09.02.20    Avyakt Bapdada     Kannada Murli     20.11.85     Om Shanti     Madhuban


ಸಂಗಮಯುಗಿ ಬ್ರಾಹ್ಮಣರ ಭಿನ್ನ, ಪ್ರಿಯವಾದ ಶ್ರೇಷ್ಠ ಸಂಸಾರ(ಪ್ರಪಂಚ)


ಇಂದು ಬ್ರಾಹ್ಮಣರ ರಚೈತ ತಂದೆಯು ತನ್ನ ಚಿಕ್ಕದಾದ ಅಲೌಕಿಕ ಸುಂದರವಾದ ಸಂಸಾರವನ್ನು ನೋಡುತ್ತಿದ್ದಾರೆ. ಈ ಬ್ರಾಹ್ಮಣ ಸಂಸಾರವು ಸತ್ಯಯುಗಿ ಸಂಸಾರಕ್ಕಿಂತಲೂ ಅತಿ ಭಿನ್ನ ಮತ್ತು ಅತಿ ಪ್ರಿಯವಾದುದಾಗಿದೆ. ಈ ಅಲೌಕಿಕ ಸಂಸಾರದ ಬ್ರಾಹ್ಮಣ ಆತ್ಮರೆಷ್ಟು ಶ್ರೇಷ್ಠವಿದ್ದಾರೆ, ವಿಶೇಷವಿದ್ದಾರೆ. ದೇವತಾ ರೂಪಕ್ಕಿಂತಲೂ ಈ ಬ್ರಾಹ್ಮಣ ಸ್ವರೂಪವು ವಿಶೇಷವಾಗಿದೆ. ಈ ಸಂಸಾರದ ಮಹಿಮೆಯಿದೆ, ಭಿನ್ನವಾದುದಾಗಿದೆ. ಈ ಸಂಸಾರದ ಪ್ರತಿಯೊಂದು ಆತ್ಮನು ವಿಶೇಷವಾಗಿದ್ದಾರೆ. ಪ್ರತಿಯೊಂದು ಆತ್ಮನೂ ಸ್ವರಾಜ್ಯಾಧಿಕಾರಿ ರಾಜನಾಗಿದ್ದಾರೆ. ಪ್ರತಿಯೊಂದು ಆತ್ಮವು ಸ್ಮೃತಿಯ ತಿಲಕಧಾರಿ, ಅವಿನಾಶಿ ತಿಲಕವುಳ್ಳವರು, ಸ್ವರಾಜ್ಯದ ತಿಲಕವುಳ್ಳವರು, ಪರಮಾತ್ಮನ ಹೃದಯ ಸಿಂಹಾಸನಾಧಿಕಾರಿ ಆಗಿದ್ದಾರೆ. ಅಂದಾಗ ಎಲ್ಲಾ ಆತ್ಮರು ಈ ಸುಂದರವಾದ ಸಂಸಾರದ ಕಿರೀಟ, ಸಿಂಹಾಸನ ಮತ್ತು ತಿಲಕಧಾರಿಯಾಗಿದ್ದಾರೆ! ಇಂತಹ ಸಂಸಾರವು ಇಡೀ ಕಲ್ಪದಲ್ಲೆಂದಾದರೂ ಕೇಳಿದ್ದೀರಾ ಅಥವಾ ನೋಡಿದ್ದೀರಾ! ಆ ಸಂಸಾರದ ಪ್ರತಿಯೊಂದು ಬ್ರಾಹ್ಮಣ ಆತ್ಮನಿಗೂ ಒಬ್ಬ ತಂದೆ, ಒಂದು ಪರಿವಾರ, ಒಂದೇ ಭಾಷೆ, ಒಂದೇ ಜ್ಞಾನ ಅರ್ಥಾತ್ ತಿಳುವಳಿಕೆ, ಒಂದೇ ಜೀವನದ ಶ್ರೇಷ್ಠ ಲಕ್ಷ್ಯ, ಒಂದೇ ವೃತ್ತಿ, ಒಂದೇ ದೃಷ್ಟಿ, ಒಂದೇ ಧರ್ಮ ಮತ್ತು ಒಂದೇ ಈಶ್ವರೀಯ ಕರ್ಮವಿದೆ. ಇಂತಹ ಸಂಸಾರವು ಎಷ್ಟು ಚಿಕ್ಕದೋ ಅಷ್ಟೇ ಪ್ರಿಯವಾಗಿದೆ. ಎಲ್ಲಾ ಬ್ರಾಹ್ಮಣ ಆತ್ಮರ ಮನಸ್ಸಿನಲ್ಲಿ ಹೀಗೆ ಹಾಡನ್ನಾಡುತ್ತೀರಿ - ನಮ್ಮ ಚಿಕ್ಕದಾದ ಈ ಸಂಸಾರ ಅತಿ ಭಿನ್ನ, ಅತಿ ಪ್ರಿಯವಾಗಿದೆ. ಈ ಹಾಡನ್ನಾಡುತ್ತೀರಾ? ಈ ಸಂಗಮಯುಗಿ ಸಂಸಾರವನ್ನು ನೋಡಿ-ನೋಡಿ ಹರ್ಷಿತವಾಗುತ್ತೀರಾ? ಎಷ್ಟೊಂದು ಭಿನ್ನವಾದ ಸಂಸಾರವಾಗಿದೆ! ಈ ಸಂಸಾರದ ದಿನಚರಿಯೇ ಭಿನ್ನವಾಗಿದೆ. ತಮ್ಮ ರಾಜ್ಯ, ತಮ್ಮ ನಿಯಮ, ತಮ್ಮ ರೀತಿ-ಪದ್ಧತಿಗಳು, ಆದರೆ ರೀತಿಯೂ ಭಿನ್ನವಾಗಿದೆ, ಪ್ರೀತಿಯೂ ಭಿನ್ನವಾಗಿದೆ. ಇಂತಹ ಸಂಸಾರದಲ್ಲಿರುವ ಬ್ರಾಹ್ಮಣ ಆತ್ಮರಾಗಿದ್ದೀರಲ್ಲವೆ! ಇದೇ ಸಂಸಾರದಲ್ಲಿ ಇರುತ್ತೀರಲ್ಲವೇ? ಎಂದಾದರೂ ತಮ್ಮ ಸಂಸಾರವನ್ನು ಬಿಟ್ಟು ಹಳೆಯ ಸಂಸಾರದಲ್ಲಂತು ಹೊರಟು ಹೋಗುತ್ತೀರಾ! ಆದ್ದರಿಂದ ಹಳೆಯ ಸಂಸಾರದ ಜನರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ - ಕೊನೆಗೆ ಈ ಬ್ರಾಹ್ಮಣರೇನು! ಹೇಳುತ್ತೀರಲ್ಲವೆ - ಬ್ರಹ್ಮಾಕುಮಾರಿಯರ ಚಲನೆಯೇ ತಮ್ಮದಾಗಿದೆ. ಜ್ಞಾನವೇ ತಮ್ಮದಾಗಿದೆ. ಯಾವಾಗ ಸಂಸಾರವೇ ಭಿನ್ನವಾದುದು ಅಂದಮೇಲೆ ಎಲ್ಲವೂ ಹೊಸದು ಮತ್ತು ಭಿನ್ನವಾಗಿಯೇ ಇರುತ್ತದೆಯಲ್ಲವೆ. ಎಲ್ಲರೂ ತಮ್ಮನ್ನು ತಾವು ನೋಡಿಕೊಳ್ಳಿರಿ ಹೊಸ ಸಂಸಾರದ ಹೊಸ ಸಂಕಲ್ಪ, ಹೊಸ ಭಾಷೆ, ಹೊಸ ಕರ್ಮ, ಹೀಗೆ ಭಿನ್ನವಾಗಿದ್ದೀರ! ಯಾವುದೇ ಹಳೆಯ ಚಲನೆಯಂತು ಉಳಿದುಕೊಂಡಿಲ್ಲವೇ! ಸ್ವಲ್ಪವಾದರೂ ಹಳೆಯತನವಿದ್ದರೆ, ಅದು ಹಳೆಯ ಪ್ರಪಂಚದ ಕಡೆಗೆ ಆಕರ್ಷಿಸುತ್ತದೆ ಮತ್ತು ಶ್ರೇಷ್ಠ ಸಂಸಾರದಿಂದ ಕೆಳಗಿನ ಸಂಸಾರದಲ್ಲಿ ಹೊರಟುಹೋಗುತ್ತೀರಿ. ಶ್ರೇಷ್ಠರಾಗಿರುವ ಕಾರಣದಿಂದ ಸ್ವರ್ಗವನ್ನು ಶ್ರೇಷ್ಠ(ಮೇಲೆ) ತೋರಿಸುತ್ತಾರೆ ಮತ್ತು ನರಕವನ್ನು ಕೆಳಗೆ ತೋರಿಸುತ್ತಾರೆ. ಸಂಗಮಯುಗಿ ಸ್ವರ್ಗವು ಸತ್ಯಯುಗಿ ಸ್ವರ್ಗಕ್ಕಿಂತಲೂ ಶ್ರೇಷ್ಠವಾದುದು ಏಕೆಂದರೆ ಈಗ ಎರಡೂ ಸಂಸಾರದ ಜ್ಞಾನಪೂರ್ಣರಾಗಿದ್ದೀರಿ. ಇಲ್ಲಿ ಈಗ ನೋಡುತ್ತಿದ್ದರೂ, ತಿಳಿದುಕೊಂಡಿದ್ದರೂ ಭಿನ್ನ ಹಾಗೂ ಪ್ರಿಯರಾಗಿದ್ದೀರಿ ಆದ್ದರಿಂದ ಮಧುಬನವನ್ನು ಸ್ವರ್ಗದ ಅನುಭವ ಮಾಡುತ್ತೀರಿ. ಹೇಳುತ್ತೀರಲ್ಲವೆ - ಸ್ವರ್ಗವನ್ನು ನೋಡಬೇಕೆಂದರೆ ಈಗ ನೋಡಿರಿ ಎಂದು. ಅಲ್ಲಿ ಸ್ವರ್ಗದ ವರ್ಣನೆಯನ್ನು ಮಾಡುವುದಿಲ್ಲ, ಈಗ ನಶೆಯಿಂದ ಹೇಳುತ್ತೀರಿ - ನಾವು ಸ್ವರ್ಗವನ್ನು ನೋಡಿದ್ದೇವೆ. ಚಾಲೆಂಜ್ ಮಾಡುತ್ತೀರಿ - ಸ್ವರ್ಗವನ್ನು ನೋಡಬೇಕೆಂದರೆ ಇಲ್ಲಿ ಬಂದು ನೋಡಿ. ಸ್ವರ್ಗದಲ್ಲಿ ಇದು-ಇದು ಆಗುತ್ತದೆ, ಕೇಳಿರುವುದಂತು ಬಹಳಷ್ಟು ಆದರೆ ಈಗ ಸ್ವರ್ಗ ತಾವು ಸ್ವರ್ಗದ ಸಂಸಾರದಲ್ಲಿ ತಲುಪಿ ಬಿಟ್ಟಿರಿ. ಸ್ವಯಂ ತಾವೇ ಸ್ವರ್ಗದ ದೇವತೆಯಾಗಿ ಬಿಟ್ಟಿರಿ. ಶ್ಯಾಮನಿಂದ ಸುಂದರರಾಗಿ ಬಿಟ್ಟಿರಲ್ಲವೆ! ರೆಕ್ಕೆಗಳು ಸಿಕ್ಕಿ ಬಿಟ್ಟಿತಲ್ಲವೆ. ಇಷ್ಟು ಭಿನ್ನವಾದ ರೆಕ್ಕೆಗಳು - ಜ್ಞಾನ ಮತ್ತು ಯೋಗದ ರೆಕ್ಕೆಗಳು ಸಿಕ್ಕಿವೆ, ಅದರಿಂದ ಮೂರೂ ಲೋಕಗಳ ಪರಿಕ್ರಮಣ ಹಾಕಬಹುದು. ವಿಜ್ಞಾನಿಗಳ ಬಳಿಯೂ ಸಹ ಇಂತಹ ತೀವ್ರಗತಿಯ ಸಾಧನವಿಲ್ಲ. ಎಲ್ಲರಿಗೂ ರೆಕ್ಕೆಗಳು ಸಿಕ್ಕಿವೆಯೇ? ಕೆಲವರಿಗೆ ಸಿಕ್ಕಿಲ್ಲವೆ! ಈ ಸಂಸಾರದ್ದೇ ಗಾಯನವಿದೆ - ಬ್ರಾಹ್ಮಣರ ಸಂಸಾರದಲ್ಲಿ ಯಾವುದೇ ಅಪ್ರಾಪ್ತ ವಸ್ತುವಿಲ್ಲ, ಆದ್ದರಿಂದ ಗಾಯನವಿದೆ - ಒಬ್ಬ ತಂದೆಯು ಸಿಕ್ಕಿದರೆಂದರೆ ಎಲ್ಲವೂ ಸಿಕ್ಕಿತು. ಒಂದು ಪ್ರಪಂಚವಲ್ಲ ಆದರೆ ಮೂರೂ ಲೋಕಗಳ ಮಾಲೀಕರಾಗಿ ಬಿಡುತ್ತೀರಿ. ಈ ಸಂಸಾರದ ಗಾಯನವಿದೆ - ಸದಾ ಎಲ್ಲರೂ ಉಯ್ಯಾಲೆಯಲ್ಲಿ ತೂಗುತ್ತಿರುತ್ತಾರೆ. ಉಯ್ಯಾಲೆಯಲ್ಲಿ ತೂಗಾಡುತ್ತಿರುವುದು ಭಾಗ್ಯದ ಚಿಹ್ನೆಯೆಂದು ಹೇಳಲಾಗುತ್ತದೆ. ಈ ಸಂಸಾರದ ವಿಶೇಷತೆಯೇನಾಗಿದೆ? ಕೆಲವೊಮ್ಮೆ ಅತೀಂದ್ರಿಯ ಸುಖದ ಉಯ್ಯಾಲೆಯಲ್ಲಿ ತೂಗಾಡುತ್ತಾ, ಕೆಲವೊಮ್ಮೆ ಖುಷಿಯ ಉಯ್ಯಾಲೆಯಲ್ಲಿ ತೂಗಾಡುತ್ತಾ, ಕೆಲವೊಮ್ಮೆ ಶಾಂತಿಯ, ಕೆಲವೊಮ್ಮೆ ಜ್ಞಾನದ ಉಯ್ಯಾಲೆಯಲ್ಲಿ. ಪರಮಾತ್ಮನ ಮಡಿಲಿನ ಉಯಾಲೆಯಲ್ಲಿ ತೂಗಾಡುವುದು. ಪರಮಾತ್ಮನ ಮಡಿಲಾಗಿದೆ - ನೆನಪಿನ ಲವಲೀನ ಸ್ಥಿತಿಯಲ್ಲಿ ತೂಗಾಡುವುದು. ಹೇಗೆ ಮಡಿಲಿನಲ್ಲಿ ಸಮಾವೇಶವಾಗಿಡುತ್ತಾರೆ. ಹಾಗೆಯೇ ಪರಮಾತ್ಮನ ನೆನಪಿನಲ್ಲಿ ಸಮಾವೇಶವಾಗಿ ಬಿಡುವುದು, ಲವಲೀನವಾಗಿ ಬಿಡುತ್ತಾರೆ. ಈ ಅಲೌಕಿಕ ಮಡಿಲು ಸೆಕೆಂಡಿನಲ್ಲಿ ಅನೇಕ ಜನ್ಮಗಳ ದುಃಖ-ನೋವುಗಳನ್ನು ಮರೆಸಿ ಬಿಡುತ್ತದೆ. ಹೀಗೆ ಎಲ್ಲರೂ ಉಯ್ಯಾಲೆಯಲ್ಲಿ ತೂಗಾಡುತ್ತಿರುತ್ತೀರಾ!

