08.07.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನಿಮ್ಮ ವಿದ್ಯೆಯ ತಳಪಾಯವು ಪವಿತ್ರತೆಯಾಗಿದೆ, ಪವಿತ್ರತೆಯಿದ್ದಾಗಲೇ ಯೋಗದ ಹರಿತ (ಹೊಳಪು)ವು ತುಂಬುವುದು, ಯೋಗದ ಹರಿತವಿದ್ದಾಗ ವಾಣಿಯಲ್ಲಿ ಶಕ್ತಿಯಿರುವುದು.

ಪ್ರಶ್ನೆ:
ನೀವು ಮಕ್ಕಳು ಈಗ ಯಾವ ಸಂಪೂರ್ಣ ಪ್ರಯತ್ನ ಪಡಬೇಕಾಗಿದೆ?

ಉತ್ತರ:
ತಲೆಯ ಮೇಲೆ ಯಾವ ವಿಕರ್ಮಗಳ ಹೊರೆಯಿದೆಯೋ ಅದನ್ನು ಇಳಿಸಿಕೊಳ್ಳುವ ಸಂಪೂರ್ಣ ಪ್ರಯತ್ನ ಪಡಬೇಕಾಗಿದೆ. ತಂದೆಯ ಮಕ್ಕಳಾಗಿಯೂ ಯವುದೇ ವಿಕರ್ಮ ಮಾಡಿದರೆ ಬಹಳ ಜೋರಾಗಿ ಕೆಳಗೆ ಬೀಳುವಿರಿ, ಬ್ರಹ್ಮಕುಮಾರ-ಕುಮಾರಿಯರ ನಿಂದನೆ ಮಾಡಿಸಿದರೆ, ಯಾವುದೇ ತೊಂದರೆ ಕೊಟ್ಟಿರೆಂದರೆ ಬಹಳ ಪಾಪವಾಗುವುದು, ನಂತರ ಜ್ಞಾನವನ್ನು ಕೇಳುವ ಮತ್ತು ಹೇಳುವುದರಿಂದ ಯಾವುದೇ ಲಾಭವಿಲ್ಲ.

ಓಂ ಶಾಂತಿ.
ಆತ್ಮಿಕ ತಂದೆಯು ಮಕ್ಕಳಿಗೆ ನೀವು ಪತಿತರಿಂದ ಪಾವನರಾಗಿ, ಪಾವನ ಪ್ರಪಂಚದ ಮಾಲೀಕರು ಹೇಗಾಗಬಲ್ಲಿರಿ ಎಂದು ತಿಳಿಸುತ್ತಿದ್ದಾರೆ. ಪಾವನ ಪ್ರಪಂಚಕ್ಕೆ ಸ್ವರ್ಗ ಅಥವಾ ವಿಷ್ಣು ಪುರಿ, ಲಕ್ಷ್ಮೀ-ನಾರಾಯಣರ ರಾಜ್ಯವೆಂದು ಕರೆಯಲಾಗುತ್ತದೆ. ವಿಷ್ಣು ಅರ್ಥಾತ್ ಲಕ್ಷ್ಮೀ-ನಾರಾಯಣರ ಕಂಬೈಂಡ್ ಚಿತ್ರವನ್ನು ಈ ರೀತಿ ಮಾಡಿದ್ದಾರೆ. ಆದ್ದರಿಂದ ಈ ರೀತಿ ತಿಳಿಸಿಕೊಡಲಾಗುತ್ತದೆ. ಆದರೆ ವಿಷ್ಣುವಿನ ಪೂಜೆ ಮಾಡುವಾಗ ಇವರು ಯಾರೆಂಬುದನ್ನು ಅರಿತುಕೊಳ್ಳುವುದಿಲ್ಲ. ಮಹಾಲಕ್ಷ್ಮಿಯ ಪೂಜೆ ಮಾಡುತ್ತಾರೆ ಆದರೆ ಇವರು ಯಾರೆಂಬುದನ್ನು ತಿಳಿದುಕೊಂಡಿಲ್ಲ. ತಂದೆಯು ನೀವು ಮಕ್ಕಳಿಗೆ ಭಿನ್ನ-ಭಿನ್ನ ರೂಪದಿಂದ ತಿಳಿಸುತ್ತಾರೆ ಅದನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಿ. ಪರಮಾತ್ಮನು ಎಲ್ಲವನ್ನೂ ಅರಿತಿದ್ದಾರೆ. ನಾವು ಏನೆಲ್ಲಾ ಒಳ್ಳೆಯದು, ಕೆಟ್ಟದ್ದನ್ನು ಮಾಡುತ್ತೇವೆಯೋ ಅದನ್ನು ತಿಳಿದುಕೊಂಡಿದ್ದಾರೆ, ಸರ್ವಜ್ಞನಾಗಿದ್ದಾರೆಂದು ಕೆಲವರ ಬುದ್ಧಿಯಲ್ಲಿರುತ್ತದೆ. ಇದಕ್ಕೆ ಅಂಧಶ್ರದ್ಧೆಯ ಭಾವವೆಂದು ಹೇಳಲಾಗುತ್ತದೆ. ಭಗವಂತನು ಈ ಮಾತುಗಳನ್ನು ಅರಿತುಕೊಂಡೇ ಇಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಭಗವಂತನಂತೂ ಪತಿತರನ್ನು ಪಾವನ ಮಾಡುವವರಾಗಿದ್ದಾರೆ. ಪಾವನರನ್ನಾಗಿ ಮಾಡಿ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಇದರಲ್ಲಿ ಯಾರು ಚೆನ್ನಾಗಿ ಓದುವರೋ ಅವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಆದರೆ ತಂದೆಯು ಎಲ್ಲರ ಮನಸ್ಸುಗಳನ್ನು ಅರಿತುಕೊಂಡಿದ್ದಾರೆಂದು ತಿಳಿಯಬಾರದು. ಇದಕ್ಕೆ ಬುದ್ಧಿಹೀನತೆಯೆಂದು ಹೇಳಲಾಗುವುದು. ಮನುಷ್ಯರು ಯಾವ ಕರ್ಮವನ್ನು ಮಾಡುವರು ಅದರ ಫಲವಾಗಿ ಕೆಟ್ಟದ್ದು ಅಥವಾ ಒಳ್ಳೆಯದು, ಡ್ರಾಮಾನುಸಾರ ಅವರಿಗೇ ಸಿಗುತ್ತದೆ. ಇದರಲ್ಲಿ ತಂದೆಯ ಯಾವುದೇ ಸಂಬಂಧವಿಲ್ಲ. ತಂದೆಯಂತೂ ಎಲ್ಲರ ಹೃದಯಗಳನ್ನು ತಿಳಿದುಕೊಂಡಿದ್ದಾರೆ ಎಂಬ ಸಂಕಲ್ಪವನ್ನೆಂದೂ ಮಾಡಬಾರದು. ಅನೇಕರು ವಿಕಾರದಲ್ಲಿ ಹೋಗುತ್ತಾ ಪಾಪ ಮಾಡುತ್ತಿರುತ್ತಾರೆ ಮತ್ತು ಇಲ್ಲಿ ಅಥವಾ ಸೇವಾಕೇಂದ್ರದಲ್ಲಿ ಬಂದು ಬಿಡುತ್ತಾರೆ. ತಂದೆಗಂತೂ ಎಲ್ಲವೂ ತಿಳಿದಿದೆ ಎಂದು ತಿಳಿಯುತ್ತಾರೆ. ಆದರೆ ತಂದೆಯು ಹೇಳುತ್ತಾರೆ - ನಾನು ಈ ವ್ಯವಹಾರ ಮಾಡುವುದಿಲ್ಲ. ಸರ್ವಜ್ಞ ಅರ್ಥಾತ್ ಎಲ್ಲರ ಹೃದಯಗಳನ್ನು ಹೊಕ್ಕು ನೋಡುವವರೆಂಬ ಶಬ್ಧವು ತಪ್ಪಾಗಿದೆ. ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡಿರಿ, ಸ್ವರ್ಗದ ಮಾಲೀಕರನ್ನಾಗಿ ಮಾಡಿ ಎಂದು ನೀವು ತಂದೆಯನ್ನು ಕರೆಯುತ್ತೀರಿ ಏಕೆಂದರೆ ಜನ್ಮ-ಜನ್ಮಾಂತರಗಳ ಪಾಪವು ತಲೆಯ ಮೇಲೆ ಬಹಳಷ್ಟಿದೆ, ಈ ಜನ್ಮದ್ದೂ ಇದೆ. ಈ ಜನ್ಮದ ಪಾಪಗಳನ್ನು ತಿಳಿಸುತ್ತಾರೆ. ಅನೇಕರು ಇಂತಹ ಪಾಪಗಳನ್ನು ಮಾಡಿದ್ದಾರೆ ಅವರು ಪಾವನರಾಗುವುದೇ ಬಹಳ ಪರಿಶ್ರಮವಾಗುತ್ತದೆ. ಮುಖ್ಯ ಮಾತು ಪಾವನರಾಗುವುದಾಗಿದೆ. ವಿದ್ಯೆಯು ಬಹಳ ಸಹಜವಾಗಿದೆ ಆದರೆ ವಿಕರ್ಮಗಳ ಹೊರೆಯನ್ನು ಹೇಗೆ ಇಳಿಸಿಕೊಳ್ಳುವುದು, ಅದರ ಪ್ರಯತ್ನ ಪಡಬೇಕು. ಇಂತಹವರು ಅನೇಕರಿದ್ದಾರೆ, ಬಹಳ ಪಾಪ ಮಾಡುತ್ತಾರೆ, ಡಿಸ್-ಸರ್ವೀಸ್ ಮಾಡುತ್ತಾರೆ. ಬ್ರಹ್ಮಕುಮಾರ-ಕುಮಾರಿಯರ ಆಶ್ರಮಕ್ಕೆ ತೊಂದರೆ ಕೊಡುವ ಪ್ರಯತ್ನ ಪಡುತ್ತಾರೆ. ಇದರಿಂದ ಬಹಳ ಪಾಪವಾಗುತ್ತದೆ. ಆ ಪಾಪವು ಅನ್ಯರಿಗೆ ಜ್ಞಾನ ತಿಳಿಸುವುದರಿಂದಲೂ ಕಳೆಯುವುದಿಲ್ಲ. ಪಾಪವು ಕಳೆಯುವುದೇ ಯೋಗದಿಂದ. ಮೊದಲು ಯೋಗದ ಪೂರ್ಣ ಪುರುಷಾರ್ಥ ಮಾಡಬೇಕು ಆಗಲೇ ಅನ್ಯರಿಗೆ ಬಾಣವು ನಾಟುವುದು. ಮೊದಲು ಪವಿತ್ರರಾಗಬೇಕು, ಯೋಗವಿರಬೇಕು ಆಗ ವಾಣಿಯಲ್ಲಿಯೂ ಶಕ್ತಿ ತುಂಬುವುದು. ಇಲ್ಲದಿದ್ದರೆ ಭಲೆ ಅನ್ಯರಿಗೆ ಎಷ್ಟಾದರೂ ತಿಳಿಸಿರಿ ಆದರೆ ಯಾರಿಗೂ ಬುದ್ಧಿಗೆ ಸ್ಪರ್ಷಿಸುವುದಿಲ್ಲ, ಬಾಣವು ನಾಟುವುದಿಲ್ಲ. ಜನ್ಮ-ಜನ್ಮಾಂತರದ ಪಾಪವಿದೆಯಲ್ಲವೆ. ಈಗ ಯಾವ ಪಾಪ ಮಾಡುವರೋ ಅದು ಜನ್ಮ-ಜನ್ಮಾಂತರಕ್ಕಿಂತಲೂ ಬಹಳಷ್ಟಾಗಿ ಬಿಡುತ್ತದೆ. ಆದ್ದರಿಂದಲೇ ಸದ್ಗುರುವಿನ ನಿಂಧಕರಿಗೆ ನೆಲೆಯಿಲ್ಲವೆಂದು ಗಾಯನವಿದೆ. ಇವರು ಸತ್ಯ ತಂದೆ, ಸತ್ಯ ಶಿಕ್ಷಕ, ಸದ್ಗುರುವಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಬ್ರಹ್ಮಾಕುಮಾರ-ಕುಮಾರಿಯರ ನಿಂದನೆ ಮಾಡಿಸುವವರಿಗೂ ಸಹ ಪಾಪವು ಬಹಳ ಬಾರಿಯಾಗಿದೆ. ಮೊದಲು ಸ್ವಯಂ ತಾವು ಪಾವನರಾಗಲಿ. ಬೇರೆಯವರಿಗೆ ತಿಳಿಸಲು ಬಹಳ ಉತ್ಸಾಹವಿರುತ್ತದೆ. ಆದರೆ ಯೋಗವು ನಯಾಪೈಸೆಯಷ್ಟೂ ಇರುವುದಿಲ್ಲ, ಇದರಿಂದೇನು ಲಾಭ? ತಂದೆಯು ತಿಳಿಸುತ್ತಾರೆ - ಮುಖ್ಯವಾದ ಮಾತು - ನೆನಪಿನಿಂದ ಪಾವನರಾಗುವುದಾಗಿದೆ. ಪಾವನರಾಗುವುದಕ್ಕಾಗಿಯೇ ಕರೆಯುತ್ತಾರೆ. ಭಕ್ತಿಮಾರ್ಗದಲ್ಲಿ ಅಲೆದಾಡುವುದು, ಜೋರಾಗಿ ಕೂಗುವುದು ಶಬ್ಧ ಮಾಡುವುದು ಒಂದು ಹವ್ಯಾಸವಾಗಿ ಬಿಟ್ಟಿದೆ. ಪ್ರಾರ್ಥನೆ ಮಾಡುತ್ತಾರೆ, ಆದರೆ ಭಗವಂತನಿಗೆ ಕಿವಿಗಳೆಲ್ಲಿದೆ? ಕಿವಿ, ಬಾಯಿ ಇಲ್ಲದೆ ಕೇಳುವುದು, ಮಾತನಾಡುವುದು ಹೇಗೆ? ಅವರಂತೂ ಅವ್ಯಕ್ತನಾಗಿದ್ದಾರೆ. ಇದೆಲ್ಲವೂ ಅಂಧಶ್ರದ್ಧೆಯಾಗಿದೆ.

