09.02.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ತನು-ಮನ-ಧನದಿಂದ ಸತ್ಯವಾದ ಆತ್ಮಿಕ ಸೇವೆಯನ್ನು ಮಾಡಬೇಕಾಗಿದೆ, ಆತ್ಮಿಕ ಸೇವೆಯಿಂದಲೇ ಭಾರತವು ಸ್ವರ್ಣೀಮಯುಗವಾಗಿ ಬಿಡುವುದು.

ಪ್ರಶ್ನೆ:
ನಿಶ್ಚಿಂತರಾಗಿರುವುದಕ್ಕೆ ಸದಾ ಯಾವ ಮಾತನ್ನು ನೆನಪಿಟ್ಟುಕೊಳ್ಳಬೇಕು? ನೀವು ಯಾವಾಗ ನಿಶ್ಚಿಂತರಾಗಿರಲು ಸಾಧ್ಯ?

ಉತ್ತರ:
ನಿಶ್ಚಿಂತರಾಗಿರಲು ಸದಾ ನೆನಪಿರಲಿ - ಈ ನಾಟಕವು ಎಲ್ಲವೂ ಚೆನ್ನಾಗಿ ಮಾಡಲ್ಪಟ್ಟಿದೆ. ಈ ಡ್ರಾಮಾನುಸಾರ ಏನೆಲ್ಲವೂ ನಡೆಯುತ್ತಿದೆಯೋ ಅದು ಎಲ್ಲವೂ ಸರಿಯಾಗಿದೆ ಆದರೆ ಈಗ ನೀವು ಮಕ್ಕಳು ನಿಶ್ಚಿಂತರಾಗಿರಲು ಸಾಧ್ಯವಿಲ್ಲ. ಯಾವಾಗ ನಿಮ್ಮ ಕರ್ಮಾತೀತ ಸ್ಥಿತಿಯಾಗುವುದೋ ಆಗ ನೀವು ನಿಶ್ಚಿಂತರಾಗುತ್ತೀರಿ. ಇದಕ್ಕಾಗಿ ಯೋಗವು ಬಹಳ ಚೆನ್ನಾಗಿರಬೇಕಾಗಿದೆ. ಯೋಗಿ ಮತ್ತು ಜ್ಞಾನಿ ಮಕ್ಕಳನ್ನು ಮುಚ್ಚಿಡಲು ಸಾಧ್ಯವಿಲ್ಲ.

ಓಂ ಶಾಂತಿ.
ಪತಿತ-ಪಾವನ ಶಿವ ಭಗವಾನುವಾಚ. ತಂದೆಯು ಇದನ್ನು ಈಗಾಗಲೇ ತಿಳಿಸಿ ಬಿಟ್ಟಿದ್ದಾರೆ, ದೇಹಧಾರಿ ಮನುಷ್ಯರನ್ನೆಂದೂ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಮನುಷ್ಯರಿಗೆ ಇದೂ ಗೊತ್ತಿದೆ, ಪತಿತ-ಪಾವನ ಭಗವಂತನೇ ಆಗಿದ್ದಾರೆ, ಶ್ರೀ ಕೃಷ್ಣನಿಗೆ ಪತಿತ-ಪಾವನನೆಂದು ಹೇಳುವುದಿಲ್ಲ. ಇದರಲ್ಲಿ ಪಾಪ! ಮನುಷ್ಯರು ಬಹಳ ಗೊಂದಲಕ್ಕೊಳಗಾಗಿದ್ದಾರೆ. ಭಾರತದಲ್ಲಿ ಯಾವಾಗ ಸೂತ್ರವೇ ಗಂಟು ಬೀಳುತ್ತದೆಯೋ ಆಗ ಶಿವ ತಂದೆಯೇ ಬರಬೇಕಾಗುತ್ತದೆ. ತಂದೆಯ ವಿನಃ ಮತ್ತ್ಯಾರೂ ಬಿಚ್ಚಲು ಸಾಧ್ಯವಿಲ್ಲ. ಅವರೇ ಪತಿತ-ಪಾವನ ಶಿವತಂದೆಯಾಗಿದ್ದಾರೆ. ಅವರನ್ನು ಕೇವಲ ನೀವು ಮಕ್ಕಳೇ ಅರಿತಿದ್ದೀರಿ ಅದು ನಂಬರ್ವಾರ್ ಪುರುಷಾರ್ಥದನುಸಾರ. ಭಲೇ ಇಲ್ಲಿ ಕುಳಿತಿದ್ದೀರಿ, ನಿತ್ಯವೂ ಕೇಳುತ್ತೀರಿ ಆದರೂ ಸಹ ಇದು ಗಮನಕ್ಕೆ ಬರುವುದಿಲ್ಲ, ನಾವು ಶಿವ ತಂದೆಯ ಬಳಿ ಕುಳಿತಿದ್ದೇವೆ, ಇವರಲ್ಲಿ ವಿರಾಜಮಾನನಾಗಿದ್ದಾರೆ, ನಮಗೆ ಓದಿಸುತ್ತಿದ್ದಾರೆ, ಪಾವನರನ್ನಾಗಿ ಮಾಡುತ್ತಿದ್ದಾರೆ, ಯುಕ್ತಿಗಳನ್ನು ತಿಳಿಸುತ್ತಿದ್ದಾರೆ. ನೀವು ಸ್ವದರ್ಶನ ಚಕ್ರಧಾರಿಗಳಾಗಿ ರಚಯಿತ ಮತ್ತು ರಚನೆಯ ಜ್ಞಾನವನ್ನು ಪಡೆದು ಕಾಮವನ್ನು ಜಯಿಸಿ ಜಗತ್ಜೀತರಾಗುತ್ತೀರಿ. ಅಂದಾಗ ಆ ತಂದೆಯೂ ಪತಿತ-ಪಾವನನೂ ಆದರು, ಹೊಸ ರಚನೆಯ ರಚಯಿತನೂ ಆದರು. ಈಗ ಬೇಹದ್ದಿನ ರಾಜ್ಯವನ್ನು ಪಡೆಯುವುದಕ್ಕಾಗಿ ನೀವು ಪುರುಷಾರ್ಥ ಮಾಡಿ. ನಾವು ಶಿವ ತಂದೆಯಿಂದ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೇವೆಂದು ಪ್ರತಿಯೊಬ್ಬರೂ ತಿಳಿಯುತ್ತಾರೆ ಆದರೆ ಇದನ್ನು ಯಥಾರ್ಥ ರೀತಿಯಿಂದ ತಿಳಿದುಕೊಳ್ಳುವುದಿಲ್ಲ. ಕೆಲವರು ಸ್ವಲ್ಪ ತಿಳಿದಿರುತ್ತಾರೆ, ಇನ್ನೂ ಕೆಲವರು ಸಂಪೂರ್ಣವಾಗಿ ತಿಳಿದುಕೊಂಡಿರುವುದೇ ಇಲ್ಲ. ಶಿವ ತಂದೆಯು ತಿಳಿಸುತ್ತಾರೆ - ನಾನು ಪತಿತ-ಪಾವನನಾಗಿದ್ದೇನೆ. ಒಂದು ವೇಳೆ ಯಾರೇ ಬಂದರೂ ನನ್ನನ್ನು ಕೇಳಿದರೆ ನಾನು ನನ್ನ ಪರಿಚಯವನ್ನು ಕೊಡುತ್ತೇನೆ. ನಿಮಗೂ ಸಹ ತಂದೆಯು ತಮ್ಮ ಪರಿಚಯವನ್ನು ಕೊಟ್ಟಿದ್ದಾರಲ್ಲವೆ. ತಂದೆಯು ಹೇಳುತ್ತಾರೆ - ಮಕ್ಕಳೇ, ನಾನು ಸಾಧಾರಣ ತನುವಿನಲ್ಲಿ ಪ್ರವೇಶ ಮಾಡುತ್ತೇನೆ. ಇದು (ಬ್ರಹ್ಮಾ) ಸಾಧಾರಣ ಶರೀರವಾಗಿದೆ, ಕಲ್ಪವೃಕ್ಷದ ಅಂತ್ಯದಲ್ಲಿ ನಿಂತಿದ್ದಾರೆ, ಪತಿತ ಪ್ರಪಂಚದಲ್ಲಿ ನಿಂತಿದ್ದಾರೆ ಮತ್ತು ಕೆಳಗೆ ತಪಸ್ಸು ಮಾಡುತ್ತಿದ್ದಾರೆ. ಇವರಿಗೂ ಸಹ ಶಿವತಂದೆಯೇ ತಪಸ್ಸನ್ನು ಕಲಿಸಿದ್ದಾರೆ. ರಾಜಯೋಗವನ್ನು ಕಲಿಸುತ್ತಾರೆ. ಕೆಳಗೆ ಆದಿದೇವ, ಮೇಲೆ ಆದಿ ಮಾತಾ. ತಾವು ಮಕ್ಕಳು ಇದನ್ನು ತಿಳಿಸಬಹುದು - ನಾವು ಬ್ರಾಹ್ಮಣರು ಶಿವ ತಂದೆಯ ಸಂತಾನರಾಗಿದ್ದೇವೆ, ತಾವೂ ಸಹ ಶಿವ ತಂದೆಯ ಸಂತಾನರಾಗಿದ್ದೀರಿ ಆದರೆ ಅರಿತಿಲ್ಲ. ಭಗವಂತನು ಒಬ್ಬರೇ ಆಗಿದ್ದಾರೆ, ಉಳಿದವರೆಲ್ಲರೂ ಸಹೋದರರಾಗಿದ್ದೀರಿ. ನಾನು ನನ್ನ ಮಕ್ಕಳಿಗೇ ಓದಿಸುತ್ತೇನೆ. ಯಾರು ನನ್ನನ್ನು ತಿಳಿದಿರುತ್ತಾರೆಯೋ ಅವರಿಗೇ ಓದಿಸಿ ದೇವತೆಗಳನ್ನಾಗಿ ಮಾಡುತ್ತೇನೆ. ಭಾರತವೇ ಸ್ವರ್ಗವಾಗಿತ್ತು. ಈಗ ನರಕವಾಗಿದೆ. ಯಾರು ಕಾಮವನ್ನು ಗೆಲ್ಲುತ್ತಾರೆಯೋ ಅವರೇ ಜಗತ್ಜೀತರಾಗುತ್ತಾರೆ. ನಾನು ಸ್ವರ್ಣೀಮಯುಗದ ಸ್ಥಾಪನೆ ಮಾಡುತ್ತಿದ್ದೇನೆ. ಅನೇಕ ಬಾರಿ ಈ ಭಾರತವು ಸ್ವರ್ಣೀಮಯುಗವಾಗಿತ್ತು ಮತ್ತೆ ಕಬ್ಬಿಣದ ಸಮಾನ ಕಲಿಯುಗದಲ್ಲಿ ಬಂದಿತು. ಇದನ್ನು ಯಾರೂ ತಿಳಿದುಕೊಂಡಿಲ್ಲ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಯಾರೂ ತಿಳಿದುಕೊಂಡಿಲ್ಲ. ನಾನು ಜ್ಞಾನಸಾಗರನಾಗಿದ್ದೇನೆ, ಇದು ಗುರಿ-ಉದ್ದೇಶವಾಗಿದೆ (ಲಕ್ಷ್ಮೀ-ನಾರಾಯಣ). ನಾನು ಇವರ ಸಾಧಾರಣ ತನುವಿನಲ್ಲಿ ಪ್ರವೇಶ ಮಾಡಿ ಜ್ಞಾನವನ್ನು ಕೊಡುತ್ತೇನೆ. ಈಗ ನೀವೂ ಸಹ ಪವಿತ್ರರಾಗಿ ಈ ವಿಕಾರಗಳನ್ನು ಜಯಿಸುವುದರಿಂದ ಜಗತ್ಜೀತರಾಗುತ್ತೀರಿ. ಎಲ್ಲಾ ಮಕ್ಕಳು ಪುರುಷಾರ್ಥ ಮಾಡುತ್ತಿದ್ದೀರಿ. ತನು-ಮನ-ಧನದಿಂದ ಆತ್ಮಿಕ ಸೇವೆ ಮಾಡುತ್ತೀರಿ ಶಾರೀರಿಕ ಸೇವೆಯಲ್ಲ. ಇದಕ್ಕೆ ಆಧ್ಯಾತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ. ಇದು ಭಕ್ತಿಯಲ್ಲ. ಭಕ್ತಿಯ ಯುಗವು ದ್ವಾಪರ-ಕಲಿಯುಗವಾಗಿದೆ, ಇದಕ್ಕೆ ಬ್ರಹ್ಮನ ರಾತ್ರಿ ಎನ್ನಲಾಗುತ್ತದೆ. ಸತ್ಯ-ತ್ರೇತಾಯುಗಕ್ಕೆ ಬ್ರಹ್ಮನ ದಿನವೆಂದು ಹೇಳಲಾಗುತ್ತದೆ, ಯಾರೇ ಗೀತಾಪಾಠಿಗಳು ಬಂದರೆ ಅವರಿಗೂ ತಿಳಿಸಿ - ಗೀತೆಯಲ್ಲಿ ತಪ್ಪಾಗಿದೆ, ಗೀತೆಯನ್ನು ಯಾರು ತಿಳಿಸಿದರು, ರಾಜಯೋಗವನ್ನು ಯಾರು ಕಲಿಸಿದರು, ಕಾಮದ ಮೇಲೆ ಜಯ ಗಳಿಸಿದರೆ ನೀವು ಜಗತ್ಜೀತರಾಗಿ ಬಿಡುತ್ತೀರೆಂದು ಯಾರು ಹೇಳಿದರು, ಈ ಲಕ್ಷ್ಮೀ-ನಾರಾಯಣರೂ ಸಹ ಜಗತ್ಜೀತರಾಗಿದ್ದಾರಲ್ಲವೆ. ಇವರ 84 ಜನ್ಮಗಳ ರಹಸ್ಯವನ್ನು ಕುಳಿತು ತಿಳಿಸಿ. ಯಾರೇ ಆಗಿರಲಿ ಜ್ಞಾನವನ್ನು ತೆಗೆದುಕೊಳ್ಳಲಿ, ಇಲ್ಲಿ ಬರಲೇಬೇಕಾಗುತ್ತದೆಯಲ್ಲವೆ. ನಾನಂತೂ ಮಕ್ಕಳಿಗೆ ಓದಿಸುತ್ತೇನೆ ಆದರೆ ನಿಮ್ಮಲ್ಲಿಯೂ ಸಹ ಕೆಲವರು ಯಥಾರ್ಥವಾಗಿ ತಿಳಿದುಕೊಳ್ಳುವುದಿಲ್ಲ ಆದ್ದರಿಂದಲೇ ಕೋಟಿಯಲ್ಲಿ ಕೆಲವರು.... ಎಂದು ಗಾಯನವಿದೆ. ನಾನು ಯಾರಾಗಿದ್ದೇನೆ, ಹೇಗಿದ್ದೇನೆ ಹಾಗೆಯೇ ನನ್ನನ್ನು ಕೆಲವರಂತೂ 5% ಸಹ ತಿಳಿದುಕೊಂಡಿಲ್ಲ. ತಾವು ತಂದೆಯನ್ನು ಅರಿತು ಪೂರ್ಣ ರೀತಿಯಲ್ಲಿ ನೆನಪು ಮಾಡಬೇಕು. ನನ್ನೊಬ್ಬನನ್ನೇ ಏಕೆ ನೆನಪು ಮಾಡುವುದಿಲ್ಲ? ಬಾಬಾ ನಿಮ್ಮ ನೆನಪು ಮರೆತು ಹೋಗುತ್ತದೆ ಎಂದು ಹೇಳುತ್ತಾರೆ. ಅರೆ! ನೀವು ತಂದೆಯನ್ನು ನೆನಪು ಮಾಡಲೂ ಆಗುವುದಿಲ್ಲವೆ! ಹಾಗೆ ನೋಡಿದರೆ ಇದು ಪರಿಶ್ರಮದ ಕೆಲಸವಾಗಿದೆ ಎಂದು ತಂದೆಗೆ ಗೊತ್ತಿದೆ ಆದರೂ ಸಹ ಮಕ್ಕಳಿಂದ ಪುರುಷಾರ್ಥ ಮಾಡಿಸಲು ಉತ್ತೇಜನ ನೀಡುತ್ತಿರುತ್ತಾರೆ. ಅರೆ! ಯಾವ ತಂದೆಯು ನಿಮ್ಮನ್ನು ಕ್ಷೀರಸಾಗರದೆಡೆಗೆ ಕರೆದುಕೊಂಡು ಹೋಗುತ್ತಾರೆ, ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನೇ ಮರೆಯುತ್ತೀರಾ! ಮಾಯೆಯು ಅವಶ್ಯವಾಗಿ ಮರೆಸುತ್ತದೆ. ಇದರಲ್ಲಿ ಸಮಯವೂ ಹಿಡಿಸುತ್ತದೆ ಆದರೆ ಮಾಯೆಯು ಮರೆಸಿಯೇ ಮರೆಸುತ್ತದೆ ಎಂದು ಹೇಳಿ ತಣ್ಣಗಾಗಿ ಕುಳಿತುಕೊಳ್ಳುವುದಲ್ಲ. ಪುರುಷಾರ್ಥವನ್ನು ಅವಶ್ಯವಾಗಿ ಮಾಡಬೇಕು. ಕಾಮದ ಮೇಲೆ ಜಯ ಗಳಿಸಬೇಕು. ನನ್ನೊಬ್ಬನನ್ನೇ ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ಹೇಗೆ ನೀವು ಮಕ್ಕಳಿಗೆ ಹೇಳುತ್ತೀರೋ ಯಾರೇ ದೊಡ್ಡವರಿಗಿಂತ ದೊಡ್ಡ ನ್ಯಾಯಾಧೀಶರು ಬಂದರು ಅಂದರೆ ಅವರಿಗೂ ಸಹ ತಂದೆಯು ಮಕ್ಕಳೇ ಎಂದೇ ಹೇಳುತ್ತಾರಲ್ಲವೆ, ಏಕೆಂದರೆ ನಾನು ಸರ್ವ ಶ್ರೇಷ್ಠ ಭಗವಂತನಾಗಿದ್ದೇನೆ, ನೀವು ರಾಜಕುಮಾರ-ರಾಜಕುಮಾರಿ ಪದವಿಯನ್ನು ಪಡೆಯಲು ನಿಮಗೆ ಸರ್ವ ಶ್ರೇಷ್ಠ ವಿದ್ಯೆಯನ್ನು ನಾನೇ ಓದಿಸುತ್ತೇನೆ. ಇವರಿಗೂ ಸಹ ಓದಿಸುತ್ತಿದ್ದೇನೆ, ಇವರೇ ಮತ್ತೆ ಶ್ರೀ ಕೃಷ್ಣನಾಗುತ್ತಾರೆ. ಬ್ರಹ್ಮಾ-ಸರಸ್ವತಿಯು ಈ ಲಕ್ಷ್ಮೀ-ನಾರಾಯಣರಾಗುತ್ತಾರೆ. ಈ ಪ್ರವೃತ್ತಿ ಮಾರ್ಗವು ನಡೆಯುತ್ತದೆ, ನಿವೃತ್ತಿ ಮಾರ್ಗದವರು ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ರಾಜಾ-ರಾಣಿ ಇಬ್ಬರೂ ಬೇಕಲ್ಲವೆ. ವಿದೇಶದಲ್ಲಿ ಹೋಗಿ ನಾವು ರಾಜಯೋಗವನ್ನು ಕಲಿಸುತ್ತೇವೆಂದು ಹೇಳುತ್ತಾರೆ. ಆದರೆ ಸುಖವು ಕಾಗವಿಷ್ಟ ಸಮಾನವೆಂದು ಹೇಳುವವರು ರಾಜಯೋಗವನ್ನು ಹೇಗೆ ಕಲಿಸುತ್ತಾರೆ! ಅಂದಮೇಲೆ ಮಕ್ಕಳಿಗೆ ಉಮ್ಮಂಗ ಬರಬೇಕು ಆದರೆ ಮಕ್ಕಳು ಇನ್ನೂ ಚಿಕ್ಕವರಾಗಿದ್ದಾರೆ ಅರ್ಥಾತ್ ಇನ್ನೂ ಬುದ್ಧಿಯು ಬೆಳವಣಿಗೆಯಾಗಿಲ್ಲ. ಈಗ ಮಕ್ಕಳಲ್ಲಿ ಆ ದೊಡ್ಡಸ್ಥಿಕೆಯ ಸಾಹಸ ಬೇಕು. ತಂದೆಯು ತಿಳಿಸುತ್ತಾರೆ - ಇದು ರಾವಣ ಸಂಪ್ರದಾಯವಾಗಿದೆ, ಪತಿತ-ಪಾವನನೇ ಬನ್ನಿ ಎಂದು ನೀವು ಕರೆಯುತ್ತೀರಿ ಅಂದಾಗ ಇದು ಪತಿತ ಪ್ರಪಂಚವಾಗಿದೆಯೋ ಅಥವಾ ಪಾವನ ಪ್ರಪಂಚವಾಗಿದೆಯೋ? ನಾವು ನರಕವಾಸಿಗಳಾಗಿದ್ದೇವೆಂದು ನೀವೂ ಸಹ ತಿಳಿಯುತ್ತೀರಲ್ಲವೆ. ಇದು ದೈವೀ ಸಂಪ್ರದಾಯವಾಗಿದೆಯೇ? ರಾಮ ರಾಜ್ಯವಾಗಿದೆಯೇ? ನೀವು ರಾವಣ ರಾಜ್ಯದವರಲ್ಲವೆ? ಈಗ ರಾವಣ ರಾಜ್ಯದಲ್ಲಿ ಎಲ್ಲರದೂ ಆಸುರೀ ಬುದ್ಧಿಯಾಗಿದೆ. ಈಗ ಆಸುರೀ ಬುದ್ಧಿಯನ್ನು ದೈವೀ ಬುದ್ಧಿಯನ್ನಾಗಿ ಮಾಡುವವರು ಯಾರು? ಈ ರೀತಿ 4-5 ಪ್ರಶ್ನೆಗಳನ್ನು ಕೇಳಿದಿರೆಂದರೆ ಮನುಷ್ಯರು ಆಲೋಚನೆಯಲ್ಲಿ ತೊಡಗುತ್ತಾರೆ. ತಂದೆಯ ಪರಿಚಯ ಕೊಡುವುದು ತಾವು ಮಕ್ಕಳ ಕೆಲಸವಾಗಿದೆ. ವೃಕ್ಷವಂತೂ ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತದೆ ಮತ್ತೆ ಅನೇಕರು ವೃದ್ಧಿ ಹೊಂದುತ್ತಾರೆ. ಮಾಯೆಯೂ ಸಹ ಪೆಟ್ಟನ್ನು ಕೊಟ್ಟು ಒಮ್ಮೆಲೆ ಕೆಳಗೆ ಬೀಳಿಸುತ್ತದೆ. ಹೇಗೆ ಮಲ್ಲ ಯುದ್ಧದಲ್ಲಿಯೂ ಅನೇಕರು ಸಾಯುತ್ತಾರೆ ಹಾಗೆಯೇ ಇದರಲ್ಲಿಯೂ ಸತ್ತು ಹೋಗುತ್ತಾರೆ. ವಿಕಾರದಲ್ಲಿ ಹೋದರೆಂದರೆ ಸತ್ತರು ಮತ್ತೆ ಹೊಸದಾಗಿ ಪುರುಷಾರ್ಥ ಮಾಡಬೇಕಾಗುತ್ತದೆ. ವಿಕಾರವು ಒಮ್ಮೆಲೆ ಸಾಯಿಸಿ ಬಿಡುತ್ತದೆ. ಮೊದಲು ಏನೆಲ್ಲಾ ಪುರುಷಾರ್ಥ ಮಾಡಿ ಪತಿತರಿಂದ ಪಾವನರಾಗಿದ್ದರೋ ಆ ಸಂಪಾದನೆಯೂ ಸಹ ಇಲ್ಲದಂತಾಗುತ್ತದೆ ಮತ್ತೆ ಹೊಸದಾಗಿ ಪರಿಶ್ರಮ ಪಡಬೇಕಾಗುತ್ತದೆ. ಅಂತಹವರಿಗೆ ಪ್ರವೇಶತೆಯಿಲ್ಲ ಎಂದಲ್ಲ. ಅವರಿಗೆ ತಿಳಿಸಬೇಕು - ತಾವು ಎಷ್ಟು ನೆನಪು ಮಾಡಿದಿರೋ, ಓದಿದಿರೋ ಅದೆಲ್ಲವೂ ಸಮಾಪ್ತಿಯಾಯಿತು. ಒಮ್ಮೆಲೆ ಕೆಳಗೆ ಬೀಳುತ್ತಾರೆ ನಂತರವೂ ಒಂದು ವೇಳೆ ಪದೇ-ಪದೇ ಬೀಳುತ್ತಿದ್ದರೆ ಗೆಟ್-ಔಟ್ (ಇಲ್ಲಿಂದ ಹೊರಗೆ ಹೋಗಿ) ಎಂದು ಹೇಳಲಾಗುತ್ತದೆ. ಒಂದೆರಡು ಬಾರಿ ಅವರನ್ನು ಕ್ಷಮಿಸಲಾಗುತ್ತದೆ, ಎರಡನೆಯ ಬಾರಿಯೂ ಅವರಿಗೆ ಕ್ಷಮೆ ಸಿಕ್ಕಿತು ಅನಂತರವೂ ಅವರು ಹಾಗೆಯೇ ನಡೆದುಕೊಳ್ಳುತ್ತಾರೆಂದರೆ ಮತ್ತೆ ಅವರು ಬರಲೂಬಹುದು ಆದರೆ ಬಹಳ ಕನಿಷ್ಟ ಮಟ್ಟದಲ್ಲಿ.... ಹೋಲಿಕೆ ಮಾಡಬೇಕಾದರೆ ಹೀಗೆ ಹೇಳಬೇಕಾಗುತ್ತದೆಯಲ್ಲವೆ. ಯಾರು ಸಂಪೂರ್ಣ ಕಡಿಮೆ ಪದವಿಯನ್ನು ಪಡೆಯುತ್ತಾರೆಯೋ ಅವರಿಗೆ ಕನಿಷ್ಟ ಮಟ್ಟದವರೆಂದೇ ಹೇಳುತ್ತಾರೆ. ದಾಸ-ದಾಸಿಯರು, ಚಂಡಾಲರು, ಪ್ರಜೆಗಳಿಗೂ, ನೌಕರ-ಚಾಕರರು ಎಲ್ಲರೂ ಬೇಕಲ್ಲವೆ. ತಂದೆಯಂತೂ ತಿಳಿಯುತ್ತಾರೆ - ನಾನು ಇವರಿಗೆ ತಿಳಿಸುತ್ತಿದ್ದೇನೆ. ಪ್ರತೀ 5000 ವರ್ಷಗಳ ನಂತರ ಓದಿಸುತ್ತೇನೆ. ಇದನ್ನು ಮನುಷ್ಯರು ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ. ಮುಂದೆ ಹೋದಂತೆ ಅವಶ್ಯವಾಗಿ 5000 ವರ್ಷಗಳ ಮಾತಾಗಿದೆ, ಅದೇ ಮಹಾಬಾರಿ ಯುದ್ಧವಾಗಿದೆ ಎಂದು ತಿಳಿಯುತ್ತಾರೆ. ಆದರೆ ನೆನಪಿನ ಯಾತ್ರೆಯಲ್ಲಿ ಇರುವುದಿಲ್ಲ. ದಿನ-ಪ್ರತಿ ದಿನ ಇನ್ನೂ ತಡವಾಗುತ್ತಲೇ (ಟೂ ಲೇಟ್) ಹೋಗುತ್ತದೆ. ಗಾಯನವೂ ಇದೆ - ಬಹಳ ಕಳೆಯಿತು, ಸ್ವಲ್ಪ ಸಮಯ ಮಾತ್ರವೇ ಇದೆ, ಇದೆಲ್ಲವೂ ಈ ಸಮಯದ ಮಾತಾಗಿದೆ. ಇನ್ನು ಪಾವನರಾಗುವುದರಲ್ಲಿ ಸ್ವಲ್ಪವೇ ಸಮಯವಿದೆ. ಯುದ್ಧವು ಸಮ್ಮುಖದಲ್ಲಿ ನಿಂತಿದೆ ಅಂದಾಗ ತಮ್ಮ ಹೃದಯದಲ್ಲಿ ಕೇಳಿಕೊಳ್ಳಬೇಕು - ನಾವು ನೆನಪಿನ ಯಾತ್ರೆಯಲ್ಲಿದ್ದೇವೆಯೇ? ಯಾರೇ ಹೊಸ ವ್ಯಕ್ತಿಗಳು ಬರುತ್ತಾರೆಂದರೆ ಅವರಿಂದ ಫಾರಂನ್ನು ತುಂಬಿಸಿ. ಯಾವಾಗ ತುಂಬುತ್ತಾರೆಯೋ ಆಗ ತಿಳಿಸಿಕೊಡಬೇಕಾಗುವುದು. ಒಂದು ವೇಳೆ ಯಾರಿಗಾದರೂ ತಿಳಿದುಕೊಳ್ಳುವ ಮನಸ್ಸೇ ಇಲ್ಲವೆಂದರೆ ಫಾರಂ ತುಂಬುತ್ತಾರೇನು? ಇಂತಹವರು ಅನೇಕರು ಬರುತ್ತಾರೆ ಆಗ ತಿಳಿಸಿ - ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ, ಈಗ ಅವಶ್ಯವಾಗಿ ಪತಿತ ಪ್ರಪಂಚವಾಗಿದೆ. ಆದ್ದರಿಂದಲೇ ಬಂದು ಪಾವನರನ್ನಾಗಿ ಮಾಡಿ ಎಂದು ಹೇಳುತ್ತೀರಲ್ಲವೆ ಆದರೆ ಕೆಲವರು ಪಾವನರಾಗುತ್ತಾರೆ, ಕೆಲವರು