ಪ್ರಾತಃ ಮುರಳಿ ಓಂಶಾಂತಿ "ಬಾಪ್‌ದಾದಾ" ಮಧುಬನ


"ಮಧುರ ಮಕ್ಕಳೇ - ತಂದೆಯ ಸಮಾನ ಅತಿಪ್ರಿಯರಾಗಲು ತಮ್ಮನ್ನು ಆತ್ಮಬಿಂದುವೆಂದು ತಿಳಿದು ಬಿಂದುತಂದೆಯನ್ನು ನೆನಪು ಮಾಡಿರಿ”

ಪ್ರಶ್ನೆ :

ನೆನಪಿನಲ್ಲಿರುವ ಗುಪ್ತ ತೀವ್ರ ಪರಿಶ್ರಮವನ್ನು ಪ್ರತಿಯೊಬ್ಬ ಮಗುವೂ ಮಾಡಬೇಕಾಗಿದೆ ಏಕೆ?

ಉತ್ತರ :

ಏಕೆಂದರೆ ನೆನಪಿನ ವಿನಃ ಪಾಪಾತ್ಮರಿಂದ ಪುಣ್ಯಾತ್ಮರಾಗಲು ಸಾಧ್ಯವಿಲ್ಲ, ಯಾವಾಗ ಗುಪ್ತ ನೆನಪಿನಲ್ಲಿರುವಿರೋ, ಆತ್ಮಾಭಿಮಾನಿಯಾಗುವಿರೋ ಆಗ ವಿಕರ್ಮ ವಿನಾಶವಾಗುವುದು. ಧರ್ಮರಾಜನ ಶಿಕ್ಷೆಗಳಿಂದ ಮುಕ್ತರಾಗುವ ಸಾಧನವೂ ಸಹ ನೆನಪಾಗಿದೆ. ನೆನಪಿನಲ್ಲಿಯೇ ಮಾಯೆಯ ಬಿರುಗಾಳಿಗಳು ವಿಘ್ನಗಳನ್ನು ಹಾಕುತ್ತವೆ ಆದ್ದರಿಂದ ನೆನಪಿನ ಗುಪ್ತ ಪರಿಶ್ರಮ ಪಡಿ ಆಗ ಲಕ್ಷ್ಮೀ-ನಾರಾಯಣರಂತೆ ಪ್ರಿಯರಾಗುವಿರಿ.

ಗೀತ :

ಓಂ ನಮಃ ಶಿವಾಯ..............

ಓಂ ಶಾಂತಿ.

ಈ ಮಹಿಮೆಯು ಎಲ್ಲ ಆತ್ಮರ ತಂದೆಯದಾಗಿದೆ. ಭಗವಂತ ಅರ್ಥಾತ್ ತಂದೆಯನ್ನು ನೆನಪು ಮಾಡಲಾಗುತ್ತದೆ, ಅವರಿಗೇ ಮಾತಾಪಿತ ಎಂದು ಹೇಳುತ್ತಾರಲ್ಲವೆ, ಪರಮಪಿತನೆಂದೂ ಹೇಳಲಾಗುತ್ತದೆ. ಎಲ್ಲಾ ಮನುಷ್ಯರಿಗೆ ಪರಮಪಿತನೆಂದು ಹೇಳುತ್ತಾರೆಂದಲ್ಲ. ತಂದೆಯೆಂದು ಲೌಕಿಕತಂದೆಗೂ ಹೇಳುತ್ತಾರೆ. ಯಾರಿಗೆ ಲೌಕಿಕ ತಂದೆಯೆಂದು ಹೇಳುವರೋ ಅವರೂ ಸಹ ಪಾರಲೌಕಿಕ ತಂದೆಯನ್ನು ನೆನಪು ಮಾಡುತ್ತಾರೆ. ವಾಸ್ತವದಲ್ಲಿ ನೆನಪು ಮಾಡುವುದು ಆತ್ಮವಾಗಿದೆ. ಅದು ಲೌಕಿಕ ತಂದೆಯನ್ನೂ ನೆನಪು ಮಾಡುತ್ತದೆ. ಆ ಆತ್ಮವು ತನ್ನ ರೂಪವನ್ನಾಗಲಿ, ಪರಿಚಯವನ್ನಾಗಲಿ ತಿಳಿದುಕೊಂಡಿಲ್ಲ. ಆತ್ಮವು ತನ್ನನ್ನೇ ಅರಿತುಕೊಂಡಿಲ್ಲ ಅಂದಮೇಲೆ ಪರಮಾತ್ಮನನ್ನು ಹೇಗೆ ಅರಿತುಕೊಳ್ಳುವುದು! ತಮ್ಮ ಲೌಕಿಕ ತಂದೆಯನ್ನಂತೂ ಎಲ್ಲರೂ ಅರಿತುಕೊಂಡಿರುತ್ತಾರೆ, ಅವರಿಂದ ಆಸ್ತಿಯು ಸಿಗುತ್ತದೆ. ಇಲ್ಲದಿದ್ದರೆ ಏಕೆ ನೆನಪು ಮಾಡುವರು! ಪಾರಲೌಕಿಕ ತಂದೆಯಿಂದಲೇ ಅವಶ್ಯವಾಗಿ ಆಸ್ತಿಯು ಸಿಗುವುದು. ಓ ಗಾಡ್ ಫಾದರ್ ಎಂದು ಹೇಳುತ್ತಾರೆ, ಅವರಿಂದ ದಯೆ-ಕ್ಷಮೆಯನ್ನು ಬೇಡುತ್ತಾರೆ ಏಕೆಂದರೆ ಪಾಪಗಳನ್ನು ಮಾಡುತ್ತಿರುತ್ತಾರೆ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ ಆದರೆ ಆತ್ಮವನ್ನು ಅರಿತುಕೊಳ್ಳುವುದು ಮತ್ತು ಪರಮಾತ್ಮನನ್ನು ಅರಿತುಕೊಳ್ಳುವುದು ಕಷ್ಟದ ವಿಷಯವಾಗಿದೆ. ಸಹಜಕ್ಕಿಂತ ಸಹಜವೂ ಆಗಿದೆ ಮತ್ತು ಕಷ್ಟಕ್ಕಿಂತ ಕಷ್ಟವೂ ಆಗಿದೆ. ಭಲೆ ಎಷ್ಟೇ ವಿಜ್ಞಾನವನ್ನು ಕಲಿಯಲಿ, ಅವರು ಚಂದ್ರ ಗ್ರಹದವರೆಗೂ ಹೋಗುತ್ತಾರೆ ಆದರೂ ಸಹ ಈ ಜ್ಞಾನದ ಮುಂದೆ ಅದು ತುಚ್ಛವಾಗಿದೆ. ತನ್ನನ್ನು ಮತ್ತು ತಂದೆಯನ್ನು ಅರಿತುಕೊಳ್ಳುವುದು ಬಹಳ ಕಷ್ಟವಾಗಿದೆ. ಮಕ್ಕಳು ಯಾರೆಲ್ಲರೂ ತಮ್ಮನ್ನು ಬ್ರಹ್ಮಾಕುಮಾರ- ಕುಮಾರಿಯರೆಂದು ಕರೆಸಿಕೊಳ್ಳುವರೋ ಅವರು ತಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ – ನಾನಾತ್ಮ ಬಿಂದುವಾಗಿದ್ದೇನೆ, ನಮ್ಮ ತಂದೆಯೂ ಬಿಂದುವಾಗಿದ್ದಾರೆ ಎಂಬುದನ್ನು ಮರೆತುಹೋಗುತ್ತಾರೆ. ಇದು ಕಷ್ಟದ ವಿಷಯವಾಗಿದೆ. ನಾನು ಆತ್ಮನೆಂಬುದನ್ನೂ ಮರೆತುಹೋಗುವ ಕಾರಣ ತಂದೆಯನ್ನು ನೆನಪು ಮಾಡುವುದೂ ಮರೆತುಹೋಗುತ್ತಾರೆ. ಆತ್ಮಾಭಿಮಾನಿಗಳಾಗುವ ಅಭ್ಯಾಸವಿಲ್ಲ. ಆತ್ಮವು ಬಿಂದುವಾಗಿದೆ, ಅದರಲ್ಲಿಯೇ 84 ಜನ್ಮಗಳ ಪಾತ್ರವು ನಿಗಧಿಯಾಗಿದೆ. ಅದನ್ನು ಆತ್ಮವು ಭಿನ್ನ-ಭಿನ್ನ ಶರೀರಗಳನ್ನು ತೆಗೆದುಕೊಂಡು ಪಾತ್ರವನ್ನು ಅಭಿನಯಿಸುತ್ತಿದ್ದೇನೆ ಎಂಬುದೇ ಪದೇ-ಪದೇ ಮರೆತು ಹೋಗುತ್ತದೆ. ಮುಖ್ಯವಾಗಿ ಇದೇ ತಿಳಿದುಕೊಳ್ಳುವ ಮಾತಾಗಿದೆ - ಆತ್ಮ ಮತ್ತು ಪರಮಾತ್ಮನನ್ನು ತಿಳಿದುಕೊಳ್ಳದೆ ಉಳಿದೆಲ್ಲಾ ಜ್ಞಾನವು ಎಲ್ಲರ ಬುದ್ದಿಯಲ್ಲಿಯೂ ಇರುತ್ತದೆ. ನಾವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ, ಸೂರ್ಯವಂಶಿ, ಚಂದ್ರವಂಶಿ.... ಆಗುತ್ತೇವೆ. ಈ ಚಕ್ರವಂತು ಸಹಜವಾಗಿದೆ ಆದರೆ ತಮ್ಮನ್ನು ಆತ್ಮನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡುವುದರಲ್ಲಿ ಎಷ್ಟು ಲಾಭವಿದೆಯೋ ಅಷ್ಟು ಕೇವಲ ಚಕ್ರವನ್ನು ಅರಿತುಕೊಳ್ಳುವುದರಿಂದ ಲಾಭವಾಗುವುದಿಲ್ಲ. ನಾನಾತ್ಮನು ನಕ್ಷತ್ರ ಮಾದರಿಯಾಗಿದ್ದೇನೆ ಮತ್ತೆ ತಂದೆಯೂ ಸಹ ನಕ್ಷತ್ರ, ಅತಿಸೂಕ್ಷ್ಮನಾಗಿದ್ದಾರೆ, ಅವರೇ ಸದ್ಗತಿದಾತನಾಗಿದ್ದಾರೆ. ಅವರನ್ನು ನೆನಪು ಮಾಡುವುದರಿಂದಲೇ ವಿಕರ್ಮವು ವಿನಾಶವಾಗುವುದು. ಈ ವಿಧಿಯಿಂದ ಯಾರೂ ನಿರಂತರ ನೆನಪು ಮಾಡುವುದಿಲ್ಲ, ಆತ್ಮಾಭಿಮಾನಿಗಳಾಗಿರುವುದಿಲ್ಲ. ಇದು ಪದೇ-ಪದೇ ನೆನಪಿರಲಿ - ನಾನು ಆತ್ಮನಾಗಿದ್ದೇನೆ. ತಂದೆಯ ಆದೇಶವಾಗಿದೆ - ನನ್ನನ್ನು ನೆನಪು ಮಾಡಿದರೆ ವಿಕರ್ಮವು ವಿನಾಶವಾಗುವುದು. ನಾನು ಬಿಂದುವಾಗಿದ್ದೇನೆ, ಇಲ್ಲಿ ಬಂದು ಪಾತ್ರಧಾರಿಯಾಗಿದ್ದೇನೆ. ನನ್ನಲ್ಲಿ ಪಂಚವಿಕಾರಗಳ ತುಕ್ಕು ಹಿಡಿದಿದೆ, ತಮೋಪ್ರಧಾನವಾಗಿದ್ದೇನೆ. ಈಗ ಸತೋಪ್ರಧಾನ ಪ್ರಪಂಚಕ್ಕೆ ಹೋಗಬೇಕಾಗಿದೆ ಆದ್ದರಿಂದ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಈ ರೀತಿಯಿಂದ ತಂದೆಯನ್ನು ನೆನಪು ಮಾಡಿದಾಗ ತುಕ್ಕು ಕಳೆಯುವುದು, ಇದೇ ಪರಿಶ್ರಮವಿದೆ. ಸರ್ವಿಸಿನ ಸಮಾಚಾರವನ್ನಂತೂ ಬಹಳ ಹೇಳುತ್ತಾರೆ. ಇಂದು ಈ ಸರ್ವಿಸ್ ಮಾಡಿದೆವು, ಅನೇಕರು ಪ್ರಭಾವಿತರಾದರು ಎಂದು. ಆದರೆ ಶಿವತಂದೆಯು ತಿಳಿದುಕೊಳ್ಳುತ್ತಾರೆ-ಆತ್ಮ ಮತ್ತು ಪರಮಾತ್ಮನ ಜ್ಞಾನದಲ್ಲಿ ಅವರು ಸ್ವಲ್ಪವೂ ಪ್ರಭಾವಿತರಾಗಲಿಲ್ಲ, ಭಾರತವು ಹೇಗೆ ಸ್ವರ್ಗ ಮತ್ತು ನರಕವಾಗುತ್ತದೆ, ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ, ಸತೋ-ರಜೋ-ತಮೋದಲ್ಲಿ ಹೇಗೆ ಬರುತ್ತೇವೆ - ಕೇವಲ ಇದನ್ನು ಕೇಳಿ ಪ್ರಭಾವಿತರಾಗುತ್ತಾರೆ. ಪರಮಾತ್ಮ ನಿರಾಕಾರನೆಂಬುದನ್ನೂ ತಿಳಿದುಕೊಳ್ಳುತ್ತಾರೆ ಆದರೆ ನಾನು ಆತ್ಮನಾಗಿದ್ದೇನೆ, ನನ್ನಲ್ಲಿ 84 ಜನ್ಮಗಳ ಪಾತ್ರವು ಅಡಕವಾಗಿದೆ, ತಂದೆಯೂ ಬಿಂದುವಾಗಿದ್ದಾರೆ, ಅವರಲ್ಲಿ ಸಂಪೂರ್ಣ ಜ್ಞಾನವಿದೆ, ಅದನ್ನು ನೆನಪು ಮಾಡಬೇಕಾಗಿದೆ. ಈ ಮಾತುಗಳನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಮುಖ್ಯಮಾತನ್ನೇ ತಿಳಿದುಕೊಳ್ಳುವುದಿಲ್ಲ. ವಿಶ್ವದ ಚರಿತ್ರೆ-ಭೂಗೋಳದ ಜ್ಞಾನವನ್ನು ತಂದೆಯೇ ತಿಳಿಸುತ್ತಾರೆ. ವಿಶ್ವದ ಚರಿತ್ರೆ-ಭೂಗೋಳವಿರಬೇಕು ಎಂಬುದನ್ನು ಸರ್ಕಾರವೂ ಬಯಸುತ್ತದೆ. ಇವಂತೂ ಅದಕ್ಕಿಂತಲೂ ಸೂಕ್ಷ್ಮ ಮಾತುಗಳಾಗಿವೆ. ಆತ್ಮವೆಂದರೇನು, ಅದರಲ್ಲಿ ಹೇಗೆ 84 ಜನ್ಮಗಳ ಪಾತ್ರವಿದೆ, ಅದೂ ಅವಿನಾಶಿಯಾಗಿದೆ. ಇದನ್ನು ನೆನಪು ಮಾಡುವುದು, ತನ್ನನ್ನು ಬಿಂದುವೆಂದು ತಿಳಿದುಕೊಳ್ಳುವುದು ಮತ್ತು ತಂದೆಯನ್ನು ನೆನಪು ಮಾಡುವುದರಿಂದಲೇ ವಿಕರ್ಮಗಳು ವಿನಾಶವಾಗುವುದು-ಈ ಯೋಗದಲ್ಲಿ ಯಾರೂ ತತ್ಪರಾಗಿರುವುದಿಲ್ಲ. ಈ ನೆನಪಿನಲ್ಲಿ ಇದ್ದಿದ್ದೇ ಆದರೆ ಬಹಳ ಪ್ರಿಯರಾಗುವರು. ಈ ಲಕ್ಷ್ಮೀ - ನಾರಾಯಣರನ್ನು ನೋಡಿ, ಎಷ್ಟು ಪ್ರಿಯರಾಗಿದ್ದಾರೆ, ಇಲ್ಲಿನ ಮನುಷ್ಯರನ್ನು ನೋಡಿ ಹೇಗಿದ್ದಾರೆ! ಅವರೇ ಸ್ವಯಂ ಹೇಳುತ್ತಾರೆ - ನಮ್ಮಲ್ಲಿ ಯಾವುದೇ ಗುಣವಿಲ್ಲ, ನಾವು ಮಲೇಚ್ಛರಾಗಿದ್ದೇವೆ, ತಾವು ಸ್ವಚ್ಛವಾಗಿದ್ದೀರಿ ಎಂದು. ಆದರೆ ಯಾವಾಗ ತಮ್ಮನ್ನು ಆತ್ಮನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡುವರೋ ಆಗ ಸಫಲತೆಯು ಸಿಗುವುದು. ಇಲ್ಲದಿದ್ದರೆ ಸಫಲತೆಯು ಕಡಿಮೆ ಸಿಗುತ್ತದೆ. ನಮ್ಮಲ್ಲಿ ಬಹಳಷ್ಟು ಜ್ಞಾನವಿದೆ, ವಿಶ್ವದ ಚರಿತ್ರೆ - ಭೂಗೋಳವನ್ನು ಅರಿತುಕೊಂಡಿದ್ದೇವೆ ಎಂದು ತಿಳಿಯುತ್ತಾರೆ ಆದರೆ ಯೋಗದ ಚಾರ್ಟನ್ನು ತಿಳಿಸುವುದಿಲ್ಲ. ಕೆಲವರೆ ಈ ಸ್ಥಿತಿಯಲ್ಲಿರುತ್ತಾರೆ ಅರ್ಥಾತ್ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವವರು ಬಹಳ ವಿರಳ. ಅನೇಕರಿಗೆ ಅಭ್ಯಾಸವೇ ಇಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳು ಕೇವಲ ಜ್ಞಾನದ ಚಕ್ರವನ್ನು ಬುದ್ದಿಯಲ್ಲಿ ತಿರುಗಿಸುತ್ತಾರೆ ಆದರೆ ನಾನಾತ್ಮನಾಗಿದ್ದೇನೆ, ತಂದೆಯೊಂದಿಗೆ ಬುದ್ಧಿಯೋಗವನ್ನು ಇಡಬೇಕಾಗಿದೆ. ಇದರಿಂದಲೇ ತಮೋಪ್ರಧಾನರಿಂದ ಸತೋಪ್ರಧಾನ ಪ್ರಪಂಚದಲ್ಲಿ ಹೋಗುತ್ತೇನೆ. ನಾನಾತ್ಮನು ತಂದೆಯನ್ನು ಅರಿತುಕೊಳ್ಳಬೇಕಾಗಿದೆ. ಅವರ ನೆನಪಿನಲ್ಲಿಯೇ ಇರಬೇಕಾಗಿದೆ - ಈ ಅಭ್ಯಾಸವು ಬಹಳ ಕಡಿಮೆಯಿದೆ. ಬಹಳಮಂದಿ ಬರುತ್ತಾರೆ, ಚೆನ್ನಾಗಿದೆ-ಚೆನ್ನಾಗಿದೆ ಎಂತಲೂ ಹೇಳುತ್ತಾರೆ ಬಾಕಿ ಅವರಿಗೆ ನಮ್ಮಲ್ಲಿ ಎಷ್ಟೊಂದು ತುಕ್ಕು ಏರಿದೆ, ಸುಂದರರಿಂದ ಶ್ಯಾಮ ಆಗಿಬಿಟ್ಟಿದ್ದೇವೆ ಎಂಬುದು ಅರ್ಥವಾಗುವುದೇ ಇಲ್ಲ ಅಂದಮೇಲೆ ಪುನಃ ಸುಂದರರು ಹೇಗಾಗುವುದು? ಇದು ಯಾರಿಗೂ ಗೊತ್ತಿಲ್ಲ, ಕೇವಲ ಚರಿತ್ರೆ-ಭೂಗೋಳವನ್ನು ಅರಿತುಕೊಳ್ಳುವ ಕೆಲಸವಲ್ಲ. ಹೇಗೆ ಪಾವನರಾಗುವುದು? ಶಿಕ್ಷೆಯಿಂದ ಮುಕ್ತರಾಗುವ ಉಪಾಯವೇ ಆಗಿದೆ - ಕೇವಲ ನೆನಪಿನಲ್ಲಿರುವುದು. ಯೋಗವು ಸರಿಯಿಲ್ಲದಿದ್ದರೆ ಧರ್ಮರಾಜನ ಶಿಕ್ಷೆಗಳನ್ನು ಅನುಭವಿಸುವಿರಿ, ಇದು ದೊಡ್ಡ ವಿಷಯವಾಗಿದೆ. ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಜ್ಞಾನದಲ್ಲಿ ತನ್ನನ್ನು ಎಲ್ಲಾ ಅರಿತವನೆಂದು ತಿಳಿದುಕೊಂಡು ಕುಳಿತುಕೊಳ್ಳುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಮೂಲಮಾತು ಯೋಗದ್ದಾಗಿದೆ, ಯೋಗದಲ್ಲಿ ಬಹಳ ಬಲಹೀನರಾಗಿದ್ದಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಬಹಳ ಎಚ್ಚರಿಕೆಯಿಂದಿರಿ, ಕೇವಲ ಪಂಡಿತರಾಗಬೇಡಿ. ನಾನು ಆತ್ಮನಾಗಿದ್ದೇನೆ, ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ಆದೇಶ ನೀಡಿದ್ದಾರೆ - ಮನ್ಮನಾಭವ. ಇದು ಮಹಾಮಂತ್ರವಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯ ಆತ್ಮನಾಗಿದ್ದಾರೆಂದು ತಿಳಿಯಿರಿ ಮತ್ತು ಅವರನ್ನು ನೆನಪು ಮಾಡಿ. ತಂದೆಯ ಯಾವುದೇ ದೊಡ್ಡ ರೂಪವು ಮುಂದೆ ಬರುವುದಿಲ್ಲ ಅಂದಾಗ ದೇಹೀ-ಅಭಿಮಾನಿಗಳು ಆಗುವುದರಲ್ಲಿಯೇ ಪರಿಶ್ರಮವಿದೆ. ವಿಶ್ವದ ಮಹಾರಾಜ-ಮಹಾರಾಣಿಯು ಒಬ್ಬರೇ ಆಗುತ್ತಾರೆ. ಅವರಿಗೆ ಲಕ್ಷಾಂತರಮಂದಿ ಪ್ರಜೆಗಳಾಗುತ್ತಾರೆ. ಪ್ರಜೆಗಳು ಅನೇಕರಿರುತ್ತಾರಲ್ಲವೆ. ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿದುಕೊಳ್ಳುವುದು ಸಹಜವಾಗಿದೆ, ಯಾವಾಗ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವಿರೋ ಆಗ ಪಾವನರಾಗುತ್ತೀರಿ. ಈ ಅಭ್ಯಾಸವು ಬಹಳ ಕ್ಲಿಷ್ಟವಾಗಿದೆ. ನೆನಪು ಮಾಡಲು ಕುಳಿತುಕೊಂಡಾಗ ಬಿರುಗಾಳಿಗಳು ಬಹಳ ವಿಘ್ನಗಳನ್ನಾಕುತ್ತದೆ. ಕೆಲವರು ಅರ್ಧಗಂಟೆಯ ಸಮಯವೂ ಏಕರಸವಾಗಿ ನೆನಪಿನಲ್ಲಿ ಕುಳಿತುಕೊಳ್ಳುವುದು ಬಹಳ ವಿರಳ. ಪದೇ-ಪದೇ ಮರೆತು ಹೋಗುತ್ತಾರೆ, ಇದರಲ್ಲಿ ಸತ್ಯ-ಸತ್ಯವಾದ ಗುಪ್ತ ಪರಿಶ್ರಮವಿದೆ. ಚಕ್ರದ ರಹಸ್ಯವನ್ನು ಅರಿತುಕೊಳ್ಳುವುದು ಸಹಜವಾಗಿದೆ ಆದರೆ ಆತ್ಮಾಭಿಮಾನಿಯಾಗಿ ತಂದೆಯನ್ನು ನೆನಪು ಮಾಡುವುದನ್ನು ಕೆಲವರೇ ಅರಿತುಕೊಳ್ಳುತ್ತಾರೆ ಮತ್ತು ಅದನ್ನು ಕಾರ್ಯದಲ್ಲಿ ತರುತ್ತಾರೆ. ತಂದೆಯ ನೆನಪಿನಿಂದಲೇ ನೀವು ಪಾವನರಾಗುತ್ತೀರಿ, ನಿರೋಗಿಕಾಯ, ಧೀರ್ಘಾಯಸ್ಸು ಸಿಗುವುದು. ಕೇವಲ ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸುವುದರಿಂದ ವಿಶ್ವದ ಮಾಲೀಕರಾಗುವುದಿಲ್ಲ, ನೆನಪಿನಿಂದಲೇ ಮಾಲೆಯ ಮಣಿಗಳಾಗುತ್ತೀರಿ. ಇದನ್ನು ಕೆಲವರೇ ಮಾಡುತ್ತಾರೆ. ಅವರಿಗೇ ಅರ್ಥವಾಗುತ್ತದೆ- ನಾವು ನೆನಪಿನಲ್ಲಿರುವುದಿಲ್ಲ ಎಂದು. ಒಳ್ಳೊಳ್ಳೆಯ ಮಹಾರಥಿಗಳೂ ಈ ಮಾತಿನಲ್ಲಿ ಡೀಲಾ ಆಗಿದ್ದಾರೆ. ಮುಖ್ಯಮಾತನ್ನು ತಿಳಿಸುವುದಕ್ಕೆ ಬರುವುದೇ ಇಲ್ಲ. ಈ ಮಾತೂ ಸಹ ಕಷ್ಟವಾಗಿದೆ. ಕಲ್ಪದ ಆಯಸ್ಸನ್ನು ಬಹಳ ದೊಡ್ಡದಾಗಿ ಮಾಡಿಬಿಟ್ಟಿದ್ದಾರೆ. ನೀವು 5000 ವರ್ಷಗಳೆಂದು ಸಿದ್ಧಮಾಡುತ್ತೀರಿ ಆದರೆ ಆತ್ಮ-ಪರಮಾತ್ಮನ ರಹಸ್ಯವೇನನ್ನೂ ಅರಿತುಕೊಳ್ಳುವುದಿಲ್ಲ. ನೆನಪೇ ಮಾಡುವುದಿಲ್ಲ ಆದ್ದರಿಂದ ಸ್ಥಿತಿಯು ಅಲುಗಾಡುತ್ತಿರುತ್ತದೆ, ಬಹಳ ದೇಹಾಭಿಮಾನವಿರುತ್ತದೆ. ದೇಹಿ-ಅಭಿಮಾನಿಗಳಾದಾಗಲೇ ಮಾಲೆಯ ಮಣಿಗಳಾಗಲು ಸಾಧ್ಯ. ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸುತ್ತೇವೆ ಆದ್ದರಿಂದ ನಾವು ಮಾಲೆಯಲ್ಲಿ ಸಮೀಪ ಬಂದುಬಿಡುತ್ತೇವೆ ಎಂದಲ್ಲ. ಆತ್ಮವು ಇಷ್ಟು ಸೂಕ್ಷ್ಮವಾಗಿದೆ, ಇದರಲ್ಲಿ 84 ಜನ್ಮಗಳ ಪಾತ್ರವು ತುಂಬಲ್ಪಟ್ಟಿದೆ. ಈ ಮಾತನ್ನು ಮೊಟ್ಟಮೊದಲು ಬುದ್ಧಿಯಲ್ಲಿ ತರಬೇಕಾಗಿದೆ ಮತ್ತು ಚಕ್ರವನ್ನು ನೆನಪು ಮಾಡಬೇಕಾಗಿದೆ. ಯೋಗವೇ ಮೂಲಮಾತಾಗಿದೆ. ಯೋಗಿಸ್ಥಿತಿಯಿರಬೇಕು. ಪಾಪಾತ್ಮರಿಂದ ಪುಣ್ಯಾತ್ಮರಾಗಬೇಕಾಗಿದೆ. ಯೋಗದಿಂದಲೇ ಆತ್ಮವು ಪವಿತ್ರವಾಗುವುದು. ಯೋಗಬಲವನ್ನು ಹೊಂದಿರುವವರೇ ಧರ್ಮರಾಜ ಶಿಕ್ಷೆಗಳಿಂದ ಮುಕ್ತರಾಗುತ್ತಾರೆ, ಈ ಪರಿಶ್ರಮವನ್ನು ಕೆಲವರೇ ಪಡುತ್ತಾರೆ. ಮಾಯೆಯ ಬಿರುಗಾಳಿಗಳೂ ಬಹಳ ಬರುತ್ತವೆ, ಇದು ಬಹಳ ಗುಪ್ತ ಪರಿಶ್ರಮವಾಗಿದೆ. ಲಕ್ಷ್ಮಿ -ನಾರಾಯಣರಾಗುವುದು ಚಿಕ್ಕಮ್ಮನ ಮನೆಯಂತಲ್ಲ. ಇದು ಅಭ್ಯಾಸವಾಗಿಬಿಟ್ಟರೆ ನಡೆದಾಡುತ್ತಾ-ತಿರುಗಾಡುತ್ತಾ ತಂದೆಯ ನೆನಪು ಬರುತ್ತಿರುವುದು. ಇದಕ್ಕೆ ಯೋಗವೆಂದು ಹೇಳಲಾಗುವುದು ಬಾಕಿ ಈ ಜ್ಞಾನದ ಮಾತುಗಳನ್ನಂತೂ ಚಿಕ್ಕ-ಚಿಕ್ಕ ಮಕ್ಕಳೂ ತಿಳಿದುಕೊಳ್ಳುತ್ತಾರೆ. ಚಿತ್ರಗಳಲ್ಲಿ ಎಲ್ಲಾ ಯುಗ ಮೊದಲಾದುವುಗಳನ್ನು ಹಾಕಿದ್ದಾರೆ, ಇದು ಸಾಮಾನ್ಯವಾಗಿದೆ. ಯಾವುದೇ ಕಾರ್ಯವನ್ನು ಆರಂಭಿಸುವಾಗ ಸ್ವಸ್ತಿಕ್ ಚಿತ್ರವನ್ನು ಬಿಡಿಸುತ್ತಾರೆ. ಇದು ಸತ್ಯಯುಗ, ತ್ರೇತಾ...... ಯುಗದ ಸಂಕೇತವಾಗಿದೆ. ಬಾಕಿ ಮೇಲೆ ಚಿಕ್ಕದಾದ ಸಂಗಮಯುಗವಿದೆ ಅಂದಾಗ ಮೊದಲು ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತಿದ್ದಾಗಲೇ ಆ ಶಾಂತಿಯು ಹರಡುವುದು. ಯೋಗದಿಂದಲೇ ವಿಕರ್ಮ ವಿನಾಶವಾಗುವುದು. ಇಡೀ ಪ್ರಪಂಚವು ಆತ್ಮ ಮತ್ತು ಪರಮಾತ್ಮನ ಮಾತನ್ನೇ ಮರೆತು