ಎಂದಾದರೂ ಸ್ವಪ್ನದಲ್ಲಿಯೂ ಯೋಚಿಸಿದ್ದಿರಾ - ಇಂತಹ ಸಂಸಾರದ ಅಧಿಕಾರಿಯಾಗಿ ಬಿಡುತ್ತೇವೆ! ಎಂದು. ಬಾಪ್ದಾದಾರವರು ಇಂದು ತಮ್ಮ ಭಿನ್ನವಾದ ಸಂಸಾರವನ್ನು ನೋಡುತ್ತಿದ್ದಾರೆ. ಈ ಸಂಸಾರವು ಇಷ್ಟವಿದೆಯೇ? ಪ್ರಿಯವೆನಿಸುತ್ತದೆಯೇ? ಕೆಲವೊಮ್ಮೆ ಒಂದು ಕಾಲು ಆ ಸಂಸಾರದಲ್ಲಿ, ಒಂದು ಕಾಲು ಈ ಸಂಸಾರದಲ್ಲಂತು ಇಡುತ್ತೀರಾ? 63 ಜನ್ಮಗಳು ಆ ಸಂಸಾರವನ್ನು ನೋಡಿ ಬಿಟ್ಟಿರಿ, ಅನುಭವ ಮಾಡಿ ಬಿಟ್ಟಿರಿ. ಏನಾದರೂ ಸಿಕ್ಕಿತೆ? ಸ್ವಲ್ಪ ಸಿಕ್ಕಿತೆ ಅಥವಾ ಕಳೆದುಕೊಂಡಿರಾ? ತನುವನ್ನೂ ಕಳೆದುಕೊಂಡಿದ್ದಾಯಿತು, ಮನಸ್ಸಿನ ಸುಖ-ಶಾಂತಿಯನ್ನೂ ಕಳೆದುಕೊಂಡಿರಿ ಮತ್ತು ಧನವನ್ನೂ ಕಳೆದುಕೊಂಡಿರಿ! ಸಂಬಂಧವನ್ನೂ ಕಳೆದುಕೊಂಡಿರಿ. ತಂದೆಯು ಯಾವ ಸುಂದರವಾದ ತನುವನ್ನು ಕೊಟ್ಟರು, ಅದನ್ನೆಲ್ಲಿ ಕಳೆದುಕೊಂಡಿರಿ! ಒಂದುವೇಳೆ ಧನವನ್ನೆನಾದರೂ ಜಮಾ ಮಾಡುತ್ತೀರೆಂದರೆ ಅದು ಕಪ್ಪು ಹಣ. ಸ್ವಚ್ಛ ಹಣವೆಲ್ಲಿ ಹೋಯಿತು? ಒಂದುವೇಳೆ ಇದ್ದರೂ ಸಹ ಅದು ಕೆಲಸಕ್ಕೆ ಬರುವುದಿಲ್ಲ. ಹೇಳುವುದಕ್ಕೆ ಕೋಟ್ಯಾಧಿಪತಿ ಎಂದು. ಆದರೆ ತೋರಿಸಲು ಸಾಧ್ಯವೇ? ಅಂದಮೇಲೆ ಎಲ್ಲವನ್ನೂ ಕಳೆದುಕೊಂಡಿರಿ ಆದರೂ ಸಹ ಒಂದುವೇಳೆ ಬುದ್ಧಿಹೋಯಿತೆಂದರೆ ಏನು ಹೇಳುವರು! ಬುದ್ಧಿವಂತರೆಂದು ಹೇಳುವರೇ? ಆದ್ದರಿಂದ ತಮ್ಮ ಈ ಶ್ರೇಷ್ಠ ಸಂಸಾರವು ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳಿರಿ. ಈ ಸಂಸಾರದ ಈ ಜೀವನದ ವಿಶೇಷತೆಗಳನ್ನು ಸದಾ ಸ್ಮ್ರತಿಯಲ್ಲಿಟ್ಟುಕೊಂಡು ಸಮರ್ಥರಾಗಿರಿ. ಸ್ಮೃತಿ ಸ್ವರೂಪರಾಗುತ್ತೀರೆಂದರೆ ಸ್ವತಹವಾಗಿ ನಷ್ಟಮೋಹಿ ಆಗಿ ಬಿಡುತ್ತೀರಿ. ಹಳೆಯ ಪ್ರಪಂಚದ ಯಾವುದೇ ವಸ್ತುವನ್ನು ಬುದ್ಧಿಯಿಂದ ಸ್ವೀಕರಿಸದಿರಿ. ಸ್ವೀಕರಿಸಿದಿರಿ ಅಂದರೆ ಮೋಸವನ್ನನುಭವಿಸುವುದು. ಮೋಸವನ್ನನುಭವಿಸುವುದು ಅಂದರೆ ದುಃಖವನ್ನು ತೆಗೆದುಕೊಳ್ಳುವುದು. ಅಂದಮೇಲೆ ಎಲ್ಲಿರಬೇಕು? ಶ್ರೇಷ್ಠ ಸಂಸಾರದಲ್ಲಿಯೋ ಅಥವಾ ಹಳೆಯ ಸಂಸಾರದಲ್ಲಿಯೋ? ಸದಾ ಅಂತರವನ್ನು ಸ್ಪಷ್ಟವಾಗಿ ಇಮರ್ಜ್ ರೂಪದಲ್ಲಿಟ್ಟುಕೊಳ್ಳಿರಿ. ಅದು ಏನು ಮತ್ತು ಇದು ಏನಾಗಿದೆ ಎಂದು. ಒಳ್ಳೆಯದು.

ಇಂತಹ ಚಿಕ್ಕದಾದ ಪ್ರಿಯವಾದ ಸಂಸಾರದಲ್ಲಿರುವ ವಿಶೇಷ ಬ್ರಾಹ್ಮಣ ಆತ್ಮರಿಗೆ, ಸದಾ ಸಿಂಹಾಸನಾಧಿಕಾರಿ ಆತ್ಮರಿಗೆ, ಸದಾ ಉಯ್ಯಾಲೆಯಲ್ಲಿ ತೂಗಾಡುತ್ತಿರುವ ಆತ್ಮರಿಗೆ, ಸದಾ ಭಿನ್ನ ಹಾಗೂ ಪರಮಾತ್ಮನ ಪ್ರಿಯವಾದ ಮಕ್ಕಳಿಗೆ, ಪರಮಾತ್ಮನ ನೆನಪು, ಪರಮಾತ್ಮನ ಪ್ರೀತಿ ಹಾಗೂ ನಮಸ್ತೆ.

ಸೇವಾಧಾರಿ (ಟೀಚರ್ಸ್) ಸಹೋದರಿಯರೊಂದಿಗೆ:-
ಸೇವಾಧಾರಿ ಅರ್ಥಾತ್ ತ್ಯಾಗಿ, ತಪಸ್ವಿ ಆತ್ಮರು. ಸೇವೆಯ ಫಲವಂತು ಸದಾಕಾಲ ಸಿಗುತ್ತಿರುತ್ತದೆ ಆದರೆ ತ್ಯಾಗ ಮತ್ತು ತಪಸ್ಸಿನಿಂದ ಸದಾ ಮುಂದುವರೆಯುತ್ತಿರುತ್ತೀರಿ. ಸದಾ ತಮ್ಮನ್ನು ವಿಶೇಷ ಆತ್ಮರೆಂದು ತಿಳಿದುಕೊಂಡು, ವಿಶೇಷ ಸೇವೆಯ ಪ್ರಮಾಣವನ್ನು ಕೊಡಬೇಕಾಗಿದೆ. ಇದೇ ಲಕ್ಷ್ಯವನ್ನಿಡಿ - ಲಕ್ಷ್ಯವು ಎಷ್ಟು ಶಕ್ತಿಶಾಲಿಯಾಗಿರುತ್ತದೆ, ಅಷ್ಟೂ ಕಟ್ಟಡವೂ ಸಹ ಚೆನ್ನಾಗಿ ತಯಾರಾಗುತ್ತದೆ. ಅಂದಮೇಲೆ ಸದಾ ಸೇವಾಧಾರಿ ಎಂದು ತಿಳಿದುಕೊಂಡು ಮುಂದುವರೆಯಿರಿ. ಹೇಗೆ ತಂದೆಯು ತಮ್ಮನ್ನು ಆಯ್ಕೆ ಮಾಡಿಕೊಂಡರು, ಹಾಗೆಯೇ ತಾವು ಮತ್ತೆ ಪ್ರಜೆಗಳನ್ನು ಆಯ್ಕೆ ಮಾಡಿಕೊಳ್ಳಿರಿ. ಸ್ವಯಂ ಸದಾ ನಿರ್ವಿಘ್ನರಾಗಿ ಸೇವೆಯನ್ನೂ ನಿರ್ವಿಘ್ನ ಮಾಡಿಕೊಳ್ಳುತ್ತಾ ಸಾಗಿರಿ. ಸೇವೆಯಂತು ಎಲ್ಲರೂ ಮಾಡುತ್ತಾರೆ ಆದರೆ ನಿರ್ವಿಘ್ನ ಸೇವೆಯಾಗಲಿ, ಇದರಲ್ಲಿ ಅಂಕಗಳು ಸಿಗುತ್ತವೆ. ಎಲ್ಲಿಯೇ ಇರಬಹುದು, ಅಲ್ಲಿ ಪ್ರತಿಯೊಂದು ವಿದ್ಯಾರ್ಥಿಯೂ ನಿರ್ವಿಘ್ನವಾಗಿರಲಿ, ವಿಘ್ನಗಳ ಪ್ರಕಂಪನಗಳೂ ಇರಬಾರದು. ಶಕ್ತಿಶಾಲಿ ವಾತಾವರಣವಿರಲಿ. ಇವರಿಗೆ ನಿರ್ವಿಘ್ನ ಆತ್ಮನೆಂದು ಹೇಳಲಾಗುತ್ತದೆ. ಇದೇ ಲಕ್ಷ್ಯವನ್ನಿಟ್ಟುಕೊಳ್ಳಿರಿ - ಇಂತಹ ನೆನಪಿನ ವಾತಾವರಣವಿರಲಿ, ಅದರಿಂದ ವಿಘ್ನವು ಬರಲು ಸಾಧ್ಯವಾಗಬಾರದು. ಕೋಟೆಯಾಗುತ್ತದೆ ಎಂದರೆ ಶತ್ರುವು ಬರಲು ಸಾಧ್ಯವಿಲ್ಲ. ಅಂದಾಗ ನಿರ್ವಿಘ್ನರಾಗಿ ನಿರ್ವಿಘ್ನ ಸೇವಾಧಾರಿಯಾಗಿರಿ. ಒಳ್ಳೆಯದು.

ಭಿನ್ನ-ಭಿನ್ನ ಗ್ರೂಪ್ನವರೊಂದಿಗೆ:-
1. ಸೇವೆ ಮಾಡಿ ಮತ್ತು ಸಂತುಷ್ಟತೆ ಪಡೆಯಿರಿ. ಕೇವಲ ಸೇವೆಯನ್ನು ಮಾಡುವುದಲ್ಲ ಆದರೆ ಇಂತಹ ಸೇವೆ ಮಾಡಿರಿ, ಅದರಲ್ಲಿ ಸಂತುಷ್ಟತೆಯಿರಲಿ. ಎಲ್ಲರ ಆಶೀರ್ವಾದಗಳು ಸಿಗಲಿ. ಆಶೀರ್ವಾದವಿರುವ ಸೇವೆಯು ಸಹಜವಾಗಿ ಸಫಲತೆಯನ್ನು ತಂದುಕೊಡುತ್ತದೆ. ಸೇವೆಯಂತು ಯೋಜನೆಯನುಸಾರವಾಗಿ ಮಾಡಲೇಬೇಕು ಮತ್ತು ಚೆನ್ನಾಗಿ ಮಾಡಿರಿ. ಖುಷಿ-ಉಮ್ಮಂಗದಿಂದ ಮಾಡಿರಿ ಆದರೆ ಈ ಗಮನವನ್ನು ಅವಶ್ಯವಾಗಿ ಇಟ್ಟುಕೊಳ್ಳಿರಿ - ಯಾವ ಸೇವೆಯನ್ನು ಮಾಡಿದಿರಿ, ಅದರಲ್ಲಿ ಆಶೀರ್ವಾದಗಳು ಪ್ರಾಪ್ತಿಯಾಯಿತೆ? ಅಥವಾ ಕೇವಲ ಪರಿಶ್ರಮ ಪಟ್ಟಿರಾ? ಎಲ್ಲಿ ಆಶೀರ್ವಾದಗಳಿರುತ್ತದೆ ಅಲ್ಲಿ ಪರಿಶ್ರಮವಾಗುವುದಿಲ್ಲ. ಅಂದಮೇಲೆ ಈಗ ಇದೇ ಲಕ್ಷ್ಯವನ್ನಿಡಿ - ಯಾರೊಂದಿಗಾದರೂ ಸಂಪರ್ಕದಲ್ಲಿ ಬರುತ್ತೇವೆ, ಅವರ ಆಶೀರ್ವಾದಗಳನ್ನು ಪಡೆಯುತ್ತಾ ಸಾಗೋಣ. ಯಾವಾಗ ಎಲ್ಲರ ಆಶೀರ್ವಾದಗಳನ್ನು ಪಡೆಯುತ್ತೀರಿ ಆಗ ಅರ್ಧಕಲ್ಪದಲ್ಲಿ ತಮ್ಮ ಚಿತ್ರವು ಆಶೀರ್ವಾದವನ್ನು ಕೊಡುತ್ತಿರುತ್ತದೆ. ತಮ್ಮ ಚಿತ್ರದಿಂದ ಆಶೀರ್ವಾದವನ್ನು ತೆಗೆದುಕೊಳ್ಳಲು ಬರುತ್ತಾರಲ್ಲವೆ. ದೇವಿ ಅಥವಾ ದೇವತೆಯ ಬಳಿ ಆಶೀರ್ವಾದವನ್ನು ತೆಗೆದುಕೊಳ್ಳಲು ಹೋಗುತ್ತಾರಲ್ಲವೆ. ಅಂದಾಗ ಈಗ ಸರ್ವರ ಆಶೀರ್ವಾದಗಳನ್ನು ಜಮಾ ಮಾಡುತ್ತೀರಿ, ಆಗಲೇ ಚಿತ್ರಗಳ ಮೂಲಕವೂ ಕೊಡುತ್ತಿರುತ್ತೀರಿ. ಕಾರ್ಯಕ್ರಮವನ್ನೇ ಮಾಡಿರಿ, ಯನ್ನೇ ಮಾಡಿರಿ...... ವಿ.ಐ.ಪಿ., ಐ.ಪಿ.,ಗಳ ಸೇವೆಯನ್ನು ಮಾಡಿರಿ, ಎಲ್ಲವನ್ನೂ ಮಾಡಿರಿ ಆದರೆ ಆಶೀರ್ವಾದಗಳಿರುವ ಸೇವೆಯನ್ನು ಮಾಡಿರಿ. (ಆಶೀರ್ವಾದವನ್ನು ಪಡೆಯುವ ಸಾಧನವೇನಾಗಿದೇ?) ಹಾಂಜಿ ಪಾಠವು ಪರಿಪಕ್ವವಾಗಲಿ. ಎಂದಿಗೂ ಯಾರಿಗೂ ಇಲ್ಲ - ಇಲ್ಲ ಎನ್ನುತ್ತಾ ಸಾಹಸಹೀನರನ್ನಾಗಿ ಮಾಡದಿರಿ. ಉದಾ: ಒಂದುವೇಳೆ ಯಾರೇ ರಾಂಗ್ ಇದ್ದಾರೆಂದರೆ ಅವರಿಗೆ ನೇರವಾಗಿಯೇ ರಾಂಗ್ (ತಾವು ಸರಿಯಿಲ್ಲ)ಎಂದು ಹೇಳಬಾರದು. ಮೊದಲು ಅವರಿಗೆ ವಿಶ್ವಾಸ ತರಿಸಿ, ಸಾಹಸವನ್ನು ತರಿಸಿರಿ. ಅವರನ್ನು ಹೌದು-ಹೌದು ಎನ್ನಿಸುತ್ತಾ, ನಂತರ ತಿಳಿಸುತ್ತೀರೆಂದರೆ ಅವರು ತಿಳಿದು ಬಿಡುತ್ತಾರೆ. ಮುಂಚೆಯೇ ಇಲ್ಲ-ಇಲ್ಲ ಎಂದು ಹೇಳುತ್ತಾರೆಂದರೆ, ಅವರಲ್ಲೇನು ಸ್ವಲ್ಪವಾದರೂ ಸಾಹಸವಿರುತ್ತದೆಯಲ್ಲವೆ, ಅದು ಸಮಾಪ್ತಿಯಾಗಿ ಬಿಡುತ್ತದೆ. ರಾಂಗ್ ಆಗಿರಬಹುದು ಆದರೆ ರಾಂಗ್ನ್ನು ರಾಂಗ್ ಎಂದು ಹೇಳುತ್ತೀರೆಂದರೆ ಅವರು ತನ್ನನ್ನು ರಾಂಗ್ ಎಂದು ಎಂದಿಗೂ ತಿಳಿದುಕೊಳ್ಳುವುದಿಲ್ಲ. ಆದ್ದರಿಂದ ಮೊದಲು ಅವರಿಗೆ ಹಾ(ಆಯಿತು, ಹೌದು) ಎಂದು ಹೇಳಿ, ಸಾಹಸವನ್ನು ಹೆಚ್ಚಿಸಿರಿ ನಂತರ ಅವರು ತಾನಾಗಿಯೇ ನಿರ್ಣಯ ಮಾಡಿ ಬಿಡುತ್ತಾರೆ. ಗೌರವ ಕೊಡಿ, ಈ ವಿಧಿಯನ್ನು ಕೇವಲ ತಮ್ಮದಾಗಿಸಿಕೊಳ್ಳಿರಿ. ರಾಂಗ್ ಇರಬಹುದು, ಮೊದಲು ಒಳ್ಳೆಯವರು ಎಂದು ಹೇಳಿರಿ, ಮೊದಲು ಅವರಿಗೆ ಧೈರ್ಯ ಬರಲಿ. ಯಾರೇ ಬಿದ್ದು ಹೋಗಿದ್ದಾರೆಂದರೆ, ಅವರಿಗೆ ಇನ್ನೂ ಪೆಟ್ಟು ಕೊಡುತ್ತೀರಾ ಅಥವಾ ಮೇಲೆತ್ತುತ್ತೀರಾ?...... ಅವರಿಗೆ ಆಶ್ರಯವನ್ನು ಕೊಟ್ಟು, ಮೊದಲು ನಿಲ್ಲಿಸಿರಿ. ಇದಕ್ಕೆ ಉದಾರತೆ ಎಂದು ಹೇಳಲಾಗುತ್ತದೆ. ಸಹಯೋಗಿಯಾಗುವವರನ್ನು ಸಹಯೋಗಿಯನ್ನಾಗಿ ಮಾಡುತ್ತಾ ಸಾಗಿರಿ. ನೀವೂ ಸಹ ಮುಂದೆ, ನಾನೂ ಸಹ ಮುಂದೆ. ಜೊತೆ ಜೊತೆಯಲ್ಲಿ ಸಾಗುತ್ತಾ ನಡೆಯಿರಿ. ಕೈ ಸೇರಿಸುತ್ತ(ಸಹಯೋಗದ ಕೈ) ನಡೆಯುತ್ತೀರೆಂದರೆ ಸಫಲತೆಯಾಗುತ್ತದೆ ಮತ್ತು ಸಂತುಷ್ಟತೆಯ ಆಶೀರ್ವಾದವು ಸಿಗುತ್ತದೆ. ಹೀಗೆ ಆಶೀರ್ವಾದವನ್ನು ತೆಗೆದುಕೊಳ್ಳುವುದರಲ್ಲಿ ಮಹಾನರಾಗುತ್ತೀರೆಂದರೆ ಸೇವೆಯಲ್ಲಿ ಸ್ವತಹವಾಗಿಯೇ ಮಹಾನರಾಗಿ ಬಿಡುತ್ತೀರಿ.

ಸೇವಾಧಾರಿಗಳೊಂದಿಗೆ:-
ಸೇವೆಯನ್ನು ಮಾಡುತ್ತಾ ಸದಾ ತಮ್ಮನ್ನು ಕರ್ಮಯೋಗಿ ಸ್ಥಿತಿಯಲ್ಲಿ ಸ್ಥಿತರಾಗುವ ಅನುಭವ ಮಾಡುತ್ತೀರಾ, ಅಥವಾ ಕರ್ಮವನ್ನು ಮಾಡುತ್ತಾ ನೆನಪು ಕಡಿಮೆಯಾಗುತ್ತದೆ ಮತ್ತು ಕರ್ಮದಲ್ಲಿ ಬುದ್ಧಿಯು ಹೆಚ್ಚು ಇರುತ್ತದೆಯೇ! ಏಕೆಂದರೆ ನೆನಪಿನಲ್ಲಿದ್ದು ಕರ್ಮವನ್ನು ಮಾಡುವುದರಿಂದ ಕರ್ಮದಲ್ಲೆಂದಿಗೂ ಸುಸ್ತಾಗುವುದಿಲ್ಲ. ನೆನಪಿನಲ್ಲಿದ್ದು ಕರ್ಮವನ್ನು ಮಾಡುವವರು ಕರ್ಮ ಮಾಡುತ್ತಾ ಸದಾ ಖುಷಿಯ ಅನುಭವ ಮಾಡುವರು. ಕರ್ಮಯೋಗಿಯಾಗಿ, ಕರ್ಮ ಅಂದರೆ ಸೇವೆಯನ್ನು ಮಾಡುತ್ತೀರಲ್ಲವೆ! ಕರ್ಮಯೋಗಿಯ ಅಭ್ಯಾಸಿಯು ಸದಾಕಾಲವೂ ಪ್ರತೀ ಹೆಜ್ಜೆಯಲ್ಲಿ ವರ್ತಮಾನ ಮತ್ತು ಭವಿಷ್ಯವನ್ನು ಶ್ರೇಷ್ಠವನ್ನಾಗಿ ಮಾಡಿಕೊಳ್ಳುತ್ತಾರೆ. ಭವಿಷ್ಯದ ಖಾತೆಯು ಸದಾ ಸಂಪನ್ನ ಮತ್ತು ವರ್ತಮಾನವೂ ಸದಾ ಶ್ರೇಷ್ಠ. ಇಂತಹ ಕರ್ಮಯೋಗಿಯಾಗಿದ್ದು ಸೇವೆಯ ಪಾತ್ರವನ್ನಭಿನಯಿಸುತ್ತೀರಾ, ಮರೆತು ಬಿಡುವುದಿಲ್ಲವೇ? ಮಧುಬನದಲ್ಲಿ ಸೇವಾಧಾರಿ ಆಗಿದ್ದೀರೆಂದರೆ ಮಧುಬನವು ಸ್ವತಹವಾಗಿಯೇ ಬಾಬಾರವರ ನೆನಪು ತರಿಸುತ್ತದೆ. ಸರ್ವಶಕ್ತಿಗಳ ಖಜಾನೆಯನ್ನು ಜಮಾ ಮಾಡಿಕೊಂಡಿದ್ದೀರಲ್ಲವೇ! ಇಷ್ಟೂ ಜಮಾ ಮಾಡಿಕೊಂಡಿದ್ದೀರಾ, ಅದು ಸದಾ ಸಂಪನ್ನವಾಗಿರುತ್ತದೆ ಎನ್ನುವಷ್ಟು ಇದೆಯೇ! ಸಂಗಮಯುಗದಲ್ಲಿ ಬ್ಯಾಟರಿಯು ಸದಾ ಚಾರ್ಜ್ ಇದೆ, ದ್ವಾಪರದಿಂದ ಬ್ಯಾಟರಿಯು ಸ್ವಲ್ಪ ಕಡಿಮೆಯಾಗುತ್ತದೆ. ಸಂಗಮದಲ್ಲಿ ಸದಾ ಸಂಪನ್ನ, ಸದಾ ಚಾರ್ಜ್ ಇದೆ. ಅಂದಮೇಲೆ ಮಧುಬನದಲ್ಲಿ ಬ್ಯಾಟರಿಯನ್ನು ತುಂಬಿಕೊಳ್ಳಲು ಬರುವುದಿಲ್ಲ, ಖುಷಿಯನ್ನಾಚರಿಸಲು ಬರುತ್ತೀರಿ. ತಂದೆ ಮತ್ತು ಮಕ್ಕಳ ಸ್ನೇಹವಿದೆ ಆದ್ದರಿಂದ ಮಿಲನವಾಗುವುದು, ಮಹಾವಾಕ್ಯಗಳನ್ನು ಕೇಳುವುದು, ಇದೇ ಸಂಗಮಯುಗದ ಖುಷಿಯಾಗಿದೆ. ಒಳ್ಳೆಯದು.

ಯೂತ್ ರ್ಯಾಲಿಯ ಸಫಲತೆಯ ಬಗ್ಗೆ ಬಾಪ್ದಾದಾರವರ ವರದಾನ ಮಹಾವಾಕ್ಯಗಳು :
ಯೂತ್ ವರ್ಗದವರು ಭಲೆ ಮಾಡಿರಿ. ಏನೇ ಮಾಡಿರಿ - ಸಂತುಷ್ಠತೆಯಾಗಲಿ, ಸಫಲತೆಯಾಗಲಿ. ಉಳಿದಂತೆ ಸೇವೆಗಾಗಿಯೇ ಜೀವನವಿದೆ. ತಮ್ಮ ಉಮ್ಮಂಗದಿಂದ ಯಾವುದೇ ಕಾರ್ಯವನ್ನೇನಾದರೂ ಮಾಡುತ್ತೀರೆಂದರೆ ಪರವಾಗಿಲ್ಲ. ಕಾರ್ಯಕ್ರಮವಿದೆ, ಮಾಡಬೇಕಾಗಿದೆ ಅಂದಮೇಲೆ ಅದು ಬೇರೆ ರೂಪವಾಗಿ ಬಿಡುತ್ತದೆ. ಆದರೆ ತಮ್ಮ ಉಮ್ಮಂಗ-ಉತ್ಸಾಹದಿಂದ ಮಾಡಲು ಬಯಸುತ್ತೀರೆಂದರೆ ದೊಡ್ಡ ಮಾತಿಲ್ಲ. ಎಲ್ಲಿಯೇ ಹೋಗುತ್ತೀರಿ, ಅಲ್ಲಿ ಯಾರೇ ಭೇಟಿಯಾಗುತ್ತಾರೆ, ಯಾರನ್ನೇ ನೋಡುತ್ತೀರೆಂದರೆ ಸೇವೆಯೇ ಆಗಿದೆ. ಕೇವಲ ಮಾತನಾಡುವುದೇ ಸೇವೆಯಾಗುವುದಿಲ್ಲ ಆದರೆ ತಮ್ಮ ಚಹರೆಯು ಸದಾ ಹರ್ಷಿತವಾಗಿರಲಿ. ಆತ್ಮಿಕ ಚಹರೆಯೂ ಸಹ ಸೇವೆಯನ್ನು ಮಾಡುತ್ತದೆ. ಲಕ್ಷ್ಯವನ್ನಿಟ್ಟುಕೊಳ್ಳಿರಿ - ಉಮ್ಮಂಗ-ಉತ್ಸಾಹದಿಂದ ಖುಷಿ-ಖುಷಿಯಿಂದ ಆತ್ಮಿಕ ಖುಷಿಯ ಹೊಳಪನ್ನು ತೋರಿಸುತ್ತಾ ಮುಂದುವರೆಯಿರಿ. ಕೇವಲ ಜಬರ್ದಸ್ತಿಯಿಂದ ಏನನ್ನೂ ಮಾಡಬಾರದು. ಕಾರ್ಯಕ್ರಮವನ್ನು ಮಾಡಬೇಕೆಂದು ತಯಾರಾಗಿದೆಯೆಂದರೆ ಮಾಡಲೇಬೇಕು, ಅಂತಹ ಯಾವುದೇ ಮಾತಿಲ್ಲ, ತಮ್ಮ ಉಮ್ಮಂಗ-ಉತ್ಸಾಹವಿದೆಯೆಂದರೆ ಮಾಡಿರಿ, ಒಳ್ಳೆಯದು.

