10.01.21    Avyakt Bapdada     Kannada Murli    09.10.87     Om Shanti     Madhuban


ಅಲೌಕಿಕ ರಾಜ್ಯಸಭೆಯ (ದರ್ಬಾರು) ಸಮಾಚಾರ


ಬಾಪ್ದಾದಾರವರು ಇಂದು ತನ್ನ ಸ್ವ-ರಾಜ್ಯಾಧಿಕಾರಿ ಮಕ್ಕಳ ರಾಜ್ಯ ಸಭೆಯನ್ನು ನೋಡುತ್ತಿದ್ದಾರೆ. ಇಡೀ ಕಲ್ಪದಲ್ಲಿಯೂ ಈ ಸಭೆಯು ಸಂಗಮಯುಗದ ಭಿನ್ನವಾದ ಹಾಗೂ ಶ್ರೇಷ್ಠ ಗೌರವಯುತ ಅಲೌಕಿಕ ಸಭೆಯು ವಿಶೇಷವಾದ ಹಾಗೂ ಅತಿ ಪ್ರಿಯವಾದ ಸಭೆಯಾಗಿದೆ. ಈ ರಾಜ್ಯ ಸಭೆಯ ಆತ್ಮಿಕ ಶೋಭೆ, ಆತ್ಮಿಕ ಕಮಲ-ಆಸನ, ಆತ್ಮಿಕ ಕಿರೀಟ ಹಾಗೂ ತಿಲಕ, ಚಹರೆಯ ಹೊಳಪು, ಸ್ಥಿತಿಯ ಶ್ರೇಷ್ಠ ಸ್ಮೃತಿಯ ವಾಯುಮಂಡಲದಲ್ಲಿರುವ ಅಲೌಕಿಕ ಸುಗಂಧವು ಬಹಳ ರಮಣೀಕ ಹಾಗೂ ಅತ್ಯಾಕರ್ಷಕ ಮಾಡುವಂತದ್ದಾಗಿದೆ. ಬಾಪ್ದಾದಾರವರು ಇಂತಹ ಸಭೆಯಲ್ಲಿರುವ ಪ್ರತಿಯೊಬ್ಬ ರಾಜ್ಯಾಧಿಕಾರಿ ಆತ್ಮನನ್ನು ನೋಡುತ್ತಾ ಹರ್ಷಿತವಾಗುತ್ತಿದ್ದಾರೆ. ಇದೆಷ್ಟು ದೊಡ್ಡ ಸಭೆಯಾಗಿದೆ! ಇದರಲ್ಲಿ ಪ್ರತಿಯೊಬ್ಬ ಬ್ರಾಹ್ಮಣ ಮಗುವೂ ಸ್ವರಾಜ್ಯ-ಅಧಿಕಾರಿಯಾಗಿದ್ದಾರೆ. ಇದರಲ್ಲಿ ಎಷ್ಟೊಂದು ಬ್ರಾಹ್ಮಣ ಮಕ್ಕಳಿದ್ದಾರೆ, ಸಭೆಯಲ್ಲಿ ಎಲ್ಲಾ ಬ್ರಾಹ್ಮಣರನ್ನು ಒಂದು ಕಡೆ ಸೇರಿಸಿದರೆ, ಎಷ್ಟೊಂದು ದೊಡ್ಡ ರಾಜ್ಯ ಸಭೆಯೇ ಆಗಿ ಬಿಡುತ್ತದೆ. ಇಷ್ಟು ದೊಡ್ಡದಾದ ರಾಜ್ಯ ಸಭೆಯು ಯಾವುದೇ ಯುಗದಲ್ಲಾಗುವುದಿಲ್ಲ. ಸಂಗಮಯುಗದ ವಿಶೇಷತೆಯೂ ಇದೇ ಆಗಿದೆ, ಅದರಲ್ಲಿ ಸರ್ವ ಶ್ರೇಷ್ಠ ತಂದೆಯ ಸರ್ವ ಮಕ್ಕಳೂ ಸ್ವರಾಜ್ಯ-ಅಧಿಕಾರಿಯಾಗುತ್ತಾರೆ. ಹಾಗೆ ನೋಡಿದಾಗ ಲೌಕಿಕ ಪರಿವಾರದಲ್ಲಿಯೂ ಪ್ರತಿಯೊಬ್ಬರ ತಂದೆಯೂ ಸಹ ಮಕ್ಕಳಿಗೆ ಹೇಳುತ್ತಾರೆ - ನನ್ನ ಈ ಮಗುವು `ರಾಜಾ' ಮಗುವಾಗಿದೆ ಅಥವಾ ನನ್ನ ಪ್ರತಿಯೊಬ್ಬ ಮಕ್ಕಳು ರಾಜರಾಗಲಿ ಎನ್ನುವ ಇಚ್ಛೆಯನ್ನಿಡುತ್ತಾರೆ. ಆದರೆ ಎಲ್ಲಾ ಮಕ್ಕಳು ರಾಜರಾಗಲು ಸಾಧ್ಯವಿಲ್ಲ. ಈ ಹೇಳಿಕೆಯನ್ನು ಪರಮಾತ್ಮ ತಂದೆಯಿಂದ ಕಾಪಿ ಮಾಡಿದ್ದಾರೆ, ಈ ಸಮಯದಲ್ಲಿ ಬಾಪ್ದಾದಾರವರು ಎಲ್ಲಾ ಮಕ್ಕಳನ್ನು ರಾಜಯೋಗಿಗಳನ್ನಾಗಿ ಅರ್ಥಾತ್ ಸ್ವಯಂನ ರಾಜರು, ಅವಶ್ಯವಾಗಿ ನಂಬರ್ವಾರ್ ಇದ್ದಾರೆ ಆದರೆ ಇಲ್ಲಿರುವವರೆಲ್ಲರೂ ರಾಜಯೋಗಿಗಳು, ಯಾರೂ ಸಹ ಪ್ರಜಾಯೋಗಿಗಳಲ್ಲ. ಅಂದಮೇಲೆ ಬಾಪ್ದಾದಾರವರು ಬೇಹದ್ದಿನ ರಾಜ್ಯ ಸಭೆಯನ್ನು ನೋಡುತ್ತಿದ್ದರು. ಎಲ್ಲರೂ ತಮ್ಮನ್ನು ಸ್ವರಾಜ್ಯ ಅಧಿಕಾರಿ ಎಂದು ತಿಳಿಯುತ್ತೀರಲ್ಲವೇ? ಹೊಸದಾಗಿ ಬಂದಿರುವ ಮಕ್ಕಳು ರಾಜ್ಯಾಧಿಕಾರಿ ಆಗಿದ್ದೀರಾ ಅಥವಾ ಈಗ ಆಗಬೇಕಾಗಿದೆಯೇ? ಹೊಸಬರಾಗಿದ್ದಾರೆ ಆದ್ದರಿಂದ ಮಿಲನ ಮಾಡುವುದು ಇತ್ಯಾದಿ ಎಲ್ಲವನ್ನೂ ಕಲಿಯುತ್ತಿದ್ದಾರೆ. ಅವ್ಯಕ್ತ ತಂದೆಯ ಅವ್ಯಕ್ತ ಮಾತುಗಳನ್ನು ತಿಳಿದುಕೊಳ್ಳುವ ಹವ್ಯಾಸವಾಗುತ್ತದೆ. ಹೀಗಿದ್ದರೂ ಈ ಸಮಯವನ್ನು ಅತಿ ಹೆಚ್ಚಾಗಿ ಅಂತಹ ಸಮಯದಲ್ಲಿ ತಿಳಿಯುತ್ತೀರಿ - ನಾವೆಲ್ಲಾ ಆತ್ಮರು ಎಷ್ಟೊಂದು ಭಾಗ್ಯಶಾಲಿ ಆಗಿದ್ದೇವೆ!

