08.11.20    Avyakt Bapdada     Kannada Murli     01.10.87     Om Shanti     Madhuban


ಈಶ್ವರೀಯ ಸ್ನೇಹ - ಜೀವನ ಪರಿವರ್ತನೆಯ ಆಧಾರ(ಫೌಂಡೇಷನ್) ಆಗಿದೆ


ಇಂದು ಸ್ನೇಹದ ಸಾಗರನು ತನ್ನ ಸ್ನೇಹಿ ಮಕ್ಕಳನ್ನು ಭೇಟಿಯಾಗಲು ಬಂದಿದ್ದಾರೆ. ತಂದೆ ಮತ್ತು ಮಕ್ಕಳ ಸ್ನೇಹವು, ಇಡೀ ವಿಶ್ವವನ್ನೇ ಸ್ನೇಹದ ಸೂತ್ರದಲ್ಲಿ ಬಂಧಿಸುತ್ತಿದೆ. ಸ್ನೇಹದ ಸಾಗರ ಮತ್ತು ಸ್ನೇಹ-ಸಂಪನ್ನ ನದಿಗಳ ಮಿಲನವು ಯಾವಾಗ ಆಗುತ್ತದೆಯೋ, ಆಗ ಸ್ನೇಹ-ಸಂಪನ್ನ ನದಿಯೂ ಸಹ ತಂದೆಯ ಸಮಾನ ಮಾಸ್ಟರ್ ಸ್ನೇಹದ ಸಾಗರನಾಗಿ ಬಿಡುತ್ತದೆ. ಆದ್ದರಿಂದ ಸ್ನೇಹದ ಅನುಭವದಿಂದ ತಾವಾಗಿಯೇ ವಿಶ್ವದ ಆತ್ಮರೆಲ್ಲರೂ ಸಮೀಪಕ್ಕೆ ಬರುತ್ತಿದ್ದಾರೆ. ಎಷ್ಟೇ ಅಜ್ಞಾನಿ ಆತ್ಮರಾಗಿರಲಿ, ಬಹಳ ಸಮಯದಿಂದ ಪರಿವಾರದ ಪ್ರೀತಿಯಿಂದ ವಂಚಿತರಾಗಿ ಕಲ್ಲಿನ ಸಮಾನ ಆಗಿರುವಂತಹ ಆತ್ಮರೇ ಆಗಿರಲಿ ಆದರೆ ಕಲ್ಲಿನ ಸಮಾನ ಆಗಿರುವವರನ್ನೂ ಪವಿತ್ರ ಪ್ರೀತಿ ಅಥವಾ ಈಶ್ವರೀಯ ಪರಿವಾರದ ಪ್ರೀತಿಯಿಂದ ಆಚೆಗೆ ತರಲಿ. ಆದರೆ ಈಶ್ವರೀಯ ಪ್ರೀತಿಯು ಅಯಸ್ಕಾಂತದಂತೆ ಸ್ವತಹವಾಗಿಯೇ ಸಮೀಪಕ್ಕೆ ಕರೆ ತರುತ್ತದೆ. ಇದಕ್ಕೇ ಹೇಳಲಾಗುತ್ತದೆ - ಈಶ್ವರೀಯ ಸ್ನೇಹದ ಪ್ರತ್ಯಕ್ಷ ಫಲ ಎಂದು. ಯಾರೆಷ್ಟು ತನ್ನನ್ನು ಭಿನ್ನ ಮಾರ್ಗದಲ್ಲಿ ಇರುವವರು ಎಂದು ತಿಳಿದುಕೊಳ್ಳಲಿ ಆದರೆ ಈಶ್ವರೀಯ ಸ್ನೇಹವು ಸಹಯೋಗಿಯನ್ನಾಗಿ ಮಾಡಿ ಪರಸ್ಪರದಲ್ಲಿ ಒಂದಾಗಿ ಮುಂದುವರೆಯುವ ಸೂತ್ರದಲ್ಲಿ ಬಂಧಿಸಿ ಬಿಡುತ್ತದೆ. ಇಂತಹ ಅನುಭವ ಮಾಡಿದ್ದೀರಲ್ಲವೆ!

