09.10.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯೊಂದಿಗೆ ಮಧುರಾತಿ ಮಧುರವಾಗಿ ಮಾತನಾಡಿ, ವಿಚಾರ ಸಾಗರ ಮಂಥನ ಮಾಡಲು ಮುಂಜಾನೆಯ ಸಮಯವು ಬಹಳ ಒಳ್ಳೆಯದಾಗಿರುತ್ತದೆ"

ಪ್ರಶ್ನೆ:
ಭಕ್ತರೂ ಸಹ ಭಗವಂತನನ್ನು ಸರ್ವಶಕ್ತಿವಂತನೆಂದು ಹೇಳುತ್ತಾರೆ ಮತ್ತು ನೀವು ಮಕ್ಕಳೂ ಹೇಳುತ್ತೀರಿ ಆದರೆ ಇಬ್ಬರಲ್ಲಿ ಅಂತರವೇನಾಗಿದೆ?

ಉತ್ತರ:
ಭಗವಂತನು ಏನು ಬೇಕಾದರೂ ಮಾಡಬಲ್ಲರು, ಎಲ್ಲವೂ ಅವರ ಕೈಯಲ್ಲಿದೆ ಎಂದು ಭಕ್ತರು ಹೇಳುತ್ತಾರೆ. ಆದರೆ ನೀವು ತಿಳಿದುಕೊಂಡಿದ್ದೀರಿ - ತಂದೆಯು ಹೇಳಿದ್ದಾರೆ, ನಾನೂ ಸಹ ಡ್ರಾಮಾದ ಬಂಧನದಲ್ಲಿ ಬಂಧಿತನಾಗಿದ್ದೇನೆ. ಡ್ರಾಮಾ ಸರ್ವಶಕ್ತಿವಂತನಾಗಿದೆ. ತಂದೆಗೆ ಏಕೆ ಸರ್ವಶಕ್ತಿವಂತನೆಂದು ಹೇಳಲಾಗುತ್ತದೆಯಂದರೆ ಅವರ ಬಳಿ ಸರ್ವರಿಗೆ ಸದ್ಗತಿ ನೀಡುವ ಶಕ್ತಿಯಿದೆ. ಇಂತಹ ರಾಜ್ಯವನ್ನು ಸ್ಥಾಪನೆ ಮಾಡುತ್ತಾರೆ ಅದನ್ನು ಎಂದೂ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ.

ಓಂ ಶಾಂತಿ.
ಯಾರು ಹೇಳಿದರು? ಶಿವ ತಂದೆ. ಓಂ ಶಾಂತಿ - ಇದನ್ನು ಯಾರು ಹೇಳಿದರು? ದಾದಾ. ಈಗ ನೀವು ಮಕ್ಕಳು ಇದನ್ನು ಅರ್ಥ ಮಾಡಿಕೊಂಡಿದ್ದೀರಿ. ಸರ್ವ ಶ್ರೇಷ್ಠ ತಂದೆಯ ಮಹಿಮೆಯು ಬಹಳ ಇದೆ. ಅವರು ಸರ್ವಶಕ್ತಿವಂತನಾಗಿದ್ದಾರೆ, ಏನು ತಾನೇ ಮಾಡಲು ಸಾಧ್ಯವಿಲ್ಲವೆಂದು ಹೇಳುತ್ತಾರೆ. ಆ ಭಕ್ತಿಮಾರ್ಗದವರಂತೂ ಸರ್ವಶಕ್ತಿವಂತನ ಅರ್ಥವನ್ನು ಬಹಳ ದೊಡ್ಡದಾಗಿ ತೆಗೆಯುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಎಲ್ಲವೂ ನಾಟಕದನುಸಾರವೇ ನಡೆಯುತ್ತದೆ, ನಾನು ಏನನ್ನೂ ಮಾಡುವುದಿಲ್ಲ. ನಾನೂ ಸಹ ಡ್ರಾಮಾದ ಬಂಧನದಲ್ಲಿ ಬಂಧಿತನಾಗಿದ್ದೇನೆ, ಕೇವಲ ನೀವು ತಂದೆಯನ್ನು ನೆನಪು ಮಾಡುವುದರಿಂದ ಸರ್ವಶಕ್ತಿವಂತರಾಗಿ ಬಿಡುತ್ತೀರಿ. ಪವಿತ್ರರಾಗುವುದರಿಂದ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ. ತಂದೆಯು ಸರ್ವಶಕ್ತಿವಂತನಾಗಿದ್ದಾರೆ, ಅವರು ಕಲಿಸಬೇಕಾಗುತ್ತದೆ - ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ ನಂತರ ಸರ್ವಶಕ್ತಿವಂತರಾಗಿ ವಿಶ್ವದ ಮೇಲೆ ರಾಜ್ಯಭಾರ ಮಾಡುವಿರಿ. ಶಕ್ತಿಯೇ ಇಲ್ಲವೆಂದರೆ ರಾಜ್ಯವನ್ನು ಹೇಗೆ ಮಾಡುತ್ತೀರಿ? ಶಕ್ತಿಯು ಯೋಗದಿಂದಲೇ ಸಿಗುತ್ತದೆ. ಆದ್ದರಿಂದ ಭಾರತದ ಪ್ರಾಚೀನ ಯೋಗವು ಬಹಳ ಪ್ರಸಿದ್ಧವಾಗಿದೆ. ನೀವು ಮಕ್ಕಳು ನಂಬರ್ವಾರ್ ನೆನಪು ಮಾಡಿ ಖುಷಿಯಲ್ಲಿ ಬರುತ್ತೀರಿ. ನಿಮಗೆ ತಿಳಿದಿದೆ - ನಾವಾತ್ಮಗಳು ತಂದೆಯನ್ನು ನೆನಪು ಮಾಡುವುದರಿಂದ ವಿಶ್ವದ ಮೇಲೆ ರಾಜ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೇವೆ, ಅದನ್ನು ಕಸಿದುಕೊಳ್ಳಲು ಯಾರಿಗೂ ಶಕ್ತಿಯಿರುವುದಿಲ್ಲ. ಸರ್ವ ಶ್ರೇಷ್ಠ ತಂದೆಯ ಮಹಿಮೆಯನ್ನು ಎಲ್ಲರೂ ಮಾಡುತ್ತಾರೆ ಆದರೆ ತಿಳಿದುಕೊಂಡಿಲ್ಲ. ಇದು ನಾಟಕವೆಂದು ತಿಳಿದಿರುವ ಮನುಷ್ಯರು ಯಾರೊಬ್ಬರೂ ಇಲ್ಲ. ಒಂದುವೇಳೆ ಇದು ನಾಟಕವೆಂಬುದನ್ನು ತಿಳಿದುಕೊಂಡಿದ್ದರೆ ಅದರ ಆರಂಭದಿಂದ ಅಂತ್ಯದವರೆಗೂ ನೆನಪಿಗೆ ಬರಬೇಕು. ಇಲ್ಲವಾದರೆ ನಾಟಕವೆಂದು ಹೇಳುವುದೇ ತಪ್ಪಾಗಿ ಬಿಡುತ್ತದೆ. ಇದು ನಾಟಕವಾಗಿದೆ, ನಾವು ಪಾತ್ರವನ್ನಭಿನಯಿಸಲು ಬಂದಿದ್ದೇವೆಂದು ಹೇಳುತ್ತಾರೆ ಅಂದಮೇಲೆ ಆ ನಾಟಕದ ಆದಿ-ಮಧ್ಯ-ಅಂತ್ಯವನ್ನೂ ತಿಳಿದುಕೊಳ್ಳಬೇಕಲ್ಲವೆ. ನಾವು ಮೇಲಿನಿಂದ ಬರುತ್ತೇವೆ ಆಗಲೇ ವೃದ್ಧಿಯಾಗುತ್ತಾ ಇರುತ್ತದೆ ಎಂಬುದನ್ನೂ ಸಹ ಹೇಳುತ್ತಾರೆ. ಸತ್ಯಯುಗದಲ್ಲಂತೂ ಕೆಲವರೇ ಮನುಷ್ಯರಿದ್ದೆವು, ಇಷ್ಟೆಲ್ಲಾ ಆತ್ಮರು ಎಲ್ಲಿಂದ ಬಂದರು, ಇದು ಅನಾದಿ ಮಾಡಿ-ಮಾಡಲ್ಪಟ್ಟ ಅವಿನಾಶಿ ನಾಟಕವೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಇದು ಆದಿಯಿಂದ ಅಂತ್ಯದವರೆಗೆ ಪುನರಾವರ್ತನೆಯಾಗುತ್ತಿರುತ್ತದೆ. ನೀವು ಚಲನಚಿತ್ರವನ್ನು ಆರಂಭದಿಂದ ಅಂತ್ಯದವರೆಗೆ ನೋಡಿರಿ ಮತ್ತೆ ಎರಡನೇ ಬಾರಿ ತಿರುಗಿಸಿ ನೋಡಿದಾಗ ಚಕ್ರವು ಅದೇರೀತಿ ಪುನರಾವರ್ತನೆಯಾಗುತ್ತದೆ. ಸ್ವಲ್ಪವೂ ಅಂತರವಾಗುವುದಿಲ್ಲ.

ತಂದೆಯು ಮಧುರಾತಿ ಮಧುರ ಮಕ್ಕಳಿಗೆ ಹೇಗೆ ತಿಳಿಸುತ್ತಾರೆ, ಎಷ್ಟು ಮಧುರ ತಂದೆಯಾಗಿದ್ದಾರೆ! ಬಾಬಾ, ತಾವು ಎಷ್ಟು ಮಧುರರಾಗಿದ್ದೀರಿ. ಬಾಬಾ, ಈಗಂತೂ ನಾವು ನಮ್ಮ ಸುಖಧಾಮಕ್ಕೆ ಹೋಗುತ್ತೇವೆ. ಈಗ ಇದು ಅರ್ಥವಾಗಿದೆ - ಆತ್ಮವು ಪಾವನವಾಗಿ ಬಿಟ್ಟರೆ ಅಲ್ಲಿ ಹಾಲೂ ಸಹ ಪಾವನವಾದದ್ದೇ ಸಿಗುತ್ತದೆ. ಶ್ರೇಷ್ಠಾಚಾರಿ ಮಾತೆಯರು ಬಹಳ ಮಧುರರಾಗಿರುತ್ತಾರೆ. ಸಮಯದಲ್ಲಿ ತಾವೇ ಮಕ್ಕಳಿಗೆ ಹಾಲನ್ನು ಕುಡಿಸುತ್ತಾರೆ, ಮಕ್ಕಳು ಅಳುವ ಅವಶ್ಯಕತೆಯಿರುವುದಿಲ್ಲ. ಹೀಗೀಗೆ ಇದನ್ನು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಮುಂಜಾನೆ ತಂದೆಯೊಂದಿಗೆ ಮಧುರವಾಗಿ ಮಾತನಾಡುವುದರಿಂದ ಆನಂದವಾಗುತ್ತದೆ. ಬಾಬಾ ತಾವು ಶ್ರೇಷ್ಠಾಚಾರಿ ರಾಜ್ಯವನ್ನು ಸ್ಥಾಪನೆ ಮಾಡುವ ಎಷ್ಟು ಒಳ್ಳೆಯ ಯುಕ್ತಿಯನ್ನು ತಿಳಿಸುತ್ತೀರಿ. ನಂತರ ನಾವು ಶ್ರೇಷ್ಠಾಚಾರಿಯ ಮಾತೆಯರ ಮಡಿಲಲ್ಲಿ ಹೋಗುತ್ತೇವೆ. ಅನೇಕ ಬಾರಿ ನಾವೇ ಆ ಹೊಸ ಸೃಷ್ಟಿಯಲ್ಲಿ ಹೋಗಿದ್ದೇವೆ. ಈಗ ನಮ್ಮ ಖುಷಿಯ ದಿನಗಳು ಬರುತ್ತವೆ. ಇದು ಖುಷಿಯ ಔಷಧಿಯಾಗಿದೆ. ಆದ್ದರಿಂದ ಗಾಯನವೂ ಇದೆ - ಅತೀಂದ್ರಿಯ ಸುಖವನ್ನು ಕೇಳಬೇಕೆಂದರೆ ಗೋಪ-ಗೋಪಿಯರನ್ನು ಕೇಳಿ ಎಂದು. ಈಗ ನಮಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ತಮ್ಮನ್ನು ಪುನಃ ಸ್ವರ್ಗದ ಮಾಲೀಕರು ಶ್ರೇಷ್ಠಾಚಾರಿಗಳನ್ನಾಗಿ ಮಾಡುತ್ತಾರೆ. ಕಲ್ಪ-ಕಲ್ಪವೂ ನಾವು ನಮ್ಮ ರಾಜ್ಯವನ್ನು ಪಡೆಯುತ್ತೇವೆ, ಸೋಲುತ್ತೇವೆ ಮತ್ತೆ ಜಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೇವೆ. ಈಗ ತಂದೆಯನ್ನು ನೆನಪು ಮಾಡುವುದರಿಂದಲೇ ನಾವು ಜಯ ಪಡೆಯಬೇಕಾಗಿದೆ. ನಂತರ ನಾವು ಪಾವನರಾಗಿ ಬಿಡುತ್ತೇವೆ. ಅಲ್ಲಿ ಯುದ್ಧ, ದುಃಖದ ಹೆಸರುಗಳೂ ಇರುವುದಿಲ್ಲ, ಯಾವುದೇ ಖರ್ಚೂ ಇಲ್ಲ. ಭಕ್ತಿಮಾರ್ಗದಲ್ಲಿ ಜನ್ಮ-ಜನ್ಮಾಂತರ ಎಷ್ಟೊಂದು ಖರ್ಚು ಮಾಡಿದೆವು, ಎಷ್ಟು ಅಲೆದಾಡಿದೆವು, ಎಷ್ಟೊಂದು ಮಂದಿ ಗುರುಗಳನ್ನು ಮಾಡಿಕೊಂಡೆವು. ಈಗ ಇನ್ನು ಅರ್ಧಕಲ್ಪದವರೆಗೆ ನಾವು ಯಾರನ್ನೂ ಗುರುಗಳನ್ನಾಗಿ ಮಾಡಿಕೊಳ್ಳುವುದಿಲ್ಲ, ಶಾಂತಿಧಾಮ-ಸುಖಧಾಮಕ್ಕೆ ಹೋಗುತ್ತೇವೆ. ತಂದೆಯು ತಿಳಿಸುತ್ತಾರೆ - ನೀವು ಸುಖಧಾಮದ ಯಾತ್ರಿಕರಾಗಿದ್ದೀರಿ, ಈಗ ದುಃಖಧಾಮದಿಂದ ಸುಖಧಾಮದಲ್ಲಿ ಹೋಗಬೇಕಾಗಿದೆ. ವಾಹ್! ನಮ್ಮ ತಂದೆಯೇ ನಮಗೆ ಹೇಗೆ ಓದಿಸುತ್ತಿದ್ದಾರೆ! ನಮ್ಮ ನೆನಪಾರ್ಥವೂ ಇಲ್ಲಿದೆ, ಇದು ಬಹಳ ಅದ್ಭುತವಾಗಿದೆ. ಈ ದಿಲ್ವಾಡಾ ಮಂದಿರದ ಅಪರಮಪಾರ ಮಹಿಮೆಯಿದೆ. ನಾವೀಗ ರಾಜಯೋಗವನ್ನು ಕಲಿಯುತ್ತೇವೆ. ಅದರ ನೆನಪಾರ್ಥವು ಅವಶ್ಯವಾಗಿ ಆಗುತ್ತದೆಯಲ್ಲವೆ. ಇದು ಚಾಚೂ ತಪ್ಪದೇ ನಮ್ಮದೇ ನೆನಪಾರ್ಥವಾಗಿದೆ. ಮಮ್ಮಾ-ಬಾಬಾ ಮತ್ತು ಮಕ್ಕಳು