾರೆ ಎಂದು ಹೇಳುತ್ತಾರೆ ಆದರೆ ಇಲ್ಲ. ಇದಂತೂ ಕಲಿಯುಗಿ ಭ್ರಷ್ಟಾಚಾರಿ ಪ್ರಪಂಚವಾಗಿದೆ, ಹಳೆಯ ಪ್ರಪಂಚವಾಗಿದೆ, ಪತಿತ ಪ್ರಪಂಚದಲ್ಲಿ ಒಬ್ಬರೂ ಪಾವನರಿಲ್ಲ. ಈಗ ನೀವು ಸಂಗಮಯುಗಿಗಳಾಗುತ್ತೀರಿ. ಅವರು ನೀರನ್ನು ಪತಿತ ಪಾವನಿ ಎಂದು ತಿಳಿಯುತ್ತಾರೆ, ಕೇವಲ ಗಂಗೆ ಅಲ್ಲ, ಯಾವ ನದಿಗಳಿವೆಯೋ, ಎಲ್ಲಿಯೇ ನೀರನ್ನು ನೊಡುತ್ತಾರೆಯೋ ನೀರು ಪಾವನ ಮಾಡುವಂತಹದ್ದಾಗಿದೆ ಎಂದು ತಿಳಿಯುತ್ತಾರೆ. ಇದು ಬುದ್ಧಿಯಲ್ಲಿ ಕುಳಿತು ಬಿಟ್ಟಿದೆ. ಕೆಲ-ಕೆಲವರು ಕೆಲವೊಂದೆಡೆ ಹೋಗುತ್ತಿರುತ್ತಾರೆ. ಅಂದರೆ ನೀರಿನಲ್ಲಿ ಸ್ನಾನ ಮಾಡಲು ಹೋಗುತ್ತಾರೆ. ಆದರೆ ನೀರಿನಿಂದ ಯಾರೂ ಪಾವನರಾಗಲು ಸಾಧ್ಯವಿಲ್ಲ. ಒಂದು ವೇಳೆ ನೀರಿನಿಂದ ಪಾವನರಾಗಿದ್ದೇ ಆದರೆ ಈ ಸಮಯದಲ್ಲಿ ಇಡೀ ಸೃಷ್ಟಿ ಪಾವನವಾಗಿರುತ್ತಿತ್ತು. ಇಷ್ಟೆಲ್ಲರೂ ಪಾವನ ಪ್ರಪಂಚದಲ್ಲಿ ಇರಬೇಕು. ಇದಂತೂ ಹಳೆಯ ಪದ್ದತಿ ನಡೆದು ಬರುತ್ತದೆ. ಸಾಗರದಲ್ಲಿಯೂ ಕೊಳಕೆಲ್ಲವೂ ಹೋಗಿ ಬೀಳುತ್ತದೆ ಅಂದಮೇಲೆ ಈ ಗಂಗೆಯು ಹೇಗೆ ಪಾವನ ಮಾಡುತ್ತದೆ. ಆತ್ಮವು ಪಾವನ ಆಗಬೇಕಾಗಿದೆ. ಇದಕ್ಕಾಗಿ ಪರಮಪಿತನು ಬೇಕು, ಅವರೇ ಆತ್ಮಗಳನ್ನು ಪಾವನ ಮಾಡಬೇಕು, ಆದ್ದರಿಂದ ನೀವು ತಿಳಿಸಬೇಕು - ಸತ್ಯಯುಗದಲ್ಲಿಯೇ ಪಾವನರಿರುತ್ತಾರೆ, ಕಲಿಯುಗದಲ್ಲಿ ಪತಿತರಿರುತ್ತಾರೆ, ಈಗ ನೀವು ಸಂಗಮಯುಗದಲ್ಲಿ ಇದ್ದೀರಿ. ಪತಿತರಿಂದ ಪಾವನರಾಗಲು ಪುರುಷಾರ್ಥ ಮಾಡುತ್ತಿದ್ದೀರಿ. ನಾವು ಶೂದ್ರ ವರ್ಣದವರಾಗಿದ್ದೆವು, ಈಗ ಬ್ರಾಹ್ಮಣ ವರ್ಣದವರು ಆಗಿದ್ದೇವೆ ಎಂದು ನಿಮಗೆ ಗೊತ್ತಿದೆ. ಶಿವ ತಂದೆಯು ಪ್ರಜಾಪಿತ ಬ್ರಹ್ಮಾರವರ ಮೂಲಕ ಬ್ರಾಹ್ಮಣರನ್ನಾಗಿ ಮಾಡುತ್ತಾರೆ. ನಾವು ಸತ್ಯ-ಸತ್ಯವಾದ ಮುಖ ವಂಶಾವಳಿ ಬ್ರಾಹ್ಮಣರಾಗಿದ್ದೇವೆ, ಅವರು ಕುಖ ವಂಶಾವಳಿ ಆಗಿದ್ದಾರೆ. ಪ್ರಜಾಪಿತ ಎಂದರೆ ಎಲ್ಲರೂ ಪ್ರಜೆಗಳಾದರು. ಪ್ರಜೆಗಳ ಪಿತ ಬ್ರಹ್ಮನಾಗಿದ್ದಾರೆ, ಅವರಂತೂ ಗ್ರೇಟ್-ಗ್ರೇಟ್ ಗ್ರಾಂಡ್ ಫಾದರ್ (ಪಿತಾಮಹ) ಆಗಿ ಬಿಟ್ಟರು. ಅವಶ್ಯವಾಗಿ ಅವರು ಇದ್ದರು ಮತ್ತೆ ಎಲ್ಲಿಗೆ ಹೋದರು? ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರಲ್ಲವೇ. ಬ್ರಹ್ಮನೂ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆ ಎಂದು ಮಕ್ಕಳಿಗೆ ತಿಳಿಸಲಾಗುತ್ತದೆ. ಬ್ರಹ್ಮಾ ಮತ್ತು ಸರಸ್ವತಿ, ತಂದೆ ಮತ್ತು ತಾಯಿ. ಅವರೇ ಮತ್ತೆ ಮಹಾರಾಜಾ-ಮಹಾರಾಣಿ, ಲಕ್ಷ್ಮೀ-ನಾರಾಯಣರಾಗುತ್ತಾರೆ, ಇವರನ್ನೇ ವಿಷ್ಣು ಎಂದು ಹೇಳಲಾಗುತ್ತದೆ ಹಾಗೂ ಅವರೇ ಮತ್ತೆ 84 ಜನ್ಮಗಳ ನಂತರ ಬಂದು ಬ್ರಹ್ಮಾ-ಸರಸ್ವತಿ ಆಗುತ್ತಾರೆ. ಈ ರಹಸ್ಯವನ್ನಂತೂ ತಿಳಿಸಿದ್ದಾರೆ. ಜಗದಂಬಾ ಎಂದು ಹೇಳುತ್ತಾರೆ ಎಂದಮೇಲೆ ಇಡೀ ಜಗತ್ತಿನ ತಾಯಿ ಆದರು. ಪ್ರತಿಯೊಬ್ಬರ ಲೌಕಿಕ ತಾಯಿಯಂತೂ ಮನೆಯಲ್ಲಿ ಕುಳಿತಿದ್ದಾರೆ. ತಮ್ಮ-ತಮ್ಮ ಮನೆಯಲ್ಲಿ ಕುಳಿತಿದ್ದಾರೆ ಆದರೆ ಜಗದಂಬೆಯನ್ನು ಯಾರೂ ತಿಳಿದುಕೊಂಡಿಲ್ಲ. ಹಾಗೆಯೇ ಕೇವಲ ಅಂಧಶ್ರದ್ಧೆಯಿಂದ ಹೇಳಿ ಬಿಡುತ್ತಾರೆ, ಯಾರನ್ನೂ ತಿಳಿದುಕೊಂಡಿಲ್ಲ. ಯಾರ ಪೂಜೆಯನ್ನು ಮಾಡುತ್ತಾರೋ ಅವರ ಕರ್ತವ್ಯವನ್ನು ತಿಳಿದುಕೊಂಡಿಲ್ಲ. ರಚಯಿತನು ಸರ್ವಶ್ರೇಷ್ಠನಾಗಿದ್ದಾರೆ, ಇದು ಉಲ್ಟಾ ವೃಕ್ಷವಾಗಿದೆ, ಅದರ ಬೀಜರೂಪ ತಂದೆಯು ಮೇಲಿದ್ದಾರೆ ಎಂದು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನಿಮ್ಮನ್ನು ಪಾವನರನ್ನಾಗಿ ಮಾಡಲು ತಂದೆಯು ಮೇಲಿಂದ ಕೆಳಗೆ ಬರಬೇಕಾಗುತ್ತದೆ. ನಮಗೆ ಈ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಟ್ಟು ಮತ್ತೆ ಈ ಹೊಸ ಸೃಷ್ಟಿಯ ರಾಜಾ-ರಾಣಿಯನ್ನಾಗಿ ಮಾಡಲು ತಂದೆಯು ಬಂದಿದ್ದಾರೆ ಎಂದು ನಾವು ಮಕ್ಕಳಿಗೆ ಗೊತ್ತಿದೆ. ಈ ಚಕ್ರದ ರಹಸ್ಯವನ್ನು ಪ್ರಪಂಚದಲ್ಲಿ ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ಪುನಃ 5000 ವರ್ಷಗಳ ನಂತರ ಬಂದು ನಿಮಗೆ ತಿಳಿಸುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಈ ಡ್ರಾಮಾ ಮಾಡಿ-ಮಾಡಲ್ಪಟ್ಟಿದೆ. ಡ್ರಾಮಾದ ರಚಯಿತ, ನಿರ್ದೇಶಕ, ಮುಖ್ಯ ಪಾತ್ರಧಾರಿಗಳು ಮತ್ತು ನಾಟಕದ ಆದಿ-ಮಧ್ಯ-ಅಂತ್ಯವನ್ನೇ ತಿಳಿಯದಿದ್ದರೆ ಅಂತಹವರನ್ನು ಬುದ್ಧಿಹೀನರು ಎಂದು ಹೇಳುತ್ತಾರಲ್ಲವೇ! 