08.11.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ತಂದೆಯು ಅವಿನಾಶಿ ವೈದ್ಯನಾಗಿದ್ದಾರೆ, ಅವರು ಒಂದೇ ಮಹಾಮಂತ್ರದಿಂದ ನಿಮ್ಮ ಎಲ್ಲಾ ದುಃಖವನ್ನು ದೂರ ಮಾಡಿ ಬಿಡುತ್ತಾರೆ

ಪ್ರಶ್ನೆ:
ಮಾಯೆಯು ನಿಮ್ಮ ಮಧ್ಯದಲ್ಲಿ ಏಕೆ ವಿಘ್ನವನ್ನು ಹಾಕುತ್ತದೆ? ಯಾವುದಾದರೂ ಕಾರಣವನ್ನು ತಿಳಿಸಿ?

ಉತ್ತರ:
1. ಏಕೆಂದರೆ ನೀವು ಮಾಯೆಗೆ ಅತಿ ದೊಡ್ಡ ಗ್ರಾಹಕರಾಗಿದ್ದೀರಿ. ಅದರ ಗ್ರಾಹಕತನ ಸಮಾಪ್ತಿಯಾಗುವುದರಿಂದ ವಿಘ್ನ ಹಾಕುತ್ತದೆ. ಯಾವಾಗ ಅವಿನಾಶಿ ವೈದ್ಯ ನಿಮಗೆ ಔಷಧಿ ಕೊಡುವುದರಿಂದ ಮಾಯೆಯ ಖಾಯಿಲೆಯು ಉಲ್ಬಣಗೊಳ್ಳುತ್ತದೆ. ಆದುದರಿಂದ ವಿಘ್ನಗಳಿಗೆ ಭಯ ಪಡಬಾರದು. ಮನ್ಮನಾಭವದ ಮಂತ್ರದಿಂದ ಮಾಯೆಯು ಓಡಿ ಹೋಗುತ್ತದೆ.

ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ, ಮನುಷ್ಯರು ಮನಃಶ್ಯಾಂತಿ, ಮನಃಶ್ಯಾಂತಿ ಎಂದು ಹೇಳಿ ಕಷ್ಟ ಪಡುತ್ತಾರೆ. ಪ್ರತಿನಿತ್ಯ ಓಂ ಶಾಂತಿ ಎಂದು ಹೇಳುತ್ತಾರೆ ಆದರೆ ಇದರ ಅರ್ಥವನ್ನು ತಿಳಿಯದ ಕಾರಣ ಶಾಂತಿಯನ್ನು ಬೇಡುತ್ತಾರೆ. ಹೇಳಿಯೂ ಹೇಳುತ್ತಾರೆ - ಐ ಯಾಮ್ ಸೋಲ್, ಐ ಯಾಮ್ ಸೈಲೆನ್ಸ್ (ನಾನು ಆತ್ಮನಾಗಿದ್ದೇನೆ, ನಾನು ಶಾಂತನಾಗಿದ್ದೇನೆ) ನಮ್ಮ ಸ್ವಧರ್ಮ ಶಾಂತಿಯಾಗಿದೆ ನಂತರ ಸ್ವಧರ್ಮವೇ ಶಾಂತಿಯಾಗಿರುವಾಗ ಮತ್ತೆ ಶಾಂತಿಯನ್ನೇಕೆ ಬೇಡುತ್ತೀರಿ? ಅರ್ಥವನ್ನು ತಿಳಿಯದ ಕಾರಣ ಬೇಡುತ್ತಿರುತ್ತಾರೆ. ಇದು ರಾವಣ ರಾಜ್ಯವಾಗಿದೆಯೆಂದು ನೀವು ತಿಳಿದಿದ್ದೀರಿ. ಆದರೆ ರಾವಣನು ಇಡೀ ಪ್ರಪಂಚದ ಹಾಗೂ ವಿಶೇಷವಾಗಿ ಭಾರತದ ಶತ್ರುವಾಗಿದ್ದಾನೆಂದು ತಿಳಿದುಕೊಂಡಿಲ್ಲ. ಆದುದರಿಂದ ರಾವಣನನ್ನು ಸುಡುತ್ತಾರೆ. ಯಾರಾದರೂ ವರ್ಷ-ವರ್ಷ ಸುಡುವಂತಹ ಮನುಷ್ಯರಿರುತ್ತಾರೇನು? ಹಾಗೂ ಜನ್ಮ-ಜನ್ಮಾಂತರ, ಕಲ್ಪ-ಕಲ್ಪಾಂತರ ಇವನನ್ನು ಸುಡುತ್ತಾ ಬಂದಿದ್ದೀರಿ. ಏಕೆಂದರೆ ನಿಮ್ಮ ಶತ್ರು ಅತಿ ದೊಡ್ಡವನಾಗಿದ್ದಾನೆ, ಪಂಚ ವಿಕಾರಗಳಲ್ಲಿ ಎಲ್ಲರೂ ಸಿಕ್ಕಿಕೊಳ್ಳುತ್ತಾರೆ. ಜನ್ಮವೇ ಭ್ರಷ್ಟಾಚಾರದಿಂದ ಆಗುವುದರಿಂದ ಇದು ರಾವಣನ ರಾಜ್ಯವಾಯಿತು. ಈ ಸಮಯದಲ್ಲಿ ಅಪಾರ ದುಃಖವಿದೆ. ದುಃಖಕ್ಕೆ ನಿಮಿತ್ತಾರಾದವರು ಯಾರು? ರಾವಣ. ದುಃಖಕ್ಕೆ ಕಾರಣ ಯಾರೆಂಬುದು ತಿಳಿದಿಲ್ಲ. ಇದು ರಾವಣನ ರಾಜ್ಯವಾಗಿದೆ. ಎಲ್ಲರಿಗೂ ದೊಡ್ಡ ಶತ್ರುವಾಗಿದ್ದಾನೆ. ಪ್ರತೀ ವರ್ಷದಲ್ಲಿ ಅವನ ಗೊಂಬೆಯನ್ನು ಮಾಡಿ ಸುಡುತ್ತಾರೆ. ದಿನೇ-ದಿನೇ ಇನ್ನೂ ದೊಡ್ಡದನ್ನಾಗಿ ಮಾಡುತ್ತಾ ಇರುತ್ತಾರೆ, ದುಃಖವೂ ಸಹ ಹೆಚ್ಚಾಗಿ ಬಿಡುತ್ತದೆ. ಇಷ್ಟೊಂದು ದೊಡ್ಡ-ದೊಡ್ಡ ಸಾಧು-ಸಂತ ಮಹಾತ್ಮರು, ರಾಜರು ಮೊದಲಾದವರೂ ಇದ್ದಾರೆ ಆದರೆ ಒಬ್ಬರಿಗೂ ರಾವಣನು ನಮ್ಮ ಶತ್ರು, ಅವನನ್ನು ವರ್ಷ-ವರ್ಷ ಸುಡುತ್ತೇವೆಂದು ತಿಳಿದಿಲ್ಲ. ಸುಟ್ಟ ನಂತರ ಖುಷಿಯನ್ನಾಚರಿಸುತ್ತಾರೆ. ರಾವಣನು ಸತ್ತನು, ನಾವು ಲಂಕೆಯ ಮಾಲೀಕರಾಗುತ್ತೇವೆಂದು ತಿಳಿಯುತ್ತಾರೆ, ಆದರೆ ಯಾರೂ ಸಹ ಮಾಲೀಕರಾಗುವುದಿಲ್ಲ. ಎಷ್ಟೊಂದು ಹಣವನ್ನು ಖರ್ಚು ಮಾಡುತ್ತಾರೆ! ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಲೆಕ್ಕವಿಲ್ಲದಷ್ಟು ಹಣವನ್ನು ಕೊಟ್ಟೆನು, ಎಲ್ಲಿ ಕಳೆದುಕೊಂಡಿರಿ. ದಶಹರಾದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತೀರಿ. ರಾವಣನನ್ನು ಕೊಂದು ಲಂಕೆಯನ್ನು ಲೂಟಿ ಮಾಡುತ್ತಾರೆ. ಆದರೆ ರಾವಣನನ್ನು ಏಕೆ ಸುಡುತ್ತೇವೆಂದು ಸ್ವಲ್ಪವೂ ತಿಳಿದುಕೊಂಡಿಲ್ಲ. ಈ ಸಮಯದಲ್ಲಿ ಎಲ್ಲರೂ ವಿಕಾರಗಳ ಜೈಲಿನಲ್ಲಿ ಬಂಧಿತರಾಗಿದ್ದಾರೆ. ಅರ್ಧ ಕಲ್ಪ ರಾವಣನನ್ನು ಸುಡುತ್ತೇವೆ ಏಕೆಂದರೆ ದುಃಖಿಯಾಗಿದ್ದೇವೆ. ರಾವಣನ ರಾಜ್ಯದಲ್ಲಿ ನಾವು ಬಹಳ ದುಃಖಿಯಾಗಿದ್ದೇವೆಂದು ತಿಳಿಯುತ್ತಾರೆ. ಆದರೆ ಸತ್ಯಯುಗದಲ್ಲಿ ಈ ಪಂಚ ವಿಕಾರಗಳು ಇರುವುದಿಲ್ಲವೆಂದು ತಿಳಿದುಕೊಂಡಿಲ್ಲ, ಅಲ್ಲಿ ರಾವಣ ಮೊದಲಾದವನ್ನು ಸುಡುವುದಿಲ್ಲ. ಎಂದಿನಿಂದ ಸುಡುತ್ತಾ ಬಂದಿದ್ದೇವೆಂದು ನೀವು ಕೇಳಿದರೆ ಇದು ಅನಾದಿಯಿಂದ ನಡೆಯುತ್ತಾ ಬಂದಿದೆ ಎಂದು ಹೇಳುತ್ತಾರೆ. ರಕ್ಷಾಬಂಧನವು ಯಾವಾಗಿನಿಂದ ಪ್ರಾರಂಭವಾಯಿತು? ಅನಾದಿಯಿಂದ ಪ್ರಾರಂಭವಾಯಿತು. ಇವೆಲ್ಲಾ ಮಾತುಗಳು ತಿಳಿದುಕೊಳ್ಳುವಂತಹದ್ದಾಗಿದೆ. ಮನುಷ್ಯರ ಬುದ್ಧಿಯು ಏನಾಗಿ ಬಿಟ್ಟಿದೆ! ಪ್ರಾಣಿಯೂ ಅಲ್ಲ, ಮನುಷ್ಯರೂ ಅಲ್ಲ, ಯಾವ ಕೆಲಸಕ್ಕೂ ಬರುವುದಿಲ್ಲ. ಸ್ವರ್ಗವನ್ನಂತೂ ಅರಿತುಕೊಂಡೇ ಇಲ್ಲ. ಇದೇ ಪ್ರಪಂಚವನ್ನು ಭಗವಂತನೇ ಮಾಡಿದ್ದಾರೆಂದು ತಿಳಿದುಕೊಳ್ಳುತ್ತಾರೆ. ದುಃಖದಲ್ಲಂತೂ ಹೇ ಭಗವಂತ, ದುಃಖದಿಂದ ಬಿಡಿಸು ಎಂದು ಸ್ಮರಿಸುತ್ತಾರೆ ಆದರೆ ಕಲಿಯುಗದಲ್ಲಿ ನೋಡಿ, ಸುಖವೇ ಇಲ್ಲ. ಅಗತ್ಯವಾಗಿ ದುಃಖವನ್ನಂತೂ ಭೋಗಿಸಲೇಬೇಕು. ಏಣಿಯನ್ನು ಇಳಿಯಲೇಬೇಕು. ಹೊಸ ಪ್ರಪಂಚದಿಂದ ಹಳೆಯ ಪ್ರಪಂಚದ ಅಂತ್ಯದವರೆಗಿನ ರಹಸ್ಯವನ್ನು ತಂದೆಯು ತಿಳಿಸುತ್ತಾರೆ. ಮಕ್ಕಳು ತಂದೆಯ ಬಳಿ ಬಂದಾಗ ತಂದೆಯು ಹೇಳುತ್ತಾರೆ - ಈ ಎಲ್ಲಾ ದುಃಖಗಳಿಗೆ ಒಂದೇ ಔಷಧಿಯಿದೆ. ಅವಿನಾಶಿ ವೈದ್ಯರಲ್ಲವೆ! 