09.01.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಬೇಹದ್ದಿನ ತಂದೆಯನ್ನು ನೆನಪು ಮಾಡುವುದು - ಇದು ಗುಪ್ತವಾಗಿದೆ, ನೆನಪಿನಿಂದಲೇ ನೆನಪು ಸಿಗುತ್ತದೆ,
ಯಾರು ನೆನಪು ಮಾಡುವುದಿಲ್ಲವೋ ಅವರನ್ನು ತಂದೆಯೂ ಹೇಗೆ ನೆನಪು ಮಾಡುವರು”
ಪ್ರಶ್ನೆ:
ಸಂಗಮದಲ್ಲಿ ನೀವು
ಮಕ್ಕಳು ಯಾವ ವಿದ್ಯೆಯನ್ನು ಓದುತ್ತೀರಿ, ಯಾವುದನ್ನು ಇಡೀ ಕಲ್ಪದಲ್ಲಿಯೇ ಓದಿಸಲಾಗುವುದಿಲ್ಲ?
ಉತ್ತರ:
ಜೀವಿಸಿದ್ದಂತೆಯೇ ಶರೀರದಿಂದ ಭಿನ್ನ ಅರ್ಥಾತ್ ಶವವಾಗುವ (ಅಶರೀರಿಯಾಗುವ) ವಿದ್ಯೆಯನ್ನು ಈಗಲೇ
ಓದುತ್ತೀರಿ ಏಕೆಂದರೆ ನೀವು ಕರ್ಮಾತೀತರಾಗಬೇಕಾಗಿದೆ, ಬಾಕಿ ಎಲ್ಲಿಯವರೆಗೆ ಶರೀರದಲ್ಲಿರುತ್ತೀರೋ
ಅಲ್ಲಿಯವರೆಗೆ ಕರ್ಮವನ್ನಂತೂ ಮಾಡಲೇಬೇಕಾಗಿದೆ. ಯಾವಾಗ ಶರೀರವಿರುವುದಿಲ್ಲವೋ ಆಗಲೇ ಮನಸ್ಸು
ಅಮನವಾಗುತ್ತದೆ. ಆದ್ದರಿಂದ ಮನಜೀತರೇ ಜಗತ್ಜೀತರಲ್ಲ, ಆದರೆ ಮಾಯಾಜೀತರೇ ಜಗತ್ಜೀತರು.
ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ, ಏಕೆಂದರೆ ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ -
ಬುದ್ಧಿಹೀನರಿಗೆ ಓದಿಸಲಾಗುತ್ತದೆ. ಈಗ ಬೇಹದ್ದಿನತಂದೆ ಶ್ರೇಷ್ಠಾತಿ ಶ್ರೇಷ್ಠ ಭಗವಂತನು
ಬರುತ್ತಾರೆಂದರೆ ಯಾರಿಗೆ ಓದಿಸಬಹುದು? ಅವಶ್ಯವಾಗಿ ಯಾರು ಅತೀ ಬುದ್ಧಿಹೀನರಾಗಿರುವರೋ ಅವರಿಗೇ
ಓದಿಸುವರು. ಆದ್ದರಿಂದಲೇ ವಿನಾಶಕಾಲೇ ವಿಪರೀತ ಬುದ್ಧಿಯವರೆಂದು ಹೇಳಲಾಗುತ್ತದೆ. ಹೇಗೆ ವಿಪರೀತ
ಬುದ್ಧಿಯವರಾಗಿದ್ದಾರೆ? 84 ಲಕ್ಷ ಯೋನಿಗಳೆಂದು ಬರೆದಿದ್ದಾರಲ್ಲವೆ. ಆದ್ದರಿಂದ ತಂದೆಯನ್ನೂ ಸಹ 84
ಲಕ್ಷ ಜನ್ಮಗಳಲ್ಲಿ ತೆಗೆದುಕೊಂಡು ಬಂದಿದ್ದಾರೆ. ಪರಮಾತ್ಮನನ್ನು ನಾಯಿ, ಬೆಕ್ಕು, ಎಲ್ಲಾ ಜೀವ
ಜಂತುಗಳಲ್ಲಿದ್ದಾರೆ ಎಂದು ಹೇಳಿ ಬಿಡುತ್ತಾರೆ. ಇದಂತೂ ಎರಡನೇ ಮಾತನ್ನು ತಿಳಿಸಬೇಕಾಗಿದೆ. ತಂದೆಯು
ತಿಳಿಸಿದ್ದಾರೆ - ಯಾರೇ ಹೊಸಬರು ಬಂದರೆ ಮೊಟ್ಟ ಮೊದಲು ಅವರಿಗೆ ಹದ್ದಿನ ಮತ್ತು ಬೇಹದ್ದಿನ ತಂದೆಯ
ಪರಿಚಯ ಕೊಡಬೇಕು. ಅವರು ಬೇಹದ್ದಿನ ದೊಡ್ಡ ತಂದೆ ಮತ್ತು ಇವರು ಹದ್ದಿನ ಚಿಕ್ಕ ತಂದೆಯಾಗಿದ್ದಾರೆ.
ಬೇಹದ್ದಿನ ತಂದೆಯೆಂದರೆ ಬೇಹದ್ದ್ ಆತ್ಮಗಳ ತಂದೆಯಾಗಿದ್ದಾರೆ. ಆ ಹದ್ದಿನ ತಂದೆಯು ಜೀವಾತ್ಮನ
ತಂದೆಯಾದರು. ಶಿವ ತಂದೆಯು ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಈ ಜ್ಞಾನವನ್ನು ಎಲ್ಲರೂ ಏಕರಸವಾಗಿ
ಧಾರಣೆ ಮಾಡಿಕೊಳ್ಳುವುದಿಲ್ಲ. ಕೆಲವರು ಒಂದು ಪರ್ಸೆಂಟ್ ಧಾರಣೆ ಮಾಡುತ್ತಾರೆ, ಇನ್ನೂ ಕೆಲವರು 95%
ಧಾರಣೆ ಮಾಡಿಕೊಳ್ಳುತ್ತಾರೆ. ಇದು ತಿಳುವಳಿಕೆಯ ಮಾತಾಗಿದೆ. ಸೂರ್ಯವಂಶಿ ಮನೆತನವಿರುತ್ತದೆಯಲ್ಲವೆ.
ಯಥಾರಾಜ-ರಾಣಿ ತಥಾ ಪ್ರಜಾ, ಇದು ಬುದ್ಧಿಯಲ್ಲಿ ಬರುತ್ತದೆಯಲ್ಲವೆ. ಪ್ರಜೆಗಳಲ್ಲಿ ಎಲ್ಲಾ ಪ್ರಕಾರದ
ಮನುಷ್ಯರಿರುತ್ತಾರೆ ಆದರೆ ಪ್ರಜೆಯೆಂದರೆ ಪ್ರಜೆಯೇ. ತಂದೆಯು ತಿಳಿಸುತ್ತಾರೆ - ಇದು ವಿದ್ಯೆಯಾಗಿದೆ.
ಪ್ರತಿಯೊಬ್ಬರೂ ತಮ್ಮ ಬುದ್ಧಿಯನುಸಾರ ಓದುತ್ತಾರೆ. ಪ್ರತಿಯೊಬ್ಬರಿಗೆ ತಮ್ಮ-ತಮ್ಮ ಪಾತ್ರವು
ಸಿಕ್ಕಿದೆ. ಕಲ್ಪದ ಹಿಂದೆ ಯಾರೆಷ್ಟು ವಿದ್ಯೆಯನ್ನು ಧಾರಣೆ ಮಾಡಿಕೊಂಡಿದ್ದರೋ ಈಗಲೂ ಅಷ್ಟನ್ನೇ
ಧಾರಣೆ ಮಾಡುತ್ತಾರೆ. ವಿದ್ಯೆಯನ್ನೆಂದೂ ಮುಚ್ಚಿಡಲು ಸಾಧ್ಯವಿಲ್ಲ. ವಿದ್ಯೆಯನುಸಾರವೇ ಪದವಿಯು
ಸಿಗುತ್ತದೆ. ತಂದೆಯು ತಿಳಿಸಿದ್ದಾರೆ – ಮುಂದೆ ಹೋದಂತೆ ಪರೀಕ್ಷೆಯು ಖಂಡಿತ ಬರುವುದು.
ಪರೀಕ್ಷೆಯಿಲ್ಲದೆ ವರ್ಗಾವಣೆಯಾಗಲು ಸಾಧ್ಯವಿಲ್ಲ. ಅಂತಿಮದಲ್ಲಿ ಎಲ್ಲವೂ ಅರ್ಥವಾಗುವುದು. ಅಲ್ಲದೆ
ಈಗಲೂ ಸಹ ನಾವು ಯಾವ ಪದವಿಗೆ ಯೋಗ್ಯರಾಗಿದ್ದೇವೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಭಲೆ
ಸಂಕೋಚಕ್ಕೊಳಗಾಗಿ ಎಲ್ಲರ ಜೊತೆ ಜೊತೆ ಕೈಯನ್ನೆತ್ತಿ ಬಿಡುತ್ತಾರೆ. ನಾವು ಈ ರೀತಿ ಹೇಗಾಗಲು ಸಾಧ್ಯ
ಎಂಬುದನ್ನೂ ಸಹ ಹೃದಯದಲ್ಲಿ ತಿಳಿದುಕೊಳ್ಳುತ್ತಾರೆ ಆದರೂ ಸಹ ಕೈಯತ್ತಿ ಬಿಡುತ್ತಾರೆ. ತನ್ನ ಬಗ್ಗೆ
ತಿಳಿದುಕೊಂಡಿದ್ದರೂ ಸಹ ಕೈಯೆತ್ತುವುದಕ್ಕೂ ಅಜ್ಞಾನವೆಂದೇ ಹೇಳಬಹುದು. ಎಷ್ಟೊಂದು ಅಜ್ಞಾನವಿದೆ!
ತಂದೆಯಂತೂ ಕೂಡಲೇ ತಿಳಿದುಕೊಳ್ಳುತ್ತಾರೆ. ಇವರಿಗಿಂತಲೂ ಆ ವಿದ್ಯಾರ್ಥಿಗಳಲ್ಲಾದರೂ
ಬುದ್ದಿಯಿರುತ್ತದೆ. ನಾವು ಸ್ಕಾಲರ್ಶಿಪ್ ತೆಗೆದುಕೊಳ್ಳಲು ಯೋಗ್ಯನಿಲ್ಲ, ನಾನು
ತೇರ್ಗಡೆಯಾಗುವುದಿಲ್ಲ ಎಂದು ಅವರಾದರೂ ತಿಳಿದುಕೊಳ್ಳುತ್ತಾರೆ. ಇಲ್ಲಿನವರಿಗಿಂತಲೂ ಆ ಅಜ್ಞಾನಿ
ಮಕ್ಕಳಾದರೂ ತಿಳಿದುಕೊಳ್ಳುತ್ತಾರೆ - ಶಿಕ್ಷಕರು ಏನನ್ನು ಓದಿಸುತ್ತಾರೆ, ಅದರಲ್ಲಿ ನಾನು ಎಷ್ಟು
ಅಂಕಗಳನ್ನು ತೆಗೆದುಕೊಳ್ಳುವೆನು ಎಂದು. ನಾನು ಪಾಸ್-ವಿತ್-ಆನರ್ ಆಗುತ್ತೇನೆ ಎಂದು ಅವರು
ಹೇಳುವುದಿಲ್ಲ. ಅಂದಮೇಲೆ ಇಲ್ಲಿನ ಮಕ್ಕಳಿಗೆ ಇಷ್ಟಾದರೂ ಬುದ್ಧಿಯಿಲ್ಲ, ಬಹಳ ದೇಹಾಭಿಮಾನವಿದೆಯೆಂದು
ಸಿದ್ಧವಾಗುತ್ತದೆ. ನೀವೀಗ ಲಕ್ಷ್ಮೀ-ನಾರಾಯಣರಾಗಲು ಬಂದಿದ್ದೀರೆಂದರೆ ಚಲನೆಯು ಬಹಳ ಚೆನ್ನಾಗಿರಬೇಕು.
ತಂದೆಯು ತಿಳಿಸುತ್ತಾರೆ - ಕೆಲವರು ವಿನಾಶಕಾಲೇ ವಿಪರೀತ ಬುದ್ಧಿಯವರಿದ್ದಾರೆ ಏಕೆಂದರೆ
ಕಾಯಿದೆಯನುಸಾರ ತಂದೆಯೊಂದಿಗೆ ಪ್ರೀತಿಯಿಲ್ಲ ಅಂದಮೇಲೆ ಅವರ ಗತಿಯೇನಾಗುವುದು? ಶ್ರೇಷ್ಠ ಪದವಿಯನ್ನು
ಪಡೆಯಲು ಸಾಧ್ಯವಿಲ್ಲ.
ತಂದೆಯು ಕುಳಿತು ನೀವು ಮಕ್ಕಳಿಗೆ ತಿಳಿಸುತ್ತಾರೆ – ವಿನಾಶ ಕಾಲೇ ವಿಪರೀತ ಬುದ್ಧಿಯ ಅರ್ಥವೇನೆಂದು
ಮಕ್ಕಳೇ ಪೂರ್ಣ ಅರ್ಥ ಮಾಡಿಕೊಳ್ಳದಿದ್ದರೆ ಇನ್ನ್ಯಾರು ಅರ್ಥ ಮಾಡಿಕೊಳ್ಳುವರು! ಯಾವ ಮಕ್ಕಳು ನಾವು
ಶಿವ ತಂದೆಯ ಮಕ್ಕಳಾಗಿದ್ದೇವೆಂದು ತಿಳಿದುಕೊಳ್ಳುವರೋ ಅವರೇ ಪೂರ್ಣ ಅರ್ಥವನ್ನು ತಿಳಿದುಕೊಂಡಿಲ್ಲ.
ತಂದೆಯನ್ನು ನೆನಪು ಮಾಡುವುದು ಗುಪ್ತ ಮಾತಾಗಿದೆ, ವಿದ್ಯೆಯಂತೂ ಗುಪ್ತವಾಗಿರುವುದಿಲ್ಲ,
ವಿದ್ಯೆಯಲ್ಲಿ ನಂಬರ್ವಾರ್ ಆಗಿದ್ದಾರೆ, ಎಲ್ಲರೂ ಒಂದೇ ಸಮನಾಗಿ ಓದುವುದಿಲ್ಲ. ತಂದೆಯು
ತಿಳಿದುಕೊಳ್ಳುತ್ತಾರೆ - ಇವರು ಇನ್ನೂ ಪುಟ್ಟ ಮಕ್ಕಳಾಗಿದ್ದಾರೆ. ಇಂತಹ ಬೇಹದ್ದಿನ ತಂದೆಯನ್ನು
3-3, 4-4 ತಿಂಗಳಾದರೂ ಸಹ ನೆನಪೇ ಮಾಡುವುದಿಲ್ಲ. ಅಂದಮೇಲೆ ನೆನಪು ಮಾಡುತ್ತಾರೆಯೇ ಎಂಬುದು ಹೇಗೆ
ಅರ್ಥವಾಗುವುದು! ಅವರು ಪತ್ರ ಬರೆದಾಗ ಮತ್ತು ಆ ಪತ್ರದಲ್ಲಿ ನಾನು ಇಂತಿಂತಹ ಆತ್ಮಿಕ ಸೇವೆ
ಮಾಡುತ್ತೇನೆಂದು ಸೇವಾ ಸಮಾಚಾರವಿದ್ದಾಗ ಅವರ ಬಗ್ಗೆ ತಿಳಿಯುತ್ತದೆ. ಪ್ರತ್ಯಕ್ಷ ಪ್ರಮಾಣ ಬೇಕಲ್ಲವೆ.
ಇಂತಹ ದೇಹಾಭಿಮಾನಿಗಳೂ ಇರುತ್ತಾರೆ ಅವರು ಎಂದೂ ನೆನಪೂ ಮಾಡುವುದಿಲ್ಲ ಅಥವಾ ಸೇವಾ ಸಮಾಚಾರವನ್ನೂ
ತೋರಿಸುವುದಿಲ್ಲ. ಕೆಲವರಂತೂ ಬಾಬಾ, ನಾವು ಇಂತಿಂತಹವರಿಗೆ ತಿಳಿಸಿದೆವು ಎಂದು ಸಮಾಚಾರವನ್ನು
ಬರೆಯುತ್ತಾರೆ. ಆಗ ಆ ಮಗು ಬದುಕಿದೆ, ಸೇವಾ ಸಮಾಚಾರವನ್ನು ಬರೆಯುತ್ತಾರೆಂದು ತಂದೆಯು
ತಿಳಿದುಕೊಳ್ಳುತ್ತಾರೆ. ಕೆಲವರಂತೂ 3-4 ತಿಂಗಳಿನವರೆಗೆ ಪತ್ರಗಳನ್ನೇ ಬರೆಯುವುದಿಲ್ಲ. ಯಾವುದೇ
ಸಮಾಚಾರ ಬರಲಿಲ್ಲವೆಂದರೆ ಇವರು ಸತ್ತು ಹೋದರು, ರೋಗಿಯಾಗಿದ್ದಾರೆಂದು ತಂದೆಯು
ತಿಳಿದುಕೊಳ್ಳುತ್ತಾರೆ. ರೋಗಿ ಮನುಷ್ಯರು ಬರೆಯಲು ಸಾಧ್ಯವಾಗುವುದಿಲ್ಲ. ಇದನ್ನೂ ಸಹ ಕೆಲವರು
ಬರೆಯುತ್ತಾರೆ - ನಮ್ಮ ಆರೋಗ್ಯವು ಸರಿಯಿರಲಿಲ್ಲ. ಆದ್ದರಿಂದ ಪತ್ರ ಬರೆಯಲಿಲ್ಲ ಎಂದು. ಇನ್ನೂ
ಕೆಲವರಂತೂ ರೋಗಿಯೇ ಆಗಿಲ್ಲ ಆದರೂ ಸಹ ಸಮಾಚಾರವನ್ನೇ ಬರೆಯುವುದಿಲ್ಲ ಏಕೆಂದರೆ ದೇಹಾಭಿಮಾನವಿದೆ
ಅಂದಮೇಲೆ ತಂದೆಯು ಯಾರನ್ನು ನೆನಪು ಮಾಡುವರು! ನೆನಪಿನಿಂದಲೇ ನೆನಪು ಸಿಗುತ್ತದೆ. ಆದರೆ ಮಕ್ಕಳಲ್ಲಿ
ದೇಹಾಭಿಮಾನವಿದೆ. ತಂದೆಯು ಬಂದು ತಿಳಿಸುತ್ತಾರೆ - ನನ್ನನ್ನು ಸರ್ವವ್ಯಾಪಿ ಎಂದು ಹೇಳಿ 84
ಲಕ್ಷಗಳಿಗಿಂತಲೂ ಹೆಚ್ಚು ಯೋನಿಗಳಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಮನುಷ್ಯರಿಗೆ ಕಲ್ಲು
ಬುದ್ಧಿಯವರೆಂದು ಹೇಳಲಾಗುತ್ತದೆ. ಭಗವಂತನನ್ನು ಕಲ್ಲು, ಮುಳ್ಳು ಎಲ್ಲದರಲ್ಲಿಯೂ
ವಿರಾಜಮಾನವಾಗಿದ್ದಾರೆಂದು ಹೇಳಿ ಬಿಡುತ್ತಾರೆ ಅಂದಾಗ ಇದು ಬೇಹದ್ದಿನ ಅವಹೇಳನವಾಯಿತಲ್ಲವೆ.