5000 ವರ್ಷಗಳ ಹಿಂದೆಯೂ ನಾನು ನಿಮಗೆ ತಿಳಿಸಿದ್ದೆನು, ನಿಮಗೆ ನನ್ನ ಪರಿಚಯವನ್ನೂ ಕೊಟ್ಟಿದ್ದೆನು, ಹೇಗೆ ಈಗಲೂ ಕೊಡುತ್ತಿದ್ದೇನೆ. ನಿಮ್ಮನ್ನು ಪವಿತ್ರರನ್ನಾಗಿಯೂ ಮಾಡಿದ್ದೆನು ಹೇಗೆ ಈಗಲೂ ಮಾಡುತ್ತಿದ್ದೇನೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ, ಅವರೇ ಸರ್ವಶಕ್ತಿವಂತ ಪತಿತ ಪಾವನನಾಗಿದ್ದಾರೆ. ಗಾಯನವೂ ಇದೆ ಅಂತ್ಯ ಕಾಲದಲ್ಲಿ ಯಾರು ಯಾರ ಸ್ಮರಣೆ ಮಾಡುತ್ತಾರೋ, ಅವರು ಪದೇ-ಪದೇ ಅಂಥಹ ಯೋನಿಯಲ್ಲಿ ಹೋಗುವರು ಅರ್ಥಾತ್ ಅವರ ಸಂಬಂಧದಲ್ಲಿ ಹೋಗುವರು. ಈಗ ಈ ಸಮಯದಲ್ಲಿ ನೀವು ಜನ್ಮವಂತೂ ಪಡೆಯುತ್ತೀರಿ ಆದರೆ ನಾಯಿ, ಬೆಕ್ಕು, ಇಲಿ ಆಗುವುದಿಲ್ಲ. ಈಗ ಬೇಹದ್ದಿನ ತಂದೆಯು ಬಂದಿದ್ದಾರೆ. ತಿಳಿಸುತ್ತಾರೆ - ನಾನು ನೀವೆಲ್ಲಾ ಆತ್ಮಗಳ ತಂದೆ ಆಗಿದ್ದೇನೆ, ಇವರೆಲ್ಲರೂ ಕಾಮ ಚಿತೆಯ ಮೇಲೆ ಕುಳಿತು ಕಪ್ಪಾಗಿ ಬಿಟ್ಟಿದ್ದಾರೆ, ಇವರನ್ನು ಮತ್ತೆ ಜ್ಞಾನ ಚಿತೆಯ ಮೇಲೆ ಕುಳ್ಳರಿಸಬೇಕಾಗಿದೆ. ಈಗ ನೀವು ಜ್ಞಾನ ಚಿತೆಯ ಮೇಲೆ ಕುಳಿತಿದ್ದೀರಿ. ಜ್ಞಾನ ಚಿತೆಯನ್ನು ಏರಿ ಮತ್ತೆ ವಿಕಾರದಲ್ಲಿ ಹೋಗಲು ಸಾಧ್ಯವಿಲ್ಲ. ನಾವು ಪವಿತ್ರರಾಗುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತಾರೆ. ತಂದೆಯು ಕೇವಲ ಆ ರಕ್ಷಾ ಬಂಧನವನ್ನು ಕಟ್ಟಿಸುವುದಿಲ್ಲ. ಇದಂತೂ ಭಕ್ತಿಮಾರ್ಗದ ಪದ್ಧತಿಯು ನಡೆಯುತ್ತಾ ಬಂದಿದೆ. ವಾಸ್ತವದಲ್ಲಿ ಇದು ಈ ಸಮಯದ ಮಾತಾಗಿದೆ. ಪವಿತ್ರರಾಗದ ವಿನಃ ಪಾವನ ಪ್ರಪಂಚದ ಮಾಲೀಕರು ಹೇಗಾಗುತ್ತೇವೆ ಎಂದು ನೀವು ತಿಳಿಯುತ್ತೀರಿ. ಆದರೂ ಸಹ ಪರಿಪಕ್ವ ಮಾಡಿಸಲು ಮಕ್ಕಳಿಂದ ಪ್ರತಿಜ್ಞೆ ಮಾಡಿಸಲಾಗುತ್ತದೆ. ಕೆಲವರು ರಕ್ತದಿಂದಲೂ ಬರೆದು ಕೊಡುತ್ತಾರೆ. ಇನ್ನೂ ಕೆಲವರು ಕೆಲವೊಂದು ರೀತಿಯಲ್ಲೂ ಬರೆಯುತ್ತಾರೆ - ಬಾಬಾ, ತಾವು ಬಂದಿದ್ದೀರಿ, ನಾವು ತಮ್ಮಿಂದ ಆಸ್ತಿಯನ್ನು ಅವಶ್ಯವಾಗಿ ಪಡೆಯುತ್ತೇವೆ. ನಿರಾಕಾರನೂ ಸಾಕಾರದಲ್ಲಿ ಬರುತ್ತಾರಲ್ಲವೇ! ಹೇಗೆ ತಂದೆಯು ಪರಮಧಾಮದಿಂದ ಇಳಿಯುತ್ತಾರೆಯೋ ಹಾಗೆಯೇ ನೀವು ಆತ್ಮಗಳು ಇಳಿಯುತ್ತೀರಿ. ಮೇಲಿನಿಂದ ಪಾತ್ರವನ್ನು ಅಭಿನಯಿಸಲು ಕೆಳಗೆ ಇಳಿದು ಬರುತ್ತೀರಿ. ಇದು ಸುಖ ಮತ್ತು ದುಃಖದ ಆಟವಾಗಿದೆ ಎಂದು ನಿಮಗೆ ತಿಳಿದಿದೆ. ಅರ್ಧಕಲ್ಪ ಸುಖ, ಇನ್ನರ್ಧ ಕಲ್ಪ ದುಃಖವಿದೆ. ನೀವು 3/4 ಭಾಗಕ್ಕಿಂತಲೂ ಹೆಚ್ಚಿನ ಸುಖವನ್ನು ಅನುಭವಿಸುತ್ತೀರಿ ಎಂದು ತಂದೆಯು ತಿಳಿಸುತ್ತಾರೆ. ಅರ್ಧಕಲ್ಪದ ನಂತರವು ನೀವು ಎಷ್ಟು ಧನವಂತರಾಗಿದ್ದೀರಿ, ಎಷ್ಟು ದೊಡ್ಡ ಮಂದಿರ ಮೊದಲಾದವುಗಳನ್ನು ಕಟ್ಟಿಸುತ್ತಾರೆ. ದುಃಖವಂತೂ ಅಂತಿಮದಲ್ಲಿ ಆಗುತ್ತದೆ. ಆಗ ಸಂಪೂರ್ಣ ತಮೋಪ್ರಧಾನ ಭಕ್ತಿ ಆಗಿ ಬಿಡುತ್ತದೆ. ನೀವು ಮೊಟ್ಟ ಮೊದಲು ಅವ್ಯಭಿಚಾರಿ ಭಕ್ತರಾಗಿದ್ದೀರಿ, ಕೇವಲ ಒಬ್ಬ ತಂದೆಯ ಭಕ್ತಿಯನ್ನು ಮಾಡುತ್ತಿದ್ದೀರಿ. ಯಾವ ತಂದೆಯು ನಿಮ್ಮನ್ನು ದೇವತೆಗಳಾನ್ನಾಗಿ ಮಾಡುತ್ತಾರೆ, ಸುಖಧಾಮದಲ್ಲಿ ಕರೆದುಕೊಂಡು ಹೋಗುತ್ತಾರೆಯೋ ಅವರದೇ ಪೂಜೆಯನ್ನು ಮಾಡುತ್ತಿದ್ದಿರಿ, ನಂತರ ವ್ಯಭಿಚಾರಿ ಭಕ್ತಿ ಪ್ರಾರಂಭವಾಗಿ ಬಿಡುತ್ತದೆ, ಮೊದಲು ಒಬ್ಬ ತಂದೆಯ ಪೂಜೆ, ನಂತರ ದೇವತೆಗಳ ಪೂಜೆ ಮಾಡುತ್ತಿದ್ದರು. ಈಗಂತೂ ಪಂಚ ಭೂತಗಳಿಂದ ಆಗಿರುವ ಶರೀರಗಳ ಪೂಜೆ ಮಾಡುತ್ತಾರೆ. ಚೈತನ್ಯಕ್ಕೂ ಮತ್ತು ಜಡಕ್ಕೂ ಪೂಜೆ ಮಾಡುತ್ತಾರೆ. ಪಂಚ ತತ್ವಗಳಿಂದ ಆಗಿರುವ ಶರೀರವನ್ನು ದೇವತೆಗಳಿಗಿಂತಲೂ ಶ್ರೇಷ್ಠ ಎಂದು ತಿಳಿಯುತ್ತಾರೆ. ಕೇವಲ ಬ್ರಾಹ್ಮಣರಿಂದಲೇ ದೇವತೆಗಳಿಗೆ ಪೂಜೆ ಆಗುತ್ತದೆ. ನಿಮಗಂತೂ (ಬ್ರಹ್ಮಾರವರಿಗೆ) ಅನೇಕಾನೇಕ ಗುರುಗಳಿದ್ದಾರೆ. ಇದನ್ನು ತಂದೆಯು ಕುಳಿತು ತಿಳಿಸುತ್ತಾರೆ. ನಾನೂ ಸಹ ಎಲ್ಲವನ್ನೂ ಮಾಡಿದೆನು, ಭಿನ್ನ-ಭಿನ್ನ ಹಠಯೋಗ ಇತ್ಯಾದಿ, ಮೂಗು, ಕಿವಿ ತಿರುಗಿಸುವುದು ಮುಂತಾದವುಗಳೆಲ್ಲವನ್ನೂ ಮಾಡಿದೆನು ಎಂದು ಇವರು (ಬ್ರಹ್ಮಾರವರು) ಹೇಳುತ್ತಾರೆ. ಕೊನೆಗೆ ಎಲ್ಲವನ್ನೂ ಬಿಟ್ಟು ಬಿಡಬೇಕಾಯಿತು. ಆ ವ್ಯವಹಾರ ಮಾಡುವುದೇ ಅಥವಾ ಈ ವ್ಯವಹಾರ ಮಾಡುವುದೇ? ಸುಸ್ತಾಗುತ್ತಿತ್ತು. ಬೇಸರ ಆಗುತ್ತಿತ್ತು, ಪ್ರಾಣಾಯಾಮ ಮೊದಲಾದವುಗಳನ್ನು ಕಲಿಯುವುದರಲ್ಲಿ ಬಹಳ ಕಷ್ಟವಾಗುತ್ತದೆ. ಅರ್ಧಕಲ್ಪ ಭಕ್ತಿ ಮಾರ್ಗದಲ್ಲಿ ಇದ್ದೆವು ಎನ್ನುವುದು ಈಗ ತಿಳಿಯುತ್ತದೆ. ಭಕ್ತಿಯು ಪರಂಪರೆಯಿಂದ ನಡೆಯುತ್ತಾ ಬಂದಿದೆ ಎಂದು ಅವರು ಹೇಳುತ್ತಾರೆ ಎಂದು ತಂದೆಯು ಸಂಪೂರ್ಣವಾಗಿ ಸರಿಯಾಗಿ ತಿಳಿಸುತ್ತಾರೆ. ಸತ್ಯಯುಗದಲ್ಲಿ ಭಕ್ತಿಯು ಎಲ್ಲಿರುತ್ತದೆ ಎಂದು ಮನುಷ್ಯರು ತಿಳಿದುಕೊಳ್ಳುವುದೇ ಇಲ್ಲ. ಮೂಢ ಬುದ್ಧಿಯವರಾಗಿದ್ದಾರಲ್ಲವೇ. ಸತ್ಯಯುಗದಲ್ಲಂತೂ ಈ ರೀತಿ ಹೇಳುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಪ್ರತಿ 5000 ವರ್ಷದ ನಂತರ ಬರುತ್ತೇನೆ. ಶರೀರವನ್ನೂ ಸಹ ಯಾರು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲವೋ ಅವರನ್ನು ಆಧಾರವನ್ನಾಗಿ ಪಡೆಯುತ್ತೇನೆ. ಇವರೇ ನಂಬರವನ್ ಸುಂದರನಾಗಿದ್ದರು. ಅವರೇ ಈಗ ಶ್ಯಾಮನಾಗಿ ಬಿಟ್ಟಿದ್ದಾರೆ. ಆತ್ಮವು ಭಿನ್ನ-ಭಿನ್ನ ಶರೀರಗಳನ್ನು ಧಾರಣೆ ಮಾಡುತ್ತದೆ, ಆದ್ದರಿಂದ ನಾನು ಪ್ರವೇಶ ಮಾಡುತ್ತೇನೆ, ಈಗ ಇವರಲ್ಲಿ ಕುಳಿತಿದ್ದೇನೆ ಏನನ್ನು ಕಲಿಸಲು? ಎಂದು ತಂದೆಯು ತಿಳಿಸುತ್ತಾರೆ. ಜೀವಿಸಿದ್ದಂತೆಯೇ ಸಾಯುವುದನ್ನು ಕಲಿಸಲು, ಈ ಪ್ರಪಂಚದಿಂದಂತೂ ಸಾಯಬೇಕಾಗಿದೆಯಲ್ಲವೇ. ಈಗ ನೀವು ಪವಿತ್ರರಾಗಿ ಸಾಯಬೇಕಾಗಿದೆ. ನನ್ನ ಪಾತ್ರವೇ ಪಾವನರನ್ನಾಗಿ ಮಾಡುವುದಾಗಿದೆ. ಹೇ! ಪತಿತ ಪಾವನ ಎಂದು ನೀವು ಭಾರತವಾಸಿಗಳೇ ಕರೆಯುತ್ತೀರಿ. ಹೇ! ಮುಕ್ತಿದಾತ ದುಃಖದ ಪ್ರಪಂಚದಿಂದ ಬಿಡಿಸಲು ಬನ್ನಿ ಎಂದು ಮತ್ತ್ಯಾರೂ ಹೇಳುವುದಿಲ್ಲ. ಎಲ್ಲರೂ ಮುಕ್ತಿಧಾಮಕ್ಕಾಗಿಯೇ ಶ್ರಮ ಪಡುತ್ತಾರೆ. ನೀವು ಮಕ್ಕಳು ಸುಖಧಾಮಕ್ಕಾಗಿ ಪುರುಷಾರ್ಥ ಮಾಡುತ್ತೀರಿ. ನಾವು ಪ್ರವೃತ್ತಿ ಮಾರ್ಗದವರು, ಪವಿತ್ರರಾಗಿದ್ದೆವು ನಂತರ ಅಪವಿತ್ರರಾದೆವು ಎಂದು ನಿಮಗೆ ಗೊತ್ತಿದೆ. ಪ್ರವೃತ್ತಿ ಮಾರ್ಗದವರ ಕಾರ್ಯವನ್ನು ನಿವೃತ್ತಿ ಮಾರ್ಗದವರು ಮಾಡಲು ಸಾಧ್ಯವಿಲ್ಲ. ಯಜ್ಞ, ತಪ, ದಾನ ಮೊದಲಾದವು ಎಲ್ಲವನ್ನು ಪ್ರವೃತ್ತಿ ಮಾರ್ಗದವರು ಮಾಡುತ್ತಾರೆ. ಈಗ ನಾವು ಎಲ್ಲರನ್ನು ತಿಳಿದಿದ್ದೇವೆ ಎಂದು ಈಗ ನೀವು ಅನುಭವ ಮಾಡುತ್ತೀರಿ. ಶಿವ ತಂದೆಯು ನಮ್ಮೆಲ್ಲರಿಗೆ ಮನೆಯಲ್ಲಿ ಕುಳಿತಿದ್ದಂತೆಯೇ ಓದಿಸುತ್ತಿದ್ದಾರೆ. ಬೇಹದ್ದಿನ ತಂದೆಯು ಬೇಹದ್ದಿನ ಸುಖ ಕೊಡುವವರಾಗಿದ್ದಾರೆ, ಅವರೊಂದಿಗೆ ನೀವು ಬಹಳ ಸಮಯದ ನಂತರ ಮಿಲನ ಮಾಡುತ್ತೀರೆಂದರೆ ಪ್ರೇಮದ ಕಣ್ಣೀರು (ಆನಂದ ಬಾಷ್ಪಗಳು) ಬರುತ್ತದೆ. ಬಾಬಾ ಎಂದು ಹೇಳುವುದರಿಂದಲೇ ರೋಮಾಂಚನವಾಗಿ ನಿಂತು ಬಿಡುತ್ತಾರೆ - ಓಹೋ! ನಾವು ಮಕ್ಕಳ ಸೇವೆಯಲ್ಲಿ ತಂದೆಯು ಬಂದಿದ್ದಾರೆ. ತಂದೆಯು ನಮ್ಮನ್ನು ಈ ವಿದ್ಯೆಯಿಂದ ಹೂಗಳನ್ನಾಗಿ ಮಾಡಿ ಕರೆದುಕೊಂಡು ಹೋಗುತ್ತಾರೆ. ಈ ಕೊಳಕು ಛೀ-ಛೀ ಪ್ರಪಂಚದಿಂದ ನಮ್ಮನ್ನು ತಮ್ಮ ಜೊತೆ ಕರೆದುಕೊಂಡು ಹೋಗುತ್ತಾರೆ. ಭಕ್ತಿ ಮಾರ್ಗದಲ್ಲಿ ತಂದೆ, ತಾವು ಬಂದರೆ ನಾವು ಬಲಿಹಾರಿ ಆಗುತ್ತೇವೆ, ನಾವು ತಮ್ಮವರೇ ಆಗುತ್ತೇವೆ, ನಮಗೆ ಮತ್ತ್ಯಾರೂ ಇಲ್ಲ ಎಂದು ನೀವು ಆತ್ಮಗಳು ಹೇಳುತ್ತಿದ್ದಿರಿ. ನಂಬರವಾರಂತೂ ಇದ್ದೇ ಇದೆ. ಎಲ್ಲರದೂ ತಮ್ಮ-ತಮ್ಮ ಪಾತ್ರವಾಗಿದೆ, ಕೆಲವರಂತೂ ತಂದೆಯನ್ನು ಬಹಳ ಪ್ರೀತಿ ಮಾಡುತ್ತಾರೆ. ಯಾವ ತಂದೆಯು ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ಅಳುವ ಹೆಸರೇ ಇರುವುದಿಲ್ಲ. ಇಲ್ಲಂತೂ ಎಷ್ಟು ಅಳುತ್ತಾರೆ, ಸ್ವರ್ಗದಲ್ಲಿ ಹೋದರು ಎಂದರೆ ಏಕೆ ಅಳಬೇಕು ಬದಲಿಗೆ ನಾದ ಸ್ವರಗಳು ಮೊಳಗಬೇಕು ಅಲ್ಲಂತೂ ನಾದ ಸ್ವರಗಳನ್ನು ಮೊಳಗಿಸುತ್ತಾರೆ, ತಮೋಪ್ರಧಾನ ಶರೀರವನ್ನು ಖುಷಿಯಿಂದ ಬಿಟ್ಟು ಬಿಡುತ್ತಾರೆ, ಈ ಪದ್ಧತಿಯು ಇಲ್ಲಿಂದಲೇ ಪ್ರಾರಂಭವಾಗುತ್ತದೆ, ನಾವು ನಮ್ಮ ಮನೆಗೆ ಹೋಗಬೇಕು ಎಂದು ನೀವು ಹೇಳುತ್ತೀರಿ. ಅಲ್ಲಂತೂ ಪುನರ್ಜನ್ಮವನ್ನು ತೆಗೆದುಕೊಳ್ಳಬೇಕಾಗಿದೆ. ಅಂದಾಗ ತಂದೆಯು ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಭ್ರಮರಿಯ ಉದಾಹರಣೆಯು ನಿಮ್ಮದಾಗಿದೆ. ನೀವು ಬ್ರಾಹ್ಮಣಿಯರಾಗಿದ್ದೀರಿ. ಕೊಳಕು ಕೀಟಗಳಿಗೆ ನೀವು ಜ್ಞಾನದ ಧ್ವನಿ (ಬೂ, ಬೂ) ಮಾಡುತ್ತೀರಿ. ಈ ಶರೀರವಂತೂ ಬಿಟ್ಟು ಬಿಡಬೇಕಾಗಿದೆ ಎಂದು ನಿಮಗಂತೂ ತಂದೆಯು ತಿಳಿಸುತ್ತಾರೆ. ಜೀವಿಸಿದ್ದಂತೆ ಸಾಯಬೇಕಾಗಿದೆ ಎಂದಾಗ ತಮ್ಮನ್ನು ಆತ್ಮ ಎಂದು ತಿಳಿಯಿರಿ. ಈಗ ನಾವು ಹಿಂತಿರುಗಿ ಮನೆಗೆ ಹೋಗಬೇಕಾಗಿದೆ, ಆದ್ದರಿಂದ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ದೇಹವನ್ನು ಮರೆತು ಬಿಡಿ. ತಂದೆಯು ಬಹಳ ಮಧುರವಾಗಿದ್ದಾರೆ, ಹೇಳುತ್ತಾರೆ - ನಾನು ನೀವು ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ಈಗ ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡಿ. ತಂದೆ ಮತ್ತು ಆಸ್ತಿ. ಇದು ದುಃಖಧಾಮವಾಗಿದೆ, ಶಾಂತಿಧಾಮವು ನಾವು ಆತ್ಮಗಳ ಮನೆಯಾಗಿದೆ. ಪಾತ್ರವನ್ನು ಅಭಿನಯಿಸಿದೆವು ಈಗ ಮತ್ತೆ ಮನೆಗೆ ಹೋಗಬೇಕಾಗಿದೆ. ಅಲ್ಲಿ ಈ ಛೀ-ಛೀ ಶರೀರವಿರುವುದಿಲ್ಲ. ಈಗ ಇದು ಸಂಪೂರ್ಣ ಜಡ-ಜಡೀಭೂತ ಶರೀರವಾಗಿ ಬಿಟ್ಟಿದೆ. ನಾನೂ ಆತ್ಮನಾಗಿದ್ದೇನೆ, ನೀವು ಆತ್ಮಗಳಾಗಿದ್ದೀರಿ ಎಂದು ಈಗ ನಮಗೆ ತಂದೆಯು ಸನ್ಮುಖದಲ್ಲಿ ಕುಳಿತು ಸನ್ನೆಯಿಂದ ಕಲಿಸುತ್ತಾರೆ. ನಾನು ಶರೀರದಿಂದ ಭಿನ್ನವಾಗಿ ನಿಮಗೂ ಅದನ್ನೇ ಕಲಿಸುತ್ತಿದ್ದೇನೆ. ನೀವೂ ಸಹ ತಮ್ಮನ್ನು ಶರೀರದಿಂದ ಭಿನ್ನ ಎಂದು ತಿಳಿಯಿರಿ. ಈಗ ಮನೆಗೆ ಹೋಗಬೇಕಾಗಿದೆ. ಈಗ ಇಲ್ಲಂತೂ ಇರುವಂತಿಲ್ಲ. ಈಗ ವಿನಾಶವಾಗಲಿದೆ ಎಂದು ನಿಮಗೆ ಗೊತ್ತಿದೆ. ಭಾರತದಲ್ಲಿ ರಕ್ತದ ನದಿಗಳು ಹರಿಯುತ್ತವೆ ನಂತರ ಭಾರತದಲ್ಲಿಯೇ ಹಾಲಿನ ನದಿಗಳು ಹರಿಯುತ್ತವೆ. ಇಲ್ಲಿ ಎಲ್ಲಾ ಧರ್ಮದವರು ಒಟ್ಟಿಗೆ ಇದ್ದಾರೆ. ಎಲ್ಲರೂ ಪರಸ್ಪರ ಹೊಡೆದಾಡಿ ಸಾಯುತ್ತಾರೆ. ಇದು ಅಂತಿಮದ ಮೃತ್ಯುವಾಗಿದೆ. ಪಾಕಿಸ್ತಾನದಲ್ಲಿ ಏನೇನು ಆಗುತ್ತಿತ್ತು! ಬಹಳ ಕಠಿಣ ದೃಶ್ಯವಾಗಿತ್ತು, ಯಾರಾದರೂ ನೋಡಿದರೆ ಮೂರ್ಛಿತರಾಗುತ್ತಾರೆ. ಈಗ ತಂದೆಯು ನಿಮ್ಮನ್ನು ಶಕ್ತಿಶಾಲಿಗಳನ್ನಾಗಿ ಮಾಡುತ್ತಾರೆ. ಶರೀರದ ಪರಿವೆಯನ್ನೂ ಸಹ ತೆಗೆದು ಹಾಕುತ್ತಾರೆ. ತಂದೆಯು ನೋಡಿದರು, ಮಕ್ಕಳು ನೆನಪಿನಲ್ಲಿ ಇರುವುದಿಲ್ಲ, ಬಹಳ ನಿರ್ಬಲರಾಗಿದ್ದಾರೆ, ಆದ್ದರಿಂದ ಸೇವೆಯು ವೃದ್ಧಿ ಆಗುವುದಿಲ್ಲ. ಬಾಬಾ, ನೆನಪು ಮರೆತು ಹೋಗುತ್ತಿರುತ್ತದೆ ಬುದ್ಧಿಗೆ ಹಿಡಿಸುವುದಿಲ್ಲ ಎಂದು ಪದೇ-ಪದೇ ಬರೆಯುತ್ತಾರೆ. ಯೋಗ ಶಬ್ದವನ್ನು ಬಿಟ್ಟು ಬಿಡಿ, ವಿಶ್ವದ ರಾಜ್ಯಭಾಗ್ಯವನ್ನು ಕೊಡುವಂತಹ ತಂದೆಯನ್ನೇ ಮರೆತು ಹೋಗುತ್ತೀರಿ! ಎಂದು