ಬಾಪ್ದಾದಾರವರು ಅಲೌಕಿಕ ರಾಜ್ಯ ಸಭೆಯ ಸಮಾಚಾರವನ್ನು ತಿಳಿಸುತ್ತಿದ್ದರು. ಅದರಲ್ಲಿ ವಿಶೇಷವಾಗಿ ಎಲ್ಲಾ ಮಕ್ಕಳ ಕಿರೀಟ ಮತ್ತು ಚಹರೆಯ ಹೊಳಪಿನ ಪ್ರತಿ, ಅದನ್ನು ಬಯಸದಿದ್ದರೂ ಗಮನ ಹರಿಯುತ್ತಿತ್ತು. ಕಿರೀಟವು ಬ್ರಾಹ್ಮಣ ಜೀವನದ ವಿಶೇಷತೆಯಾಗಿ `ಪವಿತ್ರತೆ'ಯದೇ ಸೂಚಕವಾಗಿದೆ. ಚಹರೆಯ ಹೊಳಪು ಆತ್ಮಿಕ ಸ್ಥಿತಿಯಲ್ಲಿ ಸ್ಥಿತರಾಗುವ ಆತ್ಮೀಯತೆಯ ಹೊಳಪಿದೆ. ಸಾಧಾರಣ ರೀತಿಯಿಂದ ಯಾವುದೇ ವ್ಯಕ್ತಿಯನ್ನು ನೋಡುತ್ತೀರೆಂದರೂ, ಮೊಟ್ಟ ಮೊದಲು ಚಹರೆಯ ಮೇಲೆ ದೃಷ್ಟಿ ಹೋಗುತ್ತದೆ. ಈ ಚಹರೆಯೇ ವೃತ್ತಿ ಮತ್ತು ಸ್ಥಿತಿಯ ದರ್ಪಣವಾಗಿದೆ. ಆದ್ದರಿಂದ ಬಾಪ್ದಾದಾರವರು ನೋಡುತ್ತಿದ್ದರು - ಎಲ್ಲರಲ್ಲಿಯೂ ಹೊಳಪಿತ್ತು. ಆದರೆ 1. ಸದಾ ಆತ್ಮೀಯತೆ ಸ್ಥಿತಿಯಲ್ಲಿ ಸ್ಥಿತರಾಗಿರುವವರು, ಸ್ವತಹ ಮತ್ತು ಸಹಜ ಸ್ಥಿತಿಯವರಿದ್ದರು ಮತ್ತು 2. ಸದಾ ಆತ್ಮಿಕ ಸ್ಥಿತಿಯ ಅಭ್ಯಾಸದ ಮೂಲಕ ಸ್ಥಿತರಾಗುವವರು, ಪ್ರಯತ್ನ ಪಟ್ಟು ಸ್ಥಿತರಾಗುವವರು ಅರ್ಥಾತ್ ಒಬ್ಬರಿದ್ದರು ಸಹಜಯೋಗಿ, ಇನ್ನೊಬ್ಬರು ಪುರುಷಾರ್ಥದಿಂದ ಯೋಗಿ ಆಗುವವರು. ಇಬ್ಬರ ಹೊಳಪಿನಲ್ಲಿ ಅಂತರವಾಯಿತು. ಸಹಜ ಸ್ಥಿತಿಯವರಲ್ಲಿ ಸ್ವಾಭಾವಿಕ ಸೌಂದರ್ಯವಿತ್ತು ಮತ್ತು ಎರಡನೇ ಪ್ರಕಾರದವರಲ್ಲಿ ಹೇಗೆಂದರೆ ಇತ್ತೀಚೆಗೂ ಸಹ ಮೇಕಪ್ ಮಾಡಿಕೊಂಡು ಸುಂದರವಾಗುತ್ತಾರಲ್ಲವೆ ಹಾಗೆ ಪುರುಷಾರ್ಥದ ಮೂಲಕ ಸೌಂದರ್ಯವಿತ್ತು. ಸ್ವಾಭಾವಿಕ ಸೌಂದರ್ಯದ ಹೊಳಪು ಸದಾ ಏಕರಸವಾಗಿ ಇರುತ್ತದೆ ಮತ್ತು ಉಳಿದೆಲ್ಲಾ ಸೌಂದರ್ಯವು ಕೆಲವೊಮ್ಮೆ ಬಹಳ ಚೆನ್ನಾಗಿ, ಮತ್ತೆ ಕೆಲವೊಮ್ಮೆ ಶೇಕಡಾವಾರು ಇರುತ್ತದೆ, ಅದು ಒಂದೇ ರೀತಿ ಏಕರಸವಾಗಿ ಇರುವುದಿಲ್ಲ. ಅಂದಾಗ ಸದಾ ಸಹಜ ಯೋಗಿ, ಸ್ವತಹ ಯೋಗಿ ಸ್ಥಿತಿಯು ನಂಬರ್ವನ್ ಸ್ವರಾಜ್ಯ-ಅಧಿಕಾರಿಯನ್ನಾಗಿ ಮಾಡುತ್ತದೆ. ಬ್ರಾಹ್ಮಣ ಜೀವನವೆಂದರೆ ಒಬ್ಬ ತಂದೆಯೇ ನನ್ನ ಪ್ರಪಂಚವಾಗಿದ್ದಾರೆ ಅಥವಾ ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ ಎಂಬ ಪ್ರತಿಜ್ಞೆಯು ಎಲ್ಲಾ ಮಕ್ಕಳು ಮಾಡಿದ್ದಾರೆ, ಯಾವಾಗ ಪ್ರಪಂಚವೇ ತಂದೆಯಾಗಿದ್ದಾರೆ. ಮತ್ತ್ಯಾರೂ ಇಲ್ಲವೇ ಇಲ್ಲ ಅಂದಮೇಲೆ ಸ್ವತಹ ಮತ್ತು ಸಹಜ ಯೋಗಿ ಸ್ಥಿತಿಯು ಸದಾ ಇರುತ್ತದೆಯಲ್ಲವೆ, ಅಥವಾ ಪರಿಶ್ರಮ ಪಡಬೇಕಾಗುತ್ತದೆಯೇ? ಒಂದುವೇಳೆ ಬೇರೊಬ್ಬರಿದ್ದರೆ ಬುದ್ಧಿಯು ಇಲ್ಲಿ ಹೋಗಬಾರದು, ಅಲ್ಲಿ ಹೋಗಲಿ ಎಂದು ಪರಿಶ್ರಮ ಪಡಬೇಕಾಗುತ್ತದೆ. ಆದರೆ ಒಬ್ಬ ತಂದೆಯೇ ಸರ್ವಸ್ವವಾಗಿದ್ದಾರೆಂದರೆ ಬುದ್ಧಿಯು ಮತ್ತೆಲ್ಲಿಗೆ ಹೋಗುತ್ತದೆ? ಎಲ್ಲಿಯೂ ಹೋಗುವುದೇ ಇಲ್ಲವೆಂದರೆ ಅಭ್ಯಾಸವನ್ನೇನು ಮಾಡುವಿರಿ? ಅಭ್ಯಾಸದಲ್ಲಿಯೇ ಅಂತರವಾಗುತ್ತದೆ. ಒಂದು - ಸ್ವತಹ ಅಭ್ಯಾಸವಿರುವುದು ಮತ್ತು ಇನ್ನೊಂದು ಪರಿಶ್ರಮ ಪಡುವ ಅಭ್ಯಾಸ. ಅಂದಾಗ ಸ್ವರಾಜ್ಯ-ಅಧಿಕಾರಿ ಮಕ್ಕಳು ಸಹಜ ಅಭ್ಯಾಸಿಯಾಗಬೇಕು - ಇದೇ ಸಹಜ ಯೋಗಿ, ಸ್ವತಹ ಯೋಗಿಯಾಗುವ ಚಿಹ್ನೆಯಾಗಿದೆ. ಇಂತಹವರ ಚಹರೆಯ ಹೊಳಪು ಅಲೌಕಿಕವಾಗಿರುತ್ತದೆ, ಅನ್ಯರೂ ಸಹ ಅವರ ಚಹರೆಯನ್ನು ನೋಡಿದ ಕೂಡಲೇ ಅನುಭವ ಮಾಡುತ್ತಾರೆ - ಇವರು ಶ್ರೇಷ್ಠ ಪ್ರಾಪ್ತಿ ಸ್ವರೂಪ ಸಹಜಯೋಗಿಯಾಗಿದ್ದಾರೆ. ಯಾವ ರೀತಿ ಸ್ಥೂಲ ಧನ ಅಥವಾ ಸ್ಥೂಲ ಪದವಿಯ ಪ್ರಾಪ್ತಿಯ ಹೊಳಪು ಚಹರೆಯಿಂದ ತಿಳಿಯುತ್ತದೆ - ಇವರು ಸಾಹುಕಾರ ಕುಲದವರು ಅಥವಾ ಶ್ರೇಷ್ಠ ಪದವಿಯ ಅಧಿಕಾರಿಗಳು ಎಂದು ತಿಳಿಯುತ್ತದೆಯೋ ಹಾಗೆಯೇ ಇವರು ಶ್ರೇಷ್ಠ ಪ್ರಾಪ್ತಿ, ಶ್ರೇಷ್ಠ ರಾಜ್ಯಾಧಿಕಾರಿ ಅರ್ಥಾತ್ ಶ್ರೇಷ್ಠ ಪದವಿಯ ಪ್ರಾಪ್ತಿಯ ನಶೆಯು ಅಥವಾ ಹೊಳಪು ಚಹರೆಯಿಂದ ಕಂಡುಬರುತ್ತದೆ. ಇವರನ್ನು ದೂರದಿಂದಲೇ ನೋಡುತ್ತಾ ಅನುಭವ ಮಾಡುತ್ತಾರೆ - ಇವರೇನೋ ಪಡೆದುಕೊಂಡಿದ್ದಾರೆ, ಪ್ರಾಪ್ತಿ ಸ್ವರೂಪ ಆತ್ಮರಾಗಿದ್ದಾರೆ ಎಂದು. ಇದೇ ರೀತಿಯಲ್ಲಿ ರಾಜ್ಯಾಧಿಕಾರಿ ಮಕ್ಕಳೆಲ್ಲರಲ್ಲಿ ಹೊಳೆಯುತ್ತಿರುವ ಮುಖವು ಕಂಡುಬರಲಿ, ಚಹರೆಯಲ್ಲಿ ಪರಿಶ್ರಮದ ಚಿಹ್ನೆಯೂ ಕಾಣಿಸಬಾರದು, ಪ್ರಾಪ್ತಿಯ ಚಿಹ್ನೆಯೇ ಕಾಣಿಸಲಿ. ಈಗಲೂ ಸಹ ಕೆಲಕೆಲವು ಮಕ್ಕಳ ಚಹರೆಯನ್ನು ನೋಡುತ್ತಾ ಇದನ್ನೇ ಹೇಳುತ್ತಾರೆ - ಇವರೇನೋ ಪಡೆದಿದ್ದಾರೆ, ಮತ್ತೆ ಕೆಲಕೆಲವು ಮಕ್ಕಳ ಚಹರೆಯನ್ನು ನೋಡುತ್ತಾ ಇದನ್ನೂ ಹೇಳುತ್ತಾರೆ - ಇದು ಶ್ರೇಷ್ಠ ಗುರಿಯಾಗಿದೆ ಆದರೆ ತ್ಯಾಗವೂ ಸಹ ಬಹಳ ಶ್ರೇಷ್ಠವಾದುದನ್ನೇ ಮಾಡಿದ್ದಾರೆ. ಚಹರೆಯಿಂದ ತ್ಯಾಗವು ಕಾಣಿಸುತ್ತದೆ, ಭಾಗ್ಯವು ಕಾಣಿಸುವುದಿಲ್ಲ. ಅಥವಾ ಹೀಗೆ ಹೇಳುತ್ತಾರೆ - ಬಹಳ ಒಳ್ಳೆಯ ಪರಿಶ್ರಮ ಮಾಡುತ್ತಿದ್ದಾರೆ.

ಬಾಪ್ದಾದಾರವರೂ ಸಹ ಇದನ್ನೇ ನೋಡ ಬಯಸುತ್ತಾರೆ - ಪ್ರತಿಯೊಬ್ಬ ಮಕ್ಕಳ ಚಹರೆಯಿಂದ ಸಹಜಯೋಗಿಯ ಹೊಳಪು ಕಾಣಿಸುತ್ತಿರಲಿ, ಶ್ರೇಷ್ಠ ಪ್ರಾಪ್ತಿಯ ನಶೆಯ ಹೊಳಪು ಕಾಣಿಸಲಿ. ಏಕೆಂದರೆ ಪ್ರಾಪ್ತಿಗಳ ಭಂಡಾರ ತಂದೆಯ ಮಕ್ಕಳಾಗಿದ್ದೀರಿ. ಸಂಗಮಯುಗದ ಪ್ರಾಪ್ತಿಗಳ ವರದಾನಿ ಸಮಯದ ಅಧಿಕಾರಿ ಆಗಿದ್ದೀರಿ. ನಿರಂತರ ಯೋಗವನ್ನು ಹೇಗೆ ಜೋಡಿಸುವುದು ಅಥವಾ ನಿರಂತರ ಅನುಭವ ಮಾಡುತ್ತಾ ಭಂಡಾರದ ಅನುಭೂತಿಯನ್ನೇಗೆ ಮಾಡುವುದು - ಈ ರೀತಿ ಈಗಿನವರೆಗೂ ಇದೇ ಪರಿಶ್ರಮದಲ್ಲಿಯೇ ಸಮಯವನ್ನು ವ್ಯರ್ಥಗೊಳಿಸಬಾರದು. ಆದರೆ ಸಹಜವಾಗಿ ಪ್ರಾಪ್ತಿ ಸ್ವರೂಪದ ಭಾಗ್ಯವನ್ನು ಅನುಭವ ಮಾಡಿರಿ. ಸಮಾಪ್ತಿಯ ಸಮಯವು ಸಮೀಪಿಸುತ್ತಿದೆ, ಈಗಿನವರೆಗೂ ಯಾವುದಾದರೊಂದು ಮಾತಿನ ಪರಿಶ್ರಮದಲ್ಲಿಯೇ ಇರುತ್ತೀರೆಂದರೆ, ಪ್ರಾಪ್ತಿಯ ಸಮಯವಂತು ಸಮಾಪ್ತಿಯಾಗಿ ಬಿಡುತ್ತದೆ. ಮತ್ತೆ ಪ್ರಾಪ್ತಿ ಸ್ವರೂಪದ ಅನುಭವವನ್ನು ಯಾವಾಗ ಮಾಡುವಿರಿ? ಸಂಗಮಯುಗಕ್ಕೆ, ಬ್ರಾಹ್ಮಣ ಆತ್ಮರಿಗೆ ``ಸರ್ವ ಪ್ರಾಪ್ತಿ ಭವ''ದ ವರದಾನವಿದೆ, ``ಸದಾ ಪುರುಷಾರ್ಥಿ ಭವ''ದ ವರದಾನವಿಲ್ಲ. `ಪ್ರಾಪ್ತಿ ಭವದ' ವರದಾನಿ ಆತ್ಮನೆಂದಿಗೂ ಸಹ ಹುಡುಗಾಟಿಕೆಯಲ್ಲಿ ಬರಲು ಸಾಧ್ಯವೇ ಇಲ್ಲ. ಆದ್ದರಿಂದ ಪರಿಶ್ರಮ ಪಡಬೇಕಾಗಿರುವುದಿಲ್ಲ. ಅಂದಾಗ ಏನು ಮಾಡಬೇಕು ಎನ್ನುವುದು ತಿಳಿಯಿತೆ?

