08.03.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ವಿಚಾರ ಸಾಗರ ಮಂಥನ ಮಾಡಿ ಇಂತಹ ಟಾಪಿಕ್ (ವಿಷಯ) ತೆಗೆಯಿರಿ ಅದು ಇಡೀ ಪ್ರಪಂಚದಲ್ಲಿಯೇ ಒಂದೇ ಟಾಪಿಕ್ನ ಬಗ್ಗೆ ಭಾಷಣ ನಡೆಯಬೇಕು, ಇದೇ ನಿಮ್ಮ ಒಗ್ಗಟ್ಟಾಗಿದೆ.

ಪ್ರಶ್ನೆ:
ಯಾವ ಪರಿಶ್ರಮ ಪಡುತ್ತಾ-ಪಡುತ್ತಾ ನೀವು ಮಕ್ಕಳು ಪಾಸ್-ವಿತ್-ಆನರ್ ಆಗಲು ಸಾಧ್ಯ?

ಉತ್ತರ:
ಕರ್ಮ ಬಂಧನದಿಂದ ಅತೀತರಾಗಿ. ಯಾವಾಗ ಯಾವುದೇ ಮಾತನಾಡುತ್ತೀರಿ ಅಂದಾಗ ಸಹೋದರ ಆತ್ಮನೆಂದು ತಿಳಿದು ಸಹೋದರನನ್ನು ನೋಡಿ. ತಂದೆಯಿಂದ ಜ್ಞಾನವನ್ನು ಕೇಳುತ್ತೀರೆಂದರೂ ಸಹ ತಂದೆಯ ಭೃಕುಟಿಯನ್ನು ನೋಡಿ. ಸಹೋದರ-ಸಹೋದರ ದೃಷ್ಟಿಯಿಂದ ಆ ಸ್ನೇಹ ಮತ್ತು ಸಂಬಂಧವು ಪಕ್ಕಾ ಆಗಿ ಬಿಡುವುದು. ಇದೇ ಶ್ರಮ ಪಡುವ ಕಾರ್ಯವಾಗಿದೆ, ಇದರಿಂದಲೇ ಪಾಸ್-ವಿತ್-ಆನರ್ ಆಗಿ ಬಿಡುತ್ತೀರಿ. ಶ್ರೇಷ್ಠ ಪದವಿಯನ್ನು ಪಡೆಯುವಂಥಹ ಮಕ್ಕಳು ಈ ಪುರುಷಾರ್ಥವನ್ನು ಅವಶ್ಯವಾಗಿ ಮಾಡುತ್ತಾರೆ.

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳಿಗೆ ತಿಳಿಸಲಾಗಿದೆ - ಇದು ಮೃತ್ಯುಲೋಕವಾಗಿದೆ, ಅದರ ಹೋಲಿಕೆಯಲ್ಲಿ ಅಮರಲೋಕವೂ ಇದೆ. ಭಕ್ತಿಮಾರ್ಗದಲ್ಲಿ ಶಂಕರನು ಪಾರ್ವತಿಗೆ ಅಮರ ಕಥೆಯನ್ನು ತಿಳಿಸಿದನೆಂದು ತೋರಿಸುತ್ತಾರೆ. ಈಗ ನೀವು ಅಮರ ಲೋಕದಲ್ಲಿ ಹೋಗುತ್ತೀರಿ, ಶಂಕರನಂತೂ ಕಥೆಯನ್ನು ತಿಳಿಸುವುದಿಲ್ಲ. ಕಥೆಯನ್ನು ತಿಳಿಸುವವರು ಒಬ್ಬರೇ ತಂದೆಯಾಗಿದ್ದಾರೆ. ಶಂಕರನು ಕಥೆಯನ್ನು ತಿಳಿಸಲು ಜ್ಞಾನಸಾಗರನಲ್ಲ. ಇಂತಹ ಮಾತುಗಳನ್ನು ನೀವು ಮಕ್ಕಳು ತಿಳಿಸಬೇಕಾಗಿದೆ. ಮೃತ್ಯುವಿನ ಮೇಲೆ ಹೇಗೆ ಜಯ ಪಡೆಯಲಾಗುತ್ತದೆ, ಇದು ಜ್ಞಾನವಾಗಿದೆ ಅಮರರನ್ನಾಗಿ ಮಾಡುತ್ತದೆ. ಇದರಿಂದ ಆಯಸ್ಸು ವೃದ್ಧಿಯಾಗುತ್ತದೆ. ಸತ್ಯಯುಗದಲ್ಲಿ ಮೃತ್ಯುವಿರುವುದಿಲ್ಲ. ಇಲ್ಲಿ ನೀವು ಪಂಚ ವಿಕಾರಗಳು ಅಥವಾ ರಾವಣನ ಮೇಲೆ ಜಯ ಗಳಿಸುವುದರಿಂದ ರಾಮ ರಾಜ್ಯ ಅಥವಾ ಅಮರಲೋಕದ ಮಾಲೀಕರಾಗುತ್ತೀರಿ. ಮೃತ್ಯು ಲೋಕದಲ್ಲಿ ರಾವಣ ರಾಜ್ಯವಿದೆ, ಅಮರ ಲೋಕದಲ್ಲಿ ರಾಮನ ರಾಜ್ಯವಿರುತ್ತದೆ. ದೇವತೆಗಳನ್ನು ಕಾಲವು ಎಂದೂ ಕಬಳಿಸುವುದಿಲ್ಲ. ಅಲ್ಲಿ ಮೃತ್ಯುವಿನ ಯಮದೂತರಿರುವುದಿಲ್ಲ ಅಂದಾಗ ಮನುಷ್ಯರು ಮೃತ್ಯುವಿನ ಮೇಲೆ ಹೇಗೆ ವಿಜಯವನ್ನು ಪಡೆಯಬಹುದೆಂಬ ವಿಷಯವು ಬಹಳ ಚೆನ್ನಾಗಿದೆ. ಇವೆಲ್ಲವೂ ಜ್ಞಾನದ ಮಾತುಗಳಾಗಿವೆ. ಭಾರತವು ಅಮರ ಲೋಕವಾಗಿತ್ತು, ಎಷ್ಟೊಂದು ಧೀರ್ಘಾಯಸ್ಸು ಇತ್ತು. ಸರ್ಪದ ಉದಾಹರಣೆಯು ಸತ್ಯಯುಗದ್ದಾಗಿದೆ. ಒಂದು ಪೊರೆಯನ್ನು ಬಿಟ್ಟು ಇನ್ನೊಂದು