ಹೋಗಿದ್ದಾರೆ, ಪರಮಾತ್ಮನು ಕೋಟಿಸೂರ್ಯ ತೇಜೋಮಯನೆಂದು ಹೇಳುತ್ತಾರೆ ಆದರೆ ಇದು ಹೇಗೆ ಸಾಧ್ಯ! ಆತ್ಮವೇ ಪರಮಾತ್ಮನೆಂದು ಹೇಳುತ್ತಾರೆಂದಮೇಲೆ ಇಬ್ಬರೂ ಒಂದೇ ಆದರಲ್ಲವೆ. ಚಿಕ್ಕವರು, ದೊಡ್ಡವರ ಅಂತರವೇ ಬರುವುದಿಲ್ಲ. ಇದರ ಮೇಲೂ ತಿಳಿಸಬೇಕಾಗಿದೆ – ಆತ್ಮದ ರೂಪವು ಬಿಂದುವಾಗಿದೆ, ಆತ್ಮವೇ ಪರಮಾತ್ಮನೆಂದು ಹೇಳುವುದಾದರೆ ಪರಮಾತ್ಮನೂ ಬಿಂದುವೇ ಆದರಲ್ಲವೆ. ಇದರಲ್ಲಿ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಎಲ್ಲರೂ ಪರಮಾತ್ಮನಾಗಿಬಿಟ್ಟರೆ ಎಲ್ಲರೂ ರಚಯಿತನಾಗಿಬಿಡುತ್ತಾರೆ ಆದರೆ ಸರ್ವರ ಸದ್ಗತಿ ಮಾಡುವವರು ಒಬ್ಬರೇ ತಂದೆಯಲ್ಲವೆ. ಉಳಿದಂತೆ ಪ್ರತಿಯೊಬ್ಬರಿಗೆ ತಮ್ಮ ಪಾತ್ರವು ಸಿಕ್ಕಿದೆ. ಮೊದಲು ಇದನ್ನು ಬುದ್ಧಿಯಲ್ಲಿ ಕೂರಿಸಬೇಕಾಗಿದೆ, ತಿಳುವಳಿಕೆಯ ಮಾತಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ತುಕ್ಕು ಬಿಟ್ಟು ಹೋಗುವುದು. ಇದರಲ್ಲಿ ಪರಿಶ್ರಮವಿದೆ. ಒಂದಂತೂ ಅರ್ಧಕಲ್ಪ ದೇಹಾಭಿಮಾನಿಗಳಾಗಿದ್ದಿರಿ, ಸತ್ಯಯುಗದಲ್ಲಿ ಆತ್ಮಾಭಿಮಾನಿಯಾಗಿದ್ದರೂ ಸಹ ತಂದೆಯನ್ನು ಅರಿತುಕೊಂಡಿರುವುದಿಲ್ಲ, ಜ್ಞಾನವೂ ತಿಳಿದಿರುವುದಿಲ್ಲ. ಈ ಸಮಯದಲ್ಲಿ ನಿಮಗೆ ಯಾವ ಜ್ಞಾನ ಸಿಗುತ್ತದೆಯೋ ಇದು ಪ್ರಾಯಃಲೋಪವಾಗಿಬಿಡುತ್ತದೆ. ಅಲ್ಲಿ ಕೇವಲ ನಾನಾತ್ಮನು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ, ಪಾತ್ರವನ್ನು ಅಭಿನಯಿಸುತ್ತೇನೆ ಎಂಬುದಷ್ಟೇ ತಿಳಿದಿರುತ್ತದೆ. ಇದರಲ್ಲಿ ಚಿಂತೆಯ ಮಾತೇನಿದೆ! ಪ್ರತಿಯೊಬ್ಬರೂ ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸಬೇಕಾಗಿದೆ, ಅಳುವುದರಿಂದೇನಾಗುವುದು? ಇದನ್ನು ತಿಳಿಸಬೇಕಾಗಿದೆ. ಒಂದುವೇಳೆ ಸ್ವಲ್ಪ ತಿಳಿದುಕೊಂಡರೂ ಸಹ ಶಾಂತಿ ಬಂದುಬಿಡುವುದು. ತಾನು ತಿಳಿದುಕೊಂಡರೆ ಅನ್ಯರಿಗೂ ತಿಳಸುವರು. ವೃದ್ಧರೂ ಸಹ ತಿಳಿಸುತ್ತಾರೆ, ಅಳುವುದರಿಂದ ಏನು ಹಿಂತಿರುಗಿ ಬರುವರೇ? ಆತ್ಮವು ಶರೀರವನ್ನು ಬಿಟ್ಟುಹೋಯಿತು, ಇದರಲ್ಲಿ ಅಳುವ ಮಾತೇನಿದೆ, ಕೆಲವರು ಜ್ಞಾನವಿಲ್ಲದವರೂ ಈ ರೀತಿ ತಿಳಿದುಕೊಳ್ಳುತ್ತಾರೆ ಆದರೆ ಆತ್ಮ ಮತ್ತು ಪರಮಾತ್ಮನೆಂದರೆ ಯಾರು ಎಂಬುದೇ ತಿಳಿದುಕೊಂಡಿರುವುದಿಲ್ಲ. ಆತ್ಮದಲ್ಲಿಯೇ ತುಕ್ಕು ಹಿಡಿದಿದೆ ಆದರೆ ಅವರು ಆತ್ಮವು ನಿರ್ಲೇಪವೆಂದು ತಿಳಿದುಕೊಳ್ಳುತ್ತಾರೆ. ಇವು ಬಹಳ ಸೂಕ್ಷ್ಮ ಮಾತುಗಳಾಗಿವೆ. ತಂದೆಗೆ ಗೊತ್ತಿದೆ, ಬಹಳ ಮಕ್ಕಳು ನೆನಪಿನಲ್ಲಿರುವುದಿಲ್ಲ, ಕೇವಲ ಅನ್ಯರಿಗೆ ತಿಳಿಸುವುದರಿಂದ ಏನಾಗುವುದು? ಬಹಳ ಪ್ರಭಾವಿತರಾದರು, ಇದರಿಂದ ಅವರ ಕಲ್ಯಾಣವಾಯಿತೆ! ಆತ್ಮ-ಪರಮಾತ್ಮನ ಪರಿಚಯ ಸಿಕ್ಕಿದಾಗಲೇ ತಿಳಿದುಕೊಳ್ಳುವರು - ಅವಶ್ಯವಾಗಿ ನಾವು ಅವರ ಮಕ್ಕಳಾಗಿದ್ದೇವೆ, ತಂದೆಯೇ ಪತಿತ-ಪಾವನನಾಗಿದ್ದಾರೆ, ಬಂದು ನಮ್ಮನ್ನು ದುಃಖದಿಂದ ಬಿಡಿಸುತ್ತಾರೆ. ಅವರೂ ಸಹ ಬಿಂದುವಾಗಿದ್ದಾರೆ ಆದ್ದರಿಂದ ತಂದೆಯನ್ನು ನಿರಂತರ ನೆನಪು ಮಾಡಬೇಕಾಗಿದೆ. ಬಾಕಿ ಚರಿತ್ರೆ-ಭೂಗೋಳವನ್ನು ತಿಳಿದುಕೊಳ್ಳುವುದು ಯಾವುದೇ ದೊಡ್ಡಮಾತಲ್ಲ. ಭಲೆ ತಿಳಿದುಕೊಳ್ಳುವುದಕ್ಕಾಗಿ ಬರುತ್ತಾರೆ ಆದರೆ ನಾನಾತ್ಮನಾಗಿದ್ದೇನೆ ಎಂಬ ಸ್ಥಿತಿಯಲ್ಲಿ ತತ್ಪರರಾಗಿರಬೇಕು, ಇದರಲ್ಲಿಯೇ ಪರಿಶ್ರಮವಿದೆ. ಆತ್ಮ-ಪರಮಾತ್ಮನ ಮಾತನ್ನು ನಿಮಗೆ ತಂದೆಯೇ ಬಂದು ತಿಳಿಸುತ್ತಾರೆ. ಸೃಷ್ಟಿಚಕ್ರವಂತೂ ನಿಮಗೆ ಬಹಳ ಸಹಜವಾಗಿದೆ. ಎಷ್ಟು ಸಾಧ್ಯವೋ ಏಳುತ್ತಾ-ಕುಳಿತುಕೊಳ್ಳುತ್ತಾ ಆತ್ಮಾಭಿಮಾನಿಯಾಗುವ ಪರಿಶ್ರಮ ಪಡಬೇಕಾಗಿದೆ. ಆತ್ಮಾಭಿಮಾನಿಗಳು ಬಹಳ ಶಾಂತವಾಗಿರುತ್ತಾರೆ. ನಾನು ಶಾಂತಿಯ ಆಳದಲ್ಲಿ ಹೋಗಬೇಕಾಗಿದೆ. ನಿರಾಕಾರಿ ಪ್ರಪಂಚದಲ್ಲಿ ಹೋಗಿ ವಿರಾಜಮಾನನಾಗಬೇಕಾಗಿದೆ, ನನ್ನ ಪಾತ್ರವು ಈಗ ಮುಕ್ತಾಯವಾಯಿತೆಂದು ತಿಳಿಯುತ್ತಾರೆ. ತಂದೆಯ ರೂಪವು ಚಿಕ್ಕಬಿಂದುವೆಂದು ತಿಳಿಯುತ್ತಾರೆ, ಅವರೇನೂ ದೊಡ್ಡಲಿಂಗದ ರೂಪದಲ್ಲಿಲ್ಲ. ತಂದೆಯು ಬಹಳ ಸೂಕ್ಷ್ಮವಾಗಿದ್ದಾರೆ. ಅವರು ಜ್ಞಾನಸಾಗರ ಸರ್ವರ ಸದ್ಗತಿದಾತನಾಗಿದ್ದಾರೆ, ನಾನಾತ್ಮನೂ ಸಹ ಜ್ಞಾನಪೂರ್ಣನಾಗುತ್ತಿದ್ದೇನೆ. ಯಾವಾಗ ಈ ರೀತಿಯ ಚಿಂತನೆ ನಡೆಯುವುದೋ ಆಗಲೇ ಶ್ರೇಷ್ಠ ಪದವಿಯನ್ನು ಪಡೆಯುವರು. ಇಡೀ ಪ್ರಪಂಚದಲ್ಲಿ ಆತ್ಮ ಮತ್ತು ಪರಮಾತ್ಮನನ್ನು ಯಾರೂ ತಿಳಿದುಕೊಂಡಿಲ್ಲ.

