09.03.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನಿಮಗೆ ನಶೆಯಿರಬೇಕು, ನಮ್ಮ ಪಾರಲೌಕಿಕ ತಂದೆಯ ಪ್ರಪಂಚದ ಅದ್ಭುತ (ಸ್ವರ್ಗ)ವನ್ನು ಸ್ಥಾಪನೆ ಮಾಡುತ್ತಾರೆ, ಅದಕ್ಕೆ ನಾವು ಮಾಲೀಕರಾಗುತ್ತೇವೆ

ಪ್ರಶ್ನೆ:
ತಂದೆಯ ಸಂಗದಿಂದ ನಿಮಗೆ ಏನೇನು ಪ್ರಾಪ್ತಿಗಳಾಗುತ್ತವೆ?

ಉತ್ತರ:
ತಂದೆಯ ಸಂಗದಿಂದ ನಾವು ಮುಕ್ತಿ-ಜೀವನ್ಮುಕ್ತಿಗೆ ಅಧಿಕಾರಿಗಳಾಗಿ ಬಿಡುತ್ತೇವೆ. ತಂದೆಯ ಸಂಗವು ನಮ್ಮನ್ನು ಪಾರು ಮಾಡುತ್ತದೆ. ತಂದೆಯು ನಮ್ಮನ್ನು ತನ್ನವರನ್ನಾಗಿ ಮಾಡಿಕೊಂಡು ಆಸ್ತಿಕರು ಮತ್ತು ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಾರೆ. ನಾವು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳುತ್ತೇವೆ.

ಗೀತೆ:
ಧೈರ್ಯ ತಾಳು ಮಾನವನೆ............