ತೆಗೆದುಕೊಳ್ಳುತ್ತಾರೆ, ಇದಕ್ಕೆ ಬೇಹದ್ದಿನ ವೈರಾಗ್ಯವೆಂದು ಹೇಳಲಾಗುತ್ತದೆ. ಇಡೀ ಪ್ರಪಂಚದ ವಿನಾಶವಾಗುವುದು, ಈ ಹಳೆಯ ಶರೀರವನ್ನು ಬಿಡಬೇಕೆಂದು ನಿಮಗೆ ಗೊತ್ತಿದೆ, ಇದು 84 ಜನ್ಮಗಳ ಹಳೆಯ ಪೊರೆ (ಶರೀರ) ಯಾಗಿದೆ. ಸತ್ಯಯುಗದಲ್ಲಿ ಈ ರೀತಿಯಿರುವುದಿಲ್ಲ, ಅಲ್ಲಿ ಈಗ ಶರೀರವು ಜಡಜಡೀಭೂತವಾಗಿದೆ, ಅದನ್ನು ಬಿಟ್ಟು ಹೊಸ ಶರೀರವನ್ನು ಪಡೆಯುತ್ತೇವೆ ಎಂಬುದನ್ನು ತಿಳಿಸುತ್ತಾರೆ, ಸಾಕ್ಷಾತ್ಕಾರವೂ ಆಗುತ್ತದೆ. ಅರಿತುಕೊಳ್ಳುವುದನ್ನು ಸಾಕ್ಷಾತ್ಕಾರವೆಂದು ಹೇಳಲಾಗುತ್ತದೆ. ಈಗ ನಮ್ಮ ಹೊಸ ಪೊರೆಯು ತಯಾರಾಗಿದೆ, ಈಗ ಹಳೆಯದನ್ನು ಬಿಡಬೇಕಾಗಿದೆ. ಅಲ್ಲಿಯೂ ಹೀಗೆಯೂ ಆಗುತ್ತದೆ. ಆದರೆ ಇದಕ್ಕೆ ಅಮರ ಲೋಕವೆಂದು ಹೇಳಲಾಗುತ್ತದೆ, ಅಲ್ಲಿ ಮೃತ್ಯು ಬರುವುದಿಲ್ಲ ಅಂದರೆ ತಾವೇ ಸಮಯದಲ್ಲಿ ಶರೀರವನ್ನು ಬಿಟ್ಟು ಬಿಡುತ್ತಾರೆ. ಅಲ್ಲಿನ ಉದಾಹರಣೆಯು ಇಲ್ಲಿಯದಾಗಿದೆ. ಆಮೆಯು ಕೆಲಸ ಮಾಡಿದ ನಂತರ ಅಂತರ್ಮುಖಿಯಾಗಿ ಬಿಡುತ್ತದೆ, ಈ ಸಮಯದ ಉದಾಹರಣೆಯನ್ನು ಭಕ್ತಿಮಾರ್ಗದಲ್ಲಿ ಕಾಪಿ ಮಾಡುತ್ತಾರೆ. ಆದರೆ ಕೇವಲ ಹೇಳಿಕೆಯನ್ನು ತಿಳಿಯುವುದರಲ್ಲಿ ಏನೂ ಇಲ್ಲ. ನೀವಂತೂ ತಿಳಿಯುತ್ತೀರಿ - ರಾಖಿ ಉತ್ಸವ, ದಸರಾ, ದೀಪಾವಳಿ, ಹೋಲಿ ಮೊದಲಾದವುಗಳೆಲ್ಲಾ ಹಬ್ಬಗಳು ಈ ಸಮಯದ್ದಾಗಿದೆ. ಇವೇ ಭಕ್ತಿಮಾರ್ಗದಲ್ಲಿ ನಡೆದಿವೆ ಅಂದಾಗ ಈ ಮಾತುಗಳು ಸತ್ಯಯುಗದಲ್ಲಿ ನಡೆಯುವುದಿಲ್ಲ. ಮನುಷ್ಯರು ಮೃತ್ಯುವಿನ ಮೇಲೆ ಹೇಗೆ ವಿಜಯ ಗಳಿಸಬಹುದು! ಮೃತ್ಯು ಲೋಕದಿಂದ ಅಮರ ಲೋಕಕ್ಕೆ ಹೇಗೆ ಹೋಗುವುದು ಎಂಬ ಟಾಪಿಕ್ ಬರೆಯಿರಿ. ಇಂತಹ ಮಾತುಗಳ ಬಗ್ಗೆ ತಿಳಿಸುವ ಮೊದಲು ಬರೆಯಬೇಕಾಗುತ್ತದೆ - ಹೇಗೆ ಇಂದು ಇಂತಹ ನಾಟಕವಾಗಿದೆ ಎಂದು ನಾಟಕದ ಕಥೆಯನ್ನು ಬರೆಯುತ್ತಾರೆ, ಹಾಗೆಯೇ ಇಂದು ಇಂತಹ ನಾಟಕವನ್ನು ತಿಳಿಸಲಾಗುತ್ತದೆ ಎಂದು ಜ್ಞಾನ ಬಿಂದುಗಳ ಪಟ್ಟಿಯು (ಲಿಸ್ಟ್) ತಯಾರಿರಲಿ. ರಾವಣ ರಾಜ್ಯದಿಂದ ದೈವೀ ರಾಜ್ಯದಲ್ಲಿ ಹೇಗೆ ಹೋದರು? ತಿಳುವಳಿಕೆಯಂತೂ ಭಲೇ ಒಂದೇ ಆಗಿದೆ. ಆದರೆ ಭಿನ್ನ-ಭಿನ್ನ ವಿಚಾರಗಳನ್ನು ಹೇಗೆ ಕೇಳುವುದರಿಂದ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಹೇಗೆ ಸಿಗುತ್ತದೆಯೆಂದು ಖುಷಿಯಾಗುತ್ತದೆ. ಹೇಗೆ ಸನ್ಯಾಸಿಗಳ ಬಗ್ಗೆ ಇಂದು 125ನೇ ಯಜ್ಞವನ್ನು ರಚಿಸಿದ್ದಾರೆ. ಅದರಲ್ಲಿ ಇಂತಹದ್ದನ್ನು ತಿಳಿಸುತ್ತಾರೆಂದು ಪತ್ರಿಕೆಗಳಲ್ಲಿ ಹಾಕಿಸುತ್ತಾರೆ. ಇಲ್ಲಂತೂ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ಒಂದೇ ಬಾರಿ ಯಜ್ಞವನ್ನು