ಕುಳಿತಿದ್ದಾರೆ. ಕೆಳಗೆ ಯೋಗವನ್ನು ಕಲಿಯುತ್ತಿದ್ದಾರೆ, ಮೇಲೆ ಸ್ವರ್ಗದ ರಾಜಧಾನಿಯಿದೆ. ವೃಕ್ಷದಲ್ಲಿಯೂ ಎಷ್ಟು ಸ್ಪಷ್ಟವಾಗಿದೆ! ತಂದೆಯು ಸಾಕ್ಷಾತ್ಕಾರ ಮಾಡಿಸಿ ಈ ಚಿತ್ರಗಳನ್ನು ಮಾಡಿಸಿದ್ದಾರೆ. ತಂದೆಯೇ ಸಾಕ್ಷಾತ್ಕಾರ ಮಾಡಿಸಿದರು ಮತ್ತೆ ಅದರಲ್ಲಿ ತಿದ್ದುಪಡಿ ಮಾಡಿದರು. ಎಷ್ಟು ಅದ್ಭುತವಾಗಿದೆ! ಎಲ್ಲವೂ ಹೊಸ ಜ್ಞಾನವಾಗಿದೆ. ಈ ಜ್ಞಾನವು ಯಾರಿಗೂ ತಿಳಿದಿಲ್ಲ, ತಂದೆಯೇ ಕುಳಿತು ತಿಳಿಸುತ್ತಾರೆ. ಮನುಷ್ಯರು ಎಷ್ಟೊಂದು ತಮೋಪ್ರಧಾನರಾಗುತ್ತಾ ಹೋಗುತ್ತಾರೆ. ಮನುಷ್ಯ ಸೃಷ್ಟಿಯು ವೃದ್ಧಿಯಾಗುತ್ತಾ ಹೋಗುತ್ತದೆ. ಭಕ್ತಿಯೂ ಸಹ ವೃದ್ಧಿಯನ್ನು ಹೊಂದುತ್ತಾ-ಹೊಂದುತ್ತಾ ತಮೋಪ್ರಧಾನವಾಗುತ್ತಾ ಹೋಗುತ್ತದೆ. ಇಲ್ಲಿ ನೀವೀಗ ಸತೋಪ್ರಧಾನರಾಗುವ ಪುರುಷಾರ್ಥ ಮಾಡುತ್ತೀರಿ. ಗೀತೆಯಲ್ಲಿಯೂ ಮನ್ಮನಾಭವ ಎಂಬ ಶಬ್ಧವಿದೆ ಆದರೆ ಕೇವಲ ಭಗವಂತ ಯಾರೆಂಬುದನ್ನು ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳು ಬೆಳಗ್ಗೆ-ಬೆಳಗ್ಗೆ ಎದ್ದು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ - ಮನುಷ್ಯರಿಗೆ ಭಗವಂತನ ಪರಿಚಯವನ್ನು ಹೇಗೆ ಕೊಡುವುದು? ಭಕ್ತಿಯಲ್ಲಿಯೂ ಮನುಷ್ಯರು ಬೆಳಗ್ಗೆ-ಬೆಳಗ್ಗೆ ಎದ್ದು ಕೋಣೆಯಲ್ಲಿ ಕುಳಿತು ಭಕ್ತಿಮಾಡುತ್ತಾರೆ. ಅದೂ ಸಹ ವಿಚಾರ ಸಾಗರ ಮಂಥನವಾಯಿತಲ್ಲವೆ. ಈಗ ನಿಮಗೆ ಜ್ಞಾನದ ಮೂರನೆಯ ನೇತ್ರವು ಸಿಗುತ್ತದೆ. ತಂದೆಯು ಜ್ಞಾನದ ಮೂರನೆಯ ನೇತ್ರ ಕೊಡುವ ಕಥೆಯನ್ನು ತಿಳಿಸುತ್ತಾರೆ. ಇದಕ್ಕೆ ತೀಜರಿ ಕಥೆಯಂತಲೂ ಹೇಳಿದ್ದಾರೆ. ತೀಜರಿ ಕಥೆ, ಅಮರ ಕಥೆ, ಸತ್ಯ ನಾರಾಯಣನ ಕಥೆಯೂ ಪ್ರಸಿದ್ಧವಾಗಿದೆ. ತಿಳಿಸುವವರು ಒಬ್ಬರೇ ತಂದೆಯಾಗಿದ್ದಾರೆ. ಇದು ಮತ್ತೆ ಭಕ್ತಿಮಾರ್ಗದಲ್ಲಿ ನಡೆಯುತ್ತದೆ. ಜ್ಞಾನದಿಂದ ನೀವು ಮಕ್ಕಳು ಸಾಹುಕಾರರಾಗುತ್ತೀರಿ ಆದ್ದರಿಂದ ದೇವತೆಗಳಿಗೆ ಪದಮಾಪತಿಗಳೆಂದು ಹೇಳುತ್ತಾರೆ. ದೇವತೆಗಳು ಬಹಳ ಧನವಂತರು, ಪದಮಾಪತಿಗಳಾಗುತ್ತಾರೆ, ಕಲಿಯುಗವನ್ನೂ ನೋಡಿ ಮತ್ತು ಸತ್ಯಯುಗವನ್ನೂ ನೋಡಿ, ರಾತ್ರಿ-ಹಗಲಿನ ಅಂತರವಿದೆ. ಇಡೀ ಪ್ರಪಂಚವು ಸ್ವಚ್ಛವಾಗುವುದರಲ್ಲಿಯೇ ಸಮಯ ಹಿಡಿಸುತ್ತದೆಯಲ್ಲವೆ. ಇದು ಬೇಹದ್ದಿನ ಪ್ರಪಂಚವಾಗಿದೆ. ಭಾರತವು ಅವಿನಾಶಿ ಖಂಡವಾಗಿದೆ, ಇದೆಂದೂ ಪ್ರಾಯಲೋಪವಾಗುವುದಿಲ್ಲ. ಅರ್ಧ ಕಲ್ಪದವರೆಗೆ ಒಂದೇ ಖಂಡವಿರುತ್ತದೆ ನಂತರ ನಂಬರ್ವಾರ್ ಅನ್ಯ ಖಂಡಗಳೆಲ್ಲವೂ ಬರುತ್ತವೆ. ನೀವು ಮಕ್ಕಳಿಗೆ ಎಷ್ಟೊಂದು ಜ್ಞಾನವು ಸಿಗುತ್ತದೆ. ತಿಳಿಸಿ-ವಿಶ್ವದ ಚರಿತ್ರೆ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ ಎಂಬುದನ್ನು ಬಂದು ತಿಳಿದುಕೊಳ್ಳಿ. ಪ್ರಾಚೀನ ಋಷಿ-ಮುನಿಗಳಿಗೆ ಎಷ್ಟೊಂದು ಮಾನ್ಯತೆಯಿದೆ ಆದರೆ ಅವರೂ ಸಹ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ. ಅವರು ಹಠಯೋಗಿಗಳಾಗಿದ್ದಾರೆ, ಹಾ! ಅವರಲ್ಲಿ ಪವಿತ್ರತೆಯ ಶಕ್ತಿಯಿರುವ ಕಾರಣ ಭಾರತವನ್ನು ಸ್ವಲ್ಪ ತಣಿಸುತ್ತಾರೆ. ಇಲ್ಲವಾದರೆ ಭಾರತವು ಏನಾಗಿ ಬಿಡುತ್ತಿತ್ತೋ ಗೊತ್ತಿಲ್ಲ. ಹೇಗೆ ಮನೆಗೆ ಸುಣ್ಣ-ಬಣ್ಣ ಬಳಿದಾಗ ಶೋಭಿಸುತ್ತದೆ, ಭಾರತವು ಮಹಾನ್ ಪವಿತ್ರವಾಗಿತ್ತು, ಈಗ ಅದೇ ಪತಿತನಾಗಿದೆ. ಅಲ್ಲಿ ನಿಮ್ಮ ಸುಖವು ಬಹಳ ಸಮಯ ನಡೆಯುತ್ತದೆ. ನಿಮ್ಮ ಬಳಿ ಬಹಳ ಹಣವಿರುತ್ತದೆ. ನೀವು ಭಾರತದಲ್ಲಿಯೇ ಇರುತ್ತಿದ್ದಿರಿ, ನಿಮ್ಮದೇ ರಾಜ್ಯವಾಗಿತ್ತು, ಇದು ನೆನ್ನೆಯ ಮಾತಾಗಿದೆ. ನಂತರದಲ್ಲಿ ಅನ್ಯ ಧರ್ಮದವರು ಬಂದಿದ್ದಾರೆ. ಅವರು ಬಂದು ಸ್ವಲ್ಪ ಸುಧಾರಣೆ ಮಾಡಿ ತಮ್ಮ ಹೆಸರನ್ನು ಪ್ರಖ್ಯಾತಗೊಳಿಸಿದ್ದಾರೆ. ಈಗ ಅವರೆಲ್ಲರೂ ಸಹ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಈಗ ನೀವು ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು! ಇವೆಲ್ಲಾ ಮಾತುಗಳನ್ನು ಹೊಸಬರಿಗೆ ತಿಳಿಸಬಾರದು. ಮೊಟ್ಟ ಮೊದಲಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ತಂದೆಯ ನಾಮ, ರೂಪ, ದೇಶ, ಕಾಲವನ್ನು ಅರಿತುಕೊಂಡಿದ್ದೀರಾ? ಶ್ರೇಷ್ಠಾತಿ ಶ್ರೇಷ್ಠ ತಂದೆಯ ಪಾತ್ರವಂತೂ ಪ್ರಸಿದ್ಧವಾಗುತ್ತದೆಯಲ್ಲವೆ. ನೀವೀಗ ತಿಳಿದುಕೊಂಡಿದ್ದೀರಿ, ಆ ತಂದೆಯೇ ನಮಗೆ ಆದೇಶ ನೀಡುತ್ತಿದ್ದಾರೆ - ನೀವು ಪುನಃ ತಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ. ನೀವು ಮಕ್ಕಳು ನನ್ನ ಸಹಯೋಗಿಗಳಾಗಿದ್ದೀರಿ, ಪವಿತ್ರರಾಗುತ್ತೀರಿ. ನಿಮಗಾಗಿ ಪವಿತ್ರ ಪ್ರಪಂಚವು ಖಂಡಿತ ಸ್ಥಾಪನೆಯಾಗಬೇಕಾಗಿದೆ. ನೀವು ಇದನ್ನು ಬರೆಯಿರಿ - ಈ ಹಳೆಯ ಪ್ರಪಂಚವು ಬದಲಾಗುತ್ತಿದೆ, ಈ ಸೂರ್ಯವಂಶೀ-ಚಂದ್ರವಂಶಿಯರ ರಾಜ್ಯವಿರುವುದು. ಅದರ ನಂತರ ರಾವಣ ರಾಜ್ಯವಾಗುವುದು. ಚಿತ್ರಗಳನ್ನು ಕುರಿತು ತಿಳಿಸಿಕೊಡುವುದು ಬಹಳ ಚೆನ್ನಾಗಿರುತ್ತದೆ. ಇದರಲ್ಲಿ ತಿಥಿ-ತಾರೀಖು ಎಲ್ಲವೂ ಬರೆಯಲ್ಪಟ್ಟಿದೆ. ಭಾರತದ ಪ್ರಾಚೀನ ರಾಜಯೋಗವೆಂದರೆ ಇದು ನೆನಪಾಗಿದೆ. ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ವಿದ್ಯೆಯಿಂದ ಪದವಿ ಸಿಗುತ್ತದೆ. ದೈವೀ ಗುಣಗಳನ್ನೂ ಸಹ ಧಾರಣೆ ಮಾಡಬೇಕಾಗಿದೆ. ಹಾ! ಇದಂತೂ ಖಂಡಿತವಾಗಿದೆ ಮಾಯೆಯ ಬಿರುಗಾಳಿಗಳು ಬರುತ್ತವೆ, ಮುಂಜಾನೆ ಎದ್ದು ತಂದೆಯೊಂದಿಗೆ ಮಾತನಾಡುವುದು ಬಹಳ ಒಳ್ಳೆಯದಾಗಿದೆ. ಭಕ್ತಿ ಮತ್ತು ಜ್ಞಾನ-ಎರಡಕ್ಕೂ ಮುಂಜಾನೆಯ ಸಮಯವು ಒಳ್ಳೆಯದಾಗಿದೆ. ಮಧುರಾತಿ ಮಧುರವಾಗಿ ಮಾತನಾಡಬೇಕು. ನಾವೀಗ ಶ್ರೇಷ್ಠಾಚಾರಿ ಪ್ರಪಂಚದಲ್ಲಿ ಹೋಗುತ್ತೇವೆ, ನಾವು ಶರೀರವನ್ನು ಬಿಟ್ಟು ಗರ್ಭದಲ್ಲಿ ಹೋಗುತ್ತೇವೆಂದು ವೃದ್ಧರ ಮನಸ್ಸಿನಲ್ಲಿರುತ್ತದೆಯಲ್ಲವೆ. ತಂದೆಯು ಎಷ್ಟೊಂದು ನಶೆ ತರಿಸುತ್ತಾರೆ! ಕುಳಿತು ಹೀಗೆ ತಂದೆಯೊಂದಿಗೆ ಮಾತನಾಡಿದರೂ ಸಹ ನಿಮ್ಮ ಸಂಪಾದನೆಯು ಜಮಾ ಆಗುವುದು. ಶಿವ ತಂದೆಯು ನಮ್ಮನ್ನು ನರಕವಾಸಿಗಳಿಂದ ಸ್ವರ್ಗವಾಸಿಗಳನ್ನಾಗಿ ಮಾಡುತ್ತಿದ್ದಾರೆ. ಮೊಟ್ಟ ಮೊದಲಿಗೆ ನಾವು ಬರುತ್ತೇವೆ, ಇಡೀ ಆಲ್ರೌಂಡ್ ಪಾತ್ರವನ್ನು ನಾವು ಅಭಿನಯಿಸಿದ್ದೇವೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಛೀ ಛೀ ಶರೀರವನ್ನು ಬಿಟ್ಟು ಬಿಡಿ. ದೇಹಸಹಿತ ಇಡೀ ಪ್ರಪಂಚವನ್ನು ಮರೆತು ಹೋಗಿ, ಇದು ಬೇಹದ್ದಿನ ಸನ್ಯಾಸವಾಗಿದೆ. ಸತ್ಯಯುಗದಲ್ಲಿಯೂ ನೀವು ವೃದ್ಧರಾದಾಗ ನಾನೀಗ ಹೋಗಿ ಮಗುವಾಗುತ್ತೇನೆಂದು ಸಾಕ್ಷಾತ್ಕಾರವಾಗುತ್ತದೆ, ಖುಷಿಯಾಗುತ್ತದೆ. ಬಾಲ್ಯವಂತೂ ಎಲ್ಲದಕ್ಕಿಂತ ಒಳ್ಳೆಯದಾಗಿದೆ. ಹೀಗೀಗೆ ಮುಂಜಾನೆಯ ಸಮಯದಲ್ಲಿ ಕುಳಿತು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ, ಇದರಿಂದ ಅನೇಕ ಯುಕ್ತಿಗಳು ಬರುತ್ತವೆ ಆಗ ನಿಮಗೆ ಖುಷಿಯಾಗುತ್ತದೆ. ಖುಷಿಯಲ್ಲಿ ಗಂಟೆ, ಒಂದುವರೆ ಗಂಟೆಯೂ ಕಳೆದು ಹೋಗುತ್ತದೆ. ಎಷ್ಟು ಅಭ್ಯಾಸವಾಗುತ್ತಾ ಹೋಗುವುದೋ ಅಷ್ಟು ಖುಷಿಯು ಹೆಚ್ಚಾಗುತ್ತಾ ಹೋಗುವುದು, ಬಹಳ ಆನಂದವಾಗುತ್ತದೆ ಮತ್ತೆ ನಡೆಯುತ್ತಾ-ತಿರುಗಾಡುತ್ತಲೂ ನೆನಪು ಮಾಡಬೇಕಾಗಿದೆ. ಬಹಳಷ್ಟು ಅವಕಾಶವಿದೆ. ಹಾ! ವಿಘ್ನಗಳಂತು ಬರುತ್ತವೆ ಅದರಲ್ಲಿ ಹೆದರಬಾರದು. ಮನುಷ್ಯರಿಗೆ ವ್ಯಾಪಾರದಲ್ಲಿ ನಿದ್ರೆ ಬರುವುದಿಲ್ಲ. ಯಾರು ಬಿಡುವಾಗಿರುವರೋ ಅವರು ನಿದ್ರೆ ಮಾಡುತ್ತಾರೆ. ನೀವು ಎಷ್ಟು ಸಾಧ್ಯವೋ ಶಿವ ತಂದೆಯನ್ನೇ ನೆನಪು ಮಾಡುತ್ತಾ ಇರಿ. ನಿಮಗೆ ಬುದ್ಧಿಯಲ್ಲಿರಲಿ, ನಾವು ಶಿವ ತಂದೆಗಾಗಿ ಭೋಜನವನ್ನು ತಯಾರಿಸುತ್ತೇವೆ. ಶಿವ ತಂದೆಗಾಗಿ ನಾವಿದನ್ನು ಮಾಡುತ್ತೇವೆ. ಭೋಜನವನ್ನೂ ಸಹ ಬಹಳ ಶುದ್ಧತೆಯಿಂದ ತಯಾರಿಸಬೇಕಾಗಿದೆ. ಯಾವುದೇ ಗಡಿಬಿಡಿಯಾಗುವಂತಹ ಪದಾರ್ಥವಿರಬಾರದು. ಈ ಬಾಬಾರವರೂ ಸಹ ನೆನಪು ಮಾಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯೊಂದಿಗೆ ಮಧುರಾತಿ ಮಧುರವಾಗಿ ಮಾತನಾಡಬೇಕಾಗಿದೆ. ಪ್ರತಿನಿತ್ಯವೂ ಖುಷಿಯ ಔಷಧಿಯನ್ನು ಸೇವಿಸುತ್ತಾ ಅತೀಂದ್ರಿಯ ಸುಖದ ಅನುಭವ ಮಾಡಬೇಕಾಗಿದೆ.

2. ಸತ್ಯಯುಗೀ ರಾಜಧಾನಿಯನ್ನು ಸ್ಥಾಪನೆ ಮಾಡುವುದರಲ್ಲಿ ತಂದೆಗೆ ಪೂರ್ಣ ಸಹಯೋಗಿಗಳಾಗಲು ಪಾವನರಾಗಬೇಕಾಗಿದೆ. ನೆನಪಿನಿಂದ ವಿಕರ್ಮಗಳನ್ನು ವಿನಾಶ ಮಾಡಿಕೊಳ್ಳಬೇಕಾಗಿದೆ. ಭೋಜನವನ್ನು ಶುದ್ಧತೆಯಿಂದ ತಯಾರಿಸಬೇಕಾಗಿದೆ.

ವರದಾನ:
ಸ್ವ-ಸ್ಥಿತಿಯ ಮುಖಾಂತರ ಪರಿಸ್ಥಿತಿಗಳ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಸಂಗಮಯುಗಿ ವಿಜಯಿ ರತ್ನ ಭವ.

ಪರಿಸ್ಥಿತಿಗಳ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳುವ ಸಾಧನವಾಗಿದೆ ಸ್ವ-ಸ್ಥಿತಿ. ಈ ದೇಹವೂ ಸಹ ಪರ (ಬೇರೆ) ಆಗಿದೆ, ಸ್ವ ಅಲ್ಲ. ಸ್ವ ಸ್ಥಿತಿ ಹಾಗೂ ಸ್ವ ಧರ್ಮ ಸದಾ ಸುಖದ ಅನುಭವ ಮಾಡಿಸುತ್ತದೆ ಮತ್ತು ಪ್ರಕೃತಿ-ಧರ್ಮ ಅರ್ಥಾತ್ ಪರ ಧರ್ಮ ಅಥವಾ ದೇಹದ ಸ್ಮೃತಿ ಯಾವುದಾದರೂ ಪ್ರಕಾರದ ದುಃಖದ ಅನುಭವ ಮಾಡಿಸುತ್ತದೆ. ಆದ್ದರಿಂದ ಯಾರು ಸದಾ ಸ್ವ-ಸ್ಥಿತಿಯಲ್ಲಿರುವರು ಅವರು ಸದಾ ಸುಖದ ಅನುಭವ ಮಾಡುವರು, ಅವರ ಬಳಿ ದುಃಖದ ಅಲೆ ಸುಳಿಯಲು ಸಾಧ್ಯವಿಲ್ಲ. ಅವರು ಸಂಗಮಯುಗಿ ವಿಜಯಿ ರತ್ನ ಆಗಿ ಬಿಡುವರು.

ಸ್ಲೋಗನ್:
ಪರಿವರ್ತನೆಯ ಶಕ್ತಿಯ ಮುಖಾಂತರ ವ್ಯರ್ಥ ಸಂಕಲ್ಪಗಳ ಪ್ರವಾಹದ ವೇಗವನ್ನು ಸಮಾಪ್ತಿ ಮಾಡಿ ಬಿಡಿ.