ಆಗುವುದಿಲ್ಲ. ತಂದೆಯ ಬಳಿಯಂತೂ ಅನೇಕ ಪತ್ರಗಳು ಬರುತ್ತವೆ. ಎಲ್ಲರೂ ಶಿವಬಾಬಾ ಕೇರ್/ಆಪ್ ಬ್ರಹ್ಮಾ ಎಂದು ಬರೆಯುತ್ತಾರೆ. ಶಿವ ತಂದೆಯೂ ಸಹ ಹೇಳುತ್ತಾರೆ - ನಾನು ಸಾಧಾರಣ ತನುವಿನಲ್ಲಿ ಪ್ರವೇಶ ಮಾಡುತ್ತೇನೆ. ಇವರಿಗೆ ಇವರ 84 ಜನ್ಮಗಳ ಕಥೆಯನ್ನು ತಿಳಿಸುತ್ತೇನೆ. ನನ್ನ ವಿನಃ ಮತ್ತ್ಯಾವುದೇ ಮನುಷ್ಯರು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ. ಈಗ ತಂದೆಯೇ ನಿಮಗೆ ತಿಳಿಸಿದ್ದಾರೆ. ಈ ಚಿತ್ರ ಮೊದಲಾದವುಗಳನ್ನೂ ಸಹ ತಂದೆಯು ದಿವ್ಯ ದೃಷ್ಟಿಯನ್ನು ಕೊಟ್ಟು ಎಲ್ಲವನ್ನೂ ಮಾಡಿಸಿದ್ದಾರೆ. ತಂದೆಯು ತಾವಾತ್ಮರಿಗೆ ಓದಿಸುತ್ತಾರೆ. ಆತ್ಮಗಳು ಅಶರೀರಿಯಾಗಿ ಬಿಡುತ್ತಾರೆ. ಈ ಶರೀರದಿಂದ ತಮ್ಮನ್ನು ಭಿನ್ನ ಅಥವಾ ಬೇರೆ ಎಂದು ತಿಳಿಯಬೇಕು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ದೇಹೀ-ಅಭಿಮಾನಿ ಭವ, ಅಶರೀರಿ ಭವ. ನಾನು ಆತ್ಮಗಳಿಗೇ ಓದಿಸುತ್ತೇನೆ. ಇದು ಪರಮಾತ್ಮ ಮತ್ತು ಆತ್ಮರ ಮೇಳವಾಗಿದೆ. ಇದಕ್ಕೆ ಸಂಗಮದ ಮೇಳವೆಂದು ಕರೆಯಲಾಗುವುದು. ಯಾವುದೇ ನೀರಿನ ಗಂಗೆಯು ಪಾವನರನ್ನಾಗಿ ಮಾಡುವುದಿಲ್ಲ. ಸಾಧು-ಸಂತ, ಋಷಿ-ಮುನಿ ಮುಂತಾದವರೆಲ್ಲಾ ಸ್ನಾನ ಮಾಡಲು ಹೋಗುತ್ತಾರೆ. ಗಂಗೆಯು ಪತಿತ-ಪಾವನಿಯಾಗಲು ಹೇಗೆ ಸಾಧ್ಯ? ಭಗವಾನುವಾಚ ಇದೆಯಲ್ಲವೆ - ಕಾಮ ಮಹಾ ಶತ್ರುವಾಗಿದೆ, ಇದರ ಮೇಲೆ ಜಯ ಗಳಿಸುವುದರಿಂದಲೇ ನೀವು ಜಗತ್ಜೀತರಾಗಿ ಬಿಡುತ್ತೀರಿ. ಗಂಗೆ ಅಥವಾ ಸಾಗರವಂತೂ ಹೀಗೆ ಹೇಳುವುದಿಲ್ಲ. ಇದನ್ನು ಜ್ಞಾನಸಾಗರ ತಂದೆಯೇ ತಿಳಿಸುತ್ತಾರೆ - ಮಕ್ಕಳೇ, ಇದರ ಮೇಲೆ ಜಯ ಗಳಿಸಲು ನನ್ನನ್ನು ನೆನಪು ಮಾಡಿ ಆಗ ನೀವು ಪಾವನರಾಗಿ ಬಿಡುತ್ತೀರಿ. ದೈವೀ ಗುಣಗಳನ್ನು ಧಾರಣೆ ಮಾಡಿ, ಯಾರಿಗೂ ದುಃಖ ಕೊಡಬಾರದು. ಎಲ್ಲದಕ್ಕಿಂತ ಮೊದಲಿನ ನಂಬರಿನದು ಕಾಮ ಕಟಾರಿಯನ್ನು ನಡೆಸುವುದಾಗಿದೆ. ಇದೇ ಆದಿ-ಮಧ್ಯ-ಅಂತ್ಯವು ದುಃಖ ಕೊಡುವಂತದ್ದಾಗಿದೆ. ಸತ್ಯಯುಗದಲ್ಲಿ ಈ ದುಃಖವಿರುವುದಿಲ್ಲ. ಅದು ಪಾವನ ಪ್ರಪಂಚ, ಅಲ್ಲಿ ಯಾರೂ ಪತಿತರಿರುವುದಿಲ್ಲ. ಹೇಗೆ ನೀವು ಯೋಗ ಬಲದಿಂದ ರಾಜ್ಯ ಪಡೆಯುತ್ತೀರೋ ಹಾಗೆಯೇ ಅಲ್ಲಿ ಯೋಗ ಬಲದಿಂದ ಜನ್ಮ ಪಡೆಯುತ್ತಾರೆ. ರಾವಣ ರಾಜ್ಯವೇ ಇರುವುದಿಲ್ಲ. ನೀವು ರಾವಣನನ್ನು ಸುಡುತ್ತೀರಿ ಆದರೆ ಯಾವಾಗಿನಿಂದ ಸುಡುತ್ತಾ ಬಂದಿದ್ದೇವೆಂದು ತಿಳಿಯುವುದೇ ಇಲ್ಲ. ರಾಮ ರಾಜ್ಯದಲ್ಲಿ ರಾವಣನಿರುವುದಿಲ್ಲ ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಇವನ್ನು ತಂದೆಯೇ ಕುಳಿತು ತಿಳಿಸುತ್ತಾರೆ. ತಂದೆಯಂತೂ ಬಹಳ ಚೆನ್ನಾಗಿ ತಿಳಿಸುತ್ತಾರೆ ಆದರೆ ಕಲ್ಪ-ಕಲ್ಪವೂ ಯಾರೆಷ್ಟು ಓದಿದ್ದರೋ ಅಷ್ಟನ್ನೇ ಓದುತ್ತಾರೆ. ಎಲ್ಲವೂ ಪುರುಷಾರ್ಥದಿಂದ ತಿಳಿಯುತ್ತದೆ. ಸ್ಥೂಲ ಸೇವೆಯದೂ ಸಬ್ಜೆಕ್ಟ್ ಇದೆ, ಮನಸ್ಸಾ ಸೇವೆ ಇಲ್ಲವೆಂದರೆ ವಾಚಾ ಇಲ್ಲವೆ ಕರ್ಮಣಾ ಮಾಡಬೇಕಾಗಿದೆ. ವಾಚಾ ಸೇವೆಯಂತೂ ಬಹಳ ಸಹಜವಾಗಿದೆ. ಮೊದಲನೆಯದು ಮನಸ್ಸಾ ಸೇವೆಯಾಗಿದೆ ಅರ್ಥಾತ್ ಮನ್ ಮನಾಭವ, ನೆನಪಿನ ಯಾತ್ರೆಯಲ್ಲಿರಬೇಕಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯಿಂದ ಶಿಕ್ಷಣವನ್ನು ಪಡೆಯಬೇಕಾಗಿದೆ, ಅನೇಕರು ಇಂತಹವರಾಗಿದ್ದಾರೆ ತಂದೆಯನ್ನು ನೆನಪೇ ಮಾಡುವುದಿಲ್ಲ. ಜ್ಞಾನವನ್ನು ನೆನಪು ಮಾಡುವುದಿಲ್ಲ ಎಂದು ಹೇಳಲಾಗುವುದಿಲ್ಲ. ತಂದೆಯನ್ನು ನೆನಪು ಮಾಡುವುದಿಲ್ಲ, ನೆನಪು ಮಾಡದಿದ್ದರೆ ಶಕ್ತಿಯು ಎಲ್ಲಿಂದ ಸಿಗುತ್ತದೆ? ತಂದೆಯು ಸರ್ವಶಕ್ತಿವಂತನಾಗಿದ್ದಾರೆ, ಅವರನ್ನು ನೆನಪು ಮಾಡುವುದರಿಂದಲೇ ಶಕ್ತಿಯು ಬರುವುದು. ಇದಕ್ಕೆ ಹರಿತ ಅರ್ಥಾತ್ ಹೊಳಪೆಂದು ಹೇಳಲಾಗುತ್ತದೆ. ಕರ್ಮಣಾ ಸೇವೆಯನ್ನು ಚೆನ್ನಾಗಿ ಮಾಡಿದ್ದೇ ಆದರೆ ಪದವಿಯು ಸಿಗುತ್ತದೆ. ಕರ್ಮಣಾ ಸೇವೆಯನ್ನೂ ಸಹ ಮಾಡಲಿಲ್ಲವೆಂದರೆ ಪದವಿಯೇನು ಸಿಗುವುದು? ಕರ್ಮಣಾ ಸಬ್ಜೆಕ್ಟ್ ಇದೆಯಲ್ಲವೆ. ಇವು ತಿಳಿದುಕೊಳ್ಳುವ ಗುಪ್ತ ಮಾತುಗಳಾಗಿವೆ. ಇದನ್ನು ಅವರು ಯೋಗ, ಯೋಗವೆಂದು ಹೇಳುತ್ತಿರುತ್ತಾರೆ. ಆದರೆ ನೀವು ಯೋಗದಿಂದ ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತೀರಿ ಎಂಬುದನ್ನು ತಿಳಿದಿಲ್ಲ. ಯೋಗಬಲದಿಂದಲೇ ಅಲ್ಲಿ ಮಕ್ಕಳು ಜನಿಸುತ್ತಾರೆ ಎಂದು ಅವರಿಗೆ ತಿಳಿದಿಲ್ಲ. ನಿಮಗೆ ತಿಳಿಸಲಾಗುತ್ತದೆ ಆದರೂ ಅರ್ಧಕಲ್ಪದ ನಂತರ ನೀವು ಅವರಿಗೆ ಶಿಷ್ಯರಾಗಿ ಬಿಡುತ್ತೀರಿ ಆದರೆ ಈಗಲೂ ಸಹ ಮಾಯೆಯು ನಿಮ್ಮನ್ನು ಬಿಡುವುದಿಲ್ಲ. ಈಗ ನೀವು ಶಿವತಂದೆಗೆ ಶಿಷ್ಯರಾಗಬೇಕಾಗಿದೆ. ಯಾವುದೇ ದೇಹಧಾರಿಗಳಿಗೆ ಶಿಷ್ಯರಾಗಬಾರದು. ಈಗ ಸಹೋದರ-ಸಹೋದರಿಯರೆಂದು ಪಾವನರಾಗುವುದಕ್ಕಾಗಿ ಹೇಳುತ್ತಾರೆ. ಆದರೆ ಈಗ ಇದಕ್ಕಿಂತಲೂ ಮೇಲಕ್ಕೆ ಹೋಗಬೇಕು ಅರ್ಥಾತ್ ಸಹೋದರ-ಸಹೋದರನೆಂದು ತಿಳಿಯಬೇಕು. ಸಹೋದರ-ಸಹೋದರಿಯೆಂಬ ದೃಷ್ಟಿಯೂ ಅಲ್ಲ. ಇದಕ್ಕಿಂತಲೂ ಶ್ರೇಷ್ಠ ಸ್ಥಿತಿಯು ಇರಬೇಕು. ನಾಟಕದನುಸಾರ ಏನೆಲ್ಲವೂ ನಡೆಯುತ್ತದೆಯೋ ಅದೆಲ್ಲವೂ ಸರಿಯಾಗಿದೆ. ನಾಟಕವು