ನೀವು ತಂದೆಯನ್ನು ಎಷ್ಟು ನೆನಪು ಮಾಡುವಿರೋ ಅಷ್ಟು ಪಾಪ ನಾಶವಾಗುವುದು. ಇವರು ಬಹಳ ನೆನಪು ಮಾಡುತ್ತಾರೆ, ಇವರು ಕಡಿಮೆ ಮಾಡುತ್ತಾರೆಂದು ತಂದೆಗೆ ತಿಳಿದಿರುತ್ತದೆಯೆಂದಲ್ಲ. ತಮ್ಮ ಚಾರ್ಟನ್ನು ತಾವೇ ನೋಡಿಕೊಳ್ಳಬೇಕಾಗಿದೆ. ತಂದೆಯು ತಿಳಿಸಿದ್ದಾರೆ - ನೆನಪಿನಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ತಂದೆಯೂ ಸಹ ನಿಮ್ಮೊಂದಿಗೆ ಕೇಳುತ್ತಾರೆ - ಎಷ್ಟು ನೆನಪು ಮಾಡುತ್ತೀರಿ? ಚಲನೆಯಿಂದಲೂ ತಿಳಿದು ಬರುತ್ತದೆ. ನೆನಪು ಮಾಡದ ವಿನಃ ಪಾಪಗಳು ಕಳೆಯಲು ಸಾಧ್ಯವಿಲ್ಲ. ಅನ್ಯರಿಗೆ ಜ್ಞಾನವನ್ನು ತಿಳಿಸುತ್ತೀರೆಂದರೆ ನಿಮ್ಮ ಹಾಗೂ ಅವರ ಪಾಪವು ಕಳೆಯುತ್ತದೆಯೆಂದಲ್ಲ. ಯಾವಾಗ ಸ್ವಯಂ ನೆನಪು ಮಾಡುವರೋ ಆಗಲೇ ಕಳೆಯುವುದು. ಮೂಲ ಮಾತು ಪಾವನರಾಗುವುದಿದೆ. ತಂದೆಯು ತಿಳಿಸುತ್ತಾರೆ - ನನ್ನವರಾಗಿದ್ದೀರೆಂದರೆ ಯಾವುದೇ ಪಾಪ ಮಾಡಬೇಡಿ, ಇಲ್ಲವಾದರೆ ಬಹಳ ಜೋರಾಗಿ ಬೀಳುವಿರಿ. ನಾವಂತೂ ಒಳ್ಳೆಯ ಪದವಿಯನ್ನೇ ಪಡೆಯುತ್ತೇವೆಂದು ಕೇವಲ ಭರವಸೆಯನ್ನೂ ಇಟ್ಟುಕೊಳ್ಳಬೇಡಿ. ಪ್ರದರ್ಶನಿಯಲ್ಲಿಯೂ ಸಹ ಅನೇಕರಿಗೆ ತಿಳಿಸಿದರೆ ಸಾಕು, ನಾವು ಬಹಳ ಸರ್ವೀಸ್ ಮಾಡಿದೆವೆಂದು ಖುಷಿಯಾಗಿ ಬಿಡುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ಮೊದಲು ನೀವು ಪಾವನರಾಗಿ ತಂದೆಯನ್ನು ನೆನಪು ಮಾಡಿ. ನೆನಪಿನಲ್ಲಿಯೇ ಅನೇಕರು ಅನುತ್ತೀರ್ಣರಾಗುತ್ತಾರೆ. ಜ್ಞಾನವು ಬಹಳ ಸಹಜವಾಗಿದೆ, ಕೇವಲ 84 ಜನ್ಮಗಳ ಚಕ್ರವನ್ನು ಅರಿತುಕೊಳ್ಳಬೇಕಾಗಿದೆ. ಆ ವಿದ್ಯೆಯಲ್ಲಿ ಎಷ್ಟೊಂದು ಪುಸ್ತಕಗಳನ್ನು ಓದುತ್ತಾರೆ, ಪರಿಶ್ರಮ ಪಡುತ್ತಾರೆ ಆದರೆ ಸಂಪಾದಿಸುತ್ತಾರೆಯೇ? ಓದುತ್ತಾ-ಓದುತ್ತಾ ಸಾವನ್ನಪ್ಪಿದರೆ ವಿದ್ಯೆಯು ಸಮಾಪ್ತಿ. ನಿಮ್ಮ ಈ ಲೌಕಿಕ ವಿದ್ಯೆಯು ಜೊತೆ ತೆಗೆದುಕೊಂಡು ಹೋಗುವಂತದ್ದಲ್ಲ. ನೆನಪಿನಲ್ಲಿದ್ದಾಗ ಧಾರಣೆಯಾಗುವುದು, ಪವಿತ್ರರಾಗುವುದಿಲ್ಲ ಪಾಪವು ಕಳೆಯುವುದಿಲ್ಲವೆಂದರೆ ಬಹಳ ಶಿಕ್ಷೆಯನ್ನನುಭವಿಸಬೇಕಾಗುವುದು. ನಮ್ಮ ನೆನಪಂತೂ ತಂದೆಯವರೆಗೆ ತಲುಪುತ್ತದೆ ಎಂದಲ್ಲ. ನೀವು ನೆನಪು ಮಾಡಿದರೆ ನೀವೇ ಪಾವನರಾಗುವಿರಿ, ಇದರಲ್ಲಿ ತಂದೆಯೇನು ಮಾಡುತ್ತಾರೆ? ಶಭಾಷ್ ಎಂದು ಹೇಳುತ್ತಾರೆ. ಅನೇಕ ಮಕ್ಕಳಿದ್ದಾರೆ ಅವರು ಸದಾ ತಂದೆಯನ್ನು ನಾವು ನೆನಪು ಮಾಡುತ್ತಲೇ ಇರುತ್ತೇವೆ, ಅವರಲ್ಲದೆ ನಮಗೆ ಇನ್ಯಾರಿದ್ದಾರೆ ಎಂದು ಹೇಳುತ್ತಾರೆ, ಇದೂ ಸಹ ಸುಳ್ಳು ಹೇಳುವುದಾಗಿದೆ ನೆನಪಿನಲ್ಲಂತೂ ಬಹಳ ಪರಿಶ್ರಮವಿದೆ. ನಾವು ನೆನಪು ಮಾಡುತ್ತೇವೆಯೇ ಅಥವಾ ಇಲ್ಲವೆ ಎಂಬುದನ್ನೂ ಸಹ ತಿಳಿದುಕೊಳ್ಳುವುದಿಲ್ಲ. ನಾವಂತೂ ನೆನಪು ಅವಶ್ಯವಾಗಿ ಮಾಡುತ್ತೇವೆಂದು ಗೊತ್ತಿಲ್ಲದೆ ಹೇಳಿ ಬಿಡುತ್ತಾರೆ. ಪರಿಶ್ರಮವಿಲ್ಲದೆ ವಿಶ್ವದ ಮಾಲೀಕರಾಗಲು ಸಾಧ್ಯವೇ? ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಯಾವಾಗ ನೆನಪಿನ ಹೊಳಪು ತುಂಬುವುದೋ ಆಗಲೇ ಸರ್ವೀಸ್ ಮಾಡಲು ಸಾಧ್ಯ. ಆಗ ಸರ್ವೀಸ್ ಮಾಡಿ ಎಷ್ಟು ಪ್ರಜೆಗಳನ್ನು ತಯಾರು ಮಾಡಿದ್ದೀರಿ ಎಂಬುದನ್ನು ನೋಡಲಾಗುವುದು. ಲೆಕ್ಕವು ಬೇಕಲ್ಲವೆ. ನಾವು ಎಷ್ಟು ಮಂದಿಯನ್ನು ನಮ್ಮ ಸಮಾನ ಮಾಡಿಕೊಳ್ಳುತ್ತೇವೆ ಎಂದು ನೋಡಿಕೊಳ್ಳಬೇಕು. ಪ್ರಜೆಗಳನ್ನು ತಯಾರು ಮಾಡಬೇಕಲ್ಲವೆ. ಆಗಲೇ ರಾಜ್ಯ ಪದವಿಯನ್ನು ಪಡೆಯುವಿರಿ. ಈಗಂತೂ ಇನ್ನೂ ಏನೇನೂ ಇಲ್ಲ. ಯೋಗದಲ್ಲಿದ್ದು ಹೊಳಪು ತುಂಬಿದಾಗಲೇ ಅನ್ಯರಿಗೆ ಪೂರ್ಣ ಬಾಣವು ನಾಟುವುದು. ಕೊನೆಯಲ್ಲಿ ಭೀಷ್ಮ ಪಿತಾಮಹ, ದ್ರೋಣ ಮೊದಲಾದವರಿಗೂ ಜ್ಞಾನವನ್ನು ಕೊಟ್ಟರೆಂದು ಶಾಸ್ತ್ರಗಳಲ್ಲಿದೆಯಲ್ಲವೆ. ಯಾವಾಗ ನಿಮ್ಮ ಪತಿತತನವು ಹೊರಟು ಹೋಗಿ ನಿಮ್ಮ ಆತ್ಮವು ಸತೋಪ್ರಧಾನತೆಯ ಕಡೆಗೆ ಬಂದು ಬಿಡುವುದು ಆಗ ಆ ಹರಿತವು ತುಂಬುತ್ತದೆ. ಬಹು ಬೇಗನೆ ಬಾಣವು ನಾಟುತ್ತದೆ. ತಂದೆಯಂತೂ ಎಲ್ಲವನ್ನೂ ತಿಳಿದುಕೊಂಡಿದ್ದಾರೆಂಬ ಸಂಕಲ್ಪವನ್ನೆಂದೂ ಮಾಡಬೇಡಿ. ತಂದೆಗೆ ತಿಳಿದುಕೊಳ್ಳುವ ಅವಶ್ಯಕತೆಯೇನಿದೇ! ಯಾರು ಮಾಡುವರೋ ಅವರು ಪಡೆಯುವರು. ತಂದೆಯು ಸಾಕ್ಷಿಯಾಗಿ ನೋಡುತ್ತಿರುತ್ತಾರೆ. ಬಾಬಾ, ನಾವು ಇಂತಹ ಜಾಗದಲ್ಲಿ ಹೋಗಿ ಸರ್ವೀಸ್ ಮಾಡಿದೆವು ಎಂದು ತಂದೆಗೆ ಪತ್ರ ಬರೆಯುತ್ತಾರೆ. ಆದರೆ ತಂದೆಯು ಕೇಳುವುದು - ಮೊದಲು ನೀವು ನೆನಪಿನ ಯಾತ್ರೆಯಲ್ಲಿ ತತ್ಫರರಾಗಿದ್ದೀರಾ? ಮೊದಲ ಮುಖ್ಯ ಮಾತೇ ಇದಾಗಿದೆ? ಅನ್ಯ ಸಂಗಗಳನ್ನು ಬಿಟ್ಟು ಒಬ್ಬ ತಂದೆಯ ಸಂಗಮಾಡಿ. ದೇಹೀ-ಅಭಿಮಾನಿಗಳಾಗಿರಿ. ಮನೆಯಲ್ಲಿದ್ದರೂ ಸಹ ತಿಳಿದುಕೊಳ್ಳಬೇಕಾಗಿದೆ - ಇದು ಹಳೆಯ ಪ್ರಪಂಚ, ಹಳೆಯ ದೇಹವಾಗಿದೆ, ಇದೆಲ್ಲವೂ ಸಮಾಪ್ತಿಯಾಗುವುದಿದೆ. ನಮ್ಮ ಕೆಲಸವಿರುವುದೇ ತಂದೆ ಮತ್ತು ಆಸ್ತಿಯೊಂದಿಗೆ. ಗೃಹಸ್ಥ ವ್ಯವಹಾರದಲ್ಲಿ ಇರಬೇಡಿ, ಯಾರೊಂದಿಗೂ ಮಾತನಾಡಬೇಡಿ ಎಂದು ತಂದೆಯೇನೂ ಹೇಳುವುದಿಲ್ಲ. ಮದುವೆಗೆ ಹೋಗುವುದೇ ಎಂದು ತಂದೆಯನ್ನು ಕೇಳುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ಭಲೆ ಹೋಗಿರಿ. ಅಲ್ಲಿಯೂ ಸರ್ವೀಸ್ ಮಾಡಿ. ಬುದ್ಧಿಯೋಗವು ಶಿವ ತಂದೆಯೊಂದಿಗಿರಲಿ. ಜನ್ಮ-ಜನ್ಮಾಂತರದ ವಿಕರ್ಮಗಳು ನೆನಪಿನಿಂದಲೇ ಭಸ್ಮವಾಗುತ್ತದೆ. ಇಲ್ಲಿಯೂ ಸಹ ಒಂದುವೇಳೆ ವಿಕರ್ಮ ಮಾಡುತ್ತೀರೆಂದರೆ ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಪಾವನರಾಗುತ್ತಾ-ಆಗುತ್ತಾ ವಿಕಾರದಲ್ಲಿ ಬಿದ್ದರೆ ಅವರು ಸತ್ತರೆಂದರ್ಥ. ಒಮ್ಮೆಲೆ ಪುಡಿ ಪುಡಿಯಾಗಿ ಬಿಡುತ್ತಾರೆ. ಶ್ರೀಮತದಂತೆ ನಡೆಯದೆ ನಷ್ಟ ಮಾಡಿಕೊಳ್ಳುತ್ತಾರೆ. ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತವು ಬೇಕು. ಇಂತಿಂತಹ ಪಾಪಗಳನ್ನು ಮಾಡುತ್ತಾರೆ, ಅವರಿಗೆ ಯೋಗವೇ ಹಿಡಿಸುವುದಿಲ್ಲ, ನೆನಪು ಮಾಡುವುದಕ್ಕೇ ಸಾಧ್ಯವಾಗುವುದಿಲ್ಲ. ಆಗ ಹೋಗಿ ಯಾರಿಗಾದರೂ ಭಗವಂತನು ಬಂದಿದ್ದಾರೆ, ಅವರಿಂದ ಆಸ್ತಿಯನ್ನು ತೆಗೆದುಕೊಳ್ಳಿ ಎಂದು ಹೇಳಿದರೆ ಅವರು ನಂಬುವುದಿಲ್ಲ, ಬಾಣವು ನಾಟುವುದಿಲ್ಲ. ತಂದೆಯು ಹೇಳಿದ್ದಾರೆ - ಮೊದಲು ಭಕ್ತರಿಗೇ ಜ್ಞಾನವನ್ನು ತಿಳಿಸಿ, ವ್ಯರ್ಥವಾಗಿ ಯಾರಿಗೂ ಹೇಳಬೇಡಿ. ಇಲ್ಲವಾದರೆ ಇನ್ನೂ ನಿಂದನೆ ಮಾಡಿಸುತ್ತೀರಿ.

ಕೆಲವು ಮಕ್ಕಳು ತಂದೆಯೊಂದಿಗೆ ಕೇಳುತ್ತಾರೆ - ಬಾಬಾ, ನಮಗೆ ದಾನ ಮಾಡುವ ಹವ್ಯಾಸವಿದೆ, ಈಗಂತೂ ಜ್ಞಾನದಲ್ಲಿ ಬಂದಿದ್ದೇವೆ ಅಂದಾಗ ಏನು ಮಾಡುವುದು? ತಂದೆಗೆ ಸಲಹೆ ನೀಡುತ್ತಾರೆ - ಮಕ್ಕಳೇ, ಬಡವರಿಗೆ ದಾನ ಮಾಡುವವರಂತೂ ಅನೇಕರಿದ್ದಾರೆ. ಹಸಿವಿನಿಂದ ಬಳಲುವುದಿಲ್ಲ. ಫಕೀರರ ಬಳಿ ಬಹಳಷ್ಟು ಹಣವಿರುತ್ತದೆ, ಆದ್ದರಿಂದ ಇವೆಲ್ಲಾ ಮಾತುಗಳಿಂದ ನಿಮ್ಮ ಬುದ್ಧಿಯು ದೂರವಾಗಬೇಕು. ದಾನ ಇತ್ಯಾದಿಗಳಲ್ಲಿ ಬಹಳ ಎಚ್ಚರಿಕೆಯಿಂದಿರಬೇಕು. ಅನೇಕರು ಇಂತಿಂತಹ ಕೆಲಸಗಳನ್ನು ಮಾಡುತ್ತಾರೆ, ಮಾತೇ ಕೇಳಬೇಡಿ ಆದರೂ ಸಹ ನಮ್ಮ ತಲೆಯ ಮೇಲೆ ಹೊರೆಯು ಇನ್ನೂ ಭಾರಿಯಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದೇ ಇಲ್ಲ. ಜ್ಞಾನ ಮಾರ್ಗವು ತಮಾಷೆಯ ಮಾರ್ಗವಲ್ಲ. ತಂದೆಯ ಜೊತೆ ಧರ್ಮರಾಜನೂ ಇದ್ದಾರೆ, ಧರ್ಮರಾಜನ ಬಹಳ ದೊಡ್ಡ-ದೊಡ್ಡ ಶಿಕ್ಷೆಗಳನ್ನನುಭವಿಸಬೇಕಾಗುತ್ತದೆ. ಧರ್ಮರಾಜನು ಲಿಖಿತವೆಲ್ಲವನ್ನು ತೆಗೆದುಕೊಂಡಾಗ ತಿಳಿಯುತ್ತದೆಯೆಂದು ಹೇಳುತ್ತಾರಲ್ಲವೆ. ಜನ್ಮ-ಜನ್ಮಾಂತರದ ಶಿಕ್ಷೆಗಳನ್ನನುಭವಿಸುವುದರಲ್ಲಿ ಸಮಯ ಹಿಡಿಸುವುದಿಲ್ಲ. ತಂದೆಯು ಕಾಶಿಯಲ್ಲಿ ಬಲಿಯಾಗುವ ಉದಾಹರಣೆಯನ್ನು ತಿಳಿಸುತ್ತಾರೆ. ಅದು ಭಕ್ತಿಮಾರ್ಗ, ಇದು ಜ್ಞಾನ ಮಾರ್ಗವಾಗಿದೆ. ಮನುಷ್ಯರನ್ನೂ ಬಲಿ ಕೊಡುತ್ತಾರೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಇವೆಲ್ಲಾ ಮಾತುಗಳನ್ನು ತಿಳಿದುಕೊಳ್ಳಬೇಕಾಗಿದೆ. ಈ ನಾಟಕವನ್ನು ರಚಿಸಿದ್ದಾದರೂ ಏಕೆ? ಚಕ್ರದಲ್ಲಿ ತಂದಿದ್ದಾದರೂ ಏಕೆ ಎಂದಲ್ಲ. ಚಕ್ರದಲ್ಲಂತೂ ಬರುತ್ತಲೇ ಇರುತ್ತೀರಿ. ಇದು ಅನಾದಿ ನಾಟಕವಲ್ಲವೆ. ಚಕ್ರದಲ್ಲಿ ಬರದೇ ಹೋದರೆ ಮತ್ತೆ ಈ ಪ್ರಪಂಚವೇ ಇರುವುದಿಲ್ಲ. ಮೋಕ್ಷವಂತೂ ಯಾರಿಗೂ ಇಲ್ಲ. ಮುಖ್ಯವಾದವರಿಗೂ ಮೋಕ್ಷವು ಸಿಗಲು ಸಾಧ್ಯವಿಲ್ಲ. 5000 ವರ್ಷಗಳ ನಂತರ ಮತ್ತೆ ಇದೇರೀತಿ ಚಕ್ರವನ್ನು ಸುತ್ತುತ್ತೀರಿ. ಇದಂತೂ ನಾಟಕವಲ್ಲವೆ. ಕೇವಲ ಯಾರಿಗಾದರೂ ತಿಳಿಸುವ, ಮುರುಳಿಯನ್ನು ಹೇಳುವುದರಿಂದ ಪದವಿಯು ಸಿಗುವುದಿಲ್ಲ. ಮೊದಲು ಪತಿತರಿಂದ ಪಾವನರಾಗಬೇಕಾಗಿದೆ. ತಂದೆಯಂತೂ ಎಲ್ಲವನ್ನೂ ತಿಳಿದುಕೊಂಡಿದ್ದಾರಲ್ಲವೆ. ತಂದೆಯು ತಿಳಿದುಕೊಂಡರೂ ಸಹ ಏನು ಮಾಡುವರು? ಮೊದಲಂತೂ ನಿಮ್ಮ ಆತ್ಮಕ್ಕೆ ತಿಳಿದಿದೆ - ಶ್ರೀಮತದನುಸಾರ ನಾವು ಏನು ಮಾಡುತ್ತೇವೆ, ಎಲ್ಲಿಯವರೆಗೆ ತಂದೆಯನ್ನು ನೆನಪು ಮಾಡುತ್ತೇವೇ? ಬಾಕಿ ಇದನ್ನು ತಂದೆಯೇನು ತಿಳಿದುಕೊಳ್ಳುವರು, ಇದರಿಂದ ಲಾಭವಾದರೂ ಏನು? ನೀವು ಏನೆಲ್ಲವನ್ನೂ ಮಾಡುತ್ತೀರೋ ಅದನ್ನು ನೀವೇ ಪಡೆಯುತ್ತೀರಿ. ಈ ಮಗು ಚೆನ್ನಾಗಿ ಸರ್ವೀಸ್ ಮಾಡುತ್ತದೆಯೆಂದು ತಂದೆಯು ನಿಮ್ಮ ಚಲನೆ ಮತ್ತು ಸೇವೆಯಿಂದಲೇ ತಿಳಿದುಕೊಂಡಿದ್ದಾರೆ. ಯಾರಾದರೂ ತಂದೆಯ ಮಕ್ಕಳಾಗಿ ಬಹಳ ವಿಕರ್ಮ ಮಾಡಿದರೆ ಅಂತಹವರ ಮುರುಳಿಯಲ್ಲಿ ಶಕ್ತಿಯು ತುಂಬಲು ಸಾಧ್ಯವಿಲ್ಲ. ಇದು ಜ್ಞಾನದ ಕತ್ತಿಯಾಗಿದೆ. ಇದರಲ್ಲಿ ನೆನಪಿನ ಹರಿತವು ಬೇಕು. ಯೋಗಬಲದಿಂದ ನೀವು ವಿಶ್ವದ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಬಾಕಿ ಜ್ಞಾನದಿಂದ ಹೊಸ ಪ್ರಪಂಚದ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಮೊದಲು ಪವಿತ್ರರಾಗಬೇಕು. ಪವಿತ್ರರಾಗದೆ ಶ್ರೇಷ್ಠ ಪದವಿಯು ಸಿಗಲು ಸಾಧ್ಯವಿಲ್ಲ. ಇಲ್ಲಿ ನರನಿಂದ ನಾರಾಯಣನಾಗಲು ಬಹಳ ಪರಿಶ್ರಮ ಪಡಬೇಕಾಗುತ್ತದೆ. ಇಷ್ಟು ಪರಿಶ್ರಮ ಪಡುವುದಿಲ್ಲ. ಆದ್ದರಿಂದ ಮಾತಿನಲ್ಲಿ ಶಕ್ತಿಯು ತುಂಬುವುದಿಲ್ಲ, ಬಾಣವು ನಾಟುವುದಿಲ್ಲ. ನೆನಪಿನ ಯಾತ್ರೆಯೆಲ್ಲಿದೆ? ಕೇವಲ ಪ್ರದರ್ಶನಿಯಲ್ಲಿ ಅನೇಕರಿಗೆ ತಿಳಿಸುತ್ತಾರೆ. ಮೊದಲು ನೆನಪಿನ ಪವಿತ್ರರಾಗಬೇಕು ನಂತರ ಜ್ಞಾನವಾಗಿದೆ. ಪಾವನರಾದಾಗಲೇ ಜ್ಞಾನದ ಧಾರಣೆಯಾಗುವುದು, ಪತಿತರಿಗೆ ಧಾರಣೆಯಾಗುವುದಿಲ್ಲ. ಮುಖ್ಯವಾದ ಸಬ್ಜೆಕ್ಟ್ ನೆನಪಿನದಾಗಿದೆ. ಆ ವಿದ್ಯೆಯಲ್ಲಿಯೂ ಸಬ್ಜೆಕ್ಟ್ಗಳಿರುತ್ತವೆಯಲ್ಲವೆ. ನಿಮ್ಮ ಬಳಿಯೂ ಭಲೆ ಬಿ.