08.11.23 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ – ದೇಹ
ಸಹಿತವಾಗಿ ಇದೆಲ್ಲವೂ ಸಮಾಪ್ತಿಯಾಗುವುದಿದೆ ಆದ್ದರಿಂದ ನೀವು ಹಳೆಯ ಪ್ರಪಂಚದ ಸಮಾಚಾರವನ್ನು ಕೇಳುವ
ಅವಶ್ಯಕತೆಯಿಲ್ಲ, ನೀವು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ”
ಪ್ರಶ್ನೆ:
ಶ್ರೀಮತಕ್ಕಾಗಿ
ಯಾವ ಗಾಯನವಿದೆ? ಶ್ರೀಮತದಂತೆ ನಡೆಯುವವರ ಲಕ್ಷಣಗಳನ್ನು ತಿಳಿಸಿ?
ಉತ್ತರ:
ಶ್ರೀಮತಕ್ಕೋಸ್ಕರ ಗಾಯನವಿದೆ - ಬಾಬಾ, ತಾವು ಏನನ್ನು ತಿನ್ನಿಸುವಿರೋ, ಏನನ್ನು ತೊಡಿಸುವಿರೋ,
ಎಲ್ಲಿ ಕುಳ್ಳರಿಸುವಿರೋ....... , ಅದನ್ನೇ ಮಾಡುತ್ತೇವೆ. ಶ್ರೀಮತದಂತೆ ನಡೆಯುವ ಮಕ್ಕಳು ತಂದೆಯ
ಪ್ರತಿಯೊಂದು ಆಜ್ಞೆಯನ್ನು ಪಾಲನೆ ಮಾಡುತ್ತಾರೆ, ಅವರಿಂದ ಸದಾ ಶ್ರೇಷ್ಠ ಕರ್ಮಗಳಾಗುತ್ತವೆ. ಅವರು
ಎಂದೂ ಸಹ ಶ್ರೀಮತದಲ್ಲಿ ತಮ್ಮ ಮನಮತವನ್ನು ಬೆರೆಸುವುದಿಲ್ಲ. ಅವರಲ್ಲಿ ಸತ್ಯ ಮತ್ತು ಅಸತ್ಯದ
ತಿಳುವಳಿಕೆಯಿರುತ್ತದೆ.
ಗೀತೆ:
ಬದುಕಲು ನಿನ್ನ
ನಾಮವೊಂದೇ ಆಶ್ರಯವಾಯಿತು ಪ್ರಭು....
ಓಂ ಶಾಂತಿ.
ಈ ಗೀತೆ ಯಾರದ್ದಾಗಿದೆ? ಮಕ್ಕಳದು. ಕೆಲವೊಂದು ಗೀತೆಗಳು ಈ ರೀತಿಯೂ ಇರುತ್ತವೆ ಯಾವುದರಲ್ಲಿ ತಂದೆಯು
ಮಕ್ಕಳಿಗೆ ತಿಳಿಸುತ್ತಾರೆ. ಆದರೆ ಈ ಗೀತೆಯಲ್ಲಿ ಮಕ್ಕಳು ಹೇಳುತ್ತಾರೆ - ಈಗಂತೂ ನಾವು
ಅರಿತುಕೊಂಡೆವು, ಆದರೆ ಇದು ಎಂತಹ ಸುಳ್ಳು ಪ್ರಪಂಚ, ಸುಳ್ಳು ಬಂಧನವಾಗಿದೆ ಎಂದು ಪ್ರಪಂಚದವರಿಗೆ
ಗೊತ್ತಿಲ್ಲ. ಇಲ್ಲಿ ಎಲ್ಲರೂ ದುಃಖಿಯಾಗಿರುವ ಕಾರಣವೇ ಈಶ್ವರನನ್ನು ನೆನಪು ಮಾಡುತ್ತಾರೆ.
ಸತ್ಯಯುಗದಲ್ಲಂತೂ ಈಶ್ವರನೊಂದಿಗೆ ಮಿಲನ ಮಾಡುವ ಮಾತೇ ಇರುವುದಿಲ್ಲ. ಇಲ್ಲಿ ದುಃಖವಿದೆ ಆದ್ದರಿಂದ
ಆತ್ಮಗಳಿಗೆ ತಂದೆಯ ನೆನಪಾಗುತ್ತದೆ. ಆದರೆ ನಾಟಕದನುಸಾರ ಯಾವಾಗ ಸ್ವಯಂ ತಂದೆಯೇ ಬರುತ್ತಾರೆಯೋ ಆಗಲೇ
ಮಿಲನ ಮಾಡುತ್ತಾರೆ. ಉಳಿದಂತೆ ಯಾರೆಲ್ಲಾ ಪುರುಷಾರ್ಥ ಮಾಡುತ್ತಾರೋ ಅದೆಲ್ಲವೂ ವ್ಯರ್ಥವಾಗಿದೆ
ಏಕೆಂದರೆ ಅವರು ಈಶ್ವರನನ್ನು ಸರ್ವವ್ಯಾಪಿಯೆಂದು ನಂಬುತ್ತಾರೆ. ಈಶ್ವರನ ಮಾರ್ಗವನ್ನು ತಪ್ಪಾಗಿ
ತಿಳಿಸುತ್ತಾರೆ. ಒಂದುವೇಳೆ ನಾವು ಈಶ್ವರ ಮತ್ತು ಅವರ ರಚನೆಯ ಆದಿ-ಮಧ್ಯ-ಅಂತ್ಯವನ್ನು
ತಿಳಿದುಕೊಂಡಿಲ್ಲವೆಂದು ಅವರು ಹೇಳುತ್ತಾರೆಂದರೆ ಅವರು ಹೇಳುವುದು ಸತ್ಯವೆಂದರ್ಥ. ಮೊದಲು ಋಷಿ-ಮುನಿ
ಮುಂತಾದವರು ಸತ್ಯವನ್ನೇ ಹೇಳುತ್ತಿದ್ದರು, ಆ ಸಮಯದಲ್ಲಿ ರಜೋಗುಣಿಯಾಗಿದ್ದರು. ಅದಕ್ಕೆ ಅಸತ್ಯದ
ಪ್ರಪಂಚವೆಂದು ಹೇಳಲಾಗುವುದಿಲ್ಲ. ಅಸತ್ಯದ ಪ್ರಪಂಚವೆಂದು ನರಕ, ಕಲಿಯುಗದ ಅಂತ್ಯಕ್ಕೆ
ಹೇಳಲಾಗುತ್ತದೆ. ಸಂಗಮಯುಗದಲ್ಲಿ ಹೇಳುತ್ತಾರೆ - ಇದು ನರಕವಾಗಿದೆ, ಅದು ಸ್ವರ್ಗವಾಗಿದೆ.
ದ್ವಾಪರಯುಗಕ್ಕೆ ನರಕವೆಂದು ಹೇಳಲಾಗುವುದಿಲ್ಲ, ಆ ಸಮಯದಲ್ಲಿ ರಜೋಪ್ರಧಾನ ಬುದ್ಧಿಯಿರುತ್ತದೆ, ಈಗ
ತಮೋಪ್ರಧಾನವಾಗಿದೆ ಆದುದರಿಂದ ನರಕ ಮತ್ತು ಸ್ವರ್ಗವೆಂದು ಸಂಗಮದಲ್ಲಿ ಬರೆಯುತ್ತಾರೆ. ಇಂದು
ನರಕವಿದೆ, ನಾಳೆ ಸ್ವರ್ಗವಾಗುತ್ತದೆ. ಇದೆಲ್ಲವನ್ನೂ ತಂದೆಯೇ ಬಂದು ತಿಳಿಸುತ್ತಾರೆ ಆದರೆ ಈ
ಸಮಯದಲ್ಲಿ ಕಲಿಯುಗದ ಅಂತ್ಯವೆಂದು ಪ್ರಪಂಚಕ್ಕೆ ತಿಳಿದಿಲ್ಲ. ಎಲ್ಲರೂ ತಮ್ಮ-ತಮ್ಮ ಲೆಕ್ಕಾಚಾರವನ್ನು
ಸಮಾಪ್ತಿ ಮಾಡಿ ಅಂತ್ಯದಲ್ಲಿ ಸತೋಪ್ರಧಾನವಾಗುತ್ತಾರೆ. ನಂತರ ಸತೋ, ರಜೋ, ತಮೋದಲ್ಲಿ ಬರಲೇಬೇಕು.
ಯಾರದು ಒಂದೆರಡು ಜನ್ಮಗಳ ಪಾತ್ರವಿದೆಯೋ ಅವರೂ ಸಹ ಸತೋ, ರಜೋ, ತಮೋದಲ್ಲಿ ಬರುತ್ತಾರೆ, ಆದರೆ ಅವರ
ಪಾತ್ರವು ಸ್ವಲ್ಪ ಸಮಯದ್ದಾಗಿರುತ್ತದೆ. ಇದರಲ್ಲಿ ಬಹಳ ತಿಳುವಳಿಕೆ ಬೇಕು. ಪ್ರಪಂಚದಲ್ಲಿ ಅನೇಕ
ಮತವುಳ್ಳಂತಹ ಮನುಷ್ಯರಿರುತ್ತಾರೆ, ಎಲ್ಲರದೂ ಒಂದೇ ಮತವಾಗುವುದಿಲ್ಲ. ಪ್ರತಿಯೊಬ್ಬರದು
ತಮ್ಮ-ತಮ್ಮದೇ ಆದ ಧರ್ಮವಿದೆ. ಮತವೂ ತಮ್ಮ-ತಮ್ಮದೇ ಆಗಿದೆ ಆದರೆ ತಂದೆಯ ಕರ್ತವ್ಯವೇ ಬೇರೆಯಾಗಿದೆ.
ಪ್ರತಿಯೊಂದು ಆತ್ಮದ್ದೂ ಬೇರೆಯಾಗಿರುತ್ತದೆ, ಧರ್ಮವೂ ಬೇರೆಯಾಗಿರುತ್ತದೆ ಮತ್ತು ತಿಳಿಸಿಕೊಡುವುದೂ
ಬೇರೆಯಾಗಿರುತ್ತದೆ. ನಾಮ, ರೂಪ, ದೇಶ, ಕಾಲ ಎಲ್ಲರದೂ ಬೇರೆಯಾಗಿದೆ. ಇವರು ಇಂತಹ ಧರ್ಮದವರೆಂದು
ನೋಡುವುದರಿಂದಲೇ ತಿಳಿಯುತ್ತದೆ. ಹಿಂದೂ ಧರ್ಮವೆಂದೂ ಎಲ್ಲರೂ ಹೇಳುತ್ತಾರೆ ಆದರೆ ಅವರಲ್ಲಿಯೂ
ಎಲ್ಲರೂ ಭಿನ್ನ-ಭಿನ್ನವಾಗಿದ್ದಾರೆ. ಕೆಲವರು ಆರ್ಯ ಸಮಾಜಿಗಳು, ಕೆಲವರು ಸನ್ಯಾಸಿಗಳು, ಕೆಲವರು
ಬ್ರಹ್ಮಾ ಸಮಾಜಿಗಳು. ಸನ್ಯಾಸಿಗಳು ಮುಂತಾದವರು ಯಾರೆಲ್ಲಾ ಇದ್ದಾರೆಯೋ ಅವರನ್ನು ಹಿಂದೂ
ಧರ್ಮದವರೆಂದು ಹೇಳುತ್ತಾರೆ. ನಾವು ಬ್ರಾಹ್ಮಣ ಧರ್ಮದವರೆಂದು ಅಥವಾ ದೇವತಾ ಧರ್ಮದವರೆಂದು ಬರೆದರೂ
ಸಹ ಪ್ರಪಂಚದವರು ಹಿಂದೂ ಧರ್ಮದವರೆಂದು ಬರೆಯುತ್ತಾರೆ ಏಕೆಂದರೆ ಅವರ ಬಳಿ ಮತ್ತ್ಯಾವುದೇ
ವಿಭಾಗಗಳಿಲ್ಲ. ಆದ್ದರಿಂದ ಪ್ರತಿಯೊಬ್ಬರ ಫಾರ್ಮ್ ಬೇರೆ-ಬೇರೆಯಾಗಿದ್ದರೆ ಅದರಿಂದ ತಿಳಿಯುತ್ತದೆ.
ಮತ್ತ್ಯಾವುದೇ ಧರ್ಮದವರಿದ್ದರೆ ಈ ಮಾತುಗಳನ್ನು ಒಪ್ಪುವುದಿಲ್ಲ. ಆದುದರಿಂದ ಅವರಿಗೆ ಒಟ್ಟಿಗೆ
ತಿಳಿಸುವುದು ಕಷ್ಟವಾಗುತ್ತದೆ ಏಕೆಂದರೆ ಇವರು ತಮ್ಮ ಧರ್ಮದ ಮಹಿಮೆ ಮಾಡಿಕೊಳ್ಳುತ್ತಿದ್ದಾರೆ,
ಇವರಲ್ಲಿ ದ್ವೈತವಿದೆ ಎಂದು ಅವರು ತಿಳಿಯುತ್ತಾರೆ. ತಿಳಿಸುವಂತಹ ಮಕ್ಕಳು ನಂಬರ್ವಾರ್ ಇದ್ದಾರೆ.
ಎಲ್ಲರೂ ಒಂದೇ ಸಮನಾಗಿರುವುದಿಲ್ಲ ಆದ್ದರಿಂದಲೇ ಮಹಾರಥಿಗಳನ್ನು ಕರೆಸುತ್ತಾರೆ.
ನನ್ನನ್ನು ನೆನಪು ಮಾಡಿ,
ಶ್ರೀಮತದಂತೆ ನಡೆಯಿರಿ ಎಂದು ತಂದೆಯು ತಿಳಿಸಿದ್ದಾರೆ. ಇದರಲ್ಲಿ ಪ್ರೇರಣೆ ಮುಂತಾದುವುಗಳ ಮಾತಿಲ್ಲ.
ಒಂದುವೇಳೆ ಪ್ರೇರಣೆಯಿಂದ ಕೆಲಸವಾಗುವಂತಿದ್ದರೆ ತಂದೆಯು ಬರುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಆದರೆ
ಶಿವತಂದೆಯಂತೂ ಈಗ ಇಲ್ಲಿದ್ದಾರೆ ಅಂದಾಗ ಅವರಿಗೆ ಪ್ರೇರಣೆಯ ಅವಶ್ಯಕತೆಯೇನಿದೆ! ಇಲ್ಲಂತೂ ತಂದೆಯ
ಮತದಂತೆ ನಡೆಯಬೇಕಾಗುತ್ತದೆ. ಪ್ರೇರಣೆಯ ಮಾತಿಲ್ಲ. ಕೆಲಕೆಲವರು ಸಂದೇಶಿಗಳು ಸಂದೇಶವನ್ನು
ತರುತ್ತಾರೆ ಆದರೆ ಅದರಲ್ಲಿಯೂ ಸಹ ಬಹಳ ಮಿಶ್ರವಾಗಿಬಿಡುತ್ತದೆ. ಎಲ್ಲಾ ಸಂದೇಶಿಯರು ಒಂದೇ
ರೀತಿಯಿರುವುದಿಲ್ಲ. ಮಾಯೆಯು ಮಧ್ಯೆ ಪ್ರವೇಶ ಮಾಡುತ್ತದೆ. ಆಗ ಎರಡನೇ ಸಂದೇಶಿಯಿಂದ ಪ್ರಮಾಣೀಕರಿಸ
ಬೇಕು ಕೆಲವರು ನನ್ನಲ್ಲಿ ಬಾಬಾ ಬರುತ್ತಾರೆ, ಮಮ್ಮಾ ಬರುತ್ತಾರೆ ಎಂದು ಹೇಳುತ್ತಾರೆ ನಂತರ ಅವರು
ತಮ್ಮದೇ ಬೇರೆ ಸೇವಾಕೇಂದ್ರವನ್ನು ತೆರೆದು ಕುಳಿತುಕೊಳ್ಳುತ್ತಾರೆ. ಮಾಯೆಯ ಪ್ರವೇಶವಾಗುತ್ತದೆ, ಇದು
ಬಹಳ ತಿಳಿದುಕೊಳ್ಳುವ ವಿಚಾರವಾಗಿದೆ. ಮಕ್ಕಳು ಬಹಳ ಬುದ್ಧಿವಂತರಾಗಬೇಕು. ಯಾರು ಸೇವಾಧಾರಿ
ಮಕ್ಕಳಿರುತ್ತಾರೆಯೋ ಅವರೇ ಈ ಮಾತುಗಳನ್ನು ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಯಾರು ಶ್ರೀಮತದಂತೆ
ನಡೆಯುವುದಿಲ್ಲವೋ ಅವರು ಈ ಮಾತುಗಳನ್ನು ತಿಳಿದುಕೊಳ್ಳುವುದಿಲ್ಲ. ತಾವು ಏನು ತಿನ್ನಿಸುತ್ತೀರೋ,
ಏನನ್ನು ತೊಡಿಸುತ್ತೀರೋ ಅದನ್ನೇ ಮಾಡುತ್ತೇವೆ ಎಂಬುದು ಶ್ರೀಮತಕ್ಕಾಗಿ ಗಾಯನವಿದೆ. ಈ ರೀತಿ
ಕೆಲವರಂತೂ ತಂದೆಯ ಮತದಂತೆ ನಡೆಯುತ್ತಾರೆ ಮತ್ತೆ ಕೆಲವರು ಬೇರೆಯವರ ಮತದ ಪ್ರಭಾವದಲ್ಲಿ ಬರುತ್ತಾರೆ.
ಏನಾದರೂ ವಸ್ತುವು ಸಿಗಲಿಲ್ಲವೆಂದರೆ, ಏನಾದರೂ ಇಷ್ಟವಾಗಲಿಲ್ಲವೆಂದರೆ ತಕ್ಷಣ ಬೇಸರ
ಮಾಡಿಕೊಳ್ಳುತ್ತಾರೆ. ಎಲ್ಲರೂ ಸುಪುತ್ರರೇ ಇರಲು ಸಾಧ್ಯವೆ! ಜಗತ್ತಿನಲ್ಲಿ ಅನೇಕ ಮತದವರಿದ್ದಾರೆ,
ಅಜಾಮಿಳನಂತಹ ಪಾಪಾತ್ಮರು, ಗಣಿಕೆಯರು ಅನೇಕರಿದ್ದಾರೆ.