ಒಂದುವೇಳೆ ಯಾರಲ್ಲಿ ಉಮ್ಮಂಗವಿಲ್ಲ ಎಂದರೆ ಬಂಧಿಸುವುದಿಲ್ಲ. ಪರವಾಗಿಲ್ಲ. ಲಕ್ಷ್ಯವೇನಿತ್ತು - ಈ ಸುವರ್ಣ ಮಹೋತ್ಸವದೊಳಗೆ ಎಲ್ಲಾ ಪ್ರಾಂತ್ಯಗಳಲ್ಲಿ ಸೇವೆಯನ್ನು ಮಾಡುವುದು, ಅದಕ್ಕಾಗಿ ಹೇಗೆ ಪಾದಯಾತ್ರಿಗಳು ತನ್ನ ಗ್ರೂಪ್ನಲ್ಲಿ ಬರುತ್ತಾರೆ, ಹಾಗೆಯೇ ಬಸ್ಸಿನ ಮೂಲಕ ಬರುವವರೂ ಇರಬಹುದು. ಪ್ರತಿಯೊಂದು ಝೋನ್ ಅಥವಾ ಪ್ರಾಂತ್ಯದಲ್ಲಿ ಬಸ್ಸಿನ ಮೂಲಕ ಸೇವೆಯನ್ನು ಮಾಡುತ್ತಾ ದೆಹಲಿಯವರೆಗೆ ತಲುಪಬಹುದು. ಎರಡು ಪ್ರಕಾರದ ಗ್ರೂಪ್ ಮಾಡಿಬಿಡಿ. ಒಂದು ಬಸ್ಸಿನ ಮೂಲಕ ಬರುತ್ತಿರಲಿ ಮತ್ತು ಸೇವೆಯನ್ನು ಮಾಡುತ್ತಾ ಬರುತ್ತಿರಲಿ. ಇನ್ನೊಂದು - ಪಾದಯಾತ್ರೆಯ ಮೂಲಕ. ಡಬಲ್ ಆಗಿ ಬಿಡುತ್ತದೆ. ಮಾಡಬಹುದು, ಯುವಕರಾಗಿದ್ದೀರಲ್ಲವೆ. ಆ ಶಕ್ತಿಯನ್ನು ಎಲ್ಲಿಯಾದರೂ ಉಪಯೋಗಿಸಲೇಬೇಕು. ಸೇವೆಯಲ್ಲಿ ಶಕ್ತಿಯಂತು ಉಪಯೋಗವಾಗುತ್ತದೆಯೆಂದರೆ ಒಳ್ಳೆಯದು. ಇದರಲ್ಲಿ ಎರಡೂ ಭಾವಗಳು ಸಿದ್ಧವಾಗಿ ಬಿಡಲಿ - ಸೇವೆಯೂ ಸಿದ್ಧವಾಗಲಿ ಮತ್ತು ಹೆಸರೂ ಸಹ ಇಡಲಾಗಿದೆ- ಪಾದಯಾತ್ರೆ. ಅಂದಮೇಲೆ ಅದೂ ಸಹ ಸಿದ್ಧವಾಗಲಿ. ಪ್ರತಿಯೊಂದು ರಾಜ್ಯದವರೇನಾದರೂ ಅವರ(ಪಾದಯಾತ್ರಿಗಳ) ಇಂಟರ್ವ್ಯೂ ತೆಗೆದುಕೊಳ್ಳುವ ಮೊದಲೇ ಪ್ರಬಂಧವನ್ನಿಡುತ್ತೀರೆಂದರೆ ಸ್ವತಹವಾಗಿಯೇ ಧ್ವನಿ ಮೊಳಗುತ್ತದೆ. ಆದರೆ ಕೇವಲ ಇದು ಅವಶ್ಯವಾಗಿರಬೇಕು - ಆತ್ಮಿಕ ಯಾತ್ರೆಯು ಕಾಣಿಸಲಿ, ಕೇವಲ ಪಾದಯಾತ್ರೆಯಷ್ಟೇ ಅಲ್ಲ. ಆತ್ಮೀಯತೆ ಮತ್ತು ಖುಷಿಯ ಹೊಳಪಿರಲಿ. ಆಗಲೇ ನವೀನತೆಯು ಕಾಣಿಸುತ್ತದೆ. ಸಾಧಾರಣವಾಗಿ ಹೇಗೆ ಅನ್ಯರ ಯಾತ್ರೆಯು ಬರುತ್ತದೆ, ಹಾಗೆನಿಸಬಾರದು ಆದರೆ ಹೀಗೆನಿಸಲಿ - ಇವರು ಡಬಲ್ ಯಾತ್ರಿಯಾಗಿದ್ದಾರೆ, ಒಂದು ಯಾತ್ರೆಯನ್ನು ಮಾಡುತ್ತಿಲ್ಲ. ನೆನಪಿನ ಯಾತ್ರೆಯವರೂ ಆಗಿದ್ದಾರೆ, ಪಾದಯಾತ್ರೆಯವರೂ ಆಗಿದ್ದಾರೆ. ಡಬಲ್ ಯಾತ್ರೆಯ ಪ್ರಭಾವವು ಚಹರೆಯಿಂದ ಕಾಣಿಸಲಿ ಆಗ ಚೆನ್ನಾಗಿರುತ್ತದೆ.

