09.02.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವೀಗ ಅಮರ ಲೋಕವನ್ನು ಸ್ಥಾಪನೆ ಮಾಡಲು ನಿಮಿತ್ತರಾಗಿದ್ದೀರಿ, ಅಲ್ಲಿ ಯಾವುದೇ ದುಃಖ ಹಾಗೂ ಪಾಪವಿರುವುದಿಲ್ಲ, ಅದು ನಿರ್ವಿಕಾರಿ ಪ್ರಪಂಚವಾಗಿದೆ.

ಪ್ರಶ್ನೆ:
ಈಶ್ವರೀಯ ಕುಟುಂಬದ ಅದ್ಭುತ ಯೋಜನೆ ಯಾವುದಾಗಿದೆ?

ಉತ್ತರ:
ಈಶ್ವರೀಯ ಕುಟುಂಬದ ಯೋಜನೆಯಾಗಿದೆ - ಫ್ಯಾಮಿಲಿ ಪ್ಲಾನಿಂಗ್ ಮಾಡುವುದು. ಒಂದು ಸದ್ಧರ್ಮದ ಸ್ಥಾಪನೆ ಮಾಡಿ ಅನೇಕ ಧರ್ಮಗಳ ವಿನಾಶ ಮಾಡುವುದು. ಮನುಷ್ಯರು ಜನಸಂಖ್ಯಾ ನಿಯಂತ್ರಣ ಮಾಡಲು ಯೋಜನೆಗಳನ್ನು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಅವರ ಯೋಜನೆಗಳು ನಡೆಯುವುದಿಲ್ಲ. ನಾನೇ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತೇನೆ, ಆಗ ಉಳಿದೆಲ್ಲಾ ಆತ್ಮರು ಮೇಲೆ ಮನೆಗೆ ಹೊರಟು ಹೋಗುವರು. ನಂತರ ಕೆಲವು ಆತ್ಮಗಳೇ ಇರುತ್ತಾರೆ.

ಓಂ ಶಾಂತಿ.
ಇದು ಮನೆಯೂ ಆಗಿದೆ, ವಿಶ್ವ ವಿದ್ಯಾಲಯವೂ ಆಗಿದೆ, ಸಂಸ್ಥೆಯೂ ಆಗಿದೆ. ನೀವು ಮಕ್ಕಳಿಗೆ ತಿಳಿದಿದೆ - ಇವರು ಶಿವ ತಂದೆಯಾಗಿದ್ದಾರೆ, ಆತ್ಮಗಳು ಸಾಲಿಗ್ರಾಮಗಳಾಗಿದ್ದೀರಿ, ಯಾರಿಗೆ ಈ ಶರೀರವಿದೆ, ನನ್ನ ಆತ್ಮವೆಂದು ಶರೀರವು ಹೇಳುವುದಿಲ್ಲ. ನನ್ನ ಶರೀರವೆಂದು ಆತ್ಮವು ಹೇಳುತ್ತದೆ, ಆತ್ಮ ಅವಿನಾಶಿ, ಶರೀರ ವಿನಾಶಿಯಾಗಿದೆ. ನೀವೀಗ ಆತ್ಮವನ್ನು ತಿಳಿದುಕೊಂಡಿದ್ದೀರಿ. ನಮ್ಮ ತಂದೆಯು ಶಿವನಾಗಿದ್ದಾರೆ, ಅವರು ಪರಮಪಿತನಾಗಿದ್ದಾರೆ. ಆತ್ಮಕ್ಕೆ ಗೊತ್ತಿದೆ, ಅವರು ನಮ್ಮ ಪಾರಲೌಕಿಕ ತಂದೆಯಾಗಿದ್ದಾರೆ, ಪರಮ ಶಿಕ್ಷಕ, ಪರಮ ಸದ್ಗುರುವೂ ಆಗಿದ್ದಾರೆ. ಭಕ್ತಿಮಾರ್ಗದಲ್ಲಿಯೂ ಓ ಗಾಡ್ಫಾದರ್ ಎಂದು ಕರೆಯುತ್ತಾರೆ, ಶರೀರ ಬಿಡುವ ಸಮಯದಲ್ಲಿಯೂ ಹೇ ಭಗವಂತ, ಹೇ ಈಶ್ವರ ಎಂದು ಹೇಳುತ್ತಾರೆ, ಕರೆಯುತ್ತಾರಲ್ಲವೆ. ಆದರೆ ಯಾರ ಬುದ್ಧಿಯಲ್ಲಿಯೂ ಯಥಾರ್ಥ ರೀತಿಯಿಂದ ಕುಳಿತುಕೊಳ್ಳುವುದಿಲ್ಲ. ತಂದೆಯಂತೂ ಎಲ್ಲಾ ಆತ್ಮರಿಗೂ ಒಬ್ಬರೇ ಆದರು. ಮತ್ತೆ ಹೇ ಪತಿತಪಾವನ ಎಂದು ಹೇಳಲಾಗುತ್ತದೆ ಅಂದಮೇಲೆ ಅವರು ಗುರುವೂ ಆದರು. ದುಃಖದಿಂದ ನಮ್ಮನ್ನು ಮುಕ್ತ ಮಾಡಿ ಶಾಂತಿಧಾಮಕ್ಕೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ ಅಂದಮೇಲೆ ತಂದೆಯೂ ಆದರು ಮತ್ತು ಪತಿತ ಪಾವನ ಸದ್ಗುರುವೂ ಆದರು. ಸೃಷ್ಟಿಯು ಹೇಗೆ ಸುತ್ತುತ್ತದೆ? ಮನುಷ್ಯರು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಬೇಹದ್ದಿನ ಚರಿತ್ರೆ-ಭೂಗೋಳವನ್ನು ತಿಳಿಸುತ್ತಾರೆ ಆದ್ದರಿಂದ ಪರಮ ಶಿಕ್ಷಕನೂ ಆದರು. ಅಜ್ಞಾನ ಕಾಲದಲ್ಲಿ ತಂದೆಯೇ ಬೇರೆ, ಶಿಕ್ಷಕನೇ ಬೇರೆ, ಗುರುವೇ ಬೇರೆಯಿರುತ್ತಾರೆ. ಈ ಬೇಹದ್ದಿನ ತಂದೆ, ಶಿಕ್ಷಕ, ಗುರು ಒಬ್ಬರೇ ಆಗಿದ್ದಾರೆ, ಎಷ್ಟೊಂದು ಅಂತರವಾಯಿತಲ್ಲವೆ. ಬೇಹದ್ದಿನ ತಂದೆಯು ಮಕ್ಕಳಿಗೆ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಲೌಕಿಕ ತಂದೆಯೂ ಸಹ ಹದ್ದಿನ ಆಸ್ತಿಯನ್ನು ಕೊಡುತ್ತಾರೆ, ಆ ವಿದ್ಯೆಯೂ ಹದ್ದಿನದಾಗಿದೆ. ವಿಶ್ವದ ಚರಿತ್ರೆ-ಭೂಗೋಳವನ್ನು ಯಾರೂ ತಿಳಿದುಕೊಂಡಿಲ್ಲ. ಲಕ್ಷ್ಮೀ-ನಾರಾಯಣರು ರಾಜ್ಯವನ್ನು ಹೇಗೆ ಪಡೆದರು? ಅವರ ರಾಜ್ಯವು ಎಷ್ಟು ಸಮಯ ಹಿಡಿಸಿತು? ಮತ್ತೆ ತ್ರೇತಾದ ರಾಮ-ಸೀತೆಯು ಎಷ್ಟು ಸಮಯ ರಾಜ್ಯ ಮಾಡಿದರು? ಏನನ್ನೂ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಬೇಹದ್ದಿನ ತಂದೆಯು ನಮಗೆ ಓದಿಸಲು ಬಂದಿದ್ದಾರೆ, ತಂದೆಯು ಸದ್ಗತಿಯ ಮಾರ್ಗವನ್ನು ತಿಳಿಸುತ್ತಾರೆ. ನೀವು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತರಾಗುತ್ತೀರಿ, ಈಗ ಪಾವನರಾಗಬೇಕಾಗಿದೆ. ಇದು ತಮೋಪ್ರಧಾನ ಪ್ರಪಂಚವಾಗಿದೆ, ಸತೋ-ರಜೋ-ತಮೋದಲ್ಲಿ ಪ್ರತಿಯೊಂದು ವಸ್ತು ಬರುತ್ತದೆ. ಈ ಸೃಷ್ಟಿಗೂ ಆಯಸ್ಸು ಇದೆ, ಅದು ಹೊಸದರಿಂದ ಹಳೆಯದು, ಮತ್ತೆ ಹಳೆಯದರಿಂದ ಹೊಸದಾಗುತ್ತದೆ. ಇದನ್ನಂತೂ ಎಲ್ಲರೂ ತಿಳಿದುಕೊಂಡಿದ್ದಾರೆ. ಸತ್ಯಯುಗದಲ್ಲಿ ಭಾರತವೇ ಇತ್ತು, ಅಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು. ಒಳ್ಳೆಯದು - ಮತ್ತೇನಾಯಿತು? ಅವರು ಪುನರ್ಜನ್ಮವನ್ನು ತೆಗೆದುಕೊಂಡರು. ಸತೋಪ್ರಧಾನರಿಂದ ಸತೋ, ರಜೋ, ತಮೋದಲ್ಲಿ ಬಂದರು. ಇಷ್ಟಿಷ್ಟು ಜನ್ಮಗಳನ್ನು ತೆಗೆದುಕೊಂಡರು. ಭಾರತದಲ್ಲಿ 5000 ವರ್ಷಗಳ ಮೊದಲು ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಅಲ್ಲಿ ಮನುಷ್ಯರ ಆಯಸ್ಸು ಅಂದಾಜು 125-150 ವರ್ಷಗಳಿರುತ್ತದೆ, ಅದಕ್ಕೆ ಅಮರಲೋಕವೆಂದು ಹೇಳಲಾಗುತ್ತದೆ. ಅಕಾಲಮೃತ್ಯು ಎಂದೂ ಆಗುವುದಿಲ್ಲ. ಇದು ಮೃತ್ಯುಲೋಕವಾಗಿದೆ, ಅಮರ ಲೋಕದಲ್ಲಿ ಮನುಷ್ಯರು ಅಮರರಾಗಿರುತ್ತಾರೆ, ಧೀರ್ಘಾಯಸ್ಸು ಇರುತ್ತದೆ. ಸತ್ಯಯುಗದಲ್ಲಿ ಪವಿತ್ರ ಗೃಹಸ್ಥಾಶ್ರಮವಾಗಿತ್ತು, ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಈಗ ವಿಕಾರಿ ಪ್ರಪಂಚವಾಗಿದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಶಿವ ತಂದೆಯ ಸಂತಾನರಾಗಿದ್ದೇವೆ, ಆಸ್ತಿಯು ಶಿವ ತಂದೆಯಿಂದ ಸಿಗುತ್ತದೆ. ಇವರು ತಾತ, ಅವರು ತಂದೆ, ತಾತನ ಆಸ್ತಿಯು ಸಿಗುತ್ತದೆ. ತಾತನ ಆಸ್ತಿಯ ಮೇಲೆ ಎಲ್ಲರಿಗೆ ಅಧಿಕಾರವಿರುತ್ತದೆ. ಬ್ರಹ್ಮಾರವರಿಗೆ ಪ್ರಜಾಪಿತನೆಂದು ಹೇಳಲಾಗುತ್ತದೆ. ಆಡಂ ಈವ್, ಆದಂ ಬೀಬಿ. ತಂದೆಯು ನಿರಾಕಾರ, ಪರಮಪಿತನಾಗಿದ್ದಾರೆ. ಈ ಪ್ರಜಾಪಿತನು ಸಾಕಾರ ತಂದೆಯಾದರೂ ಇವರಿಗೆ ತಮ್ಮ ಶರೀರವಿದೆ. ಶಿವ ತಂದೆಗೆ ತಮ್ಮ ಶರೀರವಿಲ್ಲ ಅಂದಾಗ ನಿಮಗೆ ಶಿವ ತಂದೆಯಿಂದ ಬ್ರಹ್ಮಾರವರ ಮೂಲಕ ಆಸ್ತಿಯು ಸಿಗುತ್ತದೆ. ತಾತನ ಆಸ್ತಿಯು ತಂದೆಯ ಮೂಲಕ ಸಿಗುತ್ತದೆಯಲ್ಲವೆ. ಶಿವ ತಂದೆಯಿಂದಲೂ ಬ್ರಹ್ಮಾರವರ ಮೂಲಕ ನೀವು ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು..... ಯಾರು ಮಾಡಿದರು? ಭಗವಂತ. ಗ್ರಂಥದಲ್ಲಿ ಮಹಿಮೆ ಮಾಡುತ್ತಾರಲ್ಲವೆ. ಬಹಳಷ್ಟು ಮಹಿಮೆಯಿದೆ. ಹೇಗೆ ಅಲೀಫನನ್ನು ನೆನಪು ಮಾಡಿದರೆ ಬಾದಶಾಹಿ ನಿಮ್ಮದಾಗುವುದೆಂದು ತಂದೆಯು ಹೇಳುತ್ತಾರೆ. ಅದೇ ರೀತಿ ಗುರುನಾನಕರೂ ಹೇಳುತ್ತಾರೆ - ಸಾಹೇಬನನ್ನು ಜಪಿಸಿದರೆ ಸುಖ ಸಿಗುವುದು. ಆ ನಿರಾಕಾರ ಅಕಾಲಮೂರ್ತಿ ತಂದೆಯದೇ ಮಹಿಮೆ ಹಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ಸುಖ ಸಿಗುವುದು. ಈಗ ತಂದೆಯನ್ನೇ ನೆನಪು ಮಾಡುತ್ತೀರಿ. ಯುದ್ಧವು ಮುಕ್ತಾಯವಾದ ಮೇಲೆ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಒಂದೇ ಧರ್ಮವಿರುವುದು. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಭಗವಾನುವಾಚ ಪತಿತ ಪಾವನ, ಜ್ಞಾನ ಸಾಗರ ಎಂದು ಭಗವಂತನಿಗೆ ಹೇಳಲಾಗುತ್ತದೆ. ಅವರೇ ದುಃಖಹರ್ತ-ಸುಖಕರ್ತನಾಗಿದ್ದಾರೆ. ಯಾವಾಗ ನಾವು ತಂದೆಯ ಮಕ್ಕಳಾಗುತ್ತೇವೆ ಅಂದಮೇಲೆ ನಾವೂ ಸುಖದಲ್ಲಿರಬೇಕು. ಭಾರತವಾಸಿಗಳು ಸತ್ಯಯುಗದಲ್ಲಿದ್ದಿರಿ, ಉಳಿದೆಲ್ಲಾ ಆತ್ಮರು ಶಾಂತಿಧಾಮದಲ್ಲಿದ್ದರು. ಈಗ ಎಲ್ಲಾ ಆತ್ಮರು ಮೇಲಿನಿಂದ ಇಲ್ಲಿ ಬರುತ್ತಿದ್ದಾರೆ. ಮತ್ತೆ ನಾವು ಹೋಗಿ ದೇವಿ-ದೇವತೆಗಳಾಗುತ್ತೇವೆ. ಸ್ವರ್ಗದಲ್ಲಿ ಪಾತ್ರವನ್ನಭಿನಯಿಸುತ್ತೇವೆ. ಈ ಹಳೆಯ ಪ್ರಪಂಚವು ದುಃಖಧಾಮವಾಗಿದೆ. ಹೊಸ ಪ್ರಪಂಚವು ಸುಖಧಾಮವಾಗಿದೆ. ಮನೆಯು ಹಳೆಯದಾದರೆ ಅದರಲ್ಲಿ ಇಲಿ, ಹಾವು ಇತ್ಯಾದಿಗಳು ಬರುತ್ತವೆ. ಈ ಪ್ರಪಂಚವೂ ಅದೇ ರೀತಿಯಿದೆ. ಈ ಕಲ್ಪದ ಆಯಸ್ಸು 5000 ವರ್ಷಗಳಾಗಿವೆ, ಈಗ ಅಂತ್ಯವಾಗಿದೆ, ಗಾಂಧೀಜಿಯೂ ಸಹ ಹೊಸ ಪ್ರಪಂಚ, ಹೊಸ ದೆಹಲಿಯಾಗಲಿ. ರಾಮ ರಾಜ್ಯವಾಗಲಿ ಎಂದು ಬಯಸುತ್ತಿದ್ದರು ಆದರೆ ಇದಂತೂ ತಂದೆಯದೇ ಕರ್ತವ್ಯವಾಗಿದೆ. ದೇವತೆಗಳ ರಾಜ್ಯಕ್ಕೇ ರಾಮ ರಾಜ್ಯವೆಂದು ಹೇಳುತ್ತಾರೆ. ಹೊಸ ಪ್ರಪಂಚದಲ್ಲಿ ಖಂಡಿತವಾಗಿ ಲಕ್ಷ್ಮೀ-ನಾರಾಯಣರ ರಾಜ್ಯವಿರುವುದು. ಮೊದಲು ರಾಧೆ-ಕೃಷ್ಣರಿಬ್ಬರೂ ಬೇರೆ-ಬೇರೆ ರಾಜಧಾನಿಯವರಾಗಿರುತ್ತಾರೆ ಮತ್ತೆ ಅವರ ವಿವಾಹವಾದ ಮೇಲೆ ಲಕ್ಷ್ಮೀ-ನಾರಾಯಣರಾಗುತ್ತಾರೆ ಅಂದಾಗ ಅವಶ್ಯವಾಗಿ ಈ ಸಮಯದಲ್ಲಿಯೇ ಅಂತಹ ಕರ್ಮವನ್ನು ಮಾಡುತ್ತಾರೆ. ತಂದೆಯು ನಿಮಗೆ ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು ತಿಳಿಸುತ್ತಾರೆ. ರಾವಣ ರಾಜ್ಯದಲ್ಲಿ ಮನುಷ್ಯರು ಯಾವುದೇ ಕರ್ಮ ಮಾಡಿದರೂ ಆ ಕರ್ಮವು ವಿಕರ್ಮವಾಗಿ ಬಿಡುತ್ತದೆ. ಸತ್ಯಯುಗದಲ್ಲಿ ಕರ್ಮವು ಅಕರ್ಮವಾಗುತ್ತದೆ, ಗೀತೆಯಲ್ಲಿಯೂ ಇದೆ ಆದರೆ ಹೆಸರನ್ನು ಬದಲಾಯಿಸಿದ್ದಾರೆ. ಇದು ತಪ್ಪಾಗಿದೆ. ಸತ್ಯಯುಗದಲ್ಲಿ ಕೃಷ್ಣ ಜಯಂತಿಯಾಗುತ್ತದೆ. ಶಿವನು ನಿರಾಕಾರ ಪರಮಪಿತನಾಗಿದ್ದಾರೆ. ಕೃಷ್ಣನು ಸಾಕಾರ ಮನುಷ್ಯನಾಗಿದ್ದಾರೆ. ಮೊದಲು ಶಿವ ಜಯಂತಿಯಾಗುತ್ತದೆ ನಂತರ ಕೃಷ್ಣ ಜಯಂತಿಯನ್ನು ಭಾರತದಲ್ಲಿಯೇ ಆಚರಿಸುತ್ತಾರೆ. ಶಿವ ರಾತ್ರಿಯೆಂದು ಹೇಳುತ್ತಾರೆ, ತಂದೆಯು ಬಂದು ಭಾರತಕ್ಕೆ ಸ್ವರ್ಗದ ರಾಜ್ಯವನ್ನು ಕೊಡುತ್ತಾರೆ. ಶಿವ ಜಯಂತಿಯ ನಂತರ ಕೃಷ್ಣ ಜಯಂತಿಯಾಗುವುದು, ಅದರ ಮಧ್ಯದಲ್ಲಿ ರಕ್ಷಾ ಬಂಧನವಾಗುತ್ತದೆ ಏಕೆಂದರೆ ಪವಿತ್ರತೆಯು ಬೇಕಾಗಿದೆ. ಹಳೆಯ ಪ್ರಪಂಚದ ವಿನಾಶವೂ ಆಗಬೇಕು, ನಂತರ ಯುದ್ಧವಾದಾಗ ಎಲ್ಲರೂ ಸಮಾಪ್ತಿಯಾಗುತ್ತಾರೆ. ನೀವು ಹೋಗಿ ಹೊಸ ಪ್ರಪಂಚದಲ್ಲಿ ರಾಜ್ಯ ಮಾಡುತ್ತೀರಿ. ನೀವು ಈ ಹಳೆಯ ಪ್ರಪಂಚ, ಮೃತ್ಯುಲೋಕಕ್ಕಾಗಿ ಓದುವುದಿಲ್ಲ. ನಿಮ್ಮ ವಿದ್ಯೆಯು ಹೊಸ ಪ್ರಪಂಚ, ಅಮರಲೋಕಕ್ಕಾಗಿ ಇದೆ. ಇಂತಹ ಯಾವುದೇ ಕಾಲೇಜು ಇರುವುದಿಲ್ಲ, ಈಗ ತಂದೆಯು ತಿಳಿಸುತ್ತಾರೆ - ಮೃತ್ಯುಲೋಕದ ಅಂತ್ಯವಾಗಿದೆ ಆದ್ದರಿಂದ ಬೇಗನೆ ಓದಿ ಬುದ್ಧಿವಂತರಾಗಬೇಕಾಗಿದೆ. ಇವರು ತಂದೆಯೂ ಆಗಿದ್ದಾರೆ, ಪತಿತ ಪಾವನನೂ ಆಗಿದ್ದಾರೆ, ಓದಿಸುತ್ತಾರೆ ಆದ್ದರಿಂದ ಇದು ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ. ಭಗವಾನುವಾಚ ಆಗಿದೆಯಲ್ಲವೆ. ಶ್ರೀಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ, ಕೃಷ್ಣನೂ ಸಹ ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾನೆ. ಈ ಸಮಯದಲ್ಲಿ ಎಲ್ಲರೂ ಭವಿಷ್ಯಕ್ಕಾಗಿ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ಮತ್ತೆ ಯಾರೆಷ್ಟು ಓದುವರೋ ಅಷ್ಟು ಆಸ್ತಿಯು ಸಿಗುವುದು. ಓದದಿದ್ದರೆ ಪದವಿಯು ಕಡಿಮೆಯಾಗಿ ಬಿಡುತ್ತದೆ. ಭಲೆ ಎಲ್ಲಿಯಾದರೂ ಇರಿ, ಓದುತ್ತಾ ಇರಿ. ಮುರುಳಿಯಂತೂ ವಿದೇಶಕ್ಕೂ ಹೋಗುತ್ತದೆ, ತಂದೆಯು ನಿತ್ಯವೂ ಸಾವಧಾನವನ್ನು ಕೊಡುತ್ತಿರುತ್ತಾರೆ - ಮಕ್ಕಳೇ, ತಂದೆಯನ್ನು ನೆನಪು ಮಾಡಿ, ಇದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ. ಆತ್ಮದಲ್ಲಿ ಯಾವ ತುಕ್ಕು ಹಿಡಿದಿದೆಯೋ ಅದು ಬಿಟ್ಟು ಹೋಗುವುದು. ಆತ್ಮವು 