ಈಶ್ವರ ಸರ್ವವ್ಯಾಪಿ ಎಂದು
ಹೇಳುವುದು ತಪ್ಪೆಂದು ತಾವು ತಿಳಿಸಬೇಕಾಗುತ್ತದೆ. ಪಂಚವಿಕಾರಗಳು ಸರ್ವವ್ಯಾಪಿಯಾಗಿದೆ ಆದ್ದರಿಂದ
ತಂದೆಯು ಹೇಳುತ್ತಾರೆ - ಇದು ಅಸುರೀ ಜಗತ್ತಾಗಿದೆ. ಸತ್ಯಯುಗದಲ್ಲಿ ಪಂಚವಿಕಾರಗಳಿರುವುದಿಲ್ಲ.
ಶಾಸ್ತ್ರಗಳಲ್ಲಿ ಇಂತಿಂತಹ ಮಾತು ಈ ರೀತಿಯಿದೆ ಎಂದೆಲ್ಲಾ ಹೇಳುತ್ತಾರೆ ಆದರೆ ಶಾಸ್ತ್ರಗಳನ್ನು
ಮನುಷ್ಯರು ಮಾಡಿದ್ದಾಗಿದೆ. ಮನುಷ್ಯರು ಶ್ರೇಷ್ಠರೋ ಅಥವಾ ಶಾಸ್ತ್ರವೋ? ಹೇಳುವಂತಹವರು
ಶ್ರೇಷ್ಠರಲ್ಲವೆ. ಮನುಷ್ಯರು ಬರೆಯುತ್ತಾರೆ. ವ್ಯಾಸರೂ ಸಹ ಬರೆದರು, ಅವರೂ ಮನುಷ್ಯರಲ್ಲವೆ. ಇಲ್ಲಿ
ನಿರಾಕಾರ ತಂದೆಯು ಕುಳಿತು ತಿಳಿಸುತ್ತಾರೆ - ಧರ್ಮಸ್ಥಾಪಕರು ಬಂದು ಏನೆಲ್ಲಾ ಹೇಳಿದರು ಅದನ್ನು
ನಂತರ ಶಾಸ್ತ್ರವನ್ನಾಗಿ ಮಾಡಿದ್ದಾರೆ. ಹೇಗೆ ಗುರುನಾನಕ್ ಹೇಳಿದರು ನಂತರ ಗ್ರಂಥವಾಗುತ್ತದೆ.
ಅಂದಮೇಲೆ ಯಾರು ಹೇಳಿದರೋ ಅವರ ಹೆಸರಾಯಿತು. ಗುರುನಾನಕ್ ಸಹ ಸರ್ವರ ತಂದೆ ಅವರೊಬ್ಬರೆ ಎಂದು ಮಹಿಮೆ
ಹಾಡಿದ್ದಾರೆ. ತಂದೆಯು ಹೇಳುತ್ತಾರೆ - ಹೋಗಿ ಧರ್ಮ ಸ್ಥಾಪನೆ ಮಾಡಿ ಎಂದು. ಈ ಬೇಹದ್ದಿನ ತಂದೆಯು
ಹೇಳುತ್ತಾರೆ, ನನ್ನನ್ನು ಯಾರೂ ಕಳುಹಿಸುವುದಿಲ್ಲ. ಶಿವತಂದೆಯು ಕುಳಿತು ಸ್ವಯಂ ಹೇಳುತ್ತಾರೆ, ಅವರು
ಸಂದೇಶವನ್ನು ತರುವಂತಹವರು, ನನ್ನನ್ನು ಯಾರೂ ಕಳುಹಿಸುವುದಿಲ್ಲ. ನನ್ನನ್ನು ಪೈಗಂಭರ್ ಮೆಸೆಂಜರ್
ಎಂದು ಹೇಳುವುದಿಲ್ಲ. ನಾನು ಮಕ್ಕಳಿಗೆ ಸುಖ-ಶಾಂತಿಯನ್ನು ಕೊಡಲು ಬರುತ್ತೇನೆ. ನನಗೆ ಯಾರೂ
ಹೇಳಲಿಲ್ಲ ನಾನೇ ಸ್ವಯಂ ಮಾಲಿಕನಾಗಿದ್ದೇನೆ, ಮಾಲಿಕನಿಗೂ ಮಾನ್ಯತೆ ಕೊಡುವವರಿರುತ್ತಾರೆ ಆದರೆ
ಮಾಲೀಕ ಎಂಬ ಅರ್ಥವನ್ನು ತಿಳಿದುಕೊಂಡಿದ್ದೀರಾ ಎಂದು ಅವರನ್ನು ಕೇಳಬೇಕು. ಅವರು ಮಾಲಿಕನಾಗಿದ್ದಾರೆ,
ನಾವು ಅವರ ಮಕ್ಕಳಾಗಿದ್ದೇವೆ ಅಂದಾಗ ಅವರಿಂದ ಅವಶ್ಯವಾಗಿ ಆಸ್ತಿ ಸಿಗಬೇಕು. ನನ್ನ ಬಾಬಾ ಎಂದು
ಮಕ್ಕಳು ಹೇಳುತ್ತಾರೆ. ಅಂದಮೇಲೆ ತಂದೆಯ ಸಂಪತ್ತಿಗೆ ನೀವು ಮಾಲಿಕರು. “ನನ್ನ ಬಾಬಾ” ಎಂದು ಮಕ್ಕಳೇ
ಹೇಳುತ್ತಾರೆ ಅಂದಮೇಲೆ ತಂದೆಯ ಸಂಪತ್ತಿಗೂ ಸಹ ಈಗ ನಾವು ಏನು ಹೇಳುತ್ತೇವೆ? ನಮ್ಮ ಶಿವಬಾಬಾ.
ತಂದೆಯೂ ಸಹ ನನ್ನ ಮಕ್ಕಳೇ ಎಂದು ಹೇಳುತ್ತಾರೆ. ತಂದೆಯಿಂದ ಮಕ್ಕಳಿಗೆ ಆಸ್ತಿಯು ಸಿಗುತ್ತದೆ.