21 ಜನ್ಮಗಳಿಗಾಗಿ ಎಲ್ಲರನ್ನೂ ದುಃಖದಿಂದ ಮುಕ್ತರನ್ನಾಗಿ ಮಾಡುತ್ತಾರೆ. ಆ ವೈದ್ಯರಂತೂ ಸ್ವಯಂ ಖಾಯಿಲೆಗೊಳಗಾಗುತ್ತಾರೆ, ಇವರು ಅವಿನಾಶಿ ವೈದ್ಯರಾಗಿದ್ದಾರೆ. ಇವರು ತಿಳಿಯುತ್ತಾರೆ - ಇಲ್ಲಿ ಅಪಾರವಾದ ದುಃಖವೂ ಇದೆ, ಅಪಾರವಾದ ಸುಖವೂ ಇದೆ. ತಂದೆಯು ಅಪಾರವಾದ ಸುಖವನ್ನು ಕೊಡುತ್ತಾರೆ, ಅಲ್ಲಿ ದುಃಖದ ಹೆಸರು, ಚಿಹ್ನೆಯೂ ಇರುವುದಿಲ್ಲ. ಇದು ಸುಖಿಯಾಗಲು ಔಷಧಿಯಾಗಿದೆ. ಕೇವಲ ನನ್ನನ್ನು ನೆನಪು ಮಾಡಿದಾಗ ಸತೋಪ್ರಧಾನರಾಗಿ ಎಲ್ಲಾ ದುಃಖವು ದೂರವಾಗಿ ಬಿಡುತ್ತದೆ ನಂತರ ಸುಖವೇ ಸುಖವಿರುತ್ತದೆ. ತಂದೆಗೆ ದುಃಖಹರ್ತ-ಸುಖಕರ್ತನೆಂದು ಗಾಯನ ಮಾಡಲಾಗುತ್ತದೆ, ಅರ್ಧಕಲ್ಪಕ್ಕಾಗಿ ನಿಮ್ಮೆಲ್ಲರ ದುಃಖಗಳು ದೂರವಾಗಿ ಬಿಡುತ್ತವೆ. ನೀವು ಕೇವಲ ನಿಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ.

ಇದು ಆತ್ಮ ಹಾಗೂ ಜೀವಗಳೆರಡರ ಆಟವಾಗಿದೆ. ನಿರಾಕಾರ ಆತ್ಮವು ಅವಿನಾಶಿಯಾಗಿದೆ ಮತ್ತು ಸಾಕಾರಿ ಶರೀರ ವಿನಾಶಿಯಾಗಿದೆ. ಇದು ಇವರೆಡರ ಆಟವಾಗಿದೆ. ಈಗ ತಂದೆಯು ತಿಳಿಸುತ್ತಾರೆ - ದೇಹ ಸಹಿತ ಎಲ್ಲಾ ಸಂಬಂಧಗಳನ್ನು ಮರೆತು ಹೋಗಿ. ಗೃಹಸ್ಥ ವ್ಯವಹಾರದಲ್ಲಿರುತ್ತಾ ನಾವೀಗ ಮನೆಗೆ ಹಿಂತಿರುಗಬೇಕೆಂದು ತಿಳಿದುಕೊಳ್ಳಿ. ಪತಿತರಂತೂ ಹೋಗಲು ಸಾಧ್ಯವಿಲ್ಲ. ಆದುದರಿಂದ ನನ್ನೊಬ್ಬನನ್ನೇ ನೆನಪು ಮಾಡಿದಾಗ ಸತೋಪ್ರಧಾನರಾಗುತ್ತೀರಿ. ತಂದೆಯ ಬಳಿ ಔಷಧಿಯಿದೆಯಲ್ಲವೆ. ಅದನ್ನೂ ಹೇಳುತ್ತೇನೆ, ಮಾಯೆಯು ಅಗತ್ಯವಾಗಿ ವಿಘ್ನವನ್ನು ಹಾಕುತ್ತದೆ, ನೀವು ರಾವಣನ ಗ್ರಾಹಕರಲ್ಲವೆ! ಅದರ ಗ್ರಾಹಕತನವು ಬಿಡುವುದರಿಂದ ಸತಾಯಿಸುತ್ತದೆ. ತಂದೆಯು ತಿಳಿಸುತ್ತಾರೆ - ಇಲ್ಲಿ ಯಾವುದೇ ಔಷಧಿಯಿಲ್ಲ, ನೆನಪಿನ ಯಾತ್ರೆಯೇ ಔಷಧಿಯಾಗಿದೆ. ನೆನಪು ಮಾಡುವ ಪುರುಷಾರ್ಥ ಮಾಡಿದಾಗ ನಿಮ್ಮೆಲ್ಲಾ ದುಃಖವು ದೂರವಾಗಿ ಬಿಡುತ್ತದೆ. ಒಂದುವೇಳೆ ನಿರಂತರವಾಗಿ ನನ್ನನ್ನು ನೆನಪು ಮಾಡಿದಾಗ ನಿಮ್ಮೆಲ್ಲಾ ದುಃಖಗಳು ದೂರವಾಗಿ ಬಿಡುತ್ತವೆ. ಕೆಲವರು