ಪ್ರಾತಃಮುರುಳಿ ಓಂ ಶಾಂತಿ "ಬಾಪ್‌ದಾದಾ" ಮಧುಬನ


“ಮಧುರ ಮಕ್ಕಳೇ - ನೀವು ಹೂಗಳಾಗಿ ಎಲ್ಲರಿಗೂ ಸುಖ ಕೊಡಬೇಕಾಗಿದೆ, ಹೂವಿನಂತಹ ಮಕ್ಕಳು ಮುಖದಿಂದ ರತ್ನಗಳನ್ನು ಹೊರಹಾಕುತ್ತಾರೆ”

ಪ್ರಶ್ನೆ :

ಹೂವಾಗುವ ಮಕ್ಕಳ ಪ್ರತಿ ಭಗವಂತನು ಯಾವ ಶಿಕ್ಷಣ ಕೊಡುತ್ತಾರೆ, ಇದರಿಂದ ಅವರು ಸದಾ ಸುಗಂಧಭರಿತರಾಗಿರುತ್ತಾರೆ?

ಉತ್ತರ :

ಹೇ ನನ್ನ ಹೂವಿನಂತಹ ಮಕ್ಕಳೇ - ನೀವು ನಿಮ್ಮಲ್ಲಿ ನೋಡಿಕೊಳ್ಳಿ, ನನ್ನಲ್ಲಿ ಯಾವುದೇ ರೀತಿಯ ಆಸುರೀ ಅವಗುಣಗಳರೂಪಿ ಮುಳ್ಳು ಇಲ್ಲವೆ? ಒಂದುವೇಳೆ ಒಳಗೆ ಅಂತಹ ಮುಳ್ಳು ಇದ್ದರೆ ಬೇರೆಯವರ ಅವಗುಣದೊಂದಿಗೆ ದ್ವೇಷ ಬರುತ್ತದೆ, ಅದೇರೀತಿ ತಮ್ಮ ಆಸುರೀ ಅವಗುಣದ ಜೊತೆ ದ್ವೇಷಿಸಿದ್ದೇ ಆದರೆ ಆ ಮುಳ್ಳು ಹೊರಟುಹೋಗುತ್ತದೆ. ತಮ್ಮನ್ನು ನೋಡಿಕೊಳ್ಳಿ. ಮನಸಾ-ವಾಚಾ-ಕರ್ಮಣಾ ಯಾವುದೇ ವಿಕರ್ಮವಂತೂ ಆಗುತ್ತಿಲ್ಲವೆ ಯಾವುದರಿಂದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ಓಂಶಾಂತಿ .

ಆತ್ಮೀಯ ಮಕ್ಕಳಪ್ರತಿ ಆತ್ಮೀಯ ತಂದೆಯು ಕುಳಿತು ತಿಳಿಸುತ್ತಿದ್ದಾರೆ. ಈ ಸಮಯದಲ್ಲಿ ರಾವಣರಾಜ್ಯವಾಗಿರುವ ಕಾರಣ ಮನುಷ್ಯರೆಲ್ಲರೂ ದೇಹಾಭಿಮಾನಿಗಳಾಗಿದ್ದಾರೆ ಆದ್ದರಿಂದ ಅವರನ್ನು ಕಾಡಿನ ಮುಳ್ಳುಗಳೆಂದು ಹೇಳಲಾಗುತ್ತದೆ. ಇದನ್ನು ಬೇಹದ್ದಿನ ತಂದೆಯು ತಿಳಿಸುತ್ತಾರೆ. ಈಗ ಮುಳ್ಳಿನಿಂದ ಹೂವಾಗುತ್ತಿದ್ದೀರಿ, ಕೆಲಕೆಲವೊಮ್ಮೆ ಹೂವಾಗುತ್ತಾ-ಆಗುತ್ತಾ ಮಾಯೆಯು ಮುಳ್ಳನ್ನಾಗಿ ಮಾಡಿಬಿಡುತ್ತದೆ, ಅದಕ್ಕಾಗಿ ಮುಳ್ಳಿನ ಕಾಡೆಂದು ಹೇಳಲಾಗುತ್ತದೆ. ಇದರಲ್ಲಿ ಅನೇಕ ಪ್ರಕಾರದ ಪ್ರಾಣಿಗಳ ರೀತಿಯಿರುವ ಮನುಷ್ಯರಿದ್ದಾರೆ. ಮನುಷ್ಯರಂತೆಯೇ ಇರುತ್ತಾರೆ ಆದರೆ ಒಬ್ಬರಿಗೊಬ್ಬರು ಪ್ರಾಣಿಗಳಂತೆ ಜಗಳವಾಡುತ್ತಿರುತ್ತಾರೆ. ಮನೆಮನೆಯಲ್ಲಿ ಜಗಳವುಂಟಾಗಿದೆ. ವಿಷಯ ಸಾಗರದಲ್ಲಿ ಎಲ್ಲರೂ ಇದ್ದಾರೆ, ಇಡೀ ಪ್ರಪಂಚವು ದೊಡ್ಡ ವಿಷದ ಸಾಗರವಾಗಿದೆ, ಇದರಲ್ಲಿ ಮನುಷ್ಯರು ಮುಳುಗುತ್ತಿದ್ದಾರೆ. ಇದಕ್ಕೆ ಪತಿತ, ಭ್ರಷ್ಟಾಚಾರಿ ಪ್ರಪಂಚವೆಂದು