ಸ್ನೇಹವು ಮೊಟ್ಟ ಮೊದಲು ಸಹಯೋಗಿಯನ್ನಾಗಿ ಮಾಡುತ್ತದೆ, ಸಹಯೋಗಿಯನ್ನಾಗಿ ಮಾಡುತ್ತಾ-ಮಾಡುತ್ತಾ ಸಮಯದಲ್ಲಿ ಸರ್ವರನ್ನೂ ಸಹಜಯೋಗಿಯನ್ನಾಗಿ ಮಾಡಿ ಬಿಡುತ್ತದೆ. ಸಹಯೋಗಿಯಾಗುವ ಚಿಹ್ನೆಯಾಗಿದೆ - ಇಂದು ಸಹಯೋಗಿ ಆಗುತ್ತಾರೆ, ನಾಳೆ ಸಹಜ-ಯೋಗಿಯಾಗಿ ಬಿಡುತ್ತಾರೆ. ಈಶ್ವರೀಯ ಸ್ನೇಹವು ಪರಿವರ್ತನೆಯ ಆಧಾರವಾಗಿದೆ ಅಥವಾ ಜೀವನ ಪರಿವರ್ತನೆಯ ಬೀಜ ಸ್ವರೂಪ ಆಗಿದೆ. ಯಾವ ಆತ್ಮರುಗಳಲ್ಲಿ ಈಶ್ವರೀಯ ಸ್ನೇಹದ ಬೀಜವು ಬಿತ್ತನೆಯಾಗಿದೆ, ಈ ಬೀಜವು ಸಹಯೋಗಿಯಾಗುವ ವೃಕ್ಷವನ್ನು ಸ್ವತಹವಾಗಿದೆ ಉತ್ಪನ್ನ ಮಾಡುತ್ತಿರುತ್ತದೆ ಮತ್ತು ಅದು ಸಮಯದಲ್ಲಿ ಸಹಜಯೋಗಿಯಾಗುವ ಫಲವು ಕಂಡು ಬರುತ್ತದೆ ಏಕೆಂದರೆ ಪರಿವರ್ತನೆಯ ಬೀಜದ ಫಲವು ಅವಶ್ಯವಾಗಿ ಕಾಣಿಸುತ್ತದೆ. ಅದರಲ್ಲಿ ಕೆಲವು ಫಲ ಬೇಗನೆ ಬರುತ್ತದೆ, ಕೆಲವು ಫಲವು ಸಮಯದಲ್ಲಿ ಬರುತ್ತದೆ. ನಾಲ್ಕೂ ಕಡೆಯಲ್ಲಿ ನೋಡಿ, ತಾವೆಲ್ಲರೂ ಮಾಸ್ಟರ್ ಸ್ನೇಹದ ಸಾಗರ, ವಿಶ್ವ-ಸೇವಾಧಾರಿ ಮಕ್ಕಳು, ಯಾವ ಕಾರ್ಯವನ್ನು ಮಾಡುತ್ತಿದ್ದೀರಿ? ವಿಶ್ವದಲ್ಲಿ ಈಶ್ವರೀಯ ಪರಿವಾರದ ಸ್ನೇಹದ ಬೀಜವನ್ನು ಬಿತ್ತುತ್ತಿದ್ದೀರಿ. ಎಲ್ಲಿಯೇ ಹೋಗುತ್ತೀರಿ, ಅಲ್ಲಿ ಭಲೆ ಯಾರೇ ನಾಸ್ತಿಕರಿರಲಿ ಅಥವಾ ಆಸ್ತಿಕರಿರಲಿ, ತಂದೆಯನ್ನೇ ತಿಳಿದುಕೊಂಡಿಲ್ಲದಿರಲಿ, ಒಪ್ಪದಿರುವವರೇ ಇರಲಿ ಆದರೆ ಇಷ್ಟಂತು ಅವಶ್ಯವಾಗಿ ಅನುಭವ ಮಾಡುವರು - ಇಂತಹ ಈಶ್ವರೀಯ ಪ್ರೀತಿ, ಯಾವುದರಲ್ಲಿ ತಾವು ಶಿವವಂಶಿ ಬ್ರಹ್ಮಾಕುಮಾರ/ಬ್ರಹ್ಮಾಕುಮಾರಿಯರಿಂದ ಸಿಗುತ್ತದೆ, ಇನ್ನೆಲ್ಲಿಯೂ ಸಿಗುವುದಿಲ್ಲ ಮತ್ತು ಇದನ್ನೂ ಒಪ್ಪುತ್ತಾರೆ - ಈ ಸ್ನೇಹ ಅಥವಾ ಪ್ರೀತಿಯು ಸಾಧಾರಣವಲ್ಲ, ಇದು ಅಲೌಕಿಕ ಪ್ರೀತಿಯಾಗಿದೆ ಅಥವಾ ಈಶ್ವರೀಯ ಸ್ನೇಹವಾಗಿದೆ. ಅಂದಾಗ ಪರೋಕ್ಷವಾಗಿಯಾದರೂ ನಾಸ್ತಿಕರಿಂದ ಆಸ್ತಿಕರು ಆದರಲ್ಲವೆ. ಈಶ್ವರೀಯ ಪ್ರೀತಿಯಿದೆ ಅಂದಾಗ ಅದು ಎಲ್ಲಿಂದ ಬಂದಿತು? ಕಿರಣಗಳು ಸೂರ್ಯನನ್ನು ಸ್ವತಹವಾಗಿಯೇ ಸಿದ್ಧ ಮಾಡುತ್ತದೆ. ಈಶ್ವರೀಯ ಪ್ರೀತಿ, ಅಲೌಕಿಕ ಸ್ನೇಹ, ನಿಸ್ವಾರ್ಥ ಸ್ನೇಹವು ಸ್ವತಹವಾಗಿಯೇ ದಾತಾ ತಂದೆಯನ್ನು ಸಿದ್ಧ ಮಾಡಿ ಬಿಡುತ್ತದೆ. ಪರೋಕ್ಷ ಈಶ್ವರೀಯ ಸ್ನೇಹದ ಪ್ರೀತಿಯ ಮೂಲಕ ಸ್ನೇಹದ ಸಾಗರ ತಂದೆಯೊಂದಿಗೆ ಸಂಬಂಧವುಂಟಾಗುತ್ತದೆ. ಆದರೆ ಅದು ಗೊತ್ತಿರುವುದಿಲ್ಲ ಏಕೆಂದರೆ ಬೀಜವು ಮೊದಲು ಗುಪ್ತವಾಗಿರುತ್ತದೆ, ವೃಕ್ಷವು ಸ್ಪಷ್ಟವಾಗಿ ಕಾಣಿಸುತ್ತದೆ. ಅಂದಮೇಲೆ ಈಶ್ವರೀಯ ಸ್ನೇಹದ ಬೀಜವು ಸರ್ವರನ್ನೂ ಸಹಯೋಗಿಯಿಂದ ಸಹಜಯೋಗಿ ಪ್ರತ್ಯಕ್ಷ ರೂಪವು ಸಮಯದನುಸಾರ ಪ್ರತ್ಯಕ್ಷವಾಗುತ್ತಿದೆ ಮತ್ತು ಪ್ರತ್ಯಕ್ಷ ಮಾಡುತ್ತಿರುತ್ತದೆ. ಹಾಗಾದರೆ ಎಲ್ಲರೂ ಈಶ್ವರೀಯ ಸ್ನೇಹದ ಬೀಜವನ್ನು ಬಿತ್ತುವಂತಹ ಸೇವೆಯನ್ನು ಮಾಡಿದ್ದೀರಿ. ಸಹಯೋಗಿಯನ್ನಾಗಿ ಮಾಡುವ ಶುಭ ಭಾವನೆ ಮತ್ತು ಶುಭ ಕಾಮನೆಯಿಂದ ವಿಶೇಷವಾಗಿ ಎರಡು ಎಲೆಗಳನ್ನೂ ಸಹ ಪ್ರತ್ಯಕ್ಷವಾಗಿ ನೋಡಿದೆವು. ಈಗ ಈ ಕಾಂಡವು ವೃದ್ಧಿ ಹೊಂದುತ್ತಾ ಪ್ರತ್ಯಕ್ಷ ಫಲವನ್ನು ತೋರಿಸುತ್ತದೆ.