ತಂದೆಯ ಬಳಿ ಆಸ್ತಿಯಿರುತ್ತದೆ. ಬೇಹದ್ದಿನ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ, ಭಾರತವಾಸಿಗಳಿಗೂ
ಆಸ್ತಿಯು ಯಾರಿಂದ ಸಿಗುತ್ತದೆ? ಶಿವಬಾಬಾರವರಿಂದ. ಶಿವಜಯಂತಿಯನ್ನೂ ಆಚರಿಸುತ್ತಾರೆ. ಶಿವಜಯಂತಿಯ
ನಂತರ ಕೃಷ್ಣಜಯಂತಿಯು ಬರುತ್ತದೆ ನಂತರ ರಾಮಜಯಂತಿ ಅಷ್ಟೆ, ಮಮ್ಮಾ-ಬಾಬಾರವರ ಜಯಂತಿ ಹಾಗೂ ಜಗದಂಬೆಯ
ಜಯಂತಿಯನ್ನು ಯಾರೂ ಹಾಡುವುದಿಲ್ಲ. ಶಿವಜಯಂತಿಯ ನಂತರ ರಾಧಾ-ಕೃಷ್ಣರ ಜಯಂತಿ ನಂತರ ರಾಮ-ಸೀತೆಯ
ಜಯಂತಿ. ಯಾವಾಗ ಶಿವಬಾಬಾರವರು ಬರುತ್ತಾರೆಯೋ ಆಗ ಶೂದ್ರರ ರಾಜ್ಯ ವಿನಾಶವಾಗುತ್ತದೆ. ಈ ರಹಸ್ಯವನ್ನೂ
ಸಹ ಯಾರೂ ತಿಳಿದುಕೊಳ್ಳುವುದಿಲ್ಲ. ತಂದೆಯು ಕುಳಿತು ತಿಳಿಸುತ್ತಾರೆ - ಅವರು ಖಂಡಿತ ಬರುತ್ತಾರೆ.
ತಂದೆಯನ್ನು ಏಕೆ ಕರೆಯುತ್ತಾರೆ? ಶ್ರೀಕೃಷ್ಣಪುರಿಯ ಸ್ಥಾಪನೆ ಮಾಡಲು. ತಮಗೆ ಗೊತ್ತಿದೆ ಖಂಡಿತ
ಶಿವಜಯಂತಿಯು ಆಗುತ್ತದೆ. ಶಿವಬಾಬಾರವರು ಜ್ಞಾನವನ್ನು ಕೊಡುತ್ತಿದ್ದಾರೆ, ಆದಿಸನಾತನ ದೇವಿ-ದೇವತಾ
ಧರ್ಮವು ಸ್ಥಾಪನೆಯಾಗುತ್ತಿದೆ. ಶಿವಜಯಂತಿಯು ಅತಿ ದೊಡ್ಡ ಜಯಂತಿಯಾಗಿದೆ ನಂತರ
ಬ್ರಹ್ಮಾ-ವಿಷ್ಣು-ಶಂಕರ. ಈಗ ಪ್ರಜಾಪಿತ ಬ್ರಹ್ಮಾ ಮನುಷ್ಯ ಸೃಷ್ಟಿಯಲ್ಲಿದ್ದಾರೆ ನಂತರ ರಚನೆಯಲ್ಲಿ
ಲಕ್ಷ್ಮಿ-ನಾರಾಯಣರು ಮುಖ್ಯವಾಗಿದ್ದಾರೆ. ಅಂದಮೇಲೆ ಶಿವ ಮಾತಾಪಿತನಾಗಿದ್ದಾರೆ. ಮತ್ತೆ ಬ್ರಹ್ಮಾ
ಹಾಗೂ ಜಗದಂಬೆಯೂ ಮಾತಾಪಿತರಾಗಿದ್ದಾರೆ. ಇದು ತಿಳಿದುಕೊಂಡು ಧಾರಣೆ ಮಾಡುವ ವಿಚಾರವಾಗಿದೆ.
ಮೊಟ್ಟಮೊದಲು ತಿಳಿಸಬೇಕು - ತಂದೆಯು ಪರಮಪಿತ ಪರಮಾತ್ಮ ಪತಿತರನ್ನು ಪಾವನ ಮಾಡಲು ಬರುತ್ತಾರೆ. ಅವರು
ನಾಮ, ರೂಪದಿಂದ ಭಿನ್ನವಾಗಿದ್ದರೆ ಅವರ ಜಯಂತಿ ಹೇಗೆ ಆಗಲು ಸಾಧ್ಯ. ಭಗವಂತನಿಗೆ
ತಂದೆಯೆನ್ನಲಾಗುತ್ತದೆ. ತಂದೆಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆತ್ಮ, ಪರಮಾತ್ಮ ಈಗ ಇಬ್ಬರೂ
ನಿರಾಕಾರರಾಗಿದ್ದಾರೆ. ಆತ್ಮಗಳಿಗೆ ಸಾಕಾರಿ ಶರೀರ ಸಿಗುತ್ತದೆ. ಇದು ಅರ್ಥ ಮಾಡಿಕೊಳ್ಳುವ
ವಿಚಾರವಾಗಿದೆ. ಯಾರು ಸ್ವಲ್ಪವೂ ಶಾಸ್ತ್ರ ಇತ್ಯಾದಿಗಳನ್ನು ಓದಿಲ್ಲವೋ ಅವರಿಗೆ ಇನ್ನೂ ಸಹಜವಾಗಿದೆ.
ಆತ್ಮಗಳ ತಂದೆ ಆ ಪರಮಪಿತ ಪರಮಾತ್ಮ ಸ್ವರ್ಗದ ಸ್ಥಾಪನೆ ಮಾಡುತ್ತಾರೆ. ಸ್ವರ್ಗದಲ್ಲಿ
ರಾಜ್ಯಭಾಗ್ಯವಿರುತ್ತದೆ. ಅಂದಮೇಲೆ ಅವರು ಸಂಗಮಯುಗದಲ್ಲಿಯೇ ಬರಬೇಕಾಗುತ್ತದೆ ಸತ್ಯಯುಗದಲ್ಲಿ ಬರಲು
ಸಾಧ್ಯವಿಲ್ಲ. ಆ ಪ್ರಾಲಬ್ಧ 21 ಜನ್ಮಗಳ ಆಸ್ತಿ ಸಂಗಮಯುಗದಲ್ಲಿಯೇ ಸಿಗುತ್ತದೆ. ಇದು ಬ್ರಾಹ್ಮಣರ
ಸಂಗಮಯುಗವಾಗಿದೆ. ಬ್ರಾಹ್ಮಣರು ಶ್ರೇಷ್ಠರು, ನಂತರ ದೇವತೆಗಳ ಯುಗವಾಗಿದೆ. ಪ್ರತಿಯೊಂದು ಯುಗವೂ
1250 ವರ್ಷಗಳಾಗಿವೆ. ಈಗ ಬ್ರಾಹ್ಮಣ, ದೇವತಾ, ಕ್ಷತ್ರಿಯ - ಈ ಮೂರೂ ಧರ್ಮಗಳು ಸ್ಥಾಪನೆಯಾಗುತ್ತವೆ
ಮತ್ತೆ ಅರ್ಧಕಲ್ಪ ಯಾವುದೇ ಧರ್ಮವಿರುವುದಿಲ್ಲ. ಸೂರ್ಯವಂಶಿ, ಚಂದ್ರವಂಶದವರು ಪೂಜ್ಯರಾಗಿದ್ದರು
ಮತ್ತೆ ಪೂಜಾರಿಗಳಾಗುತ್ತಾರೆ.ಆ ಬ್ರಾಹ್ಮಣರು ಅನೇಕ ಪ್ರಕಾರದವರಿರುತ್ತಾರೆ.
ಈಗ ತಾವು ಒಳ್ಳೆಯ
ಕಾರ್ಯವನ್ನು ಮಾಡುತ್ತಿದ್ದೀರಿ ನಂತರ ಸತ್ಯಯುಗದಲ್ಲಿ ಪ್ರಾಲಬ್ಧ ಪಡೆಯುತ್ತೀರಿ. ತಂದೆಯು ಒಳ್ಳೆಯ
ಕರ್ಮವನ್ನು ಕಲಿಸುತ್ತಾರೆ. ತಮಗೆ ಗೊತ್ತಿದೆ - ನಾವು ಶ್ರೀಮತದಂತೆ ಎಂತಹ ಕರ್ಮವನ್ನು
ಮಾಡುತ್ತೇವೆಯೋ ಬೇರೆಯವರನ್ನೂ ನಮ್ಮ ಸಮಾನ ಮಾಡಿಕೊಳ್ಳುತ್ತೇವೆಯೋ ಹಾಗೆಯೇ ಅದರ ಪ್ರಾಲಬ್ದವೂ
ಸಿಗುತ್ತದೆ. ಈಗ ಪೂರ್ಣ ರಾಜಧಾನಿಯು ಸ್ಥಾಪನೆಯಾಗುತ್ತದೆ. ಆದಿಸನಾತನ ದೇವಿ-ದೇವತಾ ಧರ್ಮದ
ರಾಜಧಾನಿಯಾಗುತ್ತದೆ. ಇದು ಪ್ರಜೆಗಳ ಮೇಲೆ ಪ್ರಜಾರಾಜ್ಯವಾಗಿದೆ, ಪಂಚಾಯಿತಿ ರಾಜ್ಯವಾಗಿದೆ, ಅನೇಕ
ಪಂಚರಿರುತ್ತಾರೆ. ಇಲ್ಲವಾದರೆ 5 ಜನ ಪಂಚರಿರುತ್ತಾರೆ. ಇಲ್ಲಿಯಂತೂ ಎಲ್ಲರೂ ಪಂಚರೇ ಇಂದು
ಇರುತ್ತಾರೆ ನಾಳೆ ಇರುವುದಿಲ್ಲ. ಇಂದು ಮಂತ್ರಿಯಾಗಿರುತ್ತಾರೆ ನಾಳೆ ಅವರನ್ನು ಇಳಿಸಿಬಿಡುತ್ತಾರೆ.
ಒಪ್ಪಂದ ಮಾಡಿಕೊಂಡು ನಂತರ ನಿರಾಕರಿಸುತ್ತಾರೆ. ಇದು ಅಲ್ಪಕಾಲದ ಕ್ಷಣಭಂಗುರ ರಾಜ್ಯವಾಗಿದೆ.
ಯಾರನ್ನೇ ಇಳಿಸಲು ತಡ ಮಾಡುವುದಿಲ್ಲ. ಎಷ್ಟು ದೊಡ್ಡ ಜಗತ್ತಾಗಿದೆ. ಪತ್ರಿಕೆಗಳಿಂದ ಸ್ವಲ್ಪವಾದರೂ
ಗೊತ್ತಾಗುತ್ತದೆ. ಇಷ್ಟೆಲ್ಲಾ ಪತ್ರಿಕೆಗಳನ್ನು ಯಾರೂ ಓದಲು ಸಾಧ್ಯವಿಲ್ಲ. ನಮಗೆ ಈ ಜಗತ್ತಿನ
ಸಮಾಚಾರದ ಅವಶ್ಯಕತೆಯೇ ಇಲ್ಲ. ಇದಂತೂ ಗೊತ್ತಿದೆ – ದೇಹ ಸಹಿತ ಈ ಜಗತ್ತಿನದೆಲ್ಲವೂ
ಸಮಾಪ್ತಿಯಾಗುತ್ತದೆ. ಬಾಬಾ ಹೇಳುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ ಆಗ ನೀವು ನನ್ನ ಬಳಿಗೆ
ಬರುತ್ತೀರಿ. ಶರೀರ ಬಿಟ್ಟ ನಂತರ ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ ನಂತರ ಆತ್ಮವು ಅಲೆದಾಡುತ್ತದೆ.
ಆ ಸಮಯದಲ್ಲಿಯೂ ಸಹ ಲೆಕ್ಕಾಚಾರವನ್ನು ಭೋಗಿಸುತ್ತದೆ. ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ. ಒಳಗೆ
ಸಾಕ್ಷಾತ್ಕಾರ ಮಾಡಿಕೊಳ್ಳುತ್ತದೆ. ಕರ್ಮಭೋಗವನ್ನು ಭೋಗಿಸುತ್ತದೆ. ನಾನು ಎಂತಹ ಕರ್ಮವನ್ನು
ಮಾಡಿದೆನಲ್ಲ ಎಂದು ಪಶ್ಚಾತ್ತಾಪವಾಗುತ್ತದೆ. ಕೆಲವರು ಜೈಲಿನ ಪಕ್ಷಿಯಾಗಿರುತ್ತಾರೆ, ಜೈಲಿನಲ್ಲಿ
ಊಟವಾದರೂ ಸಿಗುತ್ತದೆಯಲ್ಲವೆ ಎಂದು ಹೇಳುತ್ತಾರೆ. ಹಾಗೆಂದರೆ ಅವರಿಗೆ ತಿನ್ನುವುದೊಂದೇ ಕೆಲಸ,
ಮರ್ಯಾದೆಯ ಬಗೆಗೆ ಚಿಂತೆಯಿಲ್ಲ. ತಮಗೆ ಯಾವುದೇ ಕಷ್ಟವಿಲ್ಲ. ತಂದೆಯಿದ್ದಾರೆಂದಮೇಲೆ ತಂದೆಯ
ಶ್ರೀಮತದಂತೆ ನಡೆಯಬೇಕು. ಈ ರೀತಿಯಿಲ್ಲ ಅವರು ದುಃಖವನ್ನೂ ಕೊಡುತ್ತಾರೆ ಎಂದು, ಅವರು ಸದಾ
ಸುಖದಾತರಾಗಿರುತ್ತಾರೆ. ಆಜ್ಞಾಕಾರಿ ಮಕ್ಕಳು ಬಾಬಾ ನೀವು ಏನು ಆದೇಶವನ್ನು ಕೊಡುತ್ತೀರೋ..... ಎಂದು
ಹೇಳುತ್ತಾರೆ. ತಮ್ಮ ಜೊತೆಯಲ್ಲಿಯೇ ಕುಳಿತುಕೊಳ್ಳುತ್ತೇನೆ........ ಇದು ಶಿವತಂದೆಗೋಸ್ಕರ
ಗಾಯನವಾಗಿದೆ. ಭಾಗೀರಥ ಅಥವಾ ನಂದೀಗಣ ಎಂದು ಪ್ರಸಿದ್ಧಿಯಿದೆ. ಮಾತೆಯರ ಶಿರದ ಮೇಲೆ ಕಳಸವಿಡಲಾಯಿತು
ಎಂದು ಬರೆಯಲಾಗಿದೆಯಲ್ಲವೆ. ಅವರು ಗೋವನ್ನು ತೋರಿಸುತ್ತಾರೆ, ಹೀಗೆ ಏನೆಲ್ಲಾ ಮಾತುಗಳನ್ನು
ಬರೆದಿದ್ದಾರೆ.
ಈ ಜಗತ್ತಿನಲ್ಲಿ ಯಾರೂ
ಸದಾ ಆರೋಗ್ಯವಂತರಿರಲು ಸಾಧ್ಯವಿಲ್ಲ. ಅನೇಕ ಪ್ರಕಾರದ ರೋಗಗಳಿವೆ, ಅಲ್ಲಿ ಯಾವುದೇ
ರೋಗಗಳಿರುವುದಿಲ್ಲ ಎಂದೂ ಅಕಾಲ ಮೃತ್ಯುವಾಗುವುದಿಲ್ಲ. ಸಮಯದಲ್ಲಿ ಸಾಕ್ಷಾತ್ಕಾರವಾಗುತ್ತದೆ.
ವೃದ್ಧರಿಗಂತೂ ಖುಷಿಯಾಗುತ್ತದೆ. ವೃದ್ಧರಾದಾಗ ಖುಷಿಯಿಂದ ಶರೀರ ಬಿಡುತ್ತಾರೆ. ನಾನು ಹೋಗಿ
ಮಗುವಾಗುತ್ತೇನೆ ಎಂದು ಸಾಕ್ಷಾತ್ಕಾರವಾಗುತ್ತದೆ. ತಾವು ಯುವಕರಿಗೂ ಸಹ ಅಷ್ಟೊಂದು ಖುಷಿಯಿದೆ, ನಾವು
ಶರೀರ ಬಿಟ್ಟುಹೋಗಿ ರಾಜಕುಮಾರರಾಗುತ್ತೇವೆ. ಮಗುವಾಗಿರಲಿ, ಯುವಕರಾಗಿರಲಿ, ಎಲ್ಲರೂ ಸಾಯಲೇಬೇಕು
ಅಂದಮೇಲೆ ನಾವು ಹೋಗಿ ರಾಜಕುಮಾರರಾಗುತ್ತೇವೆ ಎಂಬ ನಶೆ ಎಲ್ಲರಿಗೂ ಇರಬೇಕು. ಅಂದಮೇಲೆ ಯಾವಾಗ
ಸರ್ವೀಸ್ ಮಾಡುತ್ತೀರೋ ಆಗಲೆ ಆಗುತ್ತೀರಿ. ಈಗ ನಾವು ಹಳೆಯ ದೇಹವನ್ನು ಬಿಟ್ಟು ತಂದೆಯ ಬಳಿಗೆ
ಹೋಗುತ್ತೇವೆ. ತಂದೆಯು ಮತ್ತೆ ನಮ್ಮನ್ನು ಸ್ವರ್ಗಕ್ಕೆ ಕಳುಹಿಸಿಕೊಡುತ್ತಾರೆ ಎಂಬ ಖುಷಿಯಿರಲಿ.
ಸರ್ವೀಸ್ ಮಾಡಬೇಕು, ಮಕ್ಕಳು ಗೀತೆಯನ್ನು ಕೇಳಿದಿರಿ ಮುರುಳೀಧರ ಕೃಷ್ಣನಂತೂ ಅಲ್ಲ. ಮುರುಳಿಯಂತೂ
ಅನೇಕರ ಬಳಿ ಇರುತ್ತದೆ. ಬಹಳ ಚೆನ್ನಾಗಿ ನುಡಿಸುತ್ತಾರೆ, ಇದರಲ್ಲಿ ಮುರುಳಿಯ ಮಾತಿಲ್ಲ.
ಶ್ರೀಮತವನ್ನು ಒಬ್ಬ ತಂದೆಯೇ ಕೊಡುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಶ್ರೀಕೃಷ್ಣನಲ್ಲಿ ಈ
ಜ್ಞಾನವಿರಲಿಲ್ಲ. ಈ ಸಹಜ ರಾಜಯೋಗ ಹಾಗೂ ಜ್ಞಾನ ಕೃಷ್ಣನಲ್ಲಿರಲಿಲ್ಲ. ಕೃಷ್ಣ ರಾಜಯೋಗವನ್ನು
ಕಲಿಸಲಿಲ್ಲ. ತಂದೆಯಿಂದ ರಾಜಯೋಗವನ್ನು ಕೃಷ್ಣ ಕಲಿತುಕೊಂಡಿದ್ದನು ಎಷ್ಟು ದೊಡ್ಡ ವಿಚಾರವಾಗಿದೆ.
ಎಲ್ಲಿಯತನಕ ತಂದೆಯ ಮಗುವಾಗುವುದಿಲ್ಲವೋ ಅಲ್ಲಿಯತನಕ ಅರ್ಥವಾಗುವುದಿಲ್ಲ ಹಾಗೂ ಇದರಲ್ಲಿ
ಶ್ರೀಮತದಂತೆ ನಡೆಯುವ ಮಾತಾಗಿದೆ. ತಮ್ಮ ಮತದಂತೆ ನಡೆದರೆ ಶ್ರೇಷ್ಠ ಪದವಿ ಪಡೆಯಲು ಸಾಧ್ಯವೆ.
ತಂದೆಯನ್ನು ಯಾರು ಅರ್ಥಮಾಡಿಕೊಳ್ಳುತ್ತಾರೆಯೋ ಅವರು ತಂದೆಯ ಪರಿಚಯವನ್ನು ಅನ್ಯರಿಗೂ ಕೊಡುತ್ತಾರೆ.
ತಂದೆ ಹಾಗೂ ರಚನೆಯ ಪರಿಚಯವನ್ನು ಕೊಡಬೇಕು. ಯಾರಿಗೂ ತಂದೆಯ ಪರಿಚಯವನ್ನು ಕೊಡದಿದ್ದರೆ ಅವರು ಸ್ವಯಂ
ತಿಳಿದುಕೊಂಡಿಲ್ಲವೆಂದರ್ಥ. ತಮಗೆ ನಶೆಯೇರಿದ್ದರೆ ಬೇರೆಯವರಿಗೂ ತರಿಸಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ
ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಶ್ರೀಮತದಂತೆ
ಸದಾ ಶ್ರೇಷ್ಠ ಕರ್ಮವನ್ನು ಮಾಡಬೇಕು. ಅನ್ಯರ ಮತದ ಪ್ರಭಾವದಲ್ಲಿ ಬರಬಾರದು. ಸುಪುತ್ರರಾಗಿ
ಪ್ರತಿಯೊಂದು ಆಜ್ಞೆಯ ಪಾಲನೆಯನ್ನು ಮಾಡಬೇಕು. ಯಾವ ಮಾತು ಅರ್ಥವಾಗುವುದಿಲ್ಲವೋ ಅದನ್ನು ವಿಚಾರಣೆ
ಮಾಡಬೇಕು.
2. ನಾನು ಈ ಹಳೆಯ
ಶರೀರವನ್ನು ಬಿಟ್ಟು ರಾಜಕುಮಾರನಾಗುತ್ತೇನೆ ಎಂಬ ನಶೆ ಹಾಗೂ ಖುಷಿಯಲ್ಲಿರಬೇಕು. ನಶೆಯಲ್ಲಿದ್ದು
ಈಶ್ವರೀಯ ಸೇವೆಯನ್ನು ಮಾಡಬೇಕು.
ವರದಾನ:
ನಿಂದಕರನ್ನೂ ಸಹ
ತಮ್ಮ ಮಿತ್ರರೆಂದು ತಿಳಿದು ಸಮ್ಮಾನ ಕೊಡುವಂತಹ ಬ್ರಹ್ಮಾತಂದೆಯ ಸಮಾನ ಮಾಸ್ಟರ್ ರಚೈತಾ ಭವ
ಹೇಗೆ ಬ್ರಹ್ಮಾ ತಂದೆ
ಸ್ವಯಂ ಅನ್ನು ವಿಶ್ವ ಸೇವಾಧಾರಿ ಎಂದು ತಿಳಿದು ಪ್ರತಿಯೊಬ್ಬರಿಗೂ ಸಮ್ಮಾನ ಕೊಟ್ಟರು, ಸದಾ
ಮಾಲೀಕನಿಗೆ ಸಲಾಮ್ ಮಾಡುತ್ತಿದ್ದರು. ಈ ರೀತಿ ಎಂದೂ ಯೋಚಿಸಲಿಲ್ಲ ಬೇರೆಯವರು ಸಮ್ಮಾನ ಕೊಟ್ಟರೆ
ನಾನು ಕೊಡೋಣ ಎಂದು. ನಿಂದಕರಿಗೂ ಸಹ ತನ್ನ ಮಿತ್ರ ಎಂದು ತಿಳಿದು ಸಮ್ಮಾನ ಕೊಟ್ಟರು, ಈ ರೀತಿ
ತಂದೆಯನ್ನು ಅನುಸರಿಸಿ. ಕೇವಲ ಸಮ್ಮಾನ ಕೊಡುವವರನ್ನು ನಮ್ಮವರು ಎಂದು ತಿಳಿಯಬೇಡಿ ಆದರೆ ಬೈಗುಳ
ಮಾಡುವವರಿಗೂ ಸಹ ನನ್ನವರು ಎಂದು ತಿಳಿದು ಸಮ್ಮಾನ ಕೊಡಿ ಏಕೆಂದರೆ ಇಡೀ ವಿಶ್ವವೇ ನಿಮ್ಮ ಪರಿವಾರ
ಆಗಿದೆ. ಸರ್ವ ಆತ್ಮಗಳ ಬುಡ ನೀವು ಬ್ರಾಹ್ಮಣರಾಗಿರುವಿರಿ ಆದ್ದರಿಂದ ಸ್ವಯಂ ಅನ್ನು ಮಾಸ್ಟರ್ ರಚೈತ
ಎಂದು ತಿಳಿದು ಎಲ್ಲರಿಗೂ ಸಮ್ಮಾನ ಕೊಡಿ ಆಗ ದೇವತೆಗಳಾಗುವಿರಿ.
ಸ್ಲೋಗನ್:
ಮಾಯೆಗೆ ಸದಾ
ಕಾಲಕ್ಕಾಗಿ ವಿಧಾಯಿ ಹೇಳುವಂತಹವರೆ ತಂದೆಯ ಶುಭಾಷಯಗಳಿಗೆ ಪಾತ್ರರಾಗುತ್ತಾರೆ.