10.01.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ತಂದೆಯ ಮಕ್ಕಳಾಗಿ ತಂದೆಯ ಹೆಸರನ್ನು ಪ್ರಸಿದ್ಧ ಮಾಡಿ, ಸಂಪೂರ್ಣ ಪವಿತ್ರರಾದಾಗಲೇ ಹೆಸರು ಪ್ರಸಿದ್ಧವಾಗುತ್ತದೆ, ತಾವು ಸಂಪೂರ್ಣ ಮಧುರರೂ ಆಗಬೇಕು

ಪ್ರಶ್ನೆ:
ಸಂಗಮಯುಗದಲ್ಲಿ ತಾವು ಮಕ್ಕಳಿಗೆ ಯಾವ ಒಂದು ಚಿಂತೆಯಿದೆ ಅದು ಸತ್ಯಯುಗದಲ್ಲಿರುವುದಿಲ್ಲ?

ಉತ್ತರ:
ಸಂಗಮಯುಗದಲ್ಲಿ ತಮಗೆ ಪಾವನರಾಗುವ ಚಿಂತೆಯಿದೆ, ತಂದೆಯು ತಮ್ಮನ್ನು ಬೇರೆಲ್ಲಾ ಮಾತುಗಳಿಂದ ನಿಶ್ಚಿಂತರನ್ನಾಗಿ ಮಾಡಿದ್ದಾರೆ. ಈ ಹಳೆಯ ಶರೀರವು ಖುಷಿ-ಖುಷಿಯಿಂದ ಬಿಡಬೇಕೆಂದು ತಾವು ಪುರುಷಾರ್ಥ ಮಾಡುತ್ತೀರಿ. ಹಳೆಯ ವಸ್ತ್ರವನ್ನು ಬಿಟ್ಟು ಹೊಸದನ್ನು ಪಡೆಯುತ್ತೇವೆಂದು ನಿಮಗೆ ಗೊತ್ತಿದೆ. ಪ್ರತಿಯೊಂದು ಮಗುವು ತಮ್ಮ ಮನಸ್ಸನ್ನು ಕೇಳಿಕೊಳ್ಳಬೇಕು - ನಾವು ಎಷ್ಟು ಖುಷಿಯಲ್ಲಿರುತ್ತೇವೆ, ನಾವು ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆ.

ಓಂ ಶಾಂತಿ.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳಿಗೆ ಆತ್ಮೀಯ ತಂದೆಯು ತಿಳಿಸುತ್ತಾರೆ - ಓದಿಸುತ್ತಾರೆ ಹಾಗೂ ತಿಳಿಸುತ್ತಾರೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಓದಿಸುತ್ತಾರೆ ಹಾಗೂ ಸರ್ವಗುಣ ಸಂಪನ್ನರಾಗಿ, ದೈವೀ ಗುಣವನ್ನು ಧಾರಣೆ ಮಾಡಿ ಎಂದು ತಿಳಿಸುತ್ತಾರೆ. ನೆನಪು ಮಾಡುತ್ತಾ-ಮಾಡುತ್ತಾ ತಾವು ಸತೋಪ್ರಧಾನರಾಗುತ್ತೀರಿ. ಈ ಸಮಯದಲ್ಲಿ ಇದು ತಮೋಪ್ರಧಾನ ಸೃಷ್ಟಿಯಾಗಿದೆ. ಸತೋಪ್ರಧಾನ ಸೃಷ್ಟಿಯಿತ್ತು, ಅದು ಈಗ 5000 ವರ್ಷಗಳಲ್ಲಿ ತಮೋಪ್ರಧಾನವಾಗಿದೆ. ಇದು ಹಳೆಯ ಜಗತ್ತಾಗಿದೆ ಎಂದು ಎಲ್ಲರಿಗಾಗಿ ಹೇಳಲಾಗುತ್ತಿದೆಯಲ್ಲವೆ. ಇವರು ಹೊಸ ಜಗತ್ತಿನಲ್ಲಿದ್ದರೋ ಅಥವಾ ಶಾಂತಿಧಾಮದಲ್ಲಿದ್ದರೋ. ತಂದೆಯು ಆತ್ಮಗಳಿಗಾಗಿಯೇ ಬಂದು ತಿಳಿಸುತ್ತಿದ್ದಾರೆ - ಹೇ ಆತ್ಮೀಯ ಮಕ್ಕಳೇ, ತಾವು ಅವಶ್ಯವಾಗಿ ಸತೋಪ್ರಧಾನವಾಗಲೇಬೇಕು, ತಂದೆಯಿಂದ ಆಸ್ತಿಯನ್ನು ಪಡೆಯಬೇಕು. ನಿಮ್ಮ ತಂದೆಯಾದ ನನ್ನನ್ನು ಅವಶ್ಯವಾಗಿ ನೆನಪು ಮಾಡಬೇಕು, ಲೌಕಿಕ ಮಕ್ಕಳೂ ಸಹ ನೆನಪು ಮಾಡುತ್ತಾರೆ. ದೊಡ್ಡವರಾದಷ್ಟು ಹದ್ದಿನ ಆಸ್ತಿಯನ್ನು ಪಡೆಯಲು ಹಕ್ಕುದಾರರಾಗುತ್ತಾರೆ. ತಾವು ಬೇಹದ್ದಿನ ತಂದೆಯ ಮಕ್ಕಳು ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯಬೇಕು. ಈಗ ಭಕ್ತಿ ಇತ್ಯಾದಿಗಳೆಲ್ಲವನ್ನೂ ಮಾಡುವ ಅವಶ್ಯಕತೆಯಿಲ್ಲ. ಇದು ವಿಶ್ವ ವಿದ್ಯಾಲಯವೆಂದು ಮಕ್ಕಳಿಗೆ ಗೊತ್ತಾಗಿದೆ. ಎಲ್ಲಾ ಮನುಷ್ಯರೂ ಸಹ ಓದಲೇಬೇಕು. ವಿಶಾಲ ಬುದ್ಧಿಯನ್ನು ಧಾರಣೆ ಮಾಡಿಕೊಳ್ಳಬೇಕು, ಈಗ ಈ ಹಳೆಯ ಪ್ರಪಂಚವು ಪರಿವರ್ತನೆಯಾಗಬೇಕು. ಈಗ ಯಾರೆಲ್ಲಾ ತಮೋಪ್ರಧಾನರಾಗಿದ್ದಾರೆಯೋ ಅವರೆಲ್ಲಾ ಸತೋಪ್ರಧಾನರಾಗುತ್ತಾರೆ. ಈ ಸಮಯದಲ್ಲಿ ನಾವು ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯನ್ನು ಪಡೆಯುತ್ತಿದ್ದೇವೆ ಎಂಬುದು ಮಕ್ಕಳಿಗೆ ಗೊತ್ತಿದೆ. ಈಗ ನಾವು ಒಬ್ಬ ಆತ್ಮೀಯ ತಂದೆಯ ಮತದಂತೆಯೇ ನಡೆಯಬೇಕು. ಈ ಆತ್ಮೀಯ ನೆನಪಿನ ಯಾತ್ರೆಯಿಂದಲೇ ಆತ್ಮವು ಸತೋಪ್ರಧಾನವಾಗುತ್ತಾ ಹೋಗುತ್ತದೆ ನಂತರ ಸತೋಪ್ರಧಾನ ಜಗತ್ತಿಗೆ ಹೋಗಬೇಕು. ನಾವು ಬ್ರಾಹ್ಮಣರೆನ್ನುವ ತಿಳುವಳಿಕೆಯು ನಿಮಗೆ ತಿಳಿದಿದೆ - ನಾವು ತಂದೆಯ ಮಕ್ಕಳಾಗಿದ್ದೇವೆ, ವಿದ್ಯೆಯನ್ನು ಓದುತ್ತಿದ್ದೇವೆ ಅಂದಾಗ ಈ ವಿದ್ಯೆಗೆ ಜ್ಞಾನ ಎನ್ನಲಾಗುತ್ತದೆ. ಭಕ್ತಿಯೇ ಬೇರೆಯಾಗಿದೆ, ತಾವು ಬ್ರಾಹ್ಮಣರಿಗೆ ತಂದೆ ಜ್ಞಾನವನ್ನು ಹೇಳುತ್ತಾರೆ, ಬೇರೆ ಯಾರಿಗೂ ಈ ಜ್ಞಾನವು ಗೊತ್ತಿಲ್ಲ. ಜ್ಞಾನಸಾಗರ ತಂದೆಯು ಶಿಕ್ಷಕನೂ ಆಗಿದ್ದಾರೆ, ಅವರು ಹೇಗೆ ಓದಿಸುತ್ತಾರೆ ಎಂಬುದು ಮನುಷ್ಯರಿಗೆ ಗೊತ್ತಿಲ್ಲ. ತಂದೆಯು ಪ್ರಬಂಧದ ವಿಷಯಗಳನ್ನು ಬಹಳ ತಿಳಿಸುತ್ತಾರೆ. ತಂದೆಯ ಮಕ್ಕಳಾಗಿ ಹೆಸರನ್ನು ಪ್ರಸಿದ್ಧ ಮಾಡುವುದೇ ನಂಬರ್ ವನ್ ವಿಚಾರವಾಗಿದೆ. ಸಂಪೂರ್ಣ ಪವಿತ್ರರಾಗಬೇಕಾಗಿದೆ, ಸಂಪೂರ್ಣ ಮಧುರರೂ ಆಗಬೇಕು ಇದು ಈಶ್ವರೀಯ ವಿದ್ಯೆಯಾಗಿದೆ. ಭಗವಂತ ಕುಳಿತು ಓದಿಸುತ್ತಾರೆ, ಆ ಸರ್ವ ಶ್ರೇಷ್ಠ ತಂದೆಯನ್ನು ನೆನಪು ಮಾಡಬೇಕು. ಇದು ಸೆಕೆಂಡಿನ ಮಾತಾಗಿದೆ ನಿಮ್ಮನ್ನು ಆತ್ಮನೆಂದು ತಿಳಿಯಿರಿ. ನಿಮಗೆ ಗೊತ್ತಿದೆ ನಾವು ಶಾಂತಿಧಾಮದಲ್ಲಿ ವಾಸ ಮಾಡುತ್ತೇವೆ ನಂತರ ಪಾತ್ರವನ್ನಭಿನಯಿಸಲು ಇಲ್ಲಿಗೆ ಬರುತ್ತೇವೆ, ಪುನರ್ ಜನ್ಮದಲ್ಲಿ ಬರುತ್ತಲೇ ಇರುತ್ತೇವೆ. ನಂಬರ್ ವಾರ್ 84 ಜನ್ಮಗಳ ಪಾತ್ರವನ್ನು ನಾವೀಗ ಪೂರ್ಣ ಮಾಡಿದ್ದೇವೆ. ಈ ವಿದ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು, ಪಾತ್ರವನ್ನೂ ಅರ್ಥ ಮಾಡಿಕೊಳ್ಳಬೇಕು. ಡ್ರಾಮಾ ಬುದ್ಧಿಯಲ್ಲಿದೆ, ಇದು ನಮ್ಮ ಅಂತಿಮ ಜನ್ಮವಾಗಿದೆ, ಇಲ್ಲಿ ನಮಗೆ ಭಗವಂತನು ಸಿಕ್ಕಿದ್ದಾರೆ ಎಂಬುದು ನಿಮ್ಮ ಬುದ್ಧಿಯಲ್ಲಿದೆ. ಯಾವಾಗ 84 ಜನ್ಮಗಳನ್ನು ಪೂರ್ಣ ಮಾಡುತ್ತೇವೆಯೋ ಆಗ ಈ ಹಳೆಯ ಪ್ರಪಂಚವು ಪರಿವರ್ತನೆಯಾಗುತ್ತದೆ. ತಾವು ಈ ವಿಶಾಲ ನಾಟಕವನ್ನು, 84 ಜನ್ಮಗಳನ್ನು ಹಾಗೂ ಈ ವಿದ್ಯೆಯನ್ನೂ ತಿಳಿದುಕೊಂಡಿದ್ದೀರಿ. 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಈಗ ಕೊನೆಯಲ್ಲಿ ನಿಂತಿದ್ದೀರಿ. ಈಗ ಓದುತ್ತಿದ್ದೀರಿ ಮತ್ತೆ ಹೊಸ ಪ್ರಪಂಚದಲ್ಲಿ ಹೋಗುತ್ತೀರಿ. ಹೊಸ-ಹೊಸಬರು ಬರುತ್ತಿರುತ್ತಾರೆ, ಏನಾದರೂ ನಿಶ್ಚಯವಾಗುತ್ತಾ ಹೋಗುತ್ತದೆ. ಕೆಲವರಂತೂ ಈ ವಿದ್ಯೆಯಲ್ಲಿ ತೊಡಗಿ ಬಿಡುತ್ತಾರೆ. ನಾವು ಸತೋಪ್ರಧಾನರು, ನಾವು ಪವಿತ್ರರಾಗುತ್ತಿದ್ದೇವೆ ಎಂಬುದು