ಕರೆಯಲಾಗುತ್ತದೆ. ಈಗ ನೀವು ಮುಳ್ಳುಗಳಿಂದ ಹೂಗಳಾಗುತ್ತಿದ್ದೀರಿ. ತಂದೆಯನ್ನು ಭಗವಂತನೆಂದು ಕರೆಯಲಾಗುತ್ತದೆ. ತಂದೆಯು ತಿಳಿಸುತ್ತಾರೆ - ಗೀತೆಯಲ್ಲಿ ಜ್ಞಾನದ ಮಾತುಗಳಿವೆ ಅಂದಮೇಲೆ ಮನುಷ್ಯರ ಚಲನೆಯು ಹೇಗಿದೆ ಎಂದು ಭಾಗವತದಲ್ಲಿ ವರ್ಣನೆಯಿದೆ. ಏನೇನೆಲ್ಲಾ ಮಾತುಗಳನ್ನು ಬರೆದುಬಿಟ್ಟಿದ್ದಾರೆ! ಸತ್ಯಯುಗದಲ್ಲಿ ಈ ರೀತಿ ಹೇಳುತ್ತಾರೆಯೇ! ಸತ್ಯಯುಗದಲ್ಲಂತೂ ಹೂವಿನ ತೋಟವಿರುತ್ತದೆ. ಈಗ ನೀವು ಹೂಗಳಾಗುತ್ತಿದ್ದೀರಿ. ಹೂಗಳಾಗಿ ಮತ್ತೆ ಮುಳ್ಳುಗಳಾಗುತ್ತೀರಿ. ಇಂದು ಬಹಳ ಚೆನ್ನಾಗಿ ನಡೆಯುತ್ತಿರುತ್ತಾರೆ ಮತ್ತೆ ಮಾಯೆಯ ಬಿರುಗಾಳಿಯು ಬಂದುಬಿಡುತ್ತದೆ. ಕುಳಿತು-ಕುಳಿತಿದ್ದಂತೆಯೇ ಮಾಯೆಯು ಎಂತಹ ಸ್ಥಿತಿಯನ್ನಾಗಿ ಮಾಡುತ್ತದೆ! ನಾನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ನಾವು ವಿಶ್ವದ ಮಾಲೀಕರಾಗಿದ್ದೇವೆ ಎಂದು ಭಾರತದವರೂ ಹೇಳುತ್ತಾರೆ, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇದು ನೆನ್ನೆಯ ಮಾತಾಗಿದೆ, ವಜ್ರ-ವೈಡೂರ್ಯಗಳ ಮಹಲುಗಳಿತ್ತು, ಅದನ್ನು ಅಲ್ಲಾನ ಹೂದೋಟವೆಂದು ಕರೆಯಲಾಗುತ್ತದೆ. ಈಗ ಇಲ್ಲಿಯೇ ಕಾಡಿದೆ ಅಂದಾಗ ಮತ್ತೆ ಇಲ್ಲಿಯೇ ತೋಟವಾಗಬೇಕಲ್ಲವೆ. ಭಾರತವು ಸ್ವರ್ಗವಾಗಿತ್ತು, ಅದರಲ್ಲಿ ಹೂಗಳೇ ಹೂಗಳಿದ್ದವು. ತಂದೆಯು ಹೂದೋಟವನ್ನಾಗಿ ಮಾಡುತ್ತಾರೆ, ಹೂವಾಗುತ್ತಾ-ಆಗುತ್ತಾ ಸಂಗದೋಷದಲ್ಲಿ ಬಂದು ಹಾಳಾಗುತ್ತಾರೆ. ಸಾಕು ಬಾಬಾ, ನಾವಂತೂ ವಿವಾಹ ಮಾಡಿಕೊಳ್ಳುತ್ತೇವೆಂದು ಹೇಳುತ್ತಾರೆ. ಮಾಯೆಯ ಶೋ ನೋಡುತ್ತಾರಲ್ಲವೆ. ಇಲ್ಲಂತೂ ಅವಶ್ಯವಾಗಿ ಶಾಂತಿಯಿದೆ, ಈ ಸಂಪೂರ್ಣ ಪ್ರಪಂಚವು ಒಂದು ಕಾಡಾಗಿದೆ, ಕಾಡಿಗೆ ಅವಶ್ಯವಾಗಿ ಬೆಂಕಿ ಬೀಳಲಿದೆ. ಕಾಡಿನಲ್ಲಿರುವವರೂ ಸಹ ಸಮಾಪ್ತಿಯಾಗುತ್ತಾರಲ್ಲವೆ. 