ಭಕ್ತಿಮಾರ್ಗದಲ್ಲಿ ನಿರಂತರವಾಗಿ ಜಪ ಮಾಡುತ್ತಿರುತ್ತಾರೆ. ಒಂದಲ್ಲ ಒಂದು ರಾಮ ಮಂತ್ರವನ್ನು ಜಪಿಸುತ್ತಿರುತ್ತಾರೆ, ಅವರಿಗೆ ಗುರುವಿನಿಂದ ಮಂತ್ರವು ಸಿಕ್ಕಿರುತ್ತದೆ. ದಿನಕ್ಕೆ ಇಷ್ಟು ಬಾರಿ ಮಂತ್ರವನ್ನು ಜಪಿಸಬೇಕೆಂದು ಎಂದು ಜಪಿಸುತ್ತಾರೆ, ಅದನ್ನು ರಾಮ ನಾಮದ ಮಾಲೆಯನ್ನು ಜಪಿಸುವುದೆಂದು ಹೇಳಲಾಗುತ್ತದೆ. ಇದನ್ನೇ ರಾಮ ನಾಮದ ದಾನವೆಂದು ಕರೆಯುತ್ತಾರೆ. ಇಂತಹ ಅನೇಕ ಸಂಸ್ಥೆಗಳು ಮಾಡಲ್ಪಟ್ಟಿದೆ, ಅಲ್ಲಿ ರಾಮ-ರಾಮನೆಂದು ಜಪಿಸುತ್ತಿರುತ್ತಾರೆ. ಜಗಳವೇನೂ ಮಾಡುವುದಿಲ್ಲ, ವ್ಯಸ್ತರಾಗಿರುತ್ತಾರೆ. ಯಾರಾದರೂ ಏನಾದರೂ ಹೇಳಿದರೂ ಸಹ ಪ್ರತ್ಯುತ್ತರವನ್ನು ಕೊಡುವುದಿಲ್ಲ. ಅದರಲ್ಲಿ ಕೆಲವರು ಮಾತ್ರವೇ ಹೀಗಿರುತ್ತಾರೆ. ಇಲ್ಲಿ ತಂದೆಯು ಪುನಃ ತಿಳಿಸುತ್ತಾರೆ - ರಾಮ-ರಾಮ ಎಂದು ಬಾಯಿಯಿಂದ ಜಪಿಸುವ ಅವಶ್ಯಕತೆಯಿಲ್ಲ. ಇಲ್ಲಂತೂ ಕೇವಲ ನಿರಂತರವಾಗಿ ತಂದೆಯನ್ನು ನೆನಪು ಮಾಡುತ್ತಿರಿ. ತಂದೆಯು ತಿಳಿಸುತ್ತಾರೆ - ನಾನಂತೂ ರಾಮನಲ್ಲ ಅವರಿಗಂತೂ ರಾಜ್ಯವಿತ್ತು, ಆ ರಾಮನನ್ನಂತೂ ಜಪಿಸುವ ಅವಶ್ಯಕತೆಯಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಭಕ್ತಿಮಾರ್ಗದಲ್ಲಿ ಎಲ್ಲದರ ಸ್ಮರಣೆ ಮಾಡುತ್ತಾ, ಪೂಜೆ ಮಾಡುತ್ತಾ ನೀವು ಏಣಿಯನ್ನು ಇಳಿಯುತ್ತಾ ಬಂದಿದ್ದೀರಿ, ಏಕೆಂದರೆ ಇದೆಲ್ಲವೂ ಅಸತ್ಯವಾದದ್ದಾಗಿದೆ. ಒಬ್ಬ ತಂದೆಯೇ ಸತ್ಯವಾಗಿದ್ದಾರೆ. ಅವರು ನೀವು ಮಕ್ಕಳಿಗೆ ಕುಳಿತು ತಿಳಿಸುತ್ತಾರೆ. ಇದು ಎಂತಹ ಮರೆಯುವ ಆಟವಾಗಿದೆ. ಯಾವ ತಂದೆಯಿಂದ ಇಷ್ಟೊಂದು ಬೇಹದ್ದಿನ ಆಸ್ತಿಯು ಸಿಗುತ್ತಿದೆ. ಆ ತಂದೆಯನ್ನು ನೆನಪು ಮಾಡಿದಾಗ ಅವರ ಚೆಹರೆಯೇ ಪ್ರಕಾಶಿಸುತ್ತಿರುತ್ತದೆ. ಖುಷಿಯಲ್ಲಿ ಚಹರೆಯು ಹರಡಿ ಬಿಡುತ್ತದೆ. ಮುಖದಲ್ಲಿ ಮುಗುಳ್ನಗೆಯಿರುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ ನಾವು ಹೀಗೆ ಆಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಅರ್ಧ ಕಲ್ಪಕ್ಕಾಗಿ ನಮ್ಮೆಲ್ಲಾ ದುಃಖಗಳು ದೂರವಾಗಿ ಬಿಡುತ್ತದೆ. ತಂದೆಯು ಕೃಪೆಯನ್ನು ತೋರುತ್ತಾರೆಂದಲ್ಲ. ನಾವೆಷ್ಟು ತಂದೆಯನ್ನು ನೆನಪು ಮಾಡುತ್ತೇವೆ ಅಷ್ಟು ಸತೋಪ್ರಧಾನರಾಗುತ್ತೇವೆಂದು ತಿಳಿಯಬೇಕಾಗಿದೆ. ವಿಶ್ವದ ಮಾಲೀಕರಾದ ಈ ಲಕ್ಷ್ಮಿ-ನಾರಾಯಣರು