ಆದ್ದರಿಂದ ತಂದೆಯು ತಿಳಿಸುತ್ತಾರೆ - ನನಗೆ ಎಷ್ಟೊಂದು ನಿಂದನೆ ಮಾಡುತ್ತಾರೆ. ನೀವಂತೂ ಈಗ
ನಂಬರ್ವಾರ್ ಅರಿತುಕೊಂಡಿದ್ದೀರಿ. ಭಕ್ತಿಮಾರ್ಗದಲ್ಲಿ ಬಾಬಾ, ತಾವು ಬಂದರೆ ನಾವು
ಬಲಿಹಾರಿಯಾಗುತ್ತೇವೆ, ತಮ್ಮನ್ನು ವಾರಸುಧಾರನನ್ನಾಗಿ ಮಾಡಿಕೊಳ್ಳುತ್ತೇವೆಂದು ಹಾಡುತ್ತಾರೆ. ಆದರೆ
ಈ ರೀತಿ ವಾರಸುಧಾರನನ್ನಾಗಿ ಮಾಡಿಕೊಳ್ಳುತ್ತಾರೆ. ಭಗವಂತನನ್ನೇ ಕಲ್ಲು-ಮುಳ್ಳಿನಲ್ಲಿದ್ದೀಯಾ ಎಂದು
ಹೇಳುತ್ತಾರೆ ಎಷ್ಟೊಂದು ನಿಂದನೆ ಮಾಡುತ್ತಾರೆ! ಆದ್ದರಿಂದ ತಂದೆಯು ತಿಳಿಸುತ್ತಾರೆ – ಯಧಾ ಯಧಾಹೀ
ಧರ್ಮಸ್ಯ..... ನೀವು ಮಕ್ಕಳು ಈಗ ತಂದೆಯನ್ನು ಅರಿತುಕೊಂಡಿದ್ದೀರಿ. ಆದ್ದರಿಂದ ತಂದೆಯ ಎಷ್ಟೊಂದು
ಮಹಿಮೆ ಮಾಡುತ್ತೀರಿ. ಕೆಲವರಂತೂ ಮಹಿಮೆಯೇನು ಕೇವಲ ನೆನಪು ಮಾಡಿಕೊಂಡು ಎರಡಕ್ಷರದ ಪತ್ರವನ್ನೂ ಸಹ
ಬರೆಯುವುದಿಲ್ಲ, ದೇಹಾಭಿಮಾನಿಗಳಾಗಿ ಬಿಡುತ್ತಾರೆ. ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ - ನಮಗೆ
ತಂದೆಯು ಸಿಕ್ಕಿದ್ದಾರೆ, ತಂದೆಯು ನಮಗೆ ಓದಿಸುತ್ತಾರೆ. ಭಗವಾನುವಾಚವಿದೆಯಲ್ಲವೇ! ನಾನು ನಿಮಗೆ
ರಾಜಯೋಗವನ್ನು ಕಲಿಸುತ್ತೇನೆ. ವಿಶ್ವದ ರಾಜ್ಯಭಾಗ್ಯವನ್ನು ಹೇಗೆ ಪ್ರಾಪ್ತಿ ಮಾಡಿಕೊಳ್ಳುವುದು -
ಅದಕ್ಕಾಗಿ ರಾಜಯೋಗವನ್ನು ಕಲಿಸುತ್ತೇನೆ. ನಾವು ವಿಶ್ವದ ರಾಜ್ಯಭಾಗ್ಯವನ್ನು ಪಡೆಯಲು ಬೇಹದ್ದಿನ
ತಂದೆಯಿಂದ ಓದುತ್ತೇವೆಂದು ನಶೆಯಿದ್ದಿದ್ದೇ ಆದರೆ ಅಪಾರ ಖುಷಿಯಿರುವುದು. ಭಲೆ ಗೀತೆಯನ್ನು
ಓದುತ್ತಾರೆ ಆದರೆ ಹೇಗೆ ಸಾಮಾನ್ಯ ಪುಸ್ತಕಗಳನ್ನು ಓದಿದಂತೆ. ಕೃಷ್ಣ ಭಗವಾನುವಾಚ - ರಾಜಯೋಗವನ್ನು
ಕಲಿಸುತ್ತೇನೆ, ಅಷ್ಟೆ ಇಷ್ಟು ಬುದ್ಧಿಯೋಗ ಅಥವಾ ಖುಷಿಯೂ ಇರುವುದಿಲ್ಲ. ಗೀತೆಯನ್ನು ಓದುವ ಹಾಗೂ
ಹೇಳುವವರಲ್ಲಿ ಅಷ್ಟೊಂದು ಖುಷಿಯಿರುವುದಿಲ್ಲ. ಗೀತೆಯನ್ನು ಓದಿ ಮುಗಿಸಿ ಉದ್ಯೋಗ-ವ್ಯವಹಾರಗಳಲ್ಲಿ
ಹೊರಟು ಹೋಗುತ್ತಾರೆ. ನಿಮಗಂತೂ ಬೇಹದ್ದಿನ ತಂದೆಯು ಓದಿಸುತ್ತಾರೆಂಬುದು ಬುದ್ಧಿಯಲ್ಲಿದೆ. ನಮಗೆ
ಭಗವಂತನೇ ಓದಿಸುತ್ತಾರೆಂದು ಮತ್ತ್ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ ಅಂದಾಗ ಮೊಟ್ಟ ಮೊದಲು ಯಾರೇ
ಬಂದರೂ ಸಹ ಅವರಿಗೆ ತಂದೆಯ ಪರಿಚಯವನ್ನು ತಿಳಿಸಬೇಕಾಗಿದೆ. ತಿಳಿಸಿ, ಭಾರತವು ಸ್ವರ್ಗವಾಗಿತ್ತಲ್ಲವೆ,
ಈಗ ನರಕವಾಗಿದೆ. ನಾವು ಸತ್ಯಯುಗದಲ್ಲಿಯೂ ಇದ್ದೇವೆ, ಕಲಿಯುಗದಲ್ಲಿಯೂ ಇದ್ದೇವೆಂದು ಯಾರೂ ಹೇಳಲು
ಸಾಧ್ಯವಿಲ್ಲ. ಯಾರಿಗಾದರೂ ದುಃಖ ಸಿಕ್ಕಿದರೆ ಅವರು ನರಕದಲ್ಲಿದ್ದಾರೆ, ಯಾರಿಗೆ ಸುಖ ಸಿಕ್ಕಿತೋ
ಅವರು ಸ್ವರ್ಗದಲ್ಲಿದ್ದಾರೆ, ದುಃಖಿ ಮನುಷ್ಯರು ನರಕದಲ್ಲಿದ್ದಾರೆ. ನಾವಂತೂ ಬಹಳ ಸುಖದಲ್ಲಿ
ಕುಳಿತಿದ್ದೇವೆ. ಮಹಲು, ಮಹಡಿ ಇತ್ಯಾದಿಗಳೆಲ್ಲವೂ ಇದೆ ಎಂದು ಅನೇಕರು ಹೇಳುತ್ತಾರೆ. ಹೊರಗಿನ
ಸುಖವನ್ನು ನೋಡುತ್ತಾರಲ್ಲವೆ. ಇದನ್ನೂ ಸಹ ನೀವೀಗ ತಿಳಿದುಕೊಂಡಿದ್ದೀರಿ, ಸತ್ಯಯುಗೀ ಸುಖವಂತೂ
ಇಲ್ಲಿರಲು ಸಾಧ್ಯವಿಲ್ಲ ಅಥವಾ ಸತ್ಯಯುಗಕ್ಕೆ ಕಲಿಯುಗ ಅಥವಾ ಕಲಿಯುಗಕ್ಕೆ ಸತ್ಯಯುಗ ಎಂದು ಹೇಳುವುದು
ಒಂದೇ ಮಾತಾಗಿದೆ ಎಂದು ಹೇಳುವಂತಿಲ್ಲ. ಈ ರೀತಿ ತಿಳಿದುಕೊಳ್ಳುವವರಿಗೂ ಸಹ ಅಜ್ಞಾನಿಗಳೆಂದು
ಹೇಳುತ್ತಾರೆ. ಆದ್ದರಿಂದ ಮೊಟ್ಟ ಮೊದಲು ತಂದೆಯ ಪರಿಚಯವನ್ನು ತಿಳಿಸಬೇಕಾಗಿದೆ. ತಂದೆಯೇ ತಮ್ಮ
ಪರಿಚಯ ಕೊಡುತ್ತಾರೆ ಮತ್ತ್ಯಾರೂ ತಿಳಿದುಕೊಂಡಿಲ್ಲ. ಪರಮಾತ್ಮ ಸರ್ವವ್ಯಾಪಿಯೆಂದು ಹೇಳಿ
ಬಿಡುತ್ತಾರೆ, ಈಗ ನೀವು ಚಿತ್ರಗಳಲ್ಲಿ ತೋರಿಸುತ್ತೀರಿ ಅರ್ಥಾತ್ ಈಗ ನೀವು ಚಿತ್ರಗಳಲ್ಲಿ
ತೋರಿಸುತ್ತೀರಿ - ಆತ್ಮ ಮತ್ತು ಪರಮಾತ್ಮನ ರೂಪವು ಒಂದೇ ಆಗಿದೆ. ಅವರೂ ಆತ್ಮನೇ ಆಗಿದ್ದಾರೆ ಆದರೆ
ಅವರಿಗೆ ಪರಮ ಆತ್ಮನೆಂದು ಹೇಳುತ್ತಾರೆ. ತಂದೆಯೇ ಕುಳಿತು ತಿಳಿಸುತ್ತಾರೆ - ನಾನು ಹೇಗೆ ಬರುತ್ತೇನೆ
ಎಂದು. ಅಲ್ಲಿ ಆತ್ಮರೆಲ್ಲರೂ ಪರಮಧಾಮದಲ್ಲಿರುತ್ತಾರೆ, ಈ ಮಾತುಗಳನ್ನು ಹೊರಗಿನವರು ಯಾರೂ
ತಿಳಿದುಕೊಳ್ಳಲು ಸಾಧ್ಯವಿಲ್ಲ. ಭಾಷೆಯು ಬಹಳ ಸಹಜವಾಗಿದೆ. ಗೀತೆಯಲ್ಲಿ ಶ್ರೀಕೃಷ್ಣನ ಹೆಸರನ್ನು
ಹಾಕಿ ಬಿಟ್ಟಿದ್ದಾರೆ, ಈಗ ಕೃಷ್ಣನಂತೂ ಗೀತೆಯನ್ನು ತಿಳಿಸುವುದಿಲ್ಲ. ನನ್ನೊಬ್ಬನನ್ನೇ ನೆನಪು ಮಾಡಿ
ಎಂದು ಕೃಷ್ಣನು ಎಲ್ಲರಿಗೆ ಹೇಳಲು ಸಾಧ್ಯವಿಲ್ಲ. ದೇಹಧಾರಿಯ ನೆನಪಿನಿಂದಂತೂ ಪಾಪವು ಕಳೆಯುವುದಿಲ್ಲ.
ಕೃಷ್ಣ ಭಗವಾನುವಾಚ, ದೇಹದ ಎಲ್ಲಾ ಸಂಬಂಧಗಳನ್ನು ತ್ಯಾಗ ಮಾಡಿ ನನ್ನೊಬ್ಬನನ್ನೇ ನೆನಪು ಮಾಡಿ. ಆದರೆ
ದೇಹದ ಸಂಬಂಧಗಳಂತೂ ಕೃಷ್ಣನಿಗೂ ಇದೆ ಮತ್ತು ಕೃಷ್ಣನಂತು ಚಿಕ್ಕ ಮಗುವಲ್ಲವೆ. ಇದು ಎಷ್ಟು
ತಪ್ಪಾಗಿದೆ! ಒಂದು ತಪ್ಪಿನ ಕಾರಣ ಎಷ್ಟು ದೊಡ್ಡ ಅಂತರವಾಗಿ ಬಿಡುತ್ತದೆ! ಪರಮಾತ್ಮನಂತೂ
ಸರ್ವವ್ಯಾಪಿಯಾಗಲು ಸಾಧ್ಯವಿಲ್ಲ. ಅವರಿಗೇ ಸದ್ಗತಿದಾತನೆಂದು ಹೇಳುತ್ತಾರೆ ಅಂದಮೇಲೆ ಅವರೇ
ದುರ್ಗತಿಯಲ್ಲಿ ಹೇಗೆ ಬರುತ್ತಾರೆ! ಪರಮಾತ್ಮನು ಎಂದಾದರೂ ದುರ್ಗತಿಯನ್ನು ಹೊಂದುತ್ತಾರೆಯೇ? ಇವು
ವಿಚಾರ ಸಾಗರ ಮಂಥನ ಮಾಡುವ ಮಾತುಗಳಾಗಿವೆ. ಸಮಯವನ್ನು ವ್ಯರ್ಥ ಮಾಡುವ ಮಾತಿಲ್ಲ. ಮನುಷ್ಯರಂತೂ ನಮಗೆ
ಬಿಡುವಿಲ್ಲವೆಂದು ಹೇಳಿ ಬಿಡುತ್ತಾರೆ. ಬಂದು ಕೋರ್ಸನ್ನು ತೆಗೆದುಕೊಳ್ಳಿ ಎಂದು ನೀವು ತಿಳಿಸಿದರೆ
ನಮಗೆ ಬಿಡುವಿಲ್ಲವೆಂದು ಹೇಳುತ್ತಾರೆ. ಎರಡು ದಿನಗಳು ಬರುತ್ತಾರೆ, ಮತ್ತೆ ನಾಲ್ಕು ದಿನಗಳು
ಬರುವುದಿಲ್ಲ..... ಓದುವುದಿಲ್ಲವೆಂದರೆ ಈ ಲಕ್ಷ್ಮೀ-ನಾರಾಯಣರಾಗಲು ಹೇಗೆ ಸಾಧ್ಯ! ಮಾಯೆಯ ಪ್ರಭಾವವು
ಎಷ್ಟೊಂದಿದೆ! ತಂದೆಯು ತಿಳಿಸುತ್ತಾರೆ - ಯಾವ ಕ್ಷಣ, ನಿಮಿಷ ಕಳೆಯುತ್ತದೆಯೋ ಅದು ಚಾಚೂ ತಪ್ಪದೆ
