09.05.22 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಯಾವ
ತಂದೆಯನ್ನು ನೀವು ಅರ್ಧಕಲ್ಪ ನೆನಪು ಮಾಡಿದಿರಿ ಈಗ ಆ ತಂದೆಯ ಆಜ್ಞೆಯು ಸಿಗುತ್ತಿದೆಯೆಂದರೆ ಅದನ್ನು
ಪಾಲನೆ ಮಾಡಿ, ಇದರಿಂದಲೇ ನಿಮ್ಮ ಏರುವ ಕಲೆಯಾಗುವುದು”
ಪ್ರಶ್ನೆ:
ನೀವು ಮಕ್ಕಳು
ತಮ್ಮ ಸ್ವಭಾವ ಪರಿವರ್ತನೆಯನ್ನು ತಾವೇ ಮಾಡಿಕೊಳ್ಳಬೇಕಾಗಿದೆ, ಹೇಗೆ?
ಉತ್ತರ:
ಒಬ್ಬ ತಂದೆಯ
ನೆನಪಿನಲ್ಲಿರುವುದು ಮತ್ತು ಪ್ರೀತಿಯಿಂದ ಯಜ್ಞದ ಸೇವೆ ಮಾಡುವುದರಿಂದ ಸ್ವಭಾವ ಪರಿವರ್ತನೆ
ಆಗುತ್ತದೆ ಏಕೆಂದರೆ ನೆನಪಿನಿಂದ ಆತ್ಮವು ನಿರೋಗಿ ಆಗುತ್ತದೆ ಮತ್ತು ಸೇವೆಯಿಂದ ಅಪಾರ ಖುಷಿ
ಇರುತ್ತದೆ. ಆದ್ದರಿಂದ ಯಾರು ನೆನಪು ಮತ್ತು ಸೇವೆಯಲ್ಲಿ ತತ್ಪರರಾಗುತ್ತಾರೋ ಅವರ ಸ್ವಭಾವ
ಪರಿವರ್ತನೆ ಆಗುತ್ತಾ ಇರುತ್ತದೆ.
ಗೀತೆ:
ನೀನು
ರಾತ್ರಿಯನ್ನು ನಿದ್ರೆಯಲ್ಲಿ ಕಳೆದೆ, ಹಗಲನ್ನು ತಿನ್ನುವುದರಲ್ಲಿ ಕಳೆದೆ............
ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಿ. ಮಾಲೆಯನ್ನು ಜಪಿಸುತ್ತಾ, ಜಪಿಸುತ್ತಾ ಯುಗಗಳು ಕಳೆದವು. ಎಷ್ಟು
ಯುಗಗಳು ಕಳೆಯಿತು? ಎರಡು ಯುಗಗಳು ಕಳೆಯಿತು. ಸತ್ಯಯುಗ ತ್ರೇತಾದಲ್ಲಿ ಮಾಲೆಯನ್ನು ಜಪಿಸುವುದಿಲ್ಲ.
ನಾವು ಮೇಲೆ (ಪರಮಧಾಮ) ಹೋಗುತ್ತೇವೆ, ನಂತರ ಕೆಳಗೆ ಬರುತ್ತೇವೆ ಎಂದು ಯಾರ ಬುದ್ಧಿಯಲ್ಲಿಯೂ ಇಲ್ಲ.
ಈಗ ನಮ್ಮದು ಏರುವ ಕಲೆಯಾಗುತ್ತದೆ. ನಮ್ಮ ಅರ್ಥಾತ್ ಭಾರತದ ಏರುವ ಕಲೆ. ಭಾರತವಾಸಿಗಳಿಗೆ ಎಷ್ಟು
ಏರುವ ಕಲೆ ಮತ್ತು ಇಳಿಯುವ ಕಲೆಯಾಗುತ್ತದೆಯೋ ಅಷ್ಟು ಮತ್ತ್ಯಾರದೂ ಆಗುವುದಿಲ್ಲ. ಭಾರತವೇ
ಶ್ರೇಷ್ಠಾಚಾರಿ ಮತ್ತು ಭ್ರಷ್ಠಾಚಾರಿ ಆಗುತ್ತದೆ. ಭಾರತವೇ ನಿರ್ವಿಕಾರಿ, ಭಾರತವೇ ವಿಕಾರಿ.
ಭಾರತಕ್ಕೆ ಮತ್ಯಾವುದೇ ಖಂಡಗಳು ಅಥವಾ ಧರ್ಮಗಳು ಹೋಲುವುದಿಲ್ಲ ಏಕೆಂದರೆ ಅವರು ಸ್ವರ್ಗದಲ್ಲಿ
ಬರುವುದಿಲ್ಲ. ಭಾರತವಾಸಿಗಳದೇ ಚಿತ್ರಗಳಿವೆ. ಅವಶ್ಯವಾಗಿ ರಾಜ್ಯ ಮಾಡುತ್ತಿದ್ದರು ಆದ್ದರಿಂದ
ನಿಮ್ಮದು ಈಗ ಏರುವ ಕಲೆಯಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಯಾರ ಕೈಯನ್ನು ಹಿಡಿದುಕೊಂಡಿದ್ದೀರಿ,
ಅವರು ನಿಮ್ಮನ್ನು ಜೊತೆ ಕರೆದುಕೊಂಡು ಹೋಗುತ್ತಾರೆ. ನಾವು ಭಾರತವಾಸಿಗಳದೇ ಏರುವ ಕಲೆಯಾಗಿದೆ.
ಮುಕ್ತಿಯಲ್ಲಿ ಹೋಗಿ ನಂತರ ಜೀವನ್ಮುಕ್ತಿಯಲ್ಲಿ ಬರುತ್ತೇವೆ. ಅರ್ಧಕಲ್ಪ ದೇವೀ-ದೇವತಾ ಧರ್ಮದ
ರಾಜ್ಯವು ನಡೆಯುತ್ತದೆ. 21 ಪಿಪೀಳಿಗೆಗಳು ಏರುತ್ತಾರೆ ನಂತರ ಇಳಿಯುವ ಕಲೆಯಾಗುತ್ತದೆ. ಹೇಳುತ್ತಾರೆ,
ನಿನ್ನ ಕೃಪೆಯಿಂದ ಸರ್ವರ ಉದ್ಧಾರವಾಗುತ್ತದೆ ಎಂದು. ಈಗ ಸರ್ವರ ಉದ್ಧಾರವಾಗುತ್ತದೆಯಲ್ಲವೇ. ಆದರೆ
ಏರುವ ಕಲೆ ಮತ್ತು ಇಳಿಯುವ ಕಲೆಯಲ್ಲಿ ನೀವು ಬರುತ್ತೀರಿ. ಈ ಸಮಯದಲ್ಲಿ ಭಾರತವು ಎಷ್ಟು ಸಾಲವನ್ನು
ತೆಗೆದುಕೊಳ್ಳುತ್ತದೆ, ಅಷ್ಟು ಮತ್ಯಾರೂ ತೆಗೆದುಕೊಳ್ಳುವುದಿಲ್ಲ. ಮಕ್ಕಳು ತಿಳಿದುಕೊಂಡಿದ್ದೀರಿ -
ನಮ್ಮ ಭಾರತವು ಚಿನ್ನದ ಪಕ್ಷಿಯಾಗಿತ್ತು, ತುಂಬಾ ಸಾಹುಕಾರರಾಗಿದ್ದೆವು. ಈಗ ಭಾರತದ ಇಳಿಯುವ ಕಲೆಯು
ಪೂರ್ಣ ಆಗುತ್ತಿದೆ. ಕಲಿಯುಗದ ಆಯಸು ಇನ್ನೂ 40,000 ವರ್ಷ ನಡೆಯುವುದಿದೆ ಎಂದು ವಿಧ್ವಾಂಸರು
ಮುಂತಾದವರು ತಿಳಿಯುತ್ತಾರೆ. ಅವರು ಸಂಪೂರ್ಣ ಘೋರಅಂಧಕಾರದಲ್ಲಿದ್ದಾರೆ. ತಿಳಿಸುವುದನ್ನೂ ಸಹ ತುಂಬಾ
ಯುಕ್ತಿಯಿಂದ ತಿಳಿಸಬೇಕಾಗಿದೆ. ಇಲ್ಲವೆಂದರೆ ಭಕ್ತರೆಲ್ಲರೂ ಆಶ್ಚರ್ಯಚಕಿತರಾಗುತ್ತಾರೆ. ಮೊಟ್ಟ
ಮೊದಲು ತಂದೆಯ ಪರಿಚಯವನ್ನು ಕೊಡಬೇಕಾಗಿದೆ. ಗೀತೆಯು ಎಲ್ಲರ ಆಸ್ತಿ ಆಗಿದೆ ಎಂದು ಭಗವಾನುವಾಚವಿದೆ.
ಆಸ್ತಿಯು ಗೀತೆಯಿಂದಲೇ ಸಿಗುತ್ತದೆ, ಬಾಕಿ ಎಲ್ಲವೂ (ಶಾಸ್ತ್ರಗಳು) ಗೀತೆಯ ಮಕ್ಕಳಾಗಿವೆ,
ಆದ್ದರಿಂದ ಮಕ್ಕಳಿಂದ ಆಸ್ತಿಯೂ ಸಿಗಲು ಸಧ್ಯವಿಲ್ಲ. ನೀವು ಮಕ್ಕಳಿಗೆ ಗೀತೆಯಿಂದ ಆಸ್ತಿಯು
ಸಿಗುತ್ತದೆಯಲ್ಲವೇ. ಗೀತಾ ಮಾತೆಗೆ ನಂತರ ಪಿತನೂ ಇದ್ದಾರೆ. ಬೈಬಲ್ ಮುಂತಾದ ಯಾವುದನ್ನೂ ಮಾತೆ ಎಂದು
ಹೇಳುವುದಿಲ್ಲ. ಆದ್ದರಿಂದ ಮೊದಲು-ಮೊದಲು ಇದನ್ನು ಕೇಳಬೇಕಾಗಿದೆ - ಪರಮಪಿತ ಪರಮಾತ್ಮನೊಂದಿಗೆ
ನಿಮ್ಮ ಸಂಬಂಧವೇನು? ಎಲ್ಲರ ತಂದೆಯು ಒಬ್ಬರೇ ಆಗಿದ್ದಾರಲ್ಲವೇ. ಎಲ್ಲಾ ಆತ್ಮಗಳು
ಸಹೋದರ-ಸಹೋದರರಾಗಿದ್ದಾರೆ, ಒಬ್ಬ ತಂದೆಯ ಮಕ್ಕಳಾಗಿದ್ದಾರೆ. ತಂದೆಯು ಪ್ರಜಾಪಿತ ಬ್ರಹ್ಮನ
ಮುಖಾಂತರ ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ. ಆದ್ದರಿಂದ ನೀವು ಪರಸ್ಪರ
ಸಹೋದರ-ಸಹೋದರಿಯರಾಗುತ್ತೀರಿ. ಅಂದಮೇಲೆ ಅವಶ್ಯವಾಗಿ ಪವಿತ್ರರಾಗಿರುತ್ತೀರಿ. ಪತಿತ-ಪಾವನ ತಂದೆಯೇ
ಬಂದು ನಿಮ್ಮನ್ನು ಯುಕ್ತಿಯಿಂದ ಪಾವನ ಮಾಡುತ್ತಾರೆ. ನಾವು ಪವಿತ್ರರಾದರೆ ಪವಿತ್ರ ಪ್ರಪಂಚದ
ಮಾಲೀಕರಾಗುತ್ತೇವೆ ಎಂದು ನಾವು ಮಕ್ಕಳು ತಿಳಿದುಕೊಂಡಿದ್ದೇವೆ. ತುಂಬಾ ದೊಡ್ಡ ಸಂಪಾದನೆಯಾಗಿದೆ.