ಎಷ್ಟೊಂದು ಹರ್ಷಿತಮುಖಿಗಳಾಗಿದ್ದಾರೆ, ಹೀಗೆ ಆಗಬೇಕಾಗಿದೆ. ಬೇಹದ್ದಿನ ತಂದೆಯನ್ನು ನೆನಪು ಮಾಡಿದಾಗ ನಾವು ಪುನಃ ವಿಶ್ವದ ಮಾಲೀಕರಾಗುತ್ತೇವೆಂದು ಆಂತರ್ಯದಲ್ಲಿಯೇ ಖುಷಿಯಾಗುತ್ತದೆ. ಆತ್ಮವು ಈ ಖುಷಿಯ ಸಂಸ್ಕಾರವನ್ನು ತನ್ನ ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತದೆ ನಂತರ ಸ್ವಲ್ಪ-ಸ್ವಲ್ಪವೇ ಕಡಿಮೆಯಾಗುತ್ತಾ ಬರುತ್ತದೆ. ಈ ಸಮಯದಲ್ಲಿ ನಿಮಗೆ ಮಾಯೆಯು ಬಹಳ ಸತಾಯಿಸುತ್ತದೆ, ನಿಮ್ಮ ನೆನಪನ್ನು ಮರೆಸಲು ಪ್ರಯತ್ನ ಪಡುತ್ತದೆ. ಆಗ ಸದಾ ಹರ್ಷಿತಮುಖಿಗಳಾಗಿರಲು ಸಾಧ್ಯವಿಲ್ಲ. ಅಗತ್ಯವಾಗಿ ಯಾವುದಾದರೂ ಸಮಯದಲ್ಲಿ ದುಃಖಿಯಾಗುತ್ತೀರಿ. ಮನುಷ್ಯರು ಖಾಯಿಲೆಗೊಳಗಾದಾಗ ಶಿವ ತಂದೆಯನ್ನು ನೆನಪು ಮಾಡಲು ಹೇಳುತ್ತಾರೆ. ಆದರೆ ಶಿವ ತಂದೆಯು ಯಾರಾಗಿದ್ದಾರೆಂಬುದನ್ನೇ ತಿಳಿಯದಿದ್ದಾಗ ಏನೆಂದು ತಿಳಿದು ನೆನಪು ಮಾಡಲಿ, ಏಕೆ ನೆನಪು ಮಾಡಲಿ. ನೀವು ಮಕ್ಕಳಂತೂ ತಿಳಿದುಕೊಂಡಿದ್ದೀರಿ - ತಂದೆಯನ್ನು ನೆನಪು ಮಾಡುವುದರಿಂದ ನಾವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೇವೆ. ದೇವಿ-ದೇವತೆಗಳು ಸತೋಪ್ರಧಾನರಾಗಿದ್ದಾರಲ್ಲವೆ, ಅದನ್ನು ದೈವೀ ಪ್ರಪಂಚವೆಂದು ಕರೆಯಲಾಗುವುದು. ಮನುಷ್ಯರ ಪ್ರಪಂಚವೆಂದು ಅದಕ್ಕೆ ಕರೆಯುವುದಿಲ್ಲ. ಅಲ್ಲಿ ಮನುಷ್ಯರ ಹೆಸರೇ ಇರುವುದಿಲ್ಲ. ಇವರು ದೇವತೆಯೆಂದು ಕರೆಯುತ್ತಾರೆ. ಅದು ದೈವೀ ಪ್ರಪಂಚವಾಗಿದೆ, ಇದು ಮನುಷ್ಯರ ಪ್ರಪಂಚವಾಗಿದೆ, ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ತಂದೆಯು ತಿಳಿಸುತ್ತಾರೆ - ತಂದೆಗೆ ಜ್ಞಾನ ಸಾಗರನೆಂದು ಕರೆಯಲಾಗುವುದು. ತಂದೆಯು ಅನೇಕ ರೀತಿಯಾಗಿ ತಿಳುವಳಿಕೆಯನ್ನು ಕೊಡುತ್ತಿರುತ್ತಾರೆ. ನಂತರ ಅಂತ್ಯದಲ್ಲಿ ಮಹಾಮಂತ್ರವನ್ನು ಕೊಡುತ್ತಾರೆ - ತಂದೆಯನ್ನು ನೆನಪು ಮಾಡಿದಾಗ ನೀವು ಸತೋಪ್ರಧಾನರಾಗಿ ಬಿಡುತ್ತೀರಿ ಹಾಗೂ ನಿಮ್ಮೆಲ್ಲಾ ದುಃಖಗಳು ದೂರವಾಗಿ ಬಿಡುತ್ತವೆ. ಕಲ್ಪದ ಮೊದಲೂ ಸಹ ನೀವು ದೇವಿ-ದೇವತೆಗಳಾಗಿದ್ದವರು, ನಿಮ್ಮ ಗುಣಗಳು ದೇವತೆಯಂತೆ ಇತ್ತು, ಅಲ್ಲಿ ಯಾರೂ ಸಹ ಉಲ್ಟಾ-ಸುಲ್ಟಾ ಮಾತನಾಡುತ್ತಿರಲಿಲ್ಲ, ಅಂತಹ ಯಾವುದೇ ಕಾರ್ಯವಾಗುತ್ತಿರಲಿಲ್ಲ. ಅದು ದೈವೀ ಪ್ರಪಂಚ, ಇದು ಮಾನವರ ಪ್ರಪಂಚವಾಗಿದೆ. ಅಂತರವಂತೂ ಇದೆಯಲ್ಲವೆ! ತಂದೆಯು