ಓಂ ಶಾಂತಿ.
ಇದನ್ನು ಯಾರು ಹೇಳುತ್ತಾರೆ? ಮಕ್ಕಳಿಗೆ ತಂದೆಯೇ ಹೇಳುತ್ತಾರೆ, ಎಲ್ಲಾ ಮಕ್ಕಳಿಗೆ ಹೇಳಲಾಗುತ್ತದೆ ಏಕೆಂದರೆ ಎಲ್ಲರೂ ದುಃಖಿಯಾಗಿದ್ದಾರೆ, ಭಯಭೀತರಾಗಿದ್ದಾರೆ. ಬಂದು ನಮ್ಮನ್ನು ದುಃಖದಿಂದ ಮುಕ್ತ ಮಾಡಿ, ಸುಖದ ಮಾರ್ಗವನ್ನು ತೋರಿಸಿ ಎಂದು ತಂದೆಯನ್ನು ನೆನಪು ಮಾಡುತ್ತಾರೆ. ಈಗ ಮನುಷ್ಯರಲ್ಲಿ ಅಧರ್ಮಿಯು ವಿಶೇಷವಾಗಿ ಭಾರತವಾಸಿಗಳಿಗೆ ಇದು ನೆನಪಿಲ್ಲ - ನಾವು ಭಾರತವಾಸಿಗಳು, ಬಹಳ ಸುಖಿಯಾಗಿದ್ದೆವು. ಭಾರತವು ಅತಿ ಪ್ರಾಚೀನ, ಅದ್ಭುತ ಸ್ಥಾನವಾಗಿತ್ತು, ಪ್ರಪಂಚದ ಅದ್ಭುತವೆಂದು ಹೇಳುತ್ತಾರಲ್ಲವೆ. ಇಲ್ಲಿ ಮಾಯೆಯ ರಾಜ್ಯದಲ್ಲಿ 7 ಅದ್ಭುತಗಳೆಂದು ಹೇಳುತ್ತಾರೆ. ಆದರೆ ಇವು ಸ್ಥೂಲ ಅದ್ಭುತಗಳಾಗಿವೆ. ತಂದೆಯು ತಿಳಿಸುತ್ತಾರೆ - ಇವು ಮಾಯೆಯ ಅದ್ಭುತಗಳಾಗಿವೆ, ಇದರಲ್ಲಿ ದುಃಖವಿದೆ, ರಾಮ ಅರ್ಥಾತ್ ತಂದೆಯ ಅದ್ಭುತವು ಸ್ವರ್ಗವಾಗಿದೆ. ಅದೇ ಪ್ರಪಂಚದ ಅತಿದೊಡ್ಡ ಅದ್ಭುತವಾಗಿದೆ. ಭಾರತವು ಸ್ವರ್ಗವಾಗಿತ್ತು, ವಜ್ರ ಸಮಾನವಾಗಿತ್ತು, ಅಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು, ಇದನ್ನು ಭಾರತವಾಸಿಗಳೆಲ್ಲರೂ ಮರೆತು ಹೋಗಿದ್ದಾರೆ. ಭಲೆ ದೇವತೆಗಳ ಮುಂದೆ ಹೋಗಿ ತಲೆ ಬಾಗುತ್ತಾರೆ, ಪೂಜೆ ಮಾಡುತ್ತಾರೆ ಆದರೆ ಯಾರ ಪೂಜೆ ಮಾಡುವರೋ ಅವರ ಬಗ್ಗೆ ಅರಿತುಕೊಳ್ಳಬೇಕಲ್ಲವೆ. ಇಲ್ಲಿ ಬೇಹದ್ದಿನ ತಂದೆಯು ತಿಳಿಸುತ್ತಾರೆ, ನೀವಿಲ್ಲಿ ಪಾರಲೌಕಿಕ ತಂದೆಯ ಬಳಿ ಬಂದಿದ್ದೀರಿ, ಪಾರಲೌಕಿಕ ತಂದೆಯು ಸ್ವರ್ಗ ಸ್ಥಾಪಕರಾಗಿದ್ದಾರೆ. ಈ ಕಾರ್ಯವನ್ನು ಯಾವುದೇ ಮನುಷ್ಯರು ಮಾಡಲು ಸಾಧ್ಯವಿಲ್ಲ. ಈ ಬ್ರಹ್ಮಾರವರಿಗೂ ಸಹ ತಂದೆಯು ತಿಳಿಸುತ್ತಾರೆ - ಹೇ ಕೃಷ್ಣನ ಹಳೆಯ ತಮೋಪ್ರಧಾನ ಆತ್ಮವೇ, ನೀನು ತನ್ನ ಜನ್ಮಗಳ ಬಗ್ಗೆ ಅರಿತುಕೊಂಡಿಲ್ಲ. ನೀನು ಕೃಷ್ಣನಾಗಿದ್ದಾಗ ಸತೋಪ್ರಧಾನನಾಗಿದ್ದೆ ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ತಮೋಪ್ರಧಾನನಾಗಿದ್ದೀಯ. ನಿನಗೆ ಭಿನ್ನ-ಭಿನ್ನ ಹೆಸರುಗಳು ಬಂದಿದೆ. ಈಗ ನಿನ್ನ ಹೆಸರು ಬ್ರಹ್ಮನೆಂದು ಇಡಲಾಗಿದೆ. ಬ್ರಹ್ಮನಿಂದ ವಿಷ್ಣು ಅಥವಾ ಶ್ರೀಕೃಷ್ಣನಾಗುವರು. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ ಒಂದೇ ಮಾತಾಗಿದೆ. ಬ್ರಹ್ಮ ಮುಖವಂಶಾವಳಿ ಬ್ರಾಹ್ಮಣರೇ ನಂತರ ದೇವತೆಗಳಾಗುತ್ತೀರಿ. ಮತ್ತೆ ಅದೇ ದೇವಿ-ದೇವತೆಗಳೇ ನಂತರ ಶೂದ್ರರಾಗುತ್ತಾರೆ, ಈಗ ನೀವು ಬ್ರಾಹ್ಮಣರಾಗಿದ್ದೀರಿ. ಈಗ ತಂದೆಯು ಕುಳಿತು ನೀವು ಮಕ್ಕಳಿಗೆ ತಿಳಿಸುತ್ತಾರೆ. ಇದು ಭಗವಾನುವಾಚವಾಗಿದೆ. ನೀವಂತೂ ವಿದ್ಯಾರ್ಥಿಗಳಾದಿರಿ, ಅಂದಮೇಲೆ ನಿಮಗೆ ಎಷ್ಟೊಂದು ಖುಷಿಯಿರಬೇಕು! ಆದರೆ ಇಷ್ಟೊಂದು ಖುಷಿಯಿರುವುದೇ ಇಲ್ಲ. ಧನವಂತರು ಧನದ ನಶೆಯಲ್ಲಿ ಬಹಳ ಖುಷಿಯಲ್ಲಿರುತ್ತಾರೆ. ಇಲ್ಲಿ ಭಗವಂತನ ಮಕ್ಕಳಾಗಿದ್ದೀರಿ ಆದರೂ ಸಹ ಅಷ್ಟೊಂದು ಖುಷಿಯಲ್ಲಿರುವುದಿಲ್ಲ ಏಕೆಂದರೆ ಅರ್ಥ ಮಾಡಿಕೊಂಡಿಲ್ಲ, ಕಲ್ಲು ಬುದ್ಧಿಯವರಲ್ಲವೆ. ಅದೃಷ್ಟದಲ್ಲಿಲ್ಲವೆಂದರೆ ಜ್ಞಾನದ ಧಾರಣೆಯನ್ನೂ ಮಾಡಲು