ನೀವು ಬ್ರಾಹ್ಮಣರು ಈಗ ಹೋಗಬೇಕಾಗಿದೆ. ಸನ್ಯಾಸಿಗಳೂ ತಿಳಿದುಕೊಂಡಿಲ್ಲ, ಬಂದು ತಿಳಿದುಕೊಳ್ಳುವುದೂ ಇಲ್ಲ. ಅವರೆಲ್ಲರೂ ತಮ್ಮ-ತಮ್ಮ ಧರ್ಮಗಳಲ್ಲಿಯೇ ಬರುವವರಿದ್ದಾರೆ. ಎಲ್ಲಾ ಲೆಕ್ಕಾಚಾರಗಳನ್ನು ಮುಗಿಸಿ ಹೊರಟುಹೋಗುತ್ತಾರೆ. ನೀವೇ ಈ ಪರಿಶ್ರಮ ಪಡುವುದರಿಂದ ತಂದೆಯಿಂದ ಆಸ್ತಿಯು ಸಿಗುವುದು, ಈಗ ಪುನಃ ದೇಹೀ- ಅಭಿಮಾನಿಗಳಾಗಬೇಕಾಗಿದೆ. ಆತ್ಮದಲ್ಲಿಯೇ ಮನಸ್ಸಿದೆಯಲ್ಲವೆ. ಆತ್ಮವೇ ಮನಸ್ಸನ್ನು ತಂದೆಯೊಂದಿಗೆ ಜೋಡಿಸಬೇಕಾಗಿದೆ. ಮನಸ್ಸು ಶರೀರದಲ್ಲಿಲ್ಲ. ಶರೀರಕ್ಕೆ ಎಲ್ಲಾ ಸ್ಥೂಲ ಕರ್ಮೇಂದ್ರಿಯಗಳಿವೆ. ಮನಸ್ಸನ್ನು ಜೋಡಿಸುವುದು, ಇದು ಆತ್ಮನ ಕರ್ತವ್ಯವಾಗಿದೆ. ತನ್ನನ್ನು ಆತ್ಮನೆಂದು ತಿಳಿದು ಪರಮಾತ್ಮ ತಂದೆಯೊಂದಿಗೆ ಮನಸ್ಸನ್ನಿಡಬೇಕಾಗಿದೆ. ಆತ್ಮವು ಅತಿಸೂಕ್ಷ್ಮವಾಗಿದೆ, ಇಷ್ಟು ಸೂಕ್ಷ್ಮ ಆತ್ಮವು ಎಷ್ಟೊಂದು ಪಾತ್ರವನ್ನು ಅಭಿನಯಿಸುತ್ತದೆ, ಇದು ಸೃಷ್ಟಿಯಾಗಿದೆ. ಇಷ್ಟು ಚಿಕ್ಕ ಆತ್ಮನಲ್ಲಿ ಎಷ್ಟೊಂದು ಪಾತ್ರವು ತುಂಬಿದೆ, ಅದು ಎಂದೂ ಕಳೆಯುವುದಿಲ್ಲ, ಬಹಳ ಸೂಕ್ಷ್ಮವಾಗಿದೆ. ನೀವು ಪ್ರಯತ್ನ ಪಡುತ್ತೀರಿ ಆದರೆ ದೊಡ್ಡರೂಪವೇ ನೆನಪಿಗೆ ಬಂದುಬಿಡುತ್ತದೆ - ನಾನಾತ್ಮನು ಸೂಕ್ಷ್ಮ ಬಿಂದುವಾಗಿದ್ದೇನೆ, ತಂದೆಯೂ ಸೂಕ್ಷ್ಮವಾಗಿದ್ದಾರೆ. ನೀವು ಮೊಟ್ಟಮೊದಲು ಈ ಪರಿಶ್ರಮ ಪಡಬೇಕಾಗಿದೆ. ಇಷ್ಟು ಸೂಕ್ಷ್ಮ ಆತ್ಮವೇ ಈ ಸಮಯದಲ್ಲಿ ಪತಿತನಾಗಿದೆ. ಆತ್ಮವನ್ನು ಪಾವನ ಮಾಡಿಕೊಳ್ಳಲು ಮೊಟ್ಟಮೊದಲ ಉಪಾಯವಾಗಿದೆ ವಿದ್ಯೆಯನ್ನು ಓದಬೇಕಾಗಿದೆ, ಬಾಕಿ ಆಡುವುದು, ನಲಿಯುವುದು ಬೇರೆ ಮಾತಾಗಿದೆ. ಆಟವಾಡುವುದೂ ಸಹ ಒಂದು ಕಲೆಯಾಗಿದೆ, ವಿದ್ಯೆಯಿಂದ ಪದವಿ ಸಿಗುತ್ತದೆ, ಆಟದಿಂದ ಪದವಿ ಸಿಗುವುದಿಲ್ಲ. ಆಟ ಇತ್ಯಾದಿಗಳ ವಿಭಾಗವೇ ಬೇರೆ ಇರುತ್ತದೆ. ಅದರೊಂದಿಗೆ ಜ್ಞಾನ, ಯೋಗದ ಸಂಬಂಧವಿಲ್ಲ. ಈ ಭೋಗ ಇತ್ಯಾದಿಗಳನ್ನು ಇಡುವುದೂ ಸಹ ಆಟವಾಗಿದೆ ಆದರೆ ಮುಖ್ಯ ಮಾತು ನೆನಪಿನದಾಗಿದೆ. ಒಳ್ಳೆಯದು-

ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಧರ್ಮರಾಜನ ಶಿಕ್ಷೆಗಳಿಂದ ಮುಕ್ತರಾಗಲು ನೆನಪಿನ ಗುಪ್ತ ಪರಿಶ್ರಮ ಪಡಬೇಕಾಗಿದೆ. ಪಾವನರಾಗುವ ಉಪಾಯವಾಗಿದೆ - ತಮ್ಮನ್ನು ಆತ್ಮಬಿಂದುವೆಂದು ತಿಳಿದು ಬಿಂದುತಂದೆಯನ್ನು ನೆನಪು ಮಾಡುವುದು.

2. ಜ್ಞಾನದಲ್ಲಿ ತನ್ನನ್ನು ತಾನು ಎಲ್ಲಾ ಅರಿತವನೆಂದು ತಿಳಿದುಕೊಳ್ಳಬಾರದು. ಏಕರಸ ಸ್ಥಿತಿಯನ್ನು ಮಾಡಿಕೊಳ್ಳುವ ಅಭ್ಯಾಸ ಮಾಡಬೇಕಾಗಿದೆ. ತಂದೆಯ ಯಾವ ಆದೇಶವಿದೆಯೋ ಅದನ್ನು ಪಾಲನೆ ಮಾಡಬೇಕಾಗಿದೆ.