ಕುಳಿತು ತಿಳಿಸುತ್ತಾರೆ - ದೈವೀ ಪ್ರಪಂಚಕ್ಕೆ ಲಕ್ಷಾಂತರ ವರ್ಷವಿದೆಯೆಂದು ಮನುಷ್ಯರು ತಿಳಿಯುತ್ತಾರೆ. ಇಲ್ಲಿ ಯಾರನ್ನೂ ದೇವತೆಯೆಂದು ಕರೆಯಲಾಗುವುದಿಲ್ಲ. ದೇವತೆಗಳಂತೂ ಸ್ವಚ್ಛವಾಗಿದ್ದರು, ದೇವತೆಗಳಿಗೆ ಮಹಾನ್ ಆತ್ಮರೆಂದು ಕರೆಯಲಾಗುತ್ತದೆ. ಮನುಷ್ಯರಿಗೆಂದೂ ಸಹ ಈ ರೀತಿ ಹೇಳಲಾಗುವುದಿಲ್ಲ. ಇದು ರಾವಣನ ಪ್ರಪಂಚವಾಗಿದೆ, ರಾವಣನು ಅತಿ ದೊಡ್ಡ ಶತ್ರುವಾಗಿದ್ದಾನೆ. ಇವನಂತಹ ಶತ್ರುವು ಯಾರೂ ಸಹ ಇರಲು ಸಾಧ್ಯವಿಲ್ಲ. ನೀವು ಪ್ರತೀ ವರ್ಷ ರಾವಣನನ್ನು ಸುಡುತ್ತೀರಿ, ಅವನು ಯಾರು ಎಂದು ಯಾರಿಗೂ ತಿಳಿಯದು. ಅವನಂತೂ ಮನುಷ್ಯನಲ್ಲ, ಇದು ಪಂಚ ವಿಕಾರವಾಗಿದೆ ಆದುದರಿಂದ ಇದನ್ನು ರಾವಣನ ರಾಜ್ಯವೆಂದು ಕರೆಯಲಾಗುವುದು. ಪಂಚ ವಿಕಾರಗಳ ರಾಜ್ಯವಿದೆಯಲ್ಲವೆ ಅಂದಾಗ ಎಲ್ಲರಲ್ಲಿಯೂ ಪಂಚ ವಿಕಾರಗಳಿವೆ. ಇದು ದುರ್ಗತಿ ಹಾಗೂ ಸದ್ಗತಿಯ ಆಟವನ್ನು ಮಾಡಲ್ಪಟ್ಟಿದೆ. ನಿಮಗೀಗ ಸದ್ಗತಿಯ ಸಮಯವನ್ನು ತಂದೆಯು ತಿಳಿಸಿದ್ದಾರೆ, ದುರ್ಗತಿಯನ್ನೂ ತಿಳಿಸಿದ್ದಾರೆ. ನೀವೇ ಶ್ರೇಷ್ಠರಾಗುತ್ತೀರಿ ಅಂದಾಗ ನಂತರ ಕೆಳಗಿಳಿಯುತ್ತೀರಿ. ಶಿವ ಜಯಂತಿಯೂ ಸಹ ಭಾರತದಲ್ಲಿಯೇ ಆಗುತ್ತದೆ, ರಾವಣನ ಜಯಂತಿಯೂ ಸಹ ಭಾರತದಲ್ಲಿಯೇ ಆಗುತ್ತದೆ. ಅರ್ಧಕಲ್ಪ ದೈವೀ ಪ್ರಪಂಚ, ಲಕ್ಷ್ಮಿ-ನಾರಾಯಣ, ರಾಮ-ಸೀತೆಯರ ರಾಜ್ಯವು ನಡೆಯುತ್ತದೆ. ಈಗ ನೀವು ಮಕ್ಕಳು ಎಲ್ಲರ ಜೀವನ ಚರಿತ್ರೆಯನ್ನು ತಿಳಿದಿದ್ದೀರಿ. ಎಲ್ಲವೂ ನಿಮ್ಮದೇ ಮಹಿಮೆಯಾಗಿದೆ. ನವರಾತ್ರಿಯ ಪೂಜೆಯೂ ನಿಮ್ಮದೇ ಆಗುತ್ತದೆ. ನೀವೇ ಸ್ಥಾಪನೆ ಮಾಡುತ್ತೀರಿ. ಶ್ರೀಮತದಂತೆ ನಡೆದು ನೀವು ವಿಶ್ವವನ್ನು ಪರಿವರ್ತನೆ ಮಾಡುತ್ತೀರೆಂದಾಗ ಸಂಪೂರ್ಣವಾಗಿ ಶ್ರೀಮತದಂತೆ ನಡೆಯಬೇಕಲ್ಲವೆ. ನಂಬರ್ವಾರ್ ಪುರುಷಾರ್ಥ ಮಾಡುತ್ತಿರುತ್ತೀರಿ, ಸ್ಥಾಪನೆಯೂ ಆಗುತ್ತಿರುತ್ತದೆ. ಇಲ್ಲಿ ಯುದ್ಧ ಮೊದಲಾದುವುಗಳ ಮಾತೇ ಇಲ್ಲ. ಇದು ಪುರುಷೋತ್ತಮ ಸಂಗಮಯುಗವೇ ಸಂಪೂರ್ಣ ಭಿನ್ನವಾಗಿದೆಯೆಂದು ನೀವು ತಿಳಿದುಕೊಂಡಿದ್ದೀರಿ. ಇದು ಹಳೆಯ ಪ್ರಪಂಚದ ಅಂತ್ಯ, ಹೊಸ ಪ್ರಪಂಚದ ಆದಿಯಾಗಿದೆ. ತಂದೆಯು ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡಲು ಬರುತ್ತಾರೆ. ನಿಮಗಂತೂ ಬಹಳ ತಿಳಿಸಿಕೊಟ್ಟಿದ್ದಾರೆ, ಆದರೆ ಬಹಳ ಮಕ್ಕಳು ತಂದೆಯನ್ನು ಮರೆತು