ಬಾಪ್ದಾದಾರವರು ಸರ್ವ ಮಕ್ಕಳ ಭಿನ್ನ ಭಿನ್ನ ಪ್ರಕಾರದ ಸೇವೆಯನ್ನು ನೋಡುತ್ತಾ ಹರ್ಷಿತವಾಗುತ್ತಿದ್ದಾರೆ. ಭಲೆ ಭಾಷಣ ಮಾಡುವ ಮಕ್ಕಳಿರಬಹುದು, ಭಲೆ ಸ್ಥೂಲ ಸೇವೆಯನ್ನೇ ಮಾಡುವ ಮಕ್ಕಳಾಗಿರಲಿ - ಸರ್ವರ ಸಹಯೋಗದ ಸೇವೆಯಿಂದ ಸಫಲತೆಯ ಫಲವು ಪ್ರಾಪ್ತಿಯಾಗುತ್ತದೆ. ಭಲೆ ಸೆಕ್ಯುರಿಟಿ ಕೊಡುವವರಾಗಿರಲಿ, ಭಲೆ ಸ್ಟೋರ್ ಸಂಭಾಲನೆ ಮಾಡುವವರಾಗಿರಲಿ ಆದರೆ ಎಷ್ಟೇ ಶ್ರೇಷ್ಠವಾದ ಕಾರ್ಯವನ್ನು, ದೊಡ್ಡ ಕಾರ್ಯವು ಐದು ಬೆರಳುಗಳ ಸಹಯೋಗದಿಂದ ಯಾವ ರೀತಿ ಸಹಜವಾಗಿ ಬಿಡುತ್ತದೆಯೋ, ಹಾಗೆಯೇ ಈ ಕಾರ್ಯವು ಹೀಗಾಗುವುದು ಎಂದು ಎಷ್ಟು ಯೋಚಿಸಿದ್ದಿರಿ, ಆ ಕಾರ್ಯವು ಪ್ರತಿಯೊಬ್ಬ ಬ್ರಾಹ್ಮಣ ಮಕ್ಕಳ ಸಹಯೋಗದಿಂದ, ಆ ಯೋಚನೆಗಿಂತಲೂ ಸಾವಿರಕ್ಕಿಂತ ಹೆಚ್ಚು ಪಟ್ಟು ಸಹಜವಾಗಿಯೇ ಕಾರ್ಯವಾಯಿತು. ಇದು ಯಾರ ಚಮತ್ಕಾರವಾಗಿದೆ? ಎಲ್ಲರ ಚಮತ್ಕಾರ. ಯಾರೆಲ್ಲಾ ಈ ಕಾರ್ಯದಲ್ಲಿ ಸಹಯೋಗಿಯಾದರು, ಭಲೆ ಸ್ವಚ್ಛತೆ ಮಾಡುವ ಕಾರ್ಯವನ್ನೇ ಮಾಡಿರಲಿ, ಭಲೆ ಟೇಬಲ್ ಸ್ವಚ್ಚಗೊಳಿಸರಬಹುದು ಆದರೆ ಸರ್ವರ ಸಹಯೋಗದ ಪರಿಣಾಮವು ಸಫಲತೆ ಆಗಿರುವುದಾಗಿದೆ. ಇದು ಸಂಘಟನೆಯ ಶಕ್ತಿಯ ಮಹಾನತೆಯಾಗಿದೆ. ಬಾಪ್ದಾದಾರವರು ನೋಡುತ್ತಿದ್ದರು - ಕೇವಲ ಮಧುಬನದಲ್ಲಿ ಬರುವ ಮಕ್ಕಳಷ್ಟೇ ಅಲ್ಲ ಆದರೆ ಯಾರು ಸಾಕಾರದಲ್ಲಿಯೂ ಇರಲಿಲ್ಲ, ನಾಲ್ಕೂ ಕಡೆಯಲ್ಲಿನ ಬ್ರಾಹ್ಮಣ ಮಕ್ಕಳು ದೇಶದಲ್ಲಿ ಇರಲಿ ಅಥವಾ ವಿದೇಶದಲ್ಲಿ ಇರಬಹುದು, ಎಲ್ಲರ ಮನಸ್ಸಿನ ಶುಭ ಭಾವನೆ ಮತ್ತು ಶುಭ ಕಾಮನೆಯ ಸಹಯೋಗವಿತ್ತು. ಈ ಸರ್ವ ಆತ್ಮರುಗಳ ಶುಭ ಭಾವನೆ, ಶುಭ ಕಾಮನೆಯ ಕೋಟೆಯು ಆತ್ಮರುಗಳನ್ನು ಪರಿವರ್ತನೆ ಮಾಡಿ ಬಿಡುತ್ತದೆ. ಭಲೆ ನಿಮಿತ್ತರಾಗಿ ಶಕ್ತಿಯರೂ ಇದ್ದಾರೆ, ಪಾಂಡವರೂ ಇದ್ದಾರೆ. ನಿಮಿತ್ತ ಸೇವಾಧಾರಿಗಳಂತು ಪ್ರತಿಯೊಂದು ಕಾರ್ಯದಲ್ಲಿ ವಿಶೇಷವಾಗಿ ಇದ್ದೇ ಇರುತ್ತಾರೆ ಆದರೆ ವಾಯುಮಂಡಲದ ಕೋಟೆಯು, ಸರ್ವರ ಸಹಯೋಗದಿಂದಲೇ ತಯಾರಾಗುತ್ತದೆ. ಬಾಪ್ದಾದಾರವರು ನಿಮಿತ್ತವಾಗಿರುವ ಮಕ್ಕಳಿಗೂ ಸಹ ಶುಭಾಷಯಗಳನ್ನು ಕೊಡುತ್ತಾರೆ, ಆದರೆ ಬಹಳ ಹೆಚ್ಚು ಶುಭಾಷಯಗಳು ಎಲ್ಲಾ ಮಕ್ಕಳಿಗಿದೆ. ತಂದೆಗೆ ಮಕ್ಕಳು ಶುಭಾಷಯಗಳನ್ನೇನು ಕೊಡುವರು, ಏಕೆಂದರೆ ತಂದೆಯವರಂತು ಅವ್ಯಕ್ತವಾಗಿದ್ದಾರೆ. ವ್ಯಕ್ತದಲ್ಲಂತು ಮಕ್ಕಳನ್ನು ನಿಮಿತ್ತ ಮಾಡಲಾಗಿದೆ. ಆದ್ದರಿಂದ ಬಾಪ್ದಾದಾರವರು ಸದಾ ಮಕ್ಕಳ ಹಾಡನ್ನೇ ಹಾಡುತ್ತಾರೆ. ತಂದೆಯ ತಂದೆಯ ಹಾಡನ್ನು ಹಾಡಿರಿ, ತಂದೆಯು ತಮ್ಮ ಹಾಡನ್ನು ಹಾಡುತ್ತಾರೆ.

ಏನೆಲ್ಲವನ್ನೂ ಮಾಡಿದಿರಿ, ಬಹಳ ಚೆನ್ನಾಗಿ ಮಾಡಿದಿರಿ. ಭಾಷಣ ಮಾಡುವವರು ಬಹಳ ಚೆನ್ನಾಗಿಯೇ ಭಾಷಣ ಮಾಡಿದರು, ಸ್ಟೇಜನ್ನು ಅಲಂಕರಿಸುವವರು ಬಹಳ ಚೆನ್ನಾಗಿಯೇ ಸ್ಟೇಜಿನ ಅಲಂಕಾರ ಮಾಡಿದ್ದಾರೆ ಮತ್ತು ವಿಶೇಷವಾಗಿ ಯೋಗಯುಕ್ತ ಭೋಜನವನ್ನು ತಯಾರು ಮಾಡುವವರು ಮತ್ತು ಅದನ್ನು ಹಂಚುವವರು, ಹಾಗೆಯೇ ತರಕಾರಿ ಸೇವೆಯನ್ನು ಮಾಡುವವರಿದ್ದರು. ಮೊದಲು ತರಕಾರಿಯನ್ನು ತಯಾರು ಮಾಡಿಟ್ಟರಬೇಕಾಗುತ್ತದೆ. ಭೋಜನದ ತಯಾರಿಯಾಗಲು ತರಕಾರಿಯನ್ನು ತುಂಡು ಮಾಡಿಟ್ಟಿರಲಿಲ್ಲ ಎಂದರೆ ಭೋಜನವು ಹೇಗೆ ತಯಾರಾಗುತ್ತದೆ? ಎಲ್ಲಾ ವಿಭಾಗದವರು ಸರ್ವ ಪ್ರಕಾರದ ಸೇವೆಗೆ ನಿಮಿತ್ತರಾಗಿದ್ದರು. ತಿಳಿಸಿದೆವಲ್ಲವೆ - ಒಂದು ವೇಳೆ ಸ್ವಚ್ಛಗೊಳಿಸುವವರು ಸ್ವಚ್ಛತೆ ಮಾಡಿಲ್ಲದಿದ್ದರೂ ಪ್ರಭಾವ ಬೀರುವುದಿಲ್ಲ. ಪ್ರತಿಯೊಬ್ಬರ ಚಹರೆಯು ಈಶ್ವರೀಯ ಸ್ನೇಹದಿಂದ ಕೂಡಿರಲಿಲ್ಲವೆಂದರೆ, ಸೇವೆಯ ಸಫಲತೆಯು ಹೇಗಾಗುತ್ತದೆ! ಎಲ್ಲರೂ ಯಾವುದೇ ಕಾರ್ಯವನ್ನು ಮಾಡಿದ್ದೀರಿ, ಸ್ನೇಹ ತುಂಬಿಕೊಂಡು ಮಾಡಿದ್ದೀರಿ ಆದ್ದರಿಂದ ಅವರಲ್ಲಿಯೂ (ಬಂದಿರುವವರಲ್ಲಿ) ಸ್ನೇಹದ ಬೀಜವು ಬಿತ್ತನೆಯಾಯಿತು. ಉಮ್ಮಂಗ-ಉತ್ಸಾಹದಿಂದ ಮಾಡಿದ್ದೀರಿ ಆದ್ದರಿಂದ ಅವರಲ್ಲಿಯೂ ಉಮ್ಮಂಗ-ಉತ್ಸಾಹವಿತ್ತು. ಅನೇಕತೆ ಇದ್ದರೂ ಸ್ನೇಹದ ಸೂತ್ರದ ಕಾರಣ ಏಕತೆಯ ಮಾತನ್ನೇ ಮಾತನಾಡುತ್ತಿದ್ದರು, ವಾಯುಮಂಡಲದ ಈ ಛತ್ರಛಾಯೆಯು ವಿಶೇಷವಾಗಿತ್ತು. ಅಂದ ಮೇಲೆ ಎಂತಹ ಸಂಸ್ಕಾರದವರೇ ಈ ಛತ್ರಛಾಯೆ ಒಳಗೆ ಬರುವ ಕಾರಣ ಸ್ನೇಹದ ಪ್ರಭಾವದಲ್ಲಿ ಸಮಾವೇಶವಾಗಿದ್ದರು. ತಿಳಿಯಿತೆ? ಎಲ್ಲರಿಗೂ ಬಹಳ ದೊಡ್ಡ ಜವಾಬ್ದಾರಿಯೇ ಇತ್ತು, ಎಲ್ಲರೂ ಸೇವೆಯನ್ನು ಮಾಡಿದಿರಿ. ಯಾರು ಏನಾದರೂ ಮಾತನಾಡಲು ಬಯಸಿದರೂ, ಈ ವಾಯುಮಂಡಲದ ಕಾರಣ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಮನಸ್ಸಿನಲ್ಲಿ ಏನೇ ಯೋಚಿಸಿರಬಹುದು ಆದರೆ ಮುಖದಿಂದ ಹೊರಬರಲು ಸಾಧ್ಯವಾಗಲಿಲ್ಲ ಏಕೆಂದರೆ ಪ್ರತ್ಯಕ್ಷವಾಗಿ ತಾವುಗಳ ಜೀವನದ ಪರಿವರ್ತನೆಯನ್ನು ನೋಡುತ್ತಾ, ಸ್ವತಹವಾಗಿ ಅವರಲ್ಲಿಯೂ ಪರಿವರ್ತನೆಯ ಪ್ರೇರಣೆಯು ಬರುತ್ತಿರುತ್ತದೆ. ಪ್ರತ್ಯಕ್ಷ ಪ್ರಮಾಣ ನೋಡಿದರಲ್ಲವೆ. ಶಾಸ್ತ್ರಗಳ ಅನುಸಾರದಿಂದಲೂ, ಅತಿದೊಡ್ಡ ಪ್ರತ್ಯಕ್ಷ ಪ್ರಮಾಣ ಆಗಿದೆ. ಪ್ರತ್ಯಕ್ಷ ಪ್ರಮಾಣದ ಮುಂದೆ ಮತ್ತೆಲ್ಲಾ ಪ್ರಮಾಣಗಳು ಗುಪ್ತವಾಗಿ ಬಿಡುತ್ತದೆ, ಇದು ಸೇವೆಯ ಫಲಿತಾಂಶವಾಗಿತ್ತು. ಈಗಲೂ ಅದೇ ಸ್ನೇಹದ ಸಹಯೋಗದ ವಿಶೇಷತೆಯಿಂದ, ಇನ್ನೂ ಸಮೀಪದಲ್ಲಿ ಕರೆ ತರುತ್ತೀರಿ ಎಂದರೆ ಸಹಯೋಗದಲ್ಲಿ ಬಹಳ ಮುಂದುವರೆಯುತ್ತಾ ಇರುತ್ತಾರೆ. ಇಷ್ಟೆಲ್ಲಾ ಆದರೂ ಪ್ರತ್ಯಕ್ಷತೆಯ ನಗಾರಿಯು ಆಗ ಮೊಳಗುತ್ತದೆ, ಯಾವಾಗ ಎಲ್ಲಾ ಶಕ್ತಿ(ಸತ್ತಾ)ಗಳ ಸಹಯೋಗ ಇರುತ್ತದೆ.