ರಚಿಸುತ್ತೇನೆ, ಅದರಲ್ಲಿ ಇಡೀ ಹಳೆಯ ಪ್ರಪಂಚವೇ ಸ್ವಾಹಾ ಆಗಿ ಬಿಡುತ್ತದೆ. ಅವರಂತೂ ಅನೇಕ ಯಜ್ಞಗಳನ್ನು ರಚಿಸುತ್ತಾರೆ ಆದರೆ ಇಲ್ಲಿ ನಿಮಗೆ ಗೊತ್ತಿದೆ - ಈ ರುದ್ರ ಶಿವ ತಂದೆಯದು ಒಂದೇ ಯಜ್ಞವಾಗಿದೆ. ಇದರಲ್ಲಿ ಪೂರ್ಣ ಹಳೆಯ ಪ್ರಪಂಚವು ಸ್ವಾಹಾ ಆಗಿ ಬಿಡುತ್ತದೆ, ಹೊಸ ಪ್ರಪಂಚದ ಸ್ಥಾಪನೆಯಾಗಿ ಬಿಡುತ್ತದೆ ಮತ್ತು ನೀವು ಹೋಗಿ ದೇವತೆಗಳಾಗುತ್ತೀರಿ. ಇದನ್ನೂ ಸಹ ನಿಮಗೆ ತಂದೆಯು ತಿಳಿಸುತ್ತಾರೆ. ರಚಯಿತ ತಂದೆಯು ಬಂದು ತಮ್ಮ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಪೂರ್ಣ ಜ್ಞಾನವನ್ನು ತಿಳಿಸುತ್ತಾರೆ ಮತ್ತು ರಾಜಯೋಗವನ್ನು ಕಲಿಸುತ್ತಾರೆ. ಸತ್ಯಯುಗದಲ್ಲಂತೂ ಇರುವುದು ಪವಿತ್ರ ದೇವತೆಗಳು, ಆದರೂ ರಾಜ್ಯಭಾರವನ್ನು ಮಾಡುತ್ತಾರೆ. ಅದಕ್ಕೆ ಆದಿ ಸನಾತನ ದೇವಿ-ದೇವತಾ ಧರ್ಮವೆಂದು ಹೇಳಲಾಗುತ್ತದೆ. ನೀವು ಈ ಟಾಪಿಕ್ ಸಹ ಇಡಬಹುದು - ಆದಿ ಸನಾತನ ಸತ್ಯಯುಗೀ ದೇವಿ-ದೇವತಾ ಧರ್ಮದ ಸ್ಥಾಪನೆಯು ಹೇಗಾಗುತ್ತಿದೆ, ವಿಶ್ವದಲ್ಲಿ ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ ಎಂಬುದನ್ನು ಬಂದು ತಿಳಿದುಕೊಳ್ಳಿ. ಪರಮಪಿತ ಪರಮಾತ್ಮ ವಿನಃ ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡುವ ಸಲಹೆಯನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಸಲಹೆ ಕೊಡುವವರಿಗೂ ಬಹುಮಾನ ಸಿಗುತ್ತದೆ. ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡುವ ಬಹುಮಾನ ಹೇಗೆ ಮತ್ತು ಯಾರು ಕೊಡುತ್ತಾರೆ? ಇದೂ ಸಹ ವಿಷಯವಾಗಿದೆ. ಹೀಗೆ ವಿಚಾರಸಾಗರ ಮಂಥನ ಮಾಡಿ, ಇಂತಹ ಟಾಪಿಕ್ ರಚಿಸಬೇಕು ಮತ್ತು ಈ ರೀತಿ ಪ್ರಬಂಧವಿರಬೇಕು. ಎಲ್ಲಾ ಸ್ಥಾನಗಳಲ್ಲಿ ಒಂದೇ ವಿಷಯವಿರಬೇಕು ಆಗ ಎಲ್ಲರ ಸಂಬಂಧವಿರುತ್ತದೆ. ಇದರ ಪ್ರತಿಯನ್ನು ಮಾಡಿ ಮೊದಲು ಸೂಚನೆ ಕೊಡಬೇಕು ಮತ್ತೆ ಆ ಸಮಾಚಾರವು ದೆಹಲಿಗೆ ಬರಬೇಕು. ಆಗ ಎಲ್ಲಾ ಸ್ಥಾನಗಳಲ್ಲಿ ಇಂತಹ ಭಾಷಣ ನಡೆಯಿತೆಂದು ಎಲ್ಲರಿಗೂ ತಿಳಿಯಬೇಕು, ಇದಕ್ಕೆ ಏಕತೆ ಎಂದು ಹೇಳಲಾಗುತ್ತದೆ. ಇಡೀ ಪ್ರಪಂಚದಲ್ಲಿ ಅನೇಕತೆಯಿದೆ. ರಾಮ ರಾಜ್ಯದಲ್ಲಿ ಹಸು-ಹುಲಿಯು ಒಟ್ಟಿಗೆ ನೀರು ಕುಡಿಯುತ್ತಿದ್ದವು ಎಂದು ರಾಮರಾಜ್ಯದ ಗಾಯನವಿದೆ. ತ್ರೇತಾಯುಗದ್ದೇ ಇಂತಹ ಗಾಯನವಿದೆಯೆಂದರೆ ಸತ್ಯಯುಗದಲ್ಲಿ ಇನ್ನೂ ಹೇಗಿರಬಹುದು! ಶಾಸ್ತ್ರದಲ್ಲಂತೂ ಅನೇಕ ಕಥೆಗಳನ್ನು ಬರೆದಿದ್ದಾರೆ. ಆದರೆ ತಾವು ತಂದೆಯಿಂದ ಒಂದೇ ಕಥೆಯನ್ನು ಕೇಳುತ್ತೀರಿ. ಪ್ರಪಂಚದಲ್ಲಿ ಅನೇಕ ಕಥೆಗಳನ್ನು