ಪುನರಾವರ್ತನೆಯಾಗುತ್ತದೆ. ಲೆಕ್ಕವಿಲ್ಲದಷ್ಟು ಬಾರಿ ಪುನರಾವರ್ತನೆಯಾಗುತ್ತಿರುತ್ತದೆ, ಈಗಂತೂ
ತಂದೆಯ ಮೂಲಕ ಕೇಳುತ್ತಿದ್ದೀರಿ. ತಂದೆಯಂತೂ ಜನನ-ಮರಣದಲ್ಲಿ ಬರುವುದಿಲ್ಲ, ಪೂರ್ಣ ಜನನ-ಮರಣದಲ್ಲಿ
ಯಾರು ಬರುತ್ತಾರೆ ಮತ್ತು ಯಾರು ಬರುವುದಿಲ್ಲ ಎಂಬುದನ್ನು ಹೋಲಿಕೆ ಮಾಡಲಾಗುತ್ತದೆ. ಕೇವಲ
ತಂದೆಯೊಬ್ಬರು ಜನನ-ಮರಣದಲ್ಲಿ ಬರುವುದಿಲ್ಲ, ಉಳಿದೆಲ್ಲರೂ ಬರುತ್ತಾರೆ ಆದ್ದರಿಂದ ಚಿತ್ರಗಳನ್ನೂ
ತೋರಿಸಿದ್ದಾರೆ. ಬ್ರಹ್ಮಾ ಮತ್ತು ವಿಷ್ಣು ಇಬ್ಬರೂ ಜನನ-ಮರಣದಲ್ಲಿ ಬರುತ್ತಾರೆ. ಬ್ರಹ್ಮನಿಂದ
ವಿಷ್ಣು, ವಿಷ್ಣುವಿನಿಂದ ಬ್ರಹ್ಮನ ಪಾತ್ರದಲ್ಲಿ ಬರುತ್ತಿರುತ್ತಾರೆ. ಇದು ಕೊನೆಯಾಗಲು
ಸಾಧ್ಯವಿಲ್ಲ. ಈ ಚಿತ್ರಗಳನ್ನು ಎಲ್ಲರೂ ಬಂದು ನೋಡುವರು ಮತ್ತು ತಿಳಿದುಕೊಳ್ಳುವರು, ಇದು ಬಹಳ ಸಹಜ
ಮತ್ತು ತಿಳಿದುಕೊಳ್ಳುವ ಮಾತುಗಳಾಗಿವೆ. ಬುದ್ಧಿಯಲ್ಲಿ ಬರಬೇಕು - ನಾವೇ ಬ್ರಾಹ್ಮಣರಾಗಿದ್ದೇವೆ
ನಂತರ ನಾವೇ ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೇವೆ. ಮತ್ತೆ ತಂದೆಯು ಬರುತ್ತಾರೆ ಆಗ ನಾವೇ ಮತ್ತೆ
ಬ್ರಾಹ್ಮಣರಾಗುತ್ತೇವೆ. ಇದನ್ನು ನೆನಪು ಮಾಡಿದರೂ ಸಹ ಸ್ವದರ್ಶನ ಚಕ್ರಧಾರಿಯಾದಿರಿ. ಅನೇಕರಿಗೆ
ನೆನಪು ನಿಲ್ಲುವುದೇ ಇಲ್ಲ. ನೀವು ಬ್ರಾಹ್ಮಣರೇ ಸ್ವದರ್ಶನ ಚಕ್ರಧಾರಿಯಾಗುತ್ತೀರಿ, ದೇವತೆಗಳು
ಆಗುವುದಿಲ್ಲ. ಚಕ್ರವು ಹೇಗೆ ಸುತ್ತುತ್ತದೆ ಎಂಬ ಜ್ಞಾನವನ್ನು ಪಡೆಯುವುದರಿಂದ ಅವರು ಈ
ದೇವತೆಗಳಾಗಿದ್ದಾರೆ, ವಾಸ್ತವದಲ್ಲಿ ಯಾವುದೇ ಮನುಷ್ಯರು ಸ್ವದರ್ಶನ ಚಕ್ರಧಾರಿಗಳೆಂದು
ಕರೆಸಿಕೊಳ್ಳಲು ಯೋಗ್ಯರಿಲ್ಲ. ಮನುಷ್ಯ ಸೃಷ್ಟಿ, ಮೃತ್ಯುಲೋಕವೇ ಬೇರೆಯಾಗಿದೆ. ಹೇಗೆ ಭಾರತವಾಸಿಗಳ
ರೀತಿ ನೀತಿಗಳೇ ಬೇರೆಯಾಗಿವೆ, ಹಾಗೆಯೇ ಎಲ್ಲರದೂ ಬೇರೆ-ಬೇರೆಯಿರುತ್ತದೆ. ದೇವತೆಗಳ ರೀತಿ-ನೀತಿಗಳೇ
ಬೇರೆಯಾಗಿವೆ. ಮೃತ್ಯುಲೋಕದ ಮನುಷ್ಯರ ರೀತಿ-ನೀತಿಯೇ ಬೇರೆಯಾಗಿದೆ. ರಾತ್ರಿ-ಹಗಲಿನ ಅಂತರವಿದೆ
ಆದ್ದರಿಂದ ಎಲ್ಲರೂ ಹೇಳುತ್ತಾರೆ - ಹೇ ಭಗವಂತ ನಾವು ಪತಿತರಾಗಿದ್ದೇವೆ. ನಾವೆಲ್ಲಾ ಪತಿತ
ಪ್ರಪಂಚದಲ್ಲಿರುವವರನ್ನು ಪಾವನ ಮಾಡಿ. ಇಂದಿಗೆ 5000 ವರ್ಷಗಳ ಮೊದಲು ಪಾವನ ಪ್ರಪಂಚವಿತ್ತು ಅದಕ್ಕೆ
ಸತ್ಯಯುಗವೆಂದು ಹೇಳಲಾಗುತ್ತದೆ, ತ್ರೇತಾಯುಗಕ್ಕೆ ಹೇಳುವುದಿಲ್ಲ. ತಂದೆಯು ತಿಳಿಸಿದ್ದಾರೆ -
ಸತ್ಯಯುಗವು ಫಸ್ಟ್ಕ್ಲಾಸ್, ತ್ರೇತಾಯುಗವು ಸೆಕೆಂಡ್ಕ್ಲಾಸ್ ಆಗಿದೆ. ಅಂದಾಗ ಒಂದೊಂದು ಮಾತನ್ನೂ
ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕು. ಯಾರೇ ಬಂದರೂ ಸಹ ಕೇಳಿ ಆಶ್ಚರ್ಯ ಚಕಿತರಾಗಬೇಕು. ಕೆಲವರಂತೂ
ಆಶ್ಚರ್ಯ ಚಕಿತರಾಗುತ್ತಾರೆ ಆದರೆ ಮತ್ತೆ ಅವರಿಗೆ ಪುರುಷಾರ್ಥ ಮಾಡಲು ಬಿಡುವೇ ಇರುವುದಿಲ್ಲ.