ರಾಜ್ಯ ಸಭೆಯಲ್ಲಿ ರಾಜ್ಯಾಧಿಕಾರಿ ಆಗುವ ವಿಶೇಷತೆಯೇನಾಗಿದೆ ಎನ್ನುವುದು ಸ್ಪಷ್ಟವಾಯಿತಲ್ಲವೇ? ರಾಜ್ಯಾಧಿಕಾರಿ ಆಗಿದ್ದೀರಲ್ಲವೆ, ಅಥವಾ ನಾವಾಗುತ್ತೇವೆಯೋ ಅಥವಾ ಇಲ್ಲವೋ ಎಂಬುದನ್ನು ಈಗಲೂ ಯೋಚಿಸುತ್ತಿದ್ದೀರಾ? ಯಾವಾಗ ವಿದಾತಾ-ವರದಾತನ ಮಕ್ಕಳಾಗಿ ಬಿಟ್ಟಿರಿ, ರಾಜಾ ಅರ್ಥಾತ್ ವಿದಾತಾ, ಕೊಡುವವರೆಂದು ಅರ್ಥ. ಅವರ ಬಳಿ ಅಪ್ರಾಪ್ತಿಯೆನ್ನುವುದೇ ಇಲ್ಲವೆಂದರೆ ತೆಗೆದುಕೊಳ್ಳುವುದಾದರೂ ಏನಿರುತ್ತದೆ? ಅಂದಾಗ ಹೊಸ-ಹೊಸ ಮಕ್ಕಳು ಈ ಅನುಭವದಲ್ಲಿ ಇರಬೇಕು, ಯುದ್ಧದಲ್ಲಿಯೇ ಸಮಯವನ್ನು ಕಳೆಯಬಾರದು! ತಿಳಿಯಿತೆ. ಒಂದುವೇಳೆ ಯುದ್ಧದಲ್ಲಿಯೇ ಸಮಯವನ್ನು ಕಳೆಯುತ್ತೀರೆಂದರೆ ಅಂತ್ಯ ಮತಿಯೂ ಸಹ ಯುದ್ಧದಲ್ಲಿಯೇ ಇರುತ್ತೀರಿ, ನಂತರ ಏನಾಗಬೇಕಾಗುತ್ತದೆ? ಚಂದ್ರವಂಶದಲ್ಲಿ ಹೋಗುತ್ತೀರಾ ಅಥವಾ ಸೂರ್ಯವಂಶದಲ್ಲಿ ಬರುತ್ತೀರಾ? ನಡೆಯುತ್ತಿದ್ದೇವೆ, ಮಾಡುತ್ತಿದ್ದೇವೆ, ಆಗಿ ಬಿಡುತ್ತದೆ, ತಲುಪಿ ಬಿಡುತ್ತೇವೆ ಎಂಬ ಯುದ್ಧ ಮಾಡುವವರಂತು ಚಂದ್ರವಂಶದಲ್ಲಿ ಹೋಗುವರು, ಈಗಿನವರೆಗೂ ಇದೇ ಲಕ್ಷ್ಯವನ್ನಿಡಬಾರದು. ಈಗಿಲ್ಲದಿದ್ದರೆ ಮತ್ತೆಂದಿಗೂ ಇಲ್ಲ. ಈಗ ತಯಾರಾಗಬೇಕು, ಪಡೆಯಬೇಕಾಗಿರುವುದೂ ಸಹ ಈಗಲೇ ಪಡೆಯಬೇಕು ಎನ್ನುವ ಉಮ್ಮಂಗ-ಉತ್ಸಾಹದಲ್ಲಿರುವವರೇ ಸಮಯದಲ್ಲಿ ತನ್ನ ಸಂಪೂರ್ಣ ಗುರಿಯನ್ನು ಪಡೆಯಲು ಸಾಧ್ಯವಾಗುವುದು. ಯಾರೂ ಸಹ ತ್ರೇತಾದ ರಾಮನ ಸೀತೆಯಾಗಲು ತಯಾರಿಲ್ಲ, ಯಾವಾಗ ಸತ್ಯಯುಗದ ಸೂರ್ಯವಂಶದಲ್ಲಿ ಬರಬೇಕೆಂದಾಗ ಸೂರ್ಯವಂಶ ಅರ್ಥಾತ್ ಸದಾ ಮಾಸ್ಟರ್ ವಿದಾತಾ ಮತ್ತು ವರದಾತನಾಗಿರಬೇಕು, ನನಗೆ ಸಹಯೋಗ ಸಿಗಲಿ ಅಥವಾ ಇದಾದರೆ ಬಹಳ ಒಳ್ಳೆಯದು ಅಥವಾ ಪುರುಷಾರ್ಥದಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಬಿಡೋಣ ಎನ್ನುವಂತಹ ತೆಗೆದುಕೊಳ್ಳುವ ಇಚ್ಛೆಯಿರುವವರು ಆಗಬಾರದು. ಈಗ ಸಹಯೋಗ ಸಿಗುತ್ತಿದೆ, ಎಲ್ಲವೂ ಆಗುತ್ತಿದೆ - ಹೀಗಿರುವವರಿಗೆ ಸ್ವರಾಜ್ಯ ಅಧಿಕಾರಿ ಮಕ್ಕಳೆಂದು ಹೇಳಲಾಗುತ್ತದೆ. ಮುಂದುವರೆಯಬೇಕಾ ಅಥವಾ ಹಿಂದೆ ಬಂದಿದ್ದೇವೆಂದರೆ ಹಿಂದೆಯೇ ಇರಬೇಕಾ? ಮುಂದೆ ಹೋಗುವ ಸಹಜ ಮಾರ್ಗವಾಗಿದೆ ಸಹಜ ಯೋಗಿ, ಸ್ವತಹ ಯೋಗಿ ಆಗಿರಿ, ಇದು ಬಹಳ ಸಹಜವಿದೆ. ಯಾವಾಗ ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲವೆಂದಾಗ ಹೋಗುವುದಾದರೂ ಎಲ್ಲಿಗೆ? ಸರ್ವ ಪ್ರಾಪ್ತಿಗಳೇ ಇದೆಯೆಂದಾಗ ಮತ್ತೇಕೆ ಪರಿಶ್ರಮವೆನಿಸುತ್ತದೆ? ಅಂದಮೇಲೆ ಪ್ರಾಪ್ತಿಯ ಸಮಯದಲ್ಲಿ ಲಾಭವನ್ನು ಪಡೆದುಕೊಳ್ಳಿ, ಸರ್ವಪ್ರಾಪ್ತಿ ಸ್ವರೂಪರಾಗಿರಿ. ತಿಳಿಯಿತೆ? ಬಾಪ್ದಾದಾರವರಂತು ಇದನ್ನೇ ಬಯಸುತ್ತಾರೆ - ನನ್ನ ಒಂದೊಂದು ಮಗುವು ಭಲೆ ಅಂತ್ಯದಲ್ಲಿ ಬರುವವರು ಅಥವಾ ಸ್ಥಾಪನೆಯ ಆದಿಯಲ್ಲಿ ಬಂದಿರುವವರು, ಪ್ರತಿಯೊಂದು ಮಗುವೂ ನಂಬರ್ವನ್ ಆಗಲಿ. ರಾಜನಾಗಬೇಕು, ಪ್ರಜೆಯಲ್ಲ. ಒಳ್ಳೆಯದು.

ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಗ್ರೂಪ್ ಬಂದಿದ್ದಾರೆ. ಮಹಾ ಎಂಬ ಶಬ್ಧವು ಎಷ್ಟೊಂದು ಚೆನ್ನಾಗಿದೆ ನೋಡಿ. ಮಹಾರಾಷ್ಟ್ರ ಸ್ಥಾನವೂ ಸಹ ಮಹಾ ಶಬ್ಧದಲ್ಲಿದೆ ಮತ್ತು ತಾವು ಆಗಬೇಕಾಗಿರುವುದೂ ಸಹ ಮಹಾನ್. ಮಹಾನರಂತು ಆಗಿ ಬಿಟ್ಟಿರಲ್ಲವೆ. ಏಕೆಂದರೆ ತಂದೆಯ ಮಕ್ಕಳಾಗಿದ್ದೀರೆಂದರೆ ಮಹಾನ್ ಆಗಿ ಬಿಟ್ಟಿರಿ, ಮಹಾನ್ ಆತ್ಮರಾಗಿದ್ದೀರಿ. ಬ್ರಾಹ್ಮಣನ ಅರ್ಥವೇ ಮಹಾನ್ ಎಂದು. ಪ್ರತಿಯೊಂದು ಕರ್ಮವೂ ಮಹಾನ್, ಪ್ರತಿಯೊಂದು ಮಾತು ಮತ್ತು ಪ್ರತಿಯೊಂದು ಸಂಕಲ್ಪವೂ ಮಹಾನ್ ಆಗಿದೆ, ಅಲೌಕಿಕವಾಯಿತಲ್ಲವೆ. ಅಂದಮೇಲೆ ಮಹಾರಾಷ್ಟ್ರದವರು ಸದಾಕಾಲವೂ ಸ್ಮೃತಿ ಸ್ವರೂಪರಾಗಿರಿ - ನಾನು ಮಹಾನ್ ಆಗಿದ್ದೇನೆ. ಬ್ರಾಹ್ಮಣ ಅರ್ಥಾತ್ ಮಹಾನ್ ಶಿಖೆ(ಶ್ರೇಷ್ಠ) ಆಗಿದ್ದೀರಲ್ಲವೆ!

ಮಧ್ಯಪ್ರದೇಶ - ಸದಾ `ಮಧ್ಯಾಜೀ ಭವ'ದ ನಶೆಯಲ್ಲಿರುವವರು. `ಮನ್ಮನಾಭವ'ದ ಜೊತೆಗೆ `ಮಧ್ಯಾಜೀ ಭವ'ದ ವರದಾನವೂ ಇದೆ. ಅಂದಮೇಲೆ ತಮ್ಮ ಸ್ವರ್ಗದ ಸ್ವರೂಪಕ್ಕೆ ಹೇಳಲಾಗುತ್ತದೆ - `ಮಧ್ಯಾಜೀ ಭವ'. ಅಂದಮೇಲೆ ತಮ್ಮ ಶ್ರೇಷ್ಠ ಪ್ರಾಪ್ತಿಯ ನಶೆಯಲ್ಲಿ ಇರುವವರು ಅರ್ಥಾತ್ `ಮಧ್ಯಾಜೀ ಭವ'ದ ಮಂತ್ರದ ಸ್ವರೂಪದಲ್ಲಿ ಸ್ಥಿತರಾಗುವವರೂ ಸಹ ಮಹಾನ್ ಆಗಿ ಬಿಟ್ಟರು. `ಮಧ್ಯಾಜೀ ಭವ'ವಿದೆಯೆಂದರೆ `ಮನ್ಮಾನಾಭವ'ವೂ ಸಹ ಅವಶ್ಯವಾಗಿರುತ್ತದೆ. ಅಂದಾಗ ಮಧ್ಯ ಪ್ರದೇಶ ಅರ್ಥಾತ್ ಮಹಾಮಂತ್ರದ ಸ್ವರೂಪಧಾರಿಗಳು. ಇಬ್ಬರೂ ತಮ್ಮ-ತಮ್ಮ ವಿಶೇಷತೆಯಿಂದ ಮಹಾನರಾಗಿದ್ದೀರಿ. ತಾವು ಯಾರೆಂದು ತಿಳಿಯಿತೆ?

ಯಾವಾಗಿನಿಂದ ಮೊದಲ ಪಾಠವನ್ನು ಪ್ರಾರಂಭ ಮಾಡಲಾಯಿತು, ಅದರೂ ಸಹ ನಾನು ಯಾರು? ಎನ್ನುವುದನ್ನೇ ಕಲಿತರು. ಅದೇ ಮಾತನ್ನು ತಂದೆಯವರು ನೆನಪು ತರಿಸುತ್ತಾರೆ ಮತ್ತು ಅದನ್ನೇ ಮನನ ಮಾಡಬೇಕು. ಶಬ್ಧವಂತು ಒಂದೇ ಇದೆ - ನಾನು ಯಾರು, ಆದರೆ ಇದರ ಉತ್ತರವಂತು ಎಷ್ಟೊಂದಿದೆ? ನಾನು ಯಾರು? ಎನ್ನುವ ಪಟ್ಟಿಯನ್ನು ಮಾಡಿರಿ. ಒಳ್ಳೆಯದು.

ನಾಲ್ಕೂ ಕಡೆಯಲ್ಲಿರುವ ಸರ್ವಪ್ರಾಪ್ತಿ ಸ್ವರೂಪ ಶ್ರೇಷ್ಠಾತ್ಮರಿಗೆ, ಸರ್ವ ಅಲೌಕಿಕ ರಾಜ್ಯಸಭೆಯ ಅಧಿಕಾರಿ ಮಹಾನ್ ಆತ್ಮರಿಗೆ, ಸದಾ ಆತ್ಮೀಯತೆ ಹೊಳಪನ್ನು ಧಾರಣೆ ಮಾಡಿಕೊಳ್ಳುವ ವಿಶೇಷ ಆತ್ಮರಿಗೆ, ಸದಾ ಸ್ವತಹ ಯೋಗಿ, ಸಹಜಯೋಗಿ, ಸರ್ವ ಶ್ರೇಷ್ಠ ಆತ್ಮರಿಗೆ ಸರ್ವ ಶ್ರೇಷ್ಠ ಬಾಪ್ದಾದಾರವರ ಸ್ನೇಹ ಸಂಪನ್ನ ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿರಿ.