ಮಾತೇಶ್ವರೀಜಿಯವರ ಅಮೂಲ್ಯ ಮಹಾವಾಕ್ಯ

ಈ ಅವಿನಾಶಿ ಈಶ್ವರೀಯ ಜ್ಞಾನ ಪ್ರಾಪ್ತಿ ಮಾಡಿಕೊಳ್ಳಲು ಯಾವುದೇ ಭಾಷೆ ಕಲಿಯುವ ಅಗತ್ಯ ಇಲ್ಲ

ನಮ್ಮ ಈ ಈಶ್ವರೀಯ ಜ್ಞಾನವೇನಿದೆ, ಅದು ಬಹಳ ಸಹಜ ಹಾಗೂ ಮಧುರವಾಗಿದೆ, ಇದರಿಂದ ಜನ್ಮ-ಜನ್ಮಾಂತರಕ್ಕಾಗಿ ಸಂಪಾದನೆ ಜಮಾ ಆಗುವುದು. ಈ ಜ್ಞಾನ ಇಷ್ಟು ಸಹಜವಾಗಿದೆ ಇದನ್ನು ಯಾವುದೇ ಮಹಾನ್ ಆತ್ಮ, ಅಹಲ್ಯೆಯ ತರಹ ಕಲ್ಲು ಬುದ್ಧಿವುಳ್ಳವರು, ಯಾವುದೇ ಧರ್ಮದವರು, ಬಾಲಕರಿಂದ ಹಿಡಿದು ವೃದ್ಧರ ತನಕ ಯಾರು ಬೇಕಾದರೂ ಪ್ರಾಪ್ತಿ ಮಾಡಿಕೊಳ್ಳಬಹುದು. ನೋಡಿ, ಇಷ್ಟು ಸಹಜವಿದ್ದರೂ ಸಹ ಪ್ರಪಂಚದವರು ಈ ಜ್ಞಾನವನ್ನು ಬಹಳ ಕಷ್ಟ ಎಂದು ತಿಳಿಯುತ್ತಾರೆ. ಕೆಲವರು ತಿಳಿಯುತ್ತಾರೆ ಯಾವಾಗ ನಾವು ಬಹಳ ವೇದ, ಶಾಸ್ತ್ರ, ಉಪನಿಷತ್ತು ಓದಿ ದೊಡ್ಡ-ದೊಡ್ಡ ವಿಧ್ವಾಂಸರಾಗುತ್ತೇವೆ ಆಗ ಸಿಗುತ್ತದೆ ಎಂದು, ಅದಕ್ಕಾಗಿ ಮತ್ತೆ ಭಾಷೆ ಕಲಿಯ ಬೆಕಾಗುತ್ತದೆ. ಬಹಳ ಹಠಯೋಗ ಮಾಡಬೇಕಾಗುತ್ತದೆ ಆಗ ಮಾತ್ರ ಪ್ರಾಪ್ತಿಯಾಗಲು ಸಾಧ್ಯ ಎನ್ನುತ್ತಾರೆ, ಆದರೆ ಇದನ್ನಂತೂ ನಮ್ಮ ಅನುಭವದಿಂದ ತಿಳೀದುಕೊಂಡು ಬಿಟ್ಟಿದ್ದೇವೆ. ಈ ಜ್ಞಾನ ಬಹಳ ಸಹಜ ಮತ್ತು ಸರಳವಾಗಿದೆ ಏಕೆಂದರೆ ಸ್ವಯಂ ಪರಮಾತ್ಮ ಓದಿಸುತ್ತಿದ್ದಾರೆ, ಇದರಲ್ಲಿ ಯಾವುದೇ ಹಠಕ್ರೀಯೆ ಇಲ್ಲ, ಜಪ ತಪ ಇಲ್ಲ, ಶಾಸ್ತ್ರವಾದಿ ಪಂಡಿತರಾಗಬೇಕಿಲ್ಲ, ಇದಕ್ಕಾಗಿ ಯಾರೂ ಸಂಸ್ಕೃತ ಭಾಷೆ ಕಲಿಯುವ ಅವಶ್ಯಕತೆ ಇಲ್ಲ, ಇದಂತು ಸ್ವಾಭಾವಿಕ ಆತ್ಮವನ್ನು ತನ್ನ ಪರಮಪಿತ ಪರಮಾತ್ಮನ ಜೊತೆ ಯೋಗ ಜೊಡಿಸುವುದು. ಭಲೆ ಯಾರಾದರೂ ಈ ಜ್ಞಾನವನ್ನು ಧಾರಣೆ ಮಾಡದೆ ಹೋದರೂ ಸಹ ಕೆವಲ ಯೋಗದಿಂದಲೂ ಸಹ ಬಹಳ ಲಾಭ ಆಗುವುದು. ಇದರಿಂದ ಒಂದು ಪವಿತ್ರರಾಗುತ್ತಾರೆ, ಇನ್ನೊಂದು ಕರ್ಮ ಬಂಧನ ಭಸ್ಮೀಭೂತವಾಗುವುದು ಮತ್ತು ಕರ್ಮಾತೀತರಾಗುತ್ತಾರೆ, ಇಷ್ಟು ಶಕ್ತಿಯಿದೆ ಈ ಸರ್ವಶಕ್ತಿವಂತ ಪರಮಾತ್ಮನ ನೆನಪಿನಲ್ಲಿ. ಭಲೆ ತಮ್ಮ ಸಾಕಾರ ಬ್ರಹ್ಮಾ ತಂದೆಯ ತನುವಿನ ಮುಖಾಂತರ ನಮಗೆ ಯೋಗ ಕಲಿಸುತ್ತಿದ್ದಾರೆ. ಆದರೆ ನೆನಪು ಮಾತ್ರ ಡೈರೆಕ್ಟ್ ಆ ಜ್ಯೋತಿ ಸ್ವರೂಪ ಶಿವ ಪರಮಾತ್ಮನನ್ನೆ ಮಾಡಬೇಕು, ಅವರ ನೆನಪಿನಿಂದಲೇ ಕರ್ಮಬಂಧನದ ಮೈಲಿಗೆ ಬಿಟ್ಟು ಹೋಗುತ್ತದೆ. ಒಳ್ಳೆಯದು. ಓಂ ಶಾಂತಿ.