ರಚಿಸುತ್ತಿರುತ್ತಾರೆ. ದ್ವಾಪರದಿಂದ ಹಿಡಿದು ಕಲಿಯುಗದವರೆಗೆ ಏನೆಲ್ಲಾ ಶಾಸ್ತ್ರಗಳು ನಡೆಯುತ್ತವೆಯೋ ಅದು ಸತ್ಯಯುಗದಲ್ಲಿರುವುದಿಲ್ಲ. ಭಕ್ತಿ ಮಾರ್ಗದಲ್ಲಿ ಎಲ್ಲಾ ಮಾತುಗಳ ಮುಕ್ತಾಯವಾಗುತ್ತದೆ. ನೀವು ಇಲ್ಲಿ ಏನೆಲ್ಲವನ್ನು ನೋಡುತ್ತೀರೋ ಅವೆಲ್ಲವೂ ಕೆಟ್ಟದ್ದಾಗಿದೆ. ಆದ್ದರಿಂದ ಅದನ್ನು ನೋಡಿಯೂ ನೋಡದಂತಿರಿ, ಕೇಳಿಯೂ ಕೇಳದಂತಿರಿ. ಈಗ ತಂದೆಯು ಏನೆಲ್ಲವನ್ನೂ ತಿಳಿಸುತ್ತಾರೆಯೋ ಅದನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕು. ನಾವು ಸಂಗಮಯುಗೀ ಬ್ರಾಹ್ಮಣರು ಎಷ್ಟು ಶ್ರೇಷ್ಠರಾಗಿದ್ದೇವೆ! ದೇವತೆಗಳಿಗಿಂತಲೂ ಶ್ರೇಷ್ಠರಾಗಿದ್ದೇವೆ, ಈ ಸಮಯದಲ್ಲಿ ನಾವು ಈಶ್ವರನ ಸಂತಾನರಾಗಿದ್ದೇವೆ. ನಿಧಾನ-ನಿಧಾನವಾಗಿ ವೃದ್ಧಿ ಹೊಂದುತ್ತಿರುತ್ತದೆ. ಇಷ್ಟು ಸಹಜ ಮಾತುಗಳೂ ಸಹ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ನಾವು ಈಶ್ವರೀಯ ಸಂತಾನರಾಗಿದ್ದೇವೆ ಅಂದಮೇಲೆ ಅವಶ್ಯವಾಗಿ ಸ್ವರ್ಗದ ಮಾಲೀಕರಾಗಬೇಕು ಏಕೆಂದರೆ ಆ ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಾರೆ. ಕೋಟ್ಯಾಂತರ ವರ್ಷಗಳೆಂದು ಹೇಳುವ ಕಾರಣ ಯಾವುದೇ ಮಾತುಗಳು ನೆನಪಿರುವುದಿಲ್ಲ. ಆದ್ದರಿಂದ ತಂದೆಯು ಬಂದು ನೆನಪು ಮಾಡಿಸುತ್ತಾರೆ. ಮಕ್ಕಳೇ, 5000 ವರ್ಷಗಳ ಮಾತಾಗಿದೆ. ನೀವು ದೇವಿ-ದೇವತೆಗಳಾಗಿದ್ದಿರಿ ಮತ್ತೆ ನಿಮ್ಮನ್ನು ಅದೇ ರೀತಿ ಮಾಡುತ್ತೇನೆ. ಹೀಗೆ ಸಮ್ಮುಖದಲ್ಲಿ ಕೇಳುವುದರಿಂದ ಎಷ್ಟೊಂದು ಖುಷಿಯಾಗುತ್ತದೆ. ಯಾರು ಸುಪುತ್ರ, ಬುದ್ಧಿವಂತ ಮಕ್ಕಳಿದ್ದಾರೆಯೋ ಅವರ ಬುದ್ಧಿಯಲ್ಲಿರುತ್ತದೆ ನಾವು ತಂದೆಯಿಂದ ಅವಶ್ಯವಾಗಿ ಆಸ್ತಿಯನ್ನು ಪಡೆಯಬೇಕು. ತಂದೆಯು ಹೊಸ ಪ್ರಪಂಚವನ್ನು ರಚಿಸುತ್ತಾರೆಂದರೆ ನಾವೂ ಸಹ ಅವಶ್ಯವಾಗಿ ಆಸ್ತಿಯನ್ನು ಪಡೆಯಬೇಕು. ತಂದೆಯು ಹೊಸ ಪ್ರಪಂಚವನ್ನು ರಚಿಸುತ್ತಾರೆಂದರೆ ನಾವೂ ಸಹ ಅವಶ್ಯವಾಗಿ ಹೊಸ ಪ್ರಪಂಚದಲ್ಲಿ ಬರಬೇಕೆಂದು ಅವರ ಬುದ್ಧಿಯಲ್ಲಿರುತ್ತದೆ. ಎಲ್ಲರೂ ಒಬ್ಬ ತಂದೆಯ ಮಕ್ಕಳಾಗಿದ್ದೀರಿ, ಎಲ್ಲರ ಧರ್ಮ, ಎಲ್ಲರೂ ಇರುವ ಸ್ಥಾನ, ಹೋಗುವುದು - ಬರುವುದು ಎಲ್ಲವೂ ಭಿನ್ನ-ಭಿನ್ನ ಪ್ರಕಾರದ್ದಾಗಿದೆ. ಹೇಗೆ ಹೋಗಿ ಮೂಲವತನದಲ್ಲಿ ನಿವಾಸ ಮಾಡುತ್ತೇವೆ, ಇದೂ ಸಹಾ ಬುದ್ಧಿಯಲ್ಲಿದೆ. ಮೂಲವತನದಲ್ಲಿಯೂ ವಂಶಾವಳಿಯಿದೆ. ಸೂಕ್ಷ್ಮವತನದಲ್ಲಿ ವಂಶಾವಳಿ ತೋರಿಸಲು ಸಾಧ್ಯವಾಗುವುದಿಲ್ಲ. ಅಲ್ಲಿ ಏನೆಲ್ಲಾ ತೊರಿಸಲಾಗುವುದು ಅದು ಸಾಕ್ಷತ್ಕಾರದ ಮಾತಾಗಿದೆ. ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ. ನಂತರ ಸೂಕ್ಷ್ಮವತನದಲ್ಲಿಯೂ ಹೋಗುವಿರಿ. ಅಲ್ಲಿ ಮೂವಿ ನಡೆಯುವುದು. ಮಧ್ಯದಲ್ಲಿ ಮೂವಿಯದೂ ಸಹಾ ಡ್ರಾಮಾ ಮಾಡಲಾಗಿತ್ತು. ನಂತರ ಟಾಕಿ ಆಯಿತು. ನಿಶ್ಯಭ್ಧದ್ದಂತೂ ಡ್ರಾಮಾ ಮಾಡಲು ಸಾಧ್ಯವಿಲ್ಲ. ಮಕ್ಕಳು ತಿಳಿದಿದ್ದಾರೆ ನಾವು ಸೈಲೆನ್ಸ್ ನಲ್ಲಿ ಹೇಗೆ ಇರುತ್ತೇವೆಂದು. ಹೇಗೆ ಅಲ್ಲಿ ಆತ್ಮಗಳ ವಂಶಾವಳಿಯಿದೆ, ಅದೇ ರೀತಿ ಇಲ್ಲಿ ಮನುಷ್ಯರದಿದೆ. ಆದ್ದರಿಂದ ಇಂತಿಂತಹ ಮಾತುಗಳನ್ನು ನೀವು ಬುದ್ಧಿಯಲ್ಲಿಟ್ಟುಕೊಂಡು ಭಾಷಣವನ್ನು ಮಾಡಬಹುದು. ಆದರೂ ಸಹಾ ವಿದ್ಯೆಯಲ್ಲಿ ಸಮಯ ತೆಗೆದುಕೊಳ್ಳುತ್ತದೆ. ಇದನ್ನು ಸಹಾ ತಿಳಿದರೂ ನೆನಪಿನ ಯಾತ್ರೆಯಲ್ಲಿರುವುದರಿಂದ ಧಾರಣೆ ಹಾಗೂ ಖುಶಿಯಾಗುವುದು. ಈಗ ನೀವು ಯರ್ಥಾಥ ರೀತಿಯಲ್ಲಿ ಯೋಗವನ್ನು ಕಲಿಯುತ್ತಿರುವಿರಿ. ಮಕ್ಕಳಿಗೆ ತಿಳಿಸಲಾಗಿದೆ, ಎಲ್ಲರನ್ನೂ ಸಹೋದರ-ಸಹೋದರರಾಗಿ ನೋಡಿ. ಆತ್ಮದ ಸಿಂಹಾಸನವಂತು ಇದಾಗಿದೆ ಇದರಿಂದ ಭಾಗೀರಥ ಬಾಬಾರವರ ಸಿಂಹಾಸನವೂ ಸಹಾ ಪ್ರಸಿದ್ದವಾಗಿದೆ. ಯಾವಾಗ ಯಾರಿಗಾದರೂ ತಿಳಿಸುವಾಗಲೂ ಸಹ ಹೀಗೆ ತಿಳಿಸಿ - ನಾವು ಸಹೋದರನಿಗೆ ತಿಳಿಸುತ್ತಿದ್ದೇವೆ. ಇದೇ ದೃಷ್ಠಿಯಿರಲಿ -ಇದರಲ್ಲಿಯೆ ಬಹಳ ಪರಿಶ್ರಮವಿದೆ. ಪರಿಶ್ರಮಕ್ಕಿಂತಲೂ ಶ್ರೇಷ್ಠ ಪದವಿ ಸಿಗುವುದು. ತಂದೆಯೂ ಸಹಾ ಹಾಗೆ ನೋಡುತ್ತಾರೆ, ತಂದೆಯ ದೃಷ್ಠಿಯೂ ಸಹಾ ಭೃಕುಟಿಯ ಮಧ್ಯೆ ಹೋಗುವುದು. ಆತ್ಮವಂತೂ ಅತೀ ಸೂಕ್ಷ್ಮ ಬಿಂದಿಯಾಗಿದೆ. ಕೇಳುವುದೂ ಸಹಾ ಅದೆ. ನೀವು ತಂದೆಯನ್ನೂ ಸಹಾ ಭೃಕುಟಿಯ ಮಧ್ಯೆ ನೋಡುವಿರಿ. ಬಾಬಾ ಸಹಾ ಇಲ್ಲಿದ್ದರೆ ಸಹೋದರ ( ಬ್ರಹ್ಮಾನ ಆತ್ಮ) ಸಹಾ ಇಲ್ಲೇ ಇದ್ದಾರೆ. ಈ ರೀತಿ ಬುದ್ಧಿಯಲ್ಲಿರುವುದರಿಂದ ನೀವೂ ಸಹಾ ಹೇಗೆ ಜ್ಞಾನಸಾಗರನ ಮಕ್ಕಳೂ ಜ್ಞಾನಸಾಗರ ಆಗಿ ಬಿಡುವಿರಿ. ನಿಮಗಾಗಿಯಂತೂ ಬಹಳ ಸಹಜವಾಗಿದೆ. ಗೃಹಸ್ಥ ವ್ಯವಹಾರದಲ್ಲಿರುವವರಿಗೆ ಈ ಅವಸ್ಥೆ ಸ್ವಲ್ಪ ಕಷ್ಟ. ಕೇಳಿಕೊಂಡು ಮನೆಗೆ ಹೋಗಿ ಬಿಡುವಿರಿ. ಅಲ್ಲಿನ ವಾತಾವರಣವೇ ಬೇರೆಯಾಗಿದೆ. ಇದು ಸಹಜವಾಗಿದೆ. ಬಾಬಾ ಬಹಳ ಸಹಜವಾದ ಯುಕ್ತಿಗಳನ್ನು ತಿಳಿಸುತ್ತಾರೆ - ನಿಮ್ಮನ್ನು ಆತ್ಮ ಎಂದು ತಿಳಿದುಕೊಳ್ಳಿ, ತಂದೆಯನ್ನು ನೆನಪು ಮಾಡಿ. ಇವರು ಸಹಾ ಸಹೋದರ ಆಗಿದ್ದಾರೆ, ಈ ದೃಷ್ಠಿಯಿಂದ ಕರ್ಮ ಬಂಧನದಿಂದ ಅತಿತ ಆಗಿ ಬಿಡುವಿರಿ. ಶರೀರವನ್ನು ಸಹಾ ಮರೆತು ಬಿಡುವಿರಿ, ಕೇವಲ ತಂದೆ ಮಾತ್ರ ನೆನಪಿರುತ್ತಾರೆ. ಇದರಲ್ಲಿ ಪರಿಶ್ರಮ ಪಡುತ್ತಿರುವಿರಿ. ಆಗ ಪಾಸ್ವಿತ್ಆನರ್ ಆಗುವಿರಿ. ಇಂತಹ ಅವಸ್ಥೆಯಲ್ಲಿ ವಿರಳವಾಗಿ ಕೆಲವರು ಇರುತ್ತಾರೆ. ವಿಶ್ವದ ಮಾಲೀಕರು ಸಹ ಅವರೇ ಆಗುತ್ತಾರೆ. 