09.10.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಮಾತಾಪಿತರನ್ನು ಫಾಲೋ ಮಾಡಿ ಸಿಂಹಾಸನಾಧೀಶರಾಗಿರಿ, ಇದರಲ್ಲಿ ಯಾವುದೇ ಕಷ್ಟವಿಲ್ಲ, ಕೇವಲ ತಂದೆಯನ್ನು ನೆನಪು ಮಾಡಿರಿ ಮತ್ತು ಪವಿತ್ರರಾಗಿರಿ

ಪ್ರಶ್ನೆ:
ಬಡವರ ಬಂಧು ತಂದೆಯು ತಮ್ಮ ಮಕ್ಕಳ ಭಾಗ್ಯವನ್ನು ರೂಪಿಸುವುದಕ್ಕಾಗಿ ಯಾವ ಸಲಹೆ ನೀಡುತ್ತಾರೆ?

ಉತ್ತರ:
ಮಕ್ಕಳೇ, ಶಿವ ತಂದೆಗೆ ನಿಮ್ಮದೇನೂ ಬೇಕಿಲ್ಲ. ನೀವು ಭಲೆ ತಿನ್ನಿರಿ, ಕುಡಿಯಿರಿ, ಓದಿರಿ, ರಿಫ್ರೆಷ್ ಆಗಿ ಹೋಗಿರಿ ಆದರೆ ಹಿಡಿ ಅವಲಕ್ಕಿಯದೂ ಗಾಯನವಿದೆ. 21 ಜನ್ಮಗಳಿಗಾಗಿ ಸಾಹುಕಾರರಾಗಬೇಕಾಗಿದೆ ಅಂದಮೇಲೆ ಬಡವರ ಒಂದು ಪೈಸೆಯೂ ಸಾಹುಕಾರರ 100 ರೂಪಾಯಿಗಳಿಗೆ ಸರಿಸಮವಾಗಿದೆ. ಆದ್ದರಿಂದ ತಂದೆಯು ಯಾವಾಗ ಡೈರೆಕ್ಟ್ ಬರುತ್ತಾರೆಯೋ ಆಗ ತಮ್ಮದೆಲ್ಲವನ್ನೂ ಸಫಲ ಮಾಡಿಕೊಳ್ಳಿರಿ.

ಗೀತೆ:
ನೀವೇ ಮಾತಾಪಿತಾ ಆಗಿದ್ದೀರಿ.......

ಓಂ ಶಾಂತಿ.
ಗೀತೆಯ ಅರ್ಥವನ್ನಂತೂ ಮಕ್ಕಳು ತಿಳಿದುಕೊಂಡಿರಿ. ಅವರು ಭಲೆ ಕರೆಯುತ್ತಾರೆ ಆದರೆ ತಿಳಿದುಕೊಂಡಿಲ್ಲ. ಅವರು ನಮ್ಮ ತಂದೆಯಾಗಿದ್ದಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ವಾಸ್ತವದಲ್ಲಿ ನಿಮಗಷ್ಟೆ ತಂದೆಯಲ್ಲ, ಎಲ್ಲರಿಗೂ ತಂದೆಯಾಗಿದ್ದಾರೆ, ಇದನ್ನು ತಿಳಿದುಕೊಳ್ಳಬೇಕಾಗಿದೆ. ಯಾರೆಲ್ಲಾ ಆತ್ಮರಿದ್ದಾರೆಯೋ ಅವರೆಲ್ಲರಿಗೂ ತಂದೆಯು ಪರಮಾತ್ಮನಾಗಿದ್ದಾರೆ. ಬಾಬಾ, ಬಾಬಾ ಎಂದು ಹೇಳುವುದರಿಂದ ಅವಶ್ಯವಾಗಿ ಆಸ್ತಿಯ ನೆನಪು ಬರುತ್ತದೆ. ತಂದೆಯನ್ನು ನೆನಪು ಮಾಡುವುದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ, ಮಕ್ಕಳೇ ಈಗ ನೀವಾತ್ಮರು ಪತಿತರಾಗಿ ಬಿಟ್ಟಿದ್ದೀರಿ, ಈಗ ಆತ್ಮವನ್ನು ಪಾವನ ಮಾಡಿಕೊಳ್ಳಬೇಕಾಗಿದೆ. ಎಲ್ಲರ ತಂದೆಯಾಗಿದ್ದಾರೆ ಅಂದಮೇಲೆ ಮಕ್ಕಳು ಅವಶ್ಯವಾಗಿ ನಿರ್ವಿಕಾರಿ ಆಗಿರಬೇಕು. ಒಂದಾನೊಂದು ಸಮಯದಲ್ಲಿ ಎಲ್ಲರೂ ನಿರ್ವಿಕಾರಿಯಾಗಿದ್ದರು. ತಂದೆಯೇ ತಿಳಿಸುತ್ತಾರೆ - ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಎಲ್ಲರೂ ನಿರ್ವಿಕಾರಿಗಳಾಗಿದ್ದರು. ಇಷ್ಟೆಲ್ಲಾ ಮನುಷ್ಯಾತ್ಮರನ್ನು ನೋಡುತ್ತೀರಿ, ಅವರೆಲ್ಲರೂ ನಿರ್ವಿಕಾರಿಯಾಗಿದ್ದರು ಏಕೆಂದರೆ ಶರೀರವು ವಿನಾಶವಾಗಿ ಬಿಡುವುದು. ಬಾಕಿ ಆತ್ಮರು ಹೋಗಿ ನಿರಾಕಾರಿ ಪ್ರಪಂಚದಲ್ಲಿರುತ್ತಾರೆ. ಅಲ್ಲಿ ವಿಕಾರದ ಹೆಸರು-ಗುರುತು ಇರುವುದಿಲ್ಲ, ಶರೀರವೇ ಇರುವುದಿಲ್ಲ. ಅಲ್ಲಿಂದಲೇ ಎಲ್ಲಾ ಆತ್ಮರು ಈ ಪ್ರಪಂಚದಲ್ಲಿ ಪಾತ್ರವನ್ನು ಅಭಿನಯಿಸಲು ಬರುತ್ತಾರೆ. ಮೊಟ್ಟ ಮೊದಲು ಭಾರತವಾಸಿಗಳೇ ಬರುತ್ತಾರೆ. ಭಾರತದಲ್ಲಿ ಮೊಟ್ಟ ಮೊದಲು ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಆಗ ಮತ್ತೆಲ್ಲಾ ಧರ್ಮದವರು ನಿರಾಕಾರಿ ಪ್ರಪಂಚದಲ್ಲಿದ್ದರು, ಈ ಸಮಯದಲ್ಲಿ ಎಲ್ಲರೂ ಸಾಕಾರಿ ಪ್ರಪಂಚದಲ್ಲಿದ್ದಾರೆ. ಈಗ ತಂದೆಯು ನೀವು ಮಕ್ಕಳನ್ನು ನಿರ್ವಿಕಾರಿ ದೇವಿ-ದೇವತೆಗಳನ್ನಾಗಿ ಮಾಡಲು ನಿರ್ವಿಕಾರಿಗಳನ್ನಾಗಿ ಮಾಡುತ್ತಾರೆ. ನೀವು ದೇವಿ-ದೇವತೆಗಳು ಆಗಿ ಬಿಡುತ್ತೀರೆಂದರೆ ನಿಮಗಾಗಿ ಹೊಸ ಪ್ರಪಂಚ ಬೇಕು, ಹಳೆಯ ಪ್ರಪಂಚ ಸಮಾಪ್ತಿಯಾಗಬೇಕು. ಶಾಸ್ತ್ರಗಳಲ್ಲಿ ಮಹಾಭಾರತ ಯುದ್ಧವನ್ನೂ ತೋರಿಸಿದ್ದಾರೆ. ಐದು ಜನ ಪಾಂಡವರು ಮಾತ್ರ ಉಳಿದರು, ಅವರೂ ಸಹ ಪರ್ವತಗಳ ಮೇಲೆ ಹೋಗಿ ಕರಗಿದರು. ಯಾರೂ ಉಳಿಯಲಿಲ್ಲವೆಂದು ತೋರಿಸುತ್ತಾರೆ. ಒಳ್ಳೆಯದು, ಇಷ್ಟೆಲ್ಲಾ ಆತ್ಮರು ಎಲ್ಲಿ ಹೋದರು ಏಕೆಂದರೆ ಆತ್ಮವಂತೂ ವಿನಾಶ ಹೊಂದುವುದಿಲ್ಲ. ಅಂದಾಗ ನಿರಾಕಾರಿ, ನಿರ್ವಿಕಾರಿ ಪ್ರಪಂಚದಲ್ಲಿ ಹೋದರೆಂದು ಹೇಳುತ್ತಾರೆ. ತಂದೆಯು ವಿಕಾರಿ ಪ್ರಪಂಚದಿಂದ ನಿರಾಕಾರಿ, ನಿರ್ವಿಕಾರಿ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ತಂದೆಯಿಂದ ಅವಶ್ಯವಾಗಿ ಆಸ್ತಿ ಸಿಗಬೇಕಾಗಿದೆ. ಈಗ ದುಃಖವು ಹೆಚ್ಚಾಗಿ ಬಿಟ್ಟಿದೆ, ಈ ಸಮಯದಲ್ಲಿ ನಮಗೆ ಸುಖ-ಶಾಂತಿ ಎರಡೂ ಬೇಕಾಗಿದೆ. ಭಗವಂತನೊಂದಿಗೇ ಎಲ್ಲರೂ ಹೇ ಭಗವಂತ ನಮಗೆ ಸುಖ ಕೊಡಿ, ಶಾಂತಿ ಕೊಡಿ ಎಂದು ಬೇಡುತ್ತಾರೆ. ಪ್ರತಿಯೊಬ್ಬ ಮನುಷ್ಯನೂ ಹಣಕ್ಕಾಗಿ ಪುರುಷಾರ್ಥ ಮಾಡುತ್ತಾನೆ, ಹಣವಿದ್ದರೆ ಸುಖವಿದೆ. ನಿಮಗೆ ಬೇಹದ್ದಿನ ತಂದೆಯು ಬಹಳ ಹಣವನ್ನು ಕೊಡುತ್ತಾರೆ, ನೀವು ಸತ್ಯಯುಗದಲ್ಲಿ ಎಷ್ಟು ಧನವಂತರಾಗಿದ್ದಿರಿ, ವಜ್ರ ವೈಡೂರ್ಯಗಳ ಮಹಲುಗಳಿತ್ತು, ನಾವು ಪುನಃ ಬೇಹದ್ದಿನ ತಂದೆಯಿಂದ ಬೇಹದ್ದಿನ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ಇಡೀ ಪ್ರಪಂಚವಂತೂ ಸ್ವರ್ಗದಲ್ಲಿ ಬರುವುದಿಲ್ಲ, ತಂದೆಯೂ ಸಹ ಭಾರತದಲ್ಲಿಯೇ ಬರುತ್ತಾರೆ, ಭಾರತವಾಸಿಗಳೇ ಈ ಸಮಯದಲ್ಲಿ ನರಕವಾಸಿಗಳಾಗಿದ್ದಾರೆ. ಪುನಃ ತಂದೆಯು ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಭಕ್ತಿಯಲ್ಲಿ ದುಃಖದ ಕಾರಣ ತಂದೆಯನ್ನು ಜನ್ಮ-ಜನ್ಮಾಂತರ ನೆನಪು ಮಾಡಿದೆವು. ಹೇ ಪರಮಪಿತ ಪರಮಾತ್ಮ, ಹೇ ಕಲ್ಯಾಣಕಾರಿ ದುಃಖಹರ್ತ-ಸುಖಕರ್ತ ತಂದೆಯೇ ಎಂದು ಅವರನ್ನು ನೆನಪು ಮಾಡುತ್ತಾರೆ ಅಂದಮೇಲೆ ಅವಶ್ಯವಾಗಿ ಅವರು ಬರುವರಲ್ಲವೆ. ಕೇವಲ ಹಾಗೆಯೇ ನೆನಪು ಮಾಡುವುದಿಲ್ಲ. ಭಗವಂತ ತಂದೆಯು ಬಂದು ಭಕ್ತರಿಗೆ ಫಲ ಕೊಡುವರೆಂದು ತಿಳಿಯುತ್ತಾರೆ ಅಂದಮೇಲೆ ಎಲ್ಲರಿಗೂ ಕೊಡುವರಲ್ಲವೆ. ಅವರು ಎಲ್ಲರಿಗೂ ತಂದೆಯಾಗಿದ್ದಾರಲ್ಲವೆ.

ನಾವು ಸುಖಧಾಮದಲ್ಲಿ ಹೋಗುತ್ತೇವೆ ಉಳಿದೆಲ್ಲರೂ ಶಾಂತಿಧಾಮದಲ್ಲಿ ಹೋಗುವರು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಸುಖಧಾಮದಲ್ಲಿದ್ದಾಗ ಇಡೀ ಸೃಷ್ಟಿಯಲ್ಲಿ ಸುಖ-ಶಾಂತಿಯಿರುತ್ತದೆ. ತಂದೆಗೆ ಮಕ್ಕಳ ಮೇಲೆ ಪ್ರೀತಿಯಿರುತ್ತದೆಯಲ್ಲವೆ. ಮತ್ತೆ ಮಕ್ಕಳಿಗೂ ಸಹ ತಂದೆ-ತಾಯಿಯ ಮೇಲೆ ಪ್ರೀತಿಯಿರುತ್ತದೆ. ನೀವು ಮಾತಾಪಿತಾ ನಾನು ನಿಮ್ಮ ಬಾಲಕ..... ಎಂದೂ ಹಾಡುತ್ತಾರೆ. ಶರೀರದ ಮಾತಾಪಿತರಿದ್ದರೂ ಸಹ ನೀವು ಮಾತಾಪಿತಾ ನಾನು ನಿಮ್ಮ ಬಾಲಕ, ನಿಮ್ಮ ಕೃಪೆಯಿಂದ ಅಪಾರ ಸುಖ ಸಿಗುವುದು ಎಂದು ಹಾಡುತ್ತಾರೆ. ಲೌಕಿಕ ತಂದೆ-ತಾಯಿಗೆ ಈ ರೀತಿ ಹೇಳುವುದಿಲ್ಲ. ಭಲೆ ಅವರೂ ಸಹ ಮಕ್ಕಳನ್ನು ಸಂಭಾಲನೆ ಮಾಡುತ್ತಾರೆ, ಪರಿಶ್ರಮ ಪಡುತ್ತಾರೆ, ಆಸ್ತಿಯನ್ನು ಕೊಡುತ್ತಾರೆ. ವಿವಾಹ ಮಾಡಿಸುತ್ತಾರೆ ಆದರೂ ಸಹ ಅಪಾರ ಸುಖವನ್ನು ಪಾರಲೌಕಿಕ ಮಾತಾಪಿತರೇ ಕೊಡುತ್ತಾರೆ. ನೀವೀಗ ಈಶ್ವರೀಯ ಧರ್ಮದ ಮಕ್ಕಳಾಗಿದ್ದೀರಿ, ಅವರೆಲ್ಲರೂ ಆಸುರೀ ಧರ್ಮದ ಮಕ್ಕಳಾಗಿದ್ದಾರೆ, ಸತ್ಯಯುಗದಲ್ಲಿ ಎಂದೂ ಸಹ ಯಾರೂ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಿಲ್ಲ. ಅಲ್ಲಿ ಸುಖವೇ ಸುಖವಿರುತ್ತದೆ, ದುಃಖದ ಹೆಸರೇ ಇರುವುದಿಲ್ಲ. ನಾನೀಗ ಪುನಃ ನಿಮಗೆ 21 ಪೀಳಿಗೆಗಳಿಗಾಗಿ ಸ್ವರ್ಗದ ಅಪಾರ ಸುಖವನ್ನು ಕೊಡಲು ಬಂದಿದ್ದೇನೆಂದು ತಂದೆಯು ತಿಳಿಸುತ್ತಾರೆ.

ಬೇಹದ್ದಿನ ತಂದೆಯಿಂದ ನಾವು ಸ್ವರ್ಗದ ಅಪಾರ ಸುಖವನ್ನು ಪಡೆಯುತ್ತಿದ್ದೇವೆ ಎಂಬುದು ಈಗ ನೀವು ಮಕ್ಕಳಿಗೆ ತಿಳಿದಿದೆ. ಈ ದುಃಖದ ಬಂಧನಗಳೆಲ್ಲವೂ ಸಮಾಪ್ತಿಯಾಗುತ್ತದೆ. ಸತ್ಯಯುಗದಲ್ಲಿ ಸುಖದ ಸಂಬಂಧವಿರುತ್ತದೆ. ಕಲಿಯುಗದಲ್ಲಿ ದುಃಖದ ಬಂಧನವಿದೆ, ತಂದೆಯು ಸುಖದ ಸಂಬಂಧದಲ್ಲಿ ಕರೆದುಕೊಂಡು ಹೋಗುತ್ತಾರೆ. ಅವರಿಗೇ ದುಃಖಹರ್ತ-ಸುಖಕರ್ತನೆಂದು ಹೇಳಲಾಗುತ್ತದೆ. ತಂದೆಯು ಬಂದು ಮಕ್ಕಳ ಸೇವೆ ಮಾಡುತ್ತಾರೆ, ನಾನು ನಿಮ್ಮ ವಿಧೇಯ ಸೇವಕನಾಗಿದ್ದೇನೆ. ನೀವು ನನ್ನನ್ನು ಅರ್ಧಕಲ್ಪ ಹೇ ತಂದೆಯೇ ಬಂದು ನನಗೆ ಸುಖ ನೀಡಿ ಎಂದು ಕರೆದಿರಿ. ನಾನೀಗ ಸುಖ ನೀಡಲು ಬಂದಿದ್ದೇನೆ ಆದ್ದರಿಂದ ಶ್ರೀಮತದಂತೆ ನಡೆಯಬೇಕಾಗಿದೆ ಎಂದು ತಂದೆಯು ಹೇಳುತ್ತಾರೆ. ಈ ಮೃತ್ಯುಲೋಕವೆಲ್ಲವೂ ಸಮಾಪ್ತಿಯಾಗಲಿವೆ, ಅಮರಲೋಕವು ಸ್ಥಾಪನೆಯಾಗುತ್ತದೆ. ಅಮರಪುರಿಯಲ್ಲಿ ಹೋಗುವುದಕ್ಕಾಗಿ ಅಮರನಾಥ ತಂದೆಯಿಂದ ನೀವು ಅಮರಕಥೆಯನ್ನು ಕೇಳುತ್ತೀರಿ, ಅಲ್ಲಿ ಯಾರೂ ಸಾಯುವುದಿಲ್ಲ. ಇಂತಹವರು ಸತ್ತು ಹೋದರು ಎಂಬ ಮಾತೂ ಸಹ ಬಾಯಿಂದ ಬರುವುದಿಲ್ಲ. ನಾನು ಈ ಜಡಜಡೀಭೂತ ಶರೀರವನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳುತ್ತೇನೆಂದು ಆತ್ಮವು ಹೇಳುತ್ತದೆ, ಅದು ಒಳ್ಳೆಯದೇ ಆಯಿತಲ್ಲವೆ. ಅಲ್ಲಿ ಯಾವುದೇ ರೋಗಗಳಿರುವುದಿಲ್ಲ, ಮೃತ್ಯುಲೋಕದ ಹೆಸರಿರುವುದಿಲ್ಲ. ನಾನು ನಿಮ್ಮನ್ನು ಅಮರಪುರಿಯ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ಅಲ್ಲಿ ನೀವು ರಾಜ್ಯ ಮಾಡುವಾಗ ಮೃತ್ಯುಲೋಕದ ನೆನಪೂ ಬರುವುದಿಲ್ಲ, ಕೆಳಗಿಳಿಯುತ್ತಾ-ಇಳಿಯುತ್ತಾ ನಾವು ಏನಾಗುತ್ತೇವೆ ಎಂಬುದೂ ಸಹ ತಿಳಿದಿರುವುದಿಲ್ಲ. ಒಂದುವೇಳೆ ತಿಳಿದಿದ್ದೇ ಆದರೆ ಸುಖವೇ ಮಾಯವಾಗುವುದು. ಇಲ್ಲಾದರೆ ನೀವು ಇಡೀ ಚಕ್ರವನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಅವಶ್ಯವಾಗಿ ಸ್ವರ್ಗವಿತ್ತು, ಈಗ ನರಕವಾಗಿದೆ ಆದ್ದರಿಂದಲೇ ತಂದೆಯನ್ನು ಕರೆಯುತ್ತಾರೆ. ನೀವಾತ್ಮರು ಶಾಂತಿಧಾಮದ ನಿವಾಸಿಗಳಾಗಿದ್ದೀರಿ, ಇಲ್ಲಿ ಬಂದು ಪಾತ್ರವನ್ನು ಅಭಿನಯಿಸುತ್ತೀರಿ. ಇಲ್ಲಿಂದ ನೀವು ಸಂಸ್ಕಾರವನ್ನು ತೆಗೆದುಕೊಂಡು ಮನೆಗೆ ಹೋಗುತ್ತೀರಿ. ಮತ್ತೆ ಅಲ್ಲಿಂದ ಬಂದು ಹೊಸ ಶರೀರವನ್ನು ಧಾರಣೆ ಮಾಡಿ ರಾಜ್ಯಭಾರ ಮಾಡುವಿರಿ. ಈಗ ನಿಮಗೆ ನಿರಾಕಾರಿ, ಆಕಾರಿ ಮತ್ತು ಸಾಕಾರಿ ಪ್ರಪಂಚದ ಸಮಾಚಾರವನ್ನು ತಿಳಿಸುತ್ತೇನೆ. ಸತ್ಯಯುಗದಲ್ಲಿ ಇದೇನೂ ತಿಳಿದಿರುವುದಿಲ್ಲ. ಅಲ್ಲಿ ಕೇವಲ ರಾಜ್ಯಭಾರ ಮಾಡುತ್ತೀರಿ. ನಾಟಕವನ್ನು ನೀವು ಈ ಸಮಯದಲ್ಲಿಯೇ ತಿಳಿದುಕೊಂಡಿದ್ದೀರಿ. ಸತ್ಯಯುಗಕ್ಕಾಗಿ ನಾವು ಪುರುಷಾರ್ಥ ಮಾಡುತ್ತಿದ್ದೇವೆ, ಸ್ವರ್ಗದಲ್ಲಿ ಹೋಗಲು ಯೋಗ್ಯರಾಗುತ್ತೇವೆಂದು ನೀವಾತ್ಮರಿಗೆ ತಿಳಿದಿದೆ. ತಮ್ಮ ಕಲ್ಯಾಣ ಮತ್ತು ಅನ್ಯರ ಕಲ್ಯಾಣವನ್ನೂ ಮಾಡುತ್ತೀರಿ. ಇದರಿಂದ ಅವರ ಆಶೀರ್ವಾದವು ನಿಮ್ಮ ತಲೆಯ ಮೇಲೆ ಬರುತ್ತಿರುವುದು. ನಿಮ್ಮ ಯೋಜನೆ ನೋಡಿ ಹೇಗಿದೆ! ಈ ಸಮಯದಲ್ಲಿ ಎಲ್ಲರದೂ ತಮ್ಮ ತಮ್ಮದೇ ಆದ ಯೋಜನೆಯಿದೆ, ತಂದೆಯದೂ ಯೋಜನೆಯಿದೆ. ಅವರು ಜಲಾಶಯ ಇತ್ಯಾದಿಗಳನ್ನು ಕಟ್ಟಿಸುತ್ತಾರೆಂದರೆ ವಿದ್ಯುತ್ ಇತ್ಯಾದಿಗಳಾಗಿ ಎಷ್ಟೊಂದು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಅವೆಲ್ಲವೂ ಆಸುರೀ ಯೋಜನೆಗಳಾಗಿವೆ ನಮ್ಮದು ಈಶ್ವರೀಯ ಯೋಜನೆಯಾಗಿದೆ. ಈಗ ಅವರ ಯೋಜನೆಯು ವಿಜಯವನ್ನು ಪಡೆಯುವರೇ? ಅವರು ಪರಸ್ಪರ ಹೊಡೆದಾಡುತ್ತಾರೆ, ಎಲ್ಲರ ಯೋಜನೆಗಳು ಮಣ್ಣು ಪಾಲಾಗುವುದು. ಅವರ್ಯಾರೂ ಸ್ವರ್ಗದ ಸ್ಥಾಪನೆ ಮಾಡುವುದಿಲ್ಲ, ಅವರು ಏನೆಲ್ಲವನ್ನೂ ಮಾಡುವರೋ ದುಃಖಕ್ಕಾಗಿಯೇ ಮಾಡುವರು, ತಂದೆಗೆ ಸ್ವರ್ಗವನ್ನಾಗಿ ಮಾಡುವ ಯೋಜನೆಯಿದೆ. ನರಕವಾಸಿ ಮನುಷ್ಯರು ನರಕದಲ್ಲಿಯೇ ಇರುವುದಕ್ಕಾಗಿ ಯೋಜನೆ ಮಾಡಿಕೊಳ್ಳುತ್ತಾರೆ. ತಂದೆಯದು ಸ್ವರ್ಗವನ್ನಾಗಿ ಮಾಡುವ ಯೋಜನೆಯು ನಡೆಯುತ್ತಿದೆ ಅಂದಮೇಲೆ ನಿಮಗೆ ಎಷ್ಟೊಂದು ಖುಷಿಯಿರಬೇಕು! ನಿಮ್ಮ ಕೃಪೆಯಿಂದ ಅಪಾರ ಸುಖ ಸಿಗುವುದೆಂದು ಹಾಡುತ್ತೀರಿ ಅಂದಮೇಲೆ ಅಂತಹ ಪುರುಷಾರ್ಥ ಮಾಡಿ ಬಿಡಬೇಕಲ್ಲವೆ. ತಂದೆಯು ಹೇಳುತ್ತಾರೆ - ಮಕ್ಕಳೇ, ಏನು ಬೇಕೋ ಅದನ್ನು ಪಡೆದುಕೊಳ್ಳಿ, ವಿಶ್ವದ ಮಹಾರಾಜರು, ರಾಜ-ರಾಣಿಯಾದರೂ ಆಗಿರಿ, ದಾಸ-ದಾಸಿಯಾದರೂ ಆಗಿರಿ. ಎಷ್ಟು ಪುರುಷಾರ್ಥ ಮಾಡುವಿರೋ ಅದು ನಿಮ್ಮ ಮೇಲಿದೆ. ತಂದೆಯು ಕೇವಲ ಇಷ್ಟನ್ನೇ ತಿಳಿಸುತ್ತಾರೆ, ಮೊದಲನೆಯದಾಗಿ ಪವಿತ್ರರಾಗಿರಿ ಮತ್ತು ಪ್ರತಿಯೊಬ್ಬರಿಗೆ ತಂದೆಯ ಪರಿಚಯವನ್ನು ಕೊಡುತ್ತಾ ಇರಿ. ತಂದೆಯನ್ನು ನೆನಪು ಮಾಡಿದರೆ ಆಸ್ತಿಯು ನಿಮ್ಮದಾಗುವುದು. ತಂದೆಯನ್ನು ನೆನಪು ಮಾಡುವುದರಲ್ಲಿಯೇ ಮಾಯೆಯು ಬಹಳ ವಿಘ್ನಗಳನ್ನು ಹಾಕುತ್ತದೆ, ಬುದ್ಧಿಯೋಗವನ್ನು ತುಂಡರಿಸುತ್ತದೆ. ತಂದೆಯು ಹೇಳುತ್ತಾರೆ, ಎಷ್ಟು ನನ್ನನ್ನು ನೆನಪು ಮಾಡುವಿರೋ ಅಷ್ಟು ಪಾಪಗಳೂ ಭಸ್ಮವಾಗುವುವು ಮತ್ತು ಶ್ರೇಷ್ಠ ಪದವಿಯನ್ನೂ ಪಡೆಯುತ್ತೀರಿ ಆದ್ದರಿಂದ ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ. ತಂದೆಗೆ ಮುಕ್ತಿದಾತನೆಂತಲೂ ಹೇಳುತ್ತಾರೆ, ತಂದೆಯು 21 ಜನ್ಮಗಳಿಗಾಗಿ ನಿಮ್ಮನ್ನು ದುಃಖದಿಂದ ಬಿಡುಗಡೆ ಮಾಡುತ್ತಾರೆ. ಭಾರತವಾಸಿಗಳು ಸುಖಧಾಮದಲ್ಲಿದ್ದಾಗ ಉಳಿದೆಲ್ಲರೂ ಶಾಂತಿಧಾಮದಲ್ಲಿ ಇರುತ್ತಾರೆ. ನಿರಾಕಾರಿ ಪ್ರಪಂಚ ಮತ್ತು ಸಾಕಾರಿ ಪ್ರಪಂಚದ ಯೋಜನೆಯನ್ನು ತೋರಿಸಿದಾಗ ಅನ್ಯ ಧರ್ಮದವರು ಸ್ವರ್ಗದಲ್ಲಿ ಬರಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೆ ಕೂಡಲೇ ಅರ್ಥವಾಗುತ್ತದೆ. ಸ್ವರ್ಗದಲ್ಲಿ ದೇವಿ-ದೇವತೆಗಳಿರುತ್ತಾರೆ, ಈ ಡ್ರಾಮಾದ ಜ್ಞಾನವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಮಕ್ಕಳು ತಂದೆಯಿಂದ ಆಸ್ತಿಯನ್ನು ಪಡೆಯುವುದಕ್ಕಾಗಿಯೇ ಬರುತ್ತೀರಿ, ಅಪಾರ ಸುಖವಂತೂ ಸತ್ಯಯುಗದಲ್ಲಿಯೇ ಸಿಗುತ್ತದೆ ನಂತರದಲ್ಲಿ ರಾವಣ ರಾಜ್ಯವಾದಾಗ ಅಲ್ಲಿ ಅಪಾರ ದುಃಖವಾಗುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ, ತಂದೆಯು ನಮಗೆ ಸತ್ಯ-ಸತ್ಯವಾದ ಕಥೆಯನ್ನು ತಿಳಿಸಿ ಅಮರಲೋಕದಲ್ಲಿ ಹೋಗಲು ಯೋಗ್ಯರನ್ನಾಗಿ ಮಾಡುತ್ತಾರೆ. ನೀವೀಗ ಇಂತಹ ಕರ್ಮವನ್ನು ಮಾಡುತ್ತೀರಿ ಆದ್ದರಿಂದಲೇ 21 ಜನ್ಮಗಳಿಗಾಗಿ ಧನವಂತರಾಗುತ್ತೀರಿ. ಧನವಾನ್ಭವ, ಪುತ್ರವಾನ್ಭವ ಎಂದೂ ಹೇಳುತ್ತಾರೆ, ಸತ್ಯಯುಗದಲ್ಲಿ ನಿಮಗೆ ಒಬ್ಬ ಮಗ, ಒಬ್ಬ ಮಗಳು ಇರುತ್ತಾರೆ. ಆಯುಷ್ಯವಾನ್ಭವ, ನಿಮ್ಮ ಆಯಸ್ಸು 150 ವರ್ಷಗಳಿರುವುದು. ಎಂದೂ ಅಕಾಲ ಮೃತ್ಯುವಾಗುವುದಿಲ್ಲ, ಇದನ್ನು ತಂದೆಯೇ ತಿಳಿಸುತ್ತಾರೆ. ನೀವು ಅರ್ಧಕಲ್ಪ ನನ್ನನ್ನು ಕರೆಯುತ್ತಾ ಬಂದಿದ್ದೀರಿ, ಸನ್ಯಾಸಿಗಳು ಈ ರೀತಿ ಹೇಳುವರೇ? ಅವರಿಗೇನು ಗೊತ್ತಿದೆ! ತಂದೆಯು ಕುಳಿತು ಎಷ್ಟು ಪ್ರೀತಿಯಿಂದ ತಿಳಿಸುತ್ತಾರೆ, ಮಕ್ಕಳೇ ಇದೊಂದು ಜನ್ಮದಲ್ಲಿ ಪಾವನರಾಗುತ್ತೀರೆಂದರೆ 21 ಜನ್ಮಗಳು ಪಾವನ ಪ್ರಪಂಚದ ಮಾಲೀಕರಾಗುತ್ತೀರಿ. ಪವಿತ್ರತೆಯಲ್ಲಿ ಸುಖವಿದೆಯಲ್ಲವೆ. ನೀವು ಪವಿತ್ರ ದೈವೀ ಧರ್ಮದವರಾಗಿದ್ದಿರಿ, ಈಗ ಅಪವಿತ್ರರಾಗಿ ದುಃಖದಲ್ಲಿ ಬಂದಿದ್ದೀರಿ. ಸ್ವರ್ಗದಲ್ಲಿ ನಿರ್ವಿಕಾರಿಗಳಾಗಿದ್ದಿರಿ, ಈಗ ವಿಕಾರಿಗಳಾಗಿರುವ ಕಾರಣ ನರಕದಲ್ಲಿ ದುಃಖಿಯಾಗಿದ್ದೀರಿ. ತಂದೆಯಂತೂ ಪುರುಷಾರ್ಥ ಮಾಡಿಸುತ್ತಾರಲ್ಲವೆ. ಸ್ವರ್ಗದ ಮಹಾರಾಜ-ಮಹಾರಾಣಿಯರಾಗಿರಿ ಎಂದು. ನಿಮ್ಮ ಮಮ್ಮಾ-ಬಾಬಾ ಆ ರೀತಿ ಆಗುತ್ತಾರೆಂದಮೇಲೆ ನೀವೂ ಸಹ ಪುರುಷಾರ್ಥ ಮಾಡಿರಿ, ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ. ತಂದೆಯು ಯಾರಿಗೂ ಕಾಲಿಗೆ ಬೀಳಲು ಹೇಳುವುದಿಲ್ಲ.

ತಂದೆಯು ತಿಳಿಸುತ್ತಾರೆ - ನಾನು ನಿಮಗೆ ವಜ್ರ ವೈಡೂರ್ಯಗಳ ಮಹಲುಗಳನ್ನು ಕೊಟ್ಟೆನು, ಸ್ವರ್ಗದ ಮಾಲೀಕರನ್ನಾಗಿ ಮಾಡಿದೆನು. ನಂತರ ಅರ್ಧಕಲ್ಪ ನೀವು ಭಕ್ತಿಮಾರ್ಗದಲ್ಲಿ ಹಣೆಯನ್ನು ಸವೆಸುತ್ತಾ ಬಂದಿರಿ, ಹಣವನ್ನೂ ಕೊಡುತ್ತಾ ಬಂದಿರಿ. ಆ ಚಿನ್ನ, ವಜ್ರಗಳ ಮಹಲುಗಳು ಎಲ್ಲಿ ಹೋಯಿತು? ನೀವು ಸ್ವರ್ಗದಿಂದ ಇಳಿಯುತ್ತಾ-ಇಳಿಯುತ್ತಾ ನರಕದಲ್ಲಿ ಬಂದು ಬಿಟ್ಟಿದ್ದೀರಿ. ನಾನೀಗ ಪುನಃ ನಿಮ್ಮನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತೇನೆ, ನಿಮಗೆ ಯಾವುದೇ ಕಷ್ಟ ಕೊಡುವುದಿಲ್ಲ. ಕೇವಲ ನನ್ನನ್ನು ನೆನಪು ಮಾಡಿರಿ ಮತ್ತು ಪವಿತ್ರರಾಗಿರಿ. ಭಲೆ ಒಂದು ಪೈಸೆಯನ್ನೂ ಕೊಡಬೇಡಿ. ತಿನ್ನಿರಿ, ಕುಡಿಯಿರಿ, ಓದಿರಿ, ರಿಫ್ರೆಷ್ ಆಗಿ ಇಲ್ಲಿಂದ ಹೋಗಿರಿ. ತಂದೆಯು ಕೇವಲ ಓದಿಸುತ್ತಾರೆ, ವಿದ್ಯೆಗೆ ಹಣವೇನನ್ನೂ ತೆಗೆದುಕೊಳ್ಳುವುದಿಲ್ಲ. ಬಾಬಾ, ನಾವು ಅವಶ್ಯವಾಗಿ ಕೊಡುತ್ತೇವೆ, ಇಲ್ಲದಿದ್ದರೆ ಅಲ್ಲಿ ನಮಗೆ ಮಹಲುಗಳು ಹೇಗೆ ಸಿಗುವವು ಎಂದು ಹೇಳುತ್ತಾರೆ. ಭಕ್ತಿಮಾರ್ಗದಲ್ಲಿಯೂ ಸಹ ನೀವು ಈಶ್ವರಾರ್ಥವಾಗಿ ದಾನವನ್ನು ಬಡವರಿಗೆ ನೀಡುತ್ತಿದ್ದಿರಿ. ಫಲವನ್ನೂ ಸಹ ಈಶ್ವರನೇ ಕೊಡುವರು, ಬಡವರು ಕೊಡುವರೇ? ಆದರೆ ಅದು ಒಂದು ಜನ್ಮಕ್ಕಾಗಿ ಸಿಗುವುದು. ಈಗಂತೂ ಬಾಬಾ, ತಾವು ಡೈರೆಕ್ಟ್ ಬಂದಿರುವಿರಿ, ನಾವು ಈ ಸ್ವಲ್ಪ ಹಣವನ್ನು ಕೊಡುತ್ತೇವೆ. ಇದಕ್ಕಾಗಿ ತಾವು ನಮಗೆ 21 ಜನ್ಮಗಳಿಗಾಗಿ ಸ್ವರ್ಗದಲ್ಲಿ ಕೊಡಬೇಕು ಎಂದು ಹೇಳುತ್ತಾರೆ. ತಂದೆಯು