ಬುದ್ಧಿಯಲ್ಲಿರುತ್ತದೆ. ನಾವು ಪವಿತ್ರರಾಗುತ್ತಾ-ಆಗುತ್ತಾ ಉನ್ನತಿಯಾಗುತ್ತಿರುತ್ತೇವೆ. ನೀವೆಷ್ಟು ನೆನಪು ಮಾಡುತ್ತೀರೋ ಅಷ್ಟು ಆತ್ಮವು ಪವಿತ್ರವಾಗುತ್ತಿರುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಪೂರ್ಣ ಜ್ಞಾನವು ತಾವು ಮಕ್ಕಳ ಬುದ್ಧಿಯಲ್ಲಿ ಕುಳಿತಿದೆ. ಈ ಪ್ರಪಂಚದ ಎಲ್ಲವನ್ನೂ ನಾವು ಬಿಟ್ಟು ಬಂದಿದ್ದೇವೆಂದು ನಿಮಗೆ ಗೊತ್ತಿದೆ, ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಅದು ನೋಡುವುದಕ್ಕೆ ಇರುವುದಿಲ್ಲ. ಇದೆಲ್ಲವೂ ಸಮಾಪ್ತಿಯಾಗಲಿದೆ ಎಂಬುದು ನೀವು ಮಕ್ಕಳಿಗೆ ತಿಳಿದಿದೆ. ಈಗ ತಮ್ಮ ಅಂತಿಮ ಜನ್ಮವಾಗಿದೆ, ಬೇರೆ ಯಾರೂ ಸಹ ಈ ವಿಶಾಲ ನಾಟಕವನ್ನು ತಿಳಿದುಕೊಂಡಿಲ್ಲ. ತಾವೀಗ ಪೂರ್ಣ ಚಕ್ರವನ್ನು ತಿಳಿದುಕೊಂಡಿದ್ದೀರಿ. ಈಗ ತಮ್ಮನ್ನು ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಹೇಗೆ ಪರೀಕ್ಷೆಯು 12 ತಿಂಗಳಿನ ನಂತರ ಆಗುತ್ತದೆ. ನಿಮ್ಮ ನೆನಪಿನ ಯಾತ್ರೆಯೂ ಸಹ ಪೂರ್ಣವಾಗಿಲ್ಲ. ಈಗ ಬಹಳಷ್ಟು ನೆನಪಿನಲ್ಲಿರುತ್ತದೆ ಯಾವಾಗ ಚೆನ್ನಾಗಿ ಅಭ್ಯಾಸವಾಗಿ ಬಿಡುತ್ತದೆಯೋ ಆಗ ಏನೂ ನೆನಪಿಗೆ ಬರುವುದಿಲ್ಲ. ಆತ್ಮವು ಅಶರೀರಿಯಾಗಿ ಬಂದಿತು, ಅಶರೀರಿಯಾಗಿ ಹೋಗಬೇಕು. ತಾವು ಪೂರ್ಣ ಸೃಷ್ಟಿಯ ಮನುಷ್ಯ ಮಾತ್ರರ ಪಾತ್ರವನ್ನು ತಿಳಿದುಕೊಂಡಿದ್ದೀರಿ. ಮನುಷ್ಯರು ವೃದ್ಧಿಯಾಗುತ್ತಲೇ ಹೋಗುತ್ತಿದ್ದಾರೆ, ಕೋಟ್ಯಾಂತರ ಸಂಖ್ಯೆಯಲ್ಲಾಗುತ್ತಿದ್ದಾರೆ. ಸತ್ಯಯುಗದಲ್ಲಿ ನಾವು ಬಹಳ ಕಡಿಮೆಯಿದ್ದೆವು, ಪುನರ್ ಜನ್ಮವನ್ನು ಪಡೆಯುತ್ತಾ-ಪಡೆಯುತ್ತಾ ಬೇರೆ ಮಠ ಪಂಥಗಳ ರೆಂಬೆ-ಕೊಂಬೆಗಳು ಬೆಳೆಯುತ್ತಾ-ಬೆಳೆಯುತ್ತಾ ವೃಕ್ಷವು ಬಹಳ ದೊಡ್ಡದಾಗಿದೆ. ಆದಿ ಸನಾತನ ದೇವಿ-ದೇವತಾ ಧರ್ಮವೇ ಪ್ರಾಯಲೋಪವಾಗಿ ಬಿಟ್ಟಿದೆ. ನಾವೇ ದೇವಿ-ದೇವತಾ ಧರ್ಮದವರಾಗಿದ್ದೇವೆ, ಸತೋಪ್ರಧಾನರಾಗಿದ್ದೆವು, ಈಗ ಆ ಧರ್ಮವೇ ತಮೋಪ್ರಧಾನವಾಗಿದೆ. ಈಗ ಮತ್ತೆ ಸತೋಪ್ರಧಾನವಾಗಬೇಕು ಮತ್ತು ಈ ರೀತಿಯಾಗುವುದಕ್ಕೆ ನಾವು ಓದುತ್ತಿದ್ದೇವೆ. ಎಷ್ಟು ಓದುತ್ತೇವೆಯೋ, ಓದಿಸುತ್ತೇವೆಯೋ ಅಷ್ಟು ಅನೇಕರ ಕಲ್ಯಾಣವಾಗುತ್ತದೆ. ಬಹಳ ಪ್ರೀತಿಯಿಂದ ತಿಳಿಸಬೇಕು. ವಿಮಾನದಿಂದ ಕರ ಪತ್ರಗಳನ್ನು ಕೆಳಗಡೆ ಹಾಕಬೇಕು. ತಾವು ಜನ್ಮ-ಜನ್ಮಾಂತರ ಭಕ್ತಿಯನ್ನು ಮಾಡುತ್ತಾ ಬಂದಿದ್ದೀರಿ ಎಂಬುದನ್ನು ಅದರಲ್ಲಿ ತಿಳಿಸಬೇಕು. ಗೀತೆಯನ್ನು ಓದುವುದೂ ಸಹ ಭಕ್ತಿಯಾಗಿದೆ, ಹಾಗಲ್ಲಾ ಗೀತೆಯನ್ನು ಓದುವುದರಿಂದ ಮನುಷ್ಯರಿಂದ ದೇವತೆಗಳಾಗುತ್ತೀರಿ ಎಂದಲ್ಲ. ಡ್ರಾಮಾನುಸಾರ ಯಾವಾಗ ತಂದೆಯು ಬರುತ್ತಾರೆಯೋ ಆಗಲೇ ಸತೋಪ್ರಧಾನರಾಗುವ ಯುಕ್ತಿಯನ್ನು ಹೇಳುತ್ತಾರೆ. ನಂತರ ಸತೋಪ್ರಧಾನ ಪದವಿಯು ಪ್ರಾಪ್ತಿಯಾಗುತ್ತದೆ. ನಿಮಗೆ ಗೊತ್ತಿದೆ - ಈ ವಿದ್ಯೆಯಿಂದ ನಾವು ಈ ರೀತಿಯಾಗುತ್ತಿದ್ದೇವೆ. ಇದು ಈಶ್ವರನ ಪಾಠ ಶಾಲೆಯಾಗಿದೆ. ಭಗವಂತನೇ ಓದಿಸಿ ನಿಮ್ಮನ್ನು ನರನಿಂದ ನಾರಾಯಣರನ್ನಾಗಿ ಮಾಡುತ್ತಿದ್ದಾರೆ. ನಾವು ಸತೋಪ್ರಧಾನರಾಗಿದ್ದಾಗ ಸ್ವರ್ಗವಿತ್ತು, ತಮೋಪ್ರಧಾನರಾಗಿದ್ದರಿಂದ ನರಕವಾಗಿದೆ. ಮತ್ತೆ ಚಕ್ರವು ಪುನರಾವರ್ತನೆಯಾಗಬೇಕು. ತಂದೆಯು ಬಂದು ಮನುಷ್ಯರಿಂದ ದೇವತೆ, ವಿಶ್ವದ ಮಾಲೀಕರನ್ನಾಗಿ ಮಾಡುವ ಪುರುಷಾರ್ಥ ಮಾಡಿಸುತ್ತಿದ್ದಾರೆ. ತಂದೆಯನ್ನು ನೆನಪು ಮಾಡಬೇಕು ಮತ್ತು ದೈವೀ ಗುಣವನ್ನು ಧಾರಣೆ ಮಾಡಬೇಕು, ಜಗಳ-ಹೊಡೆದಾಟ ಮಾಡಬಾರದು. ದೇವತೆಗಳು ಎಂದೂ ಸಹ ಜಗಳ-ಹೊಡೆದಾಟವನ್ನು ಮಾಡುತ್ತಿರಲಿಲ್ಲ, ತಾವೂ ಸಹ ಅದೇ ರೀತಿ ಆಗಬೇಕು. ನೀವೇ ಸರ್ವಗುಣ ಸಂಪನ್ನರಾಗಿದ್ದಿರಿ ಮತ್ತೆ ಶ್ರೀಮತದಂತೆ ಆ ರೀತಿ ಆಗಬೇಕಾಗಿದೆ. ತಮ್ಮನ್ನು ಕೇಳಿಕೊಳ್ಳಿ - ನಾವು ಎಷ್ಟರ ಮಟ್ಟಿಗೆ ಖುಷಿಯಾಗಿದ್ದೇವೆ? ಎಷ್ಟರ ಮಟ್ಟಿಗೆ ನಿಶ್ಚಯವಿದೆ? ಇದಂತೂ ಇಡೀ ದಿನ ನೆನಪಿರಬೇಕು. ಆದರೆ ಮಾಯೆಯು ಆ ರೀತಿಯಿದೆ - ಅದನ್ನು ಮರೆಸಿ ಬಿಡುತ್ತದೆ. ತಮಗೆ ಗೊತ್ತಿದೆ - ತಂದೆಯ ಜೊತೆ ನಾವು ವಿಶ್ವದ ಸಹಯೋಗಿಗಳಾಗಿದ್ದೇವೆ. ಮೊದಲು ನಾವು ಲೌಕಿಕ ವಿದ್ಯೆಯನ್ನು ಓದುತ್ತಿದ್ದಿರಿ, ಈಗ ಬೇಹದ್ದಿನ ವಿದ್ಯೆ, ಬೇಹದ್ದಿನ ತಂದೆಯ ಮುಖಾಂತರ ಓದುತ್ತೀರಿ. ಇದು ಹಳೆಯ ಶರೀರವಾಗಿದೆ, ಇದು ತನ್ನ ಸಮಯದಲ್ಲಿ ಬಿಟ್ಟು ಹೋಗುತ್ತದೆ ತಾವಾಗಿಯೇ ಬಿಡಬಾರದು. ನಾವು ಖುಷಿಯಿಂದ ಈ ಶರೀರವನ್ನು ಬಿಡಬೇಕು. ನಾವು ಈ ಕೊಳಕು ಶರೀರವನ್ನು ಬಿಟ್ಟು, ಹಳೆಯ ಜಗತ್ತನ್ನು ಬಿಟ್ಟು ಖುಷಿಯಿಂದ ಹೋಗುತ್ತೇವೆ. ಹಬ್ಬದ ದಿನ ಬಂದರೆ ಖುಷಿಯಿಂದ ಹೊಸ ಬಟ್ಟೆಗಳನ್ನು ಹಾಕಿಕೊಳ್ಳುತ್ತೇವೆ ಅಲ್ಲವೆ. ಇಲ್ಲಿ ತಮಗೆ ಗೊತ್ತಿದೆ - ನಮಗೆ ಹೊಸ ಪ್ರಪಂಚದಲ್ಲಿ ಹೊಸ ಶರೀರ ಸಿಗುತ್ತದೆ. ನಮಗೆ ಪಾವನರಾಗುವ ಒಂದೇ ಚಿಂತೆಯಿರಬೇಕು, ಬೇರೆಲ್ಲಾ ಚಿಂತೆಗಳಿಂದ ನಿಶ್ಚಿಂತರಾಗುತ್ತೇವೆ. ಇದೆಲ್ಲವೂ ಸಮಾಪ್ತಿಯಾಗಲಿದೆ ಯಾವ ಚಿಂತೆಯನ್ನಿಟ್ಟುಕೊಳ್ಳೋಣ. ಅರ್ಧಕಲ್ಪ ನಾವು ಭಕ್ತಿ ಮಾರ್ಗದಲ್ಲಿ ಚಿಂತೆಯಲ್ಲಿಯೇ ಇದ್ದೆವು, ಮತ್ತೆ ಅರ್ಧಕಲ್ಪ ಯಾವುದೇ ಚಿಂತೆಯಿರುವುದಿಲ್ಲ. ಬಾಕಿ ಸ್ವಲ್ಪ ಸಮಯವೇ ಇದೆ. ಪಾವನರಾಗುವುದಕ್ಕೆ ಸ್ವಲ್ಪ ಚಿಂತೆಯಿದೆ ನಂತರ ಒಂದು ಚಿಂತೆಯೂ ಇರುವುದಿಲ್ಲ. ಇದು ಸುಖ-ದುಃಖದ ಆಟವಾಗಿದೆ. ಸತ್ಯಯುಗದಲ್ಲಿ ಸುಖ, ಕಲಿಯುಗದಲ್ಲಿ ದುಃಖವಿದೆ. ತಂದೆಯು ತಿಳಿಸಿದ್ದಾರೆ - ತಾವು ಕೇಳಬಹುದು ಸತ್ಯಯುಗ ಸುಖಧಾಮದ ನಿವಾಸಿಗಳೋ ಅಥವಾ ಕಲಿಯುಗ ದುಃಖಧಾಮದವರೋ? ತಾವು ಈ ಹೊಸ-ಹೊಸ ಮಾತುಗಳನ್ನು ಹೇಳುತ್ತೀರಿ. ಈಗ ದುಃಖಧಾಮದ ವಾಸಿಗಳೆಂದು ಅವಶ್ಯ ಹೇಳುತ್ತಾರೆ. ಬಹಳ ಪ್ರೀತಿಯಿಂದ ಕೇಳಿದಾಗ, ಮನುಷ್ಯರು