ಯಾರು 21 ಜನ್ಮಗಳ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಲು ಪವಿತ್ರರಾಗುವುದಿಲ್ಲ, ಅವರೇ
ಮೂರ್ಖರಾಗುತ್ತಾರೆ. ಮತ್ತೆ ಶ್ರೀಮತವು ಸಿಗುತ್ತದೆ. ಯಾವ ತಂದೆಯನ್ನು ನೀವು ಅರ್ಧಕಲ್ಪ ನೆನಪು
ಮಾಡಿದ್ದೀರಿ, ಅವರ ಆಜ್ಞೆಯನ್ನು ಪಾಲಿಸಿವುದಿಲ್ಲವೇ! ಅವರ ಆಜ್ಞೆಯ ಮೇಲೆ ನಡೆಯುವುದಿಲ್ಲವೆಂದರೆ
ನೀವು ಪಾಪಾತ್ಮರಾಗಿ ಬಿಡುತ್ತೀರಿ. ಈ ಪ್ರಪಂಚವೇ ಪಾಪಾತ್ಮರ ಪ್ರಪಂಚವಾಗಿದೆ. ರಾಮ ರಾಜ್ಯವು
ಪುಣ್ಯಾತ್ಮರ ಪ್ರಪಂಚವಾಗಿತ್ತು. ಈಗ ರಾವಣ ರಾಜ್ಯವು ಪಾಪಾತ್ಮರ ಪ್ರಪಂಚವಾಗಿದೆ. ಈಗ ನೀವು ಮಕ್ಕಳದು
ಏರುವ ಕಲೆಯಾಗಿದೆ. ನೀವು ವಿಶ್ವದ ಮಾಲೀಕರಾಗುತ್ತೀರಿ. ಆದರೆ ಹೇಗೆ ಗುಪ್ತ ರೂಪದಲ್ಲಿ
ಕುಳಿತಿದ್ದೀರಿ. ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಮಾಲೆ ಮುಂತಾದವುದನ್ನು ಜಪಿಸುವಂತಹ
ಯಾವುದೇ ಮಾತಿಲ್ಲ. ತಂದೆಯನ್ನು ನೆನಪು ಮಾಡುತ್ತಾ ನೀವು ಕೆಲಸ ಮಾಡಿ. ಬಾಬಾ ನಿಮ್ಮ ಯಜ್ಞದ ಸ್ಥೂಲ,
ಸೂಕ್ಷ್ಮ ಎರಡೂ ಸೇವೆಯನ್ನು ನಾವು ಒಟ್ಟಿಗೆ ಮಾಡುತ್ತೇವೆ. ತಂದೆಯು ಆಜ್ಞೆ ಮಾಡಿದ್ದಾರೆ ಮಕ್ಕಳೇ ಈ
ರೀತಿ ನೆನಪು ಮಾಡಿ. ಸಂಸ್ಕಾರ ಪರಿವರ್ತನೆ ಮಾಡಿಸುತ್ತಾರಲ್ಲವೇ. ನೀವು ಆತ್ಮರು
ಪವಿತ್ರರಾಗುವುದರಿಂದ ಶರೀರವೂ ಪವಿತ್ರವಾಗಿ ಬಿಡುವುದು. ಕೇವಲ ತಂದೆಯ ನೆನಪಿನಿಂದಲೇ ನೀವು
ಪತಿತರಿಂದ ಪಾವನರಾಗುತ್ತೀರಿ. ಪಾವನರೂ ಆಗಿ ಮತ್ತು ಯಜ್ಞದ ಸೇವೆಯನ್ನೂ ಮಾಡುತ್ತಾ ಇರಿ. ಸೇವೆ
ಮಾಡುವುದರಲ್ಲಿ ತುಂಬಾ ಖುಷಿ ಇರುವುದು. ನಾವು ಇಷ್ಟೊಂದು ಸಮಯ ತಂದೆ ನೆನಪಿನಲ್ಲಿದ್ದು ನಮ್ಮನ್ನು
ನಿರೋಗಿಯನ್ನಾಗಿ ಮಾಡಿಕೊಂಡೆವು ಅಥವಾ ಭಾರತಕ್ಕೆ ಶಾಂತಿಯ ದಾನ ಕೊಟ್ಟೆವು. ಭಾರತಕ್ಕೆ ನೀವು
ಶ್ರೀಮತದ ಮೇಲೆ ಶಾಂತಿ ಮತ್ತು ಸುಖದ ದಾನ ಕೊಡುತ್ತೀರಿ. ಪ್ರಪಂಚದಲ್ಲಿ ಅನೇಕ ಆಶ್ರಮಗಳಂತೂ ಇದೆ.
ಆದರೆ ಅಲ್ಲಿ ಏನೂ ಇಲ್ಲ. 21 ಜನ್ಮಗಳ ಸ್ವರ್ಗದ ರಾಜ್ಯವು ಹೇಗೆ ಸಿಗುತ್ತದೆ ಎನ್ನುವುದು ಅವರಿಗೆ
ಗೊತ್ತೇ ಇಲ್ಲ.
ನೀವೀಗ ರಾಜಯೋಗದ
ವಿದ್ಯೆಯನ್ನು ಓದುತ್ತೀರಿ. ಅವರೆಲ್ಲರೂ ಸಹ ಪರಮಪಿತ ಬಂದು ಬಿಟ್ಟಿದ್ದಾರೆ ಎಂದು
ಹೇಳುತ್ತಿರುತ್ತಾರೆ. ಅಂದಾಗ ಅವರು ಎಲ್ಲಿ ಇದ್ದಾರೆ. ಅಂತೂ ಅವಶ್ಯವಾಗಿ ಇರಲೇ ಬೇಕಲ್ಲವೇ.
ವಿನಾಶಕ್ಕೋಸ್ಕರ ಬಾಂಬುಗಳೂ ಸಹ ತಯಾರಾಗಿವೆ. ಅವಶ್ಯವಾಗಿ ತಂದೆಯೇ ಸ್ವರ್ಗದ ಸ್ಥಾಪನೆ, ನರಕದ
ವಿನಾಶ ಮಾಡಿಸುತ್ತಾರೆ. ಇದಂತು ನರಕವಾಗಿದೆಯಲ್ಲವೇ. ಎಷ್ಟೊಂದು ಯುದ್ಧ, ಹೊಡೆದಾಟ ಮುಂತಾದಗಳಿವೆ,
ತುಂಬಾ ಭಯವು ಇದೆ. ಭಯವು ಮಕ್ಕಳನ್ನು ಹೇಗೆ ಓಡಿಸಿಕೊಂಡು ಕರೆದುಕೊಂಡು ಹೋಗುತ್ತದೆ. ಎಷ್ಟೊಂದು
ಉಪದ್ರವಗಳು ಆಗುತ್ತವೆ. ಈಗ ನೀವು ತಿಳಿದುಕೊಂಡಿದ್ದೀರಿ ಈ ಪ್ರಪಂಚವು ಬದಲಾಗುತ್ತದೆ. ಕಲಿಯುಗವು
ಬದಲಾಗಿ ನಂತರ ಸತ್ಯಯುಗ ಆಗುತ್ತಾ ಇದೆ. ನಾವು ಸತ್ಯಯುಗದ ಸ್ಥಾಪನೆಯಲ್ಲಿ ಬಾಬಾನ