ಅವ್ಯಕ್ತ ಬಾಪ್ದಾದಾರವರೊಂದಿಗೆ ಡಬಲ್ ವಿದೇಶಿ ಸಹೋದರ-ಸಹೊದರಿಯರ ವಾರ್ತಾಲಾಪ:-
ಡಬಲ್ ವಿದೇಶಿ ಅರ್ಥಾತ್ ಸದಾ ತಮ್ಮ ಸ್ವ-ಸ್ವರೂಪ, ಸ್ವ-ದೇಶ, ಸ್ವ-ರಾಜ್ಯದ ಸ್ಮೃತಿಯಲ್ಲಿರುವವರು ಎಂದು. ಡಬಲ್ ವಿದೇಶಿಗಳು ವಿಶೇಷವಾಗಿ ಯಾವ ಸೇವೆಯನ್ನು ಮಾಡಬೇಕಾಗಿದೆ? ಈಗ ಸೈಲೆನ್ಸ್ ಶಕ್ತಿಯ ಅನುಭವವನ್ನು ಆತ್ಮರಿಗೆ ವಿಶೇಷ ರೂಪದಿಂದ ಮಾಡಿಸಬೇಕಾಗಿದೆ, ಇದೂ ಸಹ ವಿಶೇಷವಾದ ಸೇವೆಯಾಗಿದೆ. ಹೇಗೆ ಸೈನ್ಸ್ ಶಕ್ತಿಯು ಪ್ರಸಿದ್ಧವಾಗಿದೆಯಲ್ಲವೆ. ಸೈನ್ಸ್ ಏನೆಂದು ಒಬ್ಬೊಬ್ಬ ಮಗುವಿಗೂ ಗೊತ್ತಿದೆ, ಹಾಗೆಯೇ ಸೈಲೆನ್ಸ್ ಪವರ್ (ಶಾಂತಿಯಶಕ್ತಿ), ಸೈನ್ಸ್ (ವಿಜ್ಞಾನ)ಗಿಂತಲೂ ಶ್ರೇಷ್ಠವಾಗಿರುವುದಾಗಿದೆ. ಸೈಲೆನ್ಸ್ ಪವರ್ನ ಪ್ರತ್ಯಕ್ಷತೆಯೆಂದರೆ ತಂದೆಯ ಪ್ರತ್ಯಕ್ಷತೆಯಾಗುವುದು, ಆ ದಿನವೂ ಬರುತ್ತದೆ. ಹೇಗೆ ಸೈನ್ಸ್ನ ಪ್ರತ್ಯಕ್ಷ ಪ್ರಮಾಣವನ್ನು ತೋರಿಸುತ್ತಾರೆಯೋ ಹಾಗೆಯೇ ಸೈಲೆನ್ಸ್ ಪವರ್ನ ಪ್ರತ್ಯಕ್ಷ ಪ್ರಮಾಣವಾಗಿದೆ - ತಮ್ಮೆಲ್ಲರ ಜೀವನ. ಯಾವಾಗ ಇಷ್ಟೆಲ್ಲಾ ಮಕ್ಕಳ ಪ್ರತ್ಯಕ್ಷ ಪ್ರಮಾಣವು ಕಾಣಿಸುತ್ತದೆಯೋ, ಆಗ ಅವರು ಬಯಸದಿದ್ದರೂ ಸಹಜವಾಗಿಯೇ ಎಲ್ಲರ ದೃಷ್ಟಿಯಲ್ಲಿ ಬಂದು ಬಿಡುತ್ತೀರಿ. ಹೇಗೆ ಹಿಂದಿನ ವರ್ಷದಲ್ಲಿ ಈ ಶಾಂತಿಯ ಕಾರ್ಯವನ್ನು ಮಾಡಿದಿರಲ್ಲವೆ, ಇದನ್ನು ಸಭಾ ಮಂಟಪದಲ್ಲಿ ಪ್ರತ್ಯಕ್ಷವಾಗಿ ತೋರಿಸಿದಿರಿ. ಅದೇ ರೀತಿಯಲ್ಲಿ ನಡೆಯುತ್ತಾ-ತಿರುಗಾಡುತ್ತಾ ಮಾಡಲ್ ಕಾಣಿಸಿಲಿ, ಇದರಿಂದ ಸೈನ್ಸ್ನವರ ದೃಷ್ಟಿಯು ಸೈಲೆನ್ಸ್ನವರ ಮೇಲೆ ಅವಶ್ಯವಾಗಿ ಹೋಗುತ್ತದೆ. ತಿಳಿಯಿತೆ? ವಿದೇಶದಲ್ಲಿ ಸೈನ್ಸ್ನ ಅವಿಷ್ಕಾರಗಳು ಹೆಚ್ಚಾಗಿರುತ್ತದೆ. ಅಂದಮೇಲೆ ಸೈಲೆನ್ಸ್ ಶಕ್ತಿಯ ಧ್ವನಿಯೂ ಸಹ ಅಲ್ಲಿಂದಲೇ ಸಹಜವಾಗಿ ಹರಡುತ್ತದೆ. ಸೇವೆಯ ಲಕ್ಷ್ಯವಂತು ಇದ್ದೇ ಇದೆ, ಎಲ್ಲರಿಗೂ ಉಮ್ಮಂಗ-ಉತ್ಸಾಹವೂ ಇದೆ. ಹೇಗೆ ಭೋಜನವಿಲ್ಲದೇ ಇರಲು ಸಾಧ್ಯವಿಲ್ಲವೋ ಹಾಗೆಯೇ ಸೇವೆಯಿಲ್ಲದೆ ಇರಲು ಸಾಧ್ಯವಿಲ್ಲ. ಆದ್ದರಿಂದ ಬಾಪ್ದಾದಾರವರು ಖುಷಿಯಾಗಿದ್ದಾರೆ. ಒಳ್ಳೆಯದು.

ಪಾರ್ಟಿಯೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ:-
ಸ್ವದರ್ಶನ ಚಕ್ರಧಾರಿ ಶ್ರೇಷ್ಠಾತ್ಮರಾಗಿ ಬಿಟ್ಟೆವು ಎನ್ನುವಂತಹ ಅನುಭವ ಮಾಡುತ್ತೀರಾ? ಸ್ವಯಂನ ದರ್ಶನವಾಯಿತಲ್ಲವೇ? ತಮ್ಮನ್ನು ತಾವು ತಿಳಿದುಕೊಳ್ಳುವುದು ಅರ್ಥಾತ್ ಸ್ವಯಂನ ದರ್ಶನವಾಗುವುದು ಮತ್ತು ಚಕ್ರದ ಜ್ಞಾನ ತಿಳಿಯುವುದು ಅರ್ಥಾತ್ ಸ್ವದರ್ಶನ ಚಕ್ರಧಾರಿ ಆಗುವುದಾಗಿದೆ. ಯಾವಾಗ ಸ್ವದರ್ಶನ ಚಕ್ರಧಾರಿ ಆಗುತ್ತೀರೆಂದರೆ ಅನ್ಯ ಎಲ್ಲಾ ಚಕ್ರ(ಬಂಧನ)ಗಳು ಸಮಾಪ್ತಿಯಾಗಿ ಬಿಡುತ್ತದೆ. ದೇಹಭಾನದ ಚಕ್ರ, ಸಂಬಂಧದ ಚಕ್ರ, ಸಮಸ್ಯೆಗಳ ಚಕ್ರ, ಮಾಯೆಯ ಚಕ್ರಗಳೆಷ್ಟೊಂದಿದೆ! ಆದರೆ ಸ್ವದರ್ಶನ ಚಕ್ರಧಾರಿ ಆಗುವುದರಿಂದ ಇವೆಲ್ಲಾ ಚಕ್ರಗಳು ಸಮಾಪ್ತಿಯಾಗಿ ಬಿಡುತ್ತವೆ, ಎಲ್ಲಾ ಚಕ್ರಗಳಿಂದ ಹೊರ ಬಂದು ಬಿಡುತ್ತೀರಿ. ಇಲ್ಲದಿದ್ದರೆ ಆ ಜಾಲದಲ್ಲಿಯೇ ಸಿಲುಕುತ್ತೀರಿ. ಇದಕ್ಕೆ ಮೊದಲು ಸಿಲುಕಿದ್ದಿರಿ, ಈಗ ಹೊರ ಬಂದಿದ್ದೀರಿ. 63 ಜನ್ಮಗಳಲ್ಲಂತು ಅನೇಕ ಚಕ್ರಗಳಲ್ಲಿ ಸಿಲುಕುತ್ತಿದ್ದಿರಿ, ಈ ಸಮಯದಲ್ಲಿ ಇವೆಲ್ಲಾ ಚಕ್ರಗಳಿಂದ ಹೊರ ಬಂದಿದ್ದೀರಿ, ಅಂದಾಗ ಪುನಃ ಸಿಲುಕಬಾರದು. ಇದನ್ನು ಅನುಭವ ಮಾಡಿ ನೋಡಿದ್ದೀರಲ್ಲವೇ? ಅನೇಕ ಚಕ್ರಗಳಲ್ಲಿ ಸಿಲುಕುವುದರಿಂದ ಎಲ್ಲವನ್ನೂ ಕಳೆದು ಬಿಟ್ಟಿರಿ ಮತ್ತು ಸ್ವದರ್ಶನ ಚಕ್ರಧಾರಿ ಆಗುವುದರಿಂದ ತಂದೆಯು ಸಿಕ್ಕಿದರೆಂದರೆ ಎಲ್ಲವೂ ಸಿಕ್ಕಿತು. ಹಾಗಾದರೆ ಸದಾ ಸ್ವದರ್ಶನ ಚಕ್ರಧಾರಿ ಆಗಿರುತ್ತಾ, ಮಾಯಾಜೀತನಾಗಿ ಮುಂದೆ ಸಾಗಿರಿ, ಇದರಿಂದ ಸದಾ ಹಗುರವಾಗಿರುತ್ತೀರಿ. ಯಾವುದೇ ಪ್ರಕಾರದ ಹೊರೆಯ ಅನುಭವವೂ ಆಗುವುದಿಲ್ಲ. ತಮ್ಮನ್ನು ಹೊರೆಯೇ ಕೆಳಗೆ ಕರೆ ತರುತ್ತದೆ ಮತ್ತು ಹಗುರವಾಗುವುದರಿಂದ ಶ್ರೇಷ್ಠ ಮಟ್ಟದಲ್ಲಿ ಹಾರುತ್ತಿರುತ್ತೀರಿ ಅಂದಮೇಲೆ ಹಾರುವವರಲ್ಲವೇ? ಬಲಹೀನರಲ್ಲ ಅಲ್ಲವೇ? ಒಂದು ರೆಕ್ಕೆಯೇನಾದರೂ ಬಲಹೀನವಾಗಿದ್ದರೆ ಕೆಳಗೆ ಕರೆ ತರುತ್ತದೆ, ಹಾರಲು ಬಿಡುವುದಿಲ್ಲ. ಆದ್ದರಿಂದ ಎರಡೂ ರೆಕ್ಕೆಗಳೂ ಸಮರ್ಥವಾಗಿದ್ದರೆ ಸ್ವತಹವಾಗಿಯೇ ಹಾರುತ್ತಿರುತ್ತೀರಿ. ಸ್ವದರ್ಶನ ಚಕ್ರಧಾರಿ ಆಗುವುದು ಅರ್ಥಾತ್ ಹಾರುವ ಕಲೆಯಲ್ಲಿ ಸಾಗುವುದು. ಒಳ್ಳೆಯದು.