8 ರತ್ನಗಳ ಮಾಲೆ ಸಹಾ ಇದೆಯಲ್ಲವೆ. ಆದ್ದರಿಂದ ಪುರುಷಾರ್ಥ ಮಾಡಬೇಕು. ಉನ್ನತ ಪದವಿ ಪಡೆಯುವಂತಹವರು ಹೇಗಾದರೂ ಮಾಡಿ ಖಂಡಿತ ಪುರುಷಾರ್ಥ ಮಾಡಬಹುದು. ಇದರಲ್ಲಿ ಬೇರೆ ಯಾವುದೇ ಮಾತು ಹೊರಡುವ ಹಾಗೆ ಇಲ್ಲ. ಸಹೋದರ-ಸಹೋದರ ದೃಷ್ಠಿ, ಸ್ನೇಹ ಮತ್ತು ಸಂಬಂಧವಾಗಿ ಬಿಡುವುದು. ದ್ರಷ್ಠಿ ನೆಟ್ಟು ಬಿಡುವುದು ಆದ್ದರಿಂದ ತಂದೆ ಹೇಳುತ್ತಾರೆ ನಿಮಗೆ ಬಹಳ ಬಹಳ ಗುಹ್ಯ ಮಾತುಗಳನ್ನು ತಿಳಿಸುತ್ತೇನೆ. ಇದರಲ್ಲಿ ಅಭ್ಯಾಸ ಮಾಡುವುದು ಪರಿಶ್ರಮದ ಕೆಲಸವಾಗಿದೆ. ಇಲ್ಲಿ ಕುಳಿತಿರುವಾಗಲೂ ಸಹಾ ನಿಮ್ಮನ್ನು ಆತ್ಮ ಎಂದು ತಿಳಿದುಕೊಳ್ಳಿ. ಆತ್ಮವೇ ಕೇಳುವುದು. ಕೇಳುವಂತಹ ಆತ್ಮವನ್ನು ನೀವು ನೋಡುತ್ತಿರುವಿರಿ. ಮನುಷ್ಯರಂತು ಹೇಳಿ ಬಿಡುತ್ತಾರೆ ಆತ್ಮ ನಿರ್ಲೇಪವಾಗಿದೆ. ಬಾಕಿ ಶರೀರ ಏನು ಕೇಳುತ್ತದೆ? ಇದು ತಪ್ಪಾಗಿದೆ. ತಂದೆ ನಿಮಗೆ ಗುಹ್ಯ-ಗುಹ್ಯ ಮಾತುಗಳನ್ನು ಹೇಳುತ್ತಾರೆ. ಪರಿಶ್ರಮವಂತು ಮಕ್ಕಳು ಮಾಡಬೇಕಿದೆ. ಯಾರು ಕಲ್ಪದ ಹಿಂದೆ ಆಗಿದ್ದರು ಅವರು ಖಂಡಿತ ಪರಿಶ್ರಮ ಪಡುತ್ತಾರೆ. ತಮ್ಮ ಅನುಭವವನ್ನೂ ಸಹಾ ತಿಳಿಸುತ್ತಾರೆ -ಹೀಗೆ ನಾನು ಕೇಳಿ-ತಿಳಿಸುವೆನು. ಅಭ್ಯಾಸವಾಗಿ ಬಿಟ್ಟಿದೆ. ಆತ್ಮಗಳಿಗೆ ತಿಳಿಸಲಾಗಿದೆ, ಮನ್ಮನಾಭವ ಮತ್ತು ಹೇಳಿ ಬಿಡುತ್ತಾರೆ ಅದು ಅವರಿಗೆ ಅದು ಅವರಿಗೆ ಎಂದು - ಮನ್ಮನಾಭವ ಅರ್ಥಾತ್ ತಂದೆಯನ್ನು ನೆನಪು ಮಾಡಿ ಎಂದು. ಇದು ಗುಪ್ತ ಪರಿಶ್ರಮವಾಗಿದೆ. ಹೇಗೆ ವಿದ್ಯೆಯೂ ಸಹಾ ಎಕಾಂತದಲ್ಲಿ ಮರದ ಕೆಳಗೆ ಕುಳಿತು ಓದುತ್ತಾರೆ, ಅದಾಗಿದೆ ಸ್ಥೂಲ ಮಾತು. ಇದಂತೂ ಅಭ್ಯಾಸ ಮಾಡುವಂತಹ ಮಾತಾಗಿದೆ. ದಿನ-ಪ್ರತಿದಿನ ನಿಮ್ಮ ಈ ಅಭ್ಯಾಸ ಹೆಚ್ಚುತ್ತಾ ಹೋಗುವುದು. ನೀವು ಹೊಸ-ಹೊಸ ಮಾತುಗಳನ್ನು ಕೇಳುವಿರಲ್ಲವೆ. ಯಾವುದನ್ನು ನೀವು ಕೇಳುವಿರಿ ಅದನ್ನು ಮತ್ತೆ ಹೊಸಬರು ಬಂದು ಕೇಳುವರು. ಕೆಲವರು ಹೇಳುತ್ತಾರೆ ನಾವು ತಡವಾಗಿ ಬಂದಿದ್ದೇವೆ ಎಂದು. ಅರೇ, ನೀವಂತೂ ಇನ್ನೂ ಸಹಾ ಫಸ್ಟ್ ಕ್ಲಾಸ್ ಗುಹ್ಯ-ಗುಹ್ಯ ಮಾತುಗಳನ್ನು ಕೇಳುವಿರಿ, ಯಾವುದು ಪುರುಷಾರ್ಥ ಮಾಡುವುದರಿಂದಲೇ ಶ್ರೇಷ್ಠ ಪದವಿ ಸಿಗುವುದು. ಇನ್ನೂ ಸಹಾ ಒಳ್ಳೆಯದು. ಮಾಯೆಯಂತೂ ಅಂತ್ಯದವರೆಗೆ ಬಿಡುವುದಿಲ್ಲ. ಮಾಯೆಯ ಯುದ್ಧ ನಡೆಯುತ್ತಿರುತ್ತದೆ ಎಲ್ಲಿಯವರೆಗೆ ನೀವು ಜಯ ಸಾಧಿಸುವುದಿಲ್ಲ. ನಂತರ ಅನಾಯಾಸವಾಗಿ ನೀವು ಹೋಗಿ ಬಿಡುವಿರಿ. ಯಾರು ಎಷ್ಟು ನೆನಪು ಮಾಡುವಿರಿ, ತಿಳಿಯುವಿರಿ ನಾವು ತಂದೆಯ ಬಳಿ ಹೋಗುವೆವು ಎಂದು ಶರೀರ ಬಿಟ್ಟು ಹೋಗುವುದು. ಬಾಬಾ ನೋಡಿದ್ದಾರೆ - ಈ ರೀತಿ ಬ್ರಹ್ಮ್ ನಲ್ಲಿ ಲೀನವಾಗುವ ಲಕ್ಷ್ಯವಿಟ್ಟಿರುವವರು ಯಾವಾಗ ಶರೀರ ಬಿಡುತ್ತಾರೆ ಆಗ ಸ್ಮಶಾನ ಮೌನವಾಗಿ ಬಿಡುವುದು. ಬಾಕಿ ಮೋಕ್ಷವಂತು ಯಾರು ಪಡೆಯುವುದಿಲ್ಲ, ಇಲ್ಲಾ ವಾಪಸ್ಸು ಹೋಗುವುದಿಲ್ಲ. ನಾಟಕದಲ್ಲಂತೂ ಎಲ್ಲಾ ಪಾತ್ರಧಾರಿಗಳೂ ಬೇಕಲ್ಲವೆ. ಅಂತ್ಯದಲ್ಲಿ ಎಲ್ಲರೂ ಬಂದು ಬಿಡುವರು. ಯಾವಾಗ ಒಬ್ಬರೂ ಅಲ್ಲಿರುವುದಿಲ್ಲ ಆಗ ವಾಪಸ್ಸು ಹೋಗುವರು. ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆ, ಎಲ್ಲರೂ ಹೋಗಿ ಬಿಡುತ್ತಾರೆ. ಬಾಕಿ ಸ್ವಲ್ಪ ಜನ ಉಳಿಯುತ್ತಾರೆ. ಅವರು ಎಲ್ಲರಿಗೂ ಸೀ ಆಫ್ ಮಾಡಿದೆವು ಎನ್ನುತ್ತಾರೆ. ಈ ಸಮಯದಲ್ಲಿ ಸತ್ಯಯುಗದ ಸ್ಥಾಪನೆಯಾಗುತ್ತಿದೆ. ಎಷ್ಟು ಕೋಟಿ ಮನುಷ್ಯರಿದ್ದಾರೆ. ಎಲ್ಲರಿಗೂ ನಾವು ಸೀ ಆಫ್ ಮಾಡಿ ನಂತರ ನಾವು ನಮ್ಮ ರಾಜಧಾನಿಗೆ ಹೋಗಿ ಬಿಡುವೆವು. ಆ ಜನರಂತೂ 40-50 ಜನಕ್ಕೆ ಸೀ ಆಫ್ ಮಾಡಬಹುದು. ಆದರೆ ನೀವು ಎಷ್ಟು ಜನಕ್ಕೆ ಸೀ ಆಫ್ ಮಾಡುವಿರಿ. ಎಲ್ಲಾ ಆತ್ಮರೂ ಸೊಳ್ಳೆಗಳೋಪಾದಿಯಲ್ಲಿ ಶಾಂತಿಧಾಮಕ್ಕೆ ಹೋಗಿ ಬಿಡುತ್ತಾರೆ. ನೀವು ಬಂದಿರುವಿರಿ ಜೊತೆಯಲ್ಲಿ ಕರೆದುಕೊಂಡು ಹೋಗಲು ಮತ್ತು ಎಲ್ಲರನ್ನೂ ಕಳುಹಿಸಲು. ನಿಮ್ಮ ಮಾತು ಬಹಳ ಸುಂದರವಾಗಿದೆ. ಎಷ್ಟು ಕೋಟಿ ಮನುಷ್ಯರು ಹೋಗುತ್ತಾರೆ. ಅವರಿಗೆ ಸೀ ಆಫ್ ಮಾಡುತ್ತಾರೆ. ಎಲ್ಲರೂ ವಾಪಸ್ಸು ಮೂಲವತನಕ್ಕೆ ಹೋಗಿ ಬಿಡುವರು. ಇಲ್ಲೂ ಸಹ ನಿಮ್ಮ ಬುದ್ಧಿ ಕೆಲಸ ಮಾಡುವುದು. ನಿಧಾನ-ನಿಧಾನವಾಗಿ ವಂಶಾವಳಿ ದೊಡ್ಡದಾಗಿ ಬಿಡುವುದು. ನಂತರ ರುಂಡ ಮಾಲೆ ರುದ್ರ ಮಾಲೆಯಾಗಿ ಬಿಡುವುದು. ಈ ಮಾತು ನಿಮ್ಮ ಬುದ್ಧಿಯಲ್ಲಿದೆ ರುದ್ರ ಮಾಲೆ ರುಂಡ ಮಾಲೆ ಹೇಗೆ ಆಗುವುದು ಎಂದು ನಿಮ್ಮಲ್ಲಿಯೂ ಸಹ ವಿಶಾಲ ಬುದ್ಧಿಯಿದೆ. ಅವರೇ ಈ ಮಾತುಗಳನ್ನು ತಿಳಿದುಕೊಳ್ಳಲು ಸಾಧ್ಯ. ಅನೇಕ ಪ್ರಕಾರದಿಂದ ತಂದೆ ತಿಳಿಸಿ ಹೇಳುತ್ತಿರುತ್ತಾರೆ - ನೆನಪು ಮಾಡುವುದಕ್ಕಾಗಿ. ನಾವು ರುದ್ರ ಮಾಲೆಯಲ್ಲಿ ಹೋಗಿ ರುಂಡ ಮಾಲೆಯಲ್ಲಿ ಬರುವೆವು. ನಂತರ ನಂಬರ್ವಾರ್ ಬರುತ್ತಾ ಹೋಗುವರು. ಎಷ್ಟು ದೊಡ್ಡ ರುದ್ರಮಾಲೆಯಾಗುವುದು. ಈ ಜ್ಞಾನವನ್ನು ಯಾರೂ ತಿಳಿದುಕೊಂಡಿಲ್ಲ. ಪ್ರಾರಂಭದಿಂದ ಹಿಡಿದು ಈ ಜ್ಞಾನವನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಸಂಗಮಯುಗಿ ಬ್ರಾಹ್ಮಣರು ಮಾತ್ರ ತಿಳಿದುಕೊಂಡಿರುವಿರಿ. ಈ ಸಂಗಮಯುಗವನ್ನು ನೆನಪು ಮಾಡಿದರೆ ಇಡೀ ಜ್ಞಾನ ಬುದ್ಧಿಯಲ್ಲಿ ಬಂದು ಬಿಡುವುದು. ನೀವಾಗಿರುವಿರಿ ಲೈಟ್ಹೌಸ್. ಎಲ್ಲರಿಗೂ ಸರಿಯಾದ ಸ್ಥಾನದಲ್ಲಿ ಸೇರಿಸುವವರು. ನೀವು ಹೇಗೆ ಲೈಟ್ ಹೌಸ್ ಆಗುವಿರಿ. ಹಾಗೆ ಯಾವುದೇ ಮಾತಿಲ್ಲ ಅದು ನಿಮ್ಮಿಂದ ಆಗದೇ ಇರುವಂತಹದು, ನೀವು ಸರ್ಜನ್ ಸಹಾ ಆಗಿರುವಿರಿ, ಡೋಭಿಯೂ ಆಗಿರುವಿರಿ, ಎಲ್ಲ ವಿಶೇಷತೆಗಳೂ ನಿಮ್ಮಲ್ಲಿ ಬಂದು ಬಿಡುವುದು. ನಿಮ್ಮದೂ ಸಹ ಮಹಿಮೆ ಆಗಿ ಬಿಡುವುದು, ಆದರೆ ನಂಬರ್ವಾರ್ ಪುರುಷಾರ್ಥಾನುಸಾರ. ಹೇಗೆ-ಹೇಗೆ ಕರ್ತವ್ಯ ಮಾಡುವಿರಿ ಹಾಗೆ ಹಾಗೆ ಗಾಯನ ಸಹಾ ಆಗುವುದು. ತಂದೆಯಂತೂ ಸೂಚನೆಗಳನ್ನು ಕೊಡುತ್ತಾರೆ ಅದರ ಮೇಲೆ ವಿಚಾರ ಮಾಡುವುದು, ಸೆಮಿನಾರ್ ಮಾಡುವುದು ನೀವು ಮಕ್ಕಳ ಕರ್ತವ್ಯವಾಗಿದೆ. ಬಾಬಾ ಏನೂ ನಿರ್ಬಂಧ ಮಾಡುವುದಿಲ್ಲ. ಒಳ್ಳೆಯದು, ಬಹಳ ತಿಳಿಸುವುದರಿಂದ ಏನು ಪ್ರಯೋಜನ. ತಂದೆ ಹೇಳುತ್ತಾರೆ ಮನ್ಮನಾಭವ. ಬಾಬಾ ನಿಮಗೆ ಎಷ್ಟು ತರಃ ತಿಂಡಿಗಳನ್ನು ತಿನ್ನಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಸದಾ ನಶೆಯಿರಲಿ ನಾವು ಸಂಗಮಯುಗಿ ಬ್ರಾಹ್ಮಣರು ದೇವತೆಗಳಿಗಿಂತಲೂ ಶ್ರೇಷ್ಠ. ಏಕೆಂದರೆ ಈಗ ನಾವು ಈಶ್ವರೀಯ ಸಂತಾನ, ನಾವು ಮಾಸ್ಟರ್ ಜ್ಞಾನ ಸಾಗರ ಆಗಿದ್ದೇವೆ. ಎಲ್ಲಾ ವಿಶೇಷತೆಗಳು ಈ ಸಮಯ ನಮ್ಮಲ್ಲಿ ತುಂಬುತ್ತಿವೆ.

2. ತಂದೆ ಎನು ತಿಳಿಯುತ್ತಾರೆ, ಅದನ್ನೇ ಬುದ್ಧಿಯಲ್ಲಿಟ್ಟುಕೊಳ್ಳಬೇಕು, ಬಾಕಿ ಯಾವುದನ್ನೂ ಕೇಳುತ್ತಿದ್ದರೂ ಕೇಳಬೇಡಿ, ನೋಡುತ್ತಿದ್ದರೂ ನೋಡಬೇಡಿ, ಕೆಟ್ಟದ್ದನ್ನು ಕೇಳ ಬೇಡಿ, ಕೆಟ್ಟದ್ದನ್ನು ನೋಡಬೇಡಿ.


ವರದಾನ:
ಮಾಯೆಯ ನೆರಳಿನಿಂದ ಹೊರ ಬಂದು ನೆನಪಿನ ಛತ್ರಛಾಯೆಯಲ್ಲಿರುವಂತಹ ನಿಶ್ಚಿಂತ ಚಕ್ರವರ್ತಿ ಭವ.

ಯಾರು ಸದಾ ತಂದೆಯ ನೆನಪಿನ ಛತ್ರಛಾಯೆಯ ಒಳಗೆ ಇರುತ್ತಾರೆ ಅವರು ಸ್ವಯಂ ಸದಾ ಸುರಕ್ಷಿತತೆಯ ಅನುಭವ ಮಾಡುತ್ತಾರೆ. ಮಾಯೆಯ ನೆರಳಿನಿಂದ ಸುರಕ್ಷಿತರಾಗಿರಲು ಸಾಧನವಾಗಿದೆ ತಂದೆಯ ಛತ್ರಛಾಯೆ. ಛತ್ರಛಾಯೆಯ ಕೆಳಗೆ ಇರುವವರು ಸದಾ ನಿಶ್ಚಿಂತ ಚಕ್ರವರ್ತಿಗಳಾಗಿರುತ್ತಾರೆ. ಒಂದು ವೇಳೆ ಏನಾದರೂ ಚಿಂತೆ ಇದ್ದರೆ ಖುಷಿ ಕಳೆದು ಹೋಗುವುದು. ಖುಷಿ ಕಳೆದುಹೋದರೆ, ಬಲಹೀನವಾದರೆ ಮಾಯೆಯ ನೆರಳಿನ ಫ್ರಭಾವ ಬಿದ್ದು ಬಿಡುವುದು. ಏಕೆಂದರೆ ಬಲಹೀನತೆಯೆ ಮಾಯೆಯನ್ನು ಆಹ್ವಾನ ಮಾಡುವುದು. ಮಾಯೆಯ ಛಾಯೆ ಸ್ವಪ್ನದಲ್ಲಿಯೂ ಸಹಾ ಬಿದ್ದಿದ್ದೇ ಆದರೆ ಬಹಳ ತೊಂದರೆ ಮಾಡುತ್ತದೆ. ಆದ್ದರಿಂದ ಸದಾ ಛತ್ರಛಾಯೆಯ ಕೆಳಗೆ ಇರಿ.

ಸ್ಲೋಗನ್:
ತಿಳುವಳಿಕೆ ಎನ್ನುವ ಸ್ಕ್ರೂ ಡ್ರೈವರ್ ನಿಂದ ಹುಡುಗಾಟಿಕೆ ಎನ್ನುವ ಲೂಸ್ ಸ್ಕ್ರೂ ವನ್ನು ಟೈಟ್ ಮಾಡಿ ಸದಾ ಎಚ್ಚರಿಕೆಯಿಂದಿರಿ.