ಸಾಧ್ಯವಿಲ್ಲ. ಈಗ ನಿಮ್ಮನ್ನು ತಂದೆಯು ಮಂದಿರಕ್ಕೆ ಯೋಗ್ಯರನ್ನಾಗಿ ಮಾಡುತ್ತಿದ್ದಾರೆ, ಆದರೆ ಮಾಯೆಯ ಸಂಗವೂ ಕಡಿಮೆಯಿಲ್ಲ. ಸತ್ಸಂಗವು ಮೇಲೆತ್ತುತ್ತದೆ, ಕೆಟ್ಟ ಸಂಗವು ಕೆಳಗೆ ಬೀಳಿಸುತ್ತದೆಯಂದು ಗಾಯನವಿದೆ. ತಂದೆಯ ಸಂಗವು ನಿಮ್ಮನ್ನು ಮುಕ್ತಿ-ಜೀವನ್ಮುಕ್ತಿಯಲ್ಲಿ ಕರೆದುಕೊಂಡು ಹೋಗುತ್ತದೆ ಮತ್ತೆ ರಾವಣನ ಸಂಗವು ನಿಮ್ಮನ್ನು ದುರ್ಗತಿಯಲ್ಲಿ ತೆಗೆದುಕೊಂಡು ಬರುತ್ತದೆ. 5 ವಿಕಾರಗಳ ಸಂಗವಾಗಿ ಬಿಡುತ್ತದೆಯಲ್ಲವೆ. ಭಕ್ತಿಯಲ್ಲಿ ಸತ್ಸಂಗವೆಂಬ ಹೆಸರನ್ನು ಹೇಳುತ್ತಾರೆ ಆದರೆ ಏಣಿಯನ್ನು ಕೆಳಗಿಳಿಯುತ್ತಲೇ ಇರುತ್ತಾರೆ. ಏಣಿಯಿಂದ ಯಾರಾದರೂ ಜಾರಿದರೆ ಅವಶ್ಯವಾಗಿ ಕೆಳಗೆ ಬೀಳುವರಲ್ಲವೆ! ಸರ್ವರ ಸದ್ಗತಿದಾತನು ಒಬ್ಬ ತಂದೆಯೇ ಆಗಿದ್ದಾರೆ. ಯಾರೇ ಆಗಿರಲಿ, ಭಗವಂತನನ್ನು ಮೇಲೆಯೇ ತೋರಿಸುತ್ತಾರೆ. ಈಗ ತಂದೆಯ ವಿನಃ ಮಕ್ಕಳಿಗೆ ಪರಿಚಯವನ್ನು ಕೊಡುವವರು ಯಾರು? ತಂದೆಯೇ ಮಕ್ಕಳಿಗೆ ತನ್ನ ಪರಿಚಯವನ್ನು ಕೊಡುತ್ತಾರೆ. ಅವರನ್ನು ತನ್ನವರನ್ನಾಗಿ ಮಾಡಿಕೊಂಡು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ - ನಾನು ಬಂದು ನಿಮ್ಮನ್ನು ಆಸ್ತಿಕರನ್ನಾಗಿಯೂ ಮಾಡುತ್ತೇನೆ, ತ್ರಿಕಾಲದರ್ಶಿಗಳನ್ನಾಗಿಯೂ ಮಾಡುತ್ತೇನೆ, ಇದು ನಾಟಕವಾಗಿದೆ. ಇದನ್ನು ಯಾವುದೇ ಸಾಧು-ಸಂತ ಮೊದಲಾದವರು ಅರಿತುಕೊಂಡಿಲ್ಲ. ಅದು ಹದ್ದಿನ ನಾಟಕವಾಗಿರುತ್ತದೆ. ಇದು ಬೇಹದ್ದಿನ ನಾಟಕವಾಗಿದೆ. ಈ ಬೇಹದ್ದಿನ ನಾಟಕದಲ್ಲಿ ನಾವು ಸುಖವನ್ನೂ ಬಹಳ ನೋಡುತ್ತೇವೆ ಮತ್ತು ಬಹಳ ದುಃಖವನ್ನೂ ನೋಡುತ್ತೇವೆ. ಈ ನಾಟಕದಲ್ಲಿ ಕೃಷ್ಣ ಮತ್ತು ಕ್ರಿಶ್ಚಿಯನ್ನರ ಎಂತಹ ಲೆಕ್ಕಾಚಾರವಿದೆ! ಅವರು ಭಾರತವನ್ನು ಯುದ್ಧ ಮಾಡಿಸಿ ರಾಜ್ಯವನ್ನು ಪಡೆದರು, ಈಗ ನೀವು ಹೊಡೆದಾಡುವುದಿಲ್ಲ, ಅವರು ಪರಸ್ಪರ ಹೊಡೆದಾಡುತ್ತಾರೆ. ರಾಜ್ಯಭಾಗ್ಯವು ನಿಮಗೆ ಸಿಕ್ಕಿ ಬಿಡುತ್ತದೆ. ಇದು ನಾಟಕದಲ್ಲಿ ನಿಗಧಿಯಾಗಿದೆ. ಈ ಮಾತುಗಳನ್ನು ಯಾರೂ ಅರಿತುಕೊಂಡಿಲ್ಲ. ಜ್ಞಾನವನ್ನು ಕೊಡುವ ಜ್ಞಾನಸಾಗರ ಒಬ್ಬರೇ ತಂದೆಯಾಗಿದ್ದಾರೆ, ಅವರು ಸರ್ವರ ಸದ್ಗತಿ ಮಾಡುತ್ತಾರೆ. ಭಾರತದಲ್ಲಿ ದೇವಿ-ದೇವತೆಗಳ ರಾಜ್ಯವಿದ್ದಾಗ ಸದ್ಗತಿಯಿತ್ತು, ಉಳಿದೆಲ್ಲಾ ಆತ್ಮಗಳು ಮುಕ್ತಿಧಾಮದಲ್ಲಿದ್ದರು. ಭಾರತವು ಚಿನ್ನದ ಪಕ್ಷಿಯಾಗಿತ್ತು, ನೀವೇ ರಾಜ್ಯಭಾರ ಮಾಡುತ್ತಿದ್ದಿರಿ. ಸತ್ಯಯುಗದಲ್ಲಿ ಸೂರ್ಯವಂಶಿಯರ ರಾಜ್ಯವಿತ್ತು, ಈಗ ನೀವು ಸತ್ಯ ನಾರಾಯಣನ ಕಥೆಯನ್ನು ಕೇಳುತ್ತೀರಿ, ಇದು ನರನಿಂದ ನಾರಾಯಣನಾಗುವ ಕಥೆಯಾಗಿದೆ. ಇದನ್ನೂ ದೊಡ್ಡ ಅಕ್ಷರಗಳಲ್ಲಿ ಬರೆಯಿರಿ - ಸತ್ಯಗೀತೆಯಿಂದ ಭಾರತವು ಸತ್ಯ ಖಂಡ, ಶ್ರೇಷ್ಠವಾಗುತ್ತದೆ. ತಂದೆಯು ಬಂದು ಸತ್ಯ ಗೀತೆಯನ್ನು ತಿಳಿಸುತ್ತಾರೆ. ಸಹಜ ರಾಜಯೋಗವನ್ನು ಕಲಿಸುತ್ತಾರೆ ಆಗ ಶ್ರೇಷ್ಠರಾಗಿ ಬಿಡುತ್ತೀರಿ. ತಂದೆಯು ಬಹಳಷ್ಟು ಯುಕ್ತಿಗಳನ್ನು ತಿಳಿಸುತ್ತಾರೆ ಆದರೆ ಮಕ್ಕಳು ದೇಹಾಭಿಮಾನದ ಕಾರಣ ಮರೆತು ಹೋಗುತ್ತಾರೆ. ದೇಹೀ-ಅಭಿಮಾನಿಯಾದಾಗಲೇ ಧಾರಣೆಯಾಗುವುದು. ದೇಹಾಭಿಮಾನದ ಕಾರಣ ಧಾರಣೆಯಾಗುವುದಿಲ್ಲ.

