08.06.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ವಿಕರ್ಮಗಳಿಂದ ಮುಕ್ತರಾಗಲು ಗಳಿಗೆ-ಗಳಿಗೆಯು ಅಶರೀರಿಯಾಗುವ ಅಭ್ಯಾಸ ಮಾಡಿ, ಈ ಅಭ್ಯಾಸವೇ ಮಾಯಾಜೀತರನ್ನಾಗಿ ಮಾಡುತ್ತದೆ, ಸ್ಥಿರ ಯೋಗವು ಜೋಡಿಸಲ್ಪಟ್ಟಿರುತ್ತದೆ

ಪ್ರಶ್ನೆ:
ಯಾವ ನಿಶ್ಚಯವು ಪಕ್ಕಾ ಆದಾಗ ಯೋಗವು ತುಂಡಾಗಲು ಸಾಧ್ಯವಿಲ್ಲ?

ಉತ್ತರ:
ಸತ್ಯಯುಗ, ತ್ರೇತಾದಲ್ಲಿ ನಾವು ಪಾವನರಾಗಿದ್ದೆವು, ದ್ವಾಪರ-ಕಲಿಯುಗದಲ್ಲಿ ಪತಿತರಾಗಿದ್ದೇವೆ, ಈಗ ಮತ್ತೆ ನಾವು ಪಾವನರಾಗಬೇಕಾಗಿದೆ, ಈ ನಿಶ್ಚಯವು ಪಕ್ಕಾ ಆಗಿದ್ದರೆ ಯೋಗವು ತುಂಡಾಗಲು ಸಾಧ್ಯವಿಲ್ಲ. ಮಾಯೆಯು ಸೋಲಿಸಲು ಸಾಧ್ಯವಿಲ್ಲ.

ಗೀತೆ:
ಯಾರು ತಂದೆಯ ಜೊತೆಯಿದ್ದಾರೆ ಅವರ ಮೇಲೆ .....

ಓಂ ಶಾಂತಿ.
ಮಧುರಾತಿ ಮಕ್ಕಳು ಈ ಗೀತೆಯ ಅರ್ಥವನ್ನು ತಿಳಿದುಕೊಂಡಿದ್ದೀರಿ. ಆ ಸಾಗರ ಹಾಗೂ ನದಿಗಳ ಮಾತೂ ಅಲ್ಲ. ಆ ಸ್ಥೂಲ ಮಳೆಯ ಮಾತೂ ಅಲ್ಲ. ಇವರು ಜ್ಞಾನ ಸಾಗರನಾಗಿದ್ದಾರೆ, ಅವರೇ ಬಂದು ಜ್ಞಾನದ ಮಳೆಯನ್ನು ಸುರಿಸುತ್ತಾರೆ, ಅದರಿಂದ ಅಜ್ಞಾನ ಅಂಧಕಾರವು ದೂರವಾಗಿ ಬಿಡುತ್ತದೆ. ಇದನ್ನು ಯಾರು ಅರಿತುಕೊಳ್ಳುತ್ತಾರೆ? ಯಾರು ತಮ್ಮನ್ನು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿ ಎಂದು ತಿಳಿಯುತ್ತಾರೆ, ಅವರೇ ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ, ನಮ್ಮ ತಂದೆಯು ಶಿವ ಆಗಿದ್ದಾರೆ. ಅವರು ನಾವೆಲ್ಲಾ ಬ್ರಹ್ಮಾಕುಮಾರ-ಕುಮಾರಿಯರ ತಾತನಾಗಿದ್ದಾರೆ ಆದರೆ ನಿರಾಕಾರನಾಗಿದ್ದಾರೆ. ಯಾವಾಗ ನಾವು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ ಎನ್ನುವುದನ್ನು ನಿಶ್ಚಯ ಮಾಡಿಕೊಂಡ ನಂತರ ಇದನ್ನು ಮರೆಯುವ ಮಾತಿಲ್ಲ. ಎಲ್ಲಾ ಮಕ್ಕಳು ತಂದೆಯ ಜೊತೆಯಿದ್ದಾರೆ. ಕೇವಲ ನೀವು ಮಾತ್ರ ಇದ್ದೀರೆಂದಲ್ಲ, ಎಲ್ಲರೂ ಮುರುಳಿಯನ್ನು ಕೇಳುತ್ತಾರೆ. ಮಕ್ಕಳಿಗೋಸ್ಕರವೇ ಜ್ಞಾನದ ಮಳೆಯಿದೆ, ಈ ಜ್ಞಾನದಿಂದ ಘೋರ ಅಂಧಕಾರದ ವಿನಾಶವಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ನಾವು ಘೋರ ಅಂಧಕಾರದಲ್ಲಿದ್ದೆವು, ಈಗ ಪ್ರಕಾಶವು ಸಿಗುತ್ತಿರುವುದರಿಂದ ಎಲ್ಲವನ್ನು ಅರಿತುಕೊಳ್ಳುತ್ತಾ ಹೋಗುತ್ತಿದ್ದೇವೆ. ಪರಮಪಿತ ಪರಮಾತ್ಮನ ಚರಿತ್ರೆಯನ್ನು ನೀವು ಮಕ್ಕಳೇ ಅರಿತುಕೊಂಡಿದ್ದೀರಿ ಎಂದು ತಂದೆಯು ಹೇಳುತ್ತಾರೆ. ಯಾರು ಶಿವಬಾಬಾನ ಚರಿತ್ರೆಯನ್ನು ಅರಿತುಕೊಂಡಿಲ್ಲವೋ ಅವರು ಕೈ ಎತ್ತಿ. ಪರಮಾತ್ಮನ ಜೀವನ ಚರಿತ್ರೆಯನ್ನು ಎಲ್ಲರೂ ಅರಿತುಕೊಂಡಿದ್ದೀರಿ. ಅದು ಒಂದು ಜನ್ಮದ್ದಲ್ಲ, ಶಿವಬಾಬಾರವರ ಎಷ್ಟು ಜನ್ಮಗಳ ಚರಿತ್ರೆ ಇದೆ? ನಿಮಗೆ ತಿಳಿದಿದೆಯೇ? ಈ ನಾಟಕದಲ್ಲಿ ಶಿವ ತಂದೆಯ ಯಾವ ಪಾತ್ರವಿದೆ ಎಂದು ನೀವು ಅರಿತುಕೊಂಡಿದ್ದೀರಿ. ಆದಿಯಿಂದ ಅಂತ್ಯದ ತನಕ ಅವರನ್ನು ಹಾಗೂ ಅವರ ಚರಿತ್ರೆಯನ್ನು ಅರಿತುಕೊಂಡಿದ್ದೀರಿ. ಅವಶ್ಯವಾಗಿ ಭಕ್ತಿಮಾರ್ಗದಲ್ಲಿ ಯಾರು ಯಾವ ಭಾವನೆಯಿಂದ ಭಕ್ತಿ ಮಾಡುತ್ತಾರೆ, ಅದರ ಫಲವನ್ನು ನಾನು ಕೊಡಬೇಕಾಗುತ್ತದೆ. ಅವರು ಚೈತನ್ಯವಾಗಿಯಂತೂ ಇಲ್ಲ ಆದ್ದರಿಂದ ನಾನೇ ಸಾಕ್ಷಾತ್ಕಾರ ಮಾಡಿಸುತ್ತೇನೆ. ಅರ್ಧಕಲ್ಪ ಭಕ್ತಿಮಾರ್ಗವು ನಡೆಯುತ್ತದೆ. ಭಕ್ತಿಯ ಮನೋಕಾಮನೆಗಳು ಪೂರ್ಣವಾಗಿದೆ, ಈಗ ಮತ್ತೆ ನೀವು ಮಕ್ಕಳಾಗಿದ್ದೀರಿ ಆದ್ದರಿಂದ ಅವಶ್ಯವಾಗಿ ನಿಮಗೆ ಆಸ್ತಿಯು ಸಿಗುತ್ತದೆ. ತಂದೆಯು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ, ಇದು ನಿಯಮವಾಗಿದೆ. ಈಗ ಸದ್ಗತಿಯ ಕಡೆ ನಿಮ್ಮ ಮುಖವಿದೆ. ಮೂಲವತನ, ಸೂಕ್ಷ್ಮವತನ, ಸ್ಥೂಲವತನವನ್ನು ನೀವು ಅರಿತುಕೊಂಡಿದ್ದೀರಿ ಮತ್ತು ಯಾರು ಈ ಬೇಹದ್ದಿನ ನಾಟಕದಲ್ಲಿ ಮುಖ್ಯ ಪಾತ್ರಧಾರಿಗಳಿದ್ದಾರೆ, ನಿರ್ದೇಶಕ ಮತ್ತು ರಚಯಿತ, ರಚಯಿತನಾಗಿ ರಚನೆಯನ್ನು ರಚಿಸುತ್ತಾರೆ, ಮಾಡಿ-ಮಾಡಿಸುವವರಾಗಿದ್ದಾರೆ, ಸಲಹೆಯನ್ನು ಕೊಡುತ್ತಾರಲ್ಲವೆ ಹಾಗೂ ಓದಿಸುತ್ತಾರೆ. ಅವರು ಹೇಳುತ್ತಾರೆ - ಮಕ್ಕಳೇ, ನಾನು ನಿಮಗೆ ರಾಜಯೋಗವನ್ನು ಕಲಿಸಲು ಬಂದಿದ್ದೇನೆ. ಈ ಕಾರ್ಯವನ್ನು ಮಾಡಬೇಕಾಗಿತ್ತು ಮತ್ತು ಮಾಡಿಸುತ್ತಾರೆ. ಅರ್ಧಕಲ್ಪ ನೀವು ಮಾಯೆಗೆ ವಶರಾಗಿ ಅಸತ್ಯ ಕರ್ತವ್ಯವನ್ನು ಮಾಡುತ್ತಾ ಬಂದಿದ್ದೀರಿ. ಇದು ಸೋಲು-ಗೆಲುವಿನ ಆಟವಾಗಿದೆ. ಮಾಯೆಯು ನಿಮ್ಮಿಂದ ಅಸತ್ಯ ಕರ್ತವ್ಯ ಮಾಡಿಸುವವರನ್ನು ಭಗವಂತನೆಂದು ಹೇಗೆ ಹೇಳುತ್ತೀರಿ? ಭಗವಂತನೇ ಹೇಳುತ್ತಾರೆ - ನಾನಂತು ಒಬ್ಬನೇ ಆಗಿದ್ದೇನೆ, ಎಲ್ಲರಿಗೆ ಸತ್ಕರ್ಮ ಮಾಡುವುದನ್ನು ಕಲಿಸುತ್ತೇನೆ. ಈಗ ಎಲ್ಲರ ಅಂತಿಮ ಸಮಯವಾಗಿದೆ. ಎಲ್ಲರೂ ಸ್ಮಶಾನಯೋಗ್ಯರಾಗಿದ್ದಾರೆ, ತಂದೆಯು ಬಂದು ಜಾಗೃತಗೊಳಿಸುತ್ತಾರೆ. ಮೃತ್ಯು ಸಮ್ಮುಖದಲ್ಲಿ ನಿಂತಿದೆ. ಶಿವಬಾಬಾ ಬ್ರಹ್ಮಾರವರ ತನುವಿನ ಮುಖಾಂತರ ನಮಗೆ ಎಲ್ಲವನ್ನು ತಿಳಿಸುತ್ತಿದ್ದಾರೆ. ನೀವು ಎಲ್ಲರ ಚರಿತ್ರೆ ಹಾಗೂ ಶಿವಬಾಬಾರವರ ಚರಿತ್ರೆಯನ್ನೂ ಸಹ ಅರಿತುಕೊಂಡಿದ್ದೀರಿ ಆದ್ದರಿಂದ ಶ್ರೇಷ್ಠರಾಗಿದ್ದೀರಲ್ಲವೇ. ಯಾರು ಶಾಸ್ತ್ರಗಳನ್ನು ಅಧ್ಯಯನ ಮಾಡುವವರಿರುತ್ತಾರೆ, ಅವರ ಮುಂದೆ ಅರಿತುಕೊಳ್ಳದೆ ಇರುವವರು ತಲೆ ಬಾಗಿಸುತ್ತಾರೆ. ನೀವು ತಲೆ ಬಾಗಿಸಬಾರದು. ಇದು ಬಹಳ ಸಹಜ ಮಾತಾಗಿದೆ. ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಮೂಲವತನ, ಶಾಂತಿಧಾಮದ ನಿವಾಸಿಗಳಾಗುತ್ತೇವೆ ನಂತರ ಸುಖಧಾಮದಲ್ಲಿ ಬರುತ್ತೇವೆ. ಈಗ ನಾವು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ಶಿವಬಾಬಾನ ಮೊಮ್ಮಕ್ಕಳಾಗಿದ್ದೇವೆ. ಶಿವ ತಂದೆಯನ್ನು ನೆನಪು ಮಾಡುವುದರಿಂದ ನಮಗೆ ಸುಖದ ಆಸ್ತಿಯು ಸಿಗುತ್ತದೆ. ನಾವು ಪವಿತ್ರರಾಗಿದ್ದೆವು ನಂತರ ಪತಿತರಾದೆವು ಈಗ ಮತ್ತೆ ನಾವು ಪಾವನರಾಗಬೇಕಾಗಿದೆ ಎಂದು ನೀವು ಮಕ್ಕಳಿಗೆ ನಿಶ್ಚಯವಿದೆ. ಒಂದುವೇಳೆ ನಿಶ್ಚಯವಿಲ್ಲವೆಂದರೆ ಯೋಗವನ್ನಿಡುವುದಕ್ಕೆ ಆಗುವುದಿಲ್ಲ, ಪದವಿಯನ್ನು ಪಡೆಯುವುದಿಲ್ಲ. ಪವಿತ್ರ ಜೀವನವಂತು ಒಳ್ಳೆಯದಲ್ಲವೇ. ಕುಮಾರಿಯರಿಗೆ ತುಂಬಾ ಗೌರವವಿದೆ ಏಕೆಂದರೆ ನೀವು ಕುಮಾರಿಯರು ಈ ಸಮಯದಲ್ಲಿ ತುಂಬಾ ಸೇವೆ ಮಾಡುತ್ತೀರಿ. ಈಗ ನೀವು ಪವಿತ್ರರಾಗಿರುತ್ತೀರಿ, ಈಗಿನ ಪವಿತ್ರತೆಯು ಭಕ್ತಿಮಾರ್ಗದಲ್ಲಿ ಪೂಜೆಯಾಗುತ್ತದೆ. ಈ ಪ್ರಪಂಚವಂತು ಬಹಳ ಕೊಳಕಾಗಿದೆ, ಕೀಚಕನ ಕಥೆಯೂ ಇದೆಯಲ್ಲವೇ. ಮನುಷ್ಯರು ಬಹಳ ಕೆಟ್ಟ ವಿಚಾರಗಳನ್ನು ಇಟ್ಟುಕೊಂಡು ಬರುತ್ತಾರೆ, ಅವರಿಗೆ ಕೀಚಕ ಎಂದು ಹೇಳಲಾಗುತ್ತದೆ ಆದ್ದರಿಂದ ತಂದೆ ತಿಳಿಸುತ್ತಾರೆ - ಬಹಳ ಸಂಭಾಲನೆ ಮಾಡಬೇಕಾಗಿದೆ. ಇದು ಕೆಟ್ಟ ಮುಳ್ಳುಗಳ ಪ್ರಪಂಚವಾಗಿದೆ. ನಿಮಗೆ ತುಂಬಾ ಖುಷಿಯಿರಬೇಕು. ನಾವು ಶಾಂತಿಧಾಮದಲ್ಲಿ ಹೋಗಿ ಮತ್ತೆ ಸುಖಧಾಮದಲ್ಲಿ ಬರುತ್ತೇವೆ. ನಾವು ಸುಖಧಾಮದ ಮಾಲೀಕರಾಗಿದ್ದೆವು ನಂತರ ಚಕ್ರವನ್ನು ಸುತ್ತಿದೆವು. ಇದಂತೂ ನಿಶ್ಚಯವಾಗಬೇಕಲ್ಲವೇ. ಅಶರೀರಿಯಾಗುವಂತಹ ಅಭ್ಯಾಸವನ್ನು ಇಟ್ಟುಕೊಳ್ಳಬೇಕು, ಇಲ್ಲವೆಂದರೆ ಮಾಯೆಯು ತಿನ್ನುತ್ತಾ ಇರುತ್ತದೆ, ಯೋಗವು ತುಂಡಾಗುತ್ತಾ ಇರುತ್ತದೆ, ವಿಕರ್ಮ ವಿನಾಶವಾಗುವುದಿಲ್ಲ ಅಂದಾಗ ನೆನಪಿನಲ್ಲಿರಲು ಎಷ್ಟೊಂದು ಪರಿಶ್ರಮ ಪಡಬೇಕು. ನೆನಪಿನಿಂದಲೇ ಸದಾ ಆರೋಗ್ಯವಂತರಾಗುತ್ತೀರಿ. ಎಷ್ಟು ಸಾಧ್ಯವೋ ಅಶರೀರಿಯಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ನಾವು ಆತ್ಮರಿಗೆ ತಂದೆಯಾದ ಪರಮಪಿತ ಪರಮಾತ್ಮ ಓದಿಸುತ್ತಿದ್ದಾರೆ. ಕಲ್ಪ-ಕಲ್ಪವೂ ಓದಿಸುತ್ತಾರೆ, ರಾಜ್ಯಭಾಗ್ಯವನ್ನು ಕೊಡುತ್ತಾರೆ. ನೀವು ಯೋಗಬಲದಿಂದ ತಮ್ಮ ರಾಜಧಾನಿಯ ಸ್ಥಾಪನೆ ಮಾಡುತ್ತೀರಿ. ರಾಜರು ರಾಜ್ಯ ಮಾಡುತ್ತಾರೆ, ಸೈನ್ಯವು ರಾಜ್ಯಕ್ಕೋಸ್ಕರ ಯುದ್ಧ ಮಾಡುತ್ತದೆ. ಇಲ್ಲಿ ನೀವು ತಮಗೋಸ್ಕರ ಪರಿಶ್ರಮ ಪಡುತ್ತೀರಿ, ತಂದೆಗಾಗಿ ಅಲ್ಲ. ನಾನಂತು ರಾಜ್ಯಭಾರ ಮಾಡುವುದೇ ಇಲ್ಲ. ನಾನು ನಿಮಗೆ ರಾಜ್ಯವನ್ನು ಕೊಡಿಸಲು ಯುಕ್ತಿಗಳನ್ನು ತಿಳಿಸುತ್ತೇನೆ. ನೀವೆಲ್ಲರೂ ವಾನಪ್ರಸ್ಥಿಗಳಾಗಿದ್ದೀರಿ, ಎಲ್ಲರ ಮೃತ್ಯು ಆಗುವುದಿದೆ. ಹಿರಿಯರು, ಕಿರಿಯರು ಎಂಬ ಯಾವುದೇ ಮಾತಿಲ್ಲ. ಚಿಕ್ಕ ಮಗುವಾಗಿದ್ದರೆ ಅವರಿಗೆ ತಂದೆಯ ಆಸ್ತಿಯು ಸಿಗುತ್ತದೆ ಎಂದಲ್ಲ. ಅದನ್ನು ಪಡೆಯಲು ಈ ಪ್ರಪಂಚವೇ ಇರುವುದಿಲ್ಲ. ಮನುಷ್ಯರಂತು ಘೋರ ಅಂಧಕಾರದಲ್ಲಿದ್ದಾರೆ. ಹೆಚ್ಚಿನ ಹಣವನ್ನು ಸಂಪಾದಿಸುವ ಇಚ್ಛೆಯನ್ನು ಇಟ್ಟುಕೊಳ್ಳುತ್ತಾರೆ, ನಮ್ಮ ಮಕ್ಕಳು-ಮೊಮ್ಮಕ್ಕಳು ಉಪಯೋಗಿಸುತ್ತಾರೆಂದು ತಿಳಿಯುತ್ತಾರೆ ಆದರೆ ಯಾರ ಕಾಮನೆಯೂ ಸಹ ಪೂರ್ಣವಾಗುವುದಿಲ್ಲ. ಇದೆಲ್ಲವೂ ಮಣ್ಣು ಪಾಲಾಗುವುದಿದೆ. ಈ ಪ್ರಪಂಚವೇ ಸಮಾಪ್ತಿಯಾಗುವುದಿದೆ. ಒಂದು ಬಾಂಬ್ ಬಿದ್ದರೂ ಸಹ ಎಲ್ಲರೂ ಸಮಾಪ್ತಿ ಆಗಿ ಬಿಡುತ್ತಾರೆ. ಹೊರ ತೆಗೆಯುವವರು ಯಾರೂ ಇರುವುದಿಲ್ಲ. ಈಗಂತು ಚಿನ್ನ ಮುಂತಾದ ಗಣಿಗಳೂ ಸಹ ಖಾಲಿ ಆಗಿ ಬಿಟ್ಟಿವೆ. ಹೊಸ ಪ್ರಪಂಚದಲ್ಲಿ ಅವೆಲ್ಲವೂ ಮತ್ತೆ ತುಂಬುತ್ತವೆ. ಆ ಹೊಸ ಪ್ರಪಂಚದಲ್ಲಿ ಎಲ್ಲವೂ ಹೊಸದೇ ಸಿಗುತ್ತದೆ. ಈಗಿನ ನಾಟಕದ ಚಕ್ರವು ಪೂರ್ಣವಾಗುತ್ತದೆ ಮತ್ತೆ ಪ್ರಾರಂಭವಾಗುತ್ತದೆ. ಪ್ರಕಾಶತೆಯು ಬಂದು ಬಿಟ್ಟಿದೆ. ಜ್ಞಾನ ಸೂರ್ಯ ಪ್ರಕಟ ಅಜ್ಞಾನ ಅಂಧಕಾರವು ವಿನಾಶವೆಂದು ಹಾಡುತ್ತಾರೆ. ಆ ಸೂರ್ಯನ ಮಾತಿಲ್ಲ, ಮನುಷ್ಯರು ಸೂರ್ಯನಿಗೆ ನೀರನ್ನು ಕೊಡುತ್ತಾರೆ. ಈಗ ಸೂರ್ಯನಂತು ಇಡೀ ಪ್ರಪಂಚಕ್ಕೆ ನೀರನ್ನು ತಲುಪಿಸುತ್ತಾನೆ. ಅವರಿಗೇ ಮತ್ತೆ ನೀರನ್ನು ಕೊಡುತ್ತಾರೆ, ಇದು ವಿಚಿತ್ರವಾಗಿದೆ! ಭಕ್ತಿಯಲ್ಲಿ ಸೂರ್ಯ ದೇವತಾಯ ನಮಃ, ಚಂದ್ರ ದೇವತಾಯ ನಮಃ ಎಂದು ಹೇಳುತ್ತಾರೆ ಅಂದಮೇಲೆ ಅವರು ದೇವತೆಗಳು ಹೇಗಾಗುತ್ತಾರೆ? ಇಲ್ಲಂತು ಮನುಷ್ಯರು ಅಸುರರಿಂದ ದೇವತೆಗಳಾಗುತ್ತಾರೆ ಆದರೆ ಅವರನ್ನು ದೇವತೆಗಳೆಂದು ಹೇಳುವುದಿಲ್ಲ. ಅದಂತು ಸೂರ್ಯ, ಚಂದ್ರ ನಕ್ಷತ್ರಗಳಾಗಿವೆ. ಸೂರ್ಯನ ಬಾವುಟವನ್ನೂ ಹಾಕುತ್ತಾರೆ. ಜಪಾನಿನಲ್ಲಿ ಸೂರ್ಯವಂಶಿ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಜ್ಞಾನ ಸೂರ್ಯವಂಶಿಯರಂತು ಎಲ್ಲರೂ ಆಗಿದ್ದಾರೆ, ಆದರೆ ಅದರ ತಿಳುವಳಿಕೆಯಿಲ್ಲ, ಈಗ ಆ ಸೂರ್ಯನೆಲ್ಲಿ, ಈ ಜ್ಞಾನ ಸೂರ್ಯನೆಲ್ಲಿ! ಇಲ್ಲಿಯೂ ಸಹ ಈ ವಿಜ್ಞಾನದ ಅನ್ವೇಷಣೆಗಳನ್ನು ಮಾಡುತ್ತಾರೆ, ಆದರೂ ಸಹ ಯಾವ ಸ್ಥಿತಿಯಾಗುತ್ತದೆ! ವಿನಾಶವು ಆಯಿತೆಂದರೆ ಆಯಿತು. ಯಾರು ಬುದ್ಧಿವಂತರಾಗಿರುತ್ತಾರೆ ಅವರು ಈ ವಿಜ್ಞಾನದಿಂದ ತಮ್ಮದೇ ವಿನಾಶ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ತಿಳಿಯುತ್ತಾರೆ. ಅವರದು ಸೈನ್ಸ್ ಆಗಿದೆ, ನಿಮ್ಮದು ಸೈಲೆನ್ಸ್ ಆಗಿದೆ. ಅವರು ಸೈಲೆನ್ಸ್ ನಿಂದ ವಿನಾಶ ಮಾಡುತ್ತಾರೆ, ನೀವು ಸೈಲೆನ್ಸ್ ನಿಂದ ಸ್ವರ್ಗದ ಸ್ಥಾಪನೆ ಮಾಡುತ್ತೀರಿ. ಈಗಂತೂ ನರಕದಲ್ಲಿ ಎಲ್ಲರ ದೋಣಿಯು ಮುಳುಗಿ ಬಿಟ್ಟಿದೆ. ಆಕಡೆ ಆ ಸೈನಿಕರು, ಈ ಕಡೆ ನೀವು ಯೋಗಬಲದ ಸೈನಿಕರಿದ್ದೀರಿ. ನೀವು ರಕ್ಷಣೆ ಮಾಡುವವರಾಗಿದ್ದೀರಿ. ನಿಮ್ಮ ಮೇಲೆ ಎಷ್ಟೊಂದು ಜವಾಬ್ದಾರಿಯಿದೆ ಆದ್ದರಿಂದ ಸಂಪೂರ್ಣವಾಗಿ ಸಹಯೋಗಿಗಳಾಗಬೇಕು. ಈ ಹಳೆಯ ಪ್ರಪಂಚವೂ ಸಮಾಪ್ತಿ ಆಗುವುದಿದೆ. ಈಗ ನೀವು ನಾಟಕವನ್ನು ಅರಿತುಕೊಂಡಿದ್ದೀರಿ. ಈಗ ಸಂಗಮದ ಸಮಯವಾಗಿದೆ, ತಂದೆಯು ದೋಣಿಯನ್ನು ಪಾರು ಮಾಡಲು ಬಂದಿದ್ದಾರೆ. ನೀವು ತಿಳಿದುಕೊಂಡಿದ್ದೀರಿ - ಯಾವಾಗ ರಾಜಧಾನಿಯು ಪೂರ್ಣಸ್ಥಾಪನೆ ಆಗುತ್ತದೆ ಆಗ ವಿನಾಶವಾಗುತ್ತದೆ. ಮಧ್ಯ-ಮಧ್ಯದಲ್ಲಿ ಮುನ್ಸೂಚನೆ ಸಿಗುತ್ತಿರುತ್ತದೆ. ಯುದ್ಧಗಳಂತೂ ತುಂಬಾ ಆಗುತ್ತಿರುತ್ತದೆ. ಇದು ಛೀ-ಛೀ (ಕೊಳಕಾದ) ಪ್ರಪಂಚವಾಗಿದೆ, ಬಾಬಾ ನಮ್ಮನ್ನು ಹೂಗಳ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ ಎನ್ನುವುದು ನಿಮಗೆ ತಿಳಿದಿದೆ. ಈ ಹಳೆಯ ವಸ್ತ್ರವನ್ನು ಬಿಟ್ಟು ಹಾಕಬೇಕಾಗಿದೆ. ನಂತರ ಹೊಸ ವಸ್ತ್ರವನ್ನು ಧರಿಸಬೇಕಾಗಿದೆ. ಇದಂತೂ ತಂದೆಯು ಗ್ಯಾರಂಟಿ ಕೊಡುತ್ತಾರೆ - ಮಕ್ಕಳೇ, ನಾನು ಕಲ್ಪ-ಕಲ್ಪವು ಎಲ್ಲರನ್ನು ಕರೆದುಕೊಂಡು ಹೋಗುತ್ತೇನೆ. ಆದ್ದರಿಂದ ನನ್ನ ಹೆಸರು ಕಾಲರ ಕಾಲ ಮಹಾಕಾಲನೆಂದು ಇಟ್ಟಿದ್ದಾರೆ. ಪತಿತ ಪಾವನ, ದಯಾಹೃದಯಿ ಎಂದೂ ಹೇಳುತ್ತಾರೆ. ನೀವು ಅರಿತುಕೊಂಡಿದ್ದೀರಿ - ನಾವು ಶ್ರೀಮತದನುಸಾರ ಸ್ವರ್ಗದಲ್ಲಿ ಹೋಗುವ ಪುರುಷಾರ್ಥವನ್ನು ಮಾಡುತ್ತಿದ್ದೇವೆ. ತಂದೆಯು ಹೇಳುತ್ತಾರೆ - ನನ್ನನ್ನು ನೆನಪು ಮಾಡಿದಾಗ ನಾನು ನಿಮ್ಮನ್ನು ಸ್ವರ್ಗದಲ್ಲಿ ಕಳುಹಿಸುತ್ತೇನೆ, ಜೊತೆ-ಜೊತೆಗೆ ಶರೀರ ನಿರ್ವಹಣೆಯನ್ನು ಮಾಡಬೇಕಾಗಿದೆ. ಯಾರೂ ಸಹ ಕರ್ಮ ಮಾಡದೆ ಇರಲು ಸಾಧ್ಯವಿಲ್ಲ. ಕರ್ಮ ಸನ್ಯಾಸವಂತು ಆಗುವುದಿಲ್ಲ. ಸ್ನಾನ ಮುಂತಾದವುಗಳನ್ನು ಮಾಡುವುದು ಇದು ಕರ್ಮವಾಗಿದೆಯಲ್ಲವೇ. ಅಂತ್ಯದಲ್ಲಿ ಎಲ್ಲರೂ ಜ್ಞಾನವನ್ನು ತೆಗೆದುಕೊಳ್ಳುತ್ತಾರೆ, ಕೇವಲ ಇಷ್ಟನ್ನು ತಿಳಿದುಕೊಳ್ಳುತ್ತಾರೆ ಶಿವಬಾಬಾ ಓದಿಸುತ್ತಾರೆ. ಇವರು ಹೇಳುವುದು ಸರಿಯಾಗಿದೆ. ನಿರಾಕಾರ ಭಗವಾನುವಾಚ, ಅವರು ಒಬ್ಬರೇ ಆಗಿದ್ದಾರೆ ಆದ್ದರಿಂದ ಬಾಬಾ ಹೇಳುತ್ತಿರುತ್ತಾರೆ - ಎಲ್ಲರೊಂದಿಗೆ ಕೇಳಿ ನಿರಾಕಾರ ಶಿವನೊಂದಿಗೆ ನಿಮ್ಮ ಸಂಬಂಧವೇನು? ಎಲ್ಲರೂ ಸಹೋದರರಾಗಿದ್ದೀರೆಂದರೆ ಸಹೋದರರ ತಂದೆಯು ಇರಬೇಕಲ್ಲವೇ. ಇಲ್ಲವೆಂದರೆ ಎಲ್ಲಿಂದ ಬಂದಿರಿ. ನೀವೇ ಮಾತಾ-ಪಿತಾ ಎಂದು ಗಾಯನ ಮಾಡುತ್ತಾರೆ...... ಇದು ತಂದೆಯ ಮಹಿಮೆಯಾಗಿದೆ, ಆ ತಂದೆಯೇ ಹೇಳುತ್ತಾರೆ - ಮಕ್ಕಳೇ ನಾನೇ ನಿಮಗೆ ಕಲಿಸುತ್ತೇನೆ. ಮತ್ತೆ ನೀವು ವಿಶ್ವದ ಮಾಲೀಕರಾಗುತ್ತೀರಿ. ಇಲ್ಲಿ ಕುಳಿತಿದ್ದರೂ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ಈ ಕಣ್ಣುಗಳಿಂದಂತು ಶರೀರವನ್ನು ನೋಡುತ್ತೀರಿ, ನಮಗೆ ಓದಿಸುವವರು ಶಿವ ತಂದೆ ಆಗಿದ್ದಾರೆ ಎನ್ನುವುದನ್ನು ಬುದ್ಧಿಯಿಂದ ಅರಿತುಕೊಳ್ಳುತ್ತೀರಿ. ಯಾರು ತಂದೆಯ ಜೊತೆ ಇದ್ದಾರೆಯೋ ಅವರಿಗಾಗಿಯೇ ಈ ರಾಜಯೋಗ ಮತ್ತು ಜ್ಞಾನದ ಮಳೆಯಾಗಿದೆ. ಪತಿತರನ್ನು ಪಾವನರನ್ನಾಗಿ ಮಾಡುವುದು ತಂದೆಯ ಕಾರ್ಯವಾಗಿದೆ. ಈ ಜ್ಞಾನಸಾಗರ ಅವರೇ ಆಗಿದ್ದಾರೆ, ನೀವು ತಿಳಿದುಕೊಂಡಿದ್ದೀರಿ - ನಾವು ಶಿವಬಾಬಾನ ಮೊಮ್ಮಕ್ಕಳು ಬ್ರಹ್ಮಾರವರ ಮಕ್ಕಳಾಗಿದ್ದೇವೆ. ಬ್ರಹ್ಮನ ತಂದೆಯು ಶಿವನಾಗಿದ್ದಾರೆ, ಆಸ್ತಿಯು ಶಿವ ತಂದೆಯಿಂದಲೇ ಸಿಗುತ್ತದೆ ಆದ್ದರಿಂದ ಅವರನ್ನೇ ನೆನಪು ಮಾಡಬೇಕು. ನಾವೀಗ ವಿಷ್ಣು ಪುರಿಗೆ ಹೋಗಬೇಕಾಗಿದೆ. ಇಲ್ಲಿಂದ ನಿಮ್ಮ ದೋಣಿಯ ಗೂಟವನ್ನು ತೆಗೆಯಲಾಗಿದೆ. ಶುದ್ರರ ದೋಣಿಯು ಇನ್ನೂ ನಿಂತಿದೆ. ನಿಮ್ಮ ದೋಣಿಯು ಸಾಗುತ್ತಿದೆ. ಈಗ ನೇರವಾಗಿ ಮನೆಗೆ ಹೋಗುತ್ತೀರಿ. ಈ ಹಳೆಯ ವಸ್ತ್ರಗಳೆಲ್ಲವನ್ನು ಬಿಟ್ಟು ಹೋಗಬೇಕಾಗಿದೆ. ಈಗ ಈ ನಾಟಕವು ಪೂರ್ಣವಾಗುತ್ತದೆ. ಈಗ ಈ ವಸ್ತ್ರವನ್ನು ಬಿಟ್ಟು ಮನೆಗೆ ಹೋಗುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯಾವುದೇ ಅಸತ್ಯ ಕರ್ಮವನ್ನು ಮಾಡಬಾರದು, ಮೃತ್ಯುವು ಸಮ್ಮುಖದಲ್ಲಿ ನಿಂತಿದೆ, ಅಂತಿಮ ಸಮಯವಾಗಿದೆ ಆದ್ದರಿಂದ ಎಲ್ಲರನ್ನೂ ಸ್ಮಶಾನದಿಂದ ಜಾಗೃತಗೊಳಿಸಬೇಕಾಗಿದೆ. ಪಾವನರಾಗುವ ಹಾಗೂ ಪಾವನರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.