ವರದಾನ:

'ಸತ್ಯತೆ-ಸ್ವಚ್ಛತೆಯ ಧಾರಣೆಯ ಮೂಲಕ ಸಮೀಪತೆಯ ಅನುಭವ ಮಾಡುವಂತಹ ಸಂಪೂರ್ಣ ಮೂರ್ತಿ ಭವ'

ಸರ್ವ ಧಾರಣೆಗಳಲ್ಲಿ ಮುಖ್ಯ ಧಾರಣೆಯಾಗಿದೆ - ಸತ್ಯತೆ ಹಾಗೂ ಸ್ವಚ್ಛತೆ. ಹೃದಯದಲ್ಲಿ ಒಬ್ಬರಿನ್ನೊಬ್ಬರ ಬಗ್ಗೆ ಸಂಪೂರ್ಣ ಸ್ವಚ್ಛತೆಯಿರಲಿ. ಹೇಗೆ ಸ್ವಚ್ಛವಾದ ವಸ್ತುವಿನಲ್ಲಿ ಎಲ್ಲವೂ ಸ್ಪಷ್ಟವಾಗಿ ಕಾಣಿಸುತ್ತದೆಯೋ ಹಾಗೆಯೇ ಒಬ್ಬರಿನ್ನೊಬ್ಬರ ಭಾವನೆ, ಭಾವ- ಸ್ವಭಾವವು ಸ್ಪಷ್ಟವಾಗಿ ಕಾಣಿಸಲಿ. ಎಲ್ಲಿ ಸತ್ಯತೆ-ಸ್ವಚ್ಛತೆಯಿದೆಯೋ ಅಲ್ಲಿ ಸಮೀಪತೆ ಇದೆ. ಹೇಗೆ ಬಾಪ್ ದಾದಾರವರ ಸಮೀಪವಿದ್ದೀರಿ ಹಾಗೆಯೇ ಪರಸ್ಪರದಲ್ಲಿಯೂ ಹೃದಯದ ಸಮೀಪತೆ ಇರಲಿ. ಸ್ವಭಾವದ ಭಿನ್ನತೆಗಳು ಸಮಾಪ್ತಿಯಾಗಿಬಿಡಲಿ. ಇದಕ್ಕಾಗಿ ಮನಸ್ಸಿನ ಭಾವ ಹಾಗೂ ಸ್ವಭಾವಗಳನ್ನು ಒಟ್ಟುಗೂಡಿಸಬೇಕಾಗಿದೆ. ಯಾವಾಗ ಸ್ವಭಾವದಲ್ಲಿ ಅಂತರವು ಕಾಣಿಸುವುದಿಲ್ಲವೋ ಆಗ ಸಂಪೂರ್ಣ ಮೂರ್ತಿಯೆಂದು ಹೇಳಲಾಗುವುದು.

ಸ್ಲೋಗನ್:

ಹಾಳಾಗಿರುವವರನ್ನು ಸುಧಾರಣೆ ಮಾಡುವುದು-ಅತಿಶ್ರೇಷ್ಠವಾದ ಸೇವೆ ಆಗಿದೆ.