ರಾಜಯೋಗಿ, ಶ್ರೇಷ್ಠ ಯೋಗಿ ಆತ್ಮರಾಗಿದ್ದೀರಲ್ಲವೇ? ಸಾಧಾರಣ ಜೀವನದಿಂದ ಸಹಜಯೋಗಿ, ರಾಜಯೋಗಿ ಆಗಿ ಬಿಟ್ಟಿರಿ. ಇಂತಹ ಶ್ರೇಷ್ಠ ಯೋಗಿ ಆತ್ಮರು ಸದಾಕಾಲದಲ್ಲಿಯೂ ಅತೀಂದ್ರಿಯ ಸುಖದ ಉಯ್ಯಾಲೆಯಲ್ಲಿ ತೂಗುತ್ತಿರುತ್ತಾರೆ. ಹಠಯೋಗಿಯು ಯೋಗದ ಮೂಲಕ ಶರೀರವನ್ನು ಮೇಲೆತ್ತುತ್ತಾರೆ (ನೇರವಾಗಿ ಕುಳಿತುಕೊಳ್ಳುತ್ತಾರೆ) ಮತ್ತು ಹಾರುವ ಅಭ್ಯಾಸವನ್ನು ಮಾಡುತ್ತಾರೆ. ವಾಸ್ತವದಲ್ಲಿ ತಾವು ರಾಜಯೋಗಿ ಶ್ರೇಷ್ಠ ಸ್ಥಿತಿಯ ಅನುಭವವನ್ನು ಮಾಡುತ್ತೀರಿ. ಇದನ್ನೇ ಅವರು ಕಾಪಿ ಮಾಡಿ, ಶರೀರವನ್ನು ನೇರವಾಗಿ (ಪದ್ಮಾಸನ) ಇಡುತ್ತಾರೆ. ಆದರೆ ತಾವುಗಳೆಲ್ಲಿಯೇ ಇರುತ್ತೀರೆಂದರೂ ಶ್ರೇಷ್ಠ ಸ್ಥಿತಿಯಲ್ಲಿ ಇರುತ್ತೀರಿ. ಆದ್ದರಿಂದ ಹೇಳುತ್ತಾರೆ - ಯೋಗಿಗಳು ಶ್ರೇಷ್ಠವಾಗಿರುತ್ತಾರೆ. ಅಂದಮೇಲೆ ಮನಸ್ಸಿನ ಸ್ಥಿತಿಯ ಸ್ಥಾನವು ಶ್ರೇಷ್ಠವಾಗಿದೆ ಏಕೆಂದರೆ ಡಬಲ್ಲೈಟ್ ಆಗಿ ಬಿಟ್ಟಿರಿ. ಫರಿಶ್ತೆಗಳಿಗಾಗಿ ಹೇಳಲಾಗುತ್ತದೆ - ಫರಿಶ್ತೆಗಳ ಹೆಜ್ಜೆ ಧರಣಿಯ ಮೇಲಿರುವುದಿಲ್ಲ. ಫರಿಶ್ತೆಯೆಂದರೆ ಯಾರ ಬುದ್ಧಿಯೆಂಬ ಕಾಲುಗಳು ಧರಣಿ (ದೇಹಭಾನ) ಮೇಲಿರುವುದಿಲ್ಲ, ದೇಹಭಾನದಲ್ಲಿ ಇರುವುದಿಲ್ಲ. ದೇಹಭಾನದಿಂದ ಸದಾ ಶ್ರೇಷ್ಠವಾಗಿರುವವರೇ ಫರಿಶ್ತೆ ಅರ್ಥಾತ್ ರಾಜಯೋಗಿ ಆಗಿ ಬಿಟ್ಟರು. ಈಗ ಈ ಹಳೆಯ ಪ್ರಪಂಚದೊಂದಿಗೆ ಯಾವುದೇ ಸೆಳೆತವಿಲ್ಲ, ಸೇವೆಯನ್ನು ಮಾಡುವುದು ಬೇರೆ ಮಾತಾಗಿದೆ ಆದರೆ ಅದರೊಂದಿಗೆ ಸೆಳೆತವಿರಬಾರದು. ಯೋಗಿಯಾಗುವುದು ಅರ್ಥಾತ್ ತಂದೆ ಮತ್ತು ನಾನು ಅಷ್ಟೇ, ಮೂರನೆಯವರೇ ಇಲ್ಲ. ಅಂದಾಗ ಸದಾ ಇದೇ ಸ್ಮೃತಿಯಲ್ಲಿರಿ - ನಾವು ರಾಜ ಯೋಗಿ, ಸದಾ ಫರಿಶ್ತಾ ಆಗಿದ್ದೇವೆ. ಈ ಸ್ಮೃತಿಯಿಂದ ಸದಾ ಮುಂದುವರೆಯುತ್ತಾ ಇರುತ್ತೀರಿ. ರಾಜಯೋಗಿಗಳು ಸದಾ ಬೇಹದ್ದಿನ ಮಾಲೀಕನಾಗಿರುತ್ತಾರೆ, ಹದ್ದಿನ ಮಾಲೀಕರಲ್ಲ, ಅದರಿಂದ ಹೊರ ಬಂದ ಕೂಡಲೇ ಬೇಹದ್ದಿನ ಅಧಿಕಾರವು ಸಿಕ್ಕಿ ಬಿಟ್ಟಿತು ಎಂಬ ಖುಷಿಯಲ್ಲಿರಿ. ಬೇಹದ್ದಿನ ತಂದೆಯು ಹೇಗಿದ್ದಾರೆಯೋ ಹಾಗೆಯೇ ಬೇಹದ್ದಿನ ಖುಷಿಯಲ್ಲಿರಿ, ನಶೆಯಲ್ಲಿರಿ. ಒಳ್ಳೆಯದು.