ತಂದೆಯು ತಿಳಿಸುತ್ತಾರೆ - ನಾನು ಸರ್ವವ್ಯಾಪಿಯಾಗಿದ್ದೇನೆಂದು ನಾನು ಹೇಳುತ್ತೇನೆಯೇ? ನೀವು ಮಾತಾಪಿತಾ..... ಎಂದು ನೀವೇ ಹೇಳುತ್ತೀರಿ ಅಂದಮೇಲೆ ಇದರ ಅರ್ಥವೇನಾಯಿತು? ನಿಮ್ಮ ಕೃಪೆಯಿಂದ ಅಪಾರ ಸುಖವು ಸಿಗುತ್ತದೆ ಎಂದಾಗಿದೆ. ಈಗಂತೂ ಬಹಳ ದುಃಖವಿದೆ, ಈ ಗಾಯನವು ಯಾವ ಸಮಯದ್ದಾಗಿದೆ ಎಂಬುದನ್ನೂ ಸಹ ತಿಳಿದುಕೊಂಡಿಲ್ಲ ಗಿಳಿಯ ತರಹ ಹೇಳುತ್ತಿರುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ತಂದೆಯು ಕುಳಿತು ತಿಳಿಸುತ್ತಾರೆ - ಇದೆಲ್ಲವೂ ಅಸತ್ಯವಾಗಿದೆ. ನಿಮ್ಮನ್ನು ಅಸತ್ಯವಂತರನ್ನಾಗಿ ಯಾರು ಮಾಡಿದರು? ರಾವಣ. ಭಾರತವು ಸತ್ಯ ಖಂಡವಾಗಿದ್ದಾಗ ಎಲ್ಲರೂ ಸತ್ಯವನ್ನು ಹೇಳುತ್ತಿದ್ದರು, ಸುಳ್ಳು-ಮೋಸ ಏನೂ ಇರಲಿಲ್ಲ. ಇಲ್ಲಿ ಎಷ್ಟೊಂದು ಕಳ್ಳತನ ಮಾಡುತ್ತಾರೆ, ಪ್ರಪಂಚದಲ್ಲಿ ಮೋಸವೇ ಮೋಸವಿದೆ. ಇದಕ್ಕೆ ಪಾಪದ ಪ್ರಪಂಚ, ದುಃಖದ ಪ್ರಪಂಚವೆಂದು ಹೇಳಲಾಗುತ್ತದೆ. ಸತ್ಯಯುಗಕ್ಕೆ ಸುಖದ ಪ್ರಪಂಚವೆಂದು ಹೇಳಲಾಗುವುದು. ಇದು ವಿಕಾರಿ ವೈಶ್ಯಾಲಯವಾಗಿದೆ, ಸತ್ಯಯುಗವು ಶಿವಾಲಯವಾಗಿದೆ. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ. ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವೆಂದು ಹೆಸರೂ ಸಹ ಎಷ್ಟು ಚೆನ್ನಾಗಿದೆ! ಈಗ ತಂದೆಯು ಬಂದು ಬುದ್ಧಿವಂತರನ್ನಾಗಿ ಮಾಡುತ್ತಾರೆ. ತಿಳಿಸುತ್ತಾರೆ - ನೀವು ಈ ವಿಕಾರಗಳನ್ನು ಜಯಿಸಿದ್ದೇ ಆದರೆ ಜಗಜ್ಜೀತರಾಗುತ್ತೀರಿ. ಈ ಕಾಮವೇ ಮಹಾಶತ್ರುವಾಗಿದೆ. ಮಕ್ಕಳು ನಮ್ಮನ್ನು ದೇವಿ-ದೇವತೆಗಳನ್ನಾಗಿ ಮಾಡಿ ಎಂದೇ ಕರೆಯುತ್ತೀರಿ.

ತಂದೆಯ ಯಥಾರ್ಥ ಮಹಿಮೆಯನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಮನುಷ್ಯರಂತೂ ತಂದೆಯನ್ನಾಗಲಿ, ತಂದೆಯ ಮಹಿಮೆಯನ್ನಾಗಲಿ ಅರಿತುಕೊಂಡಿಲ್ಲ. ನೀವು ತಿಳಿದುಕೊಂಡಿದ್ದೀರಿ - ತಂದೆಯು ಪ್ರೀತಿಯ ಸಾಗರನಾಗಿದ್ದಾರೆ. ಆ ತಂದೆಯು ನೀವು ಮಕ್ಕಳಿಗೆ ಎಷ್ಟೊಂದು ಜ್ಞಾನವನ್ನು ತಿಳಿಸುತ್ತಾರೆ, ಇದೇ ಅವರ ಪ್ರೀತಿಯಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಓದಿಸುತ್ತಾರೆಂದರೆ ಏನಾಗಿ ಬಿಡುತ್ತಾರೆ! ನೀವು ಮಕ್ಕಳೂ ಸಹ ತಂದೆಯ ತರಹ ಪ್ರೀತಿಯ ಸಾಗರರಾಗಬೇಕಾಗಿದೆ. ಯಾರಿಗಾದರೂ ಪ್ರೀತಿಯಿಂದ ತಿಳಿಸಬೇಕಾಗಿದೆ. ತಂದೆಯು ಹೇಳುತ್ತಾರೆ - ನೀವೂ ಸಹ ಪರಸ್ಪರ ಪ್ರೀತಿಯಿಂದ ನಡೆದುಕೊಳ್ಳಿ. ತಂದೆಯ ಪರಿಚಯವನ್ನು ಕೊಡುವುದು ನಂಬರ್ವನ್ ಪ್ರೀತಿಯಾಗಿದೆ. ನೀವು ಗುಪ್ತದಾನ ಮಾಡುತ್ತೀರಿ ಅಂದಾಗ ಒಬ್ಬರು ಇನ್ನೊಬ್ಬರ ಪ್ರತಿ ತಿರಸ್ಕಾರವೂ ಇರಬಾರದು. ಇಲ್ಲವಾದರೆ ನೀವು ಶಿಕ್ಷೆಯನ್ನನುಭವಿಸಬೇಕಾಗುತ್ತದೆ. ಯಾರನ್ನೇ ತಿರಸ್ಕಾರ ಮಾಡುತ್ತೀರೆಂದರೆ ಶಿಕ್ಷೆಗೆ ಗುರಿಯಾಗುವಿರಿ. ಆದ್ದರಿಂದ ಎಂದೂ ಯಾರೊಂದಿಗೂ ತಿರಸ್ಕಾರವನ್ನಿಡಬೇಡಿ, ತಿರಸ್ಕಾರ ಮಾಡಬೇಡಿ. ದೇಹಾಭಿಮಾನದಲ್ಲಿ ಬರುವುದರಿಂದಲೇ ಪತಿತರಾಗಿದ್ದೀರಿ. ತಂದೆಯು ದೇಹೀ-ಅಭಿಮಾನಿಯನ್ನಾಗಿ ಮಾಡುತ್ತಾರೆ ಆಗ ನೀವು ಪಾವನರಾಗುತ್ತೀರಿ. ಎಲ್ಲರಿಗೂ ಇದನ್ನೇ ತಿಳಿಸಿಕೊಡಿ - ಈಗ 84 ಜನ್ಮಗಳ ಚಕ್ರವು ಮುಕ್ತಾಯವಾಯಿತು, ಯಾರು ಸೂರ್ಯವಂಶಿ ಮಹಾರಾಜ-ಮಹಾರಾಣಿಯಾಗಿದ್ದರೋ ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೆಳಗಿಳಿಯುತ್ತಾ ಈಗ ಬಂದು ಬಹಳ ಕೆಳಗೆ ಬಿದ್ದಿದ್ದಾರೆ. ಈಗ ತಂದೆಯು ಪುನಃ ಮಹಾರಾಜ-ಮಹಾರಾಣಿಯರನ್ನಾಗಿ ಮಾಡುತ್ತಿದ್ದಾರೆ. ಕೇವಲ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ ಆಗ ನೀವು ಪಾವನರಾಗಿ ಬಿಡುತ್ತೀರಿ. ನೀವು ಮಕ್ಕಳು ದಯಾಹೃದಯಿಗಳಾಗಿ, ಇಡೀ ದಿನ ಸೇವೆಯ ವಿಚಾರ ಮಾಡಬೇಕು. ತಂದೆಯು ಆದೇಶ ನೀಡುತ್ತಾರೆ - ಮಧುರ ಮಕ್ಕಳೇ, ದಯಾಹೃದಯಿಗಳಾಗಿ. ಯಾರು ದುಃಖಿ ಆತ್ಮಗಳಿದ್ದಾರೆಯೋ ಆ ದುಃಖಿ ಆತ್ಮಗಳನ್ನು ಸುಖಿ ಆತ್ಮಗಳನ್ನಾಗಿ ಮಾಡಿ. ಅವರಿಗೆ ಸಂಕ್ಷಿಪ್ತವಾಗಿ ಪತ್ರವನ್ನು ಬರೆಯಿರಿ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿ. ಒಬ್ಬ ಶಿವ ತಂದೆಯದೇ ಮಹಿಮೆಯಿದೆ. ಮನುಷ್ಯರಿಗೆ ತಂದೆಯ ಮಹಿಮೆಯೂ ಸಹ ತಿಳಿದಿಲ್ಲ. ಯಾವ ಭಾಷೆಯಲ್ಲಿ ಬೇಕಾದರೂ ಪತ್ರವನ್ನು ಬರೆಯಬಲ್ಲಿರಿ. ಮಕ್ಕಳಿಗೆ ಸೇವೆ ಮಾಡುವ ಉತ್ಸುಕತೆಯಿರಬೇಕು. ಅನೇಕರು ಜೀವಘಾತ ಮಾಡಿಕೊಳ್ಳಲು ತಯಾರಾಗಿ ಬಿಡುತ್ತಾರೆ, ಅವರಿಗೂ ಸಹ ನೀವು ತಿಳಿಸಬಹುದು - ಜೀವಘಾತ ಮಹಾಪಾಪವಾಗಿದೆ. ಈಗ ನೀವು ಮಕ್ಕಳಿಗೆ ಶ್ರೀಮತವನ್ನು ಕೊಡುವವರು ಶಿವತಂದೆಯಾಗಿದ್ದಾರೆ. ಅವರು ಶ್ರೀ ಶ್ರೀ ಶಿವತಂದೆಯಾಗಿದ್ದಾರೆ, ನಿಮ್ಮನ್ನೂ ಸಹ ಶ್ರೀ ಲಕ್ಷ್ಮಿ-ಶ್ರೀನಾರಾಯಣರನ್ನಾಗಿ ಮಾಡುತ್ತಾರೆ. ಅವರೊಬ್ಬರೇ ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ, ಅವರೆಂದೂ ಚಕ್ರದಲ್ಲಿ ಬರುವುದಿಲ್ಲ ಆದರೆ ನಿಮಗೆ ಶ್ರೀ ಎಂಬ ಬಿರುದು ಸಿಗುತ್ತದೆ. ಇತ್ತೀಚೆಗಂತೂ ಎಲ್ಲರಿಗೆ ಶ್ರೀ ಎಂಬ ಬಿರುದನ್ನು ಕೊಡುತ್ತಿರುತ್ತಾರೆ. ಆ ನಿರ್ವಿಕಾರಿಗಳೆಲ್ಲಿ, ಈ ವಿಕಾರಿಗಳೆಲ್ಲಿ! ರಾತ್ರಿ-ಹಗಲಿನ ಅಂತರವಿದೆ. ತಂದೆಯು ಪ್ರತಿನಿತ್ಯವೂ ತಿಳಿಸುತ್ತಿರುತ್ತಾರೆ - ಮೊದಲನೆಯದಾಗಿ ದೇಹೀ-ಅಭಿಮಾನಿಗಳಾಗಿ ಮತ್ತು ಎಲ್ಲರಿಗೆ ಸಂದೇಶವನ್ನು ಕೊಡಿ. ನೀವು ಸಂದೇಶಕ ತಂದೆಯ ಮಕ್ಕಳೂ ಸಹ ಸಂದೇಶಿಗಳಾಗಿದ್ದೀರಿ. ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ, ಉಳಿದಂತೆ ಧರ್ಮ ಸ್ಥಾಪಕರಿಗೆ ಗುರುಗಳೆಂದು ಹೇಳುತ್ತಾರೆಯೇ? ಸದ್ಗತಿ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯಾರೊಂದಿಗೂ ತಿರಸ್ಕಾರವಿರಬಾರದು. ದಯಾಹೃದಯಿಗಳಾಗಿ ದುಃಖಿ ಆತ್ಮಗಳನ್ನು ಸುಖಿಯನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ತಂದೆಯ ಸಮಾನ ಮಾ|| ಪ್ರೀತಿಯ ಸಾಗರರಾಗಬೇಕು.