ನಾವು ಎಲ್ಲಿನ ನಿವಾಸಿಗಳೆಂದು ತಾವೇ ಅರ್ಥ ಮಾಡಿಕೊಳ್ಳಬೇಕು, ಹೇಳುತ್ತಾರೆ ಇವರ ಪ್ರಶ್ನೆ ಕೇಳುವ ಯುಕ್ತಿಯಂತೂ ಬಹಳ ಚೆನ್ನಾಗಿದೆ. ಭಲೇ ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ, ಧನವಂತರಾಗಿರಲಿ ಆದರೆ ನರಕವಾಸಿಗಳಲ್ಲವೆ. ಸ್ವರ್ಗವೆಂದು ಹೊಸ ಪ್ರಪಂಚಕ್ಕೆ ಹೇಳಲಾಗುತ್ತದೆ. ಈಗ ಕಲಿಯುಗ ಹಳೆಯ ಪ್ರಪಂಚವಾಗಿದೆ. ಏಣಿಯ ಚಿತ್ರದಲ್ಲಿಯೂ ಬಹಳ ಸ್ಪಷ್ಟವಾಗಿದೆ - ತಾವು ಸುಖಧಾಮದಲ್ಲಿದ್ದೀರೋ ಅಥವಾ ದುಃಖಧಾಮದಲ್ಲಿದ್ದೀರೋ, ಇದು ಸ್ವರ್ಗವೋ ಅಥವಾ ನರಕವೋ? ದೇವತೆಯೋ ಅಥವಾ ಭೂತವೋ? ಈ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಖಂಡಿತ ಸತ್ಯಯುಗಕ್ಕೆ ದೈವೀ ಜಗತ್ತು ಎಂದು ಹೇಳಲಾಗುತ್ತದೆ. ಕಲಿಯುಗಕ್ಕೆ ನರಕ, ಭೂತದ ಜಗತ್ತೆಂದು ಹೇಳಲಾಗುತ್ತದೆ ಅಂದಮೇಲೆ ಕೇಳಬೇಕಾಗಿದೆ - ಸತ್ಯಯುಗ ಸ್ವರ್ಗ, ದೈವೀ ಜಗತ್ತಿನ ನಿವಾಸಿಗಳೋ ಅಥವಾ ಕಲಿಯುಗದ ಭೂತದ ಜಗತ್ತಿನ ನಿವಾಸಿಗಳೋ? ಭಲೇ ಎಷ್ಟೇ ಧನವಂತರಾಗಿರಲಿ ಆದರೆ ಎಲ್ಲಿಯ ನಿವಾಸಿಗಳಾಗಿದ್ದೀರಿ?. ಈಗ ನಿಮಗೆ ತಿಳುವಳಿಕೆ ಬಂದಿದೆ - ಮೊದಲು ಇಂಥಹ ವಿಷಯಗಳು ಸಂಕಲ್ಪದಲ್ಲೂ ಇರಲಿಲ್ಲ. ಈಗ ನಾವು ಸಂಗಮದಲ್ಲಿದ್ದೇವೆ ಎಂದು ಗೊತ್ತಾಗುತ್ತದೆ. ಯಾರು ಕಲಿಯುಗದಲ್ಲಿದ್ದಾರೆಯೋ ಅವರೇ ಪತಿತ ನರಕವಾಸಿಗಳು, ಮತ್ತೆ ಪಾವನರಾಗಬೇಕು. ಅದಕ್ಕಾಗಿಯೇ ಹೇ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ಇದನ್ನೂ ಸಹ ತಿಳಿಸಬೇಕು. ನಿಮ್ಮ ಬಳಿ ಅನೇಕ ಮನುಷ್ಯರು ಬರುತ್ತಾರೆ ಆದರೂ ಕೋಟಿಯಲ್ಲಿ ಕೆಲವರು ಮಾತ್ರ ಉಳಿಯುತ್ತಾರೆ. ನಾನು ಯಾರು, ಹೇಗಿದ್ದೇನೆ, ಏನನ್ನು ಕಲಿಸುತ್ತೇನೆ, ಅದರಂತೆ ಕೆಲವರು ಮಾತ್ರ ನಡೆಯುತ್ತಾರೆ. ಶೋಭ ಯಾತ್ರೆಯಲ್ಲಿಯೂ ಸಹ ಇದನ್ನೇ ತೋರಿಸಿ - ನಾವು ಈ ವಿದ್ಯೆಯಿಂದ ಸ್ವರ್ಗವಾಸಿಗಳಾಗುತ್ತಿದ್ದೇವೆ. ಸತ್ಯ-ತ್ರೇತಾ, ದ್ವಾಪರ-ಕಲಿಯುಗ...... ಈ ಚಕ್ರವು ಸುತ್ತುತ್ತಿರುತ್ತದೆ ಅಲ್ಲವೆ. ನಿಮ್ಮ ಬುದ್ಧಿಯಲ್ಲಿ ಪೂರ್ಣ ಚಕ್ರ ಇದೆ, ಮತ್ತೆ ತಾವು ಸುಖಧಾಮ, ಶಾಂತಿಧಾಮಕ್ಕೆ ಮಾಲೀಕರಾಗುತ್ತೀರಿ. ಸುಖಧಾಮದಲ್ಲಿ ದುಃಖದ ಹೆಸರೇ ಇರುವುದಿಲ್ಲ. ಒಂದು ವೇಳೆ ಪೂರ್ಣ ಓದದಿದ್ದರೆ ಪದವಿಯೂ ಸಹ ಕಡಿಮೆಯಾಗುತ್ತದೆ. ಇದಂತೂ ಸಾಮಾನ್ಯವಾದಂತಹ ವಿಚಾರವಾಗಿದೆ, ಆದ್ದರಿಂದ ಬೇಹದ್ದಿನ ವಿದ್ಯೆಯನ್ನು ಓದಿ ಬೇಹದ್ದಿನ ಆಸ್ತಿಯನ್ನು ಪಡೆದುಕೊಳ್ಳಿ. ಕೇವಲ ತಮ್ಮನ್ನು ಆತ್ಮನೆಂದು ತಿಳಿದು ಬೇಹದ್ದಿನ ತಂದೆಯನ್ನು ನೆನಪು ಮಾಡಬೇಕು. ಬಹಳ ಮಧುರರಾದ ತಂದೆ ದೇಹ ಸಹಿತ ದೇಹದ ಎಲ್ಲಾ ಬಂಧನಗಳನ್ನು ಸಮಾಪ್ತಿ ಮಾಡಿ ಎನ್ನುವುದು ಅವರ ಆದೇಶವಾಗಿದೆ, ಆತ್ಮವು ಅವಿನಾಶಿಯಾಗಿದೆ. ಈಗೀಗ ಶರೀರ ಪಡೆದು ಈಗೀಗ ಬಿಡುತ್ತದೆ, ತಡವಾಗುತ್ತದೆಯೇನು? ಈ ಸಮಯದಲ್ಲಿ ದಿನ-ಪ್ರತಿ ದಿನ ಎಲ್ಲರೂ ತಮೋಪ್ರಧಾನರಾಗುತ್ತಲೇ ಇರುತ್ತಾರೆ. ಯಾವಾಗ ನಾವು ಸತೋಪ್ರಧಾನರಾಗಿದ್ದೆವೋ ಆಗ ನಾವು ಧೀರ್ಘಾಯಸ್ಸಿನವರಾಗಿದ್ದೆವು ಮತ್ತು ಬಹಳ ಕಡಿಮೆಯಿದ್ದೆವು. ಬೇರೆ ಯಾವುದೇ ಧರ್ಮವಿರಲಿಲ್ಲ. ನಿಮ್ಮ ಆಯಸ್ಸು ಈಗಿನ ಪುರುಷಾರ್ಥದಿಂದಲೇ ಹೆಚ್ಚುತ್ತದೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ನಿಮ್ಮ ಆಯಸ್ಸು ಹೆಚ್ಚುತ್ತದೆ. ಯಾವಾಗ ತಾವು ಸತೋಪ್ರಧಾನರಾಗಿದ್ದಿರಿ ಆಗ ನಿಮ್ಮ ಆಯಸ್ಸು ಬಹಳ ಧೀರ್ಘವಾಗಿತ್ತು ಮತ್ತೆ ಎಷ್ಟು ಕೆಳಗಿಳಿಯುತ್ತಾ ಬಂದಿರಿ ಆಯಸ್ಸು ಕಡಿಮೆಯಾಗುತ್ತಾ ಹೋಯಿತು. ರಜೋದಲ್ಲಿ ಬಂದಾಗ ಆಯಸ್ಸು ಕಡಿಮೆ, ತಮೋದಲ್ಲಿ ಬಂದಾಗ ಇನ್ನಷ್ಟು ಕಡಿಮೆಯಾಯಿತು ಹೇಗೆ ನೀರಿನ ಏತದ ರಾಟೆಯ ಉದಾಹರಣೆ ಇದೆ, ಒಂದು ಕಡೆ ನೀರು ತುಂಬುತ್ತಿದ್ದರೆ ಮತ್ತೊಂದು ಕಡೆ ಖಾಲಿಯಾಗುತ್ತಿರುತ್ತದೆ ಇದೂ ಸಹ ಏತದ ರಾಟೆಯ ಹಾಗೆ. ಈಗ ನೀವು ತುಂಬಿಸಿಕೊಳ್ಳುತ್ತಿದ್ದೀರಿ ಪೂರ್ತಿ ತುಂಬಿಸಿಕೊಂಡ ನಂತರ ನಿಧಾನವಾಗಿ ಖಾಲಿಯಾಗುತ್ತದೆ, ಇದಕ್ಕೆ ಬ್ಯಾಟರಿಯ ಉದಾಹರಣೆಯನ್ನು ಕೊಡಬಹುದು - ಈಗ ನಾವು ಸತೋಪ್ರಧಾನರಾಗಿ ಹೋಗುತ್ತೇವೆ ಮತ್ತೆ 84 ಜನ್ಮಗಳನ್ನು ಪಡೆಯುತ್ತೇವೆ. ಅರ್ಧಕಲ್ಪದ ನಂತರ ರಾವಣ ರಾಜ್ಯವು ಪ್ರಾರಂಭವಾಗುತ್ತದೆ. ರಾವಣ ರಾಜ್ಯದಲ್ಲಿ ಎಲ್ಲರಿಗೂ ನರಕವಾಸಿಗಳೆಂದು ಹೇಳಬಹುದು. ಕೊನೆಯಲ್ಲಿ ಯಾರು ಬರುತ್ತಾರೆಯೋ ಅವರು ನರಕದಲ್ಲಿಯೇ ಬರುತ್ತಾರೆ. ಮೊದಲು ನೀವು ಸ್ವರ್ಗದಲ್ಲಿ ಹೋಗುತ್ತೀರಿ. ತಂದೆಯಿಂದ ಭಕ್ತಿಯ ಫಲ ನಿಮಗೆ ಸಿಗುತ್ತದೆ. ಇವರು ಬಹಳ ಭಕ್ತಿಯನ್ನು ಮಾಡಿದ್ದಾರೆ ಅದಕ್ಕೆ ಜ್ಞಾನವನ್ನು ಪಡೆಯುತ್ತಾರೆಂದು ತಿಳಿಯಲಾಗುತ್ತದೆ. ಇದೆಲ್ಲಾ ರಹಸ್ಯವನ್ನು ತಂದೆಯೇ ನಮಗೆ ತಿಳಿಸಿದ್ದಾರೆ. ತಾವು ಮತ್ತೆ ಅನ್ಯರಿಗೂ ತಿಳಿಸಬೇಕು. ಮನುಷ್ಯರು ಅನೇಕ ಪ್ರಕಾರದ ಪಾಪಗಳನ್ನೇ ಮಾಡಿದ್ದಾರೆ. ಈಗ ತಂದೆಯು ಬಂದಿದ್ದಾರೆ, ನಿಮಗೆ ಜ್ಞಾನವನ್ನು ಕೊಡುತ್ತಿದ್ದಾರೆ. ತಂದೆಯು ಬಂದಾಗಲೇ ಅವರು ಓದಿಸುತ್ತಾರೆ. ಇಷ್ಟು ಸಮಯವಂತೂ ಗೊತ್ತೇ ಇರಲಿಲ್ಲ. ಆದ್ದರಿಂದ ಪಾಪಾತ್ಮರಾಗುತ್ತಲೇ ಹೋದರು. ಪುಣ್ಯಾತ್ಮರಂತೂ ಹೇಗಾಗುತ್ತಾರೆ ಮತ್ತು ಪಾಪಾತ್ಮರು ಹೇಗಾಗುತ್ತಾರೆ, ಸತ್ಯಯುಗದ ನಿವಾಸಿಗಳು ಯಾರಾಗುತ್ತಾರೆ, ಕಲಿಯುಗದ ನಿವಾಸಿಗಳು ಯಾರಾಗುತ್ತಾರೆ - ಏನೂ ಗೊತ್ತಿರಲಿಲ್ಲ. ಈಗ ತಂದೆಯು ತಿಳಿಸಿದ್ದಾರೆ - ತಂದೆಗೆ ಪರಂ ಜ್ಯೋತಿಯೆಂದು ಹೇಳಲಾಗುತ್ತದೆ. ಅವರಲ್ಲಿ ಪ್ರಕಾಶವೂ ಇದೆ, ಶಕ್ತಿಯೂ ಇದೆ. ಪ್ರಕಾಶದಲ್ಲಿ ಬರುತ್ತೀರೆಂದರೆ ಜಾಗೃತರಾಗುತ್ತೀರಿ ಅಂದಾಗ ಶಕ್ತಿಯೂ ಬರುತ್ತದೆ. ತಮ್ಮ ಜೀವನವೂ ಸಹ ದೀರ್ಘವಾಗುತ್ತದೆ. ತಮ್ಮನ್ನು ಅಲ್ಲಿ ಮೃತ್ಯುವು ಕಬಳಿಸಲು ಸಾಧ್ಯವಿಲ್ಲ. ಖುಷಿಯಿಂದ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ಪಡೆಯುತ್ತೀರಿ. ದುಃಖದ ಯಾವುದೇ ಮಾತಿಲ್ಲ. ಒಂದು ರೀತಿಯಾಗಿ ಆಟವಾಗಿರುತ್ತದೆ (ಸರ್ಪದ ಉದಾಹರಣೆ). ತಾವು ಸತ್ಯಯುಗದಿಂದ ಕಲಿಯುಗದ ತನಕ ಪಾತ್ರ ಮಾಡಿದ್ದೀರಿ. ಇದು ಬುದ್ಧಿಯಲ್ಲಿ ಕುಳಿತಿದೆ. ಬಾಬಾ ನಿಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ಇದನ್ನು ಕೇವಲ ನೀವು ಮಕ್ಕಳು ನಂಬರ್ ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಪುನರ್ ಜನ್ಮ ಹಾಗೂ ನೀವು ಎಷ್ಟು ಜನ್ಮಗಳನ್ನು ಪಡೆಯುತ್ತೀರಿ ಎಂಬುದನ್ನು ತಾವೇ ತಿಳಿದುಕೊಂಡಿದ್ದೀರಿ. ಬ್ರಾಹ್ಮಣ ಧರ್ಮದಲ್ಲಿ ತಾವು ಎಷ್ಟು ಜನ್ಮಗಳನ್ನು ಪಡೆಯುತ್ತೀರಿ? (ಒಂದು ಜನ್ಮ) ಕೆಲವರು 2-3 ಜನ್ಮಗಳನ್ನು ಪಡೆಯುತ್ತಾರೆ. ತಿಳಿದುಕೊಳ್ಳಿ, ಯಾರಾದರೂ ಶರೀರ ಬಿಡುತ್ತಾರೆಂದರೆ ಅವರು ಬ್ರಾಹ್ಮಣತನದ ಸಂಸ್ಕಾರವನ್ನೇ ತೆಗೆದುಕೊಂಡು ಹೋಗುತ್ತಾರೆ ಅಂದಮೇಲೆ ಸಂಸ್ಕಾರವು ಬ್ರಾಹ್ಮಣರಾಗಿರುವ ಕಾರಣ ಮತ್ತೆ ಸತ್ಯ-ಸತ್ಯ ಬ್ರಾಹ್ಮಣ ಕುಲದಲ್ಲಿ ಬರುತ್ತಾರೆ. ಬ್ರಾಹ್ಮಣ ಕುಲದ ಆತ್ಮರು ವೃದ್ಧಿಯಾಗುತ್ತಲೇ ಇರುತ್ತಾರೆ. ಬ್ರಾಹ್ಮಣ ಕುಲದ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರಲ್ಲವೆ. ಸ್ವಲ್ಪ ಲೆಕ್ಕಾಚಾರವಿದ್ದರೆ 2-3 ಜನ್ಮಗಳನ್ನು ಪಡೆಯಬಹುದು. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ಪಡೆಯುತ್ತಾರೆ. ಆತ್ಮವು ಬ್ರಾಹ್ಮಣ ಕುಲದಿಂದ ದೈವೀ ಕುಲದಲ್ಲಿ ಹೋಗುತ್ತದೆ. ಶರೀರದ ಮಾತಂತೂ ಇಲ್ಲ. ಈಗ ತಾವು ತಂದೆಗೆ ಮಕ್ಕಳಾಗಿದ್ದೀರಿ. ತಾವು ಈಶ್ವರೀಯ ಸಂತಾನರಾಗಿದ್ದೀರಿ ಮತ್ತು ಪ್ರಜಾಪಿತ ಬ್ರಹ್ಮನಿಗೂ ಸಂತಾನರಾಗಿದ್ದೀರಿ. ಬೇರೆ ಯಾವುದೇ ಸಂಬಂಧವಿಲ್ಲ. ಬೇಹದ್ದಿನ ತಂದೆಯ ಮಕ್ಕಳಾಗುವುದು ಕಡಿಮೆ ಮಾತೇನು! ತಾವು ಸುಖಧಾಮದ ಮಾಲೀಕರಾಗಿ ಬಿಡುತ್ತೀರಿ. ಕೇವಲ ಆ ಹಿರಿಯ ತಂದೆಯನ್ನು ಪರಿಚಯ ಮಾಡಿಕೊಂಡರೆ ಸಾಕು ನಿಮ್ಮ ಜೀವನದ ದೋಣಿಯು ಪಾರಾಗಿ ಬಿಡುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತ-ಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಗುಡ್ಮಾರ್ನಿಂಗ್. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

೧. ತಮ್ಮನ್ನು ತಾವು ಕೇಳಿಕೊಳ್ಳಿ - 1. ನಮಗೆ ಖುಷಿ ಎಷ್ಟಿರುತ್ತದೆ? 2. ನಾವು ಸರ್ವಗುಣ ಸಂಪನ್ನರಾಗಿದ್ದೆವು ಈಗ ಶ್ರೀಮತದಂತೆ ಪುನಃ ಆಗಬೇಕೆನ್ನುವ ನಿಶ್ಚಯವು ಎಲ್ಲಿಯವರೆಗೆ ಇದೆ? 3. ನಾವು ಸತೋಪ್ರಧಾನರು ಎಲ್ಲಿಯವರೆಗೆ ಆಗಿದ್ದೇವೆ? ಹಗಲು-ರಾತ್ರಿ ಸತೋಪ್ರಧಾನರಾಗುವ ಚಿಂತೆಯಿರುತ್ತದೆಯೇ?