100% ಪವಿತ್ರವಾಗಬೇಕಾಗಿದೆ. ಈಗಂತೂ ಅಪವಿತ್ರವಾಗಿದೆ. ಭಕ್ತಿಯನ್ನಂತೂ ಮನುಷ್ಯರು ಬಹಳ ಮಾಡುತ್ತಾರೆ. ತೀರ್ಥ ಯಾತ್ರೆಗಳಿಗೆ, ಮೇಳಗಳಿಗೆ ಲಕ್ಷಾಂತರ ಮನುಷ್ಯರು ಹೋಗುತ್ತಾರೆ. ಇದಂತೂ ಜನ್ಮ-ಜನ್ಮಾಂತರದಿಂದ ನಡೆದು ಬರುತ್ತಿದೆ. ಎಷ್ಟೊಂದು ಮಂದಿರಗಳನ್ನು ಕಟ್ಟಿಸುತ್ತಾರೆ, ಪರಿಶ್ರಮ ಪಡುತ್ತಾರೆ ಆದರೂ ಸಹ ಏಣಿಯನ್ನು ಕೆಳಗಿಳಿಯುತ್ತಾ ಬರುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ನಾವು ಏರುವ ಕಲೆಯಿಂದ ಸುಖಧಾಮದಲ್ಲಿ ಹೋಗುತ್ತೇವೆ, ಮತ್ತೆ ನಾವು ಇಳಿಯಬೇಕಾಗಿದೆ. ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಹೊಸ ಮನೆಯನ್ನು ಕಟ್ಟಿ 10 ವರ್ಷಗಳ ನಂತರ ಅದರ ಸೌಂದರ್ಯವು ಖಂಡಿತ ಕಡಿಮೆಯಾಗಿ ಬಿಡುವುದು. ನೀವು ಹೊಸ ಪ್ರಪಂಚ ಸತ್ಯಯುಗದಲ್ಲಿದ್ದಿರಿ, 1250 ವರ್ಷಗಳ ನಂತರ ರಾಮ ರಾಜ್ಯವು ಆರಂಭವಾಯಿತು. ಈಗಂತೂ ಸಂಪೂರ್ಣ ತಮೋಪ್ರಧಾನರಾಗಿದ್ದೀರಿ. ಎಷ್ಟೊಂದು ಜನಸಂಖ್ಯೆಯಾಗಿ ಬಿಟ್ಟಿದೆ, ಪ್ರಪಂಚವೂ ಹಳೆಯದಾಗಿದೆ, ಅವರಂತೂ ಫ್ಯಾಮಿಲಿ ಪ್ಲಾನಿಂಗ್ನ ಯೋಜನೆ ಮಾಡುತ್ತಿರುತ್ತಾರೆ, ಎಷ್ಟೊಂದು ತಬ್ಬಿಬ್ಬಾಗುತ್ತಿರುತ್ತಾರೆ. ನಾವು ಬರೆಯುತ್ತೇವೆ - ಇದು ಪರಮಾತ್ಮನ ಕರ್ತವ್ಯವೇ ಆಗಿದೆ, ಸತ್ಯಯುಗದಲ್ಲಿ ಕೇವಲ 9-10 ಲಕ್ಷ ಮಂದಿಯೇ ಇರುತ್ತಾರೆ. ಉಳಿದೆಲ್ಲರೂ ತಮ್ಮ ಮಧುರ ಮನೆಗೆ ಹೊರಟು ಹೋಗುತ್ತಾರೆ. ಇದು ಈಶ್ವರನ ಫ್ಯಾಮಿಲಿ ಪ್ಲಾನಿಂಗ್ ಆಗಿದೆ. ಒಂದು ಧರ್ಮದ ಸ್ಥಾಪನೆ ಉಳಿದೆಲ್ಲಾ ಧರ್ಮಗಳ ವಿನಾಶ, ತಂದೆಯು ತಮ್ಮ ಈ ಕರ್ತವ್ಯವನ್ನು ಮಾಡುತ್ತಿದ್ದಾರೆ. ಆ ಮನುಷ್ಯರು ಹೇಳುತ್ತಾರೆ - ಭಲೆ ವಿಕಾರದಲ್ಲಿ ಹೋಗಿ ಆದರೆ ಮಕ್ಕಳಾಗಬಾರದು. ಹೀಗೆ ಮಾಡುತ್ತಾ-ಮಾಡುತ್ತಾ ಏನೂ ಆಗುವುದಿಲ್ಲ. ಈ ಯೋಜನೆಯು ಬೇಹದ್ದಿನ ತಂದೆಯ ಕೈಯಲ್ಲಿದೆ. ತಂದೆಯು ತಿಳಿಸುತ್ತಾರೆ- ನಾನೇ ದುಃಖಧಾಮದಿಂದ ಸುಖಧಾಮವನ್ನಾಗಿ ಮಾಡಲು ಬಂದಿದ್ದೇನೆ. ಪ್ರತೀ 5000 ವರ್ಷಗಳ ನಂತರ ನಾನು ಬರುತ್ತೇನೆ ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯಲ್ಲಿ. ಈಗ ಇದು ಸಂಗಮವಾಗಿದೆ ಈಗ ಪತಿತ ಪ್ರಪಂಚದಿಂದ ಪಾವನ ಪ್ರಪಂಚವಾಗುತ್ತದೆ. ಹಳೆಯ ಪ್ರಪಂಚದ ವಿನಾಶ ಮತ್ತು ಹೊಸ ಪ್ರಪಂಚದ ಸ್ಥಾಪನೆ, ಇದು ತಂದೆಯದೇ ಕರ್ತವ್ಯವಾಗಿದೆ. ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು. ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರು, ಮಹಾರಾಜ-ಮಹಾರಾಣಿಯಾಗಿದ್ದರು. ಇದನ್ನೂ ನೀವು ತಿಳಿದುಕೊಂಡಿದ್ದೀರಿ. ಈ ಮಾಲೆಯು ಯಾರಿಂದ ಮಾಡಲ್ಪಟ್ಟಿದೆ. ಮಾಲೆಯಲ್ಲಿ ಹೂ ಶಿವ ತಂದೆಯಾಗಿದ್ದಾರೆ ನಂತರ ಜೋಡಿ ಮಣಿಗಳು ಬ್ರಹ್ಮಾ ಸರಸ್ವತಿಯಾಗಿದ್ದಾರೆ. ಅವರದೇ ಈ ಮಾಲೆಯಾಗಿದೆ. ಅವರು ವಿಶ್ವವನ್ನು ನರಕದಿಂದ ಸ್ವರ್ಗ, ಪತಿತರಿಂದ ಪಾವನ ಮಾಡುತ್ತಾರೆ. ಯಾರು ಸರ್ವೀಸ್ ಮಾಡಿ ಹೋಗುತ್ತಾರೆಯೋ ಅವರದೇ ನೆನಪಿರುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಇವರು ಸತ್ಯಯುಗದಲ್ಲಿ ಪವಿತ್ರರಾಗಿದ್ದರಲ್ಲವೆ. ಪ್ರವೃತ್ತಿ ಮಾರ್ಗವು ಪವಿತ್ರವಾಗಿತ್ತು, ಈಗಂತೂ ಪತಿತರಾಗಿದ್ದಾರೆ. ಪತಿತ ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ಸತ್ಯಯುಗದಲ್ಲಿ ಈ ರೀತಿ ಕರೆಯುವುದಿಲ್ಲ. ಸುಖದಲ್ಲಿ ಯಾರೂ ತಂದೆಯ ಸ್ಮರಣೆ ಮಾಡುವುದಿಲ್ಲ, ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುತ್ತಾರೆ. ತಂದೆಯು ಮುಕ್ತಿದಾತ, ದಯಾಹೃದಯಿ, ಆನಂದ ಸಾಗರನಾಗಿದ್ದಾರೆ. ಬಂದು ಎಲ್ಲರಿಗೂ ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತಾರೆ. ಬಂದು ನಮ್ಮನ್ನು ಮಧುರ ಮನೆಗೆ ಕರೆದುಕೊಂಡು ಹೋಗಿ ಎಂದು ಅವರನ್ನೇ ಕರೆಯುತ್ತಾರೆ. ಈಗ ಸುಖವಿಲ್ಲ, ಇದು ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಾಗಿದೆ. ಸತ್ಯಯುಗದಲ್ಲಂತೂ ರಾಜ-ರಾಣಿ, ಪ್ರಜೆಗಳಿರುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಹೇಗೆ ವಿಶ್ವದ ಮಾಲೀಕರಾಗುತ್ತೀರಿ, ಅಲ್ಲಿ ನಿಮ್ಮ ಬಳಿ ಅಪಾರ ಲೆಕ್ಕವಿಲ್ಲದಷ್ಟು ಹಣವಿರುತ್ತದೆ, ಚಿನ್ನದ ಇಟ್ಟಿಗೆಗಳಿಂದ ಮನೆ ಕಟ್ಟುತ್ತಾರೆ. ಯಂತ್ರದಿಂದ ಚಿನ್ನದ ಇಟ್ಟಿಗೆಗಳು ತಯಾರಾಗುತ್ತವೆ. ಮತ್ತೆ ಅವುಗಳಲ್ಲಿಯೂ ವಜ್ರ ರತ್ನಗಳನ್ನು ಜೋಡಿಸುತ್ತಾರೆ. ದ್ವಾಪರದಲ್ಲಿಯೂ ಎಷ್ಟೊಂದು ವಜ್ರಗಳಿತ್ತು, ಲೂಟಿ ಮಾಡಿಕೊಂಡು ಹೋದರು. ಈಗಂತೂ ಚಿನ್ನವೇ ಕಾಣಿಸುತ್ತಿಲ್ಲ, ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಪ್ರತೀ 5000 ವರ್ಷಗಳ ನಂತರ ಬರುತ್ತೇನೆ. ಹಳೆಯ ಪ್ರಪಂಚದ ವಿನಾಶಕ್ಕಾಗಿ ಈ ಅಣು ಬಾಂಬುಗಳು ತಯಾರಾಗಿವೆ, ಇದು ವಿಜ್ಞಾನವಾಗಿದೆ. ಬುದ್ಧಿ ಶಕ್ತಿಯಿಂದ ಇಂತಿಂತಹ ವಸ್ತುಗಳನ್ನು ತಯಾರು ಮಾಡಿದ್ದಾರೆ. ಯಾವುದರಿಂದ ತಮ್ಮದೇ ಕುಲದ ವಿನಾಶ ಮಾಡಿಕೊಳ್ಳುತ್ತಾರೆ. ಇವನ್ನು ಕೇವಲ ಇಟ್ಟುಕೊಳ್ಳುವುದಕ್ಕಾಗಿ ತಯಾರಿಸುವುದಿಲ್ಲ. ಇದು ರಿಹರ್ಸಲ್ ಆಗುತ್ತಿರುತ್ತದೆ. ಎಲ್ಲಿಯವರೆಗೆ ರಾಜಧಾನಿಯು ಸ್ಥಾಪನೆಯಾಗುವುದಿಲ್ಲವೋ ಅಲ್ಲಿಯವರೆಗೆ ಯುದ್ಧಗಳಾಗುವುದಿಲ್ಲ. ತಯಾರಿಗಳಂತೂ ನಡೆಯುತ್ತಿವೆ, ಅದರ ಜೊತೆಗೆ ಪ್ರಾಕೃತಿಕ ವಿಕೋಪಗಳೂ ಆಗುವವು. ಇಷ್ಟೆಲ್ಲಾ ಜನಸಂಖ್ಯೆಯಿರುವುದಿಲ್ಲ.