2. ನಾವು ಭಗವಂತನ ಮಕ್ಕಳಾಗಿದ್ದೇವೆ ಇದೇ ನಶೆ ಹಾಗೂ ಖುಷಿಯಲ್ಲಿರಬೇಕಾಗಿದೆ. ಎಂದೂ ಮಾಯೆಯ ವಿರುದ್ಧ ಸಂಗದಲ್ಲಿ ಹೋಗಬಾರದು. ದೇಹೀ-ಅಭಿಮಾನಿಯಾಗಿ ಜ್ಞಾನದ ಧಾರಣೆ ಮಾಡಬೇಕಾಗಿದೆ.

ವರದಾನ:
ಸ್ಮೃತಿಯ ಸ್ವಿಚ್ ಮೂಲಕ ಸ್ವ ಕಲ್ಯಾಣ ಮತ್ತು ಸರ್ವರ ಕಲ್ಯಾಣ ಮಾಡುವಂತಹ ಸಿದ್ಧಿ ಸ್ವರೂಪ ಭವ.

ಸ್ಥಿತಿಯ ಆಧಾರ ಸ್ಮೃತಿಯಾಗಿದೆ. ಇದೇ ಶಕ್ತಿಶಾಲಿ ಸ್ಮೃತಿ ಇರಲಿ ನಾನು ತಂದೆಯವನು ಮತ್ತು ತಂದೆ ನಮ್ಮವರು. ಆಗ ಇದೇ ಸ್ಮೃತಿಯಿಂದ ಸ್ವಯಂನ ಸ್ಥಿತಿ ಶಕ್ತಿಶಾಲಿಯಾಗಿರುತ್ತದೆ ಮತ್ತು ಬೇರೆಯವರಿಗೂ ಸಹ ಶಕ್ತಿಶಾಲಿಯನ್ನಾಗಿ ಮಾಡುವಿರಿ. ಹೇಗೆ ಸ್ವಿಚ್ ಆನ್ ಮಾಡುವುದರಿಂದ ಪ್ರಕಾಶವಾಗಿ ಬಿಡುವುದು. ಅದೇ ರೀತಿ ಈ ಸ್ಮೃತಿಯೂ ಸಹ ಒಂದು ಸ್ವಿಚ್ ಆಗಿದೆ. ಸದಾ ಸ್ಮೃತಿ ರೂಪಿ ಸ್ವಿಚ್ ನ ಮೇಲೆ ಗಮನವಿರಲಿ ಆಗ ಸ್ವಯಂ ನ ಮತ್ತು ಸರ್ವರ ಕಲ್ಯಾಣವನ್ನು ಮಾಡುತ್ತಿರುವಿರಿ. ಹೊಸ ಜನ್ಮವಾಯಿತು ಎಂದರೆ ಹೊಸ ಸ್ಮೃತಿಗಳಿರಲಿ. ಹಳೆಯ ಎಲ್ಲ ಸ್ಮೃತಿಗಳು ಸಮಾಪ್ತಿ - ಈ ವಿಧಿಯಿಂದ ಸಿದ್ಧಿ ಸ್ವರೂಪದ ವರದಾನ ಪ್ರಾಪ್ತಿಯಾಗಿ ಬಿಡುವುದು.

ಸ್ಲೋಗನ್:
ಅತೀಂದ್ರೀಯ ಸುಖದ ಅನುಭೂತಿ ಮಾಡುವುದಕ್ಕಾಗಿ ತಮ್ಮ ಶಾಂತ ಸ್ವರೂಪದ ಸ್ಥಿತಿಯಲ್ಲಿ ಸ್ಥಿತರಾಗಿರಿ.


ಮಾತೇಶ್ವರಿಜೀಯವರ ಅಮೂಲ್ಯ ಮಹಾವಾಕ್ಯ -

1. ಜ್ಞಾನಿತ್ವ ಆತ್ಮ ಮಕ್ಕಳ ತಪ್ಪು ಆಗುವುದರಿಂದ 100 ರಷ್ಟು ದಂಡ

ಈ ಅವಿನಾಶಿ ಜ್ಞಾನ ಯಜ್ಞದಲ್ಲಿ ಬಂದು ಸಾಕ್ಷಾತ್ ಪರಮಾತ್ಮನ ಕೈ ಹಿಡಿದು ನಂತರ ಏನೋ ಕಾರಣ ಅಕಾರಣದಿಂದ ಒಂದುವೇಳೆ ಅವರಿಂದ ವಿಕರ್ಮವಾದರೆ ಅದರ ಸಜೆ ಬಹಳ ಕಠಿಣವಾಗಿರುತ್ತದೆ. ಹೇಗೆ ಜ್ಞಾನ ಪಡೆಯುವುದರಿಂದ ಅವರಿಗೆ 100ರಷ್ಟು ಲಾಭವಿದೆ, ಅದೇ ರೀತಿ ಜ್ಞಾನ ಪಡೆಯುತ್ತಾ ಏನಾದರೂ ತಪ್ಪು ಆಗುತ್ತದೆ ಎಂದರೆ ನಂತರ 100 ರಷ್ಟು ದಂಡ ಸಹ ಇದೆ ಆದ್ದರಿಂದ ಬಹಳ ಎಚ್ಚರಿಕೆಯಿಡಬೇಕಾಗುತ್ತದೆ. ತಪ್ಪು ಮಾಡುತ್ತಾ ಇದ್ದರೆ ಬಲಹೀನರಾಗುತ್ತಾ ಹೋಗುವಿರಿ ಆದ್ದರಿಂದ ಸಣ್ಣ-ಪುಟ್ಟ ತಪ್ಪುಗಳನ್ನು ಹಿಡಿದು ಮುಂದೆ ಹೋದಂತೆ ಪರೀಕ್ಷೆ ಮಾಡುತ್ತಾ ಹೋಗಿ. ಹೇಗೆ ತಿಳುವಳಿಕೆವುಳ್ಳ ದೊಡ್ಡ ಮನುಷ್ಯರು ತಪ್ಪು ಕೆಲಸ ಮಾಡಿದರೆ ಅವರಿಗೆ ದೊಡ್ಡ ಶಿಕ್ಷೆಯಿರುತ್ತೆ ಮತ್ತು ತುಂಬಾ ಕೀಳಾಗಿರುವ ಮನುಷ್ಯರು ಏನಾದರೂ ಕೆಟ್ಟ ಕೆಲಸ ಮಾಡಿದರೆ ಅವರಿಗೆ ಅಷ್ಟು ದೊಡ್ಡ ಶಿಕ್ಷೆ ಇರುವುದಿಲ್ಲ. ಈಗ ನೀವು ಪರಮಾತ್ಮನ ಮಕ್ಕಳೆಂದು ಕರೆಸಿಕೊಳ್ಳುವಿರಿ ಅಂದರೆ ಸ್ವಲ್ಪವಾದರೂ ನೀವು ದೈವೀಗುಣವನ್ನು ಧಾರಣೆ ಮಾಡಬೇಕಾಗುವುದು, ಸತ್ಯ ತಂದೆಯ ಬಳಿ ಬರುವಿರೆಂದರೆ ಸತ್ಯವಾಗಿ ಇರಬೇಕಾಗುತ್ತದೆ.

2. ಪರಮಾತ್ಮ ಎಲ್ಲವನ್ನೂ ಬಲ್ಲವರು ಚಿರಪರಿಚಿತರು ಹೇಗೆ?

ಜನ ಹೇಳುತ್ತಾರೆ ಪರಮಾತ್ಮ ಎಲ್ಲಾ ಬಲ್ಲವನು ಚಿರಪರಿಚಿತನು ಎಂದು, ಈಗ ಎಲ್ಲಾ ಬಲ್ಲವನು, ಚಿರಪರಿಚಿತನು ಎನ್ನುವುದರ ಅರ್ಥ ಇದಲ್ಲಾ, ಅವನು ಎಲ್ಲರ ಹೃದಯದಲ್ಲಿರುವುದನ್ನು ತಿಳಿದಿದ್ದಾನೆ ಎಂದು. ಆದರೆ ಸೃಷ್ಟಿ ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದಿರುವವನು. ಬಾಕಿ ಹೀಗಲ್ಲ ಪರಮಾತ್ಮ ರಚೈತ ಪಾಲನಾಕರ್ತ ಮತ್ತು ಸಂಹಾರ ಕರ್ತ ಆಗಿದ್ದಾರೆ ಎಂದರೆ ಇದರ ಅರ್ಥ ಇದೇ ಆಗಿದೆ ಪರಮಾತ್ಮ ಜನ್ಮ ಕೊಡುತ್ತಾನೆ, ತಿನ್ನಿಸುತ್ತಾನೆ ಮತ್ತು ಸಾಯಿಸುತ್ತಾನೆ, ಆದರೆ ಹೀಗಲ್ಲಾ. ಮನುಷ್ಯ ತನ್ನ ಕರ್ಮದ ಲೆಕ್ಕಾಚಾರದನುಸಾರ ಜನ್ಮ ಪಡೆಯುತ್ತಾನೆ, ಇದರ ಅರ್ಥ ಇದಲ್ಲಾ ಪರಮಾತ್ಮ ಕುಳಿತು ಅವನ ಕೆಟ್ಟ ಸಂಕಲ್ಪ ಮತ್ತು ಒಳ್ಳೆ ಸಂಕಲ್ಪವನ್ನು ತಿಳಿದಿರುತ್ತಾರೆ ಎಂದು. ಅವರಂತೂ ತಿಳಿದಿರುತ್ತಾರೆ ಅಜ್ಞಾನಿಗಳ ಹೃದಯದಲ್ಲಿ ಏನು ನಡೆಯುತ್ತಿರಬಹುದು? ಎಂದು ಇಡೀ ದಿನದಲ್ಲಿ ಮಾಯಾವಿ ಸಂಕಲ್ಪ ನಡೆಯುತ್ತಿರಬಹುದು ಮತ್ತು ಜ್ಞಾನಿಯ ಒಳಗೆ ಶುದ್ಧ ಸಂಕಲ್ಪ ನಡೆಯುತ್ತಿರಬಹುದು, ಉಳಿದಂತೆ ಒಂದೊಂದು ಸಂಕಲ್ಪವನ್ನು ಕುಳಿತು ರೀಡ್ ಮಾಡುವುದಿಲ್ಲ? ಉಳಿದಂತೆ ಪರಮಾತ್ಮ ತಿಳಿದಿದ್ದಾರೆ, ಈಗಂತೂ ಎಲ್ಲರ ಆತ್ಮಗಳೂ ದುರ್ಗತಿಯನ್ನು ತಲುಪಿದೆ, ಅವರ ಸದ್ಗತಿ ಹೇಗೆ ಆಗಬೇಕು, ಈ ಎಲ್ಲಾ ವಿಚಾರಗಳು ಎಲ್ಲಾ ಬಲ್ಲವನಿಗೆ ಚಿರಪರಿಚಿತನಿಗೆ ಇದೆ. ಈಗ ಮನುಷ್ಯ ಏನು ಕರ್ಮ ಭ್ರಷ್ಠ ಆಗಿದ್ದಾರೆ, ಅವರು ಶ್ರೇಷ್ಠ ಕರ್ಮವನ್ನು ಮಾಡಿಸಬೇಕಾಗಿದೆ. ಕಲಿಸುವುದು ಮತ್ತು ಅವರಿಗೆ ಕರ್ಮ ಬಂಧನದಿಂದ ಬಿಡಿಸಬೇಕು, ಇದನ್ನು ಪರಮಾತ್ಮ ತಿಳಿದಿದ್ದಾನೆ. ಪರಮಾತ್ಮ ಹೇಳುತ್ತಾರೆ ನಾನು ರಚೈತ ಮತ್ತು ನನ್ನ ರಚನೆಯ ಆದಿ-ಮಧ್ಯೆ-ಅಂತ್ಯ ಈ ಎಲ್ಲಾ ಜ್ಞಾನವನ್ನು ತಿಳಿದಿದ್ದೇನೆ, ಆ ತಿಳುವಳಿಕೆಯನ್ನು ನಾನು ನೀವು ಮಕ್ಕಳಿಗೆ ಕೊಡುತ್ತಿದ್ದೇನೆ. ಈಗ ನೀವು ಮಕ್ಕಳು ಆ ತಂದೆಯ ನಿರಂತರ ನೆನಪಿನಲ್ಲಿರಬೇಕು ಆಗಲೇ ಸರ್ವ ಪಾಪಗಳಿಂದ ಮುಕ್ತರಾಗುವಿರಿ ಅರ್ಥಾತ್ ಅಮರಲೋಕದಲ್ಲಿ ಹೋಗುವಿರಿ, ಈಗ ಈ ತಿಳುವಳಿಕೆಯನ್ನೇ ಚಿರಪರಿಚಿತ ಎಲ್ಲಾ ಬಲ್ಲವನು ಎಂದು ಹೇಳುತ್ತಾರೆ. ಒಳ್ಳೆಯದು. ಓಂ ಶಾಂತಿ.