ತಂದೆಯು ಹೇಳುತ್ತಾರೆ. ಮೊದಲು ಭಕ್ತಿಯಲ್ಲಿ ಬುದ್ಧಿಯು ಮತ್ತೆಲ್ಲಾದರೂ ಹೊರಟು ಹೋದರೆ ಜಿಗುಟಿಕೊಳ್ಳುತ್ತಿದ್ದೀರಿ. ನೀವು ಆತ್ಮಗಳು ಅವಿನಾಶಿ ಆಗಿದ್ದೀರಿ, ಕೇವಲ ನೀವು ಪಾವನ ಮತ್ತು ಪತಿತರಾಗುತ್ತೀರಿ, ಬಾಕಿ ಆತ್ಮವು ಚಿಕ್ಕದು-ದೊಡ್ದದು ಆಗುವುದಿಲ್ಲ ಎಂದು ತಂದೆಯು ಹೇಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಓಹೋ! ತಂದೆಯು ನಮ್ಮ ಸೇವೆಯಲ್ಲಿ ಬಂದಿದ್ದಾರೆ, ಅವರು ನಮಗೆ ಮನೆಯಲ್ಲಿ ಕುಳಿತಿದ್ದಂತೆಯೇ ಓದಿಸುತ್ತಿದ್ದಾರೆ ಎಂದು ತಮ್ಮೊಂದಿಗೆ ತಾವೇ ಮಾತನಾಡಿಕೊಳ್ಳಿ. ಬೇಹದ್ದಿನ ತಂದೆಯು ಬೇಹದ್ದಿನ ಸುಖ ಕೊಡುವವರಾಗಿದ್ದಾರೆ. ಅವರೊಂದಿಗೆ ನಾವು ಈಗ ಮಿಲನ ಮಾಡಿದ್ದೇವೆ, ಹೀಗೆ ಪ್ರೀತಿಯಿಂದ ಬಾಬಾ, ಎಂದು ಹೇಳಿ ಮತ್ತು ಖುಷಿಯಲ್ಲಿ ಪ್ರೇಮದ ಕಣ್ಣೀರು ಬರಲಿ, ರೋಮಾಂಚನವಾಗಬೇಕು.

2. ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ, ಆದ್ದರಿಂದ ಎಲ್ಲದರಿಂದ ಮಮತ್ವವನ್ನು ತೆಗೆದು ಜೀವಿಸಿದ್ದಂತೆಯೇ ಸಾಯಬೇಕಾಗಿದೆ. ಈ ದೇಹವನ್ನೂ ಸಹ ಮರೆಯಬೇಕಾಗಿದೆ. ಇದರಿಂದ ಭಿನ್ನರಾಗುವ ಅಭ್ಯಾಸ ಮಾಡಬೇಕಾಗಿದೆ.


ವರದಾನ:
ಕರ್ಮಗಳ ಲೆಕ್ಕಾಚಾರವನ್ನು ತಿಳಿದುಕೊಂಡು ತಮ್ಮ ಅಚಲ ಸ್ಥಿತಿ ಮಾಡಿಕೊಳ್ಳುವಂತಹ ಸಹಜಯೋಗಿ ಭವ.

ನಡೆಯುತ್ತಾ-ನಡೆಯುತ್ತಾ ಒಂದುವೇಳೆ ಯಾವುದೇ ಲೆಕ್ಕಾಚಾರ ಎದುರಿಗೆ ಬಂದಾಗ ಅದರಲ್ಲಿ ಮನಸ್ಸನ್ನು ಅಲುಗಾಡಿಸಬೇಡಿ, ಸ್ಥಿತಿಯನ್ನು ಮೇಲೆ ಕೆಳಗೆ ಮಾಡಿಕೊಳ್ಳಬೇಡಿ. ಒಂದುವೇಳೆ ಅದು ಬಂದರೆ ಅದನ್ನು ಗುರುತಿಸಿ ದೂರದಿಂದಲೇ ಸಮಾಪ್ತಿ ಮಾಡಿ ಬಿಡಿ. ಈಗ ಯೋಧ ಆಗಬೇಡಿ. ಸರ್ವ ಶಕ್ತಿವಂತ ತಂದೆ ಜೊತೆಯಲ್ಲಿದ್ದಾಗ ಮಾಯೆ ಅಲುಗಾಡಿಸಲು ಸಾಧ್ಯವಿಲ್ಲ. ಕೇವಲ ನಿಶ್ಚಯದ ಅಡಿಪಾಯವನ್ನು ಕಾರ್ಯ ರೂಪದಲ್ಲಿ ತನ್ನಿ ಮತ್ತು ಸಮಯದಲ್ಲಿ ಉಪಯೋಗಿಸಿ ಆಗ ಸಹಜಯೋಗಿಗಳಾಗಿ ಬಿಡುವಿರಿ. ಈಗ ನಿರಂತರ ಯೋಗಿಗಳಾಗಿ, ಯುದ್ಧ ಮಾಡುವಂತಹ ಯೋಧ ಅಲ್ಲ.

ಸ್ಲೋಗನ್:
ಡಬಲ್ ಲೈಟ್ ಆಗಿರಬೇಕಾದರೆ ತಮ್ಮ ಸರ್ವ ಜವಾಬ್ದಾರಿಗಳ ಹೊರೆಯನ್ನು ತಂದೆಗೆ ಒಪ್ಪಿಸಿ ಬಿಡಿ.