ಬಹಳ ಸಮಯೋಚಿತವಾಗಿದೆ. ತಂದೆಯಂತೂ ನಿಶ್ಚಿಂತರಾಗಿದ್ದಾರೆ. ಆದರೆ ಇವರಿಗೆ (ಬ್ರಹ್ಮಾ) ಚಿಂತೆಯು ಅವಶ್ಯವಾಗಿ ಇರುತ್ತದೆ. ಯಾವಾಗ ಕರ್ಮಾತೀತ ಸ್ಥಿತಿಯಾಗುವುದೋ ಆಗ ನಿಶ್ಚಿಂತರಾಗುತ್ತೀರಿ. ಅಲ್ಲಿಯವರೆಗೆ ಏನಾದರೊಂದು ಆಗುತ್ತಲೇ ಇರುತ್ತದೆ. ಯೋಗವು ಚೆನ್ನಾಗಿರಬೇಕು. ಯೋಗಕ್ಕಾಗಿ ತಂದೆಯು ಈಗ ಬಹಳ ಒತ್ತುಕೊಟ್ಟು ತಿಳಿಸುತ್ತಾರೆ ಆದರೆ ಇದಕ್ಕಾಗಿ ಮಕ್ಕಳು ಪದೇ-ಪದೇ ಮರೆತು ಹೋಗುತ್ತೇವೆಂದು ಹೇಳುತ್ತಾರೆ. ತಂದೆಯು ದೂರು ನೀಡುತ್ತಾರೆ, ತಂದೆಯು ನಿಮಗೆ ಇಷ್ಟೊಂದು ಖಜಾನೆಗಳನ್ನು ಕೊಡುತ್ತಾರೆ ಆದರೆ ಅವರನ್ನೂ ಸಹ ನೀವು ಮರೆತು ಹೋಗುತ್ತೀರಿ. ಯಾರಲ್ಲಿ ಜ್ಞಾನವಿದೆ ಯಾರಲ್ಲಿ ಇಲ್ಲವೆಂದು ತಂದೆಗೆ ಗೊತ್ತಿದೆ. ಜ್ಞಾನಿಗಳನ್ನು ಎಂದೂ ಮುಚ್ಚಿಡಲು ಸಾಧ್ಯವಿಲ್ಲ. ಅವರು ತಕ್ಷಣ ಸರ್ವೀಸಿನ ಸಾಕ್ಷಿಯನ್ನು ನೀಡುತ್ತಾರೆ ಅಂದಾಗ ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.


ಧಾರಣೆಗಾಗಿ ಮುಖ್ಯಸಾರ:
೧. ಮಾಯೆಯ ಮಲ್ಲ ಯುದ್ಧದಲ್ಲಿ (ಬಾಕ್ಸಿಂಗ್) ಸೋಲನ್ನನುಭವಿಸಬಾರದು. ಪುರುಷಾರ್ಥದಲ್ಲಿ ತಣ್ಣಗಾಗಿ ಕುಳಿತು ಬಿಡಬಾರದು. ಸಾಹಸವನ್ನಿಟ್ಟು ಸೇವೆ ಮಾಡಬೇಕು.

೨. ಈ ನಾಟಕವು ಸರಿಯಾಗಿ ಅರ್ಥಾತ್ ನಿಖರವಾಗಿ ಮಾಡಲ್ಪಟ್ಟಿದೆ ಆದ್ದರಿಂದ ಯಾವುದೇ ಮಾತಿನ ಚಿಂತೆ ಮಾಡಬಾರದು. ಕರ್ಮಾತೀತ ಸ್ಥಿತಿಯನ್ನು ಪಡೆಯಲು ಒಬ್ಬ ತಂದೆಯ ನೆನಪಿನಲ್ಲಿರಬೇಕು, ಯಾವುದೇ ದೇಹಧಾರಿಗಳಿಗೆ ಶಿಷ್ಯರಾಗಬಾರದು.
 

ವರದಾನ:
ಬೇಹದ್ದಿನ ವೈರಾಗ್ಯ ವೃತ್ತಿಯಿಂದ ಸರ್ವ ಸೆಳೆತಗಳಿಂದ ಮುಕ್ತರಾಗಿರುವಂತಹ ಸತ್ಯ ರಾಜ ಋಷಿ ಭವ.

ರಾಜಋಷಿ ಅರ್ಥಾತ್ ಒಂದು ಕಡೆ ರಾಜ್ಯ ಇನ್ನೊಂದು ಕಡೆ ಋಷಿ ಅರ್ಥಾತ್ ಬೇಹದ್ಧಿನ ವೈರಾಗಿ. ಒಂದು ವೇಳೆ ಎಲ್ಲಾದರೂ ಸಹಾ ಇಲ್ಲಾ ತಮ್ಮಲ್ಲಿ, ಇಲ್ಲಾ ವ್ಯಕ್ತಿಯಲ್ಲಿ, ಇಲ್ಲಾ ವಸ್ತುವಿನಲ್ಲಿ ಎಲ್ಲಿಯಾದರೂ ಸಹಾ ಸೆಳೆತ ಇದ್ದಲಿ ಅವರು ರಾಜಋಷಿ ಅಲ್ಲ. ಯಾರ ಸಂಕಲ್ಪ ಮಾತ್ರವೂ ಸಹಾ ಸೆಳೆತ ಇದ್ದಲ್ಲಿ ಅವರು ಎರಡು ನಾವೆಯಲ್ಲಿ ಕಾಲಿಟ್ಟ ಹಾಗೆ, ನಂತರ ಅವರು ಇಲ್ಲಿನವರೂ ಆಗಲ್ಲ ಅಲ್ಲಿನವರೂ ಆಗಲ್ಲ, ಆದ್ದರಿಂದ ರಾಜಋಷಿಗಳಾಗಿ, ಬೆಹದ್ಧಿನ ವೈರಾಗಿಯಾಗಿ, ಅರ್ಥಾತ್ ಒಬ್ಬ ತಂದೆಯ ಹೊರತು ಬೇರೆ ಯಾರೂ ಇಲ್ಲ - ಈ ಪಾಠವನ್ನು ಪಕ್ಕಾ ಮಾಡಿಕೊಳ್ಳಿ.

ಸ್ಲೋಗನ್:
ಕ್ರೋಧ ಅಗ್ನಿ ರೂಪವಾಗಿದೆ ಸ್ವಯಂ ಅನ್ನು ಸುಡುತ್ತೆ ಹಾಗೂ ಅನ್ಯರನ್ನೂ ಸುಟ್ಟ ಹಾಕಿ ಬಿಡುತ್ತೆ.