ವಿಶ್ವದ ರಾಜಕಾರಣಿಗಳ ಬಗ್ಗೆ ಅವ್ಯಕ್ತ ಬಾಪ್ದಾದಾರವರ ಮಧುರ ಸಂದೇಶ
ವಿಶ್ವದ ಪ್ರತಿಯೊಂದು ರಾಜ್ಯದ ಮುಖ್ಯಸ್ಥರು ತನ್ನ ದೇಶವನ್ನು ಅಥವಾ ದೇಶವಾಸಿಗಳನ್ನು ಪ್ರಗತಿಯ ಕಡೆಗೆ ಕರೆದುಕೊಂಡು ಹೋಗುವ ಶುಭಭಾವನೆ, ಶುಭಕಾಮನೆಯಿಂದ ತನ್ನ-ತನ್ನ ಕಾರ್ಯ ವ್ಯವಹಾರಗಳಲ್ಲಿ ತೊಡಗಿದ್ದಾರೆ. ಆದರೆ ಭಾವನೆಯು ಬಹಳ ಶ್ರೇಷ್ಠವಿದೆ, ಪ್ರತ್ಯಕ್ಷ ಪ್ರಮಾಣವನ್ನೆಷ್ಟು ಬಯಸುತ್ತಾರೆ ಅಷ್ಟಾಗುವುದಿಲ್ಲ - ಇದೇಕೆ? ಏಕೆಂದರೆ ಇಂದಿನ ಜನತೆ ಅಥವಾ ಬಹಳಷ್ಟು ನೇತರುಗಳ ಮನಸ್ಸಿನ ಭಾವನೆಗಳು ಸೇವಾಭಾವ, ಪ್ರೇಮಭಾವಕ್ಕೆ ಬದಲಾಗಿ ಸ್ವಾರ್ಥಭಾವ, ಈರ್ಷ್ಯಾ ಭಾವದಲ್ಲಿ ಬದಲಾಗಿ ಬಿಟ್ಟಿದೆ. ಆದ್ದರಿಂದ ಈ ಬುನಾದಿಯನ್ನು ಸಮಾಪ್ತಿ ಮಾಡುವುದಕ್ಕಾಗಿ ಪ್ರಾಕೃತಿಕ ಶಕ್ತಿ, ವೈಜ್ಞಾನಿಕ ಶಕ್ತಿ, ವಿಶ್ವ ಜ್ಞಾನದ ಶಕ್ತಿ, ರಾಜ್ಯದ ಅಧಿಕಾರದ ಶಕ್ತಿಯ ಮೂಲಕವಂತು ತನ್ನ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ವಾಸ್ತವಿಕ ಸಾಧನವು ಆಧ್ಯಾತ್ಮಿಕ ಶಕ್ತಿಯಾಗಿದೆ, ಅದರಿಂದಲೇ ಮನಸ್ಸಿನ ಭಾವನೆಯು ಸಹಜವಾಗಿ ಬದಲಾಗಬಹುದು, ಆ ಕಡೆ ಗಮನವು ಕಡಿಮೆಯಿದೆ ಆದ್ದರಿಂದ ಬದಲಾಗಿರುವ ಭಾವನೆಗಳ ಬೀಜವು ಸಮಾಪ್ತಿಯಾಗುವುದಿಲ್ಲ. ಸ್ವಲ್ಪ ಸಮಯಕ್ಕಾಗಿ ಒತ್ತಿಡುತ್ತದೆ, ಆದರೆ ಸಮಯದಲ್ಲಿ ಇನ್ನೂ ಉಗ್ರರೂಪದಲ್ಲಿ ಪ್ರತ್ಯಕ್ಷವಾಗಿ ಬಿಡುತ್ತದೆ. ಆದ್ದರಿಂದ ಆಧ್ಯಾತ್ಮಿಕ ತಂದೆಯ ಆಧ್ಯಾತ್ಮಿಕ ಮಕ್ಕಳೇ, ಆತ್ಮರುಗಳ ಪ್ರತಿ ಸಂದೇಶವಿದೆ - ಸದಾ ತಮ್ಮನ್ನು ಸ್ಪಿರಿಟ್(ಆತ್ಮ) ಎಂದು ತಿಳಿದುಕೋಂಡು ಆತ್ಮಿಕ ತಂದೆಯೊಂದಿಗೆ ಸಂಬಂಧವನ್ನು ಜೋಡಿಸಿ ಆತ್ಮಿಕ ಶಕ್ತಿಯನ್ನು ತೆಗೆದುಕೊಂಡು, ತಮ್ಮ ಮನಸ್ಸಿನ ನೇತ(ರಾಜ)ರಾಗಿರಿ, ಆಗಲೇ ರಾಜ್ಯಾಡಳಿತ ಮಾಡುವವರಾಗಿದ್ದು ಅನ್ಯರ ಮನಸ್ಸಿನ ಭಾವನೆಗಳನ್ನು ಬದಲಾಯಿಸಬಹುದು. ತಮ್ಮ ಮನಸ್ಸಿನ ಸಂಕಲ್ಪ ಮತ್ತು ಜನತೆಯ ಪ್ರತ್ಯಕ್ಷ ಕರ್ಮವು ಒಂದೇ ಆಗಿಬಿಡುತ್ತದೆ. ಇಬ್ಬರ ಸಹಯೋಗದಿಂದ ಸಫಲತೆಯ ಪ್ರತ್ಯಕ್ಷ ಪ್ರಮಾಣದ ಅನುಭವವಾಗುತ್ತದೆ. ನೆನಪಿರಲಿ - ಸ್ವಯಂ ಸ್ವರಾಜ್ಯಾಧಿಕಾರಿಯೇ ಸದಾ ಯೋಗ್ಯ ರಾಜನೇತನ ಆಡಳಿತಧಿಕಾರಿಯಾಗಲು ಸಾಧ್ಯ. ಮತ್ತು ಸ್ವರಾಜ್ಯವು ತಮ್ಮ ಆತ್ಮಿಕ ತಂದೆಯಿಂದ ಜನ್ಮಸಿದ್ಧ ಅಧಿಕರವಿದೆ. ಈ ಜನ್ಮಸಿದ್ಧ ಅಧಿಕಾರದ ಶಕ್ತಿಯಿಂದ ಸದಾ ಧರ್ಮದ ಶಕ್ತಿಯನ್ನೂ ಅನುಭವ ಮಾಡುತ್ತೀರಿ ಮತ್ತು ಸಫಲರಾಗುತ್ತೀರಿ.

ವರದಾನ:  
ಸಂಘಟನೆಯಲ್ಲಿರುತ್ತಾ ಲಕ್ಷ್ಯ ಮತ್ತು ಲಕ್ಷಣವನ್ನು ಸಮಾನ ಮಾಡುವಂತಹ ಸದಾ ಶಕ್ತಿಶಾಲಿ ಆತ್ಮ ಭವ.

ಸಂಘಟನೆಯಲ್ಲಿ ಒಬ್ಬರಿನ್ನೊಬ್ಬರನ್ನು ನೋಡುತ್ತಾ ಉಮ್ಮಂಗ-ಉತ್ಸಾಹವೂ ಬರುತ್ತದೆ, ಅಂದಾಗ ಹುಡುಗಾಟಿಕೆಯೂ ಬರುತ್ತದೆ. ಯೋಚಿಸುತ್ತಾರೆ - ಇವರೂ ಮಾಡುತ್ತಾ, ನಾವೂ ಮಾಡಿದೆವೆಂದರೆ ಏನಾಯಿತು. ಆದ್ದರಿಂದ ಸಂಘಟನೆಯಿಂದ ಶ್ರೇಷ್ಠರಾಗುವ ಸಹಯೋಗವನ್ನು ತೆಗೆದುಕೊಳ್ಳಿರಿ. ಪ್ರತೀ ಕರ್ಮವನ್ನು ಮಾಡುವುದಕ್ಕೆ ಮೊದಲು ವಿಶೇಷವಾಗಿ ಈ ಗಮನ ಅಥವಾ ಲಕ್ಷ್ಯವಿರಲಿ - ನಾನು ಸ್ವಯಂನ್ನು ಸಂಪನ್ನ ಮಾಡಿಕೊಂಡು ಸ್ಯಾಂಪಲ್ ಆಗಬೇಕಾಗಿದೆ. ನಾನು ಮಾಡಿ ಅನ್ಯರಿಗೂ ಮಾಡಿಸಬೇಕಾಗಿದೆ. ನಂತರ ಮತ್ತೆ-ಮತ್ತೆ ಈ ಲಕ್ಷ್ಯವನು ಇಮರ್ಜ್ ಮಾಡಿಕೊಳ್ಳಿರಿ. ಲಕ್ಷ್ಯ ಮತ್ತು ಲಕ್ಷಣವನ್ನು ಸರಿಸಮಾನ ಮಾಡುತ್ತಾ ನಡೆಯುತ್ತೀರೆಂದರೆ ಶಕ್ತಿಶಾಲಿಯಾಗಿ ಬಿಡುತ್ತೀರಿ.

ಸ್ಲೋಗನ್:
ಅಂತ್ಯದಲ್ಲಿ ತೀವ್ರವಾಗಿ ಹೋಗಬೇಕೆಂದರೆ ಸಾಧಾರಣ ಮತ್ತು ವ್ಯರ್ಥ ಸಂಕಲ್ಪಗಳಲ್ಲಿ ಸಮಯವನ್ನು ಕಳೆಯಬಾರದು.