ಈಗ ಮಕ್ಕಳು ಈ ಹಳೆಯ ಪ್ರಪಂಚವನ್ನು ಮರೆತು ಬಿಡಬೇಕಾಗಿದೆ. ಮಧುರ ಮನೆ, ಸ್ವರ್ಗದ ರಾಜ್ಯ ಭಾಗ್ಯವನ್ನು ನೆನಪು ಮಾಡಬೇಕಾಗಿದೆ. ಹೇಗೆ ಹೊಸ ಮನೆಯನ್ನು ಕಟ್ಟಿಸಿದಾಗ ಬುದ್ಧಿಯಲ್ಲಿ ಹೊಸ ಮನೆಯೇ ನೆನಪಿರುತ್ತದೆಯಲ್ಲವೆ. ಈಗಲೂ ಹೊಸ ಪ್ರಪಂಚದ ಸ್ಥಾಪನೆಯಾಗುತ್ತದೆ. ತಂದೆಯು ಸರ್ವರ ಸದ್ಗತಿದಾತನಾಗಿದ್ದಾರೆ. ಆತ್ಮರೆಲ್ಲರೂ ಹೊರಟು ಹೋಗುವರು. ಬಾಕಿ ಶರೀರಗಳು ಇಲ್ಲಿ ಸಮಾಪ್ತಿಯಾಗುತ್ತವೆ. ಆತ್ಮವು ತಂದೆಯ ನೆನಪಿನಿಂದ ಪವಿತ್ರವಾಗುತ್ತದೆ. ಪವಿತ್ರರು ಖಂಡಿತವಾಗಿಯೂ ಆಗಬೇಕಾಗಿದೆ. ದೇವತೆಗಳು ಪವಿತ್ರರಲ್ಲವೆ, ಅವರ ಮುಂದೆ ಎಂದೂ ಬೀಡಿ, ತಂಬಾಕು ಇತ್ಯಾದಿಗಳನ್ನು ಇಡುವುದಿಲ್ಲ, ಅವರು ವೈಷ್ಣವರಾಗಿದ್ದಾರೆ. ವಿಷ್ಣು ಪುರಿ ಎಂದು ಹೇಳಲಾಗುತ್ತದೆ ಅದು ನಿರ್ವಿಕಾರಿ ಪ್ರಪಂಚವಾಗಿದೆ, ಇದು ವಿಕಾರಿ ಪ್ರಪಂಚವಾಗಿದೆ. ಈಗ ನಿರ್ವಿಕಾರಿ ಪ್ರಪಂಚದಲ್ಲಿ ಹೋಗಬೇಕಾಗಿದೆ, ಇನ್ನು ಸ್ವಲ್ಪವೇ ಸಮಯವಿದೆ. ಇದನ್ನಂತೂ ಅವರೂ ಸ್ವಯಂ ತಿಳಿದುಕೊಳ್ಳುತ್ತಾರೆ, ಅಣು ಬಾಂಬುಗಳಿಂದ ಎಲ್ಲರೂ ಸಮಾಪ್ತಿಯಾಗುತ್ತಾರೆ ಎಂದು. ಯುದ್ಧವಂತೂ ನಡೆಯಲೇಬೇಕಾಗಿದೆ. ನಮಗೆ ಯಾರೋ ಪ್ರೇರಣೆ ಕೊಡುವವರಿದ್ದಾರೆ ಅದರಿಂದ ನಾವು ತಯಾರಿಸುತ್ತಿದ್ದೇವೆಂದು ಹೇಳುತ್ತಾರೆ. ನಮ್ಮದೇ ಕುಲದ ವಿನಾಶವಾಗುತ್ತಿದೆ ಎಂಬುದೂ ಸಹ ತಿಳಿದಿದೆ ಆದರೆ ಅವನ್ನು ತಯಾರಿಸದೇ ಇರಲು ಸಾಧ್ಯವಿಲ್ಲ. ಶಂಕರನ ಮೂಲಕ ವಿನಾಶ, ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ವಿನಾಶವು ಸಮ್ಮುಖದಲ್ಲಿ ನಿಂತಿದೆ. ಜ್ಞಾನ ಯಜ್ಞದಿಂದ ಈ ವಿನಾಶದ ಜ್ವಾಲೆಯು ಪ್ರಜ್ವಲಿತವಾಗಿದೆ. ನೀವೀಗ ಸ್ವರ್ಗದ ಮಾಲೀಕರಾಗುವುದಕ್ಕಾಗಿ ಓದುತ್ತಿದ್ದೀರಿ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಿ ಹೊಸದಾಗಿ ಬಿಡುವುದು. ಈ ಚಕ್ರವು ಸುತ್ತುತ್ತಿರುತ್ತದೆ. ಚರಿತ್ರೆಯ ಪುನರಾವರ್ತನೆ. ಮೊದಲು ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು ನಂತರ ಚಂದ್ರವಂಶಿ ಕ್ಷತ್ರಿಯ ಧರ್ಮ, ಅವರ ನಂತರ ಇಸ್ಲಾಮಿ ಬೌದ್ಧಿ ಮೊದಲಾದವರು ಬಂದರು ಮತ್ತೆ ಅವಶ್ಯವಾಗಿ ಮೊದಲ ನಂಬರಿನವರು ಬರುವರು ಮತ್ತೆಲ್ಲರೂ ವಿನಾಶವಾಗುವರು. ನೀವು ಮಕ್ಕಳಿಗೆ ಯಾರು ಓದಿಸುತ್ತಿದ್ದಾರೆ? ಆ ನಿರಾಕಾರ ಶಿವ ತಂದೆ. ಅವರೇ ಶಿಕ್ಷಕ ಸದ್ಗುರುವಾಗಿದ್ದಾರೆ. ಬರುತ್ತಿದ್ದಂತೆಯೇ ವಿದ್ಯೆಯನ್ನಾರಂಭಿಸುತ್ತಾರೆ ಆದ್ದರಿಂದ ಶಿವ ಜಯಂತಿಯೇ ಗೀತಾ ಜಯಂತಿಯೆಂದು ಬರೆಯಲ್ಪಟ್ಟಿದೆ. ಗೀತಾ ಜಯಂತಿಯೇ ಶ್ರೀಕೃಷ್ಣ ಜಯಂತಿಯಾಗಿದೆ. ಶಿವ ತಂದೆಯು ಸತ್ಯಯುಗದ ಸ್ಥಾಪನೆ ಮಾಡುತ್ತಾರೆ. ಸತ್ಯಯುಗಕ್ಕೆ ಕೃಷ್ಣ ಪುರಿಯೆಂದು ಹೇಳಲಾಗುತ್ತದೆ, ಈಗ ನಿಮಗೆ ಓದಿಸುವವರು ಯಾವುದೇ ಸಾಧು-ಸಂತ ಮನುಷ್ಯರಲ್ಲ, ಇವರು ದುಃಖಹರ್ತ-ಸುಖಕರ್ತ ಬೇಹದ್ದಿನ ತಂದೆಯಾಗಿದ್ದಾರೆ. 