ಕೆ. ಆಗುತ್ತಾರೆ ಆದರೆ ಬ್ರಹ್ಮಕುಮಾರ-ಕುಮಾರಿ, ಸಹೋದರ-ಸಹೋದರಿಯರಾಗುವುದು ಚಿಕ್ಕಮ್ಮನ ಮನೆಯಂತಲ್ಲ. ಕೇವಲ ನಾಮಮಾತ್ರಕ್ಕೆ ಆಗಬಾರದು. ದೇವತೆಗಳಾಗಲು ಮೊದಲು ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ನಂತರ ವಿದ್ಯೆಯಾಗಿದೆ. ಕೇವಲ ವಿದ್ಯೆಯಿದ್ದು ಪವಿತ್ರರಾಗದಿದ್ದರೆ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಆತ್ಮವು ಪವಿತ್ರವಾಗಬೇಕು, ಪವಿತ್ರವಾದಾಗಲೇ ಪವಿತ್ರ ಪ್ರಪಂಚದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯ. ಪವಿತ್ರತೆಗಾಗಿಯೇ ತಂದೆಯು ಬಹಳ ಒತ್ತುಕೊಟ್ಟು ಹೇಳುತ್ತಾರೆ. ಪವಿತ್ರತೆಯಿಲ್ಲದೆ ಯಾರಿಗೂ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಬಾಕಿ ತಂದೆಯು ಏನನ್ನೂ ನೋಡುವುದಿಲ್ಲ. ಎಲ್ಲಾ ಮಾತುಗಳನ್ನು ತಿಳಿಸಿಕೊಡುತ್ತಾರೆ. ಭಕ್ತಿಮಾರ್ಗದಲ್ಲಿ ಭಾವನೆಯ ಫಲವು ಸಿಗುತ್ತದೆ ಅದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಶರೀರವಿಲ್ಲದೆ ತಂದೆಯು ಹೇಗೆ ಮಾತನಾಡುವರು? ಹೇಗೆ ಕೇಳುವರು? ಆತ್ಮಕ್ಕೆ ಶರೀರವಿದ್ದಾಗ ಕೇಳುತ್ತದೆ, ಮಾತನಾಡುತ್ತದೆ. ತಂದೆಯು ತಿಳಿಸುತ್ತಾರೆ - ನನಗೆ ಕರ್ಮೇಂದ್ರಿಯಗಳೇ ಇಲ್ಲವೆಂದಾಗ ಹೇಗೆ ಕೇಳಲಿ, ಹೇಗೆ ಅರಿತುಕೊಳ್ಳಲಿ? ನಾವು ವಿಕಾರದಲ್ಲಿ ಹೋಗುತ್ತೇವೆ ಎಂಬುದು ತಂದೆಗೆ ಗೊತ್ತಿದೆ ಎಂದು ತಿಳಿಯುತ್ತಾರೆ. ಒಂದುವೇಳೆ ತಿಳಿದಿಲ್ಲವೆಂದರೆ ಅವರನ್ನು ಭಗವಂತನೆಂದೇ ಒಪ್ಪುವುದಿಲ್ಲ. ಇಂತಹವರು ಅನೇಕರಿರುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಪಾವನರನ್ನಾಗಿ ಮಾಡುವ ಮಾರ್ಗವನ್ನು ತಿಳಿಸಲು ಬಂದಿದ್ದೇನೆ, ಸಾಕ್ಷಿಯಾಗಿ ನೋಡುತ್ತೇನೆ. ಇವರು ಕುಪುತ್ರರೇ ಅಥವಾ ಸುಪುತ್ರರೇ? ಎಂದು ಮಕ್ಕಳ ಚಲನೆಯಿಂದಲೇ ತಿಳಿದು ಬರುತ್ತದೆ. ಸರ್ವೀಸಿನ ಸಾಕ್ಷಿಯೂ ಬೇಕಲ್ಲವೆ. ಇದೂ ಸಹ ತಿಳಿದಿದೆ - ಯಾರು ಮಾಡುವರೋ ಅವರು ಪಡೆಯುವರು. ಶ್ರೀಮತದಂತೆ ನಡೆದರೆ ಶ್ರೇಷ್ಠರಾಗುವರು. ನಡೆಯಲಿಲ್ಲವೆಂದರೆ ತಾವೇ ಹೋಗಿ ಕೊಳಕಾಗಿ ಕೆಳಗೆ ಬೀಳುವರು. ಯಾವುದೇ ಮಾತಿದ್ದರೂ ಸ್ಪಷ್ಟವಾಗಿ ಕೇಳಿ, ಅಂಧಶ್ರದ್ಧೆಯ ಮಾತಿಲ್ಲ. ತಂದೆಯು ತಿಳಿಸುತ್ತಾರೆ - ನೆನಪಿನ ಹರಿತವಿಲ್ಲದಿದ್ದರೆ ಹೇಗೆ ಪಾವನರಾಗುತ್ತೀರಿ? ಈ ಜನ್ಮದಲ್ಲಿಯೂ ಸಹ ಎಂತೆಂತಹ ಪಾಪ ಮಾಡುತ್ತಾರೆ, ಮಾತೇ ಕೇಳಬೇಡಿ. ಇದು ಪಾಪಾತ್ಮರ ಪ್ರಪಂಚವಾಗಿದೆ. ಸತ್ಯಯುಗವು ಪುಣ್ಯಾತ್ಮರ ಪ್ರಪಂಚವಾಗಿದೆ. ಇದು ಸಂಗಮಯುಗವಾಗಿದೆ. ಯಾರಾದರೂ ಮಂಧ ಬುದ್ಧಿಯವರಾಗಿದ್ದರೆ ಅವರು ಧಾರಣೆ ಮಾಡಲು ಸಾಧ್ಯವಿಲ್ಲ. ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲ. ನಂತರ ಟೂಲೇಟ್ ಆಗಿ ಬಿಡುತ್ತಾರೆ. ಬಿದುರಿನ ಕಾಡಿಗೆ ಬೆಂಕಿ ಬೀಳುವುದಿದೆ. ಆಗ ನೀವು ಯೋಗದಲ್ಲಿರಲು ಸಾಧ್ಯವಿಲ್ಲ. ಆ ಸಮಯದಲ್ಲಿ ಹಾಹಾಕಾರವಾಗಿ ಬಿಡುತ್ತದೆ. ಬಹಳ ದುಃಖದ ಬೆಟ್ಟಗಳೂ ಬೀಳಲಿವೆ. ಆದ್ದರಿಂದ ಇದೇ ಚಿಂತೆಯಿರಬೇಕು - ನಾವು ನಮ್ಮ ರಾಜ್ಯಭಾಗ್ಯವನ್ನಂತೂ ತಂದೆಯಿಂದ ತೆಗೆದುಕೊಂಡು ಬಿಡಬೇಕು. ದೇಹಾಭಿಮಾನವನ್ನು ಬಿಟ್ಟು ಸರ್ವೀಸಿನಲ್ಲಿ ತೊಡಗಬೇಕು. ಕಲ್ಯಾಣಕಾರಿಗಳಾಗಬೇಕಾಗಿದೆ. ಹಣವನ್ನು ವ್ಯರ್ಥವಾಗಿ ಕಳೆಯಬಾರದು. ಯಾರು ಯೋಗ್ಯರೇ ಅಲ್ಲವೋ ಅಂತಹ ಪತಿತರಿಗೆ ಎಂದೂ ದಾನ ಮಾಡಬಾರದು. ಇಲ್ಲವಾದರೆ ದಾನ ಮಾಡುವವರಿಗೂ ಪಾಪ ಬಂದು ಬಿಡುತ್ತದೆ. ಭಗವಂತನು ಬಂದಿದ್ದಾರೆಂದು ಡಂಗುರ ಸಾರುವುದಲ್ಲ. ಹೀಗೆ ಭಗವಂತನೆಂದು ಕರೆಸಿಕೊಳ್ಳುವವರು ಭಾರತದಲ್ಲಿ ಅನೇಕರಿದ್ದಾರೆ, ಯಾರೂ ಒಪ್ಪುವುದಿಲ್ಲ. ಇದನ್ನು ನೀವೇ ತಿಳಿದುಕೊಂಡಿದ್ದೀರಿ, ನಿಮಗೆ ಪ್ರಕಾಶವು ಸಿಕ್ಕಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ವಿದ್ಯಾಭ್ಯಾಸದ ಜೊತೆ ಜೊತೆಗೆ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಇಂತಹ ಯೋಗ್ಯ ಹಾಗೂ ಸುಪುತ್ರರಾಗಿ ಸರ್ವೀಸಿನ ಪ್ರತ್ಯಕ್ಷ ಪ್ರಮಾಣವನ್ನು ಕೊಡಬೇಕಾಗಿದೆ. ಶ್ರೀಮತದಂತೆ ಸ್ವಯಂನ್ನು ಶ್ರೇಷ್ಠ ಮಾಡಿಕೊಳ್ಳಬೇಕಾಗಿದೆ.

2. ಸ್ಥೂಲ ಧನವನ್ನೂ ಸಹ ವ್ಯರ್ಥವಾಗಿ ಕಳೆಯಬಾರದು. ಪತಿತರಿಗೆ ದಾನ ಮಾಡಬಾರದು. ಜ್ಞಾನ ಧನವನ್ನೂ ಸಹ ಯೋಗ್ಯರನ್ನು ನೋಡಿ ದಾನ ಮಾಡಬೇಕಾಗಿದೆ.

ವರದಾನ:
ಸದಾ ಮೋಲ್ಡ್ ಆಗುವಂತಹ ವಿಶೇಷತೆಯಿಂದ ಸಂಪರ್ಕ ಮತ್ತು ಸೇವೆಯಲ್ಲಿ ಸಫಲರಾಗುವಂತಹ ಸಫಲತಾಮೂರ್ತಿ ಭವ.

ಯಾವ ಮಕ್ಕಳಲ್ಲಿ ಸ್ವಯಂಗೆ ಮೋಲ್ಡ್ ಆಗುವಂತಹ ವಿಶೇಷತೆಯಿದೆ ಅವರು ಸಹಜವಾಗಿ ಗೋಲ್ಡನ್ ಏಜ್ನ ಸ್ಟೇಜ್ ವರೆಗೆ ತಲುಪಲು ಸಾಧ್ಯ. ಎಂತಹ ಸಮಯ, ಎಂತಹ ವಾತಾವರಣವೋ ಅದರ ಪ್ರಮಾಣ ತನ್ನ ಧಾರಣೆಗಳನ್ನು ಪ್ರತ್ಯಕ್ಷ ಮಾಡಲು ಮೋಲ್ಡ್ ಆಗಬೇಕಾಗುತ್ತದೆ. ಮೋಲ್ಡ್ ಆಗುವವರೇ ರಿಯಲ್ ಗೋಲ್ಡ್ ಆಗಿದ್ದಾರೆ. ಹೇಗೆ ಸಾಕಾರ ತಂದೆಯ ವಿಶೇಷತೆಯನ್ನು ನೋಡಿದಿರಿ - ಎಂತಹ ಸಮಯ, ಎಂತಹ ವ್ಯಕ್ತಿ ಅಂತಹ ರೂಪ - ಈ ರಿತಿ ಫಾಲೋ ಫಾದರ್ ಮಾಡಿ ಆಗ ಸೇವೆ ಮತ್ತು ಸಂಪರ್ಕ ಎಲ್ಲದರಲ್ಲಿಯೂ ಸಹಜವಾಗಿ ಸಫಲತಾ ಮೂರ್ತಿಗಳಾಗುವಿರಿ.

ಸ್ಲೋಗನ್:
ಎಲ್ಲಿ ಸರ್ವ ಶಕ್ತಿಗಳಿರುವುದೊ ಅಲ್ಲಿ ನಿರ್ವಿಘ್ನ ಸಫಲತೆ ಜೊತೆಯಲ್ಲಿರುತ್ತದೆ.