ಅವಶ್ಯವಾಗಿ ಪವಿತ್ರರಾಗಿರಬೇಕೆಂಬುದನು ಕೇಳುತ್ತಾರೆ. ಈ ಕಾಮ ವಿಕಾರವೇ ಮನುಷ್ಯರನ್ನು ಪತಿತರನ್ನಾಗಿ
ಮಾಡುತ್ತದೆ. ಇದನ್ನು ಜಯಿಸುವುದರಿಂದಲೇ ನೀವು ಜಗತ್ಜೀತರಾಗುತ್ತೀರಿ. ತಂದೆಯೂ ಹೇಳಿದ್ದಾರೆ, ಕಾಮ
ವಿಕಾರ ಜಯಸಿ ಜಗತ್ಜೀತರಾಗಿ. ಮತ್ತೆ ಮನುಷ್ಯರು ಹೇಳುತ್ತಾರೆ - ಮನಜೀತರೇ ಜಗತ್ಜೀರಾಗುತ್ತಾರೆ.
ಮನಸ್ಸನ್ನು ವಶ ಪಡಿಸಿಕೊಳ್ಳಿ ಎಂದು. ಆದರೆ ಯಾವಾಗ ಶರೀರವಿರುವುದಿಲ್ಲವೋ ಆಗಲೇ ಮನಸ್ಸು
ಅಮನವಾಗುತ್ತದೆ ಬಾಕಿ ಇನ್ನೆಂದೂ ಮನಸ್ಸು ಅಮನಸಾಗುವುದಿಲ್ಲ. ದೇಹ ಸಿಗುವುದೇ ಕರ್ಮ ಮಾಡುವುದಕ್ಕಾಗಿ
ಅಂದಮೇಲೆ ಕರ್ಮಾತೀತ ಸ್ಥಿತಿಯಲ್ಲಿ ಹೇಗಿರುತ್ತೀರಿ? ಶವಕ್ಕೆ ಕರ್ಮಾತೀತ ಸ್ಥಿತಿಯೆಂದು
ಹೇಳಲಾಗುತ್ತದೆ. ಜೀವಿಸಿದ್ದಂತೆಯೇ ಶವ, ಶರೀರದಿಂದ ಭಿನ್ನ. ನಿಮಗೂ ಸಹ ಶರೀರದಿಂದ ಭಿನ್ನರಾಗುವ
ವಿದ್ಯೆಯನ್ನು ಓದಿಸುತ್ತಾರೆ, ಆತ್ಮವು ಶರೀರದಿಂದ ಭಿನ್ನವಾಗಿದೆ. ಆತ್ಮವು ಪರಮಧಾಮ ನಿವಾಸಿಯಾಗಿದೆ,
ಅದು ಶರೀರದಲ್ಲಿ ಬಂದಾಗ ಅವರಿಗೆ ಮನುಷ್ಯನೆಂದು ಹೇಳಲಾಗುತ್ತದೆ. ಶರೀರ ಸಿಗುವುದೇ ಕರ್ಮ
ಮಾಡುವುದಕ್ಕಾಗಿ. ಒಂದು ಶರೀರವನ್ನು ಬಿಟ್ಟರೆ ಮತ್ತೆ ಕರ್ಮ ಮಾಡುವುದಕ್ಕಾಗಿ ಇನ್ನೊಂದು ಶರೀರವನ್ನು
ತೆಗೆದುಕೊಳ್ಳಲು ಬೇಕಾಗಿದೆ. ಯಾವಾಗ ಕರ್ಮ ಮಾಡುವುದು ಇರುವುದಿಲ್ಲವೋ ಆಗಲೇ ಶಾಂತವಾಗಿರುತ್ತದೆ
ಅಂದರೆ ಮೂಲವತನದಲ್ಲಿ ಕರ್ಮವಿರುವುದಿಲ್ಲ. ಸೃಷ್ಟಿಚಕ್ರವು ಇಲ್ಲಿ ಸುತ್ತುತ್ತದೆ. ತಂದೆಯನ್ನು
ಮತ್ತು ಸೃಷ್ಟಿಚಕ್ರವನ್ನು ಅರಿತುಕೊಳ್ಳಬೇಕಾಗಿದೆ, ಇದಕ್ಕೇ ಜ್ಞಾನವೆಂದು ಹೇಳಲಾಗುತ್ತದೆ. ಈ
ಕಣ್ಣುಗಳು ಎಲ್ಲಿಯವರೆಗೆ ವಿಕಾರಿಯಾಗಿರುವುದೋ ಅಲ್ಲಿಯವರೆಗೆ ಈ ಕಣ್ಣುಗಳಿಂದ ಪವಿತ್ರ ವಸ್ತುವನ್ನು
ನೋಡಲು ಸಾಧ್ಯವಿಲ್ಲ. ಆದ್ದರಿಂದ ಜ್ಞಾನದ ಮೂರನೇ ನೇತ್ರವು ಬೇಕು. ನೀವು ಯಾವಾಗ ಕರ್ಮಾತೀತ
ಸ್ಥಿತಿಯನ್ನು ಪಡೆಯುವಿರೋ ಅರ್ಥಾತ್ ದೇವತೆಗಳಾಗುತ್ತೀರೋ ಆಗ ಈ ಕಣ್ಣುಗಳಿಂದ ದೇವತೆಗಳನ್ನು
ನೋಡುತ್ತಿರುತ್ತೀರಿ. ಬಾಕಿ ಈ ಶರೀರದಲ್ಲಿ ಈ ಕಣ್ಣುಗಳಿಂದ ಕೃಷ್ಣನನ್ನು ನೋಡಲು ಸಾಧ್ಯವಿಲ್ಲ.