ವಿದಾಯಿಯ ಸಮಯದಲ್ಲಿ -
ಅಮೃತವೇಳೆಯ ಎಲ್ಲಾ ವರದಾನಿ ಮಕ್ಕಳು, ವರದಾತಾ ತಂದೆಯ ಸ್ವರ್ಣೀಮ ನೆನಪು - ಪ್ರೀತಿಗಳನ್ನು ಸ್ವೀಕರಿಸಿರಿ. ಜೊತೆ ಜೊತೆಗೆ ಸ್ವರ್ಣೀಮ ಪ್ರಪಂಚವನ್ನು ತಯಾರು ಮಾಡುವ ಸೇವೆಯ ಯೋಜನೆಗಳನ್ನು ಸದಾ ಮನನ ಮಾಡುವಂತಹ ಹಾಗೂ ಸದಾ ಸೇವೆಯಲ್ಲಿ ಮನಃಪೂರ್ವಕವಾಗಿ ಹಾಗೂ ಬಹಳ ಪ್ರೀತಿಯಿಂದ, ತನು-ಮನ-ಧನದಿಂದ ಸಹಯೋಗಿ ಆತ್ಮರು, ಎಲ್ಲರಿಗೂ ಬಾಪ್ದಾದಾರವರು ಗುಡ್ಮಾರ್ನಿಂಗ್, ಡೈಮಂಡ್ ಮಾರ್ನಿಂಗ್ ಮಾಡುತ್ತಿದ್ದಾರೆ ಮತ್ತು ಸದಾ ಡೈಮಂಡ್ (ವಜ್ರ) ಆಗಿರುತ್ತಾ, ಈ ಡೈಮಂಡ್ ಯುಗದ ವಿಶೇಷತೆಯನ್ನು ವರದಾನ ಮತ್ತು ಆಸ್ತಿಯಲ್ಲಿ ತೆಗೆದುಕೊಳ್ಳುತ್ತಾ, ಸ್ವರ್ಣೀಮ ಸ್ಥಿತಿಯಲ್ಲಿ ಸ್ಥಿತರಾಗಿರುತ್ತೀರಿ ಹಾಗೂ ಅದೇರೀತಿ ಅನ್ಯರಿಗೂ ಅನುಭವ ಮಾಡಿಸುತ್ತಾ ಇರುತ್ತೀರಿ. ಅಂದಾಗ ನಾಲ್ಕೂ ಕಡೆಯ ಡಬಲ್ ಹೀರೋ ಮಕ್ಕಳಿಗೆ ಡೈಮಂಡ್ ಮಾರ್ನಿಂಗ್. ಒಳ್ಳೆಯದು.

ವರದಾನ:  
ದಯಾ ಹೃದಯದ ಭಾವನೆಯ ಮೂಲಕ ಅಪಕಾರಿಗಳಿಗೂ ಉಪಕಾರ ಮಾಡುವಂತಹ ಶುಭ ಚಿಂತಕ ಭವ.

ಯಾರೆಂತಹ ಆತ್ಮವೇ ಆಗಿರಲಿ, ಭಲೆ ಸತೋಗುಣಿ ಅಥವಾ ತಮೋಗುಣಿಯು ಸಂಪರ್ಕದಲ್ಲಿ ಬರಲಿ ಆದರೆ ಎಲ್ಲರ ಪ್ರತಿ ಶುಭ ಚಿಂತಕ ಅರ್ಥಾತ್ ಅಪಕಾರಿಗಳಿಗೂ ಉಪಕಾರ ಮಾಡುವವರು ಎಂದರ್ಥ. ಯಾವುದೇ ಆತ್ಮನ ಪ್ರತಿಯೂ ಸಹ ತಿರಸ್ಕಾರದ ದೃಷ್ಟಿಯಿರಬಾರದು. ಏಕೆಂದರೆ ಇವರು ಅಜ್ಞಾನದಲ್ಲಿ ವಶರಾಗಿದ್ದಾರೆ, ಬುದ್ಧಿಹೀನರಾಗಿದ್ದಾರೆ ಎನ್ನುವುದು ಗೊತ್ತಿದೆ. ಅವರ ಮೇಲೆ ದಯೆ ಅಥವಾ ಸ್ನೇಹವುಂಟಾಗಲಿ, ತಿರಸ್ಕಾರವಲ್ಲ. ಶುಭ ಚಿಂತಕ ಆತ್ಮನಲ್ಲಿ ಇವರು ಈ ರೀತಿಯೇಕೆ ಮಾಡಿದರು ಎಂದು ವಿಚಾರ ಬರುವುದಿಲ್ಲ. ಆದರೆ ಈ ಆತ್ಮನ ಕಲ್ಯಾಣವು ಹೇಗಾಗುತ್ತದೆ ಎಂಬ ವಿಚಾರ ಮಾಡುತ್ತಾರೆ - ಇದೇ ಶುಭ ಚಿಂತಕನ ಸ್ಥಿತಿಯಾಗಿದೆ.

ಸ್ಲೋಗನ್:
ತಪಸ್ಸಿನ ಬಲದಿಂದ ಅಸಂಭವವನ್ನೂ ಸಂಭವಗೊಳಿಸಿ ಸಫಲತಾ ಮೂರ್ತಿ ಆಗಿರಿ.


09-10-87 ಅವ್ಯಕ್ತ ಮುರಳಿಯಿಂದ ಸ್ವ-ಉನ್ನತಿಗಾಗಿ ಪ್ರಶ್ನಾವಳಿ -

1. ಇವತ್ತು ತಂದೆಯು ಯಾವ ಸಮಾಚಾರವನ್ನು ತಿಳಿಸುತ್ತಿದ್ದಾರೆ?

2. ಅಲೌಕಿಕ ದರ್ಬಾರು ಯಾವುದರಿಂದ ಆಕರ್ಷಣೆ ಮಾಡುವುದಾಗಿದೆ?

3. ಎಲ್ಲ ಬ್ರಾಹ್ಮಣ ಮಕ್ಕಳು ಎಂತಹ ಅಧಿಕಾರಿಯಾಗುವುದು ಸಂಗಮಯುಗದ ವಿಶೇಷತೆಯಾಗಿದೆ?

4. ವೃತ್ತಿ ಮತ್ತು ಸ್ಥಿತಿಯ ದರ್ಪಣ ಯಾವುದಾಗಿದೆ?

5. ಬಾಪ್ದಾದಾರವರು ಯಾವ ಎರಡು ಸ್ಥಿತಿಯ ಹೊಳಪಿನಲ್ಲಿ ಅಂತರವನ್ನು ನೋಡಿದರು?

6. ಸತ್ಯ ಪ್ರಿಯತಮೆಯರು ಪ್ರತಿ ಪರಿಸ್ಥಿತಿಯಲ್ಲಿ ಹೇಗಿರುತ್ತಾರೆ?

7. ಸಂಗಮಯುಗದಲ್ಲಿ ಯಾವ ವರದಾನಿ ಸಮಯದ ಅಧಿಕಾರಿಗಳಾಗಿದ್ದೇವೆ?

8. ಸೂರ್ಯವಂಶಿಯರದ್ದು ಎಂತಹ ಲಕ್ಷಣಗಳಿರಬಾರದು?

9. ಮುಂದುವರೆಯಲು ಸಹಜ ದಾರಿ ಯಾವುದಾಗಿದೆ?

10. ಸೈಲೆನ್ಸ್ ಶಕ್ತಿಯ ಪ್ರತ್ಯಕ್ಷತೆ ಯಾವುದಾಗಿದೆ?