ವಿಶೇಷವಾಗಿ ಸರ್ವಸತ್ತಾ (ರಾಜ್ಯ ಶಕ್ತಿ, ವಿಜ್ಞಾನ ಶಕ್ತಿ, ಧರ್ಮ ಶಕ್ತಿ....)ಗಳು ಯಾವಾಗ ಒಟ್ಟಿಗೆ ಸೇರಿ ಒಂದು ಶಬ್ಧವು ಮೊಳಗುತ್ತದೆ, ಆಗಲೇ ವಿಶ್ವದ ಮುಂದೆ ಪ್ರತ್ಯಕ್ಷತೆಯ ಪರದೆಯು ತೆರೆಯುತ್ತದೆ. ವರ್ತಮಾನ ಸಮಯದಲ್ಲಿ ಸೇವಾ ಯೋಜನೆ ಏನು ಮಾಡಲಾಗಿದೆ, ಅದು ಇದಕ್ಕಾಗಿಯೇ ಮಾಡಲಾಗಿದೆ ಅಲ್ಲವೆ. ಎಲ್ಲಾ ವರ್ಗದವರು ಅಂದರೆ ಸತ್ತಾದವರು ಸಂಪರ್ಕದಲ್ಲಿ, ಸಹಯೋಗದಲ್ಲಿ ಬರಲಿ, ಸ್ನೇಹದಲ್ಲಿ ಬರುತ್ತಾರೆಂದರೆ, ಸಂಬಂಧದಲ್ಲಿ ಬಂದು ಸಹಜಯೋಗಿ ಆಗಿ ಬಿಡುತ್ತಾರೆ. ಒಂದುವೇಳೆ ಯಾವುದೇ ಸತ್ತಾ(ಶಕ್ತಿ)ದವರು ಸಹಯೋಗದಲ್ಲಿ ಬರಲಿಲ್ಲದಿದ್ದರೆ, ಸರ್ವರ ಸಹಯೋಗದ ಕಾರ್ಯವನ್ನೇನು ಇಡಲಾಗಿದೆ, ಅದು ಹೇಗೆ ಸಫಲವಾಗುತ್ತದೆ?

ಈಗ ವಿಶೇಷ ಶಕ್ತಿಯ ಫೌಂಡೇಷನ್ ಆಯಿತು. ಧರ್ಮ ಶಕ್ತಿಯು ಅತಿ ದೊಡ್ಡ ಶಕ್ತಿಯಾಗಿದೆ ಅಲ್ಲವೆ. ವಿಶೇಷವಾದ ಆ ಶಕ್ತಿಯ ಮೂಲಕ ಫೌಂಡೇಶನ್ನ ಆರಂಭವಾಯಿತು, ಸ್ನೇಹದ ಪ್ರಭಾವವನ್ನು ನೋಡಿದರಲ್ಲವೆ. ಅದೇ ರೀತಿ - ಇವರು ಇಷ್ಟೆಲ್ಲರನ್ನೂ ಹೇಗೆ ಕರೆಯುತ್ತಿದ್ದಾರೆ? ಎಂದು ಜನರೇನು ಹೇಳುತ್ತಿದ್ದರು, ಇದೇ ಯೋಚನೆಯಲ್ಲಿ ಇದ್ದಾರಲ್ಲವೆ. ಆದರೆ ಒಂದು ಈಶ್ವರೀಯ ಸ್ನೇಹದ ಸೂತ್ರವಿತ್ತು, ಆದ್ದರಿಂದ ಅನೇಕತೆಯ ವಿಚಾರ ಇದ್ದರೂ ಸಹಯೋಗಿ ಆಗುವ ವಿಚಾರವು ಒಂದೇ ಇದ್ದಿತು. ಅದೇ ರೀತಿ ಈಗ ಸರ್ವ ಸತ್ತಾಗಳನ್ನು (ಸರ್ವಶಕ್ತಿಯವರನ್ನು) ಸಹಯೋಗಿಯನ್ನಾಗಿ ಮಾಡಿರಿ. ಆಗುತ್ತಿದ್ದಾರೆ ಆದರೆ ಇನ್ನೂ ಸಮೀಪ ಸಹಯೋಗಿಯನ್ನಾಗಿ ಮಾಡುತ್ತಾ ಸಾಗಿರಿ ಏಕೆಂದರೆ ಈಗ ಸುವರ್ಣ ಮಹೋತ್ಸವವು ಸಮಾಪ್ತಿಯಾಯಿತು. ಹಾಗಾದರೆ ಈಗ ಇನ್ನೂ ಪ್ರತ್ಯಕ್ಷತೆಯ ಸಮೀಪದಲ್ಲಿ ಬಂದು ಬಿಟ್ಟೆವು. ಡೈಮಂಡ್ ಜುಬಿಲಿ ಅರ್ಥಾತ್ ಪ್ರತ್ಯಕ್ಷತೆಯ ನಗಾರಿ ಮೊಳಗಿಸುವುದು. ಈಗ ಈ ವರ್ಷದಿಂದ ಪ್ರತ್ಯಕ್ಷತೆಯ ಪರದೆಯು ತೆರೆಯುವುದು ಆರಂಭವಾಯಿತು. ಒಂದು ಕಡೆ ವಿದೇಶದ ಮೂಲಕ ಭಾರತದಲ್ಲಿ ಪ್ರತ್ಯಕ್ಷತೆ ಆಯಿತು, ಇನ್ನೊಂದು ಕಡೆ ನಿಮಿತ್ತ ಮಹಾಮಂಡಲೇಶ್ವರರ ಮೂಲಕ ಕಾರ್ಯದ ಶ್ರೇಷ್ಠತೆಯ ಸಫಲತೆ. ವಿದೇಶದಲ್ಲಿಯೂ ಯು.ಎನ್.,ನವರು ನಿಮಿತ್ತರಾದರು, ಅವರೂ ಸಹ ವಿಶೇಷ ಪ್ರಸಿದ್ಧವಾಗಿರುವವರು ಮತ್ತು ಭಾರತದಲ್ಲಿಯೂ ಧರ್ಮ ಶಕ್ತಿಯು ಪ್ರಸಿದ್ಧವಾದುದು ಆಗಿದೆ. ಅಂದಮೇಲೆ ಧರ್ಮ ಸತ್ತಾದವರ (ಶಕ್ತಿ) ಮೂಲಕ ಧರ್ಮಾತ್ಮರುಗಳ ಪ್ರತ್ಯಕ್ಷತೆ ಆಗುವುದು ಪ್ರತ್ಯಕ್ಷತೆಯ ಪರದೆಯು ತೆರೆಯಲ್ಪಡುವುದರ ಆರಂಭವಾಗುವುದು. ಈಗ ತೆರೆಯುವುದು ಆರಂಭವಾಯಿತು, ಇನ್ನು ತೆರೆಯಲ್ಪಡುವುದಿದೆ, ಸಂಪೂರ್ಣವಾಗಿ ತೆರೆಯಲಾಗಿಲ್ಲ, ಆರಂಭವಾಗಿದೆ ಅಷ್ಟೇ. ವಿದೇಶದ ಮಕ್ಕಳು ಯಾವ ಕಾರ್ಯದಲ್ಲಿ ನಿಮಿತ್ತರಾದರು, ಅದೂ ಸಹ ವಿಶೇಷವಾದ ಕಾರ್ಯವಾಗಿತ್ತು. ಪ್ರತ್ಯಕ್ಷತೆಯ ವಿಶೇಷ ಕಾರ್ಯದಲ್ಲಿ, ಈ ಕಾರ್ಯದ ಕಾರಣ ನಿಮಿತ್ತವಾದರು. ಹಾಗಾದರೆ ಬಾಪ್ದಾದಾರವರು ವಿದೇಶದ ಮಕ್ಕಳಿಗೆ - ಈ ಅಂತಿಮ ಪ್ರತ್ಯಕ್ಷತೆಯ ಹೀರೊ ಪಾತ್ರದಲ್ಲಿ ನಿಮಿತ್ತವಾಗುವ ಸೇವೆಗಾಗಿಯೂ ವಿಶೇಷ ಶುಭಾಷಯಗಳನ್ನು ಕೊಡುತ್ತಿದ್ದೇವೆ. ಭಾರತದಲ್ಲಿ ವಿಶೇಷ ಧ್ವನಿಯನ್ನಂತು ಮೊಳಗಿಸಿಬಿಟ್ಟಿದ್ದೀರಲ್ಲವೆ. ಎಲ್ಲರ ಕಿವಿಗಳವರೆಗೆ ತಲುಪಿದೆ, ವಿದೇಶದ ದೊಡ್ಡ ಧ್ವನಿಯು ಭಾರತದ ಕುಂಭಕರ್ಣರನ್ನು ಜಾಗೃತಗೊಳಿಸಲು ನಿಮಿತ್ತವಂತು ಆಯಿತು. ಆದರೆ ಈಗ ಕೇವಲ ಧ್ವನಿಯು ಹೋಯಿತು, ಈಗಿನ್ನೂ ಜಾಗೃತವಾಗಬೇಕು, ಮೇಲೆ ಏಳಬೇಕಾಗಿದೆ. ಈಗ ಕಿವಿಗಳವರೆಗೆ ಧ್ವನಿಯು ತಲುಪಿದೆಯಷ್ಟೇ. ಮಲಗಿರುವವರ ಕಿವಿಗಳವರೆಗೆ ಧ್ವನಿಯು ಏನಾದರೂ ಹೋಯಿತೆಂದರೆ ಸ್ವಲ್ಪ ಕದಲುತ್ತಾರೆ ಅಲ್ಲವೆ, ಅಲುಗಾಡಿಸುವುದಂತು ಮಾಡುತ್ತದೆಯಲ್ಲವೆ. ಹಾಗಾದರೆ ಹಲ್ಚಲ್ ಉಂಟಾಯಿತು, ಈಸ್ವ ಸ್ವಲ್ಪ ಜಾಗೃತವಾಗಿ ಇಲ್ಲೇನೋ ಇದೆ ಎಂದು ತಿಳಿಯುತ್ತಾರೆ, ಯಾವಾಗ ಜೋರಾಗಿ ಧ್ವನಿ ಮೊಳಗಿಸುತ್ತೀರಿ ಆಗಲೇ ಜಾಗೃತಗೊಳ್ಳುತ್ತಾರೆ. ಪ್ರಾರಂಭದಲ್ಲಿಯೇ ಸ್ವಲ್ಪ ಜೋರಾಗಿ ಧ್ವನಿಯಾಯಿತು, ಇಂತಹ ಚಮತ್ಕಾರವು ಆಗ ಆಗುತ್ತದೆ ಯಾವಾಗ ಎಲ್ಲಾ ಶಕ್ತಿಯವರು ಸ್ಟೇಜಿನ ಮೇಲೆ ಒಟ್ಟಾಗಿ ಸೇರಿ ಸ್ನೇಹ ಮಿಲನ ಮಾಡುವರು. ಎಲ್ಲಾ ಶಕ್ತಿಗಳ ಆತ್ಮರುಗಳ ಮೂಲಕ ಈಶ್ವರೀಯ ಕಾರ್ಯದ ಪ್ರತ್ಯಕ್ಷತೆಯು ಆರಂಭವಾಗಲಿ, ಆಗಲೇ ಪ್ರತ್ಯಕ್ಷತೆಯ ಪರದೆಯು ಸಂಪೂರ್ಣವಾಗಿ ತೆರೆಯಲ್ಪಡುವುದು ಆದ್ದರಿಂದ ಈಗೇನು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೀರಿ, ಅದರಲ್ಲಿ ಈ ಲಕ್ಷ್ಯವನ್ನು ಇಟ್ಟುಕೊಳ್ಳಿ - ಎಲ್ಲಾ ಶಕ್ತಿಗಳ ಆತ್ಮರುಗಳು ಸ್ನೇಹ ಮಿಲನವಾಗಲಿ. ಎಲ್ಲಾ ವರ್ಗದವರ ಸ್ನೇಹ ಮಿಲನವಂತು ಆಗಲು ಸಾಧ್ಯವಾಗುತ್ತದೆ. ಹೇಗೆ ಸಾಧಾರಣ ಸಾಧುಗಳಿಗೆ ನಿಮಂತ್ರಣ ಕೊಡುತ್ತೀರೆಂದರೆ, ಅದೇನು ದೊಡ್ಡ ಮಾತಲ್ಲ. ಆದರೆ ಈ ಮಹಾಮಂಡಲೇಶ್ವರರನ್ನು ಕರೆಸಿದಿರಲ್ಲವೆ. ಹಾಗೆ ನೋಡಿದರೆ ಈ ಸಂಘಟನೆಯಲ್ಲಿ ಶಂಕರಾಚಾರ್ಯರರದೂ ಇನ್ನೂ ಶೋಭಿಸುತ್ತಿತ್ತು. ಆದರೆ ಅವರ ಭಾಗ್ಯವೂ ಸಹ ಈಗ ತೆರೆದು ಬಿಡುತ್ತದೆ. ಆಂತರ್ಯದಿಂದಂತು ಸಹಯೋಗಿಯಿದ್ದಾರೆ, ಮಕ್ಕಳು ಬಹಳ ಚೆನ್ನಾಗಿ ಪರಿಶ್ರಮ ಪಟ್ಟಿದ್ದೀರಿ. ಆದರೆ ಇಷ್ಟೆಲ್ಲಾ ಆದರೂ ಲೋಕ ಮರ್ಯಾದೆಯನ್ನು ಇಡಬೇಕಾಗುತ್ತದೆ. ಆ ದಿನವೂ ಬರುತ್ತದೆ, ಯಾವಾಗ ಎಲ್ಲಾ ಶಕ್ತಿಗಳ ಆತ್ಮರುಗಳು ಸೇರಿ ಹೇಳುವರು - ಶ್ರೇಷ್ಠ ಶಕ್ತಿ, ಈಶ್ವರೀಯ ಶಕ್ತಿ, ಆಧ್ಯಾತ್ಮಿಕ ಶಕ್ತಿಯಾಗಿದೆ, ಅದು ಒಂದು ಪರಮಾತ್ಮನ ಶಕ್ತಿಯೇ ಆಗಿದೆ. ಆದ್ದರಿಂದ ಬಹಳ ಸಮಯದ ಯೋಜನೆಯನ್ನು ಮಾಡಲಾಯಿತಲ್ಲವೆ. ಇಷ್ಟು ಸಮಯ ಇದಕ್ಕಾಗಿ ಸಿಕ್ಕಿದೆ - ಎಲ್ಲರನ್ನೂ ಸ್ನೇಹದ ಸೂತ್ರದಲ್ಲಿ ಬಂಧಿಸಿ ಸಮೀಪದಲ್ಲಿ ತನ್ನಿರಿ. ಈ ಸ್ನೇಹವು ಅಯಸ್ಕಾಂತ ಆಗುತ್ತದೆ, ಅದು ಎಲ್ಲರನ್ನೂ ಒಟ್ಟಿಗೆ ಸಂಘಟನೆಯ ರೂಪದಲ್ಲಿ ತಂದೆಯವರ ಸ್ಟೇಜಿನ ಮೇಲೆ ತಲುಪಿಬಿಡಬೇಕು. ಇಂತಹ ಯೋಜನೆಯನ್ನು ಮಾಡಿದ್ದೀರಲ್ಲವೆ? ಒಳ್ಳೆಯದು.