2. ಈ ಛೀ-ಛೀ ಪ್ರಪಂಚದಲ್ಲಿ ಯಾವುದೇ ಕಾಮನೆಗಳನ್ನು ಇಟ್ಟುಕೊಳ್ಳಬಾರದು. ಮುಳುಗಿರುವ ಎಲ್ಲರ ದೋಣಿಯನ್ನು ರಕ್ಷಣೆ ಮಾಡುವುದರಲ್ಲಿ ತಂದೆಗೆ ಪೂರ್ಣ ಸಹಯೋಗಿಗಳಾಗಬೇಕಾಗಿದೆ.

ವರದಾನ:
ಯೋಗದ ಪ್ರಯೋಗದ ಮೂಲಕ ಪ್ರತಿಯೊಂದು ಖಜಾನೆಯನ್ನು ವೃದ್ಧಿಗೊಳಿಸುವಂತಹ ಸಫಲ ತಪಸ್ವಿ ಭವ.

ತಂದೆಯ ಮೂಲಕ ಪ್ರಾಪ್ತಿಯಾಗಿರುವಂತಹ ಎಲ್ಲಾ ಖಜಾನೆಗಳಲ್ಲಿ ಯೋಗದ ಪ್ರಯೋಗ ಮಾಡಿರಿ. ಖಜಾನೆಗಳ ಖರ್ಚು ಕಡಿಮೆಯಿರಲಿ ಮತ್ತು ಪ್ರಾಪ್ತಿಯು ಹೆಚ್ಚಾಗಿರಲಿ - ಇದೇ ಪ್ರಯೋಗವೆನ್ನಲಾಗುವುದು. ಹೇಗೆ ಸಮಯ ಹಾಗೂ ಸಂಕಲ್ಪವು ಶ್ರೇಷ್ಠವಾದ ಖಜಾನೆಯಾಗಿದೆ ಅಂದಮೇಲೆ ಸಂಕಲ್ಪಗಳ ಖರ್ಚು ಕಡಿಮೆಯಿರಲಿ ಆದರೆ ಹೆಚ್ಚು ಪ್ರಾಪ್ತಿಯಿರಲಿ. ಸಾಧಾರಣ ವ್ಯಕ್ತಿಯು ಹೇಗೆ 2 ನಿಮಿಷಗಳ ಚಿಂತನೆಯ ನಂತರ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾನೆ, ಅದನ್ನು ತಾವು ಒಂದೆರಡು ಸೆಕೆಂಡುಗಳಲ್ಲಿ ಮಾಡಿ ಬಿಡಿ. ಕಡಿಮೆ ಸಮಯದಲ್ಲಿ, ಕಡಿಮೆ ಸಂಕಲ್ಪದಲ್ಲಿ ಹೆಚ್ಚು ಫಲಿತಾಂಶವಿರಲಿ, ಆಗ ಹೇಳಲಾಗುತ್ತದೆ- ಯೋಗದ ಪ್ರಯೋಗ ಮಾಡುವಂತಹ ಸಫಲ ತಪಸ್ವಿ.

ಸ್ಲೋಗನ್:
ತಮ್ಮ ಅನಾದಿ-ಆದಿ ಸಂಸ್ಕಾರವನ್ನು ಸ್ಮೃತಿಯಲ್ಲಿ ಇಟ್ಟುಕೊಂಡು, ಸದಾ ಅಚಲರಾಗಿರಿ.

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ:

ಮುಳ್ಳುಗಳ ಪ್ರಪಂಚದಿಂದ ಹೂಗಳ ಉದ್ಯಾನವನದಲ್ಲಿ ಕರೆದುಕೊಂಡು ಹೋಗು, ಈಗ ಈ ಕರೆಯು ಕೇವಲ ಪರಮಾತ್ಮನಿಗಾಗಿಯೇ ಇದೆ. ಯಾವಾಗ ಮನುಷ್ಯನು ಅತೀ ದುಃಖಿಯಾಗುವನೋ ಆಗ ಪರಮಾತ್ಮನನ್ನು ನೆನಪು ಮಾಡುತ್ತಾನೆ. ಪರಮಾತ್ಮನೇ ಈ ಮುಳ್ಳುಗಳ ಪ್ರಪಂಚದಿಂದ ಹೂಗಳ ಉದ್ಯಾನವನದಲ್ಲಿ ಕರೆದುಕೊಂಡು ಹೋಗು ಎಂದು ಕರೆಯುತ್ತಾರೆಂದರೆ, ಇದರಿಂದ ಸಿದ್ಧವಾಗುತ್ತದೆ - ಅವಶ್ಯವಾಗಿ ಅದೂ ಸಹ ಯಾವುದೋ ಒಂದು ಪ್ರಪಂಚವಿದೆ. ಈಗ ಇದನ್ನಂತು ಎಲ್ಲಾ ಮನುಷ್ಯರು ತಿಳಿದಿದ್ದಾರೆ - ಈಗಿನ ಪ್ರಪಂಚವೇನಿದೆ ಅದು ಮುಳ್ಳುಗಳಿಂದ ಕೂಡಿದೆ. ಅದರ ಕಾರಣ ಮನುಷ್ಯನು ದುಃಖ ಹಾಗೂ ಅಶಾಂತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದಾನೆ, ಮತ್ತೆ ಹೂಗಳ ಪ್ರಪಂಚವನ್ನು ನೆನಪು ಮಾಡುತ್ತಿದ್ದಾನೆ. ಅಂದಮೇಲೆ ಅವಶ್ಯವಾಗಿ ಅದೊಂದು ಯಾವುದೋ ಪ್ರಪಂಚವಿರಬೇಕು, ಆ ಪ್ರಪಂಚದ ಸಂಸ್ಕಾರವು ಆತ್ಮದಲ್ಲಿ ತುಂಬಿಕೊಂಡಿದೆ. ಈಗ ಇದನ್ನಂತು ನಾವು ತಿಳಿದಿದ್ದೇವೆ - ದುಃಖ ಅಶಾಂತಿ, ಇದೆಲ್ಲವೂ ಕರ್ಮ ಬಂಧನದ ಲೆಕ್ಕಾಚಾರವಾಗಿದೆ. ರಾಜನಿಂದ ಹಿಡಿದು ಭಿಕಾರಿಯವರೆಗೂ ಪ್ರತಿಯೊಬ್ಬ ಮನುಷ್ಯನೂ ಸಹ ಇದೇ ಲೆಕ್ಕದಿಂದ ಸಿಲುಕಿದ್ದಾನೆ ಆದ್ದರಿಂದ ಪರಮಾತ್ಮನಂತು ಸ್ವಯಂ ಹೇಳುತ್ತಾರೆ - ಈಗಿನ ಪ್ರಪಂಚವು ಕಲಿಯುಗವಾಗಿದೆ ಆದ್ದರಿಂದ ಇಡೀ ಪ್ರಪಂಚವು ಕರ್ಮ ಬಂಧನದಿಂದ ಮಾಡಲ್ಪಟ್ಟಿದೆ ಮತ್ತು ಮುಂಚೆ ಪ್ರಪಂಚವು ಸತ್ಯಯುಗವಿತ್ತು, ಅದನ್ನೇ ಹೂಗಳ ಪ್ರಪಂಚವೆಂದು ಹೇಳುತ್ತಾರೆ. ಈಗ ಅದಂತು ಕರ್ಮ ಬಂಧನ ರಹಿತ, ಜೀವನ್ಮುಕ್ತ ದೇವಿ-ದೇವತೆಗಳ ರಾಜ್ಯವಾಗಿದೆ, ಅದು ಈಗಿಲ್ಲ. ಹಾಗಾದರೆ ನಾವೇನು ಜೀವನ್ಮುಕ್ತ ಎಂದು ಹೇಳುತ್ತೇವೆ, ಅದರ ಅರ್ಥವು ಇದಲ್ಲ - ನಾವೇನೂ ದೇಹದಿಂದ ಮುಕ್ತರಿದ್ದೆವು ಎಂದಲ್ಲ, ಅವರಲ್ಲಿ ದೇಹದ ಪರಿವೆಯಿರಲಿಲ್ಲ, ಆದರೆ ಅವರು ದೇಹದಲ್ಲಿ ಇರುತ್ತಿದ್ದರೂ ದುಃಖವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿರಲಿಲ್ಲ ಅಂದರೆ ಅಲ್ಲಿ ಯಾವುದೇ ಕರ್ಮ ಬಂಧನದ ವ್ಯವಹಾರವಿರಲಿಲ್ಲ. ಅವರು ಜೀವನವನ್ನು ತೆಗೆದುಕೊಳ್ಳುತ್ತಾ, ಜೀವನವನ್ನು ಬಿಡುತ್ತಾ, ಆದಿ-ಮಧ್ಯ-ಅಂತ್ಯ ಸುಖವನ್ನೇ ಪ್ರಾಪ್ತಿ ಮಾಡಿಕೊಳ್ಳುತ್ತಿದ್ದರು. ಅಂದಮೇಲೆ ಜೀವನ್ಮುಕ್ತವೆಂದರೆ ಜೀವನವಿದ್ದರೂ ಕರ್ಮಾತೀತ, ಈಗ ಈ ಇಡೀ ಪ್ರಪಂಚವೇ 5 ವಿಕಾರಗಳಲ್ಲಿ ಸಿಲುಕಿಕೊಂಡಿದೆ. ಅಂದರೆ 5 ವಿಕಾರಗಳ ಸಂಪೂರ್ಣವಾಗಿ ವಾಸಿಸುತ್ತಿದೆ ಆದರೆ ಮನುಷ್ಯನಲ್ಲಿ 5 ವಿಕಾರಗಳ ಮೇಲೆ ವಿಜಯ ಪಡೆಯುವಷ್ಟೂ ಶಕ್ತಿಯಿಲ್ಲ, ಹೀಗಿದ್ದಾಗ ಪರಮಾತ್ಮನೇ ಸ್ವಯಂ ಬಂದು ನಮ್ಮನ್ನು ಇದರಿಂದ ಮುಕ್ತಗೊಳಿಸುತ್ತಾರೆ ಹಾಗೂ ಭವಿಷ್ಯ ಪ್ರಾಲಬ್ಧವಾದ ದೇವಿ-ದೇವತಾ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ. ಒಳ್ಳೆಯದು. ಓಂ ಶಾಂತಿ.