ಸಹಯೋಗಿಗಳಾಗಿದ್ದೇವೆ. ಬ್ರಾಹ್ಮಣರೇ ಸಹಯೋಗಿಗಳಾಗುತ್ತಾರೆ. ಪ್ರಜಾಪಿತ ಬ್ರಹ್ಮನಿಂದ ಬ್ರಾಹ್ಮಣರು
ಜನ್ಮ ತೆಗೆದುಕೊಳ್ಳುತ್ತಾರೆ. ಆ ಬ್ರಾಹ್ಮಣರು ಕುಖವಂಶಾವಳಿ ಆಗಿದ್ದಾರೆ, ನೀವು ಮುಖವಂಶಾವಳಿ
ಆಗಿದ್ದೀರಿ. ಅವರು ಬ್ರಹ್ಮನ ಸಂತಾನರಾಗಲು ಸಾಧ್ಯವಿಲ್ಲ. ನಿಮ್ಮನ್ನು ತಂದೆಯು ದತ್ತು
ಮಾಡಿಕೊಳ್ಳುತ್ತಾರೆ. ನೀವು ಬ್ರಾಹ್ಮಣರು ಬ್ರಹ್ಮನ ಸಂತಾನರಾಗಿದ್ದೀರಿ. ಪ್ರಜಾಪಿತ ಬ್ರಹ್ಮನಂತು
ಸಂಗಮದಲ್ಲಿಯೇ ಇರಲು ಸಾಧ್ಯ. ಬ್ರಾಹ್ಮಣರು ನಂತರ ದೇವೀ-ದೇವತೆಗಳಾಗುತ್ತಾರೆ. ನೀವು ಕುಖವಂಶಾವಳಿ
ಆಗಿದ್ದೀರೆಂದು ಆ ಬ್ರಾಹ್ಮಣರಿಗೆ ನೀವು ತಿಳಿಸಬಹುದಾಗಿದೆ. ಬ್ರಾಹ್ಮಣರು ದೇವೀ-ದೇವತಾಯ ನಮಃ ಎಂದು
ಹೇಳುತ್ತಾರೆ. ಬ್ರಾಹ್ಮಣರಿಗೂ ನಮಸ್ತೆ, ದೇವತೆಗಳಿಗೂ ನಮಸ್ತೆ ಮಾಡುತ್ತಾರೆ, ಆದರೆ ಬ್ರಾಹ್ಮಣರಿಗೆ
ಯಾವಾಗ ನಮಸ್ತೆ ಹೇಳಬಹುದೆಂದರೆ ಈಗ ನಿಮಗೆ ನಮಸ್ತೆ ಹೇಳಲು ಯೋಗ್ಯರಾಗಿದ್ದೀರಿ. ಈ ಬ್ರಾಹ್ಮಣರು ತನು,
ಮನ ಧನದಿಂದ ಬಾಬಾನ ಶ್ರೀಮತದ ಮೇಲೆ ನಡೆಯುತ್ತಾರೆ ಎಂದು ತಿಳಿಯುತ್ತಾರೆ. ಆ ಬ್ರಾಹ್ಮಣರು ಶಾರೀರಿಕ
ಯಾತ್ರೆಯನ್ನು ಕರೆದುಕೊಂಡು ಹೋಗುತ್ತಾರೆ, ಆದರೆ ನಿಮ್ಮದು ಆತ್ಮಿಕ ಯಾತ್ರೆಯಾಗಿದೆ. ನಿಮ್ಮ
ಯಾತ್ರೆಯು ಎಷ್ಟೊಂದು ಮಧುರವಾಗಿದೆ. ಆ ಶಾರೀರಿಕ ಯಾತ್ರೆಗಳು ಅನೇಕವಿವೆ. ಗುರುಗಳೂ ಸಹ
ಅನೇಕರಿದ್ದಾರೆ. ಎಲ್ಲರನ್ನು ಗುರುಗಳೆಂದು ಹೇಳಿ ಬಿಡುತ್ತಾರೆ. ಈಗ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ ನಾವು ಮಧುರ ಶಿವಬಾಬಾರವರ ಮತದಮೇಲೆ ನಡೆದು ಬ್ರಹ್ಮಾರವರ ಮುಖಾಂತರ
ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಆಸ್ತಿಯನ್ನು ಶಿವಬಾಬಾರವರಿಂದ ತೆಗೆದುಕೊಳ್ಳುತ್ತೇವೆ.
ತಂದೆಯು ಹೇಳುತ್ತಾರೆ ನೀವು ಇಲ್ಲಿ ಬರುತ್ತೀರೆಂದರೆ ನಾನು ನಿಮ್ಮನ್ನು ತಕ್ಷಣ ಕೇಳುತ್ತೇನೆ - ಯಾರ
ಹತ್ತಿರ ಬಂದಿದ್ದೀರಿ. ಬುದ್ಧಿಯಲ್ಲಿ ಇವರು ಶಿವಬಾಬಾರವರ ಲೋನ್ ತೆಗೆದುಕೊಂಡಿರುವಂತಹ
ರಥವಾಗಿದ್ದಾರೆ. ನಾವು ಅವರ ಹತ್ತಿರ ಹೋಗುತ್ತೇವೆ. ನಿಶ್ಚಿತಾರ್ಥವನ್ನು ಬ್ರಾಹ್ಮಣರು
ಮಾಡಿಸುತ್ತಾರೆ, ಆದರೆ ಸಂಬಂಧವು ಮಾತ್ರ ಪ್ರಿಯತಮ-ಪ್ರಿಯತಮೆಯರ ನಡುವೆ ಬೆಳೆಯುತ್ತದೆ,
ನಿಶ್ಚಿತಾರ್ಥವನ್ನು ಮಾಡಿಸುವ ಬ್ರಾಹ್ಮಣನೊಂದಿಗಲ್ಲ. ಸ್ತ್ರೀ ಪತಿಯನ್ನು ನೆನಪು ಮಾಡುತ್ತಾರೋ ಅಥವಾ
ಮಾಂಗಲ್ಯ ಕಟ್ಟಿಸುವಂತಹವರನ್ನು ನೆನಪು ಮಾಡುತ್ತಾರೆಯೋ? ನಿಮ್ಮ ಪ್ರಿಯತಮ ಶಿವನಾಗಿದ್ದಾರೆ. ನಂತರ
ಯಾವುದೇ ದೇಹಧಾರಿಯನ್ನು ನೀವು ಏಕೆ ನೆನಪು ಮಾಡುತ್ತೀರಿ? ಶಿವನನ್ನೇ ನೆನಪು ಮಾಡಬೇಕಾಗಿದೆ. ಈ
ಲಾಕೆಟ್ ಮುಂತಾದವುಗಳನ್ನು ತಿಳಿಸಿಕೊಡುವುದಕ್ಕೋಸ್ಕರವೇ ತಂದೆಯು ಮಾಡಿಸಿದ್ದಾರೆ. ಬ್ರಹ್ಮಾ ತಂದೆಯು
ತಾನೇ ದಲ್ಲಾಳಿಯಾಗಿ ನಿಶ್ಚಿತಾರ್ಥವನ್ನು ಮಾಡಿಸುತ್ತಾರೆ ಆದರೆ ದಲ್ಲಾಳಿಯನ್ನು ನೆನಪು ಮಾಡಬಾರದು.