ಹೋಗುತ್ತಾರೆ. ಭಾಷಣದ ನಂತರ ಇಂತಹ ಪಾಯಿಂಟ್ ತಿಳಿಸಬೇಕಾಗಿತ್ತೆಂದು ಸ್ಮೃತಿಯಲ್ಲಿ ಬರುತ್ತದೆ. ಕಲ್ಪ-ಕಲ್ಪವೂ ಹೇಗೆ ಸ್ಥಾಪನೆಯಾಗಿತ್ತೋ ಅದೇ ರೀತಿ ಆಗುತ್ತದೆ. ಯಾರು ಎಂತಹ ಪದವಿಯನ್ನು ಪಡೆದಿದ್ದರೋ ಅಂತಹದ್ದನ್ನೇ ಪಡೆಯುತ್ತಾರೆ. ಎಲ್ಲರೂ ಒಂದೇ ರೀತಿಯಾದ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಶ್ರೇಷ್ಠಾತಿ ಶ್ರೇಷ್ಠ ಪದವಿಯನ್ನು ಪಡೆಯುವವರೂ ಇದ್ದಾರೆ, ಕನಿಷ್ಟ ಪದವಿಯನ್ನು ಪಡೆಯುವವರೂ ಇದ್ದಾರೆ. ಯಾರು ಅನನ್ಯ ಮಕ್ಕಳಿದ್ದಾರೆಯೋ ಅವರು ಮುಂದೆ ಬರುತ್ತಾ ಈ ರೀತಿ ಬಹಳ ಅನುಭವ ಮಾಡುತ್ತಾರೆ - ನಾವು ಶ್ರೀಮಂತರ ಮನೆಯಲ್ಲಿ ದಾಸಿಯಾಗುತ್ತಾರೆ, ಇವರು ದೊಡ್ಡ ಶ್ರೀಮಂತರಾಗುತ್ತಾರೆ, ಯಾರು ಶ್ರೀಮಂತರಾಗುತ್ತಾರೆಯೋ ಅವರನ್ನು ಒಮ್ಮೊಮ್ಮೆ ಆಹ್ವಾನ ಮಾಡುತ್ತಾರೆ, ಅಂದಾಗ ಎಲ್ಲರನ್ನೂ ಆಹ್ವಾನ ಮಾಡುತ್ತಾರೇನು? ಎಲ್ಲರ ಮುಖವನ್ನೂ ನೋಡುತ್ತಾರೇನು?

ತಂದೆಯೂ ಬ್ರಹ್ಮನ ಮುಖದಿಂದ ತಿಳಿಸುತ್ತಾರೆ. ಎಲ್ಲವನ್ನೂ ಸನ್ಮುಖದಲ್ಲಿ ನೋಡಲು ಸಾಧ್ಯವಾಗುತ್ತದೆಯೇ? ಈಗ ನೀವು ಸನ್ಮುಖದಲ್ಲಿ ಬಂದಿದ್ದೀರಿ, ಪವಿತ್ರರಾಗಿದ್ದೀರಿ. ಯಾರು ಅಪವಿತ್ರರಾಗಿರುವವರು ಇಲ್ಲಿ ಬಂದು ಕುಳಿತುಕೊಳ್ಳುವವರೂ ಇದ್ದಾರೆ. ಸ್ವಲ್ಪ ಕೇಳಿದರೂ ದೇವತೆಯಾಗಿ ಬಿಡುತ್ತಾರೆ, ಸ್ವಲ್ಪ ಕೇಳುವುದರಿಂದಲೂ ಪ್ರಭಾವ ಬೀರುತ್ತದೆ. ಇಲ್ಲಿ ಕೇಳದವರು ಅಲ್ಲಿಗೆ ಬರುವುದೇ ಇಲ್ಲ. ತಂದೆಯು ಮನ್ಮನಾಭವವನ್ನು ಮೂಲ ಮಾತಾಗಿದೆ ಎಂದು ಹೇಳುತ್ತಾರೆ. ಈ ಒಂದೇ ಮಂತ್ರದಿಂದ ನಿಮ್ಮೆಲ್ಲಾ ದುಃಖಗಳು ದೂರವಾಗಿ ಬಿಡುತ್ತವೆ. ಮನ್ಮನಾಭವ ಎಂದು ತಂದೆಯು ಹೇಳುತ್ತಾರೆ, ಮಧ್ಯಾಜೀಭವ ಎಂದು ಶಿಕ್ಷಕನಾಗಿ ಹೇಳುತ್ತಾರೆ. ಇವರು ತಂದೆಯೂ ಆಗಿದ್ದಾರೆ, ಶಿಕ್ಷಕರೂ ಆಗಿದ್ದಾರೆ, ಗುರುವೂ ಸಹ ಆಗಿದ್ದಾರೆ. ಈ ಮೂವರ ನೆನಪಿದ್ದಾಗ ತಂದೆಯೇ ಓದಿಸುತ್ತಾರೆ ನಂತರ ತಂದೆಯೇ ಜೊತೆಯಲ್ಲಿ ಕರೆದೊಯ್ಯುತ್ತಾರೆ. ಇಂತಹ ತಂದೆಯನ್ನು ಎಷ್ಟೊಂದು ನೆನಪು ಮಾಡಬೇಕಾಗಿದೆ. ಭಕ್ತಿಮಾರ್ಗದಲ್ಲಂತೂ ತಂದೆಯನ್ನು ಯಾರೂ ತಿಳಿದುಕೊಂಡಿಲ್ಲ, ಕೇವಲ ಇವರನ್ನು ಭಗವಂತನಾಗಿದ್ದಾರೆಂದು ತಿಳಿಯುತ್ತಾರೆ. ನಾವೆಲ್ಲರೂ ಪರಸ್ಪರ ಸಹೋದರರಾಗಿದ್ದೇವೆ, ತಂದೆಯಿಂದ ಏನು ಸಿಗುತ್ತದೆಯೆಂದು ಅದನ್ನೂ ಸಹ ತಿಳಿದಿಲ್ಲ. ನಾವೀಗ ತಿಳಿದುಕೊಂಡಿದ್ದೇವೆ - ತಂದೆಯು ಒಬ್ಬರೇ ಆಗಿದ್ದಾರೆ, ನಾವೆಲ್ಲರೂ ಅವರ ಮಕ್ಕಳು ಪರಸ್ಪರ ಸಹೋದರರಾಗಿದ್ದೇವೆ. ಇದು ಬೇಹದ್ದಿನ ಮಾತಾಗಿದೆಯಲ್ಲವೆ. ಎಲ್ಲಾ ಮಕ್ಕಳಿಗೂ ಶಿಕ್ಷಕನಾಗಿ ಓದಿಸುತ್ತಾರೆ ಮತ್ತೆ ಎಲ್ಲರ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿ ಮನೆಗೆ ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ಈ ಅಪವಿತ್ರ ಪ್ರಪಂಚದಿಂದ ಹಿಂತಿರುಗಿ ಹೋಗಬೇಕಾಗಿದೆ. ಹೊಸ ಪ್ರಪಂಚದಲ್ಲಿ ಬರಲು ನಿಮ್ಮನ್ನು ಯೋಗ್ಯರನ್ನಾಗಿ ಮಾಡುತ್ತಾರೆ. ಯಾರ್ಯಾರು ಯೋಗ್ಯರಾಗುತ್ತಾರೆ, ಅವರು ಸತ್ಯಯುಗದಲ್ಲಿ ಬರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಸ್ಥಿತಿಯನ್ನು ಸದಾ ಏಕರಸ ಹಾಗೂ ಹರ್ಷಿತಮುಖವನ್ನಾಗಿಟ್ಟುಕೊಳ್ಳಲು ತಂದೆ, ಶಿಕ್ಷಕ ಹಾಗೂ ಸದ್ಗುರು - ಈ ಮೂವರನ್ನೂ ನೆನಪು ಮಾಡಬೇಕು. ಖುಷಿಯ ಸಂಸ್ಕಾರವನ್ನು ಇಲ್ಲಿಂದಲೇ ತುಂಬಿಕೊಳ್ಳಬೇಕು. ಆಸ್ತಿಯ ಖುಷಿಯಿಂದ ಚಹರೆಯಿಂದ ಸದಾ ಹೊಳೆಯುತ್ತಿರಲಿ.

2. ಶ್ರೀಮತದಂತೆ ಇಡೀ ವಿಶ್ವವನ್ನು ಪರಿವರ್ತನೆ ಮಾಡುವ ಸೇವೆ ಮಾಡಬೇಕು. ಪಂಚ ವಿಕಾರಗಳಲ್ಲಿ ಸಿಕ್ಕಿಕೊಂಡವರನ್ನು ಬಿಡಿಸಬೇಕು. ತಮ್ಮ ಸ್ವಧರ್ಮದ ಅರಿವನ್ನು ತಿಳಿಸಬೇಕು.

ವರದಾನ:
ಸ್ವಯಂನ ರಾಜ್ಯದ ಮೂಲಕ ತನ್ನ ಸಖಿಯರಿಗೆ ಸ್ನೇಹಿ ಸಹಯೋಗಿಯಾಗುವಂತಹ ಮಾಸ್ಟರ್ ದಾತಾ ಭವ.

ರಾಜಾ ಅರ್ಥಾತ್ ದಾತಾ. ದಾತಾಗೆ ಹೇಳುವ ಅಥವಾ ಕೇಳುವ ಅಗತ್ಯವಿಲ್ಲ. ಸ್ವಯಂ ಪ್ರತಿಯೊಬ್ಬ ರಾಜರಿಗೆ ತಮ್ಮ ಸ್ನೇಹದ ಉಡುಗೊರೆಯನ್ನು ಅರ್ಪಿಸುತ್ತಾರೆ. ನೀವೂ ಸಹ ಸ್ವಯಂನ ಮೇಲೆ ರಾಜ್ಯ ಮಾಡುವಂತಹ ರಾಜ ಆಗಿ ಆಗ ಪ್ರತಿಯೊಬ್ಬರೂ ನಿಮ್ಮ ಮುಂದೆ ಸಹಯೋಗದ ಉಡುಗೊರೆಯನ್ನು ಅರ್ಪಣೆ ಮಾಡುತ್ತಾರೆ. ಯಾರಿಗೆ ಸ್ವಯಂ ಮೇಲೆ ರಾಜ್ಯವಿದೆ ಅವರ ಮುಂದೆ ಲೌಕಿಕ, ಅಲೌಕಿಕ ಜೊತೆಗಾರರು ಜೀ ಹಾಜಿರ್ ಜೀ ಹುಜೂರ್, ಹಾಂ! ಜೀ ಎಂದು ಹೇಳುತ್ತಾ ಸ್ನೇಹಿ ಸಹಯೋಗಿಗಳಾಗುತ್ತಾರೆ. ಪರಿವಾರದಲ್ಲಿ ಎಂದೂ ಆದೇಶ ನಡೆಸಬೇಡಿ. ನಿಮ್ಮ ಕರ್ಮೆಂದ್ರಿಯಗಳನ್ನು ಆದೇಶದನುಸಾರ ಇಟ್ಟುಕೊಂಡಾಗ ನಿಮ್ಮ ಎಲ್ಲಾ ಜೊತೆಗಾರರೂ ಸಹ ಸ್ನೇಹಿ ಸಹಯೋಗಿಗಳಾಗುತ್ತಾರೆ.

ಸ್ಲೋಗನ್:
ಸರ್ವ ಪ್ರಾಪ್ತಿಗಳ ಸಾಧನಗಳು ಇದ್ದರೂ ಸಹ ವೃತ್ತಿಯಿಂದ ಉಪರಾಮರಾಗಿರುವುದಕ್ಕೆ ಹೇಳಲಾಗುವುದು ವೈರಾಗ್ಯ ವೃತ್ತಿ.