ಎಲ್ಲರನ್ನೂ ಸಾಹುಕಾರರನ್ನಾಗಿ ಮಾಡಿ ಬಿಡುತ್ತಾರೆ. ಹಣ ಕೊಡುತ್ತೀರೆಂದರೆ ನಿಮಗಾಗಿಯೇ ಇರುವುದಕ್ಕಾಗಿ ಮನೆಗಳನ್ನು ಕಟ್ಟಿಸುತ್ತಾರೆ, ಇಲ್ಲದಿದ್ದರೆ ಇದೆಲ್ಲವೂ ಹೇಗಾಗುವುದು! ಮಕ್ಕಳೇ ಈ ಮನೆ ಇತ್ಯಾದಿಗಳನ್ನು ಕಟ್ಟಿಸುತ್ತಾರಲ್ಲವೆ. ನಾನಂತೂ ಇದರಲ್ಲಿ ಇರುವುದಿಲ್ಲ, ನೀವೇ ಇರುತ್ತೀರೆಂದರೆ ಶಿವ ತಂದೆಯು ಹೇಳುತ್ತಾರೆ. ಶಿವ ತಂದೆಯು ನಿರಾಕಾರ, ದಾತನಾಗಿದ್ದಾರಲ್ಲವೆ. ನೀವು ಕೊಡುತ್ತೀರೆಂದರೆ ನಿಮಗೆ 21 ಜನ್ಮಗಳಿಗಾಗಿ ಫಲ ಕೊಡುತ್ತೇನೆ, ನಾನಂತೂ ನಿಮ್ಮ ಸ್ವರ್ಗದಲ್ಲಿಯೇ ಬರುವುದಿಲ್ಲ. ನಾನು ನಿಮ್ಮನ್ನು ನರಕದಿಂದ ಹೊರ ತೆಗೆಯುವುದಕ್ಕಾಗಿಯೇ ನರಕದಲ್ಲಿಯೇ ಬರಬೇಕಾಗುತ್ತದೆ. ನಿಮ್ಮ ಗುರುಗಳಂತೂ ಇನ್ನೂ ಗುಣಿಯಲ್ಲಿಯೇ ಬೀಳಿಸುತ್ತಾರೆ, ಅವರ್ಯಾರೂ ಸದ್ಗತಿಯನ್ನು ನೀಡುವುದಿಲ್ಲ. ಈಗ ಪವಿತ್ರ ಪ್ರಪಂಚದಲ್ಲಿ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ. ಇಂತಹ ತಂದೆಯನ್ನು ಏಕೆ ನೆನಪು ಮಾಡುವುದಿಲ್ಲ! ತಂದೆಯು ಹೇಳುತ್ತಾರೆ - ಮಕ್ಕಳೇ, ಭಲೆ ಹಣವೇನನ್ನೂ ಕೊಡಬೇಡಿರಿ ಕೇವಲ ನನ್ನನ್ನು ನೆನಪು ಮಾಡಿರಿ ಆಗ ಪಾಪಗಳು ನಾಶವಾಗುತ್ತವೆ ಮತ್ತು ನನ್ನ ಬಳಿ ಬಂದು ಬಿಡುತ್ತೀರಿ. ಈ ಮನೆ ಇತ್ಯಾದಿಗಳನ್ನು ನೀವು ಮಕ್ಕಳು ತಮಗಾಗಿಯೇ ಮಾಡಿಸಿದ್ದೀರಿ. ಇಲ್ಲಿ ಹಿಡಿ ಅವಲಕ್ಕಿಯ ಗಾಯನವಿದೆಯಲ್ಲವೆ. ಬಡವರು ತಮ್ಮ ಶಕ್ತಿಯನುಸಾರ ಎಷ್ಟು ಕೊಡುವರೋ ಅಷ್ಟು ಅವರದೂ ಭಾಗ್ಯವಾಗುತ್ತದೆ. ಸಾಹುಕಾರರದು ಎಷ್ಟು ಪದವಿಯೋ ಅಷ್ಟು ಬಡವರಿಗೂ ಸಿಗುವುದು. ಇಬ್ಬರದೂ ಒಂದೇ ಆಗುತ್ತದೆ. ಬಡವರ ಬಳಿ ಇರುವುದೇ 100 ರೂಪಾಯಿಗಳು, ಅದರಲ್ಲಿ ಅವರು ಒಂದು ರೂಪಾಯಿಯನ್ನು ಕೊಡುವರು. ಸಾಹುಕಾರರಿಗೆ ಬಹಳಷ್ಟಿರುವುದು, ಅದರಿಂದ ಅವರು 100 ರೂಪಾಯಿಗಳನ್ನು ಕೊಟ್ಟರೆ ಇಬ್ಬರಿಗೂ ಸರಿ ಸಮಾನ ಫಲವು ದೊರೆಯುವುದು ಆದ್ದರಿಂದ ತಂದೆಗೆ ಬಡವರ ಬಂಧುವೆಂದು ಹೇಳಲಾಗುತ್ತದೆ. ಎಲ್ಲದಕ್ಕಿಂತ ಭಾರತವು ಬಡ ದೇಶವಾಗಿದೆ. ನಾನೇ ಬಂದು ಸಾಹುಕಾರರನ್ನಾಗಿ ಮಾಡುತ್ತೇನೆ. ಬಡವರಿಗೇ ದಾನ ಮಾಡಲಾಗುತ್ತದೆಯಲ್ಲವೆ. ತಂದೆಯು ಎಷ್ಟು ಸ್ಪಷ್ಟ ಮಾಡಿ ತಿಳಿಸುತ್ತಾರೆ, ಮಕ್ಕಳೇ ಮೃತ್ಯು ಈಗ ಸನ್ಮುಖದಲ್ಲಿ ನಿಂತಿದೆ, ಈಗ ಬೇಗ ಬೇಗನೆ ಪುರುಷಾರ್ಥ ಮಾಡಿರಿ. ನೆನಪಿನ ತೀವ್ರತೆಯನ್ನು ಹೆಚ್ಚಿಸಿಕೊಳ್ಳಿ, ಅತಿ ಪ್ರಿಯ ತಂದೆಯನ್ನು ಎಷ್ಟು ನೆನಪು ಮಾಡುವಿರೋ ಅಷ್ಟು ಆಸ್ತಿಯು ಸಿಗುವುದು. ನೀವು ಬಹಳ ಧನವಂತರಾಗುವಿರಿ. ತಂದೆಯು ನೀವು ತಲೆ ಬಾಗಿಸಿರಿ, ಜಾತ್ರೆ ಇತ್ಯಾದಿಗಳಿಗೆ ಹೋಗಿರಿ ಎಂದು ನಿಮಗೆ ಹೇಳುವುದಿಲ್ಲ. ಮನೆಯಲ್ಲಿ ಕುಳಿತೇ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿರಿ ಸಾಕು. ತಂದೆಯು ಬಿಂದುವಾಗಿದ್ದಾರೆ, ಅವರಿಗೆ ಪರಮಪಿತ ಪರಮಾತ್ಮನೆಂದು ಹೇಳಲಾಗುತ್ತದೆ. ಪರಮ ಆತ್ಮನು ಎಲ್ಲರಿಗಿಂತ ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ. ತಂದೆಯು ಹೇಳುತ್ತಾರೆ - ನಾನೂ ಬಿಂದುವಾಗಿದ್ದೇನೆ, ನೀವೂ ಬಿಂದುವಾಗಿದ್ದೀರಿ. ಕೇವಲ ಭಕ್ತಿಮಾರ್ಗಕ್ಕಾಗಿ ನನ್ನದು ದೊಡ್ಡ ರೂಪವಾಗಿ ಮಾಡಿ ಇಟ್ಟಿದ್ದಾರೆ, ಇಲ್ಲದಿದ್ದರೆ ಬಿಂದುವಿಗೆ ಹೇಗೆ ಪೂಜೆ ಮಾಡುವುದು! ಲಿಂಗಕ್ಕೆ ಶಿವ ತಂದೆಯೆಂತಲೂ ಹೇಳುತ್ತಾರೆ, ಯಾರು ಹೇಳಿದರು? ಶಿವ ತಂದೆಯು ನಮಗೆ ಆಸ್ತಿಯನ್ನು ಕೊಡುತ್ತಿದ್ದಾರೆಂದು ನೀವೀಗ ಹೇಳುತ್ತೀರಿ. ಆಶ್ಚರ್ಯವಲ್ಲವೆ. 84 ಜನ್ಮಗಳ ಚಕ್ರವು ಸುತ್ತುತ್ತಿರುತ್ತದೆ. ನೀವು ಅನೇಕ ಬಾರಿ ಆಸ್ತಿಯನ್ನು ತೆಗೆದುಕೊಂಡಿದ್ದೀರಿ ಮತ್ತು ತೆಗೆದುಕೊಳ್ಳುತ್ತಲೇ ಇರುತ್ತೀರಿ. ತಂದೆಯು ಎಷ್ಟು ಚೆನ್ನಾಗಿ ತಿಳಿಸಿಕೊಡುತ್ತಾರೆ! ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಮೃತ್ಯು ಸನ್ಮುಖದಲ್ಲಿದೆ, ಆದ್ದರಿಂದ ಈಗ ನೆನಪಿನ ತೀವ್ರತೆಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಸತ್ಯಯುಗೀ ಪ್ರಪಂಚದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ.

2. ತನ್ನ ಹಾಗೂ ಅನ್ಯರ ಕಲ್ಯಾಣ ಮಾಡಿ ಆಶೀರ್ವಾದವನ್ನು ಪಡೆಯಬೇಕಾಗಿದೆ. ಪವಿತ್ರ ಪ್ರಪಂಚದಲ್ಲಿ ಹೋಗುವುದಕ್ಕಾಗಿ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ.

ವರದಾನ:
ನವ ಜೀವನದ ಸ್ಮೃತಿಯಿಂದ ಕರ್ಮೇಂದ್ರಿಯಗಳ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಮರುಜೀವಾ ಭವ.

ಯಾವ ಮಕ್ಕಳು ಸಂಪೂರ್ಣವಾಗಿ ಮರುಜೀವಿ ಆಗಿ ಬಿಡುತ್ತಾರೆಯೋ ಅವರ ಕರ್ಮೇಂದ್ರಿಯಗಳು ಆಕರ್ಷಣೆಯಾಗಲು ಸಾಧ್ಯವಿಲ್ಲ. ಮರುಜೀವಿ ಆಗುವುದು ಅರ್ಥಾತ್ ಎಲ್ಲಾ ಕಡೆಗಳಿಂದ ಸತ್ತು ಹೋಗುವುದು, ಹಳೆಯ ಆಯಸ್ಸು ಸಮಾಪ್ತಿಯಾಯಿತು. ಯಾವಾಗ ಹೊಸ ಜನ್ಮವಾಯಿತೆಂದರೆ ಹೊಸ ಜನ್ಮ, ಹೊಸ ಜೀವನದಲ್ಲಿ ಕರ್ಮೇಂದ್ರಿಯಗಳು ವಶವಾಗಲು ಹೇಗೆ ಸಾಧ್ಯ! ಬ್ರಹ್ಮಾಕುಮಾರ-ಕುಮಾರಿಯರು ಹೊಸ ಜೀವನದಲ್ಲಿ ಕರ್ಮೇಂದ್ರಿಯಗಳ ವಶರಾಗುವುದು ಎಂತಹ ವಸ್ತುವಾಗಿದೆ - ಈ ತಿಳುವಳಿಕೆಯಿಂದಲೂ ದೂರ. ಶೂದ್ರತ್ವದ ಅಂಶವೂ ಸಹ ಶ್ವಾಸ ಅರ್ಥಾತ್ ಸಂಸ್ಕಾರ, ಎಲ್ಲಿಯೂ ಸಿಲುಕಿರಬಾರದು.

ಸ್ಲೋಗನ್:
ಅಮೃತವೇಳೆಯಲ್ಲಿ ಹೃದಯದಲ್ಲಿ ಪರಮಾತ್ಮನ ಸ್ನೇಹವನ್ನು ಸಮಾವೇಶ ಮಾಡಿಕೊಳ್ಳುತ್ತೀರೆಂದರೆ ಮತ್ತ್ಯಾವುದೇ ಸ್ನೇಹವು ಆಕರ್ಷಿಸಲು ಸಾಧ್ಯವಿಲ್ಲ.