ಪ್ರಿಯತಮೆಯರ ಬುದ್ಧಿಯೋಗವು ಪ್ರಿಯತಮೆಯರ ಜೊತೆ ಇರುತ್ತದೆ. ಅವರೇ ಬಂದು ಮಮ್ಮಾ-ಬಾಬಾ ನೀವು ಮಕ್ಕಳ
ಮುಖಾಂತರ ಮುರಳಿಯನ್ನು ತಿಳಿಸುತ್ತಾರೆ, ಬಾಬ ಹೇಳುತ್ತಾರೆ ಅನೇಕರು ಇಂತಹ ಮಕ್ಕಳಿದ್ದಾರೆ, ಅವರ
ಭೃಕುಟಿಯ ಮಧ್ಯ ನಾನು ಕುಳಿತು ಮುರಳಿಯನ್ನು ನುಡಿಸುತ್ತೇನೆ, ಕಲ್ಯಾಣ ಮಾಡುವಾರ್ಥವಾಗಿ, ಕೆಲವರಿಗೆ
ಸಾಕ್ಷಾತ್ಕಾರವನ್ನು ಮಾಡಿಸಲು, ಮುರಳಿಯನ್ನು ತಿಳಿಸಲು, ಕೆಲವರ ಕಲ್ಯಾಣ ಮಾಡಲು ಬರುತ್ತೇನೆ.
ಬ್ರಾಹ್ಮಣಿಯರು ಯಾರನ್ನಾದರೂ ಉದ್ಧಾರ ಮಾಡುವ ಶಕ್ತಿಯಿಲ್ಲವೆಂದರೆ ಆಗ ನಾನು ಅದನ್ನು ತಿಳಿದುಕೊಂಡು
ಇಂತಹ ಬಾಣವನ್ನು ಹಾಕುತ್ತೇನೆ ಅದರಿಂದ ಅವರು ಬ್ರಾಹ್ಮಣಿಯರಿಗಿಂತಲೂ ಮುಂದೆ ಹೋಗಿ ಬಿಡುತ್ತಾರೆ,
ಅದಕ್ಕೆ ಬ್ರಾಹ್ಮಣಿಯರು ಇವರಿಗೆ ನಾವು ತಿಳಿಸಿಕೊಟ್ಟು ಇವರನ್ನು ಉದ್ಧಾರ ಮಾಡಿದೆವು ಎಂದು
ತಿಳಿಯುತ್ತಾರೆ. ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ. ವಾಸ್ತವದಲ್ಲಿ ಈ ಅಹಂಕಾರವೂ ಸಹ ಬರಬಾರದು
ಏಕೆಂದರೆ ಎಲ್ಲವನ್ನು ಮಾಡುವವರು ಶಿವಬಾಬಾ ಆಗಿದ್ದಾರೆ. ಇಲ್ಲಿ ಎಲ್ಲರೂ ಸಹ ನಿಮಗೆ ತಂದೆಯನ್ನು
ನೆನಪು ಮಾಡಿ ಎಂದು ಹೇಳುತ್ತಾರೆ ಏಕೆಂದರೆ ಎಲ್ಲರ ಸಂಬಂಧ ಶಿವಬಾಬಾರೊಂದಿಗೆ ಇರಬೇಕು. ಈ
ಬ್ರಹ್ಮಾರವರ ಮಧ್ಯದಲ್ಲಿ ದಲ್ಲಾಳಿಯಾಗಿದ್ದಾರೆ. ಇವರಿಗೆ ತಂದೆಯ ಕಮೀಷನ್ ಸಿಗುತ್ತದೆ ಆದರೂ ಸಹ ಇದು
ವೃದ್ಧ ಅನುಭವಿ ಶರೀರವಾಗಿದೆ. ಇವರು ಬದಲಾಗಲು ಸಾಧ್ಯವಿಲ್ಲ. ಇದು ನಾಟಕದಲ್ಲಿ ನಿಗದಿಯಾಗಿದೆ.
ಇನ್ನೊಂದು ಕಲ್ಪದಲ್ಲಿ ತಂದೆಯು ಇನ್ನೊಬ್ಬರ ಶರೀರದಲ್ಲಿ ಬರುತ್ತಾರೆ - ಈ ರೀತಿ ಆಗಲು ಸಾಧ್ಯವಿಲ್ಲ.
ಯಾರು ಕೊನೆಯಲ್ಲಿ ಬಂದು ಬಿಟ್ಟಿದ್ದಾರೆ ಅವರೇ ಮತ್ತೆ ಮೊದಲು ಹೋಗಬೇಕಾಗಿದೆ. ವೃಕ್ಷದಲ್ಲಿ ನೋಡಿ!
ಅಂತ್ಯದಲ್ಲಿ ಬ್ರಹ್ಮಾ ತಂದೆಯು ನಿಂತಿದ್ದಾರಲ್ಲವೇ. ಈಗ ನೀವು ಸಂಗಮಯುಗದಲ್ಲಿ ಕುಳಿತಿದ್ದೀರಿ.
ತಂದೆಯು ಈ ಪ್ರಜಾಪಿತ ಬ್ರಹ್ಮನಲ್ಲಿ ಪ್ರವೇಶ ಮಾಡಿದ್ದಾರೆ. ಜಗದಂಬಾ ಕಾಮಧೇನು ಆಗಿದ್ದಾರೆ. ಮತ್ತು
ಕಪಿಲದೇವ ಎಂದು ಹೇಳುತ್ತಾರೆ ಕಪಲ್ ಅರ್ಥಾತ್ ಜೋಡಿ ಎಂದರ್ಥ. ಬಾಪ್-ದಾದಾ, ಮಾತಾ-ಪಿತಾ, ಇವರು ಜೋಡಿ
ಆದರಲ್ಲವೇ. ತಾಯಿಯಿಂದ ಆಸ್ತಿಯು ಸಿಗುವುದಿಲ್ಲ. ಆಸ್ತಿಯು ಶಿವಬಾಬಾರವರಿಂದ ಸಿಗುತ್ತದೆ ಆದ್ದರಿಂದ
ಅವರನ್ನು ನೆನಪು ಮಾಡಬೇಕಾಗುತ್ತದೆ. ನಾನು ಇವರ ಮುಖಾಂತರ ನಿಮ್ಮನ್ನು ಕರೆದುಕೊಂಡು ಹೋಗಲು
ಬಂದಿದ್ದೇನೆ. ಈ ಬ್ರಹ್ಮಾರವರೂ ಸಹ ಶಿವಬಾಬಾರವರನ್ನೇ ನೆನಪು ಮಾಡುತ್ತಾರೆ. ಶಂಕರನ ಮುಂದೆಯೂ ಸಹ
ಶಿವನ ಚಿತ್ರವನ್ನಿಡುತ್ತಾರೆ. ಇವೆಲ್ಲವೂ ಮಹಿಮೆಗಾಗಿದೆ. ಈ ಸಮಯದಲ್ಲಿ ತಂದೆಯು ಬಂದು ತಮ್ಮ
ಮಕ್ಕಳನ್ನಾಗಿ ಮಾಡಿಕೊಳ್ಳುತ್ತಾರೆ. ಮತ್ತೆ ನೀವು ಏನಾದರೂ ಕುಳಿತು ತಂದೆಯನ್ನು ಪೂಜಿಸುತ್ತೀರೇನು!
ತಂದೆಯೇ ಬಂದು ಮಕ್ಕಳನ್ನು ಹೂಗಳನ್ನಾಗಿ ಮಾಡುತ್ತಾರೆ. ಬಂಧನದಿಂದ ಬಿಡಿಸುತ್ತಾರೆ. ಮತ್ತೆ ನೀವು
ನಾವು ಎಂದೂ ಪತಿತರಾಗುವುದಿಲ್ಲವೆಂದು ಪ್ರತಿಜ್ಞೆಯನ್ನೂ ಮಾಡುತ್ತೀರಿ. ತಂದೆಯು ಹೇಳುತ್ತಾರೆ -
ಮಡಿಲಿಗೆ ಬಂದ ನಂತರ ಮುಖವನ್ನು ಕಪ್ಪಾಗಿ ಮಾಡಿಕೊಳ್ಳಬೇಡಿ. ಒಂದುವೇಳೆ ಮಾಡಿಕೊಂಡರೇ
ಕುಲಕಳಂಕಿತರಾಗುತ್ತೀರಿ. ಸೋಲುವುದರಿಂದ ಮಾಲೀಕನ ಹೆಸರು ಹಾಳಾಗಿ ಬಿಡುತ್ತದೆ. ಮಾಯೆಯ ಜೊತೆ ಸೋತರೆ
ಪದವಿಯನ್ನು ಕಳೆದುಕೊಳ್ಳುತ್ತೀರಿ ಹಾಗೂ ಮತ್ತ್ಯಾವ ಸನ್ಯಾಸಿಗಳೂ ಈ ಮಾತುಗಳನ್ನು ತಿಳಿಸುವುದಿಲ್ಲ.
ಕೆಲವರು ತಿಳಿಸುತ್ತಾರೆ ತಿಂಗಳಿಗೆ ಒಮ್ಮೆ ವಿಕಾರದಲ್ಲಿ ಹೋಗಬಹುದೆಂದು, ಇನ್ನೂ ಕೆಲವರು
ತಿಳಿಸುತ್ತಾರೆ 6 ತಿಂಗಳಿಗೆ ಒಮ್ಮೆ ವಿಕಾರದಲ್ಲಿ ಹೋಗಬಹುದೆಂದು. ಕೆಲವರಂತು ಬಹಳ ಅಜಮಿಳಂತಹ
ಪಾಪಿಗಳಾಗಿರುತ್ತಾರೆ. ಬ್ರಹ್ಮಾ ತಂದೆ ಅನೇಕ ಗುರುಗಳನ್ನು ಮಾಡಿಕೊಂಡಿದ್ದರು. ಸನ್ಯಾಸಿಗಳೆಂದೂ
ಪವಿತ್ರರಾಗಿರಿ ಎಂದು ಹೇಳುವುದಿಲ್ಲ. ತಿಳಿದುಕೊಳ್ಳುತ್ತಾರೆ ನಾವೇ ಪವಿತ್ರರಾಗಿರಲು ಸಾಧ್ಯವಿಲ್ಲ
ಎಂದು. ಬುದ್ಧಿವಂತರು ತಕ್ಷಣ ಕೇಳುತ್ತಾರೆ - ನೀವೇ ಪವಿತ್ರರಾಗಿರಲು ಸಾಧ್ಯವಿಲ್ಲವೆಂದಾಗ ನಮಗೆ
ಹೇಗೆ ಹೇಳುತ್ತೀರಿ, ಆದರೂ ಸಹ ಕೇಳುತ್ತಾರೆ ಜನಕನ ಹಾಗೆ ಸೆಕೆಂಡಿನಲ್ಲಿ ಜೀವನ್ಮುಕ್ತಿಯ
ಮಾರ್ಗವನ್ನು ತಿಳಿಸಿ ಎಂದು. ಆಗ ಗುರುಗಳು ತಿಳಿಸುತ್ತಾರೆ ಬ್ರಹ್ಮತತ್ವವನ್ನು ನೆನಪು
ಮಾಡುವುದರಿಂದ ನೀವು ನಿರ್ವಾಣಧಾಮಕ್ಕೆ ಹೋಗುತ್ತೀರಿ. ಆದರೆ ಹೋಗಲು ಯಾರಿಗೂ ತಾಕತ್ ಇರುವುದಿಲ್ಲ.
ಎಲ್ಲಾ ಆತ್ಮಗಳು ಇರುವ ಸ್ಥಾನ ಮೂಲವತನವಾಗಿದೆ, ಎಲ್ಲಿ ನಾವಾತ್ಮಗಳೆಲ್ಲಾ ನಕ್ಷತ್ರ ಸಮಾನ
ಇರುತ್ತೇವೆ. ಇಲ್ಲಿ ಪೂಜೆಗಳಿಗೆಂದು ದೊಡ್ಡ ಲಿಂಗವನ್ನು ಮಾಡುತ್ತಾರೆ. ಬಿಂದುವಿನ ಪೂಜೆವನ್ನು ಹೇಗೆ
ಮಾಡಲು ಸಾಧ್ಯ? ಹೇಳುತ್ತಾರೆ ಭೃಕುಟಿಯ ಮಧ್ಯದಲ್ಲಿ ಒಂದು ಹೊಳೆಯುವ ನಕ್ಷತ್ರವಿದೆ ಎಂದು. ಅಂದಾಗ
ಆತ್ಮನ ತಂದೆಯೂ ಸಹ ಹಾಗೆ ಇರುತ್ತಾರೆ. ತಂದೆಗೆ ದೇಹವಿರುವುದಿಲ್ಲ. ಅಂದಾಗ ಆ ನಕ್ಷತ್ರವನ್ನು ಹೇಗೆ
ಪೂಜೆ ಮಾಡಲು ಸಾಧ್ಯ. ತಂದೆಗೆ ಪರಮಾತ್ಮ ಎಂದು ಹೇಳಲಾಗುತ್ತದೆ. ಅವರು ತಂದೆ ಆಗಿದ್ದಾರೆ. ಹೇಗೆ
ಆತ್ಮ ಇದೆ ಹಾಗೆ ಪರಮಾತ್ಮನೂ ಸಹ ಇದ್ದಾರೆ. ಅವರೇನೂ ದೊಡ್ಡದಾಗಿ ಇರುವುದಿಲ್ಲ. ಅವರಲ್ಲಿ ಎಲ್ಲಾ
ಜ್ಞಾನವಿದೆ. ಈ ಬೇಹದ್ದಿನ ವೃಕ್ಷದ ಬಗ್ಗೆ ಬೇರೆ ಯಾರಿಗೂ ತಿಳಿದಿಲ್ಲ. ತಂದೆನೇ ಜ್ಞಾನ ಸಾಗರ
ಆಗಿದ್ದಾರೆ. ಜ್ಞಾನದಲ್ಲಿ ಸಂಪೂರ್ಣತೆ, ಪವಿತ್ರತೆಯಲ್ಲಿಯೂ ಸಂಪೂರ್ಣರು, ಸರ್ವರ ಸದ್ಗತಿದಾತ,
ಸರ್ವರಿಗೆ ಸುಖ, ಶಾಂತಿ ಕೊಡುತ್ತಾರೆ. ನೀವು ಮಕ್ಕಳಿಗೆ ಎಷ್ಟು ದೊಡ್ಡ ಆಸ್ತಿ ಸಿಗುತ್ತದೆ,
ಮಾತ್ಯಾರಿಗೂ ಸಿಗುವುದಿಲ್ಲ. ಮನುಷ್ಯರಂತು ಅನೇಕ ಗುರುಗಳನ್ನು ಪೂಜೆ ಮಾಡುತ್ತಾರೆ. ತಮ್ಮ
ರಾಜ್ಯಭಾಗ್ಯವನ್ನೂ ಸಹ ಇಷ್ಟು ಪೂಜಿಸುವುದಿಲ್ಲವೆಂದಾಗ ಇದೆಲ್ಲವೂ ಸಹ ಅಂಧಶ್ರದ್ದೆ ಆಗಿದೆ.
ಏನೇನೆಲ್ಲಾ ಮಾಡುತ್ತಾರೆ. ಎಲ್ಲರಲ್ಲೂ ಅಜ್ಞಾನವೇ ತುಂಬಿದೆ. ಕೃಷ್ಣನಿಗೆ ಲಾರ್ಡ್ ಅಂತಲೂ
ಕರೆಯುತ್ತಾರೆ, ಗಾಡ್ ಅಂತಲೂ ಹೇಳುತ್ತಾರೆ. ಲಾರ್ಡ್ ಕೃಷ್ಣ ಸ್ವರ್ಗದ ಮೊದಲನೆಯ ರಾಜಕುಮಾರ,
ಲಕ್ಷ್ಮೀ-ನಾರಾಯಣರಿಗೆ ಹೇಳುತ್ತಾರೆ ಇವರಿಬ್ಬರು ದೇವಾನುದೇವತೆಗಳು ಎಂದು. ಹಳೆಯ ಚಿತ್ರಗಳನ್ನು
ಬಹಳ ಕೊಂಡುಕೊಳ್ಳುತ್ತಾರೆ. ಹಳೆಯ ಸ್ಟಾಂಪ್ಸನ್ನು ಖರೀದಿ ಮಾಡುತ್ತಾರಲ್ಲವೇ. ವಾಸ್ತವದಲ್ಲಿ
ಎಲ್ಲರಿಗಿಂತ ಹಳಬರು ಶಿವಬಾಬಾ ಆಗಿದ್ದಾರೆ ಆದರೆ ಯಾರಿಗೂ ತಿಳಿದಿಲ್ಲ. ಮಹಿಮೆಯಂತು
ಶಿವತಂದೆಯದಾಗಿದೆ. ಈ ವಸ್ತು ಯಾರಿಗೂ ಸಿಗುವುದಿಲ್ಲ. ಎಲ್ಲದಕ್ಕಿಂತ ಹಳೆಯ ವಸ್ತು ಯಾವುದು?
ನಂಬರ್ವನ್ ಶಿವಬಾಬಾ. ನಮ್ಮ ತಂದೆ ಯಾರು ಎಂದು ಯಾರೂ ತಿಳಿದುಕೊಳ್ಳುವುದಿಲ್ಲ. ಅವರ ಹೆಸರು, ರೂಪ
ಏನು? ಹೇಳುತ್ತಾರೆ ಅವರಿಗೆ ಹೆಸರು, ರೂಪ ಏನು ಇಲ್ಲವೆಂದು, ಅಂದರೆ ಯಾರಿಗೆ ಪೂಜೆ ಮಾಡುತ್ತಾರೆ.
ಶಿವ ಎಂದು ಹೆಸರಂತೂ ಇದೆಯಲ್ಲವೇ. ದೇಶವೂ ಇದೆ, ಕಾಲವೂ ಇದೆ. ಅವರೇ ಸ್ವಯಂ ತಿಳಿಸುತ್ತಾರೆ - ನಾನು
ಸಂಗಮದಲ್ಲಿ ಬರುತ್ತೇನೆ ಎಂದು. ಆತ್ಮ ಶರೀರದ ಮುಖಾಂತರ ಮಾತನಾಡುತ್ತದೆಯಲ್ಲವೇ. ಈಗ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ಶಾಸ್ತ್ರಗಳಲ್ಲಿ ಎಷ್ಟು ದಂತ ಕಥೆಗಳನ್ನು ಮಾಡಿದ್ದಾರೆ, ಇದರಿಂದ ಎಲ್ಲರೂ
ಇಳಿಯುವ ಕಲೆಯಲ್ಲಿ ಬಂದು ಬಿಟ್ಟರು. ಏರುವ ಕಲೆ ಸತ್ಯಯುಗ, ತ್ರೇತಾ, ಇಳಿಯುವ ಕಲೆ ದ್ವಾಪರ,
ಕಲಿಯುಗ. ಈಗ ಪುನಃ ಏರುವ ಕಲೆಯಲ್ಲಿ ಬರುತ್ತಾರೆ. ತಂದೆಯ ವಿನಃ ಯಾರೂ ಏರುವ ಕಲೆಯಲ್ಲಿ ಬರಲು
ಸಾಧ್ಯವಿಲ್ಲ. ಈ ಎಲ್ಲಾ ಮಾತುಗಳನ್ನು ಧಾರಣೆ ಮಾಡಬೇಕಾಗಿದೆ. ಅಂದಾಗ ಯಾವುದೇ ಕರ್ಮವನ್ನು ಮಾಡುತ್ತಾ
ನೆನಪಿನಲ್ಲಿ ಇರಬೇಕು. ಹೇಗೆ ಶ್ರೀನಾಥ ಮಂದಿರದಲ್ಲಿ ಬಾಯಿಗೆ ಬಟ್ಟೆಯನ್ನು ಕಟ್ಟಿಕೊಂಡು ಕೆಲಸವನ್ನು
ಮಾಡುತ್ತಾರೆ. ಶ್ರೀನಾಥ ಎಂದು ಕೃಷ್ಣನಿಗೆ ಹೇಳಲಾಗುತ್ತದೆ. ಶ್ರೀನಾಥನಿಗೆ ಭೋಜನವನ್ನು
ತಯಾರಿಸಲಾಗುತ್ತದೆ. ಶಿವ ತಂದೆಯಂತು ಭೋಜನವನ್ನು ತಿನ್ನುವುದಿಲ್ಲ. ನೀವು ಪವಿತ್ರ ಭೋಜನವನ್ನು
ತಯಾರಿಸುತ್ತೀರೆಂದರೆ ನೆನಪಿನಲ್ಲಿದ್ದು ತಯಾರಿಸಬೇಕು, ಇದರಿಂದ ಶಕ್ತಿ ಸಿಗುತ್ತದೆ. ಕೃಷ್ಣನ
ಲೋಕಕ್ಕೆ ಹೋಗಲು ವ್ರತ ಇತ್ಯಾದಿಗಳನ್ನು ಮಾಡುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ - ನಾವು
ಕೃಷ್ಣಪುರಿಗೆ ಹೋಗುತ್ತೇವೆಂದು. ಆ ಕಾರಣ ನೀವು ಯೋಗ್ಯರಾಗಬೇಕಾಗಿದೆ. ನೀವು ತಂದೆಯನ್ನು ನೆನಪು
ಮಾಡುತ್ತೀರೆಂದರೆ ತಂದೆ ಭರವಸೆ ಕೊಡುತ್ತಾರೆ ನೀವು ಖಂಡಿತ ಕೃಷ್ಣ ಪುರಿಗೆ ಹೋಗುತ್ತೀರೆಂದು. ನೀವು
ತಿಳಿದುಕೊಂಡಿದ್ದೀರಿ-ನಾವು ನಮಗೋಸ್ಕರ ಕೃಷ್ಣ ಪುರಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ, ಪುನಃ ನಾವೇ
ರಾಜ್ಯ ಮಾಡುತ್ತೇವೆ. ಯಾರು ಶ್ರೀಮತದಂತೆ ನಡೆಯುತ್ತಾರೆ ಅವರೇ ಕೃಷ್ಣ ಪುರಿಯಲ್ಲಿ ಬರುತ್ತಾರೆ.
ಲಕ್ಷ್ಮೀ-ನಾರಾಯಣರಗಿಂತಲೂ ಕೃಷ್ಣನ ಹೆಸರು ತುಂಬಾ ಪ್ರಸಿದ್ಧವಾಗಿದೆ. ಕೃಷ್ಣ ಚಿಕ್ಕ ಮಗುವಾದರೂ
ಮಹಾತ್ಮನ ಸಮಾನ. ಬಾಲ ಅವಸ್ಥೆಯಲ್ಲಿ ಸತೋಪ್ರಧಾನವಾಗಿರುತ್ತದೆ, ಆ ಕಾರಣ ಕೃಷ್ಣನ ಹೆಸರು
ಪ್ರಸಿದ್ಧವಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ
ಸುಪ್ರಭಾತ.ಆತ್ಮೀಯ ತಂದೆ ಆತ್ಮೀಯ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಮ್ಮ
ಸಂಪೂರ್ಣ ಸಂಬಂಧವನ್ನು ಒಬ್ಬ ಶಿವ ತಂದೆಯ ಜೊತೆ ಇರಬೇಕು. ಎಂದೂ ಯಾವ ದೇಹಧಾರಿಯನ್ನು ನೆನಪು
ಮಾಡಬಾರದು. ಎಂದೂ ತಮ್ಮ ಮಾಲೀಕನ ಹೆಸರಿಗೆ ಕಳಂಕ ತರಬಾರದು.
2. ತಮ್ಮ ಮುಖಾಂತರ
ಯಾರಿಗಾದರೂ ಕಲ್ಯಾಣವಾದರೆ, ಆಗ ನಾನು ಇವರಿಗೆ ಕಲ್ಯಾಣ ಮಾಡಿದೆ, ಎನ್ನುವ ಅಹಂಕಾರದಲ್ಲಿ ಬರಬಾರದು.
ಇದೂ ಸಹ ದೇಹಾಭಿಮಾನವಾಗಿದೆ. ಮಾಡಿಸುವಂತಹ ತಂದೆಯನ್ನು ನೆನಪು ಮಾಡಬೇಕು.
ವರದಾನ:
ಅಮೃತವೇಳೆ ಮೂರು
ಬಿಂದುಗಳ ತಿಲಕವನ್ನಿಟ್ಟುಕೊಳ್ಳುವವರು ಏಕೆ, ಏನು ಎಂಬುದರ ಏರುಪೇರಿನಿಂದ ಮುಕ್ತ ಅಚಲ-ಅಡೋಲ ಭವ.
ಬಾಪ್ದಾದಾರವರು ಸದಾ
ಹೇಳುತ್ತಾರೆ - ಪ್ರತಿನಿತ್ಯವೂ ಅಮೃತವೇಳೆಯಲ್ಲಿ ಮೂರು ಬಿಂದುಗಳ ತಿಲಕನ್ನಿಟ್ಟುಕೊಳ್ಳಿರಿ. ತಾವೂ
ಬಿಂದು, ತಂದೆಯೂ ಬಿಂದು, ಏನಾಯಿತೋ ಹಾಗೂ ಏನಾಗುತ್ತಿದೆಯೋ ಹೊಸದೇನಲ್ಲ, ಇದರಲ್ಲಿ ಪೂರ್ಣ ವಿರಾಮವೂ
ಬಿಂದು. ಈ ಮೂರು ಬಿಂದುಗಳ ತಿಲಕವನ್ನು ಇಟ್ಟುಕೊಳ್ಳಿರಿ ಅರ್ಥಾತ್ ಸ್ಮೃತಿಯಲ್ಲಿರಿ. ಆನಂತರ ಇಡೀ
ದಿನದಲ್ಲಿ ಅಚಲ-ಅಡೋಲರಾಗಿ ಇರುತ್ತೀರಿ. ಏಕೆ, ಏನು ಎಂಬುದರ ಏರುಪೇರುಗಳೂ ಸಮಾಪ್ತಿಯಾಗುವವು. ಯಾವ
ಸಮಯದಲ್ಲಿ ಯಾವುದೇ ಮಾತುಂಟಾಗಬಹುದು, ಅದೇ ಸಮಯದಲ್ಲಿ ಬಿಂದುವಿನ್ನಿಡಿ. ಹೊಸದೇನಲ್ಲ, ಆಗಬೇಕಿತ್ತು,
ಆಗುತ್ತಿದೆ.... ಸಾಕ್ಷಿಯಾಗಿದ್ದು ನೋಡಿ ಹಾಗೂ ಮುಂದುವರೆಯುತ್ತಾ ನಡೆಯಿರಿ.
ಸ್ಲೋಗನ್:
ಪರಿವರ್ತನಾ
ಶಕ್ತಿಯ ಮೂಲಕ ವ್ಯರ್ಥ ಸಂಕಲ್ಪಗಳ ಪ್ರವಾಹದ ಫೋರ್ಸ್ನ್ನು ಸಮಾಪ್ತಿಗೊಳಿಸುತ್ತೀರೆಂದರೆ
ಸಮರ್ಥರಾಗುವಿರಿ.