21 ಜನ್ಮಗಳಿಗಾಗಿ ನಿಮಗೆ ಆಸ್ತಿಯನ್ನು ಕೊಡುತ್ತಾರೆ. ವಿನಾಶವಂತೂ ಆಗಿಯೇ ಆಗುವುದು. ಈ ಸಮಯಕ್ಕಾಗಿಯೇ ಹೇಳಲಾಗುತ್ತದೆ - ಕೆಲವರದು ಮಣ್ಣು ಪಾಲಾಯಿತು, ಕೆಲವರದು ರಾಜನು ತಿಂದನು.... ಕಳ್ಳತನವು ಬಹಳ ಆಗುವುದು, ಬೆಂಕಿಯೂ ಬೀಳುವುದು. ಈ ಯಜ್ಞದಲ್ಲಿ ಎಲ್ಲವೂ ಸ್ವಾಹಾ ಆಗುವುದು. ಈಗಿನ್ನೂ ಸ್ವಲ್ಪ-ಸ್ವಲ್ಪ ಬೆಂಕಿ ಬೀಳುತ್ತದೆ ಮತ್ತೆ ತಣ್ಣಗಾಗುತ್ತದೆ. ಇನ್ನೂ ಸ್ವಲ್ಪ ಸಮಯವಿದೆ. ಎಲ್ಲರೂ ಪರಸ್ಪರ ಹೊಡೆದಾಡುತ್ತಾರೆ, ಆಗ ಬಿಡಿಸುವವರು ಯಾರೂ ಇರುವುದಿಲ್ಲ. ರಕ್ತದ ನದಿಗಳು ಹರಿದ ನಂತರ ಹಾಲಿನ ನದಿಗಳು ಹರಿಯುವವು. ಇದಕ್ಕೆ ನಿರಪರಾಧಿಗಳ ಕೊಲೆ ಅರ್ಥಾತ್ ರಕ್ತ ಕ್ರಾಂತಿ ಎಂದು ಹೇಳಲಾಗುತ್ತದೆ. ಮಕ್ಕಳು ಸಾಕ್ಷಾತ್ಕಾರ ಮಾಡಿದ್ದೀರಿ ಮತ್ತೆ ಈ ಕಣ್ಣುಗಳಿಂದಲೂ ನೋಡುತ್ತೀರಿ. ವಿನಾಶಕ್ಕೆ ಮೊದಲು ತಂದೆಯನ್ನು ನೆನಪು ಮಾಡಬೇಕಾಗಿದೆ, ಇದರಿಂದ ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾಗಿ ಬಿಡಲಿ. ತಂದೆಯು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಲು ನಿಮ್ಮನ್ನು ತಯಾರು ಮಾಡುತ್ತಿದ್ದಾರೆ. ರಾಜಧಾನಿಯು ಪೂರ್ಣ ಸ್ಥಾಪನೆಯಾಗಿ ಬಿಡುವುದು ನಂತರ ವಿನಾಶವಾಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ವಿಷ್ಣು ಪುರಿಯಲ್ಲಿ ಹೋಗಲು ಸ್ವಯಂನ್ನು ಅರ್ಹನನ್ನಾಗಿ ಮಾಡಿಕೊಳ್ಳಬೇಕಾಗಿದೆ. ಸಂಪೂರ್ಣ ಪಾವನರಾಗಬೇಕಾಗಿದೆ. ಅಶುದ್ಧ ಆಹಾರ-ಪಾನೀಯಗಳನ್ನು ತ್ಯಾಗ ಮಾಡಬೇಕಾಗಿದೆ. ವಿನಾಶಕ್ಕೆ ಮೊದಲು ತಮ್ಮ ಸರ್ವಸ್ವವನ್ನೂ ಸಫಲ ಮಾಡಿಕೊಳ್ಳಬೇಕಾಗಿದೆ.

2. ಬೇಗ ಬೇಗನೆ ಓದಿ ಬುದ್ಧಿವಂತರಾಗಬೇಕಾಗಿದೆ, ಯಾವುದೇ ವಿಕರ್ಮವಾಗದಿರಲಿ ಇದರ ಮೇಲೆ ಗಮನವನ್ನೀಡಬೇಕಾಗಿದೆ.

ವರದಾನ:
ತ್ಯಾಗ ಮತ್ತು ತಪಸ್ಸಿನ ಮುಖಾಂತರ ಸೇವೆಯಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಸತ್ಯ ಸೇವಾಧಾರಿ ಭವ.

ಸೇವೆಯಲ್ಲಿ ಸಫಲತೆಯ ಮುಖ್ಯ ಸಾಧನ ಆಗಿದೆ ತ್ಯಾಗ ಮತ್ತು ತಪಸ್ಸು. ತ್ಯಾಗ ಅರ್ಥಾತ್ ಮನಸ್ಸಿನ ಸಂಕಲ್ಪದಿಂದಲೂ ಸಹ ತ್ಯಾಗ, ಯಾವುದೇ ಪರಿಸ್ಥಿತಿಯ ಕಾರಣ. ಮರ್ಯಾದೆಯ ಕಾರಣ ಬಲವಂತದಿಂದ ತ್ಯಾಗ ಮಾಡುವುದು ತ್ಯಾಗ ಅಲ್ಲ ಆದರೆ ಜ್ಞಾನ ಸ್ವರೂಪದಿಂದ, ಸಂಕಲ್ಪದಿಂದಲೂ ಸಹ ತ್ಯಾಗಿಗಳಾಗಿ ಮತ್ತು ತಪಸ್ವಿ ಅರ್ಥಾತ್ ಸದಾ ತಂದೆಯ ಲಗನ್ನಲ್ಲಿ ಲವಲೀನ, ಜ್ಞಾನ, ಪ್ರೇಮ, ಆನಂದ, ಸುಖ, ಶಾಂತಿಯ ಸಾಗರನಲ್ಲಿ ಸಮಾವೇಶವಾಗಿ. ಈ ರೀತಿ ತ್ಯಾಗಿ, ತಪಸ್ವಿಯೇ ಸೇವೆಯಲ್ಲಿ ಸಫಲತೆ ಪ್ರಾಪ್ತಿ ಮಾಡಿಕೊಳ್ಳುವವರು ಸತ್ಯ ಸೇವಾಧಾರಿಯಾಗಿದ್ದಾರೆ.

ಸ್ಲೋಗನ್:
ತಮ್ಮ ತಪಸ್ಯಾ ಮುಖಾಂತರ ಶಾಂತಿಯ ವೈಬ್ರೇಷನ್ (ಪ್ರಕಂಪನಗಳು) ಹರಡುವುದೇ ವಿಶ್ವ ಸೇವಾಧಾರಿಯಾಗುವುದು.