ಸೇವಾಧಾರಿಗಳಿಗೆ ಸೇವೆಯ ಪ್ರತ್ಯಕ್ಷ ಫಲವೂ ಸಿಕ್ಕಿತು. ಈಗ ಹೊಸ ಮಕ್ಕಳ ನಂಬರ್(ಸರದಿ) ಆಗಿದೆಯಲ್ಲವೆ. ತಾವುಗಳಂತು (ದಾದಿಯರನ್ನು) ಮಿಲನವನ್ನು ಆ್ನಚರಿಸುತ್ತಾ-ಆಚರಿಸುತ್ತಾ ಈಗ ವಾನಪ್ರಸ್ಥ ಸ್ಥಿತಿಯವರೆಗೆ ತಲುಪಿದ್ದೀರಿ. ಈಗ ತಮ್ಮ ಕಿರಿಯ ಸಹೋದರ-ಸಹೋದರಿಯರಿಗೆ ಟರ್ನ್ ಕೊಡುತ್ತಿದ್ದೀರಿ. ತಾವು ಸ್ವಯಂ ವಾನಪ್ರಸ್ಥಿ ಆಗಿದ್ದೀರಿ, ಆದ್ದರಿಂದ ಅವಕಾಶವನ್ನು ಅನ್ಯರಿಗೆ ಕೊಟ್ಟಿದ್ದೀರಿ. ಮಾಡಬೇಕೆಂಬ ಇಚ್ಛೆಯಂತು ಎಲ್ಲರಲ್ಲಿಯೂ ಹೆಚ್ಚುತ್ತಿರುತ್ತದೆ. ಎಲ್ಲರೂ ಹೇಳುತ್ತಾರೆ - ಈಗಲೂ ಮಿಲನವಾಗುವ ಅವಕಾಶವು ಸಿಗಬೇಕು, ಎಷ್ಟು ಬಾರಿ ಮಿಲನವಾಗುತ್ತೀರಿ ಇನ್ನಷ್ಟು ಇಚ್ಛೆಯು ಹೆಚ್ಚುತ್ತಿರುತ್ತದೆ. ಮತ್ತೇನು ಮಾಡುವಿರಿ? ಅನ್ಯರಿಗೆ ಅವಕಾಶ ಕೊಡುವುದೂ ಸಹ ಸ್ವಯಂ ತಾವು ತೃಪ್ತಿಯ ಅನುಭವ ಮಾಡುವುದಾಗಿದೆ ಏಕೆಂದರೆ ಹಳಬರಂತು ಅನುಭವಿಯಾಗಿದ್ದಾರೆ, ಪ್ರಾಪ್ತಿ ಸ್ವರೂಪರಾಗಿದ್ದಾರೆ. ಅಂದಾಗ ಪ್ರಾಪ್ತಿ-ಸ್ವರೂಪ ಆತ್ಮರು ಸರ್ವರ ಪ್ರತಿ ಶುಭ ಭಾವನೆ ಇಡುವವರು, ಅನ್ಯರನ್ನು ಮುಂದಿಡುವವರು ಆಗಿದ್ದೀರಿ. ಅಥವಾ ಹೀಗೆ ತಿಳಿಯುತ್ತೀರಿ - ನಾವಂತು ಮಿಲನವಾಗೋಣ? ಇದರಲ್ಲಿಯೂ ನಿಸ್ವಾರ್ಥಿ ಆಗಬೇಕಾಗಿದೆ. ಬುದ್ಧಿವಂತ ಆಗಿದ್ದೀರಿ, ಆದಿ-ಮಧ್ಯ-ಅಂತ್ಯವನ್ನು ತಿಳಿದಿರುವವರು ಆಗಿದ್ದೀರಿ, ಸಮಯವನ್ನೂ ಗುರುತಿಸುತ್ತೀರಿ, ಪ್ರಕೃತಿಯ ಪ್ರಭಾವವನ್ನೂ ತಿಳಿಯುತ್ತೀರಿ, ಪಾತ್ರವನ್ನೂ ತಿಳಿಯುತ್ತೀರಿ, ಬಾಪ್ದಾದಾರವರೂ ಸಹ ಮಕ್ಕಳೊಂದಿಗೆ ಸದಾ ಮಿಲನವಾಗಲು ಬಯಸುತ್ತಾರೆ. ಒಂದುವೇಳೆ ಮಕ್ಕಳು ಏನಾದರೂ ಮಿಲನವಾಗಬೇಕೆಂದು ಬಯಸುತ್ತಾರೆಂದರೆ, ಅದಕ್ಕೆ ಮೊದಲು ತಂದೆಯು ಬಯಸುತ್ತಾರೆ, ಆಗಲೇ ಮಕ್ಕಳೂ ಬಯಸುತ್ತಾರೆ. ಆದರೆ ತಂದೆಯೂ ಸಹ ಸಮಯವನ್ನು, ಪ್ರಕೃತಿಯನ್ನೂ (ರಥ) ನೋಡ ಬೇಕಾಗುತ್ತದೆ ಅಲ್ಲವೆ. ಯಾವಾಗ ಈ ಪ್ರಪಂಚದಲ್ಲಿ ಬರುತ್ತಾರೆ, ಅಂದಾಗ ಇಲ್ಲಿನ ಎಲ್ಲಾ ಮಾತುಗಳನ್ನೂ ನೋಡ ಬೇಕಾಗುತ್ತದೆ. ಯಾವಾಗ ಇದರಿಂದ ದೂರ ಅವ್ಯಕ್ತ ವತನದಲ್ಲಿ ಮಿಲನ ಆಗುವುದಿದ್ದರೆ, ಅಲ್ಲಂತು ನೀರಿನ, ಸಮಯದ, ಅಲ್ಲಿರಲು ವ್ಯವಸ್ಥೆ ಮುಂತಾದ ಸಮಸ್ಯೆಯೇ ಇಲ್ಲ. ಗುಜರಾತಿನವರು ಸಮೀಪದಲ್ಲಿ ಇದ್ದಾರೆ, ಅಂದಮೇಲೆ ಇದರ ಫಲವೂ ಸಿಕ್ಕಿದೆಯಲ್ಲವೆ. ಇದೂ ಸಹ ಗುಜರಾತಿನವರ ವಿಶೇಷತೆ ಆಗಿದೆ, ಸದಾ ಎವರೆಡಿ ಇರುತ್ತಾರೆ. ಹಾಂ ಜಿ'ಯ ಪಾಠವು ಪರಿಪಕ್ವವಿದೆ ಮತ್ತು ಇಲ್ಲಿರಲು ಎಲ್ಲಿಯೇ ಸ್ಥಾನವು ಸಿಗಲಿ ಇರುತ್ತಾರೆ. ಪ್ರತಿಯೊಂದು ಸಂದರ್ಭದಲ್ಲಿನ ಖುಷಿಯೂ ಸಹ ಕಲ್ಯಾಣವನ್ನು ಮಾಡುತ್ತದೆ. ಸೇವಾ ಭಾವವೂ ಸಹ ಸಫಲತೆಯೇ ಆಗಿದೆ. ಸೇವಾ ಭಾವದಲ್ಲಿ ಏನಾದರೂ ಅಹಂ-ಭಾವ ಬಂದು ಬಿಡುತ್ತದೆ ಎಂದರೆ ಸೇವಾ ಭಾವ ಎಂದು ಹೇಳುವುದಿಲ್ಲ. ಸೇವಾ-ಭಾವವು ಸಫಲತೆಯನ್ನು ಕೊಡಿಸುತ್ತದೆ. ಅಹಂ-ಭಾವವು ಮಿಕ್ಸ್ ಆಗಿರುತ್ತದೆ ಎಂದರೆ ಪರಿಶ್ರಮವೂ ಹೆಚ್ಚು, ಸಮಯವು ಹೆಚ್ಚಾಗಿ ತೊಡಗಿಸಬೇಕಾಗುತ್ತದೆ, ನಂತರ ಸ್ವಯಂ ಸಹ ಸಂತುಷ್ಟ ಆಗುವುದಿಲ್ಲ. ಸೇವಾಭಾವ ಇರುವಂತಹ ಮಕ್ಕಳು ಸದಾ ಸ್ವಯಂ ತಾನೂ ಸಹ ಮುಂದುವರೆಯುತ್ತಾರೆ ಮತ್ತು ಅನ್ಯರನ್ನೂ ಮುಂದುವರೆಸುತ್ತಾರೆ. ಸದಾ ಹಾರುವ ಕಲೆಯ ಅನುಭವ ಮಾಡುತ್ತಾರೆ, ಬಹಳ ಸಾಹಸ ಇರುವವರು ಆಗಿದ್ದಾರೆ, ಎಲ್ಲಿ ಸಾಹಸ ಇರುತ್ತದೆಯೋ ಅಲ್ಲಿ ಬಾಪ್ದಾದಾರವರೂ ಸಹ ಪ್ರತೀ ಸಮಯ ಕಾರ್ಯದಲ್ಲಿ ಸಹಯೋಗಿ ಆಗಿರುತ್ತಾರೆ.

ಮಹಾರಥಿಗಳಂತು ಮಹಾದಾನಿಯೇ ಆಗಿರುತ್ತಾರೆ. ಯಾರೆಲ್ಲಾ ಮಹಾರಥಿಗಳು ಸೇವಾರ್ಥವಾಗಿ ಬಂದಿದ್ದಾರೆ, ಮಹಾದಾನಿ-ವರದಾನಿ ಆಗಿದ್ದೀರಿ ಅಲ್ಲವೆ? ಅನ್ಯರಿಗೆ ಅವಕಾಶ ಕೊಡುವುದೂ ಸಹ ಮಹಾದಾನ, ವರದಾನವಾಗಿದೆ. ಸಮಯದಂತೆ ಪಾತ್ರವನ್ನು ಅಭಿನ್ನಯಿಸುವುದರಲ್ಲಿಯೂ ಎಲ್ಲಾ ಅಗಲಿ ಮರಳಿ ಸಿಕ್ಕಿರುವ ಮಕ್ಕಳು ಸದಾ ಕಾಲದ ಸಹಯೋಗಿಯಾಗಿದ್ದಾರೆ ಮತ್ತು ಹಾಗೆಯೇ ಇರುತ್ತಾರೆ. ಇಚ್ಛೆಯಂತು ಇರುತ್ತದೆ ಏಕೆಂದರೆ ಇದು ಶುಭ ಇಚ್ಛೆಯಾಗಿದೆ. ಆದರೆ ಇದನ್ನು ಸಮಾವೇಶ ಮಾಡಿಕೊಳ್ಳುವುದೂ ಗೊತ್ತಿದೆ ಆದ್ದರಿಂದ ಎಲ್ಲರೂ ಸದಾ ಸಂತುಷ್ಟವಾಗಿದ್ದಾರೆ.

ಬಾಪ್ದಾದಾರವರೂ ಸಹ ಬಯಸುತ್ತಾರೆ - ಒಂದೊಂದು ಮಗುವಿನೊಂದಿಗೆ ಮಿಲನ ಆಗೋಣ ಮತ್ತು ಸಮಯದ ಪರಿಮಿತಿಯೂ ಇರಬಾರದು. ಆದರೆ ತಾವುಗಳ ಪ್ರಪಂಚದಲ್ಲಿ ಇವೆಲ್ಲಾ ಪರಿಮಿತಿಗಳನ್ನು ನೋಡಬೇಕಾಗುತ್ತದೆ. ಇಲ್ಲದಿದ್ದರೆ, ಒಂದೊಂದು ವಿಶೇಷ ರತ್ನದ ಮಹಿಮೆಯನ್ನು ಏನಾದರೂ ಮಾಡಿದರೆ ಎಷ್ಟೊಂದು ಮಹಿಮೆಯಿದೆ! ಕಡಿಮೆ ಎಂದರೆ ಒಂದೊಂದು ಮಗುವಿನ ವಿಶೇಷತೆಯ ಬಗ್ಗೆ ಒಂದೊಂದು ಹಾಡನ್ನೇ ಮಾಡಬಹುದು. ಆದ್ದರಿಂದ ಹೇಳುತ್ತೇವೆ - ವತನದಲ್ಲಿ ಬಂದು ಬಿಡಿ, ಎಲ್ಲಿ ಯಾವುದೇ ಪರಿಮಿತಿಯೇ ಇಲ್ಲ. ಒಳ್ಳೆಯದು.

ಸದಾ ಈಶ್ವರೀಯ ಸ್ನೇಹದಲ್ಲಿ ಸಮಾವೇಶ ಆಗಿರುವ, ಸದಾ ಪ್ರತೀ ಸೆಕೆಂಡ್ ಸರ್ವರ ಸಹಯೋಗಿ ಆಗುವ, ಸದಾ ಪ್ರತ್ಯಕ್ಷತೆಯ ಪರದೆಯನ್ನು ತೆರೆದು ವಿಶ್ವದ ಮುಂದೆ ತಂದೆಯನ್ನು ಪ್ರತ್ಯಕ್ಷಗೊಳಿಸುವ, ಸದಾ ಸರ್ವ ಆತ್ಮರುಗಳಿಗೆ ಪ್ರತ್ಯಕ್ಷ ಪ್ರಮಾಣದ ಸ್ವರೂಪ ಆಗಿದ್ದು ಆಕರ್ಷಿಸುವವರಿಗೆ, ಸದಾ ತಂದೆ ಹಾಗೂ ಸರ್ವರ ಪ್ರತೀ ಕಾರ್ಯದಲ್ಲಿ ಸಹಯೋಗಿ ಆಗಿದ್ದು ಒಬ್ಬರ ಹೆಸರನ್ನು ಪ್ರಸಿದ್ಧ ಮಾಡುವಂತಹ ವಿಶ್ವದ ಇಷ್ಟ ದೇವ/ದೇವಿ ಮಕ್ಕಳಿಗೆ, ವಿಶ್ವದ ವಿಶೇಷ ಮಕ್ಕಳಿಗೆ, ಬಾಪ್ದಾದಾರವರ ಅತ್ಯಂತ ಸ್ನೇಹ ಸಂಪನ್ನ ನೆನಪು-ಪ್ರೀತಿ. ಜೊತೆ-ಜೊತೆಗೆ ದೇಶ-ವಿದೇಶದ ಎಲ್ಲಾ ಮಕ್ಕಳೂ ಸ್ನೇಹದಿಂದ ತಂದೆಯ ಸನ್ಮುಖದಲ್ಲಿ ತಲುಪುವಂತಹ ಸರ್ವ ಸಮೀಪ ಮಕ್ಕಳಿಗೆ, ಸೇವೆಯ ಶುಭಾಷಯಗಳ ಜೊತೆ-ಜೊತೆಗೆ ಬಾಪ್ದಾದಾರವರ ವಿಶೇಷ ನೆನಪು-ಪ್ರೀತಿಯನ್ನು ಸ್ವೀಕರಿಸಿರಿ.

ವರದಾನ:  
ಜ್ಞಾನಪೂರ್ಣನ ವಿಶೇಷತೆಯ ಮೂಲಕ ಸಂಸ್ಕಾರಗಳ ಘರ್ಷಣೆಯಿಂದ ಪಾರಾಗುವಂತಹ ಕಮಲಪುಷ್ಪ ಸಮಾನ ಭಿನ್ನ ಅಥವಾ ಸಾಕ್ಷಿ ಭವ.

ಸಂಸ್ಕಾರವಂತು ಅಂತ್ಯದವರೆಗೂ ಕೆಲವರಿಗೆ ದಾಸಿಯಾಗಿ ಇರುತ್ತದೆ, ಕೆಲವರಿಗೆ ರಾಜನಾಗಿರುತ್ತದೆ. ಸಂಸ್ಕಾರವು ಬದಲಾಗಲಿ ಎಂಬ ನಿರೀಕ್ಷಣೆ ಮಾಡಬಾರದು. ಆದರೆ ನನ್ನ ಮೇಲೆ ಯಾರ ಪ್ರಭಾವವೂ ಬೀಳಬಾರದು ಏಕೆಂದರೆ ಒಂದಂತು ಪ್ರತಿಯೊಬ್ಬರ ಸಂಸ್ಕಾರವು ಭಿನ್ನವಾಗಿದೆ, ಇನ್ನೊಂದು-ಮಾಯೆಯ ರೂಪವಾಗಿಯೂ ಬರುತ್ತದೆ ಆದ್ದರಿಂದ ಯಾವುದೇ ಮಾತಿನ ನಿರ್ಣಯ ಮಾಡುತ್ತೀರಿ ಎಂದರೆ, ಮರ್ಯಾದೆಯ ಗೆರೆಯೊಳಗಿದ್ದು ಮಾಡಿರಿ, ಭಿನ್ನ-ಭಿನ್ನ ಸಂಸ್ಕಾರ ಇದ್ದರೂ ಘರ್ಷಣೆ ಆಗಬಾರದು. ಇದಕ್ಕಾಗಿ ಜ್ಞಾನಪೂರ್ಣ ಆಗಿದ್ದು ಕಮಲಪುಷ್ಪ ಸಮಾನ ಭಿನ್ನ ಅಥವಾ ಸಾಕ್ಷಿಯಾಗಿರಿ.

ಸ್ಲೋಗನ್:
ಹಠ ಅಥವಾ ಪರಿಶ್ರಮ ಪಡುವ ಬದಲು ರಮಣೀಕತೆಯ ಪುರುಷಾರ್ಥವನ್ನು ಮಾಡಿರಿ.


ಮುರಳಿ ಪ್ರಶ್ನೆಗಳು -

1. ಯಾವ ಸ್ನೇಹ ವಿಶ್ವವನ್ನು ಸ್ನೇಹದ ಸೂತ್ರದಲ್ಲಿ ಕಟ್ಟಿದೆ?

2. ಈಶ್ವರೀಯ ಸ್ನೇಹ ಎಂತಹ ಅದ್ಬುತ (ಕಮಾಲ) ವನ್ನು ಮಾಡುತ್ತದೆ?

3. ಸ್ನೇಹವು ಯಾವ ರೀತಿ ಸಹಯೋಗಿಯಿಂದ ಸಹಜಯೋಗಿಯನ್ನಾಗಿ ಮಾಡಿ ಬಿಡುತ್ತದೆ?

4. ಈಶ್ವರೀಯ ಪ್ರೀತಿ, ಅಲೌಕಿಕ ಸ್ನೇಹ, ನಿಸ್ವಾರ್ಥ ಸ್ನೇಹ ಸ್ವತಃವಾಗಿ ಏನನ್ನು ಸಿದ್ಧ ಮಾಡುತ್ತದೆ?

5. ಸರ್ವರ ಸಹಯೋಗದ ಪರಿಣಾಮವೇನು?

6. ಪ್ರತ್ಯಕ್ಷತೆಯ ಪರದೆ ಯಾವಾಗ ತೆಗೆಯಲಾಗುವುದು?

7. ಎಲ್ಲರಿಗೆ ಪರಿವರ್ತನೆಯ ಪ್ರೇರಣೆ ಸ್ವತಃವಾಗಿ ಸಿಗುತ್ತದೆ?

8. ಶಾಸ್ತ್ರ ಪ್ರಮಾಣಕ್ಕಿಂತಲೂ ದೊಡ್ಡ ಪ್ರಮಾಣ ಯಾವುದಾಗಿದೆ?

9. ಸೇವಾ ಭಾವದಲ್ಲಿ ಯಾವ ಭಾವ ಬಂದರೆ ಅದು ಸೇವಾ ಭಾವವಾಗುವುದಿಲ್ಲ?

10. ಭಿನ್ನ-ಭಿನ್ನ ಸಂಸ್ಕಾರಗಳಿದ್ದರೂ ಪರಸ್ಪರ ಘರ್ಷಣೆಯಾಗದಿರಲು ಯಾವ ವಿಶೇಷತೆಯನ್ನು ನಾವು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು?