09.01.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ತಂದೆಯನ್ನು ಪ್ರೀತಿಯಿಂದ ನೆನಪು ಮಾಡುತ್ತಾ ಇರಿ, ಶ್ರೀಮತದಂತೆ ನಡೆಯಿರಿ, ವಿದ್ಯೆಯ ಮೇಲೆ ಪೂರ್ಣ ಗಮನ ಕೊಡಿ ಆಗ ನಿಮಗೆ ಎಲ್ಲರೂ ಗೌರವ ಕೊಡುತ್ತಾರೆ.

ಪ್ರಶ್ನೆ:
ಅತೀಂದ್ರಿಯ ಸುಖದ ಅನುಭವ ಎಂಥಹ ಯಾವ ಮಕ್ಕಳಿಗೆ ಆಗುತ್ತದೆ?

ಉತ್ತರ:
1. ಯಾರು ದೇಹೀ-ಅಭಿಮಾನಿಯಾಗಿರುತ್ತಾರೆ, ಅವರು ಯಾರೊಂದಿಗೇ ಮಾತನಾಡುತ್ತೀರಿ ಅಥವಾ ತಿಳಿಸುತ್ತೀರೆಂದರೆ ತಿಳಿದುಕೊಳ್ಳಿ - ನಾನಾತ್ಮ ಸಹೋದರನೊಂದಿಗೆ ಮಾತನಾಡುತ್ತಿದ್ದೇನೆ. ಸಹೋದರ-ಸಹೋದರ ದೃಷ್ಟಿಯನ್ನು ಪಕ್ಕಾ ಮಾಡಿಕೊಳ್ಳುವುದರಿಂದ ದೇಹೀ-ಅಭಿಮಾನಿಗಳಾಗಿ ಬಿಡುತ್ತೀರಿ. 2. ನಾವು ಭಗವಂತನ ವಿದ್ಯಾರ್ಥಿಗಳಾಗಿದ್ದೇವೆ ಎಂದು ಯಾರಿಗೆ ನಶೆಯಿರುತ್ತದೆಯೋ ಅವರಿಗೇ ಅತೀಂದ್ರಿಯ ಸುಖದ ಅನುಭವವಾಗುತ್ತದೆ.

ಗೀತೆ:
ಯಾರು ಬಂದರು ನನ್ನ ಮನದ ಬಾಗಿಲಿನಲ್ಲಿ.....

ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಿದ್ದಾರೆ, ಈ ರೀತಿ ಅನ್ಯ ಯಾವುದೇ ಸಂಸ್ಥೆಗಳಲ್ಲಿ ತಂದೆ ಕುಳಿತು ಮಕ್ಕಳಿಗೆ ತಿಳಿಸುತ್ತಾರೆ ಎಂದು ಹೇಳುವುದಿಲ್ಲ. ಅವಶ್ಯವಾಗಿ ಎಲ್ಲಾ ಮಕ್ಕಳಿಗೆ ತಂದೆಯು ಒಬ್ಬರೇ ಆಗಿದ್ದಾರೆ ಎಂದು ಮಕ್ಕಳು ತಿಳಿದುಕೊಂಡಿದ್ದೀರಿ. ಅಂದಾಗ ಎಲ್ಲರೂ ಸಹೋದರರಾಗಿದ್ದೇವೆ. ಆ ತಂದೆಯಿಂದ ಮಕ್ಕಳಿಗೆ ಅವಶ್ಯವಾಗಿ ಆಸ್ತಿಯು ಸಿಗುತ್ತದೆ. ಚಕ್ರದ ಬಗ್ಗೆಯೂ ಸಹ ಚೆನ್ನಾಗಿ ತಿಳಿಸಿಕೊಡಲು ಸಾಧ್ಯವಿದೆ. ಇದು ಮುಕ್ತಿ-ಜೀವನ್ಮುಕ್ತಿಯನ್ನು ಪಡೆಯುವ ಸಂಗಮವು ಇದಾಗಿದೆ. ನೀವು ಮಕ್ಕಳು ಜೀವನ್ಮುಕ್ತಿಯಲ್ಲಿ ಹೋದಾಗ ಉಳಿದವರೆಲ್ಲರೂ ಮುಕ್ತಿಯಲ್ಲಿ ಹೋಗುತ್ತಾರೆ. ಸದ್ಗತಿದಾತ, ಲಿಬರೇಟರ್, ಗೈಡ್ ಎಂದು ಅವರಿಗೇ ಹೇಳಲಾಗುತ್ತದೆ. ರಾವಣ ರಾಜ್ಯದಲ್ಲಿ ಎಷ್ಟೊಂದು ಮನುಷ್ಯರಿದ್ದಾರೆ, ರಾಮ ರಾಜ್ಯದಲ್ಲಿ ಒಂದೇ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು. ಅವರಿಗೆ ಆರ್ಯರು ಮತ್ತು ಅನಾರ್ಯರೆಂದು ಹೇಳಲಾಗುತ್ತದೆ. ಯಾರು ಸುಧಾರಣೆ ಹೊಂದಿರುತ್ತಾರೆಯೋ ಅವರೇ ಆರ್ಯರು, ಯಾರು ಸುಧಾರಣೆ ಹೊಂದಿರುವುದಿಲ್ಲವೋ ಅವರಿಗೆ ಅನಾರ್ಯರೆಂದು ಹೇಳಲಾಗುತ್ತದೆ. ಇದರ ಅರ್ಥವನ್ನು ಯಾರೂ ಸಹ ತಿಳಿದುಕೊಂಡಿಲ್ಲ. ಸುಧಾರಣೆ ಹೊಂದಿದವರಿಂದ ಸುಧಾರಣೆ ಹೊಂದದವರ ರೀತಿ ಹೇಗಾದರು. ಆರ್ಯರು ಎಂಬ ಯಾವುದೇ ಧರ್ಮವಿರಲಿಲ್ಲ. ಸುಧಾರಣೆ ಹೊಂದಿರುವವರು ದೇವತೆಗಳಾಗಿದ್ದರು ಅವರೇ 84 ಜನ್ಮಗಳ ನಂತರ ಅನಾರ್ಯರಾದರು. ಯಾರು ಶ್ರೇಷ್ಠಾತಿ ಶ್ರೇಷ್ಠ ಪೂಜ್ಯರಿದ್ದರೋ ಅವರೆ ಪೂಜಾರಿಗಳಾಗಿದ್ದಾರೆ. ಹಮ್ ಸೋ (ನಾವೇ ಅವರು) ಇದರ ಅರ್ಥವನ್ನು ತಂದೆಯೇ ತಿಳಿಸುತ್ತಾರೆ. ಏಣಿಯ ಬಗ್ಗೆ ಬಹಳ ಚೆನ್ನಾಗಿ ತಿಳಿಸಿಕೊಡಬಹುದು. ಆತ್ಮನೇ ಪರಮಾತ್ಮ, ಪರಾಮಾತ್ಮನೇ ಆತ್ಮನೆಂದಲ್ಲ. ಇದಂತೂ ವಿರಾಟರೂಪದ ನಾಟಕವಾಗಿದೆ. ನಾವೇ ಪೂಜ್ಯರಾಗಿದ್ದೆವು ಮತ್ತು ಪೂಜಾರಿಗಳಾದೆವು ಅರ್ಥಾತ್ ನಾವೇ ದೇವತೆ, ನಂತರ ಕ್ಷತ್ರಿಯರಾಗುತ್ತೇವೆ. ಏಣಿಯಂತೂ ಅವಶ್ಯವಾಗಿ ಇಳಿಯುತ್ತೇವೆ. 84 ಜನ್ಮಗಳನ್ನು ಯಾರು ತೆಗೆದುಕೊಳ್ಳುತ್ತಾರೆ ಎಂಬುದೂ ಸಹ ಲೆಕ್ಕವಿದೆ. ನೀವು ನಿಮ್ಮ ಜನ್ಮಗಳನ್ನು ತಿಳಿದುಕೊಂಡಿಲ್ಲ ಅದನ್ನು ನಾನು ನಿಮಗೆ ತಿಳಿಸುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಇದು ಚಕ್ರವಾಗಿದೆ, ಇದರಲ್ಲಿ ನಾವೇ ದೇವತೆ, ಕ್ಷತ್ರಿಯ ಮುಂತಾದವರಾಗುತ್ತೇವೆ. 21 ಜನ್ಮಗಳು ಪ್ರಸಿದ್ಧವಾಗಿದೆ. ಮನುಷ್ಯರು ಇದೆಲ್ಲವನ್ನು ತಿಳಿದುಕೊಂಡೇ ಇಲ್ಲ. ತಮೋಪ್ರಧಾನರಾಗಿದ್ದಾರೆ, ಈಗ ನೀವು ಮಕ್ಕಳಿಗೆ ಎಲ್ಲಾ ಜ್ಞಾನವು ಸಿಗುತ್ತದೆ. ಆದರೆ ತಿಳಿದುಕೊಳ್ಳದಿರುವ ಕಾರಣ ಕಷ್ಟವಾಗುತ್ತದೆ ಆದ್ದರಿಂದಲೇ ಕೋಟಿಯಲ್ಲಿ ಕೆಲವರೇ ಬಂದು ಜ್ಞಾನವನ್ನು ತೆಗೆದುಕೊಳ್ಳುತ್ತಾರೆ ಮತ್ತು ದೇವತಾ ಧರ್ಮದವರಾಗುತ್ತಾರೆ ಎಂದು ಹೇಳಲಾಗುತ್ತದೆ. ಇದರಲ್ಲಿ ಆಶ್ಚರ್ಯ ಪಡಬೇಕಾಗಿಲ್ಲ. ಚಕ್ರದ ಬಗ್ಗೆ ತಿಳಿಸಿಕೊಡುವುದು ಸಹಜವಾಗಿದೆ, ಇದು ಸತ್ಯಯುಗ, ಇದು ಕಲಿಯುಗ ಏಕೆಂದರೆ ಸತ್ಯಯುಗದಲ್ಲಿ ಬಹಳ ಕಡಿಮೆಯಿರುತ್ತಾರೆ. ವೃಕ್ಷವು ಚಿಕ್ಕದರಿಂದ ವೃದ್ಧಿ ಹೊಂದುತ್ತಾ ಹೋಗುತ್ತದೆ. ಈ ವೃಕ್ಷದ ಬಗ್ಗೆ ಯಾರಿಗೂ ತಿಳಿದಿಲ್ಲ ಮತ್ತು ಬ್ರಹ್ಮಾರವರ ಮಾತೂ ಸಹ ಕಷ್ಟದಿಂದ ಅರ್ಥ ಮಾಡಿಕೊಳ್ಳುತ್ತಾರೆ. ಹೇಳಿ ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರು ಅವಶ್ಯವಾಗಿ ಬೇಕಲ್ಲವೆ. ಇವರು ದತ್ತು ಮಗುವಾಗಿದ್ದಾರೆ, ಆ ಬ್ರಾಹ್ಮಣರು ಕುಖ ವಂಶಾವಳಿಗಳು ಈ ಬ್ರಾಹ್ಮಣರು ಮುಖ ವಂಶಾವಳಿಗಳು. ಇದು ಪರದೇಶ ರಾವಣ ರಾಜ್ಯವಾಗಿದೆ. ತಂದೆಯು ಬಂದು ರಾಮ ರಾಜ್ಯವನ್ನು ಸ್ಥಾಪನೆ ಮಾಡಬೇಕಾಗುತ್ತದೆ ಅಂದಾಗ ಯಾರಲ್ಲಿಯೋ ಪ್ರವೇಶ ಮಾಡುತ್ತಾರಲ್ಲವೆ. ವೃಕ್ಷವೂ ಸಹ ಸಂಪೂರ್ಣ ಬೆಳೆದು ಕೊನೆಯಲ್ಲಿ ನಿಂತಿದೆ. ಇದರದು ತುಂಬಾ ಹಳೆಯದಾಗಿರುವ ಜಡಜಡೀಭೂತ ಸ್ಥಿತಿಯಾಗಿದೆ. ನಾನು ಬಹಳ ಜನ್ಮದ ಅಂತ್ಯದಲ್ಲಿ ಪ್ರವೇಶ ಮಾಡುತ್ತೇನೆಂದು ತಂದೆಯು ಹೇಳುತ್ತಾರೆ. ಇದು ಅಂತಿಮ 84ನೇ ಜನ್ಮವಾಗಿದೆ ತಪಸ್ಸು ಮಾಡುತ್ತಿದ್ದಾರೆ. ನೀವು ಇವರನ್ನು ಭಗವಂತನೆಂದು ಹೇಳುವುದಿಲ್ಲ. ಪ್ರಪಂಚದವರಂತೂ ಭಗವಂತ ಸರ್ವವ್ಯಾಪಿ ಎಂದು ಹೇಳಿ ಕಲ್ಲು ಮಣ್ಣಿನಲ್ಲೂ ಇದ್ದಾರೆ ಎಂದು ಹೇಳಿದ್ದರಿಂದ ಸ್ವತಃ ತಾವೂ ಮಣ್ಣಿನ ಸಮಾನ ಆಗಿದ್ದಾರೆ. ದೇವತೆಗಳ ಮಾತೇ ಭಿನ್ನವಾಗಿದೆ. ನೀವು ಈಗ ಇದನ್ನು ಓದಿ ಪದವಿಯನ್ನು ಪಡೆಯುತ್ತೀರಿ. ಇದು ಎಷ್ಟೊಂದು ಶ್ರೇಷ್ಠ ವಿದ್ಯೆಯಾಗಿದೆ. ದೇವತೆಗಳನ್ನು ಭಗವಾನ್-ಭಗವತಿ ಎಂದೂ ಸಹ ಹೇಳುತ್ತಾರೆ. ಏಕೆಂದರೆ ಪವಿತ್ರರಾಗಿರುತ್ತಾರೆ ಮತ್ತು ಸ್ವಯಂ ಭಗವಂತನ ಮೂಲಕವೇ ಈ ಧರ್ಮದ ಸ್ಥಾಪನೆಯಾಗುತ್ತದೆ ಅಂದಾಗ ಅವಶ್ಯವಾಗಿ ಭಗವಾನ್-ಭಗವತಿಯೇ ಆಗಬೇಕು. ಆದರೆ ಅವರಿಗೆ ಮಹಾರಾಜ-ಮಹಾರಾಣಿ ಎಂದು ಹೇಳಲಾಗುತ್ತದೆ. ಶ್ರೀ ಲಕ್ಷ್ಮಿ-ನಾರಾಯಣರನ್ನು ಭಗವಾನ್-ಭಗವತಿ ಎಂದು ಹೇಳುವುದೂ ಸಹ ಅಂಧಶ್ರದ್ಧೆಯಾಗಿದೆ. ಏಕೆಂದರೆ ಭಗವಂತ ಒಬ್ಬರೇ ಆಗಿದ್ದಾರಲ್ಲವೆ. ನೀವು ಶಿವ ಮತ್ತು ಶಂಕರನಿಗೂ ಸಹ ಬೇರೆ-ಬೇರೆ ಮಾಡಿ ತಿಳಿಸುತ್ತೀರಿ. ಇದನ್ನು ಕೇಳಿದಾಗ ಜನರು ಇವರು ದೇವತೆಗಳನ್ನೇ ಹಾರಿಸಿ ಬಿಡುತ್ತಾರೆ ಎಂದು ಹೇಳುತ್ತಾರೆ. ನಿಮ್ಮ ಬುದ್ಧಿಯಲ್ಲಿ ಇಡೀ ಚಕ್ರವಿದೆ ಆದರೆ ಯಾರು ಮಹಾರಥಿಗಳಿದ್ದಾರೆಯೋ ಅವರೇ ತಿಳಿಸಿಕೊಡಲು ಸಾಧ್ಯ. ಅನೇಕರು ಈ ಜ್ಞಾನವನ್ನು ಕೇಳಿದರೂ ಸಹ ಬುದ್ಧಿಯಲ್ಲಿ ಉಳಿಯುವುದೇ ಇಲ್ಲ. ಅಂದಾಗ ಅವರು ಏನಾಗುತ್ತಾರೆ? ಬಿಡಿಗಾಸಿನ ದಾಸ-ದಾಸಿಯರಾಗುತ್ತಾರೆ. ಮುಂದೆ ಹೋದಂತೆ ತಮಗೆ ಸಾಕ್ಷಾತ್ಕಾರವಾಗುತ್ತದೆ ಆಗ ಏನೂ ಮಾಡಲು ಸಾಧ್ಯವಿಲ್ಲ. ಸಮಯ ಪೂರ್ಣವಾದ ಮೇಲೆ ಏನು ತಾನೆ ಮಾಡಲು ಸಾಧ್ಯ. ಆದ್ದರಿಂದ ಸುರಕ್ಷಿತವಾಗಿರಿ ಎಂದು ತಂದೆಯು ಎಚ್ಚರಿಕೆ ನೀಡುತ್ತಾರೆ. ಆದರೆ ಎಲ್ಲರೂ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಬುದ್ಧಿ ರೂಪಿ ಪಾತ್ರೆಯು ಸ್ವಚ್ಛವಾಗಿಲ್ಲ, ಇದರಲ್ಲಿ ಎಷ್ಟೊಂದು ಕಲ್ಮಷಗಳು ತುಂಬಿವೆ, ಇದರಲ್ಲಿ ಬಹಳ ಒಳ್ಳೆಯ ಪುರುಷಾರ್ಥ ಮಾಡಬೇಕಾಗಿದೆ. ಚಿತ್ರಗಳ ಮೇಲೆ ತಿಳಿಸಲು ಬಹಳ ಅಭ್ಯಾಸ ಮಾಡಬೇಕು ಇಲ್ಲವಾದರೆ ಕೊನೆಯಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ನೀವು ಆತ್ಮಗಳಿಗೆ ಊಟ ಸಿಗುತ್ತಿದೆ, ಇದು ಎಲ್ಲರಿಗೂ ತಿಳಿಸಿಕೊಡುವ ಮಾತಾಗಿದೆ, ಭಯ ಪಡುವಂತಹ ಮಾತೇ ಇಲ್ಲ. ದೊಡ್ಡ-ದೊಡ್ಡ ಸ್ಥಾನಗಳಲ್ಲಿ ಪ್ರದರ್ಶನಿ, ಮ್ಯೂಜಿಯಂಗಳಲ್ಲಿ ಚಿತ್ರ ಪ್ರದರ್ಶನ, ಚಿತ್ರ ಸಂಗ್ರಹಾಲಯ ಇಡುವುದರಿಂದ ಹೆಸರುವಾಸಿಯಾಗುತ್ತದೆ. ಎಲ್ಲರಿಂದ ಅಭಿಪ್ರಾಯಗಳನ್ನು ಬರೆಸಿಕೊಳ್ಳಬೇಕೆಂದು ತಂದೆಯು ಹೇಳುತ್ತಾರೆ. ಅದನ್ನೂ ಸಹ ಮುದ್ರಣ ಮಾಡಬೇಕು. ಮಕ್ಕಳು ಬಹಳಷ್ಟು ಸರ್ವೀಸನ್ನು ಮಾಡಬೇಕು. ಇದರಲ್ಲಿ ಪರಿಶೀಲನೆಯನ್ನೂ ಸಹ ಬಹಳ ಮಾಡಬೇಕಾಗುತ್ತದೆ. ಇವರು ತಿಳಿದುಕೊಳ್ಳುವವರೇ ಅಥವಾ ಇಲ್ಲವೆ, ಇದು ಹೊಸ ಪ್ರಪಂಚ ಇದು ಹಳೆಯ ಪ್ರಪಂಚ ಎಂಬುದನ್ನು ಯಾರೂ ಬೇಕಾದರೂ ತಿಳಿದುಕೊಳ್ಳಬಹುದಾಗಿದೆ. ಕೇವಲ ಸಮಯವನ್ನು ಧೀರ್ಘ ಮಾಡಿ ಬಿಟ್ಟಿದ್ದಾರೆ. ಆದ್ದರಿಂದ ಮನುಷ್ಯರು ತಬ್ಬಿಬ್ಬಾಗಿದ್ದಾರೆ. ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕು. ಯಾರು ಆತ್ಮಾಭಿಮಾನಿಯಾಗಿರುತ್ತಾರೆಯೋ ಅವರೇ ಅತೀಂದ್ರಿಯ ಸುಖದಲ್ಲಿರಲು ಸಾಧ್ಯ. ಕೇವಲ ಭಾಷಣದಿಂದ ಕಾರ್ಯವು ಆಗುವುದಿಲ್ಲ. ಯಾವಾಗ ಭಾಷಣ ಮಾಡುತ್ತೀರೋ ಆಗ ತಿಳಿದುಕೊಳ್ಳಬೇಕು-ನಾನಾತ್ಮ ಸಹೋದರ, ಸಹೋದರನಿಗೆ ತಿಳಿಸಿಕೊಡುತ್ತಿದ್ದೇನೆ. ಆತ್ಮಾಭಿಮಾನಿಗಳಾಗುವುದರಲ್ಲಿ ಬಹಳ ಪರಿಶ್ರಮ ಪಡಬೇಕು. ಆದರೆ ಮಕ್ಕಳು ಘಳಿಗೆ-ಘಳಿಗೆಗೆ ಮರೆತು ಬಿಡುತ್ತಾರೆ. ತಂದೆಯೇ ಬಂದು ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಆತ್ಮ ಮತ್ತು ಪರಮಾತ್ಮ ಬಹಳಕಾಲ ಅಗಲಿದ್ದರೆಂದು ಹೇಳಲಾಗುತ್ತದೆ. ಇದರ ಅರ್ಥವನ್ನೂ ಸಹ ನೀವು ಮಕ್ಕಳೇ ತಿಳಿದುಕೊಳ್ಳಲು ಸಾಧ್ಯವಿದೆ. ಯಾರು ಮಹಾರಥಿಗಳಾಗಿದ್ದಾರೆಯೋ ಅವರೂ ಸಹ ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದು ಬಹಳ ಅಭ್ಯಾಸ ಮಾಡಬೇಕಾಗಿದೆ. ಆಗಲೇ ತಮ್ಮನ್ನು ಶಕ್ತಿಶಾಲಿ ಎಂದು ತಿಳಿಯುವಿರಿ. ಯಾರು ತಮ್ಮನ್ನು ಆತ್ಮನೆಂದು ತಿಳಿಯುವುದಿಲ್ಲವೋ ಅವರೇನು ಧಾರಣೆ ಮಾಡುವರು. ನೆನಪಿನಿಂದಲೇ ಆತ್ಮನಲ್ಲಿ ಹರಿತವು ತುಂಬುತ್ತದೆ. ಜ್ಞಾನಕ್ಕೆ ಬಲವೆಂದು ಹೇಳುವುದಿಲ್ಲ, ಯೋಗ ಬಲವೆಂದು ಹೇಳಲಾಗುತ್ತದೆ. ಯೋಗ ಬಲದಿಂದಲೇ ನೀವು ವಿಶ್ವಕ್ಕೆ ಮಾಲೀಕರಾಗುತ್ತೀರಿ. ತಾವೀಗ ಅನೇಕರನ್ನು ತಮ್ಮ ಸಮಾನ ಮಾಡಿಕೊಳ್ಳಬೇಕು. ಎಲ್ಲಿಯವರೆಗೆ ಅನೇಕರನ್ನು ತಮ್ಮ ಸಮಾನ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ವಿನಾಶವಾಗುವುದಿಲ್ಲ. ಭಲೇ ದೊಡ್ಡ ಯುದ್ಧವೇ ನಡೆದರೂ ಸಹ ನಿಂತು ಹೋಗುತ್ತದೆ. ಈಗಂತೂ ಅನೇಕರ ಬಳಿ ಬಾಂಬುಗಳಿವೆ. ಇದು ಇಟ್ಟುಕೊಳ್ಳುವಂತಹ ವಸ್ತುವಲ್ಲ. ಹಳೆಯ ಪ್ರಪಂಚದ ವಿನಾಶ, ಒಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯು ಅವಶ್ಯವಾಗಿ ಆಗಲಿದೆ. ಸ್ವಲ್ಪ ಸಮಯದ ನಂತರ ಅವಶ್ಯವಾಗಿ ಇದು ಅದೇ ಮಹಾಭಾರತ ಯುದ್ಧವೆಂದು ಎಲ್ಲರೂ ಹೇಳುತ್ತಾರೆ. ಅವಶ್ಯವಾಗಿ ಭಗವಂತನೂ ಇದ್ದಾರೆ. ಯಾವಾಗ ನಿಮ್ಮ ಬಳಿ ಬಹಳ ಜನರು ಬರುತ್ತಾರೆಯೋ ಆಗ ನೀವು ಎಲ್ಲರೂ ಮಾನ್ಯ ಮಾಡುತ್ತಾರೆ. ಹೇಳುತ್ತಾರೆ - ಇದಂತೂ ವೃದ್ಧಿ ಹೊಂದುತ್ತಾ ಇರುತ್ತದೆ, ಇದರಲ್ಲಿ ಬಹಳ ಶಕ್ತಿಯಿದೆ. ನೀವು ಎಷ್ಟು ನೆನಪಿನಲ್ಲಿರುತ್ತೀರಿ, ಅಷ್ಟು ನಿಮ್ಮಲ್ಲಿ ಶಕ್ತಿಯು ತುಂಬುತ್ತಿರುತ್ತದೆ. ತಂದೆಯ ನೆನಪಿನಿಂದಲೇ ನೀವು ಅನ್ಯರಿಗೆ ಪ್ರಕಾಶತೆಯನ್ನು ಕೊಡುತ್ತೀರಿ. ಈ ದಾದಾರವರೂ (ಬ್ರಹ್ಮಾ) ಸಹ ಹೇಳುತ್ತಾರೆ - ನನಗಿಂತಲೂ ಈ ಮಕ್ಕಳು ಬಹಳ ಒಳ್ಳೆಯ ಸರ್ವೀಸ್ ಮಾಡುತ್ತಾರೆ. ಈಗ ಸ್ವಲ್ಪ ತಡವಿದೆ. ಯೋಗದಲ್ಲಿ ಯಥಾರ್ಥ ರೀತಿಯಿಂದ ಯಾರೂ ಇರಲು ಸಾಧ್ಯವಿಲ್ಲ. ಸ್ವಯಂನಿಂದ ಅನುಭವ ಮಾಡುತ್ತಾರೆ - ಯೋಗದಲ್ಲಿ ನಾವು ಕಡಿಮೆಯಿರುವುದರಿಂದ ಬಾಣವು ಸರಿಯಾಗಿ ನಾಟುತ್ತಿಲ್ಲ. ಭಗವಂತನು ಕುಮಾರಿಯರಿಗೆ ಜ್ಞಾನದ ಬಾಣವನ್ನು ತುಂಬುತ್ತಾರೆ. ನೀವು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಲ್ಲವೆ ಇವರು ಬ್ರಹ್ಮಾ. ನೀವು ದತ್ತು ಮಕ್ಕಳಾಗಿದ್ದೀರಿ. ರಚಯಿತನಂತೂ ಒಬ್ಬರೇ ಆಗಿದ್ದಾರೆ ಬಾಕಿ ಎಲ್ಲರೂ ಓದುತ್ತಿದ್ದಾರೆ. ಅದರಲ್ಲಿ ಈ ಬ್ರಹ್ಮಾರವರೂ ಸಹ ಬಂದು ಬಿಟ್ಟರು. ನಂತರ ಈ ರಚನೆಯಾಯಿತಲ್ಲವೆ. ನೀವು ದೇವತೆಗಳಾಗುವವರಾಗಿದ್ದೀರಿ, ದೈವೀ ಗುಣವನ್ನು ಧಾರಣೆ ಮಾಡುತ್ತಿದ್ದೀರಿ. ಎರಡೂ ಚಕ್ರಗಳು ನಡೆಯಲು ಸಾಧ್ಯವಾಗುವುದಿಲ್ಲ. ಹೇಗೆಂದರೆ ಮರಳಿನ ಮೇಲೆ ನಿಂತಿರುವ ಹಾಗೆ, ಬಾಬಾ ಹೆಸರನ್ನು ಹೇಳುವುದಿಲ್ಲ. ಬಾಬಾ ಸತ್ಯವನ್ನು ಹೇಳುತ್ತಾರೆಂದು ಅರ್ಥ ಮಾಡಿಕೊಳ್ಳಬೇಕು. ಇಬ್ಬರು ಒಟ್ಟಿಗೆ ಕೆಲಸ ಮಾಡುವ ಪರಸ್ಪರರ ಸ್ವಭಾವವನ್ನು ಅರ್ಥ ಮಾಡಿಕೊಳ್ಳಬಹುದು. ನಾವೇ ಕಿರೀಟಧಾರಿಗಳಾಗಿದ್ದೆವು ಎಂದು ಮಕ್ಕಳಿಗೆ ತಿಳಿದಿದೆ ಈಗ ಮತ್ತೆ ಆಗುತ್ತಿದ್ದೇವೆ. ಮೊದಲು ನೀವು ಯಾರಿಗಾದರೂ ತಿಳಿಸುತ್ತೀರಿ ಅಂದಾಗ ಅವರು ಒಪ್ಪುವುದಕ್ಕೆ ತಯಾರಿರುವುದಿಲ್ಲ ನಂತರ ನಿಧಾನವಾಗಿ ತಿಳಿಯುತ್ತಾರೆ. ಇದರಲ್ಲಿ ಬಹಳ ಬುದ್ಧಿಯೂ ಬೇಕಾಗಿದೆ. ಆತ್ಮದಲ್ಲಿಯೇ ಬುದ್ಧಿಯಿದೆ. ಆತ್ಮವು ಸತ್ಚಿತ್ ಆನಂದ ಸ್ವರೂಪವಾಗಿದೆ. ಈಗ ನೀವು ಮಕ್ಕಳನ್ನು ದೇಹೀ-ಅಭಿಮಾನಿಗಳನ್ನಾಗಿ ಮಾಡಲಾಗುತ್ತಿದೆ. ಎಲ್ಲಿಯವರೆಗೆ ತಂದೆಯು ಬರುವುದಿಲ್ಲವೋ ಅಲ್ಲಿಯವರೆಗೆ ಯಾರೂ ದೇಹೀ-ಅಭಿಮಾನಿಗಳಾಗಲು ಸಾಧ್ಯವಿಲ್ಲ. ಈಗ ತಂದೆಯು ಹೇಳುತ್ತಾರೆ - ಆತ್ಮಾಭಿಮಾನಿಭವ. ನನ್ನೊಬ್ಬನನ್ನೇ ನೆನಪು ಮಾಡಿ ಆಗ ನನ್ನಿಂದ ಶಕ್ತಿಯು ಸಿಗುತ್ತದೆ. ಈ ಧರ್ಮವು ಬಹಳ ಶಕ್ತಿಯುಳ್ಳದ್ದಾಗಿದೆ, ಇದು ಇಡೀ ವಿಶ್ವದ ಮೇಲೆ ರಾಜ್ಯ ಮಾಡುತ್ತದೆ, ಕಡಿಮೆ ಮಾತಾಗಿದೆಯೇ? ತಂದೆಯೊಂದಿಗೆ ಯೋಗವನ್ನು ಜೋಡಿಸುವುದರಿಂದ ನಿಮಗೆ ಶಕ್ತಿಯು ಸಿಗುತ್ತದೆ ಅಂದಾಗ ಇದು ಹೊಸ ಮಾತಾಗಿದೆಯಲ್ಲವೆ. ಇದನ್ನು ಚೆನ್ನಾಗಿ ತಿಳಿಸಿಕೊಡಬೇಕಾಗುತ್ತದೆ. ಅವರೇ ಆತ್ಮರಿಗೆ ಬೇಹದ್ದಿನ ತಂದೆಯಾಗಿದ್ದಾರೆ, ಅವರೇ ಹೊಸ ಪ್ರಪಂಚದ ರಚಯಿತನಾಗಿದ್ದಾರೆ. ಅಂದರೆ ಶಿವನ ಕರ್ತವ್ಯವನ್ನು ತಿಳಿಸಿಕೊಡಿ-ಅವರು ಬಂದು ಏನು ಮಾಡುತ್ತಾರೆ. ಕೃಷ್ಣ ಜಯಂತಿ ಮತ್ತು ಶಿವ ಜಯಂತಿ ಇಬ್ಬರದೂ ಆಚರಿಸುತ್ತಾರೆ. ಈಗ ಇಬ್ಬರಲ್ಲಿ ದೊಡ್ಡವರು ಯಾರು? ಶ್ರೇಷ್ಠಾತಿ ಶ್ರೇಷ್ಠ ನಿರಾಕಾರನಾಗಿದ್ದಾರೆ. ಅವರು ಬಂದು ಏನು ಮಾಡಿದರು, ಅದಕ್ಕೆ ಶಿವ ಜಯಂತಿಯನ್ನು ಆಚರಿಸಲಾಗುತ್ತಿದೆ. ಕೃಷ್ಣ ಏನು ಮಾಡಿದ್ದಾನೆ? ಬರೆಯಲಾಗಿದೆ. ಪರಮಪಿತ ಪರಮಾತ್ಮ ಸಾಧಾರಣ ವೃದ್ಧ ತನುವಿನಲ್ಲಿ ಬಂದು ಸ್ಥಾಪನೆ ಮಾಡುತ್ತಾರೆ. ಅನೇಕ ಪ್ರಕಾರ ಮತ-ಮತಾಂತರಗಳಿವೆ.ಶ್ರೀಮತವಂತೂ ಒಂದೇ ಆಗಿದೆ ಯಾವುದರಿಂದ ಶ್ರೇಷ್ಠರಾಗುತ್ತೀರಿ! ಮಾನವ ಮತದಿಂದ ಹೇಗೆ ಶ್ರೇಷ್ಠರಾಗುತ್ತೀರಿ! ಈ ಈಶ್ವರೀಯ ಮತವು ನಿಮಗೆ ಒಂದೇ ಬಾರಿ ಸಂಗಮಯುಗದಲ್ಲಿ ಸಿಗುತ್ತದೆ, ದೇವತೆಗಳಂತೂ ಮತವನ್ನು ಕೊಡುವುದಿಲ್ಲ. ಮನುಷ್ಯರಿಂದ ದೇವತೆಗಳಾಗುತ್ತಾರೆ ಅಷ್ಟೇ, ಸಮಾಪ್ತಿ. ಅಲ್ಲಿ ಗುರು ಮುಂತಾದವರನ್ನು ಮಾಡಿಕೊಳ್ಳುವುದಿಲ್ಲ. ಇಲ್ಲಿ ಮನುಷ್ಯರು ಗುರುಗಳ ಮತವನ್ನು ಪಡೆಯುತ್ತಾರೆ ಅಂದಾಗ ಯುಕ್ತಿಯಿಂದ ನಾವು ರಾಜಯೋಗಿಗಳಾಗಿದ್ದೇವೆಂದು ತಿಳಿಸಬೇಕಾಗಿದೆ. ಹಠಯೋಗಿಗಳು ಎಂದೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಅವರಂತೂ ನಿವೃತ್ತಿ ಮಾರ್ಗದವರಾಗಿದ್ದಾರೆ. ತೀರ್ಥ ಸ್ಥಾನಗಳಿಗೆ ಪ್ರವೃತ್ತಿ ಮಾರ್ಗದವರೇ ಹೋಗಬೇಕು. ನೀವು ಮಕ್ಕಳು ಯಾವುದೇ ಮಾತಿನಲ್ಲೂ ತಬ್ಬಿಬ್ಬಾಗಬಾರದು. ಈ ನಾಟಕವು ಮಾಡಿ-ಮಾಡಲ್ಪಟ್ಟಿರುವುದಾಗಿದೆ. ಅದೇ ಪುನರಾವರ್ತನೆಯಾಗುತ್ತಿರುತ್ತದೆ. ನಿಮ್ಮ ಸೇವೆಯೂ ಸಹ ಕಲ್ಪದ ಹಿಂದಿನಂತೆ ಆಗುತ್ತದೆ. ನಾಟಕವೇ ನಿಮ್ಮ ಪುರುಷಾರ್ಥ ಮಾಡಿಸುತ್ತದೆ. ಕಲ್ಪದ ಮೊದಲಿನಂತೆಯೇ ನೀವು ಪುರುಷಾರ್ಥವನ್ನು ಮಾಡುತ್ತೀರಿ. ಪುರುಷಾರ್ಥ ಮಾಡುವವರ ನಡವಳಿಕೆಯಿಂದ ನೀವು ತಿಳಿದುಕೊಳ್ಳಲು ಸಾಧ್ಯ. ಆಗಲೇ ಪ್ರದರ್ಶನಿಯಲ್ಲಿ ಗ್ರೂಪನ್ನು ನೋಡಿ ಗೈಡ್ ಅನ್ನು ಕೊಡಲಾಗುತ್ತದೆ. ಏಕೆಂದರೆ ಚೆನ್ನಾಗಿ ತಿಳಿಸಲಿ ಎಂದು. ಓದಿಸುವಂತಹ ತಂದೆಯಂತೂ ಚೆನ್ನಾಗಿ ತಿಳಿದುಕೊಂಡಿದ್ದಾರೆ, ಎಷ್ಟೊಂದು ವಿಶಾಲ ಬೇಹದ್ದಿನ ಬುದ್ಧಿಯನ್ನಾಗಿ ಮಾಡುತ್ತಾರೆ. ನಾವು ಯಾರ ಮಕ್ಕಳಾಗಿದ್ದೇವೆ ಎನ್ನುವ ನಶೆಯು ನಿಮ್ಮಲ್ಲಿ ಇರಬೇಕಾಗಿದೆ. ಭಗವಂತ ನಮಗೆ ಓದಿಸುತ್ತಿದ್ದಾರೆ. ಯಾರು ಓದಲು ಸಾಧ್ಯವಿಲ್ಲವೋ ಅವರು ಓಡಿ ಹೋಗುತ್ತಾರೆ. ಅದಕ್ಕೆ ಭಗವಂತ ತಿಳಿಯುತ್ತಾರೆ - ಇವರು ನನ್ನ ಮಕ್ಕಳಲ್ಲ. ನೀವು ನೋಡುತ್ತೀರಿ - ಭಗವಂತನ ಮಕ್ಕಳು ಓದುತ್ತಿದ್ದರು ನಂತರ ಓಡಿ ಹೋದರು, ಸ್ವಲ್ಪ ತಿಳುವಳಿಕೆ ಬರುತ್ತದೆ ಅಂದಾಗ ನಂತರವೂ ಓದಲು ತೊಡಗುತ್ತಾರೆ. ಪುನಃ ಯೋಗದಲ್ಲಿ ಚೆನ್ನಾಗಿರುತ್ತಾರೆ ಅಂದಾಗ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯ. ಅವಶ್ಯವಾಗಿ ಸಮಯವು ಬಹಳ ವ್ಯರ್ಥವಾಯಿತು, ಇಂತಹ ಶಾಲೆಯನ್ನು ಬಿಟ್ಟೆವು ಎಂದು ತಿಳಿಯುತ್ತಾರೆ. ಈಗಂತೂ ಅವಶ್ಯವಾಗಿ ತಂದೆಯಿಂದ ಆಸ್ತಿಯನ್ನು ಪಡೆಯುತ್ತೀರಿ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಅಥವಾ ಬಾಬಾ-ಬಾಬಾ ಎಂದು ಹೇಳುತ್ತಾ ರೋಮಾಂಚಿತರಾಗಬೇಕಾಗಿದೆ. ತಂದೆಯು ನಮಗೆ ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಿದ್ದಾರೆ ಅಂದಾಗ ನಾವು ಎಷ್ಟೊಂದು ಭಾಗ್ಯಶಾಲಿಗಳಾಗಿದ್ದೇವೆ. ಗಳಿಗೆ-ಗಳಿಗೆಯೂ ತಂದೆಯನ್ನು ನೆನಪು ಮಾಡುತ್ತಾ ಇರಿ, ಮತದಂತೆ ನಡೆಯುತ್ತೀರಿ ಅಂದಾಗ ಬಹಳ ಉನ್ನತಿಯಾಗಲು ಸಾಧ್ಯ ನಂತರ ಅವರಿಗೆ ಎಲ್ಲರೂ ಬಹಳ ಗೌರವವನ್ನು ಕೊಡುತ್ತಾರೆ. ತಂದೆಯು ಹೇಳುತ್ತಾರೆ - ಓದಿರುವವರ ಮುಂದೆ ಅವಿದ್ಯಾವಂತರು ಕೆಲಸವನ್ನು ಮಾಡುತ್ತಾರೆ. ದೇಹಾಭಿಮಾನವುಳ್ಳವರಿಗೆ ದೈವೀ ಗುಣಗಳು ಧಾರಣೆಯಾಗಲು ಸಾಧ್ಯವಿಲ್ಲ. ನಿಮ್ಮ ಚಹರೆಯು ಫಸ್ಟ್ ಕ್ಲಾಸ್ ಆಗಿರಬೇಕಾಗಿದೆ. ಹೇಳುತ್ತಾರೆ ಯಾರಿಗೆ ಭಗವಂತ ಓದಿಸುತ್ತಿದ್ದಾರೆಯೋ ಅವರನ್ನು ಅತೀಂದ್ರಿಯ ಸುಖವು ಹೇಗಿರುತ್ತದೆಯೆಂದು ಕೇಳಿರಿ. ವಿದ್ಯೆಯ ಮೇಲೆ ಸಾಕಷ್ಟು ಗಮನವಿಡಬೇಕು ಮತ್ತು ಶ್ರೀಮತದಂತೆ ನಡೆಯಬೇಕಾಗಿದೆ. ನಿಮ್ಮ ಯೋಗ ಶಕ್ತಿಯಿಂದ ವಿಶ್ವವೇ ಪವಿತ್ರವಾಗುತ್ತದೆ, ಯೋಗದಿಂದ ವಿಶ್ವವನ್ನು ಪವಿತ್ರವನ್ನಾಗಿ ಮಾಡುತ್ತೀರಿ ಅಂದಾಗ ಇದು ಚಮತ್ಕಾರವಾಗಿದೆ. ಗೋವರ್ಧನ ಬೆಟ್ಟವನ್ನು ಬೆರಳಿನಿಂದ ಎತ್ತಬೇಕಾಗಿದೆ - ಈ ಛೀ ಛೀ ಪ್ರಪಂಚವನ್ನು ಯಾರು ಪವಿತ್ರವನ್ನಾಗಿ ಮಾಡಿದರೋ ಇದು ಅವರ ಗುರುತಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತ-ಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಗುಡ್ಮಾರ್ನಿಂಗ್. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

೧. ಸತ್ಯ ಜ್ಞಾನವನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಲು ಬುದ್ಧಿ ರೂಪಿ ಪಾತ್ರೆಯನ್ನು ಶುದ್ಧ ಮತ್ತು ಸ್ವಚ್ಛವನ್ನಾಗಿ ಮಾಡಿಕೊಳ್ಳಬೇಕಾಗಿದೆ. ವ್ಯರ್ಥ ಮಾತುಗಳನ್ನು ಬುದ್ಧಿಯಿಂದ ತೆಗೆಯಬೇಕಾಗಿದೆ.

೨. ದೈವೀ ಗುಣಗಳನ್ನು ಧಾರಣೆ ಮಾಡುವುದರಲ್ಲಿ ಮತ್ತು ವಿದ್ಯೆಯ ಮೇಲೆ ಪೂರ್ಣ ಗಮನ ಕೊಟ್ಟು ಅತೀಂದ್ರಿಯ ಸುಖದ ಅನುಭವ ಮಾಡಬೇಕಾಗಿದೆ. ನಾವು ಭಗವಂತನ ಮಕ್ಕಳಾಗಿದ್ದೇವೆ, ಅವರೇ ನಮಗೆ ಓದಿಸುತ್ತಿದ್ದಾರೆ ಎಂಬ ನಶೆಯಲ್ಲಿ ಸದಾ ಇರಬೇಕಾಗಿದೆ.

ವರದಾನ:
ಪ್ರಾಪ್ತಿ ಸ್ವರೂಪರಾಗಿ, ಏಕೆ? ಏನು? ಎನ್ನುವ ಪ್ರಶ್ನೆಗಳಿಂದ ಪಾರಾಗಿರುವ ಸದಾ ಪ್ರಸನ್ನ ಚಿತ್ತ ಭವ.

ಯಾರು ಪ್ರಾಪ್ತಿ ಸ್ವರೂಪ ಸಂಪನ್ನ ಅತ್ಮರಿದ್ದಾರೆ ಅವರಿಗೆ ಎಂದೂ ಸಹಾ ಯಾವುದೇ ಮಾತಿನಲ್ಲಿ ಪ್ರಶ್ನೆ ಇರುವುದಿಲ್ಲ. ಅವರ ಮುಖ ಮತ್ತು ಚಲನೆಯಲ್ಲಿ ಪ್ರಸನ್ನತೆಯ ವ್ಯಕ್ತಿತ್ವ ಕಂಡು ಬರುವುದು, ಇದನ್ನೇ ಸ೦ತುಷ್ಠತೆ ಎಂದು ಹೇಳಲಾಗುವುದು. ಪ್ರಸನ್ನತೆ ಒಂದು ವೇಳೆ ಕಡಿಮೆಯಾಗಿದ್ದಲ್ಲಿ ಅದರ ಕಾರಣವಾಗಿದೆ ಪ್ರಾಪ್ತಿ ಕಡಿಮೆ ಮತ್ತು ಪ್ರಾಪ್ತಿ ಕಡಿಮೆಯ ಕಾರಣವಾಗಿದೆ ಯಾವುದಾದರೂ ಒಂದು ಇಚ್ಛೆ. ಬಹಳ ಸೂಕ್ಷ್ಮ ಇಚ್ಛೆಗಳು ಅಪ್ರಾಪ್ತಿಯ ಕಡೆ ಸೆಳೆಯುತ್ತದೆ, ಆದ್ದರಿಂದ ಅಲ್ಪಕಾಲದ ಇಚ್ಛೆಗಳನ್ನು ಬಿಟ್ಟು ಪ್ರಾಪ್ತಿ ಸ್ವರೂಪರಾಗಿ ಆಗ ಸದಾ ಪ್ರಸನ್ನ ಚಿತ್ತರಾಗಿರುವಿರಿ.

ಸ್ಲೋಗನ್:
ಪರಮಾತ್ಮನ ಪ್ರೀತಿಯಲ್ಲಿ ಲವಲೀನರಾಗಿದ್ದಾಗ ಮಾಯೆಯ ಆಕರ್ಷಣೆ ಸಮಾಪ್ತಿಯಾಗಿ ಬಿಡುವುದು.


ಬ್ರಹ್ಮಾ ತಂದೆಯ ಸಮಾನರಾಗಲು ವಿಶೇಷ ಪುರುಷಾರ್ಥ -
ಹೆಗೆ ಬ್ರಹ್ಮಾ ತಂದೆಯನ್ನು ನಡೆಯುತ್ತಾ ತಿರುಗಾಡುತ್ತಾ ಫರಿಶ್ಥಾ, ದೇಹಭಾನ ರಹಿತರಾಗಿ ಅನುಭವ ಮಾಡಿದಿರಿ. ಕರ್ಮ ಮಾಡುತ್ತಿದ್ದರೂ, ಮಾತನಾಡುತ್ತಿದ್ದರೂ, ಸೂಚನೆಗಳನ್ನು ಕೊಡುತ್ತಿದ್ದರೂ, ಉಮಂಗ-ಉತ್ಸಾಹ ಹೆಚ್ಚಿಸುತ್ತಿದ್ದಾಗಲೂ ಭಿನ್ನ, ಸೂಕ್ಷ್ಮ ಪ್ರಕಾಶ ಸ್ವರೂಪದ ಅನುಭೂತಿ ಮಾಡಿಸಿದರು, ಅದೇ ರೀತಿ ತಂದೆಯನ್ನು ಅನುಕರಣೆ ಮಾಡಿ. ಸದಾ ದೇಹ-ಭಾನದಿಂದ ಭಿನ್ನವಾಗಿರಿ, ಎಲ್ಲರಿಗೂ ನಿಮ್ಮ ನ್ಯಾರಾ ರೂಪ ಕಂಡುಬರಲಿ, ಇದಕ್ಕೆ ಹೇಳಲಾಗುವುದು ದೇಹದಲ್ಲಿರುತ್ತಾ ಫರಿಶ್ಥಾ ಸ್ಥಿತಿ.