ಕೇವಲ ಸಾಕ್ಷಾತ್ಕಾರವಾದರೆ ಅದರಿಂದೇನೂ ಸಿಗುವುದಿಲ್ಲ. ಅಲ್ಪಕಾಲಕ್ಕಾಗಿ ಖುಷಿಯಿರುತ್ತದೆ, ಕಾಮನೆಯು
ಈಡೇರುತ್ತದೆ. ಡ್ರಾಮಾದಲ್ಲಿ ಸಾಕ್ಷಾತ್ಕಾರವೂ ನಿಗಧಿಯಾಗಿದೆ, ಇದರಿಂದ ಪ್ರಾಪ್ತಿಯೇನೂ
ಆಗುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಶರೀರದಿಂದ
ಭಿನ್ನ ಆತ್ಮನಾಗಿದ್ದೇನೆ, ಜೀವಿಸಿದ್ದಂತೆಯೇ ಈ ಶರೀರದಲ್ಲಿರುತ್ತಾ ಹೇಗೆ ಶವ - ಈ ಸ್ಥಿತಿಯ
ಅಭ್ಯಾಸದಿಂದ ಕರ್ಮಾತೀತ ಸ್ಥಿತಿಯನ್ನು ಮಾಡಿಕೊಳ್ಳಬೇಕಾಗಿದೆ.
2. ಸರ್ವೀಸಿನ ಪ್ರತ್ಯಕ್ಷ ಪ್ರಮಾಣವನ್ನು ತೋರಿಸಬೇಕಾಗಿದೆ. ದೇಹಭಾನವನ್ನು ಬಿಟ್ಟು ತಮ್ಮ
ಸತ್ಯ-ಸತ್ಯ ಸಮಾಚಾರವನ್ನು ತಂದೆಗೆ ಕೊಡಬೇಕಾಗಿದೆ. ಪಾಸ್-ವಿತ್-ಆನರ್ ಆಗುವ ಪುರುಷಾರ್ಥ
ಮಾಡಬೇಕಾಗಿದೆ.
ವರದಾನ:
ಸರ್ವ ಖಾತೆ
ಮತ್ತು ಸಂಬಂಧ ಒಬ್ಬ ತಂದೆಯೊಂದಿಗೆ ಇಡುವಂತಹ ಡಬ್ಬಲ್ ಲೈಟ್ ಫರಿಶ್ತಾ ಭವ.
ಡಬ್ಬಲ್ ಲೈಟ್ ಫರಿಶ್ತೆ
ಆಗ ಬೇಕಾದರೆ ದೇಹದ ಭಾನದಿಂದಲೂ ಸಹ ದೂರ ಇರಬೇಕು ಏಕೆಂದರೆ ದೇಹಭಾನ ಮಣ್ಣಾಗಿದೆ, ಒಂದುವೇಳೆ ಇದರ
ಹೊರೆಯೂ ಸಹ ಇದ್ದಲ್ಲಿ ಭಾರೀತನ ಬರುತ್ತೆ. ಫರಿಶ್ತಾ ಅರ್ಥಾತ್ ತಮ್ಮ ದೇಹದ ಜೊತೆಯೂ ಸಹ ಸಂಬಂಧ
ಇಲ್ಲ. ತಂದೆ ಕೊಟ್ಟಿರುವಂತಹ ಶರೀರವೂ ಸಹ ತಂದೆಗೇ ಕೊಟ್ಟಿರುವೆ. ತನ್ನ ವಸ್ತು ಬೇರೆಯವರಿಗೆ ಕೊಟ್ಟ
ಮೇಲೆ ಅದರ ಮೇಲೆ ನನ್ನ ಸಂಬಂಧ ಸಮಾಪ್ತಿಯಾಯಿತು. ಎಲ್ಲ ಲೆಕ್ಕಾಚಾರ, ಎಲ್ಲಾ
ಕೊಡುವುದು-ತೆಗೆದುಕೊಳ್ಳುವುದು ತಂದೆಯಿಂದ ಬಾಕಿ ಎಲ್ಲ ಹಳೆಯ ಲೆಕ್ಕಾಚಾರ ಮತ್ತು ಸಂಬಂಧ ಸಮಾಪ್ತಿ
- ಹೀಗೆ ಸಂಪೂರ್ಣ ಭಿಕ್ಷುಕರೇ ಡಬ್ಬಲ್ ಲೈಟ್ ಫರಿಶ್ತೆ ಆಗಿದ್ದಾರೆ.
ಸ್ಲೋಗನ್:
ತಮ್ಮ ವಿಶೇಷತೆಗಳನ್ನು
ಪ್ರಯೋಗದಲ್ಲಿ ತನ್ನಿ ಆಗ ಪ್ರತಿ ಹೆಜ್ಜೆಯಲ್ಲಿ ಪ್ರಗತಿಯ ಅನುಭವ ಮಾಡುವಿರಿ.
ಬ್ರಹ್ಮಾ ತಂದೆಯ ಸಮಾನ
ಸಂಪನ್ನ ಸ್ಥಿತಿಯ ಅನುಭವ ಮಾಡಿರಿ:-
ಎಲ್ಲದಕ್ಕಿಂತಲೂ
ಸರಳವಾದ ಚಿಹ್ನೆಯು ಬಿಂದು ಆಗಿದೆ. ಬಾಪ್ದಾದಾರವರು ಕೇವಲ ಬಿಂದುವಿನ ಲೆಕ್ಕವನ್ನು ತಿಳಿಸುತ್ತಾರೆ.
ಬಿಂದುವಾಗಿ ಬಿಂದು ತಂದೆಯನ್ನು ನೆನಪು ಮಾಡಿರಿ ಮತ್ತು ಕಳೆದು ಹೋಗಿರುವುದಕ್ಕೆ
ಬಿಂದುವನ್ನಿಡುತ್ತೀರೆಂದರೆ, ಎಲ್ಲಾ ಸಂಕಲ್ಪ, ಕರ್ಮ, ಸಂಸ್ಕಾರವು ಮರ್ಜ್ ಆಗಿ ಬಿಡುತ್ತದೆ ಮತ್ತು
ತಾವು ಬ್ರಹ್ಮಾ ತಂದೆಯ ಸಮಾನ ಸಹಜಯೋಗಿಯಾಗಿ ಬಿಡುತ್ತೀರಿ.