5000 ವರ್ಷಗಳ ಮೊದಲಿನಂತೆಯೇ ಈಗಲೂ ಸಹ ಬೆಂಕಿ ಹತ್ತಿಕೊಳ್ಳಲಿದೆ ಯಾವುದಕ್ಕೆ ಮಹಾಭಾರತ ಯುದ್ದವೆಂದು ಹೆಸರನ್ನಿಡಲಾಗಿದೆ. ಅಟಾಮಿಕ್ ಬಾಂಬಿನ ಯುದ್ದವು ಮೊದಲು ಯಾದವರಿಂದಲೇ ಆಗುತ್ತದೆ, ಅದೂ ಸಹ ಗಾಯನವಿದೆ. ವಿಜ್ಞಾನದಿಂದ ಬಾಂಬುಗಳು ಮಾಡಿದರು, ಶಾಸ್ತ್ರಗಳಲ್ಲಿ ಬಹಳ ಕಥೆಗಳನ್ನು ಬರೆದಿದ್ದಾರೆ. ಹೊಟ್ಟೆಯಿಂದ ಯಾವುದೇ ಒನಕೆ ಬರಲು ಸಾಧ್ಯವಿಲ್ಲ ಎಂದು ತಂದೆಯು ಹೇಳುತ್ತಾರೆ. ಆಗ ನೀವು ನೋಡುತ್ತೀರಿ - ವಿಜ್ಞಾನದಿಂದ ಬಾಂಬು ಇತ್ಯಾದಿಗಳನ್ನೂ ಮಾಡುತ್ತಾರೆ, ಕೇವಲ ಎರಡು ಬಾಂಬನ್ನು ಹಾಕಿದ್ದರಿಂದಲೇ ಎಷ್ಟೊಂದು ಪಟ್ಟಣಗಳು ನಾಶವಾಯಿತು, ಎಷ್ಟೊಂದು ಜನರು ಮರಣ ಹೊಂದಿದರು, ಎಷ್ಟೊಂದು ನಷ್ಟವಾಯಿತು. ಇಷ್ಟು ದೊಡ್ಡ ಕಾಡಿನಲ್ಲಿ ಕೋಟಿಗಟ್ಟಲೆ ಮನುಷ್ಯರಿದ್ದಾರೆ, ಇದಕ್ಕೆ ಬೆಂಕಿ ಹತ್ತಿಕೊಳ್ಳುವುದಿದೆ. ತಂದೆಯಂತು ದಯಾಹೃದಯಿಯಾಗಿದ್ದಾರೆ, ಎಲ್ಲರ ಕಲ್ಯಾಣ ಮಾಡಬೇಕಲ್ಲವೆ. ಅವರೆಲ್ಲಾ ಮತ್ತೆ ಎಲ್ಲಿಗೆ ಹೋಗುತ್ತಾರೆ? ಅವಶ್ಯವಾಗಿ ನೋಡುತ್ತಾರೆ- ಬೆಂಕಿ ಬೀಳುತ್ತಿದೆ ಎಂದರೆ ಮತ್ತೆ ತಂದೆಯ ಆಶ್ರಯದಲ್ಲಿ ಬರುತ್ತಾರೆ. ತಂದೆಯು ಸರ್ವರ ಸದ್ಗತಿದಾತ, ಪುನರ್ಜನ್ಮ ರಹಿತನಾಗಿದ್ದಾರೆ ನಂತರ ಅವರನ್ನು ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ. ಈಗ ನೀವು ಸಂಗಮಯುಗಿಗಳಾಗಿದ್ದೀರಿ. ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ. ಮಿತ್ರಸಂಬಂಧಿಗಳ ಜೊತೆ ನಿಭಾಯಿಸಬೇಕಲ್ಲವೆ. ಅವರಲ್ಲಿ ಅಸುರೀಗುಣವಿದೆ, ನಿಮ್ಮಲ್ಲಿ ದೈವೀಗುಣವಿದೆ ಅಂದಮೇಲೆ ಅನ್ಯರಿಗೂ ಇದನ್ನು ಕಲಿಸುವುದೇ ನಿಮ್ಮ ಕೆಲಸವಾಗಿದೆ, ಮಂತ್ರವನ್ನು ಕೊಡುತ್ತಲೇ ಇರಬೇಕು. ಪ್ರದರ್ಶನಿಯ ಮುಖಾಂತರ ನೀವು ಎಷ್ಟೊಂದು ತಿಳಿಸುತ್ತೀರಿ, 84 ಜನ್ಮಗಳು ಭಾರತವಾಸಿಗಳಾಗಿದ್ದಾರೆ. ಈಗ ತಂದೆಯು ಮನುಷ್ಯರನ್ನು ದೇವತೆಗಳನ್ನಾಗಿ ಮಾಡಲು ಬಂದಿದ್ದಾರೆ ಅಂದರೆ ನರಕವಾಸಿ ಮನುಷ್ಯರನ್ನು ಸ್ವರ್ಗವಾಸಿ ಮಾಡುತ್ತಾರೆ. ದೇವತೆಗಳು ಸ್ವರ್ಗದಲ್ಲಿರುತ್ತಾರೆ, ಈಗ ತಮಗೆ ಆಸುರೀಗುಣಗಳ ಮೇಲೆ ದ್ವೇಷ ಬರಬೇಕು. ಈಗ ನನ್ನಲ್ಲಿ ದೈವೀಗುಣಗಳು ಎಷ್ಟು ಬಂದಿದೆ, ನನ್ನಲ್ಲಿ ಯಾವುದೇ ಆಸುರೀ ಗುಣವಿಲ್ಲವೆ? ಮನಸಾ-ವಾಚಾ-ಕರ್ಮಣಾದಿಂದ ಯಾವುದೇ ಆಸುರೀ ಕಾರ್ಯವಾಗಿಲ್ಲವೆ? ನಾವು ಮುಳ್ಳುಗಳಿಂದ ಹೂಗಳನ್ನಾಗಿ ಮಾಡುವ ವ್ಯಾಪಾರ ಮಾಡುತ್ತಿದ್ದೇನೆಯೇ ಅಥವಾ ಇಲ್ಲವೆ? ತಂದೆಯು ಮಾಲೀಕನಾಗಿದ್ದಾರೆ, ನೀವು ಬ್ರಹ್ಮಾ ಕುಮಾರ-ಕುಮಾರಿಯರು ಮಾಲಿಗಳಾಗಿದ್ದೀರಿ. ವಿಧವಿಧವಾದ ಮಾಲಿಗಳಿರುತ್ತಾರೆ, ಕೆಲವರು ಬುದ್ಧಿಹೀನರಿರುತ್ತಾರೆ ಅವರು ಅನ್ಯರನ್ನು ತಮ್ಮಸಮಾನ ಮಾಡಿಕೊಳ್ಳಲು ಸಾಧ್ಯವಿಲ್ಲ. ಪ್ರದರ್ಶನಿಯಲ್ಲಿ ಮಾಲೀಕನಂತೂ ಬರಲು ಸಾಧ್ಯವಿಲ್ಲ, ಮಾಲಿಗಳು ಹೋಗುತ್ತಾರೆ. ಈ ಮಾಲಿಯು (ಬ್ರಹ್ಮಾ) ಶಿವತಂದೆಯ ಜೊತೆಯಲ್ಲಿ ಇರುವುದರಿಂದ ಹೋಗಲು ಸಾಧ್ಯವಿಲ್ಲ. ನೀವು ಮಾಲಿಗಳು ಸೇವೆ ಮಾಡಲು ಹೋಗುತ್ತೀರಿ, ಒಳ್ಳೊಳ್ಳೆಯ ಮಾಲಿಗಳನ್ನೂ ಸಹ ಕರೆಸುತ್ತಾರೆ. ತಿಳುವಳಿಕೆಯಿಲ್ಲದವರನ್ನು ಕರೆಯಬೇಡಿ ಎಂದು ತಂದೆಯೂ ಸಹ ತಿಳಸುತ್ತಾರೆ. ತಂದೆಯು ಹೆಸರನ್ನಂತೂ ತಿಳಿಸುವುದಿಲ್ಲ. ಥರ್ಡ್ ಕ್ಲಾಸ್ ಮಾಲಿಗಳೂ ಸಹ ಇರುತ್ತಾರಲ್ಲವೆ. ಮಾಲೀಕನಿಗೆ ಯಾರು ಒಳ್ಳೊಳ್ಳೆಯ ಹೂಗಳನ್ನಾಗಿ ಮಾಡಿ ತೋರಿಸುತ್ತಾರೆ ಅವರನ್ನೇ ಪ್ರೀತಿ ಮಾಡುತ್ತಾರೆ. ಅವರಮೇಲೆ ಮಾಲೀಕನಿಗೆ ಖುಷಿಯಾಗುತ್ತದೆ. ಬಾಯಿಂದ ಸದಾ ರತ್ನಗಳೇ ಹೊರಬರುತ್ತದೆ. ಕೆಲವರ ಬಾಯಿಂದ ರತ್ನದ ಬದಲಾಗಿ ಕಲ್ಲುಗಳು ಹೊರಬಂದರೆ ಏನು ಹೇಳುತ್ತಾರೆ! ಶಿವನ ಮೇಲೆ ಎಕ್ಕದ ಹೂವನ್ನು ಹಾಕುತ್ತಾರಲ್ಲವೆ. ಕೆಲವರು ಬೇರೆ ಹೂವನ್ನು ಹಾಕುತ್ತಾರೆ. ಅವರ ನಡವಳಿಕೆ ನೋಡಿ ಹೇಗಿದೆ! ಮುಳ್ಳುಗಳನ್ನೂ ಹಾಕುತ್ತಾರೆ, ಮುಳ್ಳುಗಳನ್ನು ಹಾಕಿ ನಂತರ ಕಾಡಿಗೆ ಹೊರಟುಹೋಗುತ್ತಾರೆ. ಸತೋಪ್ರಧಾನರಾಗುವ ಬದಲಾಗಿ ಇನ್ನಷ್ಟು ತಮೋಪ್ರಧಾನರಾಗಿ ಬಿಡುತ್ತಾರೆ. ಮುಂದೆ ಅವರ ಗತಿಯೇನಾಗಬಹುದು! ನಾನೊಬ್ಬನೇ ನಿಷ್ಕಾಮಿ, ಪರೋಪಕಾರಿ ಆಗಿದ್ದೇನೆಂದು ತಂದೆಯು ತಿಳಿಸುತ್ತಾರೆ. ಪರೋಪಕಾರವನ್ನು ಭಾರತದವರ ಮೇಲೆ ಮಾಡುತ್ತೇನೆ ಯಾರು ನಮ್ಮಮೇಲೆ ಬಹಳ ನಿಂದನೆ ಮಾಡುತ್ತಾರೆ. ನಾನು ಇದೇ ಸಮಯದಲ್ಲಿ ಬಂದು ಸ್ವರ್ಗಸ್ಥಾಪನೆ ಮಾಡುತ್ತೇನೆಂದು ತಿಳಿಸುತ್ತಾರೆ. ಯಾರಿಗಾದರೂ ಸ್ವರ್ಗಕ್ಕೆ ಹೋಗಿ ಎಂದು ಹೇಳಿದರೆ ನಾವಂತೂ ಸ್ವರ್ಗದಲ್ಲಿಯೇ ಇದ್ದೇವೆಂದು ಹೇಳುತ್ತಾರೆ, ಅರೆ! ಸ್ವರ್ಗವಂತೂ ಸತ್ಯಯುಗದಲ್ಲಿ ಇರುತ್ತದೆಯಲ್ಲವೆ. ಕಲಿಯುಗದಲ್ಲಿ ಸ್ವರ್ಗವೆಲ್ಲಿಂದ ಬಂದಿತು! ಕಲಿಯುಗವನ್ನು ನರಕವೆಂದೇ ಕರೆಯಲಾಗುತ್ತದೆ. ಇದು ಹಳೆಯ, ತಮೋಪ್ರಧಾನ ಪ್ರಪಂಚವಾಗಿದೆ, ಮನುಷ್ಯರಿಗೆ ಸ್ವರ್ಗವು ಎಲ್ಲಿರುತ್ತದೆ ಎಂದು ಗೊತ್ತಿಲ್ಲ. ಸ್ವರ್ಗವು ಆಕಾಶದಲ್ಲಿದೆ ಎಂದು ತಿಳಿದುಕೊಂಡಿರುತ್ತಾರೆ. ದಿಲ್‌ವಾಡಾ ಮಂದಿರದಲ್ಲಿಯೂ ಸಹ ಸ್ವರ್ಗವನ್ನು ಮೇಲೆ ತೋರಿಸಿದ್ದಾರೆ, ಕೆಳಗೆ ತಪಸ್ಸು ಮಾಡುತ್ತಿದ್ದಾರೆ ಆದ್ದರಿಂದ ಇಂತಹವರು ಸ್ವರ್ಗಸ್ಥರಾದರೆಂದು ಮನುಷ್ಯರು ಹೇಳುತ್ತಾರೆ. ಸ್ವರ್ಗವೆಲ್ಲಿದೆ? ಎಲ್ಲರೂ ಸ್ವರ್ಗಸ್ಥರಾದರೆಂದು ಹೇಳಿಬಿಡುತ್ತಾರೆ. ಇದು ವಿಷಯ ಸಾಗರವಾಗಿದೆ. ಕ್ಷೀರಸಾಗರವನ್ನು ವಿಷ್ಣುಪುರಿಗೆ ಹೇಳಲಾಗುತ್ತದೆ ಅವರು ಪೂಜೆಗಾಗಿ ಒಂದು ದೊಡ್ಡ ಕೊಳವನ್ನು ಮಾಡಿ ಅದರಲ್ಲಿ ವಿಷ್ಣುವನ್ನು ಕೂರಿಸುತ್ತಾರೆ ಈಗ ನೀವು ಮಕ್ಕಳು ಸ್ವರ್ಗವನ್ನು ತಯಾರು ಮಾಡುತ್ತಿದ್ದೀರಿ ಎಲ್ಲಿ ಹಾಲಿನ ನದಿಗಳೇ ಇರುತ್ತವೆ. ಈಗ ನೀವು ಮಕ್ಕಳು ಹೂಗಳಾಗುತ್ತೀರಿ. ಇವರಂತೂ ಮುಳ್ಳುಗಳಾಗಿದ್ದಾರೆ ಎಂಬ ಚಲನೆಯು ಎಂದೂ ಇರಬಾರದು ಸದಾ ಹೂವಾಗುವುದಕ್ಕಾಗಿಯೇ ಪುರುಷಾರ್ಥ ಮಾಡಿ, ಮಾಯೆಯು ಮುಳ್ಳುನ್ನಾಗಿ ಮಾಡಿಬಿಡುತ್ತದೆ ಆದ್ದರಿಂದ ಬಹಳ ಸಂಭಾಲನೆ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಗೃಹಸ್ಥವ್ಯವಹಾರದಲ್ಲಿದ್ದು ಕಮಲಪುಷ್ಪ ಸಮಾನ ಪವಿತ್ರರಾಗಬೇಕಾಗಿದೆ. ಮಾಲಿಯು ಮುಳ್ಳುಗಳಿಂದ ಹೂವನ್ನಾಗಿ ಮಾಡಲು ಬಂದಿದ್ದಾರೆ ಅಂದಾಗ ನಾವು ಎಷ್ಟು ಹೂವಾಗಿದ್ದೇವೆಂದು ನೋಡಿಕೊಳ್ಳಬೇಕು. ಹೂಗಳಿಗೆ ಸೇವೆ ಮಾಡಲು ಎಲ್ಲಾ ಕಡೆಯೂ ಕರೆಯುತ್ತಾರೆ. ಬಾಬಾ ಗುಲಾಬಿ ಹೂಗಳನ್ನೇ ಕಳುಹಿಸಿ ಎಂದು ಹೇಳುತ್ತಾರೆ. ಯಾರು ಎಂತಹ ಹೂಗಳೆಂದು ಕಾಣಿಸುತ್ತದೆಯಲ್ಲವೆ. ನಾನು ನಿಮಗೆ ರಾಜಯೋಗವನ್ನು ಕಲಿಸಲು ಬರುತ್ತೇನೆ, ಇದು ಸತ್ಯನಾರಾಯಣನ ಕಥೆಯಾಗಿದೆ, ಸತ್ಯಪ್ರಜೆಗಳ ಕಥೆಯಲ್ಲ. ರಾಜ-ರಾಣಿಯಾಗುತ್ತಾರೆ ಎಂದರೆ ಪ್ರಜೆಗಳೂ ಆಗುತ್ತಾರೆ ಎಂದು ತಿಳಿದುಕೊಳ್ಳಬೇಕಾಗಿದೆ. ಈಗ ನೀವು ತಿಳಿದುಕೊಂಡಿದ್ದೀರಿ - ಯಥಾರಾಜ-ರಾಣಿ ತಥಾ ಪ್ರಜಾ ಹೇಗಾಗುತ್ತಾರೆ ಎಂದು. ಬಡವರಬಳಿ 2-5 ರೂಪಾಯಿಯೇ ಇಲ್ಲವೆಂದಮೇಲೆ ಏನು ಕೊಡುತ್ತಾರೆ! ಸಾವಿರ ರೂ ಕೊಡುವವರಿಗೆ ಎಷ್ಟು ಸಿಗುತ್ತದೆಯೋ ಅಷ್ಟೇ ಬಡವರಿಗೂ ಸಿಗುತ್ತದೆ. ಎಲ್ಲದಕ್ಕಿಂತ ಈ ಭಾರತವು ಬಡರಾಷ್ಟ್ರವಾಗಿದೆ. ಯಾರಿಗೂ ಸಹ ನಾವು ಸ್ವರ್ಗವಾಸಿಗಳಾಗಿದ್ದೆವೆಂದು ತಿಳಿದಿಲ್ಲ. ದೇವತೆಗಳ ಮಹಿಮೆಯನ್ನಂತೂ ಹಾಡುತ್ತಾರೆ ಆದರೆ ಏನೂ ತಿಳಿದುಕೊಂಡಿಲ್ಲ. ಬುಲ್‌ಬುಲ್ ಕಂಠವು ಎಷ್ಟು ಮಧುರವಾಗಿದೆ ಆದರೆ ಅರ್ಥವೇ ಇಲ್ಲ. ಇತ್ತೀಚೆಗಂತೂ ಗೀತೆಯನ್ನು ಹಾಡುವವರು ಬಹಳಷ್ಟು ಮಂದಿಯಿದ್ದಾರೆ, ಮಾತೆಯರೂ ಬಹಳಷ್ಟಿದ್ದಾರೆ. ಗೀತೆಯಿಂದ ಯಾವ ಧರ್ಮಸ್ಥಾಪನೆಯಾಯಿತು ಎಂಬುದನ್ನಂತೂ ತಿಳಿದೇ ಇಲ್ಲ. ಏನೋ ಸ್ವಲ್ಪ ರಿದ್ಧಿಸಿದ್ಧಿಯಿಂದ ತೋರಿಸಿದರೆ ಇವರೇ ಭಗವಂತನೆಂದು ತಿಳಿದುಬಿಡುತ್ತಾರೆ. ಪತಿತ- ಪಾವನ ಎಂದು ಹಾಡುತ್ತಾರೆಂದರೆ ಪತಿತರಾದರಲ್ಲವೆ. ವಿಕಾರದಲ್ಲಿ ಹೋಗುವುದೇ ನಂಬರ್‌ವನ್ ಪತಿತತನವಾಗಿದೆ, ಇಡೀ ಪ್ರಪಂಚವೇ ಪತಿತವಾಗಿದೆ, ಪತಿತ-ಪಾವನ ಬಾ ಎಂದು ಎಲ್ಲರೂ ಕೂಗುತ್ತಾರೆ. ಈಗ ಅವರು ಬರಬೇಕೋ ಅಥವಾ ಗಂಗಾಸ್ನಾನದಿಂದಲೇ ಪಾವನರಾಗಬಹುದೇ? ಮನುಷ್ಯರಿಂದ ದೇವತೆಗಳಾಗಲು ಎಷ್ಟೊಂದು ಪರಿಶ್ರಮ ಪಡಬೇಕಾಗುವುದು. ನನ್ನನ್ನು ನೆನಪು ಮಾಡುವುದರಿಂದ ನೀವು ಮುಳ್ಳುಗಳಿಂದ ಹೂಗಳಾಗುತ್ತೀರಿ. ಬಾಯಿಂದ ಎಂದೂ ಕಲ್ಲುಗಳು ಬರಬಾರದು, ಹೂಗಳೇ ಆಗಿ. ಇದು ವಿದ್ಯೆಯಾಗಿದೆಯಲ್ಲವೆ. ನಡೆಯುತ್ತಾ-ನಡೆಯುತ್ತಾ ಈ ರೀತಿ ಗ್ರಹಚಾರ ಕುಳಿತುಕೊಳ್ಳುತ್ತದೆ ನಂತರ ಅನುತ್ತೀರ್ಣರಾಗಿಬಿಡುತ್ತಾರೆ. ಸಂಪೂರ್ಣ ಭರವಸೆಯಿರುವವರಿಂದ ಭರವಸೆಯಿಲ್ಲದಂತಾಗಿ ಮತ್ತೆ ತಂದೆಯ ಬಳಿ ಹೋಗಬೇಕೆಂದು ಹೇಳುತ್ತಾರೆ. ಇಂದ್ರಸಭೆಯಲ್ಲಿ ಪತಿತರು ಬರಲು ಸಾಧ್ಯವೇ! ಇದು ಇಂದ್ರಸಭೆಯಲ್ಲವೆ. ಬ್ರಾಹ್ಮಣಿಯು ಯಾರನ್ನು ಕರೆದುಕೊಂಡು ಬರುತ್ತಾರೆಯೋ ಅವರ ಮೇಲೆ ದೊಡ್ಡ ಜವಾಬ್ದಾರಿಯಿದೆ. ವಿಕಾರದಲ್ಲಿ ಹೋದರೆಂದರೆ ಬ್ರಾಹ್ಮಣಿಯ ಮೇಲೂ ಹೊರೆಯಾಗುತ್ತದೆ ಆದ್ದರಿಂದ ಬಹಳ ಎಚ್ಚರವಹಿಸಿ ಕರೆದುಕೊಂಡು ಬರಬೇಕಾಗಿದೆ. ಮುಂದೆ ಹೋದಂತೆ ಸಾಧು-ಸಂತರೆಲ್ಲರೂ ಸಾಲಾಗಿ ನಿಂತುಕೊಳ್ಳುತ್ತಾರೆ. ಭೀಷ್ಮಪಿತಾಮಹರ ಹೆಸರಂತೂ ಇದೆಯಲ್ಲವೆ. ಮಕ್ಕಳಿಗೆ ಬಹಳ ವಿಶಾಲವಾದ ಬುದ್ದಿಯಿರಬೇಕಾಗಿದೆ. ನೀವು ಯಾರಿಗೆ ಬೇಕಾದರೂ ತಿಳಿಸಿ, ಭಾರತವು ಹೂದೋಟವಾಗಿತ್ತು. ಅದರಲ್ಲಿ ದೇವಿ-ದೇವತೆಗಳಿದ್ದರು, ಈಗಂತೂ ಮುಳ್ಳುಗಳಾಗಿದ್ದಾರೆ. ನಿಮ್ಮಲ್ಲಿ 5 ವಿಕಾರಗಳಿವೆಯಲ್ಲವೆ. ರಾವಣರಾಜ್ಯವೆಂದರೆ ಕಾಡಾಗಿದೆ. ಈಗ ತಂದೆಯು ಬಂದು ಮುಳ್ಳುಗಳಿಂದ ಹೂವನ್ನಾಗಿ ಮಾಡುತ್ತಾರೆ. ವಿಚಾರ ಮಾಡಬೇಕು - ನಾವು ಗುಲಾಬಿ ಹೂಗಳಾಗಲಿಲ್ಲವೆಂದರೆ ಎಕ್ಕದಹೂ ಆಗಬೇಕಾಗಿದೆ. ಪ್ರತಿಯೊಬ್ಬರೂ ತಮ್ಮ ಕಲ್ಯಾಣವನ್ನು ಮಾಡಿಕೊಳ್ಳಬೇಕು. ಶಿವತಂದೆಯ ಮೇಲೆ ಯಾವುದೇ ಕೃಪೆ ತೋರಿಸುತ್ತಿಲ್ಲ, ಕೃಪೆಯನ್ನಂತೂ ತಮ್ಮಮೇಲೆ ತೋರಿಸಿಕೊಳ್ಳಬೇಕು. ಈಗ ಶ್ರೀಮತದಂತೆ ನಡೆಯಬೇಕಾಗಿದೆ. ತೋಟದಲ್ಲಿ ಯಾರೇ ಹೋದರೂ ಸುಗಂಧಭರಿತವಾದ ಹೂವನ್ನೇ ನೋಡುತ್ತಾರೆ, ಎಕ್ಕದ ಹೂವನ್ನು ನೋಡುತ್ತಾರೆಯೆ? ಇದು ಹೂಗಳ ಪ್ರದರ್ಶನ ಇರುತ್ತದೆಯಲ್ಲವೆ, ಇದೂ ಸಹ ಹೂಗಳ ಪ್ರದರ್ಶನಿಯಾಗಿದೆ. ಬಹಳ ದೊಡ್ಡ ಬಹುಮಾನ ಸಿಗುತ್ತದೆ. ದೊಡ್ಡ ಫಸ್ಟ್ ಕ್ಲಾಸ್ ಹೂವಾಗಬೇಕಾಗಿದೆ. ಬಹಳ ಮಧುರವಾದ ನಡಿಗೆಯಿರಬೇಕಾಗಿದೆ, ಕ್ರೋಧಿಗಳ ಜೊತೆ ಬಹಳ ನಮ್ರವಾಗಿರಬೇಕಾಗಿದೆ. ಶ್ರೀಮತದಂತೆ ನಾವು ಪವಿತ್ರರಾಗಿ ಪವಿತ್ರಪ್ರಪಂಚದ ಮಾಲೀಕರಾಗಲು ಬಯಸುತ್ತೇವೆ, ಯುಕ್ತಿಗಳಂತು ಬಹಳ ಇವೆ. ಮಾತೆಯರ ಬಳಿ ಬಹಳ ಯುಕ್ತಿಗಳಿರುತ್ತವೆ, ಯುಕ್ತಿಯಿಂದ ಪವಿತ್ರರಾಗುವ ಪುರುಷಾರ್ಥ ಮಾಡಬೇಕಾಗಿದೆ. ಭಗವಾನುವಾಚ - ಕಾಮ ಮಹಾಶತ್ರುವಾಗಿದೆ, ಪವಿತ್ರರಾಗುವುದರಿಂದ ಸತೋಪ್ರಧಾನರಾಗಿಬಿಡುತ್ತೀರಿ ಅಂದಮೇಲೆ ಭಗವಂತನು ಹೇಳಿದ ಮಾತನ್ನು ನಾವು ಕೇಳಬಾರದೇ! ಎಂದು ನೀವು ಹೇಳಬಹುದಾಗಿದೆ. ಯುಕ್ತಿಯಿಂದ ತಮ್ಮನ್ನು ತಾವು ಬಚಾವ್ ಮಾಡಿಕೊಳ್ಳಬೇಕಾಗಿದೆ. ವಿಶ್ವದ ಮಾಲೀಕರಾಗಲು ಇದಕ್ಕೆ ಸ್ವಲ್ಪ ಸಹನೆ ಮಾಡಿದರೆ ಏನಾಗುವುದು! ನೀವು ನಿಮಗೋಸ್ಕರ ಮಾಡಿಕೊಳ್ಳುತ್ತೀರಿ, ಅವರು ರಾಜ್ಯ ಭಾಗ್ಯಕ್ಕಾಗಿ ಮಾಡಿಕೊಳ್ಳುತ್ತಾರೆ. ಪುರುಷಾರ್ಥವನ್ನು ಮಾಡಬೇಕಾಗಿದೆ. ತಂದೆಯನ್ನು ಮರೆಯುವುದರಿಂದಲೇ ಕೆಳಗೆ ಬೀಳುತ್ತಾರೆ ನಂತರ ನಾಚಿಕೆಯಾಗುತ್ತದೆ. ಹೇಗೆ ದೇವತೆಗಳಾಗುವಿರಿ. ಒಳ್ಳೆಯದು-

ಮಧುರಾತಿ ಮಧುರ ಅಗಲಿಹೋಗಿ ಮರಳಿಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್‌ದಾದಾ ರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಮಾಯೆಯ ಗ್ರಹಚಾರದಿಂದ ಸುರಕ್ಷಿತವಾಗಿರಲು ಸದಾ ಬಾಯಿಂದ ಜ್ಞಾನರತ್ನಗಳೇ ಹೊರಬರುತ್ತಿರಬೇಕು. ಸಂಗದೋಷದಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕಾಗಿದೆ.

2. ಸುಗಂಧಭರಿತವಾದ ಹೂವಾಗಲು ಅವಗುಣಗಳನ್ನು ತೆಗೆಯುತ್ತಿರಬೇಕಾಗಿದೆ. ಶ್ರೀಮತದಂತೆ ಬಹಳ ನಮ್ರರಾಗಬೇಕಾಗಿದೆ. ಕಾಮ ಮಹಾಶತ್ರುವಿನಿಂದ ಎಂದೂ ಸೋಲಬಾರದು. ಯುಕ್ತಿಯಿಂದ ಸ್ವಯಂನ್ನು ಪಾರು ಮಾಡಿಕೊಳ್ಳಬೇಕಾಗಿದೆ.

ವರದಾನ:

'ಸದಾ ಶಕ್ತಿಶಾಲಿ ವೃತ್ತಿಯ ಮೂಲಕ ಬೇಹದ್ದಿನ ಸೇವೆಯಲ್ಲಿ ತತ್ಪರರಾಗಿರುವಂತಹ ಅಲ್ಪಕಾಲದ(ವಿನಾಶಿ) ಮಾತುಗಳಿಂದ ಮುಕ್ತ ಭವ'

ಹೇಗೆ ಸಾಕಾರ ತಂದೆಯವರಿಗೆ ಸೇವೆಯಿಲ್ಲದೆ ಮತ್ತೇನೂ ಕಾಣಿಸುತ್ತಿರಲಿಲ್ಲ, ಅದೇರೀತಿ ತಾವು ಮಕ್ಕಳೂ ಸಹ ತಮ್ಮ ಶಕ್ತಿಶಾಲಿ ವೃತ್ತಿಯ ಮೂಲಕ ಬೇಹದ್ದಿನ ಸೇವೆಯಲ್ಲಿ ತತ್ಪರರು ಆಗುತ್ತೀರೆಂದರೆ, ವಿನಾಶಿ ಮಾತುಗಳೆಲ್ಲವೂ ಸ್ವತಹವಾಗಿ ಸಮಾಪ್ತಿ ಆಗಿಬಿಡುತ್ತವೆ. ಇದಕ್ಕಾಗಿ ಸಮಯ ಕೊಡುವುದೂ ಸಹ ಗೊಂಬೆಗಳ ಆಟವಾಗಿದೆ, ಇದರಲ್ಲಿ ಸಮಯ ಹಾಗೂ ಶಕ್ತಿಯು ವ್ಯರ್ಥವಾಗುತ್ತದೆ ಆದ್ದರಿಂದ ಚಿಕ್ಕಪುಟ್ಟ ಮಾತುಗಳಲ್ಲಿ ಸಮಯ ಅಥವ ಜಮಾ ಮಾಡಿಕೊಂಡಿರುವ ಶಕ್ತಿಗಳನ್ನು ವ್ಯರ್ಥವಾಗಿ ಕಳೆಯಬಾರದು.

ಸ್ಲೋಗನ್:

ಸೇವೆಯಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳಬೇಕೆಂದರೆ ಮಾತು ಹಾಗೂ ಚಲನ-ವಲನ(ನಡವಳಿಕೆ)ಯು ಪ್ರಭಾವಶಾಲಿ ಆಗಬೇಕು.