೨. ಬೇಹದ್ದಿನ ತಂದೆಯ ಜೊತೆ ವಿಶ್ವದ ಸೇವೆಯನ್ನು ಮಾಡಬೇಕಾಗಿದೆ. ಬೇಹದ್ದಿನ ವಿದ್ಯೆಯನ್ನು ಓದಬೇಕು ಹಾಗೂ ಓದಿಸಬೇಕಾಗಿದೆ. ದೇಹಸಹಿತ ಯಾವುದೆಲ್ಲಾ ಬಂಧನವಿದೆಯೋ ಅದನ್ನು ತಂದೆಯ ನೆನಪಿನಲ್ಲಿ ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ.

ವರದಾನ:
ಸೇವೆಯಲ್ಲಿ ಮಾನ್-ಷಾನ್ ನ ಕಚ್ಛಾ ಫಲವನ್ನು ತ್ಯಾಗ ಮಾಡಿ ಸದಾ ಪ್ರಸನ್ನ ಚಿತ್ತರಾಗಿರುವಂತಹ ಅಭಿಮಾನ ಮುಕ್ತ ಭವ.

ರಾಯಲ್ ರೂಪದ ಇಚ್ಛೆಯ ಸ್ವರೂಪ ಹೆಸರು, ಮಾನ್ಯತೆ, ಮತ್ತು ಘನತೆಯಾಗಿದೆ. ಯಾರು ಹೆಸರಿಗಾಗಿ ಸೇವೆ ಮಾಡುವರು, ಅವರ ಹೆಸರು ಅಲ್ಪಕಾಲಕ್ಕಾಗಿ ಆಗಿ ಬಿಡುವುದು. ಆದರೆ ಶ್ರೇಷ್ಠ ಪದವಿ ಪಡೆಯುವಲ್ಲಿ ಹೆಸರು ಹಿಂದೆ ಹೋಗಿ ಬಿಡುತ್ತದೆ. ಏಕೆಂದರೆ ಕಚ್ಛ ಫಲ ಸ್ವೀಕಾರ ಮಾಡಿ ಬಿಟ್ಟರು. ಎಷ್ಟೋ ಮಕ್ಕಳು ಯೋಚಿಸುತ್ತಾರೆ ಸೇವೆಯ ಫಲಿತಾಂಶದಲ್ಲಿ ನನಗೆ ಮಾನ್ಯತೆ ಸಿಗಬೇಕಿತ್ತು ಎಂದು ಆದರೆ ಇದು ಮಾನ್ಯತೆ ಅಲ್ಲ ಅಭಿಮಾನವಾಗಿದೆ. ಎಲ್ಲಿ ಅಭಿಮಾನವಿದೆ ಅಲ್ಲಿ ಪ್ರಸನ್ನತೆ ಇರಲು ಸಾಧ್ಯವಿಲ್ಲ. ಆದ್ದರಿಂದ ಅಭಿಮಾನ ಮುಕ್ತರಾಗಿ ಸದಾ ಪ್ರಸನ್ನತೆಯ ಅನುಭವ ಮಾಡಿ.

ಸ್ಲೋಗನ್:
ಪರಮಾತ್ಮ ಪ್ರೀತಿಯ ಸುಖಧಾಯಿ ಉಯ್ಯಾಲೆಯಲ್ಲಿ ತೂಗಾಡಿ ಆಗ ದುಃಖದ ಅಲೆಗಳು ಬರಲು ಸಾಧ್ಯವಿಲ್ಲ.


ಬ್ರಹ್ಮಾ ತಂದೆಯ ಸಮಾನರಾಗಲು ವಿಶೇಷ ಪುರುಷಾರ್ಥ -
ನಂಬರ್ ವನ್ ಬ್ರಹ್ಮನ ಆತ್ಮದ ಜೊತೆ ನೀವೆಲ್ಲರೂ ಸಹಾ ಫರಿಶ್ಥಾ ಆಗಿ ಅವ್ಯಕ್ತ ವತನದಲ್ಲಿ ಹೋಗಿ ನಂತರ ಪರಮಧಾಮದಲ್ಲಿ ಹೋಗ ಬೇಕಿದೆ. ಆದ್ದರಿಂದ ಮನಸ್ಸಿನ ಏಕಾಗ್ರತೆಯ ಮೇಲೆ ವಿಶೇಷ ಗಮನ ಕೊಡಿ, ಆದೇಶ ಪ್ರಮಾಣ ಮನಸ್ಸನ್ನು ನಡೆಸಿ. ಪ್ರತಿ ಮಾತಿನಲ್ಲಿ, ವೃತ್ತಿಯಲ್ಲಿ, ದೃಷ್ಠಿಯಲ್ಲಿ, ಕರ್ಮದಲ್ಲಿ ನ್ಯಾರಾತನದ ಅನುಭವವಾಗಲಿ. ಫರಿಶ್ಥಾತನದ ಅನುಭೂತಿ ಸ್ವಯಂ ಸಹ ಮಾಡಿ ಮತ್ತು ಬೇರೆಯವರಿಗೂ ಸಹ ಮಾಡಿಸಿ.